ಮೂರು ಅತ್ಯಂತ ಶುಭಗ್ರಹರ ಸಂಯೋಗ.. ಈ ಎಲ್ಲ ರಾಶಿಯವರಿಗೆ ಕಲ್ಪನಾತೀಯ ಫಲ..!! – Kannada News | Cancer Rashi Tringraha Yoga: Guru, Budha, Shukra Conjunction Brings Unimaginable Fortunes!

ಕರ್ಕಾಟಕ ರಾಶಿಯಲ್ಲಿ ಜ್ಞಾನಕಾರಕ ಗುರು, ಬುದ್ಧಿಕಾರಕ ಬುಧ ಮತ್ತು ಸುಖಕಾರಕ ಶುಕ್ರರ ತ್ರಿಗ್ರಹ ಸಂಯೋಗವು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಶುಭದಾಯಕವಾದ ಲಕ್ಷ್ಮಿ ನಾರಾಯಣ ಹಾಗೂ ಸರಸ್ವತಿ ಯೋಗಗಳ ಪ್ರಭಾವ ಇರಲಿದೆ. ಕರ್ಕಾಟಕವು ಗುರುವಿಗೆ ಉಚ್ಚ ಸ್ಥಾನವಾಗಿರುವುದರಿಂದ ಈ ಯೋಗ ದುಪ್ಪಟ್ಟಾಗುತ್ತದೆ. ಈ ಯೋಗವು ಜೂನ್‌17 ರಿಂದ ಜುಲೈ 04ರವೆರೆಗೆ ಇರಲಿದೆ.

ಮೇಷ ರಾಶಿ:

ಸ್ಥಿರ ಆಸ್ತಿ, ವಾಹನ ಯೋಗ ಹಾಗೂ ಕೌಟುಂಬಿಕ ಸುಖ ವೃದ್ಧಿ. ಹೊಸ ಉದ್ಯಮ ಆರಂಭಕ್ಕೆ ಸಕಾಲ. ಉದ್ಯೋಗದಲ್ಲಿ ಪ್ರಗತಿ, ಬಡ್ತಿ ಸಾಧ್ಯ. ವಿವಾಹ ಯತ್ನಗಳು ಕೈಗೂಡುವವು. ಉನ್ನತ ಶಿಕ್ಷಣದಲ್ಲಿ ಅತ್ಯುತ್ತಮ ಯಶಸ್ಸು. ಭೂಮಿಯ ಮೇಲೆ ದೀರ್ಘ ಕಾಲದ ಹೂಡಿಕೆಗೆ ಲಾಭದಾಯಕ. ಹಳೆಯ ಸಾಲಗಳಿಂದ ಮುಕ್ತಿ ಸಿಗಲಿದೆ. ವೃತ್ತಿಪರ ಕಾರಣಗಳಿಗಾಗಿ ವಿದೇಶ ಪ್ರಯಾಣದ ಯೋಗವಿದೆ.

ವೃಷಭ ರಾಶಿ:

ಆತ್ಮವಿಶ್ವಾಸ ಹೆಚ್ಚಳ, ಸಹೋದರರಿಂದ ಸಹಾಯ ಮತ್ತು ಭಾಗ್ಯೋದಯ. ಉತ್ತಮ ಸಂವಹನ ಮತ್ತು ವ್ಯಾಪಾರದಲ್ಲಿ ಲಾಭ. ಸಹೋದ್ಯೋಗಿಗಳಿಂದ ಬೆಂಬಲ. ದಾಂಪತ್ಯ ಸುಖ, ವಿವಾಹ ನಿಶ್ಚಯ. ಕಲೆ, ಸಾಹಿತ್ಯ ವಿದ್ಯಾರ್ಥಿಗಳಿಗೆ ಯಶಸ್ಸು. ಷೇರು ಮಾರುಕಟ್ಟೆ ಹೂಡಿಕೆಯಿಂದ ಧನಲಾಭ. ಆರ್ಥಿಕ ಸ್ಥಿತಿ ಉತ್ತಮ, ಸಾಲ ಬಾಧೆ ತಗ್ಗುವುದು. ಸಣ್ಣ ಪ್ರವಾಸಗಳು ಹಾಗೂ ಧಾರ್ಮಿಕ ವಿದೇಶ ಪ್ರಯಾಣದ ಸಾಧ್ಯತೆ.

​ಮಿಥುನ ರಾಶಿ:

​ಧನಬಲ ವೃದ್ಧಿ, ಮಾತಿನಲ್ಲಿ ಚಾತುರ್ಯ, ಕೌಟುಂಬಿಕ ಸಂತಸ. ಹಿರಿಯ ಅಧಿಕಾರಿಗಳ ಪ್ರಶಂಸೆ. ಹೂಡಿಕೆ ಆಧಾರಿತ ಉದ್ಯಮಗಳಿಗೆ ಉತ್ತಮ ಲಾಭ. ಕೌಟುಂಬಿಕ ಒಪ್ಪಿಗೆಯೊಂದಿಗೆ ವಿವಾಹ ಯೋಗ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ. ದೀರ್ಘಾವಧಿ ಹೂಡಿಕೆಗೆ ಸಕಾಲ. ಸಾಲದ ಹೊರೆ ಕಡಿಮೆಯಾಗಲಿದ್ದು, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಲಿದೆ. ವಿದೇಶದಿಂದ ಧನಲಾಭ ಮತ್ತು ಹೊಸ ಅವಕಾಶಗಳು ಒದಗಿಬರಲಿವೆ.

​ಕರ್ಕಾಟಕ ರಾಶಿ:

ವ್ಯಕ್ತಿತ್ವ ವಿಕಸನ, ಸಮಾಜದಲ್ಲಿ ಗೌರವ, ಆರೋಗ್ಯ ವೃದ್ಧಿ. ಹೊಸ ಪಾಲುದಾರಿಕೆ ಉದ್ಯಮ ಆರಂಭಿಸಬಹುದು. ವೃತ್ತಿಜೀವನದಲ್ಲಿ ಅತ್ಯುನ್ನತ ಸ್ಥಾನಮಾನ. ಶೀಘ್ರ ವಿವಾಹ ಯೋಗ. ವಿದ್ಯಾರ್ಥಿಗಳಿಗೆ ಸಂಶೋಧನೆ ಮತ್ತು ಉನ್ನತ ಶಿಕ್ಷಣದಲ್ಲಿ ಭರ್ಜರಿ ಯಶಸ್ಸು. ಚಿನ್ನ ಮತ್ತು ಭೂಮಿಯ ಮೇಲೆ ಹೂಡಿಕೆ ಶುಭ. ಆರ್ಥಿಕ ನೆರವು ಸುಲಭವಾಗಿ ದೊರೆಯಲಿದೆ. ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕಾಗಿ ವಿದೇಶ ಪ್ರಯಾಣ ಯಶಸ್ವಿ.

​ಸಿಂಹ ರಾಶಿ:

ಆಧ್ಯಾತ್ಮಿಕ ಪ್ರಗತಿ, ಭೌತಿಕ ಸುಖಗಳಿಗಾಗಿ ಖರ್ಚು ಹೆಚ್ಚಳ. ರಫ್ತು-ಆಮದು ಉದ್ಯಮದಲ್ಲಿ ಲಾಭ. ಉದ್ಯೋಗದಲ್ಲಿ ವರ್ಗಾವಣೆ ಸಾಧ್ಯತೆ. ವಿವಾಹ ಕಾರ್ಯಗಳಿಗೆ ಹೆಚ್ವು ವೆಚ್ಚ. ವಿದೇಶಿ ವಿವಿಗಳಲ್ಲಿ ಶಿಕ್ಷಣ ಪಡೆಯಲು ಅಡೆತಡೆ ನಿವಾರಣೆ. ಹೂಡಿಕೆ ಮಾಡುವಾಗ ಎಚ್ಚರವಿರಲಿ. ಸಾಲದ ವ್ಯವಹಾರಗಳಿಂದ ದೂರವಿರಿ, ತಾಯಿಯ ಆರೋಗ್ಯಕ್ಕೆ ಖರ್ಚು. ವಿದೇಶ ಪ್ರಯಾಣದ ಆಸೆ ಈಡೇರಲಿದೆ, ಅಲ್ಲಿಯೇ ನೆಲೆಸುವ ಯೋಗವಿದೆ.

 ಕನ್ಯಾ ರಾಶಿ:

​ಸರ್ವತೋಮುಖ ಲಾಭ, ಪ್ರಭಾವಿ ವ್ಯಕ್ತಿಗಳ ಪರಿಚಯ, ಸಂತಾನ ಸುಖ. ಉದ್ಯೋಗದಲ್ಲಿ ಸಂಬಳ ಹೆಚ್ಚಳ. ಹೊಸ ಉದ್ಯಮ ಆರಂಭಕ್ಕೆ ಹಣಕಾಸಿನ ನೆರವು ಸಿಗಲಿದೆ. ಪ್ರೇಮ ವಿವಾಹಕ್ಕೆ ಹಸಿರು ನಿಶಾನೆ. ವಿದ್ಯಾಭ್ಯಾಸದಲ್ಲಿ ಅತ್ಯುತ್ತಮ ಪ್ರಗತಿ, ಅಂಕಗಳು ವೃದ್ಧಿ. ಹೂಡಿಕೆಗಳಿಂದ ಅಧಿಕ ಲಾಭ. ಹಳೆಯ ಬಾಕಿ ವಸೂಲಿಯಾಗಲಿದ್ದು, ಸಾಲ ತೀರಿಸುವಿರಿ. ಪ್ರವಾಸೋದ್ಯಮ ಅಥವಾ ವ್ಯಾಪಾರದ ನಿಮಿತ್ತ ವಿದೇಶ ಯೋಗವಿದೆ.

​ತುಲಾ ರಾಶಿ:

​ಕೀರ್ತಿ, ಸೌಕರ್ಯಗಳ ಹೆಚ್ಚಳ, ತಾಯಿಯಿಂದ ಬೆಂಬಲ. ವೃತ್ತಿರಂಗದಲ್ಲಿ ದೊಡ್ಡ ಯಶಸ್ಸು, ಹೊಸ ಉದ್ಯಮ ಆರಂಭಕ್ಕೆ ಅತ್ಯಂತ ಸುಸಮಯ. ಉದ್ಯೋಗಸ್ಥ ಸಂಗಾತಿಯ ಭೇಟಿ. ತಾಂತ್ರಿಕ ಹಾಗೂ ನಿರ್ವಹಣಾ ಶಿಕ್ಷಣದಲ್ಲಿ ಯಶಸ್ಸು. ಸ್ಥಿರಾಸ್ತಿ ಖರೀದಿ ಮತ್ತು ಒಪ್ಪಂದದ ಹೂಡಿಕೆ ಸೂಕ್ತ. ಸುಲಭವಾಗಿ ಸಾಲ ಮಂಜೂರಾತಿ. ಅಧಿಕೃತ ವೃತ್ತಿಪರ ವಿದೇಶ ಪ್ರವಾಸಗಳು ಯಶಸ್ವಿಯಾಗಲಿವೆ.

​ವೃಶ್ಚಿಕ ರಾಶಿ:

ನಿಮಗೆ ಪಿತೃಾರ್ಜಿತ ಆಸ್ತಿಯಿಂದ ಲಾಭ, ಅದೃಷ್ಟದ ಬೆಂಬಲ, ಧಾರ್ಮಿಕ ಒಲವು. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಾವಕಾಶ. ಜ್ಞಾನ ಆಧಾರಿತ ಉದ್ಯಮಗಳು ಲಾಭ ತರಲಿವೆ. ಯೋಗ್ಯ ಸಂಗಾತಿ ಸಿಗಲಿದ್ದಾರೆ. ಉನ್ನತ ಶಿಕ್ಷಣ, ಸಂಶೋಧನಾ ವಿದ್ಯಾರ್ಥಿಗಳಿಗೆ ಸುವರ್ಣ ಕಾಲ. ದೀರ್ಘಕಾಲೀನ ಶೇರು ಹೂಡಿಕೆಯಿಂದ ಭಾರಿ ಲಾಭ. ಸಾಲದ ಸಮಸ್ಯೆಗಳು ಬಗೆಹರಿಯಲಿವೆ. ಉನ್ನತ ವ್ಯಾಸಂಗಕ್ಕಾಗಿ ಕೈಗೊಳ್ಳುವ ವಿದೇಶ ಪ್ರಯಾಣ ಅತ್ಯಂತ ಯಶಸ್ವಿ.

ಧನು ರಾಶಿ:

​ರಹಸ್ಯ ವಿಜ್ಞಾನದಲ್ಲಿ ಆಸಕ್ತಿ, ಹಠಾತ್ ಧನಲಾಭ, ಆರೋಗ್ಯದಲ್ಲಿ ಜಾಗ್ರತೆ ಅಗತ್ಯ. ಉದ್ಯೋಗದಲ್ಲಿ ಸವಾಲುಗಳಿದ್ದರೂ ಜಯ. ಜಂಟಿ ಉದ್ಯಮ ಆರಂಭಿಸಲು ಯೋಚಿಸಿ ಮುನ್ನಡೆಯಿರಿ. ವಿವಾಹ ಯತ್ನಗಳಲ್ಲಿ ವಿಳಂಬ ಸಾಧ್ಯತೆ. ಕಠಿಣ ಪರಿಶ್ರಮದಿಂದ ಮಾತ್ರ ವಿದ್ಯಾರ್ಥಿಗಳಿಗೆ ಜಯ. ಲಾಟರಿ, ವಿಮೆ ಮೂಲಕ ಲಾಭ. ಸಾಲ ಮಾಡುವುದನ್ನು ಸದ್ಯಕ್ಕೆ ತಡೆಯಿರಿ. ಅನಿರೀಕ್ಷಿತ ವಿದೇಶಿ ಪ್ರಯಾಣದ ಯೋಗ ಎದುರಾಗಬಹುದು.

ಇದನ್ನೂ ಓದಿ: ಕೇತುವಿನ ಮೇಲಿದೆ ಕುಜನ ದೃಷ್ಟಿ: ಯಾರಿಗೆ ಒಲಿಯಲಿದೆ ಪೂರ್ಣ ರಾಜಯೋಗ? ಯಾರಿಗೆ ಧನಲಾಭ?

ಮಕರ ರಾಶಿ:

​ನಿಮ್ಮ ದಾಂಪತ್ಯದಲ್ಲಿ ಮಧುರತೆ, ಸಾಮಾಜಿಕವಾಗಿ ಜನಪ್ರಿಯತೆ ಹೆಚ್ಚಳ. ಹೊಸ ಪಾಲುದಾರಿಕೆ ಉದ್ಯಮಕ್ಕೆ ಅತ್ಯುತ್ತಮ ಸಮಯ. ವೃತ್ತಿಯಲ್ಲಿ ಪ್ರಗತಿ ಮತ್ತು ಕೀರ್ತಿ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ವಿದ್ವತ್ ಪೂರ್ಣ ಶಿಕ್ಷಣ, ಭಾಷಾ ಅಧ್ಯಯನದಲ್ಲಿ ಪ್ರಗತಿ. ಉದ್ಯಮ ವಿಸ್ತರಣೆಗೆ ಮಾಡುವ ಹೂಡಿಕೆ ಲಾಭದಾಯಕ. ಆರ್ಥಿಕ ಸಹಾಯ ಸುಲಭವಾಗಿ ಸಿಗಲಿದೆ. ಸಂಗಾತಿಯೊಂದಿಗೆ ವಿದೇಶ ಪ್ರಯಾಣ ಸಾಧ್ಯ.

​ಕುಂಭ ರಾಶಿ:

​ಶತ್ರುನಾಶ, ನ್ಯಾಯಾಲಯ ಹಾಗೂ ಕಚೇರಿ ಕೆಲಸಗಳಲ್ಲಿ ವಿಜಯ, ಆರೋಗ್ಯ ಸುಧಾರಣೆ. ಬ್ಯಾಂಕಿಂಗ್, ಕಾನೂನು ರಂಗದ ಉದ್ಯೋಗಿಗಳಿಗೆ ಬಡ್ತಿ. ಸೇವಾ ವಲಯದ ಉದ್ಯಮ ಲಾಭದಾಯಕ. ವಿವಾಹ ಸಂಬಂಧಗಳು ಅಂತಿಮ ಹಂತ ತಲುಪಲು ಶ್ರಮಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಗ್ರ ಸ್ಥಾನ. ಹೊಸ ಸಾಲ ಸಿಗಲಿದೆ, ಆದರೆ ಹೂಡಿಕೆಗಳನ್ನು ತಜ್ಞರ ಸಲಹೆಯ ಮೇರೆಗೆ ಮಾಡಿ.

​ಮೀನ ರಾಶಿ:

​ಪೂರ್ವಪುಣ್ಯದ ಬಲ, ಸಂತಾನ ಭಾಗ್ಯ, ಸೃಜನಶೀಲತೆ ವೃದ್ಧಿ. ​ಕಲೆ, ಸಮಾಲೋಚನೆ ಉದ್ಯಮದಲ್ಲಿ ಪ್ರಗತಿ. ಉದ್ಯೋಗ ಬದಲಾವಣೆಗೆ ಸಕಾಲ. ಪ್ರೇಮ ಸಾಫಲ್ಯ, ವಿವಾಹ ನಿಶ್ಚಯ. ವಿದ್ಯಾರ್ಥಿಗಳಿಗೆ ಅಪಾರ ಜ್ಞಾನಾರ್ಜನೆ, ಸಹಾಯಧನದ ಯೋಗ. ಷೇರು ಮಾರುಕಟ್ಟೆ ಹಾಗೂ ಸಟ್ಟಾ ವ್ಯಾಪಾರದಿಂದ ಲಾಭ. ಸಾಲ ಮುಕ್ತ ಜೀವನದತ್ತ ಹೆಜ್ಜೆ. ಸಾಂಸ್ಕೃತಿಕ ಅಥವಾ ಶೈಕ್ಷಣಿಕ ಕಾರಣಗಳಿಗಾಗಿ ವಿದೇಶ ಪ್ರಯಾಣ ಯಶಸ್ವಿಯಾಗಲಿದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ: 

Source link

ದರೋಡೆ ಪ್ರಕರಣ: ಇನ್​​ಸ್ಪೆಕ್ಟರ್​​ ಮಹೇಶ್ ಕನಕಗಿರಿಗೆ ನ್ಯಾಯಾಂಗ ಬಂಧನ; ಸವಾಲಾದ ವಿಚಾರಣೆ – Kannada News | Bengaluru Cop Robbery Case: Investigating Inspector Mahesh Kanakagiri Poses Huge Challenge as Accused Trade Blames

ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿಗೆ ನ್ಯಾಯಾಂಗ ಬಂಧನImage Credit source: Tv9 Kannada

ಬೆಂಗಳೂರು, ಜೂನ್​​ 21: ಕೇರಳ ಮೂಲದ ಉದ್ಯಮಿಯೊಬ್ಬರಿಂದ 20 ಲಕ್ಷ ರೂಪಾಯಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇನ್​​ಸ್ಪೆಕ್ಟರ್ ಮಹೇಶ್ ಕನಕಗಿರಿ ಅವರನ್ನು ಬಂಧಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್​​ಸ್ಪೆಕ್ಟರ್ ಮಹೇಶ್ ಕನಕಗಿರಿ ಸೇರಿದಂತೆ ಒಟ್ಟು ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕುಪೇಂದ್ರ ರೆಡ್ಡಿ ಮತ್ತು ವಸಂತ್ ಕುಮಾರ್ ಬಂಧಿತ ಇತರ ಆರೋಪಿಗಳಾಗಿದ್ದು, ಅವರನ್ನು ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ತನಗೇನೂ ಗೊತ್ತಿಲ್ಲ ಎನ್ನುತ್ತಿರುವ ಇನ್​​ಸ್ಪೆಕ್ಟರ್ !

ಇನ್ನು ಪ್ರಕರಣ ಸಂಬಂಧ ಮಡಿವಾಳ ಪೊಲೀಸರ ತನಿಖೆ ವೇಳೆ ನನಗೇನು ಗೊತ್ತಿಲ್ಲ. ಕುಪೇಂದ್ರ ರೆಡ್ಡಿ ಪರಿಚಯ. ಹೀಗಾಗಿ ಜೊತೇಲಿ ಹೋಗಿದ್ದೇ ಅಷ್ಟೇ ಎಂದು ಇನ್​​ಸ್ಪೆಕ್ಟರ್ ಮಹೇಶ್ ಕನಕಗಿರಿ ಹೇಳಿದ್ದಾರಂತೆ. ರಾಬರಿ ವಿಚಾರ ತನಗೆ ಗೊತ್ತೇ ಇಲ್ಲ. ನೀವು ಬಂದು ಹೇಳಿದಾಗಲೇ ಆ ಬಗ್ಗೆ ತನಗೆ ಗೊತ್ತಾಗಿದೆ ಎಂದು ಮಹೇಶ್ ತಿಳಿಸಿದ್ದಾರೆ. ಐಡಿ ಕಾರ್ಡ್ ಬಗ್ಗೆ ಕೇಳಿದ್ರೆ ವಾಹನದ ಡ್ಯಾಶ್ ಬೋರ್ಡ್​​ನಲ್ಲಿ ಅದನ್ನು ಇಟ್ಟಿದ್ದೆ. ನನ್ನ ಗಮನಕ್ಕೆ ಬಾರದೆ ಅದನ್ನು ತೆಗೆದುಕೊಂಡು ಮಿಸ್ ಯೂಸ್ ಮಾಡಲಾಗಿದೆ. ಐಡಿ ಮಿಸ್ ಯೂಸ್ ಮಾಡಿದ್ದಾರೆ ಎಂಬ ಬಗ್ಗೆ ಬೇಕಿದ್ದರೆ ನಾನು ದೂರು ಕೊಡ್ತೀನಿ ಎಂದು ಹೇಳಿದ್ದಾರಂತೆ.

ಇದನ್ನೂ ಓದಿ: ಪೊಲೀಸ್ ಜೀಪ್‌ನಲ್ಲೇ ಬಂದು ದರೋಡೆ! ಕೇರಳ ಉದ್ಯಮಿಗಳಿಗೆ 20 ಲಕ್ಷ ರೂ. ಪಂಗನಾಮ ಹಾಕಿದ ಸಿಐಡಿ ಇನ್ಸ್‌ಪೆಕ್ಟರ್

ಆದರೆ ಉಳಿದ ಆರೋಪಿಗಳು ಮಾತ್ರ ವಿಚಾರಣೆ ವೇಳೆ ಇನ್​​ಸ್ಪೆಕ್ಟರ್ ಕಡೆಗೇ ಬೆರಳು ತೋರಿಸಿದ್ದಾರೆ. ಅವರಿಗೆ ಎಲ್ಲ ಗೊತ್ತು. ಅವರು ಹೇಳಿದಂತೆ ಮಾಡಿದ್ದೇವೆ ಎನ್ನುತ್ತಿದ್ದಾರೆ. ಹೀಗಾಗಿ ಸದ್ಯ  ಮಹೇಶ್ ಕನಕಗಿರಿ ವಿಚಾರಣೆಯೇ ಚಾಲೆಂಜ್ ಆಗಿದ್ದು, ಅವರ ಮೊಬೈಲ್ ಸೀಜ್ ಮಾಡಿ ಖಾಕಿ ತನಿಖೆಗೆ ಮುಂದಾಗಿದೆ. ರಾಬರಿ ಬಗ್ಗೆ ಏನಾದ್ರೂ ಚಾಟಿಂಗ್, ಕರೆ ಮಾಡಿದ್ದಾರಾ ಎಂದು ಪರಿಶೀಲಿಸಲಾಗಿದೆ. ಈ ವೇಳೆ ಕುಪೇಂದ್ರ ರೆಡ್ಡಿ ಜೊತೆ ನಿರಂತರ ಸಂಪರ್ಕದಲ್ಲಿ ಇರೋದು ಬಯಲಾಗಿದೆ ಎನ್ನಲಾಗಿದೆ. ಉಳಿದಂತೆ ಹೋಟೆಲ್ ಸಿಸಿಟಿವಿ ಸೇರಿದಂತೆ ಹಲವು ತಾಂತ್ರಿಕ ಸಾಕ್ಷಗಳ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದು, ಮಹೇಶ್ ಕನಕಗಿರಿ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲು ಡಿಸಿಪಿ ಸುಜಿತಾಗೆ ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಪ್ರಕರಣದ ಆರೋಪಿ ಶಫಿ ಮೇಲೆ ರಾಬರಿ ಕೇಸ್​​ಗಳು ಇರುವ ಕಾರಣ, ಅವುಗಳಿಗೂ ಇನ್​​ಸ್ಪೆಕ್ಟರ್​​ಗೂ ಏನಾದ್ರೂ ಲಿಂಕ್ ಇದೆಯಾ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗ್ತಿದೆ. ನಾಪತ್ತೆಯಾಗಿರೋ ಶಫಿಗಾಗಿ ಹುಡುಕಾಟವೂ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:28 am, Sun, 21 June 26

Source link

ಅಂದುಕೊಂಡಂತೆಯೇ ‘ಪಳಾರ್’ ಆದ ಗಿಲ್ಲಿ ನಟ; ಹೊಸ ಸಿನಿಮಾಗೆ ಇದೇ ಟೈಟಲ್ – Kannada News | Bigg Boss Gilli Nata new movie as hero titled Palar Muhurtha on his birthday KVN Productions Films

ಜನಪ್ರಿಯ ಹಾಸ್ಯ ಕಲಾವಿದ ಗಿಲ್ಲಿ ನಟ (Gilli Nata) ಅವರು ಈಗ ಸಿನಿಮಾ ಹೀರೋ ಆಗಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ವಿನ್ನರ್ ಆದ ಅವರಿಗೆ ಸಾಲು ಸಾಲು ಸಿನಿಮಾ ಆಫರ್​ಗಳು ಬರುತ್ತಿವೆ. ಕೆಲವೇ ದಿನಗಳ ಹಿಂದೆ ಅವರು ಪ್ರತಿಷ್ಠಿತ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಜೊತೆ ಕೈ ಜೋಡಿಸಿರುವ ಸುದ್ದಿ ಹೊರಬಿದ್ದಿತ್ತು. ಈಗ ಆ ಸಿನಿಮಾಗೆ ಶೀರ್ಷಿಕೆ ಏನು ಎಂಬುದು ಗೊತ್ತಾಗಿದೆ. ಈ ಚಿತ್ರಕ್ಕೆ ‘ಪಳಾರ್’ (Palar) ಎಂದು ಟೈಟಲ್ ಇಡಲಾಗಿದೆ. ಇದು ಗಿಲ್ಲಿ ನಟ ಅವರ ನೆಚ್ಚಿನ ಟೈಟಲ್. ಬಿಗ್ ಬಾಸ್ ಮನೆಯೊಳಗೆ ಇದ್ದಾಗಲೇ ಅವರು ಈ ಬಗ್ಗೆ ಹೇಳಿಕೊಂಡಿದ್ದರು.

ತಮ್ಮನ್ನು ಎಲ್ಲರೂ ‘ಪಳಾರ್ ಗಿಲ್ಲಿ’ ಅಂತ ಕರೆಯಬೇಕು ಎಂಬ ಆಸೆ ಗಿಲ್ಲಿ ನಟ ಅವರಿಗೆ ಇತ್ತು. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಅಂತಿಮ ಹಂತ ತಲುಪುತ್ತಿರುವ ಸಂದರ್ಭದಲ್ಲಿ ಅವರು ಈ ಕುರಿತು ಮಾತನಾಡಿದ್ದರು. ಈಗ ಅವರು ಹೀರೋ ಆಗಿ ನಟಿಸುತ್ತಿರುವ ಮೊದಲ ಸಿನಿಮಾಗೆ ‘ಪಳಾರ್’ ಎಂದೇ ಶೀರ್ಷಿಕೆ ಇಡಲಾಗಿದೆ.

‘ಕೆವಿಎನ್ ಪ್ರೊಡಕ್ಷನ್ಸ್’ನ ಕಾರ್ಯಕಾರಿ ನಿರ್ಮಾಪಕರಾದ ನವೀನ್ ಮತ್ತು ಹರೀಶ್ ಅವರು ಚೊಚ್ಚಲ ಬಾರಿಗೆ ‘ಪಳಾರ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ಅರ್ಪಿಸುತ್ತಿದೆ. ಚಿತ್ರಕ್ಕೆ ತಮ್ಮ ಬೆಂಬಲ ಸದಾ ಇರುತ್ತದೆ ಎಂದು ‘ಕೆವಿಎನ್’ ಸಂಸ್ಥೆಯ ಕೆ. ವೆಂಕಟ ನಾರಾಯಣ ಅವರು ಈಗಾಗಲೇ ತಿಳಿಸಿದ್ದಾರೆ.

ವಿಶೇಷ ಏನೆಂದರೆ, ಗಿಲ್ಲಿ ನಟ ಅವರ ಹುಟ್ಟುಹಬ್ಬದ ದಿನವೇ ‘ಪಳಾರ್’ ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ಹೌದು, ಇಂದು (ಜೂನ್ 21) ಗಿಲ್ಲಿ ನಟ ಅವರಿಗೆ ಜನ್ಮದಿನದ ಸಂಭ್ರಮ. ಈ ಪ್ರಯುಕ್ತ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಈ ವೇಳೆ ಕೇಕ್ ಕತ್ತರಿಸಿ ಗಿಲ್ಲಿ ನಟ ಅವರಿಗೆ ಹುಟ್ಟುಹಬ್ಬದ ಶುಭ ಕೋರಲಾಯಿತು.

ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಗಿಲ್ಲಿ ನಟನ ಹೊಸ ಸಿನಿಮಾ ‘ಸರ್ವೇ ನಂಬರ್ 45’

ನವೀನ್ ಮತ್ತು ಹರೀಶ್ ಅವರು ‘ರಾಶಿ ಫಿಲ್ಮ್ಸ್’ ಮೂಲಕ ‘ಪಳಾರ್’ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಚಂದ್ರಮೋಹನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆಯುತ್ತಿದೆ. ಪಂಚೆ-ಶರ್ಟ್ ಧರಿಸಿ ಗಿಲ್ಲಿ ನಟ ಅವರು ಕಾಣಿಸಿಕೊಂಡಿದ್ದಾರೆ. ಇದನ್ನು ‘ಪ್ಯಾನ್ ಕರ್ನಾಟಕ ಮೂವೀ’ ಎಂದು ಕರೆಯಲಾಗಿದೆ. ಅದರ ಹಿಂದೆಯೂ ತಮಾಷೆ ಅಡಗಿದೆ. ಅದೇನು ಎಂಬುದನ್ನು ಈಗಾಗಲೇ ಸಿನಿಮಾ ಅನೌನ್ಸ್​ಮೆಂಟ್ ಪ್ರೋಮೋದಲ್ಲಿ ಗಿಲ್ಲಿ ನಟ ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

13 ಸಿಕ್ಸ್, 11 ಫೋರ್​: ರೆಕಾರ್ಡ್ ಬ್ರೇಕಿಂಗ್ ಸೆಂಚುರಿ ಸಿಡಿಸಿದ ಮಿಚೆಲ್ ಓವನ್

Source link

ನೀಟ್ ಮರು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿಡಿಯೋ ನಕಲಿ, ವದಂತಿಗಳಿಗೆ ಕಿವಿಗೊಡಬೇಡಿ ಎಂದ ಎನ್​ಟಿಎ – Kannada News | NEET Re exam Paper Leak: NTA Confirms Fake Video, Dismisses Rumors; Focus on Exam

ನವದೆಹಲಿ, ಜೂನ್ 21: ನೀಟ್-ಯುಜಿ (NEET-UG)2026 ಮರು ಪರೀಕ್ಷೆಯ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳ ದಾರಿ ತಪ್ಪಿಸುವ ದೊಡ್ಡ ಜಾಲವೊಂದು ಸಕ್ರಿಯವಾಗಿದೆ. ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸೋಶಿಯಲ್ ಮೀಡಿಯಾಗಳಲ್ಲಿ ನೀಟ್ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ನಕಲಿ ವಿಡಿಯೋ ಹಾಗೂ ಫೋಟೋಗಳನ್ನು ಹಾಕಿ ಕಿಡಿಗೇಡಿಗಳು ವೈರಲ್ ಮಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಹತ್ವದ ಎಚ್ಚರಿಕೆಯನ್ನು ನೀಡಿದ್ದು, ಇಂತಹ ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೊಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪರೀಕ್ಷೆಯ ಒತ್ತಡದಲ್ಲಿರುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು, ಕಿಡಿಗೇಡಿಗಳು ಎಡಿಟ್ ಮಾಡಿದ ನಕಲಿ ಪ್ರಶ್ನೆ ಪತ್ರಿಕೆಯ ಫೋಟೋ ಹಾಗೂ ವಿಡಿಯೋಗಳನ್ನು ಇಂಟರ್ನೆಟ್‌ನಲ್ಲಿ ಹರಿಬಿಡುತ್ತಿದ್ದಾರೆ.

ಲಕ್ಷಾಂತರ ವಿದ್ಯಾರ್ಥಿಗಳ ಗಮನವನ್ನು ಬೇರೆಡೆ ಸೆಳೆದು, ಅವರಲ್ಲಿ ಆತಂಕ ಮೂಡಿಸುವ ಸಲುವಾಗಿ ಇಂತಹ ಸುಳ್ಳು ಸುದ್ದಿಗಳನ್ನು ವ್ಯವಸ್ಥಿತವಾಗಿ ಹರಡಲಾಗುತ್ತಿದೆ. ಇಂಟರ್ನೆಟ್‌ನಲ್ಲಿ ಸಿಗುವ ಇಂತಹ ಹರಿದಾಡುವ ಅನಾಮಧೇಯ ಪೋಸ್ಟ್‌ಗಳನ್ನು ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ನಂಬಬಾರದು. ಪರೀಕ್ಷೆಗೆ ಸಂಬಂಧಿಸಿದ ಅಧಿಕೃತ ಮತ್ತು ನಿಖರ ಮಾಹಿತಿಗಾಗಿ ಕೇವಲ ಎನ್‌ಟಿಎ (NTA) ಅಧಿಕೃತ ವೆಬ್‌ಸೈಟ್ ಅನ್ನು ಮಾತ್ರ ಪರಿಶೀಲಿಸಬೇಕು.

ಮತ್ತಷ್ಟು ಓದಿ: ದೇಶಾದ್ಯಂತ ನೀಟ್-ಯುಜಿ ಮರು ಪರೀಕ್ಷೆ, ಎಲ್ಲೆಲ್ಲೂ ಭದ್ರತೆ, ಸಕಲ ಸಿದ್ಧತೆ

ನೀಟ್ ಪರೀಕ್ಷೆಯ ಪಾರದರ್ಶಕತೆಗಾಗಿ ಈಗಾಗಲೇ ಸರ್ಕಾರ ಟೆಲಿಗ್ರಾಮ್‌ನಂತಹ ಆ್ಯಪ್‌ಗಳ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿ ಕಠಿಣ ಕ್ರಮ ಕೈಗೊಂಡಿದೆ. ಹೀಗಾಗಿ ವಿದ್ಯಾರ್ಥಿಗಳು ಇಂತಹ ವದಂತಿಗಳಿಗೆ ತಲೆಕೆಡಿಸಿಕೊಳ್ಳದೆ, ಧೃತಿಗೆಡದೆ ತಮ್ಮ ಪರೀಕ್ಷೆಯ ಕಡೆಗೆ ಮಾತ್ರ ಗಮನ ಹರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

BengaluruPower Cut: ಬೆಂಗಳೂರಿನಲ್ಲಿ ಜೂನ್ 22 ಮತ್ತು 23ರಂದು ವಿದ್ಯುತ್ ಕಡಿತ: ಯಾವೆಲ್ಲಾ ಪ್ರದೇಶಗಳಲ್ಲಿ ಪವರ್ ಕಟ್? ಇಲ್ಲಿದೆ ಮಾಹಿತಿ – Kannada News | Bengaluru Power Shutdown: Power Outage in Core Areas on June 22 and 23, Check Full List of Affected Localities

ಬೆಂಗಳೂರು, ಜೂನ್ 21: ನಗರದ ಹಲವು ಭಾಗಗಳಲ್ಲಿ ಜೂನ್ 22 (ಸೋಮವಾರ) ಮತ್ತು ಜೂನ್ 23ರಂದು (ಮಂಗಳವಾರ) ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ (Power Cut) ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ನಿಯಮಿತ ನಿರ್ವಹಣಾ ಕಾಮಗಾರಿಗಳ ಕಾರಣದಿಂದಾಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಇರಲಿದೆ.

ಮುಖ್ಯಾಂಶಗಳು

  • ಜೂನ್ 22 ಮತ್ತು 23 ರಂದು ಬೆಂಗಳೂರಿನ ಪ್ರಮುಖ ವಲಯಗಳಲ್ಲಿ ಪವರ್ ಕಟ್.
  • ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ.
  • ಹೆಸರಘಟ್ಟ ಮತ್ತು ಸೋಲದೇವನಹಳ್ಳಿ ಭಾಗದಲ್ಲಿ ಸೋಮವಾರದಿಂದ ಮಂಗಳವಾರದವರೆಗೆ ದೀರ್ಘಾವಧಿ ಕಡಿತ.

ಸೋಮವಾರ ಬೆಳಿಗ್ಗೆ 9 ರಿಂದ ಮಂಗಳವಾರ ರಾತ್ರಿ 8ರವರೆ ಎಲ್ಲೆಲ್ಲಿ ವಿದ್ಯುತ್ ಕಡಿತ?

ಸೋಲದೇವನಹಳ್ಳಿ-ಹೆಸರಘಟ್ಟ ಸುತ್ತಮುತ್ತಲಿನ ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಟಿ.ಬಿ. ಕ್ರಾಸ್, ಹೆಸರಘಟ್ಟ, ಬಿಲಿಜಾಜಿ ದ್ವಾರಕಾನಗರ, ಚಿಕ್ಕಬಾಣಾವರ, ಮಾರುತಿ ನಗರ, ಗಣಪತಿ ನಗರ, ಬ್ರದರ್ಸ್ ಕಾಲೋನಿ, ಕೃಷ್ಣ ಕಾಲೇಜು ರಸ್ತೆ, ರಾಘವೇಂದ್ರ ಲೇಔಟ್, ಸಾಸುವೆಘಟ್ಟ, ಶಿವಕುಮಾರಸ್ವಾಮೀಜಿ ಲೇಔಟ್, ಸಿಡಿಪಿಒ, ಡ್ಯಾನಿಶ್ ಫಾರ್ಮ್, ಕೆಎಂಎಫ್, ಪಶುಸಂಗೋಪನೆ ಇಲಾಖೆ, ಗುನಿಯಾಗ್ರಹಾರ, ಮೇಡಿಯಾಗ್ರಹಾರ, ರಾಜ್ಯ ಮೀನುಗಾರಿಕೆ ಕ್ಷೇತ್ರ, ಶಿವಕೋಟೆ ಗ್ರಾಮ, ಮಾವಳ್ಳಿಪುರ, ಕೊಂಡಶೆಟ್ಟಿಹಳ್ಳಿ, ಬ್ಯಾಲಕೆರೆ, ಆಚಾರ್ಯ ಕಾಲೇಜು ಮುಖ್ಯ ರಸ್ತೆ, ಸೋಲದೇವನಹಳ್ಳಿ, ಗಾಣಿಗರಹಳ್ಳಿ, ಸೋಮಶೆಟ್ಟಿಹಳ್ಳಿ, ದಾಸೇನಹಳ್ಳಿ, ಗುಡ್ಡದಹಳ್ಳಿ, ಹೊಸಹಳ್ಳಿ ಪಾಳ್ಯ.

ಸೋಮವಾರ ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು

  • ಔಟರ್ ರಿಂಗ್ ರೋಡ್ (ORR) ಸುತ್ತಮುತ್ತ: ಸೆಸ್ನಾ ಬಿಸಿನೆಸ್ ಪಾರ್ಕ್, ಹೊರವರ್ತುಲ ರಸ್ತೆ, ಎಕ್ಸೋರಾ ಬಿಸಿನೆಸ್ ಪಾರ್ಕ್, ಶೋಭಾ ಅಪಾರ್ಟ್‌ಮೆಂಟ್ಸ್, ವಿಕಾಸ್ ಟೆಲಿಕಾಂ, ಐಬಿಸ್ ಹೋಟೆಲ್ ಮತ್ತು ತಕ್ಷಶಿಲಾ ಹೆಲ್ತ್‌ಕೇರ್.
  • ಪೂರ್ವ ವಲಯ: ಶೋಭಾ ಕ್ರಿಸಾಂಥಿಮಮ್, ಎಲ್‌ಆರ್‌ಪಿ ಕಚೇರಿ, ಜಯಕುಮಾರ್ ಆರ್‌ಎಂಯು, ದಿವ್ಯ ಶಾಂತಿ, ಗೋವಿಂದಪುರ, ಕಾರ್ಲೆ, ಬೃಂದಾವನ ನಗರ, ಟೈಟಾನ್ ಗ್ಯಾರೇಜ್, ಗಾಂಧಿನಗರ, ಭೈರವಿ ಅಪಾರ್ಟ್‌ಮೆಂಟ್ಸ್, ಹೆಗ್ಡೆ ನಗರ, ಚಂದ್ರಿಕಾ ಸೋಪ್ ಫ್ಯಾಕ್ಟರಿ, ಬಿಎಂಟಿಸಿ ಡಿಪೋ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
  • ಕೇಂದ್ರ ವಲಯ: ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಮ್ಯೂಸಿಯಂ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಹೇಸ್ ರಸ್ತೆ, ಕಾನ್ವೆಂಟ್ ರಸ್ತೆ, ರೆಸಿಡೆನ್ಸಿ ರಸ್ತೆ, ಕ್ರೆಸೆಂಟ್ ರಸ್ತೆ, ಸಾಯಿಬಾಬಾ ದೇವಸ್ಥಾನ ರಸ್ತೆ, ಜೀವನ್‌ಕೇಂದ್ರ ಲೇಔಟ್, ಕೇಂಬ್ರಿಡ್ಜ್ ಲೇಔಟ್, ಗೌತಮಪುರ, ಆರ್ಟಿಲರಿ ರಸ್ತೆ, ಹೌದಿನ್ ರಸ್ತೆ, ಎಂವಿ ಗಾರ್ಡನ್, ನಾಲಾ ರಸ್ತೆ, ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್, ಜೋಗುಪಾಳ್ಯ ಮುಖ್ಯ ರಸ್ತೆ, ಗಂಗಾಧರ ಚೆಟ್ಟಿ ರಸ್ತೆ, ಅಗಾ ಅಬ್ಬಾಸ್ ಅಲಿ ರಸ್ತೆ.
  • ದಕ್ಷಿಣ ವಲಯ: ಅಂಜನಾಪುರ, ಆವಲಹಳ್ಳಿ, ರಾಘವನಪಾಳ್ಯ, ನಾಗೇಗೌಡನ ಪಾಳ್ಯ, ಶೋಭಾ ಅಪಾರ್ಟ್‌ಮೆಂಟ್, ನಾರಾಯಣನಗರ 1 ಮತ್ತು 2ನೇ ಬ್ಲಾಕ್, ದೀಕ್ಷಾ ಕಾಲೇಜು, ಕೆಎಸ್‌ಐಟಿ ಕಾಲೇಜು, ಅಂಜನಾಪುರ 8ನೇ ಬ್ಲಾಕ್, ವೀವರ್ಸ್ ಕಾಲೇಜು, ಪುರಾವಂಕರ ಅಪಾರ್ಟ್‌ಮೆಂಟ್, ಅಮೃತನಗರ, ವಡ್ಡರಪಾಳ್ಯ, ಕೆಂಬತ್ತಹಳ್ಳಿ, ಶೋಭಾ ಫಾರೆಸ್ಟ್ ಅಪಾರ್ಟ್‌ಮೆಂಟ್, ತಲಘಟ್ಟಪುರ.
  • ಪಶ್ಚಿಮ ವಲಯ: ಮಲ್ಲೇಶ್ವರಂ, ವೈಯಾಲಿಕಾವಲ್, ಕೋದಂಡರಾಮಪುರ, ಬಿಎಚ್‌ಇಎಲ್, ಐಐಎಸ್‌ಸಿ ಬ್ರೈನ್ ಸೆಂಟರ್, ಅಂಬೇಡ್ಕರ್ ನಗರ, ಸುಬೇದಾರ್ ಪಾಳ್ಯ, ದಿವಾನರ ಪಾಳ್ಯ, ಮಾಡೆಲ್ ಕಾಲೋನಿ, ಶರೀಫ್ ನಗರ, ರಂಗನಾಥಪುರ, ಎಲ್.ಎನ್. ಕಾಲೋನಿ, ಲೊಟ್ಟೆಗೊಲ್ಲಹಳ್ಳಿ, ಆರ್.ಕೆ. ಗಾರ್ಡನ್, ಎಂಎಲ್‌ಎ ಲೇಔಟ್, ನೇತಾಜಿ ನಗರ, ಪೈಪ್‌ಲೈನ್ ರಸ್ತೆ, ಮತ್ತಿಕೆರೆ 1 ರಿಂದ 10 ನೇ ಮುಖ್ಯ ರಸ್ತೆ, ಮೋಹನ್ ಕುಮಾರ್ ನಗರ, ಜೆ.ಪಿ. ಪಾರ್ಕ್, ಅಕ್ಕಯ್ಯಪ್ಪ ಗಾರ್ಡನ್, ಬಿ.ಕೆ. ನಗರ, ಎಲ್‌ಐಸಿ ಕಾಲೋನಿ, ಪಂಪಾ ನಗರ, ಯಶವಂತಪುರ 1ನೇ ಮುಖ್ಯ ರಸ್ತೆ, ಎಚ್‌ಎಂಟಿ ಲೇಔಟ್, ಗೋಕುಲ 1ನೇ ಹಂತ, ಎಚ್‌ಎಂಟಿ ಮುಖ್ಯ ರಸ್ತೆ, ಎಸ್‌ಬಿಎಂ ಕಾಲೋನಿ, ಸಂಜೀವಪ್ಪ ಕಾಲೋನಿ.

ಮಂಗಳವಾರ ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು

ಕೋರಮಂಗಲ ಸುತ್ತಮುತ್ತ: ಕೋರಮಂಗಲ 3, 4, 5 ಮತ್ತು 6 ನೇ ಬ್ಲಾಕ್, ಕೋರಮಂಗಲ ಕೈಗಾರಿಕಾ ಪ್ರದೇಶ, ಮಡಿವಾಳ, ವೆಂಕಟೇಶ್ವರ ಲೇಔಟ್, ಚಿಕ್ಕಡುಗೋಡಿ, ಜೋಗಿ ಕಾಲೋನಿ, ಸೇಂಟ್ ಜಾನ್ಸ್ ಆಸ್ಪತ್ರೆ ಸಿಬ್ಬಂದಿ ಕ್ವಾರ್ಟರ್ಸ್, ಮಾರುತಿನಗರ ಆಡುಗೋಡಿ 7 ಮತ್ತು 8ನೇ ಬ್ಲಾಕ್, ಸಿಎಆರ್ ಪೊಲೀಸ್ ಕ್ವಾರ್ಟರ್ಸ್, ಆಡುಗೋಡಿ ಮುಖ್ಯ ರಸ್ತೆ, ಸೇಂಟ್ ಜಾನ್ಸ್ ಆಸ್ಪತ್ರೆ, 100 ಅಡಿ ರಿಂಗ್ ರಸ್ತೆ ಒರಾಕಲ್ ಕಂಪನಿ, ಬನ್ನೇರುಘಟ್ಟ ರಸ್ತೆ, ಕೆಎಚ್‌ಬಿ ಕಾಲೋನಿ, ಭುವನಪ್ಪ ಲೇಔಟ್, ಕಾವೇರಿ ಲೇಔಟ್, ಕೃಷ್ಣಾನಗರ ಇಂಡಸ್ಟ್ರಿಯಲ್ ಲೇಔಟ್, ಎಸ್.ಜಿ. ಪಾಳ್ಯ, ಮಡಿವಾಳ ಮಾರುಕಟ್ಟೆ, ಕೋರಮಂಗಲ ವಿಸ್ತರಣೆ ಮತ್ತು ಜಕ್ಕಸಂದ್ರ ವಿಸ್ತರಣೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

World Music Day 2026: ವಿಶ್ವ ಸಂಗೀತ ದಿನವನ್ನು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ – Kannada News | World Music Day 2026: What are the history and significance of World Music Day

ಸಂಗೀತ, ಹಾಡುಗಳೆಂದರೆ ಎಲ್ಲರಿಗೂ ಇಷ್ಟನೇ. ತಮ್ಮ ಇಷ್ಟದ ಹಾಡುಗಳನ್ನು ಕೇಳಿದಾಗ ಮನಸ್ಸು ನಿರಾಳವಾಗುತ್ತದೆ. ಈ ಸಂಗೀತ ಮನಸ್ಸಿನ ಕಾಯಿಲೆಗೆ ಉತ್ತಮ ಔಷಧಿಯಾಗಿದೆ. ದಿನನಿತ್ಯ ಹಾಡುಗಳನ್ನು ಕೇಳುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಅದಲ್ಲದೇ ಈ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗೌರವಿಸುವ ಉದ್ದೇಶದಿಂದ ವಿಶ್ವ ಸಂಗೀತ ದಿನವನ್ನು (World Music Day) ಜೂನ್ 21 ರಂದು ಆಚರಿಸಲಾಗುತ್ತದೆ.

ವಿಶ್ವ ಸಂಗೀತ ದಿನದ ಇತಿಹಾಸವೇನು?

ವಿಶ್ವ ಸಂಗೀತ ದಿನದ ಆಚರಣೆಯೂ ಮೊದಲು ಶುರುವಾಗಿದ್ದು 1982 ರಲ್ಲಿ. ಫ್ರೆಂಚ್​​ ಸಾಂಸ್ಕೃತಿಕ ಸಚಿವ ಮೌರೈಸ್​ ಫ್ಲುರೆಟ್​​ ವಿಶ್ವ ಸಂಗೀತ ದಿನ ಆಚರಣೆಗೆ ಅಧಿಸೂಚನೆ ಮಂಡಿಸಿದರು. ಈ ಮಂಡನೆಯನ್ನು ಫ್ರಾನ್ಸ್​ ಸಾಂಸ್ಕೃತಿಕ ಸಚಿವರಾದ ಜಾಕ್ವೆಸ್ ಲ್ಯಾಂಗ್ 1981ರಲ್ಲಿ ಅಂಗೀಕರಿಸಲಾಯಿತು. ಇದಾದ ಒಂದು ವರ್ಷದ ಬಳಿಕ 1982 ರಲ್ಲಿ ವಿಶ್ವ ಸಂಗೀತ ದಿನದ ಆಚರಿಸುವ ಮೂಲಕ ಈ ದಿನದ ಆಚರಣೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಹೀಗಾಗಿ ಮೊಟ್ಟಮೊದಲ ಬಾರಿಗೆ ಪ್ರಾನ್ಸ್​ನಲ್ಲಿ ಜೂನ್​ 21ರಂದು ಸಂಗೀತ ದಿನವನ್ನು ಆಚರಿಸಲಾಯಿತು. ಅಂದಿನಿಂದ ವಿಶ್ವ ಸಂಗೀತ ದಿನದ ಆಚರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: ಯೋಗಾಭ್ಯಾಸ ಮಾಡಲು ಸರಿಯಾದ ಸಮಯ ಯಾವುದು? ಇದರ ಪ್ರಯೋಜನಗಳೇನು?

ವಿಶ್ವ ಸಂಗೀತ ದಿನದ ಆಚರಣೆಯ ಮಹತ್ವವೇನು?

ವಿಶ್ವ ಸಂಗೀತ ದಿನದ ಮೂಲ ಉದ್ದೇಶವೇ ಹವ್ಯಾಸಿಗಳು ಮತ್ತು ವೃತ್ತಿಪರ ಕಲಾವಿದರಿಗೆ ಸಾರ್ವಜನಿಕವಾಗಿ ಪ್ರದರ್ಶನ ನೀಡಲು ವೇದಿಕೆಯನ್ನು ಒದಗಿಸುವುದಾಗಿದೆ. ಈ ವಿಶೇಷ  ದಿನದಂದು ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಸಂಗೀತಗಾರರನ್ನು ಗೌರವಿಸಲಾಗುತ್ತದೆ. ಯುವಪೀಳಿಗೆಯನ್ನು ಸಂಗೀತ ಕಲಿಯಲು ಪ್ರೋತ್ಸಾಹಿಸಲಾಗುತ್ತದೆ. ಸಂಗೀತ ದಿನದ ಹಿನ್ನಲೆ ಸಂಗೀತ ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ. ಶಾಸ್ತ್ರೀಯ ಸಂಗೀತ, ಪ್ರಾದೇಶಿಕ ಸಂಗೀತದ ಪ್ರದರ್ಶನಗಳು, ವಿಶೇಷ ಕಾರ್ಯಾಗಾರಗಳು ಪ್ರದರ್ಶನಗಳನ್ನು ಆಯೋಜಸಲಾಗುತ್ತದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ನಿವಾಸಕ್ಕೆ ಡಿಕೆ ಶಿವಕುಮಾರ್ ಭೇಟಿ, ರಾಜಕೀಯ ವಿದ್ಯಮಾನಗಳ ಸಮಾಲೋಚನೆ – Kannada News | Karnataka CM D.K. Shivakumar Meets Uddhav Thackeray in Mumbai for Political Discussions

ಮುಂಬೈ, ಜೂನ್ 21:ಮಹಾರಾಷ್ಟ್ರ ಪ್ರವಾಸದಲ್ಲಿರುವ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂಬೈನಲ್ಲಿ ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾದರು. ನಿನ್ನೆ ರಾತ್ರಿ ಮುಂಬೈನಲ್ಲಿರುವ ಉದ್ಧವ್ ಠಾಕ್ರೆ ಅವರ ನಿವಾಸ ಮಾತೋಶ್ರೀಯಲ್ಲಿ ಈ ಮಹತ್ವದ ಭೇಟಿ ನಡೆಯಿತು.

ಡಿ.ಕೆ. ಶಿವಕುಮಾರ್ ಆಗಮಿಸುತ್ತಿದ್ದಂತೆ ಉದ್ಧವ್ ಠಾಕ್ರೆ ಅವರ ಕುಟುಂಬದ ಸದಸ್ಯರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಉಭಯ ನಾಯಕರು ಪ್ರಸ್ತುತ ರಾಜಕೀಯ ವಿದ್ಯಮಾನಗಳು ಮತ್ತು ಬೆಳವಣಿಗೆಗಳ ಕುರಿತು ಗಹನವಾದ ಸಮಾಲೋಚನೆ ನಡೆಸಿದರು ಎಂದು ತಿಳಿದುಬಂದಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳಲ್ಲಿನ ರಾಜಕೀಯ ಸ್ಥಿತ್ಯಂತರಗಳು ಹಾಗೂ ಪ್ರಾದೇಶಿಕ ಪಕ್ಷಗಳ ಪಾತ್ರದ ಹಿನ್ನೆಲೆಯಲ್ಲಿ ಈ ಭೇಟಿಯು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಡಿ.ಕೆ. ಶಿವಕುಮಾರ್ ಅವರ ಈ ಭೇಟಿಯು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮಗಳ ಬಗ್ಗೆ ಚರ್ಚೆಗಳು ಶುರುವಾಗಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಿಂದೆಂದೂ ಕಾಣದ ಅದ್ಭುತ ಆಟ: ವಿಶ್ವ ದಾಖಲೆ ಬರೆದ ಗೋಲ್ ಕೀಪರ್! – Kannada News | Curaçao GoalKeeper Eloy Room Creates New World Record in Fifa World Cup 2026

ಜೂನ್ 20, 2026 ರಂದು ಇಡೀ ಫುಟ್‌ಬಾಲ್ ಜಗತ್ತೇ ಕುರಾಸಾವೊ (Curaçao) ದ್ವೀಪ ರಾಷ್ಟ್ರದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ ಆ ದೇಶದ ಗೋಲ್‌ಕೀಪರ್ ಎಲೋಯ್ ರೂಮ್ (Eloy Room).  ಈಕ್ವೆಡಾರ್ ವಿರುದ್ಧದ ಪಂದ್ಯದಲ್ಲಿ ಎಲೋಯ್ ರೂಮ್ ಒಂದಲ್ಲ, ಎರಡಲ್ಲ, ಬರೋಬ್ಬರಿ 15 ಗೋಲು ಪ್ರಯತ್ನಗಳನ್ನು ತಡೆದು ನಿಲ್ಲಿಸಿದ್ದಾರೆ. ಈ ಮೂಲಕ 90 ನಿಮಿಷಗಳ ಅವಧಿಯಲ್ಲಿ ಅತ್ಯಧಿಕ ಗೋಲುಗಳನ್ನು ತಡೆದ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಜರ್ಮನಿ ವಿರುದ್ಧ ಅನುಭವಿಸಿದ ಹೀನಾಯ ಸೋಲಿನಿಂದ ಕಂಗೆಟ್ಟಿದ್ದ ಕುರಾಸಾವೊ ತಂಡ ಈ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದಿತ್ತು. ಆದರೆ ಈಕ್ವೆಡಾರ್ ತಂಡದ ಮುನ್ಪಡೆ ಆಟಗಾರರನ್ನು ಕಟ್ಟಿಹಾಕುವುದೇ ಕುರಾಸಾವೊ ಡಿಫೆಂಡರ್​ಗಳ ಮುಂದಿದ್ದ ದೊಡ್ಡ ಸವಾಲು.

ಈ ಸವಾಲನ್ನು ಮೆಟ್ಟಿ ನಿಲ್ಲುವ ಪ್ರಯತ್ನ ಮಾಡಿದರೂ ಬ್ಯಾಕ್ ಟು ಬ್ಯಾಕ್ ಅಟ್ಯಾಕ್ ಮೂಲಕ ಈಕ್ವೆಡಾರ್ ಕುರಾಸಾವೊ ನಿರ್ಮಿಸಿದ ರಕ್ಷಣಾ ಕೋಟೆಯನ್ನು ಭೇದಿಸಿತು. ಈ ರಕ್ಷಣಾ ಕೋಟೆಯನ್ನು ದಾಟಿದರೂ 37 ವರ್ಷದ ಅನುಭವಿ ಗೋಲ್‌ಕೀಪರ್ ಎಲೋಯ್ ರೂಮ್ ಮಾತ್ರ ಒಂದೇ ಒಂದು ಗೋಲು ದಾಖಲಿಸಲು ಬಿಡಲಿಲ್ಲ ಎಂಬುದು ವಿಶೇಷ.

ಪಂದ್ಯದ ಮುಖ್ಯಾಂಶಗಳು:

  • ಕ್ಯಾನ್ಸಾಸ್ ಸಿಟಿಯ ಆ್ಯರೋಹೆಡ್ ಸ್ಟೇಡಿಯಂನಲ್ಲಿ ನಡೆದ ಈಕ್ವೆಡಾರ್ ವಿರುದ್ಧದ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಕುರಾಸಾವೊ 0-0 ಅಂತರದಿಂದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
  • ಈ ಡ್ರಾನೊಂದಿಗೆ ಕುರಾಸಾವೊ ತಂಡವು ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್​ನಲ್ಲಿ ಒಂದು ಅಂಕ ಪಡೆದುಕೊಂಡಿದೆ.
  • ಮೊದಲ ಮ್ಯಾಚ್​ನಲ್ಲಿ ಐವರಿ ಕೋಸ್ಟ್ ವಿರುದ್ಧ ಸೋತಿದ್ದ ಈಕ್ವೆಡಾರ್ ಇದೀಗ 1 ಅಂಕದೊಂದಿಗೆ ಗ್ರೂಪ್-ಇ ಪಾಯಿಂಟ್ಸ್ ಟೇಬಲ್​ನಲ್ಲಿ ಮೂರನೇ ಸ್ಥಾನದಲ್ಲೇ ಉಳಿದುಕೊಂಡಿದೆ

ಎಲೋಯ್ ರೂಮ್ ವಿಶ್ವ ದಾಖಲೆ:

ಈ ಪಂದ್ಯದ ಮೂಲಕ ಕುರಾಸಾವೊ ಗೋಲ್ ಕೀಪರ್ ಎಲೋಯ್ ರೂಮ್ ಫಿಫಾ ವಿಶ್ವಕಪ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ರಮೋನ್ ಕ್ವಿರೋಗಾ ಅವರ ಹೆಸರಿನಲ್ಲಿದ್ದ ವರ್ಲ್ಡ್​ ರೆಕಾರ್ಡ್ ಅನ್ನು ಅಳಿಸಿ ಹಾಕುವ ಮೂಲಕ ಎಂಬುದು ವಿಶೇಷ.

  •  ದಾಖಲೆಯ 15 ಸೇವ್‌ಗಳು: ಈ ಪಂದ್ಯದಲ್ಲಿ ಈಕ್ವೆಡಾರ್ ತಂಡವು ಕುರಾಸಾವೊ ಗೋಲ್ ಪೋಸ್ಟ್​ನತ್ತ ಒಟ್ಟು 28 ಬಾರಿ ಚೆಂಡನ್ನು ಒದ್ದಿದ್ದರು. ಅದರಲ್ಲಿ 15 ಅತ್ಯಂತ ನಿಖರವಾದ ಆನ್‌-ಟಾರ್ಗೆಟ್ ಶಾಟ್‌ಗಳಾಗಿದ್ದವು. ಆದರೆ ತಡೆ ಗೋಡೆಯಂತೆ ನಿಂತ ಎಲೋಯ್ ರೂಮ್, ಆ ಎಲ್ಲಾ 15 ಪ್ರಯತ್ನಗಳನ್ನು ವಿಫಲಗೊಳಿಸಿದ್ದು ವಿಶೇಷ.
  •  ಹೊಸ ವಿಶ್ವ ದಾಖಲೆ: 90 ನಿಮಿಷಗಳ ನಿಗದಿತ ಅವಧಿಯ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸೇವ್ ಮಾಡಿದ ದಾಖಲೆ ಈಗ ಎಲೋಯ್ ರೂಮ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ರಮೋನ್ ಕ್ವಿರೋಗಾ ಹೆಸರಿನಲ್ಲಿತ್ತು.
  • ರಮೋನ್ ಕ್ವಿರೋಗಾ ದಾಖಲೆ: 1978 ರಲ್ಲಿ ನೆದರ್​ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಪೆರು ತಂಡದ ಗೋಲು ಕೀಪರ್ ರಮೋನ್ ಕ್ವಿರೋಗಾ ಬರೋಬ್ಬರಿ 13 ಸೇವ್​ಗಳನ್ನು ಮಾಡಿದ್ದರು. ಈ ಮೂಲಕ 90 ನಿಮಿಷಗಳ ಅವಧಿಯಲ್ಲಿ ಅತ್ಯಧಿಕ ಗೋಲು ತಡೆದ ಗೋಲ್ ಕೀಪರ್ ಎನಿಸಿಕೊಂಡಿದ್ದರು.

ಇದೀಗ ಕುರಾಸಾವೊ ತಂಡದ ಗೋಲ್ ಕೀಪರ್ ಎಲೋಯ್ ರೂಮ್ ಬರೋಬ್ಬರಿ 15 ಸೇವ್​ಗಳನ್ನು ಮಾಡಿದ್ದಾರೆ. ಈ ಮೂಲಕ ಫಿಫಾ ವಿಶ್ವಕಪ್ ಇತಿಹಾಸದಲ್ಲೇ 90 ನಿಮಿಷಗಳ ಅವಧಿಯಲ್ಲಿ ಅತ್ಯಧಿಕ ಗೋಲು ಶಾಟ್​ಗಳನ್ನು ತಡೆದ ಗೋಲ್ ಕೀಪರ್ ಎನಿಸಿಕೊಂಡಿದ್ದಾರೆ.

ಒಟ್ಟಾರೆ ವಿಶ್ವ ದಾಖಲೆ:

ಫುಟ್​ಬಾಲ್ ವಿಶ್ವಕಪ್​ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಅತ್ಯಧಿಕ ಗೋಲುಗಳನ್ನು ತಡೆದ ವಿಶ್ವ ದಾಖಲೆ ಅಮೆರಿಕಾದ ಟಿಮ್ ಹೊವಾರ್ಡ್ ಹೆಸರಿನಲ್ಲಿದೆ. 2014 ರ ವಿಶ್ವಕಪ್‌ನಲ್ಲಿ ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ಟಿಮ್ ಹೊವಾರ್ಡ್  16 ಸೇವ್‌ಗಳನ್ನು ಮಾಡಿದ್ದರು. ಆದರೆ ಅದು 120 ನಿಮಿಷಗಳ (ಹೆಚ್ಚುವರಿ ಸಮಯ ಸೇರಿದಂತೆ) ಅವಧಿಯಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ.

ಇದನ್ನೂ ಓದಿ: 2 ಪಂದ್ಯಗಳು ಬಾಕಿ ಇರುವಾಗಲೇ ಪಾಕ್ ತಂಡದ ವಿಶ್ವಕಪ್ ಕನಸು ನುಚ್ಚುನೂರು!

ಆದರೀಗ ನಿಗದಿತ 90 ನಿಮಿಷಗಳ ಅವಧಿಯಲ್ಲಿ ಬರೋಬ್ಬರಿ 15 ಗೋಲ್ ಸೇವ್​ಗಳನ್ನು ಮಾಡಿ ಕುರಾಸಾವೊ ಗೋಲ್ ಕೀಪರ್ ಎಲೋಯ್ ರೂಮ್ ಇಡೀ ಫುಟ್​ಬಾಲ್ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ್ದಾರೆ.

Source link

NEET-UG Re-Exam 2026: ದೇಶಾದ್ಯಂತ ನೀಟ್-ಯುಜಿ ಮರು ಪರೀಕ್ಷೆ, ಎಲ್ಲೆಲ್ಲೂ ಭದ್ರತೆ, ಸಕಲ ಸಿದ್ಧತೆ – Kannada News | NEET UG 2026 Re Exam: Nationwide Security and Preparations After Paper Leak Row

ಬೆಂಗಳೂರು, ಜೂನ್ 21: ದೇಶಾದ್ಯಂತ ಇಂದು ನೀಟ್-ಯುಜಿ ಮರು ಪರೀಕ್ಷೆ ನಡೆಯಲಿದ್ದು, ಭಾರೀ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ, ಯಾವುದೇ ಲೋಪಗಳಿಲ್ಲದೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಮತ್ತು ಸ್ಥಳೀಯ ಆಡಳಿತಗಳು ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿವೆ.

ಕಲಬುರಗಿಯಲ್ಲಿ 20 ಪರೀಕ್ಷಾ ಕೇಂದ್ರಗಳನ್ನು ನಿಯೋಜಿಸಲಾಗಿದ್ದು, ನಗರದಲ್ಲಿ 16 ಮತ್ತು ಆಳಂದ್ ತಾಲೂಕಿನ ಕಡಗಂಚಿಯಲ್ಲಿ 4 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಪಿಯು ಕಾಲೇಜು ಸೇರಿದಂತೆ ಎಲ್ಲ ಕೇಂದ್ರಗಳಲ್ಲೂ ಬಿಗಿ ಭದ್ರತೆ ಒದಗಿಸಲಾಗಿದೆ. ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಜೆರಾಕ್ಸ್ ಅಂಗಡಿಗಳು ಮತ್ತು ಪುಸ್ತಕದ ಅಂಗಡಿಗಳನ್ನು ಮುಚ್ಚಿಸಲಾಗಿದೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಸೇರಿದಂತೆ ಹಲವು ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಎನ್‌ಟಿಎ ಈ ಬಾರಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲೂ ಎರಡು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ. ಕೇಂದ್ರಿಯ ಮೀಸಲು ಪೊಲೀಸ್ ಪಡೆ (CRPF) ಮತ್ತು ಸ್ಥಳೀಯ ಪೊಲೀಸರು ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ದೇಶಾದ್ಯಂತ 551 ನಗರಗಳಲ್ಲಿ ಮತ್ತು 14 ವಿದೇಶಿ ಕೇಂದ್ರಗಳಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮರುಪರೀಕ್ಷೆ ಬರೆಯುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version