Video: ಮಧ್ಯರಾತ್ರಿ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿದ ಹಾಸ್ಟೆಲ್ ಮಾಲೀಕನ ಮಗ, ನಡೆದಿದ್ದೇನು? – Kannada News | Late Night Hostel Incident in Prayagraj Sparks Outrage

ಪ್ರಯಾಗ್​ರಾಜ್, ಮೇ 22: ಹಾಸ್ಟೆಲ್ ಮಾಲೀಕನ ಮಗ ಮದ್ಯರಾತ್ರಿ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದಿದೆ.  ಶಿವಕುಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ಅಮೇಥಿ ಮೂಲದ ಇಬ್ಬರು ವಿದ್ಯಾರ್ಥಿನಿಯರ ಕೋಣೆಗೆ ಹಾಸ್ಟೆಲ್ ಮಾಲೀಕನ ಮಗ ಶುಭಂ ದ್ವಿವೇದಿ ಎಂಬಾತ ನುಗ್ಗಿದ್ದಾನೆ.

18 ರಂದು ಮಧ್ಯರಾತ್ರಿ 2 ಗಂಟೆಗೆ ಈ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಆರೋಪಿ, ವಿದ್ಯಾರ್ಥಿನಿಯರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ಅವರ ಕೂದಲನ್ನು ಹಿಡಿದು ಎಳೆದಾಡಿ ವಿಕೃತ ಅಟ್ಟಹಾಸ ಮೆರೆದಿದ್ದಾನೆ. ಈ ಭೀಕರ ದೃಶ್ಯದ 30 ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಕಳೆದ 10 ದಿನಗಳಿಂದ ಆರೋಪಿ ತಮಗೆ ಫೋನ್ ಹಾಗೂ ಸಂದೇಶಗಳ ಮೂಲಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಘಟನೆ ನಡೆದ ತಕ್ಷಣ ವಿದ್ಯಾರ್ಥಿನಿಯರು ಪೊಲೀಸ್ ತುರ್ತು ಸಂಖ್ಯೆ 112 ಗೆ ಕರೆ ಮಾಡಿದ್ದರು. ಆದರೆ, ಪೊಲೀಸರ ಸಮ್ಮುಖದಲ್ಲೇ ಆರೋಪಿ ಒಡೆದ ಗಾಜಿನಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾಳೆ. ಸದ್ಯ ಪೊಲೀಸರು ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರಾದರೂ, ನ್ಯಾಯಾಲಯ ಆತನಿಗೆ ಜಾಮೀನು ಮಂಜೂರು ಮಾಡಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Love Horoscope: ನಿಮ್ಮ ರಾಶಿಗನುಗುಣವಾಗಿ ಮೇ 24- 30ರವರೆಗಿನ ವಾರದ ಪ್ರೇಮ ಭವಿಷ್ಯ ತಿಳಿಯಿರಿ – Kannada News | Love Horoscope May 24 30: Weekly Predictions for All Zodiac Signs

ಮೇ 24ರಿಂದ ಮೇ 30ರವರೆಗೆ ಮೇ ತಿಂಗಳ ಕೊನೆಯ ವಾರವಾಗಿದ್ದು ಶುಕ್ರನು ಬುಧನ ರಾಶಿಯಲ್ಲಿ ಬುಧ ಹಾಗೂ ಗುರುವಿನ ಸಂಯೋಗದಲ್ಲಿ ಇರುವ ಪ್ರೇಮದಲ್ಲಿ ಗೊಂದಲ, ಅತಂಕ, ವಿವಾದ ಕಲಹಗಳು ತಮಾಷೆಯಾಗಿ ಆರಂಭಗೊಂಡು ಗಂಭೀರ ಸ್ಥಿತಿಯನ್ನು ತಲುಪುವುದು. ಎಚ್ಚರಿಕೆಯಿಂದ ಇರಬೇಕಾದುದು ಇಬ್ಬರ ಕರ್ತವ್ಯ ಆಗಿರಲಿದೆ.

​ಮೇಷ ರಾಶಿ :

ನಿಮ್ಮ ರಾಶ್ಯಾಧಿಪತಿ ಮಂಗಳನು ಸ್ವಕ್ಷೇತ್ರದಲ್ಲಿದ್ದಾನೆ. ಇದರಿಂದ ಪ್ರೇಮ ಜೀವನದಲ್ಲಿ ಆಕರ್ಷಣೆ ಮತ್ತು ಉತ್ಸಾಹ ಹೆಚ್ಚಿರುತ್ತದೆ. ಆದರೆ, ಅತಿಯಾದ ಹಠ ಮತ್ತು ಆವೇಶದ ಮಾತುಗಳಿಂದ ಸಂಗಾತಿಯೊಂದಿಗೆ ವೈಮನಸ್ಸು ಬರುವ ಸಾಧ್ಯತೆ ಇದೆ. ಕೋಪವನ್ನು ನಿಯಂತ್ರಿಸಿ, ಸಂಗಾತಿಯ ಅಭಿಪ್ರಾಯಗಳಿಗೆ ಗೌರವ ನೀಡುವುದು ಇಂದಿನ ಅಗತ್ಯವಾಗಿದೆ.

​ವೃಷಭ ರಾಶಿ :

ರಾಶ್ಯಾಧಿಪತಿ ಶುಕ್ರನು ಮಿಥುನದಲ್ಲಿ ಶುಭ ಗ್ರಹಗಳೊಂದಿಗೆ ಇರುವುದರಿಂದ ನಿಮ್ಮ ಪ್ರೇಮ ಸಂಬಂಧಗಳಲ್ಲಿ ಮಧುರತೆ ಹೆಚ್ಚಾಗಲಿದೆ. ಒಂಟಿಯಾಗಿರುವವರಿಗೆ ಮನಸ್ಸಿಗೆ ಒಪ್ಪುವ ಹೊಸ ಪ್ರೇಮದ ಪ್ರಸ್ತಾಪಗಳು ಬರುವ ಸುವರ್ಣ ಅವಕಾಶವಿದೆ. ಸಂಗಾತಿಯೊಂದಿಗೆ ಹಳೆಯ ಭಿನ್ನಾಭಿಪ್ರಾಯಗಳನ್ನು ಮರೆತು ಹೊಸ ಆರಂಭ ಮಾಡಲು ಇದು ಅತ್ಯಂತ ಸೂಕ್ತ ಸಮಯವಾಗಿದೆ.

​ಮಿಥುನ ರಾಶಿ :

ನಿಮ್ಮ ರಾಶಿಯಲ್ಲಿಯೇ ಬುಧ, ಶುಕ್ರ ಮತ್ತು ಗುರುಗಳ ಅಪೂರ್ವ ಸಂಗಮವಿದೆ. ಇದು ನಿಮ್ಮ ಪ್ರೇಮ ಜೀವನಕ್ಕೆ ಅದ್ಭುತ ಒಡನಾಟವನ್ನು ನೀಡುತ್ತದೆ. ಸಂಗಾತಿಯೊಂದಿಗೆ ಉತ್ತಮ ಸಂವಹನ, ಪ್ರೀತಿ ಮತ್ತು ಪರಸ್ಪರ ಗೌರವ ವೃದ್ಧಿಯಾಗಲಿದೆ. ಒಟ್ಟಾಗಿ ದೂರದ ಪ್ರಯಾಣ ಬೆಳೆಸುವ ಅಥವಾ ಮದುವೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಯೋಗ ಕಂಡುಬರುತ್ತಿದೆ.

​ಕರ್ಕಾಟಕ ರಾಶಿ :

ಚಂದ್ರನ ನೀಚ ಸ್ಥಿತಿಯಿಂದಾಗಿ ಪ್ರೇಮ ಜೀವನದಲ್ಲಿ ಭಾವನಾತ್ಮಕ ಏರಿಳಿತಗಳು ತೀವ್ರವಾಗಿರಲಿವೆ. ಸಂಗಾತಿಯು ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ತಪ್ಪು ಕಲ್ಪನೆ ಕಾಡಬಹುದು. ಅನಗತ್ಯ ಸಂಶಯ ಮತ್ತು ವಾದಗಳಿಂದ ದೂರವಿರಿ. ಸಂಗಾತಿಯ ಮನಸ್ಸನ್ನು ಮುಕ್ತವಾಗಿ ಮಾತನಾಡಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಸಂಬಂಧವು ಹಳಸದಂತೆ ಕಾಪಾಡಿಕೊಳ್ಳಬಹುದು.

​ಸಿಂಹ ರಾಶಿ :

ಪ್ರೇಮ ಜೀವನದಲ್ಲಿ ಯಶಸ್ಸು ಮತ್ತು ಸೌಹಾರ್ದತೆ ತುಂಬಿರುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಿನೆಮಾ, ಔತಣಕೂಟ ಅಥವಾ ಸುಂದರ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಸಂಗಾತಿಗೆ ನೀಡುವ ಸಣ್ಣ ಉಡುಗೊರೆಗಳು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಪರಸ್ಪರರ ಕನಸುಗಳಿಗೆ ಬೆಂಬಲವಾಗಿ ನಿಲ್ಲುವ ಮೂಲಕ ಪ್ರೀತಿಯು ಹೊಸ ಎತ್ತರಕ್ಕೆ ಬೆಳೆಯುತ್ತದೆ.

​ಕನ್ಯಾ ರಾಶಿ :

ರಾಶ್ಯಾಧಿಪತಿ ಬುಧನು ಶುಕ್ರನೊಂದಿಗೆ ಇರುವುದರಿಂದ ಸಂಬಂಧಗಳಲ್ಲಿ ಪರಸ್ಪರ ನಂಬಿಕೆ ಮತ್ತು ಬುದ್ಧಿವಂತಿಕೆಯ ಒಡನಾಟ ಹೆಚ್ಚಾಗಲಿದೆ. ನಿಮ್ಮ ಕಷ್ಟದ ಸಮಯದಲ್ಲಿ ಸಂಗಾತಿಯಿಂದ ನಿರೀಕ್ಷಿತ ಆರ್ಥಿಕ ಅಥವಾ ಮಾನಸಿಕ ಬೆಂಬಲ ಸಿಗಲಿದೆ. ಪ್ರೀತಿಯಲ್ಲಿ ಜವಾಬ್ದಾರಿಯುತ ನಡೆ ನಿಮ್ಮದಾಗಿದ್ದು, ಕೌಟುಂಬಿಕವಾಗಿ ನಿಮ್ಮ ಪ್ರೇಮಕ್ಕೆ ಸಮ್ಮತಿ ಸಿಗುವ ಲಕ್ಷಣಗಳಿವೆ.

​ತುಲಾ ರಾಶಿ :

ಪ್ರೇಮ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ಸಂಗಾತಿಯು ನಿಮ್ಮ ಆಲೋಚನೆಗಳಿಗೆ ಮತ್ತು ನಿರ್ಧಾರಗಳಿಗೆ ಸಂಪೂರ್ಣವಾಗಿ ಸ್ಪಂದಿಸುತ್ತಾರೆ. ಪ್ರೀತಿಯಲ್ಲಿ ಯಾವುದೇ ಗೊಂದಲಗಳಿದ್ದರೂ ಅವು ಪರಸ್ಪರ ಮಾತುಕತೆಯ ಮೂಲಕ ಸುಲಭವಾಗಿ ಬಗೆಹರಿಯಲಿವೆ. ರೋಮ್ಯಾಂಟಿಕ್ ದಿನಗಳನ್ನು ಕಳೆಯಲು ಗ್ರಹಗಳ ಬಲವು ಅತ್ಯಂತ ಪೂರಕವಾಗಿದೆ.

​ವೃಶ್ಚಿಕ ರಾಶಿ :

ನಿಮ್ಮ ರಾಶಿಯಲ್ಲಿ ಚಂದ್ರನಿರುವುದರಿಂದ ಈ ವಾರ ಕೊನೆಗೆ ಪ್ರೀತಿಯಲ್ಲಿ ಅತ್ಯಂತ ಆಳವಾದ ಭಾವನೆಗಳು ಮೂಡಲಿವೆ. ಸಂಗಾತಿಯ ಮೇಲಿನ ಅತಿಯಾದ ಒಡೆತನದ ಗುಣ ಅಥವಾ ಸಣ್ಣ ವಿಷಯಗಳಿಗೆ ಬೇಗನೆ ಬೇಸರ ಮಾಡಿಕೊಳ್ಳುವುದು ಸಂಬಂಧಕ್ಕೆ ಮುಳ್ಳಾಗಬಹುದು. ಭಾವುಕತೆಯನ್ನು ಬದಿಗಿಟ್ಟು ಪ್ರೇಮದ ದೃಷ್ಟಿಯಿಂದ ಯೋಚಿಸುವುದು ಒಳ್ಳೆಯದು.

​ಧನು ರಾಶಿ :

ಸಂಗಾತಿಯೊಂದಿಗೆ ಸೌಹಾರ್ದ ಹಾಗೂ ಆನಂದದ ವಾತಾವರಣವಿರುತ್ತದೆ. ನಿಮ್ಮ ನಡುವೆ ಇದ್ದ ಹಳೆಯ ತಪ್ಪು ತಿಳುವಳಿಕೆಗಳು ಮತ್ತು ದೂರಗಳು ಈ ಸಮಯದಲ್ಲಿ ಇಲ್ಲವಾಗಲಿವೆ. ಸಂಗಾತಿಯು ನಿಮ್ಮ ಪ್ರಾಮಾಣಿಕತೆಯನ್ನು ಗುರುತಿಸಿ ಪ್ರಶಂಸಿಸಲಿದ್ದಾರೆ. ಒಟ್ಟಾಗಿ ಭವಿಷ್ಯದ ಯೋಜನೆಗಳನ್ನು ರೂಪಿಸಲು ಇದು ಅತ್ಯಂತ ಸಕಾರಾತ್ಮಕವಾದ ಕಾಲವಾಗಿದೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

​ಮಕರ ರಾಶಿ :

ರಾಶ್ಯಾಧಿಪತಿ ಶನಿಯ ತೃತೀಯ ಸ್ಥಾನದ ಪ್ರಭಾವದಿಂದ ಪ್ರೇಮದಲ್ಲಿ ಆತುರತೆಗೆ ಆಸ್ಪದವಿರುವುದಿಲ್ಲ. ಪ್ರೀತಿಯಲ್ಲಿ ಗಾಂಭೀರ್ಯ, ನಿಷ್ಠೆ ಮತ್ತು ಜವಾಬ್ದಾರಿ ಎದ್ದು ಕಾಣುತ್ತದೆ. ಸಂಗಾತಿಯು ನಿಮ್ಮ ಕಠಿಣ ಪರಿಶ್ರಮ ಮತ್ತು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಪ್ರೇಮ ಸಂಬಂಧವು ದೀರ್ಘಕಾಲ ಬಾಳಿಕೆ ಬರುವ ದೃಢವಾದ ತಳಹದಿಯನ್ನು ಪಡೆಯಲಿದೆ.

​ಕುಂಭ ರಾಶಿ :

ಪ್ರೇಮ ಜೀವನದಲ್ಲಿ ಹೊಸ ಉತ್ಸಾಹ ಮತ್ತು ರೋಮಾಂಚನ ಕಂಡುಬರಲಿದೆ. ಸಂಗಾತಿಯೊಂದಿಗೆ ಸಂತೋಷದ ಒಡನಾಟ, ಪರಸ್ಪರ ಆಕರ್ಷಣೆ ಮತ್ತು ಪ್ರೇಮದ ತೀವ್ರತೆ ಹೆಚ್ಚಾಗಲಿದೆ. ಒಂಟಿಯಾಗಿದ್ದವರಿಗೆ ಸ್ನೇಹಿತರ ವಲಯದ ಮೂಲಕ ಹೊಸ ಪ್ರೀತಿಯ ಪರಿಚಯವಾಗುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನ ಇಷ್ಟಾರ್ಥಗಳು ಪ್ರೇಮದ ವಿಷಯದಲ್ಲಿ ಈಡೇರಲಿವೆ.

​ಮೀನ ರಾಶಿ :

ಸೂರ್ಯನ ಪ್ರಭಾವದಿಂದಾಗಿ ಸಂಗಾತಿಯೊಂದಿಗೆ ಸಣ್ಣಪುಟ್ಟ ಜಟಾಪಟಿಗಳು ಅಥವಾ ಅಹಂಕಾರದ ಸಂಘರ್ಷಗಳು ಸಂಭವಿಸಬಹುದು. ಮೂರನೇ ವ್ಯಕ್ತಿಯ ಮಾತನ್ನು ಕೇಳಿ ನಿಮ್ಮ ಪ್ರೀತಿಪಾತ್ರರನ್ನು ಸಂಶಯಿಸಬೇಡಿ. ತಾಳ್ಮೆಯಿಂದ ವರ್ತಿಸಿ ಮತ್ತು ಪರಸ್ಪರ ಗೌರವ ನೀಡಿದರೆ, ದಿನದ ಅಂತ್ಯದ ವೇಳೆಗೆ ಎಲ್ಲಾ ಗೊಂದಲಗಳು ಬಗೆಹರಿದು ಪ್ರೀತಿ ಮತ್ತಷ್ಟು ಗಾಢವಾಗುತ್ತದೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಶ್ಮಿಕಾ-ಕೃತಿ ಮಧ್ಯೆ ಕ್ಯಾಟ್ ಫೈಟ್; ಸಿನಿಮಾ ಪ್ರಚಾರಕ್ಕಾಗಿ ಚೀಪ್ ಗಿಮಿಕ್? – Kannada News | Rashmika Kriti ‘Cocktail 2’ Catfight: Smart Promo or Real Drama?

ಬಾಲಿವುಡ್‌ನ ಬಹುನಿರೀಕ್ಷಿತ ‘ಕಾಕ್‌ಟೇಲ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದ ಪ್ರಚಾರದ ವೇಳೆ ಕೃತಿ ಸನೋನ್ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ ನಡುವೆ ಕಿರಿಕ್ ನಡೆದಿದೆ ಎನ್ನಲಾಗಿದೆ. ಈ ಜಗಳದ ವಿಷಯ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಂಬೈನಲ್ಲಿ ನಡೆದ ಈ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಇಬ್ಬರ ನಡುವೆ ನಡೆದ ಮಾತಿನ ಚಕಮಕಿ, ನಂತರ ಇನ್‌ಸ್ಟಾಗ್ರಾಮ್ ಪೋಸ್ಟ್​​ಗಳಲ್ಲೂ ಮುಂದುವರಿದಿದೆ.

ವೇದಿಕೆಯಲ್ಲೇ ಶುರುವಾದ ಪೈಪೋಟಿ:

ಚಿತ್ರದ ನಿರ್ಮಾಣ ಸಂಸ್ಥೆಯಾದ ‘ಮ್ಯಾಡಾಕ್ ಫಿಲ್ಮ್ಸ್’ಗೆ ಯಾರು ಹೆಚ್ಚು ಆಪ್ತರು ಎಂಬ ವಿಷಯವಾಗಿ ವೇದಿಕೆ ಮೇಲೆಯೇ ಕೃತಿ ಹಾಗೂ ರಶ್ಮಿಕಾ ನಡುವೆ ಲಘು ಪೈಪೋಟಿ ಆರಂಭವಾಯಿತು. ಕೃತಿ ಸನೋನ್ ಮಾತನಾಡುತ್ತಾ, ‘ನಾನು ಈಗಾಗಲೇ ಮ್ಯಾಡಾಕ್ ಸಂಸ್ಥೆಯೊಂದಿಗೆ 7 ಸಿನಿಮಾಗಳನ್ನು ಮಾಡಿದ್ದೇನೆ, ಹಾಗಾಗಿ ಇದು ನನ್ನದೇ ಸಾಂಗ್ ಲಾಂಚ್’ ಎಂದು ಹೆಮ್ಮೆಯಿಂದ ಹೇಳಿದರು. ಇದಕ್ಕೆ ಕೌಂಟರ್ ನೀಡಿದ ರಶ್ಮಿಕಾ, ‘ನನ್ನ ಹಾಡು ಅಧಿಕೃತವಾಗಿ ಲಾಂಚ್ ಆಗುತ್ತಿದೆ, ಆದರೆ ನಿಮ್ಮ (ಕೃತಿ) ಹಾಡು ಕೇವಲ ನಿಮ್ಮ ಮನರಂಜನೆಗಾಗಿ ಅಷ್ಟೇ’ ಎಂದು ತಮಾಷೆ ಮಾಡಿದರು.

ಫ್ಯಾನ್ಸ್ ವೋಟಿಂಗ್ ಮತ್ತು ರಶ್ಮಿಕಾ ಆಕ್ರೋಶ:

ಕೃತಿ ಅವರ ‘ಮಾಶೂಕಾ’ ಮತ್ತು ರಶ್ಮಿಕಾ ಅವರ ‘ತುಜ್ಕೋ’ ಹಾಡುಗಳಲ್ಲಿ ಯಾವುದು ಮೊದಲು ಪ್ರಸಾರವಾಗಬೇಕು ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳ ಬಳಿ ವೋಟ್ ಮಾಡಲು ಕೇಳಿದಾಗ, ಪ್ರೇಕ್ಷಕರು ಕೃತಿ ಅವರ ಹಾಡಿಗೆ ಜೋರಾಗಿ ಜೈಕಾರ ಹಾಕಿದರು. ಇದರಿಂದ ತಮಾಷೆಯಾಗಿಯೇ ಅಸಮಾಧಾನಗೊಂಡ ರಶ್ಮಿಕಾ, ‘ಈ ವೋಟಿಂಗ್ ಪ್ರಕ್ರಿಯೆಯೇ ಫೇಕ್ ಎಂದು ವೇದಿಕೆಯಲ್ಲೇ ಕೂಗಾಡಿದರು. ಇದು ಅಲ್ಲಿ ನೆರೆದಿದ್ದವರಲ್ಲಿ ದೊಡ್ಡ ನಗುವಿನ ಅಲೆ ಎಬ್ಬಿಸಿತು.

ಮೈಕ್‌ನಲ್ಲಿ ರಶ್ಮಿಕಾ ಬಾಯಿಂದ ಬಂದ ಬೈಗುಳ:

ಕಾರ್ಯಕ್ರಮದ ಮಧ್ಯೆ ರಶ್ಮಿಕಾ ಮಂದಣ್ಣ ಅವರು ಕೃತಿ ಸನೋನ್ ಅವರ ಸೌಂದರ್ಯವನ್ನು ಹೊಗಳುವ ಉತ್ಸಾಹದಲ್ಲಿ, ಮೈಕ್ ಆನ್ ಇರುವುದನ್ನು ಮರೆತು ಅಚಾತುರ್ಯದಿಂದ ಇಂಗ್ಲಿಷ್‌ನ ಕೆಟ್ಟ ಪದವೊಂದನ್ನು ಬಳಸಿಬಿಟ್ಟರು. ಇದನ್ನು ಕೇಳಿ ಒಂದು ಕ್ಷಣ ಇಡೀ ಸಭಾಂಗಣವೇ ಸ್ತಬ್ಧವಾಯಿತು. ಆದರೆ, ತಕ್ಷಣವೇ ಪರಿಸ್ಥಿತಿಯನ್ನು ನಿಭಾಯಿಸಿದ ಕೃತಿ ಮತ್ತು ರಶ್ಮಿಕಾ ಜೋರಾಗಿ ನಗಲು ಆರಂಭಿಸಿದರು. ಇಬ್ಬರ ನಡುವೆ ಯಾವುದೇ ದ್ವೇಷವಿಲ್ಲ ಎಂಬುದು ಇದರಿಂದ ಸ್ಪಷ್ಟವಾಯಿತು.

ಇನ್‌ಸ್ಟಾಗ್ರಾಮ್‌ನಲ್ಲಿ ಕೃತಿ ನೀಡಿದ ಟಾಂಗ್:

ಆದರೆ ಈ ಮುನಿಸು ಅಷ್ಟಕ್ಕೇ ನಿಲ್ಲಲಿಲ್ಲ. ರಶ್ಮಿಕಾ ಅವರು ಕೃತಿಗೆ ಟಾಂಗ್ ಕೊಡೋ ರೀತಿ ಸ್ಟೇಟಸ್ ಹಾಕಿದರು. ಕೃತಿ ಸನೋನ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ‘ಮಾಶೂಕಾಗೆ ಹಣ್ಣಾದ ಮಾವಿನಹಣ್ಣು ಇಷ್ಟ, ಹುಳಿ ದ್ರಾಕ್ಷಿ ಅಲ್ಲ’ ಎಂದು ಬರೆಯುವ ಮೂಲಕ ರಶ್ಮಿಕಾ ಅವರ ‘ಫೇಕ್ ವೋಟಿಂಗ್’ ಕಾಮೆಂಟ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಇದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿತು.

ಇದನ್ನೂ ಓದಿ: ಫ್ರಾನ್ಸ್​​ನಲ್ಲಿ ಕನ್ನಡದ ಸಂಸ್ಕೃತಿ ಮೆರೆದ ದಿಶಾ ಮದನ್

ನಿಜವಾದ ಜಗಳನಾ ಅಥವಾ ಸ್ಮಾರ್ಟ್ ಪ್ರಮೋಷನಾ?

ಮಾಧ್ಯಮಗಳಲ್ಲಿ ಇದನ್ನು ‘ಕ್ಯಾಟ್ ಫೈಟ್’ ಎಂದು ಬಿಂಬಿಸಲಾಗುತ್ತಿದ್ದರೂ, ಸಿನಿಮಾ ತಜ್ಞರ ಪ್ರಕಾರ ಇಬ್ಬರ ನಡುವೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಬದಲಿಗೆ, ಇದು ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಹೂಡಿರುವ ಅತ್ಯಂತ ಚಾಣಾಕ್ಷ ತಂತ್ರವಾಗಿದೆ. ಶಾಹಿದ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಕಾಕ್‌ಟೇಲ್ 2’ ಚಿತ್ರದ ಇಬ್ಬರೂ ನಾಯಕಿಯರ ನಡುವೆ ಒಳ್ಳೆಯ ಬಾಂಧವ್ಯ ಇದೆ ಎನ್ನಲಾಗಿದೆ. ಜೂನ್ 19ರಂದು ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜಾನುವಾರು ಸಂಬಂಧಿತ ಮಾಹಿತಿ ಟ್ರ್ಯಾಕ್​​ಗೆ ಕರ್ನಾಟಕದಲ್ಲಿ ಹೊಸ ವ್ಯವಸ್ಥೆ: ದೇಶದಲ್ಲೇ ಮೊದಲು – Kannada News | Karnataka To Launch ‘Aadhaar Like’ Muzzle Biometric Digital Identity For Cattle

ಜಾನುವಾರು ಸಂಬಂಧಿತ ಮಾಹಿತಿ ಟ್ರ್ಯಾಕ್​​ಗೂ ಬಂತು ಆಧಾರ್​​ ಮಾದರಿ ವ್ಯವಸ್ಥೆImage Credit source: Tv9 Kannada

ಬೆಂಗಳೂರು, ಮೇ 22: ಜಾನುವಾರುಗಳ ಲಸಿಕೆ ದಾಖಲೆ, ಆರೋಗ್ಯ ಸ್ಥಿತಿ, ವಿಮೆ ಹಾಗೂ ಸಾವಿನ ಪರಿಹಾರ ಸಂಬಂಧಿತ ಮಾಹಿತಿಯನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಜಾನುವಾರುಗಳಿಗೆ ಮಜಲ್ ಬಯೋಮೆಟ್ರಿಕ್ಸ್ ಆಧಾರಿತ ಡಿಜಿಟಲ್ ಗುರುತಿನ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಬಾರ್ಕೋಡ್ ಆಧಾರಿತ ಈ ವ್ಯವಸ್ಥೆ ಜಾನುವಾರುಗಳ ಆಧಾರ್ ಕಾರ್ಡ್‌ನಂತೆ ಕಾರ್ಯನಿರ್ವಹಿಸಲಿದೆ.

ಮುಖ್ಯಾಂಶಗಳು

  • ಜಾನುವಾರು ಸಂಬಂಧಿತ ಮಾಹಿತಿ ಟ್ರ್ಯಾಕ್​​ಗೆ ಹೊಸ ವ್ಯವಸ್ಥೆ
  • ಮಜಲ್ ಬಯೋಮೆಟ್ರಿಕ್ಸ್ ಆಧಾರಿತ ಡಿಜಿಟಲ್ ಗುರುತಿಗೆ ಕ್ರಮ
  • ಜಾನುವಾರುಗಳ ಆಧಾರ್ ಕಾರ್ಡ್‌ನಂತೆ ಇದು ಕಾರ್ಯನಿರ್ವಹಣೆ

ಭಾರತದಲ್ಲೇ ಮೊದಲ ಪ್ರಯೋಗ

ಈ ಯೋಜನೆ ಭಾರತದಲ್ಲೇ ಮೊದಲ ಬಾರಿಗೆ ಜಾರಿಗೆ ಬರುತ್ತಿದ್ದು, ಕಿವಿಗೆ ಟ್ಯಾಗ್ ಹಾಕುವ ಹಳೆಯ ಪದ್ಧತಿಗೆ ಪರ್ಯಾಯವಾಗಲಿದೆ. ಮುಂದಿನ ದಿನಗಳಲ್ಲಿ ರೈತರು ತಮ್ಮ ಜಾನುವಾರುಗಳ ಫೋಟೋಗಳನ್ನು ಇದೇ ವ್ಯವಸ್ಥೆಯ ಮೂಲಕ ಅಪ್‌ಲೋಡ್ ಮಾಡುವ ಅವಕಾಶವೂ ಇರಲಿದೆ. ಇದರಿಂದ ಡಿಜಿಟಲ್ ಆರೋಗ್ಯ ಪರಿಶೀಲನೆ ಹಾಗೂ ಸರ್ಕಾರದ ಸೇವೆಗಳನ್ನು ವೇಗವಾಗಿ ಪಡೆಯಲು ನೆರವಾಗಲಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಾಕಿ; ಮಹಿಳೆಯರ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಮಹತ್ವದ ಆದೇಶ

ಈ ಕುರಿತು ಮಾಹಿತಿ ನೀಡಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಮಾನವರ ಬೆರಳಚ್ಚಿನಂತೆಯೇ ಜಾನುವಾರುಗಳ ಮೂಗಿನ ರೇಖೆಗಳು ವಿಶಿಷ್ಟವಾಗಿರುತ್ತವೆ. ಅವುಗಳ ಆಧಾರದ ಮೇಲೆ ನಿಖರ ಗುರುತಿನ ವ್ಯವಸ್ಥೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಯೋಜನೆ ಪಶುಸಂಗೋಪನೆ ಸಂಬಂಧಿತ ಯೋಜನೆಗಳಲ್ಲಿ ನಡೆಯುವ ವಂಚನೆ ತಡೆಯಲು ಹಾಗೂ ಪಾರದರ್ಶಕತೆ ಹೆಚ್ಚಿಸಲು ಸಹಾಯವಾಗಲಿದೆ ಎಂದೂ ಅವರು ಹೇಳಿದ್ದಾರೆ.

ಈ ಯೋಜನೆಯಿಂದ ರೈತರಿಗೆ ಲಸಿಕೆ ದಿನಾಂಕಗಳ ಕುರಿತು SMS ಅಲರ್ಟ್‌ಗಳು ಬರಲಿವೆ. ಹೊಸದಾಗಿ ಜನಿಸಿದ ಕರುಗಳಿಗೂ ಡಿಜಿಟಲ್ ದಾಖಲೆ ಮಾಡಬಹುದಾಗಿದೆ. ಮುಂದೆ ಮೂಗಿನ ಫೋಟೋ ಸ್ಕ್ಯಾನ್ ಮಾಡುವ ಮೂಲಕ ಆರೋಗ್ಯ ತಪಾಸಣೆಯನ್ನೂ ನಡೆಸಬಹುದಾಗಿದೆ. AI ಆಧಾರಿತ ಈ ವ್ಯವಸ್ಥೆ ಪಶುಸಂಗೋಪನೆ ಕ್ಷೇತ್ರದಲ್ಲಿ ಡಿಜಿಟಲ್ ಆಡಳಿತವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ಜಾನುವಾರುಗಳ ಟ್ರ್ಯಾಕಿಂಗ್ ಮತ್ತು ದೃಢೀಕರಣ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿಸಲಿದೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 9:54 am, Fri, 22 May 26

Source link

ನ್ಯೂಯಾರ್ಕ್​ನಲ್ಲಿ ಭಾರಿ ಮಳೆ, ಪ್ರವಾಹ ಸ್ಥಿತಿ, ಕೆರೆಯಂತಾದ ರಸ್ತೆಗಳು

ನ್ಯೂಯಾರ್ಕ್​, ಮೇ 22: ನ್ಯೂಯಾರ್ಕ್​ನಲ್ಲಿ ಭಾರಿ ಮಳೆಯಾಗುತ್ತಿದ್ದು, ಕೆಲವು ಗಂಟೆಗಳ ಕಾಲ ಸುರಿದ ಮಳೆಯಿಂದ ನ್ಯೂಯಾರ್ಕ್ ನಗರ ಜಲಾವೃತಗೊಂಡಿದೆ. ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ, ವಾಹನಗಳು ಸಂಚರಿಸುವುದು ಕಷ್ಟಕರವಾಗಿದೆ. ಎಲ್ಲೆಡೆ ನೀರು ನಿಂತಿದೆ. ರಸ್ತೆಗಳು ಕೆರೆಯಂತಾಗಿವೆ. ಮ್ಯಾನ್‌ಹ್ಯಾಟನ್‌ನಿಂದ ಕ್ವೀನ್ಸ್ ಮತ್ತು ಬ್ರೂಕ್ಲಿನ್‌ವರೆಗಿನ ಡಜನ್ಗಟ್ಟಲೆ ವೀಡಿಯೊಗಳು ನ್ಯೂಯಾರ್ಕ್ ನಗರದ ಬೀದಿಗಳು ಮತ್ತು ಸುರಂಗಮಾರ್ಗಗಳಿಗೆ ಹಾನಿಯನ್ನು ತೋರಿಸಿವೆ. ಶನಿವಾರ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದ್ದು, ಪಶ್ಚಿಮ ನ್ಯೂಯಾರ್ಕ್‌ನಲ್ಲಿ ದಿನವಿಡೀ ನಿರಂತರವಾಗಿ ಮಳೆಯಾಗುವ ಸಾಧ್ಯತೆಯಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಮೊಬೈಲ್​ನಲ್ಲಿ ಗೇಮ್ ಆಡದಂತೆ ತಂದೆ ತಡೆದಿದ್ದಕ್ಕೆ ಮನೆಬಿಟ್ಟು ಹೋದ ಮೂವರು ಮಕ್ಕಳು – Kannada News | Three Minors Leave Home After Mobile Phone Dispute in Gujarat

ಸೂರತ್, ಮೇ 22: ಮೊಬೈಲ್​(Mobile)ನಲ್ಲಿ ಗೇಮ್ ಆಡದಂತೆ ತಂದೆ ತಡೆದಿದ್ದಕ್ಕೆ ಮೂವರು ಅಪ್ರಾಪ್ತ ಮಕ್ಕಳು ಮನೆ ಬಿಟ್ಟು ಹೋಗಿರುವ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ. ಫ್ರೀ ಫೈರ್ ಗೇಮ್ ದಿನವಿಡೀ ಆಡುತ್ತಿದ್ದರು, ಇದಕ್ಕೆ ಕೋಪಗೊಂಡ ತಂದೆ ಗೇಮ್ ಆಡಬೇಡಿ ಎಂದು ಮೊಬೈಲ್ ಕಿತ್ತಿಟ್ಟುಕೊಂಡಿದ್ದರು. ಮೂವರು ಮನೆಯಿಂದ 15,000 ರೂ. ತೆಗೆದುಕೊಂಡು ಹೋಗಿದ್ದಾರೆಂದು ಆರೋಪಿಸಲಾಗಿದೆ.

ಅವರು ಮುಂಬೈ ರೈಲು ಹತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಪೊಲೀಸರ ಪ್ರಕಾರ ಕಾಣೆಯಾದ ಮಕ್ಕಳ ವಯಸ್ಸು 14, 11 ಮತ್ತು 9 ವರ್ಷ, ಅವರಲ್ಲಿ ಒಬ್ಬ ಬಾಲಕಿ ಕೂಡ ಇದ್ದಾಳೆ. ಮೇ 19ರ ಬೆಳಗಿನ ಜಾವ ಕುಟುಂಬದವರೆಲ್ಲಾ ಮಲಗಿರುವಾಗ ಅವರು ಮನೆಯಿಂದ ಓಡಿ ಹೋಗಿದ್ದಾರೆ.

ಮಕ್ಕಳು ತಮ್ಮ ತಂದೆಯ ಮೊಬೈಲ್ ಫೋನ್‌ನಲ್ಲಿ ಜನಪ್ರಿಯ ಆನ್‌ಲೈನ್ ಬ್ಯಾಟಲ್ ಗೇಮ್ ಗರೆನಾ ಫ್ರೀ ಫೈರ್ ಆಡುತ್ತಿದ್ದರು, ಅದರ ದಾಸರಾಗಿದ್ದರು ಎಂದರೂ ತಪ್ಪಾಗಲಾರದು. ತಂದೆ ಕಳೆದ ತಿಂಗಳ ಕೊನೆಯಲ್ಲಿ ತನ್ನ ಹಳ್ಳಿಗೆ ಹೋಗುವಾಗ ಆಕಸ್ಮಿಕವಾಗಿ ತನ್ನ ಫೋನ್ ಅನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ಅವರು ಇರಲಿಲ್ಲವೆಂದು, ಮಕ್ಕಳು ಮೊಬೈಲ್​ನಲ್ಲಿ ಆಟಗಳನ್ನು ಆಡುತ್ತಾ ಕಾಲ ಕಳೆದಿದ್ದರು ಎಂದು ಆರೋಪಿಸಲಾಗಿದೆ.

ತಂದೆ ಮನೆಗೆ ಹಿಂದಿರುಗಿದಾಗ ತಮ್ಮ ಮಕ್ಕಳು ಮೊಬೈಲ್ ಗೇಮ್ ಹುಚ್ಚು ಹಿಡಿಸಿಕೊಂಡಿದ್ದಾರೆ ಎಂದು ತಾಯಿ ದೂರು ಕೊಟ್ಟಿದ್ದರು.ಈ ಅಭ್ಯಾಸವನ್ನು ನಿಲ್ಲಿಸುವ ಪ್ರಯತ್ನದಲ್ಲಿ, ಘಟನೆಗೆ ಮೂರು ದಿನಗಳ ಮೊದಲು ತಂದೆ ಫೋನ್‌ನಿಂದ ಸಿಮ್ ಕಾರ್ಡ್ ತೆಗೆದು ಮೊಬೈಲ್ ಅನ್ನು ಲಾಕ್ ಮಾಡಿದ್ದರು ಎಂದು ವರದಿಯಾಗಿದೆ. ಈ ನಿರ್ಬಂಧದಿಂದ ಮಕ್ಕಳು ಕೋಪಗೊಂಡರು, ನಂತರ ಅವರು ಮನೆ ಬಿಡಲು ನಿರ್ಧರಿಸಿರಬಹುದು ಎಂದಿದ್ದಾರೆ.

ಮತ್ತಷ್ಟು ಓದಿ: ಹುಬ್ಬಳ್ಳಿ ಏರ್‌ಪೋರ್ಟ್‌ಗೆ ಬಂತು ಹೈಟೆಕ್ ‘ಮೂವಿಂಗ್ ಆಫೀಸ್’: ನೆಟ್‌ವರ್ಕ್ ಇಲ್ಲದಿದ್ದರೂ ಕೆಲಸ ಮಾಡುತ್ತೆ ಈ ಸ್ಯಾಟಲೈಟ್ ವಾಹನ!

ಸೂರತ್‌ನ ಜವಳಿ ಉದ್ಯಮದಲ್ಲಿ ತೊಡಗಿರುವ ಕಾರ್ಮಿಕ ಕುಟುಂಬಕ್ಕೆ ಸೇರಿದ ಈ ಮಕ್ಕಳು ಮನೆಯಿಂದ ಹೊರಡುವ ಮೊದಲು 15 ಸಾವಿರ ರೂ. ತೆಗೆದುಕೊಂಡು ಹೋಗಿದ್ದರು. ಮಕ್ಕಳು ಕಾಣೆಯಾಗಿರುವುದನ್ನು ಕಂಡುಕೊಂಡ ನಂತರ, ಕುಟುಂಬವು ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿತು. ಮಕ್ಕಳು ಹೆಚ್ಚಿನ ಸಮಯವನ್ನು ಮೊಬೈಲ್ ಆಟಗಳನ್ನು ಆಡುವುದರಲ್ಲಿ ಮತ್ತು ಅಂತಹುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಕಳೆಯುತ್ತಿದ್ದರು.ಇದರಿಂದ ಅಸಮಾಧಾನಗೊಂಡ ತಂದೆ ಅವರನ್ನು ಗದರಿಸಿ ಸಲಹೆ ನೀಡಿದ್ದರು.

ಮಕ್ಕಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೆಲವು ವಸ್ತುಗಳು ಮತ್ತು ನಗದು ತೆಗೆದುಕೊಂಡು ಮನೆಯಿಂದ ಹೊರಟು ಹೋಗಿದ್ದಾರೆ. ಇಲ್ಲಿಯವರೆಗೆ ಪರಿಶೀಲಿಸಲಾದ ಸಿಸಿಟಿವಿ ದೃಶ್ಯಾವಳಿಗಳು ಮಕ್ಕಳು ಸುರಕ್ಷಿತವಾಗಿರುವಂತೆ ಕಾಣುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Guru Sanchara 2026: ಗುರು ಸಂಚಾರ ಕಟಕ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? – Kannada News | Cancer Horoscope 2026: Dr. Basavaraj Gurujis Predictions for Jupiters Transit

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಕರ್ಕಾಟಕ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. 2026ರ ಗುರು ಸಂಚಾರವು ಕರ್ಕಾಟಕ ರಾಶಿಯವರಿಗೆ ಮಹತ್ವದ ಫಲಗಳನ್ನು ತರಲಿದೆ. ಗುರುವು ಉಚ್ಚ ಸ್ಥಾನದಲ್ಲಿ ಸಂಚರಿಸುವುದರಿಂದ ಇದು ಶುಭಕಾಲವಾಗಿದೆ. ಮಾನಸಿಕ ಶಾಂತಿ, ಗೌರವ, ಕೀರ್ತಿ ಮತ್ತು ಅಧಿಕಾರ ಪ್ರಾಪ್ತಿಯಾಗಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ ಹಾಗೂ ಪ್ರೀತಿ ಪ್ರೇಮ ವ್ಯವಹಾರಗಳಲ್ಲಿ ಉತ್ತಮ ಫಲ ದೊರೆಯಲಿದೆ. ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ.

ವ್ಯಾಪಾರಸ್ಥರಿಗೆ ಈ ಅವಧಿ ಉತ್ತಮವಾಗಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಭೂಮಿ ಯೋಗ ಹಾಗೂ ವಿದೇಶ ಪ್ರಯಾಣದ ಅವಕಾಶಗಳಿವೆ. ಮಹಿಳೆಯರಿಗೆ ಶುಭ ಫಲಗಳಿದ್ದು, ಸಂಸ್ಥೆಗಳನ್ನು ಸ್ಥಾಪಿಸಲು ಇದು ಸಕಾಲ. ಹಳೆಯ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಆದರೆ, ಮೇಲಾಧಿಕಾರಿಗಳೊಂದಿಗೆ ಹುಷಾರಾಗಿರಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ಅರ್ಧಕ್ಕೆ ನಿಂತ ಮನೆ ಕಟ್ಟುವ ಕೆಲಸದಲ್ಲಿ ಕೆಲವು ದುಷ್ಟ ಶಕ್ತಿಗಳ ಪ್ರಭಾವದ ಸಾಧ್ಯತೆಗಳಿರುವುದರಿಂದ ಎಚ್ಚರಿಕೆ ಅಗತ್ಯ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಲಿಕಲ್ಲು ಸಹಿತ ಗಾಳಿ ಮಳೆಗೆ ಪತರುಗುಟ್ಟಿದ ಬೆಂಗಳೂರು: ಮರಬಿದ್ದು ಕಾರುಗಳು ಜಖಂ, ಅಪಾರ ಹಾನಿ – Kannada News | Hailstorm Havoc in Bengaluru: Trees Uprooted, Cars Damaged, Metro Services Affected

ಬೆಂಗಳೂರು, ಮೇ 22: ನಗರದಲ್ಲಿ ಸುರಿದ ಭಾರಿ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯಿಂದ ವ್ಯಾಪಕ ಅನಾಹುತಗಳು ಸೃಷ್ಟಿಯಾಗಿವೆ. ಹಲವೆಡೆ ಮರಗಳು ಬುಡ ಸಮೇತ ಉರುಳಿ ಬಿದ್ದು ವಾಹನಗಳಿಗೆ ಹಾನಿ ಉಂಟುಮಾಡಿವೆ. ಮಹಾಲಕ್ಷ್ಮಿ ಲೇಔಟ್‌ನ ಸಿದ್ದಾರೂಢ ಪಾರ್ಕ್ ಬಳಿ ಮೂರು ಕಾರುಗಳು ಜಖಂಗೊಂಡರೆ, ರಾಜಾಜಿನಗರದ ಶಂಕರಮಠ ರಸ್ತೆ ಮತ್ತು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಮರ ಬಿದ್ದು ಐದಕ್ಕೂ ಹೆಚ್ಚು ಕಾರುಗಳಿಗೆ ಹಾನಿಯಾಗಿದೆ. ಶಂಕರಮಠ ರಸ್ತೆಯಲ್ಲಿ ಮರ ಬಿದ್ದ ಕಾರಣ 15 ಬಿಎಂಟಿಸಿ ಬಸ್‌ಗಳು ಎರಡು ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಲ್ಲಬೇಕಾಯಿತು. ವಿದ್ಯುತ್ ಕಂಬಗಳು ಉರುಳಿ, ಮೆಟ್ರೋ ಸಂಚಾರದಲ್ಲೂ ವ್ಯತ್ಯಯ ಉಂಟಾಗಿತ್ತು. ಯುಬಿ ಸಿಟಿ ಬಳಿ ರಸ್ತೆ ಕುಸಿತದಿಂದ ಕಾರು ಸಿಲುಕಿಕೊಂಡಿತ್ತು. ಈ ನಡುವೆ ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಬೆಂಗಳೂರು ಮಹಾಜನತೆ ಗಮನಕ್ಕೆ: ಈ ರೋಡ್‌ನಲ್ಲಿ ಸಂಚರಿಸುವ ಮುನ್ನ ಯೋಚಿಸಿ; 1 ಗಂಟೆಯ ಜರ್ನಿ ಇನ್ಮುಂದೆ 2 ಗಂಟೆ! – Kannada News | ORR Construction in Bengaluru: Silk Board KR Puram Traffic Chaos Expected for 9 Months

ಬೆಂಗಳೂರು, ಮೇ.22: ಸಿಲಿಕಾನ್ ಸಿಟಿಯ ಅತ್ಯಂತ ಪ್ರಮುಖ ಹಾಗೂ ಸದಾ ವಾಹನ ದಟ್ಟಣೆಯಿಂದ ಕೂಡಿರುವ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂವರೆಗಿನ ಹೊರವರ್ತುಲ ರಸ್ತೆಯಲ್ಲಿ (ORR) ದೊಡ್ಡ ಮಟ್ಟದ ಬದಲಾವಣೆ ಕಾಣಲಿದೆ. ಈ ವ್ಯಾಪ್ತಿಯ 17.1 ಕಿಲೋಮೀಟರ್ ಉದ್ದದ ಅಸ್ತಿತ್ವದಲ್ಲಿರುವ ಡಾಂಬರು ರಸ್ತೆಯನ್ನು ತೆಗೆದು, ಹೆಚ್ಚು ಬಾಳಿಕೆ ಬರುವ ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸಲು ಬಿಬಿಎಂಪಿ ಮತ್ತು ಸರ್ಕಾರ ನಿರ್ಧರಿಸಿದೆ. ಬರೋಬ್ಬರಿ 378 ಕೋಟಿ ರೂ. ವೆಚ್ಚದ ಈ ಬೃಹತ್ ಯೋಜನೆಗೆ ಟೆಂಡರ್ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ.

ಟ್ರಾಫಿಕ್‌ನಲ್ಲಿ ಸಿಲುಕಲಿವೆ 450ಕ್ಕೂ ಹೆಚ್ಚು ಐಟಿ ಕಂಪನಿಗಳು!

ಈ ಹೊರವರ್ತುಲ ರಸ್ತೆಯ ಕಾರಿಡಾರ್‌ನಲ್ಲಿ ನಿತ್ಯ 23 ಟೆಕ್ ಪಾರ್ಕ್‌ಗಳು ಹಾಗೂ 450ಕ್ಕೂ ಹೆಚ್ಚು ಪ್ರಮುಖ ಐಟಿ ಕಂಪನಿಗಳ ನೌಕರರು ಸೇರಿದಂತೆ ಬರೋಬ್ಬರಿ 8 ಲಕ್ಷಕ್ಕೂ ಹೆಚ್ಚು ಜನರು ಸಂಚರಿಸುತ್ತಾರೆ. ರಸ್ತೆಯ ಮುಖ್ಯ ಕ್ಯಾರಿಯೇಜ್ ವೇ ನಲ್ಲಿ 190 ಎಂಎಂ ದಪ್ಪದ ಕಾಂಕ್ರೀಟ್ ಮೇಲ್ಮೈ ನಿರ್ಮಿಸಲಾಗುತ್ತಿದ್ದು, ಜೊತೆಗೆ ಸರ್ವಿಸ್ ರಸ್ತೆಗಳ ಪುನರ್ನಿರ್ಮಾಣ, ಚರಂಡಿ ಮೇಲ್ದರ್ಜೀಕರಣ ಹಾಗೂ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಯೋಜನೆಯನ್ನು ಪೂರ್ಣಗೊಳಿಸಲು 1 ವರ್ಷದ ಗಡುವು ನೀಡಲಾಗಿದ್ದರೂ, ಅಧಿಕಾರಿಗಳು ಇದನ್ನು 9 ತಿಂಗಳಲ್ಲೇ ಮುಗಿಸಲು ಪ್ಲಾನ್​ ಹಾಕಿಕೊಂಡಿದ್ದಾರೆ. ಅಲ್ಲಿಯವರೆಗೆ ಈ ಭಾಗದಲ್ಲಿ ಸಂಚಾರ ನರಕಸದೃಶವಾಗಲಿದೆ.

ಯಾವೆಲ್ಲಾ ಪ್ರಮುಖ ಜಂಕ್ಷನ್‌ಗಳಲ್ಲಿ ಭಾರಿ ಸಂಚಾರ ದಟ್ಟಣೆ?:

ಕಾಮಗಾರಿ ಆರಂಭವಾದರೆ ಪ್ರಸ್ತುತ 45 ನಿಮಿಷ ತೆಗೆದುಕೊಳ್ಳುವ ಪ್ರಯಾಣದ ಅವಧಿ 90 ನಿಮಿಷಕ್ಕೆ ಹಾಗೂ 1 ಗಂಟೆಯ ಪ್ರಯಾಣ 2 ಗಂಟೆಗೂ ಅಧಿಕ ಸಮಯಕ್ಕೆ ವಿಸ್ತರಣೆಯಾಗಲಿದೆ ಎಂದು ಸಂಚಾರಿ ಪೊಲೀಸರು ಎಚ್ಚರಿಸಿದ್ದಾರೆ. ಮುಖ್ಯವಾಗಿ ಈ ಕೆಳಗಿನ ಹಾಟ್‌ಸ್ಪಾಟ್‌ಗಳು ಕಂಪ್ಲೀಟ್ ಜ್ಯಾಮ್ ಆಗಲಿವೆ.

ಸಿಲ್ಕ್ ಬೋರ್ಡ್ ಜಂಕ್ಷನ್ (Silk Board)

ಎಚ್‌ಎಸ್‌ಆರ್ ಲೇಔಟ್ ಜಂಕ್ಷನ್ (HSR Layout)

ಅಗ್ರ ಜಂಕ್ಷನ್ (Agara)

ಇಬ್ಲೂರು ಜಂಕ್ಷನ್ (Iblur)

ಮಾರತ್‌ಹಳ್ಳಿ ಜಂಕ್ಷನ್ (Marathahalli)

ಕೆ.ಆರ್. ಪುರಂ ರಸ್ತೆ (KR Pura)

ವಾಹನ ಸವಾರರಿಗೆ ಬರ್ಯಾಯ ರಸ್ತೆಗಳ ಆಯ್ಕೆ:

ಟ್ರಾಫಿಕ್ ಸಂಕಷ್ಟದಿಂದ ಪಾರಾಗಲು ಸಾರ್ವಜನಿಕರು ಹಾಗೂ ಟೆಕ್ಕಿಗಳು ಈ ಕೆಳಗಿನ ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚಿಸಲಾಗಿದೆ.

ಸರ್ಜಾಪುರ ರಸ್ತೆ (Sarjapur Road)

ಇಂಟರ್ ಮೀಡಿಯೆಟ್ ರಿಂಗ್ ರೋಡ್ (IRR)

ಹೊಸೂರು ರಸ್ತೆ ಕಾರಿಡಾರ್ (Hosur Road)

ಬೆಂಗಳೂರಿನ ಒಳಗಿನ ಲಿಂಕ್ ರಸ್ತೆಗಳು

ನಮ್ಮ ಮೆಟ್ರೋ (Namma Metro) ಮತ್ತು ಫೀಡರ್ ಬಸ್‌ಗಳ ಸೌಲಭ್ಯ.

ಇದನ್ನೂ ಓದಿ: ವರುಣನ ಕೃಪೆಯಿಂದ ಬೆಂಗಳೂರಲ್ಲಿ ಗಣನೀಯವಾಗಿ ಸುಧಾರಿಸಿದ ವಾಯು ಗುಣಮಟ್ಟ!

ಬೆಂಗಳೂರು ಸಂಚಾರಿ ಪೊಲೀಸರು ಈಗಾಗಲೇ ಐಟಿ ಕಂಪನಿಗಳ ಒಕ್ಕೂಟ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರ್ಯಾಯ ಸಂಚಾರ ವ್ಯವಸ್ಥೆ ಹಾಗೂ ಆಫೀಸ್ ಸಮಯದ ಬದಲಾವಣೆ ಕುರಿತು ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಡೈವರ್ಷನ್ ಪ್ಲಾನ್ ಪ್ರಕಟಿಸಲಿದ್ದಾರೆ.

ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ದಂಪತಿ ಪೂಜಾ ಕಾರ್ಯಗಳಲ್ಲಿ ಕುಳಿತುಕೊಳ್ಳುವಾಗ ಈ ತಪ್ಪು ಮಾಡಲೇಬೇಡಿ – Kannada News | Understanding Traditional Seating for Couples in Pooja and Daily Activities

ದಂಪತಿಗಳು ಶುಭ ಕಾರ್ಯಗಳಲ್ಲಿ ಹೇಗೆ ಕುಳಿತುಕೊಳ್ಳಬೇಕುImage Credit source: Pinterest

ದಂಪತಿಗಳು ಶುಭ ಕಾರ್ಯಗಳಲ್ಲಿ ಹೇಗೆ ಕುಳಿತುಕೊಳ್ಳಬೇಕು ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಪತಿ ಮತ್ತು ಪತ್ನಿ ಒಂದು ದೇಹದ ಎರಡು ಭಾಗಗಳಿದ್ದಂತೆ ಎಂಬುದು ಭಾರತೀಯ ಸಂಸ್ಕೃತಿಯಲ್ಲಿರುವ ಆಳವಾದ ನಂಬಿಕೆ. ಋಣಾನುಬಂಧ ರೂಪೇಣ ಪಶುಪತ್ನಿ ಸುತಾಲಯಹ ಮತ್ತು ಅರ್ಧಾಂಗಿ ಹಾಗೂ ಅರ್ಧನಾರೀಶ್ವರ ಎಂಬ ಪರಿಕಲ್ಪನೆಗಳು ಈ ಬಾಂಧವ್ಯದ ಮಹತ್ವವನ್ನು ಸಾರುತ್ತವೆ. ಯಾವುದೇ ಶುಭಕಾರ್ಯಗಳು ಪೂರ್ಣ ಫಲ ನೀಡಬೇಕಾದರೆ, ದಂಪತಿಗಳು ಶಾಸ್ತ್ರಬದ್ಧವಾಗಿ ಆಸೀನರಾಗಿರುವುದು ಅನಿವಾರ್ಯ.

ಪೂಜಾ ಕಾರ್ಯಗಳು, ಧಾರ್ಮಿಕ ವಿಧಿಗಳು ಮತ್ತು ಮಂಗಳಕರ ಸಂದರ್ಭಗಳಲ್ಲಿ ಪತ್ನಿಯು ಪತಿಯ ಬಲಭಾಗದಲ್ಲಿ ಕುಳಿತುಕೊಳ್ಳಬೇಕು. ಕನ್ಯಾದಾನ, ವಿವಾಹ ಸಮಾರಂಭಗಳು, ಹೋಮ-ಹವನಗಳು, ಯಜ್ಞ-ಯಾಗಾದಿಗಳು, ಗೃಹ ಪ್ರವೇಶ, ಉಪನಯನ, ದೇವಸ್ಥಾನಗಳಲ್ಲಿ ದೇವರ ದರ್ಶನ, ಮನೆಗಳಲ್ಲಿ ದೇವರ ಪೂಜೆ, ಮತ್ತು ಜ್ಯೋತಿಷಿಗೆ ಜಾತಕ ತೋರಿಸುವಂತಹ ಕಾರ್ಯಗಳಲ್ಲಿ ಈ ನಿಯಮ ಪಾಲನೆ ಅಗತ್ಯ. ನಾಂದಿ ಮತ್ತು ಸೋಮಯಜ್ಞದಂತಹ ಸಮಾರಂಭಗಳಲ್ಲೂ ಧರ್ಮಪತ್ನಿಯು ಗಂಡನ ಬಲಭಾಗದಲ್ಲಿ ಇರಬೇಕು. ಹೀಗೆ ಕುಳಿತರೆ ಆ ಕಾರ್ಯಗಳು ಪೂರ್ಣವಾಗಿ ಮತ್ತು ಸಫಲವಾಗಿ ನೆರವೇರುತ್ತವೆ ಎಂದು ನಂಬಲಾಗಿದೆ. ಪೂಜಾ ಕಾರ್ಯಗಳನ್ನು ಮಾಡುವಾಗ, ಮಾತನಾಡುವುದನ್ನು ನಿಲ್ಲಿಸಿ, ಭಕ್ತಿ ಮತ್ತು ಶ್ರದ್ಧೆಯಿಂದ ಸಂಪೂರ್ಣವಾಗಿ ತೊಡಗಿಸಿಕೊಂಡು, ಭಗವಂತನನ್ನು ಆವಾಹಿಸುವುದು ಮುಖ್ಯ ಎಂದು ತಿಳಿಸಲಾಗಿದೆ. ಕಾರ್ಯ ಆರಂಭಿಸುವ ಮೊದಲು ಮತ್ತು ಮುಗಿದ ನಂತರ ಮನೆಯನ್ನು ನಮಸ್ಕರಿಸುವ ಸಂಪ್ರದಾಯವೂ ಇದೆ.

ಆದರೆ, ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಪತ್ನಿಯು ಪತಿಯ ಎಡಭಾಗದಲ್ಲಿ ಇರಬೇಕು. ಸೇವಾ ಕಾರ್ಯಗಳು ಮತ್ತು ಧರ್ಮ ಕೆಲಸಗಳನ್ನು ಮಾಡುವಾಗ, ಉದಾಹರಣೆಗೆ ಅನುದಾನ ನೀಡುವುದು, ಪತ್ನಿಯು ಗಂಡನ ವಾಮಭಾಗ ಅಂದರೆ ಎಡಭಾಗದಲ್ಲಿ ಇರಬೇಕು. ಮನೆಯಲ್ಲಿ ಮಲಗುವಾಗಲೂ ಪತ್ನಿಯು ಗಂಡನ ಎಡಭಾಗದಲ್ಲಿ ಮಲಗಬೇಕು ಎಂಬ ನಿಯಮವಿದೆ. ಗುರು-ಹಿರಿಯರಿಗೆ, ಬ್ರಾಹ್ಮಣರಿಗೆ, ವಿಪ್ರರಿಗೆ, ಮಠಮಾನ್ಯಗಳ ಸ್ವಾಮಿಗಳಿಗೆ, ಮತ್ತು ಇತರ ಹಿರಿಯರಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆಯುವಾಗಲೂ ಪತ್ನಿಯು ಎಡಭಾಗದಲ್ಲಿ ಇರುವುದು ಶುಭ. ಅಷ್ಟೇ ಅಲ್ಲದೆ, ಪ್ರಯಾಣ ಮಾಡುವಾಗ, ಅದು ರೈಲು, ಬಸ್ಸು, ಅಥವಾ ಸ್ವಂತ ಕಾರಿನಲ್ಲಿರಲಿ, ಪತ್ನಿಯು ಪತಿಯ ಎಡಭಾಗದಲ್ಲಿ ಇರಬೇಕು ಎಂದು ಹೇಳಲಾಗಿದೆ. ಹೀಗೆ ಮಾಡಿದರೆ ಪ್ರಯಾಣ ಸುಗಮವಾಗಿ ಯಶಸ್ವಿಯಾಗಿ ಸಾಗುತ್ತದೆ ಎಂಬುದು ಶಾಸ್ತ್ರಗಳ ಒಳನೋಟ.

ಸನಾತನ ಧರ್ಮದಲ್ಲಿ ಇಂತಹ ನಿಯಮಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಲು ರೂಪಿಸಲಾಗಿದೆ. ದಂಪತಿಗಳು ಈ ಶಾಸ್ತ್ರಬದ್ಧ ಆಸನ ಕ್ರಮಗಳನ್ನು ಅನುಸರಿಸುವುದರಿಂದ ಕಾರ್ಯಗಳ ಪರಿಪೂರ್ಣ ಫಲವನ್ನು ಪಡೆಯಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:54 am, Fri, 22 May 26

Source link

Exit mobile version