‘ಕಾಕ್​​ಟೇಲ್ 2’: ಕೃತಿಯೇ ಎಲ್ಲ, ರಶ್ಮಿಕಾ-ಶಾಹಿದ್ ಲೆಕ್ಕಕ್ಕಿಲ್ಲ – Kannada News | Cocktail 2 twitter review: Rashmika Hindi criticized badly

ರಶ್ಮಿಕಾ ಮಂದಣ್ಣ (Rashmika Mandanna), ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ನಟಿಸಿರುವ ‘ಕಾಕ್​​ಟೇಲ್ 2’ ಹಿಂದಿ ಸಿನಿಮಾ ಇಂದು (ಜೂನ್ 19) ಬಿಡುಗಡೆ ಆಗಿದೆ. ಭಾರಿ ಬಜೆಟ್​​ನಲ್ಲಿ ನಿರ್ಮಿಸಿ, ಭಾರಿ ಪ್ರಚಾರದೊಂದಿಗೆ ಸಿನಿಮಾ ಬಿಡುಗಡೆ ಆಗಿದೆ. ಆದರೆ ಮೊದಲ ದಿನವೇ ಸಿನಿಮಾಕ್ಕೆ ಭರಪೂರ ಋಣಾತ್ಮಕ ವಿಮರ್ಶೆಗಳು ಎದುರಾಗಿವೆ. ಸಿನಿಮಾನಲ್ಲಿ ಗ್ಲಾಮರ್ ಹೊರತಾಗಿ ಇನ್ನೇನೂ ಇಲ್ಲ ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ. ಕೆಲವರಂತೂ ಇದೊಂದು ‘ಅನವಶ್ಯಕ’ ಸೀಕ್ವೆಲ್ ಎಂದು ಸಹ ಕರೆದಿದ್ದಾರೆ.

ಸಿನಿಮಾ ನೋಡಿದ ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ಬಹುತೇಕರು ಸಿನಿಮಾ ಚೆನ್ನಾಗಿಲ್ಲವೆಂದೇ ಹೇಳಿದ್ದಾರೆ. ಅದರಲ್ಲೂ ರಶ್ಮಿಕಾ ನಟನೆ ನಿರೀಕ್ಷಿತ ಮಟ್ಟದಲ್ಲಿಲ್ಲವೆಂದು, ರಶ್ಮಿಕಾರನ್ನು ತಪ್ಪು ಪಾತ್ರಕ್ಕೆ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ. ವಿಶ್ವಜಿತ್ ಪಟೇಲ್ ಎಂಬುವರು ಟ್ವೀಟ್ ಮಾಡಿ, ‘ಈ ಸಿನಿಮಾ ಒಂದು ಕೆಟ್ಟ ಕನಸಿನಂತಿದೆ. ಆತ್ಮವೇ ಇಲ್ಲದ ಸೀಕ್ವೆಲ್ (ಎರಡನೇ ಭಾಗ)ಕ್ಕೆ ಇದೊಂದು ಒಳ್ಳೆಯ ಉದಾಹರಣೆ. ಇದೊಂದು ಬೋರು ಹೊಡೆಸುವ, ಟೊಳ್ಳಾದ ಅನುಭವ ನೀಡುವ ಸಿನಿಮಾ ಎಂದಿದ್ದಾರೆ. ರಶ್ಮಿಕಾ ನಟನೆಯನ್ನು ಟೀಕಿಸಿರುವ ವಿಶ್ವಜಿತ್, ರಶ್ಮಿಕಾರ ಹಿಂದಿ ಸಹ ಬಲು ಕೆಟ್ಟದಾಗಿದೆ’ ಎಂದಿದ್ದಾರೆ.

ಮಿಸ್ಟರ್ ಎಸ್​​ಪಿ ಎಂಬುವರು ಟ್ವೀಟ್ ಮಾಡಿ ಸಿನಿಮಾ ಚೆನ್ನಾಗಿದೆ ಎಂದಿದ್ದಾರಾದರೂ ರಶ್ಮಿಕಾರ ನಟನೆ ಕೆಟ್ಟದಾಗಿದೆ ಎಂದಿದ್ದಾರೆ. ಸಿನಿಮಾ ಸ್ಟೈಲಿಷ್ ಆಗಿದೆ, ದೃಶ್ಯಗಳು ರಿಚ್ ಆಗಿವೆ. ಹಾಡುಗಳು, ಸಂಗೀತ ಚೆನ್ನಾಗಿದೆ. ಕೆಲವು ಕಡೆ ಮೆಲೋಡ್ರಾಮಾ ಚೆನ್ನಾಗಿದೆ ಎಂದಿದ್ದಾರೆ. ಆದರೆ ರಶ್ಮಿಕಾ ನಟನೆ ಚೆನ್ನಾಗಿಲ್ಲ, ಅವರ ಪಾತ್ರ ಪೋಷಣೆ ಚೆನ್ನಾಗಿಲ್ಲ. ಅವರ ಸಂಭಾಷಣೆ ಬಲು ನಾಟಕೀಯವಾಗಿದೆ ಎಂದಿದ್ದಾರೆ.

ನಿತೀಷ್ ಶಾ ಎಂಬುವರು ಟ್ವೀಟ್ ಮಾಡಿ, ‘ತು ಜೂಟಿ ಮೇ ಮಕ್ಕಾರ್’ ಸಿನಿಮಾದ ಒಂದು ದೃಶ್ಯವನ್ನು ಇರಿಸಿಕೊಂಡು ಪೂರ್ತಿ ಸಿನಿಮಾವನ್ನು ಮಾಡಿದಂತೆ ‘ಕಾಕ್​​ಟೇಲ್ 2’ ಭಾಸವಾಗುತ್ತದೆ. ಸಿನಿಮಾದ ತುಂಬ ಬಹಳ ಅನವಶ್ಯಕ ದೃಶ್ಯಗಳು ಇವೆ. ಸಿನಿಮಾದ ಎರಡನೇ ಅರ್ಧವಂತೂ ಪ್ರೇಕ್ಷಕನ ತಾಳ್ಮೆಯನ್ನು ಪರೀಕ್ಷೆ ಮಾಡುತ್ತದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವರ್ಷದ ಹಿಂದೆಯೇ ತನ್ನ ಗುರಿ ಬಗ್ಗೆ ಹೇಳಿದ್ದ ಶ್ರೇಯಾಂಕ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದ್ದು ದುರಾದೃಷ್ಟಕರ – Kannada News | Shreyanka Patil’s World Cup Dream Shattered by Injury: A Recurring Cricket Nightmare

2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (Women’s T20 World Cup 2026) ಸತತ ಎರಡು ಪಂದ್ಯಗಳನ್ನು ಗೆದ್ದು ಶುಭಾರಂಭ ಮಾಡಿದ್ದ ಭಾರತ ವನಿತಾ ಪಡೆಗೆ ತಂಡದ ಸ್ಟಾರ್ ಆಟಗಾರ್ತಿ ಶ್ರೇಯಾಂಕ ಪಾಟೀಲ್ (Shreyanka Patil) ಅವರ ಇಂಜುರಿ ಸಮಸ್ಯೆ ಬರ ಸಿಡಿಲಿನಂತೆ ಬಂದೆರಗಿದೆ. ಹೆಡಿಂಗ್ಲಿಯಲ್ಲಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ವೇಳೆ ಶ್ರೇಯಾಂಕ ಪಾಟೀಲ್ ಪಾದದ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಅವರು ಟಿ20 ವಿಶ್ವಕಪ್‌ನಿಂದಲೇ ಹೊರಗುಳಿದಿದ್ದಾರೆ. ಅವರ ಬದಲಿಯಾಗಿ ಪ್ರೇಮಾ ರಾವತ್​ ತಂಡಕ್ಕೆ ಆಯ್ಕೆಯಾಗಿದ್ದರೂ, ಶ್ರೇಯಾಂಕ ಅವರ ಸ್ಥಾನವನ್ನು ತುಂಬುವುದು ಕಷ್ಟಕರ. ಏಕೆಂದರೆ ತಂಡದ ಪ್ರಮುಖ ಸ್ಪಿನ್ನರ್​ಗಳಲ್ಲಿ ಒಬ್ಬರಾಗಿದ್ದ ಶ್ರೇಯಾಂಕ ಕೆಳಕ್ರಮಾಂಕದಲ್ಲಿ ಬ್ಯಾಟ ಬಲವನ್ನು ಹೆಚ್ಚಿಸುತ್ತಿದ್ದರು. ಹೀಗಾಗಿ ಅವರ ಅಲಭ್ಯತೆ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.

ದುರಾದೃಷ್ಟಕರ ಸಂಗತಿಯೆಂದರೆ ಶ್ರೇಯಾಂಕ ಪಾಟೀಲ್ ಈ ಹಿಂದಿನ ಗಾಯಗಳಿಂದಾಗಿ ಕ್ರಿಕೆಟ್ ತೊರೆಯುವ ಬಗ್ಗೆ ಮಾತನಾಡಿ ಎರಡು ದಿನಗಳು ಕಳೆಯುವ ಮುನ್ನವೇ ಅವರು ಮತ್ತೆ ಗಾಯಕ್ಕೆ ತುತ್ತಾಗಿ ಪ್ರಮುಖ ಪಂದ್ಯಾವಳಿಯಿಂದಲೇ ಹೊರಬಿದಿದ್ದಾರೆ. ವಾಸ್ತವವಾಗಿ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದ ಶ್ರೇಯಾಂಕ, ಈ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯದಿದ್ದರೂ, 3 ಓವರ್​ಗಳಲ್ಲಿ ಕೇವಲ 17 ರನ್ ಬಿಟ್ಟುಕೊಟ್ಟು ಎದುರಾಳಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿದ್ದರು.

ಶ್ರೇಯಾಂಕ ಪಾಟೀಲ್​ಗೆ ಗಂಭೀರ ಗಾಯ..! ಕಣ್ಣೀರಿಡುತ್ತ ಮೈದಾನ ತೊರೆದ ಕನ್ನಡತಿ

ಕ್ರಿಕೆಟ್ ಬಿಡಲು ಚಿಂತಿಸಿದ್ದ

ಈ ಪಂದ್ಯದ ಬಳಿಕ ಜಿಯೋಸ್ಟಾರ್‌ನ ಅಡಿಡಾಸ್ ಮ್ಯಾಚ್ ಸೆಂಟರ್ ಲೈವ್ ಕಾರ್ಯಕ್ರಮದಲ್ಲಿ ಗಾಯಗಳಿಂದಾಗಿ ದೀರ್ಘಕಾಲದವರೆಗೆ ಆಟದಿಂದ ಹೊರಗುಳಿದಿದ್ದ ಬಗ್ಗೆ ಮಾತನಾಡಿದ್ದ ಶ್ರೇಯಾಂಕ ಪಾಟೀಲ್, ‘ಪದೇ ಪದೇ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದಾಗ ನಾನು ಖಿನ್ನತೆಗೆ ಒಳಗಾಗಿಲ್ಲ ಅಥವಾ ಕ್ರಿಕೆಟ್ ಅನ್ನು ತ್ಯಜಿಸುವ ಬಗ್ಗೆ ಯೋಚಿಸಿಲ್ಲ ಎಂದು ಹೇಳಿದರೆ ಅದು ನಾನು ಸುಳ್ಳು ಹೇಳುತ್ತಿದ್ದೇನೆ ಎಂದಾಗುತ್ತದೆ. ಗಾಯಕ್ಕೆ ತುತ್ತಾದಾಗ ನಾನು ಆರಂಭದಲ್ಲಿ ಕ್ರಿಕೆಟ್​ನಿಂದ ದೂರ ಉಳಿಯುವ ಬಗ್ಗೆ ಚಿಂತಿಸಿದ್ದೆ. ಆದರೆ ನನ್ನೊಳಗೆ ಒಂದು ಧ್ವನಿ ಇತ್ತು, ಆ ಧ್ವನಿ, ಏನೇ ಆಗಲಿ, ಇದು ನನ್ನಿಷ್ಟದ ಕ್ರೀಡೆ, ಈ ಕ್ರೀಡೆಯನ್ನು ಆಡಲು ಇಷ್ಟವಿರುವ ಕಾರಣದಿಂದಲೇ ನಾನು ಇಲ್ಲಿರುವುದು ಎಂಬುದನ್ನು ಪದೇ ಪದೇ ಹೇಳುತಿತ್ತು. ಹಾಗಾಗಿ, ನಾನು ಇಷ್ಟಪಡುವ ಕೆಲಸವನ್ನು ಬಿಟ್ಟುಕೊಡಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ಧೃಡ ಸಂಕಲ್ಪ ಮಾಡಿದೆ. ಆ ಸಮಯದಲ್ಲಿ ನನ್ನ ತಂದೆ ಮತ್ತು ನನ್ನ ಕುಟುಂಬ ನನ್ನ ಬೆಂಬಲಕ್ಕೆ ನಿಂತಿತು. ಹೀಗಾಗಿ ನಾನು ಗಾಯಗಳಿಂದ ಚೇತರಿಸಿಕೊಂಡು ಇಲ್ಲಿದ್ದೇನೆ’ ಎಂದಿದ್ದರು.

ವರ್ಷದ ಹಿಂದೆಯೇ ತನ್ನ ಗುರಿ ಬಗ್ಗೆ ಹೇಳಿದ್ದ ಶ್ರೇಯಾಂಕ

ಆದರೆ ಶ್ರೇಯಾಂಕ ಈ ರೀತಿಯ ಹೇಳಿಕೆ ನೀಡಿದ ಕೇವಲ ಎರಡು ದಿನಗಳ ನಂತರ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ. ಈ ಗಾಯದಿಂದಾಗಿ ಅವರು ಇಡೀ ವಿಶ್ವಕಪ್​ನಿಂದಲೇ ಹೊರಬಿದಿದ್ದಾರೆ. ಬೇಸರದ ಸಂಗತಿಯೆಂದರೆ ಇದೇ ಶ್ರೇಯಾಂಕ ಕಳೆದ ವರ್ಷ ಲಾರ್ಡ್ಸ್‌ ಅಂಗಳದಲ್ಲಿ ನಿಂತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು, ‘ಬಹುಶಃ ಇಲ್ಲಿಂದ ಸರಿಯಾಗಿ ಒಂದು ವರ್ಷದ ನಂತರ ನಾನು ಇದೇ ಲಾರ್ಡ್ಸ್‌ ಕ್ರೀಡಾಂಗಣದ ಬಾಲ್ಕನಿಯಲ್ಲಿ ಟಿ20 ವಿಶ್ವಕಪ್​ ಹಿಡಿದು ನಿಂತಿರುತ್ತೇನೆ’ ಎಂದು ಬರೆದುಕೊಂಡಿದ್ದರು. ಆದರೆ ಶ್ರೇಯಾಂಕರ ಈ ಕನಸು ಆರಂಭದಲ್ಲೇ ಕಮರಿ ಹೋಗಿದೆ. ಆದಾಗ್ಯೂ ಶ್ರೇಯಾಂಕ ತಂಡದಿಂದ ಹೊರಗುಳಿದಿದ್ದರೂ, ಭಾರತ ವನಿತಾ ಪಡೆ ಟಿ20 ವಿಶ್ವಕಪ್ ಗೆದ್ದು ಶ್ರೇಯಾಂಕರ ಕನಸನ್ನು ನನಸು ಮಾಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:49 pm, Fri, 19 June 26

Source link

Vastu Clock Placement: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ಗಡಿಯಾರ ಇಡಬೇಡಿ; ಹೆಚ್ಚಾಗುತ್ತೆ ಸಂಕಷ್ಟ! – Kannada News | Vastu Clock Placement: Attract Prosperity and Positive Energy – Avoid Negative Vibes!

ಗಡಿಯಾರಗಳನ್ನು ಕೇವಲ ಸಮಯ ನೋಡಲು ಮಾತ್ರವಲ್ಲ, ವಾಸ್ತು ಶಾಸ್ತ್ರದಲ್ಲಿ ಅವುಗಳನ್ನು ಧನಾತ್ಮಕ ಮತ್ತು ನಕಾರಾತ್ಮಕ ಶಕ್ತಿಯನ್ನು ನಿಯಂತ್ರಿಸುವ ಪ್ರಮುಖ ಅಂಶವೆಂದು ಪರಿಗಣಿಸಲಾಗುತ್ತದೆ. ವಾಸ್ತು ತಜ್ಞರ ಪ್ರಕಾರ, ಗಡಿಯಾರವು ಮನೆಯ ಒಟ್ಟಾರೆ ಶಕ್ತಿಯೊಂದಿಗೆ ನೇರ ಸಂಪರ್ಕ ಹೊಂದಿದೆ. ಸರಿಯಾದ ದಿಕ್ಕಿನಲ್ಲಿ ಗಡಿಯಾರವನ್ನು ನೇತುಹಾಕುವುದರಿಂದ ಮನೆಯಲ್ಲಿ ಸುಖ, ಶಾಂತಿ, ಮತ್ತು ಸಮೃದ್ಧಿ ನೆಲೆಸುತ್ತದೆ. ಆದರೆ ತಪ್ಪು ದಿಕ್ಕಿನಲ್ಲಿಟ್ಟರೆ ಮಾನಸಿಕ ಒತ್ತಡ ಹಾಗೂ ಆರ್ಥಿಕ ನಷ್ಟ ಎದುರಾಗಬಹುದು.

ದಕ್ಷಿಣ ದಿಕ್ಕಿನಲ್ಲಿ ಗಡಿಯಾರ ಇಡುವುದು ಅಶುಭ ಏಕೆ?

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ದಕ್ಷಿಣ ಭಾಗದ ಗೋಡೆಯ ಮೇಲೆ ಗಡಿಯಾರವನ್ನು ಇಡುವುದು ಅತ್ಯಂತ ಅಶುಭ ಎಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ದಕ್ಷಿಣ ದಿಕ್ಕಿನ ಅಧಿಪತಿ ಸಾವಿನ ದೇವನಾದ ಯಮರಾಜ. ಈ ದಿಕ್ಕಿನಲ್ಲಿ ಗಡಿಯಾರವನ್ನು ಇಡುವುದರಿಂದ ಕುಟುಂಬದ ಸದಸ್ಯರ ಪ್ರಗತಿಗೆ ಅಡೆತಡೆಗಳು ಉಂಟಾಗುತ್ತವೆ. ಅಷ್ಟೇ ಅಲ್ಲದೆ, ಇದು ಮನೆಯಲ್ಲಿ ಅನಗತ್ಯ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಹಿರಿಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಸಕಾರಾತ್ಮಕತೆ ಹೆಚ್ಚಿಸುವ ಪೂರ್ವ ಮತ್ತು ಉತ್ತರ ದಿಕ್ಕುಗಳು:

ಮನೆಯಲ್ಲಿ ಗಡಿಯಾರವನ್ನು ಇಡಲು ಪೂರ್ವ ದಿಕ್ಕನ್ನು ಅತ್ಯಂತ ಶ್ರೇಷ್ಠ ಮತ್ತು ಶುಭವೆಂದು ಪರಿಗಣಿಸಲಾಗುತ್ತದೆ. ಪೂರ್ವವು ಸೂರ್ಯೋದಯದ ದಿಕ್ಕಾಗಿದ್ದು, ದೇವತೆಗಳ ರಾಜನಾದ ಇಂದ್ರ ಇದರ ಅಧಿಪತಿಯಾಗಿದ್ದಾನೆ. ಈ ದಿಕ್ಕಿನಲ್ಲಿ ಗಡಿಯಾರ ಹಾಕುವುದರಿಂದ ಮನೆಯಲ್ಲಿ ಧನಾತ್ಮಕ ಕಂಪನಗಳು ಸೃಷ್ಟಿಯಾಗಿ, ಕೌಟುಂಬಿಕ ಬಾಂಧವ್ಯ ಗಟ್ಟಿಯಾಗುತ್ತದೆ. ಇನ್ನು ಉತ್ತರ ದಿಕ್ಕನ್ನು ಸಂಪತ್ತಿನ ಅಧಿಪತಿಯಾದ ಕುಬೇರನ ದಿಕ್ಕೆಂದು ಕರೆಯಲಾಗುತ್ತದೆ. ಉತ್ತರ ಗೋಡೆಯ ಮೇಲೆ ಗಡಿಯಾರವನ್ನು ನೇತುಹಾಕುವುದರಿಂದ ಆರ್ಥಿಕ ಸಂಕಷ್ಟಗಳು ದೂರವಾಗಿ, ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ನಿಂತುಹೋದ ಮತ್ತು ಒಡೆದ ಗಡಿಯಾರಗಳನ್ನು ತಕ್ಷಣವೇ ತೆಗೆಯಿರಿ:

ಮನೆಯಲ್ಲಿ ಎಂದಿಗೂ ಕೆಟ್ಟುಹೋದ, ನಿಂತುಹೋದ ಅಥವಾ ಒಡೆದ ಗಡಿಯಾರಗಳನ್ನು ಇಟ್ಟುಕೊಳ್ಳಬಾರದು. ವಾಸ್ತು ಪ್ರಕಾರ, ನಿಂತ ಗಡಿಯಾರವು ಬದುಕಿನ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಒಂದು ವೇಳೆ ಗಡಿಯಾರ ಹಾಳಾಗಿದ್ದರೆ ಅದನ್ನು ತಕ್ಷಣವೇ ದುರಸ್ತಿ ಮಾಡಿಸಿ ಅಥವಾ ಮನೆಯಿಂದ ಹೊರಹಾಕಿ. ಜೊತೆಗೆ, ಗಡಿಯಾರದ ಗ್ಲಾಸ್ ಮೇಲೆ ಧೂಳು ಕೂರದಂತೆ ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಗತ್ಯ.

ಗಡಿಯಾರ ಬಳಸುವಾಗ ನೆನಪಿನಲ್ಲಿಡಬೇಕಾದ ಪ್ರಮುಖ ನಿಯಮಗಳು:

ವಾಸ್ತು ತಜ್ಞರು ಯಾವಾಗಲೂ ಗಡಿಯಾರದ ಸಮಯವನ್ನು ನಿಗದಿತ ಸಮಯಕ್ಕಿಂತ ಒಂದು ಅಥವಾ ಎರಡು ನಿಮಿಷ ಮುಂಚಿತವಾಗಿ (ಫಾಸ್ಟ್) ಇಟ್ಟುಕೊಳ್ಳಲು ಶಿಫಾರಸು ಮಾಡುತ್ತಾರೆ. ಸಮಯಕ್ಕಿಂತ ಹಿಂದೆ ಇರುವುದು ಜೀವನದಲ್ಲಿ ಹಿನ್ನಡೆಯನ್ನು ಸೂಚಿಸುತ್ತದೆ. ಇದಲ್ಲದೆ, ಮನೆಯ ಮುಖ್ಯ ಬಾಗಿಲಿನ ಮೇಲೆ ಗಡಿಯಾರವನ್ನು ತೂಗುಹಾಕುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು, ಇದು ನಕಾರಾತ್ಮಕ ಶಕ್ತಿಯನ್ನು ಮನೆಗೆ ಆಹ್ವಾನಿಸುತ್ತದೆ. ಮಲಗುವ ಕೋಣೆಯಲ್ಲಿ ವಿಚಿತ್ರ ಆಕಾರದ ಗಡಿಯಾರಗಳನ್ನು ಬಳಸಬೇಡಿ ಮತ್ತು ಲೋಲಕ (Pendulum) ಇರುವ ಗಡಿಯಾರಗಳನ್ನು ಲಿವಿಂಗ್ ರೂಮ್‌ನ ಪೂರ್ವ ಗೋಡೆಯ ಮೇಲೆ ಇಡುವುದು ಅತ್ಯಂತ ಮಂಗಳಕರವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಗಲಾಟೆ ಮಾಡ್ತಿದ್ದ ಪುಟಾಣಿ ಕೈಗೆ ಐಫೋನ್ ಕೊಟ್ಟ ತಾಯಿ, ಮುಂದೇನಾಯ್ತು ಗೊತ್ತಾ? – Kannada News | Mother gives iPhone to fussing toddler, little boy throws phone into river

ಹುಟ್ಟಿದ ಮಕ್ಕಳು (little kids) ಕೂಡ ಮೊದಲು ಈ ಮೊಬೈಲ್ ನ್ನೇ ಹುಡುಕುತ್ತಾರೆ. ಇನ್ನು ಮಕ್ಕಳು ಅತ್ತರೆ, ಊಟ ಮಾಡಲ್ಲ ಅಂತ ಹಠ ಮಾಡಿದ್ರೆ ಪೋಷಕರು ಮೊಬೈಲ್ ಕೊಟ್ಟು ಸಮಾಧಾನ ಪಡಿಸ್ತಾರೆ. ನೀವು ನಿಮ್ಮ ಮಕ್ಕಳಿಗೆ ಫೋನ್ ಕೊಟ್ಟು ಸಮಾಧಾನ ಪಡಿಸುವ ಮುನ್ನ ಈ ಸ್ಟೋರಿ ಓದೋದು ಒಳ್ಳೆಯದು. ಹೌದು, ಬೋಟಿಂಗ್ ಗೆ ಹೋಗಿದ್ದ ವೇಳೆ ಮಹಿಳೆ ಪುಟಾಣಿಯನ್ನು ಸಮಾಧಾನ ಪಡಿಸಲು ತನ್ನ ಕೈಯಲ್ಲಿದ್ದ ಐಫೋನ್ ಕೊಟ್ಟಿದ್ದಾಳೆ. ಆದರೆ ಪುಟ್ಟ ಹುಡುಗನು ತನ್ನ ಕೈಯಲ್ಲಿದ್ದ ಫೋನ್ ನೀರಿಗೆ ಎಸೆದಿರುವ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಒಂದು ಕ್ಷಣ ಶಾಕ್ ಆಗಿದ್ದಾರೆ.

ಯಜ್ಞಶ್ರೀ (@yajnashri) ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಬೋಟಿಂಗ್‌ಗೆ ತೆರಳಿದ್ದ ತಾಯಿ ತನ್ನ ಪುಟ್ಟ ಮಗುವನ್ನು ಸಮಾಧಾನಪಡಿಸಲು ಐಫೋನ್ ಕೈಗೆ ಕೊಡುವುದನ್ನು ಕಾಣಬಹುದು. ಕೈಯಲ್ಲಿ ಫೋನ್ ಹಿಡಿದು ಆಟವಾಡುತ್ತಿದ್ದ ಪುಟ್ಟ ಕಂದಮ್ಮ ನೋಡ ನೋಡುತ್ತಿದ್ದಂತೆ ನದಿಗೆ ಎಸೆದಿದೆ.  ಮಹಿಳೆ ಮೊಬೈಲ್‌ನ್ನು ಕೈಯಲ್ಲಿ ಹಿಡಿಯಲು ಪ್ರಯತ್ನಿಸುತ್ತಿದ್ದಂತೆ ನೀರಿಗೆ ಬಿದ್ದಿದೆ. ಮಗನ ಕೆಲಸ ನೋಡಿ ಮಹಿಳೆ ಕೆಲ ಕಾಲ ಗಾಬರಿಗೊಂಡು ಕುಳಿತಿರುವ ದೃಶ್ಯವನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಚಪಾತಿ ಮಾಡಲು ಹೋಗಿ ಮೈ ತುಂಬಾ ಹಿಟ್ಟು ಮೆತ್ತಿಕೊಂಡ ಪುಟಾಣಿ

ಈ ವಿಡಿಯೋ 1.2 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮೊಬೈಲ್ ಗೆ ದಾಸರಾಗಿರುವ ಹೆತ್ತವರಿಗೆ ಈ ರೀತಿಯೇ ಬುದ್ಧಿ ಕಲಿಸಬೇಕು ಎಂದಿದ್ದಾರೆ. ಮತ್ತೊಬ್ಬರು, ಮಗುವಿಗೆ ಲೈಫ್ ಜಾಕೆಟ್ ಹಾಕಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, ಬೋಟಿಂಗ್ ಗೆ ಹೋಗುವಾಗ ಲೈಫ್ ಜಾಕೆಟ್ ನಂತಹ ಸುರಕ್ಷತಾ ಸಾಧನಗಳನ್ನು ಬಳಸುವುದು ಕಡ್ಡಾಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರಿ ಮಳೆಗೆ ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ! – Kannada News | Darjeeling Siliguri route closed after Dudhia bridge washed away due to Heavy Rainfall

ಡಾರ್ಜಿಲಿಂಗ್, ಜೂನ್ 19: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಸುತ್ತಮುತ್ತಲಿನ ಬೆಟ್ಟ ಪ್ರದೇಶಗಳಲ್ಲಿ ದಿಢೀರ್ ಪ್ರಕೃತಿ ವಿಕೋಪ ಸಂಭವಿಸಿದೆ. ಒಂದೇ ಸಮನೆ ಸುರಿದ 200 ಮಿಮೀ ಭಾರಿ ಮಳೆಯಿಂದಾಗಿ (Rain Updates) ಗುಡ್ಡಗಾಡು ಪ್ರದೇಶದ ನದಿಗಳು ಮತ್ತು ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನೀರಿನ ತೀವ್ರ ರಭಸಕ್ಕೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಿಲಿಗುರಿ ಮತ್ತು ಮಿರಿಕ್-ಡಾರ್ಜಿಲಿಂಗ್ ಅನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿರುವ ಪ್ರಮುಖ ‘ದುಧಿಯಾ ಸೇತುವೆ’ ಪ್ರವಾಹಕ್ಕೆ ಸಿಲುಕಿ ಸಂಪೂರ್ಣವಾಗಿ ಕೊಚ್ಚಿಹೋಗಿದೆ.

ಸೇತುವೆ ಕೊಚ್ಚಿಹೋಗಿರುವುದು ಮತ್ತು ಹೆದ್ದಾರಿಯ ಹಲವೆಡೆ ಭಾರಿ ಭೂಕುಸಿತ ಸಂಭವಿಸಿರುವುದರಿಂದ ಡಾರ್ಜಿಲಿಂಗ್-ಸಿಲಿಗುರಿ ನಡುವಿನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಈ ಮಾರ್ಗದಲ್ಲಿ ನೂರಾರು ವಾಹನಗಳು ಮತ್ತು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಅಧಿಕಾರಿಗಳು ಪ್ರವಾಸಿಗರಿಗೆ ಸದ್ಯಕ್ಕೆ ಈ ಮಾರ್ಗದಲ್ಲಿ ಪ್ರಯಾಣಿಸದಂತೆ ಮುನ್ನೆಚ್ಚರಿಕೆ ನೀಡಿದ್ದಾರೆ.

(Video Source: ANI) 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಿಷತ್​​ ಚುನಾವಣೆ: ಜೆಡಿಎಸ್​​ ಶಾಸಕರ ಅಡ್ಡ ಮತದಾನದ ಹಿಂದಿದೆ ಹಲವು ಕಾರಣ; ಇಲ್ಲಿದೆ ಮಾಹಿತಿ – Kannada News | MLC Elections: Several Factors Behind JDS MLAs’ Cross Voting

ಬೆಂಗಳೂರು, ಜೂನ್​​ 19: ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಅಡ್ಡಮತದಾನದಿಂದ ತೀವ್ರ ಆಘಾತ ಎದುರಾಗಿದೆ.  ನಾಲ್ಕರಿಂದ ಐದು ಜೆಡಿಎಸ್ ಶಾಸಕರು ಅಡ್ಡಮತದಾನ ಮಾಡಿರುವುದಾಗಿ ಶಂಕೆ ವ್ಯಕ್ತವಾಗಿದ್ದು, ಇದು ಪಕ್ಷದ ಪಾಳಯದಲ್ಲಿ ಆತಂಕಕ್ಕೆ ಕಾರಣವಾಗಿದೆ.ಈ ಅಡ್ಡಮತದಾನಕ್ಕೆ ಹಲವು ಆಂತರಿಕ ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ. ಪಕ್ಷದೊಳಗಿನ ಗುಂಪುಗಾರಿಕೆ, ನಾಯಕತ್ವದ ಕೊರತೆ, ಹಿರಿಯ ನಾಯಕರ ಮನವೊಲಿಕೆಯಲ್ಲಿನ ವಿಫಲತೆ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಯ ಬಗ್ಗೆ ಶಾಸಕರ ಅಸಮಾಧಾನ ಪ್ರಮುಖವಾಗಿವೆ. ಹೆಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾದ ನಂತರ ರಾಜ್ಯದಲ್ಲಿ ನಾಯಕತ್ವದ ಕೊರತೆಯೂ ಎದ್ದುಕಾಣುತ್ತಿರುವ ಬಗ್ಗೆ ಮಾತುಗಳು ಕೇಳಿಬಂದಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರೈತರಿಗೆ ಖುಷಿ ಸುದ್ದಿ: ಜೂ 25ಕ್ಕೆ ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ – Kannada News | Tungabhadra Dam’s 33 New Gates to Be Inaugurated on June 25 by Karnataka, Telangana and Andhra Pradesh CMs

ಕೊಪ್ಪಳ, ಜೂನ್​​ 19: ತುಂಗಭದ್ರಾ ಜಲಾಶಯದ (Tungabhadra Dam) ಕ್ರಸ್ಟ್ ಗೇಟ್ ಮುರಿದುಬಿದ್ದು ಮೂರು ರಾಜ್ಯಗಳ ಒಂಬತ್ತು ಜಿಲ್ಲೆಗಳಲ್ಲಿ ಆತಂಕ ಮೂಡಿಸಿದ್ದ ಸಮಸ್ಯೆಗೆ ಇದೀಗ ಶಾಶ್ವತ ಪರಿಹಾರ ಸಿಕ್ಕಿದೆ. ಜಲಾಶಯದ ಒಟ್ಟು 33 ಗೇಟ್‌ಗಳನ್ನು ಯಶಸ್ವಿಯಾಗಿ ಬದಲಾಯಿಸಲಾಗಿದ್ದು, ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಜೂನ್ 25 ರಂದು ಕರ್ನಾಟಕ (Karnataka), ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಜಂಟಿಯಾಗಿ ಈ ನೂತನ ಗೇಟ್‌ಗಳನ್ನು ಉದ್ಘಾಟಿಸಲಿದ್ದಾರೆ.

ಮುಖ್ಯಾಂಶಗಳು

  • ತುಂಗಭದ್ರಾ ಜಲಾಶಯದ ಕ್ರಷ್ಟ್ ಗೇಟ್​ಗಳ ಉದ್ಘಾಟನೆಗ ಕ್ಷಣಗಣನೆ
  • ಜೂನ್ 25 ರಂದು ಮೂರು ರಾಜ್ಯಗಳ ಸಿಎಂಗಳಿಂದ ಲೋಕಾರ್ಪಣೆ
  • 55 ರಿಂದ 60 ವರ್ಷಗಳವರೆಗೆ ಬಾಳಿಕೆ ಬರಲಿರುವ ಕ್ರಷ್ಟ್ ಗೇಟ್​ಗಳು

51 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ: 55 ರಿಂದ 60 ವರ್ಷಗಳವರೆಗೆ ಬಾಳಿಕೆ

ಕರ್ನಾಟಕದ ನಾಲ್ಕು ಜಿಲ್ಲೆಗಳು ಮಾತ್ರವಲ್ಲದೆ, ನೆರೆಯ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಿಗೂ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ 2024ರ ಆಗಸ್ಟ್ 10ರಂದು ಕೊಚ್ಚಿಹೋಗಿತ್ತು. ಈ ಘಟನೆಯ ಬಳಿಕ ತಂತ್ರಜ್ಞರ ಸಮಿತಿಯು ಜಲಾಶಯದ ಎಲ್ಲಾ 33 ಗೇಟ್‌ಗಳನ್ನು ಬದಲಾಯಿಸಲು ಸೂಚನೆ ನೀಡಿತ್ತು. ಅದರಂತೆ ಸುಮಾರು 51 ಕೋಟಿ ರೂ. ವೆಚ್ಚದಲ್ಲಿ ಈ ಮಹತ್ವದ ಕಾಮಗಾರಿಯನ್ನು ಕೈಗೊಂಡು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಈ ಹೊಸ ಕ್ರಸ್ಟ್ ಗೇಟ್‌ಗಳು ಮುಂದಿನ 55 ರಿಂದ 60 ವರ್ಷಗಳವರೆಗೆ ಬಾಳಿಕೆ ಬರಲಿವೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಬಗ್ಗೆ ಸರ್ಕಾರದಿಂದ ಬಿಗ್ ಅಪ್​ಡೇಟ್: ರೈತರು ಫುಲ್ ಖುಷ್

ಲೋಕಾರ್ಪಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗುರುವಾರ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ಜಲಾಶಯಕ್ಕೆ ಭೇಟಿ ನೀಡಿದ ಸಚಿವ ರಾಮಲಿಂಗಾರೆಡ್ಡಿ, ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು. ತದನಂತರ ಮುನಿರಾಬಾದ್‌ನ ಹೈಸ್ಕೂಲ್ ಮೈದಾನದಲ್ಲಿ ಸಿದ್ಧಗೊಳ್ಳುತ್ತಿರುವ ಬೃಹತ್ ವೇದಿಕೆ, ವಾಹನ ಸಂಚಾರ ವ್ಯವಸ್ಥೆ, ಬ್ಯಾರಿಕೇಡ್ ಅಳವಡಿಕೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕೈಗೊಳ್ಳಲಾದ ಮುನ್ನೆಚ್ಚರಿಕೆ ಕ್ರಮಗಳನ್ನು ವೀಕ್ಷಿಸಿ, ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದರು.

ವೇಗವಾಗಿ ಕಾಮಗಾರಿ ಮುಗಿಸಿರುವುದು ನಮ್ಮ ಸರ್ಕಾರದ ಬದ್ಧತೆ: ಶಾಸಕ ರಾಘವೇಂದ್ರ ಹಿಟ್ನಾಳ್

ಈ ಐತಿಹಾಸಿಕ ಸಮಾರಂಭದಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಉದ್ಘಾಟನೆಯ ಜೊತೆಗೆ, ಮೂರು ರಾಜ್ಯಗಳ ನಡುವಿನ ನೀರಿನ ಹಂಚಿಕೆ, ನೀರಾವರಿ ಯೋಜನೆಗಳು ಹಾಗೂ ಅಂತಾರಾಜ್ಯ ನದಿ ವಿವಾದಗಳ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ. ವಿಶೇಷವಾಗಿ ಮೇಕೆದಾಟು, ಮಹಾದಾಯಿ ಹಾಗೂ ನವಲಿ ಸಮಾನಾಂತರ ಜಲಾಶಯ ನಿರ್ಮಾಣದ ಕುರಿತು ಕೇಂದ್ರ ಸರ್ಕಾರದೊಂದಿಗೆ ನಡೆಸಬೇಕಾದ ಮಾತುಕತೆಗಳ ಬಗ್ಗೆಯೂ ಈ ವೇದಿಕೆಯಲ್ಲಿ ಸಮಾಲೋಚನೆ ನಡೆಸಲು ನಿರ್ಧರಿಸಲಾಗಿದೆ. ವಿರೋಧ ಪಕ್ಷವಾದ ಬಿಜೆಪಿ ಈ ವಿಷಯದಲ್ಲಿ ಸಾಲು ಸಾಲು ಆರೋಪಗಳನ್ನು ಮಾಡಿದರೂ, ಅತ್ಯಂತ ವೇಗವಾಗಿ ಕಾಮಗಾರಿ ಮುಗಿಸಿರುವುದು ನಮ್ಮ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.

ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಮೊದಲ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿ: ಅದರ ಭಾರ, ಅಗಲ-ಉದ್ದ ಎಷ್ಟು ಗೊತ್ತಾ?

ಒಟ್ಟಾರೆ ತುಂಗಭದ್ರಾ ಜಲಾಶಯದ ಹೊಸ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ಕೇವಲ ಒಂದು ಕಾಮಗಾರಿಯ ಉದ್ಘಾಟನೆ ಮಾತ್ರವಲ್ಲ, ಮೂರು ರಾಜ್ಯಗಳ ನೀರಿನ ಹಂಚಿಕೆ ಮತ್ತು ನೀರಾವರಿ ಭವಿಷ್ಯದ ಕುರಿತ ಮಹತ್ವದ ಚರ್ಚೆಗೆ ವೇದಿಕೆಯಾಗಿದೆ. ಜೊತೆಗೆ ಮೂರು ರಾಜ್ಯದ ಒಂಬತ್ತು ಜಿಲ್ಲೆಯ ಜನರು ಹಾಗೂ ರೈತರಿಗೆ ಖುಷಿಯ ಕ್ಷಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಂಗನಾಗೆ ತೀವ್ರ ನಿರಾಶೆ; ಮೊದಲ ವಾರದಲ್ಲಿ ‘ಭಾರತ್ ಭಾಗ್ಯ ವಿಧಾತ’ ಗಳಿಕೆ ಕೇವಲ 6 ಕೋಟಿ ರೂ. – Kannada News | Kangana Ranaut Bharat Bhhagya Viddhaata Box Office Collection Week 1 and budget

ಬಾಲಿವುಡ್‌ನ ವಿವಾದಿತ ಹಾಗೂ ಖ್ಯಾತ ನಟಿ ಕಂಗನಾ ರಣಾವತ್ (Kangana Ranaut) ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಭಾರತ್ ಭಾಗ್ಯ ವಿಧಾತ’ (Bharat Bhhagya Viddhaata) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಜೂನ್ 12ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಮೊದಲ ವಾರದಲ್ಲಿ ಕೇವಲ 6.55 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಅತ್ಯಂತ ನೀರಸ ಪ್ರತಿಕ್ರಿಯೆ ಪಡೆದಿದೆ.

ಮೂಲಗಳ ಪ್ರಕಾರ, ಈ ಸಿನಿಮಾ ಸುಮಾರು 35 ಕೋಟಿಯಿಂದ 40 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿದೆ. ಆದರೆ ಚಿತ್ರದ ಮೊದಲ ವಾರದ ಕಲೆಕ್ಷನ್ ನೋಡಿದರೆ ಚಿತ್ರಕ್ಕೆ ಹೂಡಿಕೆ ಮಾಡಿದ ಬಜೆಟ್ ಕೈಸೇರುವುದು ಕೂಡ ಅನುಮಾನ ಎನ್ನುವಂತಾಗಿದೆ. ಮೊದಲ ವಾರದಲ್ಲೇ ಚಿತ್ರದ ಗಳಿಕೆ ಕೇವಲ ಲಕ್ಷಗಳಿಗೆ ಕುಸಿದಿರುವುದು ಚಿತ್ರತಂಡಕ್ಕೆ ದೊಡ್ಡ ಆಘಾತ ತಂದಿದೆ.

ಬಾಕ್ಸ್ ಆಫೀಸ್ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ ವರದಿಯ ಪ್ರಕಾರ, ಸಿನಿಮಾ ಮೊದಲ ವಾರಾಂತ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿತ್ತು. ಆದರೆ ಸೋಮವಾರದಿಂದ ಕಲೆಕ್ಷನ್ ಸಂಪೂರ್ಣವಾಗಿ ಕುಸಿದಿದೆ. ಸೋಮವಾರ ಮತ್ತು ಮಂಗಳವಾರ ತಲಾ 65 ಲಕ್ಷ ರೂಪಾಯಿ ಗಳಿಸಿದರೆ, ಬುಧವಾರ 55 ಲಕ್ಷ ಹಾಗೂ ಶುಕ್ರವಾರ ಕೇವಲ 45 ಲಕ್ಷ ರೂಪಾಯಿಗೆ ಕಲೆಕ್ಷನ್ ಕುಸಿದಿದೆ.

ಇದರೊಂದಿಗೆ ದೇಶೀಯ ಮಾರುಕಟ್ಟೆಯಲ್ಲಿ ಚಿತ್ರದ ಒಟ್ಟು ಗಳಿಕೆ 6.55 ಕೋಟಿ ರೂಪಾಯಿಗೆ ಬಂದು ನಿಂತಿದೆ. ಈ ವಾರ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ, ಕೃತಿ ಸನನ್ ನಟನೆಯ ‘ಕಾಕ್‌ಟೇಲ್ 2’ ಸಿನಿಮಾ ಬಿಡುಗಡೆ ಆಗಿರುವುದರಿಂದ ಕಂಗನಾ ಚಿತ್ರದ ಮುಂದಿನ ಹಾದಿ ಇನ್ನಷ್ಟು ಕಠಿಣವಾಗಲಿದೆ. ಸದ್ಯಕ್ಕಂತೂ ಈ ಸಿನಿಮಾ ಚೇತರಿಸಿಕೊಳ್ಳುವ ಯಾವುದೇ ಲಕ್ಷಣ ಕಾಣುತ್ತಿಲ್ಲ.

ಇದನ್ನೂ ಓದಿ: ‘ಬಾಲಿವುಡ್‌ನಲ್ಲಿ ಪಾಕಿಸ್ತಾನ ಪ್ರೇಮ ಹೆಚ್ಚಿದೆ’: ರಣವೀರ್ ಸಿಂಗ್ ಪರ ಬ್ಯಾಟ್ ಬೀಸಿದ ಕಂಗನಾ ರಣಾವತ್

2008ರಲ್ಲಿ ಮುಂಬೈನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ 20 ಗರ್ಭಿಣಿಯರ ಪ್ರಾಣ ಉಳಿಸಿದ ನರ್ಸ್ ಅಂಜಲಿ ಕುಲ್ತೆ ಅವರ ನೈಜ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ಮಾಡಲಾಗಿದೆ. ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಹರಿಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಚಿತ್ರವನ್ನು ವೀಕ್ಷಿಸಿ, ಇದು ಪ್ರತಿಯೊಬ್ಬ ಭಾರತೀಯನಲ್ಲೂ ಧೈರ್ಯ ಮತ್ತು ಮಾನವೀಯತೆಯನ್ನು ಜಾಗೃತಗೊಳಿಸುವ ಸಿನಿಮಾ ಎಂದು ಶ್ಲಾಘಿಸಿ ಹರಿಯಾಣದಲ್ಲಿ ತೆರಿಗೆ ಮುಕ್ತ ಎಂದು ಘೋಷಿಸಿದ್ದರು. ಆದರೂ ಸಿನಿಮಾ ಗೆದ್ದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಡ್ಡಮತದಾನ: ಜೆಡಿಎಸ್​​​, ಬಿಜೆಪಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ, ಹೈಕಮಾಂಡ್ ಬುಲಾವ್, ತಲೆದಂಡವಾಗುತ್ತಾ? – Kannada News | NDA MLAs Cross Voting Shock in Karnataka: bjp high command calls To State Leaders

ಬೆಂಗಳೂರು, (ಜೂನ್ 19): ಕರ್ನಾಟಕ ವಿಧಾನಪರಿಷತ್​ನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ (Karnataka Assembly Council Elections) ಕಾಂಗ್ರೆಸ್​ನ (Congress) ಐವರು, ಬಿಜೆಪಿಯ  (BJP)ಇಬ್ಬರು ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.ಈ ಫಲಿತಾಂಶ ರಾಜ್ಯ ರಾಜಕಾರಣದ ನಿರೀಕ್ಷೆಯಂತೆಯೇ ಆಗಿದೆ. ಆದ್ರೆ ಅಚ್ಚರಿ ಎಂಬಂತೆ, ರಾಜ್ಯ ಸರ್ಕಾರದ ವಿರುದ್ಧ ಒಗ್ಗಟ್ಟು ಪ್ರದರ್ಶಿಸಬೇಕಿದ್ದ ಬಿಜೆಪಿ, ಜೆಡಿಎಸ್ ಶಾಸಕರು ಪಕ್ಷಕ್ಕೆ ಕೈಕೊಟ್ಟಿದ್ದು, 11 ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಹಾಕಿದ್ದಾರೆ. ಇದು, ರಾಜ್ಯ ಕಾಂಗ್ರೆಸ್​ನಲ್ಲಿ ಆಂತರಿಕ ಕಲಹ ಇದೆ ಅಂತಾ ಸದಾ ದಾಳ ಉರುಳುತ್ತಿದ್ದ ದೋಸ್ತಿಗಳಿಗೆ ಮುಖಭಂಗವಾಗುವಂತೆ ಮಾಡಿದೆ. ಅಲ್ಲದೇ ಇದೀಗ ದೋಸ್ತಿಗಳ ನಡುವೆ ಅಡ್ಡಮತದಾನದ (Cross Voting)  ಸಂಖ್ಯೆಯ ಗೊಂದಲ ಸೃಷ್ಟಿಯಾಗಿದೆ. ಇನ್ನೊಂದೆಡೆ ಅಡ್ಡಮತದಾನವನ್ನು ಗಂಭಿರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಬುಲಾವ್ ನೀಡಿದೆ.

ಮುಖ್ಯಾಂಶಗಳು

  • ಪರಿಷತ್​ ಚುನಾವಣೆಯಲ್ಲಿ ಬಿಜೆಪಿಯಿಂದ ಅಡ್ಡಮತದಾನ ಹಿನ್ನೆಲೆ
  • ಕರ್ನಾಟಕ ಬಿಜೆಪಿ ನಾಯಕತ್ವದ ಬಗ್ಗೆ ಹೈಕಮಾಂಡ್​ ಅಸಮಾಧಾನ
  • ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್​ನಿಂದ ಬುಲಾವ್
  • ವಿಜಯೇಂದ್ರ,ಅಶೋಕ್, ರಾಧಾಮೋಹನ್ ದಾಸ್​ಗೆ ಬುಲಾವ್

ಬಿಜೆಪಿ ನಾಯಕರಿಗೆ ಹೈಕಮಾಂಡ್ ಬುಲಾವ್

11 ಎನ್​​​​ಡಿಎ ಶಾಸಕರು ಅಡ್ಡಮತದಾನವನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ನಾಯಕರಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ.  ಅಡ್ಡಮತದಾನದಿಂದ ಅಸಮಾಧಾನಗೊಂಡಿರುವ ಹೈಕಮಾಂಡ್ ಈ ಬಗ್ಗೆ ಚರ್ಚಿಸಲು ರಾಜ್ಯಾಧ್ಯಕ್ಷ ವಿಜಯೇಂದ್ರ ವಿಪಕ್ಷ ನಾಯಕ ಆರ್ ಅಶೋಕ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅವರಿಗೆ ದೆಹಲಿಗೆ ಬರುವಂತೆ ಬುಲಾವ್ ಕೊಟ್ಟಿದೆ.

ಇದನ್ನೂ ನೋಡಿ: ಪರಿಷತ್ ಚುನಾವಣೆಯಲ್ಲಿ ಜೆಡಿಎಸ್​ಗೆ ಸೋಲು: ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ

ದೋಸ್ತಿಗಳಲ್ಲೇ ಅಡ್ಡಮತದಾನದ ಸಂಖ್ಯೆ ಗೊಂದಲ

ಹೌದು…ಬಿಜೆಪಿ ಹಾಗೂ ಜೆಡಿಎಸ್​ ದೋಸ್ತಿಗಳ ನಡುವೆ ಅಡ್ಡಮತದಾನದ ಸಂಖ್ಯೆಯ ಗೊಂದಲ ಸೃಷ್ಟಿಯಾಗಿದೆ. ಒಟ್ಟು 11 ಶಾಸಕರು ಅಡ್ಡಮತದಾನ ಮಾಡಿದ್ದಾರೆ ಅನ್ನೋದು ಅಧಿಕೃತ ಮಾಹಿತಿ. ಆದ್ರೆ ಈ ಸಂಖ್ಯೆಯಲ್ಲಿ ಬಿಜೆಪಿಯವರು ಎಷ್ಟು? ಜೆಡಿಎಸ್​ ಶಾಸಕರು ಇನ್ನೆಷ್ಟು ಎನ್ನುವ ಪ್ರಶ್ನೆ ಎದ್ದಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ತಮ್ಮ ಪಕ್ಷದ ನಾಲ್ವರು ಶಾಸಕರು ಅಡ್ಡಮತದಾನ ಮಾಡಿರೋದಾಗಿ ಹೇಳ್ತಿದ್ದಾರೆ. ಆದ್ರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದಳ ಪಡೆಯ ಆರೇಳು ಶಾಸಕರು ಕ್ರಾಸ್ ವೋಟಿಂಗ್ ಮಾಡಿದ್ದಾರೆ ಅಂತಿದ್ದಾರೆ. ಹೀಗಾಗಿ ಮೈತ್ರಿ ನಾಯಕರ ನಡುವೆ ಅಂಕಿ ಸಂಖ್ಯೆಯ ಗೊಂದಲ ಇರುವುದು ಇಲ್ಲಿ ಗೆದ್ದು ಕಾಣುತ್ತಿದೆ.

ರಾಜ್ಯ ರಾಜಕಾರಣದಲ್ಲಿ ಬದಲಾಗುತ್ತಿರುವ ರಾಜಕೀಯ ಸಮೀಕರಣಗಳ ಪ್ರಭಾವ ಅಡ್ಡಮತದಾನದ ಮೇಲೆ ಬಿದ್ದಿದೆ ಅನ್ನೋದು ರಾಜಕೀಯ ವಿಶ್ಲೇಷಣೆ. ಕಾಂಗ್ರೆಸ್ ಬೆಂಬಲಿಸಿದವರಿಗೆ ಮುಂದಿನ ಚುನಾವಣೆಗೆ ಟಿಕೆಟ್, ಬಿಜೆಪಿ-ಜೆಡಿಎಸ್ ಶಾಸಕರ ಅಭಿವೃದ್ಧಿಗೆ ಅನುದಾನದ ಭರವಸೆ ಕೊಟ್ಟಿರೋ ಮಾತು ರಾಜಕೀಯ ಪಡಸಾಲೆಯಲ್ಲಿ ಹರಿದಾಡ್ತಿದೆ. ಕೇಸರಿ-ದಳ ಶಾಸಕರಿಗೆ ಸಕಲ ರೀತಿಯಲ್ಲಿ ಸಹಾಯ ಹಸ್ತ ಭರವಸೆ ಕಾರಣಕ್ಕೆ ಕ್ರಾಸ್ ವೋಟಿಂಗ್ ಆಗಿರೋದಾಗಿ ತಿಳಿದುಬಂದಿದೆ.

ಇನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರು ಸಂಖ್ಯಾಬಲ ಇದ್ದದಿದ್ರೂ ಜೆಡಿಎಸ್​ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದರು. ಹೀಗೆ ತಮ್ಮದೇ ಪಕ್ಷದ ಶಾಸಕರ ನಿಷ್ಠೆಯನ್ನ ಸತ್ವಪರೀಕ್ಷೆಗೆ ಒಳಪಡಿಸಿದ್ದರು. ಆದ್ರೆ ಒಂದಿಬ್ಬರು ಶಾಸಕರು ಅಡ್ಡಮತದಾನ ಮಾಡೋ ಬಗ್ಗೆ ಹೆಚ್​ಡಿಕೆಗೆ ನಿರೀಕ್ಷೆ ಇತ್ತಂತೆ. ಆದ್ರೆ ಮೂಲಗಳ ಮಾಹಿತಿ ಪ್ರಕಾರ ನಾಲ್ಕೈದು ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಡ್ಡಮತದಾನ ಮಾಡಿದ್ದಾರೆ. ಈ ಬೆಳವಣಿಗೆ ಹೆಚ್​ಡಿಕೆಗೆ ಬೇಸರ ತರಿಸಿದೆ. ಹೀಗಾಗಿ ಕುಮಾರಸ್ವಾಮಿ ಅಡ್ಡಮತದಾನವನ್ನ ನಂಬಿಕೆ ದ್ರೋಹ ಎಂದು ವಿಶ್ಲೇಷಣೆ ಮಾಡಿದ್ದಾರೆ.

ಪರಿಷತ್ ಪ್ರತಿಷ್ಠೆಯ ಕದನದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ರಾಜ್ಯ ಕಾಂಗ್ರೆಸ್​ನೊಳಗೆ ಆತಂರಿಕ ಕಲಹ ಅಂತಿದ್ದ ವಿಪಕ್ಷಗಳಲ್ಲೇ ದೊಡ್ಡ ಬಿರುಕು ಇರೋದು ಬಟಾಬಯಲಾಗಿದೆ. ಮೈತ್ರಿಯೊಳಗಿನ ಅಸಮಾಧಾನ, ಗೊಂದಲ ಹಾಗೂ ಪಕ್ಷದ ಮೇಲಿನ ಬೇಸರದ ಬಗ್ಗೆ ಸದ್ಯ ರಾಜಕೀಯ ವಿಶ್ಲೇಷಣೆ ನಡೀತಿದೆ.

ಶಿಸ್ತು ಕ್ರಮಕೈಗೊಳ್ಳುತ್ತಾರಾ ಕುಮಾರಸ್ವಾಮಿ?

ಒಂದಿಬ್ಬರು ಶಾಸಕರು ಅಡ್ಡಮತದಾನ ಮಾಡಬಹುದು ಎಂದು ಕುಮಾರಸ್ವಾಮಿ ಅವರು ಮೊದಲೇ ನಿರೀಕ್ಷೆ ಮಾಡಿದ್ದರು. ಆದ್ರೆ, ನಿರೀಕ್ಷೆಗಿಂತ ಹೆಚ್ಚಿನ ಶಾಸಕರು ಅಡ್ಡಮತದಾನ ಮಾಡಿರುವುದು ಕುಮಾರಸ್ವಾಮಿಯ ಆಕ್ರೋಶ, ಬೇಸರಕ್ಕೆ ಕಾರಣವಾಗಿದೆ. ಹೀಗಾಗಿ ಕುಮಾರಸ್ವಾಮಿ ಅವರು JDS ಶಾಸಕಾಂಗ ಸಭೆ ಕರೆದಿದ್ದಾರೆ. ಇಂದು (ಜೂನ್ 19) ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಎಚ್​.ಡಿ.ಕುಮಾರಸ್ವಾಮಿ ನಿವಾಸದಲ್ಲಿ ಶಾಸಕಾಂಗ ಸಭೆ ನಡೆಯಲಿದೆ. ಈ ಮೂಲಕ ಅಡ್ಡ ಮತದಾನ ಮಾಡಿದವರ ಪತ್ತೆ ಕೆಲಸ ನಡೆದಿದೆ. ಅಲ್ಲದೇ ಅಡ್ಡ ಮತದಾನ ಮಾಡಿದವರ ವಿರುದ್ಧ ಶಿಸ್ತು ಕ್ರಮದ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಕೆಲ ಶಾಸಕರ ತಲೆದಂಡವಾಗುವ ಸಾಧ್ಯತೆಗಳಿವೆ.

ನಾಯಕರನ್ನು ಭೇಟಿ ಮಾಡುತ್ತಿರುವ ಶಾಸಕರು

ಅಡ್ಡಮತದಾನ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಿಜೆಪಿಯ ಕೆಲ ಶಾಸಕರು, ತಮ್ಮ ನಾಯಕರುಗಳನ್ನ ಭೇಟಿ ಮಾಡುತ್ತಿದ್ದಾರೆ. ಬೈರತಿ ಬಸವರಾಜ್, ಚಂದ್ರು ಲಮಾಣಿ ಹಾಗೂ ಕೃಷ್ಣಾ ನಾಯ್ಕ್  ವಿರುದ್ಧ ಅಡ್ಡಮತದಾನ ಆರೋಪ ಕೇಳಿಬಂದಿದೆ. ಹೀಗಾಗಿ ಈ ಎಲ್ಲಾ ಶಾಸಕರು ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದು, ನಾವು ನಿಗದಿ ಮಾಡಿದ್ದ ನಾಲ್ಕ ಮತಗಳು ಜೆಡಿಎಸ್ ಗೆ ಹೋಗಿವೆ. ದುರ್ಯೋಧನ ಐಹೊಳೆ, ಚಂದ್ರು ಲಮಾಣಿ, ಕೃಷ್ಣಾ ನಾಯ್ಕ್ ಮತ್ತು ಯತ್ನಾಳ್ ಹೆಸರು  ಮಾಧ್ಯಮದಲ್ಲಿ ಕೆಲವು ಬರುತ್ತಿರುವ ಕಾರಣ ಕೃಷ್ಣಾ ನಾಯ್ಕ್ ಮತ್ತು ಚಂದ್ರು ಲಮಾಣಿ ಬೇಸರಗೊಂಡಿದ್ದಾರೆ. ನಮ್ಮ ವರದಿ ಬರುವವರೆಗೂ ಯಾರ ಮೇಲೂ ಅನುಮಾನ ವ್ಯಕ್ತಪಡಿಸುವುದಿಲ್ಲ. ಯಾರ ಮೇಲೂ ಅನುಮಾನ ಪಡುವುದು ಬೇಡ. ವರದಿ ಬಂದ ಮೇಲೆ ನಾವೇ ಅಡ್ಡ ಮತದಾನ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ ಪರಿಷತ್ ಚುನಾವಣೆಯಲ್ಲಿ  ನಡೆದ ಅಡ್ಡಮತದಾನ ದೋಸ್ತಿ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್​​ನಲ್ಲಿ ಮಹತ್ವ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಅಂತಿಮವಾಗಿ ಅಡ್ಡಮತದಾನ ಮಾಡಿದವರನ್ನು  ಪತ್ತೆ ಮಾಡಿ ಯಾವ ಕ್ರಮಕೈಗೊಳ್ಳುತ್ತವೆ ಎಂದು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜಿಯೋ ಐಪಿಒಗೆ ಸಜ್ಜು; 27 ಕೋಟಿ ಹೊಸ ಈಕ್ವಿಟಿ ಷೇರುಗಳ ಹಂಚಿಕೆ; ಆರ್​​ಐಎಲ್ ಎಜಿಎಂ ಸಭೆಯಲ್ಲಿ ಅಂಬಾನಿ ಮಾಹಿತಿ – Kannada News | Jio Platforms IPO, board approval, DRHP to be filed today, 27 crore equity shares fresh issue, says RIL

ರಿಲಯನ್ಸ್ ಜಿಯೋImage Credit source: Avishek Das/SOPA images/LightRocket via Getty Images

ನವದೆಹಲಿ, ಜೂನ್ 19: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ತನ್ನ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್​ನ (Jio Platforms) ಐಪಿಒ (IPO) ಆಗಲಿರುವುದನ್ನು ಖಚಿತಪಡಿಸಿದೆ. ಆರ್​ಐಎಲ್​ನ ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಛೇರ್ಮನ್ ಮುಕೇಶ್ ಅಂಬಾನಿ ಅವರು ಜಿಯೋ ಪ್ಲಾಟ್​ಫಾರ್ಮ್ಸ್​ನ ಐಪಿಒಗೆ ಇವತ್ತು ಸೆಬಿ ಬಳಿ ಡಿಎಚ್​ಆರ್​ಪಿಯನ್ನು ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ. ಐಪಿಒಗೆ ರಿಲಯನ್ಸ್ ಮಂಡಳಿಯ ಅನುಮೋದನೆ ಸಿಕ್ಕಿರುವುದಾಗಿಯೂ ಹೇಳಿದ್ದಾರೆ.

ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒ ವಿವರ

ಜಿಯೋ ಪ್ಲಾಟ್‌ಫಾರ್ಮ್ಸ್ ತನ್ನ ಐಪಿಒ ಮೂಲಕ ಮಾರುಕಟ್ಟೆಗೆ ಹೊಸದಾಗಿ 27 ಕೋಟಿ ಈಕ್ವಿಟಿ ಷೇರುಗಳನ್ನು ಹೊರತರಲಿದೆ. ಇದು ಸಂಪೂರ್ಣವಾಗಿ ‘ಫ್ರೆಶ್ ಇಶ್ಯೂ’ (Fresh Issue) ಆಗಿರಲಿದೆ. ಪ್ರತೀ ಷೇರಿನ ಮುಖಬೆಲೆ 10 ರೂ ಇರುತ್ತದೆ.

ಇದನ್ನೂ ಓದಿ: Reliance AGM 2026: ರಿಲಯನ್ಸ್ ಇಂಡಸ್ಟ್ರೀಸ್​ನಿಂದ ಭರ್ಜರಿ ಬಂಡವಾಳ ವೆಚ್ಚ; ಒಂದು ವರ್ಷದಲ್ಲಿ 1.44 ಲಕ್ಷ ಕೋಟಿ ರೂ ವೆಚ್ಚ

ಫ್ರೆಶ್ ಇಶ್ಯೂ ಎಂದರೇನು?: ಇಲ್ಲಿ ಹಳೆಯ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಾಟ ಮಾಡುತ್ತಿಲ್ಲ (OFS ಇಲ್ಲ). ಬದಲಾಗಿ, ಕಂಪನಿಯು ನೇರವಾಗಿ ಹೊಸ ಷೇರುಗಳನ್ನು ಸೃಷ್ಟಿಸಿ ಮಾರುಕಟ್ಟೆಗೆ ಬಿಡುತ್ತಿದೆ. ಇದರಿಂದ ಬರುವ ಹಣವನ್ನು ಕಂಪನಿಯು ತನ್ನ ಮುಂದಿನ ಅಭಿವೃದ್ಧಿ ಕಾರ್ಯಗಳು ಮತ್ತು ಕಾರ್ಯಾಚರಣೆಯ ಅಗತ್ಯಗಳಿಗಾಗಿ ಬಳಸಿಕೊಳ್ಳಲಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಈ ಐಪಿಒಗೆ ಸಂಬಂಧಿಸಿದಂತೆ ತನ್ನ ನಿಯಂತ್ರಕ ದಾಖಲೆಗಳಲ್ಲಿ ಈ ಮಾಹಿತಿಯನ್ನು ಸ್ಪಷ್ಟಪಡಿಸಿದೆ.

ಜಿಯೋ ಐಪಿಒದಿಂದ ಏನು ನಿರೀಕ್ಷಿಸಬಹುದು?

27 ಕೋಟಿ ಷೇರುಗಳನ್ನು ವಿತರಿಸುವ ಮೂಲಕ ಜಿಯೋ ಪ್ಲಾಟ್‌ಫಾರ್ಮ್ಸ್ ಭಾರಿ ಪ್ರಮಾಣದ ಬಂಡವಾಳವನ್ನು ಸಂಗ್ರಹಿಸಲು ಸಜ್ಜಾಗಿದೆ. ಒಂದು ಅಂದಾಜು ಪ್ರಕಾರ ಈ ಐಪಿಒ ಮೌಲ್ಯ 37,000 ಕೋಟಿ ರೂ ಇರುವ ಅಂದಾಜಿದೆ. ಇದು ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಎನ್ನುವ ದಾಖಲೆ ಬರೆಯಬಹುದು.

ಇದನ್ನೂ ಓದಿ: ಅಕ್ಸೆಂಚರ್ ಕೊಟ್ಟ ಒಂದು ರಿಪೋರ್ಟ್​ಗೆ ಭಾರತದ ಷೇರುಬಜಾರು ಅಲ್ಲೋಲಕಲ್ಲೋಲ; ಶುಕ್ರವಾರ 2 ಲಕ್ಷ ಕೋಟಿ ರೂ ನಷ್ಟ

ಮಾರುಕಟ್ಟೆಯ ಮೇಲಿನ ಪರಿಣಾಮ

ಜಿಯೋದಂತಹ ಬೃಹತ್ ಸಂಸ್ಥೆಯ ಐಪಿಒ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಮೂಡಿಸುವ ನಿರೀಕ್ಷೆಯಿದೆ. ಇದು ಡಿಜಿಟಲ್ ಮತ್ತು ಟೆಲಿಕಾಂ ವಲಯದ ಹೂಡಿಕೆದಾರರ ಪಾಲಿಗೆ ಒಂದು ಪ್ರಮುಖ ಅವಕಾಶವಾಗಲಿದೆ. ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ ಮತ್ತು ಡಿಜಿಟಲ್ ಸೇವೆಗಳ ಬೇಡಿಕೆ ಹೆಚ್ಚುತ್ತಿರುವುದರಿಂದ, ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈ ಐಪಿಒ ಮೇಲೆ ಹೂಡಿಕೆದಾರರು ಮತ್ತು ಮಾರುಕಟ್ಟೆ ವಿಶ್ಲೇಷಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version