Guru Sanchara 2026: ಗುರು ಸಂಚಾರ ಕಟಕ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? – Kannada News | Cancer Horoscope 2026: Dr. Basavaraj Gurujis Predictions for Jupiters Transit

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಕರ್ಕಾಟಕ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. 2026ರ ಗುರು ಸಂಚಾರವು ಕರ್ಕಾಟಕ ರಾಶಿಯವರಿಗೆ ಮಹತ್ವದ ಫಲಗಳನ್ನು ತರಲಿದೆ. ಗುರುವು ಉಚ್ಚ ಸ್ಥಾನದಲ್ಲಿ ಸಂಚರಿಸುವುದರಿಂದ ಇದು ಶುಭಕಾಲವಾಗಿದೆ. ಮಾನಸಿಕ ಶಾಂತಿ, ಗೌರವ, ಕೀರ್ತಿ ಮತ್ತು ಅಧಿಕಾರ ಪ್ರಾಪ್ತಿಯಾಗಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ ಹಾಗೂ ಪ್ರೀತಿ ಪ್ರೇಮ ವ್ಯವಹಾರಗಳಲ್ಲಿ ಉತ್ತಮ ಫಲ ದೊರೆಯಲಿದೆ. ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ.

ವ್ಯಾಪಾರಸ್ಥರಿಗೆ ಈ ಅವಧಿ ಉತ್ತಮವಾಗಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಭೂಮಿ ಯೋಗ ಹಾಗೂ ವಿದೇಶ ಪ್ರಯಾಣದ ಅವಕಾಶಗಳಿವೆ. ಮಹಿಳೆಯರಿಗೆ ಶುಭ ಫಲಗಳಿದ್ದು, ಸಂಸ್ಥೆಗಳನ್ನು ಸ್ಥಾಪಿಸಲು ಇದು ಸಕಾಲ. ಹಳೆಯ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಆದರೆ, ಮೇಲಾಧಿಕಾರಿಗಳೊಂದಿಗೆ ಹುಷಾರಾಗಿರಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ಅರ್ಧಕ್ಕೆ ನಿಂತ ಮನೆ ಕಟ್ಟುವ ಕೆಲಸದಲ್ಲಿ ಕೆಲವು ದುಷ್ಟ ಶಕ್ತಿಗಳ ಪ್ರಭಾವದ ಸಾಧ್ಯತೆಗಳಿರುವುದರಿಂದ ಎಚ್ಚರಿಕೆ ಅಗತ್ಯ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಲಿಕಲ್ಲು ಸಹಿತ ಗಾಳಿ ಮಳೆಗೆ ಪತರುಗುಟ್ಟಿದ ಬೆಂಗಳೂರು: ಮರಬಿದ್ದು ಕಾರುಗಳು ಜಖಂ, ಅಪಾರ ಹಾನಿ – Kannada News | Hailstorm Havoc in Bengaluru: Trees Uprooted, Cars Damaged, Metro Services Affected

ಬೆಂಗಳೂರು, ಮೇ 22: ನಗರದಲ್ಲಿ ಸುರಿದ ಭಾರಿ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯಿಂದ ವ್ಯಾಪಕ ಅನಾಹುತಗಳು ಸೃಷ್ಟಿಯಾಗಿವೆ. ಹಲವೆಡೆ ಮರಗಳು ಬುಡ ಸಮೇತ ಉರುಳಿ ಬಿದ್ದು ವಾಹನಗಳಿಗೆ ಹಾನಿ ಉಂಟುಮಾಡಿವೆ. ಮಹಾಲಕ್ಷ್ಮಿ ಲೇಔಟ್‌ನ ಸಿದ್ದಾರೂಢ ಪಾರ್ಕ್ ಬಳಿ ಮೂರು ಕಾರುಗಳು ಜಖಂಗೊಂಡರೆ, ರಾಜಾಜಿನಗರದ ಶಂಕರಮಠ ರಸ್ತೆ ಮತ್ತು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಮರ ಬಿದ್ದು ಐದಕ್ಕೂ ಹೆಚ್ಚು ಕಾರುಗಳಿಗೆ ಹಾನಿಯಾಗಿದೆ. ಶಂಕರಮಠ ರಸ್ತೆಯಲ್ಲಿ ಮರ ಬಿದ್ದ ಕಾರಣ 15 ಬಿಎಂಟಿಸಿ ಬಸ್‌ಗಳು ಎರಡು ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಲ್ಲಬೇಕಾಯಿತು. ವಿದ್ಯುತ್ ಕಂಬಗಳು ಉರುಳಿ, ಮೆಟ್ರೋ ಸಂಚಾರದಲ್ಲೂ ವ್ಯತ್ಯಯ ಉಂಟಾಗಿತ್ತು. ಯುಬಿ ಸಿಟಿ ಬಳಿ ರಸ್ತೆ ಕುಸಿತದಿಂದ ಕಾರು ಸಿಲುಕಿಕೊಂಡಿತ್ತು. ಈ ನಡುವೆ ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಬೆಂಗಳೂರು ಮಹಾಜನತೆ ಗಮನಕ್ಕೆ: ಈ ರೋಡ್‌ನಲ್ಲಿ ಸಂಚರಿಸುವ ಮುನ್ನ ಯೋಚಿಸಿ; 1 ಗಂಟೆಯ ಜರ್ನಿ ಇನ್ಮುಂದೆ 2 ಗಂಟೆ! – Kannada News | ORR Construction in Bengaluru: Silk Board KR Puram Traffic Chaos Expected for 9 Months

ಬೆಂಗಳೂರು, ಮೇ.22: ಸಿಲಿಕಾನ್ ಸಿಟಿಯ ಅತ್ಯಂತ ಪ್ರಮುಖ ಹಾಗೂ ಸದಾ ವಾಹನ ದಟ್ಟಣೆಯಿಂದ ಕೂಡಿರುವ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂವರೆಗಿನ ಹೊರವರ್ತುಲ ರಸ್ತೆಯಲ್ಲಿ (ORR) ದೊಡ್ಡ ಮಟ್ಟದ ಬದಲಾವಣೆ ಕಾಣಲಿದೆ. ಈ ವ್ಯಾಪ್ತಿಯ 17.1 ಕಿಲೋಮೀಟರ್ ಉದ್ದದ ಅಸ್ತಿತ್ವದಲ್ಲಿರುವ ಡಾಂಬರು ರಸ್ತೆಯನ್ನು ತೆಗೆದು, ಹೆಚ್ಚು ಬಾಳಿಕೆ ಬರುವ ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸಲು ಬಿಬಿಎಂಪಿ ಮತ್ತು ಸರ್ಕಾರ ನಿರ್ಧರಿಸಿದೆ. ಬರೋಬ್ಬರಿ 378 ಕೋಟಿ ರೂ. ವೆಚ್ಚದ ಈ ಬೃಹತ್ ಯೋಜನೆಗೆ ಟೆಂಡರ್ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ.

ಟ್ರಾಫಿಕ್‌ನಲ್ಲಿ ಸಿಲುಕಲಿವೆ 450ಕ್ಕೂ ಹೆಚ್ಚು ಐಟಿ ಕಂಪನಿಗಳು!

ಈ ಹೊರವರ್ತುಲ ರಸ್ತೆಯ ಕಾರಿಡಾರ್‌ನಲ್ಲಿ ನಿತ್ಯ 23 ಟೆಕ್ ಪಾರ್ಕ್‌ಗಳು ಹಾಗೂ 450ಕ್ಕೂ ಹೆಚ್ಚು ಪ್ರಮುಖ ಐಟಿ ಕಂಪನಿಗಳ ನೌಕರರು ಸೇರಿದಂತೆ ಬರೋಬ್ಬರಿ 8 ಲಕ್ಷಕ್ಕೂ ಹೆಚ್ಚು ಜನರು ಸಂಚರಿಸುತ್ತಾರೆ. ರಸ್ತೆಯ ಮುಖ್ಯ ಕ್ಯಾರಿಯೇಜ್ ವೇ ನಲ್ಲಿ 190 ಎಂಎಂ ದಪ್ಪದ ಕಾಂಕ್ರೀಟ್ ಮೇಲ್ಮೈ ನಿರ್ಮಿಸಲಾಗುತ್ತಿದ್ದು, ಜೊತೆಗೆ ಸರ್ವಿಸ್ ರಸ್ತೆಗಳ ಪುನರ್ನಿರ್ಮಾಣ, ಚರಂಡಿ ಮೇಲ್ದರ್ಜೀಕರಣ ಹಾಗೂ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಯೋಜನೆಯನ್ನು ಪೂರ್ಣಗೊಳಿಸಲು 1 ವರ್ಷದ ಗಡುವು ನೀಡಲಾಗಿದ್ದರೂ, ಅಧಿಕಾರಿಗಳು ಇದನ್ನು 9 ತಿಂಗಳಲ್ಲೇ ಮುಗಿಸಲು ಪ್ಲಾನ್​ ಹಾಕಿಕೊಂಡಿದ್ದಾರೆ. ಅಲ್ಲಿಯವರೆಗೆ ಈ ಭಾಗದಲ್ಲಿ ಸಂಚಾರ ನರಕಸದೃಶವಾಗಲಿದೆ.

ಯಾವೆಲ್ಲಾ ಪ್ರಮುಖ ಜಂಕ್ಷನ್‌ಗಳಲ್ಲಿ ಭಾರಿ ಸಂಚಾರ ದಟ್ಟಣೆ?:

ಕಾಮಗಾರಿ ಆರಂಭವಾದರೆ ಪ್ರಸ್ತುತ 45 ನಿಮಿಷ ತೆಗೆದುಕೊಳ್ಳುವ ಪ್ರಯಾಣದ ಅವಧಿ 90 ನಿಮಿಷಕ್ಕೆ ಹಾಗೂ 1 ಗಂಟೆಯ ಪ್ರಯಾಣ 2 ಗಂಟೆಗೂ ಅಧಿಕ ಸಮಯಕ್ಕೆ ವಿಸ್ತರಣೆಯಾಗಲಿದೆ ಎಂದು ಸಂಚಾರಿ ಪೊಲೀಸರು ಎಚ್ಚರಿಸಿದ್ದಾರೆ. ಮುಖ್ಯವಾಗಿ ಈ ಕೆಳಗಿನ ಹಾಟ್‌ಸ್ಪಾಟ್‌ಗಳು ಕಂಪ್ಲೀಟ್ ಜ್ಯಾಮ್ ಆಗಲಿವೆ.

ಸಿಲ್ಕ್ ಬೋರ್ಡ್ ಜಂಕ್ಷನ್ (Silk Board)

ಎಚ್‌ಎಸ್‌ಆರ್ ಲೇಔಟ್ ಜಂಕ್ಷನ್ (HSR Layout)

ಅಗ್ರ ಜಂಕ್ಷನ್ (Agara)

ಇಬ್ಲೂರು ಜಂಕ್ಷನ್ (Iblur)

ಮಾರತ್‌ಹಳ್ಳಿ ಜಂಕ್ಷನ್ (Marathahalli)

ಕೆ.ಆರ್. ಪುರಂ ರಸ್ತೆ (KR Pura)

ವಾಹನ ಸವಾರರಿಗೆ ಬರ್ಯಾಯ ರಸ್ತೆಗಳ ಆಯ್ಕೆ:

ಟ್ರಾಫಿಕ್ ಸಂಕಷ್ಟದಿಂದ ಪಾರಾಗಲು ಸಾರ್ವಜನಿಕರು ಹಾಗೂ ಟೆಕ್ಕಿಗಳು ಈ ಕೆಳಗಿನ ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚಿಸಲಾಗಿದೆ.

ಸರ್ಜಾಪುರ ರಸ್ತೆ (Sarjapur Road)

ಇಂಟರ್ ಮೀಡಿಯೆಟ್ ರಿಂಗ್ ರೋಡ್ (IRR)

ಹೊಸೂರು ರಸ್ತೆ ಕಾರಿಡಾರ್ (Hosur Road)

ಬೆಂಗಳೂರಿನ ಒಳಗಿನ ಲಿಂಕ್ ರಸ್ತೆಗಳು

ನಮ್ಮ ಮೆಟ್ರೋ (Namma Metro) ಮತ್ತು ಫೀಡರ್ ಬಸ್‌ಗಳ ಸೌಲಭ್ಯ.

ಇದನ್ನೂ ಓದಿ: ವರುಣನ ಕೃಪೆಯಿಂದ ಬೆಂಗಳೂರಲ್ಲಿ ಗಣನೀಯವಾಗಿ ಸುಧಾರಿಸಿದ ವಾಯು ಗುಣಮಟ್ಟ!

ಬೆಂಗಳೂರು ಸಂಚಾರಿ ಪೊಲೀಸರು ಈಗಾಗಲೇ ಐಟಿ ಕಂಪನಿಗಳ ಒಕ್ಕೂಟ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರ್ಯಾಯ ಸಂಚಾರ ವ್ಯವಸ್ಥೆ ಹಾಗೂ ಆಫೀಸ್ ಸಮಯದ ಬದಲಾವಣೆ ಕುರಿತು ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಡೈವರ್ಷನ್ ಪ್ಲಾನ್ ಪ್ರಕಟಿಸಲಿದ್ದಾರೆ.

ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ದಂಪತಿ ಪೂಜಾ ಕಾರ್ಯಗಳಲ್ಲಿ ಕುಳಿತುಕೊಳ್ಳುವಾಗ ಈ ತಪ್ಪು ಮಾಡಲೇಬೇಡಿ – Kannada News | Understanding Traditional Seating for Couples in Pooja and Daily Activities

ದಂಪತಿಗಳು ಶುಭ ಕಾರ್ಯಗಳಲ್ಲಿ ಹೇಗೆ ಕುಳಿತುಕೊಳ್ಳಬೇಕುImage Credit source: Pinterest

ದಂಪತಿಗಳು ಶುಭ ಕಾರ್ಯಗಳಲ್ಲಿ ಹೇಗೆ ಕುಳಿತುಕೊಳ್ಳಬೇಕು ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಪತಿ ಮತ್ತು ಪತ್ನಿ ಒಂದು ದೇಹದ ಎರಡು ಭಾಗಗಳಿದ್ದಂತೆ ಎಂಬುದು ಭಾರತೀಯ ಸಂಸ್ಕೃತಿಯಲ್ಲಿರುವ ಆಳವಾದ ನಂಬಿಕೆ. ಋಣಾನುಬಂಧ ರೂಪೇಣ ಪಶುಪತ್ನಿ ಸುತಾಲಯಹ ಮತ್ತು ಅರ್ಧಾಂಗಿ ಹಾಗೂ ಅರ್ಧನಾರೀಶ್ವರ ಎಂಬ ಪರಿಕಲ್ಪನೆಗಳು ಈ ಬಾಂಧವ್ಯದ ಮಹತ್ವವನ್ನು ಸಾರುತ್ತವೆ. ಯಾವುದೇ ಶುಭಕಾರ್ಯಗಳು ಪೂರ್ಣ ಫಲ ನೀಡಬೇಕಾದರೆ, ದಂಪತಿಗಳು ಶಾಸ್ತ್ರಬದ್ಧವಾಗಿ ಆಸೀನರಾಗಿರುವುದು ಅನಿವಾರ್ಯ.

ಪೂಜಾ ಕಾರ್ಯಗಳು, ಧಾರ್ಮಿಕ ವಿಧಿಗಳು ಮತ್ತು ಮಂಗಳಕರ ಸಂದರ್ಭಗಳಲ್ಲಿ ಪತ್ನಿಯು ಪತಿಯ ಬಲಭಾಗದಲ್ಲಿ ಕುಳಿತುಕೊಳ್ಳಬೇಕು. ಕನ್ಯಾದಾನ, ವಿವಾಹ ಸಮಾರಂಭಗಳು, ಹೋಮ-ಹವನಗಳು, ಯಜ್ಞ-ಯಾಗಾದಿಗಳು, ಗೃಹ ಪ್ರವೇಶ, ಉಪನಯನ, ದೇವಸ್ಥಾನಗಳಲ್ಲಿ ದೇವರ ದರ್ಶನ, ಮನೆಗಳಲ್ಲಿ ದೇವರ ಪೂಜೆ, ಮತ್ತು ಜ್ಯೋತಿಷಿಗೆ ಜಾತಕ ತೋರಿಸುವಂತಹ ಕಾರ್ಯಗಳಲ್ಲಿ ಈ ನಿಯಮ ಪಾಲನೆ ಅಗತ್ಯ. ನಾಂದಿ ಮತ್ತು ಸೋಮಯಜ್ಞದಂತಹ ಸಮಾರಂಭಗಳಲ್ಲೂ ಧರ್ಮಪತ್ನಿಯು ಗಂಡನ ಬಲಭಾಗದಲ್ಲಿ ಇರಬೇಕು. ಹೀಗೆ ಕುಳಿತರೆ ಆ ಕಾರ್ಯಗಳು ಪೂರ್ಣವಾಗಿ ಮತ್ತು ಸಫಲವಾಗಿ ನೆರವೇರುತ್ತವೆ ಎಂದು ನಂಬಲಾಗಿದೆ. ಪೂಜಾ ಕಾರ್ಯಗಳನ್ನು ಮಾಡುವಾಗ, ಮಾತನಾಡುವುದನ್ನು ನಿಲ್ಲಿಸಿ, ಭಕ್ತಿ ಮತ್ತು ಶ್ರದ್ಧೆಯಿಂದ ಸಂಪೂರ್ಣವಾಗಿ ತೊಡಗಿಸಿಕೊಂಡು, ಭಗವಂತನನ್ನು ಆವಾಹಿಸುವುದು ಮುಖ್ಯ ಎಂದು ತಿಳಿಸಲಾಗಿದೆ. ಕಾರ್ಯ ಆರಂಭಿಸುವ ಮೊದಲು ಮತ್ತು ಮುಗಿದ ನಂತರ ಮನೆಯನ್ನು ನಮಸ್ಕರಿಸುವ ಸಂಪ್ರದಾಯವೂ ಇದೆ.

ಆದರೆ, ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಪತ್ನಿಯು ಪತಿಯ ಎಡಭಾಗದಲ್ಲಿ ಇರಬೇಕು. ಸೇವಾ ಕಾರ್ಯಗಳು ಮತ್ತು ಧರ್ಮ ಕೆಲಸಗಳನ್ನು ಮಾಡುವಾಗ, ಉದಾಹರಣೆಗೆ ಅನುದಾನ ನೀಡುವುದು, ಪತ್ನಿಯು ಗಂಡನ ವಾಮಭಾಗ ಅಂದರೆ ಎಡಭಾಗದಲ್ಲಿ ಇರಬೇಕು. ಮನೆಯಲ್ಲಿ ಮಲಗುವಾಗಲೂ ಪತ್ನಿಯು ಗಂಡನ ಎಡಭಾಗದಲ್ಲಿ ಮಲಗಬೇಕು ಎಂಬ ನಿಯಮವಿದೆ. ಗುರು-ಹಿರಿಯರಿಗೆ, ಬ್ರಾಹ್ಮಣರಿಗೆ, ವಿಪ್ರರಿಗೆ, ಮಠಮಾನ್ಯಗಳ ಸ್ವಾಮಿಗಳಿಗೆ, ಮತ್ತು ಇತರ ಹಿರಿಯರಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆಯುವಾಗಲೂ ಪತ್ನಿಯು ಎಡಭಾಗದಲ್ಲಿ ಇರುವುದು ಶುಭ. ಅಷ್ಟೇ ಅಲ್ಲದೆ, ಪ್ರಯಾಣ ಮಾಡುವಾಗ, ಅದು ರೈಲು, ಬಸ್ಸು, ಅಥವಾ ಸ್ವಂತ ಕಾರಿನಲ್ಲಿರಲಿ, ಪತ್ನಿಯು ಪತಿಯ ಎಡಭಾಗದಲ್ಲಿ ಇರಬೇಕು ಎಂದು ಹೇಳಲಾಗಿದೆ. ಹೀಗೆ ಮಾಡಿದರೆ ಪ್ರಯಾಣ ಸುಗಮವಾಗಿ ಯಶಸ್ವಿಯಾಗಿ ಸಾಗುತ್ತದೆ ಎಂಬುದು ಶಾಸ್ತ್ರಗಳ ಒಳನೋಟ.

ಸನಾತನ ಧರ್ಮದಲ್ಲಿ ಇಂತಹ ನಿಯಮಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಲು ರೂಪಿಸಲಾಗಿದೆ. ದಂಪತಿಗಳು ಈ ಶಾಸ್ತ್ರಬದ್ಧ ಆಸನ ಕ್ರಮಗಳನ್ನು ಅನುಸರಿಸುವುದರಿಂದ ಕಾರ್ಯಗಳ ಪರಿಪೂರ್ಣ ಫಲವನ್ನು ಪಡೆಯಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:54 am, Fri, 22 May 26

Source link

ದಯಾಮರಣ ಕೊಡಿಸಿ ಎಂದು ಸಚಿವರಿಗೆ ಕೈಮುಗಿದು ವ್ಯಾಪಾರಿಯ ಮನವಿ: ಕಾರಣ ಇಲ್ಲಿದೆ – Kannada News | Belagavi Trader Pleads for Mercy Killing to Minister Satish Jarkiholi Amidst Livelihood Crisis

ಬೆಳಗಾವಿ, ಮೇ 22: ನಗರದಲ್ಲಿ ಬೀದಿ ವ್ಯಾಪಾರ ನಡೆಸುವ ವರ್ತಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಸಭೆಯಲ್ಲಿ ತಮ್ಮ ದುಸ್ಥಿತಿಯನ್ನು ಕಣ್ಣೀರು ಹಾಕಿ ನಿವೇದಿಸಿಕೊಂಡಿದ್ದಾರೆ. ಈ ಸಂಬಂಧ ಸಚಿವರಿಗೆ ವ್ಯಾಪಾರಿಯೊಬ್ಬರು ಕೈಮುಗಿದು ದಯಾಮರಣ ಕೊಡಿಸಿ ಎಂದು ಬೇಡಿಕೊಂಡಿರುವ ಪ್ರಸಂಗ ನಡೆದಿದೆ. ಈ ವ್ಯಾಪಾರಿಗಳ ಮೂರು ತಿಂಗಳ ವ್ಯಾಪಾರ ಅನುಮತಿ ಅವಧಿ ಮುಗಿದು ಆರರಿಂದ ಎಂಟು ತಿಂಗಳು ಕಳೆದಿದ್ದು, ಇನ್ನೂ ವಿಸ್ತರಣೆಯಾಗಿಲ್ಲ. ಇದರಿಂದಾಗಿ ಅವರ ಜೀವನ ನಿರ್ವಹಣೆಗೆ ಅಡ್ಡಿಯಾಗಿದ್ದು, ನಿರಂತರ ಒತ್ತಡ ಎದುರಿಸುತ್ತಿದ್ದಾರೆ. ಸಂಡೇ ಮಾರ್ಕೆಟ್‌ನಲ್ಲಿ ವ್ಯಾಪಾರ ನಡೆಸಲು ಅನುಮತಿ ನೀಡಬೇಕೆಂದು ಹಲವರು ಪದೇ ಪದೇ ಮನವಿ ಸಲ್ಲಿಸುತ್ತಿದ್ದಾರೆ. ಕಾನೂನು ಪ್ರಕಾರ ಸಮಸ್ಯೆ ಬಗೆಹರಿಯದಿದ್ದರೆ, ಕ್ರಮ ಕೈಗೊಳ್ಳುವಂತೆ ವ್ಯಾಪಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಾಕ್ಸ್​ ಆಫೀಸ್​​ನಲ್ಲಿ ಸುನಾಮಿ ಎಬ್ಬಿಸಿದ ‘ದೃಶ್ಯಂ 3’; ಮೊದಲ ದಿನ ಭರ್ಜರಿ ಕಲೆಕ್ಷನ್ – Kannada News | Drishyam 3 Box Office: Mohanlal’s Thriller Creates Storm, Earns 43.37 Cr Global on Day 1

ಮಲಯಾಳಂ ಚಿತ್ರರಂಗದಲ್ಲಿ ‘ದೃಶ್ಯಂ 3’ ಚಿತ್ರಕ್ಕೆ ಅದರದ್ದೇ ಆದ ದೊಡ್ಡ ಅಭಿಮಾನಿ ವರ್ಗ ಇದೆ. ಹಿರಿಯ ನಟ ಮೋಹನ್‌ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ದೃಶ್ಯಂ 3’ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಜಾರ್ಜ್‌ಕುಟ್ಟಿ ಮತ್ತು ಆತನ ಕುಟುಂಬದ ರಹಸ್ಯಗಳ ಸುತ್ತ ಹೆಣೆಯಲಾದ ಈ ಚಿತ್ರವನ್ನು ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ.

ಮೊದಲ ದಿನದ ಕಲೆಕ್ಷನ್ ವಿವರ:

ದೇಶಾದ್ಯಂತ ಒಟ್ಟು 5,506 ಶೋಗಳ ಪ್ರದರ್ಶನ ಕಂಡ ‘ದೃಶ್ಯಂ 3’, ಭಾರತದಲ್ಲಿ ಮೊದಲ ದಿನವೇ 15.85 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ 18.37 ಕೋಟಿ ರೂಪಾಯಿ ಆಗಿದೆ. ಕೇವಲ ದೇಶದಲ್ಲಷ್ಟೇ ಅಲ್ಲದೆ, ವಿದೇಶಗಳಲ್ಲೂ ಈ ಸಿನಿಮಾದ ಮ್ಯಾಜಿಕ್ ವರ್ಕ್ ಆಗಿದ್ದು, ಬರೋಬ್ಬರಿ 25 ಕೋಟಿ ಗ್ರಾಸ್ ಕಲೆಕ್ಷನ್ ಹರಿದುಬಂದಿದೆ.

ಇದನ್ನೂ ಓದಿ: ಹಿಂದಿ ‘ದೃಶ್ಯಂ 3’ ಮಲಯಾಳಂಗಿಂತ ಸಾಕಷ್ಟು ಭಿನ್ನ: ಬಿಡುಗಡೆಯಲ್ಲಿ ಗೊಂದಲ

‘ದೃಶ್ಯಂ 3’ ಚಿತ್ರ ಭಾರತಕ್ಕಿಂತ ವಿದೇಶದಲ್ಲಿ ಹೆಚ್ಚು ಗಳಿಕೆ ಮಾಡಿದೆ. ದುಬೈ ಮೊದಲಾದ ಕಡೆಗಳಲ್ಲಿರುವ ಅನಿವಾಸಿ ಭಾರತೀಯರು ಸಿನಿಮಾ ಇಷ್ಟಪಟ್ಟು ನೋಡಿದ್ದಾರೆ. ಇದರೊಂದಿಗೆ ಸಿನಿಮಾ ಬಿಡುಗಡೆಯಾದ ಕೇವಲ ಒಂದೇ ದಿನದಲ್ಲಿ ವಿಶ್ವಾದ್ಯಂತ ಒಟ್ಟು 43.37 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ದಾಖಲೆಯ ಆರಂಭ ಪಡೆದಿದೆ.

ಚಿತ್ರಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆ ಅದ್ಭುತವಾಗಿದೆ ಎಂಬುದಕ್ಕೆ ಪ್ರಮುಖ ಟಿಕೆಟ್ ಬುಕಿಂಗ್ ಆ್ಯಪ್ ‘ಬುಕ್ ಮೈ ಶೋ’ ಸಾಕ್ಷಿಯಾಗಿದೆ. ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 17.8 ಸಾವಿರಕ್ಕೂ ಅಧಿಕ ವೋಟ್​​​ಗಳೊಂದಿಗೆ 8.9/10 ರೇಟಿಂಗ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಪ್ರೇಕ್ಷಕರು ಚಿತ್ರದ ಕ್ಲೈಮ್ಯಾಕ್ಸ್ ಟ್ವಿಸ್ಟ್ ಹಾಗೂ ಮೋಹನ್‌ಲಾಲ್ ಅವರ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎಲ್ಲಾ ಮದರಸಾಗಳಲ್ಲಿ ಇನ್ನುಮುಂದೆ ವಂದೇ ಮಾತರಂ ಹಾಡುವುದು ಕಡ್ಡಾಯ – Kannada News | West Bengal Introduces Mandatory Vande Mataram Recitation in Madrasas

ಕೋಲ್ಕತ್ತಾ, ಮೇ 22: ಪಶ್ಚಿಮ ಬಂಗಾಳದಲ್ಲಿ ತರಗತಿಗಳು ಪ್ರಾರಂಭವಾಗುವ ಮೊದಲು ಪ್ರಾರ್ಥನಾ ಸಭೆಯಲ್ಲಿ ವಂದೇ ಮಾತರಂ(Vande Mataram) ಹಾಡುವುದು ಈಗ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಮಾನ್ಯತೆ ಪಡೆದ ಮದರಸಾಗಳಲ್ಲಿ ಕಡ್ಡಾಯವಾಗಿದೆ. ರಾಜ್ಯದ ಮದರಸಾ ಶಿಕ್ಷಣ ನಿರ್ದೇಶನಾಲಯವು ಈ ನಿಟ್ಟಿನಲ್ಲಿ ಆದೇಶ ಹೊರಡಿಸಿದ್ದು, ಇದು ತಕ್ಷಣದಿಂದ ಜಾರಿಗೆ ಬರುತ್ತದೆ.
ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ ಸಚಿವ ಖುದಿರಾಮ್ ತುಡು ಮಾತನಾಡಿ, ಬಂಗಾಳದಲ್ಲಿ ಅನೇಕ ಸರ್ಕಾರಿ ಶಾಲೆಗಳಲ್ಲಿ ಸಂತಾಲಿ ಭಾಷೆಯಲ್ಲಿ ಬೋಧನೆ ನಡೆಸಲಾಗುತ್ತದೆ. ಆ ಶಾಲೆಗಳಲ್ಲಿ ವಂದೇ ಮಾತರಂ ಕಡ್ಡಾಯವಾಗಿದ್ದರೆ, ಮದರಸಾಗಳಲ್ಲಿ ಅದನ್ನು ಜಾರಿಗೆ ತರಲು ಕೂಡ ಯಾವುದೇ ಸಮಸ್ಯೆ ಇರಬಾರದು ಎಂದಿದ್ದಾರೆ.

ಮದರಸಾ ಶಿಕ್ಷಣ ನಿರ್ದೇಶನಾಲಯ ಹೊರಡಿಸಿದ ಆದೇಶದಲ್ಲಿ, ಹಿಂದಿನ ಎಲ್ಲಾ ಆದೇಶಗಳು ಮತ್ತು ಅಭ್ಯಾಸಗಳನ್ನು ರದ್ದುಗೊಳಿಸಿ, ರಾಜ್ಯದ ಎಲ್ಲಾ ಸರ್ಕಾರಿ ಮಾದರಿ ಮದರಸಾಗಳು, ಸರ್ಕಾರಿ ಅನುದಾನಿತ ಮದರಸಾಗಳು, ಮಾನ್ಯತೆ ಪಡೆದ ಅನುದಾನರಹಿತ ಮದರಸಾಗಳು, ಎಂಎಸ್‌ಕೆ ಮತ್ತು ಎಸ್‌ಎಸ್‌ಕೆಗಳಲ್ಲಿ ತರಗತಿಗಳು ಪ್ರಾರಂಭವಾಗುವ ಮೊದಲು ಪ್ರಾರ್ಥನಾ ಸಭೆಯಲ್ಲಿ ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದೆ.

ಮತ್ತಷ್ಟು ಓದಿ:  ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂನ 6 ಚರಣಗಳನ್ನು ಹಾಡುವುದು ಕಡ್ಡಾಯ

ಇದಕ್ಕೂ ಮೊದಲು ಮೇ 13ರ ಸಂಜೆ, ರಾಜ್ಯ ಶಿಕ್ಷಣ ಇಲಾಖೆಯು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿ ಅಧಿಸೂಚನೆಯನ್ನು ಹೊರಡಿಸಿತು. ನಂತರ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅಧಿಸೂಚನೆಯನ್ನು ಹಂಚಿಕೊಂಡಿದ್ದರು.ಈಗ ಈ ನೀತಿಯನ್ನು ಮದರಸಾಗಳಿಗೂ ವಿಸ್ತರಿಸಲಾಗಿದೆ. ಎಲ್ಲಾ ಮದರಸಾ ಆಡಳಿತಾಧಿಕಾರಿಗಳು ಮತ್ತು ಸಂಸ್ಥೆಗಳ ಮುಖ್ಯಸ್ಥರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಈ ನಿರ್ಧಾರದ ಅನುಷ್ಠಾನದ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಇನ್ನೂ ಹೊರಡಿಸಲಾಗಿಲ್ಲ. ಇದನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಮತ್ತು ನಿಯಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಯಾವ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂಬುದನ್ನು ಸಹ ಸ್ಪಷ್ಟಪಡಿಸಲಾಗಿಲ್ಲ. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ಮನೋಭಾವವನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:59 am, Fri, 22 May 26

Source link

ಸಫಾರಿಗೆ ತೆರಳಿದ ಪ್ರವಾಸಿಗರ ಮುಂದೆ ಸಕ್ಕತ್ತಾಗಿ ಪೋಸ್ ಕೊಟ್ಟ ಹುಲಿ! – Kannada News | Tigress Sighted at PG Palya Safari in MM Hills Wildlife Sanctuary Goes Viral

ಚಾಮರಾಜನಗರ, ಮೇ 22: ಮಲೆ ಮಹದೇಶ್ವರ ವನ್ಯಜೀವಿಧಾಮದ ಪಿಜಿ ಪಾಳ್ಯ ಸಫಾರಿ ಕೇಂದ್ರದಲ್ಲಿ ಪ್ರವಾಸಿಗರಿಗೆ ಅಚ್ಚರಿಯೊಂದು ಕಾದಿತ್ತು. ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಬೃಹತ್ ಹೆಣ್ಣು ಹುಲಿಯೊಂದು ರಾಜಗಾಂಭೀರ್ಯದಿಂದ ದರ್ಶನ ನೀಡಿದೆ. ಇತ್ತೀಚಿನ ದಿನಗಳಲ್ಲಿ ಪಿಜಿ ಪಾಳ್ಯ ಸಫಾರಿಯಲ್ಲಿ ಈ ಹೆಣ್ಣುಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ವ್ಯಾಘ್ರ ಮುಕ್ತವಾಗಿ ಸಂಚರಿಸುತ್ತಿರುವ ಈ ಅಪರೂಪದ ದೃಶ್ಯವನ್ನು ಹವ್ಯಾಸಿ ಛಾಯಗ್ರಾಹಕ ಹೇಮಂತ್ ಕುಮಾರ್ ಅವರು ತಮ್ಮ ಕ್ಯಾಮರಾದಲ್ಲಿ ಅತ್ಯಂತ ಸುಂದರವಾಗಿ ಸೆರೆಹಿಡಿದಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಿಜಿ ಪಾಳ್ಯ ಕೇಂದ್ರದಲ್ಲಿ ಸೆರೆಯಾದ ಈ ವೀಡಿಯೋ ಝಲಕ್, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ವನ್ಯಜೀವಿ ಪ್ರೇಮಿಗಳ ದಿಲ್ ಖುಷ್ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಹಸ್ಯವಾಗಿ ಮದುವೆಯಾದರೇ ನಟಿ ಕಂಗನಾ ರಣಾವತ್? ವೈರಲ್ ವಿಡಿಯೋದ ಅಸಲಿಯತ್ತೇನು? – Kannada News | Kangana Ranaut’s ‘Secret Marriage’ Viral Video: Truth Revealed About Queen 2 Look

ಬಾಲಿವುಡ್‌ನ ವಿವಾದಾತ್ಮಕ ನಟಿ ಹಾಗೂ ರಾಜಕಾರಣಿ ಕಂಗನಾ ರಣಾವತ್ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಇತ್ತೀಚೆಗೆ ಕಂಗನಾ ಅವರ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಅವರು ಕುತ್ತಿಗೆಗೆ ಮಂಗಲಸೂತ್ರ ಮತ್ತು ಕೈಗಳಲ್ಲಿ ಹಸಿರು ಬಳೆಗಳನ್ನು ಧರಿಸಿ ಕಾಣಿಸಿಕೊಂಡಿದ್ದಾರೆ. ಭದ್ರತಾ ಸಿಬ್ಬಂದಿಯೊಂದಿಗೆ ನಡೆದು ಹೋಗುತ್ತಿರುವ ಅವರ ಈ ‘ಮದುಮಗಳ’ ಲುಕ್ ಕಂಡ ಅಭಿಮಾನಿಗಳು, ಕಂಗನಾ (Kangana) ಯಾರಿಗೂ ತಿಳಿಯದಂತೆ ಸಪ್ತಪದಿ ತುಳಿದಿದ್ದಾರಾ? ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ವೈರಲ್ ವಿಡಿಯೋದ ಹಿಂದಿನ ಸತ್ಯ ಇಲ್ಲಿದೆ: ಕಂಗನಾ ರಣಾವತ್ ಮದುವೆಯಾಗಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ವೈರಲ್ ಆಗಿರುವ ಅವರ ಈ ಸಾಂಪ್ರದಾಯಿಕ ಲುಕ್ ನಿಜ ಜೀವನದ್ದಲ್ಲ, ಬದಲಿಗೆ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಕ್ವೀನ್ 2’ ಚಿತ್ರೀಕರಣದ ಸಂದರ್ಭದ್ದಾಗಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಕ್ವೀನ್ ಫಾರೆವರ್’ ಎಂದು ಹೆಸರಿಡಲಾಗಿದ್ದು, ಕಂಗನಾ ಈಗಾಗಲೇ ಮುಂಬೈನಲ್ಲಿ ಇದರ ಶೂಟಿಂಗ್ ಆರಂಭಿಸಿದ್ದಾರೆ.

ಮೈಲಿಗಲ್ಲು ಸೃಷ್ಟಿಸಿದ್ದ ‘ಕ್ವೀನ್’:ಕಳೆದ 2013ರಲ್ಲಿ ವಿಕಾಸ್ ಬಹ್ಲ್ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಕ್ವೀನ್’ ಚಿತ್ರ ಬಾಲಿವುಡ್‌ನಲ್ಲಿ ದೊಡ್ಡ ಇತಿಹಾಸ ಸೃಷ್ಟಿಸಿತ್ತು. ಮದುವೆ ಮುರಿದುಬಿದ್ದಾಗ ಧೃತಿಗೆಡದ ದಿಲ್ಲಿಯ ಮುಗ್ಧ ಹುಡುಗಿ ‘ರಾಣಿ’, ಒಬ್ಬಳೇ ಹನಿಮೂನ್‌ಗೆ ತೆರಳಿ ತನ್ನ ಸ್ವಾವಲಂಬನೆ ಮತ್ತು ಆತ್ಮವಿಶ್ವಾಸವನ್ನು ಕಂಡುಕೊಳ್ಳುವ ಕಥೆ ಇದಾಗಿತ್ತು. ಈ ಚಿತ್ರದ ಅದ್ಭುತ ನಟನೆಗಾಗಿ ಕಂಗನಾ ಅವರಿಗೆ ರಾಷ್ಟ್ರ ಪ್ರಶಸ್ತಿಯೂ ಒಲಿದಿತ್ತು. ಈಗ ಬರಲಿರುವ ಇದರ ಎರಡನೇ ಭಾಗದಲ್ಲಿ ರಾಣಿಯ ಮುಂದಿನ ಜಗತ್ತನ್ನು ತೋರಿಸಲಾಗುತ್ತಿದ್ದು, ಇದು ಅವರ ಸಿನಿ ರಂಗದ ರೀ-ಎಂಟ್ರಿಗೆ ದೊಡ್ಡ ಬ್ರೇಕ್ ನೀಡುವ ನಿರೀಕ್ಷೆಯಿದೆ.

ಇದನ್ನೂ ಓದಿ: ಗೋವಿನ ಚರ್ಮದ ಬ್ಯಾಗ್ ಹಿಡಿದು ಬಂದ್ರಾ ಕಂಗನಾ? ಶುರುವಾಗಿದೆ ಚರ್ಚೆ

ಜೂನ್‌ನಲ್ಲಿ ‘ಭಾರತ್ ಭಾಗ್ಯ ವಿಧಾತಾ’ ಬಿಡುಗಡೆ:’ಕ್ವೀನ್ ೨’ ಮಾತ್ರವಲ್ಲದೆ ಕಂಗನಾ ಅವರ ಮತ್ತೊಂದು ಪ್ರಮುಖ ಚಿತ್ರ ‘ಭಾರತ್ ಭಾಗ್ಯ ವಿಧಾತಾ’ಬಿಡುಗಡೆಗೆ ಸಜ್ಜಾಗಿದೆ. 2008ರ ಮುಂಬೈ ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಆಸ್ಪತ್ರೆಯೊಳಗೆ ನೂರಾರು ಜೀವಗಳನ್ನು ಉಳಿಸಿದ ನರ್ಸ್‌ಗಳು, ವಾರ್ಡ್ ಬಾಯ್‌ಗಳು ಸೇರಿದಂತೆ ಸಾಮಾನ್ಯ ಆಸ್ಪತ್ರೆ ಸಿಬ್ಬಂದಿಯ ಅಪ್ರತಿಮ ಧೈರ್ಯದ ನೈಜ ಘಟನೆಯನ್ನು ಈ ಚಿತ್ರ ಒಳಗೊಂಡಿದೆ. ಮನೋಜ್ ತಪಾಡಿಯಾ ನಿರ್ದೇಶನದ ಈ ಸಿನಿಮಾದಲ್ಲಿ ಕಂಗನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರವು ಇದೇ ಜೂನ್ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

ಮಗಳು ಆರಾಧ್ಯಾ ಜೊತೆ ಕಾನ್ ಸಿನಿಮೋತ್ಸವಕ್ಕೆ ತೆರಳಿದ ಐಶ್ವರ್ಯಾ ರೈ – Kannada News | Cannes 2026: Aishwarya Rai and Aaradhya, Disha Madan’s Eco Chic Style Steal Spotlight

ವಿಶ್ವದ ಅತ್ಯಂತ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾದ ‘ಕಾನ್ ಚಲನಚಿತ್ರೋತ್ಸವ 2026’ (Cannes) ಫ್ರಾನ್ಸ್‌ನ ಕರಾವಳಿ ನಗರವಾದ ಕಾನ್‌ನಲ್ಲಿ ಅದ್ಧೂರಿಯಾಗಿ ಜರುಗುತ್ತಿದೆ. ಮೇ 12 ರಂದು ಆರಂಭವಾಗಿರುವ ಈ 79ನೇ ಆವೃತ್ತಿಯ ಸಿನಿಮೋತ್ಸವವು ಮೇ 23ರವರೆಗೆ ನಡೆಯಲಿದ್ದು, ಜಗತ್ತಿನಾದ್ಯಂತದ ಸಿನಿಮಾ ತಾರೆಯರು ಮತ್ತು ಫ್ಯಾಷನ್ ಪ್ರಿಯರ ಪ್ರಮುಖ ಆಕರ್ಷಣೆಯಾಗಿದೆ. ಭಾರತದ ಪರವಾಗಿ ಹಲವು ಪ್ರಮುಖ ಸೆಲೆಬ್ರಿಟಿಗಳು ಈ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ.

ಇದೀಗ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಪುತ್ರಿ ಆರಾಧ್ಯಾ ಬಚ್ಚನ್ ಅವರೊಂದಿಗೆ ಕಾನ್ ಸಿನಿಮೋತ್ಸವದಲ್ಲಿ ಭಾಗವಹಿಸಲು ಮುಂಬೈ ವಿಮಾನ ನಿಲ್ದಾಣದಿಂದ ಫ್ರಾನ್ಸ್‌ಗೆ ಪ್ರಯಾಣ ಬೆಳೆಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ತಾಯಿ-ಮಗಳ ಜೋಡಿ ಕ್ಯಾಮೆರಾ ಕಣ್ಣುಗಳಿಗೆ ಸಿಕ್ಕಿದ್ದು, ಇವರ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಕಳೆದ 24 ವರ್ಷಗಳಿಂದ ಕಾನ್ ಉತ್ಸವದೊಂದಿಗೆ ನಿಕಟ ಬಾಂಧವ್ಯ ಹೊಂದಿರುವ ಐಶ್ವರ್ಯಾ ರೈ, ಈ ಬಾರಿಯೂ ಬ್ರ್ಯಾಂಡ್ ರಾಯಭಾರಿಯಾಗಿ ರೆಡ್ ಕಾರ್ಪೆಟ್ ಮೇಲೆ ಹೊಸ ಫ್ಯಾಷನ್ ಟ್ರೆಂಡ್ ಸೃಷ್ಟಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಗಂಡನಿಂದ ದೂರಾದ ಬೆನ್ನಲ್ಲೇ ‘ಕಾನ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಮೌನಿ ರಾಯ್ ಮಿಂಚಿಂಗ್

ಮತ್ತೊಂದೆಡೆ, ಈ ಬಾರಿಯ ಕಾನ್ ಸಿನಿಮೋತ್ಸವದಲ್ಲಿ ಕರ್ನಾಟಕದ ಹೆಮ್ಮೆಯ ನಟಿ ದಿಶಾ ಮದನ್ ಎರಡನೇ ಬಾರಿಗೆ ಭಾಗವಹಿಸಿ ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ದಕ್ಷಿಣ ಭಾರತದ ಸಂಸ್ಕೃತಿ ಮತ್ತು ಸುಸ್ಥಿರ ಫ್ಯಾಷನ್ ಅನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಿದ ದಿಶಾ, ಸುಮಾರು 80 ವರ್ಷ ಹಳೆಯದಾದ ಎರಡು ಸಾಂಪ್ರದಾಯಿಕ ರೇಷ್ಮೆ ಸೀರೆಗಳನ್ನು ಮರುಬಳಕೆ ಮಾಡಿ ಸಿದ್ಧಪಡಿಸಿದ ಗೌನ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ಮಿಂಚಿದರು. ಬೆಂಗಳೂರಿನ ‘ನಿಹಾರಿಕಾ ವಿವೇಕ್’ ವಿನ್ಯಾಸಗೊಳಿಸಿದ ಈ ಉಡುಪಿನಲ್ಲಿ ಕರ್ನಾಟಕದ ಕಲೆ ಹಾಗೂ ಬಂಜಾರ ಕಸೂತಿ ಕೆಲಸವಿದ್ದು, ಐದು ಜನ ಮಹಿಳಾ ಕುಶಲಕರ್ಮಿಗಳು ಸುಮಾರು 2500 ಗಂಟೆಗಳ ಕಾಲ ಶ್ರಮಿಸಿ ಇದನ್ನು ಸಿದ್ಧಪಡಿಸಿದ್ದಾರೆ.

ಐಶ್ವರ್ಯಾ ರೈ, ಆಲಿಯಾ ಭಟ್, ಕರಣ್ ಜೋಹರ್, ಅದಿತಿ ರಾವ್ ಹೈದರಿ ಅವರಂತಹ ದಿಗ್ಗಜರ ಜೊತೆಗೆ ಕನ್ನಡಿಗಿ ದಿಶಾ ಮದನ್ ಕೂಡ ಕಾನ್ ಉತ್ಸವದಲ್ಲಿ ಭಾರತೀಯ ಕಲೆ ಮತ್ತು ಪ್ರಾದೇಶಿಕ ಸಿನಿಮಾದ ಹೆಮ್ಮೆಯನ್ನು ಎತ್ತಿ ಹಿಡಿಯುತ್ತಿರುವುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version