Gajalakshmi Rajayoga 2026: ಶೀಘ್ರದಲ್ಲೇ ಗಜಲಕ್ಷ್ಮಿ ರಾಜಯೋಗ; ಈ 5 ರಾಶಿಯವರಿಗೆ ಆಕಸ್ಮಿಕ ಧನಲಾಭ! – Kannada News | Gajalakshmi Rajayoga 2026: June 10 Brings Fortune to 5 Zodiac Signs!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2026 ರ ಜೂನ್ 10 ರಂದು ಆಕಾಶಮಂಡಲದಲ್ಲಿ ಒಂದು ಅತ್ಯಂತ ಅಪರೂಪದ ಹಾಗೂ ಅದ್ಭುತವಾದ ಖಗೋಳ ವಿದ್ಯಮಾನ ಜರುಗಲಿದೆ. ಜ್ಞಾನ ಮತ್ತು ಭಾಗ್ಯದ ಕಾರಕನಾದ ದೇವಗುರು ಬೃಹಸ್ಪತಿ (ಗುರು) ಹಾಗೂ ಭೌತಿಕ ಸುಖ, ಐಶ್ವರ್ಯ ಮತ್ತು ವೈಭವದ ಅಧಿಪತಿಯಾದ ಶುಕ್ರ ಗ್ರಹಗಳು ಒಂದೇ ರಾಶಿಯಲ್ಲಿ ಶೂನ್ಯ ಡಿಗ್ರಿಯಲ್ಲಿ ಮುಖಾಮುಖಿಯಾಗಿ ಮಹಾಯುತಿಯನ್ನು ಸಾಧಿಸಲಿವೆ.

ಶುಕ್ರ ಮತ್ತು ಗುರುಗಳ ಈ ಅಪರೂಪದ ಸಂಯೋಜನೆಯಿಂದ ಅತ್ಯಂತ ಶಕ್ತಿಶಾಲಿ ಹಾಗೂ ಪವಿತ್ರವಾದ ‘ಗಜಲಕ್ಷ್ಮಿ ರಾಜಯೋಗ’ ನಿರ್ಮಾಣವಾಗಲಿದೆ. ಜ್ಯೋತಿಷ್ಯದಲ್ಲಿ ಈ ಯೋಗವನ್ನು ಸುಖ, ಸಮೃದ್ಧಿ ಮತ್ತು ಯಶಸ್ಸಿನ ಹೆಬ್ಬಾಗಿಲು ಎಂದು ಪರಿಗಣಿಸಲಾಗುತ್ತದೆ. ಈ ರಾಜಯೋಗದ ಪ್ರಭಾವದಿಂದಾಗಿ ವಿಶೇಷವಾಗಿ 5 ರಾಶಿಯವರ ಜೀವನದಲ್ಲಿ ಭಾರಿ ಧನಾತ್ಮಕ ಬದಲಾವಣೆಗಳು ಬರಲಿದ್ದು, ಆರ್ಥಿಕ ಪ್ರಗತಿ ಹಾಗೂ ಉದ್ಯೋಗದಲ್ಲಿ ಪ್ರಮೋಷನ್ ಸಿಗುವ ಬಲವಾದ ಯೋಗಗಳಿವೆ. ಆ ಅದೃಷ್ಟದ 5 ರಾಶಿಗಳ ವಿವರ ಇಲ್ಲಿದೆ.

ವೃಷಭ ರಾಶಿ (Taurus):

ಈ ಮಹತ್ತರವಾದ ಗಜಲಕ್ಷ್ಮಿ ರಾಜಯೋಗವು ವೃಷಭ ರಾಶಿಯಲ್ಲೇ ನಿರ್ಮಾಣವಾಗುತ್ತಿರುವುದರಿಂದ, ಇದರ ಸಂಪೂರ್ಣ ಮತ್ತು ಗರಿಷ್ಠ ಲಾಭವು ಈ ರಾಶಿಯ ಜಾತಕರಿಗೆ ಸಿಗಲಿದೆ. ಆಕಸ್ಮಿಕವಾಗಿ ಸಿಲುಕಿಕೊಂಡಿದ್ದ ಹಣ ಕೈಸೇರಲಿದೆ. ಹಳೆಯ ಹೂಡಿಕೆಗಳಿಂದ ನಿರೀಕ್ಷೆಗೂ ಮೀರಿದ ಲಾಭ ಸಿಗಲಿದ್ದು, ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಉದ್ಯೋಗಸ್ಥರಿಗೆ ಸಂಬಳ ಹೆಚ್ಚಳ (Salary Hike) ಮತ್ತು ಪ್ರಮೋಷನ್ ಸಿಗುವ ಬಲವಾದ ಸೂಚನೆಗಳಿವೆ. ವ್ಯಾಪಾರಿಗಳಿಗೆ ಹೊಸ ಉದ್ಯಮ ಪಾಲುದಾರರು (Partners) ಸಿಗಲಿದ್ದು, ವ್ಯವಹಾರ ದುಪ್ಪಟ್ಟಾಗಲಿದೆ. ಪ್ರೇಮ ಜೀವನದಲ್ಲೂ ಮಧುರತೆ ಇರಲಿದೆ.

ಕರ್ಕ ರಾಶಿ (Cancer):

ಕರ್ಕ ರಾಶಿಯವರಿಗೆ ಈ ಅವಧಿಯು ಅವರ ವೃತ್ತಿಜೀವನದಲ್ಲಿ ಅತ್ಯಂತ ಮಹತ್ವದ ಮತ್ತು ಸುವರ್ಣ ತಿರುವುಗಳನ್ನು ತರಲಿದೆ. ನೀವು ಕೆಲಸದ ಸ್ಥಳದಲ್ಲಿ ಪಟ್ಟ ಕಠಿಣ ಶ್ರಮಕ್ಕೆ ಈಗ ತಕ್ಕ ಪ್ರತಿಫಲ ಮತ್ತು ಗೌರವ ಸಿಗಲಿದೆ. ಉನ್ನತ ಅಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಯನ್ನು ಮುಕ್ತಕಂಠದಿಂದ ಶ್ಲಾಘಿಸಲಿದ್ದಾರೆ. ಹೊಸ ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಆಫರ್ ಬರಲಿದೆ. ವ್ಯಾಪಾರದಲ್ಲಿ ಹೊಸ ಗ್ರಾಹಕರು ಮತ್ತು ದೊಡ್ಡ ಆರ್ಡರ್‌ಗಳು ಕೈಸೇರುವ ಸಾಧ್ಯತೆಯಿದೆ. ಕುಟುಂಬದಲ್ಲಿ ಸಂತಸದ ವಾತಾವರಣವಿರಲಿದೆ.

ಸಿಂಹ ರಾಶಿ (Leo):

ಸಿಂಹ ರಾಶಿಯವರಿಗೆ ಈ ಗ್ರಹ ಸ್ಥಿತಿಯು ಅವರ ಭಾಗ್ಯ ಮತ್ತು ನಕ್ಷತ್ರವನ್ನು ಬಲಪಡಿಸುವ ಪ್ರಮುಖ ಮೂಲವಾಗಿ ಕೆಲಸ ಮಾಡಲಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಅಥವಾ ಅರ್ಧಕ್ಕೆ ನಿಂತುಹೋಗಿದ್ದ ಸರ್ಕಾರಿ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬರಲಿದ್ದು, ಮನಸ್ಸಿನಲ್ಲಿ ಹೊಸ ಉತ್ಸಾಹ ಮೂಡಲಿದೆ. ಸಂಗಾತಿಯೊಂದಿಗೆ ಸಂಬಂಧ ಸುಧಾರಿಸಲಿದ್ದು, ಪರಸ್ಪರ ಒಡನಾಟ ಹೆಚ್ಚಾಗಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದ್ದರೂ, ಖರ್ಚುಗಳ ಮೇಲೆ ನಿಯಂತ್ರಣವಿರಲಿ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ತುಲಾ ರಾಶಿ (Libra):

ಇತ್ತೀಚಿನ ದಿನಗಳಲ್ಲಿ ಏರಿಳಿತಗಳಿಂದ ಕೂಡಿದ್ದ ತುಲಾ ರಾಶಿಯವರ ಜೀವನವು ಈ ರಾಜಯೋಗದ ಪ್ರಭಾವದಿಂದ ಮತ್ತೊಮ್ಮೆ ಸರಿಯಾದ ಹಳಿಗೆ ಮರಳಲಿದೆ. ಜೀವನದಲ್ಲಿ ನಡೆಯುತ್ತಿದ್ದ ಎಲ್ಲಾ ರೀತಿಯ ಆರ್ಥಿಕ ಹಾಗೂ ಮಾನಸಿಕ ಸಮಸ್ಯೆಗಳು ದೂರಾಗಲಿವೆ. ಕೇವಲ ಹಣ ಗಳಿಕೆಯತ್ತ ಮಾತ್ರವಲ್ಲದೆ, ಆರೋಗ್ಯ ಮತ್ತು ಕುಟುಂಬದ ಅಗತ್ಯತೆಗಳ ಕಡೆಗೂ ನೀವು ಗಮನ ಹರಿಸಲಿದ್ದೀರಿ. ಈ ಅವಧಿಯಲ್ಲಿ ಜಮೀನು ಅಥವಾ ಆಸ್ತಿಯ ಮೇಲೆ ಮಾಡುವ ಹೂಡಿಕೆಗಳು ಭವಿಷ್ಯದಲ್ಲಿ ಕೋಟಿ ಕೋಟಿ ಲಾಭವನ್ನು ತಂದುಕೊಡಲಿವೆ.

ಧನು ರಾಶಿ (Sagittarius):

ದೇವಗುರು ಬೃಹಸ್ಪತಿಯ ಸ್ವಂತ ರಾಶಿಯಾದ ಧನಸ್ಸಿನ ಜನರಿಗೆ ಈ ಗಜಲಕ್ಷ್ಮಿ ರಾಜಯೋಗವು ಧನ-ಧಾನ್ಯಗಳ ಮಹಾಪೂರವನ್ನೇ ಹರಿಸಲಿದೆ. ಪಿತ್ರಾರ್ಜಿತ ಆಸ್ತಿ ಅಥವಾ ಹಳೆಯ ಹೂಡಿಕೆಗಳಿಂದ ನಿರೀಕ್ಷಿಸದ ಬೃಹತ್ ಮೊತ್ತದ ಆರ್ಥಿಕ ಲಾಭವಾಗಲಿದೆ. ನಿಮ್ಮ ಆರ್ಥಿಕ ಯೋಜನೆಗಳು ಯಶಸ್ವಿಯಾಗಲಿದ್ದು, ಉಳಿತಾಯದ (Savings) ಕಡೆಗೆ ಹೆಚ್ಚಿನ ಗಮನ ಹರಿಸಲಿದ್ದೀರಿ. ಈ ಅವಧಿಯಲ್ಲಿ ಕುಟುಂಬದವರೊಂದಿಗೆ ಸುಂದರವಾದ ಧಾರ್ಮಿಕ ಅಥವಾ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಯೋಜನೆ ರೂಪಿಸಲಿದ್ದೀರಿ. ಮಕ್ಕಳ ಕಡೆಯಿಂದ ಶುಭ ವಾರ್ತೆಗಳು ಕೇಳಿಬರಲಿವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Pahalgam Attack: ಪಹಲ್ಗಾಮ್​ನ​ ಭೀಕರ ದಾಳಿಯ ದಿನ ಏನೇನಾಯ್ತು? ಉಗ್ರರ ಸಿದ್ಧತೆ ಹೇಗಿತ್ತು?   – Kannada News | What happened on the day of the horrific Pahalgam Terror attack Lunch Under Tree GoPro To Record murder Chilling Timeline

ನವದೆಹಲಿ, ಮೇ 22: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ (Pahalgam Terror Attack) ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಉಗ್ರರ ದಾಳಿಗೆ ಜಗತ್ತಿನಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (LeT) ಮತ್ತು ಅದರ ಅಂಗಸಂಸ್ಥೆಯಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಕೈವಾಡ ಈ ದಾಳಿಯ ಹಿಂದೆ ಇತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ.

2025ರ ಏಪ್ರಿಲ್ 22ರಂದು ಮಧ್ಯಾಹ್ನ ಸುಮಾರು 2.23ಕ್ಕೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಬೈಸರನ್ ವ್ಯಾಲಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಒಟ್ಟು 26 ಜನ ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಇದರಲ್ಲಿ 25 ಪ್ರವಾಸಿಗರು ಮತ್ತು ಒಬ್ಬರು ಸ್ಥಳೀಯ ಮುಸ್ಲಿಂ ಕುದುರೆ ರೈಡರ್ ಕೂಡ ಸೇರಿದ್ದಾರೆ. ಇನ್ನೂ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಮೃತರ ಪೈಕಿ ಕರ್ನಾಟಕದ ಶಿವಮೊಗ್ಗದ ಮಂಜುನಾಥ್ ರಾವ್ ಮತ್ತು ಬೆಂಗಳೂರಿನ ಭರತ್ ಭೂಷಣ್ ಎಂಬ ಇಬ್ಬರು ಪ್ರವಾಸಿಗರು ಕೂಡ ಸೇರಿದ್ದರು.

ಪಾಕಿಸ್ತಾನದ ಲಾಹೋರ್‌ನಲ್ಲಿದ್ದುಕೊಂಡು ದಾಳಿಯನ್ನು ನಿಯಂತ್ರಿಸಿದ ಟಿಆರ್‌ಎಫ್ ಕಮಾಂಡರ್ ಸಾಜಿದ್ ಜಾಟ್ ಉರ್ಫ್ ಲಂಗ್ಡಾ ಈ ದಾಳಿಯ ಮಾಸ್ಟರ್‌ಮೈಂಡ್ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.

2025ರ ಪಹಲ್ಗಾಮ್ ದಾಳಿಯ ಪ್ರಮುಖ ವಿವರಗಳು:

ಏಪ್ರಿಲ್ 15ರಿಂದ 21:

ಏಪ್ರಿಲ್ 21ರಂದು ಫೈಸಲ್ ಜಾಟ್ ಉರ್ಫ್ ಸುಲೈಮಾನ್ ಶಾ, ಹಬೀಬ್ ತಾಹಿರ್ ಉರ್ಫ್ ಜಿಬ್ರಾನ್ ಮತ್ತು ಹಮ್ಜಾ ಅಫ್ಘಾನಿ ಎಂಬ ಮೂವರು ಸಶಸ್ತ್ರ ಪಾಕಿಸ್ತಾನಿ ಉಗ್ರರು ಸುದೀರ್ಘ ಪ್ರಯಾಣದ ನಂತರ ತೀವ್ರ ದಣಿವು ಮತ್ತು ಬಾರಿಕೆಯಿಂದ ಸ್ಥಳೀಯ ನಿವಾಸಿ ಪರ್ವೈಜ್ ಅಹ್ಮದ್ ಎಂಬುವವರ ಗುಡಿಸಿಲಿಗೆ ಬಂದು ಆಶ್ರಯ ಪಡೆದರು.

ಇದನ್ನೂ ಓದಿ: 16 ವರ್ಷಗಳಿಂದ ಭಾರತದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಪಾಕಿಸ್ತಾನದ ಎಲ್​ಇಟಿ ಉಗ್ರ ಸೆರೆ

ಏಪ್ರಿಲ್ 22ರ ದಾಳಿಯ ದಿನ:

ಬೈಸರನ್ ವ್ಯಾಲಿಯ ಪಾರ್ಕ್ ಒಳಗೆ ನುಗ್ಗುವ ಮುನ್ನ ಉಗ್ರರು ಮೈದಾನದಲ್ಲಿದ್ದ ಮರವೊಂದರ ಕೆಳಗೆ ಕುಳಿತು ಮಧ್ಯಾಹ್ನದ ಊಟ ಮಾಡಿದರು. ನಂತರ ತಮ್ಮ ಆಯುಧಗಳು ಯಾರಿಗೂ ಕಾಣದಂತೆ ಬಚ್ಚಿಡಲು ತಮ್ಮ ಬ್ಯಾಗ್‌ಗಳಲ್ಲಿದ್ದ ಕಂಬಳಿಗಳನ್ನು ಮೈಮೇಲೆ ಹೊದ್ದುಕೊಂಡರು. ಬಳಿಕ ಇಬ್ಬರು ಉಗ್ರರು ಹತ್ತಿರದ ತೊರೆಯ ಬಳಿ ನಡೆದುಕೊಂಡು ಹೋಗಿ ಪ್ರವಾಸಿಗರ ಚಲನವಲನಗಳನ್ನು ಗಮನಿಸಿ, ಇಡೀ ಮೈದಾನದ ನಕ್ಷೆಯನ್ನು ಸಿದ್ಧಪಡಿಸಿಕೊಂಡರು. ಬಳಿಕ ದಕ್ಷಿಣದ ಜಿಪ್‌ಲೈನ್ ಮತ್ತು ಉತ್ತರದ ಪ್ರಮುಖ ಗೇಟ್ ಕಡೆಯಿಂದ ಏಕಕಾಲಕ್ಕೆ ದಾಳಿ ನಡೆಸಿ ಇಡೀ ಮೈದಾನದಲ್ಲಿ ಹೆಣಗಳು ಬೀಳುವಂತೆ ಮಾಡಿದರು.

ಧರ್ಮ ಕೇಳಿ ಹತ್ಯೆ:

ಪ್ರವಾಸಿಗರ ಧರ್ಮವನ್ನು ಕೇಳಿ, ಮುಸ್ಲಿಮೇತರರನ್ನು ಗುರಿಯಾಗಿಸಿಕೊಂಡು ಗುಂಡಿಕ್ಕಿ ಕೊಲ್ಲಲಾಯಿತು. ಸ್ಥಳೀಯ ಮುಸ್ಲಿಂ ಸಮುದಾಯದ ಕುದುರೆ ಸವಾರ ಉಗ್ರನನ್ನು ತಡೆಯಲು ಹೋಗಿ ಪ್ರಾಣ ಕಳೆದುಕೊಂಡರು. ಮೊದಲ ಬುಲೆಟ್ ಅನ್ನು ಎಂ-4 ಕಾರ್ಬೈನ್ ರೈಫಲ್‌ನಿಂದ ಹಾರಿಸಲಾಯಿತು. ಉಳಿದ ಇಬ್ಬರು ಉಗ್ರರು ಅಲ್ಲಿನ ಡಾಬಾಗಳು ಮತ್ತು ಇಳಿಜಾರು ಗುಡ್ಡದ ಬಳಿ ಎಕೆ-47 ರೈಫಲ್‌ಗಳಿಂದ ಮನಬಂದಂತೆ ಗುಂಡಿನ ಮಳೆಗರೆದರು. ಗಾಬರಿಗೊಂಡ ಜನರನ್ನು ಒಂದು ಕಡೆ ಸೇರಿಸಿದ ಉಗ್ರರು, ಇಸ್ಲಾಮಿಕ್ ‘ಕಲ್ಮಾ’ ಹೇಳಲು ಸೂಚಿಸಿದರು. ಕಲ್ಮಾ ಪಠಿಸಲು ಸಾಧ್ಯವಾಗದವರನ್ನು ಗುರುತಿಸಿ ಅತ್ಯಂತ ಕ್ರೂರವಾಗಿ ಗುಂಡಿಕ್ಕಿ ಕೊಂದರು.

ಹತ್ಯೆಯ ಲೈವ್ ರೆಕಾರ್ಡ್:

ತಮ್ಮ ಮುಖ್ಯ ಬ್ಯಾಗ್‌ಗಳನ್ನು ಒಂದು ಕಡೆ ಇಟ್ಟು ಬಂದ ಉಗ್ರರು, ಪಾರ್ಕ್‌ನ ಬೇಲಿಯನ್ನು ದಾಟಿ ಒಳಗೆ ನುಗ್ಗಿದರು. ಈ ಹತ್ಯಾಕಾಂಡವನ್ನು ಲೈವ್ ಆಗಿ ರೆಕಾರ್ಡ್ ಮಾಡಲು ಒಬ್ಬ ಉಗ್ರನು ತನ್ನ ಹೆಲ್ಮೆಟ್‌ಗೆ ‘ಗೋಪ್ರೊ’ (GoPro) ಆಕ್ಷನ್ ಕ್ಯಾಮೆರಾವನ್ನು ಅಳವಡಿಸಿಕೊಂಡಿದ್ದನು. ಇಬ್ಬರು ಉಗ್ರರು ಸಾರ್ವಜನಿಕ ಶೌಚಾಲಯಗಳ ಬಳಿ ಇದ್ದ ಪ್ರಮುಖ ಪ್ರವೇಶ ದ್ವಾರದತ್ತ ನುಗ್ಗಿದರೆ ಮೂರನೇ ಉಗ್ರನು ಪ್ರವಾಸಿಗರ ಜಿಪ್‌ಲೈನ್ ಕೊನೆಗೊಳ್ಳುವ ಜಾಗದಲ್ಲಿ ನಿಂತುಕೊಂಡನು. ಪ್ರವಾಸಿಗರು ಎಲ್ಲಿಯೂ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಇಡೀ ಮೈದಾನವನ್ನು ಒಂದು ‘ಸಾವಿನ ವಲಯ’ (Kill Zone)ವನ್ನಾಗಿ ಮಾರ್ಪಡಿಸಲು ಅವರು ಈ ರೀತಿ ತಂತ್ರ ರೂಪಿಸಿದ್ದರು.

ಉಗ್ರರ ಸಂಭ್ರಮಾಚರಣೆ:

ಕಾಡಿನ ಕಡೆಗೆ ಓಡಿಹೋಗುವಾಗ ಮರಗಳ ಹಿಂದೆ ಅಡಗಿದ್ದ ಮೂವರು ನಾಗರಿಕರನ್ನು ಬಹಳ ಹತ್ತಿರದಿಂದ ಶೂಟ್ ಮಾಡಲಾಯಿತು. ಪಾರ್ಕ್‌ನಿಂದ ಹೊರಹೋಗುವಾಗ ಯಾವುದೇ ಪಶ್ಚಾತ್ತಾಪವಿಲ್ಲದೆ ಉಗ್ರರು ಸಂಭ್ರಮದಿಂದ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿದರು.

ಭಾರತದ ಪ್ರತಿಕ್ರಿಯೆ:

ಈ ದಾಳಿಯನ್ನು ಖಂಡಿಸಿ ಭಾರತ ಸರ್ಕಾರ ಕಠಿಣ ಕ್ರಮ ಕೈಗೊಂಡಿತು. ಪಾಕಿಸ್ತಾನದ ರಾಯಭಾರಿಗಳನ್ನು ದೇಶದಿಂದ ಉಚ್ಚಾಟಿಸಲಾಯಿತು. ಅಟ್ಟಾರಿ ಗಡಿಯನ್ನು ಮುಚ್ಚಲಾಯಿತು. ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಸ್ಥಗಿತಗೊಳಿಸಲಾಯಿತು.

ಮೇ 7ರಿಂದ 10ರವರೆಗೆ ಆಪರೇಷನ್ ಸಿಂಧೂರ್:

ಪಹಲ್ಗಾಮ್​ನ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ಮತ್ತು ಸೇನೆ ಪಾಕಿಸ್ತಾನದಲ್ಲಿದ್ದ ಉಗ್ರರ ತರಬೇತಿ ಶಿಬಿರಗಳ ಮೇಲೆ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಅಡಿಯಲ್ಲಿ ಕ್ಷಿಪಣಿ ಮತ್ತು ವೈಮಾನಿಕ ದಾಳಿಗಳನ್ನು ನಡೆಸಿತು. ಇದು ಉಭಯ ದೇಶಗಳ ನಡುವೆ 4 ದಿನಗಳ ಸೈನಿಕ ಸಂಘರ್ಷಕ್ಕೆ ಕಾರಣವಾಯಿತು. ಮೇ 10ರಂದು ಕದನ ವಿರಾಮ ಘೋಷಿಸಲಾಯಿತು.

ಇದನ್ನೂ ಓದಿ: ಆಪರೇಷನ್ ಸಿಂಧೂರ್​​ಗೆ ಒಂದು ವರ್ಷ; ಉಗ್ರರ ವಿರುದ್ಧದ ಕಾರ್ಯಾಚರಣೆ ಪರಿಣಾಮಕಾರಿಯಾಗಿದ್ದು ಹೇಗೆ?

ಜುಲೈ 28ಕ್ಕೆ ಆಪರೇಷನ್ ಮಹಾದೇವ್:

ಭಾರತೀಯ ಭದ್ರತಾ ಪಡೆಗಳು ದಾಳಿ ನಡೆಸಿದ ಉಗ್ರರನ್ನು ಪತ್ತೆಹಚ್ಚಲು ‘ಆಪರೇಷನ್ ಮಹಾದೇವ್’ ಆರಂಭಿಸಿದವು. ಜುಲೈ 28ರಂದು ದಚಿ ಗಾಮ್ ಅರಣ್ಯ ಪ್ರದೇಶದಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಪಹಲ್ಗಾಮ್ ದಾಳಿ ನಡೆಸಿದ್ದ ಮೂವರು ಪ್ರಮುಖ ಪಾಕಿಸ್ತಾನಿ ಉಗ್ರರನ್ನು ಹೊಡೆದುರುಳಿಸಲಾಯಿತು.

ಚಾರ್ಜ್‌ಶೀಟ್ ಸಲ್ಲಿಕೆ:

ಮೇ ತಿಂಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನ್ಯಾಯಾಲಯಕ್ಕೆ 7,500ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತು. ಉಗ್ರರು ಬಳಸಿದ ಫೋನ್‌ಗಳು ಪಾಕಿಸ್ತಾನದಲ್ಲಿ ಖರೀದಿಯಾಗಿದ್ದವು. ಈ ದಾಳಿಯ ಹೊಣೆ ಹೊತ್ತ ಗುಂಪಿನ ಸಾಮಾಜಿಕ ಜಾಲತಾಣಗಳ ಐಪಿ ವಿಳಾಸ (IP Address) ಪಾಕಿಸ್ತಾನದ್ದು ಎಂದು ತಾಂತ್ರಿಕ ಸಾಕ್ಷ್ಯಗಳ ಸಮೇತ ಸಾಬೀತುಪಡಿಸಿತು.

ಎನ್‌ಐಎ ತನಿಖೆಯ ಪ್ರಕಾರ, ಉಗ್ರರು ದಾಳಿ ಮಾಡುವಾಗ ಪ್ರವಾಸಿಗರಿಗೆ “ಮೋದಿಗೆ ಹೋಗಿ ಹೇಳಿ” ಎಂದು ಕೂಗುತ್ತಿದ್ದರು. ಇದು ಕೇವಲ ಪ್ರವಾಸಿಗರ ಹತ್ಯೆಯಷ್ಟೇ ಅಲ್ಲದೆ ಭಾರತ ಸರ್ಕಾರದ ವಿರುದ್ಧ ಜಿಹಾದಿ ಸಿದ್ಧಾಂತವನ್ನು ಪ್ರದರ್ಶಿಸುವ ಉದ್ದೇಶ ಹೊಂದಿತ್ತು ಎಂಬುದು ಸಾಬೀತಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Karnataka Weather forecast: ಕರ್ನಾಟಕದಲ್ಲಿ ಪೂರ್ವ ಮುಂಗಾರು ಅಬ್ಬರ, 1 ವಾರ ಗುಡುಗು ಸಹಿತ ಭಾರೀ ಮಳೆ – Kannada News | Karnataka Weather weather forecast: IMD Forecasts Heavy Showers And Gusty Winds Across State

ಬೆಂಗಳೂರು (ಮೇ 22): ಕರ್ನಾಟಕದಲ್ಲಿ (Karnataka) ಮುಂಗಾರು ಪೂರ್ವ ಮಾರುತಗಳು (Pre Monsoon Rain) ತೀವ್ರಗೊಂಡಿದ್ದು, ಮೇ 22 ರಿಂದ ಮುಂದಿನ ಐದಾರು ದಿನಗಳ ಕಾಲ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ನೈಋತ್ಯ ಮುಂಗಾರು ಮಾಲ್ಡೀವ್ಸ್ ಮತ್ತು ಬಂಗಾಳ ಕೊಲ್ಲಿಯ ಕೆಲವು ಭಾಗಗಳಿಗೆ ಮುನ್ನಡೆಯಲು ಪೂರಕ ವಾತಾವರಣವಿದ್ದು, ಕರಾವಳಿ ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ, ಗುಡುಗು, ಸಿಡಿಲು ಹಾಗೂ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆಯಿದೆ .

ಯಾವಾಗ ಎಲ್ಲೆಲ್ಲಿ ಮಳೆ?

ಮೇ 23 ರಂದು ಬಾಗಲಕೋಟೆ, ಕೊಪ್ಪಳ, ವಿಜಯಪುರ, ತುಮಕೂರು, ಚಿತ್ರದುರ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ. ಮೇ 24 ರಂದು ತುಮಕೂರು, ಹಾಸನ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಇದ್ದು, ಗಾಳಿಯ ವೇಗ ಗಂಟೆಗೆ 40-50 ಕಿ.ಮೀ ಇರಲಿದೆ. ಮೇ 25 ಮತ್ತು 26 ರಂದು ಮಳೆಯ ತೀವ್ರತೆ ಕೊಂಚ ಕಡಿಮೆಯಾಗಲಿದ್ದರೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಇದನ್ನೂ ನೋಡಿ: ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ

ಇನ್ನು ಮೇ 27 ಮತ್ತು 28 ರಂದು ಕರಾವಳಿಯ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹಾಗೂ ಒಳನಾಡಿನ ಹಲವೆಡೆ ವ್ಯಾಪಕ ಮಳೆಯಾಗುವ ಮುನ್ಸೂಚನೆ ಲಭ್ಯವಾಗಿದೆ. ಇನ್ನು ರಾಜ್ಯದ ಗರಿಷ್ಠ ತಾಪಮಾನದಲ್ಲಿ ಮುಂದಿನ 5 ದಿನಗಳವರೆಗೆ ಯಾವುದೇ ಪ್ರಮುಖ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದಕ್ಷಿಣ ಒಳನಾಡು

ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ವರುಣನ ಅಬ್ಬರ ಹೆಚ್ಚಿರಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರಲ್ಲಿ ಭಾರಿ ಮಳೆಯ ಮುನ್ಸೂಚನೆ ಇದ್ದು, ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಸಿಡಿಲು ಮತ್ತು ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಜಾಗರೂಕರಾಗಿರಲು ಸೂಚಿಸಲಾಗಿದೆ.

ಉತ್ತರ ಒಳನಾಡು

ಬೆಳಗಾವಿ, ಬಾಗಲಕೋಟೆ, ಗದಗ ಮತ್ತು ಧಾರವಾಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯೊಂದಿಗೆ ಆಲಿಕಲ್ಲು ಮಳೆ ಸಂಭವಿಸುವ ಸಾಧ್ಯತೆಯಿದೆ. ಈ ವೇಳೆ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ವಿಜಯಪುರ, ರಾಯಚೂರು, ಕೊಪ್ಪಳ ಹಾಗೂ ಹಾವೇರಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.

ಕರಾವಳಿ ಕರ್ನಾಟಕ

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಮತ್ತು ಕೊಡಗು ಜಿಲ್ಲೆಗಳ ಹಲವು ಕಡೆಗಳಲ್ಲಿ ಮುಂದಿನ ದಿನಗಳಲ್ಲಿ ಚದುರಿದಂತೆ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಉರಿ ಸೆಖೆಯ ವಾತಾವರಣ ಮುಂದುವರಿಯಲಿದ್ದು, ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಐಟಿಆರ್ ಸಲ್ಲಿಸುತ್ತಿದ್ದೀರಾ? ಎಐಎಸ್ ಪರಿಶೀಲನೆ ಮರೆಯದಿರಿ; ಏನದರ ಮಹತ್ವ? ಇಲ್ಲಿದೆ ಡೀಟೇಲ್ಸ್ – Kannada News | ITR Filing 2026: Avoid Tax Notices! Check AIS for Mismatches Now

ನವದೆಹಲಿ, ಮೇ 22: 2026ರ ಆದಾಯ ತೆರಿಗೆ ರಿಟರ್ನ್ಸ್ (ITR Filing 2026) ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ತೆರಿಗೆದಾರರು ತಮ್ಮ ವಾರ್ಷಿಕ ಮಾಹಿತಿ ಹೇಳಿಕೆ ಅಥವಾ ಎಐಎಸ್ (AIS – Annual Information Statement) ಅನ್ನು ಸೂಕ್ಷ್ಮವಾಗಿ ಗಮನಿಸುವುದು ಅತ್ಯಗತ್ಯವಾಗಿದೆ. ಐಟಿಆರ್‌ನಲ್ಲಿ ಘೋಷಿಸಿದ ಆದಾಯ ಮತ್ತು ಎಐಎಸ್‌ನಲ್ಲಿರುವ ಮಾಹಿತಿಯ ನಡುವೆ ವ್ಯತ್ಯಾಸಗಳಿದ್ದರೆ (Mismatches), ಆದಾಯ ತೆರಿಗೆ ಇಲಾಖೆಯಿಂದ (Income Tax) ನೋಟಿಸ್‌ಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಎಐಎಸ್ (AIS) ಎಂದರೇನು?

ಆದಾಯ ತೆರಿಗೆ ಇಲಾಖೆಯು ತೆರಿಗೆದಾರರ ಪ್ಯಾನ್ (PAN) ಕಾರ್ಡ್‌ಗೆ ಲಿಂಕ್ ಆಗಿರುವ ಎಲ್ಲಾ ಪ್ರಮುಖ ಹಣಕಾಸು ವಹಿವಾಟುಗಳನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ಅದನ್ನು ಒಂದೇ ವರದಿಯಲ್ಲಿ ಸಂಗ್ರಹಿಸುತ್ತದೆ. ಇದನ್ನೇ ‘ಆನ್ಯುವಲ್ ಇನ್ಫರ್ಮೇಷನ್ ಸ್ಟೇಟ್‌ಮೆಂಟ್’ (AIS) ಎನ್ನಲಾಗುತ್ತದೆ. ಇದರಲ್ಲಿ ಈ ಕೆಳಗಿನ ಮಾಹಿತಿ ಒಳಗೊಂಡಿರಬಹುದು:

  • ಸಂಬಳ (Salary) ಮತ್ತು ಬ್ಯಾಂಕ್ ಇಂಟರೆಸ್ಟ್ (Interest Income)
  • ಷೇರು ಮತ್ತು ಮ್ಯೂಚುವಲ್ ಫಂಡ್‌ಗಳ ಲಾಭಾಂಶ (Dividends & Capital Gains)
  • ಸ್ಥಿರ ಆಸ್ತಿ ಖರೀದಿ ಅಥವಾ ಮಾರಾಟದ ವಿವರಗಳು
  • ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ದೊಡ್ಡ ಮೊತ್ತದ ಪಾವತಿಗಳು ಮತ್ತು ವಿದೇಶಿ ಹಣ ರವಾನೆ (Foreign Remittance) ಮುಂತಾದ ಎಲ್ಲಾ ವಿವರಗಳು ಲಭ್ಯವಿರುತ್ತವೆ.

ಇದನ್ನೂ ಓದಿ: ಡಾಲರ್ ಎದುರು ರುಪಾಯಿ ಹೇಗೆ ಬೇಕಾದರೂ ಕುಸಿಯಲಿ ಬಿಡಿ, ಚಿಂತೆ ಬೇಡ: ಹಣಕಾಸು ಆಯೋಗ ಅಧ್ಯಕ್ಷ ಪನಗರಿಯಾ

ಮಾಹಿತಿ ತಾಳೆಯಾಗದಿದ್ದರೆ (Mismatch) ಏನಾಗುತ್ತದೆ?

ತೆರಿಗೆದಾರರು ತಮಗೆ ತಿಳಿಯದೆಯೋ ಅಥವಾ ನಿರ್ಲಕ್ಷ್ಯದಿಂದಲೋ ಕೆಲವು ಆದಾಯದ ಮೂಲಗಳನ್ನು (ಉದಾಹರಣೆಗೆ ಎಫ್‌ಡಿ ಇಂಟರೆಸ್ಟ್ ಅಥವಾ ಡಿವಿಡೆಂಡ್) ತಮ್ಮ ಐಟಿಆರ್ ಫಾರ್ಮ್‌ನಲ್ಲಿ ನಮೂದಿಸುವುದನ್ನು ಬಿಟ್ಟುಬಿಡುತ್ತಾರೆ. ಆದರೆ, ಈ ಮಾಹಿತಿ ಎಐಎಸ್‌ನಲ್ಲಿ ದಾಖಲಾಗಿರುತ್ತದೆ. ತೆರಿಗೆ ಇಲಾಖೆಯು ಕೃತಕ ಬುದ್ಧಿಮತ್ತೆ (AI) ಮತ್ತು ಆಧುನಿಕ ಸಾಫ್ಟ್‌ವೇರ್‌ಗಳ ಮೂಲಕ ಇವೆರಡನ್ನೂ ಹೋಲಿಸಿ ನೋಡುತ್ತದೆ.

ಯಾವಾಗ ಇವೆರಡರ ನಡುವೆ ವ್ಯತ್ಯಾಸ ಕಾಣಿಸುತ್ತದೆಯೋ, ಆಗ ಸಿಸ್ಟಮ್ ಸ್ವಯಂಚಾಲಿತವಾಗಿ (Automated) ಅದನ್ನು ಗುರುತಿಸಿ ಸೆಕ್ಷನ್ 143(1) ರ ಅಡಿಯಲ್ಲಿ ತೆರಿಗೆದಾರರಿಗೆ ಇಮೇಲ್ ಅಥವಾ ಎಸ್‌ಎಮ್‌ಎಸ್ ಮೂಲಕ ಎಚ್ಚರಿಕೆ ಸಂದೇಶ ಅಥವಾ ನೋಟಿಸ್ ಕಳುಹಿಸುತ್ತದೆ.

ಎಐಎಸ್‌ನಲ್ಲಿ ತಪ್ಪುಗಳಿರಲು ಏನು ಕಾರಣ?

ಕೆಲವೊಮ್ಮೆ ತೆರಿಗೆದಾರರ ತಪ್ಪಿಲ್ಲದಿದ್ದರೂ ಎಐಎಸ್‌ನಲ್ಲಿ ತಪ್ಪು ಮಾಹಿತಿ ಕಾಣಿಸಿಕೊಳ್ಳಬಹುದು. ಇದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಬ್ಯಾಂಕುಗಳು, ಬ್ರೋಕರ್‌ಗಳು ಅಥವಾ ಕಂಪನಿಗಳು ತೆರಿಗೆ ಇಲಾಖೆಗೆ ತಪ್ಪು ಮಾಹಿತಿ ಸಲ್ಲಿಸಿರಬಹುದು ಅಥವಾ ಒಂದೇ ವಹಿವಾಟನ್ನು ಎರಡು ಬಾರಿ (Duplicate entry) ವರದಿ ಮಾಡಿರಬಹುದು. ಅಥವಾ, ಬೇರೆಯವರ ವಹಿವಾಟಿಗೆ ನಿಮ್ಮ ಪ್ಯಾನ್ ಸಂಖ್ಯೆ ತಪ್ಪಾಗಿ ಲಿಂಕ್ ಆಗಿದ್ದರೆ, ಅವರ ಆದಾಯವೂ ನಿಮ್ಮ ಎಐಎಸ್‌ನಲ್ಲಿ ತೋರಿಸುತ್ತದೆ.

ಇದನ್ನೂ ಓದಿ: ‘ಕೆಳಗಿನ ಶೇ. 50 ಮಂದಿಗೆ ಆದಾಯ ತೆರಿಗೆ ‘3% ಅಲ್ಲ, 0% ಆಗಬೇಕು’- ಜೆಫ್ ಬೆಜೋಸ್

ನೋಟಿಸ್ ಬರದಂತೆ ತಡೆಯಲು ಏನು ಮಾಡಬೇಕು?

ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಆಗಿ, ‘ಸರ್ವಿಸಸ್’ (Services) ಟ್ಯಾಬ್ ಅಡಿಯಲ್ಲಿರುವ AIS ಮತ್ತು TIS (Taxpayer Information Summary) ಅನ್ನು ಡೌನ್‌ಲೋಡ್ ಮಾಡಿ ಸಂಪೂರ್ಣವಾಗಿ ಪರಿಶೀಲಿಸಿ.

ಎಐಎಸ್‌ನಲ್ಲಿ ಯಾವುದಾದರೂ ತಪ್ಪು ಮಾಹಿತಿ ಅಥವಾ ನಿಮಗೆ ಸಂಬಂಧಿಸದ ವಹಿವಾಟು ಕಂಡುಬಂದರೆ, ಅಲ್ಲೇ ಇರುವ ‘Add Feedback’ ಆಯ್ಕೆಯನ್ನು ಬಳಸಿ ಅದನ್ನು ತಿರಸ್ಕರಿಸಬಹುದು (Deny) ಅಥವಾ ತಿದ್ದುಪಡಿ ಕೋರಬಹುದು.

ಒಂದು ವೇಳೆ ಈಗಾಗಲೇ ಐಟಿಆರ್ ಸಲ್ಲಿಸಿದ್ದು, ಅದರಲ್ಲಿ ಆದಾಯದ ವಿವರ ಬಿಟ್ಟುಹೋಗಿದ್ದರೆ, ನೋಟಿಸ್ ಬರುವ ಮುನ್ನವೇ ಪರಿಷ್ಕೃತ ಐಟಿಆರ್ (Revised Return) ಸಲ್ಲಿಸಿ ತಪ್ಪು ತಿದ್ದಿಕೊಳ್ಳಬಹುದು.

2026ರ ಜುಲೈ 31 ರ ಒಳಗೆ ಸಂಬಳ ಪಡೆಯುವ ನೌಕರರು ತಮ್ಮ ಐಟಿಆರ್ ಸಲ್ಲಿಸಬೇಕಾಗಿದ್ದು, ಕೊನೆಯ ಕ್ಷಣದ ಗಡಿಬಿಡಿಯಲ್ಲಿ ನೋಟಿಸ್‌ಗಳನ್ನು ಆಹ್ವಾನಿಸುವುದಕ್ಕಿಂತ ಮುಂಚಿತವಾಗಿ ಎಐಎಸ್ ಪರಿಶೀಲಿಸುವುದು ಜಾಣತನ ಎಂದು ತೆರಿಗೆ ತಜ್ಞರು ಸಲಹೆ ನೀಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿಚಾರಣೆ ವಿಳಂಬದ ಕಾರಣಕ್ಕೆ ಕಸಬ್‌ನಂತಹ ಉಗ್ರನಿಗೂ ಜಾಮೀನು ನೀಡುತ್ತೀರಾ? ಸುಪ್ರೀಂ ಕೋರ್ಟ್​ಗೆ ಕೇಂದ್ರ ಸರ್ಕಾರ ಪ್ರಶ್ನೆ – Kannada News | Would Kasab have been granted bail over trial delay Central Government asks Supreme Court

ನವದೆಹಲಿ, ಮೇ 22: ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ‘ಯುಎಪಿಎ’ (UAPA – ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಅಡಿಯಲ್ಲಿ ದಾಖಲಾಗುವ ಭಯೋತ್ಪಾದನಾ ಪ್ರಕರಣಗಳ ತನಿಖೆ ಮತ್ತು ಜಾಮೀನು ನಿಯಮಗಳ ಕುರಿತು ಕಳವಳ ವ್ಯಕ್ತಪಡಿಸಿದೆ. ವಿಚಾರಣೆ ವಿಳಂಬವಾಗುತ್ತಿದೆ ಎಂಬ ಒಂದೇ ಒಂದು ಕಾರಣಕ್ಕೆ ಗಂಭೀರ ಸ್ವರೂಪದ ಉಗ್ರಗಾಮಿ ಪ್ರಕರಣಗಳಲ್ಲಿ ಸಿಲುಕಿರುವ ಆರೋಪಿಗಳಿಗೆ ಸುಲಭವಾಗಿ ಜಾಮೀನು ನೀಡುವುದು ದೇಶದ ಭದ್ರತೆಗೆ ಅಪಾಯಕಾರಿ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದ ಕುರಿತು ನ್ಯಾಯಾಲಯಕ್ಕೆ ಉದಾಹರಣೆ ನೀಡಿದ ಕೇಂದ್ರ ಸರ್ಕಾರದ ಪರ ವಕೀಲರು, “ಒಂದು ವೇಳೆ ಇದೇ ತರ್ಕವನ್ನು ಬಳಸುವುದಾದರೆ ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್‌ನ ವಿಚಾರಣೆ ವಿಳಂಬವಾಗಿದ್ದರೆ ಆತನಿಗೂ ಜಾಮೀನು ನೀಡಬೇಕಾಗುತ್ತಿತ್ತೇ?” ಎಂದು ಪ್ರಶ್ನಿಸಿದ್ದಾರೆ.

ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ ಬಿ ವರಾಲೆ ಅವರ ಪೀಠವು 2020 ರ ದೆಹಲಿ ಗಲಭೆ ಪ್ರಕರಣದ ಆರೋಪಿಗಳಾದ ತಸ್ಲೀಮ್ ಅಹ್ಮದ್ ಮತ್ತು ಖಾಲಿದ್ ಸೈಫಿ ಅವರ ಜಾಮೀನು ಅರ್ಜಿಗಳನ್ನು ವಿಚಾರಣೆ ನಡೆಸುತ್ತಿತ್ತು. ಅವರ ಜಾಮೀನು ಅರ್ಜಿ ಮತ್ತು ಉಲ್ಲೇಖದ ಪ್ರಶ್ನೆಯ ಮೇಲಿನ ಆದೇಶವನ್ನು ಕಾಯ್ದಿರಿಸಿದ ಪೀಠವು, ಆ ದಿನದ ನಂತರ ಅಥವಾ ಮೇ 25ರಂದು ಆದೇಶವನ್ನು ಪ್ರಕಟಿಸುವುದಾಗಿ ಹೇಳಿದೆ.

ಇದನ್ನೂ ಓದಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ: ಏಪ್ರಿಲ್ 7ರಿಂದ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿಗಳ ವಿಚಾರಣೆ

2021ರ ಪ್ರಸಿದ್ಧ ‘ಯೂಸುಫ್ ಅಲಿ ಉರ್ಫ್ ನಜೀಬ್’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿತ್ತು. ಅದರ ಪ್ರಕಾರ, ಯುಎಪಿಎ ಕಾಯ್ದೆಯಡಿ ಜಾಮೀನು ನೀಡುವುದಕ್ಕೆ ಕಠಿಣ ನಿಯಮಗಳಿದ್ದರೂ ಒಬ್ಬ ಆರೋಪಿಯ ವಿಚಾರಣೆ ದೀರ್ಘಕಾಲದವರೆಗೆ ವಿಳಂಬವಾದರೆ ಮತ್ತು ಆತ ದೀರ್ಘಕಾಲ ಜೈಲಿನಲ್ಲಿದ್ದರೆ, ಸಂವಿಧಾನದ ವಿಧಿ 21ರ ಅಡಿಯಲ್ಲಿ ಸಿಗುವ ‘ಬದುಕುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ’ ಹಕ್ಕನ್ನು ಆಧರಿಸಿ ನ್ಯಾಯಾಲಯಗಳು ಆತನಿಗೆ ಜಾಮೀನು ನೀಡಬಹುದು ಎಂದು ಹೇಳಲಾಗಿತ್ತು.

ಕೇಂದ್ರ ಸರ್ಕಾರವು ಈ ತೀರ್ಪನ್ನು ಪ್ರಶ್ನಿಸಿದೆ. ಯುಎಪಿಎ ಕಾಯ್ದೆಯು ದೇಶದ ಸಾರ್ವಭೌಮತ್ವ ಮತ್ತು ಸುರಕ್ಷತೆಗೆ ಸಂಬಂಧಿಸಿದ್ದಾಗಿದ್ದು, ಇದನ್ನು ಸಾಮಾನ್ಯ ಕಾನೂನುಗಳಂತೆ ನೋಡಬಾರದು. ಹಾಗಾಗಿ, ಈ ತೀರ್ಪನ್ನು ಮರುಪರಿಶೀಲಿಸಲು 5 ಅಥವಾ ಅದಕ್ಕಿಂತ ಹೆಚ್ಚು ನ್ಯಾಯಾಧೀಶರ ಉನ್ನತ ಪೀಠಕ್ಕೆ ಈ ವಿಷಯವನ್ನು ವರ್ಗಾಯಿಸಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಕೇಂದ್ರ ಸರ್ಕಾರದ ಪ್ರಮುಖ ವಾದಗಳೆಂದರೆ,

ದೇಶದ ಭದ್ರತೆ ಮೊದಲು:

ಭಯೋತ್ಪಾದನಾ ಪ್ರಕರಣಗಳಲ್ಲಿ ಸಾಕ್ಷ್ಯಗಳ ಸಂಗ್ರಹಣೆ, ಅಂತಾರಾಷ್ಟ್ರೀಯ ಲಿಂಕ್‌ಗಳ ತನಿಖೆ ಮತ್ತು ನೂರಾರು ಸಾಕ್ಷಿಗಳ ವಿಚಾರಣೆ ಇರುವುದರಿಂದ ಸಹಜವಾಗಿಯೇ ವಿಚಾರಣೆ ವಿಳಂಬವಾಗುತ್ತದೆ. ಅದನ್ನು ನೆಪವಾಗಿಟ್ಟುಕೊಂಡು ಉಗ್ರರಿಗೆ ನಿಯಮಗಳ ಸಡಿಲಿಕೆ ನೀಡಬಾರದು.

ಇದನ್ನೂ ಓದಿ: Supreme Court: ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಲೈಂಗಿಕ ಶಿಕ್ಷಣ ನೀಡಬೇಕು; ಸುಪ್ರೀಂ ಕೋರ್ಟ್‌ ಆದೇಶ

ಕಾನೂನಿನ ಕಠಿಣತೆ:

ಯುಎಪಿಎ ಕಾಯ್ದೆಯ ಮೂಲ ಉದ್ದೇಶವೇ ದೇಶವಿರೋಧಿ ಕೃತ್ಯಗಳನ್ನು ತಡೆಯುವುದಾಗಿದೆ. ತನಿಖೆ ತಡವಾಗುತ್ತಿದೆ ಎಂಬ ಕಾರಣಕ್ಕೆ ಆರೋಪಿಗಳು ಹೊರಬಂದರೆ ಸಾಕ್ಷ್ಯ ನಾಶಪಡಿಸುವ ಅಥವಾ ಮತ್ತೆ ದೇಶದ್ರೋಹಿ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆ ಇರುತ್ತದೆ.

ಸುಪ್ರೀಂ ಕೋರ್ಟ್ ಈ ಗಂಭೀರ ವಿಷಯವನ್ನು ಆಲಿಸಿದ್ದು, ಯುಎಪಿಎ ಅಡಿಯಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಭದ್ರತೆ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯವನ್ನು ಒಪ್ಪಿಕೊಂಡಿದೆ. ಕೇಂದ್ರ ಸರ್ಕಾರದ ಈ ಮನವಿಯ ಕುರಿತು ಸುಪ್ರೀಂ ಕೋರ್ಟ್ ಮುಂಬರುವ ದಿನಗಳಲ್ಲಿ ತನ್ನ ಅಂತಿಮ ತೀರ್ಮಾನವನ್ನು ಪ್ರಕಟಿಸಲಿದೆ. ವಿವಾದಾತ್ಮಕ ಕಾಯ್ದೆಯಡಿಯ ಜಾಮೀನು ನಿಯಮಗಳು ಇನ್ಮುಂದೆ ಮತ್ತಷ್ಟು ಕಠಿಣವಾಗಲಿವೆಯೇ ಇಲ್ಲವೇ ಎಂಬುದನ್ನು ಈ ತೀರ್ಪು ನಿರ್ಧರಿಸಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ವಿಜಯ್ ಭೇಟಿ ಮಾಡಿದ MRF ಟೀಮ್: ದಳಪತಿಗೆ ಸಿಕ್ಕಿತು ಕಿಂಗ್ ಕೊಹ್ಲಿ ಸಹಿ ಮಾಡಿದ ರೇರ್ ಬ್ಯಾಟ್ ಗಿಫ್ಟ್! – Kannada News | CM Vijay Receives Kohli Autographed Bat from MRF: TN Sports and Business Boost

ಚೆನ್ನೈ, ಮೇ,22: ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಅವರನ್ನು ಭಾರತದ ಮುಂಚೂಣಿಯ ಟೈರ್ ತಯಾರಿಕಾ ಸಂಸ್ಥೆಯಾದ ಎಂಆರ್‌ಎಫ್ (MRF) ತಂಡವು ಸೌಜನ್ಯಯುತವಾಗಿ ಭೇಟಿ ಮಾಡಿದೆ. ಈ ವಿಶೇಷ ಸಂದರ್ಭದಲ್ಲಿ ಎಂಆರ್‌ಎಫ್ ನಿಯೋಗವು ಮುಖ್ಯಮಂತ್ರಿ ವಿಜಯ್ ಅವರಿಗೆ ಭಾರತದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಸಹಿ ಮಾಡಿರುವ ಕ್ರಿಕೆಟ್ ಬ್ಯಾಟ್ ಅನ್ನು ನೆನಪಿನ ಕಾಣಿಕೆಯಾಗಿ ನೀಡಿ ಗೌರವಿಸಿದೆ. ಈ ಬಗ್ಗೆ ಕ್​ರಿಕಟರ್ ಮುಫದ್ದಲ್ ವೋಹ್ರಾ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಎಂಆರ್‌ಎಫ್ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಹಾಗೂ ಕ್ರೀಡಾಪಟುಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರಮುಖವಾಗಿ ವಿರಾಟ್ ಕೊಹ್ಲಿ ಅವರು ಕಳೆದ ಹಲವು ವರ್ಷಗಳಿಂದ ಎಂಆರ್‌ಎಫ್ ಬ್ರ್ಯಾಂಡ್ ರಾಯಭಾರಿಯಾಗಿದ್ದಾರೆ. ತಮಿಳುನಾಡಿನಲ್ಲಿ ಉದ್ಯಮ ಸ್ನೇಹಿ ವಾತಾವರಣ ಮತ್ತು ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿ ಕುರಿತು ಚರ್ಚಿಸಲು ಸಿಎಂ ವಿಜಯ್ ಅವರ ಅಧಿಕೃತ ಕಚೇರಿಗೆ ಭೇಟಿ ನೀಡಿದ್ದ ಎಂಆರ್‌ಎಫ್ ಉನ್ನತ ಅಧಿಕಾರಿಗಳ ತಂಡ, ಕೊಹ್ಲಿ ಅವರ ಹಸ್ತಾಕ್ಷರವಿರುವ (Autographed Bat) ಬ್ಯಾಟ್ ಅನ್ನು ಸಿಎಂಗೆ ಹಸ್ತಾಂತರಿಸಿತು.

ಇದನ್ನೂ ಓದಿ: ತಮಿಳುನಾಡು ಹೊಸ ಸರ್ಕಾರಕ್ಕೆ ಆಪತ್ತು, ಸಿಎಂ ವಿಜಯ್ ಸರ್ಕಾರ ಅಲುಗಾಡಿಸಿದ ಸಿಪಿಐಎಂ, ಬೆಂಬಲ ವಾಪಸ್ ಬೆದರಿಕೆ

ದಳಪತಿ ವಿಜಯ್ ಅವರು ಎಂಆರ್‌ಎಫ್ ತಂಡದಿಂದ ಬ್ಯಾಟ್ ಸ್ವೀಕರಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಕ್ರಿಕೆಟ್ ಪ್ರೇಮಿಗಳು ಹಾಗೂ ಸಿಎಂ ಅಭಿಮಾನಿಗಳು ಈ ಅಪರೂಪದ ಕ್ಷಣಕ್ಕೆ ಭಾರಿ ಲೈಕ್ಸ್ ಮತ್ತು ಕಮೆಂಟ್‌ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಹಲವು ಇದೊಂದು ಅದ್ಭುತ ಕ್ಷಣ ಎಂದು ಕಮೆಂಟ್ ಮಾಡಿದ್ದಾರೆ. ವಿಜಯ್​​ ಅಭಿಮಾನಿಗಳು ಹಾಗೂ ಕೊಹ್ಲಿ ಅಭಿಮಾನಿಗಳು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Engineering Courses: ಪಿಯುಸಿ ಬಳಿಕ ಈ ಇಂಜಿನಿಯರಿಂಗ್ ಕೋರ್ಸ್‌ ಆಯ್ಕೆ ಮಾಡಿ; ಸಿಗಲಿದೆ ಲಕ್ಷ ಲಕ್ಷ ಸಂಬಳದ ಪ್ಯಾಕೇಜ್! – Kannada News | High Demand Engineering Branches: Top Courses for a Bright Future Career

ಹೈ ಡಿಮ್ಯಾಂಡ್ ಇರುವ ಇಂಜಿನಿಯರಿಂಗ್ ಕೋರ್ಸ್‌Image Credit source: Pinterest

ಭಾರತದಲ್ಲಿ ಇಂದಿಗೂ ಯುವಜನತೆಯ ನಡುವೆ ಅತ್ಯಂತ ಜನಪ್ರಿಯ ಮತ್ತು ಮೊದಲ ಆದ್ಯತೆಯ ವೃತ್ತಿಜೀವನದ ಆಯ್ಕೆ ಎಂದರೆ ಅದು ಇಂಜಿನಿಯರಿಂಗ್. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪಿಯುಸಿ (12ನೇ ತರಗತಿ) ವಿಜ್ಞಾನ ವಿಭಾಗದಲ್ಲಿ ಪಿಸಿಎಂ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ) ವಿಷಯಗಳೊಂದಿಗೆ ತೇರ್ಗಡೆಯಾದ ನಂತರ ಇಂಜಿನಿಯರಿಂಗ್ ಪ್ರವೇಶ ಪಡೆಯುವ ಕನಸು ಕಾಣುತ್ತಾರೆ. ಐಐಟಿ (IIT), ಎನ್‌ಐಟಿ (NIT) ಮತ್ತು ಐಐಐಟಿ (IIIT) ಗಳಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೀಟು ಪಡೆಯಲು ಜೆಇಇ (JEE) ನಂತಹ ಕಠಿಣ ಪರೀಕ್ಷೆಗಳಿಗೂ ಸಿದ್ಧತೆ ನಡೆಸುತ್ತಾರೆ.

ಆದರೆ, ಬದಲಾಗುತ್ತಿರುವ ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಕ್ರಾಂತಿಯ ಈ ಯುಗದಲ್ಲಿ ಸಾಂಪ್ರದಾಯಿಕ ಕೋರ್ಸ್‌ಗಳ ಜೊತೆಗೆ ಕೆಲವು ಹೊಸ ಇಂಜಿನಿಯರಿಂಗ್ ವಿಭಾಗಗಳು (Engineering Branches) ವೇಗವಾಗಿ ಮುಂಚೂಣಿಗೆ ಬರುತ್ತಿವೆ. ಇವುಗಳಲ್ಲಿ ಉದ್ಯೋಗದ ಅಪಾರ ಅವಕಾಶಗಳ ಜೊತೆಗೆ ಆಕರ್ಷಕ ಸಂಬಳದ ಪ್ಯಾಕೇಜ್‌ಗಳು ಲಭ್ಯವಿವೆ. ವಿದ್ಯಾರ್ಥಿಗಳು ಸರಿಯಾದ ವಿಭಾಗವನ್ನು ಆಯ್ಕೆ ಮಾಡಿಕೊಂಡರೆ ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಅದ್ಭುತ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಮತ್ತು ಭಾರಿ ಸಂಬಳ ತಂದುಕೊಡುವ ಪ್ರಮುಖ ಇಂಜಿನಿಯರಿಂಗ್ ಕ್ಷೇತ್ರಗಳ ವಿವರ ಇಲ್ಲಿದೆ.

ಪೆಟ್ರೋಲಿಯಂ ಇಂಜಿನಿಯರಿಂಗ್ (Petroleum Engineering):

ಜಾಗತಿಕವಾಗಿ ತೈಲ ಮತ್ತು ಅನಿಲದ (Oil and Gas) ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದರಿಂದ ಪೆಟ್ರೋಲಿಯಂ ಇಂಜಿನಿಯರ್‌ಗಳಿಗೆ ಬೇಡಿಕೆ ಗಣನೀಯವಾಗಿ ವೃದ್ಧಿಸಿದೆ. ಈ ಕ್ಷೇತ್ರದ ಇಂಜಿನಿಯರ್‌ಗಳು ತೈಲ ನಿಕ್ಷೇಪಗಳ ಶೋಧನೆ, ಉತ್ಪಾದನೆ ಮತ್ತು ಅದಕ್ಕೆ ಸಂಬಂಧಿಸಿದ ಆಧುನಿಕ ತಂತ್ರಜ್ಞಾನಗಳ ಬಳಕೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ. ರಿಲಯನ್ಸ್, ಒಎನ್‌ಜಿಸಿ (ONGC), ಬಿಪಿಸಿಎಲ್ (BPCL) ಮತ್ತು ಶೆಲ್ (Shell) ನಂತಹ ಜಾಗತಿಕ ದೈತ್ಯ ಕಂಪನಿಗಳು ಈ ಕ್ಷೇತ್ರದಲ್ಲಿ ಬೃಹತ್ ಉದ್ಯೋಗಾವಕಾಶಗಳನ್ನು ನೀಡುತ್ತವೆ. ವೃತ್ತಿಜೀವನದ ಆರಂಭಿಕ ಹಂತದಲ್ಲೇ ವಾರ್ಷಿಕವಾಗಿ ರೂ. 7 ಲಕ್ಷದಿಂದ ರೂ. 20 ಲಕ್ಷದವರೆಗೆ ಆಕರ್ಷಕ ಪ್ಯಾಕೇಜ್ ಪಡೆಯಬಹುದು.

ಡೇಟಾ ಇಂಜಿನಿಯರಿಂಗ್ (Data Engineering):

ಇಂದಿನ ಡಿಜಿಟಲ್ ಜಗತ್ತಿನಲ್ಲಿ ಡೇಟಾ (ಮಾಹಿತಿ) ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ. ಬೃಹತ್ ಪ್ರಮಾಣದ ಡೇಟಾವನ್ನು ಸಂಗ್ರಹಿಸುವುದು, ವ್ಯವಸ್ಥಿತವಾಗಿ ಜೋಡಿಸುವುದು ಮತ್ತು ಅದನ್ನು ಸುರಕ್ಷಿತವಾಗಿಡುವುದು ಡೇಟಾ ಇಂಜಿನಿಯರ್‌ಗಳ ಮುಖ್ಯ ಕೆಲಸವಾಗಿದೆ. ಐಟಿ (IT), ಡೇಟಾ ಸೈನ್ಸ್ ಮತ್ತು ಬಿಸಿನೆಸ್ ಅನಾಲಿಟಿಕ್ಸ್ ಕಂಪನಿಗಳಲ್ಲಿ ಇವರಿಗೆ ಇಂದು ಭಾರೀ ಬೇಡಿಕೆಯಿದೆ. ಭಾರತದಲ್ಲಿ ಡೇಟಾ ಇಂಜಿನಿಯರಿಂಗ್ ಮುಗಿಸಿದ ಫ್ರೆಶರ್‌ಗಳಿಗೆ ಆರಂಭದಲ್ಲೇ ವಾರ್ಷಿಕ ಸುಮಾರು ರೂ. 8 ಲಕ್ಷದಿಂದ ರೂ. 13 ಲಕ್ಷದವರೆಗಿನ ವೇತನ ದೊರೆಯುತ್ತದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ (AI & ML):

ಕೃತಕ ಬುದ್ಧಿಮತ್ತೆ (Artificial Intelligence) ಮತ್ತು ಮೆಷಿನ್ ಲರ್ನಿಂಗ್ ಇತ್ತೀಚಿನ ದಿನಗಳ ಅತ್ಯಂತ ಕ್ರಾಂತಿಕಾರಿ ಹಾಗೂ ಹೆಚ್ಚು ಚರ್ಚಿತ ತಂತ್ರಜ್ಞಾನಗಳಾಗಿವೆ. ಇದರ ಪ್ರಾಮುಖ್ಯತೆಯನ್ನು ಅರಿತು ಇತ್ತೀಚಿನ ದಿನಗಳಲ್ಲಿ ದೇಶದ ಪ್ರಮುಖ ಇಂಜಿನಿಯರಿಂಗ್ ಕಾಲೇಜುಗಳು ಈ ವಿಷಯಗಳಲ್ಲಿ ವಿಶೇಷ ಬಿ.ಟೆಕ್ (B.Tech) ಕೋರ್ಸ್‌ಗಳನ್ನೇ ಆರಂಭಿಸಿವೆ. ಆಟೊಮೇಷನ್ ಮತ್ತು ಸ್ಮಾರ್ಟ್ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಈ ಕ್ಷೇತ್ರದಲ್ಲಿ ಉದ್ಯೋಗದ ಸುನಾಮಿಯೇ ಎದ್ದಿದೆ. ಈ ಕ್ಷೇತ್ರದಲ್ಲಿ ಹೆಜ್ಜೆ ಇಡುವ ಹೊಸ ಇಂಜಿನಿಯರ್‌ಗಳು ಕೂಡ ಸರಾಸರಿ ವಾರ್ಷಿಕ ರೂ. 10 ಲಕ್ಷದವರೆಗಿನ ಆರಂಭಿಕ ಪ್ಯಾಕೇಜ್ ಅನ್ನು ಸುಲಭವಾಗಿ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಏರೊಸ್ಪೇಸ್ ಮತ್ತು ರೊಬೊಟಿಕ್ಸ್ ಇಂಜಿನಿಯರಿಂಗ್ (Aerospace & Robotics):

ಏರೊಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್‌ಗಳು ವಿಮಾನಗಳು, ಸ್ಯಾಟಲೈಟ್‌ಗಳು (ಉಪಗ್ರಹಗಳು) ಮತ್ತು ಬಾಹ್ಯಾಕಾಶ ನೌಕೆಗಳ ವಿನ್ಯಾಸ (Design) ಹಾಗೂ ಅವುಗಳ ತಾಂತ್ರಿಕ ಪರೀಕ್ಷೆಗಳ ಜವಾಬ್ದಾರಿಯುತ ಕೆಲಸಗಳನ್ನು ನಿರ್ವಹಿಸುತ್ತಾರೆ.

ರೊಬೊಟಿಕ್ಸ್ ಇಂಜಿನಿಯರಿಂಗ್:

ಇಲ್ಲಿ ಆಧುನಿಕ ರೊಬೊಟಿಕ್ ಸಿಸ್ಟಮ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ಪ್ರಸ್ತುತ ಇವುಗಳ ಬಳಕೆ ಕೈಗಾರಿಕೆಗಳು, ದೊಡ್ಡ ಆಸ್ಪತ್ರೆಗಳು ಮತ್ತು ಸಂಶೋಧನಾ ವಲಯಗಳಲ್ಲಿ (Research Sector) ವ್ಯಾಪಕವಾಗಿ ನಡೆಯುತ್ತಿದೆ. ಈ ರೊಬೊಟಿಕ್ಸ್ ಕ್ಷೇತ್ರದಲ್ಲಿ ಪರಿಣತಿ ಹೊಂದಿದ ವೃತ್ತಿಪರರು ಆರಂಭಿಕ ಹಂತದಲ್ಲೇ ತಿಂಗಳಿಗೆ ಸುಮಾರು 80 ಸಾವಿರ ರೂಪಾಯಿಗಳವರೆಗೆ ವೇತನ ಪಡೆಯಬಹುದಾಗಿದೆ.

ನೀವೇನಾದರೂ ಪಿಯುಸಿ ಮುಗಿಸಿ ಇಂಜಿನಿಯರಿಂಗ್ ಸೇರಲು ಯೋಜಿಸುತ್ತಿದ್ದರೆ, ಕೇವಲ ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಸೀಮಿತವಾಗದೆ, ನಿಮ್ಮ ಆಸಕ್ತಿಗೆ ಅನುಗುಣವಾಗಿ ಭವಿಷ್ಯದ ಈ ಹೈ-ಡಿಮ್ಯಾಂಡ್ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ನಿಮ್ಮ ವೃತ್ತಿಜೀವನಕ್ಕೆ ದಾರಿದೀಪವಾಗಬಲ್ಲದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

SRH vs RCB: ಐಪಿಎಲ್‌ನಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸುವ ಸನಿಹದಲ್ಲಿ ವಿರಾಟ್ ಕೊಹ್ಲಿ

Source link

ತಂದೆ ನೆನಪಿಗಿದ್ದ ಅದೊಂದು ವಸ್ತು ಕಳ್ಳತನ: ಪೊಲೀಸ್ ಠಾಣೆ ಮೆಟ್ಟಿಲೇರಿದ ಮಗಳು – Kannada News | Private Hospital Theft: Patient’s Rs 2 Lakh Watch Stolen; Police Complaint

ಕಳ್ಳತನವಾಗಿರುವ ರಾಡೋ ವಾಚ್, ಮೃತ ವ್ಯಕ್ತಿ ರಾಮಯ್ಯImage Credit source: tv9 kannada

ಬೆಂಗಳೂರು, ಮೇ 22: ಸಿಲಿಕಾನ್ ಸಿಟಿಯ (bangaluru) ಖಾಸಗಿ ಆಸ್ಪತ್ರೆಯೊಂದರಲ್ಲಿ ಮನುಷ್ಯತ್ವವೇ ಮರೆತು ನಡೆದುಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ. ತೀವ್ರ ಅನಾರೋಗ್ಯದಿಂದ ಚಿಕಿತ್ಸೆಗೆ ದಾಖಲಾಗಿ ಕೊನೆಯುಸಿರೆಳೆದ ವೃದ್ಧರೊಬ್ಬರ 2 ಲಕ್ಷ ರೂ ಮೌಲ್ಯದ ರಾಡೋ ವಾಚ್​​​ (rado watch) ಆಸ್ಪತ್ರೆಯಲ್ಲೇ ಕಳ್ಳತನವಾಗಿದೆ. ಈ ಸಂಬಂಧ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಸದ್ಯ ಎಫ್‌ಐಆರ್ ದಾಖಲಾಗಿದೆ.

ಮುಖ್ಯಾಂಶಗಳು

  • ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ದುಬಾರ ವಾಚ್​​ಗೆ ಕನ್ನ
  • ಪೊಲೀಸ್ ಠಾಣೆ ಮೆಟ್ಟಿಲೇರಿದ ಮಗಳು
  • ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ FIR

ನಡೆದಿದ್ದೇನು?

ತೀವ್ರ ಅನಾರೋಗ್ಯದ ಕಾರಣದಿಂದಾಗಿ ರಾಮಯ್ಯ ಎಂಬುವವರು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಾಮಯ್ಯ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದರು. ದುರದೃಷ್ಟವಶಾತ್, ಅವರು ಮೃತಪಡುವ ಮುನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸಮಯದಲ್ಲಿ ಅವರ ದೇಹದ ಮೇಲಿದ್ದ ಶರ್ಟ್ ಹಾಗೂ ಅವರು ಧರಿಸಿದ್ದ 2 ಲಕ್ಷ ರೂ ಮೌಲ್ಯದ ದುಬಾರಿ ರಾಡೋ ವಾಚ್ ನಿಗೂಢವಾಗಿ ಕಳ್ಳತನವಾಗಿದೆ.

ಸರಿಯಾಗಿ ಉತ್ತರ ನೀಡದ ಆಸ್ಪತ್ರೆ ಸಿಬ್ಬಂದಿ: ಸಿಸಿಟಿವಿ ವಿಡಿಯೋ ಡಿಲೀಟ್

ಇನ್ನು ತಂದೆಯ ಸಾವಿನ ಬಳಿಕ ಮಗಳು ಬೆಲೆಬಾಳುವ ವಾಚ್ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಬಳಿ ವಿಚಾರಿಸಿದಾಗ, ಅವರು ಸರಿಯಾಗಿ ಉತ್ತರ ನೀಡದೆ ಉಡಾಫೆಯಿಂದ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ, ಕಳ್ಳತನದ ಸತ್ಯಾಸತ್ಯತೆ ತಿಳಿಯಲು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದಾಗಿ ಹೇಳಿದರೆ ವಿಡಿಯೋ ಡಿಲೀಟ್ ಆಗಿದೆ ಎಂದು ಬೇಜವಾಬ್ದಾರಿ ಉತ್ತರ ನೀಡಿ ಸಿಬ್ಬಂದಿ ಕೈತೊಳೆದುಕೊಂಡಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ಈ ವರ್ತನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: ಸ್ನೇಹಿತನ ಮನೆಯಲ್ಲೇ ರಾಬರಿ ಮಾಡಿಸಿ ಸಿಕ್ಕಿಬಿದ್ದ ಮೇಸ್ತ್ರಿ: ದರೋಡೆ ವೇಳೆಯೂ ಮಾನವೀಯತೆ ತೋರಿದ್ದ ಆರೋಪಿಗಳು!

ಇನ್ನು ಕಳ್ಳತನವಾಗಿರುವ ರಾಡೋ ವಾಚ್ ಕೇವಲ ದುಬಾರಿ ವಸ್ತು ಅಲ್ಲದೇ ಮೃತ ತಂದೆಯ ನೆನಪಿಗೋಸ್ಕರವಿದ್ದ ಒಂದೇ ಒಂದು ವಸ್ತು. ಹೀಗಾಗಿ ಬೇಸತ್ತ ರಾಮಯ್ಯ ಅವರ ಪುತ್ರಿ, ತಂದೆಯ ವಾಚ್‌ ಕಳುವಾಗಿರುವ ಕುರಿತು ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರ ದೂರಿನನ್ವಯ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

RRB ALP Recruitment 2026: ಸಹಾಯಕ ಲೋಕೋ ಪೈಲಟ್ ಹುದ್ದೆಗಳ ಸಂಖ್ಯೆಯಲ್ಲಿ ಪ್ರಮುಖ ಬದಲಾವಣೆ! ಪರಿಷ್ಕೃತ ಸೂಚನೆ ಬಿಡುಗಡೆ – Kannada News | RRB ALP Recruitment 2026: Revised Vacancies Out, Apply for Assistant Loco Pilot

ರೈಲ್ವೆಯಲ್ಲಿ ಸಹಾಯಕ ಲೋಕೋ ಪೈಲಟ್ (ALP) ಆಗಬೇಕೆಂದು ಕನಸು ಕಾಣುತ್ತಿರುವ ಯುವಕರಿಗೆ ರೈಲ್ವೆ ನೇಮಕಾತಿ ಮಂಡಳಿಯು (RRB) ಪ್ರಮುಖ ಸುದ್ದಿಯೊಂದನ್ನು ನೀಡಿದೆ. ಇತ್ತೀಚೆಗೆ ಪ್ರಕಟಿಸಲಾಗಿದ್ದ ಬೃಹತ್ ನೇಮಕಾತಿಯ ಖಾಲಿ ಹುದ್ದೆಗಳ ಸಂಖ್ಯೆಯಲ್ಲಿ ಆರ್‌ಆರ್‌ಬಿ ಮಹತ್ವದ ಬದಲಾವಣೆ ಮಾಡಿದ್ದು, ಹೊಸ ಪರಿಷ್ಕೃತ ಅಧಿಕೃತ ಸೂಚನೆಯನ್ನು ಹೊರಡಿಸಿದೆ.

ಈ ಹೊಸ ಪ್ರಕಟಣೆಯ ಪ್ರಕಾರ, ಒಟ್ಟಾರೆ ಹುದ್ದೆಗಳ ಸಂಖ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿತಗೊಳಿಸಲಾಗಿದ್ದರೂ, ಕೆಲವು ನಿರ್ದಿಷ್ಟ ರೈಲ್ವೆ ವಲಯಗಳಲ್ಲಿ ಹುದ್ದೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಇದು ಆಯಾ ವಲಯಗಳಲ್ಲಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ದೊಡ್ಡ ವರವಾಗಲಿದೆ.

ಪರಿಷ್ಕೃತಗೊಂಡ ಒಟ್ಟು ಖಾಲಿ ಹುದ್ದೆಗಳ ವಿವರ:

ರೈಲ್ವೆ ನೇಮಕಾತಿ ಮಂಡಳಿಯು ಮೊದಲು ಏಪ್ರಿಲ್ 12 ರಂದು ಎಎಲ್‌ಪಿ (ALP) ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿತ್ತು. ಆ ಸಮಯದಲ್ಲಿ ಒಟ್ಟು 11,127 ಹುದ್ದೆಗಳನ್ನು ಪ್ರಕಟಿಸಲಾಗಿತ್ತು. ಆದರೆ ಈಗ ಬಿಡುಗಡೆಯಾಗಿರುವ ಪರಿಷ್ಕೃತ ಸೂಚನೆಯ ಪ್ರಕಾರ, ಒಟ್ಟು ಹುದ್ದೆಗಳ ಸಂಖ್ಯೆಯನ್ನು 10,970 ಕ್ಕೆ ಸೀಮಿತಗೊಳಿಸಲಾಗಿದೆ. ಉಳಿದಂತೆ ದೇಶಾದ್ಯಂತ ಇರುವ 17 ರೈಲ್ವೆ ವಲಯಗಳಲ್ಲಿನ ಖಾಲಿ ಹುದ್ದೆಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಆರ್‌ಆರ್‌ಬಿ ಸ್ಪಷ್ಟಪಡಿಸಿದೆ.

ಯಾವ ರೈಲ್ವೆ ವಲಯಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚಳ?

ಅಭ್ಯರ್ಥಿಗಳಿಗೆ ಸಂತೋಷದ ವಿಷಯವೆಂದರೆ, ಪ್ರಮುಖ ಮೂರು ರೈಲ್ವೆ ವಲಯಗಳಲ್ಲಿ ಹುದ್ದೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಆ ವಲಯಗಳ ವಿವರ ಹೀಗಿದೆ:

  • ಭುವನೇಶ್ವರ ಆರ್‌ಆರ್‌ಬಿ (RRB Bhubaneswar): ಇಲ್ಲಿ ಈ ಹಿಂದೆ ಕೇವಲ 928 ಸ್ಥಾನಗಳಿದ್ದವು, ಆದರೆ ಈಗ ಅದನ್ನು 1,355 ಕ್ಕೆ ಹೆಚ್ಚಿಸಲಾಗಿದೆ.
  • ಬಿಲಾಸ್‌ಪುರ ಆರ್‌ಆರ್‌ಬಿ (RRB Bilaspur): ಈ ವಲಯದಲ್ಲಿ ಮೊದಲು 568 ಹುದ್ದೆಗಳಿದ್ದವು, ಪರಿಷ್ಕೃತ ನಿಯಮದನ್ವಯ ಈಗ ಇವುಗಳ ಸಂಖ್ಯೆಯನ್ನು 1,068 ಕ್ಕೆ ಏರಿಸಲಾಗಿದೆ.
  • ಸಿಕಂದರಾಬಾದ್ ಆರ್‌ಆರ್‌ಬಿ (RRB Secunderabad): ಈ ಹಿಂದೆ ಇಲ್ಲಿ 533 ಸ್ಥಾನಗಳಿದ್ದು, ಪ್ರಸ್ತುತ ಇದನ್ನು 606 ಕ್ಕೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತು ಕೊನೆಯ ದಿನಾಂಕಗಳು:

ಸಹಾಯಕ ಲೋಕೋ ಪೈಲಟ್ ನೇಮಕಾತಿಯ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಮೇ 15 ರಿಂದ ಯಶಸ್ವಿಯಾಗಿ ಆರಂಭಗೊಂಡಿದೆ.

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 14, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಜೂನ್ 16, 2026

ಅರ್ಹ ಅಭ್ಯರ್ಥಿಗಳು ಕೊನೆಯ ಕ್ಷಣದ ಸೈಟ್ ದಟ್ಟಣೆಯನ್ನು ತಪ್ಪಿಸಲು ಗಡುವಿನೊಳಗಾಗಿ ತಮ್ಮ ಅರ್ಜಿಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:

  • ಶೈಕ್ಷಣಿಕ ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ವಿಷಯದಲ್ಲಿ ಕಡ್ಡಾಯವಾಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಮಾಣಪತ್ರ (ITI Certificate) ಅಥವಾ ಇಂಜಿನಿಯರಿಂಗ್ ಡಿಪ್ಲೊಮಾವನ್ನು ಹೊಂದಿರಬೇಕು.
  • ವಯೋಮಿತಿ: ಜುಲೈ 1, 2026 ರ ಅನ್ವಯ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ ವಯಸ್ಸು 30 ವರ್ಷ ಮೀರಿರಬಾರದು. ಸರ್ಕಾರದ ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​​ಬೈಟ್​ಗೆ ಭೇಟಿ ನೀಡಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version