ಸಚಿವ ಸಂಪುಟ ಪುನಾರಚನೆ ವದಂತಿ: ದೆಹಲಿಗೆ ಹಾರಿದ ಸಚಿವಾಕಾಂಕ್ಷಿಗಳು – Kannada News | Karnataka Minister Aspirants Flock to Delhi Amid Cabinet Reshuffle Speculation

ನವದೆಹಲಿ/ಬೆಂಗಳೂರು, ಮೇ 22: ಕರ್ನಾಟಕದಲ್ಲಿ ಸಚಿವ ಸಂಪುಟ ಪುನರಚನೆ ಕುರಿತ ಚರ್ಚೆ ತೀವ್ರಗೊಂಡಿದೆ. ಈ ಬೆಳವಣಿಗೆಗಳ ನಡುವೆ, ಸಚಿವಾಕಾಂಕ್ಷಿ ಶಾಸಕರು ಮತ್ತು ಹಾಲಿ ಸಚಿವರು ಕಾಂಗ್ರೆಸ್ ಹೈಕಮಾಂಡ್ ಅನ್ನು ಭೇಟಿಯಾಗಲು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಸಚಿವ ಕೃಷ್ಣ ಬೈರೇಗೌಡ, ಶಾಸಕರಾದ ರಿಜ್ವಾನ್ ಅರ್ಷದ್ ಮತ್ತು ಶ್ರೀನಿವಾಸ್ ಮಾನೆ ಸೇರಿದಂತೆ ಐವರು ನಾಯಕರು ದೆಹಲಿಗೆ ತೆರಳಿದ್ದಾರೆ. ಕೃಷ್ಣ ಬೈರೇಗೌಡರು ತಮ್ಮ ಸಚಿವ ಸ್ಥಾನವನ್ನು ಮುಂದುವರಿಸಲು ಬೇಡಿಕೆ ಇಡುವ ಸಾಧ್ಯತೆ ಇದೆ. ರಿಜ್ವಾನ್ ಅರ್ಷದ್ ಮತ್ತು ಶ್ರೀನಿವಾಸ್ ಮಾನೆ ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದಾರೆ. ಹೈಕಮಾಂಡ್ ಭೇಟಿ ಮಾಡಿ ತಮ್ಮನ್ನು ಸಂಪುಟ ಪುನರಚನೆಯಲ್ಲಿ ಪರಿಗಣಿಸುವಂತೆ ಮನವಿ ಮಾಡಿಕೊಳ್ಳುವ ಉದ್ದೇಶದಿಂದ ಇವರು ದೆಹಲಿಗೆ ಬಂದಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಶಾಸಕರ ಈ ದೆಹಲಿ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಮಹತ್ವದ ಬೆಳವಣಿಗೆಗಳಿಗೆ ವೇದಿಕೆ ಸೃಷ್ಟಿಸುವ ನಿರೀಕ್ಷೆಯಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ವೆಬ್​​​ಸೈಟ್​​​​ಗೆ ಪೇಜ್​​ ವಿವ್ಸ್​​​ ಬರದಿರಲು ಇದೆ ಅಸಲಿ ಕಾರಣ!: ಗೂಗಲ್ ತಂದ ಎಐ ಮಾರಿ; ಇನ್ಮುಂದೆ ಲಿಂಕ್ ಕ್ಲಿಕ್ ಮಾಡೋರೇ ಇರಲ್ವಾ? – Kannada News | Google Zero and AI Search: How Conversational AI Reshapes Web Visibility

ದೆಹಲಿ, ಮೇ22: ಅಂತರ್ಜಾಲದಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಹುಡುಕುವ (Search) ವಿಧಾನವೀಗ ಸಂಪೂರ್ಣವಾಗಿ ಬದಲಾಗುತ್ತಿದೆ. ಗೂಗಲ್ (Google), ಓಪನ್ ಎಐ (OpenAI) ನಂತಹ ಜಾಗತಿಕ ಟೆಕ್ ದೈತ್ಯರು ಜಾರಿಗೆ ತರುತ್ತಿರುವ ಕನ್ವರ್ಸೇಷನಲ್ ಎಐ ಪರಿಕರಗಳು, ವೆಬ್‌ಸೈಟ್‌ಗಳ ಟ್ರಾಫಿಕ್ ಹಾಗೂ ಆನ್‌ಲೈನ್ ದೃಶ್ಯಗೋಚರತೆಯ (Online Visibility) ಮೇಲೆಯೇ ನೇರ ದಾಳಿ ನಡೆಸುತ್ತಿವೆ. ಇದು ಗೂಗಲ್ ಸರ್ಚ್ ಟ್ರಾಫಿಕ್ ಅನ್ನೇ ನಂಬಿ ಬದುಕುತ್ತಿರುವ ಜಗತ್ತಿನ ಕೋಟ್ಯಂತರ ಸಣ್ಣ ಪ್ರಕಾಶಕರು, ಸ್ವತಂತ್ರ ಬ್ಲಾಗ್‌ಗಳು ಮತ್ತು ಮಾಧ್ಯಮ ಸಂಸ್ಥೆಗಳ ನಿದ್ದೆಗೆಡಿಸಿದೆ.

ಏನಿದು “ಗೂಗಲ್ ಝೀರೋ” (Google Zero) ಭೀತಿ?

ಗೂಗಲ್ ಇತ್ತೀಚೆಗೆ ತನ್ನ ‘I/O 2026’ ಈವೆಂಟ್‌ನಲ್ಲಿ ಕಳೆದ 20 ವರ್ಷಗಳಲ್ಲೇ ಅತಿ ದೊಡ್ಡ ಸರ್ಚ್ ಅಪ್‌ಡೇಟ್ ಅನ್ನು ಪ್ರಕಟಿಸಿದೆ. ಇದರ ಅಡಿಯಲ್ಲಿ ಸಾಂಪ್ರದಾಯಿಕ ನೀಲಿ ಲಿಂಕ್‌ಗಳ (Blue Links) ಬದಲಾಗಿ, ಎಐ-ಚಾಲಿತ ಉತ್ತರಗಳು (AI Overviews) ನೇರವಾಗಿ ಸರ್ಚ್ ಪೇಜ್‌ನಲ್ಲೇ ಸಿಗಲಿವೆ. ಬಳಕೆದಾರರು ಯಾವುದೇ ವೆಬ್‌ಸೈಟ್‌ಗೆ ಕ್ಲಿಕ್ ಮಾಡಿ ಒಳಹೋಗದೆಯೇ (Zero Click) ಸರ್ಚ್ ಬಾಕ್ಸ್‌ನಲ್ಲೇ ಸಂಪೂರ್ಣ ಸಾರಾಂಶವನ್ನು ಓದಬಹುದು. ಇದರಿಂದಾಗಿ ವೆಬ್‌ಸೈಟ್‌ಗಳಿಗೆ ಬರುವ ವಿಸಿಟರ್ಸ್ ಸಂಖ್ಯೆ ಸಂಪೂರ್ಣ ಕುಸಿಯಲಿದ್ದು, ಇದನ್ನು ತಜ್ಞರು “ಗೂಗಲ್ ಝೀರೋ” ಎಂದು ಕರೆಯುತ್ತಿದ್ದಾರೆ. ವೆಬ್‌ಸೈಟ್‌ಗಳಿಗೆ ರೀಡರ್ಸ್ ಬರದಿದ್ದರೆ ಅವರ ಆಡ್ ರೆವೆನ್ಯೂ (ಜಾಹೀರಾತು ಆದಾಯ) ಮತ್ತು ಸಬ್‌ಸ್ಕ್ರಿಪ್ಷನ್ ಸಂಪೂರ್ಣ ಬಂದ್ ಆಗುವ ಅಪಾಯವಿದೆ.

ಕ್ಲೋಸ್ಡ್ ಇಂಟರ್ನೆಟ್ ಮಾಡೆಲ್

ಸಾರ್ವಜನಿಕರು ಈ ಹಿಂದೆ ಲಿಂಕ್‌ಗಳ ಮೂಲಕ ಒಂದು ವೆಬ್‌ಸೈಟ್‌ನಿಂದ ಮತ್ತೊಂದು ಬ್ಲಾಗ್, ಫೋರಂ ಅಥವಾ ನ್ಯೂಸ್ ಸೈಟ್‌ಗಳಿಗೆ ಸ್ವತಂತ್ರವಾಗಿ ಹೋಗುತ್ತಿದ್ದರು (Open Web Model). ಆದರೆ ಈಗ ಎಐ ಪರಿಕರಗಳು ಸರ್ಚ್ ಇಂಜಿನ್‌ಗಳನ್ನು ಕೇವಲ “ವೇಗವರ್ಧಕ ಗೇಟ್‌ವೇ” ಆಗಿ ಉಳಿಸದೆ, “AI ಸಹಾಯಕ” (AI Assistant) ಆಗಿ ಬದಲಾಯಿಸುತ್ತಿವೆ. ಇದು ಇಂಟರ್ನೆಟ್ ಅನ್ನು ಒಂದು ನಿರ್ದಿಷ್ಟ ಟೆಕ್ ವೇದಿಕೆಯ ನಾಲ್ಕು ಗೋಡೆಗಳ ಮಧ್ಯೆ ಬಂದಿಡುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ‘ಕೆಳಗಿನ ಶೇ. 50 ಮಂದಿಗೆ ಆದಾಯ ತೆರಿಗೆ ‘3% ಅಲ್ಲ, 0% ಆಗಬೇಕು’- ಜೆಫ್ ಬೆಜೋಸ್

ಪರ್ಯಾಯ ಸರ್ಚ್ ಇಂಜಿನ್‌ಗಳತ್ತ ಹೋಗುತ್ತಿದ್ದಾರೆ:

ಗೂಗಲ್‌ನ ಈ ಅತಿಯಾದ ಎಐ ಹೇರಿಕೆಯಿಂದ ಬೇಸತ್ತಿರುವ ಬಳಕೆದಾರರು ಮತ್ತು ಪ್ರಕಾಶಕರು ಈಗ ಪರ್ಯಾಯ ಮತ್ತು ಸುರಕ್ಷಿತ ಸರ್ಚ್ ಇಂಜಿನ್‌ಗಳತ್ತ ಮುಖ ಮಾಡುತ್ತಿದ್ದಾರೆ.

ಡಕ್ ಡಕ್ ಗೋ (DuckDuckGo): ಬಳಕೆದಾರರ ಟ್ರ್ಯಾಕಿಂಗ್ ಮಾಡದ ಕನಿಷ್ಠ ದತ್ತಾಂಶ ನೀತಿ.

ಕಾಗಿ (Kagi): ಯಾವುದೇ ಜಾಹೀರಾತುಗಳಿಲ್ಲದ, ಸಬ್‌ಸ್ಕ್ರಿಪ್ಷನ್ ಆಧಾರಿತ ಪ್ರೀಮಿಯಂ ಸರ್ಚ್.

ಸ್ಟಾರ್ಟ್‌ಪೇಜ್ (Startpage) ಮತ್ತು ಬ್ರೇವ್ (Brave): ಎಐ ಸಾರಾಂಶಗಳನ್ನು ಸಂಪೂರ್ಣ ಆಫ್ ಮಾಡುವ ಆಯ್ಕೆ.

‘&udm=14’ ಟ್ರಿಕ್: ಗೂಗಲ್ ಸರ್ಚ್ ಕ್ವೆರಿಗಳಲ್ಲಿ ಈ ಕೋಡ್ ಬಳಸುವ ಮೂಲಕ ಎಐ ಓವರ್‌ವ್ಯೂಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ ಹಳೆಯ ಶೈಲಿಯ ರಿಸಲ್ಟ್ ಪಡೆಯಲು ನೆಟ್ಟಿಗರು ಹೊಸ ದಾರಿ ಕಂಡುಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Tv9 Kannada News Live: ಬೀದರ್ ಬ್ರಿಮ್ಸ್‌ನಲ್ಲಿ ಡಾಕ್ಟರ್ ಮೇಲೆಯೇ ಅಟ್ಯಾಕ್! ಇಲ್ಲಿವೆ ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | Tv9 Kannada News Live: Bidar Doctor Attacked, 25 Dead in Honduras Shootout, Rashmika Kriti Clash at Cocktail 2 Event

ಇಲ್ಲಿವೆ ಈ ಹೊತ್ತಿನ ಪ್ರಮುಖ ಸುದ್ದಿಗಳು

ಬೆಂಗಳೂರು, ಮೇ 22: ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯನ ಮೇಲೆ ಭೀಕರ ಹಲ್ಲೆ ನಡೆದಿದೆ. ಇತ್ತ ಅಮೆರಿಕದ ಹೊಂಡುರಾಸ್‌ನಲ್ಲಿ ಬಂದೂಕುಧಾರಿಗಳು ನಡೆಸಿದ ಭೀಕರ ಗುಂಡಿನ ದಾಳಿಗೆ 6 ಪೊಲೀಸರು ಸೇರಿ 25 ಮಂದಿ ಬಲಿಯಾಗಿದ್ದಾರೆ. ಮತ್ತೊಂದೆಡೆ, ಮುಂಬೈನಲ್ಲಿ ಹಮ್ಮಿಕೊಂಡಿದ್ದ ‘ಕಾಕ್‌ಟೇಲ್ 2’ (Cocktail -2) ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ನಟಿಯರಾದ ಕೃತಿ ಸನೋನ್ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಕ್ರೆಡಿಟ್ ಕಿರಿಕ್ ಉಂಟಾಗಿದೆ.

ಬೀದರ್ ಆಸ್ಪತ್ರೆಯಲ್ಲಿ ವೈದ್ಯನ ಮೇಲೆ ಹಲ್ಲೆ

ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ಯುವಕರ ಗುಂಪೊಂದು ವೈದ್ಯ ತುಕಾರಾಮ್ ಅವರ ಮೇಲೆ ತಡರಾತ್ರಿ ಹಲ್ಲೆ ನಡೆಸಿದೆ. ಬೈಕ್‌ನಿಂದ ಬಿದ್ದು ಅಲ್ಪ ಗಾಯಗಳೊಂದಿಗೆ ಬಂದಿದ್ದ ಯುವಕರು, ಮೆಡಿಕೋ-ಲೀಗಲ್ ಕೇಸ್ (MLC) ದಾಖಲಿಸದಂತೆ ಒತ್ತಾಯಿಸಿದ್ದರು. ಆದರೆ ಆಸ್ಪತ್ರೆಯ ಲ್ಯಾಬ್ ಸಿಬ್ಬಂದಿ ಎಂಎಲ್‌ಸಿ ಮಾಡಲಾಗಿದೆ ಎಂದು ತಪ್ಪು ಮಾಹಿತಿ ನೀಡಿದ್ದರಿಂದ ಆಕ್ರೋಶಗೊಂಡ ಯುವಕರು, ತಾವು ಎಂಎಲ್‌ಸಿ ಮಾಡಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದರೂ ಕೇಳದೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಸ್ತುತ ಗಾಯಾಳು ವೈದ್ಯರು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ ಜಾನುವಾರು ಸಂಬಂಧಿತ ಮಾಹಿತಿ ಟ್ರ್ಯಾಕ್​​ಗೆ ಕರ್ನಾಟಕದಲ್ಲಿ ಹೊಸ ವ್ಯವಸ್ಥೆ: ದೇಶದಲ್ಲೇ ಮೊದಲು

ಮುಖ್ಯಾಂಶಗಳು

ಹೊಂಡುರಾಸ್‌ನಲ್ಲಿ ಬಂದೂಕುಧಾರಿಗಳ ಅಟ್ಟಹಾಸ: 25 ಸಾವು

ಮಧ್ಯ ಅಮೆರಿಕದ ಹೊಂಡುರಾಸ್ ಕರಾವಳಿಯಲ್ಲಿ ನಡೆದ ಎರಡು ಪ್ರತ್ಯೇಕ ಗುಂಡಿನ ದಾಳಿಯಲ್ಲಿ 25 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಮೊದಲ ಘಟನೆಯಲ್ಲಿ ಉತ್ತರ ಹೊಂಡುರಾಸ್‌ನ ಟ್ರುಜಿಲ್ಲೊದಲ್ಲಿ ಪರಿಸರ ಮತ್ತು ಭೂಮಿ ಹಕ್ಕುಗಳ ಸಂಘರ್ಷದ ಹಿನ್ನೆಲೆ ಬಂದೂಕುಧಾರಿಗಳು 19 ಕೃಷಿ ಕಾರ್ಮಿಕರನ್ನು ಭೀಕರವಾಗಿ ಕೊಂದಿದ್ದಾರೆ. ಇದರ ಬೆನ್ನಲ್ಲೇ ಗ್ವಾಟೆಮಾಲಾ ಗಡಿಯ ಸಮೀಪವಿರುವ ಓಮೋವಾದಲ್ಲಿ ಗ್ಯಾಂಗ್ ವಿರೋಧಿ ಕಾರ್ಯಾಚರಣೆಯ ಪೊಲೀಸ್ ವಾಹನದ ಮೇಲೆ ದಾಳಿ ನಡೆದಿದ್ದು, ಹಿರಿಯ ಅಧಿಕಾರಿ ಸೇರಿದಂತೆ ಆರು ಜನ ಪೊಲೀಸರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಜಂಟಿ ಪಡೆಗಳಿಂದ ತನಿಖೆ ಆರಂಭವಾಗಿದೆ.

ಇದನ್ನೂ ಓದಿ ಅಮೆರಿಕದಲ್ಲಿ ಬಂದೂಕುಧಾರಿಗಳಿಂದ ಎರಡು ಪ್ರತ್ಯೇಕ ಗುಂಡಿನ ದಾಳಿ, ಪೊಲೀಸರು ಸೇರಿ 25 ಮಂದಿ ಸಾವು

ರಶ್ಮಿಕಾ ಮಂದಣ್ಣ ಹಾಗೂ ಕೃತಿ ಸನೋನ್ ನಡುವೆ ಕಿರಿಕ್

ಬಾಲಿವುಡ್‌ನ ಬಹುನಿರೀಕ್ಷಿತ ‘ಕಾಕ್‌ಟೇಲ್ 2’ ಚಿತ್ರದ ಪ್ರಚಾರದ ವೇಳೆ ನಟಿಯರಾದ ಕೃತಿ ಸನೋನ್ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಮಾತಿನ ಚಕಮಕಿ ನಡೆದಿದೆ. ಮುಂಬೈನಲ್ಲಿ ನಡೆದ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ಮಾಣ ಸಂಸ್ಥೆ ‘ಮ್ಯಾಡಾಕ್ ಫಿಲ್ಮ್ಸ್’ಗೆ ಯಾರು ಹೆಚ್ಚು ಆಪ್ತರು ಎಂಬ ವಿಚಾರವಾಗಿ ಜಗಳ ಆರಂಭವಾಗಿದೆ. “ನಾನು ಈ ಸಂಸ್ಥೆಯೊಂದಿಗೆ 7 ಸಿನಿಮಾ ಮಾಡಿದ್ದು, ಇದು ನನ್ನದೇ ಸಾಂಗ್ ಲಾಂಚ್” ಎಂದು ಕೃತಿ ಹೇಳಿದರೆ, “ನನ್ನ ಹಾಡು ಅಧಿಕೃತವಾಗಿ ಲಾಂಚ್ ಆಗುತ್ತಿದೆ, ನಿಮ್ಮದು ಕೇವಲ ಮನರಂಜನೆಗೆ” ಎಂದು ರಶ್ಮಿಕಾ ಕೌಂಟರ್ ನೀಡಿದ್ದು, ಈ ಕಿರಿಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ ರಶ್ಮಿಕಾ-ಕೃತಿ ಮಧ್ಯೆ ಕ್ಯಾಟ್ ಫೈಟ್; ಸಿನಿಮಾ ಪ್ರಚಾರಕ್ಕಾಗಿ ಚೀಪ್ ಗಿಮಿಕ್?

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:53 am, Fri, 22 May 26

Source link

ಪಾತ್ರ ಕೊಟ್ಟಿಲ್ಲವೆಂದು ನಿರ್ಮಾಪಕರ ಮೇಲೆ ಮುನಿಸಿಕೊಂಡಿದ್ದ ತ್ರಿಷಾ – Kannada News | Producer MS Raju said Trisha was disappointed with him for not giving role in his movie

ತಮಿಳಿನ ಸ್ಟಾರ್ ನಟ ವಿಜಯ್ (Vijay) ಸಿಎಂ ಆಗುತ್ತಲೇ ಇತ್ತ ತ್ರಿಷಾ ಕೃಷ್ಣನ್ ಮಾರುಕಟ್ಟೆ ಹೆಚ್ಚಾಗಿದೆ. ವಿಜಯ್​​​ಗೆ ಬಲು ಆಪ್ತವಾಗಿರುವ ತ್ರಿಷಾ, ತಮ್ಮ 43ನೇ ವಯಸ್ಸಿನಲ್ಲೂ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಈಗಲೂ ಹಲವು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿದ್ದು, ಬಿಡುವಿಲ್ಲದೆ ಚಿತ್ರೀಕರಣಗಳಲ್ಲಿ ಭಾಗಿ ಆಗುತ್ತಿದ್ದಾರೆ. ತ್ರಿಷಾ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು 24 ವರ್ಷಗಳಾಗಿವೆ. ಹಲವಾರು ಭಾಷೆಗಳಲ್ಲಿ ಹಲವಾರು ಸಿನಿಮಾಗಳಲ್ಲಿ ತ್ರಿಷಾ ನಟಿಸಿದ್ದಾರೆ. ಒಟ್ಟೊಟ್ಟಿಗೆ ನಾಲ್ಕೈದು ಸಿನಿಮಾಗಳಲ್ಲಿಯೂ ನಟಿಸಿದ್ದರು ತ್ರಿಷಾ. ಆದರೆ ಒಮ್ಮೆ ಒಂದು ಫ್ಲಾಪ್ ಸಿನಿಮಾನಲ್ಲಿ ಪಾತ್ರ ಕೊಡದೇ ಇದ್ದಿದ್ದಕ್ಕೆ ನಿರ್ಮಾಪಕರ ಮೇಲೆ ಬೇಸರ ಮಾಡಿಕೊಂಡಿದ್ದರಂತೆ.

ತಮಿಳು ಸಿನಿಮಾ ಮೂಲಕ ನಾಯಕಿಯಾದ ತ್ರಿಷಾಗೆ ಆರಂಭದಲ್ಲಿಯೇ ಕೆಲವು ಹಿಟ್ ಸಿನಿಮಾಗಳು ಸಿಕ್ಕವು. ಆದರೆ ತೆಲುಗಿನಲ್ಲಿ ಅವರನ್ನು ಸ್ಟಾರ್ ನಟಿಯನ್ನಾಗಿ ಮಾಡಿದ್ದು ‘ವರ್ಷಂ’ ಸಿನಿಮಾ. ಪ್ರಭಾಸ್ ನಟನೆಯ ಆ ಸಿನಿಮಾವನ್ನು ಎಂಎಸ್ ರಾಜು ನಿರ್ಮಾಣ ಮಾಡಿದ್ದರು. ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಆ ನಂತರ ತ್ರಿಷಾ ಅವರಿಗೆ ತಮ್ಮ ನಿರ್ಮಾಣದ ಹಲವು ಸಿನಿಮಾಗಳಲ್ಲಿ ಅವರು ಪಾತ್ರ ನೀಡಿದರು. ಎಲ್ಲ ಸಿನಿಮಾಗಳು ಸಹ ಬ್ಲಾಕ್ ಬಸ್ಟರ್ ಆದವು.

‘ವರ್ಷಂ’ ಬಳಿಕ 2005 ರಲ್ಲಿ ಎಂಎಸ್ ರಾಜು ನಿರ್ಮಿಸಿದ ‘ನುವ್ವೊಸ್ತಾನಂಟೆ ನೇನೊದ್ದಂಟಾನ’ ಸಿನಿಮಾನಲ್ಲಿ ತ್ರಿಷಾ ನಾಯಕಿ. ಆ ಸಿನಿಮಾ ಸಹ ಬ್ಲಾಕ್ ಬಸ್ಟರ್ ಆಯ್ತು. ಬಳಿಕ ಮುಂದಿನ ವರ್ಷ ಮತ್ತೆ ಪ್ರಭಾಸ್ ಜೊತೆಗೆ ‘ಪೌರ್ಣಮಿ’ ಸಿನಿಮಾ ನಿರ್ಮಿಸಿದರು, ಅದರಲ್ಲೂ ತ್ರಿಷಾ ನಾಯಕಿ. ಆ ಸಿನಿಮಾ ಸಹ ಸೂಪರ್ ಹಿಟ್ ಆಯ್ತು. ಒಟ್ಟಾರೆ ತ್ರಿಷಾಗೆ ಎಂಎಸ್ ರಾಜು ನಿರ್ಮಾಣ ಸಂಸ್ಥೆ ಮತ್ತು ನಿರ್ಮಾಣ ಸಂಸ್ಥೆಗೆ ತ್ರಿಷಾ ಪರಸ್ಪರ ಲಕ್ಕಿ ಎನಿಸಿಕೊಂಡಿದ್ದರು.

ಇದನ್ನೂ ಓದಿ:ಸಿಎಂ ವಿಜಯ್ ಅನ್ನು ಭೇಟಿಯಾದ ಸಿನಿಮಾ ನಿರ್ದೇಶಕರ ತಂಡ: ಕಾರಣ?

ಆದರೆ 2007 ರಲ್ಲಿ ಎಂಎಸ್ ರಾಜು ನಿರ್ಮಿಸಿದ ‘ಆಟ’ ಸಿನಿಮಾಕ್ಕೆ ಸಿದ್ಧಾರ್ಥ್ ಎದುರು ನಾಯಕಿಯಾಗಿ ಇಲಿಯಾನ ಡಿ ಕ್ರೂಸ್ ಅನ್ನು ಆಯ್ಕೆ ಮಾಡಲಾಗಿತ್ತು. ಈ ವಿಷಯ ತ್ರಿಷಾಗೆ ತಿಳಿದು ನಿರ್ಮಾಪಕ ರಾಜು ಅವರಿಗೆ ಕರೆ ಮಾಡಿ, ‘ನಾನೇ ಪಾತ್ರ ಮಾಡುತ್ತೇನೆ’ ಎಂದರಂತೆ. ಆದರೆ ಅದಾಗಲೇ ಚಿತ್ರೀಕರಣ ಶುರುವಾಗಿ ಕೆಲ ದೃಶ್ಯಗಳ ಚಿತ್ರೀಕರಣವೂ ಆಗಿಬಿಟ್ಟಿತ್ತಂತೆ. ಹಾಗಾಗಿ ತ್ರಿಷಾಗೆ ನೋ ಹೇಳಿದರಂತೆ ರಾಜು. ಇದರಿಂದಾಗಿ ತ್ರಿಷಾ ಅವರು ತಮ್ಮ ಮೇಲೆ ಕೋಪಗೊಂಡಿದ್ದರು ಎಂದು ರಾಜು ತಿಳಿಸಿದ್ದಾರೆ. ಬಳಿಕ ಫೋನ್ ಕರೆ ಮಾಡಿ ತ್ರಿಷಾ ಅವರಿಗೆ ಸಮಾಧಾನ ಮಾಡಿದ್ದರಂತೆ ರಾಜು. ಅಂದಹಾಗೆ ‘ಆಟ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಫ್ಲಾಪ್ ಆಯ್ತು.

ತ್ರಿಷಾ, ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಾಯಕಿಯಾಗಿ ನಟಿಸಿರುವ ‘ಕರುಪ್ಪು’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ‘ವಿಶ್ವಂಭರ’ ಸಿನಿಮಾನಲ್ಲಿ ತ್ರಿಷಾ ನಟಿಸಿದ್ದಾರೆ. ಮೋಹನ್​​ಲಾಲ್ ಜೊತೆಗೆ ‘ರಾಮ್’ ಸಿನಿಮಾನಲ್ಲಿ ನಟಿಸಿದ್ದು ಆ ಸಿನಿಮಾ ಸಹ ಬಿಡುಗಡೆ ಆಗಬೇಕಿದೆ. ಇದೀಗ ಚಿರಂಜೀವಿ ಜೊತೆಗೆ ಹೊಸದೊಂದು ಸಿನಿಮಾನಲ್ಲಿ ತ್ರಿಷಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಚನಾನಂದ ಶ್ರೀಗಳಿಗೆ ಹೆಚ್ಚಿದ ಬಂಧನದ ಭೀತಿ: ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರ್ಟ್‌ಗೆ ಹರಿಹರ ಪೊಲೀಸರ ಅರ್ಜಿ! – Kannada News | Vachanananda Swamiji POCSO Case: Police Move Court to Cancel Anticipatory Bail

ವಚನಾನಂದ ಶ್ರೀಗಳಿಗೆ ಹೆಚ್ಚಿದ ಬಂಧನದ ಭೀತಿ:

ದಾವಣಗೆರೆ, ಮೇ 22: ಪೋಕ್ಸೊ (POCSO) ಪ್ರಕರಣದ ಆರೋಪ ಎದುರಿಸುತ್ತಿರುವ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ (Vachanananda Swamiji) ಸ್ವಾಮೀಜಿ ಅವರ ವಿರುದ್ಧದ ಕಾನೂನು ಹೋರಾಟ ಇದೀಗ ಮತ್ತಷ್ಟು ತೀವ್ರಗೊಂಡಿದೆ. ಪ್ರಕರಣ ದಾಖಲಾಗುವ ಮುನ್ನವೇ ಚಾಣಾಕ್ಷತನದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದ ಶ್ರೀಗಳ ಜಾಮೀನನ್ನು ರದ್ದುಗೊಳಿಸುವಂತೆ ತನಿಖಾಧಿಕಾರಿಗಳು ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಮುಖ್ಯಾಂಶಗಳು

  • ವಚನಾನಂದ ಶ್ರೀಗಳ ಪೋಕ್ಸೋ ಕೇಸ್ ಜಾಮೀನು ರದ್ದತಿಗೆ ಪೊಲೀಸರ ಅರ್ಜಿ.
  • ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಮಹತ್ವದ ವರದಿ ಸಲ್ಲಿಕೆ ಮಾಡಿದ ತನಿಖಾಧಿಕಾರಿ.
  • ಮೇ 29ರಂದು ವಿಶೇಷ ನ್ಯಾಯಾಲಯದಲ್ಲಿ ಜಾಮೀನು ರದ್ದತಿ ಅರ್ಜಿ ವಿಚಾರಣೆ.

ಶ್ರೀಗಳ ಜಾಮೀನು ರದ್ದು ಮಾಡುವಂತೆ ಮನವಿ

ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆ ವಿಚಾರವಾಗಿ ಕಳೆದ ವಾರವಷ್ಟೇ ವಚನಾನಂದ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಾಗಿತ್ತು. ಆದರೆ, ಕೇಸ್ ದಾಖಲಾಗುವ ಮುನ್ನವೇ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಪ್ರಕರಣದ ತನಿಖಾಧಿಕಾರಿ ಸುರೇಶ್ ಸಗರಿ ಅವರು ಶ್ರೀಗಳ ಜಾಮೀನನ್ನು ರದ್ದು ಮಾಡುವಂತೆ ಕೋರಿ ಕೋರ್ಟ್‌ಗೆ ಮಹತ್ವದ ಮನವಿ ಸಲ್ಲಿಸಿದ್ದಾರೆ.

ಇನ್ನೊಂದು ವಾರದಲ್ಲಿ ವಿಚಾರಣೆ

ಹರಿಹರ ಪೊಲೀಸರು ಮಕ್ಕಳ ಮೇಲೆ ಸ್ವಾಮೀಜಿ ನಡೆಸಿದ್ದಾರೆ ಎನ್ನಲಾದ ದೌರ್ಜನ್ಯ ಮತ್ತು ಹಲ್ಲೆ ಕುರಿತು ಸಂಪೂರ್ಣ ಮಾಹಿತಿಯನ್ನೊಳಗೊಂಡ ಪ್ರಮುಖ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ (ಸೀಲ್ಡ್ ಕವರ್) ಬಾಗಲಕೋಟೆ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಪೊಲೀಸರು ಸಲ್ಲಿಸಿರುವ ಈ ಜಾಮೀನು ರದ್ದತಿ ಅರ್ಜಿಯ ಪ್ರಮುಖ ವಿಚಾರಣೆಯನ್ನು ದಾವಣಗೆರೆಯ ವಿಶೇಷ ಪೋಕ್ಸೊ ನ್ಯಾಯಾಲಯವು ಇದೇ ಮೇ 29 ರಂದು ಕೈಗೆತ್ತಿಕೊಳ್ಳಲಿದೆ. ಒಂದು ವೇಳೆ ನ್ಯಾಯಾಲಯವು ಪೊಲೀಸರ ವಾದವನ್ನು ಪುರಸ್ಕರಿಸಿ ಜಾಮೀನು ರದ್ದುಗೊಳಿಸಿದರೆ, ವಚನಾನಂದ ಸ್ವಾಮೀಜಿ ಅವರಿಗೆ ಬಂಧನವಾಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ ವಚನಾನಂದಶ್ರೀ ವಿರುದ್ಧದ ಪೋಕ್ಸೋ ಪ್ರಕರಣದ ತನಿಖಾಧಿಕಾರಿ ವರ್ಗಾವಣೆ, ಕಾರಣವೇನು?

ಕೇಸ್ ಹಿನ್ನೆಲೆ

ಹರಿಹರ ಪಂಚಮಸಾಲಿ ಪೀಠದ ಪದಚ್ಯುತ ಪೀಠಾಧಿಪತಿ ವಚನಾನಂದ ಸ್ವಾಮೀಜಿ ವಿರುದ್ಧ 16 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಹರಿಹರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಮಠದ ಟ್ರಸ್ಟಿಗಳೊಂದಿಗಿನ ಭಿನ್ನಾಭಿಪ್ರಾಯದಿಂದ ಸ್ವಾಮೀಜಿಯವರನ್ನು ಪೀಠದಿಂದ ಪದಚ್ಯುತಗೊಳಿಸಿದ ಬೆನ್ನಲ್ಲೇ ಈ ದೂರು ದಾಖಲಾಗಿತ್ತು. ಸಂತ್ರಸ್ತ ಬಾಲಕನ ತಾಯಿ ಮೇ 7ರಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಘಟನಾ ಸ್ಥಳ ಹರಿಹರ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಿ, ಮೇ 8ರಂದು ಅಧಿಕೃತವಾಗಿ ಎಫ್‌ಐಆರ್ ದಾಖಲಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸ್ನೇಹಿತನ ಮನೆಯಲ್ಲೇ ರಾಬರಿ ಮಾಡಿಸಿ ಸಿಕ್ಕಿಬಿದ್ದ ಮೇಸ್ತ್ರಿ: ದರೋಡೆ ವೇಳೆಯೂ ಮಾನವೀಯತೆ ತೋರಿದ್ದ ಆರೋಪಿಗಳು! – Kannada News | Mason Trains Workers to Rob Friend’s House Over Construction Dispute; Gang Arrested

ಆರೋಪಿಗಳಿಂದ ವಶಪಡಿಸಿಕೊಂಡ ವಸ್ತುಗಳ ಜೊತೆ ಪೊಲೀಸರು

ಬೆಂಗಳೂರು, ಮೇ 22: ಗೆಳೆಯನ ಮನೆಯಲ್ಲಿ ರಾಬರಿ ಮಾಡಿಸಿದ್ದ ಮೇಸ್ತ್ರಿಯೋರ್ವ ಬೆಂಗಳೂರಲ್ಲಿ (Bengaluru) ಪೊಲೀಸರ ಅತಿಥಿಯಾಗಿದ್ದಾನೆ. ಚಿಕ್ಕಜಾಲದ ಹುಣಸಮಾರನಹಳ್ಳಿಯಲ್ಲಿ ಘಟನೆ ನಡೆದಿದ್ದು, ಗುರುಪ್ರಸಾದ್ ಬಂಧಿತ ಆರೋಪಿ. ತನ್ನ ಬಳಿ ಕೆಲಸ ಮಾಡಿಕೊಂಡಿದ್ದ ಇಬ್ಬರಿಗೆ ರಾಬರಿ ಟ್ರೇನಿಂಗ್​​ ನೀಡಿದ್ದ ಈತ, ಸ್ನೇಹಿತ ಸುದರ್ಶನ್ ಎಂಬಾತನ ಮನೆಗೆ ಅವರನ್ನು ಕಳುಹಿಸಿ ದರೋಡೆ ಮಾಡಿಸಿದ್ದ. ಏಪ್ರಿಲ್ 18ರಂದು ಮನೆಗೆ ನುಗ್ಗಿದ್ದ ದರೋಡೆಕೋರರು, ಚಾಕು ತೋರಿಸಿ ಹಣ ಮತ್ತು ಬಂಗಾರ ದೋಚಿ ಎಸ್ಕೇಪ್​​ ಆಗಿದ್ದರು.

ಪ್ರಕರಣ ಏನು?

ಆರೋಪಿ ಗುರುಪ್ರಸಾದ್ ಮತ್ತು ಸುದರ್ಶನ್​​ ಸ್ನೇಹಿತರು. ಈ ನಡುವೆ ಸುದರ್ಶನ್ ಮತ್ತು ಆತನ ತಂದೆ ಕೃಷ್ಣಚಾರಿ ಮನೆ ಕಟ್ಟಿಸಲು ನಿರ್ಧರಿಸಿದ್ದು, ಅದರ ಕೆಲಸವನ್ನು ಮೇಸ್ತ್ರಿಯಾಗಿರುವ ಗುರುಪ್ರಸಾದ್​​ಗೆ ನೀಡಲು ನಿರ್ಧರಿಸಿದ್ದರು. ಗುರುಪ್ರಸಾದ್​​ ಕೂಡ ಸ್ನೇಹಿತ ಅಂತಾ ಕಡಿಮೆ ಹಣಕ್ಕೆ ಒಪ್ಪಿಕೊಂಡು ಕೆಲಸ ಮಾಡಿಸುತ್ತಿದ್ದ. ಆದರೆ ಪ್ರತಿದಿನ ಕೆಲಸದ ಸ್ಥಳಕ್ಕೆ ಬರುತ್ತಿದ್ದ ತಂದೆ, ಮಗ ಕಿರಿಕ್ ಮಾಡುತ್ತಿದ್ದರು. ಇದು ಸರಿ ಇಲ್ಲ, ಅದನ್ನ ಸರಿಯಾಗಿ ಕಟ್ಟಿಲ್ಲ ಎಂದು ಮೇಲಿಂದ ಮೇಲೆ ಕ್ಯಾತೆ ತೆಗೆಯುತ್ತಿದ್ದರು. ಸಾಲದ್ದಕ್ಕೆ ಪೂರ್ತಿ ಹಣ ಕೊಡೋದಿಲ್ಲ ಎಂತಲೂ ಕಿರಿಕ್ ಮಾಡುತ್ತಿದ್ದರು.ಇದರಿಂದ ಆರೋಪಿ ಗುರುಪ್ರಸಾದ್ ಮಾನಸಿಕವಾಗಿ ನೊಂದು‌ ಹೋಗಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಫ್ರೀಯಾಗಿ ನೆಟ್​​ಫ್ಲಿಕ್ಸ್​​ ಪಡೆಯಲು ಹೋಗಿ 1 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ; ಆಗಿದ್ದೇನು?

ಹೀಗಾಗಿಯೇ ತನ್ನ ಬಳಿಯೇ ಕೆಲಸ ಮಾಡ್ತಿದ್ದ ಅರ್ಬಾಜ್ ಮತ್ತೆ ಜಿಬ್ರಾನ್​​ಗೆ ರಾಬರಿ ಟ್ರೇನಿಂಗ್​​ ನೀಡಿದ್ದ ಈತ, ಸ್ನೇಹಿತ ಸುದರ್ಸನ್​​ ಮನೆಗೆ ಅವರನ್ನು ಕಳುಹಿಸಿ ದರೋಡೆ ಮಾಡಿಸಿದ್ದ. 79 ಗ್ರಾಂ ಚಿನ್ನ, 64 ಗ್ರಾಂ ಬೆಳ್ಳಿ, 12 ಲಕ್ಷ ನಗದನ್ನು ಆರೋಪಿಗಳು ಈ ವೇಳೆ ದೋಚಿದ್ದರು. ಆ ಬಳಿಕ ಎರಡು ತಂಗಳು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಚಿಕ್ಕಜಾಲ ಪೊಲೀಸರು ನಿರಂತರವಾಗಿ ಹುಡುಕಾಡಿದ್ದರು. ಅಂತಿಮವಾಗಿ ಪ್ರಕರಣ ಸಂಬಂಧ ಆರೋಪಿಗಳಾದ ಗುರುಪ್ರಸಾದ್, ಅರ್ಬಾಜ್ ಮತ್ತು ಜಿಬ್ರಾನ್​​ನನ್ನು ಬಂಧಿಸಲಾಗಿದೆ. ಆರೋಪಿಗಳಿಂದ 12 ಲಕ್ಷ ನಗದು, 24 ಲಕ್ಷ ಮೌಲ್ಯದ ಆಭರಣ ವಶಕ್ಕೆ ಪಡೆಯಲಾಗಿದೆ. ಅಲ್ಲದೆ ದ್ವಿಚಕ್ರ ವಾಹನ ಮತ್ತು ಕಾರು ಸೇರಿ 2 ಮೊಬೈಲ್​​ಗಳನ್ನು ಪೊಲೀಸರು ಸೀಜ್​​ ಮಾಡಿದ್ದಾರೆ.

ದರೋಡೆ ವೇಳೆಯೂ ಮಾನವೀಯತೆ!

ರಾಬರಿ ವೇಳೆ ಚಾಕು ತೋರಿಸಿ ಕಪಾಟಿನ ಕೀ ಕೇಳಿದ್ದ ಆರೋಪಿಗಳು, ಅದರಲ್ಲಿದ್ದ 12 ಲಕ್ಷ ಹಣವನ್ನು ಬ್ಯಾಗ್​​ನಲ್ಲಿ ತುಂಬಿಕೊಂಡಿದ್ದರು. ಈ ವೇಳೆ ಸಂತ್ರಸ್ತ ಕೃಷ್ಣಾಚಾರಿ ಇವರ ಬಳಿ ಎಲ್ಲಾ ದುಡ್ಡು ನೀವೇ ತೆಗೆದುಕೊಂಡು ಹೋಗುತ್ತಿದ್ದೀರಿ. ನಮ್ಮ ಜೀವನಕ್ಕೆ ಏನು ಮಾಡೋದು ಎಂದು ಅಲವತ್ತುಕೊಂಡಿದ್ದರು. ಅವರ ಈ ಮನವಿಗೆ ಕರಗಿದ್ದ ಆರೋಪಿಗಳು ಬ್ಯಾಗಲ್ಲಿ ತುಂಬಿಸಿದ್ದ ಹಣದ ಪೈಕಿ 50 ಸಾವಿರ ರೂ. ನೀಡಿ, ಇದರಿಂದ ಬದುಕು ನಡೆಸಿ ಎಂದಿದ್ದರು. ಜೊತೆಗೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದರೆ ಕೊಲೆ ಮಾಡುವ ಬೆದರಿಕೆ ಕೂಡ ಹಾಕಿದ್ದರು ಎಂಬುದು ಗೊತ್ತಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಕೆಳಗಿನ ಶೇ. 50 ಮಂದಿಗೆ ಆದಾಯ ತೆರಿಗೆ ‘3% ಅಲ್ಲ, 0% ಆಗಬೇಕು’- ಜೆಫ್ ಬೆಜೋಸ್ – Kannada News | Jeff Bezos Proposes US Tax Reform: Waive Federal Income Tax for Bottom 50pc

ವಾಷಿಂಗ್ಟನ್, ಮೇ 22: ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ (Jeff Bezos) ಅವರು ಅಮೆರಿಕದ ತೆರಿಗೆ ವ್ಯವಸ್ಥೆಯಲ್ಲಿ (Federal Tax system) ಪ್ರಮುಖ ಬದಲಾವಣೆ ತರಲು ಪ್ರಸ್ತಾಪಿಸಿದ್ದಾರೆ. ಕಡಿಮೆ ಆದಾಯ ಗಳಿಸುವ ಶೇ. 50 ರಷ್ಟು ಜನರಿಗೆ (Bottom half of earners) ಫೆಡರಲ್ ಆದಾಯ ತೆರಿಗೆಯನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಸಿಎನ್‌ಬಿಸಿ (CNBC) ವಾಹಿನಿಯ ಆಂಡ್ರ್ಯೂ ರಾಸ್ ಸೋರ್ಕಿನ್ ಅವರೊಂದಿಗೆ ಮಾತನಾಡಿದ ಬೆಜೋಸ್, ಪ್ರಸ್ತುತ ಅಮೆರಿಕದ ಒಟ್ಟು ಆದಾಯ ತೆರಿಗೆಯಲ್ಲಿ (Income Tax) ಕೆಳಹಂತದ ಶೇ. 50 ರಷ್ಟು ಜನರು ಕೇವಲ 3% ರಷ್ಟು ತೆರಿಗೆ ಪಾವತಿಸುತ್ತಿದ್ದಾರಾದರೂ, ಈ ಪ್ರಮಾಣ ಶೂನ್ಯ (0%) ಆಗಬೇಕು ಎಂದು ಹೇಳಿದರು. “ನಾನು ತೆರಿಗೆಯನ್ನು ಕಡಿಮೆ ಮಾಡಲು ಬಯಸುತ್ತಿಲ್ಲ, ಬದಲಿಗೆ ಅದನ್ನು ಸಂಪೂರ್ಣವಾಗಿ ತೆಗೆದುಹಾಕಲು ಬಯಸುತ್ತೇನೆ. ಶೂನ್ಯ ಎಂಬ ಸಂಖ್ಯೆಯಲ್ಲಿ ಒಂದು ದೊಡ್ಡ ಶಕ್ತಿ ಇದೆ” ಎಂದು ಅವರು ತಿಳಿಸಿದ್ದಾರೆ.

“ನಾವು ಕ್ವೀನ್ಸ್‌ನಲ್ಲಿರುವ (ಅಮೆರಿಕದ ಆಸ್ಪತ್ರೆ) ಒಬ್ಬ ದಾದಿ (Nurse) ಅಥವಾ ಆರೋಗ್ಯ ಕಾರ್ಯಕರ್ತೆಯಿಂದ ವಾಷಿಂಗ್ಟನ್‌ಗೆ (ಸರ್ಕಾರಕ್ಕೆ) ತೆರಿಗೆ ಹಣ ಕಳುಹಿಸುವಂತೆ ಕೇಳುವಂತಾಗಬಾರದು. ಬದಲಾಗಿ, ಆಕೆಗೆ ಕ್ಷಮೆ ಕೋರಿಕೆ ಸಲ್ಲಿಸಬೇಕು. ಇವರಿಗೆ ತೆರಿಗೆ ವಿಧಿಸುವುದರಲ್ಲಿ ಅರ್ಥವೇ ಇಲ್ಲ” ಎಂದಿದ್ದಾರೆ ಅಮೇಜಾನ್ ಸಂಸ್ಥಾಪಕರು.

ಇದನ್ನೂ ಓದಿ: ಎರಡನೇ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅವಧಿ 5 ವರ್ಷ ಅಲ್ಲ 12 ವರ್ಷ; ಯಾಕಿದು ಮಹತ್ವ ಗೊತ್ತಾ?

ಕೆಳಹಂತದ ಜನರು ಪಾವತಿಸುವ ತೆರಿಗೆ ಹಣವು ಸರ್ಕಾರಕ್ಕೇನು ದೊಡ್ಡ ಮೊತ್ತವಲ್ಲ. ಅವರಿಗೆ ತೆರಿಗೆ ವಿನಾಯಿತಿ ಕೊಟ್ಟರೆ ಸರ್ಕಾರ ಕಳೆದುಕೊಳ್ಳೋದು ಹೆಚ್ಚೇನಿರಲ್ಲ. ಕಡಿಮೆ ಆದಾಯ ಹೊಂದಿರುವ ಜನರಿಗೆ ತೆರಿಗೆ ವಿನಾಯಿತಿ ಕೊಟ್ಟರೆ ಅದರಿಂದ ಅವರು ತಮ್ಮ ಜೀವನ ನಿರ್ವಹಣೆಗಾಗಿ ಮತ್ತು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಸಹಕಾರಿಯಾಗಲಿದೆ,” ಎಂದು ಜೆಫ್ ಬೆಜೋಸ್ ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ಅಸಮಾನತೆ ಮತ್ತು ಹಣದುಬ್ಬರ

ಅಮೆರಿಕದಲ್ಲಿ ಪ್ರಸ್ತುತ ಎರಡು ರೀತಿಯ ಆರ್ಥಿಕತೆ ಕಾಣಿಸುತ್ತಿದೆ, ಒಂದು ವರ್ಗದ ಜನರು ಅತ್ಯಂತ ಶ್ರೀಮಂತರಾಗುತ್ತಿದ್ದರೆ, ಇನ್ನೊಂದು ವರ್ಗದ ಜನರು ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಹಾಗೂ ಇರಾನ್ ಯುದ್ಧದ ಕಾರಣದಿಂದಾಗಿ ಹೆಚ್ಚಾಗಿರುವ ಪೆಟ್ರೋಲ್ ಬೆಲೆಯಿಂದ ತತ್ತರಿಸುತ್ತಿದ್ದಾರೆ. ಕಡಿಮೆ ಸಂಪಾದನೆ ಮಾಡುತ್ತಿರುವವರು ತಮ್ಮ ಆದಾಯದ ಹೆಚ್ಚಿನ ಪ್ರಮಾಣವನ್ನು ಪೆಟ್ರೋಲ್​ಗೆ ಬಳಸುತ್ತಾರೆ. ಇದರಿಂದ ತೈಲ ಬಿಕ್ಕಟ್ಟು ಈ ವರ್ಗದ ಜನರಿಗೆ ಹೆಚ್ಚು ಪರಿಣಾಮ ಬೀರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ನೀಡುವುದು ಅತ್ಯಗತ್ಯ ಎಂದು ಜೆಫ್ ಬೇಜೋಸ್ ಅವರು ಪ್ರತಿಪಾದಿಸಿದ್ದಾರೆ.

‘ಟ್ಯಾಕ್ಸ್ ಫೌಂಡೇಶನ್’ ವರದಿಯ ಪ್ರಕಾರ, 2023 ರಲ್ಲಿ ಕೆಳಹಂತದ ಶೇ. 50 ರಷ್ಟು ತೆರಿಗೆದಾರರ ಸರಾಸರಿ ವಾರ್ಷಿಕ ಆದಾಯ ಸುಮಾರು 54,000 ಡಾಲರ್ (ಸುಮಾರು 45 ಲಕ್ಷ ರೂ.) ಆಗಿತ್ತು. ಇವರು ಸರಾಸರಿ 913 ಡಾಲರ್ ತೆರಿಗೆ ಪಾವತಿಸಿದ್ದರು. ಇನ್ನೊಂದೆಡೆ, ಅಮೆರಿಕದ ಟಾಪ್ 1% ಶ್ರೀಮಂತರು ಒಟ್ಟು ತೆರಿಗೆ ಆದಾಯದ ಶೇ. 40 ರಷ್ಟನ್ನು ಪಾವತಿಸುತ್ತಿದ್ದಾರೆ.

ಇದನ್ನೂ ಓದಿ: SpaceXAIಗೆ ಜನ ಬೇಕಿದ್ದಾರೆ; ಎಐ ಪರಿಣತಿ ಬೇಕಿಲ್ಲವಂತೆ; ಇಲಾನ್ ಮಸ್ಕ್ ಬಯಸುತ್ತಿರೋದು ಎಂಥವರನ್ನು?

ವಿಶ್ವದ 4ನೇ ಅತಿ ದೊಡ್ಡ ಶ್ರೀಮಂತರಾಗಿರುವ ಜೆಫ್ ಬೆಜೋಸ್ ಅವರ ಈ ಹೇಳಿಕೆಯು, ಅಮೆರಿಕದ ಹಲವು ಡೆಮಾಕ್ರಟಿಕ್ ರಾಜ್ಯಗಳು ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ (Wealth Tax) ವಿಧಿಸಲು ಕಾನೂನು ತರುತ್ತಿರುವ ಸಮಯದಲ್ಲಿ ಹೊರಬಿದ್ದಿದೆ. ಮತ್ತೊಂದೆಡೆ, ಸೆನೆಟರ್ ಕೋರಿ ಬುಕರ್ ಅವರಂತಹ ನಾಯಕರು ಕೂಡ $75,000 ವರೆಗಿನ ಆದಾಯಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡುವ ‘ಕೀಪ್ ಯುವರ್ ಪೇ ಆಕ್ಟ್’ (Keep Your Pay Act) ಅನ್ನು ಬೆಂಬಲಿಸುತ್ತಿದ್ದಾರೆ.

ಆದಾಗ್ಯೂ, ಈ ಬೃಹತ್ ತೆರಿಗೆ ಸುಧಾರಣೆಯನ್ನು ಸರ್ಕಾರವು ಪ್ರಾಯೋಗಿಕವಾಗಿ ಹೇಗೆ ಜಾರಿಗೆ ತರಬಹುದು ಎಂಬ ಬಗ್ಗೆ ಬೆಜೋಸ್ ಯಾವುದೇ ನಿರ್ದಿಷ್ಟ ನೀಲನಕ್ಷೆಯನ್ನು ಹಂಚಿಕೊಂಡಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಸತತ ಏರಿಕೆ ಬಳಿಕ ಕಡಿಮೆಗೊಂಡ ಚಿನ್ನದ ಬೆಲೆ; ಇಲ್ಲಿದೆ ದರಪಟ್ಟಿ – Kannada News | Gold Price Today on 22nd May 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಮೇ 22: ಚಿನ್ನದ ಬೆಲೆಯಲ್ಲಿ ಏರುಪೇರು ಮುಂದುವರಿದಿದೆ. ಇಂದು ಶುಕ್ರವಾರ ಚಿನ್ನದ ಬೆಲೆ (Gold Rates) ಗ್ರಾಮ್​ಗೆ 40 ರೂ ಹೆಚ್ಚಿದೆ. ಕಳೆದ ನಾಲ್ಕು ದಿನಗಳಿಂದ ಇದರ ಬೆಲೆ 340 ರೂಗಳಷ್ಟು ಏರಿತ್ತು. ಈಗ ಸ್ವಲ್ಪ ತಗ್ಗಿದೆ. ವಿದೇಶಗಳಲ್ಲೂ ಅಲ್ಪಸ್ವಲ್ಪ ಪ್ರಮಾಣದಲ್ಲಿ ಏರಿಳಿತವಾಗಿದೆ. ಬೆಳ್ಳಿ ಬೆಲೆಯಲ್ಲಿ ಇವತ್ತು ವ್ಯತ್ಯಯ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,46,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,59,490 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,46,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 22ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,949 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,620 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,962 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,949 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,620 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,620 ರೂ
  • ಚೆನ್ನೈ: 14,780 ರೂ
  • ಮುಂಬೈ: 14,620 ರೂ
  • ದೆಹಲಿ: 14,635 ರೂ
  • ಕೋಲ್ಕತಾ: 14,620 ರೂ
  • ಕೇರಳ: 14,620 ರೂ
  • ಅಹ್ಮದಾಬಾದ್: 14,625 ರೂ
  • ಜೈಪುರ್: 14,635 ರೂ
  • ಲಕ್ನೋ: 14,635 ರೂ
  • ಭುವನೇಶ್ವರ್: 14,620 ರೂ

ಇದನ್ನೂ ಓದಿ: SpaceXAIಗೆ ಜನ ಬೇಕಿದ್ದಾರೆ; ಎಐ ಪರಿಣತಿ ಬೇಕಿಲ್ಲವಂತೆ; ಇಲಾನ್ ಮಸ್ಕ್ ಬಯಸುತ್ತಿರೋದು ಎಂಥವರನ್ನು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 553 ರಿಂಗಿಟ್ (13,417 ರುಪಾಯಿ)
  • ದುಬೈ: 503.50 ಡಿರಾಮ್ (13,197 ರುಪಾಯಿ)
  • ಅಮೆರಿಕ: 140.50 ಡಾಲರ್ (13,520 ರುಪಾಯಿ)
  • ಸಿಂಗಾಪುರ: 180.20 ಸಿಂಗಾಪುರ್ ಡಾಲರ್ (13,562 ರುಪಾಯಿ)
  • ಕತಾರ್: 500.50 ಕತಾರಿ ರಿಯಾಲ್ (13,214 ರೂ)
  • ಸೌದಿ ಅರೇಬಿಯಾ: 513 ಸೌದಿ ರಿಯಾಲ್ (13,156 ರುಪಾಯಿ)
  • ಓಮನ್: 53.35 ಒಮಾನಿ ರಿಯಾಲ್ (13,336 ರುಪಾಯಿ)
  • ಕುವೇತ್: 41.91 ಕುವೇತಿ ದಿನಾರ್ (13,147 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 285 ರೂ
  • ಚೆನ್ನೈ: 295 ರೂ
  • ಮುಂಬೈ: 285 ರೂ
  • ದೆಹಲಿ: 285 ರೂ
  • ಕೋಲ್ಕತಾ: 285 ರೂ
  • ಕೇರಳ: 295 ರೂ
  • ಅಹ್ಮದಾಬಾದ್: 285 ರೂ
  • ಜೈಪುರ್: 285 ರೂ
  • ಲಕ್ನೋ: 285 ರೂ
  • ಭುವನೇಶ್ವರ್: 295 ರೂ
  • ಪುಣೆ: 285

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಗಳಿಗೆ ಮಾತು ಕೊಟ್ಟಿದ್ದ ತಂದೆ, ಆ ತಂದೆಯ ಮಾತು ಈಡೇರಿಸಿದ ಚಿರಂಜೀವಿ – Kannada News | Megastar Chiranjeevi met TG EAPCET rank holder M Rushi

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ಅಭಿಮಾನಿಗಳ ನಟ. ಇತರೆ ಸ್ಟಾರ್ ನಟರುಗಳಂತೆ ಜನರೊಟ್ಟಿಗೆ ಹೆಚ್ಚು ಅಂತರ ಕಾಯ್ದುಕೊಳ್ಳುವುದಿಲ್ಲ. ಚಿರಂಜೀವಿಯನ್ನು ನೋಡಲು ಕೆಲವರು ಪಾದಯಾತ್ರೆ ಮಾಡುತ್ತಾ, ಕೆಲವರು ನೂರಾರು ಕಿ.ಮೀ ಸೈಕಲ್ ತುಳಿಯುತ್ತ ಬರುತ್ತಾರೆ ಎಲ್ಲರನ್ನೂ ಪ್ರೀತಿಯಿಂದ ಎದುರುಗೊಂಡು ಮನೆಯಲ್ಲಿ ಊಟ ಮಾಡಿಸಿ ಕಳಿಸುತ್ತಾರೆ ನಟ. ಇದೀಗ ತಂದೆಯೊಬ್ಬ ತಮ್ಮ ಮಗಳಿಗೆ ಕೊಟ್ಟಿದ್ದ ಮಾತನ್ನು ಈಡೇರಿಸಲು ಮೆಗಾಸ್ಟಾರ್ ಚಿರಂಜೀವಿ ನೆರವಾಗಿದ್ದಾರೆ.

ತೆಲಂಗಾಣದ ಎಮ್ ರುಶಿ, ಇತ್ತೀಚೆಗೆ ಫಲಿತಾಂಶ ಪ್ರಕಟವಾದ TEGAPCET ಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಸಂಪಾದಿಸಿದ್ದಾರೆ. ರುಶಿ, ಮೆಗಾಸ್ಟಾರ್ ಚಿರಂಜೀವಿ ಅವರ ಅಪ್ಪಟ ಅಭಿಮಾನಿ. ಪರೀಕ್ಷೆಗೂ ಮುನ್ನ ಅವರ ರುಶಿ ಅವರ ತಂದೆ ಮಗಳಿಗೆ ಮಾತು ಕೊಟ್ಟಿದ್ದರಂತೆ, ‘ರಾಜ್ಯಕ್ಕೆ ಪ್ರಥಮ ರ್ಯಾಂಕ್ ಬಂದರೆ ಚಿರಂಜೀವಿ ಅವರನ್ನು ಭೇಟಿ ಮಾಡಿಸುತ್ತೇನೆ’ ಎಂದು. ಆದರಂತೆ ಚೆನ್ನಾಗಿ ಓದಿದ ರುಶಿ, ತೆಲಂಗಾಣ ರಾಜ್ಯ ಎಂಜಿನಿಯರಿಂಗ್, ಕೃಷಿ ಮತ್ತು ವೈದ್ಯಕೀಯ ಸಿಇಟಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕು ಗಳಿಸಿದ್ದಾರೆ.

ಇದನ್ನೂ ಓದಿ:ಹಿಂದಿ ಟಿವಿ ಚಾನೆಲ್​​ಗಳ ಉಳಿಸಿದ್ದು ಮೆಗಾಸ್ಟಾರ್ ಚಿರಂಜೀವಿ: ಕ್ರೇಜ್ ಹೇಗಿತ್ತು ಗೊತ್ತೆ?

ಮಗಳಿಗೆ ಕೊಟ್ಟಿದ್ದ ಮಾತು ಉಳಿಸಲು ರುಶಿ ಅವರ ತಂದೆ ಚಿರಂಜೀವಿ ಅವರನ್ನು ಅವರಿವರ ನೆರವಿನ ಮೂಲಕ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಜನಾನುರಾಗಿ ಆಗಿರುವ ಚಿರಂಜೀವಿ ಕೂಡಲೇ ಒಪ್ಪಿಗೆ ಸೂಚಿಸಿ, ರುಶಿ ಹಾಗೂ ಅವರ ಪೋಷಕರನ್ನು ಮನೆಗೆ ಆಹ್ವಾನಿಸಿದ್ದಾರೆ. ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ರುಶಿಯನ್ನು ಖುದ್ದು ಚಿರಂಜೀವಿ ಅವರು ಸನ್ಮಾನ ಮಾಡಿದ್ದು ಮಾತ್ರವೇ ಅಲ್ಲದೆ, ಯುವತಿಗೆ ಲ್ಯಾಪ್​ಟಾಪ್ ಒಂದನ್ನು ಉಡುಗೊರೆಯಾಗಿ ನೀಡಿ ಮುಂದಿನ ವಿಧ್ಯಾಭ್ಯಾಸಕ್ಕೆ ಶುಭ ಹಾರೈಸಿದ್ದಾರೆ. ಚಿರಂಜೀವಿ ಅವರು ರುಶಿಯನ್ನು ಭೇಟಿ ಮಾಡಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಮೆಗಾಸ್ಟಾರ್ ಚಿರಂಜೀವಿ ಇದೀಗ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ನಟನೆಯ ಹೊಸ ಸಿನಿಮಾ ಒಂದು ಇತ್ತೀಚೆಗಷ್ಟೆ ಸೆಟ್ಟೇರಿದ್ದು ಕೆವಿಎನ್ ಪ್ರೊಡಕ್ಷನ್ಸ್​​ನವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅದರ ಜೊತೆಗೆ ನಟ ನಾನಿ ನಿರ್ಮಾಣ ಮಾಡುತ್ತಿರುವ ಮತ್ತೊಂದು ಸಿನಿಮಾನಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ‘ವಿಶ್ವಂಭರ’ ಹೆಸರಿನ ಮತ್ತೊಂದು ಸಿನಿಮಾನಲ್ಲಿ ಚಿರಂಜೀವಿ ನಟಿಸಿದ್ದು ಆ ಸಿನಿಮಾ ಸಹ ಶೀಘ್ರವೇ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅದು ನನ್ನ ಹಾಡು ಎಂದು ಹೋಗಿದ್ದ ಇಳಯರಾಜಗೆ ಕೋರ್ಟ್​​ನಲ್ಲಿ ಭಾರೀ ಹಿನ್ನಡೆ – Kannada News | Ilaiyaraaja Copyright Setback: Delhi HC Denies Full Song Rights for ‘En Iniya Pon Nilave’

ಸಂಗೀತ ಮಾಂತ್ರಿಕ ಇಳಯರಾಜ ಅವರು ಇತ್ತೀಚಗೆ ಹಾಡುಗಳಿಗಿಂತ ಹೆಚ್ಚು ಕೇಸ್ ಮೂಲಕ ಸುದ್ದಿ ಆಗುತ್ತಿದ್ದಾರೆ. ಅವರು ಕಂಪೋಸ್ ಮಾಡಿದ ಸಾಂಗ್ ಯಾವುದೇ ಸಿನಿಮಾದಲ್ಲಿ ಬಳಕೆ ಆದರೂ ಅದು ನನ್ನದು, ನನ್ನ ಒಪ್ಪಿಗೆ ಇಲ್ಲದೆ ಹಾಡು ಬಳಕೆ ಆಗಿದೆ ಎಂದು ದೂರುತ್ತಿದ್ದರು. ಈಗ ಅವರಿಗೆ ದೆಹಲಿ ಹೈಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆಯಾಗಿದೆ. 1981ರ ತಮಿಳಿನ ಸೂಪರ್ ಹಿಟ್ ಚಿತ್ರ ‘ಮೂಡು ಪನಿ’ ಚಿತ್ರದ ಕೆ.ಜೆ. ಯೇಸುದಾಸ್ ಹಾಡಿರುವ ಐಕಾನಿಕ್ ಗೀತೆ ‘ಎನ್ ಇನಿಯ ಪೊನ್ ನಿಲವೆ’ ಹಾಡಿನ ಸಂಪೂರ್ಣ ಕೃತಿಸ್ವಾಮ್ಯ ಇಳಯರಾಜ ಅವರಿಗೆ ಸೇರಿದ್ದಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ.

ಜಸ್ಟಿಸ್ ಸಿ. ಹರಿ ಶಂಕರ್ ಮತ್ತು ಜಸ್ಟಿಸ್ ಓಂ ಪ್ರಕಾಶ್ ಶುಕ್ಲಾ ಅವರಿದ್ದ ವಿಭಾಗೀಯ ಪೀಠವು, ‘ಹಾಡಿನ ಕೇವಲ ಟ್ಯೂನ್ ಅಥವಾ ಸಂಗೀತ ಸಂಯೋಜನೆಯ ಮೇಲಷ್ಟೇ ಇಳಯರಾಜ ಅವರಿಗೆ ಹಕ್ಕಿದೆ. ಆದರೆ ಅದರ ಸಾಹಿತ್ಯ ಮತ್ತು ಸೌಂಡ್​ ರೆಕಾರ್ಡ್​​ನ ಸಂಪೂರ್ಣ ಮಾಲೀಕತ್ವ ಆಡಿಯೋ ಸಂಸ್ಥೆ ‘ಸರೆಗಮ’ ಕಂಪನಿಗೆ ಸೇರುತ್ತದೆ’ ಎಂದು ಹೇಳಿದೆ.

‘ವೇಲ್ಸ್ ಫಿಲ್ಮ್ ಇಂಟರ್ನ್ಯಾಷನಲ್’ ಸಂಸ್ಥೆಯು ತನ್ನ ಮುಂಬರುವ ಚಿತ್ರವೊಂದರಲ್ಲಿ ಈ ಹಾಡನ್ನು ಮರುಬಳಕೆ ಮಾಡಲು ಇಳಯರಾಜ ಅವರಿಂದ ಅನುಮತಿ ಪಡೆದಿತ್ತು. ಇದನ್ನು ಪ್ರಶ್ನಿಸಿ ಸರೆಗಮಾ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. 1980ರಲ್ಲೇ ಚಿತ್ರದ ನಿರ್ಮಾಪಕರಿಂದ ತಾವು ಅಧಿಕೃತವಾಗಿ ಹಾಡಿನ ಹಕ್ಕುಗಳನ್ನು ಖರೀದಿಸಿರುವುದಾಗಿ ಸರೆಗಮಾ ವಾದಿಸಿತ್ತು. ಕೋರ್ಟ್ ಈ ವಾದವನ್ನು ಪುರಸ್ಕರಿಸಿದ್ದು, ಇಳಯರಾಜ ಅವರು ಕೇವಲ ಟ್ಯೂನ್ ಮಾಲೀಕರಾಗಿದ್ದು, ಸಾಹಿತ್ಯ ಮತ್ತು ರೆಕಾರ್ಡ್​ ಹಕ್ಕುಗಳನ್ನು ಬೇರೆಯವರಿಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಇಳಯರಾಜ ಅವರು ತಾವು ಕಂಪೋಸ್ ಮಾಡಿದ ಹಾಡುಗಳಿಗೆ ಕಾನೂನು ಹೋರಾಟ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಇಂಟೆಲೆಕ್ಚುಯಲ್ ಪ್ರಾಪರ್ಟಿ ರೈಟ್ಸ್ (IPR) ಮತ್ತು ರಾಯಲ್ಟಿ ವಿಷಯದಲ್ಲಿ ಅವರು ದಶಕಗಳಿಂದ ಕಟ್ಟುನಿಟ್ಟಿನ ನಿಲುವು ಹೊಂದಿದ್ದಾರೆ:

ಎಸ್.ಪಿ.ಬಿ ವಿರುದ್ಧ ನೋಟಿಸ್ ನೀಡಿ ಇಳಯರಾಜ ಅಚ್ಚರಿ ಮೂಡಿಸಿದ್ದರು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಗಾಯಕಿ ಕೆ.ಎಸ್. ಚಿತ್ರಾ ಇಳಯರಾಜ ಅವರಿಗೆ ಆಪ್ತರು. ಆದರೂ, ತಮ್ಮ ಅನುಮತಿಯಿಲ್ಲದೆ ದೇಶ-ವಿದೇಶಗಳ ಕಾನ್ಸರ್ಟ್​​​ನಲ್ಲಿ ತಮ್ಮ ಹಾಡುಗಳನ್ನು ಹಾಡುವಂತಿಲ್ಲ ಎಂದು ಲೀಗಲ್ ನೋಟಿಸ್ ನೀಡಿ ಇಡೀ ಚಿತ್ರರಂಗವೇ ಬೆಚ್ಚಿಬೀಳುವಂತೆ ಮಾಡಿದ್ದರು.

ಇದನ್ನೂ ಓದಿ:  ಇಳಯರಾಜ ಹಾಡು ಬಳಸಿದರೂ ಬಿದ್ದಿಲ್ಲ ಕಾಪಿ ರೈಟ್ಸ್; ಟೆಕ್ನಿಕ್ ತಿಳಿಸಿದ ನಿರ್ದೇಶಕ

ಮಲಯಾಳಂ ಬ್ಲಾಕ್‌ಬಸ್ಟರ್ ಸಿನಿಮಾ ‘ಮಂಜುಮ್ಮೇಲ್ ಬಾಯ್ಸ್’ ಚಿತ್ರದಲ್ಲಿ ‘ಗುಣ’ ಸಿನಿಮಾದ ‘ಕಣ್ಮಣಿ ಅನ್ಬೋಡು’ ಹಾಡನ್ನು ಬಳಸಿದ್ದಕ್ಕೆ ಹಾಗೂ ರಜನಿಕಾಂತ್ ನಟನೆಯ ‘ಕೂಲಿ’ ಚಿತ್ರದ ಟೀಸರ್‌ನಲ್ಲಿ ತಮ್ಮ ಹಳೆಯ ಹಾಡನ್ನು ಬಳಸಿದ್ದಕ್ಕಾಗಿ ನಿರ್ಮಾಣ ಸಂಸ್ಥೆಗಳಿಗೆ ಕೃತಿಸ್ವಾಮ್ಯ ಉಲ್ಲಂಘನೆಯ ನೋಟಿಸ್ ಕಳುಹಿಸಿ ಕೋಟ್ಯಂತರ ರೂಪಾಯಿ ಪರಿಹಾರ ಕೋರಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version