KKR vs MI: ಕನ್ನಡಿಗ ಮನೀಶ್, ಪೊವೆಲ್ ಆಟಕ್ಕೆ ಕೆಕೆಆರ್​ಗೆ ಒಲಿದ ಜಯ – Kannada News | KKR vs MI IPL 2026: Manish Pandey Powers Kolkata Knight Riders to Crucial Win, Playoff Hopes Alive

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ (KKR vs MI) ತಂಡಗಳು ಐಪಿಎಲ್‌ 2026 (IPL 2026) ರ 65 ನೇ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮುಂಬೈ ತಂಡವನ್ನು ಮಣಿಸಿದ ಕೆಕೆಆರ್ ತನ್ನ ಪ್ಲೇಆಫ್‌ ಕನಸನ್ನು ಹಾಗೆಯೇ ಜೀವಂತವಾಗಿರಿಸಿಕೊಂಡಿದೆ. ಇತ್ತ ಮುಂಬೈ ತನ್ನ 9ನೇ ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಮಳೆ ಪೀಡಿತ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿ ಮುಂಬೈ ತಂಡ ಕೇವಲ 148 ರನ್​ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್. ಕನ್ನಡಿಗ ಮನೀಶ್ ಪಾಂಡೆ ಅವರ ಸಮಯೋಜಿತ ಬ್ಯಾಟಿಂಗ್​ನಿಂದಾಗಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.

ಮುಂಬೈ ಕಳಪೆ ಬ್ಯಾಟಿಂಗ್

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ. ರಯಾನ್ ರಿಕಲ್ಟನ್ ಕೇವಲ 6 ರನ್​ಗಳಿಗೆ ಔಟಾದರೆ, ನಮನ್ ಧೀರ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇವರಿಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಎರಡಂಕಿಯ ಮೊತ್ತ ದಾಟುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಅವರಲ್ಲಿ ಯಾರೂ ಮುಂಬೈ ಪರ ದೊಡ್ಡ ಇನ್ನಿಂಗ್ಸ್ ಮಾಡಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಏಕಾಂಗಿ ಹೋರಾಟ ನೀಡಿದ ಕಾರ್ಬಿನ್ ಬಾಷ್ ಸುಮಾರು 200 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಅತ್ಯಧಿಕ 32 ರನ್​ಗಳ ಇನ್ನಿಂಗ್ಸ್ ಆಡಿದರು.

ನಾಯಕ ಹಾರ್ದಿಕ್ ಪಾಂಡ್ಯ 26 ರನ್​ಗಳ ಇನ್ನಿಂಗ್ಸ್ ಆಡಿದರೆ, ತಿಲಕ್ ವರ್ಮಾ 20 ರನ್ ಬಾರಿಸಿದರು. ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಅವರ ಇನ್ನಿಂಗ್ಸ್ ತಲಾ 15 ರನ್​ಗಳಿಗೆ ಅಂತ್ಯವಾಯಿತು. ಇತ್ತ ಕೆಕೆಆರ್ ಪರ ಬೌಲಿಂಗ್‌ನಲ್ಲಿ ಮಿಂಚಿದ ಸೌರಭ್ ದುಬೆ, ಕ್ಯಾಮರೂನ್ ಗ್ರೀನ್ ಹಾಗೂ ಕಾರ್ತಿಕ್ ತ್ಯಾಗಿ ತಲಾ 2 ವಿಕೆಟ್ ಪಡೆದರು.

KKR vs MI Live Updates, IPL 2026: ಕೆಕೆಆರ್ 5ನೇ ವಿಕೆಟ್ ಪತನ

ಮನೀಶ್- ಪೊವೆಲ್ ಜೊತೆಯಾಟ

ಈ ಗುರಿ ಬೆನ್ನಟ್ಟಿದ ಕೆಕೆಆರ್​ಗೂ ಉತ್ತಮ ಆರಂಭ ಸಿಗಲಿಲ್ಲ. ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾಗಿರುವ ಫಿನ್ ಅಲೆನ್ 8 ರನ್​ಗೆ ಔಟಾದರು. ನಾಯಕ ರಹಾನೆ ಕೂಡ 21 ರನ್​ಗಳಿಗೆ ಸುಸ್ತಾದರು. ಆ ಬಳಿಕ ಬಂದ ಗ್ರೀನ್ ಇನ್ನಿಂಗ್ಸ್ ಕೇವಲ 4 ರನ್​ಗಳಿಗೆ ಅಂತ್ಯವಾಯಿತು. ಆ ಬಳಿಕ ಜೊತೆಯಾದ ಕನ್ನಡಿಗ ಮನೀಶ್ ಹಾಗೂ ಪೊವೆಲ್ ಜೊತೆಯಾಟ ನಡೆಸಿ ತಂಡವನ್ನು 100 ರನ್​ಗಳ ಗಡಿ ದಾಟಿಸಿದರು.

ಮನೀಶ್ ಪಾಂಡೆ 33 ಎಸೆತಗಳಲ್ಲಿ 6 ಬೌಂಡರಿ ಸಹಿತ 45 ರನ್​ಗಳ ಉಪಯುಕ್ತ ಇನ್ನಿಂಗ್ಸ್ ಆಡಿ ಔಟಾದರೆ, ಪೊವೆಲ್ ಇನ್ನಿಂಗ್ಸ್ ಕೂಡ 40 ರನ್​ಗಳಿಗೆ ಅಂತ್ಯವಾಯಿತು. ಕೊನೆಯಲ್ಲಿ ರಿಂಕು ಸಿಂಗ್ ಗೆಲುವಿನ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಅಮೋಘ ಜಯ ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭೀಕರ ಅಪಘಾತ ಆದರೂ ಬಿಡದ ದ್ವೇಷ; ಅನುರಾಗ್ ದೊಭಾಲ್ ತಂದೆಯಿಂದ 60 ಪುಟಗಳ ದೂರು – Kannada News | Youtuber Anurag Dobhal UK07 Rider alleges family conspiracy recalls hospital ordeal after Accident

ಪ್ರಖ್ಯಾತ ಯೂಟ್ಯೂಬರ್, ಮಾಜಿ ಬಿಗ್ ಬಾಸ್ ಸ್ಪರ್ಧಿ ಅನುರಾಗ್ ದೊಭಾಲ್ (UK07 Rider) ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ವಿವಾದಗಳಿಂದಾಗಿ ಭಾರಿ ಸುದ್ದಿಯಲ್ಲಿದ್ದಾರೆ. ತಮ್ಮ ಅಂತರ್ ಜಾತಿ ವಿವಾಹದ ಕಾರಣಕ್ಕಾಗಿ ಕುಟುಂಬಸ್ಥರು ತಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಅವರು ಈ ಹಿಂದೆ ಆರೋಪಿಸಿದ್ದರು. ಈಗ ಪೋಷಕರೇ ತಮ್ಮ ವಿರುದ್ಧ ಮತ್ತೆ ದೊಡ್ಡ ಸಂಚು ರೂಪಿಸುತ್ತಿದ್ದಾರೆ ಎಂದು ಅನುರಾಗ್ ದೊಭಾಲ್ (Anurag Dobhal) ಅವರು ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಕಾರು ಅಪಘಾತದ ಬಳಿಕ ಆಸ್ಪತ್ರೆಯಲ್ಲಿ ತಾವು ಅನುಭವಿಸಿದ ನರಕಯಾತನೆಯನ್ನು ಬಿಚ್ಚಿಟ್ಟಿದ್ದಾರೆ.

ಕಳೆದ ಮಾರ್ಚ್ ತಿಂಗಳಲ್ಲಿ ಲೈವ್ ಸ್ಟ್ರೀಮ್ ನಡೆಯುತ್ತಿದ್ದಾಗಲೇ ಕಾರು ಅಪಘಾತಕ್ಕೀಡಾಗಿ, ಆತ್ಮಹತ್ಯೆಗೆ ಯತ್ನಿಸಿದ ಆರೋಪ ಎದುರಿಸಿದ್ದ ಅನುರಾಗ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಬುಧವಾರ (ಮೇ 20) ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ತಾವು ಹಳೆಯದ್ದನ್ನೆಲ್ಲಾ ಮರೆತು ಹೊಸ ಜೀವನ ಆರಂಭಿಸಲು ನಿರ್ಧರಿಸಿದ್ದರೂ, ಕುಟುಂಬದವರು ಮಾತ್ರ ತಮಗೆ ತೊಂದರೆ ಕೊಡುವುದನ್ನು ನಿಲ್ಲಿಸುತ್ತಿಲ್ಲ ಎಂದು ಹೇಳಿದ್ದಾರೆ.

ಮಾರ್ಚ್ 8ರಂದು ತಮಗೆ ಭೀಕರ ಕಾರು ಅಪಘಾತವಾದಾಗ ಹೆತ್ತವರು ತಮ್ಮ ಜೊತೆಗಿರುತ್ತಾರೆ ಎಂದು ಅನುರಾಗ್ ಭಾವಿಸಿದ್ದರು. ಆದರೆ ವಾಸ್ತವವೇ ಬೇರೆಯಾಗಿತ್ತು. ಇತ್ತೀಚೆಗೆ ಕೆಲಸದ ನಿಮಿತ್ತ ಡೆಹ್ರಾಡೂನ್‌ಗೆ ಹೋದಾಗ ಪೊಲೀಸರಿಂದ ಕರೆ ಬಂದಿದ್ದು, ಅಲ್ಲಿ ತಮಗೆ ಶಾಕಿಂಗ್ ಸತ್ಯವೊಂದು ತಿಳಿದುಬಂದಿದೆ ಎಂದು ಅನುರಾಗ್ ಹೇಳಿದ್ದಾರೆ.

‘ನನಗೆ ಅಪಘಾತವಾದ ಅದೇ ರಾತ್ರಿ, ನನ್ನ ತಂದೆ ಪೊಲೀಸ್ ಠಾಣೆಗೆ ಹೋಗಿ ನನ್ನ ವಿರುದ್ಧವೇ ದೂರು ದಾಖಲಿಸಿದ್ದರು. ಆ ಪತ್ರದಲ್ಲಿ ನನ್ನ ವಿರುದ್ಧ ಹಲವು ವಿಷಯಗಳನ್ನು ಬರೆಯಲಾಗಿತ್ತು. ಈಗ ತನಿಖೆ ಮುಂದುವರಿದಿದ್ದು, ನನ್ನ ಕುಟುಂಬದವರು ನನ್ನ ವಿರುದ್ಧ 50-60 ಪುಟಗಳ ಸುದೀರ್ಘ ದೂರನ್ನು ನೀಡಿದ್ದಾರೆ. ಅದರಲ್ಲಿ ಬರೆದಿರುವ ವಿಷಯಗಳನ್ನು ಓದಿ ನನ್ನ ತಲೆ ಕೆಟ್ಟುಹೋಗಿದೆ’ ಎಂದು ಅನುರಾಗ್ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ಅನುರಾಗ್ ದೊಭಾಲ್ ಸ್ಥಿತಿ ಗಂಭೀರ: ಹೆಚ್ಚಿದೆ ಶ್ವಾಸಕೋಶದ ಸೋಂಕು

ಅಪಘಾತದ ನಂತರ ಆಸ್ಪತ್ರೆಯಲ್ಲಿದ್ದ ಕಠಿಣ ದಿನಗಳನ್ನು ನೆನೆದು ಅನುರಾಗ್ ತೀವ್ರ ಭಾವುಕರಾಗಿದ್ದಾರೆ. ಅಪಘಾತದ ಗಾಯಗಳಿಂದಾಗಿ ಇಡೀ ಒಂದು ತಿಂಗಳು ಹಾಸಿಗೆಯಿಂದ ಏಳಲು ಸಾಧ್ಯವಾಗಿರಲಿಲ್ಲ. ‘ಒಂದು ತಿಂಗಳು ನಾನು ಹೇಗೆ ಕಾಲ ಕಳೆದಿದ್ದೇನೆ ಎಂದು ನನಗೆ ಮಾತ್ರ ಗೊತ್ತು. ಮಲಮೂತ್ರ ವಿಸರ್ಜನೆಗೂ ನಾನು ಡೈಪರ್ ಬಳಸಬೇಕಾಗಿತ್ತು. ಅದು ನನ್ನ ಪಾಲಿಗೆ ಅತ್ಯಂತ ನಾಚಿಕೆಗೇಡಿನ ಮತ್ತು ಅವಮಾನಕರ ವಿಷಯವಾಗಿತ್ತು. ನನ್ನ ಜೀವನದ ಅತ್ಯಂತ ಕೆಟ್ಟ ಹಂತ ಅದು’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

2026-27 ರ ದೇಶೀಯ ಕ್ರಿಕೆಟ್ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ – Kannada News | BCCI Unveils 2026 27 Domestic Cricket Schedule: 1,788 Matches, Ranji and Nayudu Changes

ಐಪಿಎಲ್ (IPL 2026) ನಡುವೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2026-27ರ ದೇಶೀಯ ಕ್ರಿಕೆಟ್ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಅವೃತ್ತಿಯಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳೆರಡನ್ನು ಸೇರಿ ಒಟ್ಟು 1,788 ಪಂದ್ಯಗಳು ನಡೆಯಲಿವೆ. ಈ ದೇಶೀಯ ಸೀಸನ್ ಆಗಸ್ಟ್ 23, 2026 ರಂದು ದುಲೀಪ್ ಟ್ರೋಫಿಯೊಂದಿಗೆ ಪ್ರಾರಂಭವಾಗುತ್ತದೆ. ಆರು ವಲಯ ತಂಡಗಳ ನಡುವೆ ಈ ಪಂದ್ಯಾವಳಿ ಟೆಸ್ಟ್ ಮಾದರಿಯಲ್ಲಿ ನಡೆಯಲಿದೆ. ಆ ನಂತರ ಅಕ್ಟೋಬರ್ 1 ರಂದು ಇರಾನಿ ಕಪ್ ನಡೆಯಲಿದೆ. ಬಿಸಿಸಿಐ ಬಹು-ದಿನದ ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆ ನೀಡಿದ್ದು, ರಣಜಿ ಟ್ರೋಫಿ ಮತ್ತು ಕರ್ನಲ್ ಸಿ.ಕೆ. ನಾಯುಡು ಟ್ರೋಫಿಯನ್ನು ಎರಡು ಹಂತಗಳಲ್ಲಿ ಆಡಲು ನಿರ್ಧರಿಸಿದೆ. ಇದು ಆಟಗಾರರ ತಯಾರಿಗೆ ಸಮಯವನ್ನು ನೀಡುತ್ತದೆ. ರಣಜಿ ಟ್ರೋಫಿಯ ಎಲೈಟ್ ಗುಂಪು ನಾಲ್ಕು ಗುಂಪುಗಳಲ್ಲಿ ಆಡುವ 32 ತಂಡಗಳನ್ನು ಒಳಗೊಂಡಿರುತ್ತದೆ, ಪ್ಲೇಟ್ ಗುಂಪು ಆರು ತಂಡಗಳನ್ನು ಒಳಗೊಂಡಿರುತ್ತದೆ.

ವೇಳಾಪಟ್ಟಿಯಲ್ಲಿ ಪ್ರಮುಖ ಬದಲಾವಣೆಗಳು

ಕರ್ನಲ್ ಸಿ.ಕೆ. ನಾಯುಡು ಟ್ರೋಫಿ ಹಾಲಿ ವಿಜೇತ ತಂಡ ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡಗಳ ನಡುವೆ ಅಕ್ಟೋಬರ್ 1 ರಿಂದ 4 ರವರೆಗೆ ನಡೆಯಲಿದೆ. ಇದಲ್ಲದೆ, ಪುರುಷರ U23 ರಾಜ್ಯ A ಟ್ರೋಫಿ ಮತ್ತು ವಿಜಯ್ ಟ್ರೋಫಿಯನ್ನು ಈಗ ಏಕದಿನ ಮಾದರಿಯ ಬದಲಿಗೆ ಟಿ20 ಸ್ವರೂಪದಲ್ಲಿ ಆಡಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ, ಕೂಚ್ ಬೆಹಾರ್ ಟ್ರೋಫಿಯ (ಎಲೈಟ್ ಗ್ರೂಪ್) ನಾಕೌಟ್ ಪಂದ್ಯಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಆಡಿಸಲಾಗುತ್ತಿದೆ. ಏತನ್ಮಧ್ಯೆ, ವಿಜಯ್ ಮರ್ಚೆಂಟ್ ಟ್ರೋಫಿ (U16) ಯನ್ನು ಮರು ನಿಗದಿಪಡಿಸಲಾಗಿದ್ದು, ಈ ಟ್ರೋಫಿ ನವೆಂಬರ್‌ನಿಂದ ಜನವರಿವರೆಗೆ ನಡೆಯಲಿದೆ.

IND vs AFG: ರಿಷಭ್ ಪಂತ್​ಗೆ ಡಬಲ್ ಶಾಕ್ ನೀಡಿದ ಬಿಸಿಸಿಐ

ರಣಜಿ ಟ್ರೋಫಿಗೆ ಗುಂಪುಗಳು ಇಂತಿವೆ

  • ಎಲೈಟ್ ಎ – ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ವಿದರ್ಭ, ಬರೋಡಾ, ಉತ್ತರ ಪ್ರದೇಶ, ಪುದುಚೇರಿ, ಗೋವಾ.
  • ಎಲೈಟ್ ಬಿ – ಕರ್ನಾಟಕ, ಆಂಧ್ರ, ಸೌರಾಷ್ಟ್ರ, ಛತ್ತೀಸ್‌ಗಢ, ಹೈದರಾಬಾದ್, ತ್ರಿಪುರ, ಪಂಜಾಬ್, ಅಸ್ಸಾಂ.
  • ಎಲೈಟ್ ಸಿ – ಬಂಗಾಳ, ಜಾರ್ಖಂಡ್, ಮಹಾರಾಷ್ಟ್ರ, ಸರ್ವೀಸಸ್, ಗುಜರಾತ್, ಕೇರಳ, ದೆಹಲಿ, ಒಡಿಶಾ.
  • ಎಲೈಟ್ ಡಿ – ಉತ್ತರಾಖಂಡ, ಮುಂಬೈ, ಹರಿಯಾಣ, ರೈಲ್ವೇಸ್, ರಾಜಸ್ಥಾನ, ತಮಿಳುನಾಡು, ಹಿಮಾಚಲ ಪ್ರದೇಶ, ಚಂಡೀಗಢ.
  • ಪ್ಲೇಟ್ – ನಾಗಾಲ್ಯಾಂಡ್, ಮಣಿಪುರ, ಮೇಘಾಲಯ, ಸಿಕ್ಕಿಂ, ಮಿಜೋರಾಂ, ಅರುಣಾಚಲ ಪ್ರದೇಶ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಡುಗಿಗಾಗಿ ಟವರ್ ಏರಿದ್ದ ಯವಕನನ್ನ ಮನವೊಲಿಸಿ ಕೆಳಗಿಳಿಸಿದ್ಹೇಗೆ? ಹೇಳಿ ನಿಟ್ಟುಸಿರು ಬಿಟ್ಟ ಅಧಿಕಾರಿ

ಬೆಂಗಳೂರು, (ಮೇ 21): ಆನೇಕಲ್ (Anekal) ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ಪ್ರೀತಿಸಿದ (Love) ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಸೋಮಶೇಖರ್ ಎಂಬ ಯುವಕ ಟವರ್ ಹತ್ತಿ ಹೈಡ್ರಾಮಾ ಸೃಷ್ಟಿಸಿದ್ದ. ವಿಷಯ ತಿಳಿಯುತ್ತಿದ್ದಂತೆಯೇ ಕುಡಲೇ ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ, ಯುವಕನ್ನ ಕೆಳಗಿಳಿಸಲು ಹರಸಾಹಸವೇ ಪಟ್ಟರು. ಆರಂಭದಲ್ಲಿ ಎಷ್ಟು ಮನವೊಲಿಸಿದರೂ ಸಹ ಸೋಮಶೇಖರ್ ಕೆಳಗೆ ಇಳಿಯಲೇ ಇಲ್ಲ. ಅಂತಿಮವಾಗಿ ಅದ್ಹೇಗೋ ಕಸರತ್ತು ಮಾಡಿ ಮನವೊಲಿಸಿ ಸೋಮಶೇಖರ್ ನನ್ನು ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಸೋಮಶೇಖರ್ ಮನವೊಲಿಸಿ ಟವರ್ ಮೇಲಿಂದ ಕೆಳಗಿಳಿಸುವಷ್ಟರಲ್ಲೇ ಜನ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಇನ್ನು ಏನಂತ ಮನವೊಲಿಸಿ ಸೋಮಶೇಖರ್ ನನ್ನು ಕೆಳಗೆ ಇಳಿಸಲಾಯ್ತು? ಹೇಗೆಲ್ಲಾ ಹರಸಾಹಸಪಡಬೇಕಾಯ್ತು ಎನ್ನುವುದನ್ನು ಅಗ್ನಿ ಶಾಮಕದ ದಳ ಅಧಿಕಾರಿ ಎಳೆಎಳೆಯಾಗಿ ಹೇಳಿ ನಿಟ್ಟುಸಿರು ಬಿಟ್ಟರು.

ಇದನ್ನೂ ಓದಿ: ಹುಡುಗಿ ಕೈಕೊಟ್ಟಿದ್ದಕ್ಕೆ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಯುವಕನ ಹೈಡ್ರಾಮಾ: ಪ್ರೇಮಿಯ ಹುಚ್ಚಾಟಕ್ಕೆ ಜನರು ಕಂಗಾಲು

Source link

100 ಸಿಬ್ಬಂದಿಯಿಂದ 36 ಅಡ್ಡೆಗಳ ಮೇಲೆ ದಾಳಿ: ಇಡೀ ಬಾಗಲಕೋಟೆಯ ಅಕ್ರಮ ಮರಳು ಜಾಲಾಡಿದ ಲೋಕಾಯುಕ್ತ – Kannada News | 100 Personnel Raid 36 Locations: Lokayukta Cracks Down on Illegal Sand Mining Across Bagalkote

ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಲೋಕಾ ದಾಳಿ
Image Credit source: tv9 kannada

ಬಾಗಲಕೋಟೆ, ಮೇ 20: ಜಿಲ್ಲಾದ್ಯಂತ ದೀರ್ಘಕಾಲದಿಂದ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ (Illegal sand mining) ಬ್ರೇಕ್ ಹಾಕಲು ಲೋಕಾಯುಕ್ತ ಪೊಲೀಸರು (Lokayukta raid) ಭರ್ಜರಿ ಬೇಟೆಯಾಡಿದ್ದಾರೆ. ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮಾರ್ಗದರ್ಶನದಲ್ಲಿ ಹಾಗೂ ಬಾಗಲಕೋಟೆ ಲೋಕಾಯುಕ್ತ ಎಸ್ಪಿ ಮಹಾನಿಂಗ ನಂದಗಾವಿ ನೇತೃತ್ವದಲ್ಲಿ ಬೃಹತ್ ಕಾರ್ಯಾಚರಣೆ ಮಾಡಲಾಗಿದೆ. ಆ ಮೂಲಕ ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ಬೃಹತ್ ಕಾರ್ಯಾಚರಣೆ ಇದಾಗಿದೆ.

ಮುಖ್ಯಾಂಶಗಳು

  • ಬಾಗಲಕೋಟೆ ಅಕ್ರಮ ಮರಳು ಗಣಿಗಾರಿಕೆ ಮೇಲೆ ಲೋಕಾಯುಕ್ತರ ಭರ್ಜರಿ ದಾಳಿ
  • ಅಕ್ರಮ ತಡೆಗಟ್ಟಲು ವಿಫಲರಾದ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು
  • ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ

ಅಧಿಕಾರಿಗಳ ವಿರುದ್ಧವೇ ದೂರು 

ಅಕ್ರಮ ಮರಳುಗಾರಿಕೆಯನ್ನು ತಡೆಯುವಲ್ಲಿ ಸಂಪೂರ್ಣ ವಿಫಲರಾದ ಹಿನ್ನೆಲೆ ಬಾಗಲಕೋಟೆ ಜಿಲ್ಲಾಧಿಕಾರಿ ಸೇರಿದಂತೆ ಬೆಂಗಳೂರಿನ ಗಣಿಗಾರಿಕೆ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು, ಬಾದಾಮಿ, ಮುಧೋಳ, ಜಮಖಂಡಿ, ಹುನಗುಂದ ಹಾಗೂ ಇಳಕಲ್ ತಾಲೂಕುಗಳ ತಹಶೀಲ್ದಾರ್​​ಗಳ ವಿರುದ್ಧವೇ ಲೋಕಾಯುಕ್ತ ಅಧಿಕಾರಿಗಳು ಸ್ವಯಂಪ್ರೇರಿತ (ಸುಮೋಟೋ) ದೂರು ದಾಖಲಿಸಿದ್ದಾರೆ.

100ಕ್ಕೂ ಹೆಚ್ಚು ಸಿಬ್ಬಂದಿ, 8 ಜಿಲ್ಲೆಗಳ ಅಧಿಕಾರಿಗಳಿಂದ ಜಂಟಿ ಆಪರೇಷನ್

ಬಾಗಲಕೋಟೆ ಜಿಲ್ಲೆಯ ಮುಧೋಳ, ಬಾದಾಮಿ, ಹುನಗುಂದ, ಇಳಕಲ್, ಜಮಖಂಡಿ ಹಾಗೂ ಬಾಗಲಕೋಟೆ ತಾಲೂಕುಗಳ ವ್ಯಾಪ್ತಿಯಲ್ಲಿ ಈ ದಾಳಿ ನಡೆದಿದೆ. ಜಿಲ್ಲೆಯ ಒಟ್ಟು 24 ಪ್ರಮುಖ ಸ್ಥಳಗಳಲ್ಲಿದ್ದ 36 ಅಕ್ರಮ ಮರಳು ಸಂಗ್ರಹಣಾ ಅಡ್ಡೆಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಪಡೆ ದಾಳಿ ಮಾಡಿದೆ. ಈ ಬೃಹತ್ ಕಾರ್ಯಾಚರಣೆಗಾಗಿ ಕೇವಲ ಬಾಗಲಕೋಟೆ ಅಷ್ಟೇ ಅಲ್ಲದೆ ಬೆಳಗಾವಿ, ಧಾರವಾಡ, ಕೊಪ್ಪಳ, ಗದಗ, ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಸೇರಿದಂತೆ ಒಟ್ಟು 8 ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ. ಸುಮಾರು 30 ಲೋಕಾಯುಕ್ತ ಅಧಿಕಾರಿಗಳು ಹಾಗೂ 100ಕ್ಕೂ ಹೆಚ್ಚು ಸಿಬ್ಬಂದಿ ವರ್ಗದವರು ಈ ಜಂಟಿ ಆಪರೇಷನ್‌ನಲ್ಲಿ ಪಾಲ್ಗೊಂಡಿದ್ದರು.

ಹಿಟಾಚಿ, ದೋಣಿ, ಟಿಪ್ಪರ್‌ಗಳು ಜಪ್ತಿ

ಅಕ್ರಮವಾಗಿ ಮರಳು ಎತ್ತಲು ಮತ್ತು ಸಾಗಿಸಲು ಬಳಸುತ್ತಿದ್ದ ಕೋಟ್ಯಂತರ ರೂ ಮೌಲ್ಯದ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಲೋಕಾಯುಕ್ತ ದಾಳಿ ವೇಳೆ 65 ಟಿಪ್ಪರ್‌ಗಳು, 18 ಹಿಟಾಚಿ ಯಂತ್ರಗಳು, ನದಿಗಳಿಂದ ಮರಳು ತೆಗೆಯಲು ಬಳಸುತ್ತಿದ್ದ 14 ಯಾಂತ್ರೀಕೃತ ದೋಣಿಗಳು, 6 ಟ್ರ್ಯಾಕ್ಟರ್‌ಗಳು ಹಾಗೂ 1 ಜೆಸಿಬಿಯನ್ನು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: ರಾಯಚೂರು: ಅಕ್ರಮ ಮರಳುಗಾರಿಕೆ ಮಟ್ಟಹಾಕಲು ಜಿಲ್ಲಾಡಳಿತ ಸನ್ನದ್ಧ; ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ

ಗಣಿ, ಪರಿಸರ, ಪೊಲೀಸ್, ಅರಣ್ಯ, ತೆರಿಗೆ, ಸಾರಿಗೆ ಇಲಾಖೆ ಮತ್ತು ತಾಲೂಕು ಪಂಚಾಯತ್ ಇಒಗಳಿಗೆ ಅಕ್ರಮದಲ್ಲಿ ತೊಡಗಿದವರ ವಿರುದ್ಧ ಕೂಡಲೇ ಕಾನೂನು ಕ್ರಮಕೈಗೊಂಡು ವರದಿ ಸಲ್ಲಿಸಲು ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದ್ದಾರೆ. ಜಿಲ್ಲೆಯಾದ್ಯಂತ ಅಕ್ರಮ ಮರಳುಗಾರಿಕೆ ಪ್ರಾಥಮಿಕವಾಗಿ ಗುರುತಿಸಲ್ಪಟ್ಟಿದ್ದು, ತನಿಖೆ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮೇ 21ರಂದು ಬೆಂಗಳೂರಿನ ಈ ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್ ನಿಷೇಧ, ಇಲ್ಲಿದೆ ಪರ್ಯಾಯ ಮಾರ್ಗ – Kannada News | Traffic diversions around Freedom Park in Bengaluru On May 21 Over Youth Congress Protest Against NEET Scam

ಬೆಂಗಳೂರು, (ಮೇ 20): NEET UG ಪ್ರಶ್ನೆಸೋರಿಕೆಯಿಂದ 4 ವಿದ್ಯಾರ್ಥಿಗಳು ಆತ್ಮಹತ್ಯೆ ಹಿನ್ನೆಲೆಯಲ್ಲಿ
ಕೇಂದ್ರದ ವಿರುದ್ಧ ನಾಳೆ (ಗುರುವಾರ) ಯುವ ಕಾಂಗ್ರೆಸ್  ಫ್ರೀಡಂಪಾರ್ಕ್​ನಲ್ಲಿ ಪ್ರತಿಭಟನೆ (Youth Congress Protest) ನಡೆಸಲಿದೆ. ಇದರಿಂದ ಮೇ 21ರ ಬೆಳಗ್ಗೆ 7.30ರಿಂದ ಸಂಜೆ 4 ಗಂಟೆಯವರೆಗೆ ಬೆಂಗಳೂರಿನ (Bengaluru) ಫ್ರೀಡಂಪಾರ್ಕ್​ ಸುತ್ತಮುತ್ತ ವಾಹನ ಸಂಚಾರ ಮಾರ್ಗ ಬದಲಾವಣೆ (Traffic diversions) ಮಾಡಲಾಗಿದೆ. ಫ್ರೀಡಂಪಾರ್ಕ್ (Freedom Park)​​ ಜಂಕ್ಷನ್‌ನಿಂದ ಕನಕದಾಸ ವೃತ್ತದ ಕಡೆಗೆ ಬರುವ ಮತ್ತು ಹೋಗುವ ವಾಹನಗಳ ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದು, ಇದಕ್ಕೆ ಪರ್ಯಾಯ ಮಾರ್ಗ ಈ ಕೆಳಗಿನಂತಿದೆ ನೋಡಿ.

ಮುಖ್ಯಾಂಶಗಳು

  • NEET UG ಪ್ರಶ್ನೆಸೋರಿಕೆಯಿಂದ 4 ವಿದ್ಯಾರ್ಥಿಗಳು ಆತ್ಮಹತ್ಯೆ ಹಿನ್ನೆಲೆ
  • ಕೇಂದ್ರದ ವಿರುದ್ಧ ಫ್ರೀಡಂಪಾರ್ಕ್​ನಲ್ಲಿ ನಾಳೆ ಯುವ ಕಾಂಗ್ರೆಸ್ ಪ್ರತಿಭಟನೆ
  • ಬೆಂಗಳೂರಿನ ಫ್ರೀಡಂಪಾರ್ಕ್​ ಸುತ್ತಮುತ್ತ ಸಂಚಾರ ಮಾರ್ಗ ಬದಲಾವಣೆ
  • ನಾಳೆ (ಮೇ 21) ಬೆಳಗ್ಗೆ 7.30ರಿಂದ ಸಂಜೆ 4 ಗಂಟೆಯವರೆಗೆ ಮಾರ್ಗ ಬದಲಾವಣೆ

ವಾಹನ ಸಂಚಾರ ಮಾರ್ಗ ಬದಲಾವಣೆ

ಫ್ರೀಡಂಪಾರ್ಕ್​​ ಜಂಕ್ಷನ್‌ನಿಂದ ಕನಕದಾಸ ವೃತ್ತದ ಕಡೆಗೆ ಬರುವ ಮತ್ತು ಹೋಗುವ ವಾಹನಗಳ ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಹೀಗಾಗಿ ಕೆ.ಜಿ.ರಸ್ತೆ ಮೂಲಕ ಮೈಸೂರು ಬ್ಯಾಂಕ್​ ವೃತ್ತದಿಂದ ಬಲತಿರುವು ಪಡೆದು ಫ್ರೀಡಂಪಾರ್ಕ್​​ ಕಡೆಗೆ ಬರುವ ವಾಹನಗಳು ಅರಮನೆ ರಸ್ತೆ ಮೂಲಕ ಮಹಾರಾಣಿ ಅಂಡರ್​ಪಾಸ್ ರಸ್ತೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್​​ನಲ್ಲಿ 3 ಗಂಟೆ ಪರದಾಟ: ನಡೆದೇ ಮನೆಗೆ ಹೋಗಬಹುದಿತ್ತು ಎಂದ ವ್ಯಕ್ತಿ; ಪೋಸ್ಟ್​​ ವೈರಲ್​​

ಪ್ರತಿಭಟನೆಕಾರರು ರೈಲು ನಿಲ್ದಾಣದಿಂದ ಫ್ಲೈಓವರ್ ರಸ್ತೆಯಲ್ಲಿ ಆಗಮಿಸಲಿದ್ದಾರೆ. ಕಾಲ್ನಡಿಗೆಯಲ್ಲಿ ಬರುವುದರಿಂದ ಖೋಡೆ ಜಂಕ್ಷನ್ ಕಡೆಯಿಂದ ಕೆ.ಆರ್​.ಸರ್ಕಲ್ ಕಡೆಗೆ ಹೋಗುವ ವಾಹನ ಸವಾರರು ಹಳೇ ಜೆಡಿಎಸ್​​ ಕಚೇರಿ ರಸ್ತೆಯನ್ನು ಬಳಸಲು ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ.

ತಾತ್ಕಾಲಿಕವಾಗಿ ಸುಬ್ಬಣ್ಣ ಜಂಕ್ಷನ್‌ನಿಂದ ಎಂಟಿಆರ್​​ ಜಂಕ್ಷನ್ ಕಡೆಗೆ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಗಾಂಧಿನಗರ ಕಡೆಗೆ ಬರುವ ವಾಹನಗಳು ಈ ರಸ್ತೆ ಬಳಸಬಹುದಾಗಿದೆ. ಇನ್ನು ಖೋಡೆ ಜಂಕ್ಷನ್‌ನಿಂದ ಮಹಾರಾಣಿ ಜಂಕ್ಷನ್​ವರೆಗೆ, ವೈ.ರಾಮಚಂದ್ರ ರಸ್ತೆ, ಕಾಳಿದಾಸ ರಸ್ತೆ, ಅರಮನೆ ರಸ್ತೆ, ಕೆ.ಜಿ.ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ನೀನಿದ್ದರೆ’ ಆಲ್ಬಂ ಹಾಡಿನಿಂದ ಚಿಗುರಿದ ಸಿನಿಮಾ ಕನಸು; ಸುಮಧುರ ಹಾಡು ರಿಲೀಸ್ – Kannada News | Neeniddare Kannada album song ft Smitha Karen Pinto Avil in Siri Music

ಸಿನಿಮಾ ಹಾಡುಗಳು ಮಾತ್ರವಲ್ಲದೇ ಆಲ್ಬಂ ಗೀತೆಗಳು (Kannada Album Songs) ಅಥವಾ ಮ್ಯೂಸಿಕ್ ವಿಡಿಯೋಗಳು ಕೂಡ ಪ್ರೇಕ್ಷಕರ ಗಮನ ಸೆಳೆಯುತ್ತವೆ. ಅಂಥ ಹಾಡುಗಳ ಸಾಲಿಗೆ ‘ನೀನಿದ್ದರೆ’ (Neeniddare) ಎಂಬ ಹೊಸ ಗೀತೆ ಸೇರ್ಪಡೆ ಆಗಿದೆ. ‘ಮೊಗಾಚಿ ಲಾರಂ ಕ್ರಿಯೇಶನ್’ ಮೂಲಕ ಈ ಸಾಂಗ್ ನಿರ್ಮಾಣ ಆಗಿದೆ. ಇದರ ಅವಧಿ 5.52 ನಿಮಿಷ ಇದೆ. ಸಿರಿ ಮ್ಯೂಸಿಕ್ ಮೂಲಕ ಈ ಆಲ್ಬಂ ಸಾಂಗ್ (Album Song) ಬಿಡುಗಡೆ ಆಗಿದೆ. ಹಾಡಿನಿಂದ ಶುರುವಾದ ಈ ಪಯಣವು ಸಿನಿಮಾ ಮಾಡುವ ಕನಸನ್ನು ಹುಟ್ಟುಹಾಕಿದೆ. ಈ ಬಗ್ಗೆ ತಂಡದವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಹಿರಿಯ ನಟ ರಮೇಶ್ ಭಟ್ ಅವರು ‘ನೀನಿದ್ದರೆ..’ ಹಾಡನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ‘ನಿರ್ಮಾಪಕರು ನನ್ನನ್ನು ಫಾದರ್ ಅಂತ ಕರೆಯುತ್ತಾರೆ. ಆದರೆ ನನಗೆ ಅವರು ಗಾಡ್‌ಫಾದರ್. ಮಂಗಳೂರಿಗೆ ಶೂಟಿಂಗ್ ಅಂತ ಹೋದಾಗ, ತಪ್ಪದೇ ಭೇಟಿಯಾಗುತ್ತಾರೆ ಮತ್ತು ಉಡುಗೊರೆ ನೀಡುತ್ತಾರೆ. ಇಂತಹವರ ಋಣ ತೀರಿಸಲು ಬ್ಯುಸಿ ಇದ್ದರೂ ಬಂದಿರುವೆ’ ಎಂದು ಹೇಳಿದರು. ಈ ವೇಳೆ ಹಿರಿಯ ನಟ ಟೆನ್ನಿಸ್ ಕೃಷ್ಣ ಕೂಡ ಉಪಸ್ಥಿತರಿದ್ದರು.

Neeniddare Album Song Team

ಮಂಗಳೂರು ಮೂಲದವರಾದ, ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ನೂರ್ ರ್ಬಟ್ ಅವರು ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ವಿನ್ಸೆಂಟ್ ಫರ್ನಾಂಡಿಸ್ ಕಾಸ್ಸಿಯಾ ಅವರು ಇದಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಲಕ್ಷೀಕಾಂತ್ ಅವರ ಛಾಯಾಗ್ರಹಣ, ರಾಜೇಶ್ ಚೌಹಾಣ್ ಅವರ ಸಂಕಲನ ಈ ಹಾಡಿಗೆ ಇದೆ. ಲೈನೆಲ್ ಡಿಮೆಲ್ಲೊ ಅವರು ಸಂಗೀತ ನೀಡಿದ್ದಾರೆ.

ಹಿಮಗಿರಿ ಎಸ್ಟೇಟ್ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಈ ಹಾಡು ಮೂಡಿಬಂದಿರುವ ರೀತಿ ಹಾಗೂ ಕೇಳುಗರಿಂದ ಸಿಕ್ಕಿರುವ ಪಾಸಿಟಿವ್ ಪ್ರತಿಕ್ರಿಯಿಂದ ಈ ತಂಡಕ್ಕೆ ಖುಷಿ ಆಗಿದೆ. ಗಾಯಕಿ ಶಿಲ್ಪಾ ಕುಟೀನ್ಹಾ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಹಳೇ ಪ್ರೇಯಸಿ ಮತ್ತು ನಾಯಕಿ ಪಾತ್ರದಲ್ಲಿ ರಿಯಲ್ ಲೈಫ್ ತಾಯಿ-ಮಗಳು ನಟಿಸಿರುವುದು ವಿಶೇಷ.

ಇದನ್ನೂ ಓದಿ: ಯುರೋಪ್​ನಲ್ಲಿ ಚಿತ್ರೀಕರಣಗೊಂಡ ‘ಹನಿ ಹನಿ’ ಆಲ್ಬಂ ಸಾಂಗ್ ಬಿಡುಗಡೆ ಮಾಡಿದ ಅಶ್ವಿನಿ

ನಾಯಕನಾಗಿ ಅವಿಲ್ ರೊಡ್ರಿಗಸ್ ಅವರು ನಟಿಸಿದ್ದಾರೆ. ನಾಯಕಿಯಾಗಿ ಕೆರನ್ ಪಿಂಟೋ ಹಾಗೂ ಹಳೇ ಪ್ರೇಯಸಿಯಾಗಿ ಸ್ಮಿತಾ ಪಿಂಟೋ ಅಭಿನಯಿಸಿದ್ದಾರೆ. ಮಧುರ ಪ್ರೀತಿಯ ಮೆಲುಕಿನಂತೆ ಈ ಹಾಡು ಸಿದ್ಧವಾಗಿದೆ. ಇದನ್ನೇ ಒಂದು ಸಿನಿಮಾ ರೂಪದಲ್ಲಿ ಕಟ್ಟಿಕೊಡುವ ಆಲೋಚನೆ ಕೂಡ ತಂಡಕ್ಕೆ ಬಂದಿದೆ. ಅದಕ್ಕೆ ನಿರ್ಮಾಪಕರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಂದು ಬಾಡಿ ಶೇಮಿಂಗ್ ಎದುರಿಸಿದ್ದ ಜೂ. ಎನ್‌ಟಿಆರ್; ಈಗ ಕಟ್ಟುಮಸ್ತಾದ ಫೋಟೋ ವೈರಲ್ – Kannada News | Jr NTR body transformation Built Not Bought Instagram pic Prashanth Neel Dragon movie

ಎಸ್‌ಎಸ್ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಸಿನಿಮಾದಲ್ಲಿನ ನಟನೆಯ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ನಟ ಜೂನಿಯರ್ ಎನ್‌ಟಿಆರ್ (Jr NTR) ಅವರು ಈಗ ಸ್ಟೈಲಿಶ್ ಲುಕ್‌ನಿಂದಾಗಿ ಭಾರಿ ಸುದ್ದಿಯಲ್ಲಿದ್ದಾರೆ. ‘ಡ್ರ್ಯಾಗನ್’ ಸಿನಿಮಾಗಾಗಿ ಅವರು ದೇಹವನ್ನು ಹುರಿಗೊಳಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಒಂದು ಕಾಲದಲ್ಲಿ ಜೂನಿಯರ್ ಎನ್​ಟಿಆರ್ ಅವರಿಗೂ ಬಾಡಿ ಶೇಮಿಂಗ್ (Body Shaming) ಮಾಡಲಾಗಿತ್ತು ಎಂಬುದನ್ನು ಮರೆಯುವಂತಿಲ್ಲ.

ಜೂನಿಯರ್ ಎನ್‌ಟಿಆರ್ ಅವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ‘Built. Not bought’ (ಕಷ್ಟಪಟ್ಟು ಗಳಿಸಿದ್ದು, ದುಡ್ಡು ಕೊಟ್ಟು ಕೊಂಡುಕೊಂಡಿದ್ದಲ್ಲ) ಎಂದು ಪವರ್‌ಫುಲ್ ಕ್ಯಾಪ್ಷನ್ ನೀಡಿದ್ದಾರೆ. ಯಾವುದೇ ಶಾರ್ಟ್‌ಕಟ್ ಬಳಸದೆ ಜಿಮ್‌ನಲ್ಲಿ ಕಠಿಣ ಪರಿಶ್ರಮ ಪಟ್ಟು ಈ ಬಾಡಿ ಬಿಲ್ಡ್ ಮಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಂದು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿರುವ ಜೂನಿಯರ್ ಎನ್‌ಟಿಆರ್ ಆರಂಭದ ದಿನಗಳಲ್ಲಿ ತೀವ್ರ ಬಾಡಿ ಶೇಮಿಂಗ್‌ಗೆ ಗುರಿಯಾಗಿದ್ದರು. ‘ಕೌನ್ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದ ತೆಲುಗು ವರ್ಷನ್, ‘ಎವರು ಮೀಲೋ ಕೋಟೀಶ್ವರುಲು’ ರಿಯಾಲಿಟಿ ಶೋನಲ್ಲಿ ಅವರು ಈ ಬಗ್ಗೆ ಮಾತನಾಡಿದ್ದರು. ಸ್ಪರ್ಧಿಯೊಬ್ಬರು ತಮ್ಮ ಬೋಳು ತಲೆಯ ಬಗ್ಗೆ ಬೇಸರ ವ್ಯಕ್ತಪಡಿಸಿದಾಗ, ಎನ್‌ಟಿಆರ್ ಅವರು ತಮ್ಮ ಬೊಜ್ಜು ಮತ್ತು ತೂಕ ಇಳಿಕೆಯ ಜರ್ನಿಯನ್ನು ಮೆಲುಕು ಹಾಕಿದ್ದರು. ವೃತ್ತಿಜೀವನದ ಆರಂಭದಲ್ಲಿ ಜನರು ತಮ್ಮನ್ನು ‘ಅತಿ ಹೆಚ್ಚು ತೂಕದವನು’ ಎಂದು ಜರಿದಿದ್ದನ್ನು ಅವರು ನೆನಪಿಸಿಕೊಂಡಿದ್ದರು.

ಹೆಚ್ಚಿನ ತೂಕ ಮತ್ತು ದೇಹದ ಆಕಾರಕ್ಕಾಗಿ ಸದಾ ಟೀಕೆಗೊಳಗಾಗುತ್ತಿದ್ದ ಜೂ. ಎನ್‌ಟಿಆರ್, ತದನಂತರ ಫಿಟ್‌ನೆಸ್ ಕಡೆಗೆ ಹೆಚ್ಚು ಗಮನಹರಿಸಿದರು. 2014ರ ಅವಧಿಯಲ್ಲಿ ಅವರು ವೃತ್ತಿಜೀವನದಲ್ಲೇ ಅತಿ ಹೆಚ್ಚು ತೂಕ ಹೊಂದಿದ್ದರು. ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರ ಒತ್ತಾಯ ಹಾಗೂ ಪ್ರೇರಣೆಯಿಂದಾಗಿ ಎನ್‌ಟಿಆರ್ ತೂಕ ಇಳಿಸಲು ನಿರ್ಧರಿಸಿದರು.

ಇದನ್ನೂ ಓದಿ: ನಟಿ ಕೀರ್ತಿ ಸುರೇಶ್​ಗೆ ಬಾಡಿ ಶೇಮಿಂಗ್; ಸರ್ಜರಿ ವದಂತಿಗಳಿಗೆ ಖಡಕ್ ತಿರುಗೇಟು

2015ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ‘ಟೆಂಪರ್’ ಸಿನಿಮಾಗಾಗಿ ಜೂ. ಎನ್‌ಟಿಆರ್ ಅವರು ತೂಕ ಇಳಿಸಿಕೊಂಡು ಫಿಟ್ ಆಗುವ ಮೂಲಕ ಎಲ್ಲರಿಗೂ ಅಚ್ಚರಿ ಉಂಟುಮಾಡಿದ್ದರು. ಅಲ್ಲಿಂದ ಆರಂಭವಾದ ಅವರ ಫಿಟ್‌ನೆಸ್ ಜರ್ನಿ ಇಂದು ‘ಡ್ರಾಗನ್’ ಸಿನಿಮಾ ತನಕ ಬಂದಿದೆ. ಅವರ ಹೊಸ ಲುಕ್ ನೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಇದರಿಂದಾಗಿ ‘ಡ್ರ್ಯಾಗನ್’ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರವಾಸಿಗರಿಗೆ ಗುಡ್​ನ್ಯೂಸ್​​: ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಸಾಹಸ ಕ್ರೀಡೆಗಳ ನಿಷೇಧ ತೆರವು – Kannada News | Good News for Tourists: Water Sports Ban Lifted in Uttara Kannada District

ವಾಟರ್ ಸ್ಪೋರ್ಟ್ಸ್ (ಎಐ ಚಿತ್ರ)Image Credit source: tv9 kannada

ಕಾರವಾರ, ಮೇ 20: ಹವಾಮಾನ ವೈಪರಿತ್ಯ ಹಿನ್ನೆಲೆ ಅರಬ್ಬಿ ಸಮುದ್ರ, ಅಘನಾಶಿನಿ ನದಿ ಮತ್ತು ಶರಾವತಿ ಹಿನ್ನೀರಿನಲ್ಲಿ ಜಲಸಾಹಸ ಕ್ರೀಡೆಗಳಿಗೆ (Water Sports) ವಿಧಿಸಿದ್ದ ನಿಷೇಧವನ್ನು ಜಿಲ್ಲಾಡಳಿತ 24 ಗಂಟೆಯೊಳಗೆ ಹಿಂಪಡೆದಿದೆ. ಹವಾಮಾನ ವೈಪರೀತ್ಯದ ಕಾರಣ ಮುಂಗಾರು ಮುಗಿಯುವವರೆಗೆ ಪ್ರವಾಸೋದ್ಯಮ ಇಲಾಖೆ ನಿರ್ಬಂಧ ವಿಧಿಸಿದ್ದತ್ತು. ಆದರೆ ಆದೇಶ ಹೊರಡಿಸಿದ ಮರುದಿನವೇ ಅದನ್ನು ವಾಪಸ್ ಪಡೆಯಲಾಗಿದೆ. ಆ ಮೂಲಕ ಪ್ರವಾಸಿಗರಿಗೆ (Tourist) ಗುಡ್​ನ್ಯೂಸ್​​ ಸಿಕ್ಕಿದೆ.

ಮುಖ್ಯಾಂಶಗಳು

  • ಉತ್ತರ ಕನ್ನಡ ಜಲಸಾಹಸ ಕ್ರೀಡೆ ನಿಷೇಧ ತೆರವು
  • ಉತ್ತರ ಕನ್ನಡ ಡಿಸಿ ಲಕ್ಷ್ಮೀ ಪ್ರಿಯಾರಿಂದ ಅಧಿಕಾರಿಗಳಿಗೆ ಸೂಚನೆ
  • ಪ್ರವಾಸಿಗರಿಗೆ ಗುಡ್​ನ್ಯೂಸ್​!

ದಿಢೀರ್​ ಆದೇಶ ಹಿಂಪಡೆದಿದ್ದೇಕೆ?

ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಮುಗಿಯುವವರೆಗೂ ಜಲಸಾಹಸ ಕ್ರೀಡೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಪ್ರವಾಸೋದ್ಯಮ ಇಲಾಖೆ ನಿನ್ನೆ ಆದೇಶ ಹೊರಡಿಸಿತ್ತು. ಆದರೆ, ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತರದೆ ಜಲಸಾಹಸ ಕ್ರೀಡೆಗೆ ನಿರ್ಬಂಧಿಸಲಾಗಿತ್ತು. ಆಡಳಿತ ವ್ಯವಸ್ಥೆಯಲ್ಲಿನ ಈ ಗಂಭೀರ ಸಮನ್ವಯ ಕೊರತೆಯನ್ನು ಸೂಕ್ಷ್ಮವಾಗಿ ಗಮನಿಸಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ತಕ್ಷಣ ಆದೇಶ ಹಿಂಪಡೆದು ನಿರ್ಬಂಧ ತೆರವು ಮಾಡಲು ಸೂಚಿಸಿದ್ದಾರೆ.

ಪ್ರವಾಸಿಗರು ಮತ್ತು ಉದ್ಯಮಿಗಳಿಗೆ ನಿರಾಳ

ಜಿಲ್ಲಾಧಿಕಾರಿಗಳ ಖಡಕ್ ಸೂಚನೆ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾದ ಗೋಕರ್ಣ, ಮುರುಡೇಶ್ವರ, ಕಾರವಾರ, ಹೊನ್ನಾವರ ಹಾಗೂ ದಾಂಡೇಲಿ ಭಾಗದಲ್ಲಿ ಜಲಸಾಹಸ ಕ್ರೀಡೆಗಳಿಗೆ ವಿಧಿಸಲಾಗಿದ್ದ ನಿಷೇಧವನ್ನು ಅಧಿಕೃತವಾಗಿ ತೆರವುಗೊಳಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ದಿಢೀರ್ ನಿಷೇಧದ ನಿರ್ಧಾರದಿಂದ ಆತಂಕಕ್ಕೊಳಗಾಗಿದ್ದ ಸ್ಥಳೀಯ ಹೋಂ ಸ್ಟೇ, ರೆಸಾರ್ಟ್ ಮಾಲೀಕರು ಹಾಗೂ ಜಲಸಾಹಸ ಕ್ರೀಡೆಗಳನ್ನೇ ನಂಬಿಕೊಂಡಿದ್ದ ಉದ್ಯಮಿಗಳು ಜಿಲ್ಲಾಡಳಿತದ ಈ ಯು-ಟರ್ನ್ ನಿರ್ಧಾರದಿಂದ ನಿಟ್ಟುಸಿರು ಬಿಡುವಂತಾಗಿದೆ.

ಇದನ್ನೂ ಓದಿ: ಪ್ರವಾಸಿಗರಿಗೆ ನಿರಾಸೆ: ಹವಾಮಾನ ವೈಪರಿತ್ಯ ಹಿನ್ನೆಲೆ ಉತ್ತರ ಕನ್ನಡದಲ್ಲಿ ಜಲಸಾಹಸ ಕ್ರೀಡೆಗೆ ನಿರ್ಬಂಧ

ಒಟ್ಟಾರೆ ಅಧಿಕಾರಿಗಳ ಹಗ್ಗಜಗ್ಗಾಟ ಹಾಗೂ ಸಮನ್ವಯದ ಕೊರತೆಯಿಂದಾಗಿ ಕರಾವಳಿ ಭಾಗದಲ್ಲಿ ಒಂದೇ ದಿನದಲ್ಲಿ ಹೈಡ್ರಾಮಾ ನಡೆದಂತಾಗಿದ್ದು, ಸದ್ಯಕ್ಕಂತೂ ಪ್ರವಾಸಿಗರು ಎಂದಿನಂತೆ ಜಲಸಾಹಸ ಕ್ರೀಡೆಗಳ ಮಜಾ ಸವಿಯಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Chanakya Niti: ಈ ಗುಣಗಳಿದ್ದರೆ ಜನ ನಿಮ್ಮನ್ನು ಸುಲಭವಾಗಿ ಅವರ ತಾಳಕ್ಕೆ ತಕ್ಕಂತೆ ಕುಣಿಸುತ್ತಾರೆ ಎಚ್ಚರ…! – Kannada News | Chanakya Niti: others start controlling you Because of these weaknesses of yours

ಇತರರು ನಮ್ಮನ್ನು ಆಳಲು ಅಥವಾ ನಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಯಾವಾಗಲೂ ಕಾಯುತ್ತಲೇ ಇರುತ್ತಾರೆ. ನಮ್ಮಲ್ಲಿರುವ ಕೆಲವೊಂದು ಅಭ್ಯಾಸಗಳು, ದೌರ್ಬಲ್ಯದ (weaknesses) ಕಾರಣದಿಂದಾಗಿ ಇತರರು ನಮ್ಮ ಮೇಲೆ ಬಲು ಸುಲಭವಾಗಿ ಪ್ರಾಬಲ್ಯ ಸಾಧಿಸುತ್ತಾರೆ ಮತ್ತು ನಾವು ಅವರ ತಾಳಕ್ಕೆ ತಕ್ಕಂತೆ ಕುಣಿಯಲು ಆರಂಭಿಸುತ್ತೇವೆ. ಈ ಅಭ್ಯಾಸಗಳನ್ನು ಸಮಯೋಚಿತವಾಗಿ ಬದಲಾಯಿಸದಿದ್ದರೆ, ಆತ್ಮವಿಶ್ವಾಸ ಮತ್ತು ಸ್ವತಂತ್ರ ಚಿಂತನೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಹಾಗಿದ್ದರೆ ನಾವು ಹೇಗಿದ್ದರೆ ಜನ ನಮ್ಮನ್ನು ಅವರ ತಾಳಕ್ಕೆ ತಕ್ಕಂತೆ ಕುಣಿಸುತ್ತಾರೆ ಅನ್ನೋದನ್ನು ನೋಡೋಣ ಬನ್ನಿ.

ನಿಮ್ಮಲ್ಲಿ ಈ ಗುಣಗಳಿದ್ದರೆ ಜನ ನಿಮ್ಮನ್ನೂ ಕಂಟ್ರೋಲ್‌ ಮಾಡುತ್ತಾರೆ:

ಆತ್ಮವಿಶ್ವಾಸದ ಕೊರತೆ: ಆಚಾರ್ಯ ಚಾಣಕ್ಯರ ಪ್ರಕಾರ, ಆತ್ಮವಿಶ್ವಾಸದ ಕೊರತೆಯಿರುವ ವ್ಯಕ್ತಿಯು ಜೀವನದಲ್ಲಿ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ವ್ಯಕ್ತಿಗಳು ಯಾವಾಗಲೂ ಸಣ್ಣ ಮತ್ತು ದೊಡ್ಡ ವಿಷಯಗಳಿಗೆ ಇತರರ ಸಲಹೆಯನ್ನು ಅವಲಂಬಿಸಿರುತ್ತಾರೆ. ಇದು ಪದೇ ಪದೇ ಸಂಭವಿಸಿದಾಗ, ಸ್ವಲ್ಪ ಸಮಯದ ನಂತರ, ಇತರರು ಈ ದೌರ್ಬಲ್ಯವನ್ನು ಬಳಸಿಕೊಳ್ಳಲು ಪ್ರಾರಂಭಿಸುತ್ತಾರೆ. ನಿಮಗೆ ಆತ್ಮವಿಶ್ವಾಸದ ಕೊರತೆಯಿರುವಾಗ, ನೀವು ಮಾನಸಿಕವಾಗಿಯೂ ದುರ್ಬಲರಾಗುತ್ತೀರಿ. ಇತರರು ನಿಮ್ಮ ಜೀವನವನ್ನು ಸುಲಭವಾಗಿ ನಿಯಂತ್ರಿಸಲು ಇದು ಒಂದು ಪ್ರಮುಖ ಕಾರಣವಾಗಿದೆ.

ಎಲ್ಲರನ್ನೂ ಮೆಚ್ಚಿಸುವ ಅಭ್ಯಾಸ: ಕೆಲವು ಜನರಿಗೆ ಇತರರನ್ನು ಮೆಚ್ಚಿಸಲೆಂದೇ ಬದುಕುವ ಅಭ್ಯಾಸವಿರುತ್ತದೆ. ಅವರು ಯಾರಿಗೂ ಇಲ್ಲ ಎಂದು ಹೇಳುವುದಿಲ್ಲ. ಆಚಾರ್ಯ ಚಾಣಕ್ಯರ ಪ್ರಕಾರ, ಈ ಪ್ರವೃತ್ತಿಯು ವ್ಯಕ್ತಿಯನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ ಇತರರ ಸಂತೋಷದ ಬಗ್ಗೆ ನಿರಂತರವಾಗಿ ಯೋಚಿಸುವ ವ್ಯಕ್ತಿಯು ತನ್ನ ಸ್ವಂತ ಅಗತ್ಯತೆಗಳು ಮತ್ತು ಸಂತೋಷವನ್ನು ನಿರ್ಲಕ್ಷಿಸಲು ಪ್ರಾರಂಭಿಸುತ್ತಾನೆ. ಇದರಿಂದ ಇತರರು ಅವನನ್ನು ಸುಲಭವಾಗಿ ನಿಯಂತ್ರಿಸಲು ಪ್ರಾರಂಭಿಸುತ್ತಾರೆ. ಆದ್ದರಿಂದ ಇತರರನ್ನು ಮೆಚ್ಚಿಸುವ ಸಲುವಾಗಿ ಬದುಕುವ ಅವಶ್ಯಕತೆಯಿಲ್ಲ. ನಿಮಗಾಗಿ ನೀವು ಬದುಕಬೇಕು.

ಭಯ ಮತ್ತು ಅಭದ್ರತೆಯ ಭಾವನೆಗಳು: ಕೆಲವು ಜನರು, ವೈಫಲ್ಯ, ಒಂಟಿತನ ಅಥವಾ ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಭಯದಿಂದ, ಇತರರು ಹೇಳುವ ಎಲ್ಲವನ್ನೂ ಕೇಳುತ್ತಾರೆ. ಹೀಗೆ ನಿರಂತರ ಭಯದಲ್ಲಿ ಬದುಕುವ ವ್ಯಕ್ತಿಯು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಅಂತಹ ವ್ಯಕ್ತಿಗಳು ತಮ್ಮ ಹಕ್ಕುಗಳಿಗಾಗಿ ಮಾತನಾಡಲು ಸಹ ಸಾಧ್ಯವಿಲ್ಲ. ಕ್ರಮೇಣ, ಈ ಭಯವು ಅವರನ್ನು ಇತರರ ಕೈಗೊಂಬೆಯನ್ನಾಗಿ ಮಾಡುತ್ತದೆ.

ಇದನ್ನೂ ಓದಿ: ದಾಂಪತ್ಯ ಜೀವನ ಸುಖವಾಗಿರಬೇಕೆಂದರೆ ಗಂಡ-ಹೆಂಡತಿ ಹೀಗಿರಬೇಕೆಂದಿದ್ದಾರೆ ಚಾಣಕ್ಯ

ತಪ್ಪು ಸಹವಾಸವೂ ಪರಿಣಾಮ ಬೀರುತ್ತದೆ: ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ತಪ್ಪು ಸಹವಾಸ ಮಾಡಲು ಪ್ರಾರಂಭಿಸಿದರೆ, ಅದು ಅವನ ಆಲೋಚನೆ ಮತ್ತು ನಡವಳಿಕೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಕುತಂತ್ರ ಮತ್ತು ಸ್ವಾರ್ಥ ಸ್ವಾಭಾವದವರು ಹೆಚ್ಚಾಗಿ ದುರ್ಬಲ ಮನಸ್ಥಿತಿ ಹೊಂದಿರುವವರನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ.

ತಮಗಾಗಿ ಬದುಕಲು ಹಿಂಜರಿಯುವವರು: ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಆಸೆಗಳು, ಕನಸುಗಳು ಮತ್ತು ಆಲೋಚನೆಗಳಿಗೆ ಬೆಲೆ ಕೊಡುವುದನ್ನು ನಿಲ್ಲಿಸಿದಾಗ, ಅವನು ಇತರರಿಗೆ ಅನುಗುಣವಾಗಿ ತನ್ನ ಜೀವನವನ್ನು ನಡೆಸಲು ಪ್ರಾರಂಭಿಸುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಗುರುತು ಮತ್ತು ಸ್ವಾಭಿಮಾನವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದು ಚಾಣಕ್ಯ ಹೇಳುತ್ತಾರೆ. ಇತರರಿಗಿಂತ ತಮ್ಮನ್ನು ತಾವು ಕೀಳಾಗಿ ಪರಿಗಣಿಸುವವರು ಸುಲಭವಾಗಿ ಇತರರ ನಿಯಂತ್ರಣಕ್ಕೆ ಒಳಗಾಗುತ್ತಾರೆ. ಆದ್ದರಿಂದ ಇತರರ ಪ್ರಭಾವಕ್ಕೆ ಒಳಗಾಗುವುದನ್ನು ತಪ್ಪಿಸಲು ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಗಳನ್ನು ಮತ್ತು ತಮ್ಮ ನಿರ್ಧಾರಗಳ ಮೇಲೆ ನಂಬಿಕೆ ಇಡುವುದು ಬಹಳ ಮುಖ್ಯವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version