ಬೆಂಗಳೂರಿನಲ್ಲಿ ಬುಡಸಮೇತ ರಸ್ತೆ ಮೇಲೆ ಬಿದ್ದ ಬೃಹತ್ ಮರ: ಶಂಕರಮಠ ರಸ್ತೆ ಬಂದ್! – Kannada News | Bengaluru Rains: Huge Tree Falls on Road, Sankaramatha Road Closed
ಬೆಂಗಳೂರು, ಮೇ 21: ಭಾರೀ ಗಾಳಿ ಮಳೆಯಿಂದಾಗಿ ನಗರದ ಹಲವೆಡೆ ಬೃಹತ್ ಮರಗಳು ಧರೆಗುರುಳಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಶಂಕರಮಠ ರಸ್ತೆಯಲ್ಲಿ ಬುಡಸಮೇತ ಮರವೊಂದು ಉರುಳಿಬಿದ್ದಿದೆ. ಅದೃಷ್ಟವಶಾತ್ ಮರ ಬಿಳ್ಳುವ ವೇಳೆ ರಸ್ತೆ ಬಹುತೇಕ ಖಾಲಿ ಇದ್ದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಆದರೆ ಒಂದು ಕಾರು ಮರದ ಕೆಳಗೆ ಸಿಲುಕಿ ಜಖಂಗೊಂಡಿದೆ. ಎರಡು ಭಾಗದ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸದ್ಯ ಜಿಬಿಎ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಇನ್ನೂ ಒಂದು ಗಂಟೆಗೂ ಹೆಚ್ಚು ಕಾಲ ಬೇಕಾಗಲಿದೆ….