ಸಾಲದಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ಮಾಸಿಕ 2000ರೂ. ಪಿಂಚಣಿ: ಯಾವೆಲ್ಲಾ ದಾಖಲೆಗಳು ಬೇಕು? – Kannada News | Death Farmers Wife How to Get Rs 2000 Monthly Pension, what are documents required, here Is Scheme details
ಬೆಂಗಳೂರು, (ಮೇ 22): ಸಾಮಾಜಿಕ ಭದ್ರತೆ ಮತ್ತು ಪಿಂಚನೆಗಳ ನಿರ್ದೇಶನಾಲಯ ವತಿಯಿಂದ ಕರ್ನಾಟಕದಾದ್ಯಂತ ಸಾಲ ಬಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ (Farmers) ಪತ್ನಿಯರಿಗೆ (Wife) ವಿಧವಾ ವೇತನ ಯೋಜನೆಯನ್ನು (Pension Scheme) ಜಾರಿ ಮಾಡಲಾಗಿದ್ದು, ಯೋಜನೆಯಲ್ಲಿ ರೈತನ ಮಡದಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡಲಾಗುತ್ತದೆ. ಕೃಷಿ ಇಲಾಖೆಯಿಂದ ರೈತರ ಆತ್ಮಹತ್ಯೆ ಪ್ರಕರಣಗಳಡಿಯ ಗುರುತಿಸಿ ಪರಿಹಾರ ಪಡೆದಿರುವ ಮೃತ ರೈತರ ಪತ್ನಿಗೆ ಮಾಸಿಕ ಪಿಂಚಣಿ ನೀಡಲಾಗುತ್ತಿದ್ದು, ಈ ಯೋಜನೆಯ ಕುರಿತಂತೆ ಅರ್ಹತಾ ಮಾನದಂಡ, ಸಲ್ಲಿಸಬೇಕಾದ ದಾಖಲೆಗಳ ಸಮೇತ…