Headlines

ತೆರೆದ ವಾಹನಗಳಲ್ಲಿ ವನ್ಯಜೀವಿ ಸಫಾರಿಗಿ ಬ್ರೇಕ್​​: ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಮಹತ್ವದ ಕ್ರಮ – Kannada News | Karnataka Bans Open Top Vehicles For Wildlife Safaris After Dubare Elephant Camp Tragedy

ತೆರೆದ ವಾಹನಗಳಲ್ಲಿ ವನ್ಯಜೀವಿ ಸಫಾರಿಗಿ ಬ್ರೇಕ್Image Credit source: shutterstock.com ಬೆಂಗಳೂರು, ಮೇ 21: ಆನೆಗಳ ಕಾದಾಟದ ವೇಳೆ ಕುಶಾಲನಗರದ ದುಬಾರೆ ಶಿಬಿರದಲ್ಲಿ ಪ್ರವಾಸಿ ಮಹಿಳೆ ಮೃತಪಟ್ಟಿರುವ ಬೆನ್ನಲ್ಲೇ ಅರಣ್ಯ ಇಲಾಖೆ ಅಲರ್ಟ್​​ ಆಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ತೆರೆದ ವಾಹನಗಳಲ್ಲಿ ನಡೆಸಲಾಗುತ್ತಿದ್ದ ವನ್ಯಜೀವಿ ಸಫಾರಿಗಳಿಗೆ ಬ್ರೇಕ್​​ ಹಾಕಿದೆ. ಇನ್ನುಮುಂದೆ ತೆರೆದ ವಾಹನಗಳನ್ನು ಸಫಾರಿಗೆ ಬಳಸಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶಗಳು ಸೇರಿದಂತೆ ಇತರ ಸಂರಕ್ಷಿತ ಪ್ರದೇಶಗಳಲ್ಲಿ ಈಗಲೂ ತೆರೆದ ಜೀಪ್‌ಗಳಲ್ಲಿ…

Read More

ದಿನ ಭವಿಷ್ಯ: ಇಂದು ಅಪರೂಪದ ಗಜಕೇಸರಿ ಯೋಗ! ಯಾರಿಗೆ ಒಲಿಯಲಿದೆ ರಾಯರ-ಸಾಯಿಬಾಬಾ ಕೃಪೆ?

ಬೆಂಗಳೂರು, ಮೇ,21: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರ ದ್ವಾದಶ ರಾಶಿಗಳ ದಿನಭವಿಷ್ಯವನ್ನು ಪ್ರಸ್ತುತಪಡಿಸಿದೆ. ಇಂದು ಪರಾಭವನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ಪಂಚಮಿ ತಿಥಿ ಮತ್ತು ಪುನರ್ವಸು ನಕ್ಷತ್ರ, ಗಂಡ ಯೋಗ, ಬಾಲವ ಕರಣ ಇವೆ. ಈ ದಿನದ ರಾಹುಕಾಲ ಮಧ್ಯಾಹ್ನ 1:50 ರಿಂದ 3:26 ರವರೆಗೆ ಇದ್ದರೆ, ಶುಭಕಾಲ ಬೆಳಗ್ಗೆ 12:16 ರಿಂದ ಮಧ್ಯಾಹ್ನ 1:50 ರವರೆಗೆ ಇರುತ್ತದೆ. ರವಿ ವೃಷಭ ರಾಶಿಯಲ್ಲಿ, ಚಂದ್ರ ಕರ್ಕಾಟಕ…

Read More

ಮಾಜಿ ಪ್ರಧಾನಿ ದೇವೇಗೌಡರ ಬೆಂಗಳೂರು ನಿವಾಸಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭೇಟಿ

ಬೆಂಗಳೂರು, ಮೇ 21: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದಾರೆ. ಪದ್ಮನಾಭನಗರದಲ್ಲಿರುವ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ಆಗಮಿಸಿದ ಪ್ರಮೋದ್ ಸಾವಂತ್ ಅವರು ದೇವೇಗೌಡರ ಆರೋಗ್ಯ ಕುಶಲೋಪರಿಯನ್ನ ವಿಚಾರಿಸಿದ್ದಾರೆ. ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯವನ್ನೂ ಕೋರಿದ್ದಾರೆ. ರಾಜಕೀಯ ವಲಯದಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More

Weather Report: ಕರಾವಳಿ ಹಾಗೂ ಮಲೆನಾಡಿನಲ್ಲಿ ವರುಣನ ಆರ್ಭಟ; ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ! – Kannada News | Karnataka Weather Update: IMD Predicts Heavy Rain, Thunderstorms, Yellow Alert for Coastal and Malnad Regions

ಬೆಂಗಳೂರು, ಮೇ 21: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ, ಇಂದು ( ಮೇ.21) ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇನ್ನು ಮುಂಗಾರು ಪೂರ್ವ ಮಾರುತಗಳ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳು ಹಾಗೂ ಶಿವಮೊಗ್ಗ, ಚಿಕ್ಕಮಗಳೂರು,…

Read More

ದಿನ ಭವಿಷ್ಯ: ಇಂದು ಈ ರಾಶಿಯವರ ಅಹಂಕಾರಕ್ಕೆ ಪೆಟ್ಟುಬೀಳಿಸುವರು – Kannada News | Horoscope May 21 Thursday 2026; Dina Rashi Bhavishya Today, Checkout the details here

ಮೇಷ ರಾಶಿ : ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ಉತ್ತಮ ಮನೋಭಾವವನ್ನು ಹೊಂದುವಿರಿ. ನಿಮ್ಮವರು ನಿಮಗೆ ಕೆಲವು ಕಿವಿಮಾತನ್ನು ಹೇಳಬಹುದು. ದುರ್ಬಲತೆಯ ಸಮಯದಲ್ಲೂ ಧೈರ್ಯವಿರಲಿ. ಇಂದು ಕಾರ್ಯಕ್ಷಮತೆ ಹೆಚ್ಚಾಗುವ ಸಾಧ್ಯತೆ ಇದೆ. ಹಣಕಾಸಿನಲ್ಲಿ ಜವಾಬ್ದಾರಿಯುತ ಕ್ರಮ ತೆಗೆದುಕೊಳ್ಳಿ. ಇಂದು ಸಂಗಾತಿಯು ನಿಮ್ಮ ಸಂತೋಷವನ್ನು ಹೆಚ್ಚಿಸಬಹುದು. ಅಚ್ಚರಿ ಉಡುಗೊರೆಯೊಂದು ಸಿಗುವ ಸಾಧ್ಯತೆ ಇದೆ. ವಾಹನದಲ್ಲಿ ಸಂಚಾರಕ್ಕೆ ತೊಂದರೆ ಬರಬಹುದು. ವೃಷಭ ರಾಶಿ : ಇಂದು ಹೊಸ ಮನೆಯ ಖರೀದಿಯೇ ನಿಮಗೆ ಉತ್ತಮ ಎನಿಸಬಹುದು. ಆಂತರಿಕ ಆಳದ ಬಲ ನಿಮ್ಮನ್ನು…

Read More

KKR vs MI: ಕನ್ನಡಿಗ ಮನೀಶ್, ಪೊವೆಲ್ ಆಟಕ್ಕೆ ಕೆಕೆಆರ್​ಗೆ ಒಲಿದ ಜಯ – Kannada News | KKR vs MI IPL 2026: Manish Pandey Powers Kolkata Knight Riders to Crucial Win, Playoff Hopes Alive

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ (KKR vs MI) ತಂಡಗಳು ಐಪಿಎಲ್‌ 2026 (IPL 2026) ರ 65 ನೇ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮುಂಬೈ ತಂಡವನ್ನು ಮಣಿಸಿದ ಕೆಕೆಆರ್ ತನ್ನ ಪ್ಲೇಆಫ್‌ ಕನಸನ್ನು ಹಾಗೆಯೇ ಜೀವಂತವಾಗಿರಿಸಿಕೊಂಡಿದೆ. ಇತ್ತ ಮುಂಬೈ ತನ್ನ 9ನೇ ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಮಳೆ ಪೀಡಿತ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿ ಮುಂಬೈ ತಂಡ ಕೇವಲ 148 ರನ್​ಗಳ ಗುರಿ ನೀಡಿತು….

Read More

ಭೀಕರ ಅಪಘಾತ ಆದರೂ ಬಿಡದ ದ್ವೇಷ; ಅನುರಾಗ್ ದೊಭಾಲ್ ತಂದೆಯಿಂದ 60 ಪುಟಗಳ ದೂರು – Kannada News | Youtuber Anurag Dobhal UK07 Rider alleges family conspiracy recalls hospital ordeal after Accident

ಪ್ರಖ್ಯಾತ ಯೂಟ್ಯೂಬರ್, ಮಾಜಿ ಬಿಗ್ ಬಾಸ್ ಸ್ಪರ್ಧಿ ಅನುರಾಗ್ ದೊಭಾಲ್ (UK07 Rider) ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ವಿವಾದಗಳಿಂದಾಗಿ ಭಾರಿ ಸುದ್ದಿಯಲ್ಲಿದ್ದಾರೆ. ತಮ್ಮ ಅಂತರ್ ಜಾತಿ ವಿವಾಹದ ಕಾರಣಕ್ಕಾಗಿ ಕುಟುಂಬಸ್ಥರು ತಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಅವರು ಈ ಹಿಂದೆ ಆರೋಪಿಸಿದ್ದರು. ಈಗ ಪೋಷಕರೇ ತಮ್ಮ ವಿರುದ್ಧ ಮತ್ತೆ ದೊಡ್ಡ ಸಂಚು ರೂಪಿಸುತ್ತಿದ್ದಾರೆ ಎಂದು ಅನುರಾಗ್ ದೊಭಾಲ್ (Anurag Dobhal) ಅವರು ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಕಾರು ಅಪಘಾತದ ಬಳಿಕ ಆಸ್ಪತ್ರೆಯಲ್ಲಿ ತಾವು…

Read More

2026-27 ರ ದೇಶೀಯ ಕ್ರಿಕೆಟ್ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ – Kannada News | BCCI Unveils 2026 27 Domestic Cricket Schedule: 1,788 Matches, Ranji and Nayudu Changes

ಐಪಿಎಲ್ (IPL 2026) ನಡುವೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2026-27ರ ದೇಶೀಯ ಕ್ರಿಕೆಟ್ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಅವೃತ್ತಿಯಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳೆರಡನ್ನು ಸೇರಿ ಒಟ್ಟು 1,788 ಪಂದ್ಯಗಳು ನಡೆಯಲಿವೆ. ಈ ದೇಶೀಯ ಸೀಸನ್ ಆಗಸ್ಟ್ 23, 2026 ರಂದು ದುಲೀಪ್ ಟ್ರೋಫಿಯೊಂದಿಗೆ ಪ್ರಾರಂಭವಾಗುತ್ತದೆ. ಆರು ವಲಯ ತಂಡಗಳ ನಡುವೆ ಈ ಪಂದ್ಯಾವಳಿ ಟೆಸ್ಟ್ ಮಾದರಿಯಲ್ಲಿ ನಡೆಯಲಿದೆ. ಆ ನಂತರ ಅಕ್ಟೋಬರ್ 1 ರಂದು ಇರಾನಿ ಕಪ್ ನಡೆಯಲಿದೆ. ಬಿಸಿಸಿಐ ಬಹು-ದಿನದ…

Read More

ಹುಡುಗಿಗಾಗಿ ಟವರ್ ಏರಿದ್ದ ಯವಕನನ್ನ ಮನವೊಲಿಸಿ ಕೆಳಗಿಳಿಸಿದ್ಹೇಗೆ? ಹೇಳಿ ನಿಟ್ಟುಸಿರು ಬಿಟ್ಟ ಅಧಿಕಾರಿ

ಬೆಂಗಳೂರು, (ಮೇ 21): ಆನೇಕಲ್ (Anekal) ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ಪ್ರೀತಿಸಿದ (Love) ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಸೋಮಶೇಖರ್ ಎಂಬ ಯುವಕ ಟವರ್ ಹತ್ತಿ ಹೈಡ್ರಾಮಾ ಸೃಷ್ಟಿಸಿದ್ದ. ವಿಷಯ ತಿಳಿಯುತ್ತಿದ್ದಂತೆಯೇ ಕುಡಲೇ ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ, ಯುವಕನ್ನ ಕೆಳಗಿಳಿಸಲು ಹರಸಾಹಸವೇ ಪಟ್ಟರು. ಆರಂಭದಲ್ಲಿ ಎಷ್ಟು ಮನವೊಲಿಸಿದರೂ ಸಹ ಸೋಮಶೇಖರ್ ಕೆಳಗೆ ಇಳಿಯಲೇ ಇಲ್ಲ. ಅಂತಿಮವಾಗಿ ಅದ್ಹೇಗೋ ಕಸರತ್ತು ಮಾಡಿ ಮನವೊಲಿಸಿ ಸೋಮಶೇಖರ್ ನನ್ನು ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಸೋಮಶೇಖರ್ ಮನವೊಲಿಸಿ ಟವರ್…

Read More

100 ಸಿಬ್ಬಂದಿಯಿಂದ 36 ಅಡ್ಡೆಗಳ ಮೇಲೆ ದಾಳಿ: ಇಡೀ ಬಾಗಲಕೋಟೆಯ ಅಕ್ರಮ ಮರಳು ಜಾಲಾಡಿದ ಲೋಕಾಯುಕ್ತ – Kannada News | 100 Personnel Raid 36 Locations: Lokayukta Cracks Down on Illegal Sand Mining Across Bagalkote

ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಲೋಕಾ ದಾಳಿ Image Credit source: tv9 kannada ಬಾಗಲಕೋಟೆ, ಮೇ 20: ಜಿಲ್ಲಾದ್ಯಂತ ದೀರ್ಘಕಾಲದಿಂದ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ (Illegal sand mining) ಬ್ರೇಕ್ ಹಾಕಲು ಲೋಕಾಯುಕ್ತ ಪೊಲೀಸರು (Lokayukta raid) ಭರ್ಜರಿ ಬೇಟೆಯಾಡಿದ್ದಾರೆ. ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮಾರ್ಗದರ್ಶನದಲ್ಲಿ ಹಾಗೂ ಬಾಗಲಕೋಟೆ ಲೋಕಾಯುಕ್ತ ಎಸ್ಪಿ ಮಹಾನಿಂಗ ನಂದಗಾವಿ ನೇತೃತ್ವದಲ್ಲಿ ಬೃಹತ್ ಕಾರ್ಯಾಚರಣೆ ಮಾಡಲಾಗಿದೆ. ಆ ಮೂಲಕ ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ಬೃಹತ್ ಕಾರ್ಯಾಚರಣೆ ಇದಾಗಿದೆ….

Read More