ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ತುಳಸಿ ಕಟ್ಟೆ ಪ್ರದಕ್ಷಿಣೆ ಹಾಗೂ ಇದರ ಮಹತ್ವವೇನು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ.ವೃಕ್ಷಗಳು ನಮ್ಮ ವಂಶ ಪಾರಂಪರ್ಯವಾಗಿ ಸಹಾಯ ಮಾಡುತ್ತಲೇ ಇವೆ. ಆಹಾರ, ನೆರಳು, ಆಶ್ರಯ ನೀಡುವ ಈ ಮರಗಳಲ್ಲಿ ತುಳಸಿ ಗಿಡವು ಅತ್ಯಂತ ಪೂಜ್ಯನೀಯ ಸ್ಥಾನ ಪಡೆದಿದೆ. ಅರಳೀಮರದಂತೆ ತುಳಸಿ ಗಿಡವನ್ನು ಸಹ ಪೂಜಿಸಲಾಗುತ್ತದೆ. ಪ್ರತಿ ಮನೆಯಲ್ಲೂ ತುಳಸಿ ಗಿಡವಿರಬೇಕು ಎಂಬುದು ಹಿಂದೂ ಸಂಪ್ರದಾಯ. ತುಳಸಿಗೆ ನೀರು ಹಾಕಿ ಪೂಜೆ ಮಾಡುವುದರ ಜೊತೆಗೆ, ಪ್ರತಿದಿನ ಬೆಳಿಗ್ಗೆ ಐದು ನಿಮಿಷಗಳ ಕಾಲ ತುಳಸಿ ಕಟ್ಟೆ ಪ್ರದಕ್ಷಿಣೆ ಮಾಡುವುದು ವಿಶೇಷ ಫಲಗಳನ್ನು ನೀಡುತ್ತದೆ.
ಈ ಪ್ರದಕ್ಷಿಣೆಯನ್ನು ಗೋಪ ಪ್ರದಕ್ಷಿಣೆ ಎಂದೂ ಕರೆಯುತ್ತಾರೆ. ಒಂದು ಪ್ರದಕ್ಷಿಣೆ ಮಾಡಿದರೆ ಸಾಕ್ಷಾತ್ ವಿಷ್ಣುವಿನ ಅನುಗ್ರಹ ದೊರೆಯುತ್ತದೆ. ಮೂರು ಪ್ರದಕ್ಷಿಣೆಗಳಿಂದ ಮನಸ್ಸು ಶುದ್ಧಿಯಾಗುತ್ತದೆ, ನಾಲ್ಕರಿಂದ ಸಂಪತ್ತು ವೃದ್ಧಿಯಾಗುತ್ತದೆ, ಮತ್ತು ಹನ್ನೊಂದು ಪ್ರದಕ್ಷಿಣೆಗಳಿಂದ ನಿಮ್ಮ ಅಭೀಷ್ಟಗಳು ಈಡೇರುತ್ತವೆ. 11 ಪ್ರದಕ್ಷಿಣೆಗಳಿಗಿಂತ ಹೆಚ್ಚು ಮಾಡಬಾರದು ಎಂಬ ನಿಯಮವಿದೆ. ಈ ಪ್ರದಕ್ಷಿಣೆಯನ್ನು ಕನಿಷ್ಠ 48 ದಿನಗಳ ಕಾಲ ನಿರಂತರವಾಗಿ ಮಾಡಿದರೆ ಸಾಕಷ್ಟು ಶುಭ ಫಲಗಳು ಲಭಿಸುತ್ತವೆ ಎಂದು ನಂಬಲಾಗಿದೆ. ತುಳಸಿ ಗಿಡವಿರುವ ಮನೆಯು ದೇವಸ್ಥಾನವಿದ್ದಂತೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.
ರಣವೀರ್ ಸಿಂಗ್ ನಟನೆಯ ‘ಧುರಂದರ್ 2’ ಸಿನಿಮಾ (Dhurandhar 2) ಸೂಪರ್ ಹಿಟ್ ಆಗಿದೆ. ಹಿಂದೆ ಯಾವ ಸಿನಿಮಾಗಳೂ ಮಾಡದಷ್ಟು ಅಬ್ಬರದಲ್ಲಿ ಸಿನಿಮಾ ರಿಲೀಸ್ ಆಗಿದೆ. ಹಲವು ದಾಖಲೆಗಳನ್ನು ಸಿನಿಮಾ ಉಡೀಸ್ ಮಾಡಿದೆ. ನಾಲ್ಕು ದಿನಕ್ಕೆ 450 ಕೋಟಿ ರೂಪಾಯಿ ಆಗಿದೆ. ಹೀಗೆ ಮುಂದುವರಿದರೆ ಚಿತ್ರದ ಒಟ್ಟಾರೆ ಕಲೆಕ್ಷನ್ ಎಷ್ಟು ಕೋಟಿ ರೂಪಾಯಿ ಆಗುತ್ತದೆ ಎನ್ನುವ ಕುತೂಹಲ ಮೂಡಿದೆ. ವಿಶ್ವ ಮಟ್ಟದಲ್ಲಿ ಚಿತ್ರದ ಗಳಿಕೆ 700 ಕೋಟಿ ರೂಪಾಯಿ ಸಮೀಪಿಸಿದೆ.
‘ಧುರಂಧರ್ 2’ ಚಿತ್ರ ಮಾರ್ಚ್ 19ರಂದು ರಿಲೀಸ್ ಆಯಿತು. ಈ ಸಿನಿಮಾ ಎದುರು ‘ಟಾಕ್ಸಿಕ್’ ತೆರೆಗೆ ಬರಬೇಕಿತ್ತು. ಆದರೆ, ಚಿತ್ರತಂಡ ತನ್ನ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡಿತು. ಇದು ‘ಧುರಂಧರ್ 2’ ಮತ್ತಷ್ಟು ಅಬ್ಬರಿಸಲು ಸಹಕಾರಿ ಆಗಿದೆ. ಈ ಚಿತ್ರದ ಪ್ರೀಮಿಯರ್ ಶೋಗೆ 11 ಸಾವಿರ ಶೋ ಸಿಕ್ಕಿತ್ತು. ಆ ಬಳಿಕ ಪ್ರತಿ ದಿನ ಸರಾಸರಿ 20 ಸಾವಿರ ಶೋಗಳು ಸಿಗುತ್ತಿವೆ. ಪ್ರೀಮಿಯರ್ ಶೋ ದಿನವನ್ನು ಲೆಕ್ಕಕ್ಕೆ ಹಿಡಿದರೆ ಚಿತ್ರ 92 ಸಾವಿರ ಶೋಗಳನ್ನು ಪ್ರಸಾರ ಮಾಡಿದೆ.
ಪ್ರೀಮಿಯರ್ ಶೋನಿಂದ ಚಿತ್ರಕ್ಕೆ 43 ಕೋಟಿ ರೂಪಾಯಿ, ಗುರುವಾರ 102 ಕೋಟಿ ರೂಪಾಯಿ, ಶುಕ್ರವಾರ 80 ಕೋಟಿ ರೂಪಾಯಿ, ಶನಿವಾರ 113 ಕೋಟಿ ರೂಪಾಯಿ ಹಾಗೂ ಭಾನುವಾರ 114 ಕೋಟಿ ರೂಪಾಯಿ ಚಿತ್ರ ಗಳಿಕೆ ಮಾಡಿದೆ. ಇದು ಚಿತ್ರತಂಡದ ಹೆಚ್ಚುಗಾರಿಕೆ.
‘ಧುರಂಧರ್’ ಚಿತ್ರ 1300 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈಗ ‘ಧುರಂಧರ್ 2’ ಚಿತ್ರವು ವಾರದ ಗಳಿಕೆಯೇ ಸಾವಿರ ಕೋಟಿ ರೂಪಾಯಿ ತಲುಪುವು ನಿರೀಕ್ಷೆ ಇದೆ. ವಿಶ್ವ ಮಟ್ಟದಲ್ಲಿ ಸಿನಿಮಾದ ಕಲೆಕ್ಷನ್ 2000 ಕೋಟಿ ರೂಪಾಯಿ ತಲುಪುವ ನಿರೀಕ್ಷೆ ಇದೆ. ವಿಶ್ವ ಮಟ್ಟದಲ್ಲಿ ಸಿನಿಮಾ ಅಬ್ಬರಿಸುತ್ತಿದೆ. ಅನೇಕ ರಾಷ್ಟ್ರಗಳಲ್ಲಿ ಸಿನಿಮಾ ಬ್ಯಾನ್ ಆದ ಹೊರತಾಗಿಯೂ ಸಿನಿಮಾದ ಗಳಿಕೆ ಮೇಲೆ ಯಾವುದೇ ಪ್ರಭಾವ ಬೀರಿಲ್ಲ.
ರಾಮನಗರ, ಮಾರ್ಚ್ 23: ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ದುರ್ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ (Ramanagara) ವ್ಯಾಪ್ತಿಯಲ್ಲಿ ಸಂಭವಿಸಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bangalore Mysore Expressway) ಚನ್ನಪಟ್ಟಣ ತಾಲೂಕಿನ ಸಂಕಲಗೆರೆ (Sankalagere) ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಕೇರಳದಿಂದ ಬೆಂಗಳೂರಿನತ್ತ ಬರುತ್ತಿದ್ದ ಬಸ್, ನಿದ್ರೆ ಮಂಪರಿನಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪೆನ್ಸಿಂಗ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಸ್‌ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಚನ್ನಪಟ್ಟಣ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಕೆಲವು ಜನರು ಸವಾಲಿನ ಕಾರ್ಯಗಳನ್ನು ನಿಭಾಯಿಸಲು ತೊಂದರೆಗಳನ್ನು ಎದುರಿಸಬಹುದು. ಇಂದು ನೀವು ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಯೋಚಿಸುವಿರಿ. ಒಳ್ಳೆಯದನ್ನು ಸಾಧಿಸುವ ನಿಮಗೆ ಇಂದಿನ ನಿಮ್ಮ ಪ್ರಯತ್ನವು ಸಂಪೂರ್ಣವಾಗಿ ಇರಲಿ. ಉದ್ಯೋಗಕ್ಕೆ ಸೇರುವಾಗ ಅಲ್ಪದೂರದ ದೃಷ್ಟಿಯಾದರೂ ಬೇಕು. ಹೂಡಿಕೆಯತ್ತ ಗಮನಹರಿಸುವುದು ಸದ್ತಕ್ಕೆ ಬೇಡ. ದುರ್ಬಲರಿಗೆ ಅಲ್ಪ ಸಹಾಯವನ್ನು ಮಾಡುವಿರಿ. ರೂಪವು ನಿಮ್ಮ ಕೆಲವು ಕಾರ್ಯಕ್ಕೆ ಅಡ್ಡಿಯಾದೀತು.
ವೃಷಭ ರಾಶಿ :
ಸಂತೋಷಕ್ಕೆ ಅಡ್ಡಿಯಾಗುವ ಕೆಲಸವನ್ನು ಮಾಡಲಾರಿರಿ. ವ್ಯಾಪಾರ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನೀವು ಗೊಂದಲಕ್ಕೆ ಒಳಗಾಗಬಹುದು. ಉದ್ಯೋಗವನ್ನು ಹುಡುಕುತ್ತಿರುವ ಜನರು ಅನಧಿಕೃತ ಜನರ ಸಂಪರ್ಕದಿಂದ ತೊಂದರೆಗಳನ್ನು ಎದುರಿಸಬೇಕಾಗಬಹುದು. ಆಪತ್ತಿಗಾಗಿ ಇಟ್ಟ ಸಂಪತ್ತಿನ ವಿನಿಯೋಗ ಮಾಡುವ ಸ್ಥಿತಿಯು ಬರುವುದು. ಏಕಾಂಗಿಯಾಗಿ ಇರುವುದನ್ನು ಇಷ್ಟಪಡುವುದು ಅನಿವಾರ್ಯವಾಗಲಿದೆ. ನಿಮ್ಮನ್ನು ಪ್ರಕಟಪಡಿಸಿಕೊಳ್ಳುವುದು ಇಷ್ಟವಿದ್ದರೂ ಸಾಧಿಸಲಾಗದು.
ಮಿಥುನ ರಾಶಿ:
ಇಂದು ಹಣಕಾಸಿನಿಂದ ಆಗುವ ಯಾವುದೇ ಅಪಾಯವನ್ನು ತೆಗೆದುಕೊಳ್ಳುವ ಮನಸ್ಸು ಮಾಡುವುದು ಬೇಡ. ಸಂಬಂಧದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಮಕ್ಕಳ ಆರೋಗ್ಯದ ಬಗ್ಗೆ ಮನಸ್ಸು ಚಿಂತಿಸಲಿದೆ. ಅಪರಿತರು ನಿಮ್ಮನ್ನು ಪರಿಚಯ ಮಾಡಿಕೊಳ್ಳಬಹುದು. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸುವಿರಿ. ಸಮಾರಂಭಗಳಿಗೆ ಹೋಗುವ ಸಾಧ್ಯತೆ ಇದೆ. ಸಂಗಾತಿಯ ನಡುವಿನ ಸಂಬಂಧವು ದುರ್ಬಲವಾಗಲಿದ್ದು, ಗಟ್ಟಿಯಾಗಲು ತಂತ್ರವನ್ನು ಬಳಸುವಿರಿ.
ಕರ್ಕಾಟಕ ರಾಶಿ:
ನೀವು ಕುಟುಂಬದ ಜೊತೆ ಎಲ್ಲೋ ಪ್ರಯಾಣಿಸಲು ತೀರ್ಮಾನಮಾಡಿ ಹೊರಡುವಿರಿ. ಇಂದು ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಹೆಚ್ಚಾಗುತ್ತದೆ. ಉಪಕಾರದ ಸ್ಮರಣೆಯು ಅಲ್ಲಗಳೆದು ಸಂತೋಷದಿಂದ ಇರುವಿರಿ. ನಿಮ್ಮಿಂದ ಕೆಲಸವಾಗಲು ನಿಮ್ಮನ್ನು ಹೊಗಳಬಹುದು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿಯು ಇರುವುದು. ನೀವು ಸ್ವಾರ್ಥಿಗಳಂತೆ ಕಾಣುವಿರಿ. ಎಲ್ಲವೂ ನಿಮ್ಮದಾಗಬೇಕು ಎನ್ನುವ ಬಯಕೆ ಇರಿವುದು. ಅವಿವಾಹಿತರ ವಿವಾಹಕ್ಕೆ ಸಂಬಂಧಿಸಿದಂತೆ ಶುಭ ವಾರ್ತೆಯು ಇರಲಿದೆ.
ಸಿಂಹ ರಾಶಿ:
ಸ್ನೇಹಿತರ ಜೊತೆಗೆ ಸಮಯ ಕಳೆಯುವುದು ನಿಮಗೆ ಸಂತೋಷವಾಗಲಿದೆ. ಇಂದು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ. ಯಾವುದೋ ಕಾರಣಕ್ಕೆ ಕೊಟ್ಟ ಹಣ ವಾಪಾಸಾಗದು. ಚರಾಸ್ತಿಯ ಸಲುವಾಗಿ ಕಾನೂನು ಹೋರಾಟ ಮಾಡಬೇಕಾದೀತು. ನಿಮ್ಮ ದುರ್ಬಲ್ಯವು ಇನ್ನೊಬ್ಬರಿಗೆ ಆಹಾರವಾಗಬಹುದು. ನೇರವಾದ ಮಾತಿನಿಂದ ತೊಂದರೆಯಾಗಬಹುದು. ಕುಶಲತೆಯಿಂದ ಕೆಲಸವನ್ನು ಮಾಡಿ. ಹೂಡಿಕೆಯ ವ್ಯವಹಾರವು ಕೆಲವರಲ್ಲಿ ಮಾತ್ರ ಇರಲಿ.
ಕನ್ಯಾ ರಾಶಿ:
ನಿಮ್ಮ ಲಾಭವನ್ನು ಗ್ರಾಹಕರಿಂದ ಹೆಚ್ಚು ಮಾಡಿಕೊಳ್ಳುವಿರಿ. ಸಂತೋಷದ ಸಮಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಿರಿ. ಹರಿದು ಹೋದ ಮನಸ್ಸುಗಳನ್ನು ಕೂಡಿಸುವುದು ಕಷ್ಟವಾದೀತು. ಜೀವನದಲ್ಲಿ ಉತ್ಸಾಹ ತುಂಬಿಕೊಳ್ಳುವ ವ್ಯಕ್ತಿಯನ್ನು ಹುಡುಕಿಕೊಳ್ಳಿ. ಸಾಮಾಜಿಕ ಕೆಲಸದಲ್ಲಿ ನೀವು ಕಳೆದುಹೋಗಬಹುದು. ದೂರದ ವಾಹನ ಚಾಲನೆಯಲ್ಲಿ ಜಾಗರೂಕತೆ ಇರಲಿ. ಮಿತ್ರರಿಗೆ ಸಹಾಯ ಮಾಡಿ ನೀವು ತೊಂದರೆಯಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಆಕಸ್ಮಿಕ ಧನಲಾಭವು ನಿಮಗೆ ಸ್ವಲ್ಪ ಸಮಾಧಾನಿರುವುದು.
ತುಲಾ ರಾಶಿ:
ಇಂದು ಸರಿಯಾಗಿ ಯೋಚಿಸದೆ ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಉದ್ಯಮಿಗಳು ಹೂಡಿಕೆ ಸಂಬಂಧಿತ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು. ಹಿತಶತ್ರುಗಳಿಂದ ಹಲವು ತೊಂದರೆಗಳು ಬರಬಹುದು. ಕೃತಜ್ಞತೆ ಭಾವವನ್ನು ಪ್ರಕಟಿಸುವಿರಿ. ಹೊಗಳಿಕೆಯನ್ನು ಬಹಳ ಸಂಕೋಚದಿಂದ ಪಡೆಯುವಿರಿ. ಧಾರ್ಮಿಕ ಭಾವವು ನಿಮ್ಮಲ್ಲಿ ಜಾಗರೂಕವಾಗಬಹುದು. ಪ್ರೀತಿಯ ವಿಚಾರದಲ್ಲಿ ಬುದ್ಧಿವಾದವನ್ನು ಹೇಳುವರು. ಕೆಲವರನ್ನು ನೀವು ನಂಬಬೇಕಾಗುತ್ತದೆ.
ವೃಶ್ಚಿಕ ರಾಶಿ:
ಪರರ ರಹಸ್ಯವನ್ನು ಭೇದಿಸುವ ಕುತೂಹಲ ಇರಲಿದೆ. ಗಣ್ಯರ ಜೊತೆ ಮಾತುಕತೆ ನಡೆಸುವಿರಿ. ದೂರವಾಣಿಯ ಕರೆಯಿಂದ ನಿಮಗೆ ಆತಂಕ ಎದುರಾಗಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುವರು. ದೀರ್ಘಕಾಲ ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ನೀವು ಇಷ್ಟಪಟ್ಟಿದ್ದನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಪತ್ನಿಯ ಕಡೆಯವರಿಂದ ಅಹಿತಕರವಾದ ಮಾತುಗಳು ಕೇಳಿಬರಬಹುದು.
ಧನು ರಾಶಿ:
ಇಂದಿನ ಕಾರ್ಯದಲ್ಲಿ ಜಯವನ್ನು ಗಳಿಸುವಿರಿ. ಒಂದ ಕಡೆ ನಿಂತಲ್ಲಿ ನಿಲ್ಲಲಾಗದು. ಆಸ್ತಿಯಲ್ಲಿ ಹೂಡಿಕೆ ಮಾಡುವ ಮೊದಲು ಸರಿಯಾಗಿ ಯೋಚಿಸಿ. ನಿಮ್ಮ ಮಾತನ್ನು ನಿಯಂತ್ರಿಸಿ. ಇಂದು ನೀವು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಬಹುದು. ಬಹಳ ದಿನಗಳ ಅನಂತರ ಉತ್ತಮ ಭೋಜನವು ಸಿಗವುದು. ಹಣಕಾಸಿಗೆ ಸಂಬಂಧಿಸಿದ ಆರೋಪದ ಬಗ್ಗೆ ಏನನ್ನೂ ನೀವು ಹೇಳಲಾರಿರಿ.
ಮಕರ ರಾಶಿ:
ಉದ್ಯೋಗಸ್ಥರು ಸವಾಲಿನ ಕೆಲಸಗಳನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕು. ನಿಮ್ಮ ವೃತ್ತಿಜೀವನದಲ್ಲಿ ಸಕಾರಾತ್ಮಕ ಮನಸ್ಥಿತಿಯೊಂದಿಗೆ ಮುನ್ನಡೆಯಿರಿ. ಚಂಚಲ ಮನಸ್ಸನ್ನು ನಿಯಂತ್ರಿಸಲು ಕಷ್ಟವಾದೀತು. ಇದರಿಂದ ಕೆಲಸದಲ್ಲಿ ಹಿನ್ನಡೆಯಾಗುವುದು. ಕೆಲವರಿಗೆ ನಿಮ್ಮ ಉಪಕಾರವು ಸಿಗುವುದು. ಸಂಗಾತಿಯ ಅಸಹಜ ಮಾತುಗಳಿಂದ ನಿಮಗೆ ಕಷ್ಟವಾಗುವುದು. ನಿಮ್ಮನ್ನು ಕುಟುಂಬವು ನಿರ್ಲಕ್ಷ್ಯಿಸಿದಂತೆ ಕಾಣುವುದು. ಕುರುಡಾಗಿ ಯಾವುದನ್ನೂ ನಂಬುವುದು ಬೇಡ.
ಕುಂಭ ರಾಶಿ:
ಇಂದು ಪ್ರೀತಿಯ ಸಂಬಂಧಗಳಲ್ಲಿ ಮಾಧುರ್ಯವಿರಲಿದೆ. ಕೆಲಸದ ಜವಾಬ್ದಾರಿಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ. ಇಂದು ಖರ್ಚುಗಳನ್ನು ನಿಯಂತ್ರಿಸಿ. ವ್ಯವಹಾರದಲ್ಲಿ ಆತ್ಮವಿಶ್ವಾಸದಿಂದ ಇರಿ. ಭಯಪಡುವ ಅವಶ್ಯಕತೆ ಇರುವುದಿಲ್ಲ. ಸ್ಥಿರಾಸ್ತಿಯ ಖರೀದಿಯ ಯೋಗವಿದ್ದರೂ ಯೋಗವಿದೆ. ಸಲಹೆಯನ್ನು ಪಡೆದು ನಿಮ್ಮ ನಿರ್ಧಾರವನ್ನು ಮಾಡಿ. ಅನ್ಯ ಆಲೋಚನೆಯಲ್ಲಿ ದಿನವನ್ನು ಕಳೆಯುವಿರಿ. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಸಹೋದರನಿಂದ ವಂಚನೆಯಾದ ಅನುಮಾನ ಇರುವುದು.
ಮೀನ ರಾಶಿ:
ಇಂದು ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಶತ್ರುಗಳನ್ನು ನಿಮ್ಮ ಪ್ರಭಾವವನ್ನು ಬಳಸಿ ನಿಗ್ರಹ ಮಾಡುವಿರಿ ಬಿಡುವಿಲ್ಲದ ದುಡಿಮೆಯು ನಿಮಗೆ ಕಷ್ಟವಾಗಬಹುದು. ಕೃಷಿಯಲ್ಲಿ ಲಾಭ. ಆಸ್ತಿಯ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಕಷ್ಟವಾದೀತು. ಸರ್ಕಾರದ ಕೆಲಸವು ವಿಳಂಬವಾಗಿ ನಿಮಗೆ ಬೇಸರವಾಗುವುದು. ಹೊಸ ವಾಹನ ಖರೀದಿ ಮಾಡುವುದನ್ನು ಕೈ ಬಿಡುವಿರಿ. ಸಹೋದರರ ಜೊತೆಗಿನ ಸಂಬಂಧವು ಒಂದು ಮಾತಿನಿಂದ ಹಾಳಾಗಲಿದೆ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಪಚಮೀ, ನಿತ್ಯನಕ್ಷತ್ರ : ಭರಣೀ, ಯೋಗ : ವಿಷ್ಕಂಭ, ಕರಣ : ಭದ್ರ, ಸೂರ್ಯೋದಯ – 06 – 27 am, ಸೂರ್ಯಾಸ್ತ – 06 – 34 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:59 – 09:29, ಯಮಗಂಡ ಕಾಲ 11:00 – 12:31, ಗುಳಿಕ ಕಾಲ 14:02 – 15:33
ಯಾರು ಉದ್ಯೋಗಕ್ಕೆ ಸಂಬಂಧಿಸಿದಂಥ ಪರೀಕ್ಷೆಗಳನ್ನು ಬರೆದಿರುತ್ತಾರೋ ಅಂಥವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸಂಬಂಧಿಕರ ಮುಖಾಂತರ ರೆಫರೆನ್ಸ್ ಗಳು ಬರಬಹುದು. ಇದು ನಿಮ್ಮ ಮನಸ್ಸಿಗೆ ಒಪ್ಪುವ ಸಾಧ‌್ಯತೆಗಳು ಸಹ ಹೆಚ್ಚಿವೆ. ಕೊನೆ ಕ್ಷಣದಲ್ಲಿ ನಿರ್ಧಾರಗಳಲ್ಲಿ ಬಹಳ ಏರುಪೇರು ಮಾಡಲಿದ್ದೀರಿ.
ಪ್ರೀತಿ- ಪ್ರೇಮದಲ್ಲಿ ಅಂದುಕೊಳ್ಳದ ಕೆಲವು ಬೆಳವಣಿಗೆಗಳು ನಡೆಯಲಿವೆ. ಈ ಹಿಂದೆ ಆಗಿದ್ದ ಕೆಲವು ಘಟನೆಗಳಿಂದಾಗಿ ಯಾರದೋ ಮಾತು, ಟೀಕೆ, ಆಕ್ಷೇಪಗಳಿಗೆ ಇಡೀ ದಿನ ತಲೆ ಕೆಡಿಸಿಕೊಳ್ಳುವಂತಾಗುತ್ತದೆ. ಯಾರೇ ನಿಮ್ಮ ಕೆಲಸದ ಬಗ್ಗೆ ಆಕ್ಷೇಪ ಹೇಳಿದರೂ ಅದನ್ನು ತೋರಿಸುವಂತೆ ನಯವಾಗಿಯೇ ಕೇಳಿ. ಹಾಗೂ ಅವರು ನಿಜವಾಗಿಯೂ ತಪ್ಪುಗಳನ್ನು ತೋರಿಸಿದ್ದೇ ಆದಲ್ಲಿ ತಿದ್ದುಕೊಳ್ಳುವುದಕ್ಕೆ ಪ್ರಯತ್ನಿಸಿ.
ತಂದೆ- ತಾಯಿಯ ಆರೋಗ್ಯದಲ್ಲಿ ಏನಾದರೂ ಸಮಸ್ಯೆಗಳು ಏನಾದರೂ ಇದ್ದಲ್ಲಿ ಪರಿಣತ- ತಜ್ಞ ವೈದ್ಯರ ನೆರವು ನಿಮ್ಮ ಪಾಲಿಗೆ ದೊರೆಯಲಿದೆ. ಆತಂಕಗಳು ದೂರವಾಗುವುದಕ್ಕೆ ಹಿರಿಯರು ಸಹಕಾರ ನೀಡಲಿದ್ದಾರೆ. ನಿಮ್ಮ ಅದೃಷ್ಟವು ಈ ದಿನ ಅಚ್ಚರಿಯ ರೀತಿಯಲ್ಲಿ ಕೆಲಸ ಮಾಡುತ್ತದೆ. ಈ ಹಿಂದೆ ಯಾವಾಗಲೋ ಮಾಡಿದ ಕೆಲಸಕ್ಕೆ ಮೆಚ್ಚುಗೆ ಎಂಬಂತೆ ಅದೇ ಕೆಲಸಕ್ಕೆ ಸಂಬಂಧಿಸಿದವರು ಹುಡುಕಿಕೊಂಡು ಬಂದು, ನಿಮಗೆ ಕೆಲಸಗಳನ್ನು ಒಪ್ಪಿಸುವ ಸಾಧ್ಯತೆ ಇದೆ.
ಸಣ್ಣ- ಪುಟ್ಟದಾದರೂ ಮನೆ ಮಟ್ಟಿಗೆ ಕಾರ್ಯಕ್ರಮ ಆಯೋಜಿಸುವಂಥ ಸಾಧ್ಯತೆ ಇದೆ. ತಂದೆ ಅಥವಾ ತಂದೆ ಸಮಾನರಾದವರ ಆರೋಗ್ಯ ಸ್ಥಿತಿ ಸ್ವಲ್ಪ ಆತಂಕಕ್ಕೆ ಕಾರಣ ಆಗಬಹುದು. ನಿಮ್ಮೆಲ್ಲ ಪ್ರಯತ್ನವನ್ನು ಮಾಡಿದ ನಂತರದಲ್ಲಿಯೂ ಒಬ್ಬರೇ ವ್ಯಕ್ತಿ, ಒಂದೇ ವಿಷಯ, ಒಂದು ವಸ್ತು ನಿಮ್ಮನ್ನು ಈ ದಿನ ಬಹುವಾಗಿ ಕಾಡಬಹುದು.
ಒಂದು ವೇಳೆ ಆಸ್ತಿ ಅಥವಾ ವಾಹನ ಮಾರಾಟಕ್ಕೆ ಇಟ್ಟಿದ್ದಲ್ಲಿ ಇವುಗಳಿಗೆ ಸಂಬಂಧಿಸಿದಂತೆ ಯಾವುದೇ ಮಾತುಕತೆಯನ್ನು ಇದೊಂದು ದಿನದ ಮಟ್ಟಿಗೆ ಮಾಡಬೇಡಿ. ನಿಮ್ಮ ಬಳಿ ಇರುವ ಹಣಕ್ಕೆ ತಕ್ಕಂತೆ ಪ್ರಾಜೆಕ್ಟ್ ವೊಂದು ಹುಡುಕಿಕೊಂಡು ಬರುವಂಥ ಸಾಧ್ಯತೆಗಳಿವೆ. ಉದಾಹರಣೆಗೆ, ಇಷ್ಟೇ ಮೊತ್ತಕ್ಕೆ ಅಪಾರ್ಟ್ ಮೆಂಟ್ ಅಥವಾ ಸೈಟು ಅಥವಾ ವಾಹನ ಹೀಗೆ ನಿಮಗೆ ದೊರೆಯುವ ಸಾಧ್ಯತೆಗಳಿವೆ.
ಮನ ಮುಟ್ಟುವಂತೆ ಎಲ್ಲ ವಿಚಾರಗಳನ್ನು ಇತರರಿಗೆ ದಾಟಿಸುವುದಕ್ಕೆ ಸಫಲರಾಗಲಿದ್ದೀರಿ. ಮುಂದಾಲೋಚನೆಯಿಂದ ಲೆಕ್ಕ ಹಾಕಿಕೊಂಡು ಇಟ್ಟ ಹೆಜ್ಜೆಗಳು ಫಲ ನೀಡಲಿವೆ. ಯಾರು ಬದ್ಧತೆಯಿಂದ ನಿಮ್ಮ ಸಲಹೆ- ಸೂಚನೆಯನ್ನು ಅನುಸರಿಸಿದವರಿಗೆ ದೊಡ್ಡ ಲಾಭವಾಗುವ ಸಾಧ್ಯತೆಗಳಿವೆ. ಇತರರು ತಮ್ಮಿಂದ ಪೂರ್ತಿ ಮಾಡಲು ಸಾಧ್ಯವಿಲ್ಲ ಎಂದು ಅರ್ಧಕ್ಕೇ ನಿಲ್ಲಿಸಿದ ಕೆಲಸವೊಂದನ್ನು ಪೂರ್ತಿ ಮಾಡಬೇಕಾದ ಜವಾಬ್ದಾರಿ ನಿಮಗೆ ಬರಲಿದೆ.
ಜತೆಗೆ ಕೆಲಸ ಮಾಡುವವರು ನಿಮ್ಮ ಸಾಮರ್ಥ್ಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸಲಿದ್ದಾರೆ. ನಿಮ್ಮಲ್ಲಿ ಯಾರು ಸೈಟು, ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡುವ ಸಲುವಾಗಿ ಪ್ರಯತ್ನವನ್ನು ಮಾಡುತ್ತಿದ್ದೀರಿ ಅಂಥವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಇದೆ. ಯಾವುದೇ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಗೆ ಹೋಗುವಾಗ ಮನೆ ದೇವರನ್ನು ಮನಸ್ಸಲ್ಲಿ ಸ್ಮರಿಸಿಕೊಳ್ಳಿ.
ಬಜೆಟ್ ನಲ್ಲಿಯೇ ಕೆಲಸ- ಕಾರ್ಯಗಳನ್ನು ಮುಗಿಸಿಕೊಳ್ಳಬೇಕು ಎಂಬ ಲೆಕ್ಕಾಚಾರ ನಿಮ್ಮಲ್ಲಿ ಇರಲಿದೆ. ಕುಟುಂಬ ಸದಸ್ಯರ ಅಗತ್ಯಗಳಿಗೆ ಕೆಲಬು ವಸ್ತುಗಳನ್ನು ಕೊಳ್ಳಬೇಕು ಎಂಬ ತೀರ್ಮಾನ ಮಾಡಲಿದ್ದೀರಿ. ಹೊಸ ವಾಹನ ಖರೀದಿಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ. ಇನ್ನು ನಿಮ್ಮಲ್ಲಿ ಕೆಲವರು ಅಚ್ಚರಿಯ ರೀತಿಯಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಯೇ ಮಾಡಿಬಿಡುವ ಅವಕಾಶಗಳು ಸಹ ಹೆಚ್ಚಿವೆ.
ಈ ದಿನ ನಿಮ್ಮ ಸಾಮಾಜಿಕ ಸ್ಥಾನ- ಮಾನಗಳು ವೃದ್ಧಿಯಾಗುವ ಸಾಧ್ಯತೆಗಳು ಹೆಚ್ಚಿವೆ. ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಮನೆಯಿಂದ ದೂರ ಇದ್ದು, ವ್ಯಾಸಂಗ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಬಹುದು. ಆದರೆ ಇದರಿಂದ ನಿಮಗೆ ಅನುಕೂಲವೇ ಆಗಲಿದೆ. ಲ್ಯಾಪ್ ಟಾಪ್, ಟ್ಯಾಬ್ಲೆಟ್ ಇಂಥವನ್ನು ಖರೀದಿ ಮಾಡುವಂಥ ಯೋಗ ನಿಮ್ಮ ಪಾಲಿಗೆ ಇದೆ.
ತುಮಕೂರು, (ಮಾರ್ಚ್ 22): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು (ಮಾರ್ಚ್ 22) ಉಸ್ತುವಾರಿ ಜಿಲ್ಲೆ ಕೊಪ್ಪಳದಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಶಿರಾ ದಾಟಿ ಕೋರ ಬಳಿ ಬರುವಾಗ ಎದೆನೋವು ಶುರುವಾಗಿದೆ. ಹೀಗಾಗಿ ಕೂಡಲೇ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ಸಚಿವ ಶಿವರಾಜ್ ತಂಗಡಗಿ ಅವರನ್ನು ದಾಖಲಿಸಲಾಗಿದೆ.
ಕನಕಗಿರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮುಗಿಸಿ ಇಂದು (ಮಾರ್ಚ್ 22) ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಸಿದ್ದಗಂಗಾ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಇಕೋ ಟೆಸ್ಟ್ ಸೇರಿದಂತೆ ಹೃದಯ ಸಂಬಂಧಿತ ತಪಾಸಣೆ ಮಾಡಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ತುಮಕೂರು ಎಸ್ಪಿ ಅಶೋಕ್, ಡಿವೈಎಸ್ಪಿ ಚಂದ್ರಶೇಖರ್ ದೌಡಾಯಿಸಿದ್ದು, ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದ ವೈದ್ಯರು ತಿಳಿಸಿದ್ದಾರೆ.
ಶಿವರಾಜ್ ತಂಗಡಗಿ ಹೊಸಪೇಟೆಯಿಂದ ಬೆಂಗಳೂರಿಗೆ ತಮ್ಮ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ತುಮಕೂರಿನ ಬಳಿ ಮಾರ್ಗ ಮಧ್ಯೆ ಅವರು ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ತಕ್ಷಣವೇ ಅವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಯ್ತು. ಈ ವೇಳೆ ತಪಾಸಣೆ ಮಾಡಿದ ವೈದ್ಯರು, ಇದು ಗ್ಯಾಸ್ಟ್ರಿಕ್ ಎಂದು ಹೇಳಿದ್ದಾರೆ. ಹೀಗಾಗಿ ಎಲ್ಲಾ ಪರೀಕ್ಷೆ ಮುಗಿಸಿಕೊಂಡು ಬೆಂಗಳೂರಿನತ್ತ ಹೊರಟರು.
‘ಧುರಂಧರ್ 2’ (Dhurandhar 2 ಸಿನಿಮಾ ಬಿಡುಗಡೆ ಆದ ಮೂರೇ ದಿನಕ್ಕೆ 300 ಕೋಟಿಗೂ ಹೆಚ್ಚು ಮೊತ್ತ ಗಳಿಸಿದ್ದು, ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಾ ಸಾಗುತ್ತಿದೆ. ಇದನ್ನು ಮೊದಲೇ ಊಹಿಸಿದ್ದ ಕೆಲ ಸಿನಿಮಾಗಳು ‘ಧುರಂಧರ್ 2’ ಸಿನಿಮಾ ಜೊತೆಗಿನ ಸ್ಪರ್ಧೆಯನ್ನು ತಪ್ಪಿಸಿಕೊಂಡವು. ಆದರೆ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಚಿತ್ರತಂಡ ‘ಧುರಂಧರ್ 2’ ಸಿನಿಮಾವನ್ನು ಸರಿಯಾಗಿ ಅಂದಾಜಿಸದೆ ಅದರ ಎದುರು ಬಿಡುಗಡೆ ಮಾಡಿತು. ಆದರೆ ಈಗ ಬಾಕ್ಸ್ ಆಫೀಸ್ನಲ್ಲಿ ಏದುಸಿರು ಬಿಡುತ್ತಿದೆ. ಆದರೆ ಸಂಪೂರ್ಣ ಸೋಲೊಪ್ಪಿಕೊಂಡಿಲ್ಲ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ನಿರ್ದೇಶಕ ಹರೀಶ್ ಶಂಕರ್ ಕಾಂಬಿನೇಷನ್‌ನ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 26ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ‘ಟಾಕ್ಸಿಕ್’ ರಿಲೀಸ್ ಪೋಸ್ಟ್ ಪೋನ್ ಆದ ಕಾರಣ ಆ ಸ್ಥಾನಕ್ಕೆ ಮುಂಬಡ್ತಿ ಪಡೆದುಕೊಂಡು ‘ಧುರಂಧರ್ 2’ ಸಿನಿಮಾದ ಎದುರು ಮಾರ್ಚ್ 19ರಂದೇ ಬಿಡುಗಡೆ ಆಯ್ತು. ಆದರೆ ಇದರಿಂದ ಮೊದಲ ದಿನದಿಂದಲೂ ಸಿನಿಮಾಕ್ಕೆ ನಷ್ಟ ಆಗುತ್ತಲೇ ಇದೆ. ‘ಧುರಂಧರ್ 2’ ಸಿನಿಮಾದಿಂದಾಗಿ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಪ್ರೀಮಿಯರ್ ಶೋಗಳು ಸಿಗಲಿಲ್ಲ. ಇದರಿಂದ ಭಾರಿ ನಷ್ಟವಾಯ್ತು. ಬಿಡುಗಡೆಯ ಬಳಿಕೆ ಬಾಕ್ಸ್ ಆಫೀಸ್ನಲ್ಲೂ ಸಹ ಹಿನ್ನಡೆ ಉಂಟಾಗಿದೆ.
ಈ ಭಾನುವಾರಕ್ಕೆ ಸಿನಿಮಾ ಬಿಡುಗಡೆ ಆಗಿ ನಾಲ್ಕು ದಿನಗಳಾಗಿದೆ. ಭಾನುವಾರ ಭಾರತದ ಬಾಕ್ಸ್ ಆಫೀಸ್ನಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಗಳಿಸಿದ್ದು 6.59 ಕೋಟಿ ರೂಪಾಯಿ ಮಾತ್ರ. ಇದರೊಂದಿಗೆ ನಾಲ್ಕು ದಿನಗಳ ಒಟ್ಟು ಭಾರತದ ನೆಟ್ ಕಲೆಕ್ಷನ್ 59.39 ಕೋಟಿ ರೂಪಾಯಿಗೆ ತಲುಪಿದೆ. ಪವನ್ ಸಿನಿಮಾಕ್ಕೆ ಇದು ದೊಡ್ಡ ಮೊತ್ತವಲ್ಲ. ವಾರದ ರಜೆ ಇದ್ದರೂ ಚಿತ್ರದ ಗಳಿಕೆಯಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿಲ್ಲದಿರುವುದು ‘ಧುರಂಧರ್ 2’ ಎಫೆಕ್ಟ್ ಅನ್ನು ತೋರಿಸುತ್ತಿದೆ.
ಪವನ್ ಕಲ್ಯಾಣ್ ಅವರ ಕಳೆದ ವರ್ಷದ ಹಿಟ್ ಚಿತ್ರಗಳಾದ ‘OG’ ಮೊದಲ ದಿನವೇ 60 ಕೋಟಿಗೂ ಅಧಿಕ ಮೊತ್ತ ಕಲೆ ಹಾಕಿತ್ತು. ಅದಕ್ಕೂ ಮುಂಚೆ ಬಿಡುಗಡೆ ಆಗಿದ್ದ ಬಹಳ ಸಾಧಾರಣ ಸಿನಿಮಾ ಆಗಿದ್ದ ‘ಹರಿ ಹರ ವೀರ ಮಲ್ಲು’ ಕಲೆಕ್ಷನ್ ಸಹ ಇದಕ್ಕಿಂತ ಉತ್ತಮವಾಗಿತ್ತು. ಆ ಎರಡು ಸಿನಿಮಾಗಳಿಗೆ ಹೋಲಿಸಿದರೆ ‘ಉಸ್ತಾದ್ ಭಗತ್ ಸಿಂಗ್’ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ.
ಮೂರು ದಿನಗಳ ಅಂತ್ಯಕ್ಕೆ ಚಿತ್ರವು ವಿಶ್ವ ಬಾಕ್ಸ್ ಆಫೀಸ್ನಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ 71.67 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದರಲ್ಲಿ ವಿದೇಶಿ ಮಾರುಕಟ್ಟೆಯಿಂದ ಸುಮಾರು 9.25 ಕೋಟಿ ರೂ. ಬಂದಿದೆ. ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ತೆಲುಗು ರಾಜ್ಯಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿಶೇಷವೆಂದರೆ, ಹೈದರಾಬಾದ್‌ನಂತಹ ನಗರ ಪ್ರದೇಶಗಳಲ್ಲಿ ‘ಉಸ್ತಾದ್ ಭಗತ್ ಸಿಂಗ್’ಗಿಂತ ‘ಧುರಂಧರ್ 2’ ಚಿತ್ರಕ್ಕೇ ಹೆಚ್ಚಿನ ಜನರು ಆಕರ್ಷಿತರಾಗುತ್ತಿದ್ದಾರೆ.
‘ಉಸ್ತಾದ್ ಭಗತ ಸಿಂಗ್’ ಸಿನಿಮಾದ ಒಟ್ಟು ಬಜೆಟ್ ಸುಮಾರು 150 ಕೋಟಿ ರೂ. ಎನ್ನಲಾಗಿದ್ದು, ಚಿತ್ರವು ಲಾಭದಾಯಕ ಎನಿಸಿಕೊಳ್ಳಲು ಕನಿಷ್ಠ 200 ಕೋಟಿ ರೂ. ಕಲೆಕ್ಷನ್ ಮಾಡಬೇಕಿದೆ. ಪ್ರಸ್ತುತ ಇರುವ ಮಿಶ್ರ ಪ್ರತಿಕ್ರಿಯೆ ಮತ್ತು ‘ಧುರಂಧರ್ 2’ ಹವಾ ನೋಡಿದರೆ, ಈ ಗುರಿಯನ್ನು ಮುಟ್ಟುವುದು ಚಿತ್ರತಂಡಕ್ಕೆ ದೊಡ್ಡ ಸವಾಲಾಗಿದೆ. ನಿರ್ದೇಶಕ ಹರೀಶ್ ಶಂಕರ್ ಅವರು ಈ ಹಿಂದೆ ‘ಗಬ್ಬರ್ ಸಿಂಗ್’ ಮೂಲಕ ನೀಡಿದ್ದ ಮ್ಯಾಜಿಕ್ ಈ ಬಾರಿ ಮರುಕಳಿಸಿಲ್ಲ ಎಂಬುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಸತತ 18 ವರ್ಷಗಳ ಕಾಯುವಿಕೆಯ ಬಳಿಕ 2025 ರ ಐಪಿಎಲ್‌ನಲ್ಲಿ (IPL 2025) ಫೈನಲ್ ಪಂದ್ಯವನ್ನು ಗೆದ್ದು ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಳೆದ ಆವೃತ್ತಿಯ ಯಶಸ್ಸನ್ನು ಪುನರಾವರ್ತಿಸುವ ಇರಾದೆಯಲ್ಲಿದೆ. ರಜತ್ ಪಾಟಿದಾರ್ ನಾಯಕತ್ವದಲ್ಲಿ ಹೆಚ್ಚು ಸಮತೋಲನದಿಂದ ಕೂಡಿರುವ ಆರ್‌ಸಿಬಿ ಈ ಬಾರಿಯೂ ಕಪ್ ಗೆಲ್ಲುವ ಫೆವರೇಟ್ ತಂಡ ಎನಿಸಿಕೊಂಡಿದೆ. ಅದರಲ್ಲೂ ಕಳೆದ ಬಾರಿಯಂತೆ ಈ ಬಾರಿಯೂ ಆರ್‌ಸಿಬಿ ತಂಡ ತವರಿನ ಹೊರಗೆ ತನ್ನ ವಿಕ್ರಮವನ್ನು ಮುಂದುವರೆಸಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಆರ್‌ಸಿಬಿ ಹೆಸರಿನಲ್ಲಿದೆ ಅಪರೂಪದ ದಾಖಲೆ
ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಮಾಡಿದ ಕೆಲಸವನ್ನು ಕಳೆದ 18 ಆವೃತ್ತಿಗಳಲ್ಲಿ ಬೇರೆ ಯಾವ ತಂಡಕ್ಕೂ ಮಾಡಲು ಸಾಧ್ಯವಾಗಿಲ್ಲ. ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್‌ನಂತಹ ತಂಡಗಳಿಗೂ ಸಹ ಈ ಮೈಲಿಗಲ್ಲನ್ನು ಸಾಧಿಸಲು ಸಾಧ್ಯವಾಗಿಲ್ಲ. ವಾಸ್ತವವಾಗಿ ಕಳೆದ ಆವೃತ್ತಿಯಲ್ಲಿ ಲೀಗ್ ಹಂತದಲ್ಲಿ ತವರಿನ ಹೊರಗೆ ಆಡಿದ ಎಲ್ಲಾ ಏಳು ಪಂದ್ಯಗಳನ್ನು ಗೆದ್ದ ಸಾಧನೆಯನ್ನು ಆರ್‌ಸಿಬಿ ಮಾಡಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡವು ಸಾಧಿಸದ ವಿಶೇಷ ದಾಖಲೆಯಾಗಿದೆ.
ಸತತ 7 ಗೆಲುವು
ಕೆಕೆಆರ್ ವಿರುದ್ಧದ ಮೊದಲ ತವರಿನ ಹೊರಗಿನ ಪಂದ್ಯವನ್ನು 7 ವಿಕೆಟ್ಗಳಿಂದ ಗೆದ್ದಿದ್ದ ಆರ್‌ಸಿಬಿ, ಆ ನಂತರ ಸಿಎಸ್ಕೆ ತಂಡವನ್ನು 50 ರನ್ಗಳಿಂದ ಸೋಲಿಸಿತ್ತು. ತವರಿನ ಹೊರಗಿನ ಮೂರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 12 ರನ್ಗಳಿಂದ ಗೆದ್ದಿದ್ದ ಆರ್‌ಸಿಬಿ, 4 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 9 ವಿಕೆಟ್ಗಳಿಂದ ಸೋಲಿಸಿತ್ತು. ಆ ನಂತರ ಐದನೇ ಪಂದ್ಯದಲ್ಲಿ 7 ವಿಕೆಟ್ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿದ್ದ ಆರ್‌ಸಿಬಿ, 6ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿತ್ತು. ಅಂತಿಮವಾಗಿ 7ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 6 ವಿಕೆಟ್ಗಳಿಂದ ಮಣಿಸಿತ್ತು.
ಈ ಸತತ 7 ಗೆಲುವುಗಳು ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಮತ್ತು ಪಾಯಿಂಟ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಲು ಸಹಾಯ ಮಾಡಿತು. ಒಟ್ಟಾರೆಯಾಗಿ, ಆರ್‌ಸಿಬಿ ಐಪಿಎಲ್ 2025 ರಲ್ಲಿ ತಮ್ಮ ತವರು ಮೈದಾನವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊರಗೆ ಒಂಬತ್ತು ಪಂದ್ಯಗಳನ್ನು ಗೆದ್ದಿತು, ಇದರಲ್ಲಿ ಏಳು ಲೀಗ್ ಪಂದ್ಯಗಳು, ಒಂದು ಅರ್ಹತಾ ಸುತ್ತಿನ ಪಂದ್ಯ ಮತ್ತು ಫೈನಲ್ ಕೂಡ ಸೇರಿದೆ. ಇದು ಐಪಿಎಲ್ ಇತಿಹಾಸದಲ್ಲಿ ಒಂದು ದಾಖಲೆಯಾಗಿದೆ. ಆರ್‌ಸಿಬಿ ಅಥವಾ ಯಾವುದೇ ಇತರ ತಂಡವು ಈ ಆವೃತ್ತಿಯಲ್ಲಿ ಈ ದಾಖಲೆಯನ್ನು ಪುನರಾವರ್ತಿಸಬಹುದೇ ಎಂದು ಕಾದು ನೋಡಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ