ಕಾರು, ಆಟೋ ನಡುವೆ ಮುಖಾಮುಖಿ ಡಿಕ್ಕಿ: 10 ಮಂದಿಗೆ ಗಂಭೀರ ಗಾಯ – Kannada News | Horrific Crash In Mysuru: Over 10 Injured As Speeding Car Rams Into Auto In T Narasipura

ಮೈಸೂರು, ಮೇ 20: ಕಾರು ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ 10ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಚೌಹಳ್ಳಿ ಬಳಿ ನಡೆದಿದೆ. ಅಪಘಾತದಲ್ಲಿ ಆಟೋದಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಮೈಸೂರಿನ ಕೆ.ಆರ್​.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಆಟೋ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಟಿ.ನರಸೀಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಮ್ಮ ಮೆಟ್ರೋಗೆ ಸೌರಶಕ್ತಿ: ವಾರ್ಷಿಕ 61 ಕೋಟಿ ರೂ. ಉಳಿತಾಯಕ್ಕೆ ಐಐಎಸ್‌ಸಿ ಶಿಫಾರಸು – Kannada News | IISc Recommends Solar Power for Namma Metros Blue Line, Projecting 61 Crore Annual Savings

ಬೆಂಗಳೂರು, ಮೇ 20: ನಮ್ಮ ಮೆಟ್ರೋ ರೈಲುಗಳ ಕಾರ್ಯಾಚರಣೆಯನ್ನು ಸೌರಶಕ್ತಿಯಿಂದ ನಡೆಸುವ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್)ಗೆ ಮಹತ್ವದ ಶಿಫಾರಸುಗಳನ್ನು ಮಾಡಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 53 ಕಿಲೋಮೀಟರ್ ಉದ್ದದ ನೀಲಿ ಮಾರ್ಗದ ರೈಲುಗಳನ್ನು ಸಂಪೂರ್ಣವಾಗಿ ಸೌರಶಕ್ತಿ ಬಳಸಿ ಚಲಾಯಿಸುವುದರಿಂದ ವಾರ್ಷಿಕ 61 ಕೋಟಿ ರೂಪಾಯಿ ಉಳಿತಾಯ ಮಾಡಬಹುದೆಂದು ಐಐಎಸ್‌ಸಿ ತನ್ನ ವರದಿಯಲ್ಲಿ ತಿಳಿಸಿದೆ. ಪ್ರೊಫೆಸರ್ ಆಶೀಷ್ ವರ್ಮ ನೇತೃತ್ವದಲ್ಲಿ ನಡೆದ ಈ ಅಧ್ಯಯನವು ಮೆಟ್ರೋ ನಿಲ್ದಾಣಗಳ ಮೇಲ್ಚಾವಣಿ, ಹಳಿಗಳ ಪಕ್ಕದ ಗೋಡೆಗಳು ಮತ್ತು ಡಿಪೋಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಸಲಹೆ ನೀಡಿದೆ.

ಮೊದಲ ಹಂತದಲ್ಲಿ 30 ನಿಲ್ದಾಣಗಳ ಮೇಲ್ಚಾವಣಿಯಲ್ಲಿ 29.75 ಮೆಗಾವ್ಯಾಟ್ ಸಾಮರ್ಥ್ಯದ ಸೌರ ಫಲಕಗಳನ್ನು ಅಳವಡಿಸಲು ಸುಮಾರು 48 ರಿಂದ 63 ಕೋಟಿ ರೂಪಾಯಿ ವೆಚ್ಚವಾಗಲಿದೆ. ಆದರೆ, ಬಿಎಂಆರ್‌ಸಿಎಲ್ ಈ ಹೂಡಿಕೆಯನ್ನು ಕೇವಲ ಎರಡು ವರ್ಷಗಳಲ್ಲಿ ಮರುಪಾವತಿ ಮಾಡಿಕೊಳ್ಳಬಹುದು. ಮೊದಲ ವರ್ಷವೇ 36.4 ಕೋಟಿ ರೂಪಾಯಿ ವಿದ್ಯುತ್ ಬಿಲ್ ಉಳಿತಾಯವಾಗಲಿದೆ. ಸೌರ ವಿದ್ಯುತ್ ಪ್ರತಿ ಯೂನಿಟ್‌ಗೆ 1.20 ರಿಂದ 1.38 ರೂಪಾಯಿ ಆಗಲಿದ್ದು, ಇದು ಬೆಸ್ಕಾಂನ ಪ್ರಸ್ತುತ ದರಕ್ಕಿಂತ (6-7 ರೂಪಾಯಿ) ಗಮನಾರ್ಹವಾಗಿ ಕಡಿಮೆ ಇರುತ್ತದೆ. ಈ ಯೋಜನೆಯು ನಮ್ಮ ಮೆಟ್ರೋವನ್ನು ದೇಶದಲ್ಲಿಯೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಮತ್ತು ಪರಿಸರ ಸ್ನೇಹಿಯಾಗಿ ಚಲಿಸುವ ಸಾರಿಗೆ ವ್ಯವಸ್ಥೆಯನ್ನಾಗಿ ಮಾಡಲಿದೆ ಎಂದು ತಿಳಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರತಿದಿನ ದೇವಸ್ಥಾನಕ್ಕೆ ಹೋಗೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳು ಲಭಿಸುತ್ತವೆ ನೋಡಿ – Kannada News | What are the benefits of visiting a temple every day?

ಹಿಂದೂ ಧರ್ಮದಲ್ಲಿ ಪೂಜೆಗೆ ವಿಶೇಷ ಮಹತ್ವವಿದೆ. ಜನ ಮನೆಯಲ್ಲಿ ಪ್ರತಿನಿತ್ಯ ಪೂಜೆ ಮಾಡುವುದರ ಜೊತೆಗೆ ದೇವಸ್ಥಾನಗಳಿಗೆ ಹೋಗಿ ಅಲ್ಲಿನ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುತ್ತಾರೆ. ಕೆಲವರು ಕಷ್ಟ ಅಂತ ಬಂದಾಗ ದೇವರ ಬಳಿ ಹೋದ್ರೆ ಇನ್ನೂ ಕೆಲವರು ಪ್ರತಿನಿತ್ಯ ದೇವಸ್ಥಾನಕ್ಕೆ (temple) ಭೇಟಿ ನೀಡುತ್ತಾರೆ. ದೇವಾಲಯಕ್ಕೆ ಹೋಗುವುದು ಕೇವಲ ಧಾರ್ಮಿಕ ಚಟುವಟಿಕೆಯಲ್ಲ, ಇದರಿಂದ ಸಾಕಷ್ಟು ಪ್ರಯೋಜನಗಳು ಲಭಿಸುತ್ತವೆ. ಹೌದು ದೇವಸ್ಥಾನದ ಪ್ರಶಾಂತ ವಾತಾವರಣ, ಪೂಜೆ, ಹೋವ ಹವನ, ಗಂಟೆ ಸದ್ದು, ಮಂತ್ರ ಪಠಣೆ ಇವೆಲ್ಲವೂ ಮನಸ್ಸು ಮತ್ತು ದೇಹಕ್ಕೆ ಸಕಾರಾತ್ಮಕ ಚೈತನ್ಯವನ್ನು ತುಂಬುತ್ತದೆ. ಅಲ್ಲದೆ ನಿತ್ಯವೂ ದೇವಾಲಯಕ್ಕೆ ಭೇಟಿ ನೀಡುವುದರಿಂದ ಒಂದಷ್ಟು ಆರೋಗ್ಯ ಪ್ರಯೋಜನಗಳೂ ಲಭಿಸುತ್ತವೆ. ಅವು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಲಭಿಸುವ ಪ್ರಯೋಜನಗಳೇನು?

ಮನಸ್ಸನ್ನು ಶಾಂತವಾಗಿಸುತ್ತದೆ: ದೇವಾಲಯದಲ್ಲಿ ಧೂಪದ್ರವ್ಯ ಮತ್ತು ದೀಪಗಳನ್ನು ಬೆಳಗಿಸಲಾಗುತ್ತದೆ, ಮತ್ತು ಶಂಖ ಮತ್ತು ಗಂಟೆಯ ಶಬ್ದವು ಸಹ ಕೇಳಿಬರುತ್ತದೆ, ಇದು ವಾತಾವರಣವನ್ನು ಶುದ್ಧೀಕರಿಸುತ್ತದೆ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಅಲ್ಲದೆ ದೇವಾಲಯದಲ್ಲಿನ ಸಕಾರಾತ್ಮಕ ವಾತಾವರಣವು ನಮ್ಮ ಮನಸ್ಸಿನ ನಕಾರಾತ್ಮಕತೆಯನ್ನು ಹೋಗಲಾಡಿಸಿ, ಸಕಾರಾತ್ಮಕತೆಯನ್ನು ತುಂಬುತ್ತದೆ, ಮನಸ್ಸನ್ನು ನಿರಾಳವಾಗಿಸುತ್ತದೆ.

ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ: ದೇವಾಲಯವನ್ನು ಪ್ರವೇಶಿಸುವಾಗ, ನಾವು ಬರಿಗಾಲಿನಲ್ಲಿ ನಡೆಯುತ್ತೇವೆ. ಬರಿಗಾಲಿನಲ್ಲಿ ನಡೆಯುತ್ತಾ ದೇವರಿಗೆ ಪ್ರದಕ್ಷಿಣೆ ಹಾಕುತ್ತೇವೆ. ಹೀಗೆ ಬರಿಗಾಲಿನಲ್ಲಿ ನಡೆದಾಗ ಪಾದಗಳಲ್ಲಿನ ಒತ್ತಡ ಬಿಂದುಗಳ ಮೇಲೆ ಒತ್ತಡ ಉಂಟಾಗುತ್ತದೆ, ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಏಕಾಗ್ರತೆಯನ್ನು ಹೆಚ್ಚಿಸಲು ಸಹಕಾರಿ: ನಾವು ದೇವಸ್ಥಾನಕ್ಕೆ ಭೇಟಿ ನೀಡಿದಾಗ, ದೇವರ ವಿಗ್ರಹವನ್ನು ದಿಟ್ಟಿಸಿ ನೋಡುತ್ತೇವೆ, ಇದು ನಮ್ಮ ಮನಸ್ಸನ್ನು ಸ್ವಲ್ಪ ಸಮಯದವರೆಗೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ದೇವರ ದರ್ಶನದ ನಂತರ, ಹಣೆಗೆ ತಿಲಕವನ್ನು ಹಾಕಲಾಗುತ್ತದೆ, ಇದು ಮೆದುಳಿನ ಒಂದು ನಿರ್ದಿಷ್ಟ ಭಾಗದ ಮೇಲೆ ಒತ್ತಡವನ್ನು ಬೀರುತ್ತದೆ. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಕಾರಿ: ದೇವಾಲಯದಲ್ಲಿ ಗಂಟೆಗಳನ್ನು ಬಾರಿಸಲಾಗುತ್ತದೆ. ಅದರ ಶಬ್ದವು ನಮ್ಮ ಕಿವಿಗಳಲ್ಲಿ ಸ್ವಲ್ಪ ಸಮಯದವರೆಗೆ ಪ್ರತಿಧ್ವನಿಸುತ್ತದೆ. ಈ ಶಬ್ದವು ನಮ್ಮ ದೇಹದ ಕೆಲವು ಭಾಗಗಳನ್ನು ಸಕ್ರಿಯಗೊಳಿಸುತ್ತದೆ, ನಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಏನಾಗುತ್ತದೆ ಗೊತ್ತಾ?

ಒತ್ತಡವನ್ನು ನಿವಾರಿಸುತ್ತದೆ:  ದೇವಾಲಯಕ್ಕೆ ಪ್ರವೇಶಿಸಿದ ಕೂಡಲೇ ಮಂತ್ರ ಪಠಣೆ ಮತ್ತು ಶಂಖ, ಗಂಟೆ ಶಬ್ದವು ನಮ್ಮ ಕಿವಿಗಳಲ್ಲಿ ಯಾವಾಗಲೂ ಪ್ರತಿಧ್ವನಿಸುತ್ತಿರುತ್ತದೆ. ಇದರಿಂದಾಗಿ ನಾವು ಜೀವನದ ಗದ್ದಲ ಮತ್ತು ಒತ್ತಡವನ್ನು ಮರೆತುಬಿಡುತ್ತೇವೆ. ಇದು ಒತ್ತಡವನ್ನು ನಿವಾರಿಸುತ್ತದೆ.

ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡುತ್ತದೆ: ದೇವಾಲಯದ ವಾತಾವರಣವು ಮನಸ್ಸನ್ನು ಶಾಂತಗೊಳಿಸುತ್ತದೆ. ಇಲ್ಲಿಗೆ ಭೇಟಿ ನೀಡುವುದರಿಂದ ಚಡಪಡಿಕೆ ಕಡಿಮೆಯಾಗುತ್ತದೆ ಮತ್ತು ಶುದ್ಧ ಆಲೋಚನೆಗಳು ಬೆಳೆಯುತ್ತವೆ. ಸಕಾರಾತ್ಮಕ ಭಾವನೆಗಳು ಹೆಚ್ಚಾಗುತ್ತದೆ. ಅಲ್ಲದೆ ಮಕ್ಕಳನ್ನು ದೇವಾಲಯಕ್ಕೆ ಕರೆದುಕೊಂಡು ಹೋಗುವುದರಿಂದ ಅವರೂ ಸಹ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು  ಅರ್ಥಮಾಡಿಕೊಳ್ಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತ-ಇಟಲಿ ನಡುವೆ ವಿಶೇಷ ಕಾರ್ಯತಂತ್ರಾತ್ಮಕ ಪಾಲುದಾರಿಕೆ: ಪಿಎಂ ಮೋದಿ ಘೋಷಣೆ – Kannada News | Modi Meloni Historic Meet: India & Italy Forge New Strategic Alliance for Global Growth

ಇಟಲಿಯಲ್ಲಿ ನರೇಂದ್ರ ಮೋದಿ ಮತ್ತು ಜಾರ್ಜಿಯಾ ಮೆಲೋನಿImage Credit source: AP

ರೋಮ್, ಮೇ 20: ಭಾರತ ಹಾಗೂ ಇಟಲಿ ದೇಶಗಳ ಸಂಬಂಧವು ವಿಶೇಷ ಕಾರ್ಯತಂತ್ರಾತ್ಮಕ ಪಾಲುದಾರಿಕೆಯ (Special Strategic Partnership) ಮಟ್ಟಕ್ಕೆ ಏರಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಘೋಷಿಸಿದ್ದಾರೆ. ಐದು ರಾಷ್ಟ್ರಗಳ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಟಲಿಗೆ ಭೇಟಿ ನೀಡಿದ್ದು, ಅಲ್ಲಿ ಮೆಲೋನಿ ಜೊತೆ ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು. ಅದಾದ ಬಳಿಕ ಉಭಯ ನಾಯಕರು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವಿಶೇಷ ಕಾರ್ಯತಂತ್ರಾತ್ಮಕ ಪಾಲುದಾರಿಕೆ ಘೋಷಣೆ

ರೋಮ್‌ನ ವಿಲ್ಲಾ ಪಾಂಫಿಲ್‌ನಲ್ಲಿ ನಡೆದ ಮಾತುಕತೆಯ ನಂತರ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ನಮ್ಮ ಸಂಬಂಧವನ್ನು ‘ವಿಶೇಷ ಕಾರ್ಯತಂತ್ರಾತ್ಮಕ ಪಾಲುದಾರಿಕೆ’ಗೆ ಮೇಲ್ದರ್ಜೆಗೆ ಏರಿಸುತ್ತಿರುವುದನ್ನು ಘೋಷಿಸಲು ನನಗೆ ಸಂತೋಷವಾಗಿದೆ” ಎಂದು ತಿಳಿಸಿದರು. ಭಾರತ ಮತ್ತು ಐರೋಪ್ಯ ಒಕ್ಕೂಟದ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡಲು ಇಟಲಿ ನೀಡಿದ ಬೆಂಬಲಕ್ಕಾಗಿ ಮೆಲೋನಿ ಅವರಿಗೆ ಮೋದಿ ಧನ್ಯವಾದ ಕೂಡ ಹೇಳಿದರು. ಇಟಲಿ ಮತ್ತು ಭಾರತದ ನಡುವಿನ ಸಂಬಂಧಕ್ಕೆ ಹೊಸ ಎತ್ತರ ಸಿಕ್ಕಿದ್ದು, ಇದು ರಕ್ಷಣೆ, ವ್ಯಾಪಾರ, ತಂತ್ರಜ್ಞಾನ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿನ ಸಹಕಾರದ ಪ್ರಮುಖ ವಿಸ್ತರಣೆಯನ್ನು ಸೂಚಿಸುತ್ತದೆ.

ಇದನ್ನೂ ಓದಿ: ವೆಲ್​ಕಮ್ ಟು ರೋಮ್, ಮೈ ಫ್ರೆಂಡ್, ರೋಮ್​ಗೆ ಬಂದಿಳಿದ ಪ್ರಧಾನಿ ಮೋದಿಯನ್ನು ಸ್ವಾಗತಿಸಿ, ಸೆಲ್ಫಿ ಹಂಚಿಕೊಂಡ ಜಾರ್ಜಿಯಾ ಮೆಲೋನಿ

ಮೋದಿ ಭೇಟಿಯನ್ನು ಐತಿಹಾಸಿಕ ಎಂದು ಬಣ್ಣಿಸಿದ ಮೆಲೋನಿ

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಈ ಭೇಟಿಯನ್ನು ಉಭಯ ದೇಶಗಳ ಸಂಬಂಧದಲ್ಲಿ ಒಂದು “ಐತಿಹಾಸಿಕ ದಿನ” ಎಂದು ಬಣ್ಣಿಸಿದರು. 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೋದಿ ಅವರು ಇಟಲಿಗೆ ನೀಡುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಈ ಹಿಂದೆ ಭಾರತದ ಪ್ರಧಾನಿಯೊಬ್ಬರು ಇಟಲಿಗೆ ದ್ವಿಪಕ್ಷೀಯ ಭೇಟಿ ನೀಡಿದ್ದು 2000ನೇ ಇಸವಿಯಲ್ಲಿ. ಈಗ ಮೋದಿ ಭೇಟಿಯಿಂದ ಭಾರತ ಹಾಗು ಇಟಲಿ ನಡುವಿನ ಸಂಬಂಧಕ್ಕೆ ಹೊಸ ಚೈತನ್ಯ ನೀಡಲಾಗುತ್ತಿದೆ ಎಂದು ಮೆಲೋನಿ ಅಭಿಪ್ರಾಯಪಟ್ಟರು.

ರಕ್ಷಣೆ ಮತ್ತು ಆರ್ಥಿಕ ಸಹಕಾರ

ಉಭಯ ದೇಶಗಳು ರಕ್ಷಣಾ ವಲಯದಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸುತ್ತಿವೆ. ಪ್ರಧಾನಿ ಮೋದಿ ಅವರು, “ಭಾರತ ಮತ್ತು ಇಟಲಿಯಲ್ಲಿ ಜಂಟಿಯಾಗಿ ಉತ್ಪಾದಿಸಿ, ಜಗತ್ತಿಗೆ ತಲುಪಿಸಿ” (Develop in India and Italy and deliver to the world) ಎಂಬ ದೂರದೃಷ್ಟಿಯೊಂದಿಗೆ ಜಂಟಿ ಉತ್ಪಾದನೆ ಮತ್ತು ಪೂರೈಕೆ ಸರಪಳಿ (Supply chain) ವಿಧಾನವನ್ನು ಉತ್ತೇಜಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರಸ್ತುತ 1,000ಕ್ಕೂ ಹೆಚ್ಚು ಭಾರತೀಯ ಮತ್ತು ಇಟಾಲಿಯನ್ ಕಂಪನಿಗಳು ಪರಸ್ಪರರ ಮಾರುಕಟ್ಟೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಇದನ್ನೂ ಓದಿ: ಮೆಲೋನಿಗೆ ಮೋದಿಯಿಂದ ಚಾಕೊಲೇಟ್ ಗಿಫ್ಟ್; ಆದರೆ, ಷೇರುಬೆಲೆ ಹೆಚ್ಚಿದ್ದು ರಿಯಲ್ ಎಸ್ಟೇಟ್ ಕಂಪನಿಯದ್ದು; ಯಾಕೆ?

ಎರಡೂ ದೇಶಗಳ ಸಂಬಂಧದ ಪ್ರಮುಖ ಗುರಿಗಳು

  • ದ್ವಿಪಕ್ಷೀಯ ವ್ಯಾಪಾರ: ಭಾರತ ಮತ್ತು ಇಟಲಿ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು 2029ರ ವೇಳೆಗೆ 20 ಬಿಲಿಯನ್ ಯೂರೋಗಳಿಗಿಂತ ಹೆಚ್ಚು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.
  • ಉದಯೋನ್ಮುಖ ತಂತ್ರಜ್ಞಾನ: ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್ ಕಂಪ್ಯೂಟಿಂಗ್, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲಾಗುವುದು. AI ತಂತ್ರಜ್ಞಾನವು ಮಾನವ ಕೇಂದ್ರಿತವಾಗಿರಬೇಕು ಎಂಬ ಭಾರತದ ‘ಮಾನವ್’ (MANAV) ಪರಿಕಲ್ಪನೆ ಮತ್ತು ಇಟಲಿಯ ನೈತಿಕ ಚೌಕಟ್ಟನ್ನು ಒಟ್ಟಿಗೆ ತರಲಾಗುವುದು.
  • ಪ್ರಾದೇಶಿಕ ಸಂಪರ್ಕ: ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್ ಅನ್ನು ಸಂಪರ್ಕಿಸುವ ‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ (IMEC) ಯೋಜನೆಗೆ ಉಭಯ ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಭೌಗೋಳಿಕವಾಗಿ ಇಂಡೋ-ಪೆಸಿಫಿಕ್ ಮತ್ತು ಮೆಡಿಟರೇನಿಯನ್ ಪ್ರದೇಶಗಳನ್ನು ಜೋಡಿಸುವ ಮೂಲಕ ಈ ಪಾಲುದಾರಿಕೆ ಜಾಗತಿಕ ರಾಜತಾಂತ್ರಿಕತೆಗೆ ಹೊಸ ಆಯಾಮ ನೀಡಲಿದೆ ಎಂದು ಈ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ

ಕನ್ನಡದ ನಟಿ ರೀಷ್ಮಾ ನಾಣಯ್ಯ (Reeshma Nanaiah) ಇತ್ತೀಚೆಗಿನ ವರ್ಷಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ನಟನಾ ಪ್ರತಿಭೆ, ಸೌಂದರ್ಯದ ಜೊತೆಗೆ ರೀಷ್ಮಾ ಬಹಳ ಒಳ್ಳೆಯ ಡ್ಯಾನ್ಸರ್ ಸಹ ಆಗಿದ್ದಾರೆ. ಈ ಹಿಂದೆಯೂ ಕೆಲ ಸಿನಿಮಾಗಳಲ್ಲಿ ರೀಷ್ಮಾ ಅವರು ತಮ್ಮ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಇದೀಗ ‘ಕೆಡಿ’ ಸಿನಿಮಾದ ಹಾಡಿಗೆ ರೀಷ್ಮಾ ಮಾಡಿರುವ ಡ್ಯಾನ್ಸ್ ಸಖತ್ ಸದ್ದು ಮಾಡುತ್ತಿದೆ. ಅದರ ವಿವಿಧ ವಿಡಿಯೋಗಳನ್ನು ನಟಿ ರೀಷ್ಮಾ ತಮ್ಮ ಇನ್​​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಅಪ್ಪ ನೀನು ಸುಮ್ನೆ ಇರ್ತಿಯಾ; ತನ್ನದೇ ಭಾಷೆಯಲ್ಲಿ ತಂದೆಗೆ ಬೈಯುತ್ತಿರುವ ಪುಟಾಣಿ – Kannada News | A little girl scolding her parents in her own language

ಅಪ್ಪ ಅಂದ್ರೆ ಹೆಣ್ಣು ಮಕ್ಕಳಿಗೆ (daughter) ತುಂಬಾನೇ ಇಷ್ಟ. ಮನೆಯಲ್ಲಿ ಹೆಣ್ಣು ಮಗುವಿದ್ದರೆ ತಾಯಿಗಿಂತ ತಂದೆಯನ್ನೇ ಹೆಚ್ಚು ಹಚ್ಚಿಕೊಂಡು ಬಿಡುವುದಿದೆ. ಇದೀಗ ಪುಟ್ಟ ಮಗುವೊಂದು ಹೆತ್ತವರ ಮೇಲೆ ಕೋಪಗೊಂಡಂತಿದೆ. ಹೀಗಾಗಿ ಅಪ್ಪನ ಮುಂದೆ ನಿಂತು ತನ್ನದೇ ಭಾಷೆಯಲ್ಲಿ ಬೈಯುತ್ತಿದ್ದು, ಈ ಮುದ್ದಾದ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಪುಟಾಣಿಯ ಕ್ಯೂಟ್ ನೆಸ್‌ಗೆ ಫುಲ್ ಫಿದಾ ಆಗಿದ್ದಾರೆ.

Alpha Culture ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿಯ ಮುದ್ದಾದ ಬೈಗುಳದ ದೃಶ್ಯ ಇದಾಗಿದೆ. ಈ ಪುಟ್ಟ ಹುಡುಗಿ ಯಾವುದೋ ವಿಷಯದ ಬಗ್ಗೆ ತನ್ನ ಹೆತ್ತವರ ಮೇಲೆ ಕೋಪಗೊಂಡಿದ್ದಾಳೆ. ಹೀಗಾಗಿ ತನ್ನ ಎದುರಿಗಿರುವ ತಂದೆಯ ಮೇಲೆ ಕೋಪಗೊಂಡು ತನ್ನದೇ ಭಾಷೆಯಲ್ಲಿ ಕೂಗಾಡುತ್ತಿದ್ದಾಳೆ. ಮಗಳು ಬೈಯುವುದನ್ನು ಕಂಡು ತಂದೆಯೂ ಕೀಟಲೆ ಮಾಡುತ್ತಿರುವುದನ್ನು ನೋಡಬಹುದು. ಇದು ಪುಟಾಣಿಯ ಪಿತ್ತನೆತ್ತಿಗೇರುವಂತೆ ಮಾಡಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮುಗ್ಧ ಮನಸ್ಸುಗಳ ಶುದ್ಧ ಸ್ನೇಹ: ಬೀದಿ ನಾಯಿ ಜತೆಗೆ ಆಟವಾಡಿದ ಪುಟಾಣಿಗಳು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಾನು ಈ ಪುಟಾಣಿಗೆ ಸಪೋರ್ಟ್ ಮಾಡ್ತೇನೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ತುಂಬಾ ಗಂಭೀರ ವಿಷ್ಯ ಎಂದು ಕಾಣಿಸುತ್ತದೆ ಎಂದಿದ್ದಾರೆ. ಮತ್ತೊಬ್ಬರು, ಈಗ್ಲೇ ಹೀಗೆ, ಮುಂದೆ ಈ ಪುಟಾಣಿಯನ್ನು ಸಂಭಾಳಿಸೋದು ತುಂಬಾನೇ ಕಷ್ಟ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಯಾವ ಐಪಿಎಲ್ ತಂಡದಿಂದ ಎಷ್ಟು ಆಟಗಾರರು ಟೀಂ ಇಂಡಿಯಾಕ್ಕೆ ಆಯ್ಕೆ? – Kannada News | India vs Afghanistan: Test and ODI Squads Revealed, IPL Teams’ Player Contributions Analyzed

ಭಾರತ ತಂಡವು ಜೂನ್ 6 ರಿಂದ ನ್ಯೂ ಚಂಡೀಗಢದಲ್ಲಿ ಅಫ್ಘಾನಿಸ್ತಾನ (IND vs AFG) ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದೆ. ಅದರ ನಂತರ, ಭಾರತ ತಂಡವು ಜೂನ್ 14 ರಿಂದ ಇದೇ ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಎರಡೂ ಸರಣಿಗಳಿಗೆ ಮಂಗಳವಾರ, ಮೇ 19 ರಂದು ಭಾರತ ತಂಡಗಳನ್ನು ಸಹ ಬಿಸಿಸಿಐ (BCCI) ಘೋಷಿಸಿದೆ. ಈ ಎರಡೂ ಸರಣಿಗಳಿಗೆ ಅನೇಕ ಯುವ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಹಾಗೆಯೇ ಅನೇಕ ಅನುಭವಿ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ.

ಐಪಿಎಲ್ ಪ್ರದರ್ಶನ ಗಣನೆಗೆ ಬಂದಿಲ್ಲ

ಪ್ರಸ್ತುತ ಭಾರತದಲ್ಲಿ ಐಪಿಎಲ್ ನಡೆಯುತ್ತಿದ್ದು, ಐಪಿಎಲ್​ನಲ್ಲಿ ಆಡುತ್ತಿರುವ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದೆ. ಆದಾಗ್ಯೂ ಆಟಗಾರರ ಆಯ್ಕೆಯಲ್ಲಿ ಐಪಿಎಲ್ ಪ್ರದರ್ಶನವನ್ನು ಪರಿಗಣಿಸಿರುವ ಸಾಧ್ಯತೆಗಳು ಕಡಿಮೆ ಇವೆ. ಏಕೆಂದರೆ ಟೀಂ ಇಂಡಿಯಾ, ಅಫ್ಘಾನಿಸ್ತಾನದ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಆಡಲಿದೆ. ಹೀಗಾಗಿ ಈ ಎರಡೂ ಮಾದರಿಗಳು ಟಿ20 ಮಾದರಿಯಿಂದ ಭಿನ್ನವಾಗಿರುವ ಕಾರಣ, ಐಪಿಎಲ್‌ ಪ್ರದರ್ಶನದ ಮೇಲೆ ಆಟಗಾರರನ್ನು ಆಯ್ಕೆ ಮಾಡಲಾಗಿಲ್ಲ ಎನ್ನಬಹುದು. ಆದರೂ ಯಾವ ಐಪಿಎಲ್ ತಂಡದಿಂದ ಎಷ್ಟು ಆಟಗಾರರು ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ ಎಂಬು ಕುತೂಹಲ ಎಲ್ಲರಲ್ಲೂ ಮೂಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ.

ಯಾವ ತಂಡದಿಂದ ಎಷ್ಟು ಆಟಗಾರರು

ಟೆಸ್ಟ್ ಹಾಗೂ ಏಕದಿನ ಸರಣಿಗೆ ಬಿಸಿಸಿಐ ತಲಾ 15 ಆಟಗಾರರನ್ನು ಆಯ್ಕೆ ಮಾಡಿದೆ. ಇದರಲ್ಲಿ ಕೆಲವು ಆಟಗಾರರು ಉಭಯ ತಂಡಗಳಲ್ಲೂ ಸ್ಥಾನ ಪಡೆದಿದ್ದಾರೆ. ಉಳಿದಂತೆ ಐಪಿಎಲ್​ನ 10 ತಂಡಗಳಲ್ಲಿ 8 ತಂಡಗಳ ಆಟಗಾರರು ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಸಿಎಸ್​ಕೆ ಹಾಗೂ ಕೆಕೆಆರ್ ತಂಡದಿಂದ ಯಾವೊಬ್ಬ ಆಟಗಾರನೂ ಈ ಸರಣಿಗೆ ಆಯ್ಕೆಯಾಗಿಲ್ಲ. ಗುಜರಾತ್ ಟೈಟಾನ್ಸ್ ತಂಡದಿಂದ ಅತ್ಯಧಿಕ 7 ಆಟಗಾರರು ತಂಡಕ್ಕೆ ಆಯ್ಕೆಯಾಗಿದ್ದರೆ, ಸನ್‌ರೈಸರ್ಸ್ ತಂಡದಿಂದ ಮೂವರು ಆಟಗಾರರಿಗೆ ಅವಕಾಶ ಸಿಕ್ಕಿದೆ. ಉಳಿದಂತೆ 6 ತಂಡಗಳಿಂದ ತಲಾ ಇಬ್ಬರು ಆಟಗಾರರು ಆಯ್ಕೆಯಾಗಿದ್ದಾರೆ.

IND vs AFG: 7+4.. ಟೀಂ ಇಂಡಿಯಾದಲ್ಲಿ ಗುಜರಾತ್ ಟೈಟಾನ್ಸ್ ಆಟಗಾರರದ್ದೇ ಪಾರುಪತ್ಯ

    • ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಮಾನವ್ ಸುತಾರ್ ಮತ್ತು ಗುರ್ನೂರ್ ಬ್ರಾರ್.
    • ಸನ್‌ರೈಸರ್ಸ್ ಹೈದರಾಬಾದ್: ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್​ ದುಬೆ,
    • ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಧ್ರುವ್ ಜುರೇಲ್,
    • ಆರ್​ಸಿಬಿ: ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ
    • ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ,
    • ಲಕ್ನೋ ಸೂಪರ್​ಜೈಂಟ್ಸ್: ಪ್ರಿನ್ಸ್ ಯಾದವ್, ರಿಷಭ್ ಪಂತ್,
    • ಡೆಲ್ಲಿ ಕ್ಯಾಪಿಟಲ್ಸ್: ಕೆಎಲ್ ರಾಹುಲ್, ಕುಲ್ದೀಪ್ ಯಾದವ್
    • ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್, ಅರ್ಷದೀಪ್ ಸಿಂಗ್

ಟೆಸ್ಟ್ ಮತ್ತು ಏಕದಿನ ಸರಣಿ ವೇಳಾಪಟ್ಟಿ

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯವು ನ್ಯೂ ಚಂಡೀಗಢದ ಮಹಾರಾಜ ಯುಧ್ವೀರ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯವು ಜೂನ್ 6 ರಂದು ಪ್ರಾರಂಭವಾಗಲಿದೆ.

ಜೂನ್ 14 ರಂದು ಏಕದಿನ ಸರಣಿ ಆರಂಭವಾಗಲಿದ್ದು, ಕೊನೆಯ ಪಂದ್ಯ ಜೂನ್ 20 ರಂದು ನಡೆಯಲಿದೆ. ಮೊದಲ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಏಕದಿನ ಪಂದ್ಯ ಜೂನ್ 17 ರಂದು ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯ ಮೂರನೇ ಮತ್ತು ಅಂತಿಮ 50 ಓವರ್‌ಗಳ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಶ್ವನಾಥ್ ಹಣಕಾಸಿನ ವ್ಯವಹಾರದ ಪಿನ್ ಟು ಪಿನ್ ಡೀಟೈಲ್ಸ್ ಬಿಚ್ಚಿಟ್ಟ ಮಹದೇವ್ – Kannada News | Mysuru complainer Mahadev revels Financial Business With BJP MLC H Vishwanath

ಮೈಸೂರು, (ಮೇ 20): ಹಣಕಾಸಿನ Financial) ವಿಚಾರಕ್ಕೆ ಸಂಬಂಧಿಸಿದಂತೆ ಜೆಪಿ ವಿಧಾನಪರಿಷತ್ ಸದಸ್ಯ ಎಚ್​​​ ವಿಶ್ವನಾಥ್ (H Vishwanath) ವಿರುದ್ಧ ಎಫ್​​ಐಆರ್ ದಾಖಲಾಗಿದೆ. ಮಹದೇವ್ ಎನ್ನುವ ವ್ಯಕ್ತಿ ಎಂಟಿಬಿ ನಾಗರಾಜ್ ಅವರ ಮೂಲಕ ವಿಶ್ವನಾಥ್​ ಅವರಿಗೆ ಸಾಲ ಕೊಡಿಸಿದ್ದರು. ಬಳಿಕ ಆ ಹಣವನ್ನು ವಾಪಸ್ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದು, ಈ ಸಂಬಂಧ ನ್ಯಾಯಾಲದ ಮೊರೆ ಹೋಗಿದ್ದರು. ಇದೀಗ ಕೋರ್ಟ್ ಆದೇಶದ ಮೇರೆಗೆ ವಿಶ್ವನಾಥ್ ವಿರುದ್ಧ ಮೈಸೂರಿನ (Mysuru) ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಬಗ್ಗೆ ಸ್ವತಃ ದೂರುದಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಪ್ರಕರಣದ ಪಿನ್ ಟು ಪಿನ್ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಮುಖ್ಯಾಂಶಗಳು

  • ಮೈಸೂರಿನಲ್ಲಿ ಎಂಎಲ್​​ಸಿ ಹೆಚ್​.ವಿಶ್ವನಾಥ್ ವಿರುದ್ಧ ಎಫ್​ಐಆರ್​
  • ಕೋರ್ಟ್ ಆದೇಶದ ಮೇರೆಗೆ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ FIR ದಾಖಲು
  • ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವು ಮೇಲೆ ಹಲ್ಲೆ ಆರೋಪ
  • ವಿಶ್ವನಾಥ್ ಹಣಕಾಸಿನ ವ್ಯವಹಾರದ ಪಿನ್ ಟು ಪಿನ್ ಡೀಟೈಲ್ಸ್ ಬಿಚ್ಚಿಟ್ಟ ಮಹದೇವ್

ಎಂ.ಟಿ.ಬಿ ನಾಗರಾಜ್ ಬಳಿ 35 ಲಕ್ಷ ಕೊಡಿಸಿದ್ದೆ

ಮೈಸೂರಿನಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವ್, ಎಂ.ಎಲ್.ಸಿ ವಿಶ್ವನಾಥ್ ನನಗೆ ಅನ್ಯಾಯ ಮಾಡಿದ್ದಾರೆ. ಈ ಹಿಂದೆ ವಿಶ್ವನಾಥ್ ಎಂಪಿ ಆಗಿದ್ದಾಗ ಎಂ.ಟಿ.ಬಿ ನಾಗರಾಜ್ ಬಳಿ 35 ಲಕ್ಷ ಕೊಡಿಸಿದ್ದೆ. ನಾನು 12 ಲಕ್ಷ ಪಡೆದಿದ್ದೆ. ಆ ಸಮಯದಲ್ಲಿ ವಿಶ್ವನಾಥ್ ಮಗ ಕೂಡ ಇದ್ದರು. ವಿಶ್ವನಾಥ್ ಚಾಮುಂಡೇಶ್ವರಿ ತಾಯಿ ಸನ್ನಿಧಿಯಲ್ಲಿ ಆಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಇದನ್ನೂ ನೋಡಿ: ವಿಶ್ವನಾಥ್ ವಿರುದ್ಧ ಎಫ್‌ಐಆರ್: ಸಿಎಂ ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ

ನನ್ನ ಆಸ್ತಿಯನ್ನು ಅಡ ಇಟ್ಟಿದ್ದೇನೆ

ದುಡ್ಡಿಗಾಗಿ ನನ್ನ ಆಸ್ತಿಯನ್ನು ಅಡ ಇಟ್ಟಿದ್ದೇನೆ. ಇದೀಗ ಬಡ್ಡಿಯೂ ಬೆಳೆದಿದೆ. ನನ್ನ ಆಸ್ತಿ ಬಗ್ಗೆ ಅಕ್ಕ ತಂಗಿಯರು ಕೇಸ್ ಹಾಕಿದ್ದಾರೆ. ಇದೀಗ ಸಾಲ ವಾಪಸ್ಸು ಕೊಡಿ ನಾನು ಎಂಟಿ.ಬಿ ಹತ್ರ ಪತ್ರ ಪಡೆದುಕೊಳ್ಳಬೇಕು ಎಂದು ಕೇಳಿದ್ದೆ. ಜಲದರ್ಶಿನಿಯಲ್ಲಿ ಹಣ ಕೇಳಲು ಹೋದಾಗ ನನಗೆ ಬೈದು ಹಲ್ಲೆ ಮಾಡಿದ್ರು. ಈ ಬಗ್ಗೆ ಮೈಸೂರಿನಲ್ಲಿ FIR ಆಗಲಿಲ್ಲ. ಕೋರ್ಟ್ ಮೊರೆ ಹೋಗಿ FIR ಹಾಕಿಸಿದ್ದೇನೆ. ನನ್ನ ತಾಯಿ ಹೆಂಡ್ತಿ ಬಗ್ಗೆ ಕೆಟ್ಟದಾಗಿ ಈ ವಯಸ್ಸಿನಲ್ಲಿ ಮಾತನಾಡಿದ್ದಾರೆ ಎಂದು ವಿಶ್ವನಾಥ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ

ಇವರಿಗಾಗಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಇದೀಗ ನೀನು ಸಿದ್ದರಾಮಯ್ಯ ಚೇಲಾ ಅಂತಾರೆ. ಈ ಪ್ರಕರಣಕ್ಕೂ ಸಿದ್ದರಾಮಯ್ಯಗೂ ಯತೀಂದ್ರ ಗೂ ಸಂಬಂಧವಿಲ್ಲ. ವಿಶ್ವನಾಥ್ 35 ಲಕ್ಷ ಹಣ ಎಂ.ಟಿ.ಬಿ ನಾಗರಾಜ್ ಗೆ ಕೊಡಬೇಕು. ಬಡ್ಡಿ ಬೆಳೆದು ಕೋಟ್ಯಂತರ ಹಣ ಆಗಿದೆ. ಅದನ್ನು ಕೊಡಬೇಕು . ವಿಶ್ವನಾಥ್ ಸತ್ಯವಂತರಾಗಿದ್ದಾರೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ ಎಂದಿದ್ದಾರೆ.

ವಿಶ್ವನಾಥ್ ಹೇಳಿದ್ದೇನು?

ನಿನಗೆ ಸಾಲ ಕೊಡಲು 55 ಲಕ್ಷ ರೂಪಾಯಿ ಎಲ್ಲಿಂದ ಬಂತು? ನಾನು 50 ವರ್ಷದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನಾನು ಸದನದಲ್ಲೇ‌ ಸತ್ಯವಂತ ಎಂದು ಪ್ರಮಾಣ ಮಾಡಿದ್ದೇನೆ. ಕೋಟೆಹುಂಡಿ ಮಹದೇವ ನಮ್ಮ ಮನೆ ಮುಂದೆ ಬಂದು ನಿಲ್ಲುತ್ತಿದ್ದ. ಸಿದ್ದರಾಮಯ್ಯ ಮಗನನ್ನು ನಾನು ಹೆಚ್​ಎಂ ಎಂದು ಹೇಳಿದ್ದೆ. ಈಗ ಅದನ್ನು ತೀರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಎಫ್‌ಐಆರ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುತ್ತೇನೆ ಎಂದು ಎಂದಿದ್ದಾರೆ.

ಕರ್ನಾಟದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬ್ಯಾಂಕಾಕ್‌: ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ, ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯ ವೈರಲ್!

ಬ್ಯಾಂಕಾಕ್‌ನಲ್ಲಿ ನಡೆದ ಭೀಕರ ರೈಲು ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಇವಾಗಿವೆ. ಇಲ್ಲಿನ ಜನನಿಬಿಡ ರೈಲ್ವೆ ಕ್ರಾಸಿಂಗ್ ಒಂದರಲ್ಲಿ ಸಿಗ್ನಲ್ ಹಾಗೂ ಬ್ಯಾರಿಕೇಡ್‌ಗಳನ್ನು ನಿರ್ಲಕ್ಷಿಸಿ ವಾಹನಗಳು ಹಳಿ ದಾಟಲು ಯತ್ನಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹಳಿಯ ಮೇಲಿದ್ದ ಹಳದಿ ಬಣ್ಣದ ದೊಡ್ಡ ಬಸ್ ಹಾಗೂ ಎಸ್‌ಯುವಿ (SUV) ಕಾರಿಗೆ ವೇಗವಾಗಿ ಬಂದ ಸರಕು ಸಾಗಣೆ ರೈಲು ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಬಸ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಹಳಿಯ ಪಕ್ಕದಲ್ಲಿದ್ದ ದ್ವಿಚಕ್ರ ವಾಹನ ಸವಾರರು ಹಾಗೂ ಇತರ ವಾಹನಗಳ ಮೇಲೂ ಇದು ಪರಿಣಾಮ ಬೀರಿದೆ. ಅಪಘಾತದ ಭೀಕರತೆಯಿಂದಾಗಿ ಸ್ಥಳದಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇಪಿಎಫ್​ಒದಿಂದ ಸದ್ಯದಲ್ಲೇ 2 ಹೊಸ ಸೇವೆಗಳು; ವಾಟ್ಸಾಪ್ ಚಾಟ್​ಬೋಟ್ ಮತ್ತು ಯುಪಿಐ ವಿತ್​ಡ್ರಾವಲ್ – Kannada News | EPFO to launch WhatsApp chatbot and UPI withdrawal services

ನವದೆಹಲಿ, ಮೇ 20: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್​ಒ (EPFO) ಸದ್ಯದಲ್ಲೇ ಎರಡು ಹೊಸ ಸೇವೆಗಳನ್ನು ಹೊರತರಲಿದೆ. ಒಂದು, ವಾಟ್ಸಾಪ್ ಚಾಟ್​ಬೋಟ್ (WhatsApp Chatbot). ಮತ್ತೊಂದು ಯುಪಿಐ ಮೂಲಕ ಪಿಎಫ್ ಹಣ ವಿತ್​ಡ್ರಾ ಮಾಡುವ ಅವಕಾಶ. ಇದರಲ್ಲಿ ಯುಪಿಐ ಫೀಚರ್ (UPI withdrawal feature) ಕುರಿತ ಸುದ್ದಿ ಕಳೆದ ಎರಡು ವರ್ಷಗಳಿಂದಲೂ ನಿರೀಕ್ಷೆ ಹುಟ್ಟಿಸಿದೆ. ಪಿಎಫ್ ಬಳಕೆದಾರರ ಅಗತ್ಯಗಳಿಗೆ ಅನುಗುಣವಾಗಿ ಇಪಿಎಫ್​ಒ ತನ್ನ ನಿಯಮಗಳನ್ನು ಸರಳಗೊಳಿಸುತ್ತಾ ಬಂದಿದೆ. ಸುಧಾರಣೆಗಳನ್ನು ತರುತ್ತಿದೆ. ಈ ಕಾರ್ಯದ ಮುಂದುವರಿದ ಭಾಗವಾಗಿ ಇವೆರಡು ಹೊಸ ಸೇವೆಗಳು ಹೊರಬರುತ್ತಿವೆ.

ವಾಟ್ಸಾಪ್ ಚಾಟ್​ಬೋಟ್ ಹೇಗೆ ಕೆಲಸ ಮಾಡುತ್ತದೆ?

ಈಗ ಹೆಚ್ಚಿನ ಸರ್ವಿಸ್ ಸಂಸ್ಥೆಗಳು ವಾಟ್ಸಾಪ್ ಚಾಟ್​ಬೋಟ್ ಸೇವೆ ಒದಗಿಸುತ್ತವೆ. ಇಪಿಎಫ್​ಒ ಕೂಡ ಇದನ್ನು ಆರಂಭಿಸಿದೆ. ಪಿಎಫ್ ಅಕೌಂಟ್ ಹೊಂದಿರುವ ಸದಸ್ಯರು ವಾಟ್ಸಾಪ್ ಚಾಟ್​ಬೋಟ್ ಬಳಸಬಹುದು. ಈ ಚಾಟ್​ಬೋಟ್ ಅನ್ನು ಬಳಸುವ ಮೊದಲು ಅದು ಗ್ರೀನ್ ಟಿಕ್ ಹೊಂದಿದೆಯಾ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯ. ಈ ಚಾಟ್​ಬೋಟ್​ನಲ್ಲಿ ನೀವು ಪಿಎಫ್ ಬ್ಯಾಲನ್ಸ್, ಕ್ಲೇಮ್ ಸ್ಥಿತಿ ಇತ್ಯಾದಿಯನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು. ಈ ಚಾಟ್​ಬೋಟ್ ಸೇವೆ ಬಹಳ ಶೀಘ್ರದಲ್ಲಿ ಲೈವ್ ಆಗಬಹುದು.

ಇದನ್ನೂ ಓದಿ: ವಾಲಂಟರಿ ಪ್ರಾವಿಡೆಂಟ್ ಫಂಡ್; ನಿಮ್ಮ ಇಪಿಎಫ್ ಕಾರ್ಪಸ್ ಹೆಚ್ಚಿಸುವ ಒಂದು ಪ್ಲಾನ್

ಯುಪಿಐ ಮೂಲಕ ಹಣ ವಿತ್​ಡ್ರಾ ಮಾಡಲು ಅವಕಾಶ

ಇಪಿಎಫ್​ಒನ ಬಹುನಿರೀಕ್ಷಿತ ಪ್ರಾಜೆಕ್ಟ್​ಗಳಲ್ಲಿ ಯುಪಿಐ ಫೀಚರ್ ಒಂದೆನಿಸಿದೆ. ಸದ್ಯದಲ್ಲೇ ಇದೂ ಕೂಡ ಲೈವ್ ಆಗಲಿದೆ. ವರದಿ ಪ್ರಕಾರ ಇಪಿಎಫ್​ಒ ಸಂಸ್ಥೆ ಈ ಫೀಚರ್ ಅನ್ನು ಪರೀಕ್ಷಿಸಿದ್ದು, ಅದರ ಕಾರ್ಯನಿರ್ವಹಣೆ ಬಗ್ಗೆ ಸಮಾಧಾನ ಹೊಂದಿದೆ.

ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ, ಪಿಎಫ್ ಬಳಕೆದಾರರು ತಮ್ಮ ಪಿಎಫ್ ಅಕೌಂಟ್​ನಲ್ಲಿರುವ ಹಣವನ್ನು ಯುಪಿಐ ಮೂಲಕ ತಮ್ಮ ಬ್ಯಾಂಕ್ ಅಕೌಂಟ್​ಗೆ ಟ್ರಾನ್ಸ್​ಫರ್ ಮಾಡಬಹುದು. ಪಿಎಫ್ ಹಣಕ್ಕೆ ಕ್ಲೇಮ್ ಸಲ್ಲಿಸುವ ಅಗತ್ಯ ಇರುವುದಿಲ್ಲ. ಟ್ರಾನ್ಸ್​ಫರ್ ಮಾಡುವ ಮುನ್ನ ಯುಪಿಐನ ಪಿನ್ ಅನ್ನು ನಮೂದಿಸಬೇಕು.

ಇದನ್ನೂ ಓದಿ: ಪಿಪಿಎಫ್​ನಲ್ಲಿ ಒಂದು ಕೋಟಿ ರೂ ಹಣ ಪಡೆಯುವುದು ಹೇಗೆ? 61,000 ರೂ ಮಾಸಿಕ ಆದಾಯ ಪಡೆಯಲು ಹೀಗೆ ಮಾಡಿ

ಈಗಿರುವ ವ್ಯವಸ್ಥೆಯಲ್ಲಿ ಸದಸ್ಯರು ಪಿಎಫ್ ಹಣಕ್ಕೆ ಕ್ಲೇಮ್ ಸಲ್ಲಸಿ, ಅದು ಇತ್ಯರ್ಥವಾಗಿ ಆ ಬಳಿಕ ಹಣವು ಲಿಂಕ್ ಆದ ಬ್ಯಾಂಕ್ ಅಕೌಂಟ್​ಗೆ ಜಮೆ ಆಗುತ್ತಿತ್ತು. ಈಗ ಆಟೊಮ್ಯಾಟಿಕ್ ಸೆಟಲ್ಮೆಂಟ್ ಸೌಲಭ್ಯ ನೀಡಲಾಗಿದೆ. ಆಟೊ ಸೆಟಲ್ಮೆಂಟ್ ಮೊತ್ತವನ್ನು 1 ಲಕ್ಷ ರೂನಿಂದ 5 ಲಕ್ಷ ರೂಗೆ ಏರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version