Headlines

ಇರಾನ್-ಇಸ್ರೇಲ್ ಸಂಘರ್ಷ; ರಿಯಾದ್‌ನಲ್ಲಿ ಭಾರತೀಯ ಪ್ರಜೆ ಸಾವು

ರಿಯಾದ್, ಮಾರ್ಚ್ 20: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಉಲ್ಬಣಗೊಳ್ಳುತ್ತಲೇ ಇದೆ. ಇಸ್ರೇಲ್-ಇರಾನ್ (Israel- Iran War) ನಡುವಿನ ಯುದ್ಧದಲ್ಲಿ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ (Riyadh Attack) ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಶುಕ್ರವಾರ ದೃಢಪಡಿಸಿದೆ. ಅವರ ಮೃತದೇಹವನ್ನು ಭಾರತಕ್ಕೆ ಶೀಘ್ರವಾಗಿ ಹಿಂದಿರುಗಿಸಲಾಗುವುದು ಎಂದು ಅಲ್ಲಿನ ಸರ್ಕಾರ ಹೇಳಿದೆ. “ಮಾರ್ಚ್ 18ರಂದು ರಿಯಾದ್‌ನಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಭಾರತೀಯ ಪ್ರಜೆಯೊಬ್ಬರು ದುರಂತವಾಗಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿತು” ಎಂದು ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಗಲ್ಫ್)…

Read More

ಕಂಗನಾ ಮಾಡಿದ ‘ಎಮರ್ಜೆನ್ಸಿ’ ಸಿನಿಮಾ 2 ದಿನ ಓಡಲಿಲ್ಲ: ಖಾರವಾಗಿ ಹೇಳಿದ ‘ಧುರಂಧರ್ 2’ ನಟ

ಬಾಲಿವುಡ್‌ನ ಹಿರಿಯ ನಟ ರಾಕೇಶ್ ಬೇಡಿ ಅವರು ‘ಧುರಂಧರ್ 2’ (Dhurandhar 2) ಸಿನಿಮಾದಲ್ಲಿ ಮಾಡಿದ ಪಾತ್ರ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಪಾಕಿಸ್ತಾನದ ರಾಜಕಾರಣಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಯಶಸ್ಸಿನ ಅಲೆಯಲ್ಲಿ ರಾಕೇಶ್ ಬೇಡಿ (Rakesh Bedi) ಅವರು ತೇಲುತ್ತಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ, ಒಂದು ವರ್ಗದ ಜನರು ಇದನ್ನು ಪ್ರೊಪಗಾಂಡಾ ಎಂದು ಕರೆಯುತ್ತಿದ್ದಾರೆ. ಈ ಟೀಕೆಗಳಿಗೆ ರಾಕೇಶ್ ಬೇಡಿ ಅವರು ಖಡಕ್ ಉತ್ತರ ನೀಡಿದ್ದು, ಇದೇ ವೇಳೆ ಕಂಗನಾ…

Read More

SA vs NZ: ದಕ್ಷಿಣ ಆಫ್ರಿಕಾಕ್ಕೆ ಸತತ 2ನೇ ಸೋಲು; ಸರಣಿಯಲ್ಲಿ ಕಿವೀಸ್ ಮೇಲುಗೈ

2026 ರ ಟಿ20 ವಿಶ್ವಕಪ್ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದ ದಕ್ಷಿಣ ಆಫ್ರಿಕಾ ತಂಡ ಇದೀಗ ಅದೇ ನ್ಯೂಜಿಲೆಂಡ್ (South Africa vs New Zealand) ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಉಭಯ ತಂಡಗಳ ನಡುವೆ ಈ ಟಿ20 ಸರಣಿ ನಡೆಯುತ್ತಿದೆ. ಎರಡೂ ತಂಡಗಳು ಸ್ಟಾರ್ ಆಟಗಾರರಿಲ್ಲದೆ ಈ ಸರಣಿಯಲ್ಲಿ ಕಣಕ್ಕಿಳಿದಿವೆ. ಆದಾಗ್ಯೂ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮೇಲುಗೈ ಸಾಧಿಸುವಲ್ಲಿ ನ್ಯೂಜಿಲೆಂಡ್ ಯಶಸ್ವಿಯಾಗಿದೆ….

Read More

ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಹಳೇ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ: ಡಿಸಿಎಂ ಡಿಕೆ ಶಿವಕುಮಾರ್​​ ಎಚ್ಚರಿಕೆ

ಬೆಂಗಳೂರು, ಮಾರ್ಚ್​ 20: ಬೆಂಗಳೂರಲ್ಲಿ ಇನ್ಮುಂದೆ ಟೋಯಿಂಗ್ (Towing) ಪ್ರಾರಂಭವಾಗಲಿದೆ. ಆ ಮೂಲಕ ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆ ಇಡಲಾಗಿದೆ. ನಾನ್ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದರೆ ಟೋಯಿಂಗ್​ ಮಾಡಲಾಗುವುದು. ಎಲ್ಲಾ ಕಾರ್ಪೊರೇಷನ್​​ಗೂ ಎರಡೆರಡು ಟೋಯಿಂಗ್ ವಾಹನ ನೀಡಿದ್ದು, ಈ ಬಗ್ಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ (DK Shivakumar) ಹೇಳಿದ್ದಾರೆ. ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಹಳೇ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ ವಿಧಾನಸೌಧದಲ್ಲಿಂದು ಜಿಬಿಎ 5 ನಗರ ಪಾಲಿಕೆಗಳ 2026-27ನೇ ಸಾಲಿನ…

Read More

ಐಪಿಎಲ್ ಮುಗಿದ ಕೂಡಲೇ ಟಿ20 ಸರಣಿ ಆಡಲಿದೆ ಭಾರತ; ವೇಳಾಪಟ್ಟಿ ಪ್ರಕಟ

ಕೆಲವೇ ದಿನಗಳ ಹಿಂದೆ ಟಿ20 ವಿಶ್ವಕಪ್ ಗೆದ್ದುಕೊಂಡಿರುವ ಟೀಂ ಇಂಡಿಯಾ (Team India) ಇದೀಗ ಐಪಿಎಲ್‌ನಲ್ಲಿ (IPL 2026) ಕಣಕ್ಕಿಳಿಯಲು ಸಜ್ಜಾಗಿದೆ. ಎರಡು ತಿಂಗಳ ಕಾಲ ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಬೆವರು ಹರಿಸಲಿರುವ ಟೀಂ ಇಂಡಿಯಾ ಆಟಗಾರರು ಆ ಬಳಿಕ ಮತ್ತೆ ರಾಷ್ಟ್ರೀಯ ಕರ್ತವ್ಯಕ್ಕೆ ಮರಳಲಿದ್ದಾರೆ. ಅದಕ್ಕೆ ಪೂರಕವಾಗಿ ಇದೀಗ ಭಾರತದ ಮುಂದಿನ ಟಿ20 ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಸೂರ್ಯಕುಮಾರ್ ಯಾದವ್ (Suryakumar Yadav) ನೇತೃತ್ವದ ತಂಡವು ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು…

Read More

ಇರಾನ್​ಗೆ ಮತ್ತೊಂದು ಹೊಡೆತ; ಅಮೆರಿಕ- ಇಸ್ರೇಲ್ ದಾಳಿಯಲ್ಲಿ ಐಆರ್‌ಜಿಸಿ ವಕ್ತಾರ ಅಲಿ ನೈನಿ ಹತ್ಯೆ

ಟೆಹ್ರಾನ್, ಮಾರ್ಚ್ 20: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧವು 21ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್‌ನ (Iran War) ಪ್ರಮುಖ ನಗರಗಳ ಮೇಲೆ ಇಸ್ರೇಲ್ ಮತ್ತು ಅಮೆರಿಕ ವೈಮಾನಿಕ ದಾಳಿ ನಡೆಸುತ್ತಿದೆ. ಒಂದೊಂದಾಗಿ ಕಮಾಂಡ್‌ನ ಸೇನೆಯ ಪ್ರಮುಖ ನಾಯಕರನ್ನು ಹತ್ಯೆ ಮಾಡುತ್ತಿದೆ. ಇತ್ತೀಚೆಗೆ, ಇಸ್ರೇಲ್ ಮತ್ತೊಮ್ಮೆ ಟೆಹ್ರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಗಳಲ್ಲಿ ಇರಾನ್‌ನ ಐಆರ್‌ಜಿಸಿ ವಕ್ತಾರ ಅಲಿ ಮೊಹಮ್ಮದ್ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಘೋಷಿಸಿದೆ. ಇರಾನ್ ಕೂಡ ಅಲಿ ಮೊಹಮ್ಮದ್…

Read More

ಸಾಯಿ ಪಲ್ಲವಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಮಣಿರತ್ನಂ

ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಅವರು ಈಗ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಲೈಕಾ ಪ್ರೊಡಕ್ಷನ್ ಈ ಚಿತ್ರವನ್ನು ಅನೌನ್ಸ್ ಮಾಡಿದೆ. ಈ ಸಿನಿಮಾ ಬಹಳ ಕುತೂಹಲ ಮೂಡಿಸಿದೆ. ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ಮಣಿರತ್ನಂ ಅವರು. ಈ ಸಿನಿಮಾಗೆ ಸಾಯಿ ಪಲ್ಲವಿ ನಾಯಕಿ. ಈ ಚಿತ್ರ ಇನ್ನು ಕೆಲವೇ ವಾರಗಳಲ್ಲಿ ಶೂಟಿಂಗ್ ಆರಂಭಿಸಲಿದೆ. ಮಣಿರತ್ನಂ ಅವರು ‘ಥಗ್ ಲೈಫ್’ ಹೆಸರಿನ ಸಿನಿಮಾ ಮಾಡಿದರು. ಕಮಲ್ ಹಾಸನ್ ಜೊತೆ ಮಾಡಿದ ಈ ಚಿತ್ರ ಅಟ್ಟರ್ ಫ್ಲಾಪ್…

Read More

ಗದ್ದರ್ ಪ್ರಶಸ್ತಿ: ರಶ್ಮಿಕಾ ಬೌನ್ಸರ್ ಕಿರಿಕ್, ರಾಜಮೌಳಿ ತಂದೆಗೆ ಅವಮಾನ

ತೆಲಂಗಾಣ ಸರ್ಕಾರವು ನಿನ್ನೆಯಷ್ಟೆ (ಮಾರ್ಚ್ 19) ‘ಗದ್ದರ್ ಚಲನಚಿತ್ರ ಪ್ರಶಸ್ತಿ’ (Gaddar) ಎರಡನೇ ಆವೃತ್ತಿಯ ಪ್ರದಾನ ಸಮಾರಂಭವನ್ನು ಆಯೋಜಿಸಿತ್ತು. ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು, ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ನೀಡಲಾಯ್ತು. ಸಿಎಂ ರೇವಂತ್ ರೆಡ್ಡಿ ಸೇರಿದಂತೆ ಇನ್ನೂ ಕೆಲವು ಗಣ್ಯರುಗಳು ಅತ್ಯುತ್ತಮ ನಟ, ನಟಿ ಮತ್ತು ತಂತ್ರಜ್ಞರಿಗೆ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯ್ತು. ಕಾರ್ಯಕ್ರಮ ಚೆನ್ನಾಗಿ ನಡೆಯಿತಾದರೂ ಎರಡು ಪ್ರಮುಖ ವಿಷಯಗಳು ತುಸು ತಡವಾಗಿ ವರದಿ ಆಗಿವೆ. ಕಾರ್ಯಕ್ರದ ವೇಳೆ ರಶ್ಮಿಕಾ ಮಂದಣ್ಣ ಅವರ ಬೌನ್ಸರ್ ಕಿರಿಕ್…

Read More

ಹಿಡನ್ ಕ್ಯಾಮೆರಾ, 58 ಮಹಿಳೆಯರ ಅಶ್ಲೀಲ ವಿಡಿಯೋ; ಬಯಲಾಗುತ್ತಲೇ ಇದೆ ಸಂಖ್ಯಾಶಾಸ್ತ್ರಜ್ಞ ಅಶೋಕ್ ಖರತ್ ಕರ್ಮಕಾಂಡ

ಮುಂಬೈ, ಮಾರ್ಚ್ 20: ಮಹಾರಾಷ್ಟ್ರದ ನಾಸಿಕ್‌ನಲ್ಲಿ (Nasik) ಆಧ್ಯಾತ್ಮಿಕತೆಯ ಸೋಗಿನಲ್ಲಿ 35 ವರ್ಷದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪ್ರಭಾವಿ ಸಂಖ್ಯಾಶಾಸ್ತ್ರಜ್ಞ ಅಶೋಕ್ ಖರತ್ ಅವರನ್ನು ಬಂಧಿಸಲಾಗಿದೆ. ನಿವೃತ್ತ ನೌಕಾ ಅಧಿಕಾರಿಯಾಗಿರುವ 67 ವರ್ಷದ ಅಶೋಕ್ ಖರತ್ ತನಗೆ ಮಾದಕ ದ್ರವ್ಯ ನೀಡಿ, ವಶಪಡಿಸಿಕೊಂಡು, ತನ್ನ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಅವರ ಫಾರ್ಮ್​ಹೌಸ್​ ಮೇಲೆ ದಾಳಿ ನಡೆಸಿದಾಗ ಶಾಕಿಂಗ್ ಸತ್ಯಗಳು ಬೆಳಕಿಗೆ ಬಂದಿವೆ. ಲೈಂಗಿಕ ಶೋಷಣೆ ಕೇವಲ ಒಬ್ಬ…

Read More

SECL Apprentice Recruitment 2026: 1600 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ; ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಪದವೀಧರರಿಗೆ ಸುವರ್ಣವಕಾಶ

ಸೌತ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (SECL) ಅಪ್ರೆಂಟಿಸ್ ಹುದ್ದೆಗಳಿಗೆ ದೊಡ್ಡ ನೇಮಕಾತಿ ಅಭಿಯಾನವನ್ನು ಘೋಷಿಸಿದೆ. ಈ ಅಭಿಯಾನವು ಒಟ್ಟು 1,600 ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಎಂಜಿನಿಯರಿಂಗ್ ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಅವಕಾಶಗಳನ್ನು ನೀಡುತ್ತದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 31 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಪ್ರತಿಷ್ಠಿತ PSU ನಲ್ಲಿ ಕೆಲಸದ ಅನುಭವವನ್ನು ಪಡೆಯಬಹುದು. ಪದವೀಧರರು ಮತ್ತು ಡಿಪ್ಲೊಮಾ ಪಡೆದವರಿಗೆ ಪ್ರತ್ಯೇಕ ಹುದ್ದೆಗಳು: ಈ ನೇಮಕಾತಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ವರ್ಗವು ಪದವೀಧರ ಅಪ್ರೆಂಟಿಸ್‌ಗಳಿಗೆ…

Read More