ಬೆಂಗಳೂರು, ಮಾರ್ಚ್ 25: ವಿಧಾನ ಪರಿಷತ್‌ನಲ್ಲಿ ರಾಜ್ಯದ ನಗರ ಪ್ರದೇಶಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ (Waste management) ಕುರಿತು ಮಹತ್ವದ ಮಾಹಿತಿ ಹೊರಬಂದಿದೆ. ಪೌರಾಡಳಿತ ಸಚಿವ ರಹೀಂ ಖಾನ್ ಮಂಗಳವಾರ ಪರಿಷತ್‌ನಲ್ಲಿ ಮಾತನಾಡುತ್ತಾ, ಬೆಂಗಳೂರು ಹೊರತುಪಡಿಸಿ ರಾಜ್ಯದ 325 ನಗರ ಸ್ಥಳೀಯ ಸಂಸ್ಥೆಗಳು (ULBs) ಪ್ರತಿದಿನ ಒಟ್ಟು 7,304 ಮೆಟ್ರಿಕ್ ಟನ್ ಘನ ತ್ಯಾಜ್ಯವನ್ನು ಸಂಗ್ರಹಿಸುತ್ತಿವೆ ಎಂದು ತಿಳಿಸಿದ್ದಾರೆ. ಇದರಲ್ಲಿ 6,083 ಮೆಟ್ರಿಕ್ ಟನ್ ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತಿದೆ ಎಂದು ವಿವರಿಸಿದರು.
ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಡಿಪಿಆರ್ ಸಿದ್ಧ
ಬಿಜೆಪಿ ಸದಸ್ಯ ಡಿ.ಎಸ್. ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 219 ನಗರ ಸಂಸ್ಥೆಗಳಲ್ಲಿ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಸಂಸ್ಥೆಗಳಲ್ಲೂ ಈ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. 47 ನಗರ ಸಂಸ್ಥೆಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಡಿಪಿಆರ್ ಸಿದ್ಧವಾಗಿದ್ದು, ಉಳಿದಡೆಗಳಿಗೂ ಶೀಘ್ರದಲ್ಲೇ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಿದರು.
ಸ್ವಚ್ಛ ಭಾರತ ಮಿಷನ್–ಅರ್ಬನ್ 2.0 ಅಡಿಯಲ್ಲಿ 51 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೊಳ್ಳಲಾಗಿದ್ದು, 999 ಕಾಮಗಾರಿಗಳಲ್ಲಿ 542 ಪೂರ್ಣಗೊಂಡಿವೆ. ಒಣ ತ್ಯಾಜ್ಯ ಸಂಗ್ರಹ ಘಟಕಗಳಿಗೆ 259 ಕೋಟಿ ರೂ. ಹಾಗೂ 226 ನಗರ ಸಂಸ್ಥೆಗಳಲ್ಲಿ ಸ್ಯಾನಿಟರಿ ಲ್ಯಾಂಡ್‌ಫಿಲ್ ನಿರ್ಮಾಣಕ್ಕೆ 31 ಕೋಟಿ ರೂ. ಮೀಸಲಿಡಲಾಗಿದೆ. ಕಸ ಮಾಫಿಯಾ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.
ಡಾರ್ಲಿಂಗ್ ಕೃಷ್ಣ (Darling Krishna) ನಟನೆಯ ‘ಲವ್ ಮಾಕ್ಟೇಲ್ 3’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರದ ಕಥೆ ಕದ್ದಿದ್ದು ಎಂಬ ಆರೋಪ ಜೋರಾಗಿದೆ. ರಾಘವೇಂದ್ರ ನಾಯ್ಕ್ ಹೆಸರಿನ ನಿರ್ದೇಶಕ ‘ಇದು ನನ್ನ ಕಥೆ’ ಎಂದು ಆರೋಪಿಸಿದ್ದಾರೆ. ಡಾರ್ಲಿಂಗ್ ಕೃಷ್ಣಗೆ ಕಥೆ ಹೇಳಿದರೂ ಅವರು ಒಪ್ಪಿರಲಿಲ್ಲ ಎಂದಿದ್ದಾರೆ. ಈಗ ‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಅದೇ ಕಥೆ ಬಳಸಿದ್ದು ನೋಡಿ ಅವರಿಗೆ ಶಾಕ್ ಆಗಿದೆಯಂತೆ. ಈ ಆರೋಪಗಳಿಗೆ ಕೃಷ್ಣ ಉತ್ತರಿಸಿದ್ದಾರೆ.
ರಾಘವೇಂದ್ರ ನಾಯ್ಕ್ ಅವರು ಮೊದಲು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡರು. ಈ ವೇಳೆ ಅವರು ಸಿನಿಮಾ ಹೆಸರನ್ನು ಉಲ್ಲೇಖಿಸಿರಲಿಲ್ಲ. ‘ಇತ್ತೀಚೇಗೆ ಹಿಟ್ ಆದ ಚಿತ್ರವೊಂದು’ ಎಂದು ಉಲ್ಲೇಖಿಸಿ ಆರೋಪಿಸಿದರು. ಆ ಬಳಿಕ ಮಾಧ್ಯಮಗಳ ಎದುರು ಬಂದು ಈ ಕುರಿತು ನೇರ ಆರೋಪ ಮಾಡಲು ಆರಂಭಿಸಿದರು. ಈ ವಿಷಯದ ಕುರಿತು ಕೃಷ್ಣ ತಿರುಗೇಟು ನೀಡಿದ್ದಾರೆ. ಈ ಆರೋಪವನ್ನು ಜೋಕ್ ಎಂದು ಕರೆದಿದ್ದಾರೆ.
ನ್ಯೂಸೋ ನ್ಯೂಸು ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೃಷ್ಣ ಹಾಗೂ ಮಿಲನಾ, ‘ಅವರ ಆರೋಪವೇ ಒಂದು ಜೋಕ್. ನಿಮ್ಮ ಬಳಿ ಸ್ಕ್ರೀನ್ಪ್ಲೇ ಇದೆಯಾ? ಬರೆದಿಟ್ಟುಕೊಂಡ ಡೈಲಾಗ್ ಇದೆಯಾ? ಈ ಪ್ರಶ್ನೆಗಳಿಗೆ ಇಲ್ಲ ಎನ್ನುತ್ತಾರೆ. ಸೆಕೆಂಡ್ ಹಾಫ್ ಕೋರ್ಟ್ ಅಲ್ಲಿ ನಡೆಯುತ್ತದೆ, ಅದಕ್ಕೆ ಹೋಲಿಕೆ ಇದೆ ಎನ್ನುತ್ತಾರೆ. ಕೋರ್ಟ್ ಪೇಟೆಂಟ್ ತೆಗೆದುಕೊಂಡಿದ್ದೀರಾ’ ಎಂದು ಪ್ರಶ್ನೆ ಮಾಡಿದ್ದಾರೆ.
‘ಸೋಶಿಯಲ್ ಮೀಡಿಯಾದಲ್ಲಿ ಒಂದು ಕಡೆ ‘ಕದ್ದು ಮಾಡಿದ ಸಿನಿಮಾ’ ಎಂದು ಕಮೆಂಟ್ ನೋಡಿದೆ. ಇದನ್ನು ನೋಡಿದ್ರೆ ಬೇಸರ ಆಗುತ್ತೆ. ಇದನ್ನು ಕದ್ದು ಮಾಡಿದ್ದಲ್ಲ. ನಾವು ಕುಳಿತು ಮಾಡಿದ್ದು’ ಎಂದರು ಕೃಷ್ಣ.‘ಇದು ಹಾಸ್ಯದ ರೀತಿ ಕಾಣಿಸುತ್ತದೆ’ ಎಂದಿದ್ದಾರೆ ಮಿಲನಾ.
ನವದೆಹಲಿ, ಮಾರ್ಚ್ 25: ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಹುಷಾರ್, ಹೋಗುವಾಗ, ಮನೆಗೆ ಬರುವಾಗ ನೀವು ಅವರೊಂದಿಗಿದ್ದಿರೆ ಒಳಿತು. ಆಟೋ ಚಾಲಕನೊಬ್ಬ ಮಕ್ಕಳನ್ನು ಅಪಹರಿಸಲು ಯತ್ನಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. @/rider_akhil.1 ಎಂಬುವವರು ಒಂದು ವಿಡಿಯೋವನ್ನು ಸೆರೆಹಿಡಿದಿದ್ದು, ಎಲ್ಲರನ್ನು ಬೆಚ್ಚಿ ಬೀಳಿಸುವಂತಿದೆ.
ಇ-ರಿಕ್ಷಾ ಚಾಲಕನೊಬ್ಬ ಮಕ್ಕಳನ್ನು ಅಪಹರಿಸಲು ಯತ್ನಿಸಿದ್ದಾನೆ, ಆಟೋ ಚಾಲಕನನ್ನು ಬೈಕ್ ಸವಾರರು ಬೆನ್ನಟ್ಟಿದ್ದಾರೆ, ಆತ ವೇಗವಾಗಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಮಕ್ಕಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಚಲಿಸುತ್ತಿರುವ ಆಟೋದಿಂದ ಕೆಳಗೆ ಹಾರಿದ್ದಾರೆ. ರಸ್ತೆಯ ಮೇಲೆ ಬಿದ್ದರೂ ಕೂಡ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗದಗ, ಮಾರ್ಚ್ 25: ಗದಗ ಜಿಲ್ಲೆಯ ಹಲವೆಡೆ ಕಳೆದ ರಾತ್ರಿ ಬಿರುಗಾಳಿ, ಗುಡುಗು ಸಹಿತ ಭಾರೀ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ ಮುಂಡರಗಿ ತಾಲೂಕಿನ ದಿಂಡೂರ ತಾಂಡಾದಲ್ಲಿ ಭಾರೀ ಅವಾಂತರ ಉಂಟಾಗಿದೆ. ಭಾರಿ ಗಾಳಿ ಹಾಗೂ ಮಳೆಯ ಅಬ್ಬರಕ್ಕೆ ತಾಂಡಾದಲ್ಲಿ 4ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಗೆ ಹಾಕಿದ್ದ ತಗಡಿನ ಶೀಟ್‌ಗಳು ಹಾರಿಹೋಗಿವೆ. ಈ ವೇಳೆ ಹಾರಿದ ಶೀಟ್‌ಗಳು ತಗುಲಿ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಿವಪ್ಪ ಲಮಾಣಿ, ಸೋಮವ್ವ ಲಮಾಣಿ ಮತ್ತು ದೇವಲಪ್ಪ ಲಮಾಣಿ ಎಂದು ಗುರುತಿಸಲಾಗಿದೆ. ಭಾರೀ ಮಳೆ ಹಾಗೂ ಗಾಳಿಯ ಪರಿಣಾಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರು ಕತ್ತಲಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 25: ಬೆಂಗಳೂರಿನ (Bangalore) ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾಪಣ್ಣ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ದೂರು ಸಲ್ಲಿಸಿರುವ ಸಂತ್ರಸ್ತೆ, ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಸಂತ್ರಸ್ತೆಯು ರೌಡಿಶೀಟರ್ ಆಗಿದ್ದು, ಆಕೆಗೆ ಫೋನ್ ಕರೆ ಮಾಡಿದ್ದ ಇನ್ಸ್‌ಪೆಕ್ಟರ್ ‘ಚಿನ್ನ, ಮುದ್ದು, ಬಂಗಾರಿ’ ಎಂದೆಲ್ಲ ಸಂಬಂಧಿಸಿದ್ದಲ್ಲದೆ ಅಶ್ಲೀಲ ಸಂದೇಶಗಳನ್ನೂ ಕಳುಹಿಸಿದ್ದ ಎಂಬ ಆರೋಪ ಮಾಡಲಾಗಿದೆ. ಅಲ್ಲದೆ, ನಂತರ ಕೊಲೆ ಬೆದರಿಕೆಯನ್ನೂ ಹಾಕಿದ್ದ ಎಂದು ಸಂತ್ರಸ್ತೆ ದೂರಿದ್ದಾರೆ.
ದೂರುದಾರೆಯ ಪ್ರಕಾರ, ಇನ್ಸ್‌ಪೆಕ್ಟರ್ ಪಾಪಣ್ಣ ಕಚೇರಿಯ ಹಾಗೂ ವೈಯಕ್ತಿಕ ಮೊಬೈಲ್ ಸಂಖ್ಯೆಯಿಂದ ಹಲವು ಬಾರಿ ಕರೆ ಮಾಡಿ ಕಿರುಕುಳ ನೀಡಿದ್ದಾರೆ. ಅಲ್ಲದೆ, ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಾಟ್ಸಪ್ ಚಾಟ್, ಆಡಿಯೋ ಸಾಕ್ಷ್ಯ ಸಲ್ಲಿಕೆ
ಆರೋಪಿಯು ವಾಟ್ಸಪ್ ಮೂಲಕ ಕಳುಹಿಸಿದ್ದ ಅಶ್ಲೀಲ ಸಂದೇಶಗಳು ಹಾಗೂ ಸಂಭಾಷಣೆಗಳ ಸ್ಕ್ರೀನ್‌ಶಾಟ್‌ಗಳನ್ನು ಕೂಡ ಪೊಲೀಸ್ ಆಯುಕ್ತರಿಗೆ ಆಸಂತ್ರಸ್ತೆ ಸಲ್ಲಿಸಿದ್ದಾರೆ. ಜೊತೆಗೆ, ಇನ್ಸ್‌ಪೆಕ್ಟರ್ ಮತ್ತು ದೂರುದಾರೆ ನಡುವೆ ನಡೆದಿದ್ದೆಂದು ಹೇಳಲಾಗುತ್ತಿರುವ ಆಡಿಯೋ ದಾಖಲೆಗಳನ್ನೂ ಕಮಿಷನರ್ ಕಚೇರಿಗೆ ನೀಡಿದ್ದಾರೆ.
ಕೊಲೆ ಬೆದರಿಕೆ ಆರೋಪ
ಈ ಪ್ರಕರಣ ಬಹಿರಂಗಪಡಿಸಿದರೆ ದೂರುದಾರೆಯನ್ನೂ ಅವರ ಮಕ್ಕಳನ್ನೂ ಸುಪಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ಇನ್ಸ್‌ಪೆಕ್ಟರ್ ಪಾಪಣ್ಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಹಲವಾರು ಬಾರಿ ಕರೆ ಮಾಡಿ ಮನೆಗೆ ಬರುವುದಾಗಿ ಹೇಳಿ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.
ಎಲೆಕ್ಟ್ರಾನಿಕ್ ಸಾಕ್ಷ್ಯಾಧಾರಗಳೊಂದಿಗೆ ಸಲ್ಲಿಸಿರುವ ಈ ದೂರಿನ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸುವ ಸಾಧ್ಯತೆ ಇದೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರುದಾರೆ ಮನವಿ ಮಾಡಿದ್ದಾರೆ.
ಬೆಂಗಳೂರು ಪೊಲೀಸ್ ಇಲಾಖೆಯ ಸಿಬ್ಬಂದಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಬೆಂಗಳೂರಿನ ವಿವಿಧ ಠಾಣೆಗಳ ಸಿಬ್ಬಂದಿ ಹಣ ದೋಚಲು ಅಮಾಯಕರ ಮೇಲೆ ಸುಳ್ಳು ಕೇಸ್ ಹಾಕಿರುವುದು, ಕಮಿಷನರ್ ಕಚೇರಿ ವ್ಯಾಪ್ತಿಯಲ್ಲೇ ಡ್ರಗ್ಸ್ ದಂಧೆಗೆ ಸಹಕರಿಸಿದ್ದು ಮತ್ತು ಸುಲಿಗೆ ಪ್ರಕರಣಗಳಲ್ಲಿ ಶಾಮೀಲಾಗಿ ಅಮಾನತುಗೊಂಡಿರುವ ಅನೇಕ ನಿದರ್ಶನಗಳಿವೆ. ವಿಶೇಷವಾಗಿ ವೈಟ್‌ಫೀಲ್ಡ್ ಮತ್ತು ಬನ್ನೇರುಘಟ್ಟ ಭಾಗದಲ್ಲಿ ಸಾರ್ವಜನಿಕರನ್ನು ಬೆದರಿಸಿ ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡ ಪ್ರಕರಣಗಳು ದೊಡ್ಡ ಸುದ್ದಿಯಾಗಿದ್ದವು. ಈಗ ರಕ್ಷಣೆಯ ಜವಾಬ್ದಾರಿ ಹೊತ್ತ ಅಧಿಕಾರಿಯೇ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವುದು ಇಲಾಖೆಯ ನೈತಿಕತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಕಿರುತೆರೆ ನಟಿ ಸಂಜನಾ ಬುರ್ಲಿ (Sanjana Burli) ಮನೆಯಲ್ಲಿ ಈಗ ಮದುವೆ ಸಂಭ್ರಮ ಜೋರಾಗಿದೆ. ಸಮರ್ಥ್ ಚನ್ನಗಿರಿ ಜೊತೆ ಅವರ ವಿವಾಹ ಶಾಸ್ತ್ರ ನಡೆಯುತ್ತಿದೆ. ಅದಕ್ಕೂ ಮೊದಲ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ. ಇದರ ವಿಡಿಯೋಗಳನ್ನು ಸಂಜನಾ ಬುರ್ಲಿ ಅವರ ಅಭಿಮಾನಿ ಬಳಗದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ.
ಸಂಜನಾ ಬುರ್ಲಿ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹಾ ಹೆಸರಿನ ಪಾತ್ರ ಮಾಡಿ ಗಮನ ಸೆಳೆದರು. ಈ ಧಾರಾವಾಹಿಯನ್ನು ಅವರು ಅರ್ಧಕ್ಕೆ ತೊರೆದರು. ಅವರು ಓದುವ ಉದ್ದೇಶದಿಂದ ಈ ಧಾರಾವಾಹಿ ತೊರೆದರು ಎನ್ನಲಾಗಿತ್ತು. ಆ ಬಳಿಕ ಸಂಜನಾ ಅವರು ಕಾಣಿಸಿಕೊಂಡಿದ್ದು, ಕಲರ್ಸ್ ಕನ್ನಡದ ‘ಶ್ರೀ ಗಂಧದಗುಡಿ’ ಧಾರಾವಾಹಿಯಲ್ಲಿ. ಈ ಸೀರಿಯಲ್ ಗಮನ ಸೆಳೆಯಿತು. ಈ ಧಾರಾವಾಹಿಯನ್ನು ಸಂಜನಾ ಅರ್ಧಕ್ಕೆ ಬಿಟ್ಟಿದ್ದಾರೆ. ಇದಕ್ಕೆ ಕಾರಣ ವಿವಾಹ.
ಸಮರ್ಥ ಚೆನ್ನಗಿರಿ ಎಂಬುವವರ ಜೊತೆ ಸಂಜನಾ ಬುರ್ಲಿ ಮದುವೆ ಆಗುತ್ತಿದ್ದಾರೆ. ಇಂದು (ಮಾರ್ಚ್ 26) ಅವರ ವಿವಾಹ ನೆರವೇರಬಹುದು ಎಂದು ಊಹಿಸಲಾಗಿದೆ. ಅದಕ್ಕೂ ಮೊದಲು ಅಂದರೆ, ಮಾರ್ಚ್ 24ರಂದು ಸಂಜನಾ ಬುರ್ಲಿ ಅವರ ವಿವಾಹ ಆರತಕ್ಷತೆ ನೆರವೇರಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಸಂಜನಾ ಅವರು ವಿವಾಹದ ಬಳಿಕ ಮತ್ತೆ ಕಿರುತೆರೆಗೆ ಮರಳಬೇಕು ಎಂಬುದು ಅಭಿಮಾನಿಗಳ ಕೋರಿಕೆ. ಈ ಫ್ಯಾನ್ಸ್ ಕೋರಿಕೆಯನ್ನು ಅವರು ಈಡೇರಿಸುತ್ತಾರಾ ಎಂಬ ಕುತೂಹಲ ಮೂಡಿದೆ. ಅವರ ವಿವಾಹ ಫೋಟೋಗಳನ್ನು ನೋಡಲು ಫ್ಯಾನ್ಸ್ ಕೂಡ ಕಾದಿದ್ದಾರೆ. ಇತ್ತೀಚೆಗೆ ನಿಶ್ಚಿತಾರ್ಥದ ಫೋಟೋಗಳನ್ನು ಸಂಜನಾ ಅವರು ಹಂಚಿಕೊಂಡಿದ್ದರು.
ಸೋನಭದ್ರ, ಮಾರ್ಚ್ 25: ಹೊಸ ಕಾರು ಖರೀದಿಸಿದ ಖುಷಿಯಲ್ಲಿ, ಅಕ್ಕಪಕ್ಕದ ಮನೆಯ ಮಕ್ಕಳನ್ನು ಕರೆದು ಬನ್ರಿ ಮಕ್ಕಳ ಜಾಲಿ ರೈಡ್ ಹೋಗೋಣ ಎಂದು ವ್ಯಕ್ತಿ ತನ್ನ ಹೊಸ ಕಾರಿನಲ್ಲಿ ಕೂರಿಸಿಕೊಂಡಿದ್ದರು. ಮಕ್ಕಳು ಕಾರೊಳಗೆ ಆಟವಾಡುತ್ತಿದ್ದರು. ಇದ್ದಕ್ಕಿದ್ದಂತೆ ತಮಾಷೆಗೆ ಕಾಪಾಡಿ ಕಾಪಾಡಿ ಎಂದು ಮಕ್ಕಳು ಕಿರುಚಿದ್ದಾರೆ. ಜನರು ಅವರನ್ನು ಮಕ್ಕಳ ಕಳ್ಳ ಎಂದು ಭಾವಿಸಿ ಹೊಡೆದು, ಕಾರನ್ನು ಧ್ವಂಸ ಮಾಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.
ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಮತ್ತು ‘ಧುರಂಧರ್: ದಿ ರಿವೆಂಜ್’ ಚಿತ್ರಗಳಲ್ಲಿನ ಅವರ ಅನೇಕ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಿವೆ. 20 ವರ್ಷದ ಸಾರಾ ಅರ್ಜುನ್ ಇದರಲ್ಲಿ ಜಮಿಲ್ ಜಮಾಲಿ ಅವರ ಮಗಳು ಯೆಲೆನಾ ಜಮಾಲಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದ ನಂತರ, ಅವರು ದೊಡ್ಡ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಪಾತ್ರ ಕೂಡ ಸಾಕಷ್ಟು ಗಮನ ಸೆಳೆಯಿತು.
ಧುರಂಧರ್’ ಚಿತ್ರವನ್ನು ನಿರ್ದೇಶಕರು ನೈಜ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಚಿತ್ರ ಎಂದು ಹೇಳಿಕೊಂಡಿದ್ದಾರೆ. ಇದರಲ್ಲಿರುವ ಹಲವು ವಿಷಯಗಳನ್ನು ಸತ್ಯವೆಂದು ತೋರಿಸಲಾಗಿದೆ. ಪಾಕಿಸ್ತಾನದಲ್ಲಿ ನಡೆದ ಲಿಯಾರಿ ಘಟನೆ, ಭಾರತದ ಮೇಲಿನ ಭಯೋತ್ಪಾದಕ ದಾಳಿಗಳು… ಅಂತಹ ಘಟನೆಗಳನ್ನು ಇದರಲ್ಲಿ ಕಾಣಬಹುದು. ಈ ಚಿತ್ರಗಳಲ್ಲಿನ ಅನೇಕ ಪಾತ್ರಗಳು ನಿಜ ಜೀವನದಿಂದ ಪ್ರೇರಿತವಾಗಿವೆ.
ಚಿತ್ರದಲ್ಲಿ ರಾಕೇಶ್ ಬೇಡಿ ನಿರ್ವಹಿಸಿದ ಜಮಿಲ್ ಜಮಾಲಿ ಪಾತ್ರವು ತನ್ನನ್ನು ಆಧರಿಸಿದೆ ಎಂದು ಪಾಕಿಸ್ತಾನಿ ನಾಯಕ ನಬೀಲ್ ಗಬೋಲ್ ಹೇಳಿಕೊಂಡಿದ್ದರು. ಅದಾದ ನಂತರ, ಜಮಿಲ್ ಜಮಾಲಿ ಅವರ ಮಗಳು ಯಾಲಿನಾಳ ಕಥೆಯೂ ನಿಜವೇ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ಭುಗಿಲೆದ್ದವು.
ಯಲಿನಾಳ ಕಥೆಯನ್ನು ನಬಿಲ್ ಗಬೋಲ್ ಅವರ ಮಗಳ ಜೀವನದೊಂದಿಗೆ ಜೋಡಿಸುತ್ತಿದ್ದಾರೆ. ‘ಧುರಂಧರ್’ ನಲ್ಲಿ ಯಲಿನಾ ಒಬ್ಬ ಭಾರತೀಯ ಗೂಢಚಾರನನ್ನು ಮದುವೆಯಾಗಿದ್ದಾಳೆ. ಆದ್ದರಿಂದ, ನಬಿಲ್ ಅವರ ಮಗಳು ಯಾರು ಮತ್ತು ಅವಳು ಈಗ ಎಲ್ಲಿದ್ದಾಳೆ ಎಂದು ತಿಳಿಯಲು ಅನೇಕರು ಉತ್ಸುಕರಾಗಿದ್ದಾರೆ.
ನಬಿಲ್ ಗಬೋಲ್ ಅವರ ಮಕ್ಕಳ ಬಗ್ಗೆ ಅಂತರ್ಜಾಲದಲ್ಲಿ ಯಾವುದೇ ನಿರ್ದಿಷ್ಟ ಮಾಹಿತಿ ಲಭ್ಯವಿಲ್ಲ. ಚಿತ್ರದಲ್ಲಿ ಜಮಿಲ್ ಜಮಾಲಿಯ ಮಗಳು ಯೆಲೆನಾಳನ್ನು ತೋರಿಸಲಾಗಿದೆ. ಆದರೆ ನಬಿಲ್‌ಗೆ ನಿಜ ಜೀವನದಲ್ಲಿ ಯಾವುದೇ ಹೆಣ್ಣು ಮಕ್ಕಳಿಲ್ಲ ಎಂದು ತಿಳಿದುಬಂದಿದೆ.
ನಿಜ ಜೀವನದಲ್ಲಿ ನಬಿಲ್ ಗಬೋಲ್ ಗೆ ಇಬ್ಬರು ಮಕ್ಕಳಿದ್ದಾರೆ. ಏತನ್ಮಧ್ಯೆ, ನಬಿಲ್ ಗಬೋಲ್ ಅವರ ಅಣ್ಣನ ಮಗಳು ನಾಡಿಯಾ ಗಬೋಲ್ ಬಗ್ಗೆಯೂ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಯುತ್ತಿದೆ. ಅವರು ಸಾಮಾಜಿಕ ಕಾರ್ಯಕರ್ತೆ. ‘ಧುರಂಧರ್’ ಬಗ್ಗೆ ನೀಡಿದ ಸಂದರ್ಶನದಲ್ಲಿ, ನಬಿಲ್, ‘ನನ್ನ ಮಗಳು ಭಾರತೀಯ ಗೂಢಚಾರನನ್ನು ಮದುವೆಯಾಗುವುದನ್ನು ಈ ಚಿತ್ರ ತೋರಿಸುತ್ತದೆ. ಆದರೆ ಇದರಲ್ಲಿ ಯಾವುದೇ ಸತ್ಯವಿಲ್ಲ. ಇದೆಲ್ಲವನ್ನೂ ಕೇವಲ ಮಸಾಲಾ ಚಿತ್ರ ಮಾಡಲು ತೋರಿಸಲಾಗಿದೆ’ ಎಂದಿದ್ದಾರೆ.
ಬೆಂಗಳೂರು, ಮಾರ್ಚ್ 25: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಏರ್ ಕ್ವಾಲಿಟಿಯಲ್ಲಿ (Bengaluru Air Quality) ಏರುಪೇರಾಗುತ್ತಲೇ ಇದೆ. ವಾಯು ಗುಣಮಟ್ಟ ಎಲ್ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ. ಆದರೆ ಇಂದು ಉಡುಪಿಯ ಏರ್ ಕ್ವಾಲಿಟಿ ನೋಡಿದಾಗ ಆತಂಕ ಸೃಷ್ಟಿಯಾಗುವುದಂತೂ ನಿಜ. 100ರಿಂದ 150ರ ಒಳಗಿದ್ದ ಉಡುಪಿಯ AQI ಇಂದು ಒಮ್ಮೆಲೇ 200ರ ಗಡಿ ದಾಟಿರುವುದು ಆಶ್ಚರ್ಯವಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಗಾಳಿಯ ಗುಣಮಟ್ಟ 150ಕ್ಕೂ ಕಡಿಮೆಯಿದೆ. ಆದರೆ ಉಡುಪಿಯಲ್ಲಿ ಗಾಳಿಯ ಗುಣಮಟ್ಟ 221ಕ್ಕೇರಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 146ಕ್ಕೆ ತಲುಪಿದೆ. ಕೆಲ ದಿನಗಳಿಂದ ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಏರ್ ಕ್ವಾಲಿಟಿ ತೀರಾ ಕಳಪೆ ಮಟ್ಟಕ್ಕೆ ಇಳಿದಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)
ದಾವಣಗೆರೆ, ಮಾರ್ಚ್ 25: ದಾವಣಗೆರೆ (Davanagere) ದಕ್ಷಿಣ ಕ್ಷೇತ್ರದ ಉಪಚುನಾವಣೆ ಹೈವೋಲ್ಟೇಜ್ ಪಡೆದುಕೊಂಡಿದೆ. ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ವಿರುದ್ಧ ತೊಡೆತಟ್ಟಿ ಕಣಕ್ಕಿಳಿದಿರುವ ಸಾದಿಕ್ ಪೈಲ್ವಾನ್ ನಾಮಪತ್ರ ತಿರಸ್ಕೃತವಾಗಿದೆ. ರಾಷ್ಟ್ರೀಯ ಪಕ್ಷಗಳ ಹೆಸರಿನಲ್ಲಿ ನಾಮಪತ್ರವನ್ನು ಸಲ್ಲಿಸಿ ಬಿ ಫಾರಂ ಒದಗಿಸದ್ದಕ್ಕಾಗಿ ನಾಮಪತ್ರ ತಿರಸ್ಕಾರಗೊಂಡಿದೆ. ಆದರೆ, ಪಕ್ಷೇತರ ಅಭ್ಯರ್ಥಿಯಾಗಿ ಪೈಲ್ವಾನ್ ಸಲ್ಲಿಸಿದ ನಾಮಪತ್ರ ಊರ್ಜಿತವಾಗಿದೆ. ಕ್ಷೇತ್ರದಲ್ಲಿ 45 ನಾಮಪತ್ರ ಸಲ್ಲಿಕೆ ಆಗಿತ್ತು. ಆ ಪೈಕಿ ಮೂವರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿದೆ. 42 ನಾಮಪತ್ರಗಳು ಮಾತ್ರ ಮಾನ್ಯವಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರೇ ನಿರ್ಣಾಯಕ. ಇಲ್ಲಿ 64,246 ಮುಸ್ಲಿಂ ಸಮುದಾಯದ ಮತದಾರರಿದ್ದಾರೆ. ಆದರೆ ಹೈಕಮಾಂಡ್ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿ ಮಾಡಿದೆ. ಸಮರ್ಥ್ ಜೊತೆಗೆ 36 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು ಅಭ್ಯರ್ಥಿಗಳಲ್ಲಿ 23 ಮಂದಿ ಮುಸ್ಲಿಂ ಸಮುದಾಯದವರೇ ಇದ್ದಾರೆ. ಕಾಂಗ್ರೆಸ್ಗೆ ಇದು ನುಂಗಲಾರದ ಬಿಸಿತುಪ್ಪವಾಗಿದೆ.
ಕಾಂಗ್ರೆಸ್ಗೆ ಪಾಠ ಕಲಿಸಲು ಮುಂದಾದ್ರಾ ಮುಸ್ಲಿಮರು?
ದಾವಣೆಗರೆಯಲ್ಲಿ ಮುಸ್ಲಿಂ ಮತದಾರರು ಕಾಂಗ್ರೆಸ್ಗೆ ಪಾಠ ಕಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ನಾಮಪತ್ರ ವಾಪಸ್ ಪಡೆಯುವುದಕ್ಕೆ ಮಾರ್ಚ್ 26 ಕೊನೆ ದಿನ. ಇತ್ತ 22 ಅಭ್ಯರ್ಥಿಗಳು ನಾಮಿನೇಷನ್ ವಾಪಸ್ ಪಡೆದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ಗೆ ಬೆಂಬಲ ಕೊಡುವ ಸಾಧ್ಯತೆ ಇದೆ. ಟಿಕೆಟ್ ನಿರಾಕರಿಸಿರುವ ಕಾಂಗ್ರೆಸ್ಸಿಗೆ ಬಿಸಿ ಮುಟ್ಟಿಸಲು ಮುಂದಾಗುವ ಸಾಧ್ಯತೆ ಇದೆ. ಅಲ್ಪಸಂಖ್ಯಾತರು ಕಾಂಗ್ರೆಸ್ ಪಾಲಿನ ನಿರ್ಣಾಯಕ ಮತದಾರರಾಗಿದ್ದು ಕೈ ನಾಯಕರು ಮನವೊಲಿಸುವ ಸಾಧ್ಯತೆ ಇದೆ.
ದಾವಣಗೆರೆಯಲ್ಲಿ ಎಲ್ಲ ಸರಿಹೋಗುತ್ತೆ ಎಂದ ಡಿಕೆಶಿ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಂಡಾಯದ ಬಗ್ಗೆ ಡಿಸಿಎಂ ಡಿಕೆ ಪ್ರತಿಕ್ರಿಯಿಸಿದ್ದು, ನಾಮಪತ್ರ ಹಾಕಿದವರೆಲ್ಲ ನಮ್ಮವರೇ. ಎಲ್ಲವೂ ಸರಿಹೋಗಲಿದೆ ಎಂದಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಹೈಲೈಟ್ಸ್
ಒಟ್ಟು ಮುಸ್ಲಿಂ ಮತದಾರರು: 64,246 (ಕ್ಷೇತ್ರದ ನಿರ್ಣಾಯಕ).
ಕಣದಲ್ಲಿರುವ ಮುಸ್ಲಿಂ ಅಭ್ಯರ್ಥಿಗಳು: 23
ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ: ಮಾರ್ಚ್ 26
ಕಾಂಗ್ರೆಸ್ ತಂತ್ರ: ಅಬ್ದುಲ್ ಜಬ್ಬಾರ್ ಅವರ ಮನವೊಲಿಕೆ ಮತ್ತು ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಸಭೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದು ಅಬ್ದುಲ್ ಜಬ್ಬಾರ್ ಪ್ರತಿಕ್ರಿಯಿಸಿ, ನಮ್ಮ ವರಿಷ್ಠರ ನಿರ್ಧಾರವನ್ನು ಗೌರವಿಸಬೇಕು ಎಂದರು. ಆ ಮೂಲಕ, ಕಾಂಗ್ರೆಸ್ ವಿರುದ್ಧ ಹೋಗಲ್ಲ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದರು.
ಒಟ್ಟಿನಲ್ಲಿ, ದಾವಣೆಗೆರೆಯಲ್ಲಿ ಬಂಡಾಯದ ಬೆಂಕಿ ಕಾಂಗ್ರೆಸ್ಗೆ ಟೆನ್ಷನ್ ತಂದಿಟ್ಟಿದ್ದು, ಈ ಬಗ್ಗೆ ವಿಧಾನಸೌಧದಲ್ಲಿ ಕಾಂಗ್ರೆಸ್ನ ಮುಸ್ಲಿಂ ನಾಯಕರು ಮಂಗಳವಾರ ಸಭೆ ನಡೆಸಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕರಾದ ತನ್ವೀರ್ ಸೇಠ್, ರಿಜ್ವಾನ್ ಅರ್ಷದ್ ಸೇರಿ ಹಲವರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ನಾಯಕರ ಮನವೊಲಿಕೆ, ಮತಗಳು ಚದುರಿಹೋಗದಂತೆ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ 2 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ
ಬಾಗಲಕೋಟೆ ಉಪಸಮರದಲ್ಲಿ ಮಲ್ಲಿಕಾರ್ಜುನ ಮೇಟಿ, ವೀರಣ್ಣ ಚರಂತಿ ಮಠ ಸೇರಿದಂತೆ ಒಟ್ಟು 16 ಅಭ್ಯರ್ಥಿಗಳು 26 ನಾಮಪತ್ರ ಸಲ್ಲಿಸಿದ್ದಾರೆ. ಈ ಪೈಕಿ 14 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದು ಇಬ್ಬರು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ