Headlines

ಬಾಕ್ಸ್​ ಆಫೀಸ್​​ನಲ್ಲಿ ಸುನಾಮಿ ಎಬ್ಬಿಸಿದ ‘ದೃಶ್ಯಂ 3’; ಮೊದಲ ದಿನ ಭರ್ಜರಿ ಕಲೆಕ್ಷನ್ – Kannada News | Drishyam 3 Box Office: Mohanlal’s Thriller Creates Storm, Earns 43.37 Cr Global on Day 1

ಮಲಯಾಳಂ ಚಿತ್ರರಂಗದಲ್ಲಿ ‘ದೃಶ್ಯಂ 3’ ಚಿತ್ರಕ್ಕೆ ಅದರದ್ದೇ ಆದ ದೊಡ್ಡ ಅಭಿಮಾನಿ ವರ್ಗ ಇದೆ. ಹಿರಿಯ ನಟ ಮೋಹನ್‌ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ದೃಶ್ಯಂ 3’ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಜಾರ್ಜ್‌ಕುಟ್ಟಿ ಮತ್ತು ಆತನ ಕುಟುಂಬದ ರಹಸ್ಯಗಳ ಸುತ್ತ ಹೆಣೆಯಲಾದ ಈ ಚಿತ್ರವನ್ನು ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ. ಮೊದಲ ದಿನದ ಕಲೆಕ್ಷನ್ ವಿವರ: ದೇಶಾದ್ಯಂತ ಒಟ್ಟು 5,506 ಶೋಗಳ…

Read More

ಎಲ್ಲಾ ಮದರಸಾಗಳಲ್ಲಿ ಇನ್ನುಮುಂದೆ ವಂದೇ ಮಾತರಂ ಹಾಡುವುದು ಕಡ್ಡಾಯ – Kannada News | West Bengal Introduces Mandatory Vande Mataram Recitation in Madrasas

ಕೋಲ್ಕತ್ತಾ, ಮೇ 22: ಪಶ್ಚಿಮ ಬಂಗಾಳದಲ್ಲಿ ತರಗತಿಗಳು ಪ್ರಾರಂಭವಾಗುವ ಮೊದಲು ಪ್ರಾರ್ಥನಾ ಸಭೆಯಲ್ಲಿ ವಂದೇ ಮಾತರಂ(Vande Mataram) ಹಾಡುವುದು ಈಗ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಮಾನ್ಯತೆ ಪಡೆದ ಮದರಸಾಗಳಲ್ಲಿ ಕಡ್ಡಾಯವಾಗಿದೆ. ರಾಜ್ಯದ ಮದರಸಾ ಶಿಕ್ಷಣ ನಿರ್ದೇಶನಾಲಯವು ಈ ನಿಟ್ಟಿನಲ್ಲಿ ಆದೇಶ ಹೊರಡಿಸಿದ್ದು, ಇದು ತಕ್ಷಣದಿಂದ ಜಾರಿಗೆ ಬರುತ್ತದೆ. ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ ಸಚಿವ ಖುದಿರಾಮ್ ತುಡು ಮಾತನಾಡಿ, ಬಂಗಾಳದಲ್ಲಿ ಅನೇಕ ಸರ್ಕಾರಿ ಶಾಲೆಗಳಲ್ಲಿ ಸಂತಾಲಿ ಭಾಷೆಯಲ್ಲಿ ಬೋಧನೆ ನಡೆಸಲಾಗುತ್ತದೆ. ಆ ಶಾಲೆಗಳಲ್ಲಿ ವಂದೇ…

Read More

ಸಫಾರಿಗೆ ತೆರಳಿದ ಪ್ರವಾಸಿಗರ ಮುಂದೆ ಸಕ್ಕತ್ತಾಗಿ ಪೋಸ್ ಕೊಟ್ಟ ಹುಲಿ! – Kannada News | Tigress Sighted at PG Palya Safari in MM Hills Wildlife Sanctuary Goes Viral

ಚಾಮರಾಜನಗರ, ಮೇ 22: ಮಲೆ ಮಹದೇಶ್ವರ ವನ್ಯಜೀವಿಧಾಮದ ಪಿಜಿ ಪಾಳ್ಯ ಸಫಾರಿ ಕೇಂದ್ರದಲ್ಲಿ ಪ್ರವಾಸಿಗರಿಗೆ ಅಚ್ಚರಿಯೊಂದು ಕಾದಿತ್ತು. ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಬೃಹತ್ ಹೆಣ್ಣು ಹುಲಿಯೊಂದು ರಾಜಗಾಂಭೀರ್ಯದಿಂದ ದರ್ಶನ ನೀಡಿದೆ. ಇತ್ತೀಚಿನ ದಿನಗಳಲ್ಲಿ ಪಿಜಿ ಪಾಳ್ಯ ಸಫಾರಿಯಲ್ಲಿ ಈ ಹೆಣ್ಣುಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ವ್ಯಾಘ್ರ ಮುಕ್ತವಾಗಿ ಸಂಚರಿಸುತ್ತಿರುವ ಈ ಅಪರೂಪದ ದೃಶ್ಯವನ್ನು ಹವ್ಯಾಸಿ ಛಾಯಗ್ರಾಹಕ ಹೇಮಂತ್ ಕುಮಾರ್ ಅವರು ತಮ್ಮ ಕ್ಯಾಮರಾದಲ್ಲಿ ಅತ್ಯಂತ ಸುಂದರವಾಗಿ ಸೆರೆಹಿಡಿದಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಿಜಿ…

Read More

ರಹಸ್ಯವಾಗಿ ಮದುವೆಯಾದರೇ ನಟಿ ಕಂಗನಾ ರಣಾವತ್? ವೈರಲ್ ವಿಡಿಯೋದ ಅಸಲಿಯತ್ತೇನು? – Kannada News | Kangana Ranaut’s ‘Secret Marriage’ Viral Video: Truth Revealed About Queen 2 Look

ಬಾಲಿವುಡ್‌ನ ವಿವಾದಾತ್ಮಕ ನಟಿ ಹಾಗೂ ರಾಜಕಾರಣಿ ಕಂಗನಾ ರಣಾವತ್ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಇತ್ತೀಚೆಗೆ ಕಂಗನಾ ಅವರ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಅವರು ಕುತ್ತಿಗೆಗೆ ಮಂಗಲಸೂತ್ರ ಮತ್ತು ಕೈಗಳಲ್ಲಿ ಹಸಿರು ಬಳೆಗಳನ್ನು ಧರಿಸಿ ಕಾಣಿಸಿಕೊಂಡಿದ್ದಾರೆ. ಭದ್ರತಾ ಸಿಬ್ಬಂದಿಯೊಂದಿಗೆ ನಡೆದು ಹೋಗುತ್ತಿರುವ ಅವರ ಈ ‘ಮದುಮಗಳ’ ಲುಕ್ ಕಂಡ ಅಭಿಮಾನಿಗಳು, ಕಂಗನಾ (Kangana) ಯಾರಿಗೂ ತಿಳಿಯದಂತೆ ಸಪ್ತಪದಿ ತುಳಿದಿದ್ದಾರಾ? ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ವೈರಲ್ ವಿಡಿಯೋದ ಹಿಂದಿನ ಸತ್ಯ…

Read More

ಮಗಳು ಆರಾಧ್ಯಾ ಜೊತೆ ಕಾನ್ ಸಿನಿಮೋತ್ಸವಕ್ಕೆ ತೆರಳಿದ ಐಶ್ವರ್ಯಾ ರೈ – Kannada News | Cannes 2026: Aishwarya Rai and Aaradhya, Disha Madan’s Eco Chic Style Steal Spotlight

ವಿಶ್ವದ ಅತ್ಯಂತ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾದ ‘ಕಾನ್ ಚಲನಚಿತ್ರೋತ್ಸವ 2026’ (Cannes) ಫ್ರಾನ್ಸ್‌ನ ಕರಾವಳಿ ನಗರವಾದ ಕಾನ್‌ನಲ್ಲಿ ಅದ್ಧೂರಿಯಾಗಿ ಜರುಗುತ್ತಿದೆ. ಮೇ 12 ರಂದು ಆರಂಭವಾಗಿರುವ ಈ 79ನೇ ಆವೃತ್ತಿಯ ಸಿನಿಮೋತ್ಸವವು ಮೇ 23ರವರೆಗೆ ನಡೆಯಲಿದ್ದು, ಜಗತ್ತಿನಾದ್ಯಂತದ ಸಿನಿಮಾ ತಾರೆಯರು ಮತ್ತು ಫ್ಯಾಷನ್ ಪ್ರಿಯರ ಪ್ರಮುಖ ಆಕರ್ಷಣೆಯಾಗಿದೆ. ಭಾರತದ ಪರವಾಗಿ ಹಲವು ಪ್ರಮುಖ ಸೆಲೆಬ್ರಿಟಿಗಳು ಈ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ಇದೀಗ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಪುತ್ರಿ ಆರಾಧ್ಯಾ ಬಚ್ಚನ್…

Read More

Tv9 Kannada News Live: ಮಳೆಗೆ ಬೆಂಗಳೂರಲ್ಲಿ ಸಾಲು ಸಾಲು ಅವಾಂತರ, ಬಂಗಾಳ ಸಿನಿ ತಾರೆಯರಿಗೆ ಶಾಕ್​​; ಇಲ್ಲಿವೆ ಈ ಹೊತ್ತಿನ ಟಾಪ್​​ ಸುದ್ದಿಗಳು – Kannada News | Tv9 Kannada News Live: Bengaluru Rain Crushes Cars; FIR Against Bengali Actors; Vijay’s Cabinet Expansion Today

ಕಾರುಗಳ ಮೇಲೆ ಬಿದ್ದ ಮರImage Credit source: Tv9 Kannada ಬೆಂಗಳೂರು, ಮೇ 22: ಬೆಂಗಳೂರಲ್ಲಿ (Bengaluru) ನಿನ್ನೆ (22) ಸುರಿದ ಧಾರಾಕಾರ ಮಳೆಯ ಅಬ್ಬರಕ್ಕೆ ನಗರದಲ್ಲಿ ಸಾಲು ಸಾಲು ಅವಾಂತರಗಳು ನಡೆದಿವೆ. ಗಾಳಿ ಮಳೆಯ ಹಿನ್ನೆಲೆ ಮಹಾಲಕ್ಷ್ಮಿ ಲೇಔಟ್​​ನ ಪೈಪ್ ಲೈನ್ ರಸ್ತೆಯಲ್ಲಿ ಮರ ಧರೆಗುರುಳಿದ ಪರಿಣಾಮ ರಸ್ತೆಬದಿ ನಿಲ್ಲಿಸಿದ್ದ ಮೂರು ಕಾರುಗಳು ಸಂಪೂರ್ಣ ಜಖಂ ಆಗಿವೆ. ಬಳಿಕ ಬೃಹತ್​​ ಗಾತ್ರದ ಮರವನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆರವು ಮಾಡಿದ್ದಾರೆ. ಹಲವೆಡೆ ರಸ್ತೆಯ ಮೇಲೆಯೇ ನದಿಯಂತೆ…

Read More

Bengaluru Air Quality: ವರುಣನ ಕೃಪೆಯಿಂದ ಬೆಂಗಳೂರಲ್ಲಿ ಗಣನೀಯವಾಗಿ ಸುಧಾರಿಸಿದ ವಾಯು ಗುಣಮಟ್ಟ! – Kannada News | Bengaluru AQI Today: Air Quality Improves Across Karnataka Cities Due to Rain

ವರುಣನ ಕೃಪೆಯಿಂದ ಬೆಂಗಳೂರಲ್ಲಿ ಗಣನೀಯವಾಗಿ ಸುಧಾರಿಸಿದ ವಾಯು ಗುಣಮಟ್ಟ! ಬೆಂಗಳೂರು, ಮೇ 22: ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಮುಂಗಾರು ಪೂರ್ವ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ವಾತಾವರಣದಲ್ಲಿದ್ದ ಧೂಳಿನ ಕಣಗಳು ಗಣನೀಯವಾಗಿ ಕಡಿಮೆಯಾಗಿವೆ. ಇದರ ಪರಿಣಾಮವಾಗಿ ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ (AQI) ಗಣನೀಯವಾಗಿ ಸುಧಾರಿಸಿದ್ದು, ಬಹುತೇಕ ಕಡೆಗಳಲ್ಲಿ ‘ಗ್ರೀನ್ ಜೋನ್’ ದಾಖಲಾಗಿದೆ. ಮುಖ್ಯಾಂಶಗಳು ಮಳೆಯ ಹಿನ್ನೆಲೆ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಗಣನೀಯವಾಗಿ ಸುಧಾರಿಸಿದೆ. ರಾಜಧಾನಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ…

Read More

ಆ ಮ್ಯಾಜಿಕ್ ನಡೆದರೆ ಮಾತ್ರ ಹೈದರಾಬಾದ್​​ಗೆ ಚಾನ್ಸ್; ಟಾಪ್ 2ನಲ್ಲಿರಲು ಆರ್​​ಸಿಬಿ ಏನು ಮಾಡಬೇಕು? – Kannada News | IPL Playoffs scenario: RCB vs SRH The Crucial Battle for Top 2 and NRR

ಐಪಿಎಲ್‌ನ ಪ್ಲೇಆಫ್ ರೇಸ್ ರೋಚಕ ಹಂತ ತಲುಪಿದ್ದು, ಟಾಪ್-2 ಸ್ಥಾನವನ್ನು ಅಲಂಕರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಗುಜರಾತ್ ಟೈಟನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಶುಕ್ರವಾರ ಹೈದರಾಬಾದ್‌ನಲ್ಲಿ ನಡೆಯಲಿರುವ ಇವೆರಡೂ ತಂಡಗಳ ನಡುವಿನ ಮುಖಾಮುಖಿ ಪಂದ್ಯವೇ ಈ ಸ್ಥಾನವನ್ನು ನಿರ್ಧರಿಸಲಿದೆ. ಗುರುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ 89 ರನ್‌ಗಳ ಬೃಹತ್ ಜಯ ದಾಖಲಿಸಿದೆ. ಈ ಭರ್ಜರಿ ಗೆಲುವಿನೊಂದಿಗೆ ಜಿಟಿ ತಂಡ +0.695…

Read More

Video: ಆಗ್ರಾ-ಲಕ್ನೋ ಎಕ್ಸ್​ಪ್ರೆಸ್​ ವೇಯಲ್ಲಿ ಬಸ್​-ಟ್ಯಾಂಕರ್​ ನಡುವೆ ಡಿಕ್ಕಿ, ಇಬ್ಬರು ಸಜೀವದಹನ, 15ಕ್ಕೂ ಅಧಿಕ ಮಂದಿಗೆ ಗಾಯ – Kannada News | Bus Tanker Collision on Agra Lucknow Expressway Leaves Two Dead

ಲಕ್ನೋ, ಮೇ 22: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಶುಕ್ರವಾರ ಬೆಳಗಿನ ಜಾವ ಬಸ್ಸೊಂದು ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಬಸ್ ಚಾಲಕ ಸೇರಿ ಇಬ್ಬರು ಸಜೀವದಹನವಾಗಿದ್ದಾರೆ. 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕಾನ್ಪುರದಿಂದ ಗುರುಗ್ರಾಮಕ್ಕೆ ಹೋಗುತ್ತಿದ್ದ ಖಾಸಗಿ ಡಬಲ್ ಡೆಕ್ಕರ್ ಬಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್‌ಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಪ್ರಯಾಣಿಕರಲ್ಲಿ ವ್ಯಾಪಕ ಭೀತಿ ಉಂಟಾಗಿದೆ.ಮಾಹಿತಿ ತಿಳಿದ ಕೂಡಲೇ ಪೊಲೀಸರು, ಅಗ್ನಿಶಾಮಕ ದಳ ಮತ್ತು ಪರಿಹಾರ ತಂಡಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿಯನ್ನು ನಿಯಂತ್ರಣಕ್ಕೆ…

Read More

ಅಮೆರಿಕದಲ್ಲಿ ಬಂದೂಕುಧಾರಿಗಳಿಂದ ಎರಡು ಪ್ರತ್ಯೇಕ ಗುಂಡಿನ ದಾಳಿ, ಪೊಲೀಸರು ಸೇರಿ 25 ಮಂದಿ ಸಾವು – Kannada News | Multiple Gun Attacks in Honduras Leave Dozens Dead

ವಾಷಿಂಗ್ಟನ್, ಮೇ 22: ಅಂತಾರಾಷ್ಟ್ರೀಯ ಮಾದಕವಸ್ತು ಜಾಲ ಹಾಗೂ ಗ್ಯಾಂಗ್ ವಾರ್​ಗಳಿಂದ ಸದಾ ಸುದ್ದಿಯಲ್ಲಿರುವ ಹೊಂಡುರಾಸ್ ಕರಾವಳಿ ಪ್ರದೇಶದಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಎರಡು ಪ್ರತ್ಯೇಕ ಘಟನೆಯಲ್ಲಿ 6 ಮಂದಿ ಪೊಲೀಸರು ಸೇರಿ 25 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೊಂಡುರಾಸ್ ಎಂಬುದು ಮಧ್ಯ ಅಮೆರಿಕ(America)ದಲ್ಲಿರುವ ಮತ್ತೊಂದು ದೇಶವಾಗಿದೆ. ಮೊದಲ ಆಘಾತಕಾರಿ ಘಟನೆ ಉತ್ತರ ಹೊಂಡುರಾಸ್‌ನ ಟ್ರುಜಿಲ್ಲೊದಲ್ಲಿ ನಡೆದಿದೆ. ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಹಕ್ಕುಗಳಿಗಾಗಿ ದಶಕಗಳಿಂದ ಸಂಘರ್ಷ ನಡೆಯುತ್ತಿರುವ ಈ ಪ್ರದೇಶದಲ್ಲಿ, ಬಂದೂಕುಧಾರಿಗಳು ಏಕಾಏಕಿ ನುಗ್ಗಿ…

Read More