ಭಾರತ- ಲಂಕಾ ನಡುವೆ ತ್ರಿಕೋನ ಸರಣಿ ಫೈನಲ್; ಕೆಣಕ್ಕಿದವರ ವಿರುದ್ದ ಅಬ್ಬರಿಸ್ತಾರಾ ವೈಭವ್? – Kannada News | India A vs SL A Tri Series Final: Date, Time, Live Stream and Tilak Varma’s Challenge

ತಿಲಕ್ ವರ್ಮಾ ನಾಯಕತ್ವದ ಭಾರತ ಎ ತಂಡವು ಭಾನುವಾರ ನಡೆಯಲಿರುವ ಏಕದಿನ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎ (India A vs Sri Lanka A) ತಂಡವನ್ನು ಎದುರಿಸುತ್ತಿದೆ. ಈ ಸರಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಮೂರನೇ ಬಾರಿ. ಮೊದಲ ಮುಖಾಮುಖಿಯಲ್ಲಿ ಭಾರತ ಗೆದ್ದಿದ್ದರೆ, ಎರಡನೇ ಮುಖಾಮುಖಿಯಲ್ಲಿ ಶ್ರೀಲಂಕಾ ತಂಡ ಗೆಲುವು ಸಾಧಿಸಿತ್ತು. ಇದೀಗ ಮೂರನೇ ಮುಖಾಮುಖಿಯಲ್ಲಿ ಗೆದ್ದ ತಂಡಕ್ಕೆ ಟ್ರೋಫಿ ಕೂಡ ಸಿಗಲಿದೆ. ಇದರ ಜೊತೆಗೆ ಕಳೆದ ಮುಖಾಮುಖಿಯಲ್ಲಿ ವೈಭವ್ ಸೂರ್ಯವಂಶಿ (Vaibhav Sooryavanshi) ಹಾಗೂ ಶ್ರೀಲಂಕಾದ ಆಟಗಾರರ ನಡುವೆ ಏರ್ಪಟ್ಟಿದ್ದ ವಾಗ್ವಾದದಿಂದಾಗಿ ದೊಡ್ಡ ವಿವಾದ ಹುಟ್ಟಕೊಂಡಿತ್ತು. ಹೀಗಾಗಿ ತನ್ನನ್ನು ಕೆಣಕ್ಕಿದ್ದ ಲಂಕಾ ಆಟಗಾರರು ವಿರುದ್ಧ ವೈಭವ್ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿಯ ಫೈನಲ್ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿಯ ಫೈನಲ್ ಪಂದ್ಯ ಜೂನ್ 21 ರ ಭಾನುವಾರದಂದು ನಡೆಯಲಿದೆ.

ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿಯ ಫೈನಲ್ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿಯ ಫೈನಲ್ ಪಂದ್ಯ ದಂಬುಲ್ಲಾದಲ್ಲಿ ನಡೆಯಲಿದೆ.

ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿಯ ಫೈನಲ್ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿಯ ಫೈನಲ್ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ.

ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿಯ ಫೈನಲ್ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಎ ಹಾಗೂ ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿಯ ಫೈನಲ್ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್​ವರ್ಕ್​ನ ವಿವಿದ ಚಾನೆಲ್​ಗಳಲ್ಲಿ ವೀಕ್ಷಿಸಬಹುದು.

ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ ಎಂದ ಟೀಂ ಇಂಡಿಯಾದ ಮಾಜಿ ನಾಯಕ

ಉಭಯ ತಂಡಗಳು

ಭಾರತ ಎ ತಂಡ: ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ(ಸಿ), ಕುಮಾರ್ ಕುಶಾಗ್ರಾ(ಡಬ್ಲ್ಯೂ), ಸೂರ್ಯಾಂಶ್ ಶೆಡ್ಗೆ, ನಿಶಾಂತ್ ಸಿಂಧು, ವಿಪ್ರಜ್ ನಿಗಮ್, ಅನುಕುಲ್ ರಾಯ್, ಅನ್ಶುಲ್ ಕಾಂಬೋಜ್, ಯಶ್ ಠಾಕೂರ್, ಆಯುಷ್ ಬದೋನಿ, ಪ್ರಭ್‌ಸಿಮ್ರನ್ ಸಿಂಗ್, ಯುದ್ಧವೀರ್ ಸಿಂಗ್ ಚರಕ್, ಅರ್ಷದ್ ಖಾನ್, ಅಶೋಕ್ ಶರ್ಮಾ.

ಶ್ರೀಲಂಕಾ ಎ ತಂಡ: ನಿರೋಶನ್ ಡಿಕ್ವೆಲ್ಲಾ(ಡಬ್ಲ್ಯೂ), ಅವಿಷ್ಕಾ ಫೆರ್ನಾಂಡೊ, ನುವಾನಿಡು ಫೆರ್ನಾಂಡೊ, ಸದೀರ ಸಮರವಿಕ್ರಮ, ಸಹನ್ ಅರಾಚ್ಚಿಗೆ(ಸಿ), ಅಹಾನ್ ವಿಕ್ರಮಸಿಂಘೆ, ರವಿಂದು ಫೆರ್ನಾಂಡೊ, ವನುಜಾ ಸಹನ್, ವಿಜಯಕಾಂತ್ ವಿಯಸ್ಕಂತ್, ದುಲಾಜ್ ಸಮುದಿತ, ಕುಗತಸ್ ಮಾಥುಲನ್, ವಿಶೇನ್ ಹಲಂಬಗೆ, ಗರುಕ ಸಂಕೇತ್, ಚಾಮಿಕ ಗುಣಶೇಖರ, ಮೊಹಮ್ಮದ್ ಶಿರಾಜ್, ಚಾಮಿಕ ಕರುಣಾರತ್ನ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೈ ಕೊಟ್ಟ ಮುಂಗಾರು: ಬೆಳೆದ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್​ ನೀರು ಮೊರೆ ಹೋದ ಅನ್ನದಾತರು – Kannada News | Deficient monsoon rains in Karnataka: Farmers Use Tanker Water For Crops

ಬೆಳಗಾವಿ/ಬೀದರ್, (ಜೂನ್ 20): ಕರ್ನಾಟಕದ ಹಲವು ಭಾಗಗಳಲ್ಲಿ ಆರಂಭದಲ್ಲಿ ಅಬ್ಬರಿಸಿದ್ದ ಮಳೆ ಇದೀಗ ಕೈಕೊಟ್ಟಿದ್ದು, ಮುಂಗಾರು ಮಳೆ ರೈತರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದೆ.ಕೆಲ ಕಡೆ ಆರಂಭಿಕ ಮುಂಗಾರು ಹದಬರಿತವಾಗಿ ಆದ ಪರಿಣಾಮ ರೈತರು ಬಿತ್ತನೆ ಮಾಡಿದ್ದಾರೆ.ಇನ್ನೂ ಕೆಲ ಕಡೆ ಮಳೆಯಾಗದ ಕಾರಣ ಬಿತ್ತನೆಯೇ ಆಗಿಲ್ಲ.ಬಿತ್ತನೆ ಮಾಡಿದ ರೈತರು ಮಳೆಯಾಗದ ಹಿನ್ನೆಲೆ ಬೆಳೆ ಒಣಗಿ ನಷ್ಟ ಅನುಭವಿಸುತ್ತಿದ್ದರೆ, ಇನ್ನು ಅದೆಷ್ಟೊ ರೈತರು ಬಿತ್ತನೆ ಮಾಡದೆ ಆಕಾಶ ನೋಡುವಂತಾಗಿದೆ. ವರುಣ ಕೃಪೆತೋರದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.

Source link

ನನ್ನೊಂದಿಗೆ ಫ್ರೆಂಡ್ ಆಗಲು ಮೆಲೋನಿ ಹಾತೊರೆಯುತ್ತಿದ್ದಾರೆ! ಮತ್ತೆ ಹಳೇ ರಾಗ ಹಾಡಿದ ಟ್ರಂಪ್ – Kannada News | Donald Trump repeats claim Giorgia Meloni asked over and over for selfie with him at G7 Summit

ವಾಷಿಂಗ್ಟನ್, ಜೂನ್ 20: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ವಿರುದ್ಧ ಮತ್ತೊಮ್ಮೆ ಲೇವಡಿ ಮಾಡಿದ್ದಾರೆ. ಇತ್ತೀಚೆಗೆ ನಡೆದ ಜಿ7 ಶೃಂಗಸಭೆಯಲ್ಲಿ ಮೆಲೋನಿ ಅವರು ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮತ್ತೆ ಮತ್ತೆ ನನ್ನ ಬೆನ್ನ ಹಿಂದೆ ಬಿದ್ದಿದ್ದರು ಎಂದು ಟ್ರಂಪ್ ಹಳೆಯ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ, “ಮೆಲೋನಿ ನನ್ನೊಂದಿಗೆ ಮತ್ತೆ ಸ್ನೇಹ ಬೆಳೆಸಲು ಹಂಬಲಿಸುತ್ತಿದ್ದಾರೆ” ಎಂದೂ ಟ್ರಂಪ್ ಲೇವಡಿ ಮಾಡಿದ್ದಾರೆ.

ನಿನ್ನೆ ಕೂಡ ಟ್ರಂಪ್ ಇದೇ ಹೇಳಿಕೆ ನೀಡಿದ್ದರು. ಅದಕ್ಕೆ ಮೆಲೋನಿ ಕೂಡ ತಿರುಗೇಟು ನೀಡಿದ್ದರು. ಇಂದು ಮತ್ತೆ ಸಾರ್ವಜನಿಕ ರ‍್ಯಾಲಿಯೊಂದರಲ್ಲಿ ಮಾತನಾಡುತ್ತಾ ಅಂತಾರಾಷ್ಟ್ರೀಯ ನಾಯಕರೊಂದಿಗಿನ ತಮ್ಮ ಸಂಬಂಧದ ಬಗ್ಗೆ ಹೇಳುವಾಗ ಟ್ರಂಪ್ ಇಟಲಿ ಪ್ರಧಾನಿಯ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

“ಜಿ7 ಶೃಂಗಸಭೆಯ ಸಂದರ್ಭದಲ್ಲಿ ಜಾರ್ಜಿಯಾ ಮೆಲೋನಿ ಅವರು ನನ್ನ ಬಳಿ ಬಂದು ಫೋಟೋಗಾಗಿ ಪದೇ ಪದೇ ಕೇಳುತ್ತಿದ್ದರು. ರಾಜತಾಂತ್ರಿಕ ಶಿಷ್ಟಾಚಾರಗಳ ನಡುವೆಯೂ ಅವರು ನನ್ನೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ತೀವ್ರ ಆಸಕ್ತಿ ತೋರಿಸಿದ್ದರು. ಹಿಂದಿನ ಕೆಲವು ರಾಜಕೀಯ ಭಿನ್ನಾಭಿಪ್ರಾಯಗಳ ನಂತರ, ಈಗ ಮೆಲೋನಿ ನನ್ನೊಂದಿಗೆ ಮತ್ತೆ ಹಳೆಯ ಸ್ನೇಹವನ್ನು ಮುಂದುವರಿಸಲು ಬಯಸುತ್ತಿದ್ದಾರೆ ಎಂಬುದು ಅವರ ಈ ನಡವಳಿಕೆಯಿಂದ ಸ್ಪಷ್ಟವಾಗುತ್ತದೆ” ಎಂದು ಟ್ರಂಪ್ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ನನ್ನೊಂದಿಗೆ ಫೋಟೋ ಬೇಕೆಂದು ಮೆಲೋನಿ ಬೇಡಿಕೊಂಡಿದ್ದರು; ಟ್ರಂಪ್ ಹೇಳಿಕೆಗೆ ಸಿಡಿದೆದ್ದ ಇಟಲಿ ಪ್ರಧಾನಿ

ವಿಶ್ವದ ಅತ್ಯಂತ ಪ್ರಭಾವಶಾಲಿ ಮಹಿಳಾ ನಾಯಕಿಯರಲ್ಲಿ ಒಬ್ಬರಾದ ಇಟಲಿ ಪ್ರಧಾನಿ ಮೆಲೋನಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿರುವುದು ರಾಜತಾಂತ್ರಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಟ್ರಂಪ್ ಅವರ ಈ ‘ಸೆಲ್ಫಿ’ ಆರೋಪ ಕೇವಲ ಅವರ ರಾಜಕೀಯ ಪ್ರಚಾರದ ಭಾಗವೋ ಅಥವಾ ನಿಜವಾಗಿಯೂ ಅಂತಹ ಘಟನೆ ನಡೆದಿದೆಯೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ವ್ಯತ್ಯಯ, ಆಸ್ಪತ್ರೆಗೆ ದಾಖಲು – Kannada News | Actor Vinod Prabhakar hospitalized due BP fluctuation

‘ಬಲರಾಮನ ದಿನಗಳು’ ಸಿನಿಮಾದ ಪ್ರಚಾರದಲ್ಲಿ ನಿರತವಾಗಿದ್ದ ನಟ ವಿನೋದ್ ಪ್ರಭಾಕರ್ (Vinod Prabhakar) ಅವರ ಆರೋಗ್ಯದಲ್ಲಿ ಹಠಾತ್ ಏರುಪೇರು ಕಂಡು ಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿನೋದ್ ಪ್ರಭಾಕರ್ ಅವರ ರಕ್ತದೊತ್ತಡದಲ್ಲಿ ಏರು-ಪೇರು ಕಂಡು ಬಂದಿದ್ದು ಅವರನ್ನು ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದ್ದು, ವೈದ್ಯರು ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿದೆ.

ಸಿನಿಮಾ ಪ್ರಚಾರಕ್ಕಾಗಿ ತೆರಳುತ್ತಿದ್ದಾಗ ವಿನೋದ್ ಅವರ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದ್ದು ಕೂಡಲೇ ಅವರನ್ನು ನಾಗರಬಾವಿಯಲ್ಲಿರುವ ಖಾಸಗಿ ಆಸ್ಪತ್ರೆಯೊಂದನ್ನು ದಾಖಲಿಸಲಾಗಿದೆ. ವಿನೋದ್ ಪ್ರಭಾಕರ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಕಾರ್ಡಿಯಾ ಕೇರ್ ಆಸ್ಪತ್ರೆಯಲ್ಲಿ ವಿನೋದ್ ಪ್ರಭಾಕರ್ ಅವರನ್ನು ದಾಖಲಿಸಲಾಗಿದ್ದು, ವೈದ್ಯರು ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಮುಂದುವರೆಸಿದ್ದಾರೆ.

ವಿನೋದ್ ಪ್ರಭಾಕರ್ ನಟನೆಯ ‘ಬಲರಾಮನ ದಿನಗಳು’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಆ ಸಿನಿಮಾದ ಪ್ರಚಾರ ಕಾರ್ಯದಲ್ಲಿ ವಿನೋದ್ ಪ್ರಭಾಕರ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ಈ ನಡುವೆ ವಿನೋದ್ ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದು, ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ಆತಂಕ ತಂದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:10 pm, Sat, 20 June 26

Source link

ಕ್ಯಾಪ್ಸಿಕಂ ತಿನ್ನಲು ಇಷ್ಟವಿಲ್ಲವೇ? ಇದರ ಆರೋಗ್ಯ ಪ್ರಯೋಜನ ತಿಳಿದ್ರೆ ಪ್ರತಿದಿನ ತಿನ್ನುತ್ತೀರಿ! – Kannada News | How Eating Capsicum Daily Can Improve Your Health

ಕ್ಯಾಪ್ಸಿಕಂ (Capsicum) ಕೇವಲ ಅಡುಗೆಯ ರುಚಿ ಹೆಚ್ಚಿಸುವ ತರಕಾರಿ ಮಾತ್ರವಲ್ಲ, ಅನೇಕ ಪೋಷಕಾಂಶಗಳ ಭಂಡಾರವೂ ಆಗಿದೆ. ವಿಟಮಿನ್‌, ಖನಿಜಾಂಶಗಳು ಮತ್ತು ಶಕ್ತಿಶಾಲಿ ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಕ್ಯಾಪ್ಸಿಕಮ್ ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಆದರೆ ಕೆಲವರಿಗೆ ಕ್ಯಾಪ್ಸಿಕಂ ಅಂದ್ರೆ ಅಷ್ಟಕ್ಕೇ ಅಷ್ಟೇ. ಇನ್ನು ಕೆಲವರಿಗೆ ಅದರಿಂದ ಬರುವ ಪರಿಮಳ ವಾಕರಿಕೆ ಹುಟ್ಟಿಸುತ್ತದೆ. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಇದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಹಾಗಾದರೆ ಇದರ ಸೇವನೆಯಿಂದ ಸಿಗುವ ಪ್ರಯೋಜನವೇನು, ಯಾವ ಸಮಸ್ಯೆಗೆ ಒಳ್ಳೆಯದು ತಿಳಿದುಕೊಳ್ಳಿ.

ಕಣ್ಣಿನ ಆರೋಗ್ಯಕ್ಕೆ ಉತ್ತಮ

ಕ್ಯಾಪ್ಸಿಕಮ್‌ನಲ್ಲಿ ವಿಟಮಿನ್ ಎ ಮತ್ತು ಲ್ಯೂಟಿನ್ ಸಮೃದ್ಧವಾಗಿವೆ. ವಿಶೇಷವಾಗಿ ಕೆಂಪು ಕ್ಯಾಪ್ಸಿಕಮ್ ಕಣ್ಣಿನ ದೃಷ್ಟಿಯನ್ನು ತೀಕ್ಷ್ಣಗೊಳಿಸುವುದರ ಜೊತೆಗೆ ವಯೋಸಹಜ ಕಣ್ಣಿನ ಸಮಸ್ಯೆಗಳು ಹಾಗೂ ಕ್ಯಾಟರಾಕ್ಟ್ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ.

ತೂಕ ಇಳಿಕೆಗೆ ಸಹಾಯ ಮಾಡುತ್ತದೆ

ಕ್ಯಾಪ್ಸಿಕಮ್‌ನಲ್ಲಿ ಇರುವ ಕ್ಯಾಪ್ಸೈಸಿನ್ ಎಂಬ ಸಂಯುಕ್ತವು ದೇಹದ ಮೆಟಾಬಾಲಿಸಂ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ಫೈಬರ್ ಅಧಿಕವಾಗಿರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದರಿಂದ ಅತಿಯಾಗಿ ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ ಮತ್ತು ತೂಕ ನಿಯಂತ್ರಣ ಸುಲಭವಾಗುತ್ತದೆ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಕೆಂಪು ಕ್ಯಾಪ್ಸಿಕಮ್‌ನಲ್ಲಿರುವ ಲೈಕೋಪಿನ್ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಸಿರು ಕ್ಯಾಪ್ಸಿಕಮ್‌ನಲ್ಲಿರುವ ಫೈಬರ್, ಫೋಲೇಟ್ ಮತ್ತು ವಿಟಮಿನ್ ಬಿ6 ರಕ್ತನಾಳಗಳ ಆರೋಗ್ಯವನ್ನು ಕಾಪಾಡಿ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ತಗ್ಗಿಸಬಹುದು.

ರೋಗನಿರೋಧಕ ಶಕ್ತಿ ಮತ್ತು ಚರ್ಮದ ಆರೈಕೆಗೆ ಒಳ್ಳೆಯದು

ಕ್ಯಾಪ್ಸಿಕಮ್‌ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಕೊಲಾಜನ್ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಚರ್ಮದ ಕಾಂತಿಯನ್ನು ಕಾಪಾಡಲು ಸಹಾಯ ಮಾಡುತ್ತದೆ.

ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸಹಕಾರಿ

ಕ್ಯಾಪ್ಸಿಕಮ್‌ನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದ ಫ್ರೀ ರ್ಯಾಡಿಕಲ್‌ಗಳ ವಿರುದ್ಧ ಹೋರಾಡಿ ಜೀವಕೋಶಗಳನ್ನು ರಕ್ಷಿಸುತ್ತವೆ. ಕೆಲವು ವಿಧದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

NEET 2026: ನೀಟ್ ಯುಜಿ ಮರುಪರೀಕ್ಷೆ ಬರೆಯಲಿದ್ದಾರೆ 22 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು; ಸಿಸಿಟಿವಿ ಕಣ್ಗಾವಲು, ಹೈ-ಸೆಕ್ಯುರಿಟಿ – Kannada News | NEET UG Re exam preparations CCTV surveillance security tightened for over 22 lakh candidates

ನವದೆಹಲಿ, ಜೂನ್ 20: ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿರುವ NEET-UG ಮರುಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತು ಕೇಂದ್ರ ಸರ್ಕಾರ ಹಿಂದೆಂದೂ ಕಾಣದ ರೀತಿಯಲ್ಲಿ ಅಭೂತಪೂರ್ವ ಬಿಗಿ ಭದ್ರತೆಯನ್ನು ಕೈಗೊಂಡಿದೆ. 22 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿಗಳು ಬರೆಯಲಿರುವ ಈ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ಪೇಪರ್ ಲೀಕ್ ಆಗದಂತೆ ತಡೆಯಲು ಸಿಸಿಟಿವಿ ಲೈವ್ ಕಣ್ಗಾವಲು, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಮತ್ತು ಪೊಲೀಸ್ ಬೆಂಗಾವಲು ಸೇರಿದಂತೆ ಹೈ-ಟೆಕ್ ಭದ್ರತಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ. ಪರೀಕ್ಷಾ ಕೊಠಡಿಯೊಳಗೆ ಹೋಗುವ ಮುನ್ನ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಬಯೋಮೆಟ್ರಿಕ್ ತಪಾಸಣೆ ಮತ್ತು ಕಟ್ಟುನಿಟ್ಟಿನ ಫ್ರಿಸ್ಕಿಂಗ್‌ಗೆ (ಲೋಹ ಶೋಧಕಗಳ ಮೂಲಕ ತಪಾಸಣೆ) ಒಳಪಡಿಸಲಾಗುತ್ತದೆ. ಪರೀಕ್ಷಾ ಪ್ರಕ್ರಿಯೆಯ ಸಂಪೂರ್ಣ ಚಿತ್ರೀಕರಣಕ್ಕಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: NEET Exam: ನೀಟ್ ಎಡವಟ್ಟು; ನಾಗ್ಪುರದಲ್ಲಿರೋ ಅಭ್ಯರ್ಥಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ!

ಪರೀಕ್ಷೆಯ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಎನ್‌ಟಿಎ ದೇಶದ ಪ್ರತಿಯೊಂದು ಪರೀಕ್ಷಾ ಕೇಂದ್ರ ಮತ್ತು ಕೊಠಡಿಯನ್ನು ಡಿಜಿಟಲ್ ಕಣ್ಗಾವಲಿಗೆ ಒಳಪಡಿಸಿದೆ. ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ನೇರ ದೃಶ್ಯಾವಳಿಗಳನ್ನು ದೆಹಲಿಯಲ್ಲಿರುವ ಎನ್‌ಟಿಎ ಕಮಾಂಡ್ ಸೆಂಟರ್‌ನಿಂದ ಅಧಿಕಾರಿಗಳು ನೇರವಾಗಿ ವೀಕ್ಷಿಸಲಿದ್ದಾರೆ. ವಿದ್ಯಾರ್ಥಿಗಳ ನಡವಳಿಕೆಯಲ್ಲಿ ಯಾವುದೇ ಅಶಿಸ್ತು ಅಥವಾ ನಕಲು ಮಾಡುವ ಪ್ರಯತ್ನಗಳನ್ನು ಪತ್ತೆಹಚ್ಚಲು ಈ ಬಾರಿ ಎಐ ತಂತ್ರಜ್ಞಾನ ಆಧಾರಿತ ಕಣ್ಗಾವಲು ವ್ಯವಸ್ಥೆಯನ್ನು ಬಳಸಲಾಗುತ್ತಿದೆ.

ಹಿಂದಿನ ಲೋಪದೋಷಗಳಿಂದ ಪಾಠ ಕಲಿತಿರುವ ಅಧಿಕಾರಿಗಳು, ಪ್ರಶ್ನೆ ಪತ್ರಿಕೆಗಳ ಸಾಗಣೆಗೆ ಅತ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದ್ದಾರೆ. ಬ್ಯಾಂಕ್‌ಗಳ ಸ್ಟ್ರಾಂಗ್ ರೂಮ್‌ಗಳಿಂದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸುವ ಪ್ರತಿಯೊಂದು ವಾಹನಕ್ಕೂ ಸಶಸ್ತ್ರ ಪೊಲೀಸ್ ಪಡೆಗಳ ವಿಶೇಷ ಬೆಂಗಾವಲು ವ್ಯವಸ್ಥೆ ಮಾಡಲಾಗಿದೆ. ಇಡೀ ಸಾಗಣೆ ಪ್ರಕ್ರಿಯೆಯನ್ನು ಜಿಪಿಎಸ್ (GPS) ಮೂಲಕ ಟ್ರ್ಯಾಕ್ ಮಾಡಲಾಗುತ್ತಿದ್ದು, ನಿಗದಿತ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಬಿಗಿ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ: NEET UG Re-Exam: ನಾಳೆ ನೀಟ್ ಮರುಪರೀಕ್ಷೆ; ಪರೀಕ್ಷಾ ಕೇಂದ್ರಕ್ಕೆ ಏನು ತರಲೇಬೇಕು, ಯಾವುದು ನಿಷೇಧ? ಡ್ರೆಸ್ ಕೋಡ್ ಏನು?

ಯಾವುದೇ ಎಲೆಕ್ಟ್ರಾನಿಕ್ ಸಾಧನಗಳು ಕೆಲಸ ಮಾಡದಂತೆ ತಡೆಯಲು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಹೈ-ಪವರ್ ಸಿಗ್ನಲ್ ಜಾಮರ್‌ಗಳನ್ನು ಅಳವಡಿಸಲಾಗಿದೆ. ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸುವ ಮುನ್ನ ಪ್ರತಿಯೊಬ್ಬ ಅಭ್ಯರ್ಥಿಯ ಆಧಾರ್ ಆಧಾರಿತ ಬಯೋಮೆಟ್ರಿಕ್ ತಪಾಸಣೆ ಮತ್ತು ಫೇಸ್ ರೆಕಗ್ನಿಷನ್ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ (ಸೆಕ್ಷನ್ 144) ಜಾರಿಗೊಳಿಸಲಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಭಾರತದ 551 ನಗರಗಳಲ್ಲಿ ಮತ್ತು ವಿದೇಶದ 14 ನಗರಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರವರೆಗೆ ಪರೀಕ್ಷೆ ನಡೆಯಲಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಅಭ್ಯರ್ಥಿಗಳಿಗೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30ರ ನಡುವೆ ತಮ್ಮ ಕೇಂದ್ರಗಳನ್ನು ತಲುಪಲು ಸೂಚಿಸಿದೆ. ಮಧ್ಯಾಹ್ನ 1.30ಕ್ಕೆ ಪ್ರವೇಶ ದ್ವಾರಗಳನ್ನು ಮುಚ್ಚಲಾಗುತ್ತದೆ.

ಮೇ 3ರಂದು ನಡೆದಿದ್ದ ಪರೀಕ್ಷೆಯ ಸಂದರ್ಭದಲ್ಲಿ ಪೇಪರ್ ಲೀಕ್ ಮತ್ತು ಆಡಳಿತಾತ್ಮಕ ಲೋಪಗಳ ಆರೋಪಗಳ ಹಿನ್ನೆಲೆಯಲ್ಲಿ ನೀಟ್ ಯುಜಿ 2026 ರ ಮರುಪರೀಕ್ಷೆಗೆ ಆದೇಶಿಸಲಾಗಿತ್ತು. ಕೇಂದ್ರೀಯ ತನಿಖಾ ದಳ (CBI) ಈ ವಿಷಯದ ಬಗ್ಗೆ ತನ್ನ ತನಿಖೆಯನ್ನು ಮುಂದುವರಿಸಿದ್ದು, ಹಲವಾರು ಬಂಧನಗಳನ್ನು ಮಾಡಿದೆ. ಈ ವಿವಾದದ ಹಿನ್ನೆಲೆಯಲ್ಲಿ ದೇಶದ ಹಲವು ಭಾಗಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳೂ ನಡೆದಿದ್ದವು. ಆ ಹಿನ್ನೆಲೆಯಲ್ಲಿ, ಜೂನ್ 21ರಂದು ಹಾಜರಾಗಲಿರುವ 22.79 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಅಧಿಕಾರಿಗಳು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

1100 ಬೌಂಡರಿಗಳು, 95 ನೇ ಐವತ್ತು ಪ್ಲಸ್ ಸ್ಕೋರ್! ರೋಹಿತ್ ಬರೆದ ದಾಖಲೆಗಳ ಪಟ್ಟಿ – Kannada News | Rohit Sharma’s Historic ODI 50: Surpasses Dravid, Ganguly; Oldest Indian to Score Half Century

ಹಾಗೆಯೇ ಈ ಪಂದ್ಯದಲ್ಲಿ 9 ಬೌಂಡರಿಗಳನ್ನು ಬಾರಿಸಿದ ರೋಹಿತ್, ಈ ಬೌಂಡರಿಗಳ ಸಹಾಯದಿಂದ ಏಕದಿನದಲ್ಲಿ 1100 ಬೌಂಡರಿಗಳನ್ನು ಪೂರ್ಣಗೊಳಿಸಿದರು. ಇದರೊಂದಿಗೆ, ಅವರು ಸಚಿನ್ ತೆಂಡೂಲ್ಕರ್ ಮತ್ತು ಸನತ್ ಜಯಸೂರ್ಯ ಅವರ ವಿಶೇಷ ಪಟ್ಟಿಗೆ ಸೇರಿದರು. ಪ್ರಸ್ತುತ ಈ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿರುವ ರೋಹಿತ್, ಈ ಸಾಧನೆ ಮಾಡಿದ ಭಾರತೀಯರ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಪಡೆದಿಕೊಂಡಿದ್ದಾರೆ (PC-PTI).

Source link

ಅಕ್ರಮ ಹಣ ವರ್ಗಾವಣೆ: ಬೆಂಗಳೂರಿನ 5 ಕಂಪನಿಗಳಿಗೆ ಇಡಿ ಶಾಕ್, 6 ಕೋಟಿ ರೂ ಜಪ್ತಿ – Kannada News | Money Laundering Case: ED Raids 5 Bengaluru Companies, Seizes 6 Crore

ಬೆಂಗಳೂರು, ಜೂನ್​​ 20: ವರ್ಚುವಲ್ ಡಿಜಿಟಲ್ ಸ್ವತ್ತುಗಳನ್ನು ಬಳಸಿಕೊಂಡು ಅನಧಿಕೃತವಾಗಿ ವಿದೇಶಗಳಿಗೆ ಹಣ ವರ್ಗಾವಣೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು (bangaluru) ಮೂಲದ ಐದು ಪ್ರಮುಖ ಕಂಪನಿಗಳಿಗೆ ಸೇರಿದ ಆರು ಸ್ಥಳಗಳ ಮೇಲೆ ಬೆಂಗಳೂರು ವಲಯ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಭರ್ಜರಿ ಕಾರ್ಯಾಚರಣೆ ವೇಳೆ ಅಂದಾಜು 6 ಕೋಟಿ ರೂ. ನಗದು ಹೊಂದಿರುವ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿದ್ದಾರೆ.

ಮುಖ್ಯಾಂಶಗಳು

  • ಡಿಜಿಟಲ್ ಸ್ವತ್ತುಗಳ ಮೂಲಕ ವಿದೇಶಕ್ಕೆ ಹಣ ರವಾನೆ
  • 6 ಕೋಟಿ ರೂ. ಬ್ಯಾಂಕ್ ಖಾತೆಗಳು ಜಪ್ತಿ ಮಾಡಿದ ಇಡಿ
  • ಬೆಂಗಳೂರಿನ ಕಂಪನಿಗಳ ಮೇಲೆ ದಾಳಿ ಮಾಡಿದ್ದ ಇಡಿ

ಬೆಂಗಳೂರು ಮೂಲದ ಐದು ಕಂಪನಿಗಳ ಮೇಲೆ ದಾಳಿ

ಬೆಂಗಳೂರು ವಲಯ ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA), 1999ರ ಸೆಕ್ಷನ್ 37ರ ಅಡಿಯಲ್ಲಿ ಜೂನ್ 17ರಂದು ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ಇಡಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಜಾರಿ ನಿರ್ದೇಶನಾಲಯ ಟ್ವೀಟ್​

ಬೆಂಗಳೂರಿನ ಮೆಸರ್ಸ್ ಟ್ರಾನ್ಸಾಕ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಮೆಸರ್ಸ್ ಕ್ಯಾರೆಟ್ಎಕ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಮೆಸರ್ಸ್ ಮೋಕ್ಷಜ್ಞ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಮೆಸರ್ಸ್ ಬೈಹಟ್ಕೆ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್ ಮತ್ತು ಮೆಸರ್ಸ್ ಅಭಿಭಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳಿಗೆ ಸೇರಿದ ಕಚೇರಿಗಳ ಮೇಲೆ ದಾಳಿ ಮಾಡಲಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಂತ್ರಿ ಬಿಲ್ಡರ್ಸ್ ಮೇಲೆ ಇಡಿ ದಾಳಿ: ಮತ್ತೆ ಶಾಕ್​ ಕೊಟ್ಟ ದೆಹಲಿ ಅಧಿಕಾರಿಗಳು

ಬೆಂಗಳೂರು ಮೂಲದ ಈ ಕಂಪನಿಗಳು ಡಿಜಿಟಲ್ ಸ್ವತ್ತುಗಳ ಮೂಲಕ ಕಾನೂನುಬಾಹಿರವಾಗಿ ವಿದೇಶಗಳಿಗೆ ಹಣ ವರ್ಗಾವಣೆ ಮಾಡಲು ನೆರವಾಗಿವೆ ಎಂಬ ಗಂಭೀರ ಆರೋಪಗಳ ಆಧಾರದ ಮೇಲೆ ಈ ಶೋಧ ಕಾರ್ಯ ನಡೆಸಲಾಗಿತ್ತು. ದಾಳಿಯ ಸಂದರ್ಭದಲ್ಲಿ, ಈ ಅಕ್ರಮ ವಹಿವಾಟುಗಳಿಗೆ ಬಳಸಲಾದ ಕೆಲವು ಸಂಸ್ಥೆಗಳ ಬ್ಯಾಂಕ್ ಖಾತೆಗಳ ಮೇಲೆ ಇಡಿ ತಡೆಯಾಜ್ಞೆ ಹೊರಡಿಸಿದೆ.

ಪ್ರಸ್ತುತ ಈ ಖಾತೆಗಳಲ್ಲಿ ಒಟ್ಟು 6 ಕೋಟಿ ರೂ ಬಾಕಿ ಹಣವಿದ್ದು, ಅಗತ್ಯ ಅನುಮತಿಗಳಿಲ್ಲದೆ ಫೆಮಾ ನಿಯಮಗಳನ್ನು ಉಲ್ಲಂಘಿಸಿ ವಿದೇಶಕ್ಕೆ ಹಣ ರವಾನಿಸಲು ಈ ಖಾತೆಗಳನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಹೀರಾ ಗ್ರೂಪ್​​ ಕಂಪನಿಗೆ ಸೇರಿದ್ದ 159 ಕೋಟಿ ರೂ ಮೌಲ್ಯದ ಆಸ್ತಿ ಹರಾಜು ಹಾಕಿದ ಇಡಿ

ಬಹುಕೋಟಿ ಹೂಡಿಕೆ ವಂಚನೆ ಆರೋಪ ಎದುರಿಸುತ್ತಿರುವ ಹೀರಾ ಗ್ರೂಪ್​ ಆಫ್​ ಕಂಪನಿ ಮುಖ್ಯಸ್ಥೆ ನೊಹೀರಾ ಶೇಖ್​​ ಮತ್ತು ಅವರಿಗೆ ಸಂಬಂಧಿಸಿದ ಸಂಸ್ಥೆಗಳಿಗೆ ಹೈದರಾಬಾದ್ ವಲಯ ಜಾರಿ ನಿರ್ದೇಶನಾಲಯ ಬಿಗ್ ಶಾಕ್ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಪ್ತಿ ಮಾಡಲಾಗಿದ್ದ ಸುಮಾರು 159 ಕೋಟಿ ರೂ ಮೌಲ್ಯದ 23 ಸ್ಥಿರ ಆಸ್ತಿಗಳನ್ನು ಅಧಿಕಾರಿಗಳು ಯಶಸ್ವಿಯಾಗಿ ಹರಾಜು ಹಾಕಿದ್ದಾರೆ.

ಜಾರಿ ನಿರ್ದೇಶನಾಲಯ ಟ್ವೀಟ್​

ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಇಡಿ ಅಧಿಕಾರಿಗಳು ಹರಾಜು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಅಕ್ರಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಮುಟ್ಟುಗೋಲು ಹಾಕಿಕೊಂಡ ಆಸ್ತಿಯನ್ನು ನಗದೀಕರಿಸುವುದು ಹಾಗೂ ಆ ಮೂಲಕ ವಂಚನೆಗೊಳಗಾದ ಹೂಡಿಕೆದಾರರಿಗೆ ಅವರ ಹಣವನ್ನು ಮರಳಿ ನೀಡುವಲ್ಲಿ ಇಲಾಖೆ ಸಂಪೂರ್ಣ ಬದ್ಧವಾಗಿದೆ ಎಂದು ಇಡಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೊಪ್ಪಳದಲ್ಲಿ ಪೊಲೀಸಪ್ಪನ ದರ್ಪ: ರೈತರ ಶರ್ಟ್ ಕಾಲರ್ ಹಿಡಿದು ಎಳೆದೊಯ್ದ ಪಿಎಸ್​​ಐ – Kannada News | Bevoor PSI Rude Behavior With Farmer In Koppal Over Land compensation issue

ಕೊಪ್ಪಳ, (ಜೂನ್ 20): ಕಾವಲು ಕಾಯಬೇಕಾದ ಕಾನೂನು ರಕ್ಷಕನೇ ಭಕ್ಷಕನಾದ್ರೆ ಹೆಂಗೆ,ಅದ್ರಲ್ಲೂ ದೇಶಕ್ಕೆ ಅನ್ನ ಹಾಕೋ ಅನ್ನದಾತರ ಮೇಲೆ ಖಾಕಿ ದರ್ಪ ತೋರಿಸಿದ್ರೆ ಸಹಿಸೋಕೆ ಸಾಧ್ಯನಾ,ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಇಂತದ್ದೇ ಒಂದು ಅಮಾನವೀಯ ಘಟನೆ ನಡೆದಿದೆ. ಹೈಟೆನ್ಷನ್ ವಿದ್ಯುತ್ ಕಂಬ ಅಳವಡಿಕೆ ಪರಿಹಾರದ ವಿಚಾರದಲ್ಲಿ ನ್ಯಾಯ ಕೇಳಲು ಹೋದ ರೈತರ ಶರ್ಟ್ ಹಿಡಿದು, ಧರಧರನೆ ಎಳೆದೊಯ್ದು ಪಿಎಸ್‌ಐ ಒಬ್ಬರು ತಮ್ಮ ದರ್ಪ ಮೆರೆದಿದ್ದಾರೆ. ಹೌದು…ಬೇವೂರ ಪೊಲೀಸ್ ಠಾಣೆಯ ಪಿಎಸ್‌ಐ ಗುರುರಾಜ್ ಎಂಬುವವರೇ ರೈತರ ಮೇಲೆ ತಮ್ಮ ಅಧಿಕಾರದ ದರ್ಪ ಪ್ರದರ್ಶಿಸಿದ್ದಾರೆ.

ಅಷ್ಟಕ್ಕೂ ಈ ಗಲಾಟೆಗೆ ಕಾರಣವಾಗಿದ್ದು ಹೈಟೆನ್ಷನ್ ವಿದ್ಯುತ್ ಕಂಬ ಅಳವಡಿಕೆಯ ಪರಿಹಾರದ ವಿಚಾರ. ಗುತ್ತೂರ ಗ್ರಾಮದ ರೈತರಿಗೆ ಸೇರಿದ ಸುಮಾರು 10 ಎಕರೆ ಜಮೀನಿನಲ್ಲಿ ಬರೋಬ್ಬರಿ ನಾಲ್ಕು ಹೈಟೆನ್ಷನ್ ವಿದ್ಯುತ್ ಕಂಬಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಜಮೀನಿನ ಮೌಲ್ಯ ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರಾದ ಪ್ರಕಾಶ್, ಶ್ರೀಕಾಂತ್ ಹಾಗೂ ವಿಜಯರೆಡ್ಡಿ, ನಾಲ್ಕು ಕಂಬಗಳಿಗೆ ಒಟ್ಟು 1 ಕೋಟಿ 20 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ, ಕಂಬ ಅಳವಡಿಸುವ ಸಿಬ್ಬಂದಿ ಮಾತ್ರ ಕೇವಲ 40 ಲಕ್ಷ ರೂಪಾಯಿ ನೀಡುವುದಾಗಿ ಪಟ್ಟು ಹಿಡಿದಿದ್ದರು. ಇದಕ್ಕೆ ರೈತರು ಒಪ್ಪದಿದ್ದಾಗ ನಿನ್ನೆ ಜಮೀನಿನಲ್ಲಿ ಭಾರಿ ಗಲಾಟೆ ನಡೆದಿದೆ.ಆಗ ಪಿಎಸ್‌ಐ ಗುರುರಾಜ್ ರೈತರನ್ನು ಎಳೆದೊಯ್ದು,ರಾತ್ರಿ ಬಿಟ್ಟು ಕಳಸಿದ್ದಾರೆ.

Source link

NEET UG Re-Exam: ನಾಳೆ ನೀಟ್ ಮರುಪರೀಕ್ಷೆ; ಪರೀಕ್ಷಾ ಕೇಂದ್ರಕ್ಕೆ ಏನು ತರಲೇಬೇಕು, ಯಾವುದು ನಿಷೇಧ? ಡ್ರೆಸ್ ಕೋಡ್ ಏನು? – Kannada News | NEET UG 2026 Re Exam Tomorrow; What To Carry, What Not To Bring To Centre, Dress Code, Gate closing Time details here

ನವದೆಹಲಿ, ಜೂನ್ 20: ನಾಳೆ (ಜೂನ್ 21) ನಡೆಯಲಿರುವ ನೀಟ್-ಯುಜಿ (NEET UG 2026) ಮರುಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ಗೊಂದಲಗಳಿಗೆ ಅವಕಾಶ ನೀಡದಂತೆ ಡ್ರೆಸ್ ಕೋಡ್ ಹಾಗೂ ಕೊಂಡೊಯ್ಯಬೇಕಾದ ವಸ್ತುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಿಯಮ ಉಲ್ಲಂಘಿಸುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನಿಷೇಧಿಸಲಾಗುವುದು. ಹೀಗಾಗಿ, ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಈ ಕೆಳಗಿನ ವಿಷಯಗಳನ್ನು ಮರೆಯಬೇಡಿ.

ಪರೀಕ್ಷಾ ಕೇಂದ್ರಕ್ಕೆ ಏನು ತರಬೇಕು?:

ಪ್ರವೇಶ ಪತ್ರ (Admit Card): ಎನ್‌ಟಿಎ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿದ ಅಡ್ಮಿಟ್ ಕಾರ್ಡ್‌ನ ಸ್ಪಷ್ಟ ಪ್ರಿಂಟ್‌ಔಟ್ (ಅದರಲ್ಲಿ ಪಾಸ್‌ಪೋರ್ಟ್ ಅಳತೆಯ ಫೋಟೋ ಅಂಟಿಸಿರಬೇಕು ಮತ್ತು ಪೋಷಕರ ಸಹಿ ಇರಬೇಕು).

ಗುರುತಿನ ಚೀಟಿ (ID Proof): ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಅಥವಾ ಪಾಸ್‌ಪೋರ್ಟ್‌ನಂತಹ ಸರ್ಕಾರದ ಅಧಿಕೃತ ಅಸಲಿ ಗುರುತಿನ ಚೀಟಿ ತೆಗೆದುಕೊಂಡು ಹೋಗಬೇಕು.

ಹೆಚ್ಚುವರಿ ಫೋಟೋಗಳು: ಅಟೆಂಡೆನ್ಸ್ ಶೀಟ್‌ನಲ್ಲಿ ಅಂಟಿಸಲು ಎಕ್ಸ್​ಟ್ರಾ ಪಾಸ್‌ಪೋರ್ಟ್ ಅಳತೆಯ ಫೋಟೋಗಳನ್ನು ತರಬೇಕು.

ಪಾರದರ್ಶಕ ನೀರಿನ ಬಾಟಲಿ: ಅಭ್ಯರ್ಥಿಗಳು ಪರೀಕ್ಷೆ ಬರೆಯುವಾಗ ನೀರು ಕುಡಿಯುವುದಿದ್ದರೆ ಕೇವಲ ಪಾರದರ್ಶಕವಾದ ನೀರಿನ ಬಾಟಲಿಯನ್ನು ಮಾತ್ರ ಒಳಗೆ ಕೊಂಡೊಯ್ಯಬಹುದು.

ಇದನ್ನೂ ಓದಿ: NEET Exam: ನೀಟ್ ಎಡವಟ್ಟು; ನಾಗ್ಪುರದಲ್ಲಿರೋ ಅಭ್ಯರ್ಥಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ!

ಪರೀಕ್ಷಾ ಕೇಂದ್ರಕ್ಕೆ ಏನನ್ನು ತರಬಾರದು?:

ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು: ಮೊಬೈಲ್ ಫೋನ್‌ಗಳು, ಬ್ಲೂಟೂತ್ ಸಾಧನಗಳು, ಸ್ಮಾರ್ಟ್ ವಾಚ್‌ಗಳು, ಇಯರ್‌ಫೋನ್‌ಗಳು, ಪೇಜರ್ ಅಥವಾ ಯಾವುದೇ ರೀತಿಯ ಹೆಲ್ತ್ ಬ್ಯಾಂಡ್‌ಗಳು.

ಸ್ಟೇಷನರಿ ವಸ್ತುಗಳು: ಯಾವುದೇ ರೀತಿಯ ಜ್ಯಾಮಿಟ್ರಿ ಬಾಕ್ಸ್, ಪ್ಲಾಸ್ಟಿಕ್ ಪೌಚ್, ಲಾಗ್ ಟೇಬಲ್, ರೈಟಿಂಗ್ ಪ್ಯಾಡ್, ಯಾವುದೇ ಕಾಗದದ ತುಣುಕುಗಳು ಅಥವಾ ಕೈಬರಹದ ಚೀಟಿಗಳನ್ನು ತರುವಂತಿಲ್ಲ. ಪರೀಕ್ಷೆಗೆ ಅಗತ್ಯವಿರುವ ಪೆನ್ನನ್ನು ಎನ್‌ಟಿಎ ವತಿಯಿಂದ ಪರೀಕ್ಷಾ ಕೇಂದ್ರದಲ್ಲೇ ನೀಡಲಾಗುತ್ತದೆ.

ಇತರ ವಸ್ತುಗಳು: ಪರ್ಸ್, ಸನ್ ಗ್ಲಾಸಸ್, ಹ್ಯಾಂಡ್‌ಬ್ಯಾಗ್‌ಗಳು, ಬೆಲ್ಟ್‌ಗಳು ಅಥವಾ ಕ್ಯಾಪ್‌ಗಳನ್ನು ತರುವಂತಿಲ್ಲ.

ಆಭರಣಗಳು: ಯಾವುದೇ ರೀತಿಯ ಚಿನ್ನ, ಬೆಳ್ಳಿ, ವಜ್ರದ ಆಭರಣಗಳು, ಉಂಗುರ, ಕಿವಿಯೋಲೆ, ಮೂಗುತಿ ಅಥವಾ ಸರಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.

ಡ್ರೆಸ್ ಕೋಡ್ ನಿಯಮಗಳು:

ನೀಟ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ತಿಳಿ ಬಣ್ಣದ, ಅರ್ಧ ತೋಳಿನ ಬಟ್ಟೆಗಳನ್ನು ಮಾತ್ರ ಧರಿಸಬೇಕು. ಉದ್ದನೆಯ ತೋಳಿನ ಬಟ್ಟೆಗಳಿಗೆ ಅನುಮತಿಯಿಲ್ಲ. ಬಟ್ಟೆಗಳಲ್ಲಿ ದೊಡ್ಡ ದೊಡ್ಡ ಬಟನ್‌ಗಳು ಅಥವಾ ದೊಡ್ಡ ಜೇಬುಗಳು ಇರಬಾರದು. ಚಪ್ಪಲಿಗಳ ವಿಷಯದಲ್ಲಿ ಕಡಿಮೆ ಹೀಲ್ಸ್ ಇರುವ ಚಪ್ಪಲಿಗಳನ್ನು ಧರಿಸಬಹುದು. ಆದರೆ, ಸಂಪೂರ್ಣವಾಗಿ ಮುಚ್ಚಿದ ಶೂಗಳನ್ನು ಧರಿಸಲು ಅವಕಾಶವಿಲ್ಲ. ಹಾಗೇ, ಧಾರ್ಮಿಕ ಅಥವಾ ಸಾಂಪ್ರದಾಯಿಕ ಉಡುಪುಗಳನ್ನು ಧರಿಸುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ 1ರಿಂದ 2 ಗಂಟೆ ಮುಂಚಿತವಾಗಿ ತಲುಪಬೇಕು. ಇದರಿಂದ ಅವರ ತಪಾಸಣೆಯನ್ನು ಸುಲಭವಾಗಿ ಮಾಡಬಹುದು.

ಇದನ್ನೂ ಓದಿ: Video: ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಪ್ರಶ್ನೆಪತ್ರಿಕೆಗಳ ಸಾಗಾಟಕ್ಕೆ ಸೇನಾ ಹೆಲಿಕಾಪ್ಟರ್‌ ಬಳಕೆ

ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ವಸ್ತುಗಳನ್ನು ಇಡಲು ಯಾವುದೇ ಪ್ರತ್ಯೇಕ ಕೌಂಟರ್ ಅಥವಾ ಸುರಕ್ಷಿತ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ, ತಪಾಸಣೆ ವೇಳೆ ವಸ್ತುಗಳನ್ನು ವಶಕ್ಕೆ ಪಡೆದು ಪರೀಕ್ಷಾ ಕೇಂದ್ರದ ಹೊರಗೆ ಇಡುವಾಗ ಅದು ಕಳೆದುಹೋಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ನಿಷೇಧಿತ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರಬೇಡಿ ಎಂದು ಎನ್‌ಟಿಎ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸೂಚನೆ ನೀಡಿದೆ.

ಪರೀಕ್ಷಾ ಕೇಂದ್ರದ ಸಮಯ ಮತ್ತು ಹಾಜರಾತಿ:

ಸಮಯ ಪಾಲನೆ: ಪರೀಕ್ಷೆಯು ಮಧ್ಯಾಹ್ನದ ಅವಧಿಯಲ್ಲಿ ನಡೆಯಲಿದ್ದು, ಪ್ರವೇಶ ಪತ್ರದಲ್ಲಿ (Admit Card) ನಮೂದಿಸಿರುವ ಸಮಯಕ್ಕೆ (Reporting Time) ವಿದ್ಯಾರ್ಥಿಗಳು ಹಾಜರಿರಬೇಕು.

ಗೇಟ್ ಮುಚ್ಚುವ ಸಮಯ: ಪರೀಕ್ಷೆ ಆರಂಭವಾಗುವ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರದ ಮುಖ್ಯ ಗೇಟ್‌ಗಳನ್ನು ಮುಚ್ಚಲಾಗುತ್ತದೆ. ತಡವಾಗಿ ಬರುವ ಯಾವುದೇ ವಿದ್ಯಾರ್ಥಿಗೆ ಪ್ರವೇಶ ನೀಡಲಾಗುವುದಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:28 pm, Sat, 20 June 26

Source link

Exit mobile version