1 ಲಕ್ಷ ರೂನಿಂದ 2.71 ಕೋಟಿ ರೂ; ಭಾರತದ ಅತ್ಯಂತ ಹಳೆಯ ಫಂಡ್​ನಿಂದ ಭರ್ಜರಿ ಆದಾಯ – Kannada News | UTI Large Cap, India’s oldest mutual fund grows the investment at over 15pc CAGR

ನವದೆಹಲಿ, ಜನವರಿ 16: ದೀರ್ಘಾವಧಿಗೆ ಹೂಡಿಕೆಗಳು ಸಾಮಾನ್ಯವಾಗಿ ಸೋಲು ತರುವುದಿಲ್ಲ. ಹೂಡಿಕೆ ಗಣನೀಯವಾಗಿ ಬೆಳೆಯಬೇಕಾದರೆ ದೀರ್ಘಾವಧಿಯೇ ಬೇಕು. ಭಾರತದಲ್ಲಿ ಸದ್ಯ ಜೀವಂತ ಇರುವ ಅತ್ಯಂತ ಹಳೆಯ ಮ್ಯೂಚುವಲ್ ಫಂಡ್​ವೊಂದರ (Mutual Fund) ನಿದರ್ಶನ ಕಣ್ಮುಂದೆ ಇದೆ. ಯುಟಿಐ ಲಾರ್ಜ್ ಕ್ಯಾಪ್ ಫಂಡ್ (UTI Large Cap Fund) ಆರಂಭವಾದಾಗಿನಿಂದ ಇಲ್ಲಿಯವರೆಗೆ ವರ್ಷಕ್ಕೆ ಶೇ. 15.35 ಸಿಎಜಿಆರ್​ನಲ್ಲಿ ಬೆಳೆದಿದೆ. ಮಾರುಕಟ್ಟೆಯನ್ನು ತಲ್ಲಣಗೊಳಿಸಿದ ಹಲವು ಅವಘಡಗಳ ನಡುವೆ ಈ ಫಂಡ್ ಅದ್ಭುತವಾಗಿ ಸಾಗಿ ಬಂದಿದೆ.

ಯುಟಿಐ ಮ್ಯೂಚುವಲ್ ಫಂಡ್ ಸಂಸ್ಥೆ 1964ರಲ್ಲಿ ಆರಂಭವಾಗಿತ್ತು. ಇದರ ಲಾರ್ಜ್ ಕ್ಯಾಪ್ ಫಂಡ್ 1986ರ ಅಕ್ಟೋಬರ್ 16ರಂದು ಶುರುವಾಗಿದೆ. ಯುಟಿಐ ಮಾಸ್ಟರ್​ಶೇರ್ ಯುನಿಟ್ ಸ್ಕೀಮ್ ಆಗಿ ಆರಂಭವಾದ ಈ ಫಂಡ್ 39 ವರ್ಷದಲ್ಲಿ ಶೇ. 15.35 ಸಿಎಜಿಆರ್​ನಲ್ಲಿ ಬೆಳೆದಿರುವುದು ನಿಜಕ್ಕೂ ದೀರ್ಘಾವಧಿ ಹೂಡಿಕೆಯ ಮಹತ್ವವನ್ನು ಸಾರಿ ಹೇಳುವಂತಿದೆ.

ಇದನ್ನೂ ಓದಿ: 2010ರಿಂದ ತಿಂಗಳಿಗೆ 15,000 ರೂ ಹೂಡಿಕೆ; ಇವತ್ತು ನೀವು ಕೋಟ್ಯಾಧಿಪತಿ; ಸಿಂಪಲ್ 15x15x15 ಫಾರ್ಮುಲಾದಿಂದ ಸಾಧ್ಯ

ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಎಷ್ಟಾಗುತ್ತಿತ್ತು ಗೊತ್ತಾ?

ಯುಟಿಐ ಲಾರ್ಜ್ ಕ್ಯಾಪ್ ಫಂಡ್​ನಲ್ಲಿ 1986ರಲ್ಲೇ ಯಾರಾದರೂ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ, ಇವತ್ತು ಆ ಹೂಡಿಕೆ ಮೌಲ್ಯ 2.71 ಕೋಟಿ ರೂ ಆಗಿರುತ್ತಿತ್ತು.

5,000 ಎಸ್​ಐಪಿಯಿಂದ 15 ಕೋಟಿ ರೂ?

ಒಂದು ವೇಳೆ 39 ವರ್ಷಗಳ ಹಿಂದೆ ಯುಟಿಐ ಲಾರ್ಜ್ ಕ್ಯಾಪ್ ಫಂಡ್​ನಲ್ಲಿ ಮಾಸಿಕ 5,000 ರೂಗಳ ಎಸ್​ಐಪಿ ಶುರು ಮಾಡಿದ್ದರೆ ಇವತ್ತು ಆ ಹೂಡಿಕೆ ಮೌಲ್ಯ 15 ಕೋಟಿ ರೂ ಮೀರಿ ಹೋಗುತ್ತಿತ್ತು. ಹೂಡಿಕೆಯಲ್ಲಿ ಶಿಸ್ತು, ಸಂಯಮ ಇದ್ದರೆ ನಿಜಕ್ಕೂ ದೊಡ್ಡ ಸಂಪತ್ತು ಸೃಷ್ಟಿಸಬಹುದು ಎನ್ನುವುದಕ್ಕೆ ಇದು ಸಾಕ್ಷಿ.

ಇದನ್ನೂ ಓದಿ: ಷೇರು, ಚಿನ್ನ, ಎಫ್​ಡಿ- ಕಳೆದ 40 ವರ್ಷದಲ್ಲಿ ಅತಿಹೆಚ್ಚು ರಿಟರ್ನ್ ಕೊಟ್ಟ ಹೂಡಿಕೆಗಳ್ಯಾವುವು?

ಉದಾಹರಣೆಗೆ, ನೀವು ಬ್ಯಾಂಕಲ್ಲಿ 30 ವರ್ಷದ ಹಿಂದೆ 20 ಲಕ್ಷ ರೂ ಹೋಮ್ ಲೋನ್ ಪಡೆದಿದ್ದರೆ (ಶೇ. 9 ಬಡ್ಡಿ) ಇವತ್ತಿನವರೆಗೂ ಕಟ್ಟಿರುವ ಇಎಂಐಗಳ ಒಟ್ಟು ಮೊತ್ತ ಸುಮಾರು 60 ಲಕ್ಷ ರೂ ಆಗಿರುತ್ತಿತ್ತು. ನೀವು ಪ್ರತೀ ತಿಂಗಳು 5,000 ರೂನಂತೆ 39 ವರ್ಷ ಎಸ್​ಐಪಿ ಮಾಡಿದರೆ ನೀವು ಕಟ್ಟುವ ಒಟ್ಟು ಮೊತ್ತ 23 ಲಕ್ಷ ರೂ ಆಗಿರುತ್ತದೆ. ಇದರ ಮೌಲ್ಯ ಇವತ್ತು 2.71 ಕೋಟಿ ರೂ. ಇದು ಹೂಡಿಕೆ ಎಷ್ಟು ಮಹತ್ವದ್ದು, ಅದರಲ್ಲೂ ದೀರ್ಘಾವಧಿ ಹೂಡಿಕೆ ಎಂಥ ಲಾಭ ತರಬಹುದು ಎನ್ನುವುದಕ್ಕೆ ಉದಾಹರಣೆಯಾಗಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹರಿದ್ವಾರದ ಹರ್​ ಕಿ ಪೌರ್​ ಸುತ್ತ ಹಿಂದೂಯೇತರರು, ರೀಲ್ಸ್ ಮಾಡುವವರ ಪ್ರವೇಶ ನಿಷೇಧ – Kannada News | Entry of non Hindus and reels makers strictly prohibited at Haridwar Har Ki Pauri

ಹರಿದ್ವಾರ, ಜನವರಿ 16: ಹರಿದ್ವಾರದ (Haridwar) ಅತ್ಯಂತ ಪವಿತ್ರ ಘಾಟ್ ಆಗಿರುವ ಹರ್ ಕಿ ಪೌರಿಯ ಪಾವಿತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಹಿಂದೂಯೇತರರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳುವ ಫಲಕಗಳನ್ನು ಹಾಕಲಾಗಿದೆ. ಇದರ ಜೊತೆಗೆ, ಡ್ರೋನ್ ಹಾರಾಟ ಮತ್ತು ಹಾಡುಗಳನ್ನು ಆಧರಿಸಿದ ರೀಲ್‌ಗಳು ಅಥವಾ ವಿಡಿಯೋ ಚಿತ್ರೀಕರಣವನ್ನು ಸಹ ನಿಷೇಧಿಸಲಾಗಿದೆ.

ಸಿನಿಮಾ ಗೀತೆಗಳನ್ನು ಆಧರಿಸಿ ವಿಡಿಯೋ ಚಿತ್ರೀಕರಿಸುವುದು ಮತ್ತು ರೀಲ್‌ಗಳನ್ನು ಮಾಡುವುದನ್ನು ಸಹ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಂತಹ ರೀಲ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಶ್ರೀ ಗಂಗಾ ಸಭಾ ಎಚ್ಚರಿಸಿದೆ. ಕೆಲವು ದಿನಗಳ ಹಿಂದೆ, ಹರ್ ಕಿ ಪೌರಿ ಪ್ರದೇಶದಲ್ಲಿ ಚಿತ್ರೀಕರಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕೋಲಾಹಲಕ್ಕೆ ಕಾರಣವಾಯಿತು. ಈ ವಿಡಿಯೋದಲ್ಲಿ ದುಬೈನ ಮುಸ್ಲಿಮರ ಉಡುಪಿನಲ್ಲಿ ಇಬ್ಬರು ಯುವಕರು ಘಾಟ್‌ಗಳಲ್ಲಿ ಓಡಾಡುತ್ತಿದ್ದರು. ಇದರ ನಂತರ, ಯಾತ್ರಾಸ್ಥಳದ ಪುರೋಹಿತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಹರಿದ್ವಾರದ ಧಾರ್ಮಿಕ ಪಾವಿತ್ರ್ಯವನ್ನು ಉಲ್ಲಂಘಿಸುತ್ತದೆ, ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತವೆ ಎಂದು ಹೇಳಿದ್ದರು. ಪೊಲೀಸರು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದರು.

ಇದನ್ನೂ ಓದಿ: ಹರಿದ್ವಾರದ ಘಾಟ್‌ಗಳಿಗೆ ಹಿಂದೂಯೇತರರ ಪ್ರವೇಶ ನಿಷೇಧವೇ?

ಹೀಗಾಗಿ, ಇದೀಗ ಹರಿದ್ವಾರದ ಪವಿತ್ರ ಹರ್ ಕಿ ಪೌರಿಯಲ್ಲಿ ಹಿಂದೂಯೇತರರ ಪ್ರವೇಶ, ಡ್ರೋನ್ ಹಾರಾಟ ಮತ್ತು ರೀಲ್ ರೆಕಾರ್ಡ್ ನಿಷೇಧಿಸುವ ಹೊಸ ಫಲಕಗಳನ್ನು ಹಾಕಲಾಗಿದೆ.

ಹರ್ ಕಿ ಪೌರಿಯನ್ನು ಭಾರತದ ಅತ್ಯಂತ ಪವಿತ್ರ ಘಾಟ್‌ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅಲ್ಲಿ ಭಕ್ತರು ಆಚರಣೆಗಳು, ಪ್ರಾರ್ಥನೆಗಳು ಮತ್ತು ಪ್ರಸಿದ್ಧ ಗಂಗಾ ಆರತಿಗಾಗಿ ಆಗಮಿಸುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾರಿ ಹಬ್ಬಕ್ಕೆಂದು ಹೋದಾತ ಸಿಕ್ಕಿದ್ದು ಹೆಣವಾಗಿ: ಬರ್ಬರವಾಗಿ ಕೊಂದು ಶವ ಸುಟ್ಟರಾ ದುಷ್ಟರು? – Kannada News | Burned Body of Man Found in Davanagere; Family Suspect Murder

ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ

ದಾವಣಗೆರೆ, ಜನವರಿ 16: ಹೋರಿ ಹಬ್ಬಕ್ಕೆಂದು ತೆರಳಿದ್ದ ವ್ಯಕ್ತಿಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ದಾವಣಗೆರೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿಯ ಸಮೀಪ ನಡೆದಿದೆ. ಹೋಟೆಲ್​​ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಬೈರನಹಳ್ಳಿ ಗ್ರಾಮದ ಚೇತನ್ (31) ಮೃತ ವ್ಯಕ್ತಿಯಾಗಿದ್ದು, ಮೇಲ್ನೋಟಕ್ಕೆ ಇದೊಂದು ಕೊಲೆ ಎಂಬ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಹೆಚ್ಚಿನ ತನಿಖೆಗೆ ಪೊಲೀಸರು ಮುಂದಾಗಿದ್ದು, ಯುವಕನ ಸಾವಿಗೆ ನಿಖರ ಕಾರಣ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

10 ವರ್ಷಗಳಿಂದ ಬೆಂಗಳೂರಿನ ಹೋಟೇಲ್​​ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಚೇತನ್​​ ಕಳೆದ 4 ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದ. ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುವ ಕನಸು ಕಂಡು, ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಹೋಟೆಲ್​​ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ. ಈ ನಡುವೆ ಕುಳಗಟ್ಟೆ ಗ್ರಾಮದಲ್ಲಿ ಮಾರಿ ಹಬ್ಬ ಹಿನ್ನೆಲೆ ಜ. 5ರಂದು ಚೇತನ್ ಅಲ್ಲಿಗೆ ಹೋಗೋದಾಗಿ ಹೇಳಿ ತೆರಳಿದ್ದ. ಆದ್ರೆ ಚೇತನ್​​ ಶವ ಸುಟ್ಟ ರೀತಿಯಲ್ಲಿ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿಯ ಸಮೀಪದ ಅಡಿಕೆ ತೋಟದಲ್ಲಿ ಪತ್ತೆಯಾಗಿದೆ. ದೇಹ ಸುಟ್ಟು ಕರಕಲಾಗಿದ್ದ ಕಾರಣ ಆರಂಭದಲ್ಲಿ ಗುರುತು ಪತ್ತೆ ಪೊಲೀಸರಿಗೂ ಸಾಧ್ಯವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಹೊನ್ನಾಳಿ ಪೊಲೀಸರು ಮೃತದೇಹದ ಫೋಟೋವನ್ನು ಶೇರ್​​ ಮಾಡಿದ್ದರು. ಇದನ್ನು ಚೇತನ್​​ ಚಿಕ್ಕಪ್ಪನ ಮಗ ಲೋಕೋಶ್​​ ಗಮನಿಸಿದ್ದು, ಪೊಲೀಸರ ಜೊತೆ ತೆರಳಿ ಮೃತದೇಹ ಚೇತನ್​​ನದ್ದು ಎನ್ನುವುದನ್ನು ಖಚಿತಪಡಿಸಿದ್ದಾನೆ.

ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿದ್ದ ತಮ್ಮನಿಗೆ ಚಟ್ಟ ಕಟ್ಟಿದ ಅಣ್ಣ; ಹಸೆಮಣೆ ಏರಬೇಕಿದ್ದವ ಸೇರಿದ್ದು ಸ್ಮಶಾನಕ್ಕೆ

ಇನ್ನು ಚೇತನ್​​ ಕೆಲಸ ಮಾಡಿಕೊಂಡಿದ್ದ ಹೋಟೆಲ್​​ ಆತನ ಊರಿನಿಂದ ಕೇವಲ ಒಂದೂವರೆ ಕಿಲೋಮೀಟರ್​​ ದೂರದಲ್ಲಿದೆ. ಊರಿನ ಪಕ್ಕದಲ್ಲಿಯೇ ಮಾರಿ ಹಬ್ಬ ಇರುವ ಕಾರಣ ಅದನ್ನು ನೋಡಲು ಚೇತನ್​​ ಹೋಗಿದ್ದನಾದರೂ ಆತನ ಜೊತೆ ಯಾರಿದ್ದರು ಎನ್ನುವುದು ಇನ್ನೂ ನಿಗೂಢವಾಗಿ ಉಳಿದಿದೆ. ಕೊಂದು ಮೃತದೇಹವನ್ನು ಸುಟ್ಟಿರುವ ಹಲವು ಪ್ರಕರಣಗಳ ಆಧಾರದಲ್ಲಿ, ಈ ಘಟನೆಯೂ ಯಾವುದೋ ದ್ವೇಷದ ಕಾರಣಕ್ಕೆ ನಡೆದಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ. ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ಮತ್ತು FSL ವರದಿ ಬಂದ ಬಳಿಕ ಚೇತನ್​​ ಸಾವಿನ ಕಾರಣದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಗಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

RCB ಫ್ಯಾನ್ಸ್​ಗೆ ಗುಡ್​ ನ್ಯೂಸ್; ಬೆಂಗಳೂರಿನಲ್ಲೇ ನಡೆಯಲಿವೆ ಪಂದ್ಯಗಳು! ಆದ್ರೆ ಕಂಡೀಷನ್ ಅಪ್ಲೈ

Source link

KSRLPS Recruitment 2026: KSRLPSನಲ್ಲಿ ಬ್ಲಾಕ್ ಮ್ಯಾನೇಜರ್ ನೇಮಕಾತಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ – Kannada News | KSRLPS Block Manager Recruitment 2026: Apply Online for Karnataka Govt Jobs

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ (KSRLPS) ಅಧಿಕೃತ ಅಧಿಸೂಚನೆಯ ಮೂಲಕ ಬ್ಲಾಕ್ ವ್ಯವಸ್ಥಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಡಿಯಲ್ಲಿ ಕೋಲಾರ, ಮಾಲೂರು, ಮುಳಬಾಗಿಲು, ಬಂಗಾರಪೇಟೆ, ಶ್ರೀನಿವಾಸಪುರ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಜನವರಿ 30ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸತಕ್ಕದ್ದು.

ಶೈಕ್ಷಣಿಕ ಅರ್ಹತೆ:

KSRLPS ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ, 12 ನೇ ತರಗತಿ B.Sc, ಪದವಿ, M.Sc, ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಪದವಿ/ ಡಿಪ್ಲೊಮಾ, MBA, M.Com ಅನ್ನು ಪೂರ್ಣಗೊಳಿಸಿರಬೇಕು.

ಇದನ್ನೂ ಓದಿ: ಗ್ರಾಮ ಪಂಚಾಯತ್ನಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ KSRLPS ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • KSRLPS ಬ್ಲಾಕ್ ಮ್ಯಾನೇಜರ್ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ.
  • KSRLPS ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಪ್‌ಲೋಡ್ ಮಾಡಿ.
  • ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯದಾಗಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೆ ಸಂಕಷ್ಟದಲ್ಲಿ ಧಾರವಾಡ ಮಾವು ಬೆಳೆಗಾರರು: ಹಣ್ಣಿನ ರಾಜನಿಗೆ ಕಾಡುತ್ತಿದೆ ಭಯಾನಕ ರೋಗ – Kannada News | Dharwad Mango Crop Crisis: Unseasonal Weather Damages Early Bloom, Farmers Worried

ಧಾರವಾಡ, ಜನವರಿ 16: ಧಾರವಾಡ (Dharwad) ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಮಾವು ಕೂಡ ಒಂದು. ಆದರೆ ಕಳೆದ ಹಲವಾರು ವರ್ಷಗಳಿಂದ ಮಾವಿನ ಬೆಳೆಗೆ ನಾನಾ ಸಮಸ್ಯೆಗಳು ಎದುರಾಗಿದ್ದರಿಂದ ಬೆಳೆಗಾರರು (mango farmers) ಒಂದು ರೂ. ಆದಾಯವನ್ನು ಪಡೆದಿಲ್ಲ. ಅದರಲ್ಲೂ ಕಳೆದ ನಾಲ್ಕು ವರ್ಷಗಳಿಂದಂತೂ ಅಕಾಲಿಕ ಮಳೆ ಬಿದ್ದು ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಆದರೆ ಈ ಬಾರಿ ಡಿಸೆಂಬರ್ ತಿಂಗಳಲ್ಲಿಯೇ ಭಾರೀ ಪ್ರಮಾಣದಲ್ಲಿ ಹೂವು ಬಿಟ್ಟಿದ್ದರಿಂದಾಗಿ ರೈತರು ಫುಲ್ ಖುಷ್ ಆಗಿದ್ದರು. ಆದರೆ ಆ ಖುಷಿ ಬಹಳ ದಿನ ಉಳಿಯಲೇ ಇಲ್ಲ. ಇದಕ್ಕೆ ಕಾರಣ ಜನವರಿಯಲ್ಲಿ ಬಿದ್ದ ತುಂತುರು ಮಳೆ.

ಹವಾಮಾನ ವೈಪರೀತ್ಯ: ರೈತರ ಆಸೆ ನುಚ್ಚುನೂರು

ಈ ಬಾರಿ ಡಿಸೆಂಬರ್ ತಿಂಗಳಲ್ಲಿಯೇ ಮಾವಿನ ಮರಗಳು ಹೂವನ್ನು ಬಿಡಲು ಶುರು ಮಾಡಿದ್ದವು. ಇದರಿಂದಾಗಿ ಈ ಬಾರಿ ಮಾವಿನ ಬೆಳೆಯೂ ಬೇಗನೇ ಬರುವ ನಿರೀಕ್ಷೆಯಿತು. ಇದೇ ವೇಳೆ ಹೂವಿನ ಪ್ರಮಾಣದಲ್ಲಿ ಆದ ಏರಿಕೆಯಿಂದಾಗಿ ರೈತರು ಅಚ್ಚರಿಯಾಗಿದ್ದರು. ಹಿಂದಿನ ಯಾವ ವರ್ಷಗಳಲ್ಲಿಯೂ ಇಷ್ಟೊಂದು ಪ್ರಮಾಣದ ಹೂವು ಬಿಟ್ಟಿರಲಿಲ್ಲ. ಹೀಗಾಗಿ ಈ ಬಾರಿ ಬಂಪರ್ ಬೆಳೆ ಗ್ಯಾರಂಟಿ ಅಂತಾ ರೈತರು ನಂಬಿದ್ದರು. ಆದರೆ ಅವರ ಆಸೆ ಕೆಲವೇ ದಿನಗಳಲ್ಲಿ ನುಚ್ಚುನೂರಾಗಿದೆ. ಇದಕ್ಕೆ ಕಾರಣ ಹವಾಮಾನ ವೈಪರೀತ್ಯ.

ಇದನ್ನೂ ಓದಿ: ಧಾರವಾಡ: ಇಳಕಲ್ ಸೀರೆ, ಬಗೆಬಗೆಯ ಊಟ; ಮಹಿಳೆಯರಲ್ಲಿ ಹಿಗ್ಗು ತಂದ ಸುಗ್ಗಿ ಹಬ್ಬ

ಇನ್ನೇನು ಕಾಯಿ ಕಟ್ಟಲು ಶುರುವಾಗುತ್ತೆ ಅನ್ನುವಾಗ ಜಿಲ್ಲೆಯಲ್ಲಿ ತಾಪಮಾನ ಕನಿಷ್ಠ ಪ್ರಮಾಣಕ್ಕೆ ಕುಸಿದು, ಹಲವಾರು ಕಡೆಗಳಲ್ಲಿ ತುಂತುರು ಮಳೆ ಕೂಡ ಸುರಿದಿದೆ. ಇದರಿಂದಾಗಿ ಮಾವಿನ ಹೂವುಗಳಿಗೆ ಇದೀಗ ರೋಗದ ಕಾಟ ಶುರುವಾರುವ ಲಕ್ಷಣಗಳು ಕಂಡುಬಂದಿವೆ.

ಇನ್ನು ಧಾರವಾಡ ಜಿಲ್ಲೆಯಲ್ಲಿ ಒಟ್ಟು 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಇದರ ಪೈಕಿ ಆಲ್ಫ್ಯಾನ್ಸೋ ತಳಿಯೇ ಅತ್ಯಂತ ಮಹತ್ವದ್ದು. ಈ ತಳಿಯ ಮಾವಿನ ಹಣ್ಣುಗಳಿಗೆ ಎಲ್ಲೆಡೆ ಬೇಡಿಕೆ ಇದೆ. ಅಷ್ಟೇ ಅಲ್ಲದೇ ಕೆಲ ವರ್ಷಗಳಿಂದ ಇವು ವಿದೇಶಕ್ಕೆ ರಫ್ತು ಕೂಡ ಆಗುತ್ತಿವೆ. ಹೀಗಾಗಿ ರೈತರು ಮಾವಿಗೆ ಹೆಚ್ಚಿನ ಕಾಳಜಿ ತೋರಿಸುತ್ತಾರೆ. ಪ್ರತಿವರ್ಷ ಈ ಮರಗಳನ್ನು ಆರೋಗ್ಯವಾಗಿಡಲು ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಇನ್ನು ಹೊಲಗಳ ನಿರ್ವಹಣೆಗೂ ಸಾಕಷ್ಟು ಹಣ ವ್ಯಯಿಸುತ್ತಾರೆ. ಆದರೆ ಕಳೆದ ಏಳೆಂಟು ವರ್ಷಗಳಿಂದ ಒಂದಿಲ್ಲ ಒಂದು ಕಾರಣದಿಂದಾಗಿ ಮಾವಿನ ಬೆಳೆ ಬರುತ್ತಲೇ ಇಲ್ಲ. ಈ ಬಾರಿಯಾದರೂ ಉತ್ತಮ ಬೆಳೆ ಕೈಗೆ ಸಿಗುತ್ತೆ ಅಂದುಕೊಂಡಿದ್ದ ರೈತರಿಗೆ ಈ ಜಿಟಿಜಿಟಿ ಮಳೆ ಶಾಕ್ ನೀಡಿದೆ.

ಇದನ್ನೂ ಓದಿ: ಅಳಿವಿನಂಚಿನಲ್ಲಿ ದೇಶಿ ಅಕ್ಕಿ ತಳಿ ಮುಗದ ಸಿರಿ, ಸುಗಂಧ: ಔಷಧೀಯ ಗುಣ, ಪೌಷ್ಟಿಕಾಂಶಗಳ ಕಣಜವೇ ಇದರಲ್ಲಿದೆಯಂತೆ!

ಇತ್ತೀಚಿನ ವರ್ಷಗಳಲ್ಲಿ ಮಾವು ಸಂಪೂರ್ಣವಾಗಿ ಕೈಕೊಡುತ್ತಿರೋದ್ರಿಂದ ಅನೇಕ ಕಡೆಗಳಲ್ಲಿ ರೈತರು ಮರಗಳನ್ನು ಕತ್ತರಿಸಿ ಹಾಕಿ, ಬೇರೆ ಬೆಳೆಗಳಿಗೆ ಮೊರೆ ಹೋಗಿದ್ದರು. ಅದರಲ್ಲೂ ಬಹುತೇಕರು ಕಬ್ಬು ಬೆಳೆಗೆ ಮೊರೆ ಹೋಗಿದ್ದರು. ಈ ಬಾರಿಯೂ ಅದೇ ರೀತಿಯಾದರೆ ಮತ್ತಷ್ಟು ಮಾವಿನ ಮರಗಳು ರೈತರ ಸಿಟ್ಟಿಗೆ ಆಹುತಿಯಾಗುವ ಲಕ್ಷಣಗಳಿವೆ. ಒಟ್ಟಿನಲ್ಲಿ ಈ ಬಾರಿಯಾದರೂ ಉತ್ತಮ ಇಳುವರಿ ಪಡೆಯಬಹುದು ಅಂದುಕೊಂಡಿದ್ದ ರೈತರಿಗೆ ಆರಂಭದಲ್ಲಿಯೇ ನಿರಾಸೆ ಕಾದಿರುವುದು ವಿಪರ್ಯಾಸವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಹಿಳೆಯರಿಗೇಕೆ ಪುರುಷರಿಗಿಂತ ಜಾಸ್ತಿ ಚಳಿಯಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ – Kannada News | Why Women Feel Colder Than Men

ಚಳಿಗಾಲದಲ್ಲಿ (Winter), ಕೆಲವರು ಸ್ವೇಟರ್, ಕ್ಯಾಪ್, ಸಾಕ್ಸ್ ಹೀಗೆ ಪೂರ್ತಿ ದೇಹವನ್ನು ಕವರ್ ಮಾಡಿಕೊಂಡಿರುತ್ತಾರೆ. ಆದರೆ ಕೆಲವರು ಕೇವಲ ಶರ್ಟ್ ಧರಿಸಿ ಹಾಯಾಗಿರುತ್ತಾರೆ. ಮತ್ತೊಂದಿಷ್ಟು ಜನ ಸ್ವಲ್ಪ ಬಿಸಿಲು ತಾಕಿದರೂ ಬೆವರುತ್ತಾರೆ, ಕೆಲವರು ಎಷ್ಟೇ ಬಿಸಿಲಿರಲಿ ಆರಾಮವಾಗಿರುತ್ತಾರೆ, ಯಾವುದೇ ರೀತಿಯ ವ್ಯತ್ಯಾಸ ಅವರಲ್ಲಿ ಕಂಡುಬರುವುದಿಲ್ಲ. ಇಷ್ಟೆಲ್ಲಾ ಪೀಠಿಕೆ ಹಾಕಿರುವುದಕ್ಕೆ ಕಾರಣವಿದೆ. ಆದರೆ ನೀವು ಎಂದಾದರೂ ಈ ವಿಷಯದ ಕುರಿತು ಆಳವಾದ ಚಿಂತನೆ ಮಾಡಿದ್ದೀರಾ ಅಥವಾ ಈ ರೀತಿ ಆಗುವುದಕ್ಕೆ ಕಾರಣವೇನು ಎಂದು ಯೋಚಿಸಿದ್ದೀರಾ… ಆರೋಗ್ಯ ತಜ್ಞರ ಪ್ರಕಾರ, ಈ ರೀತಿ ಆಗುವುದಕ್ಕೂ ಕಾರಣವಿದೆ. ಹೌದು, ವ್ಯಕ್ತಿಯ ಚಯಾಪಚಯ ಕ್ರಿಯೆ ಈ ರೀತಿ ಆಗುವುದಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಹಾಗಾದರೆ ಇವೆರಡಕ್ಕೂ ಇರುವ ಸಂಬಂಧವೇನು, ಈ ರೀತಿಯಾದಾಗ ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚು ಚಳಿಯಾಗದಿರುವುದು, ಬಿಸಿಲಿದ್ದರೂ ಬೆವರದಿರುವುದಕ್ಕೆ ದೇಹದ ಚಯಾಪಚಯ ಮತ್ತು ಸ್ನಾಯುಗಳೇ ಕಾರಣ. ವೇಗದ ಚಯಾಪಚಯ ಕ್ರಿಯೆ ಇದ್ದವರು ದೇಹದಲ್ಲಿ ಹೆಚ್ಚಿನ ಶಾಖವನ್ನು ಉತ್ಪಾದಿಸುತ್ತಾರೆ, ಅದಕ್ಕಾಗಿಯೇ ಅವರಿಗೆ ಚಳಿಯಾಗುವುದು ಬಹಳ ಕಡಿಮೆ. ಕಳಪೆ ಚಯಾಪಚಯ ಕ್ರಿಯೆ ಇರುವವರಲ್ಲಿ ಚಳಿ ತೀವ್ರವಾಗಿ ಕಂಡುಬರುತ್ತದೆ. ಚಯಾಪಚಯ ಕ್ರಿಯೆಯ ಜೊತೆಗೆ, ದೇಹದಲ್ಲಿ ರಕ್ತ ಹೇಗೆ ಪರಿಚಲನೆ ಕೂಡ ಈ ರೀತಿಯಾಗುವುದಕ್ಕೆ ಕಾರಣವಾಗಬಹುದು.

ರಕ್ತ ಪರಿಚಲನೆಗೂ, ಚಳಿಯಾಗದಿರುವುದಕ್ಕೆ ಕಾರಣವಿದೆಯೇ?

ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿಲ್ಲದಿದ್ದರೆ, ಕೈಗಳು ಮತ್ತು ಪಾದಗಳು ತಣ್ಣಗಾಗುತ್ತವೆ. ಹಾಗಾಗಿ ಬೆಚ್ಚಗಿನ ವಾತಾವರಣದಲ್ಲಿಯೂ ಸಹ ವ್ಯಕ್ತಿಗೆ ಚಳಿಯಾದ ಅನುಭವವಾಗುತ್ತದೆ. ಮತ್ತೊಂದೆಡೆ, ಉತ್ತಮ ರಕ್ತ ಪರಿಚಲನೆ ಇರುವವರಿಗೆ ಚಳಿ ಅಷ್ಟಾಗಿ ಆಗುವುದಿಲ್ಲ. ಇದರ ಜೊತೆಗೆ ದೇಹದ ಆಕಾರ ಮತ್ತು ತೂಕ ಕೂಡ ವ್ಯಕ್ತಿಗೆ ಎಷ್ಟು ಚಳಿಯಾಗುತ್ತಿದೆ ಎಂಬುದನ್ನು ನಿರ್ಧರಿಸುತ್ತದೆ. ದೇಹದ ಗಾತ್ರ ದೊಡ್ಡಡಾಗಿದ್ದರೆ ಅಥವಾ ದೇಹದಲ್ಲಿ ಹೆಚ್ಚಿನ ಕೊಬ್ಬಿನ ಅಂಶ ಹೆಚ್ಚಾಗಿದ್ದರೆ ಚಳಿಯಾಗುವ ಪ್ರಮಾಣ ತೆಳ್ಳಗಿರುವವರಿಗೆ ಹೋಲಿಸಿದರೆ ಕಡಿಮೆಯಾಗಿರುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಇತರರಿಗಿಂತ ತುಸು ಹೆಚ್ಚೆ ನಿಮ್ಗೆ ಚಳಿಯಾಗುತ್ತಾ? ಇದಕ್ಕೆ ಈ ವಿಟಮಿನ್ ಕೊರತೆಯೇ ಕಾರಣ

ಮಹಿಳೆಯರು ಮತ್ತು ಪುರುಷರ ನಡುವೆ ಯಾರಿಗೆ ಚಳಿ ಜಾಸ್ತಿಯಾಗುತ್ತದೆ?

ರಕ್ತದ ಕೊರತೆ ಇರುವವರು, ಅಂದರೆ ಹಿಮೋಗ್ಲೋಬಿನ್ ಅಂಶ ಕಡಿಮೆ ಇರುವವರಿಗೆ ಬೇಗ ಚಳಿಯಾಗುತ್ತದೆ. ಮಹಿಳೆಯರಲ್ಲಿ ಹೆಚ್ಚಾಗಿ ಹಿಮೋಗ್ಲೋಬಿನ್ ಕಡಿಮೆ ಇರುವುದರಿಂದ ಪುರುಷರಿಗಿಂತ ಬೇಗ ಚಳಿಯಾಗುತ್ತದೆ. ಏಕೆಂದರೆ ಮಹಿಳೆಯರು ಮತ್ತು ಪುರುಷರ ದೇಹದ ರಚನೆಯಲ್ಲಿ ವ್ಯತ್ಯಾಸವಿದೆ. ಮಹಿಳೆಯರಿಗೆ ಸ್ನಾಯುವಿನ ದ್ರವ್ಯರಾಶಿ ಕಡಿಮೆ ಇರುತ್ತದೆ. ಇನ್ನು, ವಯಸ್ಸು ಮತ್ತು ಜೀವನಶೈಲಿ ಕೂಡ ಈ ರೀತಿಯಾಗುವುದಕ್ಕೆ ಕಾರಣವಾಗಬಹುದು. ವಯಸ್ಸಾದಂತೆ, ಆಂತರಿಕ ತಾಪಮಾನವನ್ನು ನಿಯಂತ್ರಿಸುವ ದೇಹದ ಸಾಮರ್ಥ್ಯವು ಕಡಿಮೆಯಾಗುತ್ತದೆ. ಅದಕ್ಕಾಗಿಯೇ ವಯಸ್ಸಾದವರಿಗೆ ಬಹಳ ಬೇಗ ಚಳಿಯಾಗುತ್ತದೆ. ಇನ್ನು, ಜೀವನಶೈಲಿಯ ಬಗ್ಗೆ ಹೇಳುವುದಾದರೆ, ಕಡಿಮೆ ನೀರು ಕುಡಿಯುವುದು ಮತ್ತು ಹೆಚ್ಚು ಕೆಫೀನ್ ಸೇವನೆ ದೇಹದ ಉಷ್ಣತೆಯನ್ನು ನಿಯಂತ್ರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅನ್ನ ಕದ್ದು ತಿಂದಿದ್ದೆ’; ಗಿಲ್ಲಿಯ ಹಳೆಯ ಕಥೆ ಕೇಳಿ ರಕ್ಷಿತಾ ಶೆಟ್ಟಿ ಕಣ್ಣೀರು

ಗಿಲ್ಲಿ ನಟ ಅವರು ತುಂಬಾನೇ ಕಷ್ಟದಿಂದ ಮೇಲಕ್ಕೆ ಬಂದವರು. ಈಗ ಕರ್ನಾಟಕದಾದ್ಯಂತ ಅವರನ್ನು ಆರಾಧಿಸುವವರು ಇದ್ದಾರೆ. ಈ ಮೊದಲು ಅವರು ಅನ್ನ ಕದ್ದು ತಿಂದಿದ್ದರಂತೆ. ಈ ವಿಷಯವನ್ನು ಬಿಗ್ ಬಾಸ್ ಫಿನಾಲೆ ವಾರದಲ್ಲಿ ಅವರು ಹೇಳಿಕೊಂಡಿದ್ದಾರೆ.ಇದನ್ನು ಕೇಳಿ ರಕ್ಷಿತಾ ಶೆಟ್ಟಿ ಅವರು ಕಣ್ಣೀರು ಹಾಕಿದ್ದಾರೆ. ಆ ಸಂದರ್ಭದ ಪ್ರೋಮೋ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಿನಿಮಾ ಸೋಲಿನ ಬಳಿಕ 15 ಕೋಟಿ ರೂ. ಸಂಭಾವನೆ ಬಿಟ್ಟುಕೊಟ್ಟ ಕಾರ್ತಿಕ್ ಆರ್ಯನ್ – Kannada News | TMMTMTTM actor Kartik Aaryan rs 15 cr remuneration cut after flop

ನಟ ಕಾರ್ತಿಕ್ ಆರ್ಯನ್ (Kartik Aaryan) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. 2025ರ ಡಿಸೆಂಬರ್​​ನಲ್ಲಿ ಅವರು ನಟಿಸಿದ ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ (TMMTMTTM) ಸಿನಿಮಾ ಬಿಡುಗಡೆ ಆಯಿತು. ಕಾರ್ತಿಕ್ ಆರ್ಯನ್ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ಅವರು ಅಭಿನಯಿಸಿದ್ದರು. ಬಾಕ್ಸ್ ಆಫೀಸ್​​ನಲ್ಲಿ ಈ ಸಿನಿಮಾ ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಮಾಡಲಿಲ್ಲ. ಅದರಿಂದಾಗಿ ನಿರ್ಮಾಪಕರಿಗೆ ನಷ್ಟ ಆಗಿದೆ. ಹಾಗಾಗಿ ತಮ್ಮ ಪಾಲಿನ 15 ಕೋಟಿ ರೂಪಾಯಿ ಸಂಭಾವನೆಯನ್ನು (Remuneration) ಬಿಟ್ಟುಕೊಡಲು ಕಾರ್ತಿಕ್ ಆರ್ಯನ್ ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

‘ಧರ್ಮ ಪ್ರೊಡಕ್ಷನ್ಸ್’ ಮೂಲಕ ಕರಣ್ ಜೋಹರ್ ಅವರು ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಕಾರ್ತಿಕ್ ಆರ್ಯನ್ ಮತ್ತು ಅನನ್ಯಾ ಪಾಂಡೆ ಜೊತೆಯಲ್ಲಿ ನೀನಾ ಗುಪ್ತಾ, ಜಾಕಿ ಶ್ರಾಫ್ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಡಿಸೆಂಬರ್ 25ರಂದು ರಿಲೀಸ್ ಆದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಅಂದಾಜು 90 ಕೋಟಿ ರೂಪಾಯಿ ಬಜೆಟ್​​ನಲ್ಲಿ ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ ಸಿನಿಮಾ ನಿರ್ಮಾಣ ಆಗಿತ್ತು. ಆದರೆ ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರ ಗಳಿಸಿದ್ದು 30 ಕೋಟಿ ರೂಪಾಯಿ ಮಾತ್ರ. ಇದರಿಂದಾಗಿ ನಿರ್ಮಾಪಕ ಕರಣ್ ಜೋಹರ್ ಅವರು ನಷ್ಟ ಅನುಭವಿಸಿದ್ದಾರೆ. ನಿರ್ಮಾಪಕರ ನಷ್ಟ ಕಡಿಮೆ ಮಾಡಲು ಕಾರ್ತಿಕ್ ಆರ್ಯನ್ ಅವರು 15 ಕೋಟಿ ರೂಪಾಯಿ ಸಂಭಾವನೆ ಬಿಟ್ಟುಕೊಟ್ಟಿದ್ದಾರೆ ಎಂದು ವರದಿ ಆಗಿದೆ.

2021ರಲ್ಲಿ ಕಾರ್ತಿಕ್ ಆರ್ಯನ್ ಮತ್ತು ಕರಣ್ ಜೋಹರ್ ನಡುವೆ ಮನಸ್ತಾಪ ಉಂಟಾಗಿತ್ತು. ಆದರೆ 2023ರ ವೇಳೆಗೆ ಅವರ ನಡುವಿನ ಮುನಿಸು ಕಡಿಮೆ ಆಯಿತು. ಆ ಬಳಿಕ ಅವರು ಮತ್ತೆ ಜೊತೆಯಾಗಿ ಸಿನಿಮಾ ಮಾಡಲು ಆರಂಭಿಸಿದರು. ಆದರೆ ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ ಚಿತ್ರದ ಸೋಲಿನಿಂದಾಗಿ ಅವರಿಬ್ಬರ ನಡುವೆ ಪುನಃ ಕಿರಿಕ್ ಆರಂಭ ಆಗಿದೆ ಎಂಬ ಗಾಸಿಪ್ ಹಬ್ಬಿತ್ತು. ಆ ವದಂತಿಯನ್ನು ಅವರ ಆಪ್ತ ಮೂಲಗಳು ತಳ್ಳಿಹಾಕಿವೆ.

ಇದನ್ನೂ ಓದಿ: ಅಪ್ರಾಪ್ತೆ ಜೊತೆ ಕಾರ್ತಿಕ್ ಆರ್ಯನ್ ಡೇಟಿಂಗ್? ಇಬ್ಬರ ಮಧ್ಯೆ 18 ವರ್ಷ ವಯಸ್ಸಿನ ಅಂತರ

‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ ಸಿನಿಮಾದ ಸೋಲಿಗೆ ಕೆಲವು ಕಾರಣಗಳಿವೆ. ಪ್ರೇಕ್ಷಕರಿಗೆ ಈ ಸಿನಿಮಾ ಅಷ್ಟೇನೂ ಇಷ್ಟ ಆಗಲಿಲ್ಲ. ಈ ಚಿತ್ರ ಬಿಡುಗಡೆ ಆದಾಗ ಥಿಯೇಟರ್​​ಗಳಲ್ಲಿ ‘ಧುರಂಧರ್’ ಸಿನಿಮಾದ ಅಬ್ಬರ ಜೋರಾಗಿತ್ತು. ‘ಧುರಂಧರ್’ ಚಿತ್ರದ ಎದುರು ಪೈಪೋಟಿ ನೀಡಲು ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ ಸಿನಿಮಾಗೆ ಸಾಧ್ಯವಾಗಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿಗರೇ ಗಮನಿಸಿ, ಈ ಎರಡು ದಿನ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಕರೆಂಟ್​​ ಇರುವುದಿಲ್ಲ – Kannada News | Bangalore Power Outage: BESCOM Announces Jan 17 18 Cuts for Grid Upgrades

ಬೆಂಗಳೂರು, ಜ.16: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವಿದ್ಯುತ್​​​ ಕಂಬಗಳ ಬದಲಾವಣೆ, ಇತರ ಕೆಲಸ ಕಾರಣದಿಂದ ಈ ವಾರಾಂತ್ಯದಲ್ಲಿ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಮಾಡಲಿದೆ ಎಂದು ಹೇಳಿದೆ. ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಕರೆಂಟ್​​ ಇರುವುದಿಲ್ಲ ಎಂದು ಹೇಳಲಾಗಿದೆ. ವಿದ್ಯುತ್ ಜಾಲದ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು ವಾರಾಂತ್ಯದಲ್ಲಿ ಈ ಕೆಲಸವನ್ನು ಮಾಡಲು ಆಯ್ಕೆ ಮಾಡಿಕೊಂಡಿದ್ದು, ಕೆಲಸಕ್ಕೆ ಹೋಗುವವರಿಗೆ ಇದರಿಂದ ಅನುಕೂಲವಾಗಲಿದೆ. ಶನಿವಾರ ಮತ್ತು ಭಾನುವಾರ (ಜನವರಿ 17 ಮತ್ತು 18) ಹಗಲಿನಲ್ಲಿ ವಿದ್ಯುತ್ ವ್ಯತ್ಯಯಕ್ಕೆ ಮಾಡಲಾಗುವುದು ಎಂದು ನಾಗರಿಕರಿಗೆ ಮೊದಲೇ ಎಚ್ಚರಿಕೆ ನೀಡಿದ್ದಾರೆ.

ಈ ದಿನದಂದು ಟ್ರಾನ್ಸ್‌ಫಾರ್ಮರ್‌ಗಳನ್ನು ನವೀಕರಿಸುವುದು ಮತ್ತು ಫೀಡರ್‌ಗಳ ಸುರಕ್ಷತೆಗಳ ಬಗ್ಗೆ ಪರಿಶೀಲನೆ, ಇತರ ಕೆಲಸಗಳನ್ನು ಮಾಡಲಾಗುವುದು. ಇದರಿಂದ ಮುಂದಿನ ದಿನಗಳಲ್ಲಾಗುವ ಸಮಸ್ಯೆಗಳನ್ನು ತಡೆಯಬಹುದು ಎಂದು ಬೆಸ್ಕಾಂ ಹೇಳಿದೆ. ಬೆಂಗಳೂರಿನ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ವಿದ್ಯುತ್ ಕಡಿತಗೊಳ್ಳಿದೆ. ದಕ್ಷಿಣ ಬೆಂಗಳೂರು ಪ್ರದೇಶಗಳಾದ ಬೊಮ್ಮನಹಳ್ಳಿ, ಹೆಚ್‌ಎಸ್‌ಆರ್ ಲೇಔಟ್, ಕೂಡ್ಲು, ಜಕ್ಕಸಂದ್ರ, ಬೆಳ್ಳಂದೂರು ಮತ್ತು ಸರ್ಜಾಪುರ ರಸ್ತೆಯಲ್ಲಿ ವಿದ್ಯುತ್​​ ಕಡಿತವಾಗಲಿದೆ. ಪೂರ್ವ ಬೆಂಗಳೂರಿನ ಮಾರತಹಳ್ಳಿ, ವೈಟ್‌ಫೀಲ್ಡ್, ಕೆಆರ್ ಪುರಂ, ಮಹದೇವಪುರ, ಬಾಣಸವಾಡಿ, ಮತ್ತು ಹೊರಮಾವು ವಿದ್ಯುತ್​​ ಕಡಿತವಾಗಲಿದೆ.

ಬೆಂಗಳೂರಿನ ವಿದ್ಯುತ್ ಕಡಿತದ ಪರಿಣಾಮವನ್ನು ಕಡಿಮೆ ಮಾಡಲು, ನಿವಾಸಿಗಳು ಮತ್ತು ವ್ಯಾಪಾರಿಗಳು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ವಿದ್ಯುತ್ ಕಡಿತಗೊಳ್ಳುವ ಮೊದಲು ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಪವರ್ ಬ್ಯಾಂಕ್‌ಗಳು ಸಂಪೂರ್ಣವಾಗಿ ಚಾರ್ಜ್ ಆಗಿವೆಯೇ ಎಂದು ನೋಡಿಕೊಳ್ಳಬೇಕು. ಮನೆಯಿಂದ ಕೆಲಸ ಮಾಡುವವರು, ಕೆಲಸದ ಸ್ಥಳದಲ್ಲಿ ವೈ-ಫೈ ಹೊಂದಿರುವ ಬಗ್ಗೆ ಮೊದಲೆ ಪರಿಶೀಲನೆ ಮಾಡಿಕೊಂಡಿರಬೇಕು. ಇನ್ವರ್ಟರ್‌ಗಳು, ಬ್ಯಾಕಪ್ ಲೈಟ್‌ಗಳು ಮತ್ತು ಇತರ ಅಗತ್ಯ ಸಾಧನಗಳು ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸುವುದು ಅಗತ್ಯ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಕಂಪನಿಯಲ್ಲಿ 1 ವರ್ಷ ಅನುಭವ ಇರುವವರಿಗೆ 35 ಲಕ್ಷದ ಪ್ಯಾಕೇಜ್? 5 ವರ್ಷ ದುಡಿದವರಿಗೆ ಮರ್ಯಾದೆಯೇ ಇಲ್ಲ

ಈ ಮೇಲೆ ತಿಳಿಸಲಾದ ಎಲ್ಲ ಪ್ರದೇಶಗಳಲ್ಲಿ ಸಂಪೂರ್ಣ ವಿದ್ಯುತ್​ ಕಡಿತ ಇರಲ್ಲ, ಕೆಲವು ಪ್ರದೇಶಗಳು ಅಲ್ಪಾವಧಿಯ ವಿದ್ಯುತ್ ಅಡಚಣೆಗಳು ಅಥವಾ ಸಣ್ಣಪುಟ್ಟ ಅಡೆತಡೆಗಳನ್ನು ಮಾತ್ರ ಇರುತ್ತದೆ. ಇದಲ್ಲದೆ, ನಗರದ ವಿದ್ಯುತ್ ಮೂಲಸೌಕರ್ಯದ ದೀರ್ಘಕಾಲೀನ ಸುಧಾರಣೆಗೆ ಈ ದುರಸ್ಥಿತಿಗಳನ್ನು ಮಾಡಲೇಬೇಕು. ಈ ದಿನಕ್ಕೆ ನಿಮಗೆ ವಿದ್ಯುತ್​​​​​​ ಸಮಸ್ಯೆ ಉಂಟಾದರೂ ಮುಂದಿನ ದಿನಗಳಲ್ಲಿ ಇದರ ಲಾಭವನ್ನು ಪಡೆದುಕೊಳ್ಳಬಹುದು ಎಂದು ಹೇಳಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version