10 ದಿನಗಳ ಬಳಿಕ ಕೋರ್ಟ್ ಮುಂದೆ ಶರಣಾದ ತ್ವಿಶಾ ಶರ್ಮಾ ಪತಿ ಸಮರ್ಥ್ ಸಿಂಗ್ – Kannada News | Twisha Sharmas husband Samarth Singh absconding for 10 days arrives at Jabalpur court to surrender

ನವದೆಹಲಿ, ಮೇ 22: ತ್ವಿಶಾ ಶರ್ಮಾ (Twisha Sharma) ಅವರ ಕುಟುಂಬಸ್ಥರು ಈ ಮೊದಲಿನಿಂದಲೂ ತಮ್ಮ ಮಗಳ ಸಾವಿನಲ್ಲಿ ಸಮರ್ಥ್ ಸಿಂಗ್ ಅವರದ್ದೇ ವ್ಯವಸ್ಥಿತ ಸಂಚು ಎಂದು ಆರೋಪಿಸುತ್ತಿದ್ದರು. ಈಗ ಪತಿ ಶರಣಾಗಿರುವುದರಿಂದ ಮತ್ತು ಇತ್ತ ದೆಹಲಿ ಏಮ್ಸ್ ತಜ್ಞರು ಎರಡನೇ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆ ಆರಂಭಿಸಿರುವುದರಿಂದ, ತ್ವಿಶಾ ಅವರದ್ದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬ ನಿಜವಾದ ರಹಸ್ಯ ಸದ್ಯದಲ್ಲೇ ಬಹಿರಂಗಗೊಳ್ಳಲಿವೆ.

ಕಳೆದ 10 ದಿನಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಸಮರ್ಥ್ ಸಿಂಗ್ ಇಂದು ಮಧ್ಯಪ್ರದೇಶದ ಸ್ಥಳೀಯ ನ್ಯಾಯಾಲಯಕ್ಕೆ ಶರಣಾಗಲು ಆಗಮಿಸಿದ್ದಾರೆ. ದೆಹಲಿ ಏಮ್ಸ್ (AIIMS) ಮೂಲಕ ತ್ವಿಶಾ ಶರ್ಮಾ ಅವರ ಶವದ ಎರಡನೇ ಮರಣೋತ್ತರ ಪರೀಕ್ಷೆಗೆ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಸಮರ್ಥ್ ಸಿಂಗ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಮೊದಲೇ ಆತ ಸಲ್ಲಿಸಿದ್ದ ಮುಂಗಡ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದರಿಂದ, ಪೊಲೀಸರು ಯಾವುದೇ ಕ್ಷಣದಲ್ಲೂ ತನ್ನನ್ನು ಬಂಧಿಸಬಹುದು ಮತ್ತು ಕಠಿಣ ಪೊಲೀಸ್ ವಿಚಾರಣೆಗೆ ಒಳಪಡಿಸಬಹುದು ಎಂಬುದನ್ನು ಅರಿತು, ಪೊಲೀಸ್ ಬಂಧನದಿಂದ ತಪ್ಪಿಸಿಕೊಳ್ಳಲು ನೇರವಾಗಿ ನ್ಯಾಯಾಲಯದ ಮುಂದೆ ಶರಣಾಗುವ ತಂತ್ರ ಹೂಡಿದ್ದಾರೆ.

ಇದನ್ನೂ ಓದಿ: ದೆಹಲಿ ಏಮ್ಸ್​​ನಿಂದ ತ್ವಿಶಾ ಶರ್ಮಾ 2ನೇ ಮರಣೋತ್ತರ ಪರೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ ಅನುಮತಿ

ಸಮರ್ಥ್ ಸಿಂಗ್ ನ್ಯಾಯಾಲಯದ ಆವರಣಕ್ಕೆ ಆಗಮಿಸುತ್ತಿದ್ದಂತೆ ತನಿಖಾಧಿಕಾರಿಗಳು ಮತ್ತು ಪೊಲೀಸರು ಅಲರ್ಟ್ ಆಗಿದ್ದಾರೆ. ನ್ಯಾಯಾಲಯವು ಆತನ ಶರಣಾಗತಿಯನ್ನು ಅಂಗೀಕರಿಸಿದ ತಕ್ಷಣ, ಪೊಲೀಸರು ಆತನನ್ನು ತಮ್ಮ ಕಸ್ಟಡಿಗೆ ನೀಡುವಂತೆ ಕೋರಲಿದ್ದಾರೆ.

ತ್ವಿಶಾ ಶರ್ಮಾ ಅವರ ಸಾವು ಸಾಮಾನ್ಯ ಆತ್ಮಹತ್ಯೆಯಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂದು ಅವರ ಪೋಷಕರು ಮತ್ತು ಕುಟುಂಬದವರು ಗಂಭೀರ ಆರೋಪ ಮಾಡಿದ್ದರು. ಮೊದಲನೇ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕೆಲವು ಲೋಪದೋಷಗಳಿರಬಹುದು. ಸತ್ಯವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿರಬಹುದು ಎಂದು ಶಂಕಿಸಿದ ಕುಟುಂಬಸ್ಥರು, ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಪೋರ್ಟ್ಸ್ ಇಂಜುರಿ ತಪ್ಪಿಸಲು ನಿಮ್ಮ ವೈದ್ಯರ ಈ ಸಲಹೆಗಳನ್ನು ತಪ್ಪದೆ ಪಾಲಿಸಿ – Kannada News | Expert Tips From Dr. Skand To Avoid Common Sports Injuries

ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಯುವಕರು ಜಿಮ್‌ಗೆ (Gym) ಹೋಗುವುದು, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಹೆಚ್ಚಾಗಿದೆ. ವ್ಯಾಯಾಮ ಮತ್ತು ಆಟಗಳು ಆರೋಗ್ಯಕ್ಕೆ ಒಳ್ಳೆಯದಾದರೂ, ಸರಿಯಾದ ವಿಧಾನ ಅನುಸರಿಸದಿದ್ದರೆ ಸ್ಪೋರ್ಟ್ಸ್ ಇಂಜುರಿ (Injuries) ಅಪಾಯವೂ ಹೆಚ್ಚಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಸಫ್ದರ್‌ಜಂಗ್ ಆಸ್ಪತ್ರೆಯ ಸ್ಪೋರ್ಟ್ಸ್ ಇಂಜುರಿ ಸೆಂಟರ್‌ನ ಹಿರಿಯ ಪ್ರೊಫೆಸರ್ ಹಾಗೂ ಆರ್ಥೋಪೆಡಿಕ್ಸ್ ತಜ್ಞ ಡಾ. ಸ್ಕಂದ್ ಸಿನ್ಹಾ ಅವರು ಹೇಳುವ ಪ್ರಕಾರ, ತಪ್ಪಾದ ಪೋಶ್ಚರ್, ವಾರ್ಮ್- ಅಪ್ ಮಾಡದೇ ವ್ಯಾಯಾಮ ಆರಂಭಿಸುವುದು ಮತ್ತು ದೇಹದ ಸಾಮರ್ಥ್ಯಕ್ಕಿಂತ ಹೆಚ್ಚು ವರ್ಕೌಟ್ ಮಾಡುವುದು ಗಾಯಗಳಿಗೆ ಪ್ರಮುಖ ಕಾರಣಗಳಾಗಿವೆ. ಆದರೆ ಈ ರೀತಿ ಆಗುವುದನ್ನು ತಡೆಯಲು ಕೆಲವು ಸಲಹೆಗಳನ್ನು ಅನುಸರಿಸುವುದು ಬಹಳ ಒಳ್ಳೆಯದು ಎನ್ನುತ್ತಾರೆ. ಹಾಗಾದರೆ ಸ್ಪೋರ್ಟ್ಸ್ ಇಂಜುರಿ ತಪ್ಪಿಸಲು ಏನು ಮಾಡಬೇಕು, ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯುವಕರಲ್ಲಿ ಹೆಚ್ಚು ಕಾಣಿಸುತ್ತಿರುವ ಸ್ಪೋರ್ಟ್ಸ್ ಇಂಜುರಿಗಳು ಯಾವುವು?

ಡಾ. ಸ್ಕಂದ್ ಸಿನ್ಹಾ ಅವರ ಪ್ರಕಾರ, ಇತ್ತೀಚೆಗೆ ಲಿಗಮೆಂಟ್ ಗಾಯ, ಸ್ನಾಯು ಎಳೆದಂತಾಗುವುದು, ಮೊಣಕಾಲು ನೋವು, ಭುಜದ ಗಾಯ ಮತ್ತು ಕೆಳ ಬೆನ್ನು ನೋವು ಹೆಚ್ಚು ಕಾಣಿಸುತ್ತಿವೆ. ಜಿಮ್‌ನಲ್ಲಿ ಸರಿಯಾದ ತಂತ್ರ ಪಾಲಿಸದೇ ವ್ಯಾಯಾಮ ಮಾಡುವುದು ಮತ್ತು ಅಗತ್ಯಕ್ಕಿಂತ ಹೆಚ್ಚು ತರಬೇತಿ ಪಡೆಯುವುದರಿಂದ ಈ ಸಮಸ್ಯೆಗಳು ಉಂಟಾಗುತ್ತವೆ. ಪ್ರತಿಯೊಬ್ಬರ ದೇಹದ ಸಾಮರ್ಥ್ಯ ವಿಭಿನ್ನವಾಗಿರುವುದರಿಂದ, ತಮ್ಮ ದೇಹಕ್ಕೆ ಹೊಂದುವ ರೀತಿಯಲ್ಲಿ ವ್ಯಾಯಾಮ ಮಾಡುವುದು ಬಹಳ ಮುಖ್ಯ ಎಂದು ಅವರು ಹೇಳುತ್ತಾರೆ.

ಸಣ್ಣ ಗಾಯವನ್ನೂ ನಿರ್ಲಕ್ಷಿಸುವುದು ಅಪಾಯಕಾರಿ

ಆರಂಭಿಕ ಹಂತದಲ್ಲಿರುವ ನೋವು, ಊತ ಅಥವಾ ಗಟ್ಟಿತನವನ್ನು ನಿರ್ಲಕ್ಷಿಸಿದರೆ ಅದು ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಯಾಗಬಹುದು. ಒಂದು ಭಾಗವನ್ನು ಚಲಿಸಲು ತೊಂದರೆ ಆಗುವುದು ಅಥವಾ ನೋವು ದೀರ್ಘಕಾಲ ಮುಂದುವರಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ತಜ್ಞರ ಪ್ರಕಾರ, ಆರಂಭದಲ್ಲೇ ಸರಿಯಾದ ಚಿಕಿತ್ಸೆ ಪಡೆಯುವುದರಿಂದ ದೀರ್ಘಕಾಲದ ಸಮಸ್ಯೆಗಳನ್ನು ತಪ್ಪಿಸಬಹುದು.

ವ್ಯಾಯಾಮಕ್ಕೂ ಮೊದಲು ವಾರ್ಮ್-ಅಪ್ ಏಕೆ ಅಗತ್ಯ?

ಯಾವುದೇ ಫಿಜಿಕಲ್ ಆಕ್ಟಿವಿಟಿ ಅಥವಾ ವರ್ಕೌಟ್ ಆರಂಭಿಸುವ ಮೊದಲು ಕನಿಷ್ಠ 10ರಿಂದ 15 ನಿಮಿಷಗಳ ವಾರ್ಮ್-ಅಪ್ ಮತ್ತು ಸ್ಟ್ರೆಚಿಂಗ್ ಮಾಡಬೇಕು. ಇದರಿಂದ ಸ್ನಾಯುಗಳು ಮತ್ತು ಸಂಧಿಗಳು ವ್ಯಾಯಾಮಕ್ಕೆ ಸಿದ್ಧಗೊಳ್ಳುತ್ತವೆ. ವಾರ್ಮ್-ಅಪ್ ಮಾಡುವುದರಿಂದ ರಕ್ತ ಸಂಚಾರ ಸುಧಾರಿಸಿ ಗಾಯದ ಅಪಾಯ ಕಡಿಮೆಯಾಗುತ್ತದೆ. ವಾರ್ಮ್-ಅಪ್ ನಂತರವೇ ಮುಖ್ಯ ವ್ಯಾಯಾಮ ಆರಂಭಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: 30ರ ಹರಯದಲ್ಲಿ ಮೊಣಕಾಲು ನೋವು ಹೆಚ್ಚಾಗಿ ಕಂಡುಬರುತ್ತಿರುವುದಕ್ಕೆ ಕಾರಣವೇನು? ತಜ್ಞರು ನೀಡಿರುವ ಕಾರಣ ಇಲ್ಲಿದೆ

ಆಟ ಅಥವಾ ವ್ಯಾಯಾಮದ ವೇಳೆ ಗಾಯವಾದರೆ ತಕ್ಷಣ ಏನು ಮಾಡಬೇಕು?

  • ಗಾಯಗೊಂಡ ಭಾಗಕ್ಕೆ ವಿಶ್ರಾಂತಿ ನೀಡಿ
  • ಊತ ಕಡಿಮೆ ಮಾಡಲು ಐಸ್ ಹಾಕಿ
  • ಸೌಮ್ಯವಾಗಿ ಬ್ಯಾಂಡೇಜ್ ಕಟ್ಟಿರಿ
  • ಗಾಯಗೊಂಡ ಭಾಗವನ್ನು ಮೇಲಕ್ಕೆ ಇಡಿ
  • ನೋವು ಅಥವಾ ಊತ ಹೆಚ್ಚಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಸ್ಪೋರ್ಟ್ಸ್ ಇಂಜುರಿ ತಪ್ಪಿಸಿಕೊಳ್ಳಲು ಗಮನಿಸಬೇಕಾದ ವಿಷಯಗಳು:

  • ಸರಿಯಾದ ತಂತ್ರದಲ್ಲಿ ವ್ಯಾಯಾಮ ಮಾಡಬೇಕು
  • ನಿಯಮಿತವಾಗಿ ಸ್ಟ್ರೆಚಿಂಗ್ ಮಾಡಬೇಕು
  • ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡಬೇಕು
  • ಸಮತೋಲನ ಆಹಾರ ಸೇವಿಸಬೇಕು
  • ಸಾಕಷ್ಟು ನಿದ್ರೆ ಮಾಡಬೇಕು
  • ನೋವು ಅಥವಾ ಊತವನ್ನು ನಿರ್ಲಕ್ಷಿಸಬಾರದು

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SRH vs RCB IPL 2026 Live Score: ಟಾಸ್ ಗೆದ್ದ ಸನ್​​ರೈಸರ್ಸ್​ ಬ್ಯಾಟಿಂಗ್ ಆಯ್ಕೆ

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದು, ಅಗ್ರ ಎರಡು ಸ್ಥಾನಗಳಿಸುವ ಗುರಿಯನ್ನು ಹೊಂದಿವೆ. ಆರ್‌ಸಿಬಿ ಪ್ರಸ್ತುತ 18 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೀಗಾಗಿ ಸನ್‌ರೈಸರ್ಸ್ ವಿರುದ್ಧದ ಗೆಲುವು ಆರ್​ಸಿಬಿಗೆ ಮೊದಲ ಸ್ಥಾನ ಮತ್ತು ಫೈನಲ್ ತಲುಪಲು ಎರಡು ಅವಕಾಶಗಳನ್ನು ನೀಡುತ್ತದೆ. ಇತ್ತ ಸನ್‌ರೈಸರ್ಸ್ ಕೂಡ ಆಡಿರುವ 13 ಪಂದ್ಯಗಳಿಂದ 16 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯಲು ಆರ್​ಸಿಬಿ ವಿರುದ್ಧ ಗೆಲ್ಲಲೇಬೇಕಾಗಿದೆ.

Source link

‘ಪೆದ್ದಿ’ ಚಿತ್ರದ ‘ಹೆಲ್ಲಲ್ಲಲ್ಲೋ’ ಹಾಡಿನ ಪ್ರೋಮೋ ರಿಲೀಸ್: ಶ್ರುತಿ ಹಾಸನ್ ಡ್ಯಾನ್ಸ್ ಧಮಾಕಾ – Kannada News | Ram Charan starrer Peddi Movie Hellallallo Song promo released ft Janhvi Kapoor Shruti Haasan

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ನಟನೆಯ, ಬುಚ್ಚಿ ಬಾಬು ಸನಾ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಪೆದ್ದಿ’ (Peddi) ದಿನಕ್ಕೊಂದು ಹೊಸ ಅಪ್‌ಡೇಟ್ ಮೂಲಕ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸುತ್ತಿದೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆಯ ಈ ಚಿತ್ರದ ಮೊದಲ ಎರಡು ಹಾಡುಗಳು ಈಗಾಗಲೇ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ರೆಂಡಿಂಗ್‌ನಲ್ಲಿವೆ. ಇದೀಗ ಚಿತ್ರತಂಡ ಸಿನಿಮಾದ ಮೂರನೇ ಹಾಡು ‘ಹೆಲ್ಲಲ್ಲಲ್ಲೋ’ (Hellallallo) ಕೂಡ ಧೂಳೆಬ್ಬಿಸಲು ಸಜ್ಜಾಗಿದೆ. ಹಾಡಿನ ಪ್ರೋಮೋವನ್ನು ಬಿಡುಗಡೆ ಆಗಿದೆ.

ಈ ಪ್ರೋಮೋದಲ್ಲಿ ಎ.ಆರ್. ರೆಹಮಾನ್ ಅವರ ವಿಶಿಷ್ಟ ಶೈಲಿಯ ಮ್ಯೂಸಿಕಲ್ ಮ್ಯಾಜಿಕ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಸನಾ ಅವರ ರಾ ಶೈಲಿಯ ಸಮ್ಮಿಲನ ಎದ್ದು ಕಾಣುತ್ತಿದೆ. ವೇದಿಕೆಯೊಂದರ ಮೇಲೆ, ಸುತ್ತುವರಿದ ನೂರಾರು ಜನರ ಮಧ್ಯೆ ಅದ್ದೂರಿಯಾಗಿ ಚಿತ್ರೀಕರಿಸಲಾದ ಈ ಹಾಡಿನಲ್ಲಿ ರಾಮ್ ಚರಣ್, ಶ್ರುತಿ ಹಾಸನ್ ಮತ್ತು ಜಾನ್ವಿ ಕಪೂರ್ ಜೊತೆಯಾಗಿ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ.

ಹಾಡಿನಲ್ಲಿ ರಾಮ್ ಚರಣ್ ಅವರು ರಗಡ್ ಲುಕ್‌ನಲ್ಲಿ ಮಿಂಚಿದ್ದಾರೆ. ನಟಿ ಶ್ರುತಿ ಹಾಸನ್ ಗ್ಲಾಮರಸ್ ಉಡುಪಿನಲ್ಲಿ ಕಣ್ಮನ ಸೆಳೆದರೆ, ಜಾನ್ವಿ ಕಪೂರ್ ಕೂಡ ಚಂದದ ಡ್ರೆಸ್ ಧರಿಸಿ ಡ್ಯಾನ್ಸ್ ಮಾಡಿದ್ದಾರೆ. ಈ ಮೂವರ ಎನರ್ಜಿಟಿಕ್ ಡ್ಯಾನ್ಸ್ ಅಭಿಮಾನಿಗಳಿಗೆ ವಿಶುವಲ್ ಟ್ರೀಟ್ ನೀಡಲಿದ್ದು, ಈ ಪ್ರೋಮೋದಿಂದ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

‘ಹೆಲ್ಲಲ್ಲಲ್ಲೋ’ ಹಾಡಿನ ಪ್ರೋಮೋ:

ಕ್ರೀಡಾ ಲೋಕದ ಕಥಾಹಂದರ ಹೊಂದಿರುವ ‘ಪೆದ್ದಿ’ ಚಿತ್ರವನ್ನು ಬುಚ್ಚಿ ಬಾಬು ಸನಾ ನಿರ್ದೇಶಿಸಿದ್ದು, ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ದಿವ್ಯೇಂದು ಶರ್ಮಾ ಮತ್ತು ಜಗಪತಿ ಬಾಬು ಸಹ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ಜೂ.4ಕ್ಕೆ ‘ಪೆದ್ದಿ’ ರಿಲೀಸ್; ‘ಟಾಕ್ಸಿಕ್’ ಬಿಟ್ಟುಕೊಟ್ಟ ದಿನಾಂಕದಲ್ಲಿ ರಾಮ್ ಚರಣ್ ಸಿನಿಮಾ ತೆರೆಗೆ

ಸದ್ಯಕ್ಕೆ ಬಿಡುಗಡೆ ಆಗಿರುವುದು ‘ಹೆಲ್ಲಲ್ಲಲ್ಲೋ’ ಹಾಡಿನ ಪ್ರೋಮೋ ಮಾತ್ರ. ಪೂರ್ಣ ಹಾಡನ್ನು ಮೇ 23ರಂದು ಭೋಪಾಲ್‌ನಲ್ಲಿ ನಡೆಯಲಿರುವ ಅದ್ಧೂರಿ ಸಂಗೀತ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಬಹುಭಾಷೆಗಳಲ್ಲಿ ಸಿದ್ಧವಾಗಿರುವ ಈ ಸಿನಿಮಾ ಜೂನ್ 4ರಂದು ವಿಶ್ವದಾದ್ಯಂತ ತೆರೆಕಾಣಲಿದ್ದು, ಜೂನ್ 3ರಂದೇ ಪ್ರೀಮಿಯರ್ ಶೋಗಳನ್ನು ಆಯೋಜಿಸಲು ನಿರ್ಮಾಪಕರು ಸಜ್ಜಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೇಶದ ಅರ್ಧದಷ್ಟು ಜಿಡಿಪಿಗೆ ಹೊಟ್ಟೆ ತುಂಬಿಸುತ್ತಿರೋದು ಕರ್ನಾಟಕ ಸೇರಿ 5 ರಾಜ್ಯಗಳು ಮಾತ್ರ; ಇಲ್ಲಿವೆ ವರದಿಯ ಅಂಶಗಳು – Kannada News | Maharashtra karnataka gdp dominance state economy impact

ನವದೆಹಲಿ, ಮೇ 22: ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿದಿದ್ದರೂ, ದೇಶದ ವಿವಿಧ ರಾಜ್ಯಗಳ ನಡುವಿನ ಆದಾಯ, ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಭಾರಿ ಅಸಮಾನತೆ ಇರುವುದು ವರದಿಯೊಂದರಿಂದ ಬಹಿರಂಗಗೊಂಡಿದೆ. ‘ಕ್ಲೈಂಟ್ ಅಸೋಸಿಯೇಟ್ಸ್’ ಸಂಸ್ಥೆ ಬಿಡುಗಡೆ ಮಾಡಿರುವ ‘ಸ್ಟೇಟ್ ಆಫ್ ಇಂಡಿಯನ್ ಸ್ಟೇಟ್ಸ್: 2026’ (State of Indian States: 2026) ಶ್ವೇತಪತ್ರದ ಪ್ರಕಾರ, ಭಾರತದ ಒಟ್ಟು ಆರ್ಥಿಕ ಚಟುವಟಿಕೆಗಳು ಕೇವಲ ಐದು ರಾಜ್ಯಗಳಲ್ಲಿ ಹೆಚ್ಚು ಕೇಂದ್ರೀಕೃತವಾಗಿವೆ. ದೇಶದ ಅರ್ಧದಷ್ಟು ಜಿಡಿಪಿಗೆ (gdp) ಹೊಟ್ಟೆ ತುಂಬಿಸುತ್ತಿರುವುದು ಕರ್ನಾಟಕ ಸೇರಿ ಐದೇ ರಾಜ್ಯಗಳಂತೆ. ಈ ಐದು ರಾಜ್ಯಗಳು ದೇಶದ ಶೇ. 48ರಷ್ಟು ಜಿಡಿಪಿಗೆ ಕೊಡುಗೆ ನೀಡುತ್ತಿವೆ ಎಂದು ಈ ವರದಿ ಹೇಳುತ್ತಿದೆ. ಪಾಸಿಟಿವ್ ಸಂಗತಿ ಎಂದರೆ, ಉತ್ತರಪ್ರದೇಶದಂತಹ ರಾಜ್ಯಗಳ ಬೆಳವಣಿಗೆಯ ವೇಗ ಸಕಾರಾತ್ಮಕವಾಗಿದೆ.

ಭಾರತೀಯ ಆರ್ಥಿಕತೆಯ ‘ಬಿಗ್ ಫೈವ್’

ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ ಮತ್ತು ಗುಜರಾತ್, ಈ ಐದು ರಾಜ್ಯಗಳು ಮಾತ್ರವೇ 2025 ರ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಜಿಡಿಪಿಗೆ (GDP) ಶೇಕಡಾ 48 ರಷ್ಟು ಕೊಡುಗೆ ನೀಡಿವೆ. ಇದಕ್ಕೆ ವ್ಯತಿರಿಕ್ತವಾಗಿ, ದೇಶದ ಕೊನೆಯ ಹತ್ತು ರಾಜ್ಯಗಳ ಒಟ್ಟು ಕೊಡುಗೆ ಕೇವಲ ಶೇ. 3 ಕ್ಕಿಂತ ಕಡಿಮೆಯಿದೆ.

ಭಾರತದ ಆರ್ಥಿಕ ರಾಜಧಾನಿಯಾಗಿರುವ ಮಹಾರಾಷ್ಟ್ರ ರಾಜ್ಯವೊಂದೇ ದೇಶದ ಒಟ್ಟು ಜಿಡಿಪಿಗೆ ಶೇ. 13.3 ರಷ್ಟು ಕೊಡುಗೆ ನೀಡುವ ಮೂಲಕ ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರದ ಒಟ್ಟು ಆರ್ಥಿಕತೆಯು ಮಿಜೋರಾಂ ರಾಜ್ಯಕ್ಕಿಂತ 133 ಪಟ್ಟು ದೊಡ್ಡದಾಗಿದೆ.

ಇದನ್ನೂ ಓದಿ: ಆರ್​ಬಿಐನಿಂದ ಸರ್ಕಾರಕ್ಕೆ ಈ ವರ್ಷ 2.87 ಲಕ್ಷ ಕೋಟಿ ರೂ ಡಿವಿಡೆಂಡ್; ಇದು ಹೊಸ ದಾಖಲೆ

ಆರ್ಥಿಕ ಬೆಳವಣಿಗೆಯಲ್ಲಿ ಉತ್ತರ ಪ್ರದೇಶದ ರೂಪಾಂತರವು ಎಲ್ಲರ ಗಮನ ಸೆಳೆಯುತ್ತಿದೆ. ಇದರ ಆರ್ಥಿಕತೆಯು ಮೆಕ್ಸಿಕೋ ದೇಶಕ್ಕೆ ಸಮನಾಗಿದ್ದು, ಚೀನಾ ದೇಶಕ್ಕಿಂತಲೂ ವೇಗವಾಗಿ ಬೆಳೆಯುತ್ತಿದೆ.

ಆದಾಯದ ತಾರತಮ್ಯ: ಕೇವಲ ಆರ್ಥಿಕತೆಯ ಗಾತ್ರವಷ್ಟೇ ಜನರ ಏಳಿಗೆಯನ್ನು ನಿರ್ಧರಿಸುವುದಿಲ್ಲ ಎಂಬುದನ್ನು ವರದಿ ಸ್ಪಷ್ಟಪಡಿಸಿದೆ. ಗೋವಾ ಮತ್ತು ಸಿಕ್ಕಿಂ ರಾಜ್ಯಗಳ ತಲಾ ಆದಾಯ ಬಿಹಾರಕ್ಕಿಂತ 8 ಪಟ್ಟು ಹೆಚ್ಚಿದೆ. ಬಿಹಾರದ ತಲಾ ಆದಾಯ 69,321 ರೂ ಆಗಿದ್ದರೆ, ಭಾರತದ ಸರಾಸರಿ ತಲಾ ಆದಾಯ 2.58 ಲಕ್ಷ ರೂ ಆಗಿದೆ. ಕೇವಲ 16 ರಾಜ್ಯಗಳು ಮಾತ್ರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಆದಾಯ ಹೊಂದಿವೆ.

ವಿದೇಶಿ ನೇರ ಹೂಡಿಕೆ (FDI): 2025 ರ ಹಣಕಾಸು ವರ್ಷದಲ್ಲಿ ಭಾರತಕ್ಕೆ ಹರಿದು ಬಂದ ಒಟ್ಟು 4.22 ಲಕ್ಷ ಕೋಟಿ ರೂ ವಿದೇಶಿ ಹೂಡಿಕೆಯಲ್ಲಿ, ಬರೋಬ್ಬರಿ ಶೇ. 83.3 ರಷ್ಟು ಹೂಡಿಕೆಯನ್ನು ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ದೆಹಲಿ ಮತ್ತು ತಮಿಳುನಾಡು ರಾಜ್ಯಗಳೇ ಹಂಚಿಕೊಂಡಿವೆ. ತಮಿಳುನಾಡು, ಹರಿಯಾಣ ಮತ್ತು ರಾಜಸ್ಥಾನಗಳು ಹೊಸ ಹೂಡಿಕೆ ಹಬ್‌ಗಳಾಗಿ ಹೊರಹೊಮ್ಮುತ್ತಿವೆ.

ಒಟ್ಟಾರೆ ಶ್ರೇಯಾಂಕದಲ್ಲಿ ಗುಜರಾತ್, ಕರ್ನಾಟಕ ಮುಂದು

ಉದ್ಯೋಗ ಸೃಷ್ಟಿ, ಆರ್ಥಿಕ ಶಿಸ್ತು ಮತ್ತು ಹೂಡಿಕೆ ಆಕರ್ಷಣೆಯ ಆಧಾರದ ಮೇಲೆ ಸಿದ್ಧಪಡಿಸಲಾದ ಒಟ್ಟಾರೆ ಶ್ರೇಯಾಂಕದಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ನಂತರದ ಸ್ಥಾನಗಳಲ್ಲಿವೆ. ಆದರೆ ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರಗಳು ಸಾಲದ ಹೊರೆಯಿಂದಾಗಿ ಆರ್ಥಿಕ ಸುಧಾರಣೆಯ ಅಗತ್ಯವಿರುವ ರಾಜ್ಯಗಳ ಪಟ್ಟಿಯಲ್ಲಿವೆ.

ಇದನ್ನೂ ಓದಿ: ಐಟಿಆರ್ ಸಲ್ಲಿಸುತ್ತಿದ್ದೀರಾ? ಎಐಎಸ್ ಪರಿಶೀಲನೆ ಮರೆಯದಿರಿ; ಏನದರ ಮಹತ್ವ? ಇಲ್ಲಿದೆ ಡೀಟೇಲ್ಸ್

ಭಾರತವು 2026 ರಲ್ಲಿ ಶೇ. 7.5 ರಷ್ಟು ಮತ್ತು 2027 ರಲ್ಲಿ ಶೇ. 6.8 ರಷ್ಟು ಜಿಡಿಪಿ ಬೆಳವಣಿಗೆ ಕಾಣುವ ಮುನ್ಸೂಚನೆ ಇದೆ. ಆದರೆ ಈ ಬೆಳವಣಿಗೆಯು ಕೇವಲ ಕೆಲವೇ ರಾಜ್ಯಗಳಿಗೆ ಸೀಮಿತವಾಗದೆ, ಇತರ ರಾಜ್ಯಗಳಿಗೂ ಹರಡಬೇಕಿದೆ. ಹಿಂದುಳಿದ ರಾಜ್ಯಗಳಲ್ಲಿ ಖಾಸಗಿ ವಲಯದ ಹೂಡಿಕೆ, ಕೈಗಾರಿಕೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಭಾರತವು ಮುಂಬರುವ ದಶಕದಲ್ಲಿ ಎರಡಂಕಿ (double-digit) ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

SRH vs RCB: ಐಪಿಎಲ್‌ನಲ್ಲಿ ಹೊಸ ಇತಿಹಾಸ ರಚಿಸಲು ಆರ್​ಸಿಬಿಗೆ ಸುವರ್ಣಾವಕಾಶ

Source link

ಸಾಲದಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ಮಾಸಿಕ 2000ರೂ. ಪಿಂಚಣಿ: ಯಾವೆಲ್ಲಾ ದಾಖಲೆಗಳು ಬೇಕು? – Kannada News | Death Farmers Wife How to Get Rs 2000 Monthly Pension, what are documents required, here Is Scheme details

ಬೆಂಗಳೂರು, (ಮೇ 22): ಸಾಮಾಜಿಕ ಭದ್ರತೆ ಮತ್ತು ಪಿಂಚನೆಗಳ ನಿರ್ದೇಶನಾಲಯ ವತಿಯಿಂದ ಕರ್ನಾಟಕದಾದ್ಯಂತ ಸಾಲ ಬಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ (Farmers) ಪತ್ನಿಯರಿಗೆ (Wife) ವಿಧವಾ ವೇತನ ಯೋಜನೆಯನ್ನು (Pension Scheme) ಜಾರಿ ಮಾಡಲಾಗಿದ್ದು, ಯೋಜನೆಯಲ್ಲಿ ರೈತನ ಮಡದಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡಲಾಗುತ್ತದೆ. ಕೃಷಿ ಇಲಾಖೆಯಿಂದ ರೈತರ ಆತ್ಮಹತ್ಯೆ ಪ್ರಕರಣಗಳಡಿಯ ಗುರುತಿಸಿ ಪರಿಹಾರ ಪಡೆದಿರುವ ಮೃತ ರೈತರ ಪತ್ನಿಗೆ ಮಾಸಿಕ ಪಿಂಚಣಿ ನೀಡಲಾಗುತ್ತಿದ್ದು, ಈ ಯೋಜನೆಯ ಕುರಿತಂತೆ ಅರ್ಹತಾ ಮಾನದಂಡ, ಸಲ್ಲಿಸಬೇಕಾದ ದಾಖಲೆಗಳ ಸಮೇತ ಎಲ್ಲಿ ಅರ್ಜಿ ಸಲ್ಲಿಸಬೇಕು ಎನ್ನುವುದು ಈ ಕೆಳಗಿನಂತಿದೆ.

ಮುಖ್ಯಾಂಶಗಳು

  • ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ರಾಜ್ಯ ಸರ್ಕಾರದಿಂದ ಮಾಸಿಕ ಪಿಂಚಣಿ
  • ಮೃತ ರೈತರ ಪತ್ನಿಯರಿಗೆ ಮಾಸಿಕ 2000 ರೂ.ವಿಶೇಷ ವಿಧವಾ ವೇತನ (ಪಿಂಚಣಿ) ಯೋಜನೆ
  • ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ಹಿತರಕ್ಷಣೆಗಾಗಿ ಈ ಕ್ರಮ

ರಾಜ್ಯದಲ್ಲಿ ಇರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರ ಆತ್ಮಹತ್ಯೆ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ಹಿತಾಶಕ್ತಿ ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ಕೃಷಿ ಇಲಾಖೆಯಿಂದ ರೈತರ ಆತ್ಮಹತ್ಯೆ ಪ್ರಕರಣಗಳಡಿ ಗುರುತಿಸಿ ಪರಿಹಾರ ಪಡೆದಿರುವ ಮೃತ ರೈತರ ಪತ್ನಿಗೆ ಮಾಸಿಕ 2000 ರೂ. ಪಿಂಚಣಿ ನೀಡಲಾಗುತ್ತಿದೆ.

ಈ ಯೋಜನೆಗೆ ಯಾರು ಅರ್ಹರು?

ಅರ್ಹತೆ ಮತ್ತು ಮಾನದಂಡಗಳು: ಈ ವಿಶೇಷ ಪಿಂಚಣಿ ಸೌಲಭ್ಯವನ್ನು ಪಡೆಯಲು, ಮೃತ ರೈತರ ಕುಟುಂಬದವರು ಈಗಾಗಲೇ ಕೃಷಿ ಇಲಾಖೆಯ ನಿಯಮಾವಳಿಗಳ ಅಡಿಯಲ್ಲಿ ರೈತರ ಆತ್ಮಹತ್ಯೆ ಪ್ರಕರಣವೆಂದು ಗುರುತಿಸಲ್ಪಟ್ಟು, ಸರ್ಕಾರದ ಅಧಿಕೃತ ಪರಿಹಾರ ಧನವನ್ನು ಪಡೆದಿರಬೇಕು. ಅಂತಹ ಮೃತ ರೈತರ ಪತ್ನಿಯರು ಮಾತ್ರ ಈ ಮಾಸಿಕ ಪಿಂಚಣಿಗೆ ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಕೆ ಎಲ್ಲಿ?

ಅರ್ಹ ಫಲಾನುಭವಿಗಳು ತಮ್ಮ ವಾಸಸ್ಥಳದ ವ್ಯಾಪ್ತಿಯಲ್ಲಿ ಬರುವ ‘ಅಟಲ್ ಜೀ ಜನಸ್ನೇಹಿ ಕೇಂದ್ರ’ (ನಾಡಕಚೇರಿ) ಗಳ ಮೂಲಕ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

ಬೇಕಾಗುವ ಮುಖ್ಯ ದಾಖಲೆಗಳು

  • ಕೃಷಿ ಇಲಾಖೆಯಿಂದ ಆತ್ಮಹತ್ಯೆ ಪರಿಹಾರ ಧನ ಪಡೆದಿರುವ ಅಧಿಕೃತ ಆದೇಶದ ಪ್ರತಿ.
  • ಅಟಲ್ ಜೀ ಜನಸ್ನೇಹಿ ಕೇಂದ್ರದ ನಿಗದಿತ ಅರ್ಜಿ ನಮೂನೆ.
  • ಅರ್ಜಿದಾರರ ಆಧಾರ್ ಕಾರ್ಡ್.
  • ಪಿಂಚಣಿ ಹಣ ಜಮೆಯಾಗಲು ಬ್ಯಾಂಕ್ ಅಥವಾ ಅಂಚೆ ಕಚೇರಿಯ (Post Office) ಖಾತೆ ವಿವರಗಳು.

ಆರ್ಥಿಕ ನಷ್ಟ ಹಾಗೂ ಕುಟುಂಬದ ಯಜಮಾನನನ್ನು ಕಳೆದುಕೊಂಡು ಕಂಗಾಲಾಗಿರುವ ರೈತ ಮಹಿಳೆಯರಿಗೆ ನೆರವಾಗಲು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಅರ್ಹರು ಇದರ ಸೌಲಭ್ಯವನ್ನು ಪಡೆದುಕೊಳ್ಳಲು ಸರ್ಕಾರ ಕೋರಿದೆ.

ಕರ್ನಾಟಕದ ಮ್ತತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:09 pm, Fri, 22 May 26

Source link

ಪ್ರಧಾನಿ ಮೋದಿಗೆ ಝಲ್ಮುರಿ ಮಾರಿದ್ದ ಬಂಗಾಳದ ವ್ಯಕ್ತಿಗೆ ಪಾಕ್, ಬಾಂಗ್ಲಾದೇಶದಿಂದ ಕೊಲೆ ಬೆದರಿಕೆ – Kannada News | West Bengal man who sold jhalmuri to PM Modi gets death threats from Pakistan and Bangladesh

ನವದೆಹಲಿ, ಮೇ 22: ಚುನಾವಣಾ ಪ್ರಚಾರದ ಸಮಯದಲ್ಲಿ ಪಶ್ಚಿಮ ಬಂಗಾಳದ (West Bengal) ಜಾರ್ಗ್ರಾಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂಗಾಳದ ಜನಪ್ರಿಯ ತಿಂಡಿಯಾದ ಝಲ್ಮುರಿಯನ್ನು ಮಾರಾಟ ಮಾಡಿದ್ದ ವ್ಯಾಪಾರಿ ವಿಕ್ರಮ್ ಸಾವೊ ಅವರಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕೊಲೆ ಬೆದರಿಕೆ ಬರುತ್ತಿದೆ ಎಂದು ಹೇಳಿಕೊಂಡಿದ್ದಾರೆ. ವ್ಯಾಪಾರಿ ವಿಕ್ರಮ್ ಪ್ರಕಾರ, ಕಳೆದ ಕೆಲವು ದಿನಗಳಿಂದ ಪ್ರತಿದಿನ ಅಪರಿಚಿತ ಅಂತಾರಾಷ್ಟ್ರೀಯ ನಂಬರ್​ಗಳಿಂದ ಅವರಿಗೆ ಜೀವ ಬೆದರಿಕೆ ಬರುತ್ತಿದೆ.

“ನನಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ವೀಡಿಯೊ ಮತ್ತು ಫೋನ್ ಕರೆಗಳ ಮೂಲಕ ಪದೇ ಪದೇ ಬೆದರಿಕೆ ಕರೆಗಳು ಬರುತ್ತಿವೆ. ಅವರು ನನ್ನನ್ನು ಬಾಂಬ್‌ಗಳಿಂದ ಸ್ಫೋಟಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನನಗೆ ವೀಡಿಯೊ ಕರೆಗಳನ್ನು ಮಾಡುವವರು ನನ್ನನ್ನು ಹೆದರಿಸಲು ಭಯಾನಕ ಸನ್ನೆಗಳನ್ನು ಮಾಡುತ್ತಿದ್ದಾರೆ ಮತ್ತು ಶಸ್ತ್ರಾಸ್ತ್ರಗಳನ್ನು ಸಹ ತೋರಿಸುತ್ತಿದ್ದಾರೆ” ಎಂದು ಅವರು ಸುದ್ದಿ ಸಂಸ್ಥೆ IANSಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಝಲ್ಮುರಿ ಇಲ್ಲಿಗೂ ತಲುಪಿತೇ? ಪ್ರಧಾನಿ ಮೋದಿ ಪ್ರಶ್ನೆಗೆ ನೆದರ್ಲ್ಯಾಂಡ್​​​ನ ಭಾರತೀಯ ವಲಸಿಗರ ಕರತಾಡನ

ಪ್ರಧಾನಿ ಮೋದಿಯವರೊಂದಿಗಿನ ಇವರ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ವಿಕ್ರಮ್ ಅವರಿಗೆ ಅಂತಾರಾಷ್ಟ್ರೀಯ ಕರೆಗಳು ಬರಲಾರಂಭಿಸಿವೆ. ವಿಕ್ರಮ್ ಅವರ ಮೊಬೈಲ್ ಸಂಖ್ಯೆಗೆ +92 (ಪಾಕಿಸ್ತಾನದ ಕೋಡ್) ಮತ್ತು +880 (ಬಾಂಗ್ಲಾದೇಶದ ಕೋಡ್) ಐಡಿಗಳಿಂದ ವಾಟ್ಸಾಪ್ ಕರೆಗಳು ಮತ್ತು ಮೆಸೇಜ್​ಗಳು ಬಂದಿವೆ.

ಕರೆ ಮಾಡಿದ ಅಪರಿಚಿತ ವ್ಯಕ್ತಿಗಳು, “ನೀನು ಮೋದಿಗೆ ಝಲ್ಮುರಿ ತಿನ್ನಿಸಿ ದೊಡ್ಡ ದೇಶಭಕ್ತನಾಗಲು ಹೊರಟಿದ್ದೀಯಾ? ನಿನ್ನನ್ನು ಮತ್ತು ನಿನ್ನ ಇಡೀ ಕುಟುಂಬವನ್ನು ಬಾಂಬ್ ಇಟ್ಟು ಉಡಾಯಿಸುತ್ತೇವೆ” ಎಂದು ಉರ್ದು ಹಾಗೂ ಬೆಂಗಾಲಿ ಭಾಷೆಯಲ್ಲಿ ಬೆದರಿಕೆ ಹಾಕಿದ್ದಾರೆ. ಈ ಬೆದರಿಕೆ ಕರೆಗಳಿಂದ ವಿಕ್ರಮ್ ಮತ್ತು ಅವರ ಕುಟುಂಬಸ್ಥರು ತೀವ್ರ ಭೀತಿಗೊಳಗಾಗಿದ್ದಾರೆ. ಅವರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ, ತಮಗೆ ಬಂದಿರುವ ಬೆದರಿಕೆ ಕರೆಗಳ ನಂಬರ್ ಹಾಗೂ ಆಡಿಯೋ ರೆಕಾರ್ಡಿಂಗ್‌ಗಳನ್ನು ಸಲ್ಲಿಸಿ ಲಿಖಿತ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಚಿಕನ್ ನೆಕ್ ಕಾರಿಡಾರ್​​ನ 120 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ ಪಶ್ಚಿಮ ಬಂಗಾಳದ ಸಿಎಂ

ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ಸೈಬರ್ ವಿಭಾಗವು ತನಿಖೆಯನ್ನು ಕೈಗೆತ್ತಿಕೊಂಡಿದೆ. ವಿಕ್ರಮ್ ಅವರ ಮನೆ ಮತ್ತು ಅವರು ವ್ಯಾಪಾರ ಮಾಡುವ ಜಾಗಕ್ಕೆ ಸದ್ಯಕ್ಕೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: 4 ಕಿ.ಮೀ ಕ್ರಮಿಸಲು 45 ನಿಮಿಷಗಳು ತೆಗೆದುಕೊಂಡೆ; ಟ್ರಾಫಿಕ್‌ ಸಮಸ್ಯೆ ಬಗ್ಗೆ ಅಸಮಾಧಾನ ಹೊರಹಾಕಿದ ಗೂಗಲ್ ಟೆಕ್ಕಿ – Kannada News | Bengaluru: It took 45 minutes to travel 4 km: This is the reality of Bengaluru, says Google techie

ಬೆಂಗಳೂರು, ಮೇ 22: ಚೆನ್ನೈ, ಮುಂಬೈ ಹೀಗೆ ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ ಇರುತ್ತದೆ. ಈ ಬೆಂಗಳೂರಿನಲ್ಲಂತೂ (Bengaluru) ಕೇಳುವುದೇ ಬೇಡ, ಬೆಳಗ್ಗೆ ಸಂಜೆಯಾದರಂತೂ ಟ್ರಾಫಿಕ್‌ನಿಂದ ರಸ್ತೆಗಳು ಬ್ಲಾಕ್ ಆಗುತ್ತದೆ. ಪೀಕ್‌ ಟೈಮ್‌ಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚೇ ಇರುತ್ತದೆ. ಇದೀಗ ಬೆಂಗಳೂರಿನ ಗೂಗಲ್‌ನಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿಯೊಬ್ಬರು 4 ಕಿಲೋಮೀಟರ್ ದೂರದಲ್ಲಿರುವ ತನ್ನ ಆಫೀಸಿಗೆ ತಲುಪಲು 45 ನಿಮಿಷಗಳು ಬೇಕಾಯಿತು ಎಂದು ಹೇಳಿದ್ದಾರೆ. ಈ ಮೂಲಕ ನಗರದ ಸಂಚಾರ ಪರಿಸ್ಥಿತಿಯ ಬಗ್ಗೆ ತಮ್ಮ ಹತಾಶೆಯನ್ನು ಹೊರಹಾಕಿದ್ದಾರೆ.

ವೆಂಕಟೇಶ್ ಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋಗೆ ಪ್ರೀಮಿಯಂ ಕ್ರಾಲಿಂಗ್ ವೇಗವನ್ನು ಅನುಭವಿಸಲು ಪ್ರೀಮಿಯಂ ತೆರಿಗೆಗಳನ್ನು ಪಾವತಿಸುವುದು ಶೀರ್ಷಿಕೆ ನೀಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ, ತಾನು ಆಫೀಸಿಗೆ ಪ್ರಯಾಣಿಸಲು 9 ರಿಂದ 10 ನಿಮಿಷಗಳು ತೆಗೆದುಕೊಳ್ಳುತ್ತೇನೆ. ಆದರೆ ಭಾರೀ ದಟ್ಟಣೆಯಿಂದಾಗಿ ಅದೇ ಮಾರ್ಗದಲ್ಲಿ ಪ್ರಯಾಣಿಸಲು ಹೆಚ್ಚು ಸಮಯ ತೆಗೆದುಕೊಂಡೆ. ನಾನು ಆಫೀಸಿನಿಂದ 4 ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಿದ್ದೇನೆ. ಇಂದು ಕಚೇರಿಗೆ ತಲುಪಲು ನನಗೆ 45 ನಿಮಿಷಗಳು ಬೇಕಾಯಿತು. ಕಚೇರಿಗೆ ತಲುಪಲು 9 ರಿಂದ 10 ನಿಮಿಷಗಳು ಬೇಕು. ಆದರೆ ಟ್ರಾಫಿಕ್ ನಿಂದ 45 ನಿಮಿಷಗಳು ಬೇಕಾಯಿತು.

ಬೆಳಿಗ್ಗೆ 10:00 ಗಂಟೆಗೆ ನಾನು ನನ್ನ ಮನೆಯಿಂದ ಹೊರಟು ಆಫೀಸಿಗೆ ತಲುಪಿದೆ. ಆದರೆ ಈಗ 10:45 ನಿಮಿಷ. ನಾನು ನನ್ನ ಸಂಬಳಕ್ಕಿಂತ ಹೆಚ್ಚಿನ ತೆರಿಗೆಗಳನ್ನು ಪಾವತಿಸಿದ ತಿಂಗಳುಗಳಿವೆ. ನಾನು ಮಾತ್ರವಲ್ಲ, ಸಾವಿರಾರು, ಲಕ್ಷಾಂತರ ಜನರು ಇದನ್ನು ಮಾಡುತ್ತಾರೆ ಎಂದು ನನಗೆ ತಿಳಿದಿದೆ. ಆದರೆ ಇದು ತುಂಬಾ ನಿರಾಶಾದಾಯಕವಾಗಿದೆ. ಇದೇನು ನಡೆಯುತ್ತಿದೆ ಎಂದು ಎನಿಸಿಕೊಂಡರೆ ನನಗೆ ತುಂಬಾ ಕೋಪ ಬರುತ್ತದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಹೈದರಾಬಾದ್​​ನಲ್ಲಿ ಇರುವಂತೆ ಬೆಂಗಳೂರು ರಸ್ತೆಗಳು ಯಾಕಿಲ್ಲ? ಕೆನಡಾ ವ್ಯಕ್ತಿಯ ವಿಡಿಯೋ ವೈರಲ್

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಇದು ಬೆಂಗಳೂರಿನ ಸಂಚಾರದ ದೈನಂದಿನ ವಾಸ್ತವ ಎಂದಿದ್ದಾರೆ. ಮತ್ತೊಬ್ಬರು, 45 ನಿಮಿಷಗಳಲ್ಲಿ ನಾಲ್ಕು ಕಿಲೋಮೀಟರ್ ಕ್ರಮಿಸುವುದು ಪ್ರಯಾಣವಲ್ಲ, ಅದುವೇ ಶಿಕ್ಷೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇದಕ್ಕಾಗಿಯೇ ಜನರು ಮತ್ತೆ ವರ್ಕ್ ಫ್ರಮ್ ಹೋಮ್ ಎಂದು ಕೆಲಸ ಕೇಳುತ್ತಿದ್ದಾರೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: 34 ಸಿಕ್ಸ್, 530 ರನ್; ಸಿಎಸ್​ಕೆ ವೇಗಿಯ ಅಪರೂಪದ ದಾಖಲೆ

Source link

Exit mobile version