Optical Illusion: ಬುದ್ಧಿವಂತರಿಗೊಂದು ಸವಾಲ್;‌ ಈ ಚಿತ್ರದಲ್ಲಿರುವ ವೃತ್ತಗಳನ್ನು ಗುರುತಿಸಬಲ್ಲಿರಾ – Kannada News | Optical Illusion: Find the circles hidden in this picture within 10 seconds

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: vecernji.hr

ನಿಮ್ಮ ಏಕಾಗ್ರತೆಯನ್ನು ಪರೀಕ್ಷಿಸುವಂತಹ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು, ಬ್ರೈನ್‌ ಟೀಸರ್‌ ಆಟಗಳು ಖಂಡಿತ ನಿಮಗೆ ನೆರವಾಗುತ್ತದೆ. ಆದರೆ ಈ ಟ್ರಿಕ್ಕಿ ಒಗಟು ಬಿಡಿಸುವಾಗ ನಿಮ್ಮ ಮೆದುಳನ್ನು ಬಳಸಿಕೊಳ್ಳಬೇಕಷ್ಟೇ. ಇದೀಗ ನೀವು ಅತೀ ಬುದ್ಧಿವಂತರೇ ಎಂದು ಪರೀಕ್ಷಿಸಿಕೊಳ್ಳಲು ಇದೊಂದು ಒಳ್ಳೆಯ ಸಮಯ. ಕಪ್ಪು ಹಾಗೂ ಬಿಳಿ ರೇಖೆಗಳನ್ನೊಳಗೊಂಡ ಚಿತ್ರದಲ್ಲಿ ಎಷ್ಟು ವೃತ್ತಗಳಿವೆ ಎಂದು ಕಂಡು ಹಿಡಿಯಬೇಕು. ಈ ಒಗಟು ಬಿಡಿಸಲು ಇರುವ ಸಮಯವಕಾಶ ಹತ್ತು ಸೆಕೆಂಡುಗಳು ಮಾತ್ರ. ನೀವು ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಿಕೊಳ್ಳಲು ರೆಡಿ ಇದ್ದೀರಾ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಬಿಡುವಿನ ವೇಳೆಯಲ್ಲಿ ಸಮಯ ಕಳೆಯಲು ನೆರವಾಗುತ್ತದೆ. ಇಂಟರ್ನೆಟ್‌ನಲ್ಲಿ ಟ್ರೆಂಡ್ ಆಗಿರುವ ಚಿತ್ರದಲ್ಲಿ ಕಪ್ಪು ಬಿಳಿ ರೇಖೆಗಳನ್ನೊಳಗೊಂಡ ವೃತ್ತಗಳು ಕಾಣಿಸುತ್ತವೆ. ಈ ರೇಖೆಗಳ ಜೋಡಣೆಯೂ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಈ ಚಿತ್ರ ನೋಡಿದಾಗ ಕಣ್ಣಿಗೆ ಬೀಳುವುದೇ ಮೂರು ನಾಲ್ಕು ವೃತ್ತಗಳಷ್ಟೇ. ಆದರೆ ಕಣ್ಣು ಬಿಟ್ಟು ನೋಡಿದಾಗ ಮಾತ್ರ ವೃತ್ತಗಳ ನಿಖರ ಸಂಖ್ಯೆಯನ್ನು ಹೇಳಲು ಸಾಧ್ಯ.

ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್;‌ ಗೂಬೆಗಳ ನಡುವೆ ಅಡಗಿರುವ ಬೆಕ್ಕನ್ನು ಹುಡುಕಬಲ್ಲಿರಾ?

ವೃತ್ತಗಳನ್ನು ಗುರುತಿಸಲು ಸಾಧ್ಯವಾಯಿತೇ?

ಈ ಚಿತ್ರದಲ್ಲಿ 16 ವೃತ್ತಗಳಿವೆ. ಆದರೆ ವಿನ್ಯಾಸದಿಂದ ಇಲ್ಲಿರುವ ಎಲ್ಲಾ ವೃತ್ತಗಳು ಕಣ್ಣಿಗೆ ಗೋಚರಿಸುವುದಿಲ್ಲ. ನಿಮಗೆ ಸುಳಿವನ್ನು ನೀಡಿ ವೃತ್ತಗಳ ನಿಖರ ಸಂಖ್ಯೆಯನ್ನು ಹೇಳಲು ಸಹಾಯ ಮಾಡುತ್ತೇವೆ. ರೇಖೆಗಳ ನಡುವಿನ ಖಾಲಿ ಜಾಗದ ನಡುವೆ ನಿಮ್ಮ ಗಮನವನ್ನು ಕೇಂದ್ರಿಕರಿಸಿ. ಆಗ ನಿಮಗೆ ಒಂದೊಂದು ವೃತ್ತಗಳು ಕಾಣಿಸುತ್ತವೆ. ಒಂದು ವೇಳೆ ವೃತ್ತಗಳನ್ನು ಗುರುತಿಸಲು ವಿಫಲವಾದರೆ ಈ ಕೆಳಗಿನ ಚಿತ್ರದಲ್ಲಿ ವೃತ್ತಗಳನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೈವೇಯಲ್ಲಿ ಸಿಸಿಟಿವಿ ಹಾಕಿ ಪಾಕಿಸ್ತಾನಕ್ಕೆ ಭಾರತದ ಸೈನಿಕರ ಚಲನವಲನಗಳ ಮಾಹಿತಿ ನೀಡ್ತಿದ್ದ ಪಂಜಾಬ್ ವ್ಯಕ್ತಿ ಅರೆಸ್ಟ್​ – Kannada News | Punjab Man Accused of Sharing Military Movement Footage Across Border

ಪಠಾಣ್‌ಕೋಟ್, ಮೇ 22: ಭಾರತೀಯ ರಕ್ಷಣಾ ಪಡೆಗಳ ಚಲನವಲನಗಳ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನ(Pakistan)ದ ಹ್ಯಾಂಡ್ಲರ್‌ಗಳಿಗೆ ರವಾನಿಸುತ್ತಿದ್ದ ಆರೋಪದ ಮೇಲೆ ಪಠಾಣ್‌ಕೋಟ್ ಪೊಲೀಸರು ಬಲ್ಜಿತ್ ಸಿಂಗ್ ಅಲಿಯಾಸ್ ಬಿಟ್ಟು ಎಂಬಾತನನ್ನು ಬಂಧಿಸಿದ್ದಾರೆ. ಚಕ್ ಧಾರಿವಾಲ್ ಗ್ರಾಮದ ನಿವಾಸಿಯಾದ ಬಲ್ಜಿತ್ ಸಿಂಗ್, ರಾಷ್ಟ್ರೀಯ ಹೆದ್ದಾರಿ-44ರ ಪಠಾಣ್‌ಕೋಟ್-ಜಮ್ಮು ರಸ್ತೆಯ ಸೇತುವೆಯ ಬಳಿಯ ಅಂಗಡಿಯೊಂದರಲ್ಲಿ ಇಂಟರ್ನೆಟ್ ಆಧಾರಿತ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದ.

ಈ ಹೆದ್ದಾರಿಯಲ್ಲಿ ಹಾದುಹೋಗುವ ಸೇನೆ ಮತ್ತು ಅರೆಸೈನಿಕ ಪಡೆಗಳ ಚಲನವಲನಗಳನ್ನು ಲೈವ್ ಆಗಿ ಮೇಲ್ವಿಚಾರಣೆ ಮಾಡಿ, ಮಾಹಿತಿಯನ್ನು ಪಾಕಿಸ್ತಾನ ಮತ್ತು ವಿದೇಶಿ ಏಜೆಂಟ್‌ಗಳಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಕಳುಹಿಸುತ್ತಿದ್ದ. ಈ ಕೆಲಸಕ್ಕಾಗಿ ದುಬೈನಲ್ಲಿರುವ ಅಪರಿಚಿತ ವ್ಯಕ್ತಿಯಿಂದ ಈತನಿಗೆ ನಿರ್ದೇಶನಗಳು ಬರುತ್ತಿದ್ದವು ಮತ್ತು ಅದಕ್ಕಾಗಿ 40,000 ರೂ. ಹಣವನ್ನೂ ನೀಡಲಾಗಿತ್ತು. ಸದ್ಯ ಪೊಲೀಸರು ಈತನಿಂದ ಕ್ಯಾಮೆರಾ ಮತ್ತು ವೈಫೈ ರೂಟರ್ ವಶಪಡಿಸಿಕೊಂಡಿದ್ದು, ಜಾಲದಲ್ಲಿದ್ದ ಉಳಿದ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದಕ್ಕೂ ಮುನ್ನ ಪಂಜಾಬ್ ಪೊಲೀಸರು ಜಲಂಧರ್ ಮತ್ತು ಕಪುರ್ತಲಾದಲ್ಲಿ ಇಂತದೇ ಎರಡು ಪ್ರಮುಖ ಬೇಹುಗಾರಿಕೆ ಜಾಲಗಳನ್ನು ಧ್ವಂಸಗೊಳಿಸಿದ್ದರು. ಪಾಕಿಸ್ತಾನದ ಹ್ಯಾಂಡ್ಲರ್‌ಗಳು ಮಿಲಿಟರಿ ನೆಲೆಗಳ ಬಳಿ ಕಣ್ಣಿಡಲು ಅತ್ಯಾಧುನಿಕ, ಚೀನಾ ನಿರ್ಮಿತ ಮತ್ತು ಸೌರಶಕ್ತಿ ಚಾಲಿತ  ಸಿಸಿಟಿವಿ ಕ್ಯಾಮೆರಾಗಳನ್ನು ಬಳಸುತ್ತಿದ್ದರು. ಈ ಹೈಟೆಕ್ ಕ್ಯಾಮೆರಾಗಳಿಗೆ ಯಾವುದೇ ವೈರಿಂಗ್ ಅಗತ್ಯವಿರಲಿಲ್ಲ.

ಮತ್ತಷ್ಟು ಓದಿ: ಭಯೋತ್ಪಾದನೆ ನಿಲ್ಲಿಸದಿದ್ದರೆ ಇತಿಹಾಸ, ಭೂಪಟದಿಂದ ಪಾಕಿಸ್ತಾನ ಮರೆಯಾಗಲಿದೆ: ಭಾರತೀಯ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!

ಇವು 4G ಸಿಮ್ ಕಾರ್ಡ್ ಮತ್ತು ಸೋಲಾರ್ ಪ್ಲೇಟ್ ಸಹಾಯದಿಂದ ಆಫ್-ಗ್ರಿಡ್ ಆಗಿ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದವು. ಮೊಬೈಲ್ ಆಪ್‌ಗಳ ಮೂಲಕ ಪಾಕಿಸ್ತಾನಿ ಹ್ಯಾಂಡ್ಲರ್‌ಗಳು ಭಾರತೀಯ ಸೇನೆಯ ನೇರ ದೃಶ್ಯಗಳನ್ನು ವೀಕ್ಷಿಸುತ್ತಿದ್ದರು ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.

ಜಲಂಧರ್‌ನಲ್ಲಿ ಸುಖ್ವಿಂದರ್ ಸಿಂಗ್ ಎಂಬಾತನನ್ನು ಹಾಗೂ ಕಪುರ್ತಲಾದ ಆರ್ಮಿ ಕ್ಯಾಂಟ್ (ಸೇನಾ ನೆಲೆ) ಬಳಿ ನಿಗಾ ಇಡಲು ಕಂಬವೊಂದಕ್ಕೆ ಕ್ಯಾಮೆರಾ ಅಳವಡಿಸಿದ್ದ ಸೋನಾ ಮತ್ತು ಸಂದೀಪ್ ಸಿಂಗ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಇವರಿಗೆ ‘ಫೌಜಿ’ ಎಂಬ ಪಾಕಿಸ್ತಾನಿ ಹ್ಯಾಂಡ್ಲರ್ 35,000 ರೂ. ನೀಡಿದ್ದ.

ಇವರಲ್ಲಿ ಸಂದೀಪ್ ಸಿಂಗ್ ಎಂಬ ಆರೋಪಿ ಮಾದಕವಸ್ತು ಕಳ್ಳಸಾಗಣೆಯಲ್ಲೂ ಭಾಗಿಯಾಗಿದ್ದು, ಅದೇ ಪಾಕಿಸ್ತಾನಿ ಹ್ಯಾಂಡ್ಲರ್ ಡ್ರೋನ್ ಮೂಲಕ ಕಳುಹಿಸಿದ್ದ 1 ಕೆಜಿ ಹೆರಾಯಿನ್ ವಿತರಿಸಲು 50,000 ರೂ. ಪಡೆದಿದ್ದ ಎಂಬ ಆಘಾತಕಾರಿ ವಿಷಯ ಬಯಲಾಗಿದೆ. ಸದ್ಯ ಈ ಬೇಹುಗಾರಿಕೆಯ ಹಿಂದಿರುವ ಅಂತರರಾಷ್ಟ್ರೀಯ ಹಣಕಾಸಿನ ಮೂಲಗಳ ಬಗ್ಗೆ ಗಂಭೀರ ತನಿಖೆ ಮುಂದುವರೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದೊಡ್ಡ ಬಜೆಟ್ ಸಿನಿಮಾಗಳಿಗೆ ಆರ್ಥಿಕ ಸಂಕಷ್ಟ: ಕುದುರುತ್ತಿಲ್ಲ ಡೀಲ್ – Kannada News | Indian Cinema’s Financial Crisis: High Costs, Low Returns and Teaser Troubles

ಪ್ರಸ್ತುತ ಭಾರತೀಯ ಚಿತ್ರರಂಗವು ಹೆಚ್ಚುತ್ತಿರುವ ನಿರ್ಮಾಣ ವೆಚ್ಚ ಹಾಗೂ ವ್ಯಾಪಾರ ಒಪ್ಪಂದಗಳ ಕೊರತೆಯಿಂದಾಗಿ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಸಿನಿಮಾಗಳು ಬಿಡುಗಡೆಗೆ ಮುನ್ನವೇ ಹೂಡಿಕೆಯನ್ನು ಮರಳಿ ಪಡೆಯುವುದು ನಿರ್ಮಾಪಕರಿಗೆ ಸವಾಲಾಗಿ ಪರಿಣಮಿಸಿದೆ. ಚಿತ್ರದ ಸ್ಟಾರ್ ನಟರು ಅಥವಾ ಬಜೆಟ್ ಎಷ್ಟು ದೊಡ್ಡದಾಗಿದ್ದರೂ, ಬಿಡುಗಡೆಯಾಗುವ ಟೀಸರ್ ಮತ್ತು ಟ್ರೈಲರ್‌ಗಳು ಪ್ರೇಕ್ಷಕರನ್ನು ಸೆಳೆಯಲು ವಿಫಲವಾದರೆ, ಒಟಿಟಿ ಹಾಗೂ ಥಿಯೇಟ್ರಿಕಲ್ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡುವುದು ಕಷ್ಟಸಾಧ್ಯವಾಗಿದೆ.

ಇದಕ್ಕೆ ಉತ್ತಮ ಉದಾಹರಣೆ ಎಂದರೆ ಬಾಲಿವುಡ್‌ನ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’. ಸುಮಾರು 4000 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ, ಸ್ಟಾರ್ ತಾರಾಗಣದೊಂದಿಗೆ ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ಈ ದೃಶ್ಯ ವೈಭವಕ್ಕೆ ಸದ್ಯ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬಿಸಿನೆಸ್ ಕುದುರುತ್ತಿಲ್ಲ. ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಚಿತ್ರದ ಹಿಂದಿ ಥಿಯೇಟ್ರಿಕಲ್ ಹಕ್ಕುಗಳಿಗಾಗಿ ಬರೋಬ್ಬರಿ 450 ಕೋಟಿ ರೂಪಾಯಿ ಮೊತ್ತವನ್ನು ನಿಗದಿಪಡಿಸಿದ್ದಾರೆ. ಇದುವರೆಗೆ ಯಾವುದೇ ಹೈ-ಪ್ರೊಫೈಲ್ ಚಿತ್ರಗಳು ಕೇವಲ 250 ಕೋಟಿ ರೂಪಾಯಿಗಳ ಆಸುಪಾಸಿನಲ್ಲಿ ವ್ಯವಹಾರ ನಡೆಸಿದ್ದು, ಈ ಹೊಸ ಬೆಲೆ ವಿತರಕರಿಗೆ ಅತಿಯಾಯಿತು ಎನಿಸುತ್ತಿದೆ.

ಈ ಹಿನ್ನಡೆಗೆ ಮುಖ್ಯ ಕಾರಣ, ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟೀಸರ್ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿರುವುದು. ಟೀಸರ್‌ನಲ್ಲಿನ ಗ್ರಾಫಿಕ್ಸ್ ಗುಣಮಟ್ಟ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಇದು ಪ್ರೇಕ್ಷಕರಲ್ಲಿ ಚಿತ್ರದ ಅಂತಿಮ ಔಟ್‌ಪುಟ್ ಬಗ್ಗೆ ಅನುಮಾನ ಮೂಡಿಸಿದೆ.

ಇದನ್ನೂ ಓದಿ: ಸಾಯಿ ಪಲ್ಲವಿ ವಿಷಯದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ‘ರಾಮಾಯಣ’ ಟೀಂ

ಕೇವಲ ‘ರಾಮಾಯಣ’ ಮಾತ್ರವಲ್ಲದೆ, ಮುಂಬರುವ ಹಲವು ಪ್ಯಾನ್-ಇಂಡಿಯಾ ಬಿಗ್ ಬಜೆಟ್ ಸಿನಿಮಾಗಳ ಪರಿಸ್ಥಿತಿಯೂ ಇದೇ ಆಗಿದೆ. ಆರಂಭಿಕ ಕಂಟೆಂಟ್ ಮೂಲಕ ಪ್ರೇಕ್ಷಕರಲ್ಲಿ ಧನಾತ್ಮಕ ಕ್ರೇಜ್ ಸೃಷ್ಟಿಸದಿದ್ದರೆ, ಒಟಿಟಿ ಸಂಸ್ಥೆಗಳು ಹಾಗೂ ವಿತರಕರು ಅಂತಹ ಸಿನಿಮಾಗಳಿಂದ ದೂರ ಸರಿಯುತ್ತಿದ್ದಾರೆ. ಹೀಗಾಗಿ, ಪ್ರಚಾರದ ಕಂಟೆಂಟ್ ಮೂಲಕವೇ ಭರವಸೆ ಮೂಡಿಸುವುದು ಇಂದಿನ ನಿರ್ಮಾಪಕರಿಗೆ ಇರುವ ಅತಿ ದೊಡ್ಡ ಸವಾಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:02 am, Fri, 22 May 26

Source link

Rajya Sabha Election 2026: ಕರ್ನಾಟಕ ಸೇರಿ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆ – Kannada News | Rajya Sabha Elections 2026 Dates Announced for 24 Seats Across 10 States

ನವದೆಹಲಿ/ಬೆಂಗಳೂರು, ಮೇ 22: ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ಸೇರಿ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೊಷಣೆ ಮಾಡಿದೆ. ಜೂನ್ 18ರಂದು ರಾಜ್ಯಸಭಾ ಚುನಾವಣೆ ನಡೆಯಲಿದೆ. ಕರ್ನಾಟಕದ 4 ಸ್ಥಾನ ಸೇರಿ ಒಟ್ಟು 24 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕದಿಂದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಸೇರಿದಂತೆ ಹಾಲಿ ಶಾಸಕರ ಅವಧಿ ಪೂರ್ಣಗೊಂಡ ನಂತರ ಜೂನ್ ಮತ್ತು ಜುಲೈನಲ್ಲಿ 24 ಸ್ಥಾನಗಳು ತೆರವಾಗಲಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:55 am, Fri, 22 May 26

Source link

ಸಿನಿಮಾ ನಟನ ಸಿನಿಮಾ ರೀತಿಯ ಕತೆ, ಜೈಲಿಂದ ತಪ್ಪಿಸಿಕೊಂಡ ಅಪರಾಧಿ ಖ್ಯಾತ ನಟನಾದ – Kannada News | Actor who eloped jail arrested after 12 years a interesting incident

ಹೇಮಂತ್ ವೈಷ್ಣವ್ ಅಲಿಯಾಸ್ ನಗೀನ್‌ದಾಸ್ ಪರಶೋತ್ತಮದಾಸ್ ಮೋದಿ ಎಂಬ 53 ವರ್ಷದ ನಟನನ್ನು ಅಹಮದಾಬಾದ್ (Ahmedabad) ಕ್ರೈಮ್ ಬ್ರಾಂಚ್ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಅಮಿತಾಬ್ ಬಚ್ಚನ್, ಆಮಿರ್ ಖಾನ್, ರಣ್ವೀರ್ ಸಿಂಗ್, ಸನ್ನಿ ಡಿಯೋಲ್ ಸೇರಿದಂತೆ ಹಲವಾರು ಸ್ಟಾರ್ ನಟರುಗಳೊಟ್ಟಿಗೆ ನಟಿಸಿರುವ ಈತ ಹಲವು ಟಿವಿ ಶೋಗಳಲ್ಲಿ ವೆಬ್ ಸರಣಿಗಳಲ್ಲಿ ನಟಿಸಿದ್ದ. ಆದರೆ ಇದೀಗ ಈ ನಟನನ್ನು ಪೊಲೀಸರು 21 ವರ್ಷದ ಹಿಂದಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಬಂಧನದ ಬಳಿಕ ತಿಳಿದು ಬಂದಿರುವ ವಿಷಯವೆಂದರೆ ಈ ನಟ, ಕಳೆದ 12 ವರ್ಷದಿಂದ ಪೊಲೀಸರಿಂದ ತಲೆ ಮರೆಸಿಕೊಂಡಿದ್ದನಂತೆ!

ಗುಜರಾತಿನ ಈ ವ್ಯಕ್ತಿ ಕೊಲೆ ಪ್ರಕರಣ ಒಂದರಲ್ಲಿ ಅಪರಾಧಿ ಎಂದು ಘೋಷಿತವಾಗಿ 2005 ರಲ್ಲಿ ಜೈಲು ಸೇರಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಬಳಿಕ 2014 ರಲ್ಲಿ ಒಂದು ತಿಂಗಳ ಪರೋಲ್ ಪಡೆದು ಬಿಡುಗಡೆ ಆಗಿದ್ದ ಈ ವ್ಯಕ್ತಿ ಮುಂಬೈಗೆ ಬಂದು ನಟನಾಗಿದ್ದಾನೆ. ಆಗಿನಿಂದ ಸುಮಾರು 12 ವರ್ಷಗಳ ಕಾಲ ಆತ ಪೊಲೀಸರಿಗೆ ಸಿಕ್ಕೇ ಇಲ್ಲ! ಆದರೆ ಇದೀಗ 12 ವರ್ಷಗಳ ಬಳಿಕ ಪೊಲೀಸರು ಹೇಮಂತ್ ಅನ್ನು ಬಂಧಿಸಿದ್ದಾರೆ. ನಟ ಹೇಮಂತ್ ಅನ್ನು ಬಂಧಿಸಿದ ಅಹಮದಾಬಾದ್ ಕ್ರೈಮ್ ಬ್ರಾಂಚ್ ಪೊಲೀಸ್ ಇನ್ಸ್‌ಪೆಕ್ಟರ್ ಪಿಎಮ್ ಧಾಖ್ರಾ ನೀಡಿರುವ ಮಾಹಿತಿಯಂತೆ, 2005ರಲ್ಲಿ ಅಹಮದಾಬಾದ್‌ನ ನರೋಡಾ ಪ್ರದೇಶದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಈತನ ವಿರುದ್ಧ ಆಗಿನ ಐಪಿಸಿ ಸೆಕ್ಷನ್ 302, 324, 147, 148, 149, ಮತ್ತು 120(ಬಿ) ಹಾಗೂ ಬಿಪಿ ಕಾಯ್ದೆಯ ಸೆಕ್ಷನ್ 135(1) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಕ್ರೈಮ್ ಬ್ರಾಂಚ್ ಅಧಿಕಾರಿ ಮಾತನಾಡಿ, ‘ಕಳೆದ 12 ವರ್ಷಗಳಿಂದ ಈತನಿಗಾಗಿ ಹುಡುಕಾಟ ನಡೆದಿತ್ತು. ಈ ಅವಧಿಯಲ್ಲಿ ಆರೋಪಿಯು ಚಿತ್ರರಂಗದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಸಕ್ರಿಯನಾಗಿದ್ದ. ಈತನ ಹಲವು ವೆಬ್ ಸರಣಿಗಳು ಕೂಡ ಬಿಡುಗಡೆಯಾಗಿದ್ದವು. ಹೇಮಂತ್ ಅಹಮದಾಬಾದ್‌ಗೆ ಬಂದಿದ್ದಾನೆ ಎಂಬ ಖಚಿತ ಮಾಹಿತಿ ಬುಧವಾರ ಮೆಟ್ರೋ ಸ್ಟೇಷನ್ ಬಳಿ ಬಂಧಿಸಲಾಗಿದೆ. ಆತನ ಉಳಿದ ಶಿಕ್ಷೆಯ ಅವಧಿಯನ್ನು ಪೂರೈಸಲು ಆತನನ್ನು ಮೆಹ್ಸಾನಾ ಜೈಲಿಗೆ ಕಳುಹಿಸಲಾಗಿದೆ. ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಹೇಮಂತ್ ತನ್ನ ಹೆಸರನ್ನು ಬದಲಾಯಿಸಿಕೊಂಡು, ಚಿತ್ರರಂಗದಲ್ಲಿ ಪೋಷಕ ನಟನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಆತ ಹಿಂದಿ, ಗುಜರಾತಿ ಮತ್ತು ಇತರ ಭಾಷೆಗಳ ಚಲನಚಿತ್ರಗಳು, ವೆಬ್ ಸರಣಿಗಳು, ಟಿವಿ ಶೋಗಳು ಮತ್ತು ನಾಟಕಗಳಲ್ಲಿ ಸಕ್ರಿಯನಾಗಿದ್ದ. ಪೊಲೀಸ್ ಹೇಳಿಕೆಯ ಪ್ರಕಾರ, ಆತ ತಲೆಮರೆಸಿಕೊಂಡಿದ್ದರೂ ಸಹ ಅತ್ಯಂತ ಸಕ್ರಿಯ ವೃತ್ತಿಜೀವನವನ್ನು ಮುನ್ನಡೆಸುತ್ತಿದ್ದ.

ಇದನ್ನೂ ಓದಿ:ರಶ್ಮಿಕಾ-ಕೃತಿ ಮಧ್ಯೆ ಕ್ಯಾಟ್ ಫೈಟ್; ಸಿನಿಮಾ ಪ್ರಚಾರಕ್ಕಾಗಿ ಚೀಪ್ ಗಿಮಿಕ್?

ಹೇಮಂತ್, ಅಮೀರ್ ಖಾನ್, ಕತ್ರಿನಾ ಕೈಫ್ ಮತ್ತು ಅಮಿತಾಭ್ ಬಚ್ಚನ್ ನಟನೆಯ ‘ಥಗ್ಸ್ ಆಫ್ ಹಿಂದೂಸ್ತಾನ್’, ರಣವೀರ್ ಸಿಂಗ್ ಮತ್ತು ಶಾಲಿನಿ ಪಾಂಡೆ ನಟನೆಯ ‘ಜಯೇಶ್ ಭಾಯ್ ಜೋರ್ದಾರ್’, ಸಾರಾ ಅಲಿ ಖಾನ್ ಮತ್ತು ಆದಿತ್ಯ ರಾಯ್ ಕಪೂರ್ ನಟನೆಯ ‘ಮೆಟ್ರೋ ಇನ್ ದಿನೋ’, ಹಾಗೂ ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಟನೆಯ ‘L2 ಎಂಪೂರನ್’ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸನ್ನಿ ಡಿಯೋಲ್ ಮತ್ತು ಪ್ರೀತಿ ಜಿಂಟಾ ನಟನೆಯ ‘ಲಾಹೋರ್ 1947’ ಅವರ ಮುಂಬರುವ ಸಿನಿಮಾ ಆಗಿದೆ. ‘ವಾಗ್ಲೆ ಕಿ ದುನಿಯಾ’ ಮತ್ತು ‘ಮೇರೆ ಸಾಯಿ’ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ. ಕೆಲವು ವೆಬ್ ಸರಣಿಗಳಲ್ಲಿಯೂ ನಟಿಸಿದ್ದು, ಅವೂ ಸಹ ಬಿಡುಗಡೆ ಆಗಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:48 am, Fri, 22 May 26

Source link

ಲಾಡ್ಲೆ ಮಶಾಕ್ ದರ್ಗಾ ವಿವಾದದ ಕೇಸ್​​ಗಳು ಸೇರಿ 52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ತೀರ್ಮಾನ: ಬಿಜೆಪಿ ವಿರೋಧ – Kannada News | Karnataka Cabinet Drops 52 Criminal Cases Including Aland Dargah Dispute; BJP Slams Government’s Move

52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ತೀರ್ಮಾನ

ಬೆಂಗಳೂರು, ಮೇ 22: ಕನ್ನಡ ಪರ ಹೋರಾಟಗಾರರ ವಿರುದ್ಧದವು ಸೇರಿದಂತೆ 52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ತೀರ್ಮಾನಿಸಿದೆ. ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧದ 10 ಪ್ರಕರಣಗಳು, ಕಾವೇರಿ ಹೋರಾಟಗಾರರ ವಿರುದ್ಧದ ಪ್ರಕರಣಗಳು, ಕನ್ನಡ ಪರ ಹೋರಾಟ, ಕಳಸಾ-ಬಂಡೂರಿ ಯೋಜನೆ ಹೋರಾಟಕ್ಕೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ರೈತರು ಹಾಗೂ ದಲಿತ ಹೋರಾಟಗಾರರ ವಿರುದ್ಧ ದಾಖಲಾಗಿದ್ದ ಪ್ರಕರಣಗಳೂ ಇವುಗಳಲ್ಲಿ ಸೇರಿವೆ. ಅಲ್ಲದೆ ಆಳಂದದಲ್ಲಿನ ಲಾಡ್ಲೆ ಮಶಾಕ್ ದರ್ಗಾ ವಿವಾದಕ್ಕೆ ಸಂಬಂಧಿಸಿದ ಏಳು ಪ್ರಕರಣಗಳನ್ನು ಹಿಂಪಡೆಯಲು ಕೂಡ ಸರ್ಕಾರ ತೀರ್ಮಾನಿಸಿದ್ದು, ಈ ನಿರ್ಧಾರವೀಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಮುಖ್ಯಾಂಶಗಳು

  • 52 ಕ್ರಿಮಿನಲ್ ಪ್ರಕರಣ ಹಿಂಪಡೆಯಲು ಸಚಿವ ಸಂಪುಟ ತೀರ್ಮಾನ
  • ಲಾಡ್ಲೆ ಮಶಾಕ್ ದರ್ಗಾ ವಿವಾದಕ್ಕೆ ಸಂಬಂಧಿಸಿದ ಕೇಸ್​​ಗಳೂ ವಾಪಸ್​​
  • ಸರ್ಕಾರದ ನಿರ್ಧಾರಕ್ಕೆ ಬಿಜೆಪಿಗರಿಂದ ತೀವ್ರ ವಿರೋಧ, ವಾಗ್ದಾಳಿ

ಸರ್ಕಾರದ ನಿರ್ಣಯದ ವಿರುದ್ಧ ಸಿ.ಟಿ. ರವಿ ಕಿಡಿ

ರಾಜ್ಯ ಸರ್ಕಾರದ ನಿರ್ಣಯದ ವಿರುದ್ಧ ಕಿಡಿ ಕಾರಿರುವ ಬಿಜೆಪಿ ಎಂಎಲ್​​ಸಿ ಸಿ.ಟಿ. ರವಿ, ರಾಜ್ಯ ಸರ್ಕಾರ ಒಂದು ಕಡೆ ಹಿಂದೂ ಕಾರ್ಯಕರ್ತರನ್ನ ಟಾರ್ಗೆಟ್ ಮಾಡಿ ಸುಳ್ಳು ಮೊಕದ್ದಮೆ ದಾಖಲಿಸುವ ಜೊತೆಗೆ ರೌಡಿಶೀಟ್ ತೆರೆದು ಪೊಲೀಸ್ ಇಲಾಖೆಯ ಮೂಲಕ ಕಿರುಕುಳ ಕೊಡುವ ಕೆಲಸ ಮಾಡುತ್ತಿದೆ. ಮತ್ತೊಂದು ಕಡೆ ಮುಸ್ಲಿಮರ ಮೇಲಿನ ಕ್ರಿಮಿನಲ್​​ ಕೇಸ್​​ ವಾಪಸ್​​ ಪಡೆಯುವ ಕೆಲಸ ಮಾಡುತ್ತಿದೆ. ಕೆಲವು ಬೆಂಕಿ ಹಚ್ಚಿದ ಪ್ರಕರಣ, ಆಸ್ತಿ-ಪಾಸ್ತಿ ನಷ್ಟ ಮಾಡಿದ ಪ್ರಕರಣ ಸೇರಿದಂತೆ ಗಂಭೀರ ಕೇಸ್ ವಾಪಸ್ ಪಡೆದುಕೊಂಡು ನಾವು ಕ್ರಿಮಿನಲ್ ಪರ ಎಂಬ ಕೆಟ್ಟ ಸಂದೇಶ ಕೂಡಲು ಸರ್ಕಾರ ಹೊರಟಿದೆ ಎಂದವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ; ಸಚಿವ ಸಂಪುಟದ ತೀರ್ಮಾನಗಳು

ಗೃಹ ಸಚಿವರ ಸ್ಪಷ್ಟನೆ

52 ಪ್ರಕರಣ ಹಿಂಪಡೆಯಲು ಸಂಪುದಲ್ಲಿ ನಿರ್ಧಾರ ವಿಚಾರ ಸಂಬಂಧ ಗೃಹ ಸಚಿವ ಡಾ.ಜಿ‌.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಸಂಘಟನೆಗಳು, ರೈತರ ಮೇಲೆ ಇದ್ದ ಕೇಸ್ ಬಗ್ಗೆ ಕ್ಯಾಬಿನೆಟ್ ಸಬ್ ಕಮಿಟಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡಿತ್ತು. ಕಾನೂನಾತ್ಮಕವಾಗಿ ಕೇಸ್ ಹಿಂಪಡೆಯಲು ತೀರ್ಮಾನ ‌ಆಗಿದೆ ಎಂದವರು ತಿಳಿಸಿದ್ದಾರೆ. ಲಾಡ್ಲೆ ಮಶಾಕ್ ದರ್ಗಾ ವಿವಾದಕ್ಕೆ ಸಂಬಂಧಿಸಿದ ಪ್ರಕರಣ ಹಿಂಪಡೆಯುವ ಬಗ್ಗೆಯೂ ಉತ್ತರಿಸಿದ ಅವರು, ಅದರ ಬಗ್ಗೆ ಡಿಟೈಲ್ಸ್ ಹೇಳಲು ಹೋಗಲ್ಲ. ಎಲ್ಲವೂ ಚರ್ಚೆ ಮಾಡಿಯೇ ತೀರ್ಮಾನ ಮಾಡಲಾಗಿದೆ. ಇದು ಏಕಾಏಕಿ ತೀರ್ಮಾನವಲ್ಲ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅದ್ಭುತ, ಅನದ್ಭುತ ಕ್ಯಾಚ್; ಶುಭ್​​ಮನ್ ಡೈವ್​​​ಗೆ ಚೆನ್ನೈ ಫ್ಯಾನ್ಸ್ ಸೈಲೆಂಟ್

ಟಾಟಾ ಐಪಿಎಲ್ 2026ರ ಜಿಟಿ ಮತ್ತು ಸಿಎಸ್‌ಕೆ ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ನಾಯಕ ಶುಭ್‌ಮನ್ ಗಿಲ್ ಫೀಲ್ಡಿಂಗ್‌ನಲ್ಲಿ ಮ್ಯಾಜಿಕ್ ಮಾಡಿದ್ದಾರೆ. ರಶೀದ್ ಖಾನ್ ಎಸೆದ 11ನೇ ಓವರ್‌ನ ಎರಡನೇ ಎಸೆತದಲ್ಲಿ ಸಿಎಸ್‌ಕೆಯ ಶಿವಂ ದುಬೆ ಲಾಂಗ್-ಆನ್ ಕಡೆಗೆ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ, ಅಲ್ಲಿ ಅತ್ಯಂತ ಚಾಣಾಕ್ಷತನದಿಂದ ಓಡಿ ಬಂದು ಗಾಳಿಯಲ್ಲಿ ಜಿಗಿದು ಗಿಲ್ ಹಿಡಿದ ಅದ್ಭುತ ಕ್ಯಾಚ್ ಈಗ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಅವರಿಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

International Day for Biological Diversity 2026: ಜೀವ ವೈವಿಧ್ಯತೆಯನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ – Kannada News | International Day for Biological Diversity 2026: What is the purpose of celebrating International Day for Biological Diversity?

ಅಂತಾರಾಷ್ಟ್ರೀಯ ಜೀವ ವೈವಿಧ್ಯತೆಯ ದಿನImage Credit source: Pinterest

ಸೂಕ್ಷ್ಮ ಜೀವಿಗಳು, ಪ್ರಾಣಿ ಪಕ್ಷಿಗಳು, ಸಸ್ಯರಾಶಿಗಳು ಸೇರಿದಂತೆ ಈ ಭೂಮಿಯ ಮೇಲೆ ಸಹಸ್ರಾರು ಸಂಖ್ಯೆಯ ಜೀವವೈವಿಧ್ಯಗಳಿವೆ.  ಈ ಜೀವ ವೈವಿಧ್ಯತೆ (Biological Diversity) ಪರಿಸರ ವ್ಯವಸ್ಥೆಯನ್ನು ಸಮತೋಲದಲ್ಲಿಡುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿದೆ. ಇಂದು ಜೀವವೈವಿಧ್ಯತೆ ಅಪಾಯದಲ್ಲಿದೆ. ಹೌದು ಅರಣ್ಯನಾಶ, ಮಾಲಿನ್ಯ, ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ ವನ್ಯಜೀವಿಗಳಿಗೆ, ಪಕ್ಷಿಗಳಿಗೆ, ಮರಗಿಡಗಳಿಗೆ  ಹಾನಿ ಮಾಡುತ್ತಿವೆ. ಅದೆಷ್ಟೋ ಪ್ರಭೇದಗಳು ಅಳಿವಿನಂಚಿಗೆ ತಲುಪಿವೆ. ನಮ್ಮ ಭವಿಷ್ಯಕ್ಕೆ ಜೀವವೈವಿಧ್ಯತೆಯನ್ನು ರಕ್ಷಿಸುವುದು ಅವಶ್ಯಕ.  ಹಾಗಾಗಿ ಈ ಜೀವವೈವಿಧ್ಯಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿವರ್ಷ ಮೇ 22 ರಂದು ಅಂತಾರಾಷ್ಟ್ರೀಯ ಜೀವವೈವಿಧ್ಯತೆಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ಅಂತಾರಾಷ್ಟ್ರೀಯ ಜೀವವೈವಿಧ್ಯತೆ ದಿನದ ಇತಿಹಾಸವೇನು?

1992 ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ಭೂ ಶೃಂಗಸಭೆಯಲ್ಲಿ ಜೀವವೈವಿಧ್ಯತೆಯ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ತರಲಾಯಿತು. 1993 ಮೊದಲ ಬಾರಿಗೆ ಈ ದಿನವನ್ನು ಡಿಸೆಂಬರ್‌ 29 ರಂದು ಆಚರಿಸಲಾಯಿತು. ನಂತರ 2000 ನೇ ಇಸವಿಯಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಈ ದಿನವನ್ನು ಮೇ 22 ರಂದು ಆಚರಿಸಲು ನಿರ್ಧರಿಸಿತು. ಅಂದಿನಿಂದ ಪ್ರತಿವರ್ಷ ವಿಶ್ವ ಜೀವವೈವಿಧ್ಯ ದಿನವನ್ನು ಮೇ 22 ರಂದು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಚಹಾದ ಹಿತಮಿತ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ನೋಡಿ

ಅಂತಾರಾಷ್ಟ್ರೀಯ ಜೀವವೈವಿಧ್ಯತೆ ದಿನದ ಮಹತ್ವವೇನು?

  • ವಿಶ್ವ ಜೀವವೈವಿಧ್ಯತೆಯ ದಿನವು ಈ ಭೂಮಿಯಲ್ಲಿರುವ ಜೀವವೈವಿಧ್ಯ ರಕ್ಷಣೆಗೆ ಆದ್ಯತೆ ನೀಡುವ ಮಹತ್ವದ ಜ್ಞಾಪನೆಯಾಗಿದೆ.
  • ಹವಾಮಾನವನ್ನು ನಿಯಂತ್ರಿಸುವಲ್ಲಿ, ನೀರಿನ ಮೂಲಗಳನ್ನು ಸ್ವಚ್ಛವಾಗಿಡುವಲ್ಲಿ ಸೇರಿದಂತೆ ಒಟ್ಟಾರೆ ಪರಿಸರವನ್ನು ಸಮತೋಲನದಲ್ಲಿಡುವಲ್ಲಿ ಜೀವವೈವಿದ್ಯತೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಜೀವ ವೈವಿಧ್ಯತೆಯ ಈ ಪ್ರಾಮುಖ್ಯತೆಯ ಬಗ್ಗೆ ತಿಳಿಸಲು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.
  • ಈ ದಿನ ಜೀವವೈವಿಧ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದನ್ನು ರಕ್ಷಿಸಲು ಕ್ರಮ ಕೈಗೊಳ್ಳಲು ಒಂದು ಅವಕಾಶವಾಗಿದೆ ಅಂತಾನೇ ಹೇಳಬಹುದು.
  • ಈ ದಿನದಂದು ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಮತ್ತು ಅವುಗಳ ಮೂಲಕ ಜನರಿಗೆ ಜೀವವೈವಿಧ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
  • ಪರಿಸರ ಸಂರಕ್ಷಣೆಗೆ ಒತ್ತು ನೀಡುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
  • ಜೀವವೈವಿಧ್ಯತೆಯನ್ನು ರಕ್ಷಿಸುವ ತುರ್ತು ಅಗತ್ಯದ ಬಗ್ಗೆ ನಮ್ಮ ಗಮನವನ್ನು ಕೇಂದ್ರೀಕರಿಸಲು ಈ ದಿನ ಅವಕಾಶವನ್ನು ಒದಗಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Update: ರಾಜ್ಯದ ಹಲವೆಡೆ ವರುಣಾರ್ಭಟ! ಬೆಂಗಳೂರಲ್ಲಿ ಮರ ಬಿದ್ದು ವಾಹನಗಳು ಚೂರು, ಕೋಲಾರದಲ್ಲಿ 90 ಲಕ್ಷದ ಬೆಳೆ ನಾಶ – Kannada News | Karnataka Rain Update: Heavy Damages in Bengaluru, Kolar, and Davanagere Due to Storm

ಬೆಂಗಳೂರು, ಮೇ 22: ಗುರುವಾರ ಸಂಜೆ ಸುರಿದ ಭಾರೀ ಮಳೆಗೆ (Weather) ರಾಜ್ಯದ ಅನೇಕ ಕಡೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಬೆಂಗಳೂರು ಸೇರಿದಂತೆ ದಾವಣಗೆರೆ , ಕೋಲಾರ, ಚಿತ್ರದುರ್ಗ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜೋರು ಮಳೆಗೆ ಕೆಲವೆಡೆ ಮನೆಗಳಿಗೆ ನೀರು ನಿಗ್ಗಿದರೆ, ಇನ್ನೂ ಕೆಲ ಕಡೆ ಮರಗಳು ಧರೆಗುರುಳಿವೆ. ವರುಣಾರ್ಭಟಕ್ಕೆ ರಾಜ್ಯದ ಜನತೆ ತತ್ತರಿಸಿಹೋಗಿದ್ದಾರೆ. ಇನ್ನೂ ಮೂರು ದಿನ ರಾಜ್ಯದಲ್ಲಿ ಹೀಗೆ ಮಳೆಯ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಮರ ಬಿದ್ದು ನಾಲ್ಕು ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ.
  • ಕೋಲಾರದಲ್ಲಿ ಬಿರುಗಾಳಿಗೆ ಪಾಲಿಹೌಸ್ ನಾಶವಾಗಿ 90 ಲಕ್ಷದ ಬೆಳೆ ನಷ್ಟವಾಗಿದೆ.
  • ದಾವಣಗೆರೆಯಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ಶಂಕರ ಲೇಔಟ್‌ನ ಮನೆಗಳಿಗೆ ನೀರು ನುಗ್ಗಿದೆ.

ಬೆಂಗಳೂರಲ್ಲಿ ಧರೆಗುರುಳಿದ ಮರಗಳು

ಬೆಂಗಳೂರಿನ ವೈಯ್ಯಾಲಿಕಾವಲ್ ಹಾಗೂ ಮಹಾಲಕ್ಷ್ಮಿ ಲೇಔಟ್‌ನಲ್ಲಿ ತಡರಾತ್ರಿ ಸುರಿದ ಭಾರಿ ಗಾಳಿ-ಮಳೆಗೆ ಬೃಹತ್ ಮರಗಳು ಬುಡಮೇಲಾಗಿವೆ. ವೈಯ್ಯಾಲಿಕಾವಲ್ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ದ್ವಿಚಕ್ರ ವಾಹನವೊಂದು ಜಖಂಗೊಂಡಿದೆ. ಇತ್ತ ಮಹಾಲಕ್ಷ್ಮಿ ಲೇಔಟ್‌ನ ಪೈಪ್ ಲೈನ್ ರಸ್ತೆಯಲ್ಲಿ ಬೃಹತ್ ಮರವೊಂದು ರಸ್ತೆಗೆ ಉರುಳಿದ್ದು, ಅದರ ಅಡಿಯಲ್ಲಿ ಸಿಲುಕಿ ಮೂರು ಕಾರುಗಳು ಸಂಪೂರ್ಣ ಜಖಂಗೊಂಡಿವೆ.

ದಾವಣಗೆರೆಯಲ್ಲಿ ಮನೆಗಳಿಗೆ ನುಗ್ಗಿದ ನೀರು

ಬೆಣ್ಣೆನಗರಿ ದಾವಣಗೆರೆಯ ಹಳೇ ಪಿಬಿ ರಸ್ತೆಯ ಬಿಎಸ್‌ಎನ್‌ಎಲ್ ಕಚೇರಿ ಹಿಂಭಾಗದಲ್ಲಿರುವ ಶಂಕರ ಲೇಔಟ್‌ನ ರಸ್ತೆಗಳು ಜಲಾವೃತಗೊಂಡು ಹಳ್ಳದಂತಾಗಿವೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ನೇರವಾಗಿ ಹಲವು ಮನೆಗಳಿಗೆ ನುಗ್ಗಿದ್ದು, ಜನರು ಮನೆಯಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಕೋಲಾರದಲ್ಲಿ ಪಾಲಿಹೌಸ್ ನಾಶ: ಲಕ್ಷಾಂತರ ರೂಪಾಯಿ ನಷ್ಟ

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ದೊಡ್ಡ ದಾನವಹಳ್ಳಿಯಲ್ಲಿ ಬಿರುಗಾಳಿ ಮಳೆಯ ಆರ್ಭಟಕ್ಕೆ ಚನ್ನರಾಯಪ್ಪ ಎಂಬುವವರಿಗೆ ಸೇರಿದ 2 ಎಕರೆ ಪ್ರದೇಶದ ಪಾಲಿಹೌಸ್ ಸಂಪೂರ್ಣ ನೆಲಕಚ್ಚಿದೆ. ಸುಮಾರು 90 ಲಕ್ಷ ರೂಪಾಯಿ ವೆಚ್ಚದಲ್ಲಿ ಬೆಳೆದಿದ್ದ ಕಲರ್ ಕ್ಯಾಪ್ಸಿಕಂ ಬೆಳೆ ಸಂಪೂರ್ಣ ನಾಶವಾಗಿದೆ. ಬಿರುಗಾಳಿಯ ರಭಸಕ್ಕೆ ಪಾಲಿಹೌಸ್‌ನ ಪ್ಲಾಸ್ಟಿಕ್ ಶೀಟ್ ಹಾಗೂ ನೆಟ್‌ಗಳು ಹರಿದು ಹೋಗಿದ್ದು, ಮಾಸ್ತಿ ಸುತ್ತಮುತ್ತಲಿನ ಹಲವೆಡೆ ವಿದ್ಯುತ್ ಕಂಬ ಹಾಗೂ ಮರಗಳು ನೆಲಕ್ಕುರುಳಿವೆ.

ಚಿತ್ರದುರ್ಗದಲ್ಲಿ ಜಿನುಗು ಮಳೆ

ಚಿತ್ರದುರ್ಗ ನಗರ ಹಾಗೂ ಜಿಲ್ಲೆಯಾದ್ಯಂತ ರಾತ್ರಿಯಿಂದ ನಿರಂತರವಾಗಿ ಸೋನೆ ಮಳೆ (ತುಂತುರು ಮಳೆ) ಸುರಿಯುತ್ತಿದೆ. ಸತತವಾಗಿ ಸುರಿಯುತ್ತಿರುವ ಜಿನುಗು ಮಳೆಯಿಂದಾಗಿ ಕೋಟೆನಾಡಿನಲ್ಲಿ ಮಲೆನಾಡಿನ ಸೊಬಗು ನಿರ್ಮಾಣವಾಗಿದ್ದರೂ, ಸಾರ್ವಜನಿಕ ಜನಜೀವನ ಮಾತ್ರ ಅಸ್ತವ್ಯಸ್ತಗೊಂಡಿದೆ.

ಇದನ್ನೂ ಓದಿ ಬೆಂಗಳೂರಿಗರೇ ಎಚ್ಚರ! ಮುಂದಿನ 3 ದಿನಗಳ ಕಾಲ ನಗರದಲ್ಲಿ ವರುಣಾರ್ಭಟ

ಯಾದಗಿರಿಯಲ್ಲಿ ಗಾಳಿ ಮಳೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ತುಮಕೂರು ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಭೀಕರ ಅವಾಂತರ ಸೃಷ್ಟಿಯಾಗಿದೆ. ಬಿರುಗಾಳಿಯ ರಭಸಕ್ಕೆ ಗ್ರಾಮವೊಂದರಲ್ಲೇ 30ಕ್ಕೂ ಅಧಿಕ ಮರಗಳು ಧರಾಶಾಹಿಯಾಗಿವೆ. ಗಾಳಿಯ ವೇಗಕ್ಕೆ ಮನೆಯೊಂದರ ಮೇಲ್ಚಾವಣಿಯ ಶೀಟ್‌ಗಳು ಹಾರಿಹೋಗಿದ್ದು, ಕುಟುಂಬಸ್ಥರು ಬೀದಿಗೆ ಬಿದ್ದಂತಾಗಿದ್ದಾರೆ. ಅಷ್ಟೇ ಅಲ್ಲದೆ, ಮರ ಬಿದ್ದ ಪರಿಣಾಮ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿಯೊಂದು ಜಖಂಗೊಂಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಮಧ್ಯರಾತ್ರಿ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿದ ಹಾಸ್ಟೆಲ್ ಮಾಲೀಕನ ಮಗ, ನಡೆದಿದ್ದೇನು? – Kannada News | Late Night Hostel Incident in Prayagraj Sparks Outrage

ಪ್ರಯಾಗ್​ರಾಜ್, ಮೇ 22: ಹಾಸ್ಟೆಲ್ ಮಾಲೀಕನ ಮಗ ಮದ್ಯರಾತ್ರಿ ವಿದ್ಯಾರ್ಥಿನಿಯರ ರೂಮಿಗೆ ನುಗ್ಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದಿದೆ.  ಶಿವಕುಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ಅಮೇಥಿ ಮೂಲದ ಇಬ್ಬರು ವಿದ್ಯಾರ್ಥಿನಿಯರ ಕೋಣೆಗೆ ಹಾಸ್ಟೆಲ್ ಮಾಲೀಕನ ಮಗ ಶುಭಂ ದ್ವಿವೇದಿ ಎಂಬಾತ ನುಗ್ಗಿದ್ದಾನೆ.

18 ರಂದು ಮಧ್ಯರಾತ್ರಿ 2 ಗಂಟೆಗೆ ಈ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಆರೋಪಿ, ವಿದ್ಯಾರ್ಥಿನಿಯರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ಅವರ ಕೂದಲನ್ನು ಹಿಡಿದು ಎಳೆದಾಡಿ ವಿಕೃತ ಅಟ್ಟಹಾಸ ಮೆರೆದಿದ್ದಾನೆ. ಈ ಭೀಕರ ದೃಶ್ಯದ 30 ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಕಳೆದ 10 ದಿನಗಳಿಂದ ಆರೋಪಿ ತಮಗೆ ಫೋನ್ ಹಾಗೂ ಸಂದೇಶಗಳ ಮೂಲಕ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಘಟನೆ ನಡೆದ ತಕ್ಷಣ ವಿದ್ಯಾರ್ಥಿನಿಯರು ಪೊಲೀಸ್ ತುರ್ತು ಸಂಖ್ಯೆ 112 ಗೆ ಕರೆ ಮಾಡಿದ್ದರು. ಆದರೆ, ಪೊಲೀಸರ ಸಮ್ಮುಖದಲ್ಲೇ ಆರೋಪಿ ಒಡೆದ ಗಾಜಿನಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾಳೆ. ಸದ್ಯ ಪೊಲೀಸರು ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರಾದರೂ, ನ್ಯಾಯಾಲಯ ಆತನಿಗೆ ಜಾಮೀನು ಮಂಜೂರು ಮಾಡಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version