ಏಪ್ರಿಲ್​ನಿಂದ ಜೂನ್ 14ರವರೆಗೆ ಭಾರತದ ರಫ್ತು ಶೇ. 15ರಷ್ಟು ಏರಿಕೆ: ವಾಣಿಜ್ಯ ಸಚಿವ ಪಿಯೂಶ್ ಗೋಯಲ್ – Kannada News | India’s exports rise by 15pc till June 14th says Commerce minister Piyush Goyal

ಮುಂಬೈ, ಜೂನ್ 21: ಜಾಗತಿಕ ಮಟ್ಟದಲ್ಲಿ ಆರ್ಥಿಕ ಅನಿಶ್ಚಿತತೆ ಮತ್ತು ಸವಾಲುಗಳು ಇದ್ದರೂ ಸಹ, ಭಾರತದ ರಫ್ತು ವಲಯವು ಉತ್ತಮ ಸಾಧನೆ ಮಾಡಿದೆ. ಈ ಹಣಕಾಸು ವರ್ಷದಲ್ಲಿ ಜೂನ್ 14ರವರೆಗೆ (ಏಪ್ರಿಲ್ 1ರಿಂದ ಜೂನ್ 14) ದೇಶದ ಸರಕುಗಳ ರಫ್ತು (Mercantile Exports) ಶೇಕಡಾ 15ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ (Piyush Goyal) ತಿಳಿಸಿದ್ದಾರೆ. ಮುಂಬೈನಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್ ಜೊತೆಗಿನ ಸಂವಾದದಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಜಾಗತಿಕ ಆರ್ಥಿಕ ಪರಿಸ್ಥಿತಿ ಅಷ್ಟು ಪೂರಕವಾಗಿಲ್ಲದಿದ್ದರೂ, ಭಾರತದ ರಫ್ತು ವಲಯವು ಈ ಬೆಳವಣಿಗೆಯನ್ನು ದಾಖಲಿಸಿರುವುದು ಗಮನಾರ್ಹವಾಗಿದೆ. ಸರ್ಕಾರದ ನೀತಿಗಳು ಮತ್ತು ರಫ್ತು ಉತ್ತೇಜಕ ಕ್ರಮಗಳು ಇದಕ್ಕೆ ಸಹಕಾರಿಯಾಗಿವೆ ಎಂಬುದು ಸಚಿವರ ಅಭಿಪ್ರಾಯವಾಗಿದೆ. ಭಾರತದ ಸರಕುಗಳ ಮೇಲೆ ಅಮೆರಿಕ ಶೇ. 50ರಷ್ಟು ಸುಂಕ ಹೇರಿದರೂ 2025-26ರಲ್ಲಿ ಭಾರತ ಉತ್ತಮ ರಫ್ತು ದಾಖಲಿಸಿರುವ ಸಂಗತಿಯನ್ನು ವಾಣಿಜ್ಯ ಸಚಿವರು ಎತ್ತಿ ತೋರಿಸಿದರು.

ಇದನ್ನೂ ಓದಿ: ವಿಶ್ವಬ್ಯಾಂಕ್​ನಿಂದ 1.5 ಬಿಲಿಯನ್, ಎಡಿಬಿಯಿಂದ 1 ಬಿಲಿಯನ್ ಡಾಲರ್ ಸಾಲ ಪಡೆಯಲಿರುವ ಭಾರತ

‘ಈಗಲೂ ಕೂಡ ನೀವು ಏಪ್ರಿಲ್​ನಿಂದ ಹಿಡಿದು ಜೂನ್​ನ 14 ದಿನಗಳವರೆಗೆ ದತ್ತಾಂಶ ನನ್ನ ಬಳಿ ಇದೆ. ಈ ಅವಧಿಯಲ್ಲಿ ರಫ್ತು ಶೇ. 15ರಷ್ಟು ಹೆಚ್ಚಿದೆ ಎಂದವರು ಹೇಳಿದರು.

ಜೂನ್ ತಿಂಗಳ ಆಮದು ಮತ್ತು ರಫ್ತು ದತ್ತಾಂಶವನ್ನು ಸರ್ಕಾರ ಜುಲೈ 15ರಂದು ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಕಳೆದ ವಾರ ಮೇ ತಿಂಗಳ ರಫ್ತು ದತ್ತಾಂಶ ಬಿಡುಗಡೆ ಆಗಿತ್ತು. ಅದರ ಪ್ರಕಾರ ರಫ್ತು ಮೇ ತಿಂಗಳಲ್ಲಿ 45.2 ಬಿಲಿಯನ್ ಡಾಲರ್​ಗೆ ಏರಿತ್ತು. ಶೇ. 18ರಷ್ಟು ಹೆಚ್ಚಳ ಅದು. ಕಳೆದ ಆರು ತಿಂಗಳಲ್ಲೇ ಗರಿಷ್ಠ ರಫ್ತು ಮಟ್ಟವಾಗಿದೆ.

ಇದನ್ನೂ ಓದಿ: 2008ರ ಆರ್ಥಿಕ ಹಿಂಜರಿತದಂತೆ ಕಾಡಲಿದೆಯೇ ಕೃತಕ ಬುದ್ಧಿಮತ್ತೆ?: ಜಾಗತಿಕ ಎಐ ಹೂಡಿಕೆಯ ಕುರಿತು ಆತಂಕ ವ್ಯಕ್ತಪಡಿಸಿದ ಪ್ರೊ. ಅಶ್ವತ್ ದಾಮೋದರನ್

ದೇಶದ ವಿದೇಶಿ ವ್ಯಾಪಾರ ವಲಯದಲ್ಲಿನ ಈ ಧನಾತ್ಮಕ ಬೆಳವಣಿಗೆಯು ಭಾರತದ ಆರ್ಥಿಕತೆಗೆ ಚೇತರಿಕೆ ನೀಡಲಿದೆ ಮತ್ತು ಮುಂಬರುವ ದಿನಗಳಲ್ಲಿ ರಫ್ತು ವಲಯ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ದೆಹಲಿ ಮೆಟ್ರೋದೊಳಗೆ ಕಪಿಚೇಷ್ಟೆ – Kannada News | Monkey’s Surprise Metro Ride Sparks Safety Debate Among Delhi Passengers

ನವದೆಹಲಿ, ಜೂನ್ 21: ದೆಹಲಿ ಮೆಟ್ರೋದಲ್ಲಿ ಯಾವಾಗಲೂ ಯಾರೋ ಡ್ಯಾನ್ಸ್​ ಮಾಡಿದ್ದು, ಇನ್ಯಾರೋ ವಿಚಿತ್ರ ಉಡುಗೆಗಳನ್ನು ತೊಟ್ಟು ಬಂದಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಪ್ರಾಣಿಗಳ ಆಟಕ್ಕೂ ವೇದಿಕೆಯಾದಂತಾಗಿದೆ. ಕೋತಿ(Monkey)ಯೊಂದು ಮೆಟ್ರೋದೊಳಗೆ ಬಂದು ಚೇಷ್ಟೆ ಮಾಡಿದೆ.

ಮೆಟ್ರೋ ಬೋಗಿಯೊಳಗೆ ನಡೆದಿದ್ದೇನು?
ಜನದಟ್ಟಣೆಯಿಂದ ಕೂಡಿದ್ದ ಮೆಟ್ರೋ ಕೋಚ್‌ ಒಳಗೆ ನುಗ್ಗಿದ ಕೋತಿ, ಮೊದಲು ಸೀಟುಗಳ ಮೇಲೆಲ್ಲಾ ಓಡಾಡಿದೆ. ಯುವತಿಯ ಬಳಿಕ ಕೋತಿ ಅಲ್ಲಿದ್ದ ಇತರ ಪ್ರಯಾಣಿಕರ ಮೇಲೂ ಹಾರಿ ಹೆದರಿಸಲು ಶುರು ಮಾಡಿದೆ. ಕೋತಿಯ ಆಟ ಕಂಡು ಬೋಗಿಯಲ್ಲಿದ್ದ ಜನರು ಪ್ರಾಣಭಯದಿಂದ ಕಿರುಚುತ್ತಾ ಇತ್ತ ಇತ್ತ ಓಡಿದ್ದಾರೆ.

ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ನಲ್ಲಿ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ: ಕೆಲವರು “ದೆಹಲಿ ಮೆಟ್ರೋದಲ್ಲಿ ಪ್ರತಿದಿನವೂ ಹೊಸ ಮನೋರಂಜನೆ ಸಿಗುತ್ತದೆ” ಎಂದು ತಮಾಷೆ ಮಾಡುತ್ತಿದ್ದಾರೆ.

ವಿಡಿಯೋ

ಇನ್ನು ಕೆಲವರು, ಇದು ನಗುವ ವಿಷಯವಲ್ಲ, ಅತ್ಯಂತ ಅಪಾಯಕಾರಿ. ಒಂದು ವೇಳೆ ಕೋತಿ ಯಾರಿಗಾದರೂ ಕಚ್ಚಿ, ಯಾವುದಾದರೂ ರೋಗ ಹರಡಿದ್ದರೆ ಯಾರು ಹೊಣೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅತ್ಯಾಧುನಿಕ ಸ್ವಯಂಚಾಲಿತ ಬಾಗಿಲುಗಳು ಹಾಗೂ ಕಟ್ಟುನಿಟ್ಟಿನ ತಪಾಸಣೆ ಇರುವ ಮೆಟ್ರೋ ನಿಲ್ದಾಣದೊಳಗೆ, ಚಲಿಸುವ ರೈಲಿಗೆ ಕೋತಿ ಹೇಗೆ ಪ್ರವೇಶಿಸಿತು ಎಂಬುದು ದೊಡ್ಡ ನಿಗೂಢವಾಗಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಮೆಟ್ರೋ ಅಧಿಕಾರಿಗಳು ಇಂತಹ ಕಾಡು ಪ್ರಾಣಿಗಳು ಒಳಗೆ ಬರದಂತೆ ಕಠಿಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ತೀವ್ರ ಒತ್ತಾಯ ಮಾಡುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ವಿದೇಶಿ ಜೀವನಕ್ಕೆ ಗುಡ್ ಬೈ ಹೇಳಿ ಬೆಂಗಳೂರಿಗೆ ಬಂದ ಇಂಜಿನಿಯರ್, ಕಾರಣ ಇದೇ ನೋಡಿ – Kannada News | Indian techie decides to leave well paying job and move to Bengaluru from Singapore

ಕೆಲವರಿಗೆ ವಿದೇಶ (foreign) ಅಂದ್ರೆ ಅದೇನೋ ವ್ಯಾಮೋಹ. ಹೀಗಾಗಿ ಓದು ಮುಗಿಯುತ್ತಿದ್ದಂತೆ ವಿದೇಶಕ್ಕೆ ಹಾರುತ್ತಾರೆ. ವಿದೇಶದಲ್ಲಿ ಜಾಬ್ ಸಿಕ್ಕರೆ ಲೈಫ್ ಸೆಟ್ಲ್ ಆದಂತೆ ಎನ್ನುವುದು ಹೆಚ್ಚಿನವರ ಭಾವನೆ. ಆದರೆ ವ್ಯಕ್ತಿಯೊಬ್ಬರು ಸಿಂಗಾಪುರದಿಂದ ಬೆಂಗಳೂರಿಗೆ (Bengaluru) ಮರಳಿದ್ದಾರೆ. ತಮ್ಮ ಈ ನಿರ್ಧಾರದ ಹಿಂದಿನ ಕಾರಣವನ್ನು ರಿವೀಲ್ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಸದ್ಯ ವೈರಲ್ ಆಗಿದೆ.

ಅಮನ್ ವೈಷ್ಣವ್ (@amandailylogs) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಹಿರಿಯ ಎಂಎಲ್ ಎಂಜಿನಿಯರ್ ಎಂದು ತಮ್ಮನ್ನು ಪರಿಚಯಿಸಿಕೊಂಡ ಅಮನ್ ವೈಷ್ಣವ್ ಸಿಂಗಾಪುರ ಬಿಟ್ಟು ಬೆಂಗಳೂರಿಗೆ ಬಂದ ನಿರ್ಧಾರದ ಬಗ್ಗೆ ಹೇಳಿಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ಕ್ಲಿಪಿಂಗ್ ನಲ್ಲಿ ಪ್ರತಿಯೊಬ್ಬ ಭಾರತೀಯ ಎಂಜಿನಿಯರ್ ಕನಸು ಕಾಣುವಂತೆ ಆ ಕನಸು ಕಂಡೆ. ಹಾಯ್ ನಾನು ಅಮನ್, ಹಿರಿಯ ಎಂಎಲ್ ಎಂಜಿನಿಯರ್. ನಾನು ಕಳೆದ ತಿಂಗಳು ಸಿಂಗಾಪುರವನ್ನು ತೊರೆದಿದ್ದೇನೆ. ಉತ್ತಮ ಸಂಬಳ, ಎಲ್ಲವೂ ಇತ್ತು.. ಆದರೆ ನಾನು ಭಾರತಕ್ಕೆ ಮರಳುವುದನ್ನು ಆಯ್ಕೆ ಮಾಡಿದೆ. ಕೆಲವು ವೈಯುಕ್ತಿಕವಾದ ಸಂದರ್ಭಗಳು ಸಂಭವಿಸಿದವು. ಹಾಗಾಗಿ ನಾನು ಬ್ಯಾಗ್ ಪ್ಯಾಕ್ ಮಾಡಿದೆ, ಭಾರತಕ್ಕೆ ಹಿಂತಿರುಗಿದೆ ಎಂದು ಹೇಳಿಕೊಂಡಿದ್ದಾರೆ.

ಹೆಚ್ಚಿನ ಜನರು ನನ್ನನ್ನು ಹುಚ್ಚ ಎಂದು ಭಾವಿಸಿದ್ದರು. ಅದು ನನಗೆ ಸರಿಯಾದ ನಿರ್ಧಾರವೇ ಎಂದು ನನಗೆ ತಿಳಿದಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇನ್ನೂ ಆಗಿಲ್ಲ. ನಾನು ಎಂದಿಗೂ ಭಯದಿಂದ ನಿರ್ಧಾರ ತೆಗೆದುಕೊಂಡಿಲ್ಲ. ಒಂದು ಹಂತದಲ್ಲಿ, ನೀವು ಚೆನ್ನಾಗಿ ಕಾಣುವ ಜೀವನ ಮತ್ತು ಸರಿಯಾಗಿ ಅನಿಸುವ ಜೀವನದ ನಡುವೆ ಆಯ್ಕೆ ಮಾಡಬೇಕಾಗುತ್ತದೆ. ಹೀಗಾಗಿ ನಾನು ಎರಡನೆಯದನ್ನು ಆರಿಸಿಕೊಂಡೆ ಎಂದು ಹೇಳಿದ್ದಾರೆ. ಈಗ ನನಗೆ 26 ವರ್ಷ, ಹೊಸ ನಗರದಲ್ಲಿ ತನ್ನ ಜೀವನವನ್ನು ಪುನರ್ನಿರ್ಮಿಸುತ್ತಿದ್ದೇನೆ. ನಿಮ್ಮ ಜೀವನದ ಅಧ್ಯಾಯಗಳು ಕೆಲವು ಸಲ ಅರ್ಥಪೂರ್ಣವಾಗಿರುವುದಿಲ್ಲ, ಮತ್ತು ಬಹುಶಃ ನೀವೇ ಜೀವನವನ್ನು ಯೋಗ್ಯವಾಗಿಸಬೇಕಾಗುತ್ತದೆ ಎಂದು ಹೇಳಿರುವುದನ್ನು ನೋಡಬಹುದು.

ಇದನ್ನೂ ಓದಿ: 40 ಸಾವಿರ ರೂ ಮನೆ ಬಾಡಿಗೆ, 2.4 ಲಕ್ಷ ರೂ ಭದ್ರತಾ ಠೇವಣಿ; ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದ ವ್ಯಕ್ತಿಗೆ ಫುಲ್ ಶಾಕ್

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪರಿಪೂರ್ಣ ಜೀವನ ಬೇಕಾಗಿಲ್ಲ, ಸರಿಯಾದ ಜೀವನ ಬೇಕು ಈ ಸಾಲು ನನಗೆ ತುಂಬಾ ಬೇಸರವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸುತ್ತೇನ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮಗೆ ಶುಭ ಹಾರೈಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ENG: ಕೊಹ್ಲಿ ಇನ್, ಹಾರ್ದಿಕ್ ಔಟ್; ಇಂಗ್ಲೆಂಡ್‌ ಪ್ರವಾಸಕ್ಕೆ ಭಾರತ ಏಕದಿನ ತಂಡ ಪ್ರಕಟ – Kannada News | India vs England: India ODI Squad Announced for July Series; Kohli, Youngsters Feature

ಬರುವ ಜುಲೈ ತಿಂಗಳಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಟಿ20 ಹಾಗೂ ಏಕದಿನ ಸರಣಿ ನಡೆಯಲಿದೆ. ಈ ಸರಣಿಗಾಗಿ ಟೀಂ ಇಂಡಿಯಾ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, ಈ ಪ್ರವಾಸದಲ್ಲಿ ಮೊದಲಿಗೆ ಉಭಯ ತಂಡಗ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಜುಲೈ 1 ರಿಂದ ಆರಂಭವಾಗಲಿರುವ ಟಿ20 ಸರಣಿ ಜುಲೈ 11 ರವರೆಗೆ ನಡೆಯಲಿದೆ. ಈ ಸರಣಿಗಾಗಿ ಬಿಸಿಸಿಐ ಈಗಾಗಲೇ ತಂಡವನ್ನು ಸಹ ಪ್ರಕಟಿಸಿತ್ತು. ಟಿ20 ಸರಣಿಯ ಬಳಿಕ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಜುಲೈ 14 ರಿಂದ ಆರಂಭವಾಗಲಿರುವ ಏಕದಿನ ಸರಣಿ ಜುಲೈ 19 ರವರೆಗೆ ನಡೆಯಲಿದ್ದು, ಇದೀಗ ಈ ಏಕದಿನ ಸರಣಿಗಾಗಿ ಬಿಸಿಸಿಐ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಈ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದು, ಹಲವು ಯುವ ಆಟಗಾರರಿಗೂ ತಂಡದಲ್ಲಿ ಅವಕಾಶ ನೀಡಲಾಗಿದೆ.

ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತ ಏಕದಿನ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್.

Source link

ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ – Kannada News | Darshan and Pavithra Gowda take part in International Day of Yoga in Parappana Agrahara Jail

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಂದು (ಜೂನ್ 21) ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗಿದೆ. ಜೈಲಿನಲ್ಲಿ ಎಲ್ಲಾ ಕೈದಿಗಳಿಂದ ಯೋಗಭ್ಯಾಸ ಮಾಡಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಮುಂತಾದವರು ಕೂಡ ಯೋಗ ದಿನಾಚರಣೆಯಲ್ಲಿ ಭಾಗಿ ಆಗಿದ್ದಾರೆ. ತಮಗೆ ಬೆನ್ನು ನೋವಿನ ಸಮಸ್ಯೆ ಇರುವ ಕಾರಣದಿಂದ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲ್ಲ ಎಂದು ಈ ಮೊದಲು ದರ್ಶನ್ (Darshan) ಹೇಳಿದ್ದರು. ಆದರೆ ಅವರನ್ನು ಕಚೇರಿಗೆ ಕರೆಸಿಕೊಂಡು ಯೋಗ ಮಾಡಲು ಅಲೋಕ್ ಕುಮಾರ್ ಸಲಹೆ ನೀಡಿದರು. ‘ಬೆನ್ನು ನೋವಿದ್ರೆ ಯೋಗ ಮಾಡಿದ್ರೆ ತುಂಬಾ ಒಳ್ಳೆದು’ ಎಂದು ಸಲಹೆ ಕೊಟ್ಟರು. ಆನಂತರ ಜೈಲಿನ ಕಾರಿಡಾರ್​ನಲ್ಲಿ ದರ್ಶನ್ ಅವರು ಯೋಗ ಮಾಡಿದರು. ಸಾಮೂಹಿಕ ಯೋಗದಲ್ಲಿ ಆರೋಪಿ ಪವಿತ್ರಾ ಗೌಡ ಕೂಡ ಭಾಗಿಯಾದರು. ದರ್ಶನ್ ಅವರು ಪ್ರಾಣಾಯಾಮ, ದೀರ್ಘಾದಂಡ ನಮಸ್ಕಾರ, ಶವಾಸನ ಮಾಡಿದ್ದಾರೆ. ಒಂದು ಗಂಟೆಯ ಕಾಲ ಯೋಗದಲ್ಲಿ ಭಾಗಿಯಾದ ಬಳಿಕ ಅವರು ಬ್ಯಾರಕ್​ಗೆ ತೆರಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿಗೆ ಬರುತ್ತಿದ್ದ ಕಳಪೆ ಹಾಲು: ಗಡಿಯಲ್ಲಿ ಎಫ್‌ಎಸ್‌ಎಸ್‌ಎಐ ಭರ್ಜರಿ ಕಾರ್ಯಾಚರಣೆ, 30 ಕ್ಕೂ ಹೆಚ್ಚು ವಾಹನಗಳು ಜಪ್ತಿ! – Kannada News | FSSAI Crackdown: Massive Adulterated Milk Supply Network From Tamil Nadu to Bengaluru Busted, 30 Vehicles Intercepted

ಬೆಂಗಳೂರು, ಜೂನ್ 21: ಬೆಂಗಳೂರಿನ ಚಹಾ, ಕಾಫಿ ಅಂಗಡಿಗಳು, ಬೇಕರಿಗಳು ಹಾಗೂ ಹೋಟೆಲ್‌ಗಳಿಗೆ ನೆರೆ ರಾಜ್ಯದಿಂದ ಆಮದು ಆಗುತ್ತಿದ್ದ ಪರವಾನಗಿ ರಹಿತ ಹಾಗೂ ಕಲಬೆರಕೆ ಶಂಕಿತ ಹಾಲಿನ ಜಾಲವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪತ್ತೆಹಚ್ಚಿದೆ. ಶನಿವಾರ ಬೆಳಗ್ಗೆ ತಮಿಳುನಾಡು-ಕರ್ನಾಟಕ ಗಡಿಯ ಆಯಕಟ್ಟಿನ ಚೆಕ್‌ಪೋಸ್ಟ್‌ಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳು 30 ಕ್ಕೂ ಹೆಚ್ಚು ಹಾಲಿನ ಟ್ಯಾಂಕರ್ ಹಾಗೂ ವಾಹನಗಳನ್ನು ತಡೆದು ತಪಾಸಣೆ ನಡೆಸಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರಿಗೆ ತಮಿಳುನಾಡಿನಿಂದ ಬರುತ್ತಿದ್ದ ಪರವಾನಗಿ ರಹಿತ ಹಾಲಿನ ಜಾಲದ ಮೇಲೆ FSSAI ದಾಳಿ.
  • ಕೆಎಂಎಫ್ (KMF) ದರಕ್ಕಿಂತ ಕಡಿಮೆ ಬೆಲೆಗೆ ಬೇಕರಿ, ಹೋಟೆಲ್‌ಗಳಿಗೆ ಸರಬರಾಜಾಗುತ್ತಿದ್ದ ಕಳಪೆ ಹಾಲು.
  • ಕೋಲ್ಡ್ ಸ್ಟೋರೇಜ್ ಇಲ್ಲದೆ ಸಾಗಣೆಯಾಗುತ್ತಿದ್ದ ಹಾಲಿನ ಮಾದರಿಗಳು ಲ್ಯಾಬ್ ಟೆಸ್ಟಿಂಗ್‌ಗೆ ರವಾನೆ.

ವಂಚನೆಯ ಜಾಲ ಪತ್ತೆಯಾಗಿದ್ದು ಹೇಗೆ?

ಕರ್ನಾಟಕ ಹಾಲು ಮಹಾಮಂಡಳಿ (KMF) ನಿಗದಿಪಡಿಸಿರುವ ದರಕ್ಕಿಂತ ಅತ್ಯಂತ ಕಡಿಮೆ ಬೆಲೆಗೆ ಬೆಂಗಳೂರಿನ ಮುಕ್ತ ಮಾರುಕಟ್ಟೆಯಲ್ಲಿ ಹಾಲಿನ ಮಾರಾಟವಾಗುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಬೆಂಗಳೂರು ದಕ್ಷಿಣ ವಿಭಾಗದ ಸಹಾಯಕ ಕಮಿಷನರ್ ವಿಶ್ವನಾಥ್ ವಿ.ಆರ್. ನೇತೃತ್ವದ ವಿಶೇಷ ತಂಡವು ಹೊಸಕೋಟೆ, ಅತ್ತಿಬೆಲೆ ಮತ್ತು ಹೊಸೂರು ಚೆಕ್‌ಪೋಸ್ಟ್‌ಗಳಲ್ಲಿ ಮುಂಜಾನೆ ಜಂಟಿ ಕಾರ್ಯಾಚರಣೆ ಕೈಗೊಂಡಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಯಾವುದೇ ಬ್ರ್ಯಾಂಡ್ ಇಲ್ಲ, ಲೈಸೆನ್ಸ್ ಇಲ್ಲ

ದಾಳಿ ಮಾಡಲಾದ ಯಾವುದೇ ವಾಹನಗಳಲ್ಲಿದ್ದ ಹಾಲು ಯಾವುದೇ ಪ್ರಸಿದ್ಧ ಬ್ರ್ಯಾಂಡ್‌ಗೆ ಸೇರಿರಲಿಲ್ಲ. ಮುಖ್ಯವಾಗಿ, ಈ ಹಾಲಿನ ಸಾಗಣೆದಾರರು ಅಥವಾ ವಿತರಕರು ಯಾವುದೇ ಸಿಂಧುತ್ವ ಹೊಂದಿರುವ ಎಫ್‌ಎಸ್‌ಎಸ್‌ಎಐ (FSSAI) ಪರವಾನಗಿ ಹೊಂದಿರಲಿಲ್ಲ. ತಮಿಳುನಾಡಿನ ಖಾಸಗಿ ಡೈರಿಗಳಿಂದ ಬೆಂಗಳೂರಿಗೆ ತರಲಾಗುತ್ತಿದ್ದ ಈ ಹಾಲಿನ ವಾಹನಗಳಲ್ಲಿ ರೆಫ್ರಿಜರೇಷನ್ ವ್ಯವಸ್ಥೆ ಇರಲಿಲ್ಲ. ದೀರ್ಘ ಪ್ರಯಾಣದ ವೇಳೆ ತಾಪಮಾನ ಕಾಯ್ದುಕೊಳ್ಳದಿದ್ದರೆ ಹಾಲಿನಲ್ಲಿ ಬ್ಯಾಕ್ಟೀರಿಯಾಗಳು ಅತ್ಯಂತ ವೇಗವಾಗಿ ಬೆಳೆಯುತ್ತವೆ. ಇದು ಸಾರ್ವಜನಿಕರ ಆರೋಗ್ಯಕ್ಕೆ ತೀವ್ರ ಹಾನಿಕರವಾಗಿದೆ.

ಹಾಲಿನ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಅದು ಕೆಡದಂತೆ ತಡೆಯಲು ಕೆಮಿಕಲ್ ಅಥವಾ ಇತರೆ ಪದಾರ್ಥಗಳನ್ನು ಬೆರೆಸಿರುವ ಶಂಕೆಯಿದ್ದು, ಅಧಿಕಾರಿಗಳು ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ತಪಾಸಣೆಗೆ ಕಳುಹಿಸಿದ್ದಾರೆ.

ಹಾಲಿನ ಗ್ರಾಹಕರು ಯಾರು?

ಈ ಕಳಪೆ ಮತ್ತು ಅಗ್ಗದ ಹಾಲನ್ನು ಬೆಂಗಳೂರಿನ ಸಣ್ಣಪುಟ್ಟ ಹೋಟೆಲ್‌ಗಳು, ಬೇಕರಿಗಳು, ಚಹಾ-ಕಾಫಿ ಅಂಗಡಿಗಳು, ಸಿಹಿ ತಿಂಡಿ ತಯಾರಕರು (ಸ್ವೀಟ್ ಮಾರ್ಟ್ಸ್) ಮತ್ತು ಮಸಾಲಾ ಪದಾರ್ಥಗಳ ತಯಾರಕರು ತಮ್ಮ ಲಾಭದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಖರೀದಿಸುತ್ತಿದ್ದರು. ತಮಿಳುನಾಡಿನಿಂದ ತರಲಾಗುತ್ತಿದ್ದ ಈ ಹಾಲನ್ನು ಸ್ಥಳೀಯವಾಗಿ ಪ್ಯಾಕ್ ಮಾಡಿ, ಹೆಸರಿಲ್ಲದ ಸ್ಥಳೀಯ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಹಾಲಿನ ಸರಬರಾಜು ಜಾಲ ನಡೆಸುತ್ತಿದ್ದ ಹಲವು ವಿತರಕರಿಗೆ ಅಧಿಕಾರಿಗಳು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೈಭವ್ ಸಿಡಿಲಬ್ಬರ: ಬೃಹತ್ ಮೊತ್ತ ಪೇರಿಸಿದ ಟೀಮ್ ಇಂಡಿಯಾ – Kannada News | Sri Lanka A vs India A, Final: Team India’s Total

ದಂಬುಲ್ಲಾದಲ್ಲಿ ನಡೆಯುತ್ತಿರುವ ಶ್ರೀಲಂಕಾ ಎ ವಿರುದ್ಧದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಎ ತಂಡ 333 ರನ್​ ಕಲೆಹಾಕಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಸಹನ್ ಅರಚ್ಚಿಗೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ವೈಭವ್ ಸೂರ್ಯವಂಶಿ ಹಾಗೂ ಪ್ರಿಯಾಂಶ್ ಆರ್ಯ ಸಿಡಿಲಬ್ಬರದ ಆರಂಭ ಒದಗಿಸಿದ್ದರು.

ಮೊದಲ ಓವರ್​ನಿಂದಲೇ ಅಬ್ಬರಿಸಲಾರಂಭಿಸಿದ ವೈಭವ್ ಸೂರ್ಯವಂಶಿ ತಾನೆದುರಿಸಿದ ಮೊದಲ 11 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 5 ಫೋರ್​ಗಳನ್ನು ಬಾರಿಸಿದ್ದರು. ಈ ಮೂಲಕ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಅರ್ಧಶತಕದ ಬಳಿಕ ಕೂಡ ಅಬ್ಬರಿಸಿದ ವೈಭವ್ ಸೂರ್ಯವಂಶಿ 29 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 94 ರನ್ ಬಾರಿಸಿ ಔಟಾದರು. ಅಷ್ಟರಲ್ಲಾಗಲೇ ಟೀಮ್ ಇಂಡಿಯಾ ಸ್ಕೋರ್ 8.1 ಓವರ್​ಗಳಲ್ಲಿ 132 ಕ್ಕೆ ಬಂದು ನಿಂತಿತ್ತು. ಅತ್ತ ವೈಭವ್ ಔಟಾಗುತ್ತಿದ್ದಂತೆ ಪ್ರಿಯಾಂಶ್ ಆರ್ಯ (39) ಕೂಡ ವಿಕೆಟ್ ಒಪ್ಪಿಸಿದರು.

ಆ ಬಳಿಕ ಬಂದ ರುತುರಾಜ್ ಗಾಯಕ್ವಾಡ್ 40 ರನ್ ಬಾರಿಸಿದರೆ, ನಾಯಕ ತಿಲಕ್ ವರ್ಮಾ 67 ರನ್​ ಸಿಡಿಸಿದರು. ಇನ್ನು ಕುಮಾರ್ ಕುಶಾಗ್ರ 36 ರನ್​ಗಳ ಕೊಡುಗೆ ನೀಡಿದರು.  ಆದರೆ ಕಳೆದ ಮ್ಯಾಚ್​ನಲ್ಲಿ ಅಬ್ಬರಿಸಿದ್ದ ಸೂರ್ಯಂಶ್ ಶೆಡ್ಗೆ ಈ ಬಾರಿ ಕೇವಲ 2 ರನ್​ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು.

ಇನ್ನು ಅಂತಿಮ ಹಂತದಲ್ಲಿ ಅಬ್ಬರಿಸಿದ ಅನ್ಕೂಲ್ ರಾಯ್ 15 ಎಸೆತಗಳಲ್ಲಿ 39 ರನ್ ಚಚ್ಚಿದರು. ಈ ಮೂಲಕ ಭಾರತ ಎ ತಂಡವು 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 377 ರನ್ ಕಲೆಹಾಕಿದೆ.

ಶ್ರೀಲಂಕಾ ಎ ಪ್ಲೇಯಿಂಗ್ 11: ನಿರೋಷನ್ ಡಿಕ್ವೆಲ್ಲಾ (ವಿಕೆಟ್ ಕೀಪರ್) , ಅವಿಷ್ಕಾ ಫೆರ್ನಾಂಡೊ , ನುವಾನಿಡು ಫೆರ್ನಾಂಡೊ ,
ಸದೀರ ಸಮರವಿಕ್ರಮ , ಸಹನ್ ಅರಚ್ಚಿಗೆ (ನಾಯಕ) , ರವಿಂದು ಫರ್ನಾಂಡೊ , ವನುಜಾ ಸಹನ್ , ಮೊಹಮ್ಮದ್ ಶಿರಾಜ್ , ವಿಜಯಕಾಂತ್ ವಿಯಸ್ಕಾಂತ್ , ದುಲಾಜ್ ಸಮುದಿತಾ ,ಕುಗಥಾಸ್ ಮಥುಲನ್.

ಇದನ್ನೂ ಓದಿ: ಪೊಲಾರ್ಡ್​ ಪವರ್​ಗೆ ಗೇಲ್ ಸಾರ್ವಕಾಲಿಕ ವಿಶ್ವ ದಾಖಲೆ ಉಡೀಸ್!

ಭಾರತ ಎ ಪ್ಲೇಯಿಂಗ್ 11: ಪ್ರಿಯಾಂಶ್ ಆರ್ಯ , ವೈಭವ್ ಸೂರ್ಯವಂಶಿ , ರುತುರಾಜ್ ಗಾಯಕ್ವಾಡ್ , ತಿಲಕ್ ವರ್ಮಾ (ನಾಯಕ) , ಕುಮಾರ್ ಕುಶಾಗ್ರ (ವಿಕೆಟ್ ಕೀಪರ್) , ಸೂರ್ಯಾಂಶ್ ಶೆಡ್ಗೆ , ನಿಶಾಂತ್ ಸಿಂಧು , ಅನ್ಕೂಲ್ ರಾಯ್ , ವಿಪ್ರಾಜ್ ನಿಗಮ್ , ಅಶೋಕ್ ಶರ್ಮಾ , ಯಶ್ ಠಾಕೂರ್.

Source link

Namma Metro: ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ – Kannada News | Fire breaks out in nagasandra Namma metro Station at Bengaluru

ಬೆಂಗಳೂರು, (ಜೂನ್ 21): ನಾಗಸಂದ್ರ ನಮ್ಮ ಮೆಟ್ರೋ ಸ್ಟೇಷನ್ ನಲ್ಲಿ (nagasandra Namma metro Station )ಅಗ್ನಿ ಅವಘಡ ಸಂಭವಿಸಿದೆ. ಹಸರಿ ಮಾರ್ಗದ ಮಾದಾವರ ಟು ಸಿಲ್ಕ್ ಇನ್ಸ್ಟಿಟ್ಯೂಟ್ ಮಾರ್ಗದಲ್ಲಿ ಬರುವ ಮೆಟ್ರೋ ಸ್ಟೇಷನ್ ಬೆಂಕಿ ಅವಘಡ ಸಮಭವಿಸಿದ್ದು, ಹೀಗಾಗಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

Source link

ನೀಟ್ ಪರೀಕ್ಷೆ: ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಗೆ ನೋ ಎಂಟ್ರಿ, ಕೈಯಲ್ಲಿ ಕಟ್ಟಿದ್ದ ದಾರ ಕಟ್ – Kannada News | NEET Re Exam In Bengaluru: No entry for Students Who Wear Jeans Pant

ಬೆಂಗಳೂರು, (ಜೂನ್ 21): ದೇಶಾದ್ಯಂತ ನೀಟ್ ಮರು ಪರೀಕ್ಷೆ ನಡೆಯುತ್ತಿದೆ. ಪೇಪರ್ ಲೀಕ್ ಕಾರಣದಂದ ರದ್ದಾಗಿದ್ದ ನೀಟ್ ಪರೀಕ್ಷೆಯನ್ನು ಭಾರಿ ಬಂದೋಬಸ್ತ್ ಮೂಲಕ ನಡೆಸಲಾಗುತ್ತಿದೆ. ವ್ಯಾಪಕ ಟೀಕೆ ಬಳಿಕ ಈ ಬಾರಿ ನೀಟ್ ಪರೀಕ್ಷೆ ಮೇಲೆ ಕೇಂದ್ರ ಶಿಕ್ಷಣ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ನಿಯಮಗಳನ್ನು ಕಠಿಣಗೊಳಿಸಿದೆ. ಇತ್ತ ಬೆಂಗಳೂರಿನಲ್ಲೂ ಸಹ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದ್ದು, ಮೂರು ಹಂತದಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಇನ್ನು ಜೀನ್ಸ್ ಪ್ಯಾಂಟ್ ಧರಿಸಿ ಬಂದು ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಇನ್ನು ಕೈಗೆ ಕಟ್ಟಲಾಗಿದ್ದ ಧಾರ್ಮಿಕ ಸಂಕೇತದ ದಾರವನ್ನು ಸಹ ಬಿಚ್ಚಿಸಲಾಗಿದೆ. ಶಿವದಾರ, ಜನಿವಾರ ಧರಿಸಿಕೊಂಡು ಬಂದವರಿಗೆ ನೋ ಎಂಟ್ರಿ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಶ್ವಬ್ಯಾಂಕ್​ನಿಂದ 1.5 ಬಿಲಿಯನ್, ಎಡಿಬಿಯಿಂದ 1 ಬಿಲಿಯನ್ ಡಾಲರ್ ಸಾಲ ಪಡೆಯಲಿರುವ ಭಾರತ – Kannada News | India getting big loans from World Bank and ADB to support reform programmes

ವಿಶ್ವ ಬ್ಯಾಂಕ್Image Credit source: Pavlo Gonchar/SOPA Images/LightRocket via Getty Images

ನವದೆಹಲಿ, ಜೂನ್ 21: ಸುಧಾರಣಾ ಯೋಜನೆಗಳಿಗೆ ಬೆಂಬಲ ನೀಡಲು, ಏರುತ್ತಿರುವ ಸಬ್ಸಿಡಿ ವೆಚ್ಚಗಳನ್ನು ಸರಿದೂಗಿಸಲು ಮತ್ತು ನಗರಾಭಿವೃದ್ಧಿ ಯೋಜನೆಗಳಿಗೆ ಧನಸಹಾಯ ನೀಡಲು ಭಾರತ ಸರ್ಕಾರವು ಅಂತಾರಾಷ್ಟ್ರೀಯ ಬ್ಯಾಂಕುಗಳಿಂದ ಭಾರೀ ಮೊತ್ತದ ಸಾಲ ಪಡೆಯುತ್ತಿದೆ. ವಿಶ್ವ ಬ್ಯಾಂಕ್ (World Bank) ಮತ್ತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ನಿಂದ ಸುಮಾರು $2.5 ಬಿಲಿಯನ್ (24,000 ಕೋಟಿ ರೂ) ಸಾಲ ಪಡೆಯಲು ಮಾತುಕತೆ ನಡೆಸುತ್ತಿದೆ.

ವಿಶ್ವ ಬ್ಯಾಂಕ್‌ನಿಂದ $1.5 ಬಿಲಿಯನ್ ಮತ್ತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್‌ನಿಂದ $1 ಬಿಲಿಯನ್ ಸಾಲ ಪಡೆಯುವ ನಿರೀಕ್ಷೆ ಇದೆ. ಮುಂದಿನ ಎರಡು ತಿಂಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಬಹುದು. ವರದಿ ಪ್ರಕಾರ ವಿಶ್ವ ಬ್ಯಾಂಕ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್​ಗಳ ಮಂಡಳಿಯು ಭಾರತದ ಸಾಲಕ್ಕೆ ಶುಕ್ರವಾರ (ಜೂನ್ 19) ಅನುಮೋದನೆ ನೀಡಿರುವುದು ತಿಳಿದುಬಂದಿದೆ.

ಇದನ್ನೂ ಓದಿ: 2008ರ ಆರ್ಥಿಕ ಹಿಂಜರಿತದಂತೆ ಕಾಡಲಿದೆಯೇ ಕೃತಕ ಬುದ್ಧಿಮತ್ತೆ?: ಜಾಗತಿಕ ಎಐ ಹೂಡಿಕೆಯ ಕುರಿತು ಆತಂಕ ವ್ಯಕ್ತಪಡಿಸಿದ ಪ್ರೊ. ಅಶ್ವತ್ ದಾಮೋದರನ್

ಸಾಲಕ್ಕೆ ಕಾರಣವೇನು?: ಮಧ್ಯಪ್ರಾಚ್ಯದಲ್ಲಿ (ಇರಾನ್ ಸಂಘರ್ಷ) ಉಂಟಾಗಿರುವ ಉದ್ವಿಗ್ನತೆಯಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿವೆ. ಭಾರತವು ತನ್ನ 80% ಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ದೇಶದ ನಾಗರಿಕರನ್ನು ಬೆಲೆ ಏರಿಕೆಯಿಂದ ರಕ್ಷಿಸಲು ಇಂಧನ ಮತ್ತು ರಸಗೊಬ್ಬರಗಳ ಮೇಲಿನ ಸಬ್ಸಿಡಿ ವೆಚ್ಚವನ್ನು ಸರ್ಕಾರ ಹೆಚ್ಚಿಸಬೇಕಾಗಿ ಬಂದಿದೆ. ಇದರಿಂದಾಗಿ ಬಜೆಟ್ ಕೊರತೆ ಎದುರಾಗಿದ್ದು, ದೊಡ್ಡ ಯೋಜನೆಗಳಿಗೆ ಹಣದ ಕೊರತೆಯಾಗಿದೆ.

ಹಣದ ಬಳಕೆ ಎಲ್ಲಿ?: ಈ ಸಾಲದ ಮೊತ್ತವನ್ನು ಮುಖ್ಯವಾಗಿ ನಗರ ಮೂಲಸೌಕರ್ಯಗಳ ಅಭಿವೃದ್ಧಿ (Urban Infrastructure) ಮತ್ತು ಹೊಸ ಉದ್ಯೋಗ ಸೃಷ್ಟಿಗೆ ಪೂರಕವಾದ ಯೋಜನೆಗಳಿಗಾಗಿ ಬಳಸಿಕೊಳ್ಳಲು ಸರ್ಕಾರ ಯೋಜಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿದ್ದು, ಅದಕ್ಕೆ ಈ ಹಣ ಸಹಕಾರಿಯಾಗಲಿದೆ.

ಇದನ್ನೂ ಓದಿ: ರಿಲಯನ್ಸ್​ನ ಸೆಲ್ ಮತ್ತು ಬೆಸ್ ತಯಾರಿಕೆಯ ಸಾಮರ್ಥ್ಯ 120 GWhಕ್ಕೆ; ಬೆಸ್ ಯಾಕೆ ಮುಖ್ಯ?

ಭಾರತವು ವಿಶ್ವ ಬ್ಯಾಂಕ್‌ನ ಅತಿ ದೊಡ್ಡ ಗ್ರಾಹಕ ದೇಶಗಳಲ್ಲಿ ಒಂದಾಗಿದ್ದು, ಈಗಾಗಲೇ $37 ಬಿಲಿಯನ್​ನಷ್ಟು ಮೊತ್ತದ ಸಾಲಗಳನ್ನು ಹೊಂದಿದೆ. ಪ್ರಸ್ತುತ ಕೇಳಲಾಗಿರುವ ಸಾಲವು ವಿಶ್ವ ಬ್ಯಾಂಕ್ ಭಾರತಕ್ಕೆ ವಾರ್ಷಿಕವಾಗಿ ನೀಡಲು ಒಪ್ಪಿಕೊಂಡಿರುವ $8-$10 ಬಿಲಿಯನ್ ಸಾಲದ ಕಾರ್ಯಕ್ರಮದ ಭಾಗವೇ ಆಗಿದೆ ಎಂದು ವರದಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version