ವಿವಾದಕ್ಕೆ ಸಿಲುಕಿದ ‘ಸ್ಪಿರಿಟ್’: ಪ್ರಭಾಸ್ ಮಧ್ಯ ಪ್ರವೇಶಕ್ಕೆ ಒತ್ತಾಯ – Kannada News | Spirit movie title is in controversy Producer request Prabhas to interfere in the matter

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ನಟಿಸುತ್ತಿರುವ ‘ಸ್ಪಿರಿಟ್’ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. ಸಿನಿಮಾ ಅನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದು, ಸಿನಿಮಾದ ಬಗ್ಗೆ ಪ್ರಭಾಸ್ ಅಭಿಮಾನಿಗಳು ಬಲು ಉತ್ಸುಕವಾಗಿದ್ದಾರೆ. ಸಿನಿಮಾನಲ್ಲಿ ಪ್ರಭಾಸ್ ಬಲು ಮಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಪೋಸ್ಟರ್ ಒಂದು ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಸೆನ್ಸೇಷನ್ ಸೃಷ್ಟಿಸಿದೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ಸಿನಿಮಾದ ಶೀರ್ಷಿಕೆ ಕುರಿತು ವಿವಾದ ಭುಗಿಲೆದ್ದಿದೆ. ಇದೀಗ ಈ ವಿವಾದವನ್ನು ಅಂತ್ಯಗೊಳಿಸಲು ನಟ ಪ್ರಭಾಸ್ ಮಧ್ಯ ಪ್ರವೇಶ ಮಾಡಬೇಕೆಂದು ಒತ್ತಾಯಿಸಲಾಗಿದೆ.

ಸಿನಿಮಾ ಮೇಲಿನ ಆಸಕ್ತಿಯಿಂದ ರೈತ ಮಹಿಳೆ ನರಸಮ್ಮ ಎಂಬುವರು ನಿರ್ಮಾಪಕಿಯಾಗಿ ಬದಲಾಗಿ ಸಿನಿಮಾ ಒಂದನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಸೆನ್ಸಾರ್ ಸಹ ಆಗಿದೆ. ಆದರೆ ಸಿನಿಮಾ ಬಿಡುಗಡೆಗೆ ದಿನಗಳು ಬಾಕಿ ಇರುವಾಗ ಇದೀಗ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಟಿ-ಸೀರೀಸ್​​ನಿಂದ ನಿರ್ಮಾಪಕಿ ನರಸಮ್ಮನಿಗೆ ಎರಡು ನೋಟೀಸ್​​ಗಳು ಹೋಗಿವೆ. ನರಸಮ್ಮ ಅವರು ನಿರ್ಮಾಣ ಮಾಡಿರುವ ಸಿನಿಮಾದ ಹೆಸರು ‘ಸ್ಪಿರಿಟ್ ಈಸ್ ನಾಟ್ ಒನ್’. ಈಗ ಟಿ-ಸೀರೀಸ್ ನೀಡಿರುವ ನೊಟೀಸ್​​ನಿಂದ ಸಿನಿಮಾದ ಬಿಡುಗಡೆ ನಿಲ್ಲಿಸಲಾಗಿದೆ.

ಈ ವಿವಾದವನ್ನು ಪ್ರಭಾಸ್ ಅವರೇ ಬಗೆಹರಿಸಬೇಕು ಎಂದು ನರಸಮ್ಮ ಒತ್ತಾಯಿಸಿದ್ದು, ‘ನಮ್ಮ ಕುಟುಂಬ ಕಷ್ಟಪಟ್ಟು, ಆಸ್ತಿಗಳನ್ನು ಮಾರಿ ‘ಸ್ಪಿರಿಟ್ ಈಸ್ ನಾಟ್ ಒನ್’ ಚಿತ್ರವನ್ನು ನಿರ್ಮಿಸಿದೆ. ಇದು ಕೇವಲ ನಮ್ಮ ಕನಸಲ್ಲ, ನಮ್ಮ ಕುಟುಂಬ ಸದಸ್ಯರ ಶ್ರಮ, ಆಸೆ ಮತ್ತು ಹೂಡಿಕೆಯಾಗಿದೆ. ಸಿನಿಮಾ ಬಿಡುಗಡೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದಾಗ ಕಾನೂನು ನೋಟಿಸ್ ಬಂದಿದ್ದರಿಂದ ನಾವು ತೀವ್ರ ನಷ್ಟವನ್ನು ಎದುರಿಸುತ್ತಿದ್ದೇವೆ. ಟೀ-ಸೀರೀಸ್ ಸಂಸ್ಥೆಯಿಂದ ನಮಗೆ ಎರಡು ನೋಟಿಸ್‌ಗಳು ಬಂದಿವೆ. ‘ಸ್ಪಿರಿಟ್’ ಹೆಸರಿನಲ್ಲಿ ನಮ್ಮ ಚಿತ್ರದ ಪ್ರಚಾರ ಮತ್ತು ಬಿಡುಗಡೆ ಮಾಡಬಾರದೆಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಆದರೆ, ನಮ್ಮ ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಪ್ರಮಾಣಪತ್ರ ದೊರೆತಿದೆ. ‘ಸ್ಪಿರಿಟ್’ ಯೋಜನೆ ಅಧಿಕೃತವಾಗಿ ಪ್ರಾರಂಭವಾಗುವ ಮೊದಲೇ ನಮ್ಮ ಚಿತ್ರದ ಪ್ರಚಾರ ನಡೆದಿತ್ತು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:‘ಕಲ್ಕಿ 2898 ಎಡಿ’ ಪಾರ್ಟ್ 2 ಪ್ರಭಾಸ್ ಸಿನಿಮಾ ಅಲ್ಲ, ಕಮಲ್ ಹಾಸನ್ ಸಿನಿಮಾ

‘ನಮ್ಮನ್ನು ಒಮ್ಮೆ ಸಂಪರ್ಕಿಸಿದ್ದರೆ, ಶೀರ್ಷಿಕೆಯನ್ನು ಬದಲಾಯಿಸಿಕೊಳ್ಳಲು ನಾವು ಸಿದ್ಧರಿದ್ದೆವು. ಆದರೆ ಯಾವುದೇ ಪೂರ್ವ ಚರ್ಚೆ ಇಲ್ಲದೆ ನೋಟಿಸ್ ಕಳುಹಿಸಿದ್ದರಿಂದ ಚಿತ್ರದ ಬಿಡುಗಡೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ವಿವಾದದಿಂದಾಗಿ ನಮ್ಮ ಕುಟುಂಬ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದೆ. ಸಿನಿಮಾ ಬಿಡುಗಡೆಗಾಗಿ ಮಾಡಿರುವ ಸಾಲವನ್ನು ತೀರಿಸಬೇಕಾದ ಪರಿಸ್ಥಿತಿ ಇದೆ. ಬಿಡುಗಡೆಗೆ ಹಣ ನೀಡುತ್ತೇವೆ ಎಂದವರು ಈಗ ಹಿಂದೆ ಸರಿದಿದ್ದಾರೆ. ಊರಿನಲ್ಲಿ ಗೌರವ ಹೋಗಿದೆ, ಸದ್ಯ ನಮ್ಮನ್ನು ಯಾರೂ ನಂಬುತ್ತಿಲ್ಲ’ ಎಂದು ನರಸಮ್ಮ ನೋವು ತೋಡಿಕೊಂಡಿದ್ದಾರೆ.

‘ಶೀರ್ಷಿಕೆಯ ಮೇಲೆ ಆಕ್ಷೇಪಣೆಗಳಿದ್ದರೆ, ಹಿರಿಯರ ಸಮ್ಮುಖದಲ್ಲಿ ಚರ್ಚಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ನಮಗೆ ಯಾವುದೇ ದುರುದ್ದೇಶವಿಲ್ಲ. ಪರಸ್ಪರ ತಿಳುವಳಿಕೆಯಿಂದ ಸಮಸ್ಯೆ ಬಗೆಹರಿಯಬೇಕೆಂದು ಬಯಸುತ್ತೇನೆ” ಎಂದು ನಿರ್ಮಾಪಕಿ ನರ್ಸಮ್ಮ ತಿಳಿಸಿದ್ದಾರೆ. ಅಗತ್ಯವಿದ್ದರೆ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಿಕೊಳ್ಳಲೂ ಸಿದ್ಧರಿದ್ದೇವೆ. ತಮ್ಮ ಚಿತ್ರದ ಬಿಡುಗಡೆಗೆ ಯಾವುದೇ ಆಕ್ಷೇಪವಿಲ್ಲ ಎಂದು ಟೀ-ಸೀರೀಸ್ ಕಡೆಯಿಂದ ಅಧಿಕೃತ ಪತ್ರ ನೀಡಬೇಕೆಂದು ಮನವಿ ಮಾಡಿದ್ದಾರೆ. ಒಂದು ವೇಳೆ ಈ ಸಮಸ್ಯೆಗೆ ಪರಿಹಾರ ಸಿಗದಿದ್ದರೆ, ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ತಿಳಿಸಿದ್ದಾರೆ. ಪ್ರಭಾಸ್ ಮೇಲಿನ ಅಭಿಮಾನದಿಂದಲೇ ಈ ಮನವಿ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದ ಅವರು, ತಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನಿರ್ಮಾಪಕರೊಂದಿಗೆ ಮಾತನಾಡಿ ನ್ಯಾಯ ದೊರಕಿಸಿಕೊಡಬೇಕೆಂದು ಪ್ರಭಾಸ್ ಅವರಿಗೆ ಮನವಿ ಮಾಡುತ್ತಿದ್ದೇವೆ ಎಂದು ನರಸಮ್ಮ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:45 pm, Sat, 20 June 26

Source link

ಮಹಾರಾಷ್ಟ್ರದ ದೇವಸ್ಥಾನದಲ್ಲಿ ಛಾವಣಿ ಕುಸಿತ; 6 ಜನ ಸಾವು, ಅವಶೇಷಗಳಡಿ ಸಿಲುಕಿದ ಭಕ್ತರು – Kannada News | 6 dead after roof collapse at Hanuman Temple in Maharashtra 40 Devotees trapped

ಮುಂಬೈ, ಜೂನ್ 20: ಮಹಾರಾಷ್ಟ್ರದ (Maharashtra) ಪರ್ಭಾನಿ ಜಿಲ್ಲೆಯ ದೇವಸ್ಥಾನವೊಂದರಲ್ಲಿ ನಿರ್ಮಾಣ ಹಂತದಲ್ಲಿದ್ದ ಸಭಾ ಮಂಟಪದ ಛಾವಣಿ ಕುಸಿದು ಬಿದ್ದ ಪರಿಣಾಮ 6 ಜನರು ಸಾವನ್ನಪ್ಪಿದ್ದಾರೆ. ಸುಮಾರು 40 ಭಕ್ತರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ರಕ್ಷಣಾ ತಂಡಗಳು ಅವಶೇಷಗಳನ್ನು ತೆರವುಗೊಳಿಸಲು ಮತ್ತು ಬದುಕುಳಿದವರನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ಮುಂದುವರಿಸಿವೆ.

ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ಈ ಭೀಕರ ಘಟನೆ ನಡೆದಿದೆ. ಮಾರುತಿ ದೇವಸ್ಥಾನದಲ್ಲಿ ನಿರ್ಮಾಣ ಹಂತದಲ್ಲಿದ್ದ ಸಭಾ ಮಂಟಪದ ಛಾವಣಿ ಕುಸಿದು ಬಿದ್ದಿದೆ. ಇದರ ಪರಿಣಾಮವಾಗಿ ಹಲವಾರು ಭಕ್ತರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಆರು ಜನರು ಸಾವನ್ನಪ್ಪಿದ್ದಾರೆ. 30ರಿಂದ 40 ಭಕ್ತರು ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಶನಿವಾರವಾದ್ದರಿಂದ ದೇವಸ್ಥಾನದ ಆವರಣದಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದಾಗ ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ: ದೆಹಲಿಯಲ್ಲೊಂದು ಬೇಬಿ ಬಜಾರ್! 8 ಲಕ್ಷಕ್ಕೆ ಗಂಡು ಮಗು, 4 ಲಕ್ಷಕ್ಕೆ ಹೆಣ್ಣು ಮಗು ಮಾರಾಟ

ಸಾವು ಅಥವಾ ಗಾಯಾಳುಗಳ ಸಂಖ್ಯೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಇನ್ನೂ ಯಾವುದೇ ಅಧಿಕೃತ ದೃಢೀಕರಣವನ್ನು ಬಿಡುಗಡೆ ಮಾಡಿಲ್ಲ. ಆದರೆ ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕಟ್ಟಡ ಕುಸಿದ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಡಳಿತದ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಮತ್ತು ತುರ್ತು ಸ್ಪಂದನಾ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ದುರಂತದಿಂದ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಪ್ರಧಾನ ಮಂತ್ರಿ ಕಾರ್ಯಾಲಯ ಹಂಚಿಕೊಂಡಿರುವ ಸಂದೇಶದಲ್ಲಿ, ಈ ಅಪಘಾತದಲ್ಲಿ ಜೀವಹಾನಿಯಾಗಿರುವುದು ತೀವ್ರ ಆಘಾತ ತಂದಿದೆ ಎಂದು ಅವರು ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ಅವರು ತಮ್ಮ ಸಾಂತ್ವನವನ್ನು ತಿಳಿಸಿದ್ದಾರೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರ ಜಾಲ ಪತ್ತೆ; 7 ಮಂದಿ ಬಂಧನ

ಛಾವಣಿ ಕುಸಿತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ರಕ್ಷಣಾ ಕಾರ್ಯಾಚರಣೆಗಳು ಪೂರ್ಣಗೊಂಡು ಪ್ರದೇಶವನ್ನು ಸುರಕ್ಷಿತಗೊಳಿಸಿದ ನಂತರ ಅಧಿಕಾರಿಗಳು ವಿವರವಾದ ತನಿಖೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ತುರ್ತು ಸೇವಾ ತಂಡಗಳು ತಮ್ಮ ಹುಡುಕಾಟವನ್ನು ಮುಂದುವರಿಸುತ್ತಿದ್ದಂತೆ, ದೇವಸ್ಥಾನದಲ್ಲಿ ಜಮಾಯಿಸಿದ ಭಕ್ತರ ಕುಟುಂಬಗಳು ಕುಸಿದ ಕಟ್ಟಡದ ಅಡಿಯಲ್ಲಿ ಸಿಲುಕಿರುವ ತಮ್ಮ ಸಂಬಂಧಿಕರ ಕುರಿತ ಮಾಹಿತಿಗಾಗಿ ಆತಂಕದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಈ ಅಭ್ಯಾಸಗಳನ್ನು ಬದಲಾಯಿಸದಿದ್ದರೆ ನಿಮ್ಮ ಆದಾಯ ಎಂದಿಗೂ ಹೆಚ್ಚಳವಾಗುವುದಿಲ್ಲ – Kannada News | Chanakya Niti: You can never get rich if you don’t change these habits

ಜೀವನದಲ್ಲಿ ಯಶಸ್ಸನ್ನು ಗಳಿಸಬೇಕು, ಸಾಕಷ್ಟು ಹಣ (Money) ಸಂಪಾದನೆ ಮಾಡಬೇಕು, ಶ್ರೀಮಂತಿಕೆಯನ್ನು ಗಳಿಸಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಎಲ್ಲರೂ ಕಷ್ಟಪಟ್ಟು ಕೆಲಸವನ್ನು ಮಾಡುತ್ತಾರೆ. ಆದರೆ ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರೂ, ಎಷ್ಟೇ ಸಂಪಾದನೆ ಮಾಡಿದರೂ ಅವರಿಗೆ ಹಣ ಗಳಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಅವರ ಈ ಅಭ್ಯಾಸಗಳೇ ಕಾರಣ ಎಂದಿದ್ದಾರೆ ಆಚಾರ್ಯ ಚಾಣಕ್ಯ. ಆ ಅಭ್ಯಾಸಗಳು ನಿಮ್ಮಲ್ಲೂ ಇದ್ದರೆ ಇಂದೇ ಬದಲಾಯಿಸಿ, ಇಲ್ಲದಿದ್ದರೆ ನಿಮಗೂ ಸಾಕಷ್ಟು ಹಣ ಗಳಿಸಲು, ಶ್ರೀಮಂತಿಕೆ ಗಳಿಸಲು ಸಾಧ್ಯವಿಲ್ಲ ಎಂದೂ ಎಚ್ಚರಿಕೆಯನ್ನು ನೀಡಿದ್ದಾರೆ. ಆ ಅಭ್ಯಾಸಗಳು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಹಣ ಗಳಿಕೆಗೆ ಅಡ್ಡಿಯಾಗುವ ಅಭ್ಯಾಸಗಳು:

ಅನಗತ್ಯವಾಗಿ ಖರ್ಚು: ಚಾಣಕ್ಯರ ಪ್ರಕಾರ, ಸಂಪತ್ತನ್ನು ಸಂಗ್ರಹಿಸುವುದು ಅದನ್ನು ಗಳಿಸುವಷ್ಟೇ ಮುಖ್ಯ. ಪ್ರದರ್ಶನಕ್ಕಾಗಿ ಹಣವನ್ನು ಖರ್ಚು ಮಾಡುವುದು ಅಥವಾ ಅನಗತ್ಯ ಖರೀದಿಗಳನ್ನು ಮಾಡುವುದು ಒಬ್ಬ ವ್ಯಕ್ತಿಯ ಆರ್ಥಿಕ ಯೋಗಕ್ಷೇಮವನ್ನು ಕುಗ್ಗಿಸುತ್ತದೆ. ಒಬ್ಬ ವ್ಯಕ್ತಿಯು ಅನಗತ್ಯ ಖರ್ಚುಗಳನ್ನು ನಿಯಂತ್ರಿಸದಿದ್ದರೆ, ಎಷ್ಟೇ ಸಂಪಾದನೆ ಮಾಡಿದರೂ ಸಹ ಹಣ ಉಳಿಯುವುದೇ ಇಲ್ಲ. ಎಲ್ಲಾ ದುಡ್ಡು ಸಹ ಖರ್ಚಾಗುತ್ತದೆ. ಹಾಗಾಗಿ ಅನಗತ್ಯ ವಿಷಯಗಳಿಗೆ ಹಣ ಖರ್ಚು ಮಾಡಬೇಡಿ, ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿ, ಉಳಿತಾಯ ಮಾಡಿ.

ಸಮಯ ವ್ಯರ್ಥ ಮಾಡಬೇಡಿ: ಆಚಾರ್ಯ ಚಾಣಕ್ಯರು ಹೇಳುವಂತೆ ಸಮಯವು ವ್ಯಕ್ತಿಯ ಅತ್ಯಂತ ಅಮೂಲ್ಯ ಆಸ್ತಿ. ಅವರ ಪ್ರಕಾರ, ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳದ ವ್ಯಕ್ತಿಯು ಎಂದಿಗೂ ದೊಡ್ಡ ಯಶಸ್ಸನ್ನು ಸಾಧಿಸಲು ಅಥವಾ ಸಂಪತ್ತನ್ನು ಸಂಗ್ರಹಿಸಲು ಸಾಧ್ಯವಿಲ್ಲ. ಚಾಣಕ್ಯ ನೀತಿಯ ಪ್ರಕಾರ, ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸುವುದರಿಂದ ದಕ್ಷತೆ ಹೆಚ್ಚಾಗುತ್ತದೆ.ಯಶಸ್ಸನ್ನೂ ಸಾಧಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಮಹಿಳೆಯರಿಗೆ ಇಷ್ಟವಾಗೋದೇ ಪುರುಷರ ಗುಣಗಳು ಎನ್ನುತ್ತಾರೆ ಚಾಣಕ್ಯ

ಸೋಮಾರಿತನ ಬಿಟ್ಟುಬಿಡಿ: ಚಾಣಕ್ಯರು ಹೇಳುವಂತೆ ನಿರಂತರವಾಗಿ ಕಷ್ಟಪಟ್ಟು ಕೆಲಸ ಮಾಡುವವರು ಮಾತ್ರ ಪ್ರಗತಿ ಸಾಧಿಸಬಹುದು. ಕೆಲಸಗಳನ್ನು ಮುಂದೂಡುವ ಪ್ರವೃತ್ತಿಯು ಆದಾಯವನ್ನು ಮಿತಿಗೊಳಿಸುತ್ತದೆ. ಆದ್ದರಿಂದ, ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಬೇಕು ಮತ್ತು ಕಠಿಣ ಪರಿಶ್ರಮವನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಕು, ಸೋಮಾರಿತನವನ್ನು ಬಿಟ್ಟು ಅಂದಿನ ಕೆಲಸವನ್ನು ಅಂದೇ ಮಾಡಿ ಮುಗಿಸಬೇಕು. ಆಗ ಮಾತ್ರ ಭವಿಷ್ಯದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು ಎಂದು ಸಲಹೆ ನೀಡಿದ್ದಾರೆ.

ಕೆಟ್ಟ ಸಹವಾಸದಿಂದ ದೂರವಿರಿ: ನಕಾರಾತ್ಮಕ, ಸೋಮಾರಿ ಮತ್ತು ದೂರು ನೀಡುವವರಿಂದ ಯಾವಾಗಲೂ ಅಂತರ ಕಾಯ್ದುಕೊಳ್ಳಬೇಕು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಏಕೆಂದರೆ ಅಂತಹ ಜನರು ಪ್ರಗತಿಗೆ ಅಡ್ಡಿಯಾಗುತ್ತಾರೆ. ಆದ್ದರಿಂದ, ಅಂತಹ ದುರ್ಗುಣ ಹೊಂದಿರುವ ಜನರಿಂದ ದೂರವಿರಬೇಕು. ಅಲ್ಲದೆ ದುರ್ಬುದ್ಧಿ ಇರುವ ಜನರು ನಿಮ್ಮ ಕೈಯಿಂದ ಹಣ ಖರ್ಚು ಮಾಡಿಸುವ ಸಾಧ್ಯತೆಯೂ ಹೆಚ್ಚು. ಇಂತಹವರ ಸಹವಾಸ ಮಾಡಿದರೆ ಶ್ರೀಮಂತಿಕೆಯನ್ನು ಗಳಿಸಲು ಸಾಧ್ಯವಿಲ್ಲ, ಜೀವನದಲ್ಲಿ ಯಶಸ್ಸನ್ನೂ ಕಾಣಲು ಸಾಧ್ಯವಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಚೊಚ್ಚಲ ಸರಣಿಯಲ್ಲೇ ಇತಿಹಾಸ ನಿರ್ಮಿಸಿದ ಗುರ್ನೂರ್ ಬ್ರಾರ್

Source link

ಈಗ ಉಳಿದಿರುವುದು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮಾತ್ರ; ಉದ್ಧವ್ ಠಾಕ್ರೆಗೆ ಅಮಿತ್ ಶಾ ಟಾಂಗ್ – Kannada News | Amit Shah takes dig at Uddhav Thackeray says There is only one Shiv Sena now led by Eknath Shinde

ಕೊಲ್ಲಾಪುರ, ಜೂನ್ 20: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿದ್ದು, ಶಿವಸೇನಾ (UBT) ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಮಹಾರಾಷ್ಟ್ರದಲ್ಲಿ ಈಗ ಕೇವಲ ಒಂದೇ ಶಿವಸೇನೆ ಇದೆ. ಅದು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ” ಎಂದು ಅಮಿತ್ ಶಾ ಹೇಳಿದ್ದಾರೆ. ಉದ್ಧವ್ ಠಾಕ್ರೆ ಬಣದ ಸಂಸದರು ಬಂಡಾಯದ ಹಾದಿಯಲ್ಲಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಉದ್ಧವ್ ಠಾಕ್ರೆ ಬಣವನ್ನು ಲೇವಡಿ ಮಾಡಿದ ಅಮಿತ್ ಶಾ, “ಬಾಳಾಸಾಹೇಬ್ ಠಾಕ್ರೆ ಅವರ ನೈಜ ಹಿಂದೂತ್ವದ ಸಿದ್ಧಾಂತಗಳನ್ನು ಏಕನಾಥ್ ಶಿಂಧೆ ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ, ಅಧಿಕೃತ ಮತ್ತು ನಿಜವಾದ ಶಿವಸೇನೆ ಎಂದರೆ ಅದು ಶಿಂಧೆ ನೇತೃತ್ವದ ಪಕ್ಷ ಮಾತ್ರ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಜೊತೆ ವಿಲೀನಕ್ಕೆ ಉದ್ಧವ್ ಠಾಕ್ರೆ ಪ್ಲಾನ್; ಶಿವಸೇನೆಯ 6 ಬಂಡಾಯ ಸಂಸದರಿಂದ ಸ್ಪೀಕರ್‌ಗೆ ದೂರು

ಅಮಿತ್ ಶಾ ಅವರ ಈ ಹೇಳಿಕೆಯು ಕೇವಲ ರಾಜಕೀಯ ಟೀಕೆಯಾಗಿರದೆ, ಪ್ರಸ್ತುತ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಆಂತರಿಕ ರಾಜಕೀಯ ಬೆಳವಣಿಗೆಗಳ ಸ್ಪಷ್ಟ ಸೂಚನೆಯಾಗಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (UBT) ಬಣದ ಹಲವು ಹಾಲಿ ಸಂಸದರು ಮತ್ತು ಹಿರಿಯ ನಾಯಕರು ಅವರ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಅವರೆಲ್ಲರೂ ಶೀಘ್ರದಲ್ಲೇ ಏಕನಾಥ್ ಶಿಂಧೆ ಬಣ ಅಥವಾ ಎನ್‌ಡಿಎ ಪಾಳಯವನ್ನು ಸೇರಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿವೆ.

ಇದನ್ನೂ ಓದಿ: ಬೇರೆ ಪಕ್ಷಕ್ಕೆ ಹೋಗುವುದಿದ್ದರೆ ಮೊದಲು ರಾಜೀನಾಮೆ ಕೊಡಿ; ಶಿವಸೇನೆ ಸಂಸದರಿಗೆ ಸಂಜಯ್ ರಾವತ್ ಸವಾಲು

ಭಾರತೀಯ ಚುನಾವಣಾ ಆಯೋಗವು ಈಗಾಗಲೇ ಏಕನಾಥ್ ಶಿಂಧೆ ಬಣಕ್ಕೆ ‘ಬಿಲ್ಲು ಮತ್ತು ಬಾಣ’ ಚಿಹ್ನೆ ಹಾಗೂ ‘ಶಿವಸೇನೆ’ ಎಂಬ ಮೂಲ ಹೆಸರಿನ ಮಾನ್ಯತೆ ನೀಡಿದೆ. ಇದನ್ನು ತಮ್ಮ ಭಾಷಣದ ಮೂಲಕ ಜನರಿಗೆ ಮತ್ತೊಮ್ಮೆ ನೆನಪಿಸಿದ ಅಮಿತ್ ಶಾ, ಉದ್ಧವ್ ಠಾಕ್ರೆ ಅವರ ಪಕ್ಷವು ಈಗ ಕೇವಲ ಒಂದು ಬಣವಾಗಿ ಮಾತ್ರ ಉಳಿದಿದೆ ಎಂಬುದನ್ನು ಒತ್ತಿಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆಶಿ ಕನಸಿನ ಭೂ ಗ್ಯಾರಂಟಿಗೆ ಭರ್ಜರಿ ರೆಸ್ಪಾನ್ಸ್: 6ನೇ ಸುತ್ತಿನ ನನ್ನ ಖಾತೆ ನನ್ನ ಹಕ್ಕು ಅಭಿಯಾನ ಯಶಸ್ವಿ – Kannada News | Huge response to land guarantee: 6th Phase of Nanna Khata, Nanna Hakku Campaign a Success

ನನ್ನ ಖಾತೆ ನನ್ನ ಹಕ್ಕು ಅಭಿಯಾನ Image Credit source: tv9 kannada

ಬೆಂಗಳೂರು, ಜೂನ್​ 20: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಮಹತ್ವಾಕಾಂಕ್ಷೆಯ ‘ನನ್ನ ಖಾತೆ ನನ್ನ ಹಕ್ಕು’ ಅಭಿಯಾನ (Nanna Khata, Nanna Hakku Campaign) ಇಂದು ಕೂಡ ಯಶಸ್ವಿಯಾಗಿ ಮುಂದುವರೆದಿದೆ. ನಗರದ ಆಸ್ತಿಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಈ ‘ಭೂ ಗ್ಯಾರಂಟಿ’ (Property guarantee) ಯೋಜನೆ ನಾಗರಿಕರಿಗೆ ವರದಾನವಾಗಿದೆ. ಬೆಂಗಳೂರಿನಲ್ಲಿ ನಡೆದ 6ನೇ ಸುತ್ತಿನ ಈ ಅಭಿಯಾನಕ್ಕೆ ಜನಸಾಮಾನ್ಯರ ಉತ್ತಮ ಸ್ಪಂದನೆ ದೊರೆತಿದೆ.

ಮುಖ್ಯಾಂಶಗಳು

  • ನನ್ನ ಖಾತೆ ನನ್ನ ಹಕ್ಕು ಅಭಿಯಾನದ ಆರನೇ ಸುತ್ತು ಯಶಸ್ಸು
  • ಬಿ ಟು ಎ ಖಾತಾ ಪರಿವರ್ತನೆ ಮತ್ತು ಇ-ಖಾತಾ ಸೇವೆಗಳ ಅನುಕೂಲ
  • ಭೂ ಗ್ಯಾರಂಟಿಯ ಪ್ರಯೋಜನಗಳು ಮತ್ತು ನಾಗರಿಕರ ಉತ್ಸಾಹಭರಿತ ಸ್ಪಂದನೆ

50ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಜರುಗಿದ ಅಭಿಯಾನ

ನಗರದಲ್ಲಿ ಇಂದು ಆರನೇ ಸುತ್ತಿನ ‘ನನ್ನ ಖಾತೆ ನನ್ನ ಹಕ್ಕು’ ಅಭಿಯಾನವು 50ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಜರುಗಿದ್ದು, ಸರ್ಕಾರ ಘೋಷಿಸಿರುವ ಆರನೇ ಗ್ಯಾರಂಟಿಯ ಭಾಗವಾಗಿ ನಾಗರಿಕರಿಗೆ ಖಾತಾ ಸಂಬಂಧಿತ ಸಮಸ್ಯೆಗಳ ಪರಿಹಾರ ಒದಗಿಸುತ್ತಿದೆ. ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಸೇರಿದಂತೆ ವಿವಿಧ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ನೀಡುವ ಮೂಲಕ ಜನರಿಗೆ ಸುಲಭವಾಗಿ ಸೇವೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಬಸವನಗುಡಿ ಸೇರಿದಂತೆ ಹಲವು ಪ್ರದೇಶಗಳ ನಾಗರಿಕರು ಅಭಿಯಾನದಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಅರ್ಜಿಗಳು ಹಾಗೂ ಅಹವಾಲುಗಳನ್ನು ಸಲ್ಲಿಸಿದರು.

ಇದನ್ನೂ ಓದಿ: 6ನೇ ಗ್ಯಾರಂಟಿ ಘೋಷಿಸಿದ ಡಿಕೆ ಶಿವಕುಮಾರ್, ಬೆಂಗಳೂರಿಗರಿಗೆ ಬಂಪರ್ ಗಿಫ್ಟ್!

ಬಿ ಟು ಎ ಖಾತಾ ಪರಿವರ್ತನೆಗೆ ಸರ್ಕಾರ ಈಗಾಗಲೇ ವಿನಾಯಿತಿ ಘೋಷಿಸಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಆಸ್ತಿ ಮೌಲ್ಯದ ಶೇ. 5 ರಷ್ಟು ಶುಲ್ಕವನ್ನು ಶೇ.2ಕ್ಕೆ ಇಳಿಕೆ ಮಾಡಿದೆ. ಕೇಂದ್ರಗಳಲ್ಲಿ ಇ-ಖಾತಾ, ಹೊಸ ಇ-ಖಾತಾ ನೋಂದಣಿ, ಬಾಕಿ ಉಳಿದಿರುವ ಅರ್ಜಿಗಳ ವಿಲೇವಾರಿ, ತಿದ್ದುಪಡಿಗಳು ಹಾಗೂ ವಿವಿಧ ಅಹವಾಲುಗಳ ತ್ವರಿತ ಪರಿಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನೂ ಮುಂದಿನ 2 ತಿಂಗಳ ಕಾಲ ಪ್ರತಿ ಶನಿವಾರ ಅಭಿಯಾನ ನಡೆಯಲಿದೆ.

ಇದನ್ನೂ ಓದಿ: ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ; 50 ಲಕ್ಷ ಅನಿವಾಸಿ ಭಾರತೀಯರ ನೆರವಿಗೆ ನಿಂತ ರಾಜ್ಯ ಸರ್ಕಾರ

ಸದ್ಯ ಅಭಿಯಾನಕ್ಕೆ ನಾಗರಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಕಳೆದ 5 ಸುತ್ತಿನ ಅಭಿಯಾನದಲ್ಲಿ 12,629 ಜನರು ಭೇಟಿ ನೀಡಿದ್ದರೆ, 5,351 ಅರ್ಜಿಗಳ ವಿಲೇವಾರಿ ಯಶಸ್ವಿಯಾಗಿ ನಡೆದಿದೆ. ಬಾಕಿ ಪ್ರಕರಣಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುವುದು, ನಾಗರಿಕರ ಅನುಕೂಲತೆಯನ್ನು ಹೆಚ್ಚಿಸುವುದು, ಆಡಳಿತದಲ್ಲಿ ಪಾರದರ್ಶಕತೆಯನ್ನು ಬಲಪಡಿಸುವುದು ಹಾಗೂ ಸುಲಭ, ಪರಿಣಾಮಕಾರಿ ಮತ್ತು ನಾಗರಿಕ ಸ್ನೇಹಿ ಇ-ಖಾತಾ ಸೇವೆಗಳನ್ನು ಒದಗಿಸುವುದೇ ಈ ಯೋಜನೆಯ ಮೂಲ ಉದ್ದೇಶವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಿನಲ್ಲಿ ಸಂಜೆ ವೇಳೆಯೇ ಆವರಿಸಿದ ಕಗ್ಗತ್ತಲು, ಲೈಟ್ ಹಾಕಿಕೊಂಡು ಚಲಿಸಿದ ವಾಹನ ಚಾಲಕರು – Kannada News | Bengaluru Rainfall: Traffic Jam Some Roads In the City due to stagnant rainwater

ಬೆಂಗಳೂರು, (ಜೂನ್ 20): ಬೆಂಗಳೂರು ಮಾತ್ರವಲ್ಲ ದೇಶದಲ್ಲೂ ಸಹ ಈ ಬಾರಿ ವಾಡಿಕೆಗಿಂತ ಮಳೆಯಾಗಿಲ್ಲ. ಆದರೂ ಇಂದು (ಜೂನ್ 20) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆರಾಯ (Bengaluru Rain) ಕೃಪೆತೋರಿದ್ದಾನೆ. ಆದ್ರೆ, ಬಂದ ಸಣ್ಣ ಹನಿಯ ಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಗಳಂತಾಗಿವೆ. ಹೌದು…ಸಂಜೆ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿಕೊಂಡು ಹಲವೆಡೆ ಸಂಚಾರ ದಟ್ಟಣೆಯಾಗಿದ್ದು, ವಾಹನ ಸವಾರರು ಪರದಾಡುವಂತಾಯ್ತು.   ಇನ್ನು ಮೋಡ ಕವಿದ ವಾತಾವರಣದಿಂದಾಗಿ ವಾಹನ ಸವಾರರು ಸಂಜೆ ವೇಳೆಯಲ್ಲೇ ಹೆಡ್ ಲೈಟ್ ಆನ್ ಮಾಡಿಕೊಂಡು ಪ್ರಯಾಣಿಸುತ್ತಿರುವುದು ಕಂಡುಬಂತು. ಇನ್ನು ಸಣ್ಣ ಮಳೆಗೆ ಬೆಂಗಳೂರು ಹೇಗಾಗಿದೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

ಇದನ್ನೂ ಓದಿ : Karnataka Weather Forecast: ಕರಾವಳಿಯಲ್ಲಿ ಮುಂಗಾರು ಚುರುಕು, ಉ.ಕ ಜಿಲ್ಲೆಗಳಲ್ಲಿ ಬಿಸಿ ಗಾಳಿ: 5 ದಿನದ ವರದಿ ಹೀಗಿದೆ

Source link

Father’s Day 2026: ಅಪ್ಪನೆಂಬ ಅದ್ಭುತ; ವಿಶ್ವ ತಂದೆಯಂದಿರ ದಿನವನ್ನು ಆಚರಿಸುವುದೇಕೆ ಗೊತ್ತಾ? – Kannada News | Father’s Day 2026: Do you know why Father’s Day is celebrated? Here’s the information

ಮಕ್ಕಳ ಪಾಲಿಗೆ ತಂದೆಯೇ (Father) ಮೊದಲ ಸೂಪರ್‌ ಹೀರೋ. ತಂದೆಯಂದಿರು ತಮ್ಮ ಮಕ್ಕಳ ಜೀವನವನ್ನು ಮುನ್ನಡೆಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಹೌದು ಮಕ್ಕಳು ಹುಟ್ಟಿ ಅವರು ದೊಡ್ಡವರಾಗುವವರೆಗೂ ಅವರ ಒಳಿತಿಗಾಗಿ, ಏಳಿಗೆಗಾಗಿ ಜೀವ ತೇಯುತ್ತಾರೆ. ಕುಟುಂಬದ ಜವಾಬ್ದಾರಿಗಳನ್ನು ಹೊರುವುದಲ್ಲದೆ ಮಕ್ಕಳಿಗೆ ಉತ್ತಮ ಜೀವನವನ್ನು ರೂಪಿಸಲು ಹಗಲಿರುಳು ಶ್ರಮಿಸುತ್ತಾರೆ. ಆದರೆ ತಾಯಿಯ ವಾತ್ಸಲ್ಯಕ್ಕೆ ಸಿಗುವ ಮನ್ನಣೆ ಅಪ್ಪನ ತ್ಯಾಗಕ್ಕೆ ಮಾತ್ರ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಅಪ್ಪಂದಿರ ಪ್ರೀತಿ ಮತ್ತು ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್‌ 3 ನೇ ಭಾನುವಾರದಂದು ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಜೂನ್‌ 21 ರಂದು ಈ ದಿನವನ್ನು ಆಚರಿಸಲಾಗುತ್ತಿದ್ದು, ಈ ಆಚರಣೆಯ ಹಿನ್ನೆಲೆಯ ಬಗ್ಗೆ ತಿಳಿಯಿರಿ.

ವಿಶ್ವ ಅಪ್ಪಂದಿರ ದಿನದ ಇತಿಹಾಸವೇನು?

ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರದಂದು ತಂದೆಯ ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆ ಮೊದಲು ಅಮೆರಿಕದಲ್ಲಿ ಪ್ರಾರಂಭವಾಯಿತು. ತಂದೆಯ ದಿನವನ್ನು ಪ್ರಾರಂಭಿಸಿದ ಕೀರ್ತಿ ಅಮೆರಿಕದ ಸೋನೋರಾ ಸ್ಮಾರ್ಟ್ ಡಾಡ್ ಎಂಬ ಮಹಿಳೆಗೆ ಸಲ್ಲುತ್ತದೆ. ಅವರ ತಂದೆ ಸೈನಿಕರಾಗಿದ್ದರು, ಡಾಡ್ ಮತ್ತು ಅವರ ಐವರು ಒಡಹುಟ್ಟಿದವರ ತಾಯಿ ಹೆರಿಗೆಯ ಸಮಯದಲ್ಲಿ ಮರಣ ಹೊಂದಿದಾಗ ಅವರನ್ನು ತಂದೆಯೇ ಬೆಳೆಸಿದರು. ಹಾಗಾಗಿ ಡಾಡ್‌ 1909 ರಲ್ಲಿ ತಾಯಂದಿರ ದಿನದ ಸಂದರ್ಭದಲ್ಲಿ ತಾಯಂದಿರ ದಿನವನ್ನು ಆಚರಿಸುವಂತೆಯೇ, ತಂದೆಯ ದಿನವನ್ನು ಸಹ ಅದೇ ರೀತಿಯಲ್ಲಿ ಏಕೆ ಆಚರಿಸಬಾರದು ಎಂಬ ಕಲ್ಪನೆ ಅವರಲ್ಲಿ ಮೂಡಿತು.  ನಂತರ ಸ್ಥಳೀಯ ಮುಖಂಡರು ಡಾಡ್ ಅವರ ಕಲ್ಪನೆಯನ್ನು ಬೆಂಬಲಿಸಿದರು. ಬಳಿಕ  ಮೊದಲ ಬಾರಿಗೆ  ತಂದೆಯಂದಿರ  ದಿನವನ್ನು ಜೂನ್ 19, 1910 ರಂದು ಆಚರಿಸಲಾಯಿತು. ನಂತರ 1924 ರಲ್ಲಿ, ಯುಎಸ್ ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ ಕೂಡ ಇದಕ್ಕೆ ತಮ್ಮ ಬೆಂಬಲವನ್ನು ನೀಡಿದರು. 1966 ರಲ್ಲಿ, ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಈ ದಿನವನ್ನು ಗುರುತಿಸುವ ಘೋಷಣೆಯನ್ನು ಮಾಡಿದರು. 1972 ರಲ್ಲಿ ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಜೂನ್ ಮೂರನೇ ಭಾನುವಾರವನ್ನು ತಂದೆಯ ದಿನವೆಂದು ಗೊತ್ತುಪಡಿಸುವ ಕಾನೂನಿಗೆ ಸಹಿ ಹಾಕಿದರು. ಅಂದಿನಿಂದ ಪ್ರತಿವರ್ಷ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ವಿಶ್ವ ಅಪ್ಪಂದಿರ ದಿನದಂದು ನಿಮ್ಮ ತಂದೆಗಾಗಿ ಮಾಡಿ ಆರೋಗ್ಯಕರ ರಾಗಿ ಕೇಕ್‌

ತಂದೆಯ ದಿನದ ಮಹತ್ವವೇನು?

  • ತಂದೆಯ ದಿನವು ಕೇವಲ ಆಚರಣೆಯಲ್ಲ, ತಂದೆಯ ಪ್ರೀತಿ, ತ್ಯಾಗ, ಕಠಿಣ ಪರಿಶ್ರಮ ಮತ್ತು ಹೋರಾಟವನ್ನು ನೆನಪಿಸಿಕೊಳ್ಳುವ ಅವಕಾಶವೂ ಆಗಿದೆ. ಈ ದಿನವು ನಮ್ಮ ತಂದೆಯವರಿಗೆ ನಮ್ಮ ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ನಮಗೆ ಸ್ಫೂರ್ತಿ ನೀಡುತ್ತದೆ.
  • ತಂದೆಯಂದಿರ ದಿನವು ತಂದೆಯ ಸಮರ್ಪಣೆ ಮತ್ತು ಪ್ರೀತಿಯನ್ನು ಗೌರವಿಸುವ ಮತ್ತು ಆಚರಿಸುವ ದಿನವಾಗಿದೆ. ಈ ಸಂದರ್ಭದಲ್ಲಿ, ಜನರು ತಮ್ಮ ತಂದೆಯ ಮುಖದಲ್ಲಿ ನಗುವನ್ನು ತರಲು ವಿವಿಧ ರೀತಿಯಲ್ಲಿ ಶ್ರಮಿಸುತ್ತಾರೆ. ಉಡುಗೊರೆಗಳನ್ನು ನೀಡುವುದರಿಂದ ಹಿಡಿದು ಅವರೊಂದಿಗೆ ಸಮಯ ಕಳೆಯುವವರೆಗೆ ಈ ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಲ್ಲಿ ವರುಣನ ಅಬ್ಬರ: ಕೆರೆಯಂತಾದ ರಸ್ತೆಗಳು; ಅಲ್ಲಲ್ಲಿ ಸಂಚಾರ ದಟ್ಟಣೆ – Kannada News | Bengaluru Rain Havoc: Waterlogged Roads and Traffic Congestion Disrupt City Life

ಇನ್ನು ನಗರದ ಕೆಇಬಿ ಜಂಕ್ಷನ್​ನಿಂದ ಹೆಣ್ಣೂರು ಕಡೆಗೆ, ವರ್ತೂರು ಕೋಡಿಯಿಂದ ವೈಟ್‌ಫೀಲ್ಡ್ ಕಡೆಗೆ, ಹೆಗಡೆ ನಗರದಿಂದ ಥಣಿಸಂದ್ರ ಕಡೆಗೆ, ಮಡಿವಾಳ ಅಯ್ಯಪ್ಪ ಅಂಡರ್ ಪಾಸ್​ನಿಂದ ಮಡಿವಾಳ ಪಿಎಸ್ ಕಡೆಗೆ, ಸಿದ್ದಾಪುರದಿಂದ ವಿಬ್ಗ್ಯೋರ್ ಯು-ಟರ್ನ್ ಕಡೆಗೆ, ಬಿ-ನಾರಾಯಣಪುರದಿಂದ ನಗರದ ಕಡೆಗೆ ಮತ್ತು ಫೀನಿಕ್ಸ್ ಮಾಲ್ ಮಹದೇವಪುರ ದಿಂದ ಹೂಡಿ ಕಡೆಗಳಲ್ಲಿ ರಸ್ತೆಯಲ್ಲಿ ಮಳೆ ನೀರು ನಿಂತಿರುವುದರಿಂದ ಸಂಚಾರ ದಟ್ಟಣೆ ಉಂಟಾಗಿದೆ. (image credit blrcitytraffic)

Source link

IND vs AFG: W,W,W,W,W.. ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಮೊದಲ 5 ವಿಕೆಟ್​ಗಳ ಗೊಂಚಲು..! – Kannada News | India Pacer Prasidh Krishna Achieves Career Best 5 Wicket Haul in Afghanistan ODI

ಈ ಪಂದ್ಯದಲ್ಲಿ 8.2 ಓವರ್​ಗಳನ್ನು ಬೌಲ್ ಮಾಡಿದ ಪ್ರಸಿದ್ಧ್ ಕೃಷ್ಣ ಕೇವಲ 23 ರನ್​ಗಳನ್ನು ಬೌಲ್ ಮಾಡಿ 5 ವಿಕೆಟ್‌ಗಳನ್ನು ಕಬಳಿಸಿದರು. ಇದರಲ್ಲಿ 2 ಮೇಡನ್ ಓವರ್​ಗಳು ಸೇರಿದ್ದವು. ಪ್ರಸಿದ್ಧ್ ತೆಗೆದ 5 ವಿಕೆಟ್​ಗಳು ಕೂಡ ಅಫ್ಘಾನಿಸ್ತಾನದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್​ಗಳದ್ದಾಗಿದ್ದು, ಇದರಲ್ಲಿ ಶತಕದ ಇನ್ನಿಂಗ್ಸ್ ಆಡಿದ ಹಶ್ಮತುಲ್ಲಾ ಶಾಹಿದಿ ಅವರ ವಿಕೆಟ್ ಕೂಡ ಸೇರಿತ್ತು (PC-PTI).

Source link

Exit mobile version