Video: ಅಜ್ಜ-ಅಜ್ಜಿ ಜತೆ ಬೈಕ್​​ನಲ್ಲಿ ಕುಳಿತಿದ್ದ 4 ವರ್ಷದ ಬಾಲಕಿಯ ಅಪಹರಣ – Kannada News | CCTV Captures Alleged Daylight Abduction of Child in Mohali

ಮೊಹಾಲಿ, ಮೇ 21: ಪಂಜಾಬ್‌ನ ಮೊಹಾಲಿ ಜಿಲ್ಲೆಯ ಕುರಾಲಿಯಲ್ಲಿ ಇಡೀ ಸಮಾಜವೇ ಬೆಚ್ಚಿಬೀಳುವಂತಹ ಆಘಾತಕಾರಿ ಘಟನೆಯೊಂದು ನಡೆದಿದ್ದು, ನಾಲ್ಕೂವರೆ ವರ್ಷದ ಹೆಣ್ಣು ಮಗುವನ್ನು ಹಗಲು ಹೊತ್ತಿನಲ್ಲೇ ನಡುರಸ್ತೆಯಲ್ಲಿ ಅಪಹರಿಸಲಾಗಿದೆ. ಈ ಭೀಕರ ದೃಶ್ಯವು ಸ್ಥಳೀಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದೆ. ವರದಿಗಳ ಪ್ರಕಾರ, ಮಗು ತನ್ನ ಅಜ್ಜ-ಅಜ್ಜಿಯೊಂದಿಗೆ ಬೈಕ್​​ನಲ್ಲಿ ಮನೆಯ ಸಮೀಪ ಬಂದಿದೆ. ಅಜ್ಜಿ ಬೈಕ್​ನಿಂದ ಇಳಿದು ಮನೆಯ ಗೇಟ್ ತೆರೆಯಲು ಹೋಗಿದ್ದಾರೆ, ಆಗ ದುಷ್ಕರ್ಮಿಗಳು ಮಗುವನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಕಾರಿನೊಳಗೆ ತಳ್ಳಿದ್ದಾರೆ.

ಕಣ್ಣೆದುರೇ ಮೊಮ್ಮಗಳನ್ನು ಅಪಹರಿಸುತ್ತಿರುವುದನ್ನು ಕಂಡು ಆತಂಕಗೊಂಡ ವೃದ್ಧ ದಂಪತಿ, ಕಾರನ್ನು ತಡೆಯಲು ಅದರ ಮುಂದೆ ನಿಂತು ಶಕ್ತಿಮೀರಿ ಯತ್ನಿಸಿದ್ದಾರೆ. ಆದರೆ, ವಿಕೃತ ಮನಸ್ಸಿನ ಆ ಕಾರು ಚಾಲಕ ವೃದ್ಧ ದಂಪತಿಗಳ ಮೇಲೆಯೇ ಕಾರನ್ನು ಚಲಾಯಿಸಲು ಯತ್ನಿಸಿ, ಅಲ್ಲಿಂದ ಮಗುವಿನೊಂದಿಗೆ ಜಾಗ ಖಾಲಿ ಮಾಡಿದ್ದಾನೆ.

ಈ ಘಟನೆಯಿಂದ ಇಡೀ ವಸತಿ ಪ್ರದೇಶದಲ್ಲಿ ಭಯ ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ಆರಂಭಿಸಿದ್ದಾರೆ. ಅಪಹರಣಕಾರರ ಕರಾಳ ಜಾಲವನ್ನು ಪತ್ತೆಹಚ್ಚಲು ಮತ್ತು ಮಗುವನ್ನು ಸುರಕ್ಷಿತವಾಗಿ ರಕ್ಷಿಸಲು ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ತೀವ್ರವಾಗಿ ಜಾಲಾಡುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Monday Devotion: ಎಲ್ಲಾ ಕಷ್ಟಗಳಿಂದ ಶೀಘ್ರ ಪರಿಹಾರ ಪಡೆಯಲು 3 ಸೋಮವಾರ ಈ ರೀತಿ ಮಾಡಿ – Kannada News | The Three Monday Devotion: A Universal Solution for Your Challenges

ಕಷ್ಟಗಳಿಂದ ಶೀಘ್ರ ಪರಿಹಾರImage Credit source: Pinterest

ಮಾನವನ ಬದುಕಿನಲ್ಲಿ ಸಮಸ್ಯೆಗಳು ನಿರಂತರ. ಹಳೆಯ ಸಮಸ್ಯೆಗಳು, ಹೊಸ ಸಮಸ್ಯೆಗಳು, ಮತ್ತು ಭವಿಷ್ಯದಲ್ಲಿ ಬರಬಹುದಾದ ಕಷ್ಟಗಳು ಜೀವನದ ಭಾಗವಾಗಿವೆ. ಪ್ರತಿಯೊಬ್ಬರಿಗೂ ಯಾವುದಾದರೂ ಒಂದು ಸಮಸ್ಯೆ ಇದ್ದೇ ಇರುತ್ತದೆ. ಆದರೆ, ಈ ಸಮಸ್ಯೆಗಳಿಗೆ ಭಗವಂತನೇ ಪರಿಹಾರಗಳನ್ನೂ ನೀಡಿದ್ದಾನೆ ಎನ್ನುವುದು ಆಧ್ಯಾತ್ಮಿಕ ನಂಬಿಕೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಇಂದು ತಿಳಿಸಲಾಗುವ ಪರಿಹಾರವು ಯಾವುದೇ ಖರ್ಚಿಲ್ಲದೆ, ಯಾರನ್ನೂ ಅವಲಂಬಿಸದೆ, ಎಲ್ಲರೂ ಆಚರಿಸಬಹುದಾದ ಒಂದು ಪುಟ್ಟ ತಂತ್ರವಾಗಿದೆ. ಇದು ಶಕ್ತಿವಂತ ಮತ್ತು ಸರ್ವರಿಗೂ ಅನ್ವಯಿಸುವ ಪರಿಹಾರ. ಇದಕ್ಕೆ ಯಾವುದೇ ಜಾತಿ, ಮತ, ಭೇದ, ಅರ್ಹತೆ ಅಥವಾ ನಿರ್ದಿಷ್ಟ ಪರಿಕರಗಳ ಅಗತ್ಯವಿಲ್ಲ. ಹಣಕಾಸಿನ ಸಮಸ್ಯೆ, ಆರೋಗ್ಯದ ಸಮಸ್ಯೆ, ಉದ್ಯೋಗದ ಸಮಸ್ಯೆ, ವಿದ್ಯೆಯ ಸಮಸ್ಯೆ, ವಿವಾಹದ ಸಮಸ್ಯೆ, ಮನೆ ಕಟ್ಟಿಕೊಳ್ಳುವ ಸಮಸ್ಯೆ, ಪ್ರಯಾಣಕ್ಕೆ ಅಡ್ಡಿಗಳು, ಶತ್ರು ಕಾಟ ಹೀಗೆ ನೂರಾರು ಸಮಸ್ಯೆಗಳಿಗೆ ಈ ಪರಿಹಾರವು ಅನ್ವಯಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಕಷ್ಟಗಳಿಗೆ ಶೀಘ್ರವಾಗಿ ಮತ್ತು ವೆಚ್ಚರಹಿತವಾಗಿ ಪರಿಹಾರವನ್ನು ಬಯಸುತ್ತಾರೆ.

ನಮ್ಮ ಸಮಸ್ಯೆಗಳಿಗೆ ಕರ್ಮಫಲವೂ ಒಂದು ಕಾರಣವೆಂದು ಶಾಸ್ತ್ರಗಳು ಹೇಳುತ್ತವೆ. ಪೂರ್ವಜನ್ಮದ ಕರ್ಮಗಳು ನಮ್ಮನ್ನು ಈಗ ಕಾಡಿಸುತ್ತಿರಬಹುದು. ಆದರೆ, ಈ ಕರ್ಮಫಲವನ್ನೂ ನಿವಾರಿಸುವ ಶಕ್ತಿ ಈ ಪರಿಹಾರಕ್ಕಿದೆ. ಪರಶಿವನು ಬೋಳಾಶಂಕರ. ಅವರು ಲಯಕಾರಕ ಮತ್ತು ಮನಸ್ಸು ಮಾಡಿದರೆ ಏನು ಬೇಕಾದರೂ ಕೊಡಬಲ್ಲರು. ಶಿವನು ಯಾರಿಗಾಗಿಯೂ ಕಾಯುವುದಿಲ್ಲ; ಸ್ವಇಚ್ಛೆಯಿಂದ ಬೇಗ ಆಶೀರ್ವಾದವನ್ನು ನೀಡುವವನು.

ಈ ಪರಿಹಾರವು “ಓಂ ನಮಃ ಶಿವಾಯ” ಮಂತ್ರದ ಶಕ್ತಿಯ ಮೇಲೆ ಆಧಾರಿತವಾಗಿದೆ. ಕೇವಲ ಮೂರು ಸೋಮವಾರಗಳ ಕಾಲ ಈ ವಿಧಾನವನ್ನು ಅನುಸರಿಸಬೇಕು. ಪುರುಷರು, ಸ್ತ್ರೀಯರು, ವೃದ್ಧರು ಅಥವಾ ಮಕ್ಕಳು ಯಾರಾದರೂ ಇದನ್ನು ಆಚರಿಸಬಹುದು. ಯಾವುದೇ ನಿರ್ದಿಷ್ಟ ಆಹಾರ ಪದ್ಧತಿಯ ನಿಯಮಗಳಿಲ್ಲ, ಆದರೆ ಮನಸ್ಸಿನ ಶುದ್ಧತೆ ಮುಖ್ಯ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಮೂರು ಸೋಮವಾರಗಳಂದು ಸಂಧ್ಯಾಕಾಲದಲ್ಲಿ, ಅಂದರೆ ಸಾಯಂಕಾಲ 6 ಗಂಟೆ 5 ನಿಮಿಷದಿಂದ 8 ಗಂಟೆ 30 ನಿಮಿಷದೊಳಗೆ ಈ ಪರಿಹಾರವನ್ನು ಮಾಡಬೇಕು. ಮೊದಲು ಶುದ್ಧವಾಗಿ ಕೈ ಕಾಲು ಮುಖ ತೊಳೆದು ಅಥವಾ ಸ್ನಾನ ಮಾಡಿ. ನಂತರ, 2 ಇಂಚು ಅಳತೆಯ ಸಣ್ಣ ಶಿವಲಿಂಗವನ್ನು ತೆಗೆದುಕೊಳ್ಳಿ. ಈ ಶಿವಲಿಂಗವು ಸ್ಪಟಿಕದ್ದಾಗಿರಲಿ ಅಥವಾ ಮಣ್ಣಿನದ್ದಾಗಿರಲಿ, ಸ್ವತಃ ತಯಾರಿಸಿದ ಮಣ್ಣಿನ ಲಿಂಗವೂ ಉತ್ತಮ ಎಂದು ಹೇಳಲಾಗುತ್ತದೆ. ಪೂರ್ವಾಭಿಮುಖವಾಗಿ ಕುಳಿತು, ಶಿವಲಿಂಗಕ್ಕೆ ಭಸ್ಮಾಭಿಷೇಕ ಮಾಡಿ. ಅಂಗಡಿಗಳಲ್ಲಿ ಸಿಗುವ ವಿಭೂತಿ ಪುಡಿಯನ್ನು ತಂದು, ಅದನ್ನು ಬೆರಳಿನಿಂದ ಸ್ಪರ್ಶಿಸದೆ, ಇನ್ನೊಂದು ವಿಧಾನದಿಂದ ಲಿಂಗದ ಮೇಲೆ ಅರ್ಪಿಸಿ ಅಭಿಷೇಕ ಮಾಡಬೇಕು. ಭಸ್ಮವನ್ನು ಅರ್ಪಿಸುವಾಗ ನಿರಂತರವಾಗಿ “ಓಂ ನಮಃ ಶಿವಾಯ” ಮಂತ್ರವನ್ನು ಜಪಿಸಬೇಕು.

ಈ ಮೂರು ಸೋಮವಾರಗಳಂದು ಮಾಂಸಾಹಾರ ಅಥವಾ ಮಧ್ಯಪಾನವನ್ನು ತ್ಯಜಿಸುವುದು ಮನಸ್ಸಿನ ಶುದ್ಧತೆಗೆ ಉತ್ತಮ. ಈ ಪರಿಹಾರವನ್ನು ನಂಬಿಕೆಯಿಂದ ಆಚರಿಸಿದಲ್ಲಿ, ಮೊದಲ ಸೋಮವಾರದ ನಂತರವೇ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲು ಪ್ರಾರಂಭಿಸುತ್ತದೆ. ಎರಡನೇ ಸೋಮವಾರಕ್ಕೆ ಹೆಚ್ಚಿನ ಪರಿಹಾರ ಕಂಡುಬಂದು, ಮೂರನೇ ಸೋಮವಾರದ ವೇಳೆಗೆ ಕಷ್ಟಕರವಾದ ಸಮಸ್ಯೆಗಳಿಗೂ ಸುಲಭವಾಗಿ ಪರಿಹಾರ ದೊರೆಯುತ್ತದೆ ಎಂದು ನಂಬಲಾಗಿದೆ. ಆದರೆ, ಈ ಪರಿಹಾರವು ಧರ್ಮಬದ್ಧವಾಗಿರಬೇಕು ಎಂಬುದನ್ನು ನೆನಪಿಡಿ. ಕೇವಲ “ಓಂ ನಮಃ ಶಿವಾಯ” ಮಂತ್ರ, ವಿಭೂತಿ ಮತ್ತು 2 ಇಂಚಿನ ಶಿವಲಿಂಗ – ಇಷ್ಟೇ ಇದಕ್ಕೆ ಬೇಕಾಗಿರುವುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:02 am, Thu, 21 May 26

Source link

ಕೆಲಸ ಸಿಕ್ಕಿತೆಂದು ಖುಷಿಯಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ದೆಹಲಿಗೆ ಹೋದ್ರೆ ಅಲ್ಲಿ ಆಫೀಸೇ ಇರ್ಲಿಲ್ವಂತೆ – Kannada News | Delhi Job Offer Turns Into Nightmare for IIM Graduate

ನವದೆಹಲಿ, ಮೇ 21: ಕೆಲಸ(Job) ಸಿಕ್ಕಿದ ಖುಷಿಯಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ದೆಹಲಿಗೆ ಹೋದ ಯುವತಿಗೆ ಕಾದಿತ್ತು ನಿರಾಸೆ, ಸೋಮವಾರ ಬೆಳಗ್ಗೆ ಬೇಗ ಆಫೀಸ್ ಇರುವ ಜಾಗಕ್ಕೆ ಹೋದರೆ ಆ ಹೆಸರಿನ ಕಂಪನಿಯೇ ಅಲ್ಲಿರದಿರುವುದನ್ನು ಕಂಡು ಬೇಸರವಾಗಿತ್ತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಬೋಧ್ ಗಯಾದ ಎಂಬಿಎ ಪದವೀಧರೆಯಾದ ಸಾನ್ಯಾ, ತನಗೆ ಸಿಕ್ಕ ಉದ್ಯೋಗದ ಆಫರ್‌ನಿಂದಾಗಿ ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ‘ಪಿಐಬಿ ವಿಮಾ ಬ್ರೋಕರ್ಸ್’ (PIB Insurance Brokers) ಕಂಪನಿಯಿಂದ ಅಧಿಕೃತ ಆಫರ್ ಲೆಟರ್ ಮತ್ತು ಕೆಲಸಕ್ಕೆ ಸೇರುವ ದಿನಾಂಕವನ್ನು ಪಡೆದ ನಂತರವೇ ಸಾನ್ಯಾ ಅವರು ದೆಹಲಿಗೆ ತೆರಳಿದ್ದರು. ತನ್ನ ಕೆಲಸ ಸುರಕ್ಷಿತವಾಗಿದೆ ಎಂದು ನಂಬಿ, ಹೊಸ ನಗರಕ್ಕೆ ಒಂಟಿಯಾಗಿ ಬಂದ ಅವರು ಸ್ಥಳಾಂತರ ಮತ್ತು ವಸತಿಗಾಗಿ ಸುಮಾರು 75,000 ರೂಪಾಯಿಗಳನ್ನು ಖರ್ಚು ಮಾಡಿದ್ದರು.

ವಿಳಾಸಕ್ಕೆ ಹೋದರೆ ಕಂಪನಿಯೇ ಇಲ್ಲ!
ಮೇ 4 ರಂದು ಕಂಪನಿ ಒದಗಿಸಿದ್ದ ಕಚೇರಿ ವಿಳಾಸಕ್ಕೆ ಸನ್ಯಾ ತಲುಪಿದಾಗ ಅವರಿಗೆ ದೊಡ್ಡ ಆಘಾತ ಕಾದಿತ್ತು. ಆ ಜಾಗದಲ್ಲಿ ಯಾವುದೇ ಕಚೇರಿ ಇರಲಿಲ್ಲ, ಸುಮಾರು ಎರಡು ಗಂಟೆಗಳ ಕಾಲ ಕಚೇರಿಯ ಹೊರಗೆ ಕಾಯುತ್ತಾ ಕಂಪನಿ ಪ್ರತಿನಿಧಿಗಳಿಗೆ ಪದೇ ಪದೇ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ, ಆ ಕಚೇರಿ ಜಾಗದ ಗುತ್ತಿಗೆ (Lease) ಎಂದೋ ಮುಗಿದುಹೋಗಿದೆ ಎಂಬ ಕಹಿ ಸತ್ಯ ಅವರಿಗೆ ತಿಳಿಯಿತು. ಆದರೂ ಕಂಪನಿಯು ಆನ್‌ಬೋರ್ಡಿಂಗ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಸುಳ್ಳು ಭರವಸೆ ನೀಡುತ್ತಾ, ಸೇರ್ಪಡೆ ಪ್ರಕ್ರಿಯೆಯನ್ನು ವಾರಗಟ್ಟಲೆ ಮುಂದೂಡುತ್ತಾ ಬಂತು. ಅಂತಿಮವಾಗಿ ಜುಲೈ ವರೆಗೆ ಯಾವುದೇ ಕೆಲಸ ಇರುವುದಿಲ್ಲ ಎಂದು ಕಂಪನಿ ಕೈತೊಳೆದುಕೊಂಡಿತು.

ಕರೆ ಬ್ಲಾಕ್ ಮಾಡಿದ ಸಿಇಒ, ನೆರವಾದ ಐಐಎಂ ಕಮಿಟಿ
ಈ ವೇಳೆಗೆ ದೆಹಲಿಯ ಜೀವನ ವೆಚ್ಚ ಹಾಗೂ ಸ್ಥಳಾಂತರಕ್ಕಾಗಿ ಸಾನ್ಯಾ ತಮ್ಮ ಉಳಿತಾಯದ ಬಹುಭಾಗವನ್ನು ಕಳೆದುಕೊಂಡಿದ್ದರು. ತಾವು ಮಾಡಿದ ವೆಚ್ಚದ ಮರುಪಾವತಿಯನ್ನು (Refund) ಕೇಳಿದಾಗ, ಕಂಪನಿಯ ಸಿಇಒ ಸನ್ಯಾ ಅವರ ಸಂದೇಶಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದರು. ಅಷ್ಟೇ ಅಲ್ಲದೆ, ಅವರ ಫೋನ್ ನಂಬರ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬ್ಲಾಕ್ ಮಾಡಿದ್ದರು.

ಮತ್ತಷ್ಟು ಓದಿ: ಮೊದಲಿಗೆ ವರ್ಕ್ ಫ್ರಂ ಹೋಮ್, ನಂತರ ಬೆಳ್ಳಂಬೆಳಗ್ಗೆ ಇಮೇಲ್ ಶಾಕ್; ಮೆಟಾದಲ್ಲಿ 8,000 ಮಂದಿಗೆ ಕೆಲಸದಿಂದ ಕೊಕ್

ತನ್ನ ವೃತ್ತಿಜೀವನದ ಆರಂಭದಲ್ಲೇ ಇಂತಹ ಭೀಕರ ಅನುಭವದಿಂದ ಬಳಲಿದ್ದ ಅವರಿಗೆ, ಕೊನೆಗೂ ಅವರು ಓದಿದ ಐಐಎಂ ಬೋಧ್ ಗಯಾದ ಉದ್ಯೋಗ ನಿಯೋಜನೆ ಸಮಿತಿಯು (Placement Committee) ಕ್ಯಾಂಪಸ್ ಸೆಲೆಕ್ಷನ್ ಮೂಲಕ ಮತ್ತೊಂದು ಉತ್ತಮ ಉದ್ಯೋಗದ ಅವಕಾಶವನ್ನು ಪಡೆಯಲು ಸಹಾಯ ಮಾಡಿತು.

ಯುವತಿ ತಮ್ಮ ಈ ಕಹಿ ಅನುಭವವನ್ನು ಲಿಂಕ್ಡ್‌ಇನ್‌ನಲ್ಲಿ (LinkedIn) ಹಂಚಿಕೊಂಡ ತಕ್ಷಣ, ಆ ಪೋಸ್ಟ್ ವೈರಲ್ ಆಗಿ ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಸ್ಟಾರ್ಟ್‌ಅಪ್‌ಗಳ ಬೇಜವಾಬ್ದಾರಿ ನೇಮಕಾತಿ ಮತ್ತು ಉದ್ಯೋಗಕ್ಕಾಗಿ ಹೊಸ ನಗರಗಳಿಗೆ ಸ್ಥಳಾಂತರಗೊಳ್ಳುವಾಗ ಯುವ ವೃತ್ತಿಪರರು ಎದುರಿಸುವ ಅಪಾಯಗಳ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ನನಗೂ ಹೀಗೆಯೇ ಉದ್ಯೋಗದ ವಿಷಯದಲ್ಲಿ ಹೆಚ್‌ಆರ್ (HR) ತಿಂಗಳುಗಟ್ಟಲೆ ಕಾಯಿಸಿ ಮೋಸ ಮಾಡಿದ್ದರು ಎಂದು ಮತ್ತೊಬ್ಬ ಉದ್ಯೋಗಾಕಾಂಕ್ಷಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಐಪಿಎಲ್​ನಲ್ಲಿ ಹೊಸ ಇತಿಹಾಸ ಬರೆದ ಮನೀಶ್ ಪಾಂಡೆ

Source link

ಫ್ರೀಯಾಗಿ ನೆಟ್​​ಫ್ಲಿಕ್ಸ್​​ ಪಡೆಯಲು ಹೋಗಿ 1 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ: ಆಗಿದ್ದೇನು? – Kannada News | Free Netflix Trap: Bengaluru Man Downloads Fake App, Loses 1 Lakh To Cyber Fraudsters

ಬೆಂಗಳೂರು, ಮೇ 21: ಅಮೆಜಾನ್​​ ಪ್ರೈಮ್​, ಹಾಟ್​​​ಸ್ಟಾರ್​​, ನೆಟ್​​ಫ್ಲಿಕ್ಸ್​​ ಹೀಗೆ ಹತ್ತಾರು ಒಟಿಟಿಗಳು ಇಂದು ಮಾರುಕಟ್ಟೆಯನ್ನು ಆಳುತ್ತಿವೆ. ಹೊಸ ಸಿನಿಮಾ, ಧಾರಾವಾಹಿಗಳು ಸೇರಿ ಹಲವು ಚಾನೆಲ್​​ಗಳಿಗಿಂತ ಇಲ್ಲೇ ಮೊದಲು ಸಿಗುವ ಕಾರಣ ಇವುಗಳ ಚಂದಾದಾರರ ಸಂಖ್ಯೆಯೂ ದೊಡ್ಡದ್ದಿದೆ. ಆದರೆ ಹಲವು ಒಟಿಟಿಗಳ ಚಂದಾದಾರರಾಗಲು ಹೆಚ್ಚಿನ ಹಣ ವ್ಯಯಿಸಬೇಕಿರುವ ಕಾರಣ ಕೆಲವರು ಬೇರೆ ಏನಾದರೂ ಬೇರೆ ದಾರಿ ಇದೆಯಾ ಎಂದು ಹುಡುಕುವ ಕೆಲಸಕ್ಕೂ ಇಳಿಯುತ್ತಿದ್ದಾರೆ. ಇಂತಹುದೇ ಮಾಡಲು ಹೋಗಿ ಬೆಂಗಳೂರಿನ ವ್ಯಕ್ತಿಯೋರ್ವರು ಬರೋಬ್ಬರಿ 1 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.

ಉಚಿತ OTT ಸೇವೆ ನೀಡುವುದಾಗಿ ಹೇಳಿದ ‘ಟ್ಯೂಬಿ’ (Tuby) ಮೊಬೈಲ್ ಆಪ್ ಡೌನ್‌ಲೋಡ್ ಮಾಡಿದ ಪರಿಣಾಮ 35 ವರ್ಷದ ಅಂಗಡಿ ವ್ಯವಸ್ಥಾಪಕರೊಬ್ಬರು ಯಾಮಾರಿದ್ದಾರೆ. ಶಿವಾಜಿನಗರದ ಸುಗಂಧ ದ್ರವ್ಯ ಅಂಗಡಿಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ, ರಿಚ್ಮಂಡ್ ಟೌನ್ ನಿವಾಸಿಯಾಗಿರುವ ಸಯ್ಯದ್ ವಸೀಂ ಅಹ್ಮದ್ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ವೀಕ್ಷಿಸುತ್ತಿದ್ದ ವೇಳೆ ಅವರಿಗೆ ‘ಟ್ಯೂಬಿ’ ಆಪ್ ಲಿಂಕ್ ಕಾಣಿಸಿಕೊಂಡಿತ್ತು. ಮೇ 18ರಂದು ಅವರು ಆಪ್ ಡೌನ್‌ಲೋಡ್ ಮಾಡಿದ್ದರು. ಆದರೆ ಆಪ್ ಇನ್‌ಸ್ಟಾಲ್ ಮಾಡಿದ ಕೆಲವೇ ಕ್ಷಣಗಳಲ್ಲಿ ವಂಚಕರು ಅವರ ಬ್ಯಾಂಕ್ ಖಾತೆ ಮಾಹಿತಿಗೆ ಪ್ರವೇಶ ಪಡೆದು, ಅನಧಿಕೃತ ವಹಿವಾಟುಗಳ ಮೂಲಕ 1 ಲಕ್ಷ ಹಣವನ್ನು ದೋಚಿದ್ದಾರೆ. ಈ ಬಗ್ಗೆ ಗೊತ್ತಾಗುತ್ತಲೇ ಬ್ಯಾಂಕ್​​ ಸಂಪರ್ಕಿಸಿದ ಅವರು, ಉಳಿದ ಹಣವನ್ನು ತಂದೆಯ ಖಾತೆಗೆ ವರ್ಗಾಯಿಸಿದ್ದಾರೆ. ಬಳಿಕ ಈ ಬಗ್ಗೆ ಅಶೋಕ್ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಇದು ಪಕ್ಕಾ ಸಿನಿಮೀಯ ವಂಚನೆ! ಡಿಸೈನ್ ಸೆಲೆಕ್ಟ್ ಮಾಡಿ ಫೋಟೋ ತೆಗೆಯೋ ನೆಪದಲ್ಲಿ 3 ಕೋಟಿ ರೂ. ಚಿನ್ನಾಭರಣ ದೋಚಿ ಖದೀಮರು ಪರಾರಿ

ನಕಲಿ ಆಫರ್‌ಗಳ ಬಗ್ಗೆ ಇರಲಿ ಎಚ್ಚರಿಕೆ

ಬೆಂಗಳೂರು ನಗರದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆಯೇ, ವಂಚಕರು ಈಗ ನಕಲಿ OTT ಸಬ್‌ಸ್ಕ್ರಿಪ್ಷನ್ ಆಫರ್‌ಗಳು ಹಾಗೂ ಆಪ್‌ಗಳ ಮೂಲಕ ಜನರನ್ನು ಗುರಿಯಾಗಿಸುತ್ತಿದ್ದಾರೆ. ಉಚಿತ ಅಥವಾ ಕಡಿಮೆ ದರದಲ್ಲಿ ಸಿನಿಮಾಗಳು, ವೆಬ್ ಸೀರಿಸ್ ಹಾಗೂ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಅವಕಾಶ ನೀಡುವುದಾಗಿ ಹೇಳಿ ಜನರನ್ನು ಸೆಳೆಯುತ್ತಾರೆ. ಆದರೆ ಇಂತಹ ಆಪ್‌ಗಳು ಬ್ಯಾಂಕಿಂಗ್ ವಿವರಗಳು, OTP ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಕದಿಯಲು ವಿನ್ಯಾಸಗೊಳಿಸಲ್ಪಟ್ಟಿರುತ್ತವೆ ಎಂದು ಸೈಬರ್ ಅಪರಾಧ ತಜ್ಞರೊಬ್ಬರು ತಿಳಿಸಿದ್ದಾರೆ. ಪ್ಲೇ ಸ್ಟೋರ್‌ನಿಂದ ಯಾವುದೇ ಆಪ್ ಡೌನ್‌ಲೋಡ್ ಮಾಡುವ ಮೊದಲು ಅದರ ರಿವ್ಯೂ, ರೇಟಿಂಗ್ ಹಾಗೂ ಡೌನ್‌ಲೋಡ್ ಸಂಖ್ಯೆಯನ್ನು ಪರಿಶೀಲಿಸಬೇಕು. ವಂಚಕ ಆಪ್‌ಗಳಲ್ಲಿ ನಕಲಿ ವಿಮರ್ಶೆಗಳು ಹಾಗೂ ಅನುಮಾನಾಸ್ಪದ ಅನುಮತಿಗಳು ಇರಬಹುದು. SMS, ಸಂಪರ್ಕಗಳು, ಗ್ಯಾಲರಿ ಅಥವಾ ಬ್ಯಾಂಕಿಂಗ್ ಮಾಹಿತಿಗೆ ಅನಗತ್ಯ ಪ್ರವೇಶ ಕೇಳುವ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಬಾರದು ಎಂದು ಎಚ್ಚರಿಕೆ ನೀಡಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:18 am, Thu, 21 May 26

Source link

‘ಕಿರಾತಕ’ ಸುಂದರಿ ಓವಿಯಾ ಈಗೇನು ಮಾಡುತ್ತಿದ್ದಾರೆ? ಇಲ್ಲಿದೆ ವಿವರ

Source link

ಪಾಕಿಸ್ತಾನದಲ್ಲಿ ಕುಳಿತು ಪಹಲ್ಗಾಮ್​ನಲ್ಲಿ ಲಷ್ಕರ್ ಉಗ್ರರು ಭಯೋತ್ಪಾದಕ ದಾಳಿ ನಡೆಸಿದ್ಹೇಗೆ? ಎನ್​ಐಎ ಚಾರ್ಜ್​ಶೀಟ್​​ನಲ್ಲೇನಿದೆ? – Kannada News | National Investigation Agency Chargesheet Details Alleged Cross Border Role in Pahalgam Attack

ನವದೆಹಲಿ, ಮೇ 21: ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಪಹಲ್ಗಾಮ್​(Pahalgam)ನಲ್ಲಿ 2025ರ ಏಪ್ರಿಲ್​ನಲ್ಲಿ 26 ಪ್ರವಾಸಿಗರನ್ನು ಬಲಿ ಪಡೆದಿದ್ದ ಭಯೋತ್ಪಾದಕ ದಾಳಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದಿಂದಲೇ ನಿಯಂತ್ರಿಸಲಾಗಿತ್ತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನ್ಯಾಯಾಲಯಕ್ಕೆ ಸಲ್ಲಿಸಿರುವ ತನ್ನ ಚಾರ್ಜ್‌ಶೀಟ್‌ನಲ್ಲಿ ಬಹಿರಂಗಪಡಿಸಿದೆ.

ಲಾಹೋರ್‌ನಿಂದ ರಿಯಲ್-ಟೈಮ್ ಕಮಾಂಡ್ ನೀಡಿದ್ದ ಲಂಗ್ಡಾ
ಲಷ್ಕರ್-ಎ-ತೊಯ್ಬಾ (LeT) ಮತ್ತು ಅದರ ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರ ಸೈಫುಲ್ಲಾ ಅಲಿಯಾಸ್ ಸಾಜಿದ್ ಜಟ್ ಅಲಿಯಾಸ್ ‘ಲಂಗ್ಡಾ’ ಈ ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದ.
ಪಾಕಿಸ್ತಾನದ ಲಾಹೋರ್​​ನಲ್ಲಿ ಕುಳಿತುಕೊಂಡು ಈತ ಭಾರತಕ್ಕೆ ನುಸುಳಿದ್ದ ಮೂವರು ಉಗ್ರರಾದ ಫೈಸಲ್ ಜಟ್, ಹಬೀಬ್ ತಾಹಿರ್ ಮತ್ತು ಹಮ್ಜಾ ಅಫ್ಘಾನಿಗೆ ದಾಳಿ ನಡೆಸಲು ಬೈಸರನ್ ಕಣಿವೆಯ ನೈಜ-ಸಮಯದ ಸ್ಥಳ ಮಾಹಿತಿ ಹಾಗೂ ನಿರ್ದೇಶನಗಳನ್ನು ನೀಡುತ್ತಿದ್ದ.

ಇವರಿಗೆ ಪರ್ವೇಜ್ ಮತ್ತು ಬಶೀರ್ ಎಂಬ ಇಬ್ಬರು ಸ್ಥಳೀಯರು ನೆರವಾಗಿದ್ದರು. ತನಿಖೆಯ ವೇಳೆ ಉಗ್ರರಿಂದ ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳನ್ನು ಪಾಕಿಸ್ತಾನದ ಲಾಹೋರ್ ಮತ್ತು ಕರಾಚಿಯಿಂದ ಖರೀದಿಸಿರುವುದು ತಾಂತ್ರಿಕ ತನಿಖೆಯಲ್ಲಿ ಸಾಬೀತಾಗಿದೆ.

ಜಗತ್ತನ್ನು ದಾರಿ ತಪ್ಪಿಸಲು ನೋಡಿದ ಪಾಕಿಸ್ತಾನ

ದಾಳಿಯ ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದಾಗ, ಪಾಕಿಸ್ತಾನವು ಜಗತ್ತನ್ನು ದಾರಿ ತಪ್ಪಿಸಲು ಹೊಸ ನಾಟಕವಾಡಿತ್ತು. ದಾಳಿಯ ಹೊಣೆ ಹೊತ್ತಿದ್ದ ಟೆಲಿಗ್ರಾಮ್ ಚಾನೆಲ್ ಹ್ಯಾಕ್ ಆಗಿತ್ತೆಂದು ಸುಳ್ಳು ಹೇಳಿ, ಇದು ಭಾರತವೇ ಮಾಡಿದ್ದು ಎಂದು ಸುಳ್ಳಿನ ಕತೆ ಹೆಣೆಯಲು ಯತ್ನಿಸಿತು. ಆದರೆ, ಎನ್‌ಐಎ ನಡೆಸಿದ ತಾಂತ್ರಿಕ ತನಿಖೆಯಲ್ಲಿ ಈ ಟೆಲಿಗ್ರಾಮ್ ಚಾನೆಲ್‌ಗಳು ಪಾಕಿಸ್ತಾನದ ರಾವಲ್ಪಿಂಡಿ ಮತ್ತು ಖೈಬರ್ ಪಖ್ತುಂಖ್ವಾದಿಂದಲೇ ಕಾರ್ಯನಿರ್ವಹಿಸುತ್ತಿದ್ದವು ಎಂಬುದು ಪತ್ತೆಯಾಗಿದೆ.

ಮತ್ತಷ್ಟು ಓದಿ: Pahalgam Attack: ಹಸಿರು ಕಣಿವೆಯಲ್ಲಿ ಹರಿಯಿತು ಅಮಾಯಕರ ರಕ್ತ: ವರ್ಷ ಕಳೆದರೂ ಚೇತರಿಸಿಕೊಳ್ಳದ ಪಹಲ್ಗಾಮ್ ಸಂತ್ರಸ್ತ ಕುಟುಂಬಗಳು

ಭಾರತದ ದಿಟ್ಟ ಪ್ರತಿಕಾರ: ಆಪರೇಷನ್ ಸಿಂಧೂರ್
ಈ ಭೀಕರ ಪ್ರವಾಸಿಗರ ಹತ್ಯಾಕಾಂಡಕ್ಕೆ ಭಾರತ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಈ ದಾಳಿಯು ಭಾರತದ ಅತ್ಯಂತ ರಹಸ್ಯ ಹಾಗೂ ನಿರ್ಣಾಯಕ ಮಿಲಿಟರಿ ಕಾರ್ಯಾಚರಣೆ ‘ಆಪರೇಷನ್ ಸಿಂಧೂರ್’ ಅನ್ನು ಪ್ರಚೋದಿಸಿತು. ಭಾರತೀಯ ವಾಯುಪಡೆಯು (IAF) ಅತ್ಯಾಧುನಿಕ ಗ್ಲೈಡ್ ಬಾಂಬ್‌ಗಳು, ಡ್ರೋನ್‌ಗಳು ಮತ್ತು ಅತ್ಯಂತ ಶಕ್ತಿಶಾಲಿ ‘ಬ್ರಹ್ಮೋಸ್’ ಕ್ರೂಸ್ ಕ್ಷಿಪಣಿಗಳ ಮೂಲಕ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಲಷ್ಕರ್-ಎ-ತೊಯ್ಬಾದ ಉಡಾವಣಾ ನೆಲೆಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿತು. ಈ ಮೂಲಕ ಪಾಕಿಸ್ತಾನದ ವಾಯು ರಕ್ಷಣೆ ಮತ್ತು ಪ್ರಮುಖ ಮಿಲಿಟರಿ ಮೂಲಸೌಕರ್ಯಗಳನ್ನು ಭಾರತೀಯ ಸೇನೆ ಯಶಸ್ವಿಯಾಗಿ ದುರ್ಬಲಗೊಳಿಸಿ, ತಕ್ಕ ಪಾಠ ಕಲಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Karnataka Air Quality: ಮಳೆರಾಯನ ಕೃಪೆಯಿಂದ ನಿಟ್ಟುಸಿರು ಬಿಟ್ಟ ಬೆಂಗಳೂರಿಗರು; ಇಂದು ರಾಜ್ಯದ ಬಹುತೇಕ ನಗರಗಳಲ್ಲಿ ಗಾಳಿಯ ಮಟ್ಟದಲ್ಲಿ ‘ಗ್ರೀನ್ ಜೋನ್’ – Kannada News | Post Rain Karnataka AQI Report: Major Cities See Significant Air Quality Boost

ಬೆಂಗಳೂರು, ಮೇ.21 : ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಮುಂಗಾರು ಪೂರ್ವ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ವಾತಾವರಣದಲ್ಲಿದ್ದ ಧೂಳಿನ ಕಣಗಳು ಕಡಿಮೆಯಾಗಿದ್ದು, ಕರ್ನಾಟಕದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ (Air Quality) ಗಣನೀಯವಾಗಿ ಸುಧಾರಿಸಿದೆ. ಭಾರತೀಯ ವಾಯು ಗುಣಮಟ್ಟ ಸೂಚ್ಯಂಕದ (AQI) ಇಂದಿನ ಅಧಿಕೃತ ವರದಿ ಇಲ್ಲಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟ ಸೂಚ್ಯಂಕವು ‘ಉತ್ತಮ’ (Good – AQI 0-50) ಮತ್ತು ‘ಸಮರ್ಪಕ’ (Satisfactory – AQI 51-100) ಮಟ್ಟದಲ್ಲಿದೆ. ಸಿಲ್ಕ್ ಬೋರ್ಡ್, ಪೀಣ್ಯ ಮತ್ತು ಜಯನಗರದಂತಹ ಕೈಗಾರಿಕಾ ಹಾಗೂ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲೂ ಸಹ ಮಳೆಯ ಕಾರಣದಿಂದಾಗಿ ಗಾಳಿ ಶುದ್ಧವಾಗಿದೆ. ಇಂದು ಬೆಂಗಳೂರಿನ ಸರಾಸರಿ AQI 45 ರಿಂದ 65 ರ ನಡುವೆ ದಾಖಲಾಗಿದೆ.

ಮಂಗಳೂರು, ಉಡುಪಿ ಮತ್ತು ಕಾರವಾರ ಸೇರಿದಂತೆ ಕರಾವಳಿ ಭಾಗದಲ್ಲಿ ಸಮುದ್ರದ ತಂಗಾಳಿ ಮತ್ತು ಮಳೆಯ ಮುನ್ಸೂಚನೆಯಿಂದಾಗಿ ವಾಯು ಗುಣಮಟ್ಟ ಅತ್ಯಂತ ಶ್ರೇಷ್ಠ ಮಟ್ಟದಲ್ಲಿದ್ದು, ಸರಾಸರಿ AQI 35 ರಷ್ಟಿದೆ. ಇನ್ನು ಸಾಂಸ್ಕೃತಿಕ ನಗರಿ ಮೈಸೂರು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯಲ್ಲೂ ಸಹ ಗಾಳಿಯ ಗುಣಮಟ್ಟ 50 ರ ಒಳಗೆ ದಾಖಲಾಗುವ ಮೂಲಕ ನಾಗರಿಕರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಹವಾಮಾನ ಇಲಾಖೆ ಇಂದು ಕೂಡ ಭಾರಿ ಮಳೆಯ ಮುನ್ಸೂಚನೆ ನೀಡಿರುವುದರಿಂದ ಮುಂದಿನ ಕೆಲವು ದಿನಗಳ ಕಾಲ ರಾಜ್ಯದಾದ್ಯಂತ ಇದೇ ಶುದ್ಧ ವಾತಾವರಣ ಮುಂದುವರಿಯಲಿದೆ.

ಇದನ್ನೂ ಓದಿ: ಕರಾವಳಿ ಹಾಗೂ ಮಲೆನಾಡಿನಲ್ಲಿ ವರುಣನ ಆರ್ಭಟ; ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ!

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:22 am, Thu, 21 May 26

Source link

‘ಇಡೀ ಕುಟುಂಬ ಶಪಿಸಿತು’; ಜೂ. ಎನ್​​ಟಿಆರ್ ಈ ಸ್ಥಿತಿಗೆ ಪ್ರಶಾಂತ್ ನೀಲ್ ಕಾರಣ – Kannada News | Junior NTR’s Stunning Weight Loss: Prashanth Neel Reveals Film Role Dedication

ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್​​ಟಿಆರ್ (JR NTR) ಇತ್ತೀಚಿನ ದಿನಗಳಲ್ಲಿ ಅತಿಯಾಗಿ ತೆಳ್ಳಗಾಗಿ ಕಾಣಿಸಿಕೊಂಡಿದ್ದಾರೆ. ಇದು ಅವರ ಆರೋಗ್ಯದ ಬಗ್ಗೆ ಸಾಕಷ್ಟು ಆತಂಕ ಮೂಡಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹತ್ತಾರು ಪ್ರಶ್ನೆಗಳು ಎದ್ದಿದ್ದವು. ಆದರೆ, ಅವರು ಈ ರೀತಿ ಬದಲಾಗಲು ಯಾವುದೇ ಅನಾರೋಗ್ಯ ಕಾರಣವಲ್ಲ, ಬದಲಿಗೆ ತಮ್ಮ ಮುಂಬರುವ ಚಿತ್ರದ ಪಾತ್ರಕ್ಕಾಗಿ ಅವರು ಮಾಡಿದ ಕಠಿಣ ಪರಿಶ್ರಮ ಕಾರಣ ಎಂಬ ಅಸಲಿ ರಹಸ್ಯವನ್ನು ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಈಗ ಬಹಿರಂಗಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಶಾಂತ್ ನೀಲ್, ‘ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಮುಗಿಸಿ ಶೂಟಿಂಗ್ ಆರಂಭಿಸಲು ನಾವು ಸಿದ್ಧರಾಗಿದ್ದೆವು. ಆ ಸಮಯದಲ್ಲಿ ಜೂನಿಯರ್ ಎನ್​​ಟಿಆರ್ ಅವರಿಗೆ ಒಂದು ಲುಕ್ ಟೆಸ್ಟ್ ಮಾಡಲಾಯಿತು. ಆ ಲುಕ್ ಟೆಸ್ಟ್ ಮುಗಿದ ನಂತರ, ನಾನು ಅವರ ಬಳಿ ಹೋಗಿ, ನೀವು ನಿರ್ವಹಿಸುತ್ತಿರುವ ಹಂತಕ ಪಾತ್ರಕ್ಕೆ ಸ್ವಲ್ಪ ತೆಳ್ಳಗಾದರೆ ಚೆನ್ನಾಗಿರುತ್ತದೆ, ಅದು ಚಿತ್ರಕ್ಕೆ ಸಹಾಯ ಮಾಡುತ್ತದೆ ಎಂದು ಕೇವಲ ಒಂದು ಮಾತು ಹೇಳಿದ್ದೆ’ ಎಂದಿದ್ದಾರೆ.

ನಿರ್ದೇಶಕರು ಹೇಳಿದ ಆ ಒಂದು ಮಾತನ್ನು ಜೂನಿಯರ್ ಎನ್​​ಟಿಆರ್ ಅತ್ಯಂತ ಗಂಭೀರವಾಗಿ ತೆಗೆದುಕೊಂಡರಂತೆ. ‘ಮುಂದಿನ ನಾಲ್ಕು ತಿಂಗಳುಗಳ ಕಾಲ ಅವರು ಶೂಟಿಂಗ್ ಮಾಡದೆ ಕೇವಲ ತೂಕ ಇಳಿಸಿಕೊಳ್ಳುವತ್ತಲೇ ಗಮನ ಹರಿಸಿದರು. ನೋಡನೋಡುತ್ತಿದ್ದಂತೆ ಅವರು ಬರೋಬ್ಬರಿ 15 ರಿಂದ 16 ಕೆಜಿಯಷ್ಟು ತೂಕವನ್ನು ಇಳಿಸಿಕೊಂಡರು. ನೀವು ಬರೆದಿರುವ ಕಥೆಗೆ ಮತ್ತು ನಿಮ್ಮ ಕಲ್ಪನೆಗೆ ತಕ್ಕಂತೆ ನಾನು ಬದಲಾಗುತ್ತೇನೆ ಎಂದು ಹಠಕ್ಕೆ ಬಿದ್ದವರಂತೆ ಜೂನಿಯರ್ ಎನ್​​ಟಿಆರ್ ಪರಿಶ್ರಮ ಪಟ್ಟರು’ ಎಂದು ನೀಲ್ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಜೂ.ಎನ್​​ಟಿಆರ್​​ಗೆ ವಿಶ್ ಮಾಡಿದ ಹೊಂಬಾಳೆ ಫಿಲ್ಮ್ಸ್; ಇದರ ಹಿಂದಿದೆ ದೊಡ್ಡ ಲೆಕ್ಕಾಚಾರ?

ಒಂದು ಹಂತದಲ್ಲಿ ಎನ್​​ಟಿಆರ್ ತುಂಬಾ ಸುಸ್ತಾಗಿ, ಪೇಲವವಾಗಿ ಕಾಣಿಸಲು ಆರಂಭಿಸಿದಾಗ ಪ್ರಶಾಂತ್ ನೀಲ್ ಅವರೇ ಗಾಬರಿಯಾಗಿ, ತೂಕ ಇಳಿಸುವುದನ್ನು ನಿಲ್ಲಿಸುವಂತೆ ಹಲವು ಬಾರಿ ಮನವಿ ಮಾಡಿದ್ದರಂತೆ. ಅಷ್ಟೇ ಅಲ್ಲದೆ, ಎನ್​​ಟಿಆರ್ ಅವರ ಈ ಕಠಿಣ ಡಯಟ್ ನೋಡಿ ಅವರ ಪತ್ನಿ, ತಾಯಿ, ಸ್ನೇಹಿತರು ಹಾಗೂ ಪ್ರಶಾಂತ್ ನೀಲ್ ಅವರ ಇಡೀ ಚಿತ್ರತಂಡವೇ ನೀಲ್ ಅವರ ಮೇಲೆ ಕೋಪ ಮಾಡಿಕೊಂಡಿತ್ತಂತೆ. ಸಿನಿಮಾ ಪಾತ್ರಕ್ಕಾಗಿ ಎನ್​​ಟಿಆರ್ ಅನುಭವಿಸಿದ ಆ ನಾಲ್ಕು ತಿಂಗಳ ಕಷ್ಟ ಮತ್ತು ಅವರಲ್ಲಿದ್ದ ಆ ಹಠ ಬೇರೆಲ್ಲೂ ನೋಡಲು ಸಾಧ್ಯವಿಲ್ಲ ಎಂದು ಪ್ರಶಾಂತ್ ನೀಲ್ ಕೊಂಡಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಾಂಗಲ್ಯ ಸರದಲ್ಲಿ ಮುತ್ತು-ಹವಳ ಧರಿಸುವುದರ ಅಸಲಿ ರಹಸ್ಯವೇನು? ಇದು ಮಹಿಳೆಯರ ಆರೋಗ್ಯ ಮತ್ತು ಶಕ್ತಿ – Kannada News | Unlocking Strength: Traditional Benefits of Pearl and Coral in Jewellery

ಬೆಂಗಳೂರು, ಮೇ.21: ಮಹಿಳೆಯರ ಸಬಲೀಕರಣಕ್ಕೆ ನವರತ್ನಗಳ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ್​​ ಗುರೂಜಿ ಅವರು ತಿಳಿಸಿದ್ದಾರೆ. ವಿಶೇಷವಾಗಿ ಮಾಂಗಲ್ಯ ಸರದಲ್ಲಿ ಮುತ್ತು ಮತ್ತು ಹವಳ ಧರಿಸುವುದರಿಂದಾಗುವ ಪ್ರಯೋಜನಗಳನ್ನು ವಿವರಿಸಲಾಗಿದೆ. ಮುತ್ತು ಮತ್ತು ಹವಳಗಳು ಮಹಿಳೆಯರ ಆರೋಗ್ಯದ ಏರುಪೇರುಗಳನ್ನು ಸರಿಪಡಿಸಲು, ಮಾನಸಿಕ ಸ್ಥಿತಿಯನ್ನು ಸುಧಾರಿಸಲು, ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಎಂದು ನಂಬಲಾಗಿದೆ. ಹವಳವು ಕುಜನ ಪ್ರತೀಕವಾಗಿದ್ದು, ಮುತ್ತು ಚಂದ್ರನ ಪ್ರತೀಕವಾಗಿದೆ. ಈ ರತ್ನಗಳನ್ನು ಧರಿಸುವುದರಿಂದ ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗಿ, ಎದುರಿಸುವ ಶಕ್ತಿ ಹೆಚ್ಚುತ್ತದೆ. ಧಾರ್ಮಿಕ ಮತ್ತು ವೈಜ್ಞಾನಿಕವಾಗಿ ಈ ರತ್ನಗಳು ಪ್ರಾಮುಖ್ಯತೆಯನ್ನು ಹೊಂದಿವೆ. ಮಾಂಗಲ್ಯ ಸರದಲ್ಲಿ ಈ ರತ್ನಗಳನ್ನು ಧರಿಸಿದಾಗ, ದುಷ್ಟ ಶಕ್ತಿಗಳು ಹತ್ತಿರ ಬರುವುದಿಲ್ಲ ಎಂಬ ನಂಬಿಕೆಯಿದೆ. ಇದು ಸ್ತ್ರೀಯರಿಗೆ ಶಕ್ತಿ ನೀಡುವುದರ ಜೊತೆಗೆ, ತಾಳ್ಮೆ ಮತ್ತು ಸಹನೆಯಿಂದ ಕುಟುಂಬವನ್ನು ನಿರ್ವಹಿಸಲು ಪ್ರೇರೇಪಿಸುತ್ತದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version