ಅಶ್ಲೀಲ ಹಾಡಿನ ವಿವಾದ: 800ಕ್ಕೂ ಹೆಚ್ಚು ಲಿಂಕ್ಸ್ ಡಿಲೀಟ್ ಮಾಡಿದ ಪೊಲೀಸರು

ಅಶ್ಲೀಲ ಹಾಡಿನ ವಿವಾದ: 800ಕ್ಕೂ ಹೆಚ್ಚು ಲಿಂಕ್ಸ್ ಡಿಲೀಟ್ ಮಾಡಿದ ಪೊಲೀಸರು

ಬಾಲಿವುಡ್‌ನ ಖ್ಯಾತ ಗಾಯಕ ಬಾದ್‌ಶಾ (Badshah) ಅವರ ಹೊಸ ಹಾಡು ‘ಟಟೀರಿ’ ಭಾರಿ ವಿವಾದಕ್ಕೆ ಗುರಿಯಾಗಿದೆ. ಮಹಿಳೆಯರು ಮತ್ತು ಅಪ್ರಾಪ್ತರ ಬಗ್ಗೆ ಆಕ್ಷೇಪಾರ್ಹ ಸಾಹಿತ್ಯವನ್ನು ಹೊಂದಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಹರಿಯಾಣ ಪೊಲೀಸರು ಈ ಹಾಡಿನ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ಹರಿಯಾಣ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ‘ಟಟೀರಿ’ (Tateeree) ಹಾಡಿನ ಒಟ್ಟು 857 ಲಿಂಕ್‌ಗಳನ್ನು ಈವರೆಗೆ ತೆಗೆದುಹಾಕಿದ್ದಾರೆ. ಇದರಲ್ಲಿ ಯೂಟ್ಯೂಬ್‌ನ 154 ವೀಡಿಯೊಗಳು ಮತ್ತು ಇನ್‌ಸ್ಟಾಗ್ರಾಮ್‌ನ 703 ರೀಲ್ಸ್‌ ಸೇರಿವೆ. ಮರು-ಅಪ್‌ಲೋಡ್ ಮಾಡಲಾದ ವೀಡಿಯೊಗಳು ಮತ್ತು ಶಾರ್ಟ್ಸ್​ಗಳನ್ನು ಸಹ ಡಿಲೀಟ್ ಮಾಡುವಂತೆ ಸೋಶಿಯಲ್ ಮೀಡಿಯಾ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ.

ಮಹಿಳೆಯರ ಮತ್ತು ಅಪ್ರಾಪ್ತರ ಘನತೆಗೆ ಧಕ್ಕೆ ತರುವಂತಹ ಯಾವುದೇ ವಿಷಯವನ್ನು ಸಹಿಸುವುದಿಲ್ಲ ಎಂದು ಹರಿಯಾಣ ಪೊಲೀಸ್ ಮಹಾನಿರ್ದೇಶಕ (DGP) ಅಜಯ್ ಸಿಂಘಾಲ್ ತಿಳಿಸಿದ್ದಾರೆ. ನಿಯಮ ಉಲ್ಲಂಘಿಸುವ ಖಾತೆಗಳನ್ನು ನಿರ್ಬಂಧಿಸಲಾಗುವುದು ಮತ್ತು ಪದೇ ಪದೇ ತಪ್ಪು ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಅಲ್ಲದೇ, ಈ ಹಾಡನ್ನು ಬಳಸಿ ಹೊಸ ವೀಡಿಯೊಗಳನ್ನು ಕ್ರಿಯೇಟ್ ಮಾಡದಂತೆ ಅಥವಾ ಶೇರ್ ಮಾಡದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಹರಿಯಾಣದ ಪಂಚಕುಲ ನಗರದ ಸೆಕ್ಟರ್ 20 ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಹಾಡಿನ ವಿವಾದದಿಂದಾಗಿ ಬಾದ್​ಶಾ ಅವರಿಗೆ ಅಪಖ್ಯಾತಿ ಬಂದಂತೆ ಆಗಿದೆ.

ಕಳೆದ ವಾರವಷ್ಟೇ ರಾಷ್ಟ್ರೀಯ ಮಹಿಳಾ ಆಯೋಗವು ಈ ಹಾಡಿನ ಅಶ್ಲೀಲತೆಯ ಬಗ್ಗೆ ಗಾಯಕ ಬಾದ್‌ಶಾ ಮತ್ತು ಹಾಡಿನ ನಿರ್ಮಾಪಕರಿಗೆ ಸಮನ್ಸ್ ನೀಡಿತ್ತು. ಈ ಹಾಡು ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಸಂಕಷ್ಟಕ್ಕೆ ಸಿಲುಕಿದ ಬಾದ್‌ಶಾ ಈಗಾಗಲೇ ಈ ಬಗ್ಗೆ ಕ್ಷಮೆಯಾಚಿಸಿದ್ದು, ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ಹಾಡನ್ನು ಹಿಂಪಡೆದಿದ್ದಾರೆ.

ಇದನ್ನೂ ಓದಿ: ಪ್ರೇಮ್ ಬರೆದ ‘ಕೆಡಿ’ ಹಾಡಿನ ಅಶ್ಲೀಲ ಸಾಹಿತ್ಯಕ್ಕೆ ಜನರ ಆಕ್ರೋಶ; ಸೆಲೆಬ್ರಿಟಿಗಳೂ ಗರಂ

ಕನ್ನಡದ ‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ’ ಹಾಡು ಕೂಡ ದೇಶಾದ್ಯಂತ ವಿವಾದ ಸೃಷ್ಟಿ ಮಾಡಿದೆ. ಈ ಹಾಡಿನಲ್ಲಿ ಕೂಡ ಅಶ್ಲೀಲ ಸಾಹಿತ್ಯ ಇದೆ ಎಂಬ ಕಾರಣಕ್ಕೆ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿತು. ತೀವ್ರ ವಿರೋಧ ವ್ಯಕ್ತವಾದ ಬಳಿಕ ಹಾಡನ್ನು ಡಿಲೀಟ್ ಮಾಡಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೊಬೈಲ್ ಟಾರ್ಚ್ ಬೆಳಕಲ್ಲಿ ಆಪರೇಷನ್; 12 ವರ್ಷಗಳ ಬಳಿಕ ವೈದ್ಯರ ವಿರುದ್ಧ ಪ್ರಕರಣ ದಾಖಲು

ಮುಂಬೈ, ಮಾರ್ಚ್ 23: ವೈದ್ಯರು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ರೋಗಿಗೆ ಆಪರೇಷನ್ (Operation) ಮಾಡಿ ಆ ರೋಗಿ ಮೃತಪಟ್ಟಿದ್ದರು. ಇದಾದ 12 ವರ್ಷಗಳವರೆಗೂ ಆ ವೈದ್ಯರಿಗೆ ಶಿಕ್ಷೆ ಕೊಡಿಸಲು ಮೃತಪಟ್ಟ ರೋಗಿಯ ತಾಯಿ ತೀವ್ರ ಹೋರಾಟ ನಡೆಸಿದ್ದರು. ಆ ಘಟನೆ ನಡೆದು 12 ವರ್ಷಗಳ ಬಳಿಕ ಇದೀಗ ಈ ಹೋರಾಟಕ್ಕೆ ಸ್ವಲ್ಪ ಮಟ್ಟಿಗಿನ ಯಶಸ್ಸು ಸಿಕ್ಕಿದ್ದು, 12 ವರ್ಷಗಳ ನಂತರ ಆ ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.

2014ರಲ್ಲಿ ನಡೆದ ದುರಂತ ಘಟನೆಯಲ್ಲಿ ಮಹಾರಾಷ್ಟ್ರದ ಗೋವಂಡಿಯ 23 ವರ್ಷದ ಸಲ್ಮಾನ್ ಬಾಬರ್ ಶಾ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ತಾಯಿ ನಸೀಮ್ ಬಾನು ಬಾಬರ್ ಶಾ ತನ್ನ ಮಗನ ಸಾವಿಗೆ ನ್ಯಾಯ ಕೊಡಿಸಲು ಹಠದಿಂದ ಹೋರಾಟ ನಡೆಸಿದ್ದರು.

ಇದನ್ನೂ ಓದಿ: ನಗರದಲ್ಲಿ ಹೆಚ್ಚಿದ ಡಿಜಿಟಲ್ ಅರೆಸ್ಟ್ ಸ್ಕ್ಯಾಮ್; ನಿವೃತ್ತ ಸಂಶೋಧಕನಿಗೆ 5 ಕೋಟಿ ರೂ. ವಂಚನೆ!

2014ರ ಏಪ್ರಿಲ್ 8ರಂದು ಸಲ್ಮಾನ್ ಬೈಕ್ ಅಪಘಾತಕ್ಕೀಡಾದರು. ಈ ಅಪಘಾತದಲ್ಲಿ ಅವರ ಬಲ ತೊಡೆಯ ಮೂಳೆ ಮುರಿದಿತ್ತು. ಅವರನ್ನು ತಕ್ಷಣ ಗೋವಂಡಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಇದು ಸಣ್ಣ ಗಾಯವಾದ್ದರಿಂದ ಕೆಲವೇ ದಿನಗಳಲ್ಲಿ ಅವರು ಚೇತರಿಸಿಕೊಳ್ಳುತ್ತಾರೆ ಎಂದು ಕುಟುಂಬವು ನಿರೀಕ್ಷಿಸಿತ್ತು. ಆದರೆ, ಶಸ್ತ್ರಚಿಕಿತ್ಸೆಯ ನಂತರ ಅವರ ಸ್ಥಿತಿ ಹದಗೆಡಲು ಪ್ರಾರಂಭಿಸಿತು. ನಂತರ ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಏಪ್ರಿಲ್ 17, 2014ರಂದು ಅವರು ‘ಸೆಪ್ಟಿಸೆಮಿಯಾ’ದಿಂದ ನಿಧನರಾದರು. ಇದು ತೀವ್ರವಾದ ರಕ್ತಪ್ರವಾಹ ಸೋಂಕು. ಅಧಿಕೃತ ದಾಖಲೆಗಳು ಅದು ಸಹಜ ಸಾವು ಎಂದೇ ಹೇಳುತ್ತಿದ್ದರೂ ಅವರ ತಾಯಿ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ರೋಗಿಯ ತಾಯಿ ನಸೀಮ್ ವೈದ್ಯರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಅವರ ಪ್ರಕಾರ, ವಿದ್ಯುತ್ ಇಲ್ಲದಿದ್ದರೂ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತ. ಅತ್ಯಂತ ನಿರ್ಲಕ್ಷ್ಯದಿಂದ ಆಪರೇಷನ್ ಮಾಡಲಾಗಿತ್ತು. ಸರಿಯಾದ ವೈದ್ಯಕೀಯ ಸೌಲಭ್ಯಗಳನ್ನು ಬಳಸದೆ ಚಿಕಿತ್ಸೆಯನ್ನು ನೀಡಲಾಗಿತ್ತು. ರೋಗಿಯ ಸ್ಥಿತಿಯ ಬಗ್ಗೆ ಕುಟುಂಬಕ್ಕೆ ತಪ್ಪು ಮಾಹಿತಿ ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದರು. ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಲಾಗಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಪ್ರೀತಿಸಿದವನನ್ನು ನಂಬಿ ಮದುವೆಯಾಗಿ ಬಂದಿದ್ದ ಮಹಿಳೆ ನಾಲ್ಕೇ ತಿಂಗಳಲ್ಲಿ ಪತಿ ಕೈಯಿಂದಲೇ ಹೆಣವಾದ್ಲು

ಈ ಘಟನೆಯ ನಂತರ, ನಸೀಮ್ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಡಿದರು. ಅವರು ಪೊಲೀಸರಿಗೆ ಪದೇ ಪದೇ ದೂರುಗಳನ್ನು ಸಲ್ಲಿಸಿದರು. ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಮಾಹಿತಿ ಪಡೆಯಲು ಪ್ರಯತ್ನಿಸಿದರು. ಕೊನೆಗೆ ಎಲ್ಲೂ ನ್ಯಾಯ ಸಿಗದ ಕಾರಣದಿಂದ ಅಂತಿಮವಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಕೊನೆಗೂ ಈಗ ಅಂದರೆ ಸಲ್ಮಾನ್ ಸಾವನ್ನಪ್ಪಿ 12 ವರ್ಷಗಳ ನಂತರ ಪೊಲೀಸರು ಸಂಬಂಧಪಟ್ಟ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

PSL 2026: ಐಪಿಎಲ್‌ಗಾಗಿ ಪಿಎಸ್‌ಎಲ್‌ ತೊರೆದ ಮತ್ತೊಬ್ಬ ಸ್ಟಾರ್ ಆಟಗಾರ

ಐಪಿಎಲ್ ಜೊತೆಗೆ ಪಿಎಸ್‌ಎಲ್ ನಡೆಸಬೇಕೆಂಬ ಹಠಕ್ಕೆ ಬಿದ್ದಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸಂಕಷ್ಟಗಳ ಮೇಲೆ ಸಂಕಷ್ಟಗಳು ಎದುರಾಗುತ್ತಿವೆ. ವಾಸ್ತವವಾಗಿ ಕಳೆದ ಆವೃತ್ತಿಯಿಂದ ಪಾಕಿಸ್ತಾನ ಸೂಪರ್ ಲೀಗ್, ಐಪಿಎಲ್ ಜೊತೆಗೆ ಆರಂಭವಾಗುತ್ತಿದೆ. ಕಳೆದ ಆವೃತ್ತಿಯ ಪಿಎಸ್​ಎಲ್ ಹೆಚ್ಚಿನ ತೊಂದರೆಗಳಿಲ್ಲದೆ ಮುಗಿದಿತ್ತು. ಆದರೆ ಈ ಆವೃತ್ತಿ, ಆರಂಭಕ್ಕೂ ಮುನ್ನವೇ ಸಂಕಷ್ಟಕ್ಕೆ ಸಿಲುಕಿದೆ. ಈ ಬಾರಿಯ ಪಾಕಿಸ್ತಾನ ಸೂಪರ್ ಲೀಗ್ ಮಾರ್ಚ್ 26 ರಂದು ಪ್ರಾರಂಭವಾಗಲಿದೆ. ಆದರೆ ಅದಕ್ಕೂ ಮೊದಲೇ ಅನೇಕ ವಿದೇಶಿ ಆಟಗಾರರು ಈ ಲೀಗ್​ನಿಂದ ತಮ್ಮ ಹೆಸರುಗಳನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಗುತ್ತಿರುವುದು.

ವಿಶ್ವದ ಅತಿದೊಡ್ಡ ಟಿ20 ಲೀಗ್ ಎನಿಸಿಕೊಂಡಿರುವ ಐಪಿಎಲ್‌ನ 19 ನೇ ಸೀಸನ್ ಇದೇ ಮಾರ್ಚ್ 28 ರಂದು ಪ್ರಾರಂಭವಾಗಲಿದೆ. ಆದರೆ ಲೀಗ್ ಆರಂಭಕ್ಕೂ ಮುನ್ನವೇ ಅನೇಕ ಆಟಗಾರರು ಗಾಯದಿಂದಾಗಿ ಈಗಾಗಲೇ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲಿಯಾಗಿ ಬೇರೆ ಆಟಗಾರರನ್ನು ಹುಡುಕುವ ಕೆಲಸವನ್ನು ಫ್ರಾಂಚೈಸಿಗಳು ಮಾಡುತ್ತಿವೆ. ಅದರಂತೆ ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಗದೆ ಪಾಕಿಸ್ತಾನ ಸೂಪರ್ ಲೀಗ್​ನತ್ತ ಮುಖ ಮಾಡಿದ್ದ ಆಟಗಾರರಿಗೆ ಮತ್ತೆ ಐಪಿಎಲ್‌ನಲ್ಲಿ ಆಡಲು ಆಹ್ವಾನ ನೀಡಲಾಗುತ್ತಿದೆ.

ಆರ್​ ಆರ್​ ತಂಡಕ್ಕೆ ದಸುನ್ ಶನಕ

ಪಿಎಸ್‌ಎಲ್​ಗೆ ಹೋಲಿಸಿಕೊಂಡರೆ, ಐಪಿಎಲ್​ನಲ್ಲಿ ಹೆಚ್ಚಿನ ಸಂಬಳ ನೀಡುವ ಕಾರಣ ಆಹ್ವಾನ ಪಡೆದ ಎಲ್ಲಾ ಆಟಗಾರರು ಐಪಿಎಲ್​​ನತ್ತ ಮುಖ ಮಾಡುತ್ತಿದ್ದಾರೆ. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಬಿಸಿ ತುಪ್ಪವಾಗಿದೆ. ಹೀಗೆ ಲೀಗ್ ತೊರೆಯುತ್ತಿರುವ ಆಟಗಾರರ ಮೇಲೆ ಕಾನೂನು ಕ್ರಮದ ಜೊತೆಗೆ ಲೀಗ್​ನಿಂದ ಬ್ಯಾನ್ ಮಾಡುವ ಎಚ್ಚರಿಕೆ ನೀಡಲಾಗುತ್ತಿದೆ. ಆದರೆ ಈ ಎಚ್ಚರಿಕೆಗೆ ತಲೆಕೆಡಿಸಿಕೊಳ್ಳದ ಆಟಗಾರರು ಐಪಿಎಲ್ ಆಡಲು ಮುಂದಾಗಿದ್ದಾರೆ. ಅಂತಹ ಆಟಗಾರರ ಪಟ್ಟಿಗೆ ಇದೀಗ ಶ್ರೀಲಂಕಾದ ಟಿ20 ತಂಡದ ನಾಯಕ ದಸುನ್ ಶನಕ ಕೂಡ ಸೇರಿಕೊಂಡಿದ್ದಾರೆ.

ಈ ಐಪಿಎಲ್ ತಂಡದಲ್ಲಿ ಅವಕಾಶ

ಶ್ರೀಲಂಕಾ ನಾಯಕ ಮತ್ತು ಆಲ್‌ರೌಂಡರ್ ದಸುನ್ ಶನಕ ಮಾರ್ಚ್ 26 ರಂದು ಪ್ರಾರಂಭವಾಗುವ ಪಾಕಿಸ್ತಾನ ಸೂಪರ್ ಲೀಗ್‌ನ 11 ನೇ ಸೀಸನ್‌ನಲ್ಲಿ ಲಾಹೋರ್ ಖಲಂದರ್ಸ್‌ ತಂಡದ ಪರ ಆಡಬೇಕಿತ್ತು. ಹರಾಜಿನಲ್ಲಿ ಶನಕ ಅವರನ್ನು 7.5 ಮಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೆ ಲಾಹೋರ್ ಖಲಂದರ್ಸ್‌ ಖರೀದಿಸಿತ್ತು. ಅದರಂತೆ ಶನಕ ಈ ಪಂದ್ಯಾವಳಿಯಲ್ಲಿ ಆಡಲು ತಯಾರಿ ನಡೆಸುತ್ತಿರುವಾಗಲೇ ಐಪಿಎಲ್‌ ತಂಡದಿಂದ ಬುಲಾವ್ ಬಂದಿದೆ. ವರದಿಗಳ ಪ್ರಕಾರ, ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಶನಕ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದು, ಮಾತುಕತೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಕ್ರಿಕ್‌ಬಜ್ ವರದಿಯ ಪ್ರಕಾರ, ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಅವರ ಬದಲಿಯಾಗಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ, ದಸುನ್ ಶನಕ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಯತ್ನಿಸುತ್ತಿದೆ. ಅದರಂತೆ ಲಂಕಾ ಕ್ರಿಕೆಟ್‌ನೊಂದಿಗೆ ಕೆಲವು ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಿದ ನಂತರ ಶನಕ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುವುದು. ಇಂಗ್ಲೆಂಡ್‌ ಆಲ್‌ರೌಂಡರ್ ಸ್ಯಾಮ್ ಕರನ್ ಗಾಯದಿಂದಾಗಿ ಇಡಿ ಟೂರ್ನಮೆಂಟ್‌ನಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲಿಗೆ ಶನಕ ಆಡಲಿದ್ದಾರೆ.

ಪಿಎಸ್‌ಎಲ್​ಗೆ ಮತ್ತೊಬ್ಬ ವೇಗಿ ಗುಡ್​ ಬೈ?

ಈ ಹಿಂದೆ, ಜಿಂಬಾಬ್ವೆಯ ವೇಗದ ಬೌಲರ್ ಬ್ಲೆಸ್ಸಿಂಗ್ ಮುಜರಬಾನಿ ಪಿಎಸ್‌ಎಲ್‌ನಿಂದ ಹಿಂದೆ ಸರಿದು ನಂತರ ಬದಲಿಯಾಗಿ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡವನ್ನು ಸೇರಿದ್ದರು. ಶನಕ ನಂತರ, ಪಾಕಿಸ್ತಾನಿ ಲೀಗ್‌ನಿಂದ ಮತ್ತೊಬ್ಬ ವಿದೇಶಿ ಆಟಗಾರ ಹಿಂದೆ ಸರಿಯುವ ವದಂತಿಗಳಿವೆ. ಆಸ್ಟ್ರೇಲಿಯಾದ ವೇಗದ ಬೌಲರ್ ಸ್ಪೆನ್ಸರ್ ಜಾನ್ಸನ್, ನಾಥನ್ ಎಲಿಸ್ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಆಡಬಹುದು ಎಂದು ವರದಿಗಳಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶುಕ್ರನ ದೆಸೆಯಿಂದ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಕ್ಷಣ ಕಳೆಯಬಹುದು, ಆದರೆ ಈ ತಪ್ಪು ಮಾಡಬೇಡಿ

ಮಾರ್ಚ್ 22ರಿಂದ ಮಾರ್ಚ್ 28ರವರೆಗೆ ನಾಲ್ಕನೇ ವಾರವಾಗಿದ್ದು ಶುಕ್ರನು ಮೇಷ ರಾಶಿಯನ್ನು ಪ್ರವೇಶಿಸುವನು.‌ ಮಿತ್ರನ ರಾಶಿಯಾದ ಕಾರಣ ಸ್ತ್ರೀ-ಪುರುಷರ ವ್ಯವಹಾರ ದಾರಿ ತಪ್ಪಬಹುದು. ಕುಜನ ಮೇಲೆ ಗುರು ದೃಷ್ಟಿ ಇದ್ದರೂ ಅವಗಡ ಸಾಧ್ಯತೆವಿದೆ. ದಾಂಪತ್ಯದಲ್ಲಿ ಸುಖಮಯ ವಾತಾವರಣ ವೃದ್ಧಿಯಾಗುವುದು.

ಮೇಷ:

ಈ ವಾರ ಪ್ರೇಮ ಜೀವನದಲ್ಲಿ ಉತ್ಸಾಹ ಹೆಚ್ಚಲಿದೆ. ಸಂಗಾತಿಯೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಅವಿವಾಹಿತರಿಗೆ ಹೊಸ ಸಂಬಂಧಗಳು ಕೂಡಿಬರಲಿವೆ. ಹಳೆಯ ಭಿನ್ನಾಭಿಪ್ರಾಯಗಳು ದೂರವಾಗಿ ಬಾಂಧವ್ಯ ಗಟ್ಟಿಯಾಗುವುದು.

​ವೃಷಭ:

ನಿಮಗೆ ಶುಕ್ರನ ಕೃಪೆಯಿಂದ ಪ್ರೇಮ ಸಂಬಂಧಗಳಲ್ಲಿ ಮಧುರತೆ ಇರಲಿದೆ. ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ಲಭಿಸಬಹುದು. ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಲು ಇದು ಸೂಕ್ತ ಸಮಯ. ಪರಸ್ಪರ ನಂಬಿಕೆ ಹೆಚ್ಚಾಗಲಿದೆ.

​ಮಿಥುನ:

ನಿಮ್ಮ ಸಂವಹನದಲ್ಲಿ ಸ್ಪಷ್ಟತೆ ಇರಲಿ. ಸಂಗಾತಿಯ ಭಾವನೆಗಳಿಗೆ ಗೌರವ ನೀಡಿ. ಸಣ್ಣಪುಟ್ಟ ಅಸಮಾಧಾನಗಳು ತಲೆದೂರಬಹುದು, ಆದರೆ ತಾಳ್ಮೆಯಿಂದ ಬಗೆಹರಿಸಿಕೊಳ್ಳಿ. ಪ್ರೇಮಿಗಳಿಗೆ ಹಿರಿಯರ ಬೆಂಬಲ ಸಿಗುವ ಸೂಚನೆ ಇದೆ.

​ಕರ್ಕಾಟಕ:

ಈ ವಾರ ಸಂಬಂಧಗಳಲ್ಲಿ ಭದ್ರತೆ ಮತ್ತು ಪ್ರೀತಿ ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ. ನಿಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಿ. ಹೊಸ ಗೆಳೆತನವು ಪ್ರೇಮವಾಗಿ ಬದಲಾಗುವ ಸಾಧ್ಯತೆ ದಟ್ಟವಾಗಿದೆ.

​ಸಿಂಹ:

ನಿಮಗೆ ಪ್ರೇಮ ಜೀವನದಲ್ಲಿ ಹೊಸ ಚೈತನ್ಯ ಬರಲಿದೆ. ಸಂಗಾತಿಯ ಪ್ರಗತಿಯನ್ನು ಕಂಡು ಹೆಮ್ಮೆ ಪಡುವಿರಿ. ನಿಮ್ಮ ಆಕರ್ಷಣೆ ಹೆಚ್ಚಾಗಲಿದ್ದು, ಸಾಮಾಜಿಕವಾಗಿ ಮನ್ನಣೆ ಸಿಗಲಿದೆ. ಪ್ರೇಮ ವಿವಾಹಕ್ಕೆ ಮನೆಯಲ್ಲಿ ಮಾತುಕತೆ ನಡೆಸಬಹುದು.

​ಕನ್ಯಾ:

ನೀವು ಸಂಬಂಧಗಳಲ್ಲಿ ಪ್ರಾಯೋಗಿಕತೆ ವಿಚಾರವನ್ನು ಯೋಚಿಸುವಿರಿ. ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ. ಅನಗತ್ಯ ವಾದಗಳನ್ನು ತಪ್ಪಿಸುವುದು ಒಳಿತು. ದೂರದ ಪ್ರಯಾಣವು ನಿಮ್ಮ ಸಂಬಂಧಕ್ಕೆ ಹೊಸ ತಿರುವು ನೀಡಬಹುದು.

​ತುಲಾ:

ಶುಕ್ರನ ಸ್ವಕ್ಷೇತ್ರದ ಪ್ರಭಾವದಿಂದ ಪ್ರೇಮ ಜೀವನ ಅತ್ಯಂತ ಸುಂದರವಾಗಿರಲಿದೆ. ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಕ್ಷಣಗಳನ್ನು ಕಳೆಯುವಿರಿ. ವಿವಾಹ ಅಪೇಕ್ಷಿತರಿಗೆ ಶುಭ ವಾರ್ತೆ ಕೇಳಿಬರಲಿದೆ. ಮನಸ್ಸು ಪ್ರಫುಲ್ಲವಾಗಿರುತ್ತದೆ.

​ವೃಶ್ಚಿಕ:

ಭಾವನಾತ್ಮಕವಾಗಿ ಸ್ವಲ್ಪ ಏರಿಳಿತ ಇರಬಹುದು. ಸಂಗಾತಿಯನ್ನು ಸಂಶಯಿಸಬೇಡಿ. ಸಮಾಧಾನದಿಂದ ವರ್ತಿಸಿದರೆ ಸಂಬಂಧ ಸುಧಾರಿಸುತ್ತದೆ. ಒಂಟಿಯಾಗಿರುವವರಿಗೆ ಆಕರ್ಷಕ ವ್ಯಕ್ತಿಯ ಭೇಟಿಯಾಗುವ ಸಾಧ್ಯತೆ ಇದೆ.

​ಧನುಸ್ಸು:

ಸಂಬಂಧಗಳಲ್ಲಿ ಹೊಸತನವನ್ನು ಬಯಸುವಿರಿ. ಹಳೆಯ ಗೆಳೆಯರಿಂದ ಪ್ರೇಮ ಪ್ರಸ್ತಾವನೆ ಬರಬಹುದು. ಸಂಗಾತಿಯೊಂದಿಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ. ಪ್ರೀತಿ ಮತ್ತು ವಿಶ್ವಾಸ ದುಪ್ಪಟ್ಟಾಗುವ ವಾರವಿದು.

​ಮಕರ:

ಪ್ರೇಮ ಸಂಬಂಧಗಳಲ್ಲಿ ಸ್ಥಿರತೆ ಇರಲಿದೆ. ಸಂಗಾತಿಗೆ ನಿಮ್ಮ ಬೆಂಬಲ ಅಗತ್ಯವಿರಬಹುದು. ಜವಾಬ್ದಾರಿಗಳ ನಡುವೆಯೂ ಪ್ರೀತಿಗೆ ಸಮಯ ನೀಡುವಿರಿ. ಪರಸ್ಪರರ ಕುಟುಂಬದವರೊಂದಿಗೆ ಉತ್ತಮ ಬಾಂಧವ್ಯ ಏರ್ಪಡಲಿದೆ.

​ಕುಂಭ:

ಪ್ರೇಮ ಜೀವನದಲ್ಲಿ ಸಂಭ್ರಮದ ವಾತಾವರಣವಿರುತ್ತದೆ. ನಿಮ್ಮ ಪ್ರೀತಿಯನ್ನು ಆಪ್ತರಿಗೆ ತಿಳಿಸಲು ಇದು ಸಕಾಲ. ಸೃಜನಾತ್ಮಕ ಕೆಲಸಗಳ ಮೂಲಕ ಸಂಗಾತಿಯನ್ನು ಮೆಚ್ಚಿಸುವಿರಿ. ಅವಿವಾಹಿತರಿಗೆ ಸಂಬಂಧಗಳು ನಿಶ್ಚಯವಾಗಬಹುದು.

​ಮೀನ:

ಶುಕ್ರನ ಅನುಗ್ರಹದಿಂದ ಪ್ರೇಮ ಜೀವನ ಹಸನಾಗಲಿದೆ. ಮನಸ್ಸಿನ ಆಸೆಗಳು ಈಡೇರಲಿವೆ. ಸಂಗಾತಿಯ ಸಲಹೆಗಳು ನಿಮಗೆ ಲಾಭ ತರಲಿವೆ. ಒಟ್ಟಾರೆಯಾಗಿ ಈ ವಾರ ಪ್ರೀತಿಯ ಸುಧೆ ಹರಿಯಲಿದೆ.
​ಈ ವಾರ ನಿಮ್ಮ ಪ್ರೇಮ ಸಂಬಂಧವು ಹೊಸ ಆಯಾಮಗಳನ್ನು ನೀಡಲಿ.

– ಲೋಹಿತ ಹೆಬ್ಬಾರ್

Source link

ಕಾಂಗ್ರೆಸ್‌ಗೆ ತಟ್ಟಿದ ಬಂಡಾಯದ ಬಿಸಿ; ಸಮರ್ಥ್ ಶಾಮನೂರು ನಾಮಪತ್ರಕ್ಕೆ ಜಮೀರ್ ಗೈರು, ಸಾದಿಕ್ ಪೈಲ್ವಾನ್ ಅಖಾಡಕ್ಕೆ

ದಾವಣಗೆರೆ (ಮಾರ್ಚ್ 23): ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಂಗೇರಿದ್ದು, ಇಂದು (ಮಾರ್ಚ್ 23) ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಆದರೆ, ಈ ಪ್ರಮುಖ ಕಾರ್ಯಕ್ರಮದಿಂದ ಸಚಿವ ಜಮೀರ್ ಅಹಮದ್ ಖಾನ್ ದೂರ ಉಳಿದಿರುವುದು ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಮಧ್ಯೆ ಕಾಂಗ್ರೆಸ್ ಬಂಡಾಯದ ಅಭ್ಯರ್ಥಿಯಾಗಿ ಮುಸ್ಲಿಂ ಸಮುದಾಯದ ಸಾದಿಕ್ ಪೈಲ್ವಾನ್ ಸಹ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಮುಸ್ಲಿಂ ಸಮುದಾಯ ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದೆ.

ಮುಸ್ಲಿಮ್ ಸಮುದಾಯದ ಟಿಕೆಟ್​​​ಗೆ ಬೇಡಿಕೆ ಇಟ್ಟಿತ್ತು. ಆದ್ರೆ, ಟಿಕೆಟ್ ಕೈತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಾದಿಕ್ ಪೈಲ್ವಾನ್, ಸ್ವಪಕ್ಷದ ವಿರುದ್ಧವೇ ತೊಡೆತಟ್ಟಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸವಾಲು ಹಾಕಿದ್ದಾರೆ.

Source link

ಬೆಳಗಾವಿ: ಪ್ರೀತಿಸಿ ಮದುವೆಯಾದ ಹೆಂಡತಿಗೆ ಚಟ್ಟಕಟ್ಟಿದ ಪತಿ

ಬೆಳಗಾವಿ, ಮಾರ್ಚ್​​ 23: ಹೆಂಡತಿ ಮಲಗಿರುವಾಗಲೇ ಎಳೆದೊಯ್ದು ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿ ಗಂಡ ಬರ್ಬರವಾಗಿ ಹತ್ಯೆ (kill) ಮಾಡಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ. ತಾಯಿಗೆ ಬೈದಿದ್ದಕ್ಕೆ ಮತ್ತು ಪತ್ನಿ ಶೀಲ ಶಂಕಿಸಿ ಕೊಲೆ  ಬಸವರಾಜ ಜೋಡಳ್ಳಿಯಿಂದ ಶಿವಕ್ಕ ಜೋಡಳ್ಳಿ( 33)ಯ ಕೊಲೆ ಮಾಡಲಾಗಿದೆ. ಈ ಭಯಾನಕ ಘಟನೆಗೆ ಗೋವನಕೊಪ್ಪ ಗ್ರಾಮವೇ ಬೆಚ್ಚಿಬಿದ್ದಿದೆ. ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೀತಿಸಿ ಮದುವೆಯಾದ ಹೆಂಡತಿಗೆ ಚಟ್ಟಕಟ್ಟಿದ ಪತಿ

ಮೊದಲ ಗಂಡ ಅಕಾಲಿಕ ಮರಣದ ನಂತರ ಶಿವಕ್ಕ ಬಸವರಾಜ ಜೋಡಳ್ಳಿಯನ್ನ ಪ್ರೀತಿಸಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಇಬ್ಬರು 15 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದರು. ಆದರೆ ಗಂಡನ ಕಿರುಕುಳಕ್ಕೆ ಬೇಸತ್ತ ಶಿವಕ್ಕ ತನ್ನಿಬ್ಬರು ಮಕ್ಕಳ ಜೊತೆಗೆ ಪ್ರತ್ಯೇಕವಾಗಿ ಮಠವೊಂದರಲ್ಲಿ ವಾಸವಾಗಿದ್ದರು.

ಇದನ್ನೂ ಓದಿ: 2 ವರ್ಷದಿಂದ ಮದುವೆಗೆ ದುಂಬಾಲು: ಯುವಕ ಕೊನೆಗೆ ಯುವತಿಗೆ ಮಾಡಿದ್ದೇನು ಗೊತ್ತಾ?

ಇಬ್ಬರು ಮಕ್ಕಳ ಜೊತೆಗೆ ವಾಸವಾಗಿದ್ದ ಶಿವಕ್ಕ, ಮೊದಲ‌ ಮಗಳನ್ನ ಗಂಡನ ಮನೆಯಲ್ಲಿ ಬಿಟ್ಟಿದ್ದಳು. ಮಗಳನ್ನ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಅಂತಾ ಅತ್ತೆ ಜೊತೆಗೆ ಫೊನ್​​ನಲ್ಲಿ ಜಗಳವಾಡಿದ್ದಾರೆ. ತಾಯಿಗೆ ಬೈದಿದ್ದಕ್ಕೆ ಮತ್ತು ಪತ್ನಿ ಶೀಲ ಶಂಕಿಸಿ ಶಿವಕ್ಕ ಮಲಗಿದಾಗಲೇ ಎಳೆದೊಯ್ದು ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆ ಮೂಲಕ ಪ್ರೀತಿಸಿ ಮದುವೆಯಾದ ಹೆಂಡತಿಗೆ ಪತಿ ಚಟ್ಟ ಕಟ್ಟಿದ್ದಾನೆ.

ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು 

ಇನ್ನು ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಪ್ರತಿಕ್ರಿಯಿಸಿದ್ದು, ಬೆಳಗ್ಗೆ ಸುಮಾರು 7:30ರ ಸುಮಾರಿಗೆ ಘಟನೆ  ನಡೆದಿದೆ. ಮೊದಲು ಪತ್ನಿ ಮೇಲೆ ಹಲ್ಲೆ ಮಾಡಿದ್ದು, ನಂತರ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಕಲ್ಲಿನಿಂದ ಬಜ್ಜಿ ಕೊಂದಿದ್ದಾನೆ. ಈ ದಂಪತಿಗೆ ಇಬ್ಬರು ಗಂಡು ಹಾಗೂ ಒಬ್ಬಳು ಹೆಣ್ಣು ಮಗಳಿದ್ದಾಳೆ. ಹೆಣ್ಣು ಮಗಳು ಸದ್ಯ ಅವರ ತಾಯಿಯ ಸಹೋದರನ ಬಳಿ ಇದ್ದಾಳೆ.

ಇದನ್ನೂ ಓದಿ: ಗಾಂಜಾ ಅಮಲು: ಸಿನಿಮೀಯ ರೀತಿಯಲ್ಲಿ ಅಪಹರಿಸಿ ಸ್ನೇಹಿತನನ್ನೇ ಕೊಂದು ಶವ ಸುಟ್ಟ ದುಷ್ಟರು

ಪತಿ ಬಸವರಾಜ್ ಜೋಡಳ್ಳಿ ವೃತ್ತಿಯಲ್ಲಿ ಡ್ರೈವರ್ ಆಗಿದ್ದಾನೆ. ಈ ದಂಪತಿ ಆಗಾಗ ಜಗಳವಾಡುತ್ತಿದ್ದು, ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. ಜಗಳದಿಂದಾಗಿ ಪತಿ ಊರು ಬಿಟ್ಟು ಹೋಗಿದ್ದ. ಇತ್ತೀಚೆಗಷ್ಟೇ ಗ್ರಾಮಕ್ಕೆ ಮರಳಿದ್ದ. ಕಳೆದ ಎರಡು-ಮೂರು ವರ್ಷಗಳಿಂದ ಇಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಒಂದಂಕಿಯಲ್ಲಿ ಕುಂಟಿದ ‘ಉಸ್ತಾದ ಭಗತ್ ಸಿಂಗ್’ ಕಲೆಕ್ಷನ್; ‘ಹರಿ ಹರ ವೀರ ಮಲ್ಲು’ಗಿಂತ ಹೀನಾಯ

ಪವನ್ ಕಲ್ಯಾಣ್ ನಟನೆಯ ‘ಉಸ್ತಾದ ಭಗತ್ ಸಿಂಗ್’ ಸಿನಿಮಾದ ಗಳಿಕೆ ಹೀನಾಯ ಮಟ್ಟ ತಲುಪಿದೆ. ನಾಲ್ಕು ದಿನಕ್ಕೆ ಚಿತ್ರ ಅಂದುಕೊಂಡಷ್ಟು ಗಳಿಕೆ ಮಾಡಿಲ್ಲ. ನಾಲ್ಕು ದಿನಕ್ಕೆ 60 ಕೋಟಿ ರೂಪಾಯಿ ಗಳಿಕೆ ದಾಟಲು ಕೂಡ ಚಿತ್ರದ ಬಳಿ ಸಾಧ್ಯವಾಗಿಲ್ಲ. ಇನ್ನು, ಎರಡನೇ ದಿನದಿಂದ ಸಿಂಗಲ್ ಡಿಜಿಟಲ್​ನಲ್ಲೇ ಸಿನಿಮಾ ಕುಂಟುತ್ತಾ ಸಾಗುತ್ತಿದೆ. ಈ ಮೊದಲು ರಿಲೀಸ್ ಆಗಿ ಸೋತ ‘ಹರಿ ಹರ ವೀರ ಮಲ್ಲು’ ಚಿತ್ರಕ್ಕಿಂತ ಈ ಸಿನಿಮಾದ ಸ್ಥಿತಿ ಹೀನಾಯವಾಗಿದೆ.

‘ಧುರಂಧರ್ 2’ ಸಿನಿಮಾ ಸೂಪರ್ ಹಿಟ್ ಆಗಿದೆ. ಉತ್ತರ ಭಾರತ ಮಾತ್ರವಲ್ಲದೆ, ದಕ್ಷಿಣ ಭಾರತದಲ್ಲೂ ಸಿನಿಮಾ ಅಬ್ಬರಿಸುತ್ತಿದೆ. ಈ ಸಿನಿಮಾ ರಿಲೀಸ್ ಆದ ದಿನವೇ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ತೆರೆಗೆ ಬಂತು.‘ಧುರಂಧರ್ 2’ ಪ್ರಭಾವ ‘ಉಸ್ತಾದ್ ಭಗತ್ ಸಿಂಗ್’ ಮೇಲೆ ಆಗುತ್ತಿದೆ. ಪವನ್ ಚಿತ್ರ ಮೊದಲ ದಿನ 34 ಕೋಟಿ ರೂಪಾಯಿ ಗಳಿಕೆ ಮಾಡಿತು. ಆದರೆ, ದಿನ ಕಳೆದಂತೆ ಸಿನಿಮಾದ ಅಬ್ಬರ ಕಡಿಮೆ ಆಗಿದೆ. ಭಾನುವಾರವೂ ಚಿತ್ರ ಡಬಲ್ ಡಿಜಿಟ್ ಗಳಿಸಲು ಸಾಧ್ಯವಾಗುತ್ತಿಲ್ಲ.

ಭಾರತದಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ 60 ಕೋಟಿ ರೂಪಾಯಿ ಗಳಿಸಿದೆ. ಮೊದಲ ದಿನ ಈ ಚಿತ್ರ 34 ಕೋಟಿ ರೂಪಾಯಿ ಗಳಿಸಿದ್ದಷ್ಟೇ ಬಂತು. ಶುಕ್ರವಾರ ಸಿನಿಮಾ 9 ಕೋಟಿ ರೂಪಾಯಿ ಗಳಿಸಿತು. ಶನಿವಾರ ಕೂಡ 9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಚಿತ್ರ ಎಂದರೆ, ಭಾನುವಾರ ಕೂಡ ಚಿತ್ರಕ್ಕೆ 8 ಕೋಟಿ ರೂಪಾಯಿ ಗಳಿಕೆ ಆಗಿದೆ.

ಸಿನಿಮಾಗೆ ಮೊದಲ ದಿನ 4,607 ಶೋ ನೀಡಲಾಗಿದೆ. ಎರಡನೇ ದಿನ 3,447, ಮೂರನೇ ದಿನ 3,340 ಹಾಗೂ ಭಾನುವಾರ 3200 ಶೋಗಳನ್ನು ಮಾತ್ರ ನೀಡಲಾಗಿದೆ. ದಿನಕಳೆದಂತೆ ಸಿನಿಮಾಗೆ ಶೋಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಇದನ್ನು ‘ಧುರಂಧರ್ 2’ ಚಿತ್ರಕ್ಕೆ ನೀಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಸದ್ದಿಲ್ಲದೆ ಒಟಿಟಿಗೆ ಬಂತು ‘ಹರಿ ಹರ ವೀರ ಮಲ್ಲು’: ಎಲ್ಲಿ ನೋಡಬಹುದು?

ಇತ್ತೀಚೆಗೆ ರಿಲೀಸ್ ಆದ ‘ಹರಿ ಹರ ವೀರ ಮಲ್ಲು’ ಚಿತ್ರ ಹೀನಾಯವಾಗಿ ಸೋತಿತ್ತು. ಈ ಸಿನಿಮಾ ಕೂಡ ಮೊದಲ ದಿನ 34 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಭಾನುವಾರ ರೀ ಚಿತ್ರದ ಗಳಿಕೆ ಕೊಂಚವಾದರೂ ಏರಿತ್ತು. ಆದರೆ, ‘ಉಸ್ತಾದ್ ಭಗತ್ ಸಿಂಗ್’ ಚಿತ್ರಕ್ಕೆ ಹಾಗಾಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಧುರಂಧರ್ 2 ಸಿನಿಮಾ ರಿಯಾಲಾ? ಎಸ್‌ಪಿ ಅಸ್ಲಾಂ ಸಾವಿನ ದೃಶ್ಯದ ಹಿಂದೆ ಅಡಗಿದೆ 2014ರ ಭೀಕರ ನೈಜ ಘಟನೆ!

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವುದಷ್ಟೇ ಅಲ್ಲದೆ, ಅದರ ‘ಪೀಕ್ ಡಿಟೇಲಿಂಗ್’ (Peak Detailing) ನಿಂದಾಗಿ ಸಿನೆಮಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ಎಸ್‌ಪಿ ಅಸ್ಲಾಂ ಅವರ ಹತ್ಯೆಯ ದೃಶ್ಯವು 2014ರಲ್ಲಿ ನಡೆದ ನೈಜ ಘಟನೆಯನ್ನು ಯಥಾವತ್ತಾಗಿ ಪ್ರತಿಬಿಂಬಿಸಿದೆ ಎಂಬುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸಿನಿಮಾದಲ್ಲಿ ಎಸ್‌ಪಿ ಅಸ್ಲಾಂ ಅವರನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯ ಪ್ರತಿಯೊಂದು ಹಂತವು  2014ರ ಸಿಸಿಟಿವಿ/ಡ್ಯಾಶ್‌ಕ್ಯಾಮ್ ದೃಶ್ಯಗಳನ್ನೇ ಹೋಲುತ್ತದೆ. ನಿರ್ದೇಶಕ ಆದಿತ್ಯ ಧರ್ ಅವರು ಈ ದೃಶ್ಯಕ್ಕಾಗಿ ತಿಂಗಳುಗಟ್ಟಲೆ ಸಂಶೋಧನೆ ನಡೆಸಿದ್ದಾರೆ. ವಾಸ್ತವದಲ್ಲಿ ನಡೆದ ಗುಂಡಿನ ಚಕಮಕಿ, ದಾಳಿಕೋರರ ಚಲನವಲನ ಮತ್ತು ಅಂದಿನ ಭೀಕರ ವಾತಾವರಣವನ್ನು ಸಿನಿಮಾದಲ್ಲಿ ಮರುಸೃಷ್ಟಿಸಲಾಗಿದೆ. 2014ರ ಆ ನೈಜ ವಿಡಿಯೋ ಮತ್ತು ಸಿನಿಮಾದ ಕ್ಲಿಪ್‌ಗಳನ್ನು ಒಟ್ಟಾಗಿ ಸೇರಿಸಿ ನೆಟ್ಟಿಗರು “Masterpiece Research” ಎಂದು ಶ್ಲಾಘಿಸುತ್ತಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರೀಕ್ಷೆ ತ್ಯಜಿಸಿ ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ಕರೆತಂದ ಅಧಿಕಾರಿಗಳು!

ಗದಗ, ಮಾರ್ಚ್​ 23: ಬಡತನದ ಕಾರಣದಿಂದ ಹಲವಡೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳನ್ನು ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಾರೆ. ಓದಿ, ಪರೀಕ್ಷೆ ಬರೆದು ವಿದ್ಯಾವಂತರಾಗಬೇಕಾದ ಸಮಯದಲ್ಲಿ ಕುಟುಂಬಕ್ಕೆ ನೆರವಾಗಿ ಶಿಕ್ಷಣದಿಂದ (Education) ವಂಚಿತರಾಗುತ್ತಾರೆ. ಇದೇ ರೀತಿಯ ಘಟನೆ ಗದಗದಲ್ಲೂ ನಡೆದಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳ ನಡೆಗೆ ಈಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಜ್ಞಾನ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದ ವಿದ್ಯಾರ್ಥಿನಿ

ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದಲ್ಲಿ ಬಡತನದ ಕಾರಣ ಎಸ್‌ಎಸ್‌ಎಲ್‌ಸಿ ಪರೀಕ್ಷೆ ತ್ಯಜಿಸಿ ಕೂಲಿ ಕೆಲಸಕ್ಕೆ ತೆರಳಿದ್ದ ವಿದ್ಯಾರ್ಥಿನಿಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಹುಡುಕಿ ಕರೆತಂದು ಪರೀಕ್ಷೆ ಬರೆಸಿದ ಘಟನೆ ನಡೆದಿದೆ.

ಪಲ್ಲವಿ ಹಳ್ಳಿಕೇರಿ ಎಂಬ ವಿದ್ಯಾರ್ಥಿನಿ ಮುಂಡರಗಿ ತಾಲೂಕಿನ ಬರದೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದಳು. ಮುಂಡರಗಿ ಪಟ್ಟಣದ ವಿಜಿ ಲಿಂಬಿಕಾಯಿ ಶಿಕ್ಷಣ ಸಂಸ್ಥೆಯಲ್ಲಿ ಪರೀಕ್ಷಾ ಕೇಂದ್ರ ನಿಗದಿಯಾಗಿತ್ತು. ಆದರೆ ಮನೆಯ ಆರ್ಥಿಕ ಸಂಕಷ್ಟದಿಂದ ಪಲ್ಲವಿ ದ್ರಾಕ್ಷಿ ತೋಟಕ್ಕೆ ಕೂಲಿ ಕೆಲಸಕ್ಕೆ ತೆರಳಿದ್ದಳು.

ಇದನ್ನೂ ಓದಿ ಮಕ್ಕಳ ಬಾಳಲ್ಲಿ ಶಾಲಾ ಆಡಳಿತ ಮಂಡಳಿ ಚೆಲ್ಲಾಟ: ಪರೀಕ್ಷೆಯಿಂದ ವಂಚಿತರಾದ SSLC ವಿದ್ಯಾರ್ಥಿಗಳು

ಈ ವಿಚಾರ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ಅವರು ತಕ್ಷಣ ಕ್ರಮ ಕೈಗೊಂಡು, ವಿದ್ಯಾರ್ಥಿನಿಯನ್ನು ಮನವೊಲಿಸಿ ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ನಂತರ ಆಕೆ ವಿಜ್ಞಾನ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದಿದ್ದಾಳೆ.ಅಧಿಕಾರಿಗಳ ಈ ಮಾನವೀಯ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

PM Modi on Fertilizers: ಭಾರತದಲ್ಲಿ ಸಾಕಷ್ಟು ರಸಗೊಬ್ಬರ ದಾಸ್ತಾನಿದೆ, ರೈತರಿಗೆ ತೊಂದರೆಯಾಗಲು ಬಿಡುವುದಿಲ್ಲ: ಮೋದಿ ಭರವಸೆ

ನವದೆಹಲಿ, ಮಾರ್ಚ್​ 23: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವ ಕಾರಣ ಎಲ್​ಪಿಜಿ, ಪೆಟ್ರೋಲ್ ಹಾಗೂ ರಸಗೊಬ್ಬರಗಳ ಮೇಲೆ ಸ್ವಲ್ಪ ಪ್ರಮಾಣದ ಪರಿಣಾಮ ಬೀರಿದೆ. ಆದರೆ ದೇಶದಲ್ಲಿ ರಸಗೊಬ್ಬರಗಳ ಸಾಕಷ್ಟು ಸಂಗ್ರಹವಿದ್ದು, ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಭರವಸೆ ನೀಡಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರೈತರು ಈಗ ಡೀಸೆಲ್ ಮೇಲಿನ ಅವಲಂಬನೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಜಾಗತಿಕ ಆರ್ಥಿಕತೆ ಮೇಲೆ ದುಷ್ಪರಿಣಾಮ
ಯುದ್ಧವು ಇಡೀ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ, ಹೆಚ್ಚಿನ ಪ್ರಮಾಣದ ಕಚ್ಚಾ ತೈಲ ಮತ್ತು ಅನಿಲ ಮಧ್ಯಪ್ರಾಚ್ಯದಿಂದ ಬರುತ್ತಿದೆ, ಆದ್ದರಿಂದ ಈ ಯುದ್ಧದ ಬಗ್ಗೆ ಭಾರತದ ಕಳವಳ ಸಹಜ. ಯುದ್ಧ ಪ್ರಾರಂಭವಾದಾಗಿನಿಂದ, ಪೀಡಿತ ದೇಶಗಳಲ್ಲಿರುವ ಪ್ರತಿಯೊಬ್ಬ ಭಾರತೀಯರಿಗೂ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗಿದೆ ಎಂದರು.
ಪಶ್ಚಿಮ ಏಷ್ಯಾದ ಪರಿಸ್ಥಿತಿ ಚಿಂತಾಜನಕವಾಗಿದೆ, ಈ ಬಿಕ್ಕಟ್ಟನ್ನು ಆದಷ್ಟು ಬೇಗ ಕೊನೆಗೊಳಿಸಲು ಪರಿಹಾರ ಕಂಡುಕೊಳ್ಳುವಂತೆ ಇಡೀ ಜಗತ್ತಿಗೆ ಮನವಿ ಮಾಡಲಾಗಿದೆ.

ಪಶ್ಚಿಮ ಏಷ್ಯಾದ ಸ್ಥಿತಿ ಚಿಂತಾಜನಕ
ಪಶ್ಚಿಮ ಏಷ್ಯಾದ ಪ್ರಸ್ತುತ ಪರಿಸ್ಥಿತಿ ಚಿಂತಾಜನಕವಾಗಿದೆ, ಕಳೆದ ಎರಡು ಮೂರು ವಾರಗಳಲ್ಲಿ, ವಿದೇಶಾಂಗ ಸಚಿವ ಜೈಶಂಕರ್ ಮತ್ತು ಸಚಿವ ಹರ್ದೀಪ್ ಪುರಿ ಈ ವಿಷಯದ ಬಗ್ಗೆ ಸಂಸತ್ತಿಗೆ ಪ್ರಮುಖ ಮಾಹಿತಿಯನ್ನು ಒದಗಿಸಿದ್ದಾರೆ. ಈ ಬಿಕ್ಕಟ್ಟು ಈಗ ಮೂರು ವಾರಗಳಿಗೂ ಹೆಚ್ಚು ಕಾಲ ಮುಂದುವರೆದಿದೆ. ಇದು ಜಾಗತಿಕ ಆರ್ಥಿಕತೆ ಮತ್ತು ಜನರ ಜೀವನದ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತಿದೆ. ಆದ್ದರಿಂದ, ಇಡೀ ಜಗತ್ತು ಎಲ್ಲಾ ಪಕ್ಷಗಳು ಈ ಬಿಕ್ಕಟ್ಟನ್ನು ಸಾಧ್ಯವಾದಷ್ಟು ಬೇಗ ಪರಿಹರಿಸುವಂತೆ ಒತ್ತಾಯಿಸುತ್ತಿದೆ.

ಹಾರ್ಮುಜ್ ಜಲಸಂಧಿ
ಕಚ್ಚಾ ತೈಲ, ಅನಿಲ ಮತ್ತು ರಸಗೊಬ್ಬರಗಳು ಹಾರ್ಮುಜ್ ಜಲಸಂಧಿಯ ಮೂಲಕ ಭಾರತಕ್ಕೆ ಬರುತ್ತವೆ, ಈ ಪ್ರದೇಶದ ಮೂಲಕ ಹಡಗುಗಳು ಪ್ರಯಾಣಿಸಲು ಕಷ್ಟಪಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಸರಬರಾಜುಗಳಿಗೆ ಅಡ್ಡಿಯಾಗದಂತೆ ಭಾರತ ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ. ದೇಶದ ಸಾಮಾನ್ಯ ನಾಗರಿಕರು ಯಾವುದೇ ಸಮಸ್ಯೆಗಳನ್ನು ಎದುರಿಸಬಾರದು. ಭಾರತವು ತನ್ನ ಎಲ್‌ಪಿಜಿಯ 60 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ, ದೇಶದಲ್ಲಿ ಅದರ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ.

ಮತ್ತಷ್ಟು ಓದಿ: ಲೋಕಸಭೆಯಲ್ಲಿ ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಪ್ರಧಾನಿ ಮೋದಿ ಮಾತು

ಸರ್ಕಾರವು ವಿವಿಧ ದೇಶಗಳ ಪೂರೈಕೆದಾರರೊಂದಿಗೆ ಸಂಪರ್ಕದಲ್ಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ತೈಲ ಮತ್ತು ಅನಿಲ ಸರಬರಾಜು ಸಾಧ್ಯವಾದಲ್ಲೆಲ್ಲಾ ಹರಿಯುವಂತೆ ನೋಡಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ. ಕೊಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರ್ಯಾಯ ಮಾರ್ಗಗಳ ಮೇಲೆ ಸರ್ಕಾರ ನಿಗಾ ಇಡುತ್ತಿದೆ. ಎಲ್ಲಾ ಅಗತ್ಯ ವಸ್ತುಗಳು ಭಾರತವನ್ನು ಸುರಕ್ಷಿತವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನಾವು ಶ್ರಮಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಹಲವಾರು ಹಡಗುಗಳು ಭಾರತಕ್ಕೆ ಬಂದಿವೆ.

ಯುದ್ಧಪೀಡಿತ ರಾಷ್ಟ್ರಗಳೊಂದಿಗೆ ಭಾರತ ವ್ಯಾಪಕ ವ್ಯಾಪಾರ ಸಂಬಂಧ ಹೊಂದಿದೆ
ಈ ಯುದ್ಧವು ಭಾರತಕ್ಕೆ ಅಭೂತಪೂರ್ವ ಸವಾಲುಗಳನ್ನು ಒಡ್ಡಿದೆ. ಈ ಸವಾಲುಗಳು ಆರ್ಥಿಕ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮತ್ತು ಮಾನವೀಯವಾಗಿವೆ. ಯುದ್ಧದಲ್ಲಿರುವ ಮತ್ತು ಯುದ್ಧದಿಂದ ಪ್ರಭಾವಿತವಾಗಿರುವ ದೇಶಗಳೊಂದಿಗೆ ಭಾರತವು ವ್ಯಾಪಕವಾದ ವ್ಯಾಪಾರ ಸಂಬಂಧವನ್ನು ಹೊಂದಿದೆ. ಈ ಯುದ್ಧ ನಡೆಯುತ್ತಿರುವ ಪ್ರದೇಶವು ಪ್ರಪಂಚದಾದ್ಯಂತದ ಇತರ ದೇಶಗಳೊಂದಿಗೆ ನಮ್ಮ ವ್ಯಾಪಾರಕ್ಕೆ ಪ್ರಮುಖ ಮಾರ್ಗವಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಈ ಪ್ರದೇಶವು ನಮ್ಮ ಕಚ್ಚಾ ತೈಲ ಮತ್ತು ಅನಿಲ ಅಗತ್ಯಗಳಲ್ಲಿ ಹೆಚ್ಚಿನ ಭಾಗವನ್ನು ಪೂರೈಸುತ್ತದೆ.

ಯುದ್ಧದಲ್ಲಿ ಮೃತಪಟ್ಟ ಭಾರತೀಯರ ಕುಟುಂಬಗಳಿಗೆ ಸಹಾಯ 
ಈ ಯುದ್ಧ ಪ್ರಾರಂಭವಾದಾಗಿನಿಂದ, ಪೀಡಿತ ಪ್ರದೇಶಗಳಲ್ಲಿರುವ ಪ್ರತಿಯೊಬ್ಬ ಭಾರತೀಯನಿಗೂ ಅಗತ್ಯ ನೆರವು ನೀಡಲಾಗಿದೆ. ನಾನು ವೈಯಕ್ತಿಕವಾಗಿ ಪಶ್ಚಿಮ ಏಷ್ಯಾದ ಹೆಚ್ಚಿನ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಎರಡು ಸುತ್ತಿನ ಫೋನ್ ಕರೆಗಳ ಮೂಲಕ ಮಾತನಾಡಿದ್ದೇನೆ. ಎಲ್ಲರೂ ಭಾರತೀಯರ ಸುರಕ್ಷತೆಯ ಸಂಪೂರ್ಣ ಭರವಸೆ ನೀಡಿದ್ದಾರೆ. ದುರದೃಷ್ಟವಶಾತ್, ಈ ಸಮಯದಲ್ಲಿ ಕೆಲವರು ದುರಂತವಾಗಿ ಸಾವನ್ನಪ್ಪಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ. ಇಂತಹ ಕಠಿಣ ಸಂದರ್ಭಗಳಲ್ಲಿ, ಅವರ ಕುಟುಂಬಗಳಿಗೆ ಸಹಾಯವನ್ನು ನೀಡಲಾಗುತ್ತಿದೆ.

ಪೂರೈಕೆಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆ
ಸರ್ಕಾರವು ಸೂಕ್ಷ್ಮ, ಜಾಗರೂಕ ಮತ್ತು ಎಲ್ಲಾ ಸಹಾಯವನ್ನು ನೀಡಲು ಸಿದ್ಧವಾಗಿದೆ. ಭಾರತವು ಹಾರ್ಮುಜ್ ಜಲಸಂಧಿಯ ಮೂಲಕ ಕಚ್ಚಾ ತೈಲ, ಅನಿಲ ಮತ್ತು ರಸಗೊಬ್ಬರಗಳು ಸೇರಿದಂತೆ ಹೆಚ್ಚಿನ ಪ್ರಮಾಣದ ಅಗತ್ಯ ಸರಕುಗಳನ್ನು ಪಡೆಯುತ್ತದೆ. ಯುದ್ಧದ ನಂತರ, ಜಲಸಂಧಿಯ ಮೂಲಕ ಸಾಗಣೆ ಹೆಚ್ಚು ಸವಾಲಿನದಾಗಿದೆ. ಇದರ ಹೊರತಾಗಿಯೂ, ನಮ್ಮ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ಅನಿಲದ ಸರಬರಾಜಿನ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರದಂತೆ ನೋಡಿಕೊಳ್ಳುವತ್ತ ಗಮನಹರಿಸಿದೆ. ಕೊರೊನಾ ಸಮಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಸಮಸ್ಯೆಗಳನ್ನು ಎದುರಿಸಿದಂತೆ ಈಗಲೂ ಕೂಡ ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದರು.

 

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

Source link

Exit mobile version