ಯಾದಗಿರಿ-ಮೈಸೂರು ದುರ್ಘಟನೆ: ಪರಿಹಾರ ತಾರತಮ್ಯದ ಬಗ್ಗೆ ಸಿಎಂ ವಿರುದ್ಧ ಜೆಡಿಎಸ್ ಶಾಸಕ ಆಕ್ರೋಶ – Kannada News | Yadgir and Mysuru tragedy: JDS MLA Sharanagouda Kandakur sparks on CM over compensation discrimination

ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್​​, ಸಿಎಂ ಸಿದ್ದರಾಮಯ್ಯImage Credit source: google

ಬೆಂಗಳೂರು, ಏಪ್ರಿಲ್​ 20: ರಾಜ್ಯದಲ್ಲಿ ಸಂಭವಿಸಿದ ದುರಂತಗಳ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್​ (Sharanagouda Kandakur)
ಇಂತಹದೊಂದು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಾಗಿ ಸಿಎಂ ಸಿದ್ದರಾಮಯ್ಯಗೆ (Siddaramaiah) ನೇರವಾಗಿ ಪತ್ರ ಬರೆದಿರುವ ಶಾಸಕ, ಮೈಸೂರಿನಲ್ಲಿ ಸಂಭವಿಸಿದ ದುರಂತಕ್ಕೆ ತಕ್ಷಣ ಸ್ಪಂದಿಸುವ ಸರ್ಕಾರ, ಕಲ್ಯಾಣ ಕರ್ನಾಟಕದ ಜನರ ಸಾವಿಗೆ ಕನಿಷ್ಠ ಸಂತಾಪವನ್ನೂ ಸೂಚಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಿಎಂಗೆ ಬರೆದ ಪತ್ರದಲ್ಲೇನಿದೆ? 

ಮಾರ್ಚ್​ 29ರಂದು ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ನಗನೂರು ಗ್ರಾಮದ ರೈತನ ಕೃಷಿ ಹೊಂಡದಲ್ಲಿ ಈಜಾಡಲು ಹೋಗಿ ಒಂದೇ ಕುಟುಂಬದ ನಾಲ್ವರು ಮಕ್ಕಳು ಮೃತಪಟ್ಟಿದ್ದರು. ಏಪ್ರಿಲ್​ 17ರಂದು ಅದೇ ಸುರಪೂರ ತಾಲೂಕಿನ ಗೋಪಾಲಸ್ವಾಮಿ ದೇವಸ್ಥಾನದ ದರ್ಶನಕ್ಕೆ ಸಿರವಾರ ಗ್ರಾಮದ ಒಂದೇ ಕುಟುಂಬದ 9 ಜನರು ರಸ್ತೆ ಅಪಘಾತದಲ್ಲಿ ಸಜೀವ ದಹನಗೊಂಡಿದ್ದರು.

ಇದನ್ನೂ ಓದಿ: ಮೈಸೂರು: ಕಾವೇರಿ ನದಿಯಲ್ಲಿ 6 ಜನ‌ ಜಲಸಮಾಧಿ; ದರ್ಗಾಕ್ಕೆ ಬಂದವರು ದುರಂತ ಅಂತ್ಯ

ಈ ದುರಂತಗಳು ಸಂಭವಿಸಿ ಸುಮಾರು ದಿನಗಳು ಕಳೆದರು ಸಹ ಮೃತಕುಟುಂಬಗಳಿಗೆ ಪರಿಹಾರಧನ ಘೋಷಣೆ ಮಾಡುವುದಾಗಲಿ ಅಥವಾ ಕನಿಷ್ಠ ಸಾಂತ್ವಾನ ತಿಳಿಸುವುದಾಗಲಿ ಇಲ್ಲಿಯವರೆಗೆ ಮಾಡಿಲ್ಲ. ಆದರೆ ಏಪ್ರಿಲ್​ 19ರಂದು ನಿಮ್ಮ ಸ್ವಂತ ಮೈಸೂರು ಜಿಲ್ಲೆಯಲ್ಲಿ ಬಿಸಿಲಿನ ತಾಪದಿಂದ ಕೆರೆಯಲ್ಲಿ ಈಜಾಡಲು ಹೋಗಿ 6 ಜನ ಮೃತಪಟ್ಟ ಕುಟುಂಬಗಳಿಗೆ ತಕ್ಷಣವೇ ಸಾಮಾಜಿಕ ಜಾಲತಾಣದ ಮುಖಾಂತರ ಸಾಂತ್ವಾನ ತಿಳಿಸಿರುತ್ತೀರಿ, ಅಲ್ಲದೇ ಸದರಿ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಧನ ಘೋಷಣೆ ಮಾಡಿರುತ್ತೀರಿ.

ಇದನ್ನೂ ಓದಿ: ಕಾಲು ಜಾರಿ ಕೆರೆಗೆ ಬಿದ್ದ ಅಳಿಯನ ರಕ್ಷಣೆಗೆ ಹೋದ ಮಾವನೂ ಸಾವು: ಅತ್ತ ಪಿರಿಯಾಪಟ್ಟಣದಲ್ಲಿ ಇಬ್ಬರು ಯುವಕರು ನೀರು ಪಾಲು

ತಾವು ಈ ಮಲತಾಯಿ ದೊರಣೆಯನ್ನು ಅನುಸರಿಸುತ್ತಿರುವುದರಿಂದ ರಾಜ್ಯದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರ ಮುಖ್ಯಮಂತ್ರಿಗಳೋ ಎಂಬ ಸಂಶಯ ವ್ಯಕ್ತವಾಗಿದ್ದು, ಕಲ್ಯಾಣ ಕರ್ನಾಟಕದ ಭಾಗದ ಜನರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಈ ಕೂಡಲೇ ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ನಗನೂರು ಗ್ರಾಮದ ಸಂತ್ರಸ್ಥ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಧನ ಘೋಷಣೆ ಮಾಡಿ ಸಾಂತ್ವಾನ ವ್ಯಕ್ತಪಡಿಸುವಂತೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಪತ್ರದಲ್ಲಿ ಸಿಎಂಗೆ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

GT vs MI Playing XI: ಮುಂಬೈ ಪರ ಇಬ್ಬರು ಐಪಿಎಲ್​ಗೆ ಪಾದಾರ್ಪಣೆ; ರೋಹಿತ್ ಮತ್ತೆ ಅಲಭ್ಯ – Kannada News | GT vs MI Playing XI Gujarat Titans vs Mumbai Indians Today IPL 2026 match Confirmed playing 11 details with name in Kannada

ಐಪಿಎಲ್ 2026 ರ 30 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸುತ್ತಿದೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳ ಆರನೇ ಪಂದ್ಯ ಇದಾಗಿದೆ. ಈ ಸೀಸನ್​ನಲ್ಲಿ ಸತತ 2 ಪಂದ್ಯಗಳನ್ನು ಸೋತಿದ್ದ ಗುಜರಾತ್ ಅದರ ನಂತರ ಬಲವಾದ ಪುನರಾಗಮನ ಮಾಡಿದೆ. ಮೊದಲ 2 ಸೋಲುಗಳ ನಂತರ ಗುಜರಾತ್ ಹ್ಯಾಟ್ರಿಕ್ ಜಯ ಸಾಧಿಸಿದೆ. ಮತ್ತೊಂದೆಡೆ, 2012 ರ ನಂತರ ಅಭಿಯಾನದ ಮೊದಲ ಪಂದ್ಯವನ್ನು ಗೆದ್ದ ಮುಂಬೈ, ಸತತ 4 ಪಂದ್ಯಗಳನ್ನು ಸೋತಿದೆ. ಆದ್ದರಿಂದ, ಈಗ ಗುಜರಾತ್‌ನ ಗೆಲುವಿನ ಸರಣಿಯನ್ನು ನಿಲ್ಲಿಸಲು ಮತ್ತು ಅದರ ಸೋಲಿನ ಸರಣಿಯನ್ನು ಮುರಿಯಲು ಮುಂಬೈಗೆ ಎರಡು ಸವಾಲುಗಳಿವೆ.

ಟಾಸ್ ಗೆದ್ದ ಗುಜರಾತ್

ಮುಂಬೈ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮುಂಬೈ ಮೊದಲು ಬ್ಯಾಟಿಂಗ್‌ ಮಾಡಲಿದೆ. ಇನ್ನು ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಖಚಿತವಾಗಿದೆ. ಅದರಂತೆ ಟೈಟಾನ್ಸ್ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಆದರೆ ಮುಂಬೈ ಇಂಡಿಯನ್ಸ್ ತಂಡದ ಪರ ಇಬ್ಬರು ಐಪಿಎಲ್​ಗೆ ಪಾದಾರ್ಪಣೆ ಮಾಡುತ್ತಿದ್ದು, ಡ್ಯಾನಿಶ್ ಮಾಲೆವಾರ್ ಮತ್ತು ಕ್ರಿಸ್ ಭಗತ್ ಚೊಚ್ಚಲ ಪಂದ್ಯವನ್ನು ಆಡಲಿದ್ದಾರೆ. ಹಾಗೆಯೇ ಗಾಯಕ್ಕೆ ತುತ್ತಾಗಿರುವ ರೋಹಿತ್ ಶರ್ಮಾ ಪ್ರಸ್ತುತ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ.

ಮುಖಾಮುಖಿ ದಾಖಲೆ

ಐಪಿಎಲ್ ಸ್ಪರ್ಧೆಯ ಅಂಕಿಅಂಶಗಳನ್ನು ನೋಡಿದರೆ, ಮುಂಬೈ ಇಂಡಿಯನ್ಸ್ ತಂಡಕ್ಕಿಂತ ಗುಜರಾತ್ ಟೈಟಾನ್ಸ್ ತಂಡಕ್ಕೆ ಹೆಚ್ಚಿನ ಮುನ್ನಡೆ ಇರುವುದು ಸ್ಪಷ್ಟವಾಗುತ್ತದೆ . ಎರಡೂ ತಂಡಗಳ ನಡುವಿನ ಒಂಬತ್ತನೇ ಪಂದ್ಯ ಇಂದು ನಡೆಯುತ್ತಿದೆ. ಇಲ್ಲಿಯವರೆಗೆ ಆಡಿರುವ 8 ಪಂದ್ಯಗಳಲ್ಲಿ ಗುಜರಾತ್ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದಿದೆ. ಗುಜರಾತ್ ಮುಂಬೈಯನ್ನು 5 ಬಾರಿ ಸೋಲಿಸಿದೆ. ಆದರೆ ಮುಂಬೈ 3 ಪಂದ್ಯಗಳಲ್ಲಿ ಗುಜರಾತ್ ವಿರುದ್ಧ ಗೆದ್ದಿದೆ.

GT vs MI IPL 2026 Live Score: ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ

ಉಭಯ ತಂಡಗಳ ಪ್ಲೇಯಿಂಗ್ 11

ಮುಂಬೈ ಇಂಡಿಯನ್ಸ್: ಡ್ಯಾನಿಶ್ ಮಾಲೆವಾರ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ನಮನ್ ಧೀರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ತಿಲಕ್ ವರ್ಮಾ, ಶೆರ್ಫಾನೆ ರುದರ್‌ಫೋರ್ಡ್, ಮಿಚೆಲ್ ಸ್ಯಾಂಟ್ನರ್, ಕ್ರಿಶ್ ಭಗತ್, ಜಸ್ಪ್ರೀತ್ ಬುಮ್ರಾ, ಅಲ್ಲಾ ಘಜನ್‌ಫರ್.

ಇಂಪ್ಯಾಕ್ಟ್ ಪ್ಲೇಯರ್: ರಾಜ್ ಬಾವಾ, ಅಶ್ವಿನಿ ಕುಮಾರ್, ಕಾರ್ಬಿನ್ ಬಾಷ್, ಮಯಾಂಕ್ ರಾವತ್, ರಘು ಶರ್ಮಾ.

ಗುಜರಾತ್ ಟೈಟಾನ್ಸ್: ಶುಭ್​ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಶಾರುಖ್ ಖಾನ್, ರಶೀದ್ ಖಾನ್, ಮೊಹಮ್ಮದ್ ಸಿರಾಜ್, ಕಗಿಸೊ ರಬಾಡ, ಪ್ರಸಿದ್ಧ್ ಕೃಷ್ಣ, ಅಶೋಕ್ ಶರ್ಮಾ.

ಇಂಪ್ಯಾಕ್ಟ್ ಪ್ಲೇಯರ್: ರಾಹುಲ್ ತೆವಾಟಿಯಾ, ಜೇಸನ್ ಹೋಲ್ಡರ್, ಅನುಜ್ ರಾವತ್, ಕುಲ್ವಂತ್ ಖೆಜ್ರೋಲಿಯಾ, ಮಾನವ್ ಸುತಾರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:14 pm, Mon, 20 April 26

Source link

ನಾಸಿಕ್ ಟಿಸಿಎಸ್ ಪ್ರಕರಣ; ಪರಾರಿಯಾಗಿದ್ದ ಗರ್ಭಿಣಿ ನಿದಾ ಖಾನ್‌ಗೆ ಜಾಮೀನು ನಿರಾಕರಣೆ – Kannada News | Nashik TCS case No interim relief for absconding pregnant Nida Khan next bail hearing on April 27

ನಾಸಿಕ್, ಏಪ್ರಿಲ್ 20: ನಾಸಿಕ್ ಟಿಸಿಎಸ್ ಪ್ರಕರಣದಲ್ಲಿ (TCS Case) ನಿದಾ ಖಾನ್‌ಗೆ ಮಧ್ಯಂತರ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಅವರ ಜಾಮೀನು ಅರ್ಜಿಯನ್ನು ಏಪ್ರಿಲ್ 27ಕ್ಕೆ ವಿಚಾರಣೆ ನಡೆಸಲಾಗುವುದು. ನಿದಾ ಖಾನ್ ಅವರ ವಕೀಲರು ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಬಾಕಿ ಇರುವವರೆಗೆ ಮಧ್ಯಂತರ ಜಾಮೀನು ಕೋರಿದ್ದರು. ಜಾಮೀನು ಅರ್ಜಿ ಮತ್ತು ಮಧ್ಯಂತರ ಪರಿಹಾರ ಅರ್ಜಿ ಎರಡರ ಮುಂದಿನ ವಿಚಾರಣೆ ಏಪ್ರಿಲ್ 27ಕ್ಕೆ ನಡೆಯಲಿದೆ.

ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಚೇರಿಯಲ್ಲಿ ಧಾರ್ಮಿಕ ಮತಾಂತರ ಮತ್ತು ಮಹಿಳಾ ಸಹೋದ್ಯೋಗಿಗಳ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ನಿದಾ ಖಾನ್, ಶನಿವಾರ ನಾಸಿಕ್ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು.

ಇದನ್ನೂ ಓದಿ: ಐಟಿ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ, ಮತಾಂತರಕ್ಕೆ ಯತ್ನ, ನಾಸಿಕ್​ನ ಟಿಸಿಎಸ್ ಕಚೇರಿಗೆ ಬೀಗ

ನಾನು 2 ತಿಂಗಳ ಗರ್ಭಿಣಿ, ಹೀಗಾಗಿ ಜಾಮೀನು ನೀಡಿ ಎಂದು ಆಕೆ ಮನವಿ ಮಾಡಿದ್ದರು. ಆಕೆ ಪರಾರಿಯಾಗಿದ್ದು, ಆಕೆಯ ಪರ ವಕೀಲರು ಅರ್ಜಿ ವಿಚಾರಣೆಗೆ ಹಾಜರಾಗಿದ್ದರು. ನಾಸಿಕ್ ಟಿಸಿಎಸ್ ಕಂಪನಿಯ ಧಾರ್ಮಿಕ ಮತಾಂತರ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ 8 ಉದ್ಯೋಗಿಗಳನ್ನು ಬಂಧಿಸಿದ್ದಾರೆ. ನಿದಾ ಖಾನ್ ಅವರನ್ನು ಪತ್ತೆಹಚ್ಚಲು 3 ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಒಂದು ತಂಡ ಮುಂಬ್ರಾ ತಲುಪಿದೆ.

ದೌರ್ಜನ್ಯ, ಬಲವಂತದ ಮತಾಂತರಕ್ಕೆ ಯತ್ನಿಸುವುದು, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು, ಕಿರುಕುಳ ಮತ್ತು ನಾಸಿಕ್ ಘಟಕದಲ್ಲಿ ಮಹಿಳಾ ಉದ್ಯೋಗಿಗಳ ಮಾನಸಿಕ ಕಿರುಕುಳ ಸೇರಿದಂತೆ ಆರೋಪಗಳಿಗೆ ಸಂಬಂಧಿಸಿದ 9 ಪ್ರಕರಣಗಳನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ.

ಇದನ್ನೂ ಓದಿ:  ಮಲೇಷ್ಯಾ ಧರ್ಮಗುರುವಿನ ಲಿಂಕ್, ವಾಟ್ಸಾಪ್ ಚಾಟ್; ಕಗ್ಗಂಟಾಗುತ್ತಲೇ ಇದೆ ಟಿಸಿಎಸ್ ಮತಾಂತರ ಪ್ರಕರಣ

ಇನ್ನೂ ತಲೆಮರೆಸಿಕೊಂಡಿರುವ 26 ವರ್ಷದ ನಿದಾ ಖಾನ್ ತನ್ನ ಎರಡು ತಿಂಗಳ ಗರ್ಭಧಾರಣೆಯನ್ನು ಉಲ್ಲೇಖಿಸಿ ನಿರೀಕ್ಷಣಾ ಜಾಮೀನು ಕೋರಿದ್ದರು. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ನಾಸಿಕ್ ಬಿಪಿಒ ಘಟಕದಲ್ಲಿ ನಡೆದ ಬಲವಂತದ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಿದಾ ಖಾನ್ “ಮಾಸ್ಟರ್ ಮೈಂಡ್” ಎಂದು ಪೊಲೀಸರು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

GT vs MI IPL 2026 Live Score: ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ – Kannada News | Gujarat Titans vs Mumbai Indians IPL 2026 Live Cricket Score GT vs MI Match on 20th April latest news in Kannada

ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಈ ಆವೃತ್ತಿಯ ಆರನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸುತ್ತಿದೆ. ಇದು ಗುಜರಾತ್‌ನ ಆರನೇ ಪಂದ್ಯವೂ ಆಗಿದೆ. ಉಭಯ ತಂಡಗಳ ನಡುವಿನ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ. ಗುಜರಾತ್ ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ ಸತತ 3 ಪಂದ್ಯಗಳನ್ನು ಗೆದ್ದಿದೆ. ಇತ್ತ ಮುಂಬೈ 5 ರಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಆದ್ದರಿಂದ, ಈ ಪಂದ್ಯದಲ್ಲಿ ಗುಜರಾತ್ ಅನ್ನು ಸೋಲಿಸಿ ಗೆಲುವಿನ ಹಾದಿಗೆ ಮರಳುವ ಸವಾಲು ಮುಂಬೈ ಮುಂದಿದೆ.

Source link

Chanakya Niti: ಮಹಿಳೆಯರು ಈ ರೀತಿಯ ಜನರಿಂದ ಸಾಧ್ಯವಾದಷ್ಟು ದೂರವಿರಬೇಕು ಎನ್ನುತ್ತಾರೆ ಚಾಣಕ್ಯ – Kannada News | Chanakya Niti: Women should stay away from these 3 people, their company will ruin their lives

ಸಮಾಜ ಎಷ್ಟೇ ಮುಂದುವರೆದಿದ್ದರೂ, ಇಂದಿನ ಈ ಜಗತ್ತಿನಲ್ಲಿ ಮಹಿಳೆಯರೂ ಎಲ್ಲಾ ಕ್ಷೇತ್ರದಲ್ಲೂ ಪ್ರಗತಿಯನ್ನು ಸಾಧಿಸುತ್ತಿದ್ದರೂ ಸಹ ಕೆಲವೊಂದು ವಿಚಾರಗಳ ಬಗ್ಗೆ ಅವರು ಕೇರ್‌ಫುಲ್‌ ಆಗಿದ್ದಷ್ಟು ತುಂಬಾನೇ ಒಳ್ಳೆಯದು ಎನ್ನುತ್ತಾರೆ ಆಚಾರ್ಯ ಚಾಣಕ್ಯ (Acharya Chanakya). ಅದರಲ್ಲೂ ಮಹಿಳೆಯರು ಈ ಒಂದಷ್ಟು ಜನರ ಬಗ್ಗೆ ತುಂಬಾನೇ ಜಾಗರೂಕರಾಗಿರಬೇಕು, ಅಂತಹ ಜನರ ಸಹವಾಸದಿಂದ ಸಾಧ್ಯವಾದಷ್ಟು ದೂರವಿರಬೇಕು, ಇಲ್ಲದಿದ್ದರೆ ಸಂಪೂರ್ಣ ಜೀವನವೇ ಹಾಳಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಚಾಣಕ್ಯರು ಹೇಳಿರುವಂತೆ ಮಹಿಳೆಯರು ಎಂತಹ ಜನರ ಸಹವಾಸದಿಂದ ದೂರವಿದ್ದರೆ ಒಳ್ಳೆಯದು ಎಂಬುದನ್ನು ನೋಡೋಣ ಬನ್ನಿ.

ಮಹಿಳೆಯರು ಈ ಜನರ ಸಹವಾಸದಿಂದ ದೂರವಿದ್ದಷ್ಟು ಒಳ್ಳೆಯದು:

ಮೋಸಗಾರರು ಮತ್ತು ಸುಳ್ಳುಗಾರರು: ಪ್ರತಿಯೊಂದು ಸಂಬಂಧದಲ್ಲಿಯೂ  ಸತ್ಯವು ಪ್ರಮುಖ ಪಾತ್ರ ವಹಿಸುತ್ತದೆ,  ಆದರೆ ಸಂಬಂಧದಲ್ಲಿ ಸುಳ್ಳು ಹೇಳುವವರು, ಮೋಸಗಾರರು ಸಹ ಇರುತ್ತಾರೆ. ಚಾಣಕ್ಯರ ಪ್ರಕಾರ, ಈ ರೀತಿ ನಿರಂತರವಾಗಿ ಸುಳ್ಳು ಹೇಳುವ ವ್ಯಕ್ತಿಯನ್ನು ಎಂದಿಗೂ ನಂಬಬಾರದು. ಅಂತಹ ಜನರು ತಮ್ಮ ಅನುಕೂಲಕ್ಕಾಗಿ ಯಾವುದೇ ಸಮಯದಲ್ಲಿ ಸುಳ್ಳನ್ನು ಸುಳ್ಳು ಹೇಳುತ್ತಾರೆ. ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುತ್ತಾರೆ. ಹಾಗಾಗಿ ಇಂತಹ ಜನರೊಂದಿಗೆ ಮಹಿಳೆಯರು ಸ್ನೇಹ, ಸಂಬಂಧಗಳನ್ನು ಬೆಳೆಸಿಕೊಳ್ಳುವಾಗ ವಿಶೇಷವಾಗಿ ಜಾಗರೂಕರಾಗಿರಬೇಕು, ಏಕೆಂದರೆ ಅಂತಹ ಜನರು ಸಿಹಿ ಮಾತುಗಳಿಂದ ನಿಮ್ಮ ವಿಶ್ವಾಸವನ್ನು ಗೆಲ್ಲುತ್ತಾರೆ ಮತ್ತು ಅವಕಾಶ ಸಿಕ್ಕ ತಕ್ಷಣ  ದ್ರೋಹ ಬಗೆಯುತ್ತಾರೆ.

ನಿಯಂತ್ರಿಸುವವರಿಂದ ದೂರವಿರಿ: ಕೆಲ ಪುರುಷರು ಮಹಿಳೆಯರನ್ನೂ ಪ್ರತಿಯೊಂದು ವಿಷಯಗಳಲ್ಲೂ ನಿಯಂತ್ರಿಸುತ್ತಾರೆ. ಹೌದು ನೀನು  ಆ ಕೆಲಸ ಮಾಡಬೇಡ ಹಾಗೆ, ಹೀಗೆ ಅಂತೆಲ್ಲಾ ಮಹಿಳೆಯರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಹೀಗೆ ಪ್ರತಿಯೊಂದು ವಿಷಯದಲ್ಲೂ ನಿಮ್ಮನ್ನು ನಿಯಂತ್ರಿಸುತ್ತಾ, ನಿಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವವರಿಂದ ದೂರವಿದ್ದರೆಯೇ ಒಳ್ಳೆಯದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅಂತಹ ಜನರು ನಿಮ್ಮ ಸ್ವಾಭಿಮಾನಕ್ಕೆ ನೋವುಂಟು ಮಾಡುತ್ತಾರೆ ಚಾಣಕ್ಯರ ಪ್ರಕಾರ, ಮಹಿಳೆಯರು ಎಂದಿಗೂ ತಮ್ಮ ಸ್ವಾಭಿಮಾನವನ್ನು ರಾಜಿ ಮಾಡಿಕೊಳ್ಳಬಾರದು. ನಿಯಂತ್ರಿಸುವ, ಸ್ವಾಭಿಮಾನಕ್ಕೆ ಧಕ್ಕೆ ತರುವ ಜನರಿಂದ ಮಹಿಳೆಯರು ಆದಷ್ಟು ದೂರವಿರಬೇಕು.

ಇದನ್ನೂ ಓದಿ: ಆಫೀಸ್‌ ಪಾಲಿಟಿಕ್ಸ್‌ನಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಚಾಣಕ್ಯರ ಸಲಹೆಗಳನ್ನು ಪಾಲಿಸಿ

ದುರಾಸೆಯ ಜನರಿಂದ ದೂರವಿರಿ: ದುರಾಸೆಯ ಜನರು ತಮ್ಮ ಲಾಭಕ್ಕಾಗಿ ಮಾತ್ರ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ. ತಮ್ಮ ಕೆಲಸ ಸಾಧಿಸಿದ ಮೇಲೆ ಮೋಸ ಮಾಡಿ ಹೋಗುತ್ತಾರೆ. ಭಾವನೆಗಳ ಜೊತೆ ಆಟವಾಡುವ ಇಂತಹ ಜನರರಿಂದ ಮಹಿಳೆಯರು ದೂರವಿರಬೇಕು.  ಚಾಣಕ್ಯರ ಪ್ರಕಾರ ಮಹಿಳೆಯರು ಇಂತಹ ದುರಾಸೆಯ ಜನರಿಂದ ಸಾಧ್ಯವಾದಷ್ಟು ದೂರವಿರಬೇಕು ಮತ್ತು ಹೆಣ್ಣಿಗೆ ಗೌರವ ನೀಡುವ, ಬೆಂಬಮಲವಾಗಿ ನಿಲ್ಲುವ ಜನರೊಂದಿಗಿರಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ    

Source link

ಲಕ್ಷಣಗಳಿಲ್ಲದೇ ಕಾಯಿಲೆ ಬರಬಹುದೇ? ಇಲ್ಲಿದೆ ತಜ್ಞರು ನೀಡಿರುವ ಅಚ್ಚರಿ ಮಾಹಿತಿ – Kannada News | Silent Diseases: Health Problems With No Early Warning Signs

ಸಾಮಾನ್ಯವಾಗಿ ದೇಹದಲ್ಲಿ ನೋವು, ದಣಿವು ಅಥವಾ ಕಿರಿಕಿರಿ ಆಗುತ್ತಿದ್ದರೆ ಆರೋಗ್ಯ ಸರಿ ಇಲ್ಲ ಎಂದು ಭಾವಿಸುತ್ತೇವೆ. ಆದರೆ ವೈದ್ಯರ ಪ್ರಕಾರ, ಕೆಲವು ಕಾಯಿಲೆಗಳು ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೆ ನಿಧಾನವಾಗಿ ಬೆಳೆಯುತ್ತವೆ. ಇವುಗಳನ್ನು “ಸೈಲೆಂಟ್ ಡಿಸೀಸ್” (Silent Diseases) ಎಂದು ಕರೆಯಲಾಗುತ್ತದೆ. ಈ ರೀತಿಯ ಕಾಯಿಲೆಗಳು ದೀರ್ಘಕಾಲ ದೇಹದೊಳಗೆ ಹಾನಿ ಉಂಟುಮಾಡಿ, ತಡವಾಗಿ ಪತ್ತೆಯಾಗುವ ಅಪಾಯವಿರುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಅಂತಹ ಕಾಯಿಲೆಗಳು ಯಾವವು, ಏಕೆ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ, ಈ ರೀತಿ ಕಾಯಿಲೆಗಳು ಬರದಂತೆ ತಡೆಯಲು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ಕಾಯಿಲೆಗಳು ಲಕ್ಷಣಗಳಿಲ್ಲದೆ ಕಾಣಿಸಿಕೊಳ್ಳುತ್ತದೆ?

ತಜ್ಞರ ಪ್ರಕಾರ, ಮಧುಮೇಹ, ಹೈ ಬ್ಲಡ್ ಪ್ರೆಶರ್, ಹೃದಯ ಸಂಬಂಧಿತ ಸಮಸ್ಯೆಗಳು, ಥೈರಾಯ್ಡ್ ಅಸಮತೋಲನ ಮತ್ತು ಕೆಲವು ಕ್ಯಾನ್ಸರ್‌ಗಳು ಆರಂಭಿಕ ಹಂತದಲ್ಲಿ ಲಕ್ಷಣಗಳಿಲ್ಲದೆ ಕಾಣಿಸಬಹುದು. ಇವು ನಿಧಾನವಾಗಿ ದೇಹದ ಅಂಗಾಂಗಗಳನ್ನು ಹಾನಿಗೊಳಿಸುತ್ತವೆ. ಹಲವರು ಸಾಮಾನ್ಯ ದಣಿವು ಅಥವಾ ದುರ್ಬಲತೆಯನ್ನು ನಿರ್ಲಕ್ಷಿಸುವುದರಿಂದ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಇರುತ್ತದೆ.

ಲಕ್ಷಣಗಳು ಏಕೆ ತಕ್ಷಣ ಕಾಣಿಸಿಕೊಳ್ಳುವುದಿಲ್ಲ?

ಕೆಲವು ಕಾಯಿಲೆಗಳು ನಿಧಾನವಾಗಿ ಬೆಳೆಯುವ ಕಾರಣದಿಂದ ತಕ್ಷಣ ಲಕ್ಷಣಗಳು ಗೋಚರಿಸುವುದಿಲ್ಲ. ದೇಹವು ಒಳಗಿನ ಬದಲಾವಣೆಗಳನ್ನು ಕೆಲ ಕಾಲ ಸಮತೋಲನದಲ್ಲಿಡಲು ಪ್ರಯತ್ನಿಸುತ್ತದೆ. ಇದರ ಪರಿಣಾಮವಾಗಿ ವ್ಯಕ್ತಿಗೆ ಯಾವುದೇ ತೊಂದರೆ ಅನುಭವವಾಗುವುದಿಲ್ಲ. ಜೊತೆಗೆ, ಆರಂಭಿಕ ಲಕ್ಷಣಗಳು ಬಹಳ ಸಣ್ಣದಾಗಿರುವುದರಿಂದ ಅವನ್ನು ಸಾಮಾನ್ಯವೆಂದು ನಿರ್ಲಕ್ಷಿಸಲಾಗುತ್ತದೆ.

ಇದನ್ನೂ ಓದಿ: ಇದು ಸೈಲೆಂಟ್ ಕಿಲ್ಲರ್, ಸ್ವಲ್ಪ ಎಚ್ಚರ ತಪ್ಪಿದರು ಪ್ರಾಣ ಹೋಗುವುದು ಗ್ಯಾರಂಟಿ

ಮುನ್ನೆಚ್ಚರಿಕೆ ಹೇಗೆ ವಹಿಸಬೇಕು?

ಇಂತಹ ಕಾಯಿಲೆಗಳನ್ನು ತಡೆಗಟ್ಟಲು ನಿಯಮಿತ ಆರೋಗ್ಯ ತಪಾಸಣೆ ಬಹಳ ಮುಖ್ಯ. ವರ್ಷಕ್ಕೊಮ್ಮೆ ಅಥವಾ ವೈದ್ಯರ ಸಲಹೆಯಂತೆ ಚೆಕ್‌ಅಪ್ ಮಾಡಿಸಿಕೊಳ್ಳುವುದು ಉತ್ತಮ. ಸಮತೋಲನಯುತ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಮತ್ತು ಒತ್ತಡ ನಿಯಂತ್ರಣ ಆರೋಗ್ಯ ಕಾಪಾಡಲು ಸಹಕಾರಿ. ಹಾಗಾಗಿ ದೇಹದಲ್ಲಿ ಸಣ್ಣ ಬದಲಾವಣೆಗಳನ್ನೂ ನಿರ್ಲಕ್ಷಿಸಬಾರದು. ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸಮಯಕ್ಕೆ ಸರಿಯಾಗಿ ಕಾಯಿಲೆ ಪತ್ತೆ ಮಾಡಿದರೆ ಚಿಕಿತ್ಸೆ ಸುಲಭವಾಗುತ್ತದೆ ಮತ್ತು ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ತಿಕ್ಲು ರಾಮ’ ಸಿನಿಮಾದ ಶೀರ್ಷಿಕೆ ವಿವಾದ: ದೂರು ದಾಖಲಾದ ಬಳಿಕ ಟೈಟಲ್ ಬದಲಾವಣೆ? – Kannada News | Thiklu Rama Kannada movie controversy Team likely to change title

ಸಿನಿಮಾದಲ್ಲಿ ಯಾವುದೇ ಆಕ್ಷೇಪಾರ್ಹ ಅಂಶಗಳು ಇದ್ದರೂ ತಕ್ಷಣ ವಿವಾದ (Controversy) ಸೃಷ್ಟಿಯಾಗುವ ಕಾಲವಿದು. ಧಾರ್ಮಿಕ ಭಾವನೆಗಳ ವಿಚಾರದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಈಗ ‘ತಿಕ್ಲು ರಾಮ’ (Thiklu Rama) ಸಿನಿಮಾದ ಟೈಟಲ್ ಕೂಡ ವಿವಾದಕ್ಕೆ ಒಳಗಾಗಿದೆ. ಸಾಹಿತಿ, ಗಾಯಕ, ಸಂಗೀತ ಸಂಯೋಜಕ ಮಂಜುಕವಿ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಶೂಟಿಂಗ್ ಈಗಾಗಲೇ ಶೇಕಡ 40ರಷ್ಟು ಮುಗಿದಿದೆ. ಆದರೆ ಈಗ ಟೈಟಲ್ ಬದಲಾವಣೆ ಮಾಡಬೇಕು ಎಂದು ದೂರು ನೀಡಲಾಗಿದೆ.

‘ತಿಕ್ಲು ರಾಮ’ ಸಿನಿಮಾಗೆ ಡಾ. ರಾಜ್‌ವೀರ್ ಅವರು ಕಥೆ ಬರೆದಿದ್ದಾರೆ. ಆ ಪಾತ್ರದಲ್ಲಿ ಅವರೇ ನಟಿಸುತ್ತಿದ್ದಾರೆ. ರಾಮನವಮಿ ಪ್ರಯುಕ್ತ ಹೊಸ ಪೋಸ್ಟರ್‌ ಬಿಡುಗಡೆ ಮಾಡಲಾಗಿತ್ತು. ಆದರೆ ಸಿನಿಮಾದ ಶೀರ್ಷಿಕೆ ಸರಿಯಿಲ್ಲವೆಂದು ಹಿಂದೂಪರ ಸಂಘಟನೆಯ ಕಾರ್ಯಕರ್ತ ಗಿರೀಶ್ ಅವರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿ, ಚಿತ್ರದ ಶೀರ್ಷಿಕೆ ಬದಲಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಈ ವಿಷಯದ ಬಗ್ಗೆ ಚಿತ್ರತಂಡದವರು ಮಾತನಾಡಿದ್ದಾರೆ. ‘ರಾಮ ಮತ್ತು ಹನುಮನ ಹೆಸರಿಗೆ ಧಕ್ಕೆ ಬರುವಂತೆ ಇಲ್ಲಿಯವರೆಗೂ ಯಾವುದೇ ಕೆಲಸವನ್ನು ಮಾಡಿಲ್ಲ, ಮಾಡುವುದೂ ಇಲ್ಲ. ಟೈಟಲ್ ಬಗ್ಗೆ ಆಕ್ಷೇಪ ಕಂಡುಬಂದಲ್ಲಿ, ಅದನ್ನು ಸರಿಪಡಿಸಿಕೊಳ್ಳುವುದಾಗಿ ನಿರ್ಮಾಪಕಿ ಶ್ರುತಿ ಜಿ.ಬಿ. ಮತ್ತು ನಿರ್ದೇಶಕ ಮಂಜುಕವಿ ಸ್ಪಷ್ಟನೆ ನೀಡಿದ್ದಾರೆ. ಒಂದು ವೇಳೆ ರಾಮ, ಹನುಮನ ಅವಹೇಳನ ದೃಶ್ಯಗಳು ಇದ್ದಲ್ಲಿ ಅದನ್ನು ತೆಗೆದು ಹಾಕಲಾಗುವುದು’ ಎಂದು ಡಾ. ರಾಜ್‌ವೀರ್ ಹೇಳಿದ್ದಾರೆ.

‘ತಿಕ್ಲು ರಾಮ’ ಒಂದು ಪರಿಸರ ಪ್ರೇಮಿ, ಹೃದಯ ಸ್ಪರ್ಶಿ ಕಾದಂಬರಿ ಆಗಿದೆ. ಇದನ್ನು ಓದಿದ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂಚು ಚಿತ್ರತಂಡ ತಿಳಿಸಿದೆ. ಸಿನಿಮಾದಲ್ಲಿ ಉತ್ತಮವಾದ ಸಂದೇಶಗಳು ಇರಲಿದೆ. ತಿಕ್ಲುರಾಮ ಸಾಮಾಜಿಕ ಕಳಕಳಿಯ ಕೆಲಸದಲ್ಲಿ ತೊಡಗಿಕೊಂಡು, ಪರಿಸರ ಕಾಪಾಡುತ್ತಾ, ಜೀವನ ನಡೆಸುತ್ತಿರುವಾಗ ಆತನ ಬದುಕಲ್ಲಿ ಏನೆಲ್ಲಾ ಆಗುಹೋಗುಗಳು ಆಗುತ್ತದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.

ಇದನ್ನೂ ಓದಿ: ‘ಧುರಂಧರ್ 3’ ಸಿನಿಮಾ ಬರಲಿದೆಯೇ? ಕುತೂಹಲದ ಪ್ರಶ್ನೆಗೆ ಉತ್ತರ ನೀಡಿದ ನಟ ರಾಕೇಶ್ ಬೇಡಿ

ಶ್ರೀರಾಮನಿಗೆ ಅವಮಾನ ಆಗಬಾರದು ಹಾಗೂ ಹಿಂದೂಗಳ ಭಾವನೆಗೆ ಧಕ್ಕೆ ತರಬಾರದೆಂಬ ಉದ್ದೇಶದಿಂದ ‘ತಿಕ್ಲು ರಾಮ’ ಶೀರ್ಷಿಕೆಯನ್ನು ಬದಲಾಯಿಸಲು ಸೂಚಿಸಲಾಗಿದೆ. ಅದರ ಬದಲು ಬೇರೆ ಯಾವ ಹೆಸರು ಇಡಲಾಗುವುದು ಎಂಬ ವಿಷಯವನ್ನು ಮುಂದಿನ ದಿನಗಳಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಲಾಗುವುದು ಎಂದು ಡಾ. ರಾಜ್‌ವೀರ್ ಮಾಹಿತಿ ಹಂಚಿಕೊಂಡಿದ್ದಾರೆ. ವಿನು ಮನಸು ಅವರ ಹಿನ್ನಲೆ ಸಂಗೀತ, ರಾಜ್ ಕಡೂರು-ಭರತ್ ಅವರ ಛಾಯಾಗ್ರಹಣ, ಅಲ್ಟಿಮೇಟ್ ಶಿವು-ಮಾಸ್ ಮಾದ ಅವರ ಸಾಹಸ ನಿರ್ದೇಶನ, ಜಗ್ಗು ಅವರ ಕೊರಿಯೋಗ್ರಫಿ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹತ್ತು ಕೋಟಿ ರೂ ಹಣ ಸೇರಿಸಲು ಎಷ್ಟು ಸಮಯ ಮತ್ತು ಹೂಡಿಕೆ ಬೇಕು? ಇಲ್ಲಿದೆ ಡೀಟೇಲ್ಸ್ – Kannada News | To build Rs 10 crore corpus before retirement, know how much to invest and required timeframe

ನಿವೃತ್ತಿ ಎಂದರೆ ದುಡಿಮೆ ನಿಲ್ಲಿಸುವ ಸಮಯ. ಮನುಷ್ಯನ ದೈಹಿಕ ಬಲ ಮತ್ತು ಮನೋಬಲ ಇರುವವರೆಗೂ ದುಡಿಯುತ್ತಿರಬಹುದು. ನಿವೃತ್ತಿಯಷ್ಟರಲ್ಲಿ (retirement) ಮನುಷ್ಯನ ಆರ್ಥಿಕ ಭದ್ರತೆ (financial stability) ಉತ್ತಮವಾಗಿರುವುದು ಅಗತ್ಯ. ದುಡಿಮೆ ಇಲ್ಲದೆಯೇ ಬದುಕುವ ಹಣಕಾಸು ಬಲ ಇರಬೇಕು. ಆದರೆ, ಎಷ್ಟು ಹಣ ಬೇಕು ಎನ್ನುವುದು ಎಲ್ಲರಲ್ಲೂ ಇರುವ ಗೊಂದಲ.

ಇವತ್ತಿನ ಬೆಲೆ ಮಟ್ಟಕ್ಕೆ ಈಗ ನಿವೃತ್ತರಾಗುವವರಿಗೆ ಕನಿಷ್ಠ ಒಂದು ಕೋಟಿಯಾದರೂ ಬೇಕು. ಈ ಒಂದು ಕೋಟಿ ರೂ ಮುಂದಿನ 30 ವರ್ಷದಲ್ಲಿ ಹೊಂದುವ ಮೌಲ್ಯ ಸುಮಾರು 8 ಕೋಟಿ ರೂ ಇರಬಹುದು. ಅಂದರೆ, 30 ವರ್ಷದ ನಂತರ ನಿವೃತ್ತರಾಗುವವರು 8 ಕೋಟಿ ರೂ ಹೊಂದಿದರೆ ಅದು ಇವತ್ತಿನ 1 ಕೋಟಿ ರೂಗೆ ಸಮ. ಬೆಲೆ ಏರಿಕೆ, ತಕ್ಕಮಟ್ಟಿಗಿನ ಜೀವನ ಮಟ್ಟ ಬೇಕೆಂದರೆ ನಿವೃತ್ತಿಯ ವೇಳೆ 10 ಕೋಟಿ ರೂ ಇರುವುದು ಅಗತ್ಯ. ಈ 10 ಕೋಟಿ ರೂ ಸಂಪಾದಿಸಲು ಎಷ್ಟು ವರ್ಷ ಬೇಕು, ಎಷ್ಟು ಹೂಡಿಕೆ ಬೇಕು ಎನ್ನುವ ಲೆಕ್ಕಾಚಾರ ಇಲ್ಲಿದೆ…

ಇದನ್ನೂ ಓದಿ: ಹೂಡಿಕೆದಾರರನ್ನು ಸೆಳೆಯುತ್ತಿವೆ ವ್ಯಾಲ್ಯೂ ಮ್ಯೂಚುವಲ್ ಫಂಡ್​ಗಳು; ಏನಿವುಗಳ ವಿಶೇಷತೆ?

10 ಕೋಟಿ ರೂ ಕಾರ್ಪಸ್ ನಿರ್ಮಿಸುವ ಲೆಕ್ಕಾಚಾರ

ಶೇ. 12ರಷ್ಟು ವಾರ್ಷಿಕ ರಿಟರ್ನ್ ಕೊಡಬಹುದೆಂದು ನಿರೀಕ್ಷಿಸಬಹುದಾದ ಮ್ಯೂಚುವಲ್ ಫಂಡ್​ಗಳಲ್ಲಿ ಎಸ್​ಐಪಿ ಮಾಡುವುದು ಹೂಡಿಕೆಗೆ ಬೆಸ್ಟ್ ವಿಧಾನ. ನೀವು ತಿಂಗಳಿಗೆ 10,000 ರೂ ಎಸ್​ಐಪಿಯಲ್ಲಿ ಹಣ ತೊಡಗಿಸಿದರೆ ಅದು 10 ಕೋಟಿ ರೂ ಆಗಿ ಬೆಳೆಯಲು ಸುಮಾರು 39 ವರ್ಷ ಆಗುತ್ತದೆ.

ಅದೇ ನೀವು ತಿಂಗಳಿಗೆ 50,000 ರೂನಂತೆ ಹೂಡಿಕೆ ಮಾಡಿದರೆ ಅದು 10 ಕೋಟಿ ರೂ ಕಾರ್ಪಸ್ ಆಗಿ ಬೆಳೆಯಲು 25 ವರ್ಷ ಬೇಕಾಗುತ್ತದೆ. ಒಂದು ಲಕ್ಷ ರೂ ಎಸ್​ಐಪಿಯಿಂದ 20 ವರ್ಷದಲ್ಲಿ 10 ಕೋಟಿ ರೂ ನಿರ್ಮಿಸಬಹುದು. ನಿಮ್ಮ ದುಡಿಮೆಯ ಅವಧಿ ಎಷ್ಟಿದೆ ನೋಡಿಕೊಂಡು ಅದರ ಪ್ರಕಾರ ಹೂಡಿಕೆ ಮಾಡುತ್ತಾ ಹೋಗಬಹುದು.

ಇದನ್ನೂ ಓದಿ: ನಾಮಿನಿ ಹೆಸರಿಸದೆಯೇ ಹೂಡಿಕೆದಾರ ಮೃತಪಟ್ಟರೆ ಮ್ಯೂಚುವಲ್ ಫಂಡ್ ಹೂಡಿಕೆಗೆ ಏನಾಗುತ್ತದೆ?

ನೀವು ಇನ್ನೂ 20 ವರ್ಷ ಮಾತ್ರ ದುಡಿಯುತ್ತೀರಿ ಎಂದರೆ ತಿಂಗಳಿಗೆ ಒಂದು ಲಕ್ಷ ರೂ ಅನ್ನು ಎಸ್​ಐಪಿಯಲ್ಲಿ ಹಾಕುತ್ತಾ ಹೋಗಬಹುದು. ಆಗ 10 ಕೋಟಿ ರೂ ಮೊತ್ತ ನಿಮ್ಮದಾಗಲು ಸಾಧ್ಯ. ಹೂಡಿಕೆ ಅವಧಿ ಹೆಚ್ಚಿಸಿದಷ್ಟೂ ಹಣದ ಮ್ಯಾಜಿಕ್ ಕೆಲಸ ಮಾಡುತ್ತಾ ಹೋಗುತ್ತದೆ. ಉದಾಹರಣೆಗೆ, ನೀವು ತಿಂಗಳಿಗೆ ಒಂದು ಲಕ್ಷ ರೂ ಎಸ್​ಐಪಿ ಮಾಡಿದರೆ 20 ವರ್ಷದಲ್ಲಿ 10 ಕೋಟಿ ರೂ ಆಗುತ್ತದೆ. ಇನ್ನೂ 5 ವರ್ಷ ಹೂಡಿಕೆ ಮುಂದುವರಿಸಿದರೆ ಅದು 17 ಕೋಟಿ ರೂ ಆಗುತ್ತದೆ. ಮತ್ತೂ ಐದು ವರ್ಷ ಹೂಡಿಕೆ ಮುಂದುವರಿಸಿದರೆ 30 ಕೋಟಿ ರೂ ಕಾರ್ಪಸ್ ನಿರ್ಮಾಣ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾತ್ರಿ ವೇಳೆಯೂ ಉಷ್ಣ ಅಲೆ, ಇನ್ನಷ್ಟು ಹೆಚ್ಚಾಗಲಿದೆ ತಾಪಮಾನ: ಹವಾಮಾನ ತಜ್ಞ ಸ್ಫೋಟಕ ಮುನ್ಸೂಚನೆ – Kannada News | Karnataka Weather: Night Temperatures to Rise Further; Meteorologist CS Patil Warns of Heatwave Intensifies

ಬೆಂಗಳೂರು, ಏಪ್ರಿಲ್ 20: ಕರ್ನಾಟಕದಲ್ಲಿ ರಣಬಿಸಿಲಿನಿಂದ ಜನ ತತ್ತರಿಸಿದ್ದಾರೆ. ಹಲವು ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಕೆರೆ, ಬಾವಿ ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಕೆಯಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಹವಾಮಾನ ತಜ್ಞ ಸಿ.ಎಸ್. ಪಾಟೀಲ್ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ನೀರಿನ ಅಭಾವ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದಾರೆ. ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಹಗಲು ಮತ್ತು ರಾತ್ರಿ ಎರಡೂ ವೇಳೆಯಲ್ಲೂ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ಇದು ಮಣ್ಣಿನ ತೇವಾಂಶವನ್ನು ವೇಗವಾಗಿ ಕಡಿಮೆ ಮಾಡುತ್ತದೆ ಮತ್ತು ಜಲಮೂಲಗಳ ಆವಿಯಾಗುವಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ಕೆರೆ ಮತ್ತು ಜಲಾಶಯಗಳು ಬೇಗ ಬತ್ತುವ ಸಂಭವವಿದೆ. ಇದು ಪಕ್ಷಿ, ಪ್ರಾಣಿ ಮತ್ತು ಜನರಿಗೆ ತೊಂದರೆ ಉಂಟುಮಾಡಬಹುದು ಎಂದು ಅವರು ಹೇಳಿದ್ದಾರೆ.

ಒಂದು ವಾರದವರೆಗೆ ರಾಜ್ಯದ ಒಳನಾಡಿನಲ್ಲಿ ಟ್ರಫ್ ಇರುವುದರಿಂದ ಕೆಲವೆಡೆ ಗುಡುಗು ಮಿಂಚು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ. ಈ ಮಳೆಯು ಬಿಸಿಲಿನಿಂದ ಸ್ವಲ್ಪ ಮಟ್ಟಿಗೆ ತಂಪು ನೀಡಬಹುದಾದರೂ, ಉಷ್ಣ ಅಲೆ ಹೋಗಲಾಡಿಸುವಲ್ಲಿ ದೊಡ್ಡ ಮಟ್ಟಿನ ಪ್ರಯೋಜನ ನೀಡಲಾರದು ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಲಬುರಗಿಯಲ್ಲಿ ಗುಂಡಿನ ಸದ್ದು: ಫೈರಿಂಗ್​ ಮಾಡಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಹತ್ಯೆ – Kannada News | Kalaburagi: Bhai Bhai Group Leader Irfan Shot and Hacked in Wadi

ಕಲಬುರಗಿ, ಏಪ್ರಿಲ್​ 20: ಹಾಡಹಗಲೇ ಗುಂಡು ಹಾರಿಸಿ (firing) ನಂತರ ಮಚ್ಚಿನಿಂದ ಕೊಚ್ಚಿ ದುಷ್ಕರ್ಮಿಗಳು ವ್ಯಕ್ತಿಯನ್ನು ಕೊಲೆ (kill) ಮಾಡಿರುವಂತಹ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಬಲರಾಮ್ ಚೌಕ ಬಳಿ ನಡೆದಿದೆ. ಭಾಯ್ ಭಾಯ್ ಗ್ರೂಪ್ ಮುಖಂಡ ಇರ್ಫಾನ್(42) ಕೊಲೆಯಾದ ವ್ಯಕ್ತಿ. ಹಳೇ ವೈಷಮ್ಯ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೃತ್ಯ ನಡೆದ ಸ್ಥಳಕ್ಕೆ ವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಡೆದಿದ್ದೇನು?

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಇಂದು ರಕ್ತಸಿಕ್ತವಾಗಿದೆ. ಪಟ್ಟಣದ ಬಲರಾಮ್ ಚೌಕ್ ಬಳಿಯ ಸೇವಾಲಾಲ್ ಮಂದಿರದ ಹತ್ತಿರ 42 ವರ್ಷದ ಇರ್ಫಾನ್ ಎಂಬಾತನನ್ನು ದುಷ್ಕರ್ಮಿಗಳು ಬರ್ಬರ ಹತ್ಯೆ ಮಾಡಿದ್ದಾರೆ. ಇರ್ಫಾನ್ ಪಟ್ಟಣದ ‘ಭಾಯ್ ಭಾಯ್’ ಗ್ರೂಪ್‌ನ ಮುಖಂಡ.

ಇದನ್ನೂ ಓದಿ: ನೇಣುಬಿಗಿದ ಸ್ಥಿತಿಯಲ್ಲಿ ಪೋಕ್ಸೋ ಕೇಸ್​​ ಆರೋಪಿ ಶವ ಪತ್ತೆ: ಆತ್ಮಹತ್ಯೆಯೋ? ಕೊಲೆಯೋ?

ಮಧ್ಯಾಹ್ನದ ವೇಳೆ ಇರ್ಫಾನ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳು, ಮೊದಲು ಗುಂಡು ಹಾರಿಸಿದ್ದಾರೆ. ನಂತರ ಮಚ್ಚು ಸೇರಿದಂತೆ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ.

ಹಳೆ ವೈಷಮ್ಯಕ್ಕೆ ಕೊಲೆ ಶಂಕೆ

ಸದ್ಯ ಭೀಕರ ಕೃತ್ಯಕ್ಕೆ ವಾಡಿ ಪಟ್ಟಣದ ಜನತೆ ಬೆಚ್ಚಿಬಿದ್ದಿದ್ದಾರೆ. ಹಳೇ ವೈಷಮ್ಯದ ಹಿನ್ನೆಲೆ ಸ್ಕೆಚ್ ಹಾಕಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ವಾಡಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಹತ್ಯೆಯಿಂದಾಗಿ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪೊಲೀಸ್​​ ದೂರು ನೀಡುತ್ತಿದ್ದ ಎಂಬ ಕಾರಣಕ್ಕೆ ವ್ಯಕ್ತಿಯ ಕೊಲೆ

ವೈಯಕ್ತಿಕ ದ್ವೇಷ ಹಿನ್ನೆಲೆ ರಾಡ್​​​ನಿಂದ ಹೊಡೆದು ವ್ಯಕ್ತಿಯ ಹತ್ಯೆ ಮಾಡಿರುವಂತಹ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸುರಪುರದಲ್ಲಿ ನಡೆದಿದೆ. ರಾಡ್​​ನಿಂದ ಹೊಡೆದು ಕುಣಗಳ್ಳಿ ನಿವಾಸಿ ರಾಮಕೃಷ್ಣ ಬರ್ಬರ ಕೊಲೆ ಮಾಡಲಾಗಿದೆ.

ಇದನ್ನೂ ಓದಿ: 2ನೇ ಮದುವೆ ತಯಾರಿಯಲ್ಲಿದ್ದ ವೈದ್ಯನ ಭೀಕರ ಕೊಲೆ: ವಿವಾಹದ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ!

ಸುರಪುರ ಗ್ರಾಮದ ಮಲ್ಲಿಕಾರ್ಜುನ ಕೊಲೆ ಮಾಡಿ ಬಳಿಕ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ರಾಮಕೃಷ್ಣ ನನ್ನ ವಿರುದ್ಧ ಪೊಲೀಸರಿಗೆ ಪದೇ ಪದೆ ದೂರು ನೀಡುತ್ತಿದ್ದ. ಅದಕ್ಕೆ ಆತನನ್ನು ಕೊಲೆ ಮಾಡಿರೋದಾಗಿ ಆರೋಪಿ ಒಪ್ಪಿಕೊಂಡಿದ್ದಾರೆ. ಸ್ಥಳಕ್ಕೆ ಎಸ್​​ಪಿ ಮುತ್ತುರಾಜ್, ಶ್ವಾನದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮಾಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version