Headlines

ಹಡಗುಗಳ ಮೇಲಿನ ಇರಾನ್ ದಾಳಿಯಿಂದ ಪಾರಾದ ಮಂಗಳೂರಿನ ಯುವಕ: ಜೀವ ಉಳಿಸಿಕೊಳ್ಳಲು ಮಾಡಿದ್ದೇನು ನೋಡಿ – Kannada News | Gulf Ship Attack: Bantwal’s Rachan Pujari Rescued After Iranian Missile Strike

ಮಂಗಳೂರು, ಜು.15: ಕೊಲ್ಲಿ ವಲಯದಲ್ಲಿ ಹಡಗುಗಳ ಮೇಲಿನ ದಾಳಿ ಮತ್ತಷ್ಟು ತೀವ್ರಗೊಂಡಿದ್ದು, ಒಮಾನ್ ಕರಾವಳಿ ತೀರದಲ್ಲಿ ಇರಾನ್ ಪಡೆಗಳು ನಡೆಸಿದ ಭೀಕರ ಕ್ಷಿಪಣಿ ದಾಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಯುವಕನೊಬ್ಬ ಪಾರಾಗಿದ್ದಾರೆ. ದಾಳಿಗೆ ಒಳಗಾದ ಹಡಗಿನಲ್ಲಿದ್ದ ಎಲ್ಲಾ ಭಾರತೀಯ ಸಿಬ್ಬಂದಿಯನ್ನು ಸದ್ಯ ರಕ್ಷಿಸಲಾಗಿದ್ದು, ಇವರಲ್ಲಿ ಜಿಲ್ಲೆಯ ಪೆರ್ನೆ ನಿವಾಸಿ ರಚನ್ ಪೂಜಾರಿ ಕೂಡ ಸೇರಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮರ್ಚೆಂಟ್ ನೇವಿ ಹಡಗಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಂಟ್ವಾಳ ತಾಲೂಕಿನ ಪೆರ್ನೆ ಬಿಳಿಯೂರು ನಿವಾಸಿ ರಚನ್…

Read More

ನಾವು ಪಾಕಿಸ್ತಾನಕ್ಕೆ ಸೇರಿದವರಲ್ಲ; ಇಸ್ಲಾಮಾಬಾದ್ ವಿರುದ್ಧ ಪಿಒಕೆ ಜನರ ಪ್ರತಿಭಟನೆ – Kannada News | POK is not part of Pakistan Protesters Warn Islamabad in rally over food blockade

ಇಸ್ಲಮಾಬಾದ್, ಜೂನ್ 30: ಪಿಒಕೆ (PoK) ವ್ಯಾಪ್ತಿಯ ಕಾಶ್ಮೀರದ ರಾವಲಾಕೋಟ್‌ನಲ್ಲಿ ಇಂದು 22ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆಯಲ್ಲಿ ಸಾವಿರಾರು ಜನರು ಈ ಪ್ರದೇಶದ ಮೇಲಿನ ಪಾಕಿಸ್ತಾನದ ನಿಯಂತ್ರಣದ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈದ್ಗಾ ಮೈದಾನದಲ್ಲಿ ನಡೆದ ಪ್ರತಿಭಟನೆಯ ವೇಳೆ ಮಾತನಾಡಿದ ಪಿಒಕೆ ಮುಖಂಡರು, ಈ ಪ್ರದೇಶವನ್ನು ಇನ್ನು ಮುಂದೆ ಪಾಕಿಸ್ತಾನದ (Pakistan) ನಿಯಂತ್ರಣದಲ್ಲಿದೆ ಎಂದು ಪರಿಗಣಿಸಬಾರದು, ನಾವು ಪಾಕಿಸ್ತಾನದ ಭಾಗವಲ್ಲ. ನಮಗೆ ಪಾಕಿಸ್ತಾನದ ರೇಷನ್ ಅಗತ್ಯವಿಲ್ಲ, ಪಾಕಿಸ್ತಾನಕ್ಕೆ ನಮ್ಮ ಅಗತ್ಯವಿದೆ ಎಂದು ಹೇಳಿದ್ದಾರೆ. ಹಾಗೇ, ಪಾಕಿಸ್ತಾನದ…

Read More

ನಾರ್ವೆಯಲ್ಲಿ ಹೊಸ ಇತಿಹಾಸ ಬರೆದ ಆರ್ ಪ್ರಜ್ಞಾನಂದ – Kannada News

ಭಾರತದ 20 ವರ್ಷದ ಚೆಸ್ ಚತುರ ಆರ್ ಪ್ರಜ್ಞಾನಂದ (R Praggnanandhaa) ನಾರ್ವೆ ಚೆಸ್ 2026 (Norway Chess 2026) ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಓಸ್ಲೋದಲ್ಲಿ ನಡೆದ ಅಂತಿಮ ಸುತ್ತಿನ ರೋಚಕ ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಭರ್ಜರಿ ಜಯ ಸಾಧಿಸಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಸೋಲಿನಿಂದ ಗೆಲುವಿಗೆ: ಟೂರ್ನಿಯ ಮಧ್ಯಭಾಗದಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯ…

Read More

92 ಸಾವಿರ ಶೋ, 450 ಕೋಟಿ ಗಳಿಕೆ; ದಾಖಲೆಯ ಕಲೆಕ್ಷನ್ ಮಾಡಿದ ‘ಧುರಂಧರ್ 2’

ರಣವೀರ್ ಸಿಂಗ್ ನಟನೆಯ ‘ಧುರಂದರ್ 2’ ಸಿನಿಮಾ (Dhurandhar 2) ಸೂಪರ್ ಹಿಟ್ ಆಗಿದೆ. ಹಿಂದೆ ಯಾವ ಸಿನಿಮಾಗಳೂ ಮಾಡದಷ್ಟು ಅಬ್ಬರದಲ್ಲಿ ಸಿನಿಮಾ ರಿಲೀಸ್ ಆಗಿದೆ. ಹಲವು ದಾಖಲೆಗಳನ್ನು ಸಿನಿಮಾ ಉಡೀಸ್ ಮಾಡಿದೆ. ನಾಲ್ಕು ದಿನಕ್ಕೆ 450 ಕೋಟಿ ರೂಪಾಯಿ ಆಗಿದೆ. ಹೀಗೆ ಮುಂದುವರಿದರೆ ಚಿತ್ರದ ಒಟ್ಟಾರೆ ಕಲೆಕ್ಷನ್ ಎಷ್ಟು ಕೋಟಿ ರೂಪಾಯಿ ಆಗುತ್ತದೆ ಎನ್ನುವ ಕುತೂಹಲ ಮೂಡಿದೆ. ವಿಶ್ವ ಮಟ್ಟದಲ್ಲಿ ಚಿತ್ರದ ಗಳಿಕೆ 700 ಕೋಟಿ ರೂಪಾಯಿ ಸಮೀಪಿಸಿದೆ. ‘ಧುರಂಧರ್ 2’ ಚಿತ್ರ ಮಾರ್ಚ್ 19ರಂದು…

Read More

ಕೆಲಸ ಅರಸಿ ಬರುವ ಒಂಟಿ ಮಹಿಳೆಯರಿಗೆ ಬೆಂಗಳೂರು ಸೇಫಾ? ಬ್ರಿಟಿಷ್ ಯುವತಿಯ ಪ್ರಶ್ನೆಗೆ ನೆಟ್ಟಿಗರೇನಂದ್ರು?

ಬೆಂಗಳೂರು, ಮಾರ್ಚ್​ 25: ಜೀವನದಲ್ಲಿ ಏನನ್ನಾದರೂ ಸಾಧಿಸಬೆಕೆಂದುಕೊಂಡು ಬೆಂಗಳೂರಿಗೆ (Bengaluru) ಕೆಲಸ ಹುಡುಕಿ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕರ್ನಾಟಕವಷ್ಟೇ ಅಲ್ಲದೆ ಭಾರತದ ಮೂಲೆ ಮೂಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಅನ್ನ ನೀಡಿ ಸಲಹುತ್ತಿರುವ ಐಟಿ ಸಿಟಿ, ಪಾಶ್ಚಿಮಾತ್ಯರನ್ನೂ ಕೈ ಬೀಸಿ ಕರೆಯುತ್ತದೆ. ಹೀಗಿರುವಾಗ ಒಬ್ಬಂಟಿಯಾಗಿರಲು ಬೆಂಗಳೂರು ಸುರಕ್ಷಿತವೆ (Women Safety)ಎಂಬ ಪ್ರಶ್ನೆ ಹಲವರನ್ನು ಕಾಡುವುದುಂಟು. ಅದರಲ್ಲಿಯೂ ಒಬ್ಬಂಟಿ ಮಹಿಳೆಯರು ಇಲ್ಲಿ ನೆಮ್ಮದಿಯಿಂದ ಜೀವಿಸಬಹುದೆ ಎಂಬುದೂ ಗಮನಾರ್ಹವೇ. ಇದೇ ಕುತೂಹಲವನ್ನಿಟ್ಟುಕೊಂಡು ಪ್ರಶ್ನೆ ಮಾಡಿದ ಯುಕೆ ಯುವತಿಯೊಬ್ಬಳ ರೆಡಿಟ್…

Read More

ಚಿನ್ನ, ಬೆಳ್ಳಿ ಬೆಲೆಗಳು ಅತಿಯಾಗಿ ಏರಿದ್ದು ಯಾಕೆಂದು ಕಾರಣ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್ – Kannada News | Finance Minister Nirmala Sitharaman reacts on gold, silver rates hike, us tariff change effect

ನವದೆಹಲಿ, ಫೆಬ್ರುವರಿ 23: ಕಳೆದ ಕೆಲ ತಿಂಗಳಲ್ಲಿ, ಅದರಲ್ಲೂ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Rates) ರಾಕೆಟ್​ನಂತೆ ಆಗಸಕ್ಕೆ ಚಿಮ್ಮಿದ್ದು ಜನಸಾಮಾನ್ಯರಿಗೆ ಆತಂಕ ಮೂಡಿಸಿತ್ತು. ಜಾಗತಿಕವಾಗಿ ಚಿನ್ನಕ್ಕೆ ಬಹಳ ಬೇಡಿಕೆ ಬಂದಿದ್ದರಿಂದ ಈ ಅತಿಯಾದ ಬೆಲೆ ಏರಿಕೆ ಆಗಿತ್ತು. ಚಿನ್ನ ಮತ್ತು ಬೆಳ್ಳಿಗೆ ಈ ಪರಿ ಬೇಡಿಕೆ ಬರಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾರಣ ಬಿಚ್ಚಿಟ್ಟಿದ್ದಾರೆ. ಆರ್​ಬಿಐನ 621ನೇ ಕೇಂದ್ರೀಯ ಮಂಡಳಿ ಸಭೆ ಬಳಿಕ…

Read More

ಹುಬ್ಬಳ್ಳಿ ಮರ್ಯಾದೆ ಹತ್ಯೆ: ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ – Kannada News | Hubballi Honor Killing Case: Husband Vivekananda Reacts after funeral of His Wife Manya

ಹುಬ್ಬಳ್ಳಿ, (ಡಿಸೆಂಬರ್ 22): ಹುಬ್ಬಳ್ಳಿ ನಡೆದ ಮರ್ಯಾದೆ ಹತ್ಯೆ (Hubballi Honor Killing) ಇಡೀ ರಾಜ್ಯವನ್ನೇ ಬಿಚ್ಚಿಬೀಳಿಸಿದೆ. 22 ವರ್ಷ ವಯಸ್ಸಿನ ಮಾನ್ಯ ಹಾಗೂ ವಿವೇಕಾನಂದ ಇಬ್ಬರೂ ಧಾರವಾಡ (Dharwad) ಜಿಲ್ಲೆಯ ಹುಬ್ಬಳ್ಳಿ (Hubballi) ತಾಲೂಕಿನ ಇನಾಂ ವೀರಾಪುರ ಗ್ರಾಮದವರು. ಯುವತಿ ಲಿಂಗಾಯತ ಸಮಾಜಕ್ಕೆ ಸೇರಿದ್ರೆ.. ಯುವಕ ದಲಿತನಾಗಿದ್ದ. ಡಿಗ್ರಿ ಓದುವಾಗಲೇ ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು. ಮನೆಯವರ ಬೆದರಿಕೆಗೂ ಬಗ್ಗದಷ್ಟು ಆಳವಾಗಿ ಇಬ್ಬರ ನಡುವೆ ಪ್ರೀತಿ ಬೇರೂರಿತ್ತು. ಮಾನ್ಯ, ವಿವೇಕಾನಂದನ ಬಿಟ್ಟು ಬದುಕಲ್ಲ ಅಂತಾ ಹಠ…

Read More

ಚಾಮುಂಡಿ ಬೆಟ್ಟಕ್ಕೆ ರಣ್ವೀರ್ ಸಿಂಗ್: ಪೂಜಾರಿ ಹೇಳಿದ್ದು ಹೀಗೆ? – Kannada News | Ranveer Singh visited Chamundi temple to asks apology as per High Court order

ನಟ ರಣ್ವೀರ್ ಸಿಂಗ್ (Ranveer Singh) ಕೆಲ ತಿಂಗಳ ಹಿಂದೆ ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಕಾಂತಾರ’ ಸಿನಿಮಾದ ಅನುಕರಣೆ ಮಾಡುತ್ತಾ ತುಳು ನಾಡಿನ ದೈವವನ್ನು ಕೆಟ್ಟದಾಗಿ ಅನುಕರಣೆ ಮಾಡಿದ್ದರು. ಅದರ ವಿರುದ್ಧ ಪ್ರಕರಣ ದಾಖಲಾಗಿ, ಕರ್ನಾಟಕ ಹೈಕೋರ್ಟ್​​ನಲ್ಲಿ ವಿಚಾರಣೆ ಸಹ ನಡೆದಿತ್ತು. ನ್ಯಾಯಾಲಯವು, ರಣ್ವೀರ್ ಸಿಂಗ್ ಮಾಡಿದ್ದು ತಪ್ಪೆಂದು ಅಭಿಪ್ರಾಯ ವ್ಯಕ್ತಪಡಿಸಿ, ಚಾಮುಂಡಿ ದೇವಾಲಯಕ್ಕೆ ಭೇಟಿ ನೀಡಿ ಕ್ಷಮೆ ಕೇಳಬೇಕೆಂದು ಸೂಚಿಸಿತ್ತು. ಅಂತೆಯೇ ಇದೀಗ ನಟ ರಣ್ವೀರ್ ಸಿಂಗ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದು ದೈವಕ್ಕೆ…

Read More

ಆಶಾ ಭೋಸ್ಲೆ ನಿಧನ, ನಟ ರಾಘವೇಂದ್ರ ರಾಜ್​​ಕುಮಾರ್ ಸಂತಾಪ

ಖ್ಯಾತ ಗಾಯಕಿ ಆಶಾ ಭೊಸ್ಲೆ (Asha Bhosle) ಇಂದು ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಆಶಾ ಭೋಸ್ಲೆ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಮಂದಿ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಿರಿಯ ನಟ, ನಿರ್ಮಾಪಕ ರಾಘವೇಂದ್ರ ರಾಜ್​​ಕುಮಾರ್ ಸಹ ಆಶಾ ಭೊಸ್ಲೆ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಅಪ್ಪಾಜಿ‌ ನಿಧನರಾದ ದಿನವೇ ಅವರನ್ನ ಕಳೆದುಕೊಂಡಿದ್ದೀವಿ, ನಮ್ಮ ತಂದೆಯವರು ಆಶಾ ಬೋಸ್ಲೆ ಅವರ ದೊಡ್ಡ ಅಭಿಮಾನಿ ಆಗಿದ್ದರು. ನಮ್ಮ ತಂದೆಗೆ ಅವರ ಹಾಡುಗಳು ಎಂದರೇ ಬಹಳ…

Read More