ಮೊದಲಿಗೆ ವರ್ಕ್ ಫ್ರಂ ಹೋಮ್, ನಂತರ ಬೆಳ್ಳಂಬೆಳಗ್ಗೆ ಇಮೇಲ್ ಶಾಕ್; ಮೆಟಾದಲ್ಲಿ 8,000 ಮಂದಿಗೆ ಕೆಲಸದಿಂದ ಕೊಕ್ – Kannada News | Meta Layoffs: 8,000 Employees Sacked by Email as AI Reshapes Workforce
ನವದೆಹಲಿ, ಮೇ 20: ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಆ್ಯಪ್ಗಳ ಮಾತೃಸಂಸ್ಥೆಯಾದ ಮೆಟಾದ (Meta) ಶೇ. 10ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ವರದಿ ಪ್ರಕಾರ ಸುಮಾರು 8,000 ಉದ್ಯೋಗಿಗಳನ್ನು ಮೆಟಾ ಲೇ ಆಫ್ ಮಾಡಿದೆ. ಎಚ್ಆರ್ ಚೇಂಬರ್ಗೆ ಕರೆದು ಒಬ್ಬೊಬ್ಬರಿಗೂ ಪಿಂಕ್ ಸ್ಲಿಪ್ ಕೊಡುವ ಬದಲು ಮೆಟಾ ಬೇರೆಯದೇ ತಂತ್ರ ಅನುಸರಿಸಿದೆ. ಎಲ್ಲಾ ಉದ್ಯೋಗಿಗಳಿಗೂ ವರ್ಕ್ ಫ್ರಂ ಹೋಮ್ ಕೊಟ್ಟು, ನಂತರ 8,000 ಮಂದಿಗೆ ಇಮೇಲ್ ಮೂಲಕವೇ ಲೇ ಆಫ್ ಮಾಡಿದೆ. ಬೆಳಗ್ಗೆ 4 ಗಂಟೆಗೆ ಲೇ ಆಫ್…