ಕೋಲಾರದಲ್ಲಿ ಗರ್ಭಿಣಿಯರ ಮರಣ ಪ್ರಮಾಣ ತಗ್ಗಿಸಲು RRR ಸಂಜೀವಿನಿ: ಏನಿದು RRR ಫಾರ್ಮುಲಾ? – Kannada News | RRR Formula Halves Maternal Deaths: A National Model for Pregnant Women Safety

ಕೋಲಾರ, ಏಪ್ರಿಲ್​ 19: ಪ್ರತಿಯೊಬ್ಬ ಮಹಿಳೆಯರ ಪಾಲಿಗೆ ಹೆರಿಗೆ (Mortality) ಎಂಬುದು ಮರುಜನ್ಮದ ಸಮಾನ. ಹೆರಿಗೆ ಸಂದರ್ಭದಲ್ಲಿ ಮಗುವಿಗೆ ಜನ್ಮ ನೀಡುವ ವೇಳೆ ಅದೆಷ್ಟೋ ಮಹಿಳೆಯರು (women) ಹಲವು ಕಾರಣಗಳಿಂದ ಸಾವನ್ನಪ್ಪುತ್ತಾರೆ. ಹೀಗಾಗಿ ಆ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೈಗೊಂಡ ಅದೊಂದು ಫಾರ್ಮುಲಾ ಗರ್ಭಿಣಿ ಮಹಿಳೆಯರ ಸಾವಿನ ಸಂಖ್ಯೆ ಕಡಿಮೆ ಮಾಡಿ ದೇಶದ ಗಮನ ಸೆಳೆದಿದೆ.

ಪ್ರತಿಯೊಂದು ಹೆಣ್ಣಿನ ಕನಸು ತಾನೊಂದು ಮಗುವಿಗೆ ಜನ್ಮ ಕೊಡಬೇಕು, ಆ ಮೂಲಕ ತಾಯಿಯಾಗಿ ಪರಿಪೂರ್ಣತೆ ಹೊಂದಬೇಕು ಅನ್ನೋ ಹಂಬಲ ಇರುತ್ತದೆ. ಆದರೆ ಅದು ಅಷ್ಟು ಸುಲಭದ ಕೆಲಸವಲ್ಲ. ಮಹಿಳೆಯರ ಹೆರಿಗೆ ಸಮಯವನ್ನು ಮಹಿಳೆಯ ಪುನರ್ಜನ್ಮ ಎಂದೇ ಪರಿಗಣಿಸಲಾಗುತ್ತದೆ. ಕಾರಣ ಅದೆಷ್ಟೋ ಮಹಿಳೆಯರು ಹೆರಿಗೆ ಸಮಯದಲ್ಲಿ ಹಲವು ಕಾರಣಗಳಿಂದ ಸಾವನ್ನಪ್ಪುತ್ತಾರೆ. ಇದನ್ನು ಎಂ.ಎಂ.ಆರ್​ ಎನ್ನುತ್ತಾರೆ ಅಂದರೆ ಮಾತೃ ಮರಣ ಪ್ರಮಾಣ.

ಇದನ್ನೂ ಓದಿ: ಕೋಲಾರದಲ್ಲೊಂದು ವಿಚಿತ್ರ ಘಟನೆ: ಮನುಷ್ಯರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಣಿಗಳ ರಕ್ತ ಪರೀಕ್ಷೆ

ಇದು ದೇಶದಲ್ಲಿ ಶೇ 97 ರಷ್ಟಿದೆ. ಇನ್ನು ಕರ್ನಾಟಕದಲ್ಲಿ ಶೇ 68 ರಷ್ಟಿದೆ. ಕೋಲಾರ ಜಿಲ್ಲೆಯಲ್ಲಿ ಇದರ ಪ್ರಮಾಣ ಶೇ 23 ರಷ್ಟಿದೆ. ಇಡೀ ದೇಶದಲ್ಲಿ ಇದರ ಪ್ರಮಾಣ ಕಡಿಮೆಯಾಗಲು ಕಾರಣ ಕೋಲಾರ ಜಿಲ್ಲೆಯಲ್ಲಿ ಕಳೆದ ಒಂದುವರೆ ವರ್ಷಗಳ ಹಿಂದೆ ಮಾತೃ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಹಲವು ತಜ್ಞ ವೈದ್ಯರು, ಅಧಿಕಾರಿಗಳ ತಂಡ ಕೈಗೊಂಡ ಅದೊಂದು ಫಾರ್ಮುಲಾದಿಂದ ಕೇವಲ ಒಂದೇ ವರ್ಷದಲ್ಲಿ ಕೋಲಾರ ಜಿಲ್ಲೆಯಲ್ಲಿನ ಮಾತೃ ಮರಣ ಪ್ರಮಾಣ ಶೇ 50 ರಷ್ಟು ಕುಸಿತ ಕಂಡಿದೆ.

ಕೋಲಾರ ಜಿಲ್ಲೆಯಲ್ಲಿ ಈ ಮಾತೃ ಮರಣ ಪ್ರಮಾಣವನ್ನು ತಗ್ಗಿಸಲು ಕೈಗೊಂಡ ಅದೊಂದು ಸೂತ್ರವೇ ಆರ್​.ಆರ್.ಆರ್. ಇದೊಂದು ಸೂತ್ರ ಇಂದು ಜಿಲ್ಲೆಯ ಇಡೀ ದೇಶದ ಗಮನ ಸೆಳೆದಿದೆ. ಅಲ್ಲದೆ ಮಾತೃ ಮರಣ ಪ್ರಮಾಣವನ್ನು ಶೇ 50ರಷ್ಟು ಕುಸಿಯುವಂತೆ ಮಾಡಿದೆ. ಇದು ನಿಜಕ್ಕೂ ಹೆಗ್ಗಳಿಕೆಯ ವಿಚಾರವೇ ಸರಿ.

ಏನಿದು ಆರ್​ಆರ್​ಆರ್​​ ಸೂತ್ರ?

2023-24ರಲ್ಲಿ 9 ಜನ ಮಹಿಳೆಯರು ಹೆರಿಗೆ ಸಮಯದಲ್ಲಿ ಸಾವನ್ನಪ್ಪಿದ್ದರು. ಇದರ ಪ್ರಮಾಣ ಶೇ 50 ರಷ್ಟಿತ್ತು, 2024-25ರಲ್ಲಿ 8 ಜನ ಗರ್ಭಿಣಿ ಮಹಿಳೆಯರ ಸಾವಾಗಿದ್ದು, ಇದರ ಪ್ರಮಾಣ ಶೇ 46ರಷ್ಟಿತ್ತು. ಆದರೆ ಈ ಆರ್​.ಆರ್​.ಆರ್​. ಸೂತ್ರ ಪ್ರಯೋಗದ ನಂತರ 2025-26ರಲ್ಲಿ 4 ಜನ ಗರ್ಭಿಣಿಯರು ಸಾವನ್ನಪ್ಪಿದ್ದು, ಇದರ ಪ್ರಮಾಣ ಶೇ 23ಕ್ಕೆ ಕುಸಿದಿದೆ. ಅಷ್ಟಕ್ಕೂ ಕಳೆದ ಒಂದೂವರೆ ವರ್ಷಗಳ ಹಿಂದೆ ಕೋಲಾರ ಜಿಲ್ಲಾಧಿಕಾರಿ ಎಂ.ಆರ್​.ರವಿ ಹಾಗೂ ಆರೋಗ್ಯಾಧಿಕಾರಿಗಳ ತಂಡ ಮಾತೃ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಹಲವು ಸಭೆಗಳನ್ನು ಮಾಡಿ ಚಿಂತನೆ ನಡೆಸಿ ಅವರು ಕಂಡುಕೊಂಡಿದ್ದೇ ಈ ಆರ್​ಆರ್​ಆರ್​​​ ಸೂತ್ರ. ಇದರಿಂದ ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯರ ಸಾವಿನ ಸಾವಿನ ಪ್ರಮಾಣ ಕಡಿಮೆ ಆಗಿದೆ.

ಆರ್​ಆರ್​ಆರ್​​ ಅರ್ಥವೇನು?

ಮೊದಲ ಆರ್​ ಅಂದರೆ (ರೀ ಅಸೆಸ್​ಮೆಂಟ್ ಆಫ್​ ರಿಸ್ಕ್​) ಅಂದರೆ ಕಠಿಣ ಪರಿಸ್ಥಿತಿಯಲ್ಲಿರುವ ಗರ್ಭಿಣಿ ಮಹಿಳೆಯರ ಮೇಲೆ ಹೆಚ್ಚಿನ ನಿಗಾವಹಿಸುವುದು. ಎರಡನೇ ಆರ್​. (ರೆಡ್ಯೂಸ್​ ದ ಡಿಲೇ) ಗರ್ಭಿಣಿ ಮಹಿಳೆ ಹೆರಿಗೆ ಸಂದರ್ಭದಲ್ಲಾಗುವ ವಿಳಂಬವನ್ನು ತಡೆದು ಕೂಡಲೇ ಆಸ್ಪತ್ರೆಗೆ ದಾಖಲಿಸುವುದು. ಮೂರನೇ ಆರ್​. (ರೆಸ್ಪಾನ್ಸ್​ ಕ್ವಿಕ್ಲಿ) ಅಂದರೆ ಗರ್ಭಿಣಿ ಮಹಿಳೆ ಪ್ರಾಥಮಿಕ ಅಥವಾ ತಾಲ್ಲೂಕಾಸ್ಪತ್ರೆಗೆ ದಾಖಲಾದ 10 ರಿಂದ 15 ನಿಮಿಷದಲ್ಲಿ ದೊಡ್ಡ ಆಸ್ಪತ್ರೆಯ ಅವಶ್ಯಕತೆ ಇದ್ದರೆ ಆಕೆಯನ್ನು ಕೂಡಲೇ ರವಾನೆ ಮಾಡುವುದು ಹಾಗೂ ಮಾಹಿತಿಯನ್ನು ಕೂಡಲೇ ಜಿಲ್ಲಾಸ್ಪತ್ರೆಗಳಿಗೆ ತಿಳಿಸುವುದು. ಹೀಗೆ ಮೂರು ಸೂತ್ರಗಳ ಮೂಲಕ ಕೋಲಾರ ಜಿಲ್ಲೆಯಲ್ಲಿನ ಮಾತೃ ಮರಣ ಪ್ರಮಾಣವನ್ನು ತಗ್ಗಿಸಲಾಗಿದೆ.

ಆರೋಗ್ಯಾಧಿಕಾರಿ ಮತ್ತು ಜಿಲ್ಲಾಧಿಕಾರಿ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್​ ಅವರು ಮಾತನಾಡಿದ್ದು, ಕಠಿಣ ಪರಿಸ್ಥಿತಿಯಲ್ಲಿರುವ ಗರ್ಭಿಣಿಯರ ಮೇಲೆ ವಿಶೇಷ ನಿಗಾ ವಹಿಸಿದ್ದರಿಂದ ಈ ಬದಲಾವಣೆ ಸಾಧ್ಯವಾಗಿದೆ ಎಂದಿದ್ದಾರೆ. ಗರ್ಭಿಣಿಯರ ಮರಣ ಪ್ರಮಾಣ ತಗ್ಗಿಸಲು ತಜ್ಞರ ಸಭೆ ನಡೆಸಿ ಈ ಆರ್.ಆರ್.ಆರ್ ಸೂತ್ರ ಜಾರಿಗೆ ತರಲಾಯಿತು. ಇದರ ಫಲವಾಗಿ ಇಂದು ಮರಣ ಪ್ರಮಾಣ ಶೇ. 23ಕ್ಕೆ ಕುಸಿದಿದೆ ಎಂದು ಜಿಲ್ಲಾಧಿಕಾರಿ ಡಾ. ಎಂಆರ್​ ರವಿ ಹೇಳಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಪಿಂಚಣಿ ಹಣಕ್ಕೂ ಪರದಾಟ: ನಿತ್ಯ ಅಲೆದು ಅಲೆದು ಕಂಗಾಲಾದ ವೃದ್ಧರು, ಅಂಗವಿಕಲ ಪಿಂಚಣಿದಾರರು

ಒಟ್ಟಾರೆ ಕೋಲಾರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರೂಪಿಸಲಾದ ಅದೊಂದು ಸೂತ್ರ ಇಂದು ಗರ್ಭಿಣಿ ಮಹಿಳೆಯರ ಸಾವಿನ ಪ್ರಮಾಣ ಕಡಿಮೆ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನಷ್ಟು ಕಡಿಮೆ ಮಾಡುವ ಉದ್ದೇಶ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯದ್ದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಶ್ರೀರಾಮನ ಕುರಿತು ವ್ಯಂಗ್ಯ ಆರೋಪ, ಪ್ರತಿಕ್ರಿಯೆ ನೀಡಿದ ಪ್ರಕಾಶ್ ರಾಜ್ – Kannada News | Prakash Raj reaction on allegation on him of hurting Hindu sentiments

ಇತ್ತೀಚೆಗಷ್ಟೆ ನಟ ಪ್ರಕಾಶ್ ರಾಜ್ (Prakash Raj) ಅವರು ರಾಮಾಯಣದ ಬಗ್ಗೆ ಮಾತನಾಡಿದ ವಿಡಿಯೋ ಒಂದು ವೈರಲ್ ಆಗಿತ್ತು. ವಿಡಿಯೋನಲ್ಲಿ ನಟ ಪ್ರಕಾಶ್ ರಾಜ್ ಅವರು ರಾಮನಿಗೆ, ರಾಮಾಯಣಕ್ಕೆ ಅವಮಾನ ಆಗುವಂತೆ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ ಎಂದು ಹಲವರು ಆರೋಪಿಸಿದ್ದರು. ಪ್ರಕಾಶ್ ರಾಜ್ ವಿರುದ್ಧ ಕ್ರಮಕ್ಕೆ ಸಹ ಒತ್ತಾಯಿಸಲಾಗಿತ್ತು. ಇದೀಗ ನಟ ಪ್ರಕಾಶ್ ರಾಜ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟ್ಟರ್​​ನಲ್ಲಿ ವಿಡಿಯೋ ಅಪ್​​ಲೋಡ್ ಮಾಡಿರುವ ಪ್ರಕಾಶ್ ರಾಜ್ ಉತ್ತರ ನೀಡಿದ್ದಾರೆ.

‘ಒಂದು ಸಾಹಿತ್ಯೋತ್ಸವದಲ್ಲಿ ‘ಕಲೆ ಮತ್ತು ಅದರ ಸ್ಥಿರತೆ’ ಎಂಬ ಗೋಷ್ಠಿಯಲ್ಲಿ ನಾನು ಸಂವಾದದಲ್ಲಿ ಭಾಗವಹಿಸಿದ್ದೆ. ಅದರಿಂದ ಕೆಲವು ಮಾತುಗಳನ್ನಷ್ಟೆ ತೆಗೆದುಕೊಂಡು ಅದನ್ನು ತಿರುಚಿ ನಾನು ಅವತಾರ ಪುರುಷ ಶ್ರೀರಾಮನ ವ್ಯಂಗ್ಯ ಮಾಡಿದ್ದೇನೆ. ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆ ತಂದಿದ್ದೇನೆ ಎನ್ನುತ್ತಿದ್ದಾರೆ. ಎಲ್ಲ ಧರ್ಮಗಳನ್ನೂ ಪ್ರೀತಿಸುವ ನನಗೆ ಯಾರನ್ನು ನೋವಿಸುವ ಅವಶ್ಯಕತೆ ಇಲ್ಲ’ ಎಂದಿದ್ದಾರೆ ಪ್ರಕಾಶ್ ರಾಜ್.

‘ಆದರೆ, ಧರ್ಮವನ್ನು ಮತೋನ್ಮಾಧದೊಂದಿಗೆ ಇರಿಸಿಕೊಂಡು ಅಸಹ್ಯರೀತಿಯ ರಾಜಕೀಯ ಮಾಡುತ್ತಾ ಇರುವವರು ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ, ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಈ ರೀತಿ ಎಲ್ಲ ಮಾಡುತ್ತಿದ್ದಾರೆ. ಪಾಪ ಅವರ ಕಷ್ಟ, ಅವರ ನೋವು ನನಗೆ ಅರ್ಥವಾಗುತ್ತದೆ. ಅವರಿಗೆ ನಾನು ಉತ್ತರ ಕೊಡಬೇಕು, ಈಗ ತಮಿಳುನಾಡು ಚುನಾವಣೆ ಮುಗಿದಿದೆ. ನಾನು ಸ್ವಲ್ಪ ತೋಟದ ಕೆಲಸ ಮಾಡಿಸುತ್ತಿದ್ದೇನೆ. ಬೇಸಿಗೆ ಮುಗಿಯುತ್ತಿದೆ. ಮಳೆಗಾಲ ಬರುತ್ತಿದೆ. ಅಷ್ಟರಲ್ಲಿ ನಾನು ಕೆಲಸ ಮುಗಿಸಬೇಕು, ಅದೆಲ್ಲ ಮುಗಿಸಿ ಬರುವೆ, ಅಲ್ಲಿಯವರೆಗೂ ನಿಮ್ಮ ಕೆಲಸದಲ್ಲಿ ನೀವಿರುತ್ತೀರಾ? ಅಥವಾ ಇದೇ ರೀತಿ ತಂಟೆ-ತರಲೆ ಮಾಡುತ್ತಿರುತ್ತೀರಾ ನಿಮಗೆ ಬಿಟ್ಟಿದ್ದು’ ಎಂದು ವಿರೋಧಿಗಳಿಗೆ ಹೇಳಿದ್ದಾರೆ ಪ್ರಕಾಶ್ ರಾಜ್.

ಇದನ್ನೂ ಓದಿ:ರಾಮಾಯಣದ ಬಗ್ಗೆ ಪ್ರಕಾಶ್ ರಾಜ್ ಮಾತನಾಡಿದ ವಿಡಿಯೋ ವೈರಲ್; ತೀವ್ರ ಟೀಕೆ

ಪ್ರಕಾಶ್ ರಾಜ್ ಅವರು ರಾಮನ ಕುರಿತಾಗಿ ನೀಡಿರುವ ಹೇಳಿಕೆ ವಿರುದ್ಧ ಸಾಕಷ್ಟು ಆಕ್ರೋಶ ಎದ್ದಿದೆ. ಟಿಟಿಡಿ ಬೋರ್ಡ್​ನ ಭಾನುಪ್ ಪ್ರಕಾಶ್ ರೆಡ್ಡಿ ಎಂಬುವರು ಪ್ರಕಾಶ್ ರಾಜ್​​ಗೆ ಮಾನನಷ್ಟ ಮೊಕದ್ದಮೆ ಅಡಿ ನೊಟೀಸ್ ಕಳಿಸಿದ್ದಾರೆ. ಪ್ರಕಾಶ್ ರಾಜ್ ಅವರು ಕ್ಷಮೆ ಕೇಳದೇ ಹೋದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹಲವು ಹಿಂದೂಪರ ಸಂಘಟನೆಗಳು ಸಹ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ ಹೊರಹಾಕಿದ್ದು, ಪ್ರಕಾಶ್ ರಾಜ್ ಅವರನ್ನು ಬಂಧಿಸಬೇಕು ಎಂದಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:23 pm, Sun, 19 April 26

Source link

SRH-CSK ಪಂದ್ಯದ ವೇಳೆ ಬ್ಲಾಕ್ ಮ್ಯಾಜಿಕ್; ನಿಂಬೆ ಹಣ್ಣು ಮಂತ್ರಿಸಿದ ಕೂಡಲೇ ಬಿತ್ತು ವಿಕೆಟ್! – Kannada News | SRH vs CSK IPL 2026: The Truth Behind Viral “Black Magic” and Fake BCCI Complaint

ಐಪಿಎಲ್ 2026 ರ 27 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಮ್ಮ ಮೂರನೇ ಗೆಲುವು ದಾಖಲಿಸಿತು. ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ 195 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿಫಲವಾಯಿತು. ಪರಿಣಾಮವಾಗಿ ಸಿಎಸ್​​ಕೆ ಲೀಗ್​ನಲ್ಲಿ 4ನೇ ಸೋಲು ಅನುಭವಿಸಿದರೆ, ಇತ್ತ ಸನ್‌ರೈಸರ್ಸ್ ಮೂರನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಇದು ಪಂದ್ಯದ ವಿಚಾರವಾದರೆ, ಇದೇ ಪಂದ್ಯದ ವೇಳೆ ಮಾಟ- ಮಂತ್ರದ ಪ್ರಯೋಗ ನಡೆದಿದ್ದು, ಇದರಿಂದಾಗಿ ಸಿಎಸ್​​ಕೆ ತಂಡ ಸೋತಿದೆ ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರ ಜೊತೆಗೆ ಈ ವಿಚಾರವಾಗಿ ಸಿಎಸ್​ಕೆ ಆಡಳಿತ ಮಂಡಳಿ ಬಿಸಿಸಿಐಗೆ ದೂರು ನೀಡಿದೆ ಎಂದು ವರದಿಯಾಗಿದ್ದು, ದೂರಿನ ಪ್ರತಿಯೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೀಗಾಗಿ ಅದರ ಅಸಲಿಯತ್ತೇನು ಎಂಬುದನ್ನು ನೋಡುವುದಾದರೆ..

ವೈರಲ್ ವಿಡಿಯೋದಲ್ಲಿ ಇರುವುದೇನು?

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಇರುವುದೇನು ಎಂಬುದನ್ನು ನೋಡುವುದಾದರೆ.. ಸನ್‌ರೈಸರ್ಸ್ ತಂಡದ ಜೆರ್ಸಿ ತೊಟ್ಟಿರುವ ಅಭಿಮಾನಿಯೊಬ್ಬ ಸಿಎಸ್​​ಕೆ ತಂಡದ ಬ್ಯಾಟಿಂಗ್‌ ನಡೆಯುವ ವೇಳೆ ತನ್ನ ಕಿಸೆಯಲ್ಲಿದ್ದ ನಿಂಬೆ ಹಣ್ಣನ್ನು ಹೊರತೆಗೆದು ಮಂತ್ರ ಜಪಿಸಿದ್ದಾನೆ. ಆತ ಹಾಗೆ ಮಾಡಿದ ಕೂಡಲೇ ಸಿಎಸ್​ಕೆ ಪರ ಬ್ಯಾಟಿಂಗ್‌ ಮಾಡುತ್ತಿದ್ದ ಸ್ಫೋಟಕ ದಾಂಡಿಗ ಶಿವಂ ದುಬೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಇದೆಲ್ಲವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿದೆ. ಆದಾಗ್ಯೂ ಈ ವಿಡಿಯೋದಲ್ಲಿ ಸನ್‌ರೈಸರ್ಸ್ ಅಭಿಮಾನಿ ನಿಂಬೆ ಹಣ್ಣನ್ನು ಮಂತ್ರಿಸಿರುವುದು ಸತ್ಯವಾಗಿದ್ದರೂ, ಆತನ ಮಂತ್ರದಿಂದಲೇ ವಿಕೆಟ್ ಬಿತ್ತು ಎಂದು ಹೇಳಲಾಗದು. ಆತ ಹಾಗೆ ಮಾಡುವುದಕ್ಕೂ ವಿಕೆಟ್ ಬೀಳುವುದಕ್ಕೂ ಕಾಕತಾಳೀಯವಿರಬಹುದೇ ಹೊರತು ಇದರಲ್ಲಿ ಯಾವುದೇ ಬ್ಲಾಕ್ ಮ್ಯಾಜಿಕ್ ನಡೆದಿಲ್ಲ. ಇಂತಹ ಮೂಡನಂಭಿಕೆಗಳನ್ನು ಟಿವಿ9 ಕನ್ನಡ ಪ್ರೋತ್ಸಾಹಿಸುವುದಿಲ್ಲ.

ದೂರು ನೀಡಿತಾ ಸಿಎಸ್​ಕೆ?

ಇನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ಸಂಬಂಧಿಸಿದಂತೆ ಚೆನ್ನೈ ಸೂಪರ್ ಕಿಂಗ್ಸ್ ಆಡಳಿತ ಮಂಡಳಿ ಬಿಸಿಸಿಐಗೆ ದೂರು ಸಲ್ಲಿಸಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ದೂರಿನ ಪ್ರತಿಯೂ ವೈರಲ್ ಆಗಿದೆ. ಆದರೆ ಈ ಬಗ್ಗೆ ಸಿಎಸ್​ಕೆ ಆಡಳಿತ ಮಂಡಳಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಹಾಗೆಯೇ ಸಿಎಸ್​ಕೆ ಆಡಳಿತ ಮಂಡಳಿ ಈ ರೀತಿಯ ವಿಚಾರಗಳಿಗೆ ದೂರು ನೀಡುವ ಸಾಧ್ಯತೆಗಳಿಲ್ಲ. ಹೀಗಾಗಿ ವೈರಲ್ ಆಗಿರುವ ದೂರಿನ ಪ್ರತಿ ನಕಲಿಯಾಗಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆಷಿನ್​ಗಳು ಮನುಷ್ಯನ ಮಟ್ಟದ ಬುದ್ಧಿವಂತಿಕೆ ಹೊಂದಲು ಇನ್ನೆಷ್ಟು ವರ್ಷ ಬೇಕು? ಎಜಿಐ ಪಿತಾಮಹ ಬೆನ್ ಗರ್ಟ್ಜೆಲ್ ಹೇಳೋದಿದು – Kannada News | AI researcher Ben Goertzel predicts years for machine to have Human level intelligence

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್Image Credit source: Shutterstock

ನವದೆಹಲಿ, ಏಪ್ರಿಲ್ 19: ಎಲ್ಲೆಡೆ ಎಐನದ್ದೇ ಸುದ್ದಿ. ಎಲ್ಲೇ ಕೆಲಸ ಹೋದರೂ ಅದು ಎಐ ಎಫೆಕ್ಟ್ ಎನ್ನಲಾಗುತ್ತಿದೆ. ಯಂತ್ರದ ಬುದ್ಧಿವಂತಿಕೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಸಂಚಲನ ಸೃಷ್ಟಿಸುತ್ತೆ ಎನ್ನಲಾಗುತ್ತಿದೆ. ಅದರಲ್ಲೂ ಎಜಿಐ (AGI- ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್) ಆಗಮನವಾಗಿಬಿಟ್ಟರೆ ಮನುಷ್ಯರ ಕೆಲಸಗಳನ್ನೆಲ್ಲಾ ಯಂತ್ರಗಳು, ರೋಬೋಗಳು, ಇಂಟೆಲಿಜೆಂಟ್ ಸಾಫ್ಟ್​ವೇರ್​ಗಳೇ ಮಾಡಿ ಮುಗಿಸುತ್ತವೆ ಎಂದು ಪರಿಣಿತರುಗಳೇ ಹೇಳುತ್ತಿದ್ದಾರೆ. ಆದರೆ, ಮನುಷ್ಯರ ಬುದ್ಧಿಮತ್ತೆಯ ಮಟ್ಟವನ್ನು ಎಐಗೆ ಮುಟ್ಟಲು ಸಾಧ್ಯವಾಗಿಲ್ಲ. ಜನರೇಟಿವ್ ಎಐ ಅಥವಾ ಎಜಿಐನ ಪಿತಾಮಹ ಎಂದು ಖ್ಯಾತರಾಗಿರುವ ಬೆನ್ ಗರ್ಟ್ಜೆಲ್ (Ben Goertzel) ಪ್ರಕಾರ ಯಂತ್ರಗಳಿಗೆ ಮನುಷ್ಯರ ಮಟ್ಟದ ಬುದ್ಧಿಮತ್ತೆ ತಲುಪಲು ಹೆಚ್ಚು ಕಾಲ ಬೇಕಾಗಿಲ್ಲವಂತೆ.

ಮನುಷ್ಯರ ಬುದ್ಧಮತ್ತೆಯನ್ನು ಎಐ ತಲುಪಲು ಇನ್ನು ಕೇವಲ 2-3 ವರ್ಷ ಸಾಕು ಅಷ್ಟೇ ಎಂದು ಎಐ ರಿಸರ್ಚರ್ ಆಗಿರುವ ಬೆನ್ ಗರ್ಟ್ಜೆಲ್ ಹೇಳಿದ್ದರೆ. ಈ ಹಿಂದೆ ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಕೂಡ ಇದೇ ಟೈಮ್​ಫ್ರೇಮ್ ತಿಳಿಸಿದ್ದರು.

ಇದನ್ನೂ ಓದಿ: ಫಾರೆಕ್ಸ್ ರಿಸರ್ವ್ಸ್: ಮತ್ತೆ 700 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ ಭಾರತ

‘ಒಮ್ಮೆ ನಿಮಗೆ ಮನುಷ್ಯ ಮಟ್ಟದ ಎಜಿಐ ಸಿದ್ಧವಾಯಿತೆಂದರೆ, ಮಾನವನ ಬಹುತೇಕ ಎಲ್ಲಾ ಉದ್ಯೋಗಗಳು ನಿರರ್ಥಕ ಎನಿಸುತ್ತವೆ’ ಎಂದು ಗರ್ಟ್ಜೆಲ್ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ, ಹ್ಯೂಮನ್ ಇಂಟೆಲಿಜೆನ್ಸ್ ಮೀರಿಸುವ ಎಜಿಐ ಬಂದು ಬಿಟ್ಟರೆ ಅದು ಒಮ್ಮೆಗೇ ಅಳವಡಿಕೆ ಆಗದು. 2022ರಿಂದ ಜನರೇಟಿವ್ ಎಐ ಅನ್ನು ಕ್ರಮೇಣವಾಗಿ ಅಳವಡಿಲಾದಂತೆ, ಹಂತ ಹಂತವಾಗಿ ನಡೆಯುತ್ತದೆ ಎಂದು ಎಐ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಉಳಿಯುವ ಮತ್ತು ಅಳಿಯುವ ಉದ್ಯೋಗಗಳು

ಫೋರ್ಬ್ಸ್​ನ ಪೋಡ್​ಕ್ಯಾಸ್ಟ್​ವೊಂದರಲ್ಲಿ ಮಾತನಾಡುತ್ತಿದ್ದ ಬೆನ್ ಗರ್ಟ್ಜೆಲ್ ಅವರು ಎಐನಿಂದ ಬೇಗ ಹಾನಿಯಾಗುವ ಕೆಲಸಗಳು, ಹಾಗೂ ಎಐ ನಡುವೆಯೂ ಉಳಿಯಬಲ್ಲ ಕೆಲಸಗಳು ಯಾವುವೆಂದು ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: ಅಕ್ಷಯ ತೃತೀಯ ಸ್ಪೆಷಲ್: ಒಡವೆ, ಡಿಜಿಟಲ್ ಗೋಲ್ಡ್, ಇಟಿಎಫ್- ಬಂಗಾರದ ಲಾಭ ಪಡೆಯಲು ಯಾವುದು ಬೆಸ್ಟ್?

ವಕೀಲರು, ಗ್ರಾಫಿಕ್ ಡಿಸೈನರ್​ಗಳು ಮೊದಲಾದವರು ಎಐನಿಂದ ಬೇಗ ಹೊಡೆತ ತಿನ್ನಬಹುದು. ಆದರೆ, ಪ್ಲಂಬರ್​ಗಳು, ಎಲೆಕ್ಟ್ರಿಶಿಯನ್​ಗಳು ಮತ್ತು ಶಿಕ್ಷಕರು ಮೊದಲಾದವರು ಮುಂದೆಯೂ ಅಗತ್ಯ ಹೊಂದಿರುತ್ತಾರೆ. ಅದರಲ್ಲೂ ಶಿಕ್ಷಣಕ್ಕೆ ಮಾನವೀಯ ಸ್ಪರ್ಶ ಬಹಳ ಅಗತ್ಯ ಇರುವುದರಿಂದ ಶಿಕ್ಷಕ ಉದ್ಯೋಗ ಹೆಚ್ಚು ಕಾಲ ಪ್ರಸ್ತುತದಲ್ಲಿ ಇರಬಹುದು ಎಂಬುದು ಬೆನ್ ಗರ್ಟ್ಜೆಲ್ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 3:41 pm, Sun, 19 April 26

Source link

ನಟಿಯ ಕೈಯಲ್ಲಿ ವಿವಿಐಪಿ ಐಪಿಎಲ್ ಟಿಕೆಟ್, ಎಲ್ಲರ ಕಣ್ಣು ಸಿಎಂ ಮೇಲೆ – Kannada News | Kushita Kallapu Post IPL ticket photos raised questions Around Revanth Reddy

ಐಪಿಎಲ್ (IPL) ಸೀಸನ್ ಚಾಲ್ತಿಯಲ್ಲಿದೆ. ಕೋಟ್ಯಂತರ ಮಂದಿ ಟಿವಿಗಳಲ್ಲಿ ಪಂದ್ಯಗಳನ್ನು ನೋಡುತ್ತಿದ್ದಾರೆ. ಕ್ರೀಡಾಂಗಣಕ್ಕೆ ಹೋಗಿ ಪಂದ್ಯ ನೋಡಲಂತೂ ನೂಕು-ನುಗ್ಗಲಿದೆ. ಟಿಕೆಟ್​​ಗಳೇ ಸಿಗುತ್ತಿಲ್ಲ. ಸಿಕ್ಕರು ಬ್ಲಾಕ್​​ನಲ್ಲಿ ಒಂದಕ್ಕೆ ಹತ್ತರಷ್ಟು ಬೆಲೆ. ಆದರೆ ಇದೀಗ ನಟಿ, ಇನ್​​ಸ್ಟಾಗ್ರಾಂ ಇನ್​ಫ್ಲ್ಯುಯೆನ್ಸರ್ ಒಬ್ಬರು ತಮಗೆ ಸಿಕ್ಕಿದ್ದ ಐಪಿಎಲ್ ಟಿಕೆಟ್​​ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ದೊಡ್ಡ ಸುದ್ದಿಯಾಗಿದೆ. ಏಕೆಂದರೆ ನಟಿ ಹಂಚಿಕೊಂಡಿದ್ದಿದ್ದು ವಿವಿಐಪಿ ಟಿಕೆಟ್ ಅದೂ ಮಾರಾಟದ ಟಿಕೆಟ್ ಅಲ್ಲ ಬದಲಿಗೆ ಕಾಯ್ದಿರಿಸಿದ ಟಿಕೆಟ್. ಟಿಕೆಟ್​​ ಚಿತ್ರಗಳು ವೈರಲ್ ಆಗುತ್ತಿದ್ದಂತೆ ಎಲ್ಲರ ಕಣ್ಣು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮೇಲೆ ಬಿದ್ದಿದೆ.

ತೆಲಂಗಾಣದಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕುಶಿತಾ ಕಲ್ಲಪು ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ ಟಿಕೆಟ್​​ನ ಚಿತ್ರಗಳನ್ನು ಹಂಚಿಕೊಂಡಿದ್ದರು. ಹೈದರಾಬಾದ್‌ನಲ್ಲಿ ನಡೆದ ಐಪಿಎಲ್ ಪಂದ್ಯದ ಟಿಕೆಟ್​​ಗಳವು. ಆದರೆ ಅವು ಸಾಮಾನ್ಯ ಟಿಕೆಟ್ ಆಗಿರಲಿಲ್ಲ ವಿವಿಐಪಿ ಪಾಸ್‌ಗಳಾಗಿದ್ದವು. ಸೂಕ್ಷ್ಮವಾಗಿ ಗಮನಿಸಿದರೆ ಆ ಟಿಕೆಟ್​​ಗಳು ಸರ್ಕಾರದ ಉನ್ನತ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಮೀಸಲಿಟ್ಟಿದ್ದ ಟಿಕೆಟ್​ಗಳಾಗಿದ್ದವು.

ಸೋಷಿಯಲ್ ಮೀಡಿಯಾ ಬಳಕೆದಾರರು ಆ ಪಾಸ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅವು ಮುಖ್ಯಮಂತ್ರಿಗಳ ಕಚೇರಿ ಅಥವಾ ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುವ ‘ಕಾಂಪ್ಲಿಮೆಂಟರಿ’ ಕೋಟಾದ ಪಾಸ್‌ಗಳು ಎಂಬುದು ಬೆಳಕಿಗೆ ಬಂದಿದೆ. ಇದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಕಚೇರಿಯಿಂದಲೇ ಕುಶಿತಾಗೆ ತಲುಪಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳು ಟಿಕೆಟ್‌ಗಾಗಿ ಗಂಟೆಗಟ್ಟಲೆ ಕ್ಯೂ ನಿಂತು ಅಥವಾ ಆನ್‌ಲೈನ್‌ನಲ್ಲಿ ಪರದಾಡುತ್ತಿರುವಾಗ, ಇನ್‌ಫ್ಲುಯೆನ್ಸರ್‌ಗಳಿಗೆ ಇಂತಹ ಪ್ರೀಮಿಯಂ ಪಾಸ್‌ಗಳು ಸುಲಭವಾಗಿ ಸಿಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು. ಇದು ‘ವಿಐಪಿ ಸಂಸ್ಕೃತಿ’ಯ ದುರುಪಯೋಗ ಎಂದು ಟೀಕಿಸಲಾಗುತ್ತಿದೆ.

ಇದನ್ನೂ ಓದಿ:IPL Black Ticket: ಐಪಿಎಲ್ ಬ್ಲ್ಯಾಕ್ ಟಿಕೆಟ್ ಮಾರಾಟ ದಂಧೆ, ಡಿಎನ್‌ಎ ಸಂಸ್ಥೆಗೆ ಸಿಸಿಬಿ ಶಾಕ್!

ಕರ್ನಾಟಕ ರಾಜಕೀಯದಲ್ಲೂ ಸಹ ಐಪಿಎಲ್ ಟಿಕೆಟ್ ವಿಚಾರ ಸದ್ದು ಮಾಡಿತು. ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಸರ್ಕಾರವು ಸ್ಟೇಡಿಯಂಗೆ ನೀರು, ವಿದ್ಯುತ್ ಮತ್ತು ಭದ್ರತೆ ನೀಡುತ್ತದೆ, ಆದರೆ ಕೆಎಸ್‌ಸಿಎ ಶಾಸಕರಿಗೆ ಗೌರವ ನೀಡುತ್ತಿಲ್ಲ ಮತ್ತು ಟಿಕೆಟ್‌ಗಳನ್ನು ಬ್ಲ್ಯಾಕ್‌ನಲ್ಲಿ ಮಾರಾಟ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದರು. ಈ ವಿಷಯ ಗಂಭೀರ ಸ್ವರೂಪ ಪಡೆದ ನಂತರ, ಸ್ಪೀಕರ್ ಯು.ಟಿ. ಖಾದರ್ ಅವರ ಸೂಚನೆಯಂತೆ ಕೆಎಸ್‌ಸಿಎ ಶಾಸಕರಿಗೆ ಟಿಕೆಟ್ ನೀಡಲು ಒಪ್ಪಿಕೊಂಡಿತು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪ್ರತಿ ಐಪಿಎಲ್ ಪಂದ್ಯಕ್ಕೆ ಪ್ರತಿಯೊಬ್ಬ ಶಾಸಕರಿಗೆ (MLA/MLC) ತಲಾ 3 ಉಚಿತ ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ಅಂತರಾಷ್ಟ್ರೀಯ ಪಂದ್ಯಗಳಿಗಾದರೆ 2 ಉಚಿತ ಟಿಕೆಟ್ ಮತ್ತು 2 ಟಿಕೆಟ್‌ಗಳನ್ನು ಖರೀದಿಸುವ ಅವಕಾಶ ನೀಡಲಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

KKR vs RR IPL 2026 Live Score: ಟಾಸ್ ಗೆದ್ದ ರಾಜಸ್ಥಾನ್ ಬ್ಯಾಟಿಂಗ್ ಆಯ್ಕೆ – Kannada News | Kolkata Knight Riders vs Rajasthan Royals IPL 2026 Live Cricket Score KKR vs RR Match on 19th April latest news in Kannada

  • 19 Apr 2026 03:16 PM (IST)

    KKR vs RR IPL 2026: ಕೆಕೆಆರ್

    ಅಜಿಂಕ್ಯ ರಹಾನೆ (ನಾಯಕ), ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ರೋವ್ಮನ್ ಪೊವೆಲ್, ರಿಂಕು ಸಿಂಗ್, ಸುನಿಲ್ ನರೈನ್, ರಮಣದೀಪ್ ಸಿಂಗ್, ಅನುಕೂಲ್ ರಾಯ್, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ, ವರುಣ್ ಚಕ್ರವರ್ತಿ.

  • 19 Apr 2026 03:15 PM (IST)

    KKR vs RR IPL 2026: ರಾಜಸ್ಥಾನ್ ರಾಯಲ್ಸ್

    ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಬ್ರಿಜೇಶ್ ಶರ್ಮಾ, ರವಿ ಬಿಷ್ಣೋಯ್.

  • 19 Apr 2026 03:06 PM (IST)

    KKR vs RR IPL 2026: ಟಾಸ್ ಗೆದ್ದ ರಾಜಸ್ಥಾನ್

    ಟಾಸ್ ಗೆದ್ದ ರಾಜಸ್ಥಾನ್ ನಾಯಕ ರಿಯಾನ್ ಪರಾಗ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಕೆಕೆಆರ್ ಬೌಲಿಂಗ್ ಮಾಡಲಿದೆ.

  • Source link

    ಸುಟ್ಟಘಟ್ಟ ಗ್ರಾಮದ ತೋಟದಲ್ಲಿ ಪ್ರತ್ಯಕ್ಷವಾಯಿತು ಕಾಡಾನೆಗಳ ಹಿಂಡು! – Kannada News | 3 Wild Elephants Spotted in Channapatna Farm; Forest Dept Responds

    ರಾಮನಗರ, ಏಪ್ರಿಲ್ 19: ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಸುಣ್ಣಘಟ್ಟ ಗ್ರಾಮ ಸಮೀಪ ಮೂರು ಕಾಡಾನೆಗಳು ಪ್ರತ್ಯಕ್ಷವಾಗಿವೆ.ಗ್ರಾಮದ ಶಿವಶಂಕರ್ ಎಂಬುವರ ತೋಟದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಭೀತಿ ಉಂಟಾಗಿದೆ. ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಾಡಾನೆಗಳನ್ನು ಸುರಕ್ಷಿತವಾಗಿ ಕಾಡಿಗೆ ಹಿಮ್ಮೆಟ್ಟಿಸಲು ಸಿಬ್ಬಂದಿ ಕ್ರಮ ಕೈಗೊಂಡಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಯಾರಿಗೂ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    ‘ಕಿಲಾಡಿ ಮೇಘ’ ಸಿನಿಮಾದಲ್ಲಿ ದೈವಾರಾಧಕನ ಪಾತ್ರದಲ್ಲಿ ಶಂಕರ್ ಅಶ್ವತ್ಥ್ – Kannada News | Shankar Ashwath Mahalakshmi starrer Kiladi Megha Kannada movie press meet

    ‘ಡ್ರಾಮಾ ಜೂನಿಯರ್ಸ್’ ಖ್ಯಾತಿಯ ಮಹಾಲಕ್ಷ್ಮಿ ನಟಿಸಿದ ‘ಕಿಲಾಡಿ ಮೇಘ’ (Kiladi Megha) ಸಿನಿಮಾದ ಟೀಸರ್ ಮತ್ತು ಹಾಡುಗಳು ರಿಲೀಸ್ ಆಗಿವೆ. ಮೇಘ ಎಂಬ ಪಾತ್ರದಲ್ಲಿ ಮಹಾಲಕ್ಷ್ಮಿ ಅವರು ನಟಿಸಿದ್ದಾರೆ. ಇದೇ ಸಿನಿಮಾದಲ್ಲಿ ಹಿರಿಯ ನಟ ಶಂಕರ್ ಅಶ್ವಥ್ (Shankar Ashwath) ಅವರು ದೈವಾರಾಧಕನ ಪಾತ್ರ ನಿರ್ವಹಿಸಿದ್ದಾರೆ ಎಂಬುದು ವಿಶೇಷ. ಈ ಸಿನಿಮಾದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಈ ವೇಳೆ ಚಿತ್ರತಂಡದವರು ಮಾತನಾಡಿದ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡರು.

    ‘ಸುಲೋಚನಾ ಪ್ರೊಡಕ್ಷನ್ಸ್’ ಮೂಲಕ ಸುಲೋಚನಾ ಸುಕುಮಾರ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಡಬ್ಬಿಂಗ್ ಕಲಾವಿದನಾಗಿ ಕೆಲಸ ಮಾಡಿರುವ ಬಿ.ಟಿ. ಮಂಜುನಾಥ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಣದ ಹಿಂದೆ ಹೋದಾಗ ಏನೇನೆಲ್ಲ ಆಗುತ್ತದೆ ಎಂಬುದನ್ನು ಹಾರರ್ ಕಥೆಯ ಮೂಲಕ ಈ ಸಿನಿಮಾದಲ್ಲಿ ಹೇಳಲಾಗಿದೆ.

    ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ನೃತ್ಯ‌ಕಲಾವಿದನಾಗಿ ಹಾಗೂ ಪೊಲೀಸ್ ಇಲಾಖೆಯಲ್ಲೂ ಸೇವೆ ಸಲ್ಲಿಸಿರುವ ಸುಕುಮಾರ್ ಅವರು ಮೊದಲ ಬಾರಿಗೆ ‘ಕಿಲಾಡಿ ಮೇಘ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 13 ವರ್ಷದ ಹುಡುಗಿಯ ಸುತ್ತ ನಡೆಯುವ ಕಥೆಯಿದು ಎಂದು ನಿರ್ದೇಶಕ ಬಿ.ಟಿ. ಮಂಜುನಾಥ್ ಅರಗ ಅವರು ಹೇಳಿದರು.

    ‘ಮೊದಲು ಈ ಸಿನಿಮಾವನ್ನು ರಾಜೇಶ್ ರಾಜ ಅವರು ಆರಂಭಿಸಿದ್ದರು. ಕಾರಣಾಂತರಗಳಿಂದ ಅವರಿಗೆ ಚಿತ್ರವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಂತರ ನಾನು ಚಿತ್ರವನ್ನು ಕೈಗೆತ್ತಿಕೊಂಡು ಸಾಂಗ್, ಫೈಟ್ ಸೇರಿದಂತೆ ಉಳಿದ ಭಾಗ ಮುಗಿಸಿ ರಿಲೀಸ್ ಹಂತಕ್ಕೆ ತಂದಿದ್ದೇನೆ’ ಎಂದು ನಿರ್ದೇಶಕರು ಹೇಳಿದರು.

    ಚಿತ್ರದ ನಿರ್ಮಾಪಕ ಸುಕುಮಾರ್ ಮಾತನಾಡಿ, ‘ಈ ಸಿನಿಮಾದಲ್ಲಿ ನಾನು ಕಲಾವಿದನಾಗಿ ನಟಿಸಲು ಹೋದವನು. ವಿಧಿ ಇಲ್ಲದೇ ನಾನೇ ನಿರ್ಮಾಪಕ ಆಗಬೇಕಾಯಿತು. ನಾನು ಮತ್ತು ಮಂಜುನಾಥ್ ಇಬ್ಬರೂ ಡಾನ್ಸರ್ ಆಗಿ ಸುಮಾರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇವೆ. ಹಣದ ಹಿಂದೆ ಹೋಗಬಾರದು ಎನ್ನುವುದೇ ಕಿಲಾಡಿ ಮೇಘ ಸಿನಿಮಾದ ಕಥೆ’ ಎಂದರು.

    ಇದನ್ನೂ ಓದಿ: ನಿನ್ನೆ-ಮೊನ್ನೆ ಬಂದ ಬಚ್ಚಾ ಎಂದಿದ್ದ ಶಂಕರ್​ ಅಶ್ವತ್ಥ್​ ವಿರುದ್ಧ ಮನೆ ಮಂದಿಯೆಲ್ಲಾ ಒಟ್ಟಾಗಿ ತಿರುಗಿ ಬಿದ್ರು!

    ಶಂಕರ್ ಅಶ್ವಥ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ನಾನು ನಿಜವಾಗಿಯೂ ಅನುಭವಿಸಿ ಮಾಡಿದಂಥ ಪಾತ್ರ ಇದು. ಯಾವುದೋ ಒಂದು ಜೀವ ತುಡಿತಕ್ಕೆ ಒಳಗಾಗಿರುತ್ತದೆ. ಅದನ್ನು ರಕ್ಷಣೆ ಮಾಡಲು ನಾನು ಬರುತ್ತೇನೆ’ ಎಂದು ಅವರು ಹೇಳಿದರು. ಕೆ.ಎಂ. ಇಂದ್ರ ಅವರ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

    ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

    Source link

    ಇನ್ನೇನು ಟೇಕ್ ಆಫ್ ಆಗುವಷ್ಟರಲ್ಲೇ ಪ್ರಯಾಣಿಕ ಅಸ್ವಸ್ಥ: ಮಾನವೀಯತೆಗೆ ಸಾಕ್ಷಿಯಾದ ವಿಮಾನ – Kannada News | Passenger sickness During Flight take off at Kempegowda international airport bengaluru

    ಬೆಂಗಳೂರು, (ಏಪ್ರಿಲ್ 19): ಇಂಡಿಗೋ ವಿಮಾನ (indifo Flight) ಮಾನವೀಯತೆಗೆ ಸಾಕ್ಷಿಯಾಗಿದೆ. 6E 840 ನಂಬರಿನ ಇಂಡಿಗೋ ಫ್ಲೈಟ್ ಬೆಂಗಳೂರಿನಿಂದ (Bengaluru) ದೆಹಲಿಗೆ (Delhi) ತೆರಳಲು ಟೇಕ್ ಆಫ್ ಆಗ್ಬೇಕು ಎನ್ನುವಷ್ಟರಲ್ಲೇ ಪ್ರಯಾಣಿಕನೋರ್ವ ಅಸ್ವಸ್ಥಗೊಂಡಿದ್ದು, ಕೂಡಲೇ ಕಂಪಾರ್ಟ್ಮೆಂಟ್​ನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಡಾಕ್ಟರ್ ನೆರವಿಗೆ ದಾವಿಸಿದ್ದಾರೆ. ​ವಿಮಾನದೊಳಗೆ ಪ್ರಥಮ ಚಿಕಿತ್ಸೆ ನೀಡಿದ್ದು, ಬಳಿಕ ಸಿಬ್ಬಂದಿ, ಸ್ಟಾಫ್ – ಪೈಲಟ್ ಸಹಾಯದಿಂದ ಅಸ್ವಸ್ಥಗೊಂಡ ಪ್ರಯಾಣಿಕನನ್ನ ವಿಮಾನದಿಂದ ಆ್ಯಂಬುಲೆನ್ಸ್​ಗೆ ಶಿಫ್ಟ್​ ಮಾಡಿದ್ದಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಡಾಕ್ಟರ್ ಹಾಗೂ ಸಿಬ್ಬಂದಿ ಕೆಲಸಕ್ಕೆ ಇತರೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

    Source link

    ವಿಳಂಬವಾದ್ರು ಬಿಜೆಪಿ ಮಹಿಳಾ ಮೀಸಲಾತಿ ಬಿಲ್ ಜಾರಿ ಮಾಡುತ್ತೆ: ಸಂಸದ ತೇಜಸ್ವಿ ಸೂರ್ಯ – Kannada News | BJP will enforce women’s reservation bill despite delay: MP Tejasvi Surya

    ಬಿಜೆಪಿ ಸಂಸದ ತೇಜಸ್ವಿ ಸೂರ್ಯImage Credit source: tv9 kannada

    ಬೆಂಗಳೂರು, ಏಪ್ರಿಲ್​ 19: ಮಹಿಳಾ ಮೀಸಲಿಗೆ (Women’s Reservation Bill) ಸೋಲು ಆಗಿರುವುದು ರಾಜ್ಯದಲ್ಲೂ ಕಿಚ್ಚು ಹಚ್ಚಿದೆ. ಕಾಂಗ್ರೆಸ್ ವಿರುದ್ಧ ಬಿಜೆಪಿ ಮಹಿಳಾ ಮಣಿಯರು ಸಿಡಿದೆದಿದ್ದಾರೆ. ರಾಜ್ಯ ವಿವಿಧೆಡೆ ಪ್ರತಿಭಟನೆ ಮಾಡಲಾಗುತ್ತಿದೆ. ಬೆಂಗಳೂರಿನ ಜೆಪಿ ನಗರದ ಆರ್​.ವಿ.ಕಾಲೇಜು ಬಳಿ ಬಿಜೆಪಿ ಕಾರ್ಯಕರ್ತೆಯರು ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಭಾಗಿಯಾಗಿದ್ದು, ಹೆಣ್ಣು ಮಕ್ಕಳು ನಮ್ಮ ಜೊತೆ‌ ಕೂರಬಾರದು ಅಂತ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ನೂರಕ್ಕೆ ನೂರು ಈ ಬಿಲ್ ಜಾರಿ ಮಾಡುತ್ತೇವೆ. ಸ್ವಲ್ಪ ವಿಳಂಬ ಆಗಬಹುದು ಆದರೆ ಬಿಜೆಪಿ ಮಾಡುತ್ತದೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್​​ನ ಲಾಜಿಕ್ ಅರ್ಥ ಆಗುತ್ತಿಲ್ಲ ಎಂದ ತೇಜಸ್ವಿ ಸೂರ್ಯ

    ಬಿಬಿಎಂಪಿ ತೆಗೆದು 5 ಮಹಾನಗರ ಪಾಲಿಕೆಗಳನ್ನಾಗಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಳ ಆಗಿದೆ ಅಂತಾ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಹೇಳುತ್ತಾರೆ. 198 ಇದ್ದ ವಾರ್ಡ್​​ಗಳನ್ನು ಜಿಬಿಎ ಮಾಡಿ 369ಕ್ಕೆ ಹೆಚ್ಚಿಸಿದ್ದಾರೆ. ಬೆಂಗಳೂರಿನಲ್ಲಿ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಡಿಲಿಮಿಟೇಶನ್ (ಕ್ಷೇತ್ರ ಮರು ವಿಂಗಡಣೆ) ಮಾಡಿದರೆ ತೊಂದರೆಯಿಲ್ಲ ಎನ್ನುವ ಕಾಂಗ್ರೆಸ್, ಸಂಸತ್ ಮಟ್ಟದಲ್ಲಿ ಮಾಡಿದರೆ ಇವರಿಗೆ ತೊಂದರೆ ಆಗುತ್ತಾ. ಇದರಲ್ಲಿ ಕಾಂಗ್ರೆಸ್ ಲಾಜಿಕ್ ಅರ್ಥ ಆಗುತ್ತಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಮೂರು ವಿಧೇಯಕ ಮಿಕ್ಸ್ ಮಾಡಿದ್ದರಿಂದ ಬಿದ್ದೋಗಿದೆ: ಮಹಿಳಾ ಮೀಸಲಾತಿಗೆ ನಮ್ಮ ವಿರೋಧ ಇಲ್ಲ; ಸಿಎಂ ಸಿದ್ದರಾಮಯ್ಯ

    1992ರಿಂದ ಮಹಿಳಾ ಮೀಸಲಾತಿ ಬಿಲ್​ ಬಗ್ಗೆ ಚರ್ಚೆ ನಡೆಯುತ್ತಿದೆ. ಮೀಸಲಾತಿ ವಿಚಾರದಲ್ಲಿ ಆಗಿನಿಂದಲೂ ಬಿಜೆಪಿ ನಿಲುವು ಒಂದೇ ಇದೆ. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಆದಷ್ಟು ಬೇಗ ಕೊಡಬೇಕು. ಇದು ಭಾರತೀಯ ಜನತಾ ಪಕ್ಷದ ನಿಲುವಾಗಿದೆ. ಲೋಕಸಭೆಯಲ್ಲಿ ಬಿಲ್ ಚರ್ಚೆಗೆ ಬಂದಾಗಲೆಲ್ಲಾ ಬಿಜೆಪಿ ಬೆಂಬಲಿಸಿದೆ ಎಂದರು.

    ಮಹಿಳಾ ಮೀಸಲಾತಿ ಮಸೂದೆಯನ್ನ ಕಾಂಗ್ರೆಸ್ 1992ರಿಂದ ಸೋಲಿಸುತ್ತಾ ಬರುತ್ತಿದೆ

    1992ರಿಂದ ಇಲ್ಲಿಯವರೆಗೆ ಮಹಿಳಾ ಮೀಸಲಾತಿ ಮಸೂದೆಯನ್ನ ಕಾಂಗ್ರೆಸ್ ಪಕ್ಷವು ಹೇಗಾದರೂ ಮಾಡಿ ಸೋಲಿಸುತ್ತಾ ಬರುತ್ತಿದೆ. ಲಾಲೂಪ್ರಸಾದ್​, ಮುಲಾಯಂ ಸಿಂಗ್ ಮೂಲಕ ಬಿಲ್ ಸೋಲಿಸಿದರು. ಅವರೆಲ್ಲಾ ಇನ್ನೊಮ್ಮೆ ಸೇರಿ ಲೋಕಸಭೆಯಲ್ಲಿ ಪ್ರತಿ ಹರಿದುಹಾಕಿದರು. ಬಿಜೆಪಿ ಸರ್ಕಾರ 2023ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಅಂಗೀಕಾರಗೊಳಿಸ್ತು. 40 ವರ್ಷದಿಂದ ಬಾಕಿ ಇದ್ದ ಬಿಲ್ 2023ರಲ್ಲಿ ಲೋಕಸಭೆಯಲ್ಲಿ ಬಿಲ್​ ಪಾಸ್ ಮಾಡಿ ಜಾರಿ ಮಾಡಿದ್ದು ಬಿಜೆಪಿ. ಬಿಜೆಪಿ ವಿಪಕ್ಷ ಆಗಿದ್ದಾಗೆಲ್ಲ ಮಹಿಳಾ ಮೀಸಲಾತಿಗೆ ಬೆಂಬಲಿಸಿದೆ ಎಂದು ತಿಳಿಸಿದರು.

    ಇದನ್ನೂ ಓದಿ: ಕಾಂಗ್ರೆಸ್ ಮಹಿಳಾ ವಿರೋಧಿ ಎಂದ ಬಿಜೆಪಿ: ದೇಶದ ಮಹಿಳೆಯರ ಗೆಲುವು ಎಂದ ಕೈ; ನಾಯಕರ ಕೆಸರೆರಚಾಟ

    2023ರಲ್ಲಿ ಬಿಲ್ ಪಾಸ್ ಆದಾಗ ಜಾರಿ ಮಾಡುವ ಉದ್ದೇಶ ಇತ್ತು. ಹೊಸ ಜನಗಣತಿ ಆಧಾರದ ಮೇಲೆ ಜಾರಿ ಮಾಡುವ ಉದ್ದೇಶ ಇತ್ತು. 2011ರ ಜನಗಣತಿ ಆಧಾರದಲ್ಲೇ ಮಹಿಳಾ ಮೀಸಲಾತಿ ಜಾರಿಗೆ ನಿರ್ಧರಿಸಿತ್ತು. ಅದರಂತೆ ಜಾರಿಗೆ ಮುಂದಾಗಿದಕ್ಕೆ ಅದಕ್ಕೂ ಕಾಂಗ್ರೆಸ್​​ ಕಲ್ಲುಹಾಕಿದೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.

    ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

    Source link

    Exit mobile version