Headlines

ಬೆಳಗ್ಗೆ ಅಥವಾ ಸಂಜೆ; ಬೇಸಿಗೆಯಲ್ಲಿ ಗಿಡಗಳಿಗೆ ಯಾವ ಸಮಯದಲ್ಲಿ ನೀರು ಹಾಕಬೇಕು? – Kannada News | When is the best time to water plants in summer?

ಈ ಬೇಸಿಗೆಯ (summer) ತಾಪಕ್ಕೆ ಮನುಷ್ಯರಾದ ನಾವು, ಪ್ರಾಣಿ ಪಕ್ಷಿಗಳು ಮಾತ್ರವಲ್ಲ ಮರಗಿಡಗಳು ಸಹ ಬಸವಳಿದು ಹೋಗುತ್ತವೆ. ಆದ್ದರಿಂದ ಈ ಸುಡು ಬೇಸಿಗೆಯಲ್ಲಿ ಮನೆಯಲ್ಲಿರುವ ಗಿಡಗಳ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಈ ಶಾಖಕ್ಕೆ ಗಿಡಗಳು ಒಣಗುವ, ಸತ್ತು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂತಹ ಸಮಯದಲ್ಲಿ ಗಿಡಗಳನ್ನು ರಕ್ಷಿಸಲು ಹೆಚ್ಚಿನವರು ಬೆಳಗ್ಗೆ ಮತ್ತು ಸಂಜೆ  ಗಿಡಗಳಿಗೆ ಅತಿಯಾಗಿ ನೀರು ಹಾಕಿ ಪೋಷಿಸುತ್ತಲೇ ಇರುತ್ತಾರೆ. ಆದ್ರೆ  ಅತಿಯಾಗಿ ನೀರು ಹಾಕುತ್ತಲೇ ಇರುತ್ತಾರೆ. ಹೀಗೆ ಅತಿಯಾಗಿ…

Read More

ದರ್ಶನ್ ಮ್ಯಾನೇಜರ್ ಮಲ್ಲಿ ಸುಳ್ಳು ಹೇಳಿದ್ದಾರೆ: ತೂಗುದೀಪ ಅಕೌಂಟೆಂಟ್ ದೀಪಕ್ – Kannada News | Thoogudeepa accountant Deepak talks about Mallikarjun’s allegations

ನಟ ದರ್ಶನ್ ತೂಗುದೀಪ (Darshan Thoogudeepa) ಅವರ ಮ್ಯಾನೇಜರ್ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ 2018 ರಿಂದಲೂ ನಾಪತ್ತೆ ಆಗಿದ್ದರು. ಅವರ ಮೇಲೆ ಸಾಲ, ವಂಚನೆ ಆರೋಪಗಳಿದ್ದವು. ಅವರ ಮೇಲೆ ಲುಕೌಟ್ ನೊಟೀಸ್ ಸಹ ಜಾರಿ ಆಗಿತ್ತು. ನಿನ್ನೆ ಹಠಾತ್ತನೆ ಮಲ್ಲಿಕಾರ್ಜುನ್ ಅವರು ಸುದ್ದಿಗೋಷ್ಠಿ ನಡೆಸಿ, ತಮ್ಮ ವೈಯಕ್ತಿಕ ಜೀವನ, ಹಣಕಾಸು ಸಮಸ್ಯೆ, ನಾಪತ್ತೆ ಆಗಿದ್ದಕ್ಕೆ ಕಾರಣ ಹೀಗೆ ಹಲವು ವಿಷಯಗಳನ್ನು ಮಾತನಾಡಿದರು. ಈ ವೇಳೆ ‘ಪ್ರೇಮಬರಹ’ ಸಿನಿಮಾದ ವಿವಾದ ಕುರಿತು ಮಾತನಾಡುತ್ತಾ, ಆಗಿದ್ದ ಅಕೌಂಟಂಟ್ ಮಾಡಿದ ತಪ್ಪಿನಿಂದ…

Read More

Money Plant Vastu Tips: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ಮನಿ ಪ್ಲಾಂಟ್ ಇಡಬೇಡಿ

ಬೆಂಗಳೂರು (ಏ. 05): ಅನೇಕ ಜನರು ತಮ್ಮ ಮನೆಗಳಲ್ಲಿ ಮನಿ ಪ್ಲಾಂಟ್ (Money Plant) ಅನ್ನು ಬೆಳೆಸುತ್ತಾರೆ. ಈ ಸಸ್ಯವು ಗಾಳಿಯನ್ನು ಶುದ್ಧೀಕರಿಸುವುದಲ್ಲದೆ ಆಕರ್ಷಕವಾಗಿ ಕಾಣುತ್ತದೆ. ಆದಾಗ್ಯೂ, ವಾಸ್ತು ಶಾಸ್ತ್ರದ ಪ್ರಕಾರ, ಈ ಇಂಡೋರ್ ಪ್ಲಾಂಟ್ ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಅದೃಷ್ಟ ಮತ್ತು ಸಂಪತ್ತು ಬರುತ್ತದೆ ಎಂದು ಭಾರತೀಯ ಸಂಸ್ಕೃತಿಯಲ್ಲಿ ಬಲವಾಗಿ ನಂಬಲಾಗಿದೆ. ವೈಜ್ಞಾನಿಕವಾಗಿ, ಈ ಸಸ್ಯವು ಅದರ ಸುತ್ತಲೂ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ,…

Read More

ಜೆನ್ ಜೀ ಪ್ರೇಕ್ಷಕರ ಮನಗೆಲ್ಲುವ ಪ್ರಯತ್ನ; ಅಗಸ್ತ್ಯ ಹೊಸ ಸಿನಿಮಾ ‘ಡಿಂಚಕ್ ಡಿಂಚಕ್’ – Kannada News | Jotheyagi Hithavagi fame actor Agasthya new Kannada movie title Dinchak Dinchak

‘ಜೊತೆಯಾಗಿ ಹಿತವಾಗಿ’ ಎಂಬ ಕಾವ್ಯಾತ್ಮಕ ಚಿತ್ರದ ಮೂಲಕ ಸದ್ದಿಲ್ಲದೆ ಸ್ಯಾಂಡಲ್‌ವುಡ್ ಪ್ರವೇಶಿಸಿ ಪ್ರೇಕ್ಷಕರ ಗಮನ ಸೆಳೆದಿದ್ದ ಹೊಸ ನಟ ಅಗಸ್ತ್ಯ (Agasthya) ಅವರು ಈಗ ತಮ್ಮ ಎರಡನೇ ಸಿನಿಮಾದೊಂದಿಗೆ ಪ್ರೇಕ್ಷಕರ ಎದುರು ಬರಲು ಸಿದ್ಧತೆ ಮಾಡಿಕೊಂಡಿದ್ದಾರೆ. ವಿಭಿನ್ನ ಶೀರ್ಷಿಕೆಯ ಮೂಲಕ ಕುತೂಹಲ ಮೂಡಿಸುವ ಪ್ರಯತ್ನ ಅವರದ್ದಾಗಿದೆ. ಈ ಸಿನಿಮಾಗೆ ‘ಡಿಂಚಕ್ ಡಿಂಚಕ್’ (Dinchak Dinchak) ಎಂದು ಹೆಸರಿಡಲಾಗಿದೆ. ಹದಿಹರೆಯದವರ ತರಲೆ-ತಮಾಷೆ ಹಾಗೂ ಕೌಟುಂಬಿಕ ಭಾವನೆಗಳನ್ನೊಳಗೊಂಡ ಅಚ್ಚುಕಟ್ಟಾದ ಕಥಾ ಎಳೆಯನ್ನು ಅಗಸ್ತ್ಯ ಸಿದ್ಧಪಡಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ…

Read More

IND vs AFG: ರಿಷಭ್ ಪಂತ್​ಗೆ ಡಬಲ್ ಶಾಕ್ ನೀಡಿದ ಬಿಸಿಸಿಐ – Kannada News | Rishabh Pant Dropped From India ODI Squad, Loses Test Vice Captaincy vs AFG

ಐಪಿಎಲ್ (IPL 2026) ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ, ಅಫ್ಘಾನಿಸ್ತಾನದ (IND vs AFG) ವಿರುದ್ಧ ಏಕದಿನ ಹಾಗೂ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗಾಗಿ ಬಿಸಿಸಿಐ ತಂಡವನ್ನು ಸಹ ಪ್ರಕಟಿಸಿದೆ. ಈ ಎರಡು ತಂಡಗಳಲ್ಲಿ ಯುವ ಮುಖಗಳಿಗೆ ಅವಕಾಶ ನೀಡಲಾಗಿದೆ. ಇತ್ತ ಹಿಂದಿನ ಸರಣಿಯಲ್ಲಿ ತಂಡದಲ್ಲಿದ್ದ ಹಲವು ಆಟಗಾರರಿಗೆ ಗೇಟ್ ಪಾಸ್ ನೀಡಿಲಾಗಿದೆ. ಅಂತಹ ಆಟಗಾರರಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant)​ ಕೂಡ ಒಬ್ಬರು. ಬಿಸಿಸಿಐ, ರಿಷಭ್ ಪಂತ್​ಗೆ ಒಂದಲ್ಲ ಅಂತಾ ಎರಡು…

Read More

ಇನ್ನಷ್ಟು ಕುಸಿತ ಕಾಣುತ್ತಾ ಚಿನ್ನದ ದರ; ಎಲ್ಲಿಯವರೆಗೆ ಇಳಿಯಬಹುದು ಬಂಗಾರದ ಬೆಲೆ? – Kannada News | Gold rates may come down drastically to Rs 10,000, know the probable reasons for this decline

ನವದೆಹಲಿ, ಫೆಬ್ರುವರಿ 17: ಚಿನ್ನ ಮತ್ತು ಬೆಳ್ಳಿ ಬೆಲೆ ಕಳೆದ ತಿಂಗಳು (ಜನವರಿ) ಯದ್ವಾತದ್ವಾ ಏರಿಕೆ ಕಂಡಿವೆ. ಈ ಅಮೂಲ್ಯ ಲೋಹಗಳ ಬೆಲೆ ಏರಿಕೆಗೆ ಕಡಿವಾಣವೇ ಇಲ್ಲ ಎನ್ನುವಂತೆ ನಾಗಾಲೋಟ ನಡೆದಿತ್ತು. ಈಗ ಏರಿದಷ್ಟೇ ವೇಗವಾಗಿ ಕುಸಿತವೂ ಆಗುತ್ತಿದೆ. ಬೆಲೆ ಏರಿದಷ್ಟೂ ಕಂಗಾಲಾದ ಜನಸಾಮಾನ್ಯರು, ದುಬಾರಿ ಬೆಲೆಯಲ್ಲೂ ಆಭರಣ ಖರೀದಿಸಲು ಮುಗಿಬಿದ್ದದ್ದು ವಿಪರ್ಯಾಸ ಎನಿಸಿತ್ತು. ಸದ್ಯ ಚಿನ್ನದ ಬೆಲೆ (Gold Rate) ಇಳಿಕೆ ಆಗುತ್ತಿರುವುದು ಬಹಳಷ್ಟು ಭಾರತೀಯ ಜನಸಾಮಾನ್ಯರಿಗೆ ಉಸಿರು ಸಿಕ್ಕಂತಾಗಿದೆ. ಜನವರಿ 29ರಂದು ಚಿನ್ನ ಮತ್ತು…

Read More

‘ರಾಮಾಯಣ’ ಚಿತ್ರಕ್ಕೆ ಕರಣ್ ಜೋಹರ್ ಡಿಸ್ಟ್ರಿಬ್ಯೂಟರ್; ಕೇವಲ 250 ಕೋಟಿ ರೂ.ಗೆ ಡೀಲ್ – Kannada News | Ramayana Film India Distribution rights Acquires by Karan Johar Dharma Production

ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ (Ramayana Movie) ಮೊದಲ ಭಾಗ ಈ ವರ್ಷದ ದೀಪಾವಳಿ ಹಬ್ಬದ ವೇಳೆಗೆ ವಿಶ್ವಾದ್ಯಂತ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಬಾಲಿವುಡ್‌ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರ ‘ಧರ್ಮ ಪ್ರೊಡಕ್ಷನ್ಸ್’ ಈ ಚಿತ್ರದ ಭಾರತದ ಹಂಚಿಕೆ ಹಕ್ಕನ್ನು ಪಡೆದಿದೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಈ ದೃಶ್ಯ ವೈಭವದ ಚಿತ್ರವನ್ನು ಬರೋಬ್ಬರಿ 4,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ವರದಿಯಾಗಿದೆ. ಡೀಲ್ ಕುದುರಿದ್ದು 250 ಕೋಟಿಗೆ! ಇದು…

Read More

75ನೇ ವಯಸ್ಸಿನಲ್ಲೂ ಕಾಮದಾಹ: ಸೊಸೆಯನ್ನೂ ಬಿಡದ ಕಾಮುಕ ತಂದೆಯನ್ನ ಕೊಂದ ಮಗ

ಯಾದಗಿರಿ, (ಮಾರ್ಚ್ 19):  ಜಿಲ್ಲೆಯ ಗೋನಾಳ ಗ್ರಾಮದ ಮಗನಿಂದಲೇ ತಂದೆ ಕೊಲೆ ಪ್ರಕರಣಕ್ಕೆ (Gonal Pampanna Murder Case) ಟ್ವಿಸ್ಟ್ ಸಿಕ್ಕಿದೆ. 75 ವಯಸ್ಸಾಗಿದ್ರೂ ಕಾಮದಾಟಕ್ಕಾಗಿ ಮಹಿಳೆಯರ ಜೊತೆ ಸಂಬಂಧ (illicit relationship )ಇಟ್ಟುಕೊಂಡು, ಸೊಸೆಯನ್ನೂ ಬಿಡದ ತಂದೆಯನ್ನು ಕಂಡು ಮಾರ್ಯಾದೆಗೆ ಹೆದರಿ ಮಗನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ತನಿಖೆ ವೇಳೆ ಬಯಲಾಗಿದೆ. ಹೌದು… ಗೋನಾಳ ಗ್ರಾಮದಲ್ಲಿ 6 ದಿನಗಳ ಹಿಂದೆ ಅಂದ್ರೆ ಮಾರ್ಚ್ 12 ರ ರಾತ್ರಿ 74 ವರ್ಷದ ಪಂಪಣ್ಣ ಸಜ್ಜನ ಎಂಬಾತನ…

Read More

K.R Circle Bus accident: ಕೆ. ಆರ್ ಸರ್ಕಲ್ ಟ್ರಾಫಿಕ್ ಸಿಗ್ನಲ್​ನಲ್ಲಿ ನಿಂತಿದ್ದ ಎಸಿ ಬಸ್​ಗೆ ಮತ್ತೊಂದು ಬಸ್ ಡಿಕ್ಕಿ! – Kannada News | Bengaluru K.R. Circle BMTC Bus Accident: Two Buses Collide at Traffic Signal

ಬೆಂಗಳೂರು, ಜುಲೈ 04: ನಗರದ ಕೆ.ಆರ್. ಸರ್ಕಲ್‌ನಲ್ಲಿ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಸಿಗ್ನಲ್‌ನಲ್ಲಿ ನಿಂತಿದ್ದ ಎಸಿ ಬಸ್‌ಗೆ ಹಿಂಬದಿಯಿಂದ ಮತ್ತೊಂದು ಬಸ್ ಡಿಕ್ಕಿ ಹೊಡೆದಿದ್ದು, ಮುಂಭಾಗ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಎಂಟು ಜನ ಪ್ರಯಾಣಿಕರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ತೀವ್ರ ಗಾಯಗೊಂಡ ಚಾಲಕ ಹಾಗೂ ಯುವತಿಯನ್ನು ರಕ್ಷಿಸಿ ಸೇಂಟ್ ಮಾರ್ಥಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯ ಎಡಗಾಲಿಗೆ ಬಲವಾದ ಪೆಟ್ಟು ಬಿದ್ದಿದೆ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದುಬಾರಿ ವೆಚ್ಚ ಕೇಳುತ್ತಿರುವುದರಿಂದ ಗಾಯಾಳುಗಳ ಪೋಷಕರು…

Read More

ಪಾಸ್‌ಪೋರ್ಟ್ ಕೇವಲ ಪ್ರಯಾಣ ದಾಖಲೆ, ಪೌರತ್ವದ ಪುರಾವೆಯಲ್ಲ:ವಿದೇಶಾಂಗ ಸಚಿವಾಲಯ – Kannada News | Indian Passport is Travel Document, Not Citizenship Proof: MEA Clarifies Key Updates

ನವದೆಹಲಿ, ಜೂನ್ 25: ಸರ್ಕಾರಿ ಸೌಲಭ್ಯಗಳು ಮತ್ತು ಪೌರತ್ವಕ್ಕೆ ಅರ್ಹತೆಯ ಪುರಾವೆಯಾಗಿ ಪಾಸ್‌ಪೋರ್ಟ್‌(Passport)ಗಳ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಗೊಂದಲಕ್ಕೆ ವಿದೇಶಾಂಗ ಸಚಿವಾಲಯ (MEA) ತೆರೆ ಎಳೆದಿದೆ. ಭಾರತೀಯ ಪಾಸ್‌ಪೋರ್ಟ್ ಕಟ್ಟುನಿಟ್ಟಾಗಿ ಒಂದು ಅಂತರರಾಷ್ಟ್ರೀಯ ಪ್ರಯಾಣ ದಾಖಲೆಯಾಗಿದೆಯೇ ಹೊರತು, ಅದನ್ನು ಪೌರತ್ವದ ನಿರ್ಣಾಯಕ ಪುರಾವೆಯಾಗಿ ಪರಿಗಣಿಸಬಾರದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ದೇಶದ ಪಾಸ್‌ಪೋರ್ಟ್ ಸೇವೆಗಳು ಹಾಗೂ ಜಾಗತಿಕ ಚಲನಶೀಲತೆಯ ಸುಧಾರಣೆಗಳ ಕುರಿತು ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಅಧಿಕಾರಿಗಳು ಈ ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ. ಕೇವಲ 5…

Read More