ಕಾಮಗಾರಿ ವಿಚಾರವಾಗಿ ಹೈಡ್ರಾಮ: ಆಣೆ ಪ್ರಮಾಣ ಹಂತಕ್ಕೆ ತಲುಪಿದ ಸಿ.ಟಿ ರವಿ, ತಮ್ಮಯ್ಯ ಫೈಟ್! – Kannada News | Chikkamagaluru Politics: High Drama as MLC CT Ravi Challenges MLA Thammaiah for Temple Oath Over Road Work

ಆಣೆ-ಪ್ರಮಾಣ ಹಂತಕ್ಕೆ ತಲುಪಿದ ಸಿ.ಟಿ ರವಿ, ತಮ್ಮಯ್ಯ ಫೈಟ್!

ಚಿಕ್ಕಮಗಳೂರು, ಮೇ 22: ನಗರದ ರಾಂಪುರ ಗ್ರಾಮದಲ್ಲಿ ಕಾಮಗಾರಿ ವೀಕ್ಷಣೆಗೆ ಬಂದಿದ್ದ ಪರಿಷತ್​​ ಸದಸ್ಯ ಸಿ.ಟಿ ರವಿ ವಿರುದ್ಧ ಗೋಬ್ಯಾಕ್​​ ಘೋಷಣೆ ಕೂಗಿದ ಪರಿಣಾಮ, ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಕಿತ್ತಾಟ ನಡೆದಿದೆ. ಚಿಕ್ಕಮಗಳೂರು (Chikkamagaluru) ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಈ ಕೇಸ್ ಭಾರಿ ಚರ್ಚೆಗೆ ಕಾರಣವಾಗಿದ್ದು, ಸಿ,ಟಿ ರವಿ ಈ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿಗೆ ಕಾರಣ ನಾನೇ, ಯಾವ ದೇವಸ್ಥಾನಕ್ಕೆ ಬೇಕಾದರೂ ಬಂದು ಪ್ರಮಾಣ ಮಾಡುತ್ತೇನೆ ಎಂದು ಹೇಳಿದ್ದಾರೆ.

ಮುಖ್ಯಾಂಶಗಳು

  • ರಾಂಪುರದಲ್ಲಿ ಸಿ.ಟಿ ರವಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ‘ಗೋ ಬ್ಯಾಕ್’ ಘೋಷಣೆ.
  • ರಸ್ತೆ ಕಾಮಗಾರಿ ಕ್ರೆಡಿಟ್‌ಗಾಗಿ ಬಿಜೆಪಿ-ಕಾಂಗ್ರೆಸ್ ನಡುವೆ ಭಾರಿ ಹೈಡ್ರಾಮಾ.
  • ಯಾವ ದೇವಸ್ಥಾನದಲ್ಲಾದರೂ ಆಣೆ ಪ್ರಮಾಣ ಮಾಡಲು ಸಿದ್ಧ ಎಂದ ಸಿ.ಟಿ.ರವಿ.

ದೇವಸ್ಥಾನದಲ್ಲಿ ಆಣೆ ಪ್ರಮಾಣಕ್ಕೆ ಸಿ.ಟಿ. ರವಿ ಸವಾಲು!

ಕಾಮಗಾರಿ ಕ್ರೆಡಿಟ್ ವಿಚಾರವಾಗಿ ಶಾಸಕ ತಮ್ಮಯ್ಯ ವಿರುದ್ಧ ಸಿ.ಟಿ. ರವಿ ಆಕ್ರೋಶ ಹೊರಹಾಕಿದ್ದು, ಮುಖಾಮುಖಿ ಆಣೆ ಪ್ರಮಾಣಕ್ಕೆ ಸವಾಲು ಹಾಕಿದ್ದಾರೆ. ಈ ಭಾಗದಲ್ಲಿ ನಡೆಯುತ್ತಿರುವ ಶೇ 95ರಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವನ್ನು ತಂದಿದ್ದು ನಾನೇ. ಕಾಂಗ್ರೆಸ್ ಸರ್ಕಾರ ಈ ರಸ್ತೆ ಕಾಮಗಾರಿಗೆ ಒಂದು ಪೈಸೆ ಹಣವನ್ನೂ ನೀಡಿಲ್ಲ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ವಿಶೇಷ ಅನುದಾನ ತಂದಿದ್ದೆ. ಯಾವ ದೇವಸ್ಥಾನಕ್ಕೆ ಕರೆದರೂ ಬಂದು ಪ್ರಮಾಣ ಮಾಡಲು ನಾನು ಸಿದ್ಧ, ಎಲ್ಲಿಗಾದರೂ ಕರೆಯಲಿ ಅವರು ಬಂದು ಆಣೆ ಮಾಡಲಿ ಎಂದು ಸಿ.ಟಿ. ರವಿ ನೇರ ಸವಾಲು ಎಸೆದಿದ್ದಾರೆ.

ಇದನ್ನೂ ಓದಿ ನಿಪ್ಪಾಣಿ ಬೆನ್ನಲ್ಲೇ ಚಿಕ್ಕಮಗಳೂರಲ್ಲೂ ಕೈ, ಕಮಲ ಸಮರ: ಕಾಮಗಾರಿ ವಿಚಾರವಾಗಿ ಸಿ.ಟಿ.ರವಿ ಎದುರೇ ಹೈಡ್ರಾಮಾ

ಕಾಮಗಾರಿ ತಡವಾಗಲು ಕಾಂಗ್ರೆಸ್ ಕಾರಣ ಎಂದ ಎಂಎಲ್‌ಸಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕಾಮಗಾರಿಯನ್ನು ತಡೆಹಿಡಿಯುವ ಕೆಲಸ ಮಾಡಿತು ಎಂದು ಆರೋಪಿಸಿದ ಸಿ.ಟಿ.ರವಿ, 2024ರಲ್ಲಿ ಈ ರಸ್ತೆ ಕಾಮಗಾರಿಗೆ ವರ್ಕ್ ಆರ್ಡರ್ ನೀಡಲಾಗಿತ್ತು ಎಂದಿದ್ದಾರೆ. ರಸ್ತೆಯಲ್ಲಿದ್ದ ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಹಣವಿಲ್ಲದ ಕಾರಣ ಕಾಮಗಾರಿ ವಿಳಂಬವಾಗಿದೆ ವಿನಃ ಬೇರೇನೂ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸದ್ಯ ಚಿಕ್ಕಮಗಳೂರು ನಗರದಲ್ಲಿ ಎಂಎಲ್‌ಸಿ ಹಾಗೂ ಎಂಎಲ್‌ಎ ನಡುವಿನ ಈ ಆಣೆ-ಪ್ರಮಾಣದ ಫೈಟ್ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:22 am, Fri, 22 May 26

Source link

Video: ಯಂತ್ರಗಳು ಬಾರದ ಕಾಡಿನ ರಸ್ತೆಗಿಳಿದ ಗಜರಾಜ, ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳನ್ನು ತೆರವುಗೊಳಿಸಿದ ಆನೆ – Kannada News | Elephant Clears Fallen Trees From Forest Road in Viral Video

ಜಂಗಲ್ ಸಫಾರಿ ಅಥವಾ ಕಾಡಿನ ರಸ್ತೆಗಳು ಎಷ್ಟೇ ಸುರಕ್ಷಿತ ಎಂದು ನಾವಂದುಕೊಂಡರೂ ಕೆಲವೊಮ್ಮೆ ಪ್ರಾಣಿಗಳ ದಾಳಿ, ಇನ್ನೂ ಕೆಲವೊಮ್ಮೆ ಪ್ರಾಕೃತಿಕ ವಿಕೋಪಗಳಿಂದ ಮರಗಳು ರಸ್ತೆಗೆ ಅಡ್ಡಲಾಗಿ ಬೀಳುವುದು ಸಾಮಾನ್ಯ. ಇವುಗಳ ನಿರ್ವಹಣೆಗೆ ಅರಣ್ಯ ಇಲಾಖೆ ಆಧುನಿಕ ಯಂತ್ರಗಳನ್ನು ಬಳಸಿದರೂ, ಕೆಲವೊಮ್ಮೆ ಪ್ರಾಣಿಗಳೇ ಪ್ರಕೃತಿಯ ಶ್ರೇಷ್ಠ ಸಹಾಯಕರಾಗುತ್ತವೆ. ಇತ್ತೀಚೆಗೆ ಇದಕ್ಕೆ ಸಾಕ್ಷಿಯಾದ ಅಪರೂಪದ ವೀಡಿಯೊವೊಂದನ್ನು ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಕಾಡಿನ ಹಾದಿಯೊಂದರಲ್ಲಿ ಭಾರಿ ಮಳೆಯಿಂದಾಗಿ ದೊಡ್ಡ ಮರಗಳು ಬಿದ್ದು ರಸ್ತೆ ಸಂಪೂರ್ಣವಾಗಿ ಬಂದ್ ಆಗಿತ್ತು. ಕಷ್ಟಕರವಾದ ಭೂಪ್ರದೇಶವಾದ್ದರಿಂದ ಅಲ್ಲಿಗೆ ಜೆಸಿಬಿಗಳಂತಹ ದೊಡ್ಡ ಯಂತ್ರೋಪಕರಣಗಳನ್ನು ಕೊಂಡೊಯ್ಯುವುದು ಅಸಾಧ್ಯವಾಗಿತ್ತು. ಅಂತಹ ಸಮಯದಲ್ಲಿ ಅರಣ್ಯ ಇಲಾಖೆಯ ನೆರವಿಗೆ ಬಂದ ಗಜರಾಜ, ತನ್ನ ಅಪಾರ ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದಾನೆ. ಆನೆಯು ತನ್ನ ಸೊಂಡಿಲಿನಿಂದಲೇ ಆ ಭಾರೀ ಮರದ ದಿಮ್ಮಿಗಳನ್ನು ಸಲೀಸಾಗಿ ಎತ್ತಿ ಪಕ್ಕಕ್ಕೆ ಹಾಕಿ, ಕೆಲವೇ ಕ್ಷಣಗಳಲ್ಲಿ ರಸ್ತೆಯನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಿದೆ.

ಅರಣ್ಯ ಇಲಾಖೆಯ ನೌಕರರಿಗೆ ಆನೆಗಳು ಕೇವಲ ಪ್ರಾಣಿಗಳಲ್ಲ, ಅತ್ಯಂತ ವಿಶ್ವಾಸಾರ್ಹ ಒಡನಾಡಿಗಳಾಗಿವೆ. ಗಸ್ತು ತಿರುಗಲು ಹಾಗೂ ಯಂತ್ರಗಳು ವಿಫಲವಾಗುವ ಕಠಿಣ ಜಾಗಗಳಲ್ಲಿ ಹಾದಿ ತೆರವುಗೊಳಿಸಲು ಆನೆಗಳು ಮನುಷ್ಯರಿಗಿಂತ ಹೆಚ್ಚು ಉಪಯುಕ್ತವಾಗಿವೆ. ಅಧಿಕಾರಿಯೊಬ್ಬರು ತಮ್ಮ ಕ್ಷೇತ್ರ ಭೇಟಿಯ ವೇಳೆ ಸೆರೆಹಿಡಿದ ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದು, ಆನೆಯ ಕಠಿಣ ಪರಿಶ್ರಮಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Pashupatinath Yatra: ರೈಲ್ವೆ ಇತಿಹಾಸದಲ್ಲೇ ಮೊದಲು; ನೇಪಾಳದ ಪಶುಪತಿನಾಥ ದರ್ಶನ ಭಾಗ್ಯ, 10ದಿನಗಳ ಆಧ್ಯಾತ್ಮಿಕ ಪ್ರಯಾಣ – Kannada News | Bharat Gaurav Train to Nepal: IRCTC’s First International Pashupatinath Yatra

ಭಾರತ್ ಗೌರವ್ ಪ್ರವಾಸಿ ರೈಲುImage Credit source: gemini ai

ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತೊಂದು ಮಹತ್ವದ ಹಾಗೂ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ‘ಭಾರತ್ ಗೌರವ್ ಪ್ರವಾಸಿ ರೈಲು’ ಇದೀಗ ಮೊದಲ ಬಾರಿಗೆ ಅಂತರರಾಷ್ಟ್ರೀಯ ಗಡಿಯನ್ನು ದಾಟಿ ನೆರೆಯ ದೇಶವಾದ ನೇಪಾಳಕ್ಕೆ ಪ್ರಯಾಣ ಬೆಳೆಸಲು ಸಿದ್ಧವಾಗಿದೆ. ಮಧ್ಯಪ್ರದೇಶದ ಇಂದೋರ್‌ನಿಂದ ಪ್ರಾರಂಭವಾಗಲಿರುವ ಈ ಅಪೂರ್ವ ಆಧ್ಯಾತ್ಮಿಕ-ಪ್ರವಾಸೋದ್ಯಮ ಪ್ರವಾಸವನ್ನು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಆಯೋಜಿಸುತ್ತಿದೆ. ಜೂನ್ 12 ರಂದು ಹಸಿರು ನಿಶಾನೆ ಪಡೆಯಲಿರುವ ಈ ವಿಶೇಷ ಯಾತ್ರೆಗೆ ‘ಪಶುಪತಿನಾಥ ನೇಪಾಳ ದರ್ಶನ ಯಾತ್ರೆ’ ಎಂದು ಹೆಸರಿಸಲಾಗಿದೆ.

ಭಾರತದ ಗಡಿಯಾಚೆಗೆ ಮೊದಲ ಭಾರತ್ ಗೌರವ್ ರೈಲು:

ಭಾರತದ ಗಡಿಗಳನ್ನು ದಾಟಿ ವಿದೇಶಕ್ಕೆ ಪ್ರಯಾಣಿಸುತ್ತಿರುವ ಮೊದಲ ಭಾರತ್ ಗೌರವ್ ರೈಲು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಯಾತ್ರಿಕರು ಮತ್ತು ಪ್ರವಾಸಿಗರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಸರ್ವಸನ್ನದ್ಧ ಪ್ಯಾಕೇಜ್, ರೈಲು ಪ್ರಯಾಣದಿಂದ ಹಿಡಿದು ವಸತಿ, ಊಟ ಮತ್ತು ಸ್ಥಳೀಯ ದರ್ಶನಗಳವರೆಗೆ ಎಲ್ಲವನ್ನೂ ಒಂದೇ ಸೂರಿನಡಿ ಒದಗಿಸುತ್ತದೆ. ನೇಪಾಳಕ್ಕೆ ಅತ್ಯಂತ ಸುರಕ್ಷಿತವಾಗಿ, ಆರಾಮದಾಯಕವಾಗಿ ಮತ್ತು ಯಾವುದೇ ಜಂಜಾಟವಿಲ್ಲದೆ ಪ್ರಯಾಣಿಸಲು ಬಯಸುವ ಸನಾತನ ಧರ್ಮದ ಅನುಯಾಯಿಗಳಿಗೆ ಹಾಗೂ ಪ್ರಕೃತಿ ಪ್ರೇಮಿಗಳಿಗೆ ಇದು ಅತ್ಯಂತ ಅಪರೂಪದ ಅವಕಾಶ ಎಂದು IRCTC ತಿಳಿಸಿದೆ.

10 ದಿನಗಳ ವಿಶೇಷ ನೇಪಾಳ ಪ್ರವಾಸದ ರೂಪುರೇಷೆ:

ಈ ಐತಿಹಾಸಿಕ ಯಾತ್ರೆಯು ಒಟ್ಟು 9 ರಾತ್ರಿಗಳು ಮತ್ತು 10 ದಿನಗಳ ಸುದೀರ್ಘ ಅವಧಿಯನ್ನು ಒಳಗೊಂಡಿರುತ್ತದೆ. ಈ ಪ್ರವಾಸದಲ್ಲಿ ನೇಪಾಳದ ವಿಶ್ವಪ್ರಸಿದ್ಧ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಪ್ರವಾಸಿ ತಾಣಗಳನ್ನು ಸಂದರ್ಶಿಸಲು ಸುವರ್ಣ ಅವಕಾಶ ಕಲ್ಪಿಸಲಾಗಿದೆ. ಕಠ್ಮಂಡುವಿನ ಪಶುಪತಿನಾಥ ದೇವಾಲಯ, ಮನಕಮನಾ ದೇವಾಲಯ, ಪೋಖರಾ ನಗರ ಹಾಗೂ ಸಾಹಸಿಗಳ ನೆಚ್ಚಿನ ತಾಣವಾದ ಚಿತ್ವಾನ್ ರಾಷ್ಟ್ರೀಯ ಉದ್ಯಾನವನದಂತಹ ಪ್ರಮುಖ ಸ್ಥಳಗಳು ಈ ಪ್ರವಾಸದ ಭಾಗವಾಗಿವೆ.

ಪ್ರವಾಸದ ಪ್ರಮುಖ ಆಕರ್ಷಣೆಗಳು ಮತ್ತು ವೀಕ್ಷಣಾ ಸ್ಥಳಗಳು:

  • ಕಠ್ಮಂಡು: ನೇಪಾಳದ ರಾಜಧಾನಿಯಾದ ಈ ನಗರದಲ್ಲಿ ಅಲ್ಲಿನ ಐತಿಹಾಸಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ವೈಭವವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು.
  • ಪಶುಪತಿನಾಥ ದೇವಾಲಯ: ವಿಶ್ವಪ್ರಸಿದ್ಧ ಹಾಗೂ ಅತ್ಯಂತ ಪವಿತ್ರವಾದ ಈ ಶಿವನ ಸನ್ನಿಧಿಯಲ್ಲಿ ವಿಶೇಷ ದರ್ಶನ ಮತ್ತು ಆರಾಧನೆ.
  • ಪೋಖರಾ: ಹಿಮಾಲಯದ ಹಿಮದ ಮಡಿಲಿನಲ್ಲಿರುವ, ಶಾಂತ ಹಾಗೂ ಸುಂದರ ಸರೋವರಗಳಿಗೆ ಹೆಸರಾದ ನಗರದ ರಮಣೀಯ ನೋಟ.
  • ಚಿತ್ವಾನ್ ರಾಷ್ಟ್ರೀಯ ಉದ್ಯಾನವನ: ಜೀಪ್ ಸಫಾರಿ ಮೂಲಕ ದಟ್ಟ ಅರಣ್ಯದ ನಡುವೆ ವನ್ಯಜೀವಿಗಳನ್ನು ವೀಕ್ಷಿಸುವ ರೋಮಾಂಚಕ ಅನುಭವ.
  • ಮನಕಮನಾ ದೇವಾಲಯ: ಹಸಿರು ಬೆಟ್ಟದ ಮೇಲಿರುವ ಈ ಪ್ರಸಿದ್ಧ ದೇವಸ್ಥಾನಕ್ಕೆ ರೋಪ್‌ವೇ (ಹಗ್ಗದ ಸವಾರಿ) ಮೂಲಕ ಸಾಗುವ ಅದ್ಭುತ ಪಯಣ.

ರೈಲು ಹತ್ತಲು ನಿಗದಿಪಡಿಸಲಾದ ಪ್ರಮುಖ ನಿಲ್ದಾಣಗಳು:

ಮಧ್ಯಪ್ರದೇಶದ ವಿವಿಧ ಭಾಗಗಳ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲ್ವೆ ಇಲಾಖೆಯು ಪ್ರಮುಖ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೆ ವ್ಯವಸ್ಥೆ ಮಾಡಿದೆ. ಪ್ರಯಾಣಿಕರು ತಮಗೆ ಹತ್ತಿರವಿರುವ ಇಂದೋರ್, ಉಜ್ಜಯಿನಿ, ಶುಜಲ್‌ಪುರ್, ಭೋಪಾಲ್, ಇಟಾರ್ಸಿ, ನರಸಿಂಗ್‌ಪುರ್, ಜಬಲ್‌ಪುರ್, ಕಟ್ನಿ ಮತ್ತು ಸತ್ನಾ ರೈಲು ನಿಲ್ದಾಣಗಳಿಂದ ಈ ಪ್ರವಾಸಿ ರೈಲನ್ನು ಏರಬಹುದಾಗಿದೆ.

ಆಧುನಿಕ ಸೌಲಭ್ಯಗಳನ್ನೊಳಗೊಂಡ ರೈಲಿನ ವಿಶೇಷತೆಗಳು:

ಸಂಪೂರ್ಣವಾಗಿ ‘ಡಿಲಕ್ಸ್ ಎಸಿ ಪ್ರವಾಸಿ ರೈಲು’ ಆಗಿ ವಿನ್ಯಾಸಗೊಳಿಸಲಾದ ಈ ವಿಶೇಷ ರೈಲು ಒಟ್ಟು 14 ಬೋಗಿಗಳನ್ನು ಹೊಂದಿರುತ್ತದೆ. ಪ್ರವಾಸಿಗರ ಬಜೆಟ್ ಮತ್ತು ಸೌಕರ್ಯಕ್ಕೆ ಅನುಗುಣವಾಗಿ ಮೊದಲ ದರ್ಜೆಯ ಎಸಿ (First AC), ಎರಡನೇ ದರ್ಜೆಯ ಎಸಿ (Second AC) ಮತ್ತು ಮೂರನೇ ದರ್ಜೆಯ ಎಸಿ (Third AC) ವಿಭಾಗಗಳಲ್ಲಿ ಆಸನಗಳನ್ನು ಕಾಯ್ದಿರಿಸಲು ಮುಕ್ತ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ವಿವಿಧ ವಿಭಾಗಗಳ ಪ್ಯಾಕೇಜ್ ದರಗಳ ವಿವರ:

ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಮೂರು ವಿಭಿನ್ನ ದರಗಳ ಪ್ಯಾಕೇಜ್‌ಗಳನ್ನು ನಿಗದಿಪಡಿಸಲಾಗಿದೆ:

  • ಥರ್ಡ್ ಎಸಿ ಕಂಫರ್ಟ್ (Third AC) : 62,710 ರೂ.
  • ಸೆಕೆಂಡ್ ಎಸಿ ಡಿಲಕ್ಸ್ (Second AC) : 76,550 ರೂ.
  • ಫಸ್ಟ್ ಎಸಿ ಸುಪೀರಿಯರ್ (First AC) : 90,400 ರೂ.

ಈ ಪ್ಯಾಕೇಜ್‌ನಲ್ಲಿ ಏನೆಲ್ಲಾ ಸೌಲಭ್ಯಗಳು ಒಳಗೊಂಡಿವೆ?

IRCTC ನಿಗದಿಪಡಿಸಿರುವ ಈ ಪ್ಯಾಕೇಜ್ ದರವು ಕೇವಲ ರೈಲು ಟಿಕೆಟ್‌ಗೆ ಮಾತ್ರ ಸೀಮಿತವಾಗಿರದೆ, ಪ್ರವಾಸದ ಅವಧಿಯಲ್ಲಿ ಬೇಕಾಗುವ ಎಲ್ಲಾ ಪ್ರಮುಖ ಅಗತ್ಯಗಳನ್ನು ಒಳಗೊಂಡಿದೆ:

  • ನೇಪಾಳದ ಪ್ರಮುಖ ನಗರಗಳಲ್ಲಿ 3-ಸ್ಟಾರ್ (Three-Star) ಹೋಟೆಲ್‌ಗಳಲ್ಲಿ ವಸತಿ ವ್ಯವಸ್ಥೆ.
  • ಪ್ರಯಾಣದ ದಿನಗಳಲ್ಲಿ ಶುಚಿಯಾದ ಮತ್ತು ರುಚಿಕರವಾದ ಊಟದ ಸೌಲಭ್ಯ.
  • ಸ್ಥಳೀಯ ದರ್ಶನ ಹಾಗೂ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಸುಸಜ್ಜಿತ ಎಸಿ ಬಸ್‌ಗಳ ವ್ಯವಸ್ಥೆ.
  • ಪ್ರಯಾಣಿಕರ ಸುರಕ್ಷತೆಗಾಗಿ ವಿಶೇಷ ಪ್ರಯಾಣ ವಿಮೆ (Travel Insurance).
  • ಸ್ಥಳಗಳ ಮಾಹಿತಿ ನೀಡಲು ಅನುಭವಿ ಮತ್ತು ಪ್ರಖ್ಯಾತ ಪ್ರವಾಸ ಮಾರ್ಗದರ್ಶಿಗಳ (Tour Guides) ಸೇವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಕ್ರೋಚ್ ಜನತಾ ಪಾರ್ಟಿಗೆ ಪಾಕಿಸ್ತಾನ ಬಾಂಗ್ಲಾದೇಶದಲ್ಲೇ ಹೆಚ್ಚು ಫಾಲೋವರ್ಸ್‌: ಇದು ದೊಡ್ಡ ಸಂಚು ಎಂದ ನೆಟ್ಟಿಗರು – Kannada News | CJP Viral Video: Cockroach Janta Party’s Global Follower Breakdown and Pakistan Dominance

ದೆಹಲಿ, ಮೇ.22: ಪ್ರಸ್ತುತ ಸೋಶಿಯಲ್​​ ಮೀಡಿಯಾದಲ್ಲಿ ಜಗತ್ತಿನಲ್ಲಿ ವಿಭಿನ್ನ ಹಾಗೂ ತಮಾಷೆಯ ಕಂಟೆಂಟ್ ಮೂಲಕ ಯುವ ಪೀಳಿಗೆಯ ಗಮನ ಸೆಳೆದಿರುವ ಟ್ರೆಂಡಿಂಗ್ ಖಾತೆ ‘ಕಾಕ್ರೋಚ್ ಜನತಾ ಪಾರ್ಟಿ’ (Cockroach Janta Party). “ರಾಜಕೀಯದ ಮುಖವಾಡ, ಯುವಕರಿಂದ ಯುವಕರಿಗಾಗಿ” ಎಂಬ ಟ್ಯಾಗ್‌ಲೈನ್ ಹೊಂದಿರುವ ಈ ಪೇಜ್ ಸದ್ಯ ವಿಶ್ವಾದ್ಯಂತ ಬರೋಬ್ಬರಿ 14.8 ಮಿಲಿಯನ್ (1.48 ಕೋಟಿ) ಫಾಲೋವರ್ಸ್ ಹೊಂದುವ ಮೂಲಕ ಹೊಸ ದಾಖಲೆ ಬರೆದಿದೆ. ಆದರೆ, ಈ ಕೋಟಿ ಕೋಟಿ ಅಭಿಮಾನಿಗಳು ಯಾವ ದೇಶದಿಂದ ಬಂದಿದ್ದಾರೆ ಎಂಬ ಆಸಕ್ತಿದಾಯಕ ದೇಶವಾರು ಅಂಕಿ-ಅಂಶಗಳ (Follower Distribution by Country) ಗ್ರಾಫಿಕಲ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಪಾಕಿಸ್ತಾನದಲ್ಲೇ ಅತಿ ಹೆಚ್ಚು ಫಾಲೋವರ್ಸ್!:

ವೈರಲ್ ಆಗಿರುವ ವರದಿಯ ಪ್ರಕಾರ, ಈ ಪೇಜ್ ಹೊಂದಿರುವ ಒಟ್ಟು ಫಾಲೋವರ್ಸ್‌ಗಳ ಪೈಕಿ ಸಿಂಹಪಾಲು ಅಂದರೆ ಬರೋಬ್ಬರಿ ಶೇಕಡಾ 49 ರಷ್ಟು (ಶೇ. 49) ಜನರು ಪಾಕಿಸ್ತಾನ ಮೂಲದವರಾಗಿದ್ದಾರೆ! ಇದು ಇಂಟರ್ನೆಟ್ ವಲಯದಲ್ಲಿ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

ಇಲ್ಲಿದೆ ನೋಡಿ ವೈರಲ್ ಪೋಸ್ಟ್​​:

ಉಳಿದ ದೇಶಗಳ ಅಂಕಿ-ಅಂಶಗಳು ಹೀಗಿವೆ:

ಅಮೆರಿಕ (USA): ಶೇ. 14

ಬಾಂಗ್ಲಾದೇಶ (Bangladesh): ಶೇ. 14

ಭಾರತ (India): ಶೇ. 9

ಬ್ರಿಟನ್ (UK): ಶೇ. 3

ಆಸ್ಟ್ರೇಲಿಯಾ (Australia): ಶೇ. 3

ಸೌದಿ ಅರೇಬಿಯಾ: ಶೇ. 3

ಯುಎಇ (UAE): ಶೇ. 2

ಕಾಕ್ರೋಚ್ ಜನತಾ ಪಾರ್ಟಿಗೆ ಟರ್ಕಿ ನಂಟು!

ಇತ್ತೀಚಿನ ಜಾಗತಿಕ ಅಂಕಿ-ಅಂಶಗಳ ಬ್ರೇಕ್‌ಡೌನ್ ವರದಿಯ ಪ್ರಕಾರ, ಈ ಖಾತೆಗೆ ಕೇವಲ ಪಾಕಿಸ್ತಾನ (ಶೇ. 49) ಮತ್ತು ಬಾಂಗ್ಲಾದೇಶ (ಶೇ. 14) ಮಾತ್ರವಲ್ಲದೆ, ಇಸ್ಲಾಮಿಕ್ ರಾಷ್ಟ್ರವಾದ ಟರ್ಕಿ (Turkey) ಮೂಲದ ಲಕ್ಷಾಂತರ ಫಾಲೋವರ್ಸ್‌ಗಳು ಕೂಡ ಹಠಾತ್ತನೆ ಸೇರ್ಪಡೆಯಾಗುತ್ತಿರುವುದನ್ನು ನೆಟ್ಟಿಗರು ಪತ್ತೆಹಚ್ಚಿ ಧ್ವಜ ಎತ್ತಿದ್ದಾರೆ (Flagged). ಭಾರತೀಯ ಯುವಕರ ನಿರುದ್ಯೋಗ ಮತ್ತು ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ಆಕ್ರೋಶವನ್ನು ಮುಂದಿಟ್ಟುಕೊಂಡು ಆರಂಭವಾದ ಈ ಡಿಜಿಟಲ್ ಮೂವ್‌ಮೆಂಟ್‌ನ ಹಿಂದೆ, ಭಾರತದ ಆಂತರಿಕ ರಾಜಕೀಯ ವ್ಯವಸ್ಥೆಯನ್ನು ಅಲುಗಾಡಿಸಲು ವಿದೇಶಿ ‘ಬಾಟ್ಸ್’ (Bots) ಮತ್ತು ಪೇಡ್ ಅಕೌಂಟ್‌ಗಳನ್ನು ಬಳಸಲಾಗುತ್ತಿದೆಯೇ ಎಂಬ ಸಂಶಯ ಈಗ ದಟ್ಟವಾಗಿದೆ.

ಇದು ಕೇವಲ ಟ್ರೆಂಡ್ ಅಲ್ಲ, ಪೂರ್ವನಿಯೋಜಿತ ಸ್ಕೆಚ್?

ಅಭಿಜೀತ್ ದಿಪ್ಕೆ ನೇತೃತ್ವದ ಈ ಸಾಟೈರಿಕಲ್ (ವ್ಯಂಗ್ಯಭರಿತ) ಚಳವಳಿಯು ಭಾರತದ ಡಿಜಿಟಲ್ ಸ್ಪೇಸ್‌ನಲ್ಲಿ ಭಾರಿ ದೊಡ್ಡ ಮಟ್ಟದ ಅಶಾಂತಿ ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಐಟಿ ತಜ್ಞರು ಆಪಾದಿಸುತ್ತಿದ್ದಾರೆ. “ಯೂತ್ ಇಂಡಿಯಾ ಮತ್ತು ಭರತ್ ಎಂಬ ದೇಶಪ್ರೇಮಿ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳ ಮೂಲಕ ಯುವಕರನ್ನು ಸೆಳೆಯಲಾಗುತ್ತಿದೆ. ಆದರೆ ಇದಕ್ಕೆ ಸಿಗುತ್ತಿರುವ ಬಹುಪಾಲು ಲೈಕ್ಸ್ ಮತ್ತು ಫಾಲೋವರ್ಸ್ ಪಾಕಿಸ್ತಾನ ಹಾಗೂ ಟರ್ಕಿಯಿಂದ ಬರುತ್ತಿರುವುದು ಜಾಗತಿಕ ಮಟ್ಟದ ಸೈಬರ್ ಸಂಚನ್ನು (Global Cyber Conspiracy) ಎತ್ತಿ ತೋರಿಸುತ್ತದೆ” ಎಂದು ಎಕ್ಸ್ (ಟ್ವಿಟರ್) ನಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

ಕಾಂಗ್ರೆಸ್, ಆಪ್ ಹಾಗೂ SDPI ನಂಟು?

ಮತ್ತೊಂದೆಡೆ, ಈ ಇಡೀ ಡಿಜಿಟಲ್ ಟ್ರೆಂಡ್‌ನ ಹಿಂದೆ ಭಾರತದ ಕೆಲವು ಪ್ರಮುಖ ರಾಜಕೀಯ ಪಕ್ಷಗಳ ಕೈವಾಡ ಇದೆ ಎಂದು ನೆಟ್ಟಿಗರು ದೂರಿದ್ದಾರೆ. “ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಟರ್ಕಿಯಂತಹ ವಿದೇಶಿ ಖಾತೆಗಳ ಜೊತೆಗೆ ಭಾರತದ ಕಾಂಗ್ರೆಸ್ , ಆಮ್ ಆದ್ಮಿ ಪಾರ್ಟಿಹಾಗೂ ಎಸ್‌ಡಿಪಿಐ ಪಕ್ಷದ ಬೆಂಬಲಿಗರೆಲ್ಲರೂ ಒಟ್ಟಾಗಿ ಕಾಕ್ರೋಚ್ ಜನತಾ ಪಕ್ಷವನ್ನು ಪ್ರಚಾರ ಮಾಡಲು ಮತ್ತು ದೇಶದ ಇಮೇಜ್ ಹಾಳು ಮಾಡಲು ಮುಂದಾಗಿದ್ದಾರೆ” ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಸದ್ಯಕ್ಕೆ ಈ ಎಲ್ಲಾ ಆಪಾದನೆಗಳು ಹಾಗೂ ವೈರಲ್ ಆಗುತ್ತಿರುವ ಅಂಕಿ-ಅಂಶಗಳ ಯಾವುದೇ ಸ್ವತಂತ್ರ ಹಾಗೂ ಅಧಿಕೃತ ಪರಿಶೀಲನೆ ಸಾರ್ವಜನಿಕವಾಗಿ ಲಭ್ಯವಾಗಿಲ್ಲದಿದ್ದರೂ, ಇಂಟರ್ನೆಟ್‌ನಲ್ಲಂತೂ ತೀವ್ರ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ಏನಿದು ಕಾಕ್ರೋಚ್ ಜನತಾ ಪಾರ್ಟಿ, ಹುಟ್ಟಿಕೊಂಡಿದ್ಹೇಗೆ? ಯಾರ್ಯಾರ ಬೆಂಬಲವಿದೆ?

ಭಾರತೀಯ ಮೂಲದ ರಾಜಕೀಯ ಮತ್ತು ಯೂತ್ ಟ್ರೆಂಡ್‌ಗಳ ಹ್ಯಾಶ್‌ಟ್ಯಾಗ್ ಬಳಸಿ ಹರಿದಾಡುತ್ತಿದೆ ಈ ವಿಡಿಯೋ. ನೆಟ್ಟಿಗರು ಕಮೆಂಟ್‌ ಬಾಕ್ಸ್‌ನಲ್ಲಿ “ಕಾಕ್ರೋಚ್ ಪಾರ್ಟಿಗೆ ಭಾರತಕ್ಕಿಂತ ನೆರೆಹೊರೆಯ ದೇಶಗಳಲ್ಲೇ ಕ್ರೇಜ್ ಜಾಸ್ತಿ ಇದೆ ಮಾರಾಯ್ರೆ” ಎಂದು ತಮಾಷೆ ಮಾಡುತ್ತಿದ್ದಾರೆ. ಇನ್ನು ಕೆಲವರು ಇದೊಂದು ದೊಡ್ಡ ಸಂಚು. ಪಾಕಿಸ್ತಾನ, ಅಮೆರಿಕ, ಬಾಂಗ್ಲಾದೇಶ ದೊಡ್ಡ ರಾಜತಾಂತ್ರಿಕ ಸಂಚು ರೂಪಿಸಿದೆ ಎಂದು ಹೇಳಿದ್ದಾರೆ. ಇದನ್ನು ಯಾವ ಕಾರಣಕ್ಕೂ ಫಾಲೋ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆನೇಕಲ್​​ ಬಳಿ ಹೊಸ ಕ್ರಿಕೆಟ್​​ ಸ್ಟೇಡಿಯಂಗೆ ನಾಳೆ ಗುದ್ದಲಿ ಪೂಜೆ: ಕ್ರೀಡಾಂಗಣದ ವಿಶೇಷತೆಗಳೇನು? – Kannada News | Bengaluru’s Anekal to Get India’s 2nd Largest Cricket Stadium; CM Siddaramaiah to Lay Foundation Stone Tomorrow

ಬೆಂಗಳೂರು, ಮೇ 22: ನಗರದ ಹೊರವಲಯ ಆನೇಕಲ್‌ ಬಳಿ ನಿರ್ಮಾಣವಾಗಲಿರುವ ಹೊಸ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ನಾಳೆ (ಮೇ 23) ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಲಿದ್ದಾರೆ. 80 ಸಾವಿರ ಆಸನ ಸಾಮರ್ಥ್ಯ ಹೊಂದಿರುವ ಈ ಕ್ರೀಡಾಂಗಣ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಬಳಿಕ ಭಾರತದ ಎರಡನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಲಿದೆ. ಸುಮಾರು 943 ಕೋಟಿ ವೆಚ್ಚದ ಈ ಯೋಜನೆ ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ನಿರ್ಮಾಣ ಎಲ್ಲಿ?

ನೂತನ ಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಸೂರ್ಯನಗರ 4ನೇ ಹಂತದಲ್ಲಿ (ಇಂಡ್ಲವಾಡಿ ಗ್ರಾಮ) ನಿರ್ಮಾಣವಾಗಲಿದೆ. ಕರ್ನಾಟಕ ಗೃಹ ಮಂಡಳಿ (KHB) ವತಿಯಿಂದ ‘ಕೆಎಚ್‍ಬಿ ಸೂರ್ಯ ಕ್ರೀಡಾ ಗ್ರಾಮ’ ಯೋಜನೆಯಡಿ ಈ ಬೃಹತ್ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ.

ಇದನ್ನೂ ಓದಿ: ವನ್ಯಜೀವಿಗಳಿಗೆ ತೊಂದರೆ ಆತಂಕ; ಆನೆಕಲ್​​ ಬಳಿ ಹೊಸ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ತೀವ್ರ ವಿರೋಧ

ವಿಶೇಷತೆ ಏನು?

ಆಧುನಿಕ ಸೌಲಭ್ಯಗಳು, ಹಾಸ್ಪಿಟಾಲಿಟಿ ಲೌಂಜ್‌ಗಳು, ವಿಐಪಿ ಬಾಕ್ಸ್‌ಗಳು ಹಾಗೂ ಮೀಡಿಯಾ ಸೌಲಭ್ಯಗಳನ್ನು ಒಳಗೊಂಡಂತೆ ಪ್ರೇಕ್ಷಕರ ಅನುಭವವನ್ನು ಉತ್ತಮಗೊಳಿಸುವ ವ್ಯವಸ್ಥೆಗಳು ಇರಲಿವೆ. ಜೊತೆಗೆ ಭಾರಿ ಜನಸ್ತೋಮ ನಿರ್ವಹಣೆಗೆ ಅಗತ್ಯವಾದ ಸುರಕ್ಷತಾ ವ್ಯವಸ್ಥೆಗಳನ್ನೂ ಈ ಕ್ರೀಡಾಂಗಣ ಹೊಂದಿರಲಿದೆ.

ಆಸನ ಸಾಮರ್ಥ್ಯ ಎಷ್ಟು?

ನಗರದ ಹೃದಯಭಾಗದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣವು ಕೇವಲ 32 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದು, ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ IPL ಪಂದ್ಯಗಳಿಗೆ ಇದು ಸಾಕಾಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ ನೂತನ ಕ್ರೀಡಾಂಗಣವನ್ನು ಬಹಳ ದೊಡ್ಡದಾಗಿ 75 ಏಕರೆ ಜಾಗದಲ್ಲಿ ನಿರ್ಮಿಸಲು ಯೋಜಿಲಾಗಿದ್ದು, ಸ್ಟೇಡಿಯಂನಲ್ಲಿ 80 ಸಾವಿರ ಜನರಿಗೆ ಆಸನ ವ್ಯವಸ್ಥೆ ಇರಲಿದೆ. ಆ ಮೂಲಕ ಇದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ಎರಡು ಪಟ್ಟು ದೊಡ್ಡದಾಗಿರಲಿದೆ.

ಏನೆಲ್ಲ ಪ್ರಯೋಜನ?

ಸ್ಟೇಡಿಯಂ ಯೋಜನೆ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮಾತ್ರವಲ್ಲದೆ ಕರ್ನಾಟಕದಲ್ಲಿ ಕ್ರೀಡೆಗಳ ಉತ್ತೇಜನ ಸಂಬಂಧವೂ ಮಹತ್ವದ ಪಾತ್ರವಹಿಸಲಿದೆ. ಕ್ರಿಕೆಟ್ ತರಬೇತಿ ಕೇಂದ್ರಗಳು, ಯುವಕರ ಕ್ರೀಡಾ ಕಾರ್ಯಕ್ರಮಗಳಿಗೆ ಇದು ವೇದಿಕೆಯಾಗಲಿದೆ. ಶಾಲೆ, ಕಾಲೇಜು ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಗಳಿಗೂ ಅವಕಾಶ ಕಲ್ಪಿಸುವ ಮೂಲಕ ಸ್ಥಳೀಯ ಪ್ರತಿಭೆಗಳನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ. ಕ್ರಿಕೆಟ್ ಮಾತ್ರವಲ್ಲದೆ, ಈ ಸ್ಟೇಡಿಯಂನ್ನು ಬಹುಉದ್ದೇಶೀಯ ವೇದಿಕೆಯಾಗಿ ರೂಪಿಸುವ ಯೋಜನೆಯೂ ಇದೆ. ಸಂಗೀತ ಕಾರ್ಯಕ್ರಮಗಳು, ಸಮ್ಮೇಳನಗಳು, ಸಾರ್ವಜನಿಕ ಸಭೆಗಳು, ಕಾರ್ಪೊರೇಟ್ ಕಾರ್ಯಕ್ರಮಗಳು ಹಾಗೂ ಪ್ರದರ್ಶನಗಳಿಗೂ ಇದನ್ನು ಬಳಸುವ ಉದ್ದೇಶವಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Optical Illusion: ಬುದ್ಧಿವಂತರಿಗೊಂದು ಸವಾಲ್;‌ ಈ ಚಿತ್ರದಲ್ಲಿರುವ ವೃತ್ತಗಳನ್ನು ಗುರುತಿಸಬಲ್ಲಿರಾ – Kannada News | Optical Illusion: Find the circles hidden in this picture within 10 seconds

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: vecernji.hr

ನಿಮ್ಮ ಏಕಾಗ್ರತೆಯನ್ನು ಪರೀಕ್ಷಿಸುವಂತಹ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು, ಬ್ರೈನ್‌ ಟೀಸರ್‌ ಆಟಗಳು ಖಂಡಿತ ನಿಮಗೆ ನೆರವಾಗುತ್ತದೆ. ಆದರೆ ಈ ಟ್ರಿಕ್ಕಿ ಒಗಟು ಬಿಡಿಸುವಾಗ ನಿಮ್ಮ ಮೆದುಳನ್ನು ಬಳಸಿಕೊಳ್ಳಬೇಕಷ್ಟೇ. ಇದೀಗ ನೀವು ಅತೀ ಬುದ್ಧಿವಂತರೇ ಎಂದು ಪರೀಕ್ಷಿಸಿಕೊಳ್ಳಲು ಇದೊಂದು ಒಳ್ಳೆಯ ಸಮಯ. ಕಪ್ಪು ಹಾಗೂ ಬಿಳಿ ರೇಖೆಗಳನ್ನೊಳಗೊಂಡ ಚಿತ್ರದಲ್ಲಿ ಎಷ್ಟು ವೃತ್ತಗಳಿವೆ ಎಂದು ಕಂಡು ಹಿಡಿಯಬೇಕು. ಈ ಒಗಟು ಬಿಡಿಸಲು ಇರುವ ಸಮಯವಕಾಶ ಹತ್ತು ಸೆಕೆಂಡುಗಳು ಮಾತ್ರ. ನೀವು ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಿಕೊಳ್ಳಲು ರೆಡಿ ಇದ್ದೀರಾ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಬಿಡುವಿನ ವೇಳೆಯಲ್ಲಿ ಸಮಯ ಕಳೆಯಲು ನೆರವಾಗುತ್ತದೆ. ಇಂಟರ್ನೆಟ್‌ನಲ್ಲಿ ಟ್ರೆಂಡ್ ಆಗಿರುವ ಚಿತ್ರದಲ್ಲಿ ಕಪ್ಪು ಬಿಳಿ ರೇಖೆಗಳನ್ನೊಳಗೊಂಡ ವೃತ್ತಗಳು ಕಾಣಿಸುತ್ತವೆ. ಈ ರೇಖೆಗಳ ಜೋಡಣೆಯೂ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಈ ಚಿತ್ರ ನೋಡಿದಾಗ ಕಣ್ಣಿಗೆ ಬೀಳುವುದೇ ಮೂರು ನಾಲ್ಕು ವೃತ್ತಗಳಷ್ಟೇ. ಆದರೆ ಕಣ್ಣು ಬಿಟ್ಟು ನೋಡಿದಾಗ ಮಾತ್ರ ವೃತ್ತಗಳ ನಿಖರ ಸಂಖ್ಯೆಯನ್ನು ಹೇಳಲು ಸಾಧ್ಯ.

ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್;‌ ಗೂಬೆಗಳ ನಡುವೆ ಅಡಗಿರುವ ಬೆಕ್ಕನ್ನು ಹುಡುಕಬಲ್ಲಿರಾ?

ವೃತ್ತಗಳನ್ನು ಗುರುತಿಸಲು ಸಾಧ್ಯವಾಯಿತೇ?

ಈ ಚಿತ್ರದಲ್ಲಿ 16 ವೃತ್ತಗಳಿವೆ. ಆದರೆ ವಿನ್ಯಾಸದಿಂದ ಇಲ್ಲಿರುವ ಎಲ್ಲಾ ವೃತ್ತಗಳು ಕಣ್ಣಿಗೆ ಗೋಚರಿಸುವುದಿಲ್ಲ. ನಿಮಗೆ ಸುಳಿವನ್ನು ನೀಡಿ ವೃತ್ತಗಳ ನಿಖರ ಸಂಖ್ಯೆಯನ್ನು ಹೇಳಲು ಸಹಾಯ ಮಾಡುತ್ತೇವೆ. ರೇಖೆಗಳ ನಡುವಿನ ಖಾಲಿ ಜಾಗದ ನಡುವೆ ನಿಮ್ಮ ಗಮನವನ್ನು ಕೇಂದ್ರಿಕರಿಸಿ. ಆಗ ನಿಮಗೆ ಒಂದೊಂದು ವೃತ್ತಗಳು ಕಾಣಿಸುತ್ತವೆ. ಒಂದು ವೇಳೆ ವೃತ್ತಗಳನ್ನು ಗುರುತಿಸಲು ವಿಫಲವಾದರೆ ಈ ಕೆಳಗಿನ ಚಿತ್ರದಲ್ಲಿ ವೃತ್ತಗಳನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೈವೇಯಲ್ಲಿ ಸಿಸಿಟಿವಿ ಹಾಕಿ ಪಾಕಿಸ್ತಾನಕ್ಕೆ ಭಾರತದ ಸೈನಿಕರ ಚಲನವಲನಗಳ ಮಾಹಿತಿ ನೀಡ್ತಿದ್ದ ಪಂಜಾಬ್ ವ್ಯಕ್ತಿ ಅರೆಸ್ಟ್​ – Kannada News | Punjab Man Accused of Sharing Military Movement Footage Across Border

ಪಠಾಣ್‌ಕೋಟ್, ಮೇ 22: ಭಾರತೀಯ ರಕ್ಷಣಾ ಪಡೆಗಳ ಚಲನವಲನಗಳ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನ(Pakistan)ದ ಹ್ಯಾಂಡ್ಲರ್‌ಗಳಿಗೆ ರವಾನಿಸುತ್ತಿದ್ದ ಆರೋಪದ ಮೇಲೆ ಪಠಾಣ್‌ಕೋಟ್ ಪೊಲೀಸರು ಬಲ್ಜಿತ್ ಸಿಂಗ್ ಅಲಿಯಾಸ್ ಬಿಟ್ಟು ಎಂಬಾತನನ್ನು ಬಂಧಿಸಿದ್ದಾರೆ. ಚಕ್ ಧಾರಿವಾಲ್ ಗ್ರಾಮದ ನಿವಾಸಿಯಾದ ಬಲ್ಜಿತ್ ಸಿಂಗ್, ರಾಷ್ಟ್ರೀಯ ಹೆದ್ದಾರಿ-44ರ ಪಠಾಣ್‌ಕೋಟ್-ಜಮ್ಮು ರಸ್ತೆಯ ಸೇತುವೆಯ ಬಳಿಯ ಅಂಗಡಿಯೊಂದರಲ್ಲಿ ಇಂಟರ್ನೆಟ್ ಆಧಾರಿತ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದ.

ಈ ಹೆದ್ದಾರಿಯಲ್ಲಿ ಹಾದುಹೋಗುವ ಸೇನೆ ಮತ್ತು ಅರೆಸೈನಿಕ ಪಡೆಗಳ ಚಲನವಲನಗಳನ್ನು ಲೈವ್ ಆಗಿ ಮೇಲ್ವಿಚಾರಣೆ ಮಾಡಿ, ಮಾಹಿತಿಯನ್ನು ಪಾಕಿಸ್ತಾನ ಮತ್ತು ವಿದೇಶಿ ಏಜೆಂಟ್‌ಗಳಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಕಳುಹಿಸುತ್ತಿದ್ದ. ಈ ಕೆಲಸಕ್ಕಾಗಿ ದುಬೈನಲ್ಲಿರುವ ಅಪರಿಚಿತ ವ್ಯಕ್ತಿಯಿಂದ ಈತನಿಗೆ ನಿರ್ದೇಶನಗಳು ಬರುತ್ತಿದ್ದವು ಮತ್ತು ಅದಕ್ಕಾಗಿ 40,000 ರೂ. ಹಣವನ್ನೂ ನೀಡಲಾಗಿತ್ತು. ಸದ್ಯ ಪೊಲೀಸರು ಈತನಿಂದ ಕ್ಯಾಮೆರಾ ಮತ್ತು ವೈಫೈ ರೂಟರ್ ವಶಪಡಿಸಿಕೊಂಡಿದ್ದು, ಜಾಲದಲ್ಲಿದ್ದ ಉಳಿದ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದಕ್ಕೂ ಮುನ್ನ ಪಂಜಾಬ್ ಪೊಲೀಸರು ಜಲಂಧರ್ ಮತ್ತು ಕಪುರ್ತಲಾದಲ್ಲಿ ಇಂತದೇ ಎರಡು ಪ್ರಮುಖ ಬೇಹುಗಾರಿಕೆ ಜಾಲಗಳನ್ನು ಧ್ವಂಸಗೊಳಿಸಿದ್ದರು. ಪಾಕಿಸ್ತಾನದ ಹ್ಯಾಂಡ್ಲರ್‌ಗಳು ಮಿಲಿಟರಿ ನೆಲೆಗಳ ಬಳಿ ಕಣ್ಣಿಡಲು ಅತ್ಯಾಧುನಿಕ, ಚೀನಾ ನಿರ್ಮಿತ ಮತ್ತು ಸೌರಶಕ್ತಿ ಚಾಲಿತ  ಸಿಸಿಟಿವಿ ಕ್ಯಾಮೆರಾಗಳನ್ನು ಬಳಸುತ್ತಿದ್ದರು. ಈ ಹೈಟೆಕ್ ಕ್ಯಾಮೆರಾಗಳಿಗೆ ಯಾವುದೇ ವೈರಿಂಗ್ ಅಗತ್ಯವಿರಲಿಲ್ಲ.

ಮತ್ತಷ್ಟು ಓದಿ: ಭಯೋತ್ಪಾದನೆ ನಿಲ್ಲಿಸದಿದ್ದರೆ ಇತಿಹಾಸ, ಭೂಪಟದಿಂದ ಪಾಕಿಸ್ತಾನ ಮರೆಯಾಗಲಿದೆ: ಭಾರತೀಯ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!

ಇವು 4G ಸಿಮ್ ಕಾರ್ಡ್ ಮತ್ತು ಸೋಲಾರ್ ಪ್ಲೇಟ್ ಸಹಾಯದಿಂದ ಆಫ್-ಗ್ರಿಡ್ ಆಗಿ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದವು. ಮೊಬೈಲ್ ಆಪ್‌ಗಳ ಮೂಲಕ ಪಾಕಿಸ್ತಾನಿ ಹ್ಯಾಂಡ್ಲರ್‌ಗಳು ಭಾರತೀಯ ಸೇನೆಯ ನೇರ ದೃಶ್ಯಗಳನ್ನು ವೀಕ್ಷಿಸುತ್ತಿದ್ದರು ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.

ಜಲಂಧರ್‌ನಲ್ಲಿ ಸುಖ್ವಿಂದರ್ ಸಿಂಗ್ ಎಂಬಾತನನ್ನು ಹಾಗೂ ಕಪುರ್ತಲಾದ ಆರ್ಮಿ ಕ್ಯಾಂಟ್ (ಸೇನಾ ನೆಲೆ) ಬಳಿ ನಿಗಾ ಇಡಲು ಕಂಬವೊಂದಕ್ಕೆ ಕ್ಯಾಮೆರಾ ಅಳವಡಿಸಿದ್ದ ಸೋನಾ ಮತ್ತು ಸಂದೀಪ್ ಸಿಂಗ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಇವರಿಗೆ ‘ಫೌಜಿ’ ಎಂಬ ಪಾಕಿಸ್ತಾನಿ ಹ್ಯಾಂಡ್ಲರ್ 35,000 ರೂ. ನೀಡಿದ್ದ.

ಇವರಲ್ಲಿ ಸಂದೀಪ್ ಸಿಂಗ್ ಎಂಬ ಆರೋಪಿ ಮಾದಕವಸ್ತು ಕಳ್ಳಸಾಗಣೆಯಲ್ಲೂ ಭಾಗಿಯಾಗಿದ್ದು, ಅದೇ ಪಾಕಿಸ್ತಾನಿ ಹ್ಯಾಂಡ್ಲರ್ ಡ್ರೋನ್ ಮೂಲಕ ಕಳುಹಿಸಿದ್ದ 1 ಕೆಜಿ ಹೆರಾಯಿನ್ ವಿತರಿಸಲು 50,000 ರೂ. ಪಡೆದಿದ್ದ ಎಂಬ ಆಘಾತಕಾರಿ ವಿಷಯ ಬಯಲಾಗಿದೆ. ಸದ್ಯ ಈ ಬೇಹುಗಾರಿಕೆಯ ಹಿಂದಿರುವ ಅಂತರರಾಷ್ಟ್ರೀಯ ಹಣಕಾಸಿನ ಮೂಲಗಳ ಬಗ್ಗೆ ಗಂಭೀರ ತನಿಖೆ ಮುಂದುವರೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದೊಡ್ಡ ಬಜೆಟ್ ಸಿನಿಮಾಗಳಿಗೆ ಆರ್ಥಿಕ ಸಂಕಷ್ಟ: ಕುದುರುತ್ತಿಲ್ಲ ಡೀಲ್ – Kannada News | Indian Cinema’s Financial Crisis: High Costs, Low Returns and Teaser Troubles

ಪ್ರಸ್ತುತ ಭಾರತೀಯ ಚಿತ್ರರಂಗವು ಹೆಚ್ಚುತ್ತಿರುವ ನಿರ್ಮಾಣ ವೆಚ್ಚ ಹಾಗೂ ವ್ಯಾಪಾರ ಒಪ್ಪಂದಗಳ ಕೊರತೆಯಿಂದಾಗಿ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಸಿನಿಮಾಗಳು ಬಿಡುಗಡೆಗೆ ಮುನ್ನವೇ ಹೂಡಿಕೆಯನ್ನು ಮರಳಿ ಪಡೆಯುವುದು ನಿರ್ಮಾಪಕರಿಗೆ ಸವಾಲಾಗಿ ಪರಿಣಮಿಸಿದೆ. ಚಿತ್ರದ ಸ್ಟಾರ್ ನಟರು ಅಥವಾ ಬಜೆಟ್ ಎಷ್ಟು ದೊಡ್ಡದಾಗಿದ್ದರೂ, ಬಿಡುಗಡೆಯಾಗುವ ಟೀಸರ್ ಮತ್ತು ಟ್ರೈಲರ್‌ಗಳು ಪ್ರೇಕ್ಷಕರನ್ನು ಸೆಳೆಯಲು ವಿಫಲವಾದರೆ, ಒಟಿಟಿ ಹಾಗೂ ಥಿಯೇಟ್ರಿಕಲ್ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡುವುದು ಕಷ್ಟಸಾಧ್ಯವಾಗಿದೆ.

ಇದಕ್ಕೆ ಉತ್ತಮ ಉದಾಹರಣೆ ಎಂದರೆ ಬಾಲಿವುಡ್‌ನ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’. ಸುಮಾರು 4000 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ, ಸ್ಟಾರ್ ತಾರಾಗಣದೊಂದಿಗೆ ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ಈ ದೃಶ್ಯ ವೈಭವಕ್ಕೆ ಸದ್ಯ ಮಾರುಕಟ್ಟೆಯಲ್ಲಿ ನಿರೀಕ್ಷಿತ ಬಿಸಿನೆಸ್ ಕುದುರುತ್ತಿಲ್ಲ. ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಚಿತ್ರದ ಹಿಂದಿ ಥಿಯೇಟ್ರಿಕಲ್ ಹಕ್ಕುಗಳಿಗಾಗಿ ಬರೋಬ್ಬರಿ 450 ಕೋಟಿ ರೂಪಾಯಿ ಮೊತ್ತವನ್ನು ನಿಗದಿಪಡಿಸಿದ್ದಾರೆ. ಇದುವರೆಗೆ ಯಾವುದೇ ಹೈ-ಪ್ರೊಫೈಲ್ ಚಿತ್ರಗಳು ಕೇವಲ 250 ಕೋಟಿ ರೂಪಾಯಿಗಳ ಆಸುಪಾಸಿನಲ್ಲಿ ವ್ಯವಹಾರ ನಡೆಸಿದ್ದು, ಈ ಹೊಸ ಬೆಲೆ ವಿತರಕರಿಗೆ ಅತಿಯಾಯಿತು ಎನಿಸುತ್ತಿದೆ.

ಈ ಹಿನ್ನಡೆಗೆ ಮುಖ್ಯ ಕಾರಣ, ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟೀಸರ್ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿರುವುದು. ಟೀಸರ್‌ನಲ್ಲಿನ ಗ್ರಾಫಿಕ್ಸ್ ಗುಣಮಟ್ಟ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಇದು ಪ್ರೇಕ್ಷಕರಲ್ಲಿ ಚಿತ್ರದ ಅಂತಿಮ ಔಟ್‌ಪುಟ್ ಬಗ್ಗೆ ಅನುಮಾನ ಮೂಡಿಸಿದೆ.

ಇದನ್ನೂ ಓದಿ: ಸಾಯಿ ಪಲ್ಲವಿ ವಿಷಯದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ‘ರಾಮಾಯಣ’ ಟೀಂ

ಕೇವಲ ‘ರಾಮಾಯಣ’ ಮಾತ್ರವಲ್ಲದೆ, ಮುಂಬರುವ ಹಲವು ಪ್ಯಾನ್-ಇಂಡಿಯಾ ಬಿಗ್ ಬಜೆಟ್ ಸಿನಿಮಾಗಳ ಪರಿಸ್ಥಿತಿಯೂ ಇದೇ ಆಗಿದೆ. ಆರಂಭಿಕ ಕಂಟೆಂಟ್ ಮೂಲಕ ಪ್ರೇಕ್ಷಕರಲ್ಲಿ ಧನಾತ್ಮಕ ಕ್ರೇಜ್ ಸೃಷ್ಟಿಸದಿದ್ದರೆ, ಒಟಿಟಿ ಸಂಸ್ಥೆಗಳು ಹಾಗೂ ವಿತರಕರು ಅಂತಹ ಸಿನಿಮಾಗಳಿಂದ ದೂರ ಸರಿಯುತ್ತಿದ್ದಾರೆ. ಹೀಗಾಗಿ, ಪ್ರಚಾರದ ಕಂಟೆಂಟ್ ಮೂಲಕವೇ ಭರವಸೆ ಮೂಡಿಸುವುದು ಇಂದಿನ ನಿರ್ಮಾಪಕರಿಗೆ ಇರುವ ಅತಿ ದೊಡ್ಡ ಸವಾಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:02 am, Fri, 22 May 26

Source link

Rajya Sabha Election 2026: ಕರ್ನಾಟಕ ಸೇರಿ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆ – Kannada News | Rajya Sabha Elections 2026 Dates Announced for 24 Seats Across 10 States

ನವದೆಹಲಿ/ಬೆಂಗಳೂರು, ಮೇ 22: ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ಸೇರಿ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೊಷಣೆ ಮಾಡಿದೆ. ಜೂನ್ 18ರಂದು ರಾಜ್ಯಸಭಾ ಚುನಾವಣೆ ನಡೆಯಲಿದೆ. ಕರ್ನಾಟಕದ 4 ಸ್ಥಾನ ಸೇರಿ ಒಟ್ಟು 24 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕದಿಂದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಸೇರಿದಂತೆ ಹಾಲಿ ಶಾಸಕರ ಅವಧಿ ಪೂರ್ಣಗೊಂಡ ನಂತರ ಜೂನ್ ಮತ್ತು ಜುಲೈನಲ್ಲಿ 24 ಸ್ಥಾನಗಳು ತೆರವಾಗಲಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:55 am, Fri, 22 May 26

Source link

ಸಿನಿಮಾ ನಟನ ಸಿನಿಮಾ ರೀತಿಯ ಕತೆ, ಜೈಲಿಂದ ತಪ್ಪಿಸಿಕೊಂಡ ಅಪರಾಧಿ ಖ್ಯಾತ ನಟನಾದ – Kannada News | Actor who eloped jail arrested after 12 years a interesting incident

ಹೇಮಂತ್ ವೈಷ್ಣವ್ ಅಲಿಯಾಸ್ ನಗೀನ್‌ದಾಸ್ ಪರಶೋತ್ತಮದಾಸ್ ಮೋದಿ ಎಂಬ 53 ವರ್ಷದ ನಟನನ್ನು ಅಹಮದಾಬಾದ್ (Ahmedabad) ಕ್ರೈಮ್ ಬ್ರಾಂಚ್ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಅಮಿತಾಬ್ ಬಚ್ಚನ್, ಆಮಿರ್ ಖಾನ್, ರಣ್ವೀರ್ ಸಿಂಗ್, ಸನ್ನಿ ಡಿಯೋಲ್ ಸೇರಿದಂತೆ ಹಲವಾರು ಸ್ಟಾರ್ ನಟರುಗಳೊಟ್ಟಿಗೆ ನಟಿಸಿರುವ ಈತ ಹಲವು ಟಿವಿ ಶೋಗಳಲ್ಲಿ ವೆಬ್ ಸರಣಿಗಳಲ್ಲಿ ನಟಿಸಿದ್ದ. ಆದರೆ ಇದೀಗ ಈ ನಟನನ್ನು ಪೊಲೀಸರು 21 ವರ್ಷದ ಹಿಂದಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಬಂಧನದ ಬಳಿಕ ತಿಳಿದು ಬಂದಿರುವ ವಿಷಯವೆಂದರೆ ಈ ನಟ, ಕಳೆದ 12 ವರ್ಷದಿಂದ ಪೊಲೀಸರಿಂದ ತಲೆ ಮರೆಸಿಕೊಂಡಿದ್ದನಂತೆ!

ಗುಜರಾತಿನ ಈ ವ್ಯಕ್ತಿ ಕೊಲೆ ಪ್ರಕರಣ ಒಂದರಲ್ಲಿ ಅಪರಾಧಿ ಎಂದು ಘೋಷಿತವಾಗಿ 2005 ರಲ್ಲಿ ಜೈಲು ಸೇರಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಬಳಿಕ 2014 ರಲ್ಲಿ ಒಂದು ತಿಂಗಳ ಪರೋಲ್ ಪಡೆದು ಬಿಡುಗಡೆ ಆಗಿದ್ದ ಈ ವ್ಯಕ್ತಿ ಮುಂಬೈಗೆ ಬಂದು ನಟನಾಗಿದ್ದಾನೆ. ಆಗಿನಿಂದ ಸುಮಾರು 12 ವರ್ಷಗಳ ಕಾಲ ಆತ ಪೊಲೀಸರಿಗೆ ಸಿಕ್ಕೇ ಇಲ್ಲ! ಆದರೆ ಇದೀಗ 12 ವರ್ಷಗಳ ಬಳಿಕ ಪೊಲೀಸರು ಹೇಮಂತ್ ಅನ್ನು ಬಂಧಿಸಿದ್ದಾರೆ. ನಟ ಹೇಮಂತ್ ಅನ್ನು ಬಂಧಿಸಿದ ಅಹಮದಾಬಾದ್ ಕ್ರೈಮ್ ಬ್ರಾಂಚ್ ಪೊಲೀಸ್ ಇನ್ಸ್‌ಪೆಕ್ಟರ್ ಪಿಎಮ್ ಧಾಖ್ರಾ ನೀಡಿರುವ ಮಾಹಿತಿಯಂತೆ, 2005ರಲ್ಲಿ ಅಹಮದಾಬಾದ್‌ನ ನರೋಡಾ ಪ್ರದೇಶದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಈತನ ವಿರುದ್ಧ ಆಗಿನ ಐಪಿಸಿ ಸೆಕ್ಷನ್ 302, 324, 147, 148, 149, ಮತ್ತು 120(ಬಿ) ಹಾಗೂ ಬಿಪಿ ಕಾಯ್ದೆಯ ಸೆಕ್ಷನ್ 135(1) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಕ್ರೈಮ್ ಬ್ರಾಂಚ್ ಅಧಿಕಾರಿ ಮಾತನಾಡಿ, ‘ಕಳೆದ 12 ವರ್ಷಗಳಿಂದ ಈತನಿಗಾಗಿ ಹುಡುಕಾಟ ನಡೆದಿತ್ತು. ಈ ಅವಧಿಯಲ್ಲಿ ಆರೋಪಿಯು ಚಿತ್ರರಂಗದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಸಕ್ರಿಯನಾಗಿದ್ದ. ಈತನ ಹಲವು ವೆಬ್ ಸರಣಿಗಳು ಕೂಡ ಬಿಡುಗಡೆಯಾಗಿದ್ದವು. ಹೇಮಂತ್ ಅಹಮದಾಬಾದ್‌ಗೆ ಬಂದಿದ್ದಾನೆ ಎಂಬ ಖಚಿತ ಮಾಹಿತಿ ಬುಧವಾರ ಮೆಟ್ರೋ ಸ್ಟೇಷನ್ ಬಳಿ ಬಂಧಿಸಲಾಗಿದೆ. ಆತನ ಉಳಿದ ಶಿಕ್ಷೆಯ ಅವಧಿಯನ್ನು ಪೂರೈಸಲು ಆತನನ್ನು ಮೆಹ್ಸಾನಾ ಜೈಲಿಗೆ ಕಳುಹಿಸಲಾಗಿದೆ. ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಹೇಮಂತ್ ತನ್ನ ಹೆಸರನ್ನು ಬದಲಾಯಿಸಿಕೊಂಡು, ಚಿತ್ರರಂಗದಲ್ಲಿ ಪೋಷಕ ನಟನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಆತ ಹಿಂದಿ, ಗುಜರಾತಿ ಮತ್ತು ಇತರ ಭಾಷೆಗಳ ಚಲನಚಿತ್ರಗಳು, ವೆಬ್ ಸರಣಿಗಳು, ಟಿವಿ ಶೋಗಳು ಮತ್ತು ನಾಟಕಗಳಲ್ಲಿ ಸಕ್ರಿಯನಾಗಿದ್ದ. ಪೊಲೀಸ್ ಹೇಳಿಕೆಯ ಪ್ರಕಾರ, ಆತ ತಲೆಮರೆಸಿಕೊಂಡಿದ್ದರೂ ಸಹ ಅತ್ಯಂತ ಸಕ್ರಿಯ ವೃತ್ತಿಜೀವನವನ್ನು ಮುನ್ನಡೆಸುತ್ತಿದ್ದ.

ಇದನ್ನೂ ಓದಿ:ರಶ್ಮಿಕಾ-ಕೃತಿ ಮಧ್ಯೆ ಕ್ಯಾಟ್ ಫೈಟ್; ಸಿನಿಮಾ ಪ್ರಚಾರಕ್ಕಾಗಿ ಚೀಪ್ ಗಿಮಿಕ್?

ಹೇಮಂತ್, ಅಮೀರ್ ಖಾನ್, ಕತ್ರಿನಾ ಕೈಫ್ ಮತ್ತು ಅಮಿತಾಭ್ ಬಚ್ಚನ್ ನಟನೆಯ ‘ಥಗ್ಸ್ ಆಫ್ ಹಿಂದೂಸ್ತಾನ್’, ರಣವೀರ್ ಸಿಂಗ್ ಮತ್ತು ಶಾಲಿನಿ ಪಾಂಡೆ ನಟನೆಯ ‘ಜಯೇಶ್ ಭಾಯ್ ಜೋರ್ದಾರ್’, ಸಾರಾ ಅಲಿ ಖಾನ್ ಮತ್ತು ಆದಿತ್ಯ ರಾಯ್ ಕಪೂರ್ ನಟನೆಯ ‘ಮೆಟ್ರೋ ಇನ್ ದಿನೋ’, ಹಾಗೂ ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಟನೆಯ ‘L2 ಎಂಪೂರನ್’ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸನ್ನಿ ಡಿಯೋಲ್ ಮತ್ತು ಪ್ರೀತಿ ಜಿಂಟಾ ನಟನೆಯ ‘ಲಾಹೋರ್ 1947’ ಅವರ ಮುಂಬರುವ ಸಿನಿಮಾ ಆಗಿದೆ. ‘ವಾಗ್ಲೆ ಕಿ ದುನಿಯಾ’ ಮತ್ತು ‘ಮೇರೆ ಸಾಯಿ’ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ. ಕೆಲವು ವೆಬ್ ಸರಣಿಗಳಲ್ಲಿಯೂ ನಟಿಸಿದ್ದು, ಅವೂ ಸಹ ಬಿಡುಗಡೆ ಆಗಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:48 am, Fri, 22 May 26

Source link

Exit mobile version