Headlines

SRH vs RCB: ಐಪಿಎಲ್‌ನಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ವಿರಾಟ್ ಕೊಹ್ಲಿ

ಐಪಿಎಲ್ 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ನಡೆಯಲಿರುವ ಈ ಪಂದ್ಯದಲ್ಲಿ ಆರ್​​ಸಿಬಿ ಗೆದ್ದರೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಉಳಿಯುವುದರ ಜೊತೆಗೆ ಕ್ವಾಲಿಫೈಯರ್ 1 ಆಡಲಿದೆ. ಇನ್ನು ಇದೇ ಪಂದ್ಯದಲ್ಲಿ ಆರ್​ಸಿಬಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತೊಂದು ಇತಿಹಾಸ ಸೃಷ್ಟಿಸುವ ಗುರಿ ಹೊಂದಿದ್ದಾರೆ (PC- RCB X). ಇಂದಿನ ಐಪಿಎಲ್ ಪಂದ್ಯವು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್…

Read More

ತಂದೆ ನೆನಪಿಗಿದ್ದ ಅದೊಂದು ವಸ್ತು ಕಳ್ಳತನ: ಪೊಲೀಸ್ ಠಾಣೆ ಮೆಟ್ಟಿಲೇರಿದ ಮಗಳು – Kannada News | Private Hospital Theft: Patient’s Rs 2 Lakh Watch Stolen; Police Complaint

ಕಳ್ಳತನವಾಗಿರುವ ರಾಡೋ ವಾಚ್, ಮೃತ ವ್ಯಕ್ತಿ ರಾಮಯ್ಯImage Credit source: tv9 kannada ಬೆಂಗಳೂರು, ಮೇ 22: ಸಿಲಿಕಾನ್ ಸಿಟಿಯ (bangaluru) ಖಾಸಗಿ ಆಸ್ಪತ್ರೆಯೊಂದರಲ್ಲಿ ಮನುಷ್ಯತ್ವವೇ ಮರೆತು ನಡೆದುಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ. ತೀವ್ರ ಅನಾರೋಗ್ಯದಿಂದ ಚಿಕಿತ್ಸೆಗೆ ದಾಖಲಾಗಿ ಕೊನೆಯುಸಿರೆಳೆದ ವೃದ್ಧರೊಬ್ಬರ 2 ಲಕ್ಷ ರೂ ಮೌಲ್ಯದ ರಾಡೋ ವಾಚ್​​​ (rado watch) ಆಸ್ಪತ್ರೆಯಲ್ಲೇ ಕಳ್ಳತನವಾಗಿದೆ. ಈ ಸಂಬಂಧ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಸದ್ಯ ಎಫ್‌ಐಆರ್ ದಾಖಲಾಗಿದೆ. ಮುಖ್ಯಾಂಶಗಳು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ದುಬಾರ…

Read More

RRB ALP Recruitment 2026: ಸಹಾಯಕ ಲೋಕೋ ಪೈಲಟ್ ಹುದ್ದೆಗಳ ಸಂಖ್ಯೆಯಲ್ಲಿ ಪ್ರಮುಖ ಬದಲಾವಣೆ! ಪರಿಷ್ಕೃತ ಸೂಚನೆ ಬಿಡುಗಡೆ – Kannada News | RRB ALP Recruitment 2026: Revised Vacancies Out, Apply for Assistant Loco Pilot

ರೈಲ್ವೆಯಲ್ಲಿ ಸಹಾಯಕ ಲೋಕೋ ಪೈಲಟ್ (ALP) ಆಗಬೇಕೆಂದು ಕನಸು ಕಾಣುತ್ತಿರುವ ಯುವಕರಿಗೆ ರೈಲ್ವೆ ನೇಮಕಾತಿ ಮಂಡಳಿಯು (RRB) ಪ್ರಮುಖ ಸುದ್ದಿಯೊಂದನ್ನು ನೀಡಿದೆ. ಇತ್ತೀಚೆಗೆ ಪ್ರಕಟಿಸಲಾಗಿದ್ದ ಬೃಹತ್ ನೇಮಕಾತಿಯ ಖಾಲಿ ಹುದ್ದೆಗಳ ಸಂಖ್ಯೆಯಲ್ಲಿ ಆರ್‌ಆರ್‌ಬಿ ಮಹತ್ವದ ಬದಲಾವಣೆ ಮಾಡಿದ್ದು, ಹೊಸ ಪರಿಷ್ಕೃತ ಅಧಿಕೃತ ಸೂಚನೆಯನ್ನು ಹೊರಡಿಸಿದೆ. ಈ ಹೊಸ ಪ್ರಕಟಣೆಯ ಪ್ರಕಾರ, ಒಟ್ಟಾರೆ ಹುದ್ದೆಗಳ ಸಂಖ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿತಗೊಳಿಸಲಾಗಿದ್ದರೂ, ಕೆಲವು ನಿರ್ದಿಷ್ಟ ರೈಲ್ವೆ ವಲಯಗಳಲ್ಲಿ ಹುದ್ದೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಇದು ಆಯಾ ವಲಯಗಳಲ್ಲಿ ಉದ್ಯೋಗಕ್ಕಾಗಿ ತಯಾರಿ…

Read More

‘ಕಂಟ್ರಿ ಮೇಡ್ ಪಾರ್ಟ್ 2’ ಸಿನಿಮಾದ ಪಾತ್ರಗಳ ಪರಿಚಯಕ್ಕೆ ಟೀಸರ್ ಬಿಡುಗಡೆ – Kannada News | Country Made Part 2 Kannada Movie directed by Aravind Kaushik Character Teaser Released

ರೌಡಿಸಂ ಕುರಿತು ಈಗಾಗಲೇ ಹಲವು ಸಿನಿಮಾಗಳು ಬಂದಿದೆ. ಗಂಡಸರ ನಡುವಿನ ಈ ಸಂಘರ್ಷದಿಂದ ಮನೆಯ ಹೆಣ್ಮಕ್ಕಳ ಬದುಕು ಯಾವ ರೀತಿ ತೊಂದರೆಗೆ ಸಿಲುಕುತ್ತದೆ ಎಂಬ ಎಳೆಯನ್ನು ಇಟ್ಟುಕೊಂಡು ಕನ್ನಡದಲ್ಲಿ ಹೊಸ ಸಿನಿಮಾ ಬರುತ್ತಿದೆ. ಈ ಚಿತ್ರಕ್ಕೆ ‘ಕಂಟ್ರಿ ಮೇಡ್ ಪಾರ್ಟ್ 2’ (Country Made Part 2) ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಹತ್ತು ಹಲವು ಇಂಟರೆಸ್ಟಿಂಗ್ ಪಾತ್ರಗಳಿವೆ. ಆ ಪಾತ್ರಗಳನ್ನು ಪರಿಚಯಿಸುವ ಸಲುವಾಗಿ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾಗೆ ಅರವಿಂದ್‍ ಕೌಶಿಕ್‍ (Aravind…

Read More

ಭಾರಿ ಮಳೆ ಗಾಳಿಗೆ ಹೊಸಕೋಟೆ ಟೋಲ್ ಪ್ಲಾಜಾ ಬಳಿ ಮುರಿದು ಬಿದ್ದ ಬೃಹತ್ ಜಾಹೀರಾತು ಫಲಕ

ಬೆಂಗಳೂರು, (ಮೇ 22): ಭಾರೀ ಮಳೆಗೆ (heavy rain) ಹೊಸಕೋಟೆ (Hoskote) ಟೋಲ್ ಸಮೀಪ ಬೃಹತ್ ಜಾಹೀರಾತು ಫಲಕ ಧರೆಗೆ ಬಿದ್ದಿದೆ. ದೊಡ್ಡ ಅಮಾನಿಕೆರೆ ನಾಲದ ರಾಜಕಾಲುವೆ ದಂಡೆ ಮೇಲೆ ಇದ್ದ ಬೃಹತ್ ಜಾಹಿರಾತು ಫಲಕ ಮತ್ತು ಎರಡು ಬೃಹತ್ ಕಂಬಗಳು ಗುರುವಾರ ಸಂಜೆ ಬಿರುಗಾಳಿಯ ರಭಸಕ್ಕೆ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಈಚರ್ ವಾಹನದ ಮೇಲೆ ಬಿದ್ದಿದೆ. ನಾಮಫಲಕ ಬಿದ್ದ ರಭಸಕ್ಕೆ ಕ್ಯಾಂಟರ್ ವಾಹನ ಸಂಪೂರ್ಣ ನುಚ್ಚುನೂರಾಗಿದ್ದು, ಬಾರಿ ಅನಾಹುತ ತಪ್ಪಿದಂತಾಗಿದೆ. ಈ ಘಟನೆಯಿಂದಾಗಿ ಸರ್ವಿಸ್…

Read More

ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ – Kannada News | Nora Fatehi shared behind the scene video of her new music video

‘ಕೆಡಿ’ (KD) ಸಿನಿಮಾದ ಐಟಂ ಹಾಡಿನಿಂದಾಗಿ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದ ನಟಿ ನೋರಾ ಫತೇಹಿ ಇದೀಗ ತಮ್ಮದೇ ಆದ ಹೊಸ ಮ್ಯೂಸಿಕ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಕೆಲ ದಿನಗಳಿಂದ ಮ್ಯೂಸಿಕ್ ವಿಡಿಯೋನ ಕೆಲವು ಗ್ಲಿಂಪ್ಸ್​​ಗಳನ್ನು ಹಂಚಿಕೊಳ್ಳುತ್ತಿದ್ದ ನಟಿ ನೋರಾ ಫತೇಹಿ, ಇದೀಗ ಮ್ಯೂಸಿಕ್ ವಿಡಿಯೋನ ಶೂಟಿಂಗ್, ಪ್ರ್ಯಾಕ್ಟೀಸ್, ನೀಡಿದ ತರಬೇತಿ, ನೃತ್ಯ ನಿರ್ದೇಶನ, ಮ್ಯೂಸಿಕ್ ಹೀಗೆ ತೆರೆ ಹಿಂದೆ ನಡೆದ ಕೆಲಸಗಳ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ತಾವು ತಮ್ಮ ಮೊದಲ ಮ್ಯೂಸಿಕ್ ವಿಡಿಯೋಗೆ ಎಷ್ಟು ಶ್ರಮ…

Read More

BEL Recruitment 2026: ಬಿಇಎಲ್​​ನಲ್ಲಿ ನೇಮಕಾತಿ; ಇಂಜಿನಿಯರಿಂಗ್ ಮತ್ತು ಐಟಿ ಪದವೀಧರರಿಗೆ ಸುವರ್ಣವಕಾಶ – Kannada News | Bharat Electronics Ltd. Jobs: 56 Engineer Posts– Last Date June 8

ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ಇಂಜಿನಿಯರಿಂಗ್ ಮತ್ತು ಐಟಿ ಕ್ಷೇತ್ರಗಳಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಯುವಜನರಿಗಾಗಿ ಹೊಸ ನೇಮಕಾತಿ ಅಭಿಯಾನವನ್ನು ಘೋಷಿಸಿದೆ. ಕಂಪನಿಯು ವಿವಿಧ ವಿಭಾಗಗಳಲ್ಲಿ ಒಟ್ಟು 56 ಫೀಲ್ಡ್ ಆಪರೇಷನ್ಸ್ ಇಂಜಿನಿಯರ್ ಮತ್ತು ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಈ ನೇಮಕಾತಿಯು ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರದ ಮೇಲೆ ನಡೆಯಲಿದ್ದು, ಸರ್ಕಾರಿ ವಲಯದಲ್ಲಿ ಕೆಲಸ ಮಾಡುವ ಹಂಬಲ ಉಳ್ಳವರಿಗೆ ಇದೊಂದು ಅತ್ಯುತ್ತಮ ವೇದಿಕೆಯಾಗಿದೆ….

Read More

Viral: ಕನಸು ನನಸಾದ ಕ್ಷಣ; ತನ್ನ ಅಜ್ಜಿಯನ್ನು ಮೈಕ್ರೋ ಸಾಫ್ಟ್ ಆಫೀಸ್ ತೋರಿಸಲು ಕರೆದೊಯ್ದ ಉದ್ಯೋಗಿ – Kannada News | Bengaluru: Microsoft employee shows his grandmother the Bengaluru office where he works

ಬೆಂಗಳೂರು, ಮೇ 22: ತಾವು ಚೆನ್ನಾಗಿ ಓದಬೇಕು, ಹೆತ್ತವರನ್ನು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವರ ಆಸೆಗಳನ್ನು ಈಡೇರಿಸಬೇಕು ಹೀಗೆ ಪ್ರತಿಯೊಬ್ಬರಿಗೆ ಇಂತಹ ಸಾಕಷ್ಟು ಆಸೆಗಳಿರುತ್ತವೆ. ಅಂತಹ ಕ್ಷಣ ಬಂದರೆ ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರ ಜೀವನದಲ್ಲಿ ಭಾವನಾತ್ಮಕ ಕ್ಷಣವು ಎದುರಾಗಿದೆ. ಈ ವ್ಯಕ್ತಿ ತನ್ನ ಅಜ್ಜಿಯನ್ನು ಬೆಂಗಳೂರಿನ (Bengaluru) ಮೈಕ್ರೋಸಾಫ್ಟ್ ಆಫೀಸ್ ತೋರಿಸಲು ಕರೆದುಕೊಂಡು ಹೋಗಿದ್ದಾರೆ. ಈ ಭಾವನಾತ್ಮಕ ಕ್ಷಣದ ಪೋಸ್ಟ್ ಹಂಚಿಕೊಂಡು ತಮಗಾದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. Vyanktesh Bajaj ಎಂಬ…

Read More

ಮೋದಿಯ ಮನವಿಗೆ ದನಿಗೂಡಿಸಿದ ಕಮಲ್ ಹಾಸನ್, ಹೇಳಿದ್ದೇನು? – Kannada News | Kamal Haasan explains why we must conserve energy amid conflict

ಕಮಲ್ ಹಾಸನ್ (Kamal Haasan) ಖ್ಯಾತ ನಟರಾಗಿರುವ ಜೊತೆಗೆ ರಾಜಕಾರಣಿಯೂ ಹೌದು. ಮಕ್ಕಳ್ ನಿಧಿ ಮಯಂ ಹೆಸರಿನ ಪಕ್ಷ ಸ್ಥಾಪಿಸಿದ್ದ ಕಮಲ್ ಹಾಸನ್ ಈಗ ಡಿಎಂಕೆ ಕೃಪೆಯಿಂದ ರಾಜ್ಯಸಭೆ ಸದಸ್ಯರೂ ಆಗಿದ್ದಾರೆ. ಸದಾ ಕೇಂದ್ರ ಸರ್ಕಾರವನ್ನು, ಬಿಜೆಪಿಯನ್ನು ಟೀಕಿಸುತ್ತಲೇ ಬರುತ್ತಿದ್ದ ಕಮಲ್ ಹಾಸನ್, ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಈ ಸಮಯದಲ್ಲಿ ರಾಜಕೀಯವನ್ನು ಬದಿಗೊತ್ತಿ ಪ್ರಧಾನಿ ಮೋದಿ ಮಾಡಿರುವ ಮನವಿಗೆ ತಾವೂ ದನಿಗೂಡಿಸಿದ್ದಾರೆ. ದೇಶದ ನಾಗರೀಕರಲ್ಲಿ ಖುದ್ದು ಮನವಿಯೊಂದನ್ನು ಮಾಡಿದ್ದಾರೆ. ನಾಗರೀಕರಿಗೆ ಕರೆಯನ್ನು ಸಹ ಕಮಲ್ ಹಾಸನ್ ನೀಡಿದ್ದಾರೆ….

Read More

ಮನೆಗೆ ಬಂದು ಬಾಲಕನಿಗೆ ಇಂಜೆಕ್ಷನ್​​ ಚುಚ್ಚಿ ಹೋದ ಮುಸುಕುಧಾರಿಗಳು: ಗ್ರಾಮದಲ್ಲಿ ಆತಂಕ – Kannada News | Masked men came to the house and injected a boy: Fear in the village

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada ಹುಬ್ಬಳ್ಳಿ, ಮೇ 22: ಮನೆಯಲ್ಲಿ ಆಟವಾಡಿಕೊಂಡಿದ್ದ ಬಾಲಕನಿಗೆ (Boy) ಅಪರಿಚಿತ ಮುಸುಕುಧಾರಿಗಳು ಇಂಜೆಕ್ಷನ್ (injection) ಚುಚ್ಚಿ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಧಾರವಾಡ (dharwad) ಜಿಲ್ಲೆಯ ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಣಿಕಂಠ ಗಾಣಿಗೇರ (11) ಎಂಬ ಬಾಲಕನಿಗೆ ಇಂಜೆಕ್ಷನ್ ಚುಚ್ಚಲಾಗಿದ್ದು, ಇದು ಸಹಜವಾಗಿ ಗ್ರಾಮೀಣ ಭಾಗದಲ್ಲಿ ಆತಂಕ ಮನೆ ಮಾಡಿದೆ. ಸದ್ಯ ಬಾಲಕನನ್ನು ಹುಬ್ಬಳ್ಳಿ ಕಿಮ್ಸ್​​ಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ….

Read More