ವೈಭವ್​ ಸೂರ್ಯವಂಶಿ ಕೈತಪ್ಪಿದ ವಿಶ್ವ ದಾಖಲೆಯ ಸೆಂಚುರಿ! – Kannada News | Vaibhav Sooryavanshi was left heartbroken after missing Century

ಟಿ20 ಕ್ರಿಕೆಟ್‌ನಲ್ಲಿ ಅಬ್ಬರಿಸಿದ್ದ ಆಯ್ತು, ಐಪಿಎಲ್‌ನಲ್ಲಿ ಧೂಳೆಬ್ಬಿಸಿದ್ದೂ ಆಯ್ತು. ಇದೀಗ 15 ವರ್ಷದ ರನ್ ಮಷಿನ್ ವೈಭವ್ ಸೂರ್ಯವಂಶಿ ಏಕದಿನ ಕ್ರಿಕೆಟ್​ನಲ್ಲಿ ಸಿಡಿಲಬ್ಬರ ಶುರು ಮಾಡಿದ್ದಾರೆ. ಈ ಸಿಡಿಲಬ್ಬರದೊಂದಿಗೆ ಶ್ರೀಲಂಕಾ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ ಯುವ ದಾಂಡಿಗ ಕೇವಲ 6 ರನ್​ಗಳ ಅಂತರದಿಂದ ವಿಶ್ವ ದಾಖಲೆಯ ಶತಕವನ್ನು ಕೈಚೆಲ್ಲಿಕೊಂಡಿದ್ದಾರೆ.

ದಂಬುಲ್ಲಾದಲ್ಲಿ ನಡೆಯುತ್ತಿರುವ ಶ್ರೀಲಂಕಾ ಎ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್ ಸೋತಿರುವ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮೊದಲ ಓವರ್​ನಿಂದಲೇ ಹೊಡಿಬಡಿ ಆಟಕ್ಕೆ ಒತ್ತು ನೀಡಿದ ವೈಭವ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನಟ್ಟಿದ್ದಾರೆ. ಪರಿಣಾಮ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು.

  • ಈ ಅರ್ಧಶತಕದೊಂದಿಗೆ ಲಿಸ್ಟ್ ಎ ಕ್ರಿಕೆಟ್​ನಲ್ಲಿ ಅತೀ ವೇಗದ ಹಾಫ್ ಸೆಂಚುರಿ ಸಿಡಿಸಿದ ವಿಶ್ವ ದಾಖಲೆಯು ವೈಭವ್ ಸೂರ್ಯವಂಶಿ ಪಾಲಾಗಿದೆ.
  •  2005 ರಲ್ಲಿ ಶ್ರೀಲಂಕಾದಲ್ಲಿ ನಡೆದ ದೇಶೀಯ ಲಿಸ್ಟ್ ಎ (ಏಕದಿನ) ಪಂದ್ಯದಲ್ಲಿ ಕೌಶಲ್ಯ ವೀರರತ್ನೆ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
  • ವೈಭವ್ ಸೂರ್ಯವಂಶಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ ಹಾಫ್ ಸೆಂಚುರಿ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಕೈ ತಪ್ಪಿದ ವಿಶ್ವ ದಾಖಲೆ:

ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ವೈಭವ್ ಸೂರ್ಯವಂಶಿ ಹಾಫ್ ಸೆಂಚುರಿ ಬಳಿಕ ಕೂಡ ತಮ್ಮ ಸಿಡಿಲಬ್ಬರ ಮುಂದುವರೆಸಿದ್ದರು. ಅದರಲ್ಲೂ ಆಫ್ ಸೈಡ್-ಲೆಗ್ ಸೈಡ್​ನತ್ತ ಫೋರ್​ ಸಿಕ್ಸ್​ಗಳ ಸುರಿಮಳೆಗೈಯ್ಯುವ ಮೂಲಕ ಕೇವಲ 28 ಎಸೆತಗಳಲ್ಲಿ 94 ರನ್​ ಚಚ್ಚಿದ್ದರು.

ಇನ್ನೇನು ಒಂದು ಎಸೆತದಲ್ಲಿ ಒಂದು ಸಿಕ್ಸ್ ಮೂಡಿ ಬಂದಿದ್ದರೆ ಲಿಸ್ಟ್ ಎ ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ವಿಶ್ವ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗುತ್ತಿತ್ತು. ಆದರೆ ಬಿಗ್ ಶಾಟ್ ಹೊಡೆಯುವ ಯತ್ನದಲ್ಲಿ ವೈಭವ್ ಮಿಡ್ ಆನ್​ನಲ್ಲಿದ್ದ ಫೀಲ್ಡರ್​ಗೆ ಕ್ಯಾಚ್ ನೀಡಿದ್ದಾರೆ. ಈ ಮೂಲಕ ಚೊಚ್ಚಲ ಶತಕವನ್ನು ಕೈ ಚೆಲ್ಲಿಕೊಂಡಿದ್ದಾರೆ.

ಒಂದು ವೇಳೆ ವೈಭವ್ ಸೂರ್ಯವಂಶಿ 29ನೇ ಎಸೆತದಲ್ಲಿ ಕ್ಯಾಚ್ ನೀಡುವ ಬದಲು ಸಿಕ್ಸ್ ಬಾರಿಸಿದ್ದರೆ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಶತಕ ಸಿಡಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು.

  • ಲಿಸ್ಟ್​ ಎ (ಏಕದಿನ) ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ದಾಖಲೆ ಆಸ್ಟ್ರೇಲಿಯಾದ ಜೇಕ್ ಫ್ರೇಸರ್ ಮೆಕ್​ಗುರ್ಕ್ ಹೆಸರಿನಲ್ಲಿದೆ.
  • 2023 ರಲ್ಲಿ ಸೌತ್ ಆಸ್ಟ್ರೇಲಿಯಾ ಪರ ಲಿಸ್ಟ್ ಎ ಪಂದ್ಯವಾಡಿದ್ದ ಜೇಕ್ ಫ್ರೇಸರ್ ಮೆಕ್​ಗುರ್ಕ್ ಕೇವಲ 29 ಎಸೆತಗಳಲ್ಲಿ ಶತಕ ಸಿಡಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಈ ವಿಶ್ವ ದಾಖಲೆಯನ್ನು ಸರಿಗಟ್ಟಲು ವೈಭವ್ ಸೂರ್ಯವಂಶಿಗೆ ಉತ್ತಮ ಅವಕಾಶವಿತ್ತು. ಆದರೆ ತಾನೆದುರಿಸಿದ 29ನೇ ಎಸೆತದಲ್ಲಿ ವೈಭವ್ ಕ್ಯಾಚ್ ನೀಡಿದ್ದಾರೆ. ಇದರೊಂದಿಗೆ 29 ಎಸೆತಗಳಲ್ಲಿ 8 ಸಿಕ್ಸರ್​ ಹಾಗೂ 10 ಫೋರ್​ಗಳನ್ನು ಒಳಗೊಂಡ 94 ರನ್​ಗಳ ಭರ್ಜರಿ ಇನಿಂಗ್ಸ್ ಕೂಡ ಕೊನೆಗೊಂಡಿದೆ.

ಇದನ್ನೂ ಓದಿ: 13 ಸಿಕ್ಸ್, 11 ಫೋರ್​: ರೆಕಾರ್ಡ್ ಬ್ರೇಕಿಂಗ್ ಸೆಂಚುರಿ ಸಿಡಿಸಿದ ಮಿಚೆಲ್ ಓವನ್

ವೈಭವ್ ಸೂರ್ಯವಂಶಿ ಬಾರಿಸಿದ ಈ 94 ರನ್​ಗಳ ಸ್ಫೋಟಕ ಇನಿಂಗ್ಸ್​ ನೆರವಿನೊಂದಿಗೆ ಟೀಮ್ ಇಂಡಿಯಾ 12 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 144 ರನ್ ಕಲೆಹಾಕಿದೆ. ಸದ್ಯ ಕ್ರೀಸ್​ನಲ್ಲಿ ರುತುರಾಜ್ ಗಾಯಕ್ವಾಡ್ ಹಾಗೂ ತಿಲಕ್ ವರ್ಮಾ ಬ್ಯಾಟಿಂಗ್ ಮುಂದುರೆಸಿದ್ದಾರೆ.

Source link

Weekly Love Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಪ್ರೇಮ-ಪ್ರೀತಿ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ – Kannada News | Zodiac Relationship Predictions June 21 27: Unraveling Hidden Truths

ವಾರದ ಪ್ರೇಮ ಪ್ರೀತಿ ಭವಿಷ್ಯImage Credit source: Getty Images

ಜೂನ್ 21ರಿಂದ ಜೂನ್ 27ರವರೆಗೆ ಹನ್ನೆರಡು ರಾಶಿಗಳಲ್ಲಿ ರಹಸ್ಯ ಮಾತುಕತೆ ಕಾಣಿಸುವುದು ಮತ್ತು ಅದು ಅಪಾರ್ಥಕ್ಕೆ ದಾರಿಯಾಗಲಿದೆ. ಸತ್ಯವನ್ನು ಮಾತ್ರ ತಿರುಚಿವುದು ಬೇಡ. ಅನಂತರ ತೊಂದರೆಯಲ್ಲಿ ಸಿಕ್ಕಿಬೀಳಬೇಕಾಗುವುದು. ಯಥಾರ್ಥ ವಿಚಾರಗಳನ್ನು ಹೇಳಿ, ಸುಖವಾಗಿರಿ.

ಮೇಷ ರಾಶಿ :

ಮಂಗಳನ ಉಗ್ರ ನೋಟ ನಿಮ್ಮ ಹೃದಯದ ಗೋಡೆಯ ಮೇಲೆ ರಹಸ್ಯ ಕಾವ್ಯ ಬರೆಯುತ್ತಿದೆ. ಸಂಗಾತಿಯ ಕಣ್ಣುಗಳಲ್ಲಿ ನಿಮಗಾಗಿ ಕಾಯುತ್ತಿರುವ ಆ ರಹಸ್ಯ ಒಲವಿನ ಸುಳಿವು ನಿಮಗಿನ್ನೂ ಸಿಕ್ಕಿಲ್ಲ. ಅಹಂಕಾರದ ಒಂದೇ ಒಂದು ತಪ್ಪು ಮಾತು ನಿಮ್ಮ ನಡುವಿನ ಅದೃಶ್ಯ ಪ್ರೇಮದ ರೇಷ್ಮೆ ದಾರವನ್ನು ಕತ್ತರಿಸಬಹುದು, ಎಚ್ಚರ.

ವೃಷಭ ರಾಶಿ :

ನಿಮ್ಮದೇ ರಾಶಿಯ ಕೋಣೆಯಲ್ಲಿ ಕುಳಿತ ಮಂಗಳ ಯಾರೋ ಒಬ್ಬರ ನಿಗೂಢ ಪ್ರೇಮದ ಬಾಣವನ್ನು ನಿಮ್ಮತ್ತ ಗುರಿ ಇಟ್ಟಿದ್ದಾನೆ. ಅವರು ನಿಮ್ಮ ಮೌನವನ್ನೇ ಪ್ರೀತಿಯ ಸಂಕೇತವೆಂದು ಭಾವಿಸುತ್ತಿದ್ದಾರೆ. ಹಳೆಯ ಮುನಿಸಿನ ರಹಸ್ಯಗಳನ್ನು ಮರೆತುಬಿಡಿ. ಅದನ್ನು ಮತ್ತೆ ಕೆದಕಿದರೆ ಸದ್ಯದ ಸುಂದರ ಕ್ಷಣಗಳು ಬೂದಿಯಾಗಬಹುದು.

ಮಿಥುನ ರಾಶಿ :

ಡೈರಿಯ ಪುಟದಿಂದ: ಸೂರ್ಯನ ಪ್ರಖರ ಬೆಳಕಿನಲ್ಲೂ ಸಂಗಾತಿಯು ತನ್ನ ಹೃದಯದ ಒಂದು ಮೂಲೆಯನ್ನು ನಿಮಗಾಗಿ ಕತ್ತಲಲ್ಲಿಟ್ಟಿದ್ದಾರೆ, ಅಲ್ಲಿ ಕೇವಲ ನಿಮ್ಮ ನೆನಪುಗಳು ಮಾತ್ರ ಜೀವಂತವಾಗಿವೆ. ಮುಖವಾಡ ಧರಿಸಿದವರ ಮಾತುಗಳನ್ನು ನಂಬಬೇಡಿ. ನಿಮ್ಮ ನಿಜವಾದ ಒಲವು ನಿಮ್ಮ ಹತ್ತಿರವೇ ನಿಗೂಢವಾಗಿ ಅಡಗಿದೆ.

ಕರ್ಕಾಟಕ ರಾಶಿ:

ಗುರು, ಶುಕ್ರ, ಬುಧರ ಮಾಂತ್ರಿಕ ಶಕ್ತಿ ನಿಮ್ಮ ರಾಶಿಯ ಸುತ್ತ ರಹಸ್ಯ ಕೋಟೆಯೊಂದನ್ನು ನಿರ್ಮಿಸಿದೆ. ಈ ಕೋಟೆಯೊಳಗೆ ನಡೆಯುವ ಒಲವಿನ ಸಂಭಾಷಣೆ ಸಾಕ್ಷಾತ್ ದೇವಲೋಕದ ವಿಧಿಯ ಬರಹ. ನಿಮ್ಮ ಪ್ರೇಮದ ರಹಸ್ಯ ಯೋಜನೆಯನ್ನು ಮೂರನೇ ವ್ಯಕ್ತಿಯ ಮುಂದೆ ಉಗುಳಬೇಡಿ. ದೃಷ್ಟಿಯಾಗುವ ಸಂಭವ ದಟ್ಟವಾಗಿದೆ.

ಸಿಂಹ ರಾಶಿ:

ಕೇತುವಿನ ನೆರಳು ನಿಮ್ಮ ಪ್ರೀತಿಯ ಹಾದಿಯಲ್ಲಿ ಸುಳ್ಳು ರಹಸ್ಯಗಳ ಭ್ರಮೆಯನ್ನು ಸೃಷ್ಟಿಸುತ್ತಿದೆ. ಆದರೆ ಸಂಗಾತಿಯ ಆಳವಾದ ಮೌನದ ಹಿಂದೆ ನಿಮಗಾಗಿ ಒಂದು ಅದ್ಭುತ ಸಿದ್ಧವಾಗುತ್ತಿದೆ ಎಂದರ್ಥ. ಅನಗತ್ಯ ಅನುಮಾನಗಳೆಂಬ ಕತ್ತಲಲ್ಲಿ ಪ್ರೀತಿಯ ದೀಪವನ್ನು ಆರಲು ಬಿಡಬೇಡಿ.

ಕನ್ಯಾ ರಾಶಿ:

ಅಜ್ಞಾತ ಲೋಕದಿಂದ ಹರಿದುಬರುತ್ತಿರುವ ಪ್ರೇಮದ ಅಲೆಗಳು ನಿಮ್ಮ ಹೃದಯವನ್ನು ತಟ್ಟುತ್ತಿವೆ. ನಿಮ್ಮ ನಿಷ್ಕಲ್ಮಶ ನಗುವಿಗೆ ಯಾರೋ ಒಬ್ಬರು ದೂರದಲ್ಲೇ ಕುಳಿತು ತಮ್ಮ ಹೃದಯವನ್ನು ಒತ್ತೆ ಇಟ್ಟಿದ್ದಾರೆ. ನಿಮ್ಮ ಅತಿಯಾದ ತಾರ್ಕಿಕ ಬುದ್ಧಿ ಪ್ರೀತಿಯ ಮಧುರ ರಹಸ್ಯವನ್ನು ಆಸ್ವಾದಿಸಲು ಅಡ್ಡಿಯಾಗಬಹುದು.

ತುಲಾ ರಾಶಿ:

ಅದೃಶ್ಯ ಹಸ್ತವೊಂದು ನಿಮ್ಮ ಮತ್ತು ನಿಮ್ಮ ಸಂಗಾತಿಯ ಹಣೆಬರಹವನ್ನು ರಹಸ್ಯವಾಗಿ ಜೋಡಿಸುತ್ತಿದೆ. ನಿಮಗರಿವಿಲ್ಲದಂತೆ ನಡೆಯುವ ಈ ಗ್ರಹಗಳ ಆಟ ನಿಮ್ಮಿಬ್ಬರನ್ನೂ ಹತ್ತಿರ ತರಲಿದೆ. ಹೊರಗಿನ ಜಗತ್ತಿನ ಕಣ್ಣುಗಳು ನಿಮ್ಮ ಪ್ರೀತಿಯ ಮೇಲಿವೆ. ಒಲವಿನ ವಿನಿಮಯಗಳು ಸದ್ಯಕ್ಕೆ ಗುಪ್ತವಾಗಿಯೇ ಇರಲಿ.

ವೃಶ್ಚಿಕ ರಾಶಿ:

​ಡೈರಿಯ ಪುಟದಿಂದ: ನಿಮ್ಮದೇ ರಾಶಿಯ ಅತಳ ಆಳದಲ್ಲಿ ಚಂದ್ರನು ಅಡಗಿದ್ದಾನೆ. ನಿಮ್ಮ ಪ್ರೀತಿ ಕೇವಲ ದೈಹಿಕವಲ್ಲ, ಅದು ಅತೀಂದ್ರಿಯವಾದುದು. ಸಂಗಾತಿಯ ಕಣ್ಣಿನ ರೆಪ್ಪೆಯ ಅಲುಗಾಟದಲ್ಲೂ ಅವರ ಮನದ ರಹಸ್ಯವನ್ನು ನೀವು ಓದಬಲ್ಲಿರಿ. ಅತಿಯಾದ ಭಾವನಾತ್ಮಕ ಒತ್ತಡ ಸಂಗಾತಿಯನ್ನು ನಿಮ್ಮಿಂದ ರಹಸ್ಯವಾಗಿ ದೂರ ಸರಿಯುವಂತೆ ಮಾಡಬಹುದು.

ಧನು ರಾಶಿ:

ನಿಮ್ಮ ಸ್ಥಾನದ ಶಕ್ತಿ ನಿಮ್ಮ ಸುತ್ತ ಒಂದು ನಿಗೂಢ ಆಕರ್ಷಣೆಯ ವಲಯವನ್ನು ಸೃಷ್ಟಿಸಿದೆ. ನಿಮ್ಮ ಹಳೆಯ ದಿನಗಳ ರಹಸ್ಯ ಪ್ರೇಮಿಯೊಬ್ಬರು ಮತ್ತೆ ನಿಮ್ಮ ನೆರಳನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಕತ್ತಲೆಯ ಪುಟಗಳನ್ನು ತಿರುವಿ ಹಾಕಬೇಡಿ. ಮುಚ್ಚಿದ ರಹಸ್ಯಗಳು ಮುಚ್ಚಿಯೇ ಇರಲಿ, ಹೊಸ ಅಧ್ಯಾಯಕ್ಕೆ ತೆರೆದುಕೊಳ್ಳಿ.

ಇದನ್ನೂ ಓದಿ: ಕೇತುವಿನ ಮೇಲಿದೆ ಕುಜನ ದೃಷ್ಟಿ: ಯಾರಿಗೆ ಒಲಿಯಲಿದೆ ಪೂರ್ಣ ರಾಜಯೋಗ? ಯಾರಿಗೆ ಧನಲಾಭ?

​ಮಕರ ರಾಶಿ :

ಮೌನದ ಕೋಟೆಯೊಳಗೆ ನಿಮ್ಮ ಪ್ರೀತಿ ಸುರಕ್ಷಿತವಾಗಿದೆ. ಸಂಗಾತಿಯು ಪ್ರೀತಿಯನ್ನು ಪದಗಳಲ್ಲಿ ವ್ಯಕ್ತಪಡಿಸದಿದ್ದರೂ, ಅವರ ಪ್ರತಿಯೊಂದು ಗುಪ್ತ ಕಾಳಜಿಯೂ ನಿಮ್ಮನ್ನು ಸಾಮ್ರಾಜ್ಯದ ರಾಜನಂತೆ ನೋಡಿಕೊಳ್ಳುತ್ತಿದೆ. ನಿಮ್ಮ ಅತಿಯಾದ ಗಾಂಭೀರ್ಯತೆ ಸಂಗಾತಿಗೆ ನೀವು ಪ್ರೀತಿಯನ್ನು ಮುಚ್ಚಿಡುತ್ತಿದ್ದೀರಿ ಎಂಬ ತಪ್ಪು ಸಂದೇಶ ನೀಡಬಹುದು.

ಕುಂಭ ರಾಶಿ :

​ರಾಹುವಿನ ನಿಗೂಢ ಸುಳಿಗಾಳಿ ನಿಮ್ಮ ಪ್ರೇಮದ ಹಾದಿಯಲ್ಲಿ ಒಗಟುಗಳನ್ನು ಎಸೆಯುತ್ತಿದೆ. ಸಂಗಾತಿಯ ನಡೆ ಬಿಡಿಸಲಾಗದ ರಹಸ್ಯದಂತೆ ಕಂಡರೂ, ಅದರ ಕೊನೆಯಲ್ಲಿ ಕೇವಲ ನಿಮ್ಮ ಮೇಲಿನ ಪ್ರೀತಿ ಮಾತ್ರ ಸಿಗಲಿದೆ. ಗ್ರಹಗಳ ಭ್ರಮೆಗೆ ಬಲಿಯಾಗಿ ಸಂಗಾತಿಯ ನಿಷ್ಠೆಯನ್ನು ಎಂದಿಗೂ ಸಂಶಯಿಸಬೇಡಿ.

ಮೀನ ರಾಶಿ:

ಶನಿಯು ನಿಮ್ಮ ಪ್ರೇಮದ ಶಕ್ತಿಯನ್ನು ನಿಗೂಢವಾಗಿ ಪರೀಕ್ಷಿಸುತ್ತಿದ್ದಾನೆ. ಕಾಲದ ಮರಳಿನ ಗಡಿಯಾರ ಉರುಳುತ್ತಿದ್ದಂತೆ, ಸಂಗಾತಿಯ ಮೌನದ ಹಿಂದಿರುವ ತ್ಯಾಗದ ರಹಸ್ಯ ನಿಮ್ಮ ಕಣ್ಣುಗಳನ್ನು ತೇವಗೊಳಿಸಲಿದೆ. ಅವಸರದ ತೀರ್ಮಾನಗಳು ರಹಸ್ಯದ ಬೀಗವನ್ನು ಮುರಿಯಬಹುದು. ತಾಳ್ಮೆಯೊಂದೇ ನಿಮ್ಮನ್ನು ಗೆಲ್ಲಿಸುವ ಕೀಲೀಕೈ. ಬಾಂಧವ್ಯವನ್ನು ಅನುಭವಿಸುವಿರಿ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ: 

Source link

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್‌ ಪದಗ್ರಹಣ ನೇರಪ್ರಸಾರ – Kannada News | Karnataka Congress: B.K. Hariprasad Takes Charge as KPCC President from D.K. Shivakumar

ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿನ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಬಿ.ಕೆ. ಹರಿಪ್ರಸಾದ್‌ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ನಿರ್ಗಮಿತ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರು ಹರಿಪ್ರಸಾದ್‌ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಪಕ್ಷದ ಹಲವು ಉನ್ನತ ನಾಯಕರು ಮತ್ತು ಗಣ್ಯರು ಈ ವೇಳೆ ಉಪಸ್ಥಿತರಿರಲಿದ್ದಾರೆ.

Source link

ಕೈಯಲ್ಲಿ ಹಗ್ಗ, ಬಾಯಲ್ಲಿ ಬಟ್ಟೆ, ಅಪಹರಣವಾದಂತೆ ನಾಟಕವಾಡಿ ಮನೆಯಲ್ಲಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟ ವ್ಯಕ್ತಿ – Kannada News | Surat Auditor Fakes Kidnapping for Rs 50 Lakh After Stock Market Loss

ಅಪಹರಣದ ನಾಟಕವಾಡಿದ ವ್ಯಕ್ತಿ Image Credit source: Free Press Journal

ಸೂರತ್, ಜೂನ್ 21: ಷೇರು ಮಾರುಕಟ್ಟೆ(Share Market)ಯ ‘ಆಪ್ಷನ್ಸ್ ಟ್ರೇಡಿಂಗ್’ನಲ್ಲಿ ಉಂಟಾದ ಭಾರಿ ನಷ್ಟದಿಂದ ಪಾರಾಗಲು ಗುಜರಾತ್‌ನ ಸೂರತ್ ನಗರದ ಆಡಿಟರ್ ಒಬ್ಬ ಅಪಹರಣ(Kidnap)ದ ನಾಟಕವಾಡಿರುವ ಘಟನೆ ನಡೆದಿದೆ. ಅಷ್ಟೇ ಅಲ್ಲದೆ ತನ್ನ ಕುಟುಂಬದವರ ಬಳಿಯೇ 50 ಲಕ್ಷ ರೂ. ಬೇಡಿಕೆಯಿಟ್ಟಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಸೂರತ್‌ನ ಮೋಟಾ ವರಾಚಾ ನಿವಾಸಿ ಜಿಗ್ನೇಶ್ ತಲವಿಯಾ ಎಂದು ಗುರುತಿಸಲಾಗಿದೆ. ಜೂನ್ 12 ರಂದು ಈತ ನಾಪತ್ತೆಯಾಗಿದ್ದ.

ಪೊಲೀಸರಿಗೆ ತಿಳಿಸಿದರೆ ಕೊಲೆ ಎಚ್ಚರಿಕೆ: ಜಿಗ್ನೇಶ್ ನಾಪತ್ತೆಯಾದ ತಕ್ಷಣ ಆತನ ಪತ್ನಿ ಮೀನಾಕ್ಷಿಬೆನ್ ಪೊಲೀಸರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಅವರ ಕುಟುಂಬಕ್ಕೆ ಅಪಹರಣಕಾರರ ಹೆಸರಿನಲ್ಲಿ ಆತಂಕಕಾರಿ ಸಂದೇಶಗಳು ಬರಲಾರಂಭಿಸಿದವು. 50 ಲಕ್ಷ ರೂಪಾಯಿ ನೀಡಬೇಕು, ಪೊಲೀಸರಿಗೆ ತಿಳಿಸಿದರೆ ಜಿಗ್ನೇಶ್‌ನನ್ನು ಕೊಲ್ಲಲಾಗುವುದು ಎಂದು ಬೆದರಿಸಲಾಗಿತ್ತು.

ಜಿಗ್ನೇಶ್‌ನ ಕೈಕಾಲುಗಳನ್ನು ಕಟ್ಟಿಹಾಕಿ ಒತ್ತೆಯಾಳಾಗಿ ಇರಿಸಿರುವಂತಹ ವೀಡಿಯೊವೊಂದು ಕುಟುಂಬಕ್ಕೆ ತಲುಪಿತ್ತು. ಹಣ ನೀಡದಿದ್ದರೆ ಹೆಣ ಕಳುಹಿಸುವುದಾಗಿ ಮತ್ತೊಂದು ವಿಡಿಯೋ ಬಂದಾಗ ಕುಟುಂಬಸ್ಥರು ನಿಜವಾದ ಅಪಹರಣವೆಂದೇ ನಂಬಿದ್ದರು.

ಮತ್ತಷ್ಟು ಓದಿ: Video: ಅಜ್ಜ-ಅಜ್ಜಿ ಜತೆ ಬೈಕ್​​ನಲ್ಲಿ ಕುಳಿತಿದ್ದ 4 ವರ್ಷದ ಬಾಲಕಿಯ ಅಪಹರಣ

ತನಿಖೆ ವೇಳೆ ಪೊಲೀಸರಿಗೆ ಸಿಕ್ಕ ಸುಳಿವು ಹಾಗೂ ಟ್ವಿಸ್ಟ್
ಹೋಟೆಲ್‌ನಲ್ಲಿ ಐಷಾರಾಮಿ ವಾಸ್ತವ್ಯ: ಸೂರತ್ ಡಿಸಿಪಿ ಅಲೋಕ್ ಕುಮಾರ್ ಝಾಲಾ ನೇತೃತ್ವದಲ್ಲಿ ಗುಜರಾತ್ ಮತ್ತು ಮಧ್ಯಪ್ರದೇಶದಾದ್ಯಂತ ಸಿಸಿಟಿವಿ ಹಾಗೂ ತಾಂತ್ರಿಕ ಕಣ್ಗಾವಲು ಮೂಲಕ ಪೊಲೀಸರು ಬಲೆ ಬೀಸಿದ್ದರು. ಜೂನ್ 15 ರಂದು ಗೋಧ್ರಾದ ‘ಶಿವ್ ಹೋಟೆಲ್’ ಮೇಲೆ ದಾಳಿ ನಡೆಸಿದಾಗ ಜಿಗ್ನೇಶ್ ಯಾವುದೇ ಹಾನಿಯಿಲ್ಲದೆ ಆರಾಮವಾಗಿ ಇರುವುದು ಪತ್ತೆಯಾಗಿದೆ.

ವಿಚಾರಣೆ ನಡೆಸಿದಾಗ ಜಿಗ್ನೇಶ್ ತನ್ನದೇ ಅಪಹರಣದ ಪ್ಲಾನ್ ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಯಾರದೇ ಸಹಾಯವಿಲ್ಲದೆ ತಾನೇ ಹೇಗೆ ಕೈಕಾಲುಗಳನ್ನು ಕಟ್ಟಿಹಾಕಿಕೊಂಡು, ಮೊಬೈಲ್ ಮೂಲಕ ವಿಡಿಯೋ ರೆಕಾರ್ಡ್ ಮಾಡಿಕೊಂಡೆ ಎಂಬುದನ್ನು ಪೊಲೀಸರ ಎದುರು ಆತ ಸ್ವತಃ ಪ್ರದರ್ಶಿಸಿ ತೋರಿಸಿದ್ದಾನೆ.

ಪೊಲೀಸ್ ತನಿಖೆಯ ಪ್ರಕಾರ, ಜಿಗ್ನೇಶ್ ಶೇರು ಮಾರುಕಟ್ಟೆಯ ಅತ್ಯಂತ ಅಪಾಯಕಾರಿ ವಿಭಾಗವಾದ ಕಾಲ್ ಮತ್ತು ಪುಟ್ ಆಪ್ಷನ್ಸ್ ಟ್ರೇಡಿಂಗ್‌ನಲ್ಲಿ ಭಾರಿ ಹೂಡಿಕೆ ಮಾಡಿ ಸುಮಾರು 50 ರಿಂದ 60 ಲಕ್ಷ ರೂಪಾಯಿಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದ. ಸಾಲಗಾರರ ಕಾಟ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಸ್ವಂತ ಕುಟುಂಬದಿಂದಲೇ ಹಣ ಸುಲಿಗೆ ಮಾಡಲು ಈ ಜಾಲ ಹೆಣೆದಿದ್ದ.

ವೈರಲ್ ವಿಡಿಯೋ

ಸುಳ್ಳು ಮಾಹಿತಿ ನೀಡುವುದು, ನಕಲಿ ಸಾಕ್ಷ್ಯ ಸೃಷ್ಟಿ ಮತ್ತು ಪೊಲೀಸ್ ಇಲಾಖೆಯ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತಾ (BNS) ಅಡಿಯಲ್ಲಿ ಜಿಗ್ನೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆಮಿರ್ ಖಾನ್ 3ನೇ ಮದುವೆ: ಗೌರಿ ಜತೆ ಮನೆಯಲ್ಲೇ ನಡೆಯಲಿದೆ ರಿಜಿಸ್ಟರ್ ಮ್ಯಾರೇಜ್ – Kannada News | Aamir Khan confirms third wedding with Gauri Spratt Register Marriage date details

ಬಾಲಿವುಡ್‌ ನಟ ಆಮಿರ್ ಖಾನ್ (Aamir Khan) ಅವರು ವೈಯಕ್ತಿಕ ಜೀವನದ ಕಾರಣಕ್ಕಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಮದುವೆಯ ವದಂತಿಗಳಿಗೆ ಸ್ವತಃ ಆಮಿರ್ ಖಾನ್ ಅವರೇ ತೆರೆ ಎಳೆದಿದ್ದು, ತಮ್ಮ ಪ್ರೇಯಸಿ ಗೌರಿ ಸ್ಪ್ರ್ಯಾಟ್ (Gauri Spratt) ಜೊತೆ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದನ್ನು ಖಚಿತಪಡಿಸಿದ್ದಾರೆ. ಈ ಜೋಡಿಯ ವಿವಾಹವು ಜುಲೈ 5ರಂದು ನಡೆಯಲಿದೆ ಎಂದು ವರದಿಯಾಗಿದೆ. ಅದನ್ನು ಆಮಿರ್ ಖಾನ್ ಅವರು ಒಪ್ಪಿಕೊಂಡಿದ್ದಾರೆ.

‘ಡೆಕ್ಕನ್ ಕ್ರಾನಿಕಲ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮದುವೆಯ ಪ್ಲ್ಯಾನ್ ಬಗ್ಗೆ ಮಾತನಾಡಿರುವ ಆಮಿರ್ ಖಾನ್, ‘ಇದು ನಮ್ಮ ಮನೆಯಲ್ಲೇ ನಡೆಯಲಿರುವ ಅತ್ಯಂತ ಸರಳವಾದ ರಿಜಿಸ್ಟರ್ ಮ್ಯಾರೇಜ್ ಆಗಿರಲಿದೆ. ಮದುವೆಯಲ್ಲಿ ಕೇವಲ ಎರಡೂ ಕುಟುಂಬದ ಸದಸ್ಯರು ಮತ್ತು ತೀರಾ ಹತ್ತಿರದ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ. ನಾವಿಬ್ಬರೂ ಮದುವೆಯನ್ನು ತುಂಬಾ ಸಿಂಪಲ್ ಆಗಿ ಇಟ್ಟುಕೊಳ್ಳಲು ಬಯಸಿದ್ದೇವೆ’ ಎಂದು ಹೇಳಿದ್ದಾರೆ.

ಈ ಮದುವೆಗೆ ಬಾಲಿವುಡ್‌ನ ಸ್ಟಾರ್‌ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಅವರಂತಹ ಆಪ್ತ ಸ್ನೇಹಿತರು ಆಗಮಿಸಲಿದ್ದಾರೆಯೇ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ. ಮತ್ತೊಂದು ಸಂದರ್ಶನದಲ್ಲಿ ಮಾತನಾಡಿದ್ದ ಆಮಿರ್ ಖಾನ್, ‘ನಾವಿಬ್ಬರೂ ಈಗ ನಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಿದ್ಧರಾಗಿದ್ದೇವೆ’ ಎಂದು ತಿಳಿಸಿದ್ದಾರೆ.

61 ವರ್ಷದ ಆಮಿರ್ ಖಾನ್ ಅವರಿಗೆ ಇದು 3ನೇ ಮದುವೆ. ಅವರ ಮೊದಲ ಪತ್ನಿ ರೀನಾ ದತ್ತಾ. ಆಮಿರ್ ಮತ್ತು ರೀನಾಗೆ ಜುನೈದ್ ಖಾನ್, ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ರೀನಾ ಅವರೊಂದಿಗೆ ವಿಚ್ಛೇದನ ಪಡೆದ ನಂತರ ಕಿರಣ್ ರಾವ್ ಅವರನ್ನು ಆಮಿರ್ ಖಾನ್ ವಿವಾಹವಾಗಿದ್ದರು. 16 ವರ್ಷಗಳ ದಾಂಪತ್ಯದ ನಂತರ ಕಿರಣ್ ರಾವ್ ಅವರಿಂದಲೂ ಬೇರ್ಪಟ್ಟ ಅವರು, 3ನೇ ಮದುವೆಯ ನಿರ್ಧಾರ ಮಾಡಿದರು. ವಿಚ್ಛೇದನದ ನಂತರವೂ ಆಮಿರ್ ಖಾನ್ ಅವರು ತಮ್ಮ ಇಬ್ಬರೂ ಮಾಜಿ ಪತ್ನಿಯರೊಂದಿಗೆ ಉತ್ತಮ ಸ್ನೇಹ-ಸಂಬಂಧವನ್ನು ಹೊಂದಿದ್ದಾರೆ.

ಇದನ್ನೂ ಓದಿ:ಒಂದೇ ಕಾರಿನಲ್ಲಿ ಇಬ್ಬರು ಮಾಜಿ ಪತ್ನಿಯರು, ಭಾವಿ ಪತ್ನಿ; ಆಮಿರ್ ಖಾನ್ ಜರ್ನಿ ಕಂಡು ನೆಟ್ಟಿಗರು ಶಾಕ್

ಸಿನಿಮಾಗಳ ವಿಷಯಕ್ಕೆ ಬಂದರೆ, ಆಮಿರ್ ಖಾನ್ ಅವರು ಕಳೆದ ವರ್ಷ ಆರ್‌ಎಸ್ ಪ್ರಸನ್ನ ನಿರ್ದೇಶನದ ‘ಸಿತಾರೆ ಜಮೀನ್ ಪರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಸ್ಪ್ಯಾನಿಷ್ ಭಾಷೆಯ ‘ಚಾಂಪಿಯನ್ಸ್’ ಸಿನಿಮಾದ ರಿಮೇಕ್ ಆಗಿತ್ತು. ಇದಲ್ಲದೆ, ರಜನಿಕಾಂತ್ ನಟನೆಯ ‘ಕೂಲಿ’ ಮತ್ತು ‘ಹ್ಯಾಪಿ ಪಟೇಲ್’ ಚಿತ್ರಗಳಲ್ಲಿ ಆಮಿರ್ ಖಾನ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಈಗ ಮದುವೆಯ ಸಲುವಾಗಿ ಬ್ರೇಕ್ ತೆಗೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೇಕೆದಾಟು ಯೋಜನೆ: ತಮಿಳುನಾಡು ಆಕ್ಷೇಪಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಅಸಮಾಧಾನ – Kannada News | Mekedatu Project: Union Minister HD Kumaraswamy Expresses Displeasure Over Tamil Nadu’s Objections

ಮಂಡ್ಯ, ಜೂನ್​​ 21: ಮೇಕೆದಾಟು ಯೋಜನೆಗೆ ತಮಿಳುನಾಡು ನಿರಂತರವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿರುವುದಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರ ಮತ್ತು ಸುತ್ತಮುತ್ತ ಕುಡಿಯುವ ನೀರಿಗಾಗಿ ಮಾಡಲಾಗುತ್ತಿರುವ ಮೇಕೆದಾಟು ಯೋಜನೆಗೆ ತಮಿಳುನಾಡು ಸಹಮತ ಕೊಡಬೇಕು‌.ರಾಜಕೀಯ, ಪ್ರತಿಷ್ಠೆಗಾಗಿ ಅಲ್ಲಿನ ಪಕ್ಷಗಳು ದಬ್ಬಾಳಿಕೆ ಮಾಡಬಾರದು. ಈ ಕ್ಯಾತೆ 50 ವರ್ಷಗಳ ಹಳೆಯ ಸಮಸ್ಯೆಯಾಗಿದೆ. ಉತ್ತಮ ಮಳೆಯಾದಾಗ ಕರ್ನಾಟಕವು ನ್ಯಾಯಮಂಡಳಿ ಆದೇಶಕ್ಕಿಂತಲೂ ಎರಡು ಪಟ್ಟು ಹೆಚ್ಚು ನೀರನ್ನು ಬಿಡುಗಡೆ ಮಾಡಿದೆ. ಆದರೆ ನಮ್ಮಲ್ಲಿಯೇ ಜಲಾಶಯಗಳು ಭರ್ತಿಯಾಗದಿದ್ದಾಗಲೂ ನೀರಿಗಾಗಿ ಒತ್ತಾಯಿಸುವುದು ಸೂಕ್ತವಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಉದ್ಯಮಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆ್ಯಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಬಂಧನ! – Kannada News | Bengaluru Crime: Axis Bank Manager Arrested for Cheating Businessman of Rs 2.66 Crore in Bagalagunte

ನೆಲಮಂಗಲ, ಜೂನ್ 21: ಕೈತುಂಬಾ ಸಂಬಳ, ಸಮಾಜದಲ್ಲಿ ಗೌರವಾನ್ವಿತ ಹುದ್ದೆಯಲ್ಲಿದ್ದರೂ ದುರಾಸೆಗೆ ಬಿದ್ದು ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಬ್ಯಾಂಕ್ ಮ್ಯಾನೇಜರ್ ಸೇರಿ ಮೂವರು ಆರೋಪಿಗಳು ಬಾಗಲಗುಂಟೆ (Bengaluru Rural) ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ಬಾಗಲಗುಂಟೆ ಶಾಖೆಯ ಆ್ಯಕ್ಸಿಸ್ ಬ್ಯಾಂಕ್ ಮ್ಯಾನೇಜರ್ ವಿನೋದ್ ಕುಮಾರ್, ಈತನಿಗೆ ಸಾಥ್ ನೀಡಿದ್ದ ಅರುಣ್ ಕುಮಾರ್ ಮತ್ತು ಕಿರಣ್ ಬಂಧಿತ ಆರೋಪಿಗಳಾಗಿದ್ದಾರೆ.

ಮುಖ್ಯಾಂಶಗಳು

  • ಉದ್ಯಮಿಗೆ 2.66 ಕೋಟಿ ವಂಚಿಸಿದ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ವಿನೋದ್ ಬಂಧನ.
  • 30 ಕೋಟಿ ಬಿಸಿನೆಸ್ ಕಾಂಟ್ರಾಕ್ಟ್ ಆಮಿಷ ಒಡ್ಡಿ ನಕಲಿ ಖಾತೆಗೆ ಹಣ ವರ್ಗಾವಣೆ.
  • ದೂರು ದಾಖಲಾದ ಎರಡೇ ದಿನದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು.

ಖೆಡ್ಡಾಗೆ ಬಿದ್ದಿದ್ದೇಗೆ ಉದ್ಯಮಿ?

ಬಂಧಿತ ಮುಖ್ಯ ಆರೋಪಿ ವಿನೋದ್ ಕುಮಾರ್ ತಾನು ಕೆಲಸ ಮಾಡುತ್ತಿದ್ದ ಆಕ್ಸಿಸ್ ಬ್ಯಾಂಕ್ ಶಾಖೆಯಲ್ಲೇ ದೊಡ್ಡ ಮಟ್ಟದ ವ್ಯವಹಾರ ನಡೆಸುತ್ತಿದ್ದ ಸುಬ್ರಮಣಿ ಎಂಬ ಉದ್ಯಮಿಯನ್ನು ಟಾರ್ಗೆಟ್ ಮಾಡಿದ್ದ. ಸುಬ್ರಮಣಿ ಟ್ರಾನ್ಸ್‌ಪೋರ್ಟ್ ಹಾಗೂ ಮ್ಯಾನ್‌ಪವರ್ ಏಜೆನ್ಸಿ ನಡೆಸುತ್ತಿದ್ದು, ತಿಂಗಳಿಗೆ ಹತ್ತು ಕೋಟಿಗೂ ಅಧಿಕ ಹಣದ ವಹಿವಾಟು ನಡೆಸುತ್ತಿದ್ದರು. ಈ ಹಣದ ಮೇಲೆ ಕಣ್ಣು ಹಾಕಿದ್ದ ಮ್ಯಾನೇಜರ್ ವಿನೋದ್, ಉದ್ಯಮಿಗೆ ವಂಚಿಸಲು ಮಾಸ್ಟರ್ ಪ್ಲಾನ್ ರೂಪಿಸಿದ್ದ.

ಬೇರೆಯವರ ಹೆಸರಿನಲ್ಲಿ ನಕಲಿ ಸಿಮ್ ಕಾರ್ಡ್ ಪಡೆದುಕೊಂಡಿದ್ದ ವಿನೋದ್, ಇಬ್ಬರು ಅಮಾಯಕ ಕೂಲಿ ಕಾರ್ಮಿಕರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದ. ತದನಂತರ ಉದ್ಯಮಿ ಸುಬ್ರಮಣಿ ಅವರಿಗೆ ವಾಟ್ಸಾಪ್ ಕರೆ ಮಾಡಿ, ತನಗೆ ದೊಡ್ಡ ಮಟ್ಟದ ಪ್ರಭಾವವಿದ್ದು, ಸುಮಾರು 30 ಕೋಟಿ ರೂಪಾಯಿ ಮೌಲ್ಯದ ಬಿಸಿನೆಸ್ ಕಾಂಟ್ರಾಕ್ಟ್ ಕೊಡಿಸುವುದಾಗಿ ನಂಬಿಸಿದ್ದ. ಇದಕ್ಕೆ ಪ್ರತಿಯಾಗಿ ಶೇ 10ರಷ್ಟು ಕಮಿಷನ್ ನೀಡಬೇಕು ಎಂದು ಬೇಡಿಕೆ ಇಟ್ಟು, ಮುಂಗಡವಾಗಿ ಬರೋಬ್ಬರಿ 2 ಕೋಟಿ 66 ಲಕ್ಷ ರೂಪಾಯಿ ಹಣವನ್ನು ಆರ್​​ಟಿಜಿಎಸ್ (RTGS) ಮೂಲಕ ತಾನು ಸೃಷ್ಟಿಸಿದ್ದ ನಕಲಿ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ.

ಎರಡೇ ದಿನದಲ್ಲಿ ಆರೋಪಿ ಪತ್ತೆ

ಹಣ ವರ್ಗಾವಣೆಯಾದ ನಂತರ ವಿನೋದ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಅನುಮಾನಗೊಂಡ ಸುಬ್ರಮಣಿ ತಕ್ಷಣ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಮ್ಯಾನೇಜರ್ ವಿನೋದ್‌ನಿಂದ ಯಾವುದೇ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ಇದರಿಂದ ತಮಗೆ ವಂಚನೆಯಾಗಿರುವುದು ಖಚಿತವಾಗುತ್ತಿದ್ದಂತೆ ಉದ್ಯಮಿ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಕೇವಲ ಎರಡೇ ದಿನಗಳಲ್ಲಿ ಬ್ಯಾಂಕ್ ಮ್ಯಾನೇಜರ್ ವಿನೋದ್ ಕುಮಾರ್ ಮತ್ತು ಆತನ ಸಹಚರರನ್ನು ಹೆಡೆಮುರುಳಿಕಟ್ಟಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ಕಿರಣ್ ಪಿಗ್ಮಿ ಕಲೆಕ್ಟರ್ ಆಗಿದ್ದು, ವಂಚನೆಯ ಹಣವನ್ನು ನಗದು ಮಾಡಿಕೊಡಲು ಸಹಾಯ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಗಳನ್ನು ಕಡ್ಡಾಯ ವಿಚಾರಣೆಗೆ ಒಳಪಡಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧರ್ಮಸ್ಥಳ ಪ್ರಕರಣ: ಸಿಕ್ಕ 7 ಬುರುಡೆಗಳ ರಹಸ್ಯ ಪತ್ತೆಯೇ ಎಸ್​​ಐಟಿ ಅಧಿಕಾರಿಗಳಿಗೀಗ ಸವಾಲು – Kannada News | Dharmasthala Skull Case: Decoding Banglegudde Skull Mystery Remains Biggest Challenge for SIT; Probe Team to Use Isotope Analysis

ಧರ್ಮಸ್ಥಳದಲ್ಲಿ ನಡೆದಿದ್ದ ಉತ್ಖನನ ಕಾರ್ಯ (ಫೈಲ್​​ ಚಿತ್ರ)Image Credit source: PTI

ಮಂಗಳೂರು, ಜೂನ್​​ 21: ಧರ್ಮಸ್ಥಳ ಬುರುಡೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ನಟ ಪ್ರಕಾಶ್​​ ರಾಜ್​​ ಹೆಸರು ಕೂಡ ಇದರಲ್ಲಿ ತಳುಕಿಹಾಕಿಕೊಂಡಿರುವ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ಬಂಗ್ಲೆಗುಡ್ಡೆ ಬುರುಡೆ ರಹಸ್ಯ ಪತ್ತೆಗೆ ಎಸ್ಐಟಿ ಹರಸಾಹಸ ಪಡುತ್ತಿದ್ದು, ಫೈನಲ್ ರಿಪೋರ್ಟ್ ಸಲ್ಲಿಸಲು ಏಳು ಬುರುಡೆಗಳ ಮೂಲ ಪತ್ತೆಯೇ ಸವಾಲಾಗಿ ಮಾರ್ಪಟ್ಟಿದೆ. ಹೀಗಾಗಿ ಐಸೋಟೋಪ್‌ ಎನಾಲಿಸಿಸ್​​ ತಂತ್ರಜ್ಞಾನ ಬಳಸಿ ಬುರುಡೆಗಳ ಬಗ್ಗೆ ಮಾಹಿತಿ ಪಡೆಯಲು ತನಿಖಾ ತಂಡ ಮುಂದಾಗಿದೆ.

ಮುಖ್ಯಾಂಶಗಳು

  • ವಿಶ್ವಾದ್ಯಂತ ಸದ್ದು ಮಾಡಿದ್ದ ಧರ್ಮಸ್ಥಳ ಬುರುಡೆ ಪ್ರಕರಣ
  • ಬಂಗ್ಲೆಗುಡ್ಡೆ ಬುರುಡೆಗಳ ರಹಸ್ಯ ಪತ್ತೆಯೇ ಎಸ್​​ಐಟಿಗೆ ಸವಾಲು
  • ಐಸೋಟೋಪ್‌ ಎನಾಲಿಸಿಸ್​​ ಮೂಲಕ ಮಾಹಿತಿ ಪಡೆಯಲು ಸಿದ್ಧತೆ

ಏನಿದು ಐಸೋಟೋಪ್‌ ಎನಾಲಿಸಿಸ್​​?

ಐಸಮಸ್ಥಾನಿ ವಿಶ್ಲೇಷಣೆ ಎಂದರೆ ವಸ್ತುವೊಂದರಲ್ಲಿರುವ ವಿಭಿನ್ನ ಐಸೊಟೋಪ್‌ಗಳ ಪ್ರಮಾಣವನ್ನು ಅಳೆಯುವ ವೈಜ್ಞಾನಿಕ ತಂತ್ರವಾಗಿದೆ. ವಸ್ತುಗಳ ಮೂಲ, ವಯಸ್ಸು, ಆಹಾರ ಪದ್ಧತಿ ಮತ್ತು ಭೌಗೋಳಿಕ ಹಿನ್ನೆಲೆಯನ್ನು ಪತ್ತೆಹಚ್ಚಲು ಮಾಸ್ ಸ್ಪೆಕ್ಟ್ರೋಮೆಟ್ರಿ ಬಳಸಿ ಈ ವಿಶ್ಲೇಷಣೆಯನ್ನು ನಡೆಸಲಾಗುತ್ತದೆ. ಧರ್ಮಸ್ಥಳ ಪ್ರಕರಣದಲ್ಲಿಯೂ ಇದೇ ಮಾದರಿ ಪರೀಕ್ಷೆಗೆ ಎಸ್​​ಐಟಿಯೀಗ ಮುಂದಾಗಿದೆ.

ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ; SIT ಮಧ್ಯಂತರ ವರದಿ ಬಹಿರಂಗಕ್ಕೆ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಆಗ್ರಹ

ಐಸೋಟೋಪ್ ಪರೀಕ್ಷೆಯಿಂದ ಮೃತರು ಕರಾವಳಿ ಅಥವಾ ಬೇರೆ ಕಡೆಯವರಾ ಎಂಬ ಅಂದಾಜು ಸಿಗಲಿದ್ದು, ಈ ಮಾಹಿತಿ ಆಧಾರದಲ್ಲಿ ಕಾಣೆಯಾದವರ ವಿವರಕ್ಕೆ ಅಧಿಕಾರಿಗಳು ತಾಳೆ ಹಾಕಲಿದ್ದಾರೆ. ಬಂಗ್ಲೆಗುಡ್ಡೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಾನವ ಅಸ್ಥಿಪಂಜರಗಳು ಪತ್ತೆಯಾಗಿದ್ದು, ಇವುಗಳ ಮಾದರಿಯನ್ನು ಡಿಎನ್​​ಎ ಟೆಸ್ಟ್​​ಗಾಗಿಯೂ ಎಫ್​​ಎಸ್​​ಎಲ್​​ಗೆ ಈಗಾಗಲೇ ಎಸ್​​ಐಟಿ ಕಳುಹಿಸಿದೆ.ರಾಜ್ಯದ ನಾನಾ ಭಾಗಳಿಂದ ನಾಪತ್ತೆಯಾಗಿರುವವರ ವಿವರಗಳನ್ನು ಸಂಗ್ರಹಿಸಿರುವ ತನಿಖಾ ತಂಡ ಈಗಾಗಲೇ 8 ಕುಟುಂಬಗಳ ಜನರ ರಕ್ತದ ಮಾದರಿ ಪಡೆದಿದೆ. ಧರ್ಮಸ್ಥಳ ಬುರುಡೆ ಷಡ್ಯಂತ್ರ ತನಿಖೆಯ ಒಂದು ಭಾಗವಾದ್ರೆ ಪತ್ತೆಯಾದ ಬುರುಡೆಗಳ ಮೂಲ ಪತ್ತೆ ಇನ್ನೊಂದು ಭಾಗವಾಗಿದ್ದು, ಕನಿಷ್ಠ ಪತ್ತೆಯಾದ ಬುರುಡೆಗಳು ಯಾವ ಪ್ರದೇಶಕ್ಕೆ ಸೇರಿದ್ದು ಎಂದಾದರೂ ವರದಿಯಲ್ಲಿ ಉಲ್ಲೇಖಿಸಲು ಎಸ್ಐಟಿ ಪ್ಲಾನ್ ಮಾಡಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3 ಅತ್ಯಾಧುನಿಕ ಸ್ವದೇಶಿ ಯುದ್ಧನೌಕೆಗಳ ಸೇರ್ಪಡೆ – Kannada News | Indian Navy Boosts Power: 3 New Indigenous Warships Join, Strengthening Atmanirbhar Bharat

ಕೋಲ್ಕತ್ತಾ, ಜೂನ್ 21: ಭಾರತದ ರಕ್ಷಣಾ ವಲಯ ಇಂದು ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಭಾನುವಾರ ಕೋಲ್ಕತ್ತಾದಲ್ಲಿ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಡಿ ನಿರ್ಮಿಸಲಾದ ಮೂರು ಸುಧಾರಿತ ಯುದ್ಧನೌಕೆಗಳಾದ ಐಎನ್‌ಎಸ್ ದುನಾಗಿರಿ, ಐಎನ್‌ಎಸ್ ಸಂಶೋಖಾಕ್ ಮತ್ತು ಐಎನ್‌ಎಸ್ ಅಗ್ರೇಗಳನ್ನು ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸಮರ್ಪಿಸಿದ್ದಾರೆ.

ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ ಯೋಜನೆಯಡಿ ಕೋಲ್ಕತ್ತಾದ ‘ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಮತ್ತು ಎಂಜಿನಿಯರ್ಸ್’ (GRSE) ಸಂಸ್ಥೆಯು ಈ ಮೂರು ದೈತ್ಯ ನೌಕೆಗಳನ್ನು ನಿರ್ಮಿಸಿದೆ. ಇವುಗಳ ಸೇರ್ಪಡೆಯಿಂದಾಗಿ ಹಿಂದೂ ಮಹಾಸಾಗರದಲ್ಲಿ ಶತ್ರು ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನಕ್ಕೆ ನಡುಕ ಹುಟ್ಟಿಸುವಂತಹ ಬಲ ಭಾರತಕ್ಕೆ ಸಿಕ್ಕಂತಾಗಿದೆ.

ಐಎನ್ಎಸ್ ದುನಾಗಿರಿ (INS Dunagiri) – ರಹಸ್ಯ ಕ್ಷಿಪಣಿ ಯುದ್ಧನೌಕೆ
ಕ್ಷಿಪಣಿ ದಾಳಿ ಸಾಮರ್ಥ್ಯ: ಇದು ಅತ್ಯಾಧುನಿಕ ರಹಸ್ಯ ಮಾರ್ಗದರ್ಶಿ ಕ್ಷಿಪಣಿ ಯುದ್ಧನೌಕೆಯಾಗಿದ್ದು, ಸಮುದ್ರದಲ್ಲಿ ಚಲಿಸುವಾಗಲೇ ಶತ್ರುಗಳ ಮೇಲೆ ಅಟ್ಯಾಕ್ ಮಾಡಬಲ್ಲದು.

ಮತ್ತಷ್ಟು ಓದಿ: ಅಂತಾರಾಷ್ಟ್ರೀಯ ಯೋಗ ದಿನ :30 ಸಾವಿರ ಜನರೊಂದಿಗೆ ಪ್ರಧಾನಿ ಮೋದಿ ಯೋಗಾಭ್ಯಾಸ

ಬ್ರಹ್ಮೋಸ್ ಶಕ್ತಿ: ಈ ನೌಕೆಯಲ್ಲಿ ಜಗತ್ತಿನ ಅತ್ಯಂತ ವೇಗದ ‘ಬ್ರಹ್ಮೋಸ್’ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳು ಮತ್ತು ‘ಬರಾಕ್-8’ ಮೇಲ್ಮೈಯಿಂದ ಗಾಳಿಗೆ ಹಾರುವ ಕ್ಷಿಪಣಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದು ಏಕಕಾಲದಲ್ಲಿ ವಾಯು ರಕ್ಷಣೆ ಮತ್ತು ಮೇಲ್ಮೈ ಯುದ್ಧಗಳನ್ನು ಮಾಡಬಲ್ಲದು.

ಐಎನ್ಎಸ್ ಅಗ್ರೇ– ಜಲಾಂತರ್ಗಾಮಿಗಳ ಶಿಕಾರಿ
ಆಳವಿಲ್ಲದ ಕರಾವಳಿ ತೀರದಲ್ಲಿ ಅಡಗಿಕೊಳ್ಳುವ ಶತ್ರುಗಳ ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚಿ ಧ್ವಂಸಗೊಳಿಸಲು ಇದನ್ನು ನಿರ್ಮಿಸಲಾಗಿದೆ.

ಇದು ಸುಧಾರಿತ ಸೋನಾರ್ ವ್ಯವಸ್ಥೆ, ಜಲಾಂತರ್ಗಾಮಿ ವಿರೋಧಿ ರಾಕೆಟ್‌ಗಳು, ಟಾರ್ಪಿಡೊಗಳು ಮತ್ತು 30 ಎಂಎಂ ಭಾರಿ ನೌಕಾ ಬಂದೂಕುಗಳನ್ನು ಹೊಂದಿದೆ. ಅಲ್ಲದೆ ಕಡಲಿನಲ್ಲಿ ಮೈನ್‌ಗಳನ್ನು (ಬಾಂಬ್) ಹಾರಿಸುವ ಸಾಮರ್ಥ್ಯವೂ ಇದಕ್ಕಿದೆ.

ವಿಡಿಯೋ

ಐಎನ್ಎಸ್ ಸಂಶೋಖಾಕ್ (INS Samshokhak) – ಸಮುದ್ರದ ಹದ್ದಿನ ಕಣ್ಣು
ಇದು ಸಮುದ್ರದಾಳದ ತಳವನ್ನು ಸಂಪೂರ್ಣವಾಗಿ ನಕ್ಷೆ ಮಾಡುವ ಮತ್ತು ಸುರಕ್ಷಿತ ಸಂಚರಣೆ ಮಾರ್ಗಗಳನ್ನು ಗುರುತಿಸುವ ಅತ್ಯಾಧುನಿಕ ಸಮೀಕ್ಷಾ ನೌಕೆಯಾಗಿದೆ. ಯುದ್ಧದ ಹೊರತಾಗಿ ಸಮುದ್ರದಲ್ಲಿ ಯಾವುದೇ ಪ್ರಕೃತಿ ವಿಕೋಪ ಅಥವಾ ತುರ್ತು ಪರಿಸ್ಥಿತಿ ಎದುರಾದರೆ, ಈ ನೌಕೆಯು ಬೃಹತ್ ‘ತೇಲುವ ವೈದ್ಯಕೀಯ ಕೇಂದ್ರವಾಗಿ’ ಬದಲಾಗಿ ಜೀವ ಉಳಿಸುವ ಕಾರ್ಯಾಚರಣೆ ನಡೆಸಬಲ್ಲದು.

ಈ ಮೂರು ನೌಕೆಗಳಲ್ಲೇ ಅತ್ಯಂತ ಸುಧಾರಿತ ಶಸ್ತ್ರಾಸ್ತ್ರ ಹಾಗೂ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳನ್ನು ಸಂಗ್ರಹಿಸಿಡಲು ಬೃಹತ್ ಗೋದಾಮುಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಭಾರತೀಯ ಸೇನೆಯು ವಿದೇಶಿ ಆಮದಿನ ಮೇಲಿನ ಅವಲಂಬನೆ ಮುರಿದು, ಕಡಲ ಗಡಿಯಲ್ಲಿ ಸ್ವಯಂ ಶಕ್ತಿಯೊಂದಿಗೆ ಶತ್ರುಗಳ ವಿರುದ್ಧ ಪ್ರಬಲ ಪ್ರತಿದಾಳಿ ನಡೆಸಲು ಸಂಪೂರ್ಣ ಸಜ್ಜಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

5 ಸಿಕ್ಸ್, 5 ಫೋರ್​: 11 ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ – Kannada News | Vaibhav Sooryavanshi Creates New World Record in ODI Cricket

ಏಕದಿನ ಕ್ರಿಕೆಟ್​ನಲ್ಲಿ ವೈಭವ್ ಸೂರ್ಯವಂಶಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಕೇವಲ 11 ಎಸೆತಗಳಲ್ಲಿ ಎಂಬುದು ವಿಶೇಷ. ದಂಬುಲ್ಲಾದ ರಂಗಿರಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ಎ ವಿರುದ್ಧದ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಈ ಮೂಲಕ ಲಿಸ್ಟ್ ಎ (ಏಕದಿನ) ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಅರ್ಧಶತಕ ಬಾರಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಸಹನ್ ಅರಚ್ಚಿಗೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ವೈಭವ್ ಸೂರ್ಯವಂಶಿ ಹಾಗೂ ಪ್ರಿಯಾಂಶ್ ಆರ್ಯ ಸಿಡಿಲಬ್ಬರದ ಬ್ಯಾಟಿಂಗ್ ಒದಗಿಸಿದ್ದಾರೆ.

ಅದರಲ್ಲೂ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಸೂರ್ಯವಂಶಿ ಶ್ರೀಲಂಕಾ ಬೌಲರ್​ಗಳನ್ನು ಚೆಂಡಾಡಿದರು. ಪರಿಣಾಮ ಮೊದಲ 11 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳು ಮೂಡಿಬಂದವು. ಈ ಮೂಲಕ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಸಿಡಿಲಬ್ಬರದ ಅರ್ಧಶತಕದೊಂದಿಗೆ ಶ್ರೀಲಂಕಾದ ಕೌಶಲ್ಯ ವೀರರತ್ನೆ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

  • 2005 ರಲ್ಲಿ ಶ್ರೀಲಂಕಾದಲ್ಲಿ ನಡೆದ ದೇಶೀಯ ಲಿಸ್ಟ್ ಎ (ಏಕದಿನ) ಪಂದ್ಯದಲ್ಲಿ ಕೌಶಲ್ಯ ವೀರರತ್ನೆ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
  • ಈ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ಅಳಿಸಿ ಹಾಕಿದ್ದಾರೆ. ಶ್ರೀಲಂಕಾ ಎ ವಿರುದ್ಧ ಕೇವಲ 11 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಎಬಿ ಡಿವಿಲಿಯರ್ಸ್ ದಾಖಲೆ ಉಡೀಸ್:

ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ವಿಶ್ವ ದಾಖಲೆ ಎಬಿ ಡಿವಿಲಿಯರ್ಸ್​ ಹೆಸರಿನಲ್ಲಿತ್ತು. ಇದೀಗ ಲಿಸ್ಟ್​ ಎ ಪಂದ್ಯದ ಮೂಲಕ ಈ ದಾಖಲೆಯನ್ನು ಕೂಡ ವೈಭವ್ ಸೂರ್ಯವಂಶಿ ಉಡೀಸ್ ಮಾಡಿದ್ದಾರೆ.

  • 2015 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎಬಿ ಡಿವಿಲಿಯರ್ಸ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ.
  • 2025 ರಲ್ಲಿ ಐರ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್​ನ ಮ್ಯಾಥ್ಯೂ ಫೋರ್ಡ್ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಎಬಿಡಿ ದಾಖಲೆಯನ್ನು ಸರಿಗಟ್ಟಿದ್ದರು.

ಇದೀಗ ಈ ಇಬ್ಬರ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ಹಿಂದಿಕ್ಕಿದ್ದಾರೆ. ಅಂದರೆ ಭಾರತ ಎ, ಶ್ರೀಲಂಕಾ ಎ ಹಾಗೂ ಅಫ್ಘಾನಿಸ್ತಾನ್ ಎ ನಡುವಣ ಟೂರ್ನಿಯು ಅಂತಾರಾಷ್ಟ್ರೀಯ ಪಂದ್ಯಾವಳಿ. ಇದರೊಂದಿಗೆ ದ್ವಿರಾಷ್ಟ್ರೀಯ ಅಥವಾ ಬಹುರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ವಿಶ್ವ ದಾಖಲೆ ಕೂಡ ವೈಭವ್ ಸೂರ್ಯವಂಶಿ ಪಾಲಾಗಿದೆ.

ಇದನ್ನೂ ಓದಿ: 13 ಸಿಕ್ಸ್, 11 ಫೋರ್​: ರೆಕಾರ್ಡ್ ಬ್ರೇಕಿಂಗ್ ಸೆಂಚುರಿ ಸಿಡಿಸಿದ ಮಿಚೆಲ್ ಓವನ್

ವೈಭವ್ ಸೂರ್ಯವಂಶಿಯ ಈ ಸಿಡಿಲಬ್ಬರದ ಬ್ಯಾಟಿಂಗ್​ ನೆರವಿನೊಂದಿಗೆ ಟೀಮ್ ಇಂಡಿಯಾ 7 ಓವರ್​ಗಳ ಮುಕ್ತಾಯದ ವೇಳೆಗೆ 116 ರನ್​ ಕಲೆಹಾಕಿದೆ.

Source link

Exit mobile version