ವನ್ಯಜೀವಿಗಳಿಗೆ ತೊಂದರೆ ಆತಂಕ: ಆನೆಕಲ್​​ ಬಳಿ ಹೊಸ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ತೀವ್ರ ವಿರೋಧ – Kannada News | Wildlife Threat: Outrage Over Proposed Cricket Stadium Near Bannerghatta National Park In Anekal

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಬೆಂಗಳೂರು, ಮೇ 20: ಆನೇಕಲ್ ತಾಲ್ಲೂಕಿನಲ್ಲಿ ನಿರ್ಮಾಣಕ್ಕೆ ಯೋಜಿಸಲಾಗಿರುವ ಹೊಸ ಕ್ರಿಕೆಟ್ ಸ್ಟೇಡಿಯಂ ಯೋಜನೆಗೆ ಭಾರೀ ವಿರೋಧ ಕೇಳಿಬಂದಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಮೀಪ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿರುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿರುವ ಸ್ಥಳೀಯರು ಮತ್ತು ಪರಿಸರ ಪ್ರೇಮಿಗಳು, ಯೋಜನೆಯನ್ನು ರಾಜ್ಯ ಸರ್ಕಾರ ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಇಂಡ್ಲವಾಡಿ ಗ್ರಾಮದ ಸುಮಾರು 70 ಎಕರೆ ಭೂಮಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಇದರ ವೆಚ್ಚ ಸುಮಾರು 900 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ಸಾವಿರ ಕೋಟಿ ರೂ. ವೆಚ್ಚದ ಕ್ರೀಡಾ ಸಂಕೀರ್ಣ ನಿರ್ಮಾಣದ ಯೋಜನೆಯೂ ಇದೆ. ಸ್ಟೇಡಿಯಂ ನಿರ್ಮಾಣ ಸ್ಥಳವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಕೇವಲ ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದು, ಈ ಉದ್ಯಾನವನವು ಕಾವೇರಿ ವನ್ಯಜೀವಿ ಅಭಯಾರಣ್ಯ ಮತ್ತು ಎಂಎಂ ಹಿಲ್ಸ್ ಪ್ರದೇಶಗಳಿಗೆ ಸಂಪರ್ಕ ಹೊಂದಿದೆ. ಸ್ಟೇಡಿಯಂನಿಂದ ಉಂಟಾಗುವ ಫ್ಲಡ್‌ಲೈಟ್‌ಗಳು, ವಾಹನ ಸಂಚಾರ ಹಾಗೂ ಭಾರೀ ಜನಸ್ತೋಮದಿಂದ ವನ್ಯಜೀವಿಗಳಿಗೆ ತೊಂದರೆ ಉಂಟಾಗುವ ಆತಂಕ ಎದುರಾಗಿದೆ. ಹೀಗಾಗಿ ಯೋಜನೆಗೆ ಸಂಬಂಧಿಸಿದ ಪರಿಸರ ಪರಿಣಾಮ ಮೌಲ್ಯಮಾಪನ (EIA) ವರದಿ ಹಾಗೂ ವಿವರವಾದ ಯೋಜನಾ ವರದಿ (DPR) ಸಾರ್ವಜನಿಕರಿಗೆ ಬಿಡುಗಡೆ ಮಾಡಬೇಕು . ಈಗಾಗಲೇ ಬೆಂಗಳೂರಿನಲ್ಲಿ ಹಲವು ಕ್ರಿಕೆಟ್ ಮೈದಾನಗಳಿರುವಾಗ ಮತ್ತೊಂದು ಸ್ಟೇಡಿಯಂ ಅಗತ್ಯವೇನು ಎಂಬ ಪ್ರಶ್ನೆಯನ್ನೂ ಕೆಲವರು ಎತ್ತಿದ್ದಾರೆ.

ಇದನ್ನೂ ಓದಿ: ಫುಟ್​ಪಾತ್​ಗೂ ಬಂತು​ ಟಿಂಡರ್ ಮಾದರಿಯ ಆ್ಯಪ್; ಹದಿಹರೆಯದ ಬಾಲಕನ ಐಡಿಯಾಗೆ ನೆಟ್ಟಿಗರು ಫಿದಾ!

ಈ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ರೈತರು ಹಾಗೂ ಸ್ಥಳಾಂತರಗೊಳ್ಳುವ ಜನರ ಬಗ್ಗೆಯೂ ಆತಂಕ ವ್ಯಕ್ತವಾಗಿದ್ದು, ಸ್ಟೇಡಿಯಂ ಸುತ್ತಮುತ್ತಲಿನ ಭೂ ಮಾಲೀಕತ್ವದ ವಿಚಾರದಲ್ಲಿ ಹಿತಾಸಕ್ತಿ ಸಂಘರ್ಷವೂ ಇರಬಹುದು ಎಂಬ ಆರೋಪ ಕೇಳಿಬಂದಿದೆ. ರಾಜ್ಯ ಸರ್ಕಾರವು ಈ ಸ್ಟೇಡಿಯಂನ್ನು ಉತ್ತರ ಕರ್ನಾಟಕದಂತಹ ಪ್ರದೇಶದಲ್ಲಿ ನಿರ್ಮಿಸಬಹುದು ಎಂಬ ಸಲಹೆಯೂ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಒಂದು ರಾಷ್ಟ್ರ, ಒಂದು ಚುನಾವಣೆಯಿಂದ 7 ಲಕ್ಷ ಕೋಟಿ ರೂ ಉಳಿತಾಯ, ಜಿಡಿಪಿ ಶೇ. 1.6 ವೃದ್ಧಿ: ಜೆಪಿಸಿ ಅನಿಸಿಕೆ – Kannada News | One Nation One Election: JPC Report Projects 7 Lakh Crore Savings, 1.6pc GDP Growth for India

ನವದೆಹಲಿ, ಮೇ 20: ಒಂದು ರಾಷ್ಟ್ರ, ಒಂದು ಚುನಾವಣೆಯ ವ್ಯವಸ್ಥೆಯಿಂದ (One Nation One Election) ಬಹಳಷ್ಟು ಹಣ ಉಳಿಸಬಹುದು. ದೇಶಾದ್ಯಂತ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಒಮ್ಮೆಗೇ ನಡೆಸಿದರೆ 7 ಲಕ್ಷ ಕೋಟಿ ರೂನಷ್ಟು ಹಣ ಉಳಿಸಬಹುದು. ಇದರಿಂದ ಹಣ ಉಳಿತಾಯ ಆಗುವುದರ ಜೊತೆಗೆ, ದೇಶದ ಆರ್ಥಿಕತೆ ಶೇ. 1.6ರಷ್ಟು ಹೆಚ್ಚುತ್ತದೆ. ಆಡಳಿತದ ಕ್ಷಮತೆಯೂ ಸುಧಾರಿಸುತ್ತದೆ. ಹೀಗೆಂದು ಹೇಳಿದ್ದು ಸರ್ಕಾರದ ಮಂತ್ರಿಗಳಲ್ಲ. ಜಂಟಿ ಸಂಸದೀಯ ಸಮಿತಿ (JPC- Joint Parliamentary Committee) ವ್ಯಕ್ತಪಡಿಸಿದ ಅನಿಸಿಕೆ ಇದು.

ಏಕ ರಾಷ್ಟ್ರ ಏಕ ಚುನಾವಣೆ ಪ್ರಸ್ತಾಪದ ಕುರಿತು ಅವಲೋಕಿಸಲು ನರೇಂದ್ರ ಮೋದಿ ಅವರು ಎಂಟು ಸದಸ್ಯರಿರುವ ಸಮಿತಿಯೊಂದನ್ನು ರಚಿಸಿದ್ದರು. 186 ದಿನಗಳ ನಂತರ ಈ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ. ಈ ವರದಿಯನ್ನು ಜಂಟಿ ಸಂಸದೀಯ ಸಮಿತಿಗೆ ನೀಡಲಾಗಿದೆ. ಬಿಜೆಪಿ ಸಂಸದ ಪಿಪಿ ಚೌಧರಿ ನೇತೃತ್ವದ ಈ ಜೆಪಿಸಿಯಲ್ಲಿ 39 ಸದಸ್ಯರಿದ್ದಾರೆ.

ಇದನ್ನೂ ಓದಿ: ಮೆಲೋನಿಗೆ ಮೋದಿಯಿಂದ ಚಾಕೊಲೇಟ್ ಗಿಫ್ಟ್; ಆದರೆ, ಷೇರುಬೆಲೆ ಹೆಚ್ಚಿದ್ದು ರಿಯಲ್ ಎಸ್ಟೇಟ್ ಕಂಪನಿಯದ್ದು; ಯಾಕೆ?

ಏಕ ರಾಷ್ಟ್ರ, ಏಕ ಚುನಾವಣೆ ವ್ಯವಸ್ಥೆಯ ಪ್ರಸ್ತಾಪದ ಪ್ರಕಾರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳೆಲ್ಲವನ್ನೂ ಏಕಕಾಲದಲ್ಲೇ ನಡೆಸಬೇಕು. ಅದಾಗಿ 100 ದಿನದೊಳಗೆ ಎಲ್ಲಾ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳೂ ನಡೆಸಬೇಕು.

ಗುಜರಾತ್​ನ ಗಾಂಧಿನಗರದಲ್ಲಿ ಜೆಪಿಸಿ ಅಧ್ಯಕ್ಷ ಪಿ.ಪಿ. ಚೌಧರಿ ಅವರು ಸುದ್ದಿಗೋಷ್ಠಿ ಕರೆದು, ಏಕ ರಾಷ್ಟ್ರ ಏಕ ಚುನಾವಣೆ ವ್ಯವಸ್ಥೆಯಿಂದ ಆಗುವ ಲಾಭಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗೆಯೇ, ಬೇರೆ ಬೇರೆ ಅವಧಿಯಲ್ಲಿ ಚುನಾವಣೆಗಳು ನಡೆಯುವ ವ್ಯವಸ್ಥೆ ಹೇಗೆ ಆಡಳಿತ ಸಮಸ್ಯೆ ಸೃಷ್ಟಿಸಬಹುದು ಎಂಬುದನ್ನು ನಿವೇದಿಸುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: ಚೀನಾದ ಡಾರ್ಕ್ ಫ್ಯಾಕ್ಟರಿಗಳು… ಮನುಷ್ಯರು, ಬೆಳಕು ಇಲ್ಲದ ಕಾರ್ಖಾನೆಗಳು, ರೋಬೋಗಳದ್ದೇ ಆಟ; ಭವಿಷ್ಯವೇ ಪ್ರತ್ಯಕ್ಷ

‘ಪ್ರತೀ ವರ್ಷ ಐದಾರು ವಿಧಾನಸಭಾ ಚುನಾವಣೆಗಳು ನಡೆಯುವುದನ್ನು ವಿಶ್ವದಲ್ಲಿ ಬೇರೆಲ್ಲೂ ನೋಡಲು ಸಿಗುವುದಿಲ್ಲ. ಸರ್ಕಾರದ ಕಾರ್ಯಕ್ರಮಗಳು ಜನರನ್ನು ತಲುಪುವುದಿಲ್ಲ. ಶಿಕ್ಷಕರಿಗೆ ಚುನಾವಣಾ ಕೆಲಸದ ಹೊರೆ ಬೀಳುತ್ತದೆ. ಚುನಾವಣೆಗಳನ್ನು ಒಟ್ಟಿಗೆ ನಡೆಸುವುದು ಮುಖ್ಯ’ ಎಂದು ಹೇಳಿದ ಪಿ.ಪಿ. ಚೌಧರಿ, 1952ರಿಂದ 1967ರವರೆಗೆ ನಾಲ್ಕು ಬಾರಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳು ಒಟ್ಟಿಗೆ ನಡೆದಿದ್ದ ಸಂಗತಿಯನ್ನು ಎತ್ತಿತೋರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಡೀಸೆಲ್​​ ಬೆಲೆ ಹೆಚ್ಚಳದಿಂದ ವಾಯವ್ಯ ಸಾರಿಗೆ ಸಂಸ್ಥೆಗೆ ಸಂಕಷ್ಟ: ತಿಂಗಳಿಗೆ ಕೋಟ್ಯಂತರ ರೂ ಹೊರೆ! – Kannada News | Hubballi: Rising Diesel Prices Add Crores in Monthly Burden to NWKRTC

ಹುಬ್ಬಳ್ಳಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆImage Credit source: tv9 kannada

ಹುಬ್ಬಳ್ಳಿ, ಮೇ 20: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ (Petrol, Diesel Price Hike) ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ಕೇವಲ ಒಂದು ವಾರದಲ್ಲಿ ಎರಡು ಬಾರಿ ಇಂಧನ ದರ ಹೆಚ್ಚಳವಾಗಿದ್ದು, ಇದು ಕೇವಲ ಸಾಮಾನ್ಯ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಿರುವುದಲ್ಲದೆ ರಾಜ್ಯದ ಸಾರಿಗೆ ನಿಗಮಗಳನ್ನೂ ಸಹ ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಅದರಲ್ಲೂ ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) ಈ ಡೀಸೆಲ್ ದರ ಏರಿಕೆ ದೊಡ್ಡ ಹೊಡೆತ ನೀಡಿದೆ. ಈಗಾಗಲೇ ಆರ್ಥಿಕ ನಷ್ಟದಲ್ಲಿ ತೊಳಲಾಡುತ್ತಿರುವ ಸಂಸ್ಥೆಗೆ, ಈ ಹೊಸ ಬೆಲೆ ಏರಿಕೆಯು ಮತ್ತೊಂದು ಆರ್ಥಿಕ ಹೊರೆಯನ್ನು ಹೊರಿಸಿದೆ.

ಮುಖ್ಯಾಂಶಗಳು

  • ಸಾರಿಗೆ ನಿಗಮಕ್ಕೆ ತಟ್ಟಿದ ಡೀಸೆಲ್ ಬೆಲೆ ಏರಿಕೆ ಬಿಸಿ
  • ಹುಬ್ಬಳ್ಳಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸಂಕಷ್ಟ
  • ಟಿಕೆಟ್ ದರ ಏರಿಕೆ ನಿರ್ಧಾರ ಸರ್ಕಾರದ ಅಂಗಳದಲ್ಲಿ

ಮಾಸಿಕ 4 ಕೋಟಿ ರೂ ಹೆಚ್ಚುವರಿ ಹೊರೆ

ಯುದ್ದದಿಂದಾಗಿ ಸಿಲಿಂಡರ್ ಬೆಲೆ ಸೇರಿದಂತೆ ಈಗಾಗಲೇ ಅನೇಕ ವಸ್ತುಗಳು ಬೆಲೆಗಳು ಹೆಚ್ಚಾಗಿದ್ದು ಜನ ಸಾಮಾನ್ಯರು ಹತ್ತಾರು ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಕಳೆದ ಒಂದು ವಾರದಲ್ಲಿ ಎರಡು ಬಾರಿ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳದಿಂದ ವಾಹನ ಮಾಲೀಕರ ಜೇಬಿಗೆ ಕತ್ತರಿ ಬಿದ್ದಿತ್ತು. ಇದೀಗ ಸಾರಿಗೆ ನಿಗಮಗಳಿಗೂ ಸಂಕಷ್ಟ ಶುರುವಾಗಿದೆ. ಆರ್ಥಿಕ ನಷ್ಟದಲ್ಲಿರುವ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ಮತ್ತೊಂದು ಹೊರೆ ಬಿದ್ದಿದೆ. ಅದರಲ್ಲೂ ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ, ಡಿಸೇಲ್ ಬೆಲೆ ಹೆಚ್ಚಳದಿಂದ ಪ್ರತಿ ತಿಂಗಳು 4 ಕೋಟಿ ರೂ ಹೆಚ್ಚುವರಿ ಹೊರೆ ಬೀಳುತ್ತಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಪೆಟ್ರೋಲ್-ಡೀಸೆಲ್, ಗ್ಯಾಸ್ ಬಗ್ಗೆ ಎದ್ದಿರುವ ಅಂತೆ ಕಂತೆಗಳಿಗೆ ತೆರೆ

ಏಳು ಜಿಲ್ಲೆಯ ವ್ಯಾಪ್ತಿ ಹೊಂದಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಬಸ್ ಗಳಿವೆ. ಪ್ರತಿನಿತ್ಯ ಈ ಬಸ್​​ಗಳಿಗೆ ಮೂರು ಲಕ್ಷ ಲೀಟರ್ ಡಿಸೇಲ್ ಬೇಕಾಗುತ್ತದೆ. ಇನ್ನು ಸಂಸ್ಥೆ ಬಲ್ಕ್ ಆಗಿ ಡಿಸೇಲ್ ಖರೀದಿ ಮಾಡುವುದರಿಂದ ಈ ಮೊದಲು ಪ್ರತಿ ಲೀಟರ್ ಡಿಸೇಲ್ ಬೆಲೆ 87 ರೂ 94 ಪೈಸೆ ಇತ್ತು. ಆದರೆ ಕಳೆದ ಒಂದು ವಾರದಲ್ಲಿ ಎರಡು ಬಾರಿ ಹೆಚ್ಚಳದಿಂದ ಇದೀಗ ಪ್ರತಿ ಲೀಟರ್ ಡಿಸೇಲ್ ಬೆಲೆ 92 ರೂ.ಗೆ ಏರಿಕೆಯಾಗಿದೆ. ಅಂದರೆ ಸಂಸ್ಥೆಗೆ ಸರಿಸುಮಾರು ಪ್ರತಿ ದಿನ 12 ಲಕ್ಷ ರೂ ಹೆಚ್ಚುವರಿ ಬಿದ್ದಂತಾಗುತ್ತಿದ್ದು, ಪ್ರತಿ ತಿಂಗಳಿಗೆ 3.5ರಿಂದ 4 ಕೋಟಿ ರೂ ಹೊರೆಯಾಗುತ್ತಿದೆಯಂತೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈ ಮೊದಲೇ ಆರ್ಥಿಕ ಸಂಕಷ್ಟದಲ್ಲಿದೆ. ಶಕ್ತಿ ಯೋಜನೆ ಹಣ ಸರಿಯಾಗಿ ಬಾರದಿರುವುದು ಆದಾಯಕ್ಕಿಂಕ ಖರ್ಚು ಹೆಚ್ಚಾಗಿರುವುದರಿಂದ ಸಂಸ್ಥೆ ಆರ್ಥಿಕವಾಗಿ ನರಳುವಂತೆ ಮಾಡಿದೆ. ಸದ್ಯದ ಮಟ್ಟಿಗೆ ಪ್ರತಿ ದಿನ ಬರುತ್ತಿದ್ದ ಟಿಕೆಟ್ ಹಣದಲ್ಲಿ ಬಹುಪಾಲು ಹಣವನ್ನು ಡಿಸೇಲ್​ಗೆ ಖರ್ಚು ಮಾಡುತ್ತಿತ್ತು. ಆದರೆ ಇದೀಗ ಸಂಸ್ಥೆಗೆ ಡಿಸೇಲ್ ಬೆಲೆ ಹೆಚ್ಚಳದಿಂದ ಮತ್ತೊಂದು ದೊಡ್ಡ ಹೊರೆ ಬಿದ್ದಂತಾಗಿದೆ.

ಸಾರಿಗೆ ಸಂಸ್ಥೆಯ ಎಂ.ಡಿ ಪ್ರಿಯಾಂಗಾ ಎಂ ಹೇಳಿದ್ದಿಷ್ಟು

ಇನ್ನು ಡಿಸೇಲ್ ಬೆಲೆ ಹೆಚ್ಚಳವಾಗಿದ್ದರು ಕೂಡ ಸರ್ಕಾರ ಇಲ್ಲಿವರಗೆ ಸಾರಿಗೆ ನಿಗಮಗಳ ಟಿಕೆಟ್ ಬೆಲೆಯನ್ನು ಹೆಚ್ಚಳ ಮಾಡಿಲ್ಲ. ಹೀಗಾಗಿ ಆದಾಯ ಹಿಂದಿನಷ್ಟೇ ಇದ್ದು, ಖರ್ಚು ಮಾತ್ರ ಹೆಚ್ಚಾಗುತ್ತಿದೆ. ಹೀಗಾಗಿ ಸಂಸ್ಥೆಗೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಇರುವ ಮಾರ್ಗೋಪಾಯಗಳ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಮತ್ತೊಂದೆಡೆ ಸಂಸ್ಥೆಗೆ ಆಗುತ್ತಿರುವ ನಷ್ಟದ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದ್ದು, ಸರ್ಕಾರದ ನಿರ್ದೇಶನದಂತೆ ನಡೆಯುತ್ತೇವೆ. ಟಿಕೆಟ್ ಹೆಚ್ಚಳ ಮಾಡುವುದು, ಬಿಡುವುದು ಸರ್ಕಾರದ ಕೈಯಲ್ಲಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಂ.ಡಿ ಪ್ರಿಯಾಂಗಾ ಎಂ ಹೇಳಿದ್ದಾರೆ.

ಇದನ್ನೂ ಓದಿ: Petrol Diesel Price Hike: ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ! ಬೆಳ್ಳಂಬೆಳಗ್ಗೆ ಗ್ರಾಹಕರಿಗೆ ಶಾಕ್

ಯುದ್ದದಿಂದಾಗಿ ಅನೇಕ ವಸ್ತುಗಳ ಬೆಲೆಗಳು ಹೆಚ್ಚಾಗುತ್ತಿವೆ. ಆದರೆ ಇದೀಗ ಡಿಸೇಲ್, ಪೆಟ್ರೋಲ್ ಬೆಲೆ ಹೆಚ್ಚಳದಿಂದ ಸಾರಿಗೆ ನಿಗಮಗಳಿಗೆ ಆರ್ಥಿಕ ಹೊಡೆತ ಬೀಳುತ್ತಿದೆ. ಹೀಗಾಗಿ ಸಾರಿಗೆ ನಿಗಮಗಳು ನಷ್ಟವನ್ನು ಸರಿದೂಗಿಸಿಕೊಳ್ಳಲು ಯಾವ ಕ್ರಮ ಕೈಗೊಳ್ಳುತ್ತವೆ ಟಿಕೆಟ್ ದರ ಹೆಚ್ಚಳ ಆಗುತ್ತದಾ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Viral Hotel Bill: ಚಹಾ, ಊಟ, ರೂಮ್… ಎಲ್ಲವೂ 50ರೂ. ಒಳಗೆ; 1985ರ ಹೋಟೆಲ್ ಬಿಲ್ ವೈರಲ್ – Kannada News | Viral 1985 Mumbai Hotel Bill: 49rs for Full Stay! See Shocking Price Change

1985ರ ಹೋಟೆಲ್ ಬಿಲ್ ವೈರಲ್Image Credit source: instagram

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಳೆಯ ಕಾಲದ ದಿನಸಿ ಸಾಮಗ್ರಿಗಳ ರಶೀದಿ, ಹೋಟೆಲ್ ಬಿಲ್‌ಗಳು ಅಥವಾ ಮದುವೆ ಆಮಂತ್ರಣ ಪತ್ರಿಕೆಗಳು ವೈರಲ್ ಆಗುವುದು ಮತ್ತು ಅವುಗಳನ್ನು ನೋಡಿ ಜನರು ಆಶ್ಚರ್ಯಪಡುವುದು ಸಾಮಾನ್ಯವಾಗಿದೆ. ಅದೇ ರೀತಿ, ಈಗ ಇಂಟರ್ನೆಟ್‌ನಲ್ಲಿ ಬರೋಬ್ಬರಿ 41 ವರ್ಷಗಳಷ್ಟು ಹಳೆಯದಾದ ಹೋಟೆಲ್ ಬಿಲ್ ಒಂದು ಭಾರಿ ಸದ್ದು ಮಾಡುತ್ತಿದೆ. ಈ ಬಿಲ್, ಮಹಾರಾಷ್ಟ್ರದ ಬೊಂಬಾಯಿ (ಈಗಿನ ಮುಂಬೈ) ನಗರದ ಪ್ರಸಿದ್ಧ ಕುಲಾಬಾ (Colaba) ಪ್ರದೇಶದಲ್ಲಿರುವ ‘ಹೋಟೆಲ್ ಸೀ ಪ್ಯಾಲೇಸ್’ (Hotel Sea Palace) ಗೆ ಸಂಬಂಧಿಸಿದ್ದಾಗಿದೆ.

ಬಿಲ್‌ನಲ್ಲಿ ಏನಿದೆ?

ಈ ಬಿಲ್ ಅನ್ನು 18 ಜುಲೈ 1985 ರಂದು ಮುಖೇಶ್ ಘಾಂಚಿ (Mukesh Ghanchi) ಎಂಬ ಗ್ರಾಹಕನ ಹೆಸರಿನಲ್ಲಿ ನೀಡಲಾಗಿದೆ. ಅವರು ಹೋಟೆಲ್‌ನ ರೂಮ್ ನಂಬರ್ 304 ರಲ್ಲಿ ತಂಗಿದ್ದರು. ಬಿಲ್‌ನಲ್ಲಿ ನಮೂದಿಸಲಾದ ಅಂದಿನ ಬೆಲೆಗಳನ್ನು ನೋಡಿದರೆ ಇಂದಿನ ಕಾಲಕ್ಕೆ ನಂಬಲು ಸಾಧ್ಯವಾಗದಂತಿದೆ:

  • ರೂಮ್ ರೆಂಟ್ (1 ರಾತ್ರಿ): 25.00ರೂ.
  • ಚಹಾ (2 ಕಪ್): 2.00ರೂ. (ಅಂದರೆ ಒಂದು ಕಪ್ ಚಹಾಕ್ಕೆ ಕೇವಲ 1 ರೂಪಾಯಿ!)
  • ನಾಷ್ಟಾ / ತಿಂಡಿ (1): 4.00ರೂ.
  • ತಂಪು ಪಾನೀಯ (2): 1.00ರೂ.
  • ಅರ್ಧ ಚಹಾ / ಕಟಿಂಗ್ ಚಾಯ್ (1): 1.50ರೂ.
  • ಮಧ್ಯಾಹ್ನದ ಊಟ / ಲಂಚ್ (1): 6.00ರೂ.
  • ರಾತ್ರಿಯ ಊಟ / ಡಿನ್ನರ್ (1): 8.00ರೂ.
  • ಸರ್ವಿಸ್ ಚಾರ್ಜ್: 1.50ರೂ.
  • ಒಟ್ಟು ಬಿಲ್ ಮೊತ್ತ: 49.00 ರೂ.

ಗ್ರಾಹಕರು 50 ರ ನೋಟು ನೀಡಿದ್ದು, ಅವರಿಗೆ ಹೋಟೆಲ್‌ನವರು 1.00 ರೂ. ಬ್ಯಾಲೆನ್ಸ್ (ಚಿಲ್ಲರೆ) ವಾಪಸ್ ನೀಡಿರುವುದನ್ನು ಬಿಲ್‌ನ ಕೆಳಭಾಗದಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ!

ಇದನ್ನೂ ಓದಿ: ಬೆಂಗಳೂರಲ್ಲಿ 3BHK ಫ್ಲ್ಯಾಟ್‌ಗೆ ಬರೋಬ್ಬರಿ 6.5 ಕೋಟಿ ರೂ! ಬೆಲೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು

ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?

ಇಂದಿನ ಕಾಲದಲ್ಲಿ ಒಂದು ಕಪ್ ಚಹಾ ಕುಡಿಯಬೇಕಾದರೂ ಕನಿಷ್ಠ 20 ರಿಂದ 50 ರೂ. ಖರ್ಚಾಗುತ್ತದೆ. ಇನ್ನು ಐಷಾರಾಮಿ ಹೋಟೆಲ್‌ಗಳಲ್ಲಿ ಕೇವಲ ಒಂದು ರಾತ್ರಿ ಉಳಿದುಕೊಳ್ಳಲು ಸಾವಿರಾರು ರೂಪಾಯಿಗಳನ್ನು ನೀಡಬೇಕಾಗುತ್ತದೆ.

ಇಂತಹ ಪರಿಸ್ಥಿತಿಯಲ್ಲಿ, 1985 ರಲ್ಲಿ ಕೇವಲ 50 ರೂಪಾಯಿಗಳಲ್ಲಿ ಒಬ್ಬ ವ್ಯಕ್ತಿ ಇಡೀ ದಿನ ಹೋಟೆಲ್‌ನಲ್ಲಿ ತಂಗಿ, ಎರಡು ಹೊತ್ತು ಹೊಟ್ಟೆತುಂಬಾ ಊಟ ಮಾಡಿ, ತಿಂಡಿ-ಚಹಾ ಸವಿದು ಹೋಗಿರುವುದನ್ನು ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. “ನಮ್ಮ ತಂದೆ-ತಾತನ ಕಾಲದ ದಿನಗಳೇ ಚಂದ, ಅಂದು ಹಣಕ್ಕೆ ಭಾರಿ ಮೌಲ್ಯವಿತ್ತು” ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಈ ಹಳೆಯ ಬಿಲ್ ಸದ್ಯ ಇನ್‌ಸ್ಟಾಗ್ರಾಮ್ ಹಾಗೂ ಎಕ್ಸ್ (ಟ್ವಿಟರ್) ನಂತಹ ವೇದಿಕೆಗಳಲ್ಲಿ ಹಳೆಯ ಸವಿನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: 7+3.. ಟೀಂ ಇಂಡಿಯಾದಲ್ಲಿ ಗುಜರಾತ್ ಟೈಟಾನ್ಸ್ ಆಟಗಾರರದ್ದೇ ಪಾರುಪತ್ಯ – Kannada News | India vs Afghanistan Squad: Shubman Gill’s Gujarat Titans Influence? 7 GT Players Spark Debate!

ಜೂನ್ 6 ರಿಂದ ಭಾರತ ಹಾಗೂ ಅಫ್ಘಾನಿಸ್ತಾನ (IND vs AFG) ನಡುವೆ ಏಕೈಕ ಟೆಸ್ಟ್ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಮೊದಲಿಗೆ ಟೆಸ್ಟ್ ಪಂದ್ಯ ನಡೆಯಲಿದ್ದು, ಇದಾದ ಬಳಿಕ ಏಕದಿನ ಸರಣಿ ಆರಂಭವಾಗಲಿದೆ. ಈ ಎರಡೂ ಸರಣಿಗಳಿಗಾಗಿ ಬಿಸಿಸಿಐ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಎಂದಿನಂತೆ ಈ ಎರಡು ಸರಣಿಗಳಲ್ಲಿ ಶುಭ್​ಮನ್ ಗಿಲ್ (Shubman Gill) ಭಾರತ ತಂಡವನ್ನು ಮುನ್ನಡೆಸಿದರೆ, ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ಉಪನಾಯಕನಾಗಿದ್ದರೆ, ಏಕದಿನ ತಂಡಕ್ಕೆ ಶ್ರೇಯಸ್ ಅಯ್ಯರ್ ಉಪನಾಯಕನಾಗಿದ್ದಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಅಫ್ಘಾನ್ ವಿರುದ್ಧದ ಸರಣಿಗೆ ಭಾರತದ ಏಕದಿನ ಹಾಗೂ ಟೆಸ್ಟ್ ತಂಡದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡದ 7 ಆಟಗಾರರು ಸ್ಥಾನ ಪಡೆದಿದ್ದಾರೆ.

ಗುಜರಾತ್ ತಂಡದ 7 ಆಟಗಾರರು ಆಯ್ಕೆ

ಕಾಕತಾಳೀಯವೆಂಬಂತೆ ಭಾರತ ತಂಡವನ್ನು ಮುನ್ನಡೆಸುತ್ತಿರುವ ಶುಭ್​ಮನ್ ಗಿಲ್ ಅವರೇ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದಾರೆ. ಹೀಗಾಗಿ ಗುಜರಾತ್ ತಂಡದಿಂದ 7 ಆಟಗಾರರು ಭಾರತ ತಂಡಕ್ಕೆ ಆಯ್ಕೆಯಾಗಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಗುಜರಾತ್ ಟೈಟಾನ್ಸ್ ತಂಡದಿಂದ 7 ಆಟಗಾರರು ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರೆ, ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಮೂರು ಆಟಗಾರರಿಗೆ ಏಕದಿನ ತಂಡದಲ್ಲೂ ಸ್ಥಾನ ಸಿಕ್ಕಿದೆ. ಒಂದೇ ಐಪಿಎಲ್ ತಂಡದಿಂದ 7 ಆಟಗಾರರು ಟೀಂ ಇಂಡಿಯಾಕ್ಕೆ ಆಯ್ಕೆಯಾಗಿರುವುದನ್ನು ಗಮನಿಸಿರುವ ಕ್ರಿಕೆಟ್ ಪ್ರಿಯರು ಶುಭ್​ಮನ್ ಗಿಲ್ ಸ್ವಜನಪಕ್ಷಪಾತಿ ಎಂಬ ಆರೋಪವನ್ನು ಹೊರಿಸುತ್ತಿದ್ದಾರೆ.

ಆದರೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿರುವ ಗುಜರಾತ್ ಟೈಟಾನ್ಸ್ ತಂಡದ 7 ಆಟಗಾರರಲ್ಲಿ ಐದು ಆಟಗಾರರು ಈ ಮೊದಲೇ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಉಳಿದಂತೆ ಇಬ್ಬರು ಆಟಗಾರರಿಗೆ ಮೊದಲ ಬಾರಿಗೆ ಭಾರತ ತಂಡದಲ್ಲಿ ಅವಕಾಶ ನೀಡಲಾಗಿದೆ. ಹೀಗಾಗಿ ಆರೋಪಗಳು ಏನೇ ಇದ್ದರೂ, ಪ್ರತಿಯೊಬ್ಬ ಆಟಗಾರನ ವೈಯಕ್ತಿಕ ಪ್ರದರ್ಶನವನ್ನು ಗಮನಿಸಿಯೇ ಬಿಸಿಸಿಐ ಅವರನ್ನು ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಿದೆ. ಗುಜರಾತ್ ತಂಡದಿಂದ ಆಯ್ಕೆಯಾಗಿರುವ ಈ 7 ಆಟಗಾರರಲ್ಲಿ ಎಷ್ಟು ಮಂದಿ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

IND vs AFG: ರಿಷಭ್ ಪಂತ್​ಗೆ ಡಬಲ್ ಶಾಕ್ ನೀಡಿದ ಬಿಸಿಸಿಐ

ಭಾರತ ಟೆಸ್ಟ್ ತಂಡದಲ್ಲಿರುವ 7 ಗುಜರಾತ್ ಆಟಗಾರರು

  • ಶುಭ್​ಮನ್ ಗಿಲ್ (ನಾಯಕ)
  • ಸಾಯಿ ಸುದರ್ಶನ್
  • ವಾಷಿಂಗ್ಟನ್ ಸುಂದರ್
  • ಮೊಹಮ್ಮದ್ ಸಿರಾಜ್
  • ಪ್ರಸಿದ್ಧ್ ಕೃಷ್ಣ
  • ಮಾನವ್ ಸುತಾರ್
  • ಗುರ್ನೂರ್ ಬ್ರಾರ್

ಏಕದಿನ ತಂಡದಲ್ಲಿರುವ 3 ಗುಜರಾತ್ ಆಟಗಾರರು

  • ಶುಭಮನ್ ಗಿಲ್ (ನಾಯಕ)
  • ವಾಷಿಂಗ್ಟನ್ ಸುಂದರ್
  • ಗುರ್ನೂರ್ ಬ್ರಾರ್

ಟೆಸ್ಟ್ ಪಂದ್ಯಕ್ಕೆ ಭಾರತ ತಂಡ: ಶುಭ್​ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಉಪನಾಯಕ), ಸಾಯಿ ಸುದರ್ಶನ್, ರಿಷಭ್ ಪಂತ್, ದೇವದತ್ತ್ ಪಡಿಕ್ಕಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಹರ್ಷ್ ದುಬೆ, ಧ್ರುವ್ ಜುರೆಲ್.

ಏಕದಿನ ಸರಣಿಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್ ಮತ್ತು ಹರ್ಷ್ ದುಬೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:19 pm, Wed, 20 May 26

Source link

Melody Chocolate History: ಬಾಲ್ಯದ ಫೇವರಿಟ್ ‘ಮೆಲೋಡಿ’ ಚಾಕೊಲೇಟ್ ಹುಟ್ಟಿದ್ದು ಹೇಗೆ? ಮೋದಿ ಗಿಫ್ಟ್ ಬಳಿಕ ಕುತೂಹಲ ಹೆಚ್ಚಳ – Kannada News | PM Modi Gifts Parle Melody: Melodi Trend Explodes, Unveiling Chocolate’s Iconic History

ಸೋಷಿಯಲ್ ಮೀಡಿಯಾದಲ್ಲಿ ‘ಮೆಲೋಡಿ’ (Melody) ಚಾಕೊಲೇಟ್ ಈಗ ಭಾರಿ ಟ್ರೆಂಡ್ ಸೃಷ್ಟಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ನಡುವಿನ ಆತ್ಮೀಯ ಸ್ನೇಹಕ್ಕೆ ಇಂಟರ್ನೆಟ್ ಜಗತ್ತು ಈಗಾಗಲೇ #Melodi ಎಂದು ಹೆಸರಿಟ್ಟು ಸಂಭ್ರಮಿಸುತ್ತಿದೆ. ಆದರೆ, ರೋಮ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಇಟಲಿ ಪ್ರಧಾನಿಗೆ ಭಾರತದ ಪ್ರಸಿದ್ಧ ‘ಪಾರ್ಲೆ ಮೆಲೋಡಿ’ (Parle Melody) ಟಾಫಿಗಳ ಪ್ಯಾಕೆಟ್ ಅನ್ನು ಗಿಫ್ಟ್ ಆಗಿ ನೀಡುವ ಮೂಲಕ ಈ ಇಂಟರ್ನೆಟ್ ಮೀಮ್ ಅನ್ನು ನಿಜವಾಗಿಸಿದ್ದಾರೆ!

ಇಟಲಿ ಪ್ರಧಾನಿ ಮೆಲೋನಿ ಅವರು ಪ್ರಧಾನಿ ಮೋದಿ ತಮಗೆ ಚಾಕೊಲೇಟ್ ನೀಡುತ್ತಿರುವ 27 ಸೆಕೆಂಡುಗಳ ಮುದ್ದಾದ ವಿಡಿಯೋವನ್ನು ಹಂಚಿಕೊಂಡಿದ್ದು, “ಗಿಫ್ಟ್‌ಗೆ ಧನ್ಯವಾದಗಳು, ಪ್ರಧಾನಿ ಮೋದಿ” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕೆಲವೇ ಗಂಟೆಗಳಲ್ಲಿ ಮಿಲಿಯನ್ ವೀಕ್ಷಣೆ ಪಡೆದು ಧೂಳೆಬ್ಬಿಸುತ್ತಿದೆ. ಭಾರತೀಯರ ಬಾಲ್ಯದ ನೆನಪಾಗಿರುವ ಈ 1 ರೂಪಾಯಿಯ ಚಾಕೊಲೇಟ್‌ ಇಷ್ಟೊಂದು ಪ್ರಸಿದ್ಧಿ ಪಡೆದಿದ್ದು ಹೇಗೆ? ಇದರ ಇತಿಹಾಸದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ:

ಕುತೂಹಲವನ್ನೇ ಅಸ್ತ್ರವಾಗಿಸಿಕೊಂಡ ಜಾಹೀರಾತು:

1980ರ ದಶಕದಲ್ಲಿ ಪಾರ್ಲೆ (Parle) ಕಂಪನಿಯು ಈ ಚಾಕೊಲೇಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ, ಅಷ್ಟರಗಾಗಲೇ ‘ಕ್ಯಾಡ್ಬರಿ ಎಕ್ಲೇರ್ಸ್’ ಮಾರುಕಟ್ಟೆಯಲ್ಲಿ ಭದ್ರವಾಗಿ ನೆಲೆಯೂರಿತ್ತು. ತನ್ನ ಪ್ರತಿಸ್ಪರ್ಧಿಗೆ ಬಲವಾದ ಪೈಪೋಟಿ ನೀಡಲು ಪಾರ್ಲೆ ಕಂಪನಿಯು ‘ಎವರೆಸ್ಟ್’ (Everest) ಎಂಬ ಜಾಹೀರಾತು ಸಂಸ್ಥೆಗೆ ಜವಾಬ್ದಾರಿ ನೀಡಿತು. ಆ ಸಂಸ್ಥೆಯ ಕ್ರಿಯೇಟಿವ್ ಹೆಡ್ ಹರೇಶ್ ಮೂರ್ಜಾನಿ ಮತ್ತು ಕಾಪಿ ರೈಟರ್ ಸುಲೇಖಾ ಬಾಜಪೇಯಿ ಅವರು ಒಂದು ವಿನೂತನ ಐಡಿಯಾ ಮಾಡಿದರು. ಚಾಕೊಲೇಟ್‌ನ ರುಚಿಯನ್ನು ಹೊಗಳುವ ಬದಲು, ಗ್ರಾಹಕರಲ್ಲಿ ಕುತೂಹಲ ಮೂಡಿಸಲು ನಿರ್ಧರಿಸಿದರು.

ಹೀಗೆ ಹುಟ್ಟಿಕೊಂಡಿದ್ದೇ ಭಾರತೀಯ ಜಾಹೀರಾತು ರಂಗದ ಇತಿಹಾಸದಲ್ಲೇ ಐಕಾನಿಕ್ ಎನಿಸಿಕೊಂಡ ಆ ಸಾಲುಗಳು:

“ಮೆಲೋಡಿ ಇತ್ನಿ ಚಾಕೊಲೇಟಿ ಕ್ಯೂನ್ ಹೈ?” (ಮೆಲೋಡಿ ಇಷ್ಟೊಂದು ಚಾಕೊಲೇಟಿ ಯಾಕಿದೆ?)
ಉತ್ತರ: “ಮೆಲೋಡಿ ಖಾವೋ, ಖುದ್ ಜಾನ್ ಜಾವೋ” (ಮೆಲೋಡಿ ತಿನ್ನಿ, ನೀವೇ ತಿಳ್ಕೊಳ್ಳಿ!)

ಶಾಲೆ, ಆಟದ ಮೈದಾನ, ಮ್ಯಾಜಿಕ್ ಶೋಗಳ ಹಿನ್ನೆಲೆಯಲ್ಲಿ ಮೂಡಿಬಂದ ಈ ಟಿವಿ ಜಾಹೀರಾತುಗಳು ಗ್ರಾಹಕರನ್ನು ಮರುಳು ಮಾಡಿದವು. ಚಾಕೊಲೇಟ್‌ನ ಒಳಗಿರುವ ಕ್ಯಾರಮೆಲ್ ಮತ್ತು ದಟ್ಟವಾದ ಚಾಕೊಲೇಟ್ ಸವಿಯಲು ಜನರು ಮುಗಿಬಿದ್ದರು. ಕೇವಲ 1 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುತ್ತಿದ್ದ ಈ ಚಾಕೊಲೇಟ್ ನೋಡನೋಡುತ್ತಿದ್ದಂತೆ ಭಾರತದ ಮನೆಮಾತಾಯಿತು.

ಮಕ್ಕಳು ತಮ್ಮ ಹುಟ್ಟುಹಬ್ಬದ ದಿನ ಹಂಚಲು ಮೊದಲು ಆಯ್ಕೆ ಮಾಡಿಕೊಳ್ಳುವುದೇ ಈ ಮೆಲೋಡಿ ಚಾಕೊಲೇಟ್ ಅನ್ನು. ಭಾರತದ ಹಳ್ಳಿ ಹಳ್ಳಿಗಳ ಕಿರಾಣಿ ಅಂಗಡಿಗಳ ಕೌಂಟರ್‌ ಮೇಲಿರುವ ಗಾಜಿನ ಡಬ್ಬಿಗಳಲ್ಲಿ 1 ರೂಪಾಯಿಗೆ ಸಿಗುತ್ತಿದ್ದ ಈ ಟಾಫಿ, ತನ್ನ ಕ್ಲಾಸಿಕ್ ಜಾಹೀರಾತು ಶೈಲಿ ಮತ್ತು ವಿಶಿಷ್ಟ ರುಚಿಯಿಂದಾಗಿ ಕಳೆದ 4 ದಶಕಗಳಿಂದ (40 ವರ್ಷಗಳಿಗೂ ಹೆಚ್ಚು) ಭಾರತೀಯ ಮಾರುಕಟ್ಟೆಯಲ್ಲಿ ನಂಬರ್ 1 ಸ್ಥಾನವನ್ನು ಕಾಯ್ದುಕೊಂಡಿದೆ.

ಹಳೆಯ ಜಾಹೀರಾತು ಇಲ್ಲಿದೆ ನೋಡಿ:

ಇದನ್ನೂ ಓದಿ: ಇಟಲಿ ಪ್ರಧಾನಿ ಮೆಲೋನಿ ಭೇಟಿಯಾಗಿ ಫೋಟೊಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ

#Melodi ಮೀಮ್‌:

ಕಳೆದ ಮೂರು ವರ್ಷಗಳಿಂದ ಇಂಟರ್ನೆಟ್‌ನಲ್ಲಿ ಪ್ರಧಾನಿ ಮೋದಿ ಮತ್ತು ಜಾರ್ಜಿಯಾ ಮೆಲೋನಿ ಅವರ ಹೆಸರುಗಳನ್ನು ಸೇರಿಸಿ #Melodi ಹ್ಯಾಶ್‌ಟ್ಯಾಗ್ ವೈರಲ್ ಆಗುತ್ತಲೇ ಇರುತ್ತದೆ. 2023 ರ ದುಬೈ COP28 ಶೃಂಗಸಭೆಯಲ್ಲಿ ಮೆಲೋನಿ ಅವರು ಮೋದಿಯವರೊಂದಿಗೆ ಸೆಲ್ಫಿ ಹಂಚಿಕೊಂಡು “Good friends at COP28 #Melodi” ಎಂದು ಬರೆದಾಗಿನಿಂದ ಈ ಟ್ರೆಂಡ್ ಶುರುವಾಗಿತ್ತು.

ಪ್ರಧಾನಿ ಮೋದಿ ಅವರು ಕೇವಲ ರಾಜತಾಂತ್ರಿಕ ಸಂಬಂಧಗಳನ್ನು ಗಟ್ಟಿಗೊಳಿಸುವುದಲ್ಲದೆ, ಇಂಟರ್ನೆಟ್‌ನ ಟ್ರೆಂಡ್ ಬಗ್ಗೆಯೂ ಅಪ್‌ಡೇಟ್ ಆಗಿರುತ್ತಾರೆ ಎಂಬುದಕ್ಕೆ ಇಟಲಿ ಪ್ರಧಾನಿಗೆ ಅವರು ನೀಡಿದ ‘ಮೆಲೋಡಿ’ ಗಿಫ್ಟ್ ಸಾಕ್ಷಿಯಾಗಿದೆ. ಭಾರತದ ಹೆಮ್ಮೆಯ ಬ್ರ್ಯಾಂಡ್ ಹೇಗೆ ಜಾಗತಿಕವಾಗಿ ಸಾಂಸ್ಕೃತಿಕ ಮತ್ತು ರಾಜತಾಂತ್ರಿಕ ಸಂವಾದಗಳ ಭಾಗವಾಗಬಲ್ಲವು ಎಂಬುದಕ್ಕೆ ಪಾರ್ಲೆ ಮೆಲೋಡಿ ಈಗ ಅತ್ಯುತ್ತಮ ಉದಾಹರಣೆಯಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗೆ ಕೆಲಸಕ್ಕೆ ಬಂದ ತುಂಬು ಗರ್ಭಿಣಿ ದೀಪಿಕಾ ಪಡುಕೋಣೆ; ವಿಡಿಯೋ ಲೀಕ್ – Kannada News | Deepika Padukone ad shoot in Bengaluru leaked BTS video goes viral

ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಸಿನಿರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಗರ್ಭಿಣಿ (Pregnant) ಆಗಿದ್ದರೂ ಕೂಡ ಅವರು ತಮ್ಮ ವೃತ್ತಿಪರ ಕೆಲಸಗಳಿಗೆ ಯಾವುದೇ ಬ್ರೇಕ್ ಹಾಕದೇ ಬ್ಯಾಕ್ ಟು ಬ್ಯಾಕ್ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಶಾರುಖ್ ಖಾನ್ ಅಭಿನಯದ ‘ಕಿಂಗ್’ ಸಿನಿಮಾದ ಚಿತ್ರೀಕರಣವನ್ನು ಮುಗಿಸಿ ಭಾರತಕ್ಕೆ ಮರಳಿರುವ ದೀಪಿಕಾ, ಈಗ ನೇರವಾಗಿ ಬೆಂಗಳೂರಿನಲ್ಲಿ ಜಾಹೀರಾತು ಶೂಟಿಂಗ್ ಸೆಟ್‌ಗೆ ಹಾಜರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಜಾಹೀರಾತಿನ ಶೂಟಿಂಗ್‌ನ ತೆರೆಹಿಂದಿನ ವಿಡಿಯೋವೊಂದು ಆನ್‌ಲೈನ್‌ನಲ್ಲಿ ಲೀಕ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ಕ್ಲಾಸಿಕ್ ಬ್ಲೂ ಕಲರ್ ಪ್ಯಾಂಟ್‌ಸೂಟ್ ಧರಿಸಿ ಅತ್ಯಂತ ಸ್ಟೈಲಿಶ್ ಹಾಗೂ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಗರ್ಭಿಣಿಯಾಗಿದ್ದರೂ ಸಹ ಅವರು ಕ್ಯಾಮೆರಾ ಮುಂದೆ ಅತ್ಯಂತ ಸರಳವಾಗಿ ಮತ್ತು ಆಕರ್ಷಕವಾಗಿ ನೃತ್ಯದ ಹೆಜ್ಜೆಗಳನ್ನು ಹಾಕುತ್ತಿರುವುದು ಅಭಿಮಾನಿಗಳ ಮನಗೆದ್ದಿದೆ. ದಕ್ಷಿಣ ಆಫ್ರಿಕಾದಲ್ಲಿ ‘ಕಿಂಗ್’ ಚಿತ್ರಕ್ಕೆ ಶೂಟಿಂಗ್ ಮುಗಿಸಿದ ತಕ್ಷಣವೇ ಬೆಂಗಳೂರಿನಲ್ಲಿ ಈ ಜಾಹೀರಾತಿನ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ಈ ತಿಂಗಳ ಆರಂಭದಲ್ಲಿ, ದಕ್ಷಿಣ ಆಫ್ರಿಕಾದ ಶೂಟಿಂಗ್ ಸೆಟ್‌ಗಳಿಂದ ಲೀಕ್ ಆದ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಅಲ್ಲಿ ದೀಪಿಕಾ ಮತ್ತು ಶಾರುಖ್ ಖಾನ್ ಅದ್ದೂರಿಯಾಗಿ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್‌ಪ್ರೆಸ್’, ‘ಹ್ಯಾಪಿ ನ್ಯೂ ಇಯರ್’, ‘ಪಠಾಣ್’ ಮತ್ತು ‘ಜವಾನ್’ ಚಿತ್ರಗಳ ನಂತರ ಶಾರುಖ್ ಜೊತೆ ದೀಪಿಕಾ ನಟಿಸುತ್ತಿರುವ 6ನೇ ಸಿನಿಮಾ ಇದಾಗಿದೆ.

ವೈರಲ್ ವಿಡಿಯೋ:

ಕೇಪ್ ಟೌನ್‌ನಲ್ಲಿ ನಡೆದ ಈ ಶೂಟಿಂಗ್ ವೇಳೆ ಪತಿ ರಣವೀರ್ ಸಿಂಗ್ ಮತ್ತು ಮಗಳು ದುವಾ ಕೂಡ ದೀಪಿಕಾ ಜೊತೆಗಿದ್ದರು. ಶೂಟಿಂಗ್ ಬಿಡುವಿನ ವೇಳೆಯಲ್ಲಿ ಮಗಳನ್ನು ರಣವೀರ್ ಸಿಂಗ್ ನೋಡಿಕೊಳ್ಳುತ್ತಿರುವ ಮತ್ತು ದೀಪಿಕಾ ಜೊತೆ ಸಮಯ ಕಳೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಇದನ್ನೂ ಓದಿ: ಗರ್ಭಿಣಿ ಆದ ನಂತರವೂ ಸಾಹಸ ದೃಶ್ಯಗಳ ಚಿತ್ರೀಕರಣ ಮಾಡಿದ ದೀಪಿಕಾ ಪಡುಕೋಣೆ

‘ಕಿಂಗ್’ ಸಿನಿಮಾ ಮಾತ್ರವಲ್ಲದೆ, ದೀಪಿಕಾ ಪಡುಕೋಣೆ ಅವರ ಕೈಯಲ್ಲಿ ಮತ್ತೊಂದು ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ಇದೆ. ಖ್ಯಾತ ನಿರ್ದೇಶಕ ಅಟ್ಲಿ ನಿರ್ದೇಶನದ ‘ರಾಕಾ’ ಚಿತ್ರದಲ್ಲಿ ಅವರು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಮುಖ್ಯ ಭೂಮಿಕೆಯಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಈ ಎಲ್ಲ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನಲ್ಲಿ 1.85 ಕೆಜಿ ಚಿನ್ನ ಕಳ್ಳತನ: ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ ನೋಡಿ

ಬೆಂಗಳೂರು, (ಮೇ 20): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಪಕ್ಕಾ ಸಿನಿಮೀಯ ಶೈಲಿಯಲ್ಲಿ ಖದೀಮರು ಬರೋಬ್ಬರಿ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು  ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ. ಹೋಲ್‌ಸೇಲ್ ದರದಲ್ಲಿ ಚಿನ್ನ ಖರೀದಿಸುವುದಾಗಿ ನಂಬಿಸಿ, ಮಲ್ಲೇಶ್ವರಂನ ನಗರತ್ ಪೇಟೆಯ ಪ್ರಸಿದ್ಧ ಮೆಹ್ತಾ ಜ್ಯುವೆಲ್ಲರಿಯಿಂದ 1.85 ಕೆಜಿ ಚಿನ್ನಾಭರಣಗಳನ್ನು ದೋಚಿ ಮೂವರು ಖದೀಮರು ಪರಾರಿಯಾಗಿದ್ದಾರೆ. ಇನ್ನು ಖದೀಮರು ಬ್ಯಾಗ್ ನಲ್ಲಿ ಚಿನ್ನ ತುಂಬಿಕೊಂಡು ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಮೆಹ್ತಾ ಜುವೆಲ್ಲರಿ ಮಾಲೀಕ ಮಹೇಂದ್ರ ಜೈನ್ ಮಲ್ಲೇಶ್ವರಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಇದು ಪಕ್ಕಾ ಸಿನಿಮೀಯ ವಂಚನೆ! ಡಿಸೈನ್ ಸೆಲೆಕ್ಟ್ ಮಾಡಿ ಫೋಟೋ ತೆಗೆಯೋ ನೆಪದಲ್ಲಿ 3 ಕೋಟಿ ರೂ. ಚಿನ್ನಾಭರಣ ದೋಚಿ ಖದೀಮರು ಪರಾರಿ

Source link

ತಮಿಳು ಚಿತ್ರರಂಗದಲ್ಲಿ ವಿಜಯ್ ಸ್ಥಾನ ತುಂಬುವ ನಟ ಯಾರು? – Kannada News | Who will replace Thalapathy Vijay in Tamil movie industry

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ (Thalapathy Vijay) ತಮಿಳುನಾಡಿನ ಸಿಎಂ ಆಗಿದ್ದಾರೆ. ಸಿಎಂ ಆಗುವ ಮುಂಚೆಯೇ ಅವರು ಚಿತ್ರರಂಗದಿಂದ ನಿವೃತ್ತಿ ಘೋಷಿಸಿ ಆಗಿತ್ತು. ‘ಜನ ನಾಯಗನ್’ ನನ್ನ ಕೊನೆಯ ಸಿನಿಮಾ ಎಂದು ವಿಜಯ್ ಹೇಳಿ ಬಿಟ್ಟಿದ್ದರು. ವಿಜಯ್ ಅವರು ಸಿಎಂ ಆಗಿ ಬ್ಯುಸಿ ಆಗಿದ್ದಾರೆ. ಆದರೆ ವಿಜಯ್ ಸಿನಿಮಾ ರಂಗದಿಂದ ನಿವೃತ್ತಿ ಘೋಷಿಸಿರುವುದು ತಮಿಳು ಚಿತ್ರರಂಗಕ್ಕೆ ಭಾರಿ ದೊಡ್ಡ ನಷ್ಟವಾಗಿದೆ. ವಿಜಯ್, ಸಿನಿಮಾಗಳು ಕೋಟ್ಯಂತರ ರೂಪಾಯಿ ಬ್ಯುಸಿನೆಸ್ ಮಾಡುವ ಜೊತೆಗೆ ಸಾವಿರಾರು ಕುಟುಂಬಗಳಿಗೆ ಉದ್ಯೋಗ, ಆದಾಯಕ್ಕೆ ದಾರಿ ಆಗಿದ್ದವು. ವಿಜಯ್ ನಿವೃತ್ತಿಯಿಂದ ಖಾಲಿ ಆಗಿರುವ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ವಿಜಯ್ ನಿರ್ಗಮನದ ಬಳಿಕ ತಮಿಳು ಚಿತ್ರರಂಗದಲ್ಲಿ ಅವರ ಸ್ಥಾನ ತುಂಬುವ ನಟ ಯಾರು ಎಂಬ ಪ್ರಶ್ನೆಗೆ ಮೂವರು ನಾಯಕರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಅದರಲ್ಲಿ ಪ್ರಮುಖವಾದ ಹೆಸರು ಶಿವಕಾರ್ತಿಕೇಯನ್ ಅವರದ್ದು. ಶಿವಕಾರ್ತಿಕೇಯನ್ ಒಳ್ಳೆಯ ನಟರಾಗಿದ್ದು, ಮಾಸ್ ಸಿನಿಮಾಗಳಲ್ಲಿ ಅವರಿಗಿನ್ನೂ ದೊಡ್ಡ ಯಶಸ್ಸು ಸಿಕ್ಕಿಲ್ಲ. ಆದರೆ ಮಾಸ್ ಸಿನಿಮಾಗಳಲ್ಲಿಯೂ ನಟಿಸಬಲ್ಲ ನಟ. ವಿಜಯ್ ಅವರ ‘ಗೋಟ್’ ಸಿನಿಮಾನಲ್ಲಿ, ಶಿವಕಾರ್ತಿಕೇಯನ್ ಅವರನ್ನು ವಿಜಯ್​​ರ ಉತ್ತರಾಧಿಕಾರಿ ಎಂಬಂತೆ ತೋರಿಸಲಾಗಿದೆ. ವಿಜಯ್ ಅವರಂತೆಯೇ ಮಾಸ್, ಕಾಮಿಡಿ, ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾಗಳನ್ನು ಮಾಡಬಲ್ಲ ಮುಖಲಕ್ಷಣ, ನಟನಾ ಪ್ರತಿಭೆ ಶಿವಕಾರ್ತಿಕೇಯನ್ ಅವರಿಗೆ ಇದೆ. ಆದರೆ ವಿಜಯ್ ರೀತಿ ಒಳ್ಳೆಯ ಡ್ಯಾನ್ಸರ್ ಅಲ್ಲ ಶಿವಕಾರ್ತಿಕೇಯನ್.

ಇದನ್ನೂ ಓದಿ:ಯಾವುದೇ ಕ್ಷಣದಲ್ಲಿ ವಿಜಯ್ ಸರ್ಕಾರ ಪತನವಾಗಬಹುದು ಎಂದ ಸ್ಟಾಲಿನ್!

ಇದೇ ರೀತಿ ನಟ ಸೂರ್ಯ ಹೆಸರು ಸಹ ಗಟ್ಟಿಯಾಗಿಯೇ ಕೇಳಿ ಬರುತ್ತಿದೆ. ವಿಜಯ್ ಹಾಗೂ ಸೂರ್ಯ ಬಹುತೇಕ ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಬಂದವರು. ಸೂರ್ಯ ಈಗಾಗಲೇ ಸ್ಟಾರ್ ನಟ. ಆದರೂ ವಿಜಯ್ ಅವರಿಗೆ ಇರುವಷ್ಟು ಮಾಸ್ ಅಭಿಮಾನಿಗಳು ಸೂರ್ಯಾಗಿಲ್ಲ. ಆದರೆ ಸೂರ್ಯ, ವಿಜಯ್ ರೀತಿ ಮಾಸ್ ಆಗಿ ಕಾಣಿಸಿಕೊಳ್ಳಬಲ್ಲ ಛಾತಿ ಉಳ್ಳ ನಟರೇ ಆಗಿದ್ದಾರೆ. ಈಗ ವಿಜಯ್ ನಿರ್ಗಮನದಿಂದ ಉಂಟಾಗಿರುವ ನಿರ್ವಾತವನ್ನು ಸರಿಯಾಗಿ ತುಂಬಬಲ್ಲ ನಟ ಎಂದರೆ ಅದು ಸೂರ್ಯ ಎನ್ನಲಾಗುತ್ತಿದೆ.

ಇನ್ನು ಕೆಲವರು ಸೂರ್ಯ ಸಹೋದರ ಕಾರ್ತಿ, ವಿಜಯ್ ಅವರ ಸ್ಥಾನ ತುಂಬಬಲ್ಲ ನಟ ಎನ್ನುತ್ತಿದ್ದಾರೆ. ಅಣ್ಣನಂತೆ ಕಾರ್ತಿ ಸಹ ನಟನಾ ಪ್ರತಿಭೆಯುಳ್ಳ. ಯಾವುದೇ ರೀತಿಯ ಪಾತ್ರಕ್ಕೂ ಜೀವ ತುಂಬಬಲ್ಲರು. ವಿಜಯ್ ಸ್ಥಾನವನ್ನು ತುಂಬಬಲ್ಲ ನಟ ಕಾರ್ತಿ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ಕಾರ್ತಿಗಿಂತಲೂ, ಹೆಚ್ಚು ಸೂಟೆಬಲ್ ವ್ಯಕ್ತಿ ಎಂದರೆ ಅದು ಅವರ ಅಣ್ಣ ಸೂರ್ಯ ಎಂದೇ ಹೇಳಬೇಕು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಇದು ನಾಯಕತ್ವವಲ್ಲ, ನೌಟಂಕಿ’: ಇಟಲಿ ಪ್ರಧಾನಿಗೆ ಮೋದಿ ಗಿಫ್ಟ್​​ ಬಗ್ಗೆ ರಾಹುಲ್​​ ಗಾಂಧಿ ಟೀಕೆ – Kannada News | This Is Not Leadership, It’s A Farce: Rahul Gandhi Slams Modi’s Chocolate Gift To Italian PM Meloni

ಪ್ರಧಾನಿ ಮೋದಿ ವಿರುದ್ಧ ರಾಹುಲ್​​ ವಾಗ್ದಾಳಿ

ನವದೆಹಲಿ/ ರಾಯ್‌ಬರೇಲಿ, ಮೇ 20: ಬಿಜೆಪಿ, ಆರೆಸ್ಸೆಸ್​​, ನರೇಂದ್ರ ಮೋದಿ (Narendra Modi), ಅಮಿತ್​​ ಶಾರಿಂದ ಹಿಡಿದು ಅದಾನಿ ವಿರುದ್ಧವೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್​​ ಗಾಂಧಿ (Rahul Gandhi) ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೋಮ್ ಪ್ರವಾಸದಲ್ಲಿರುವ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರಿಗೆ ಉಡುಗೊರೆಯಾಗಿ ಮೆಲೋಡಿ ಚಾಕೊಲೇಟ್ ನೀಡಿದ ವಿಚಾರದ ಬಗ್ಗೆಯೂ ಟೀಕಿಸಿದ ಅವರು ಇದು ನಾಯಕತ್ವವಲ್ಲ, ನೌಟಂಕಿ ಎಂದು ತಿವಿದಿದ್ದಾರೆ.

ಎಕ್ಸ್​​ ಪೋಸ್ಟ್​​ ಮಾಡಿ ರಾಹುಲ್​​ ಕಿಡಿ

ಈ ಕುರಿತು ಎಕ್ಸ್ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ದೇಶದಲ್ಲಿ ರೈತರು, ಯುವಕರು, ಮಹಿಳೆಯರು, ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳು ಸಂಕಷ್ಟದಲ್ಲಿರುವಾಗ ಪ್ರಧಾನಿ ಮೋದಿ ನಗುತ್ತಾ ರೀಲ್ಸ್ ಮಾಡುತ್ತಿದ್ದಾರೆ. ದೇಶದ ಮೇಲೆ ಆರ್ಥಿಕ ಸಂಕಷ್ಟದ ಮಬ್ಬು ಕವಿದಿದೆ. ಆದರೆ ನಮ್ಮ ಪ್ರಧಾನಿ ಇಟಲಿಯಲ್ಲಿ ಸಿಹಿತಿಂಡಿ ಹಂಚುತ್ತಿದ್ದಾರೆ. ಪ್ರಧಾನಿ ನಗುತ್ತಾ ರೀಲ್ಸ್ ಮಾಡುತ್ತಿದ್ದರೆ, ಬಿಜೆಪಿ ನಾಯಕರು ಚಪ್ಪಾಳೆ ತಟ್ಟುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ, RSS ವಿರುದ್ಧ ವಾಗ್ದಾಳಿ

ಮತ್ತೊಂದೆಡೆ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದ ಬಹುಜನ ಸ್ವಾಭಿಮಾನ ಸಭೆಯಲ್ಲಿ ಮಾತನಾಡಿದ ರಾಹುಲ್​​, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಭೆಯಲ್ಲಿ ಜನರು ಚಪ್ಪಾಳೆ ತಟ್ಟುತ್ತಿದ್ದುದನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ನೀವು ಎಲ್ಲರೂ ಚಪ್ಪಾಳೆ ತಟ್ಟುತ್ತೀರಿ. ಆದರೆ ಆರ್‌ಎಸ್‌ಎಸ್ ಸದಸ್ಯರು ನಿಮ್ಮ ಕಣ್ಣೆದುರೇ ಸಂವಿಧಾನವನ್ನು ಹರಿದು ಎಸೆದಾಗ ಮೌನವಾಗಿರುತ್ತೀರಿ. ಈ ಸಂವಿಧಾನದಲ್ಲಿ ನಿಮ್ಮ ಧ್ವನಿ ಮತ್ತು ನಿಮ್ಮ ರಕ್ತವಿದೆ. ಅದನ್ನು ಉಳಿಸುವುದು ನಿಮ್ಮ ಜವಾಬ್ದಾರಿ ಎಂದಿದ್ದಾರೆ.

ಇದನ್ನೂ ಓದಿ: ಇಟಲಿ ಪ್ರಧಾನಿ ಮೆಲೋನಿ ಭೇಟಿಯಾಗಿ ಫೋಟೊಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ

ಮೋದಿ ವಿದೇಶ ಪ್ರವಾಸ ಟೀಕಿಸಿದ ರಾಹುಲ್​​

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ವಿದೇಶ ಪ್ರವಾಸ ಕುರಿತ ಹೇಳಿಕೆಗಳನ್ನೂ ಟೀಕಿಸಿದ ಅವರು, ಪ್ರಧಾನಿ ಜನರಿಗೆ ವಿದೇಶ ಪ್ರವಾಸ ಮಾಡಬೇಡಿ ಎಂದು ಹೇಳುತ್ತಾರೆ. ಚಿನ್ನ ಖರೀದಿಸಬೇಡಿ ಎನ್ನುತ್ತಾರೆ. ಎಲೆಕ್ಟ್ರಿಕ್ ವಾಹನ ಖರೀದಿಸಿ ಎನ್ನುತ್ತಾರೆ. ಆದರೆ ತಾವೇ ಸಾವಿರಾರು ಕೋಟಿ ರೂ. ಮೌಲ್ಯದ ವಿಮಾನಗಳಲ್ಲಿ ವಿದೇಶ ಪ್ರವಾಸ ಮಾಡುತ್ತಾರೆ. ದೇಶದ ಮೇಲೆ ಆರ್ಥಿಕ ಚಂಡಮಾರುತ ಸಮೀಪಿಸುತ್ತಿದೆ. ಕೆಲವೇ ತಿಂಗಳಲ್ಲಿ ದರ ಏರಿಕೆ, ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆಗಳು ಎಲ್ಲಿ ಹೋಗುತ್ತವೆ ಎಂಬುದನ್ನು ನೀವು ನೋಡುತ್ತೀರಿ. ಮುಂದೆ ರೈತರಿಗೆ ರಸಗೊಬ್ಬರವೂ ಸಿಗದ ಪರಿಸ್ಥಿತಿ ಬರಬಹುದು ಎಂದು ರಾಹುಲ್ ಗಾಂಧಿ ಇದೇ ವೇಳೆ ಎಚ್ಚರಿಸಿದ್ದಾರೆ.

‘ಸಂವಿಧಾನದ ಮೇಲೆ ದಾಳಿ’

ಪ್ರಧಾನಿ ಮೋದಿ, ಅಮಿತ್ ಶಾ, ಬಿಜೆಪಿ, ಆರ್‌ಎಸ್‌ಎಸ್‌ ದೇಶದ್ರೋಹಿಗಳಾಗಿದ್ದು, ರಾಷ್ಟ್ರದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ-ಆರ್‌ಎಸ್‌ಎಸ್ ಸಂವಿಧಾನದ ಮೇಲೆ ದಾಳಿ ಮಾಡಿದೆ. ಪಂಚ ರಾಜ್ಯಗಳ ಚುನಾವಣೆ ಮೊದಲು ಇಂಧನ ಕೊರತೆ ಇಲ್ಲ ಅಂದಿದ್ರಿ. ಪೆಟ್ರೋಲ್‌, ಡೀಸೆಲ್ ದರ ಹೆಚ್ಚಳವಾಗಲ್ಲ ಅಂತಾ ಹೇಳಿದ್ರಿ. ಆದರೆ ಈಗ ದೇಶದಲ್ಲಿ ಪೆಟ್ರೋಲ್‌, ಡೀಸೆಲ್ ದರ ಹೆಚ್ಚಳವಾಗುತ್ತಿದೆ. ಅಂಬಾನಿ ರಷ್ಯಾದಿಂದ ಪೆಟ್ರೋಲ್ ಖರೀದಿಸಿ ಹೊರಗೆ ಮಾರಾಟ ಮಾಡ್ತಾರೆ. ಆ ಹಣದಿಂದ ಪ್ರಧಾನಿ ನರೇಂದ್ರ ಮೋದಿಗೆ ಹಣಕಾಸು ಒದಗಿಸುತ್ತಾರೆ. ಮೋದಿ ಭಾರತದ ಆರ್ಥಿಕ ವ್ಯವಸ್ಥೆಯನ್ನ ಅಂಬಾನಿ, ಅದಾನಿ, ಅಮೆರಿಕಕ್ಕೆ ಹಸ್ತಾಂತರಿಸಿದ್ದು, ಅವರ ಸರ್ಕಾರ ನಿಮ್ಮನ್ನು ಉಳಿಸಲು ಸಾಧ್ಯವಿಲ್ಲ. ಅವರು ಅಳುತ್ತಾರೆ, ಅದು ನನ್ನ ತಪ್ಪಲ್ಲ ಅಂತಾರೆ. ಆದರೆ ಪ್ರಧಾನಿ ಮೋದಿ, ಅಮಿತ್ ಶಾ, ಆರ್‌ಎಸ್‌ಎಸ್‌ನವರದ್ದೇ ತಪ್ಪು ಎಂದು ರಾಹುಲ್​​ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version