Headlines

“ನಿಮ್ಮ ಕಾಲಿಗೆ ಬೀಳ್ತೀವಿ, ನಮ್ಮೂರಲ್ಲಿ ಸಾರಾಯಿ ಬಂದ್ ಮಾಡಿಸಿ”: ಶಾಸಕರ ಮುಂದೆ ಕಣ್ಣೀರು ಹಾಕಿದ ಮಹಿಳೆಯರು

ಬೀದರ್, ಮಾ.20: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನೀಲಕಂಠವಾಡಿ ಗ್ರಾಮದಲ್ಲಿ ಮದ್ಯದ ಹಾವಳಿ ಮಿತಿಮೀರಿದೆ. ಗ್ರಾಮಕ್ಕೆ ಭೇಟಿ ನೀಡಿದ್ದ ಬಸವಕಲ್ಯಾಣ ಶಾಸಕ ಶರಣು ಸಲಗರ್ ಅವರ ಮುಂದೆ ನೂರಾರು ಮಹಿಳೆಯರು ಕಣ್ಣೀರಿಡುತ್ತಾ, ಗ್ರಾಮದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಅಂಗಲಾಚಿದ್ದಾರೆ. ಗ್ರಾಮದಲ್ಲಿ ಮದ್ಯಪಾನದ ಚಟಕ್ಕೆ ಬಿದ್ದು ಕಾಲೇಜು ಯುವಕರು ಸೇರಿದಂತೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. “ನಮ್ಮೂರಿನಲ್ಲಿ ಅನೇಕ ಮಹಿಳೆಯರು ಈಗಾಗಲೇ ವಿಧವೆಯರಾಗಿದ್ದಾರೆ, ಇನ್ನು ಮುಂದಾದರೂ ಯುವಕರ ಭವಿಷ್ಯ ಕಾಪಾಡಿ” ಎಂದು ಮಹಿಳೆಯರು ಶಾಸಕರ ಮುಂದೆ ಅತ್ತಿದ್ದಾರೆ. ಗ್ರಾಮದ ಕಿರಾಣಿ…

Read More

‘ಧುರಂಧರ್ 2’ ಚಿತ್ರಕ್ಕೆ ಆ ಒಂದು ದಾಖಲೆಯನ್ನು ಟಚ್ ಮಾಡೋಕೂ ಆಗಿಲ್ಲ

‘ಧುರಂಧರ್ 2’ ಸಿನಿಮಾ (Dhurandhar 2 Movie) ಮೊದಲ ದಿನದ ಓಪನಿಂಗ್ ಕಲೆಕ್ಷನ್ ಲೆಕ್ಕ ಸಿಕ್ಕಿದೆ. ಈ ಚಿತ್ರ ಬರೋಬ್ಬರಿ 236 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದಾಗ್ಯೂ ಒಂದು ದೊಡ್ಡ ದಾಖಲೆಯನ್ನು ಬ್ರೇಕ್ ಮಾಡಲು ಸಿನಿಮಾ ವಿಫಲವಾಗಿದೆ. ‘ಧುರಂಧರ್ 2’ ಚಿತ್ರದ ಮೊದಲ ದಿನದ ಕಲೆಕ್ಷನ್ 300 ಕೋಟಿ ರೂಪಾಯಿ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಇದಕ್ಕೆ ಸಿನಿಮಾ ತಂಡ ಮಾಡಿದ ತಪ್ಪೇ ಕಾರಣ. ‘ಧುರಂಧರ್ 2’ ಸಿನಿಮಾ ಮೊದಲ ದಿನ ಅಬ್ಬರದ…

Read More

ಕೈಲಾದೇವಿ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ ವಾಹನ ಅಪಘಾತ, ಐವರು ಸಾವು, ಮೂವರಿಗೆ ಗಾಯ

ಆಗ್ರಾ, ಮಾರ್ಚ್​ 20: ಆಗ್ರಾದಲ್ಲಿ ಭಕ್ತರಿಂದ ತುಂಬಿದ್ದ ಬೊಲೆರೊ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ಮೃತರಲ್ಲಿ ಪತಿ, ಮಗ, ಸೊಸೆ ಮತ್ತು ಮೊಮ್ಮಗಳು ಸೇರಿದ್ದಾರೆ. ಈ ಮಧ್ಯೆ, ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಅಪಘಾತದ ನಂತರ, ಗ್ರಾಮಸ್ಥರು ಕಾರಿನ ಗಾಜುಗಳನ್ನು ಒಡೆದು ಎಲ್ಲರನ್ನೂ ಹೊರಗೆಳೆದರು. ಇಟಾವಾದ ಕುಟುಂಬವು ರಾಜಸ್ಥಾನದ ಕೈಲಾ ದೇವಿ ದೇವಸ್ಥಾನಕ್ಕೆ ಹೋಗಿತ್ತು. ತಡರಾತ್ರಿ ಹಿಂತಿರುಗುತ್ತಿದ್ದಾಗ ಚಿತ್ರಹಾತ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ವೈದ್ಯರು…

Read More

ಮಂಡ್ಯದಲ್ಲಿ ಜನರ ನಿದ್ದೆಗೆಡಿಸಿದ ಚಿರತೆ ಕೊನೆಗೂ ಸೆರೆ: ಬೋನಿಗೆ ಬಿದ್ದ ಚಿರತೆ ನೋಡಲು ಮುಗಿಬಿದ್ದ ಜನ

ಮಂಡ್ಯ, ಮಾರ್ಚ್ 20: ಮಂಡ್ಯ ಜಿಲ್ಲೆಯಾದ್ಯಂತ ಚಿರತೆ ಹಾವಳಿ ಹೆಚ್ಚಾಗಿದ್ದು, ಅದರಲ್ಲೂ ಮಂಡ್ಯ ಹೊರವಲಯದ ಭೂತನ ಹೊಸೂರು ಗ್ರಾಮದಲ್ಲಿ ಜನರಲ್ಲಿ ಆತಂಕ ಮನೆ ಮಾಡಿತ್ತು. ಕಬ್ಬಿನ ಗದ್ದೆಯಲ್ಲಿ ಇತ್ತೀಚೆಗೆ ಮೂರು ಚಿರತೆ ಮರಿಗಳು ಕಾಣಿಸಿದ ನಂತರ, ತಾಯಿ ಚಿರತೆಯ ಹಾವಳಿ ಹೆಚ್ಚಾಗಿತ್ತು. ಇದರಿಂದ ಗ್ರಾಮಸ್ಥರಿಗೆ ಜಮೀನುಗಳಿಗೆ ಹೋಗಲು ಭಯ ಕಾಡುತ್ತಿತ್ತು, ಅಲ್ಲದೆ ಸಾಕುಪ್ರಾಣಿಗಳ ಮೇಲೆ ಚಿರತೆ ದಾಳಿ ನಡೆಸುತ್ತಿತ್ತು. ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಬೋನು ಇರಿಸಿದ್ದರು. ಈಗ ಮರಿಗಳನ್ನು ಹುಡುಕಿಕೊಂಡು…

Read More

ಶ್ರೀದೇವಿಯ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದ ಪತಿ ಮತ್ತು ಮಕ್ಕಳು

ದಿವಂಗತ ನಟಿ ಶ್ರೀದೇವಿ (Sridevi) ಅವರಿಗೆ ಸೇರಿದ ಚೆನ್ನೈನ ಇಸ್ಟ್ ಕೋಸ್ಟ್ ರೋಡ್‌ನಲ್ಲಿರುವ ಸುಮಾರು 4.7 ಎಕರೆ ಜಮೀನು ಈಗ ವಿವಾದದ ವಿಷಯವಾಗಿದೆ. ಜಮೀನಿನ ಮಾಲೀಕತ್ವಕ್ಕಾಗಿ ಕಾನೂನು ಹೋರಾಟ ನಡೆಯುತ್ತಿದ್ದು, ಇದೀಗ ಶ್ರೀದೇವಿಯ ಪತಿ ನಿರ್ಮಾಪಕ ಬೋನಿ ಕಪೂರ್ ಮತ್ತು ಮಕ್ಕಳಾದ ಜಾನ್ಹವಿ ಕಪೂರ್, ಖುಷಿ ಕಪೂರ್ ಅವರುಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಆಸ್ತಿಯ ಮಾಲೀಕತ್ವಕ್ಕಾಗಿ ಮತ್ತೊಬ್ಬರಿಂದ ಸಲ್ಲಿಸಲಾಗಿರುವ ಅರ್ಜಿಗಳನ್ನು ರದ್ದು ಮಾಡಬೇಕು ಎಂದು ಅಪ್ಪ-ಮಕ್ಕಳು ಮನವಿ ಮಾಡಿದ್ದು, ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಎಂಸಿ ಶಿವಕಾಮಿ…

Read More

Global Shiva Temples: ಭಾರತದ ಹೊರಗೂ ಮೊಳಗುತ್ತಿದೆ ಹರಹರ ಮಹಾದೇವ ಘೋಷ; ಇವು ಜಗತ್ತಿನ ಪ್ರಸಿದ್ಧ 5 ಶಿವ ದೇವಾಲಯಗಳು

ಶಿವ ಎಂದರೆ ಅನಂತ, ಶಿವ ಎಂದರೆ ವಿಶ್ವವ್ಯಾಪಿ. ಭಾರತದ ಉದ್ದಗಲಕ್ಕೂ ನಾವು ಶಿವನ ಅಸಂಖ್ಯಾತ ದೇವಾಲಯಗಳನ್ನು ಕಾಣುತ್ತೇವೆ. ಆದರೆ ಪರಶಿವನ ಮಹಿಮೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಸಮುದ್ರದಾಚೆಗಿನ ದೇಶಗಳಲ್ಲಿಯೂ ನೂರಾರು ವರ್ಷಗಳ ಇತಿಹಾಸವಿರುವ, ಅದ್ಭುತ ಶಿಲ್ಪಕಲೆ ಹೊಂದಿರುವ ಶಿವಾಲಯಗಳಿವೆ. ಇಂದಿಗೂ ಈ ವಿದೇಶಿ ನೆಲದಲ್ಲಿ ಶಿವತಾಂಡವದ ಪ್ರತಿಧ್ವನಿ ಕೇಳಿಬರುತ್ತದೆ. ನೀವು ವಿದೇಶ ಪ್ರವಾಸ ಕೈಗೊಂಡಾಗ ತಪ್ಪದೇ ಭೇಟಿ ನೀಡಲೇಬೇಕಾದ ಐದು ಪ್ರಮುಖ ಶಿವಾಲಯಗಳ ಮಾಹಿತಿ ಇಲ್ಲಿದೆ. ಪಶುಪತಿನಾಥ ದೇವಾಲಯ, ನೇಪಾಳ (ಕಠ್ಮಂಡು): ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿರುವ…

Read More

Video: ಇಸ್ರೇಲ್​​ನ ಹೈಫಾ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಕ್ಷಿಪಣಿ ದಾಳಿ

ಟೆಲ್ ಅವಿವ್, ಮಾರ್ಚ್​ 20: ಮಧ್ಯಪ್ರಾಚ್ಯದಲ್ಲಿ ಯುದ್ಧವು 21 ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿ ಗಂಟೆಯೂ ಪರಿಸ್ಥಿತಿ ನಿರಂತರವಾಗಿ ಉಲ್ಬಣಗೊಳ್ಳುತ್ತಲೇ ಇದೆ. ಇರಾನ್ ಹೈಫಾದಲ್ಲಿರುವ ಇಸ್ರೇಲ್‌ನ ಪ್ರಮುಖ ಸಂಸ್ಕರಣಾಗಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆಗಳು ಬ್ಯಾರೇಜ್ ಅನ್ನು ಸಂಪೂರ್ಣವಾಗಿ ತಡೆಯಲು ವಿಫಲವಾದವು. ಇದು ಇಸ್ರೇಲ್ ಮೇಲೆ ಇರಾನ್ ನಡೆಸಿದ ಅತಿದೊಡ್ಡ ದಾಳಿಯಾಗಿದೆ. ಹೈಫಾ ಬಂದರು ಭಾರತ-ಇಸ್ರೇಲ್ ವ್ಯಾಪಾರದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಇಸ್ರೇಲ್‌ನ ಇಂಧನ, ಬಂದರು ಮತ್ತು ಮೂಲಸೌಕರ್ಯ ವಲಯಗಳಲ್ಲಿ ಭಾರತವು ಪ್ರಮುಖ…

Read More

ಬಾಗಲಕೋಟೆ ಉಪಚುನಾವಣೆ: ಮೇಟಿ ಕುಟುಂಬದ ಒಳಜಗಳದಿಂದ ಕಾಂಗ್ರೆಸ್​ಗೆ ತಲೆನೋವು, ಖುದ್ದು ಸಿಎಂ ಸಭೆ ನಡೆಸಿದರೂ ಒಮ್ಮತವಿಲ್ಲ

ಬಾಗಲಕೋಟೆ, ಮಾರ್ಚ್ 20: ಬಾಗಲಕೋಟೆ (Bagalkot) ಉಪಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress) ಪಕ್ಷದಲ್ಲಿ ಟಿಕೆಟ್ ಬಿಕ್ಕಟ್ಟು ತೀವ್ರಗೊಂಡಿದೆ. ಮಾಜಿ ಸಚಿವ, ಶಾಸಕ ದಿ. ಎಚ್​ವೈ ಮೇಟಿ (HY Meti) ಅವರ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರ ಇನ್ನೂ ಗೊಂದಲದಲ್ಲೇ ಉಳಿದಿದೆ. ಈ ಬಿಕ್ಕಟ್ಟನ್ನು ಬಗೆಹರಿಸಲು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ (Siddaramaiah) ಮುಂದಾಗಿ ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ. ಮೇಟಿ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಒಮ್ಮತ ಸಾಧಿಸಲು ಸೂಚನೆ ನೀಡಿದರೂ, ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ಮೇಟಿ ಕುಟುಂಬದ ಮಕ್ಕಳಾದ…

Read More

ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್​​: ಟಿಕೆಟ್​​ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಕೆಗೆ ಮುಂದಾದ ಸಚಿವರ ಪುತ್ರ!

ದಾವಣಗೆರೆ, ಮಾರ್ಚ್​​ 20: ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರ ಕಾಂಗ್ರೆಸ್‌ನಲ್ಲಿ ತೀವ್ರಗೊಂಡಿದೆ. ಬಿಜೆಪಿ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿರುವಾಗ, ಕಾಂಗ್ರೆಸ್‌ನಲ್ಲಿ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಈ ಹಿನ್ನೆಲೆಯಲ್ಲಿ, ರಣದೀಪ್ ಸುರ್ಜೇವಾಲ ಅವರು ರಾಜ್ಯಕ್ಕೆ ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಸಭೆ ನಡೆಸಿ ಚುನಾವಣಾ ತಂತ್ರ ರೂಪಿಸಲಿದ್ದಾರೆ. ಅದರ ನಡುವೆಯೇ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್​​ ಆಕಾಂಕ್ಷಿ, ಸಚಿವ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ….

Read More

‘ಧುರಂಧರ್ 2’ ನೋಡಲು ದುಬೈನಿಂದ ಭಾರತಕ್ಕೆ ಬಂದ ಖ್ಯಾತ ಇನ್​​ಫ್ಲುಯೆನ್ಸರ್

‘ಧುರಂಧರ್ 2’ ಸಿನಿಮಾ ಎಲ್ಲ ಕಡೆಗಳಲ್ಲಿ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಚಿತ್ರವನ್ನು ಜನರು ಕೊಂಡಾಡುತ್ತಿದ್ದಾರೆ. ಕೆಲವರು ಇದನ್ನು ಟೀಕಿಸುತ್ತಿದ್ದಾರೆ. ಟೆಕ್ನಿಕಲ್ ಗುರು ಎಂದೇ ಫೇಮಸ್ ಆದ ಗೌರವ್ ಚೌಧರಿ ಅವರು ಈ ಸಿನಿಮಾ ನೋಡಲು ದುಬೈ ಇಂದ ಬೆಂಗಳೂರಿಗೆ ಬಂದಿದ್ದಾರೆ. ಈ ಸಂದರ್ಭದ ವಿಡಿಯೋನ ಹಂಚಿಕೊಂಡಿದ್ದಾರೆ. ಅವರು ಸಿನಿಮಾ ನೋಡುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದಾರಂತೆ. ದುಬೈ ಸೇರಿದಂತೆ ಅನೇಕ ದೇಶಗಳಲ್ಲಿ ‘ಧುರಂಧರ್ 2’ ಚಿತ್ರವು ಬ್ಯಾನ್ ಆಗಿದೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​…

Read More