ಮೊಬೈಲ್ನಲ್ಲಿ ಗೇಮ್ ಆಡದಂತೆ ತಂದೆ ತಡೆದಿದ್ದಕ್ಕೆ ಮನೆಬಿಟ್ಟು ಹೋದ ಮೂವರು ಮಕ್ಕಳು – Kannada News | Three Minors Leave Home After Mobile Phone Dispute in Gujarat
ಸೂರತ್, ಮೇ 22: ಮೊಬೈಲ್(Mobile)ನಲ್ಲಿ ಗೇಮ್ ಆಡದಂತೆ ತಂದೆ ತಡೆದಿದ್ದಕ್ಕೆ ಮೂವರು ಅಪ್ರಾಪ್ತ ಮಕ್ಕಳು ಮನೆ ಬಿಟ್ಟು ಹೋಗಿರುವ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ಫ್ರೀ ಫೈರ್ ಗೇಮ್ ದಿನವಿಡೀ ಆಡುತ್ತಿದ್ದರು, ಇದಕ್ಕೆ ಕೋಪಗೊಂಡ ತಂದೆ ಗೇಮ್ ಆಡಬೇಡಿ ಎಂದು ಮೊಬೈಲ್ ಕಿತ್ತಿಟ್ಟುಕೊಂಡಿದ್ದರು. ಮೂವರು ಮನೆಯಿಂದ 15,000 ರೂ. ತೆಗೆದುಕೊಂಡು ಹೋಗಿದ್ದಾರೆಂದು ಆರೋಪಿಸಲಾಗಿದೆ. ಅವರು ಮುಂಬೈ ರೈಲು ಹತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಪೊಲೀಸರ ಪ್ರಕಾರ ಕಾಣೆಯಾದ ಮಕ್ಕಳ ವಯಸ್ಸು 14, 11 ಮತ್ತು 9 ವರ್ಷ, ಅವರಲ್ಲಿ…