ಫೋನ್ ಖರೀದಿಸಿ, ಇಎಂಐ ಕಟ್ಟೋಕಾಗ್ತಿಲ್ವಾ? ಸಾಲಗಾರರು ನಿಮ್ಮ ಫೋನ್ ಲಾಕ್ ಮಾಡಬಹುದಾ? ಆರ್ಬಿಐ ಬಳಿ ಪ್ರಸ್ತಾಪ – Kannada News | RBI Proposal: Lenders Can Disable Smartphones for EMI Default
ನವದೆಹಲಿ, ಮೇ 21: ಸಾಲದ ಮೇಲೆ ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಪಡೆದು ಅದರ ಇಎಂಐ ಕಟ್ಟಲು ವಿಫಲರಾದರೆ ಅಂಥವರ ಗ್ಯಾಜೆಟ್ ಅನ್ನು ನಿಷ್ಕ್ರಿಯಗೊಳಿಸುವ ಕಾನೂನಾತ್ಮಕ ಅಧಿಕಾರವನ್ನು ಸಾಲಗಾರರಿಗೆ ನೀಡಲು ಆರ್ಬಿಐ (RBI) ಯೋಜಿಸಿದೆ. ಸಾಲ ವಸೂಲಾತಿ ಸಂಬಂಧ ಆರ್ಬಿಐ ಬಿಡುಗಡೆ ಮಾಡಿರುವ ಪರಿಷ್ಕೃತ ಕರಡು ನಿರ್ದೇಶನಗಳಲ್ಲಿ ಇಂಥದ್ದೊಂದು ಪ್ರಸ್ತಾಪ ಇದೆ. ಬ್ಯಾಂಕುಗಳು, ಎನ್ಬಿಎಫ್ಸಿಗಳು ಮೊದಲಾದ ಸಾಲ ನೀಡುಗರ ಅಭಿಪ್ರಾಯ ಆಲಿಸಿದ ಬಳಿಕ ಆರ್ಬಿಐ ಈ ಪ್ರಸ್ತಾಪವನ್ನು ತನ್ನ ಕರಡು ನಿರ್ದೇಶಗಳಲ್ಲಿ ಸೇರಿಸಿದೆ. 2026ರ ಫೆಬ್ರುವರಿ 12ರಂದು ಆರ್ಬಿಐ ಕರಡು…