‘ಧುರಂಧರ್’ ಯಶಸ್ಸಿನಿಂದ ರಣ್ವೀರ್ ಸಿಂಗ್ ಗಳಿಸಿದ್ದೆಷ್ಟು?

ಭಾರತದಲ್ಲಿ ಕೆಲವು ಸ್ಟಾರ್ ನಟರು 200 ಕೋಟಿಗೂ ಹೆಚ್ಚು ಸಂಭಾವನೆ ಪಡೆದು ಸುದ್ದಿ ಆಗಿದ್ದಾರೆ. ‘ಪುಷ್ಪ 2’ (Pushpa 2) ಸಿನಿಮಾಕ್ಕೆ ಅಲ್ಲು ಅರ್ಜುನ್ 200 ಕೋಟಿ ಸಂಭಾವನೆ ಪಡೆದಿದ್ದರು. ಹಾಗೆಯೇ ನಟ ರಜನೀಕಾಂತ್ ಸಹ ‘ಜೈಲರ್’ ಸಿನಿಮಾಕ್ಕೆ 200 ಕೋಟಿ ಸಂಭಾವನೆ ಪಡೆದ ಸುದ್ದಿ ಹಬ್ಬಿತ್ತು. ಈಗ ‘ವಾರಣಾಸಿ’ ಸಿನಿಮಾಕ್ಕೆ ಮಹೇಶ್ ಬಾಬು 250 ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇವರಿಗೆಲ್ಲಿರಿಗಿಂತಲೂ ಹೆಚ್ಚು ಹಣ ಮಾಡಿರುವುದು ನಟ ರಣ್ವೀರ್ ಸಿಂಗ್.

ರಣ್ವೀರ್ ಸಿಂಗ್, ‘ಧುರಂಧರ್​’ ಮತ್ತು ‘ಧುರಂಧರ್ 2’ ಸಿನಿಮಾಗಳ ಮೂಲಕ ಜೀವಮಾನದ ಅತಿ ದೊಡ್ಡ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅದು ಮಾತ್ರವೇ ಅಲ್ಲದೆ, ಈ ಸಿನಿಮಾಗಳ ಮೂಲಕ ಈ ವರೆಗಿನ ವೃತ್ತಿ ಜೀವನದಲ್ಲಿ ಸಿನಿಮಾದಿಂದ ಅತಿ ಹೆಚ್ಚು ಹಣವನ್ನೂ ಅವರು ಗಳಿಸಿದ್ದಾರೆ. ಆದರೆ ಸಂಭಾವನೆ ಮೂಲಕ ಮಾತ್ರವಲ್ಲ ಬದಲಿಗೆ ಲಾಭ ಹಂಚಿಕೆ ಮೂಲಕ. ‘ಧುರಂಧರ್’ ಸಿನಿಮಾಕ್ಕೆ ರಣ್ವೀರ್ ಸಿಂಗ್ ನಟರಷ್ಟೆ ಆಗಿರಲಿಲ್ಲ ಬದಲಿಗೆ ಅನಧಿಕೃತ ಸಹ ನಿರ್ಮಾಪಕರೂ ಆಗಿದ್ದರು.

ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ‘ಧುರಂಧರ್’ ಸಿನಿಮಾ ನಿರ್ಮಾಣದ ವೇಳೆ ಖುದ್ದು ರಣ್ವೀರ್ ಸಿಂಗ್ ಸಂಭಾವನೆ ಪಡೆದಿರಲಿಲ್ಲ ಬದಲಿಗೆ ಪರ್ಸೆಂಟೇಜ್ ಆಧಾರದಲ್ಲಿ ಸಿನಿಮಾ ಮಾಡಿದ್ದರು. ನಿರ್ಮಾಣಕ್ಕೆ ಹಣಕಾಸು ಕಡಿಮೆ ಆದಾಗ ಖುದ್ದು ತಮ್ಮ ಹಣವನ್ನು ಹೂಡಿಕೆ ಸಹ ಮಾಡಿದ್ದರಂತೆ. ಅಲ್ಲದೆ, ಮೊದಲ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿಯೇ ಎರಡನೇ ಭಾಗದ ಬಹುತೇಕ ಚಿತ್ರೀಕರಣವೂ ಆಗಿತ್ತು. ಹಾಗಾಗಿ ಎರಡೂ ಸಿನಿಮಾಗಳಿಗೆ ಅವರು ಅನಧಿಕೃತ ಸಹ ನಿರ್ಮಾಪಕ ಇದರಿಂದಾಗಿ ಎರಡೂ ಸಿನಿಮಾಗಳ ಲಾಭದಲ್ಲಿ ರಣ್ವೀರ್ ಸಿಂಗ್ ಅವರಿಗೂ ಪಾಲು ಹೋಗಿದೆ. ಮೂಲಗಳ ಪ್ರಕಾರ, ರಣ್ವೀರ್ ಸಿಂಗ್ ಅವರಿಗೆ 350 ಕೋಟಿಗೂ ಹೆಚ್ಚು ಮೊತ್ತ ಲಾಭವಾಗಿದೆಯಂತೆ. ಈ ಲಾಭದಲ್ಲಿ ಅವರ ಸಂಭಾವನೆ ಮೊತ್ತ ಸೇರಿಲ್ಲ. ಸಂಭಾವನೆ ಸೇರಿದತೆ ಮೊತ್ತ 500 ಕೋಟಿಗೆ ಹತ್ತಿರ ಹೋಗುತ್ತದೆ.

ಇದನ್ನೂ ಓದಿ:ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?

‘ಧುರಂಧರ್’ ಸಿನಿಮಾವನ್ನು ನಿರ್ದೇಶಕ ಆದಿತ್ಯ ಧರ್ ಮತ್ತು ಜಿಯೋ ಸಂಸ್ಥೆ ನಿರ್ಮಾಣ ಮಾಡಿದೆ. ಇದರಲ್ಲಿ ಹೆಚ್ಚಿನ ಪಾಲು ಆದಿತ್ಯ ಧರ್ ಅವರ ಬಿ62 ನಿರ್ಮಾಣ ಸಂಸ್ಥೆಯದ್ದೇ ಆಗಿತ್ತಂತೆ. ಬಿ62 ಜೊತೆಗೆ ರಣ್ವೀರ್ ಸಿಂಗ್ ಅವರದ್ದೂ ಸಿನಿಮಾನಲ್ಲಿ ಪಾಲಿತ್ತು ಎನ್ನಲಾಗಿದೆ. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ 3200 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿವೆ. ಸಿನಿಮಾಗಳ ಒಟಿಟಿ ಹಕ್ಕು, ಸ್ಟಾಟಲೈಟ್ ಹಕ್ಕು, ಆಡಿಯೋ ಹಕ್ಕುಗಳ ಸುಮಾರು 200 ಕೋಟಿಗೆ ಮಾರಾಟವಾಗಿವೆ. ಒಟ್ಟಾರೆ ಸಿನಿಮಾಕ್ಕೆ ಬಂಡವಾಳ ಹಾಕಿದವರಿಗೆ ಸುಮಾರು 10 ಪಟ್ಟು ಹಣ ಮರಳಿ ಬಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Vasthu Tips: ಫ್ರಿಜ್ ಮೇಲೆ ಮರೆತೂ ಈ 5 ವಸ್ತುಗಳನ್ನು ಇಡಬೇಡಿ, ಹಣದ ನಷ್ಟ ಗ್ಯಾರಂಟಿ! – Kannada News | Vastu for Fridge: Avoid 5 Items on Top to Prevent Negative Energy and Financial Loss

ಫ್ರಿಜ್ ಮೇಲೆ ಮರೆತೂ ಈ 5 ವಸ್ತುಗಳನ್ನು ಇಡಬೇಡಿImage Credit source: Getty Images

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ಸಣ್ಣ ವಸ್ತುಗಳಿಗೂ ಅದರದ್ದೇ ಆದ ಪ್ರಾಮುಖ್ಯತೆ ಇರುತ್ತದೆ. ಅದರಲ್ಲಿಯೂ ಅಡುಗೆಮನೆಯಲ್ಲಿರುವ ಫ್ರಿಜ್ (Refrigerator) ಅತ್ಯಂತ ಪ್ರಮುಖವಾದ ಸಾಧನವಾಗಿದೆ. ಏಕೆಂದರೆ ಇದರಲ್ಲಿ ನಾವು ನಮ್ಮ ಆಹಾರ ಮತ್ತು ತಿನ್ನುವ ವಸ್ತುಗಳನ್ನು ಸಂಗ್ರಹಿಸಿಡುತ್ತೇವೆ. ವಾಸ್ತು ಶಾಸ್ತ್ರದಲ್ಲಿ ಫ್ರಿಜ್ ಅನ್ನು ‘ಜಲ ತತ್ವ’ದ (ನೀರಿನ ಅಂಶ) ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಫ್ರಿಜ್ ಅನ್ನು ಇಡುವ ದಿಕ್ಕು ಮತ್ತು ಅದರ ಸುತ್ತಮುತ್ತಲಿನ ವಾತಾವರಣವು ಮನೆಯ ಧನಾತ್ಮಕ ಶಕ್ತಿ ಹಾಗೂ ಆರ್ಥಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಅನೇಕರು ಸ್ಥಳಾವಕಾಶದ ಕೊರತೆಯಿಂದ ಫ್ರಿಜ್ ಮೇಲ್ಭಾಗವನ್ನು ವಸ್ತುಗಳನ್ನು ಇಡಲು ಬಳಸುತ್ತಾರೆ, ಆದರೆ ಈ ಅಭ್ಯಾಸವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ, ವಾಸ್ತು ದೋಷಕ್ಕೆ ಕಾರಣವಾಗಬಹುದು.

ಫ್ರಿಜ್ ಮೇಲೆ ಮರೆತೂ ಇಡಬಾರದ 5 ಪ್ರಮುಖ ವಸ್ತುಗಳು:

ಮಾತ್ರೆ ಮತ್ತು ಔಷಧಿಗಳು:

ವಾಸ್ತು ನಿಯಮಗಳ ಪ್ರಕಾರ, ಫ್ರಿಜ್ ಮೇಲೆ ಯಾವುದೇ ಕಾರಣಕ್ಕೂ ಔಷಧಿಗಳನ್ನು ಇಡಬಾರದು. ಹೀಗೆ ಮಾಡುವುದರಿಂದ ಔಷಧಿಗಳ ಪ್ರಭಾವ ಅಥವಾ ಶಕ್ತಿ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲದೆ, ಇದು ಮನೆಯಲ್ಲಿ ಅನಾರೋಗ್ಯದ ವಾತಾವರಣ ಮತ್ತು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ನಗದು ಹಣ ಅಥವಾ ಆಭರಣಗಳು:

ಕೆಲವರು ಗಡಿಬಿಡಿಯಲ್ಲಿ ಅಥವಾ ಅಭ್ಯಾಸಬಲದಿಂದ ಹಣ, ನಾಣ್ಯಗಳು ಅಥವಾ ಚಿನ್ನಾಭರಣಗಳನ್ನು ಫ್ರಿಜ್ ಮೇಲೆ ಇಡುತ್ತಾರೆ. ಆದರೆ ವಾಸ್ತು ಪ್ರಕಾರ, ಈ ಜಾಗದಲ್ಲಿ ಹಣ ಇಡುವುದರಿಂದ ಮನೆಗೆ ಲಕ್ಷ್ಮಿ ಬರುವ ಹಾದಿ ಮುಚ್ಚಿಹೋಗುತ್ತದೆ ಮತ್ತು ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಮೈಕ್ರೋವೇವ್ ಅಥವಾ ಭಾರೀ ಎಲೆಕ್ಟ್ರಾನಿಕ್ ಉಪಕರಣಗಳು:

ಫ್ರಿಜ್ ಮೇಲೆ ಮೈಕ್ರೋವೇವ್ ಓವನ್ ಅಥವಾ ಟೋಸ್ಟರ್‌ಗಳಂತಹ ಭಾರವಾದ ಎಲೆಕ್ಟ್ರಿಕಲ್ ಉಪಕರಣಗಳನ್ನು ಇಡಬೇಡಿ. ಇವೆರಡೂ ಭಿನ್ನ ತರಂಗಗಳನ್ನು ಹೊರಸೂಸುವುದರಿಂದ ಇವುಗಳ ಶಕ್ತಿಗಳ ನಡುವೆ ಘರ್ಷಣೆ ಏರ್ಪಡುತ್ತದೆ. ಅಲ್ಲದೆ, ಫ್ರಿಜ್ ಚಾಲನೆಯಲ್ಲಿರುವಾಗ ಉಂಟಾಗುವ ಕಂಪನದಿಂದ (Vibration) ಮೇಲಿಟ್ಟ ವಸ್ತುಗಳು ಕೆಳಗೆ ಬಿದ್ದು ಹಾಳಾಗುವ ಅಪಾಯವೂ ಇರುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಒಣಗಿದ ಹೂವುಗಳು ಅಥವಾ ಬೋನ್ಸಾಯ್ ಗಿಡಗಳು:

ಫ್ರಿಜ್ ಅನ್ನು ಅಂದಗೊಳಿಸಲು ಅದರ ಮೇಲೆ ಒಣಗಿದ ಹೂವುಗಳು, ಬಾಡಿದ ಎಲೆಗಳು ಅಥವಾ ಬೋನ್ಸಾಯ್ ಗಿಡಗಳನ್ನು ಇಡುವ ತಪ್ಪು ಮಾಡಬೇಡಿ. ವಾಸ್ತು ಶಾಸ್ತ್ರದ ಪ್ರಕಾರ, ಒಣಗಿದ ಅಥವಾ ಬೆಳವಣಿಗೆ ಕುಂಠಿತಗೊಂಡ ಗಿಡಗಳು ಮನೆಯಲ್ಲಿ ‘ಮೃತ ಶಕ್ತಿ’ಯನ್ನು (Dead Energy) ಮತ್ತು ನಕಾರಾತ್ಮಕತೆಯನ್ನು ಆಕರ್ಷಿಸುತ್ತವೆ.

ಫ್ರಿಜ್ ಇಡಲು ವಾಸ್ತು ಸೂಚಿಸುವ ಸರಿಯಾದ ದಿಕ್ಕು ಯಾವುದು?

ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ, ಫ್ರಿಜ್ ಅನ್ನು ಯಾವಾಗಲೂ ಅಡುಗೆಮನೆ ಅಥವಾ ಡೈನಿಂಗ್ ರೂಮ್‌ನ ದಕ್ಷಿಣ-ಪಶ್ಚಿಮ (South-West) ಅಥವಾ ದಕ್ಷಿಣ-ಪೂರ್ವ (South-East) ದಿಕ್ಕಿನಲ್ಲಿ ಇಡುವುದು ಅತ್ಯಂತ ಶುಭ ತರಲಿದೆ. ಯಾವುದೇ ಕಾರಣಕ್ಕೂ ಫ್ರಿಜ್ ಅನ್ನು ಈಶಾನ್ಯ (North-East) ದಿಕ್ಕಿನಲ್ಲಿ ಇಡಬಾರದು. ಇದರೊಂದಿಗೆ, ಫ್ರಿಜ್ ಅನ್ನು ಯಾವಾಗಲೂ ಸ್ವಚ್ಛವಾಗಿ ಹಾಗೂ ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು; ಅದರಲ್ಲಿ ಅನಗತ್ಯ ವಸ್ತುಗಳನ್ನು ತುಂಬಿಸಿ ಕಸದ ತೊಟ್ಟಿಯಂತೆ ಮಾಡಬಾರದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs IRE: ಐರ್ಲೆಂಡ್ ಪ್ರವಾಸದಿಂದ ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ ಔಟ್..!

Source link

ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಗೊತ್ತಾ? – Kannada News | Former MLAs Akhanda srinivas murthy Re Joins to JDS, which constancy ticket aspirant

ಬೆಂಗಳೂರು, (ಜೂನ್ 21): ಪುಲಿಕೇಶಿನಗರದ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಬಿಜೆಪಿ ತೊರೆದು ವಾಪಸ್ ಮಾತೃಪಕ್ಷ ಜೆಡಿಎಸ್​​​ ಸೇರ್ಪಡೆಯಾಗಿದ್ದಾರೆ. ಇಂದು (ಜೂನ್ 21) ಬೆಂಗಳೂರಿನಲ್ಲಿ ಕೇಂದ್ರ ಸಚಿವ, ಜೆಡಿಎಸ್ ರಾಜ್ಯಾಧ್​ಯಕ್ಷ ಎಚ್​​ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಜೆಡಿಎಸ್ ಸೇರ್ಪಡೆಯಾದರು. 2013ರಲ್ಲಿ ಜೆಡಿಎಸ್‌ನಿಂದಲೇ ರಾಜಕೀಯ ಪ್ರವೇಶಿಸಿದ್ದ ಶ್ರೀನಿವಾಸ್ ಮೂರ್ತಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಬಳಿಕ ನಡೆದ ಕೆಲ ರಾಜಕೀಯ ವಿದ್ಯಮಾನಗಳಿಂದ ಬೇಸತ್ತು ಬಿಎಸ್​​ಪಿ ಸೇರ್ಪಡೆಯಾಗಿದ್ದರು. ಇದೀಗ ಅಂತಿಮವಾಗಿ ವಾಪಸ್ ಜೆಡಿಎಸ್​ ಮನೆ ಸೇರಿಕೊಂಡಿದ್ದಾರೆ.

ಕಲ ದಿನಗಳ ಹಿಂದೆಯಷ್ಟೇ ಎಚ್‌.ಡಿ.ಕುಮಾರಸ್ವಾಮಿ ಅವರು ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಜೆಡಿಎಸ್‌ ಸೇರ್ಪಡೆಗೆ ಅಖಂಡ ಉತ್ಸುಕರಾಗಿರುವ ಬಗ್ಗೆ ತಿಳಿಸಿದ್ದರು. ಇನ್ನು ಶ್ರೀನಿವಾಸಮೂರ್ತಿ ಅವರು ಪುಲಿಕೇಶಿನಗರ ಅಥವಾ ನೆಲಮಂಗಲ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದು, 2028ರ ಚುನಾವಣೆಯಲ್ಲಿ ಯಾವ ಕ್ಷೇತ್ರದ ಟಿಕೆಟ್ ಸಿಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

‘ಟಾಕ್ಸಿಕ್’ ಬಿಡುಗಡೆ ದಿನಾಂಕ ಘೋಷಣೆ, ಬಾಕ್ಸ್ ಆಫೀಸ್​​ನಲ್ಲಿ ಎದುರಾಗಲಿರುವ ಸಿನಿಮಾಗಳು ಯಾವುವು? – Kannada News | Toxic movie official release date announced which movies to clash with Toxic

ಯಶ್ (Yash) ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ರಿಲೀಸ್ ಡೇಟ್ ಘೋಷಣೆ ಆಗಿದೆ. ಈಗಾಗಲೇ ಎರಡು ಬಾರಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಬದಲಾಯಿಸಿದೆ. ಇದೀಗ ಮೂರನೇ ಬಾರಿ ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗಿದೆ. ಚಿತ್ರತಂಡ ಇಂದು (ಜೂನ್ 21) ಅಧಿಕೃತವಾಗಿ ಘೋಷಣೆ ಮಾಡಿರುವಂತೆ ಆಗಸ್ಟ್ 26ಕ್ಕೆ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗಲಿದೆ. ಅಂದಹಾಗೆ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗುತ್ತಿದ್ದಂತೆ ಅದೇ ಸಮಯಕ್ಕೆ ಬರಲಿರುವ ಇತರೆ ಕೆಲ ಸಿನಿಮಾಗಳ ಮತ್ತು ಸಿನಿಮಾ ತಂಡಗಳ ಎದೆಯಲ್ಲಿ ಅವಲಕ್ಕಿ ಕುಕ್ಕಲು ಶುರುವಾಗಿದೆ. ಅಂದಹಾಗೆ ‘ಟಾಕ್ಸಿಕ್’ ಸಿನಿಮಾಕ್ಕೆ ಬಾಕ್ಸ್ ಆಫೀಸ್​​ನಲ್ಲಿ ಎದುರಾಗುತ್ತಿರುವ ದೊಡ್ಡ ಸಿನಿಮಾಗಳು ಯಾವುವು? ಇಲ್ಲಿದೆ ಪಟ್ಟಿ…

ತೆಲುಗಿನ ಸ್ಟಾರ್ ನಾನಿ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಪ್ಯಾರಡೈಸ್’ ಅದೇ ಸಮಯಕ್ಕೆ ಬಿಡುಗಡೆ ಆಗಲಿದೆ. ಭಿನ್ನವಾಗಿ, ಸಖತ್ ಮಾಸ್ ಮತ್ತು ಕಮರ್ಶಿಯಲ್ ಎಲಿಮೆಂಟ್​​ಗಳನ್ನು ಒಳಗೊಂಡಿರುವ ‘ಪ್ಯಾರಡೈಸ್’ ಸಿನಿಮಾ ಆಗಸ್ಟ್ 21 ರಂದು ಅಂದರೆ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಕೇವಲ ಐದು ದಿನ ಮುಂಚಿತವಾಗಿ ರಿಲೀಸ್ ಆಗಲಿದೆ. ಈಗ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಘೋಷಣೆ ಆಗಿರುವ ಕಾರಣ ‘ಪ್ಯಾರಡೈಸ್’ ಸಿನಿಮಾದ ಬಿಡುಗಡೆ ಮುಂದೂಡಲ್ಪಡುವ ಸಾಧ್ಯತೆಯೂ ಇದೆ.

ಆಗಸ್ಟ್ ತಿಂಗಳ 23ರಂದು ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬ. ಅದೇ ಸಮಯಕ್ಕೆ ಮೆಗಾಸ್ಟಾರ್ ಚಿರಂಜೀವಿ ಅವರ ಒಂದು ಸಿನಿಮಾ ಬಿಡುಗಡೆ ಆಗಲಿದೆ ಎಂಬ ಸುದ್ದಿ ಇದೆ. ಸದ್ಯಕ್ಕೆ ಅವರು ‘ವಿಶ್ವಂಭರ’, ಬಾಬಿ ಕೊಲ್ಲಿ ನಿರ್ದೇಶನದ ಮತ್ತೊಂದು ಸಿನಿಮಾ ಹಾಗೂ ಇತ್ತೀಚೆಗೆ ಘೋಷಣೆಯಾದ ಕೆವಿಎನ್ ನಿರ್ಮಾಣದ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಇವುಗಳಲ್ಲಿ ‘ವಿಶ್ವಂಭರ’ ಸಿನಿಮಾ ಚಿರಂಜೀವಿ ಅವರ ಹುಟ್ಟುಹಬ್ಬಕ್ಕೆ ರಿಲೀಸ್ ಆಗಲಿದೆ ಎಂಬ ಸುದ್ದಿಗಳಿದ್ದವು. ಆದರೆ ಇದೀಗ ‘ಟಾಕ್ಸಿಕ್’ ಸಿನಿಮಾ ಘೋಷಣೆಯ ಬಳಿಕ ಚಿರು ಸಿನಿಮಾ ಬಿಡುಗಡೆ ಮುಂದೂಡಲ್ಪಡುವ ಸಾಧ್ಯತೆ ಇದೆ.

ಇದನ್ನೂ ಓದಿ:ಒಳ್ಳೆ ನಟಿ ಆದರೆ ಅವಕಾಶಗಳ ಕೊರತೆಯಲ್ಲಿ ಭಾಗ್ಯಶ್ರೀ ಬೋರ್ಸೆ

‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗುವ ದಿನದಂದು ಹಾಗೂ ಅದರ ಮುಂದಿನ ದಿನ ಎರಡು ಬಾಲಿವುಡ್ ಸಿನಿಮಾಗಳು ಬಿಡುಗಡೆ ಆಗಲಿವೆ. ಒಂದು 2006ರ ಸೂಪರ್ ಹಿಟ್ ಸಿನಿಮಾ ‘ಖೋಸ್ಲಾ ಕಾ ಗೋಸ್ಲಾ’ ಸಿನಿಮಾದ ಎರಡನೇ ಭಾಗ. ಇದೊಂದು ಸಣ್ಣ ಬಜೆಟ್​​ನ ಸಿನಿಮಾ ಆಗಿದೆ. ಆಗಸ್ಟ್ 27ಕ್ಕೆ ವರುಣ್ ಧವನ್ ನಟನೆಯ ‘ಬೇಡಿಯಾ 2’ ಸಿನಿಮಾ ಬಿಡುಗಡೆ ಆಗಲಿದೆ. ಆದರೆ ಈ ಸಿನಿಮಾ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ‘ವಿವಾನ್: ದಿ ಫೋರ್ಸ್ ಆಫ್ ಫಾರೆಸ್ಟ್’ ಹಿಂದಿ ಸಿನಿಮಾ ಆಗಸ್ಟ್ 28ಕ್ಕೆ ರಿಲೀಸ್ ಆಗಲಿದೆ. ಇವುಗಳ ಹೊರತಾಗಿ ಕೆಲ ಹಾಲಿವುಡ್ ಸಿನಿಮಾಗಲು ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಸಮಯದಲ್ಲಿಯೇ ರಿಲೀಸ್ ಆಗಲಿವೆ.

‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಆಗ ಚಾಲ್ತಿಯಲ್ಲಿದ್ದ ಇರಾನ್-ಅಮೆರಿಕ್-ಇಸ್ರೇಲ್ ಯುದ್ಧ ಪರಿಸ್ಥಿತಿಯಿಂದಾಗಿ ಸಿನಿಮಾ ಬಿಡುಗಡೆ ಮುಂದೂಡಲಾಯ್ತು. ಬಳಿಕ ಜೂನ್ 4ಕ್ಕೆ ಸಿನಿಮಾ ಬಿಡುಗಡೆ ಘೋಷಿಸಲಾಯ್ತು. ಬಳಿಕ ಆ ದಿನಾಂಕವೂ ಬದಲಾಯ್ತು. ಈಗ ಆಗಸ್ಟ್ 26ಕ್ಕೆ ಬಿಡುಗಡೆ ದಿನಾಂಕ ಘೋಷಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾದ ಬಿಕೆ ಹರಿಪ್ರಸಾದ್​​​ಗೆ ಅಧಿಕೃತ ಪಟ್ಟಾಭಿಷೇಕ – Kannada News | DK Shivakumar Gives Flag to New KPCC President BK Hariprasad

ಬೆಂಗಳೂರು, (ಜೂನ್ 21): ನೂತನ ಕೆಪಿಸಿಸಿ ಅಧ್ಯಕ್ಷರಾಗಿರುವ ಬಿಕೆ ಹರಿಪ್ರಸಾದ್ ಅವರು ಇಂದು (ಜೂನ್ 21) ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಿದರು. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​​​ನಲ್ಲಿ ನಡೆದ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಹಿಂದಿನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನೂತನ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಕೆಪಿಸಿಸಿ ಪಟ್ಟಾಭಿಷೇಕ ಮಾಡಲಾಯ್ತು.

ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಹಿರಿಯ ಕಾರ್ಯಕರ್ತ ಹರಿಪ್ರಸಾದ್​ಗೆ ಅಧಿಕಾರ ಹಸ್ತಾಂತರಿಸಿದ್ದೇನೆ. ಕಾಂಗ್ರೆಸ್​ ಶಕ್ತಿ ಈ ದೇಶದ ಶಕ್ತಿ . ಶಕ್ತಿ ಮೀರಿ ನನ್ನ ಕಾರ್ಯಕರ್ತರಿಗೆ ಸೇವೆ ಮಾಡಿದ್ದೇನೆ ಸೋನಿಯಾ ಗಾಂಧಿಯವರ ಆಶೀರ್ವಾದ ನಾನು ಮರೆಯುವುದಿಲ್ಲ. ಕೊವಿಡ್ ಸಂದರ್ಭದಲ್ಲೂ ಮೇಕೆದಾಟು ಪಾದಯಾತ್ರೆ ಮಾಡಿದ್ದೆವು.ಕೇವಲ ಸಿದ್ದರಾಮಯ್ಯ ಹಾಗೂ ನನ್ನಿಂದ 136 ಸೀಟ್​ಗಳನ್ನ​ ಗೆದ್ದಿಲ್ಲ. ನಿಮ್ಮೆಲ್ಲರ ಶಕ್ತಿಯಿಂದ 136 ಸೀಟ್​ಗಳನ್ನು ಗೆಲ್ಲಲು ಸಾಧ್ಯವಾಯ್ತು ಎಂದರು.

Source link

ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು? – Kannada News | Gilli acting in Pallar movie, Will Kavya be the heroine

ಬಿಗ್​​ಬಾಸ್ (Bigg Boss) ಮೂಲಕ ಭಾರಿ ಜನಪ್ರಿಯತೆ ಪಡೆದ ಗಿಲ್ಲಿ ನಟ ಇದೀಗ ಸಿನಿಮಾ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಅವರು ನಾಯಕನಾಗಿ ನಟಿಸುತ್ತಿರುವ ಮೊದಲ ಸಿನಿಮಾಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ. ಸಿನಿಮಾಕ್ಕೆ ‘ಪಳಾರ್’ ಎಂದು ಹೆಸರಿಡಲಾಗಿದ್ದು, ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದೆ. ಈ ಸಿನಿಮಾಕ್ಕೆ ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ. ಆದರೆ ಗಿಲ್ಲಿಯ ಮೊದಲ ಸಿನಿಮಾಕ್ಕೆ ಬಿಗ್​​ಬಾಸ್ ಮನೆಯಲ್ಲಿದ್ದಾಗ ಗಿಲ್ಲಿಗೆ ಆಪ್ತವಾಗಿದ್ದ ಕಾವೂ ಅಲಿಯಾಸ್ ಕಾವ್ಯಾ ಅವರೇ ನಾಯಕಿ ಆಗಬಹುದಾ ಎಂಬ ಅನುಮಾನವಿದೆ. ಈ ಬಗ್ಗೆ ಖುದ್ದು ಗಿಲ್ಲಿ ನಟ ಮಾತನಾಡಿ, ಉತ್ತರ ನೀಡಿದ್ದಾರೆ ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನೂತನ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು? – Kannada News | What Advice Did Mallikarjun Kharge Give BK Hariprasad After He Took Charge as KPCC President

ಬೆಂಗಳೂರು, ಜೂನ್​​ 21: ರಾಜ್ಯ ಕಾಂಗ್ರೆಸ್​ಗೆ ಇಂದು ಮಹತ್ವದ ದಿನ. ಆರೂವರೆ ವರ್ಷ KPCC ಅಧ್ಯಕ್ಷರಾಗಿದ್ದ ಡಿಕೆ ಶಿವಕುಮಾರ್​ ಚುಕ್ಕಾಣಿ ಹಿಡಿದಿದ್ದಾರೆ. ಡಿಕೆ ಶಿವಕುಮಾರ್​ ಸಿಎಂ ಆದ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಬಿ.ಕೆ. ಹರಿಪ್ರಸಾದ್ ಪಕ್ಷಕ್ಕೆ ಹೊಸಬರೇನಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕೆ ಸೇರಿ, ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾನ್ಯ ಕಾರ್ಯಕರ್ತನಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಂದಿದ್ದಾರೆ. ತಳಮಟ್ಟದಿಂದ ಬಂದ ಕಾರ್ಯಕರ್ತನನ್ನು ಕೆಪಿಸಿಸಿ ಅಧ್ಯಕ್ಷ ಮಾಡಿದ್ದೇವೆ. ಪಕ್ಷ ತತ್ವಗಳನ್ನು ಮೈಗೂಡಿಸಿಕೊಂಡವರಿಗೆ ಅಧಿಕಾರ ನೀಡಿದ್ದೇವೆ ಎಂದರು. ನಮ್ಮ ಮುಂದೆ ಅನೇಕ ದೊಡ್ಡ ಸಮಸ್ಯೆಗಳಿವೆ. ಅಗತ್ಯವಸ್ತುಗಳ ದರ ಏರಿಕೆ, ಹಣದುಬ್ಬರ ಸಮಸ್ಯೆಯಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ಪಠ್ಯ ಪುಸ್ತಕದ ದರ ಏರಿಕೆಯಾಗಿದೆ. ಬೆಲೆ ಏರಿಕೆ ವಿರುದ್ಧ ಹೋರಾಟದ ಹೊಣೆ ಬಿ.ಕೆ.ಹರಿಪ್ರಸಾದ್ ಮೇಲಿದೆ. ಬಿ.ಕೆ.ಹರಿಪ್ರಸಾದ್ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

Indian Navy Agniveer: ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರ್ ನೇಮಕಾತಿ; ದೇಶಸೇವೆಗೆ ಸುವರ್ಣವಕಾಶ – Kannada News | Join Indian Navy Agniveer: Apply Online for Technical Apprentice Recruitment 2026

ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರ್ ನೇಮಕಾತಿ

ಭಾರತೀಯ ನೌಕಾಪಡೆಯಲ್ಲಿ (Indian Navy) ವೃತ್ತಿಜೀವನವನ್ನು ರೂಪಿಸಿಕೊಳ್ಳುವ ಮತ್ತು ದೇಶಸೇವೆ ಮಾಡುವ ಕನಸು ಕಾಣುತ್ತಿರುವ ದೇಶದ ಅವಿವಾಹಿತ ಯುವಕರಿಗೆ ಒಂದು ಅತ್ಯುತ್ತಮ ಅವಕಾಶ ಒದಗಿಬಂದಿದೆ. ಭಾರತೀಯ ನೌಕಾಪಡೆಯು ಅಗ್ನಿವೀರ್ (ಅಪ್ರೆಂಟಿಸ್) ನೇಮಕಾತಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ನೇಮಕಾತಿಯ ಅಡಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳು ನೌಕಾಪಡೆಯಲ್ಲಿ ಅತ್ಯುನ್ನತ ತಾಂತ್ರಿಕ ತರಬೇತಿ ಮತ್ತು ರಕ್ಷಣಾ ವಲಯದ ಅಮೂಲ್ಯವಾದ ಅನುಭವವನ್ನು ಪಡೆಯಲಿದ್ದಾರೆ. ನಿಗದಿತ ಅರ್ಹತೆಗಳನ್ನು ಹೊಂದಿರುವ ಆಸಕ್ತರು ಜೂನ್ 29 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಎರಡು ಬ್ಯಾಚ್‌ಗಳಿಗೆ ನೇಮಕಾತಿ ಮತ್ತು ಅರ್ಜಿ ಶುಲ್ಕದ ವಿವರ:

ಈ ಪ್ರಮುಖ ನೇಮಕಾತಿ ಪ್ರಕ್ರಿಯೆಯನ್ನು 01/2027 ಮತ್ತು 02/2027 ರ ಬ್ಯಾಚ್‌ಗಳಿಗಾಗಿ ನಡೆಸಲಾಗುತ್ತಿದೆ. ಸಂಪೂರ್ಣ ಪ್ರಕ್ರಿಯೆಯು ಆನ್‌ಲೈನ್ ಮೂಲಕವೇ ನಡೆಯಲಿದ್ದು, ಅಭ್ಯರ್ಥಿಗಳು ನಿಗದಿಪಡಿಸಿದ ಗಡುವಿನೊಳಗೆ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು 550ರೂ. ಅರ್ಜಿ ಶುಲ್ಕದೊಂದಿಗೆ ಶೇ. 18 ರಷ್ಟು ಜಿಎಸ್‌ಟಿ (GST) ಪಾವತಿಸಬೇಕಾಗುತ್ತದೆ. ನೆನಪಿಡಿ, ಜೂನ್ 29 ರ ನಂತರ ಬರುವ ಯಾವುದೇ ಅರ್ಜಿಗಳನ್ನು ಮಂಡಳಿಯು ಸ್ವೀಕರಿಸುವುದಿಲ್ಲ.

ಶೈಕ್ಷಣಿಕ ಅರ್ಹತೆ ಮತ್ತು ನಿರ್ದಿಷ್ಟ ವಯೋಮಿತಿ:

ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ ಶೇಕಡಾ 50 ರಷ್ಟು ಅಂಕಗಳೊಂದಿಗೆ 10 ನೇ ತರಗತಿಯಲ್ಲಿ (SSLC) ಉತ್ತೀರ್ಣರಾಗಿರಬೇಕು. ಇದರೊಂದಿಗೆ AICTE ಇಂದ ಅನುಮೋದನೆ ಪಡೆದ ಪಾಲಿಟೆಕ್ನಿಕ್ ಸಂಸ್ಥೆಯಿಂದ ಕನಿಷ್ಠ ಶೇ. 50 ರಷ್ಟು ಅಂಕಗಳೊಂದಿಗೆ ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ 3 ವರ್ಷಗಳ ಡಿಪ್ಲೊಮಾ ಪದವಿ ಹೊಂದಿರಬೇಕು. ಇನ್ನು ವಯೋಮಿತಿಗೆ ಬರುವುದಾದರೆ, ಬ್ಯಾಚ್ 01/2027 ರ ಅಭ್ಯರ್ಥಿಗಳು ಡಿಸೆಂಬರ್ 1, 2004 ಮತ್ತು ಮೇ 31, 2009 ರ ನಡುವೆ ಜನಿಸಿರಬೇಕು. ಹಾಗೆಯೇ ಬ್ಯಾಚ್ 02/2027 ರ ಅಭ್ಯರ್ಥಿಗಳ ಜನ್ಮ ದಿನಾಂಕವು ಮೇ 1, 2005 ಮತ್ತು ಅಕ್ಟೋಬರ್ 31, 2009 ರ ನಡುವೆ ಇರಬೇಕಾಗುತ್ತದೆ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಮೂರು ಹಂತಗಳ ಕಠಿಣ ಆಯ್ಕೆ ಪ್ರಕ್ರಿಯೆ:

ನೌಕಾಪಡೆಯ ಅಗ್ನಿವೀರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಅತ್ಯಂತ ಪಾರದರ್ಶಕ ಮತ್ತು ಕಠಿಣ ಸರಣಿ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯ ಮೊದಲ ಹಂತವಾಗಿ ಅಭ್ಯರ್ಥಿಗಳಿಗೆ ‘ಭಾರತೀಯ ನೌಕಾಪಡೆಯ ಪ್ರವೇಶ ಪರೀಕ್ಷೆ’ (INET) ನಡೆಸಲಾಗುತ್ತದೆ. ಈ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ಯುವಕರನ್ನು ಮುಂದಿನ ಹಂತವಾದ ‘ದೈಹಿಕ ಸಾಮರ್ಥ್ಯ ಪರೀಕ್ಷೆ’ (Physical Fitness Test – PFT) ಮತ್ತು ಅಂತಿಮವಾಗಿ ‘ವೈದ್ಯಕೀಯ ಪರೀಕ್ಷೆಗೆ’ (Medical Examination) ಒಳಪಡಿಸಲಾಗುತ್ತದೆ. ದೇಶದ ರಕ್ಷಣಾ ಪಡೆಗೆ ಸೇರಲು ಅಭ್ಯರ್ಥಿಗಳು ಪ್ರತಿ ಹಂತದಲ್ಲೂ ನಿಗದಿಪಡಿಸಿದ ದೈಹಿಕ ಹಾಗೂ ಮಾನಸಿಕ ಮಾನದಂಡಗಳನ್ನು ಪೂರೈಸುವುದು ಕಡ್ಡಾಯವಾಗಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸರಳ ವಿಧಾನ:

ಅರ್ಹ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಮೊದಲು ವೆಬ್‌ಸೈಟ್‌ನಲ್ಲಿರುವ ‘ಅಗ್ನಿವೀರ್’ ವಿಭಾಗಕ್ಕೆ ಹೋಗಿ ನೋಂದಣಿ (Registration) ಮಾಡಿಕೊಳ್ಳಬೇಕು. ಆ ನಂತರ ‘ಅಗ್ನಿವೀರ್ (ಅಪ್ರೆಂಟಿಸ್) INET 2/2026’ ಲಿಂಕ್ ಅನ್ನು ಆಯ್ಕೆ ಮಾಡಿ, ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ಅಗತ್ಯವಿರುವ ಶೈಕ್ಷಣಿಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿದ ನಂತರ, ಆನ್‌ಲೈನ್ ಮೂಲಕವೇ ನಿಗದಿತ ಶುಲ್ಕ ಪಾವತಿಸಿ ಅರ್ಜಿಯನ್ನು ಸಬ್ಮಿಟ್ ಮಾಡಬಹುದು. ಭವಿಷ್ಯದ ರೆಫರೆನ್ಸ್‌ಗಾಗಿ ಸಲ್ಲಿಕೆಯಾದ ಅರ್ಜಿ ನಮೂನೆಯ ಪ್ರಿಂಟ್‌ಔಟ್ ಅಥವಾ ಪಿಡಿಎಫ್ ಅನ್ನು ಡೌನ್‌ಲೋಡ್ ಮಾಡಿ ಕಾಯ್ದಿರಿಸಿಕೊಳ್ಳುವುದು ಮುಖ್ಯವಾಗಿರುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IND vs ENG: ಕಳೆದ 3 ಪಂದ್ಯಗಳಲ್ಲಿ 2 ಶತಕ ಬಾರಿಸಿದ ಜೈಸ್ವಾಲ್​ಗಿಲ್ಲ ತಂಡದಲ್ಲಿ ಸ್ಥಾನ..! – Kannada News | Why Jaiswal Missed India’s England ODI Squad Despite Recent Century? Kohli’s Return Impact

ಏಕೆಂದರೆ ಇದುವರೆಗೆ 6 ಏಕದಿನ ಪಂದ್ಯಗಳನ್ನಾಡಿರುವ ಜೈಸ್ವಾಲ್, 2 ಶತಕಗಳನ್ನು ಬಾರಿಸುವ ಮೂಲಕ ತಾನು ಏಕದಿನಕ್ಕೂ ಹೊಂದಿಕೊಳ್ಳುವ ಬ್ಯಾಟ್ಸ್‌ಮನ್ ಎಂಬ ಭರವಸೆ ಮೂಡಿಸಿದ್ದಾರೆ. ಅದರಲ್ಲೂ ಈ 2 ಶತಕಗಳು ಕಳೆದ ಮೂರು ಪಂದ್ಯಗಳಲ್ಲಿ ಬಂದಿರುವುದು ಅವರ ಫಾರ್ಮ್​ಗೆ ಹಿಡಿದ ಕೈಗನ್ನಡಿಯಾಗಿದೆ. ಆದಾಗ್ಯೂ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿಲ್ಲ (PC-PTI).

Source link

Exit mobile version