ಬ್ಯಾಂಕಾಕ್: ರೈಲ್ವೆ ಕ್ರಾಸಿಂಗ್ನಲ್ಲಿ ಬಸ್ ಹಾಗೂ ಕಾರಿಗೆ ರೈಲು ಡಿಕ್ಕಿ, ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯ ವೈರಲ್!
ಬ್ಯಾಂಕಾಕ್ನಲ್ಲಿ ನಡೆದ ಭೀಕರ ರೈಲು ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಇವಾಗಿವೆ. ಇಲ್ಲಿನ ಜನನಿಬಿಡ ರೈಲ್ವೆ ಕ್ರಾಸಿಂಗ್ ಒಂದರಲ್ಲಿ ಸಿಗ್ನಲ್ ಹಾಗೂ ಬ್ಯಾರಿಕೇಡ್ಗಳನ್ನು ನಿರ್ಲಕ್ಷಿಸಿ ವಾಹನಗಳು ಹಳಿ ದಾಟಲು ಯತ್ನಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹಳಿಯ ಮೇಲಿದ್ದ ಹಳದಿ ಬಣ್ಣದ ದೊಡ್ಡ ಬಸ್ ಹಾಗೂ ಎಸ್ಯುವಿ (SUV) ಕಾರಿಗೆ ವೇಗವಾಗಿ ಬಂದ ಸರಕು ಸಾಗಣೆ ರೈಲು ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಬಸ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಹಳಿಯ ಪಕ್ಕದಲ್ಲಿದ್ದ ದ್ವಿಚಕ್ರ ವಾಹನ ಸವಾರರು ಹಾಗೂ ಇತರ ವಾಹನಗಳ…