IND vs AFG: ರಿಷಭ್ ಪಂತ್​ಗೆ ಡಬಲ್ ಶಾಕ್ ನೀಡಿದ ಬಿಸಿಸಿಐ – Kannada News | Rishabh Pant Dropped From India ODI Squad, Loses Test Vice Captaincy vs AFG

ಐಪಿಎಲ್ (IPL 2026) ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ, ಅಫ್ಘಾನಿಸ್ತಾನದ (IND vs AFG) ವಿರುದ್ಧ ಏಕದಿನ ಹಾಗೂ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗಾಗಿ ಬಿಸಿಸಿಐ ತಂಡವನ್ನು ಸಹ ಪ್ರಕಟಿಸಿದೆ. ಈ ಎರಡು ತಂಡಗಳಲ್ಲಿ ಯುವ ಮುಖಗಳಿಗೆ ಅವಕಾಶ ನೀಡಲಾಗಿದೆ. ಇತ್ತ ಹಿಂದಿನ ಸರಣಿಯಲ್ಲಿ ತಂಡದಲ್ಲಿದ್ದ ಹಲವು ಆಟಗಾರರಿಗೆ ಗೇಟ್ ಪಾಸ್ ನೀಡಿಲಾಗಿದೆ. ಅಂತಹ ಆಟಗಾರರಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant)​ ಕೂಡ ಒಬ್ಬರು. ಬಿಸಿಸಿಐ, ರಿಷಭ್ ಪಂತ್​ಗೆ ಒಂದಲ್ಲ ಅಂತಾ ಎರಡು ಆಘಾತಗಳನ್ನು ನೀಡಿದೆ. ರಿಷಭ್ ಪಂತ್ ಅವರನ್ನು ಭಾರತ ಟೆಸ್ಟ್ ತಂಡದ ಉಪನಾಯಕತ್ವದಿಂದ ತೆಗೆದುಹಾಕುವುದರ ಜೊತೆಗೆ ಅವರನ್ನು ಏಕದಿನ ತಂಡದಿಂದಲೂ ಕೈಬಿಡಲಾಗಿದೆ.

ವಾಸ್ತವವಾಗಿ ಕಳೆದ ವರ್ಷ ಶುಭ್​ಮನ್ ಗಿಲ್ ಗಾಯಗೊಂಡ ನಂತರ ರಿಷಭ್ ಪಂತ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡರು. ಆ ಸರಣಿಯನ್ನು ಭಾರತ 0-2 ಅಂತರದಿಂದ ಸೋತಿತು. ಈಗ ಪಂತ್ ಬದಲಿಗೆ ಕೆಎಲ್ ರಾಹುಲ್ ಅವರನ್ನು ಟೆಸ್ಟ್‌ ತಂಡಕ್ಕೆ ಉಪನಾಯಕನಾಗಿ ನೇಮಿಸಲಾಗಿದೆ. ಇತ್ತ ಕಳೆದ ಎರಡು ವರ್ಷಗಳಿಂದ ಏಕದಿನ ತಂಡದ ಭಾಗವಾಗಿದ್ದ ಪಂತ್​ಗೆ ಒಂದೇ ಒಂದು ಪಂದ್ಯದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಏಕೆಂದರೆ ಮೊದಲ ವಿಕೆಟ್ ಕೀಪರ್ ಆಯ್ಕೆಯಾಗಿ ಕೆಎಲ್ ರಾಹುಲ್ ಇದ್ದರು. ಇದೀಗ ಪಂತ್ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿದ್ದು, ಇಶಾನ್ ಕಿಶನ್​ಗೆ ಎರಡನೇ ವಿಕೆಟ್ ಕೀಪರ್ ಆಗಿ ಅವಕಾಶ ನೀಡಲಾಗಿದೆ.

ಪಂತ್​ಗೆ ಏಕದಿನ ತಂಡದ ಬಾಗಿಲು ಬಂದ್?

ರಿಷಭ್ ಪಂತ್ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನು ಆಡಿದ್ದು ಆಗಸ್ಟ್ 2024 ರಲ್ಲಿ. ಅದಕ್ಕೂ ಮೊದಲು, ಅಭ್ಯಾಸದ ಸಮಯದಲ್ಲಿ ಉಂಟಾದ ಗಾಯದಿಂದಾಗಿ ಜನವರಿ 2025 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ಧ್ರುವ್ ಜುರೆಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಇದುವರೆಗೆ ಪಂತ್ 31 ಏಕದಿನ ಪಂದ್ಯಗಳನ್ನು ಆಡಿದ್ದು, 27 ಇನ್ನಿಂಗ್ಸ್‌ಗಳಲ್ಲಿ 33.50 ಸರಾಸರಿ ಮತ್ತು 106.21 ಸ್ಟ್ರೈಕ್ ರೇಟ್‌ನಲ್ಲಿ 871 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳು ಸೇರಿವೆ.

LSG vs RCB: ಮುಂದಿನ ಸೀಸನ್​ಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದೇವೆ; ರಿಷಭ್ ಪಂತ್

ಅಗರ್ಕರ್ ಹೇಳಿದ್ದೇನು?

ರಿಷಭ್ ಪಂತ್ ಅವರ ಕೈಬಿಟ್ಟ ಬಗ್ಗೆ ಮಾತನಾಡಿದ ಭಾರತದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, ‘ರಿಷಭ್ ಒಬ್ಬ ಅದ್ಭುತ ಟೆಸ್ಟ್ ಆಟಗಾರ. ಸ್ಪಷ್ಟವಾಗಿ ಹೇಳುವುದಾದರೆ, ಅವರು ಈಗ ಏಕದಿನ ತಂಡದ ಭಾಗವಾಗಿಲ್ಲ. ಅವರು ಯಾವಾಗಲೂ ಅತ್ಯುತ್ತಮ ಟೆಸ್ಟ್ ಆಟಗಾರನಾಗಬೇಕೆಂದು ನಾವು ಬಯಸುತ್ತೇವೆ. ಟೆಸ್ಟ್ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ನಾನು ಭಾವಿಸುತ್ತೇನೆ. ಆ ತಂಡದಲ್ಲಿ ಅವರು ನಮ್ಮ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ನಾನು ಭಾವಿಸುತ್ತೇನೆ. ಆದ್ದರಿಂದ, ಏಕದಿನ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಪ್ರಸ್ತುತ ನಮಗೆ ರಾಹುಲ್ ಮತ್ತು ಕಿಶನ್ ರೂಪದಲ್ಲಿ ಎರಡು ವಿಭಿನ್ನ ಆಯ್ಕೆಗಳಿವೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆಲೋನಿಗೆ ಮೋದಿಯಿಂದ ಚಾಕೊಲೇಟ್ ಗಿಫ್ಟ್; ಆದರೆ, ಷೇರುಬೆಲೆ ಹೆಚ್ಚಿದ್ದು ರಿಯಲ್ ಎಸ್ಟೇಟ್ ಕಂಪನಿಯದ್ದು; ಯಾಕೆ? – Kannada News | Melody trends as modi gifts toffee to meloni confusion of parle products vs parle industries

ಮೆಲೋನಿ ವರ್ಸಸ್ ಮೆಲೋಡಿImage Credit source: Giorgia Meloni X Account

ನವದೆಹಲಿ, ಮೇ 20: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೆಲೋಡಿ ಚಾಕೊಲೇಟ್​ಗಳ (Parle Melody Toffee) ಪ್ಯಾಕೆಟ್ ಅನ್ನು ಗಿಫ್ಟ್ ಆಗಿ ನೀಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇಟಲಿ ಪಿಎಂ ಮೆಲೋನಿ ಅವರೇ ಖುದ್ದಾಗಿ ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದು ಅದು ಬಹಳ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ರಿಯಲ್ ಎಸ್ಟೇಟ್ ಕಂಪನಿಯೊಂದರ ಷೇರು ಬೆಲೆ ಇಂದು ಬುಧವಾರ ಸಿಕ್ಕಾಪಟ್ಟೆ ಏರಿದೆ.

ಮೆಲೋಡಿ ಚಾಕೊಲೇಟ್​ಗೂ ರಿಯಲ್ ಎಸ್ಟೇಟ್ ಕಂಪನಿಗೂ ಏನು ಸಂಬಂಧ?

ಮೋದಿ ಅವರು ಮೆಲೋನಿಗೆ ಗಿಫ್ಟ್ ಆಗಿದ್ದ ನೀಡಿದ್ದ ಮೆಲೋಡಿ ಚಾಕೊಲೇಟ್ ಅನ್ನು ತಯಾರಿಸುವ ಕಂಪನಿ ಹೆಸರು ಪಾರ್ಲೆ ಪ್ರಾಡಕ್ಟ್ಸ್ ಲಿಮಿಟೆಡ್. ಇದು ಚೌಹಾಣ್ ಕುಟುಂಬ ಸ್ಥಾಪಿಸಿದ ಬಹುರಾಷ್ಟ್ರೀಯ ಕಂಪನಿ. ಬೆಂಗಳೂರು ಸೇರಿದಂತೆ ಹಲವೆಡೆ ಇದರ ಉತ್ಪಾದಕ ಘಟಕಗಳಿವೆ. ಪಾರ್ಲೆ-ಜಿ ಬಿಸ್ಕತ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸುವ ಈ ಕಂಪನಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿಲ್ಲ.

ಇದನ್ನೂ ಓದಿ: ಇಟಲಿ ಪ್ರಧಾನಿ ಮೆಲೋನಿ ಭೇಟಿಯಾಗಿ ಫೋಟೊಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ

ಆದರೆ, ಪಾರ್ಲೆ ಇಂಡಸ್ಟ್ರೀಸ್ ಎನ್ನುವ ಇನ್ನೊಂದು ಕಂಪನಿಯ ಷೇರುಗಳಿಗೆ ಇಂದು ಬೇಡಿಕೆ ಬಂದಿತ್ತು. ಇದು ರಿಯಲ್ ಎಸ್ಟೇಟ್ ಕಂಪನಿ. ಇದರ ಹೆಸರಲ್ಲಿ ಪಾರ್ಲೆ ಇರುವುದರಿಂದ ಬಹಳಷ್ಟು ರೀಟೇಲ್ ಹೂಡಿಕೆದಾರರು ಫೂಡ್ ಕಂಪನಿ ಎಂದು ಗೊಂದಲ ಮಾಡಿಕೊಂಡಿರಬಹುದು.

ಪಾರ್ಲೆ ಇಂಡಸ್ಟ್ರೀಸ್​ನ ಲಕ್ ಕೂಡ ಹೌದು. ಕಳೆದ ಕೆಲ ತಿಂಗಳಿಂದ ಇದರ ಷೇರುಬೆಲೆ ಶೇ. 35ರಷ್ಟು ಕುಸಿದಿತ್ತು. ಇವತ್ತು ಮೆಲೋನಿಗೆ ಪಾರ್ಲೆ ಮೆಲೋಡಿ ಚಾಕೊಲೇಟ್ ಗಿಫ್ಟ್ ಆಗಿ ಮೋದಿ ಕೊಟ್ಟ ಬಳಿಕ ಪಾರ್ಲೆ ಇಂಡಸ್ಟ್ರೀಸ್​ಗೆ ಒಂದು ದಿನದ ಶುಕ್ರ ದೆಸೆ ಬಂದು ಶೇ. 5ರಷ್ಟು ಬೆಲೆ ಹೆಚ್ಚಿದೆ.

ಮೆಲೋನಿಗೆ ಮೋದಿ ಮೆಲೋಡಿ ಚಾಕೊಲೇಟ್ ಕೊಟ್ಟಿದ್ದು ಯಾಕೆ?

ಜಾರ್ಜಿಯಾ ಮೆಲೋನಿ ಅವರು ಇಟಲಿ ಪ್ರಧಾನಿಯಾದಾಗಿನಿಂದ ನರೇಂದ್​ರ ಮೋದಿ ಅವರೊಂದಿಗೆ ವೈಯಕ್ತಿಕವಾಗಿ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ಅವರಿಬ್ಬರು ಭೇಟಿಯಾದಾಗ ಆಪ್ತತೆ ಎದ್ದು ಕಾಣುವಂತಿರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಜನರು #Melody ಎನ್ನುವ ಹ್ಯಾಷ್​ಟ್ಯಾಗ್ ಕೂಡ ಹಾಕಿ ಟ್ವೀಟ್ ಮಾಡಿರುವುದುಂಟು. Melody ಎಂಬುದು ಮೆಲೋನಿ ಮತ್ತು ಮೋದಿ ಅವರ ಮಿಶ್ರ ರೂಪದ ಪದ.

ಇದನ್ನೂ ಓದಿ: ಚೀನಾದ ಡಾರ್ಕ್ ಫ್ಯಾಕ್ಟರಿಗಳು… ಮನುಷ್ಯರು, ಬೆಳಕು ಇಲ್ಲದ ಕಾರ್ಖಾನೆಗಳು, ರೋಬೋಗಳದ್ದೇ ಆಟ; ಭವಿಷ್ಯವೇ ಪ್ರತ್ಯಕ್ಷ

ಇದೇ ಹೊತ್ತಲ್ಲಿ ಮೆಲೋನಿ ಅವರು ಪ್ರಧಾನಿ ಮೋದಿ ತಮಗೆ ಮೆಲೋಡಿ ಟಾಫಿಯನ್ನು ಗಿಫ್ಟ್ ಆಗಿ ನೀಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಮೆಲೋಡಿ ಟ್ರೆಂಡ್ ಅನ್ನು ಹೆಚ್ಚು ಮಾಡುವ ಉದ್ದೇಶ ಇರಲಿಕ್ಕೆ ಸಾಕು.

ಜಾರ್ಜಿಯಾ ಮೆಲೋನಿ ಅವರ ಟ್ವೀಟ್

ಚಾಕೊಲೇಟ್ ಕಂಪನಿ ರಿಯಾಕ್ಷನ್

ಮೆಲೋಡಿ ಚಾಕೊಲೇಟ್ ಅನ್ನು ಇಟಲಿ ಪಿಎಂಗೆ ಗಿಫ್ಟ್ ಆಗಿ ನೀಡಿದ ಬಳಿಕ ಮೆಲೋಡಿ ಟ್ರೆಂಡಿಂಗ್​ನಲ್ಲಿದೆ. ಈ ಬಗ್ಗೆ ಪಾರ್ಲೆ ಪ್ರಾಡಕ್ಟ್ಸ್​ನ ವೈಸ್ ಪ್ರೆಸಿಡೆಂಟ್ ಮಯಂಕ್ ಶಾ ಪ್ರತಿಕ್ರಿಯಿಸಿ, ತಮ್ಮ ಈ ಬ್ರ್ಯಾಂಡ್ ಹೊಸ ಮಟ್ಟಕ್ಕೆ ಏರಿರುವುದನ್ನು ಒಪ್ಪಿಕೊಂಡಿದ್ದಾರೆ, ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಮಗುವನ್ನು ಎತ್ತಿಕೊಂಡು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಡ್ರೆಸ್ ಎತ್ತಿ ಓಡಿ ಹೋದ ಯುವಕ – Kannada News | Hyderabad: Teen Accused in Public Misconduct Case Captured on Camera

ಹೈದರಾಬಾದ್, ಮೇ 20: ಮಗುವನ್ನು ಎತ್ತಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ(Woman)ಯ ಡ್ರೆಸ್ ಎತ್ತಿ ಯುವಕನೊಬ್ಬ ವಿಕೃತಿ ಮೆರೆದಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಅದು ಮೇ 14ರ ಮಟ ಮಟ ಮಧ್ಯಾಹ್ನ. ಮಣಿಕೊಂಡ–ನೆಕ್ನಾಂಪುರ ಪ್ರದೇಶದ ಅಲ್ಕಾಪುರ್ ಟೌನ್‌ಶಿಪ್‌ನಲ್ಲಿರುವ ಪ್ರಣತಿ ಈಶಾ ಅಪಾರ್ಟ್‌ಮೆಂಟ್ ಬಳಿ ಎಂದಿನಂತೆ ಸಾರ್ವಜನಿಕರ ಓಡಾಟವಿತ್ತು. ಇಲ್ಲೇ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಆ ವಿಕೃತ ಕೃತ್ಯ ಈಗ ಇಂಟರ್ನೆಟ್‌ನಲ್ಲಿ ತೀವ್ರ ಆಕ್ರೋಶ ಮತ್ತು ಸಾರ್ವಜನಿಕರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ.

ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬರುವಂತೆ, ಮಹಿಳೆಯೊಬ್ಬಳು ತನ್ನ ಎಡಗೈಯಲ್ಲಿ ಪುಟ್ಟ ಮಗುವನ್ನು ಹಿಡಿದುಕೊಂಡು, ಬಲಗೈಯಲ್ಲಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಛತ್ರಿ ಹಿಡಿದು ಶಾಲೆಯಿಂದ ನಿಧಾನವಾಗಿ ಮನೆಗೆ ಹೆಜ್ಜೆ ಹಾಕುತ್ತಿದ್ದರು. ಆಕೆ ರಸ್ತೆಯಲ್ಲಿ ಸಾಗುತ್ತಿದ್ದಾಗ, ಹಿಂದಿನಿಂದ ಬಂದ ಕಿಡಿಗೇಡಿಯೊಬ್ಬ, ನಡುರಸ್ತೆಯಲ್ಲೇ ಸಾರ್ವಜನಿಕವಾಗಿ ಆಕೆಯ ಉಡುಪನ್ನು ಮೇಲಕ್ಕೆ ಎತ್ತಿ ವಿಕೃತಿ ಮೆರೆದಿದ್ದಾನೆ.

ವಿಡಿಯೋ:

ತಕ್ಷಣವೇ ತನಗೆ ಏನಾಯಿತು ಮತ್ತು ಅದು ಯಾರೆಂದು ತಿಳಿಯದೆ ಒಂದು ಕ್ಷಣ ಗೊಂದಲಕ್ಕೊಳಗಾದ ಆ ತಾಯಿ, ಧೈರ್ಯಗೆಡದೆ ತಕ್ಷಣ ತಿರುಗಿ ನಿಂತಿದ್ದಾರೆ, ಆತ ಅಲ್ಲಿಂದ ತಕ್ಷಣವೇ ಕಾಲ್ಕಿತ್ತಿದ್ದಾನೆ. ಧೈರ್ಯಶಾಲಿ ಮಹಿಳೆ ಅಲ್ಲಿಗೇ ಸುಮ್ಮನಾಗದೆ, ಕೆಲವೇ ಸೆಕೆಂಡುಗಳ ಕಾಲ ರಸ್ತೆಯಲ್ಲಿ ನಿಂತು, ನಂತರ ಆತ ಓಡಿದ ದಿಕ್ಕಿನತ್ತಲೇ ಆಕ್ರೋಶದಿಂದ ಹೆಜ್ಜೆ ಹಾಕಿದ್ದಾಳೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಇದನ್ನು ಅಸಹ್ಯಕರ ಮತ್ತು ಆಘಾತಕಾರಿ ಎಂದು ಕರೆದಿದ್ದು, ವಸತಿ ಪ್ರದೇಶಗಳಲ್ಲೇ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ: Video: ಆತುರದಿಂದ ಹಳಿ ದಾಟುವಾಗ ಬಂದೇ ಬಿಡ್ತು ರೈಲು, ಮಕ್ಕಳನ್ನು ಎದೆಗಪ್ಪಿ ಕುಳಿತ ಮಹಿಳೆ

ವಿಡಿಯೋ ಆನ್‌ಲೈನ್‌ನಲ್ಲಿ ಭಾರೀ ಸದ್ದು ಮಾಡಿದ ಬೆನ್ನಲ್ಲೇ, ನರಸಿಂಗಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಿ. ಹರಿ ಕೃಷ್ಣ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಸಂತ್ರಸ್ತೆ ಇನ್ನೂ ಔಪಚಾರಿಕವಾಗಿ ಪೊಲೀಸರನ್ನು ಸಂಪರ್ಕಿಸದಿದ್ದರೂ ಮತ್ತು ಆಕೆಯ ಗುರುತು ಸಿಗದಿದ್ದರೂ, ಮಹಿಳೆಯರ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸ್ವಯಂಪ್ರೇರಿತವಾಗಿ (Suo Motu) ತನಿಖೆಯನ್ನು ಪ್ರಾರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಿಜಾಬ್ vs ಕೇಸರಿ ಶಾಲು: ಶಾಲಾ-ಕಾಲೇಜ್​ ಆರಂಭದ ಹೊತ್ತಿನಲ್ಲೇ ದಕ್ಷಣ ಕನ್ನಡದಲ್ಲಿ ಧರ್ಮ ದಂಗಲ್ ಆತಂಕ! – Kannada News | Hijab and Saffron Shawl Row Triggers Fear in Dakshina Kannada During School and College Reopening time

ವಿಶ್ವ ಹಿಂದೂ ಪರಿಷತ್ ಸುದ್ದಿಗೋಷ್ಠಿImage Credit source: tv9 kannada

ಮಂಗಳೂರು, ಮೇ 20: ಹಿಜಾಬ್​ ವಿವಾದ (Hijab controversy) ರಾಜ್ಯರಾಜಕಾರಣ ಮಾತ್ರವಲ್ಲ ಇಡೀ ವಿಶ್ವವೇ ಒಮ್ಮೆ ರಾಜ್ಯದತ್ತ ತಿರುಗಿ ನೋಡುವಂತೆ ಮಾಡಿದ ವಿವಾದ. ಇದೀಗ ಮತ್ತೆ ಹಿಜಾಬ್​ಗೆ ಅವಕಾಶ ಕೊಟ್ಟಿರುವುದು ಸಾಕಷ್ಟು ಜಟಾಪಟಿಗೆ ಕಾರಣವಾಗಿದೆ. ಇದಕ್ಕೆ ಹಿಂದೂ ಸಂಘಟನೆಗಳು (Hindu organisations) ಕಿಡಿಕಾರಿದ್ದು, ಕಾಲೇಜು ಆರಂಭವಾಗುತ್ತಿದ್ದಂತೆ ಕೇಸರಿ ಶಾಲು ಧರಿಸಿ ಬರುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತೇವೆ ಅಂತಾ ಘೋಷಣೆ ಮಾಡಿದೆ. ಆ ಮೂಲಕ ಅವರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಹೇಳಲಾಗಿದ್ದು, ಇದು ನಗರದಲ್ಲಿ ಮತ್ತೆ ಧರ್ಮ ದಂಗಲ್​​ಗೆ ಎಡೆಮಾಡಿ ಕೊಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಮುಖ್ಯಾಂಶಗಳು

  • ಹಿಜಾಬ್ ದಂಗಲ್​ಗೆ ರಣಕಹಳೆ ಮೊಳಗಿಸಿದ ಹಿಂದೂ ಸಂಘಟನೆ
  • ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸುವಂತೆ ಸೂಚನೆ
  • ಮಂಗಳೂರಿನಲ್ಲಿ ಶಾಂತಿ ಕದಡುವ ಆತಂಕ?

ರಾಜ್ಯ ಸರ್ಕಾರ ಶಾಲಾ-ಕಾಲೇಜ್​​ಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದ್ದಲ್ಲದೇ, ಕೇಸರಿ ಶಾಲು ಧರಿಸುವಂತಿಲ್ಲ ಎಂಬ ಆದೇಶ ನೀಡಿತ್ತು. ಸದ್ಯ ಇದೀಗ ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಇದರ ಎಫೆಕ್ಟ್ ಎಲ್ಲೂ ಆಗಿಲ್ಲ. ಇನ್ನೇನು ಕೆಲ ವಾರಗಳಲ್ಲಿ ಶಾಲಾ-ಕಾಲೇಜುಗಳು ರಿಓಪನ್ ಆಗುತ್ತಿವೆ. ಅಂದಿನಂತೆ ಈ ವರ್ಷ ಕೂಡ ಹಿಜಾಬ್ ವರ್ಸಸ್ ಕೇಸರಿ ಶಾಲು ದಂಗಲ್​​​ ಉಂಟಾಗುವ ಲಕ್ಷಣಗಳು ಕಾಣಿಸುತ್ತಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಶುರುವಾಯ್ತು ಹಿಜಾಬ್ ಕಿಚ್ಚು: ಮುತಾಲಿಕ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಇನ್ನು ಈ ಬಗ್ಗೆ ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಸುದ್ದಿಗೋಷ್ಠಿಯಲ್ಲಿ ಧರ್ಮ ದಂಗಲ್​​ನ ಎಚ್ಚರಿಕೆ ನೀಡಿದೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ವಿರುದ್ಧ ಕೇಸರಿ ಶಾಲು ಹಾಕುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವುದಾಗಿ ಹೇಳಿದೆ. ಅಲ್ಲದೆ ವಿದ್ಯಾರ್ಥಿಗಳ ಹೋರಾಟಕ್ಕೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸಂಪೂರ್ಣ ಸಹಕಾರ ನೀಡಿ ಬೀದಿಗೆ ಇಳಿದು ಹೋರಾಡಲು ಸಜ್ಜಾಗಿದೆ. ವಿ.ಎಚ್.ಪಿ ಮತ್ತು ಭಜರಂಗದಳ ಸಂಘಟನೆಗಳ ಹೇಳಿಕೆಗಳು  ವಿದ್ಯಾರ್ಥಿ ಸಮೂಹದ ಮೇಲೆ ಪ್ರಭಾವ ಬೀರುವ ಮತ್ತು ಶಾಲಾ-ಕಾಲೇಜ್​ಗಳಲ್ಲಿ ಆರೋಗ್ಯಕರ ವಾತಾವರಣ ಹಾಳು ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಾನೂನು ಸುವ್ಯವಸ್ಥೆಗೆ ಧಕ್ಕೆ ಆದರೆ ರಾಜ್ಯ ಸರ್ಕಾರ ನೇರ ಹೊಣೆ ಎಂದ ಶರಣ್ ಪಂಪ್ ವೆಲ್

ಇನ್ನು ಕಾನೂನು ಸುವ್ಯವಸ್ಥೆಗೆ ಧಕ್ಕೆ ಆದರೆ ಅದಕ್ಕೆ ನೇರ ಹೊಣೆ ರಾಜ್ಯ ಸರ್ಕಾರ. ಈ ವಿವಾದ ತಣ್ಣಗಾಗಿತ್ತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶಗಳು ಬರುತ್ತಿವೆ. ಆದರೆ ಇಂತಹ ಆದೇಶದಿಂದ ತಣ್ಣಗಿರುವ ಕಡೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆದರೆ ಅದಕ್ಕೆ ಸರ್ಕಾರ ಹೊಣೆ ಎಂದು ವಿಹೆಚ್​ಪಿ ಮುಖಂಡ ಶರಣ್ ಪಂಪ್ ವೆಲ್​​ ಹೇಳಿದ್ದಾರೆ.

ಇದನ್ನೂ ಓದಿ: ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಮಧುಬಂಗಾರಪ್ಪ ಹೇಳಿದ್ದೇನು ಗೊತ್ತಾ?

ಸದ್ಯ ಕರಾವಳಿ ಶಾಂತವಾಗಿದೆ. ಇನ್ನು ಇಂತಹ ಧರ್ಮ ದಂಗಲ್​ಗಳು ನಡೆದರೆ ಮತ್ತೆ ಸಾಮರಸ್ಯಕ್ಕೆ ಧಕ್ಕೆ ಆಗುವ ಸಾಧ್ಯತೆಗಳಿವೆ. ತಕ್ಷಣ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಗಮನಹರಿಸಬೇಕಾದ ಅವಶ್ಯಕತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿಎಂ ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ – Kannada News | BJP MLC H Vishwanath Makes Serious Allegations Against Yathindra Siddaramaiah Over Loan Assault Case

ಮೈಸೂರು, (ಮೇ 20):ಸಾಲದ ಹಣ ವಾಪಸ್ ಕೇಳಲು ಹೋದ ವ್ಯಕ್ತಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್​​​ ವಿಶ್ವನಾಥ್ (H Vishwanath) ವಿರುದ್ಧ ಎಫ್​​ಐಆರ್ ದಾಖಲಾಗಿದೆ. ಮಹದೇವ್ ಎನ್ನುವ ವ್ಯಕ್ತಿ ಎಂಟಿಬಿ ನಾಗರಾಜ್ ಅವರ ಮೂಲಕ ವಿಶ್ವನಾಥ್​ ಅವರಿಗೆ ಸಾಲ ಕೊಡಿಸಿದ್ದರು. ಬಳಿಕ ಆ ಹಣವನ್ನು ವಾಪಸ್ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದು, ಈ ಸಂಬಂಧ ನ್ಯಾಯಾಲದ ಮೊರೆ ಹೋಗಿದ್ದರು. ಇದೀಗ ಕೋರ್ಟ್ ಆದೇಶದ ಮೇರೆಗೆ ವಿಶ್ವನಾಥ್ ವಿರುದ್ಧ ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂಎಲ್‌ಸಿ ಎಚ್‌.ವಿಶ್ವನಾಥ್‌, ಈ ಪ್ರಕರಣದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಕುಮ್ಮಕ್ಕಿದೆ. ಪ್ರಕರಣ ಸಂಬಂಧ ಪೊಲೀಸರ ನೋಟಿಸ್​ಗೆ ಉತ್ತರ ಕೊಟ್ಟಿದ್ದೇನೆ. ಆದರೂ ಕೂಡ ಎಫ್‌ಐಆರ್ ಮಾಡಿ ತೇಜೋವಧೆ ಮಾಡುತ್ತಿದ್ದಾರೆ. ಇದರಲ್ಲಿ ಯತೀಂದ್ರ ಕುಮ್ಮಕ್ಕು ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ನಿನಗೆ ಸಾಲ ಕೊಡಲು 55 ಲಕ್ಷ ರೂಪಾಯಿ ಎಲ್ಲಿಂದ ಬಂತು? ನಾನು 50 ವರ್ಷದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನಾನು ಸದನದಲ್ಲೇ‌ ಸತ್ಯವಂತ ಎಂದು ಪ್ರಮಾಣ ಮಾಡಿದ್ದೇನೆ. ಕೋಟೆಹುಂಡಿ ಮಹದೇವ ನಮ್ಮ ಮನೆ ಮುಂದೆ ಬಂದು ನಿಲ್ಲುತ್ತಿದ್ದ. ಸಿದ್ದರಾಮಯ್ಯ ಮಗನನ್ನು ನಾನು ಹೆಚ್​ಎಂ ಎಂದು ಹೇಳಿದ್ದೆ. ಈಗ ಅದನ್ನು ತೀರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಎಫ್‌ಐಆರ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುತ್ತೇನೆ ಎಂದು ಎಂದರು.

ಇದನ್ನೂ ನೋಡಿ: ನನ್ನ ಮಕ್ಕಳು ಸಹ ಸ್ಪರ್ಧಿಸಲ್ಲ: ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ

Source link

ಟಾಕ್ ಶೋ ಮೂಲಕ ಮರಳಿ ಬಂದ ‘ಓಜಿ’ ಕಮಿಡಿಯನ್ ಶೇಖರ್ ಸುಮನ್ – Kannada News | Shekhar Suman started talk show named Shekhar Tonite

ಶೇಖರ್ ಸುಮನ್ (Shekhar Suman), ಭಾರತದ ‘ಓಜಿ’ ಕಮಿಡಿಯನ್. ಇಂದು ಚಾಲ್ತಿಯಲ್ಲಿರುವ ಸ್ಟಾಂಡಪ್ ಕಾಮಿಡಿ, ಪೊಲಿಟಿಕಲ್ ಸಟೈರ್, ರಾಜಕಾರಣಿಗಳ ಮಿಮಿಕ್ರಿ, ಕ್ರಿಟಿಕಲ್ ಕಾಮಿಡಿ ಇನ್ನೂ ಹಲವು ವಿಭಾಗಗಳಲ್ಲಿ ಶೇಖರ್ ಸುಮನ್ ನೈಪುಣ್ಯತೆ ಹೊಂದಿದ್ದರು ಹಾಗೂ ಭಾರತದಲ್ಲಿ ಮೊದಲ ಬಾರಿಗೆ ಇದನ್ನೆಲ್ಲ ಪ್ರಯೋಗಿಸಿ ಯಶಸ್ವಿ ಆಗಿದ್ದಲ್ಲದೆ ಭಾರಿ ಜನಪ್ರಿಯತೆಯನ್ನೂ ಸಹ ಗಳಿಸಿದ್ದರು. ದಶಕಗಳಿಂದಲೂ ಭಾರತೀಯ ಟಿವಿ ಕ್ಷೇತ್ರದಲ್ಲಿ ಮೆರೆದ ಶೇಖರ್ ಸುಮನ್ ಕಮಿಡಿಯನ್​​ಗಳ ಹೊಸ ಅಲೆ ಬಂದ ಬಳಿಕ ತುಸು ಮಂಕಾಗಿದ್ದರು. ಇದೀಗ ಸುಮಾರು 14 ವರ್ಷಗಳ ನಂತರ ಮತ್ತೆ ತಮ್ಮದೇ ಆದ ವಿಶಿಷ್ಟ ಶೈಲಿಯ ಶೋ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ‘ಶೇಖರ್ ಟುನೈಟ್’ ಹೆಸರಿನ ಹೊಸ ಟಾಕ್ ಶೋ ಒಂದನ್ನು ಶೇಖರ್ ಸುಮನ್ ಯೂಟ್ಯೂಬ್​​ನಲ್ಲಿ ಪ್ರಾರಂಭಿಸಿದ್ದಾರೆ.

90ರ ದಶಕದಲ್ಲಿ ಸೂಪರ್ ಹಿಟ್ ಆಗಿದ್ದ ‘ಮೂವರ್ಸ್ ಅಂಡ್ ಶೇಕರ್ಸ್’ ಕಾರ್ಯಕ್ರಮದ ಮೂಲಕ ಭಾರತದಲ್ಲಿ ಲೇಟ್-ನೈಟ್ ಟಾಕ್ ಶೋ ಸಂಸ್ಕೃತಿಯನ್ನು ಪರಿಚಯಿಸಿದ ಶೇಖರ್ ಸುಮನ್, ಈಗ ಅದೇ ಮಾದರಿಯನ್ನು ಆಧುನಿಕ ಡಿಜಿಟಲ್ ಆಡಿಯನ್ಸ್‌ಗೆ ತಕ್ಕಂತೆ ತೆಗೆದುಕೊಂಡು ಬಂದಿದ್ದಾರೆ. ಶೋನ ಹೆಸರು ‘ಶೇಖರ್ ಟುನೈಟ್’. ಪ್ರತಿ ಶುಕ್ರವಾರ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಶೋದ ಹೊಸ ಸಂಚಿಕೆಗಳು ಬಿಡುಗಡೆಯಾಗುತ್ತಿವೆ. ವಿಶೇಷವೆಂದರೆ, ಶೇಖರ್ ಸುಮನ್ ಅವರ ಪುತ್ರ ಅಧ್ಯಯನ್ ಸುಮನ್ ಈ ಹೊಸ ಶೋ ಅನ್ನು ಕ್ರಿಯೇಟ್ ಮಾಡಿದ್ದಾರೆ.

ಇದನ್ನೂ ಓದಿ:ಜೈಲಿಗೆ ಹೋದ ಖ್ಯಾತ ಕಮಿಡಿಯನ್ ಸಹಾಯಕ್ಕೆ ಧಾವಿಸಿದ ಸೋನು ಸೂದ್

‘ಶೇಖರ್ ಟುನೈಟ್’ ಕೇವಲ ಸೆಲೆಬ್ರಿಟಿಗಳ ಸಾಂಪ್ರದಾಯಿಕ ಸಂದರ್ಶನವಲ್ಲ, ಬದಲಿಗೆ ಇದು ಯಾವುದೇ ಸ್ಕ್ರಿಪ್ಟ್ ಇಲ್ಲದ, ಸ್ವಾಭಾವಿಕವಾಗಿ ನಡೆಯುವ ಸಂಭಾಷಣೆಯಾಗಿದೆ. ಚಿತ್ರರಂಗ, ರಾಜಕೀಯ, ಕ್ರೀಡೆ, ಸಂಗೀತ ಮತ್ತು ಉದ್ಯಮ ರಂಗದ ಪ್ರಮುಖ ಗಣ್ಯರು ಈ ಶೋನಲ್ಲಿ ಭಾಗವಹಿಸಲಿದ್ದಾರೆ. ಹಾಸ್ಯ, ವಿಡಂಬನೆ, ರಾಜಕೀಯ ಚುಟುಕುಗಳು ಮತ್ತು ಭಾವುಕ ಕ್ಷಣಗಳ ಸಮ್ಮಿಶ್ರಣವಾಗಿ ಈ ಶೋ ಮೂಡಿಬರುತ್ತಿದೆ.

ಶೋನಲ್ಲಿ ಈಗಾಗಲೇ ಕೇಂದ್ರ ಮಂತ್ರಿ ನಿತಿನ್ ಗಡ್ಕರಿ, ಸಿನಿಮಾ ನಟರುಗಳಾದ ಬಾಬಿ ಡಿಯೋಲ್, ಮನೋಜ್ ಬಾಜಪೇಯಿ, ಅಲಿ ಫಜಲ್, ಫರಾ ಖಾನ್ ಇನ್ನೂ ಹಲವರು ಭಾಗವಹಿಸಿದ್ದಾರೆ. ಈ ಸಂಚಿಕೆಯಲ್ಲಿ ಶೇಖರ್ ಸುಮನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿದಂತೆ ಹಲವು ರಾಜಕೀಯ ನಾಯಕರ ಬಗ್ಗೆ ತಮ್ಮದೇ ಆದ ವಿಡಂಬನಾತ್ಮಕ ಶೈಲಿಯಲ್ಲಿ ಹಾಸ್ಯದ ಚಾಟಿ ಬೀಸಿದ್ದಾರೆ.

ಹಾಲಿವುಡ್​ನಲ್ಲಿ ಬಲು ಜನಪ್ರಿಯವಾಗಿರುವ ‘ಜಿಮ್ಮಿ ಕ್ಯಾಮೆಲ್ ಶೋ’ ಮಾದರಿಯಲ್ಲಿಯೇ ಇದೆ ಶೇಖರ್ ಸುಮನ್ ಅವರ ‘ಶೇಖರ್ ಟುನೈಟ್’. ಅಲ್ಲಿ ಲೇಟ್ ನೈಟ್ ಟಾಕ್ ಶೋಗಳು ಬಲು ಜನಪ್ರಿಯತೆ ಪಡೆದುಕೊಂಡಿವೆ. ಇದೀಗ ಶೇಖರ್ ಸುಮನ್ ಸಹ ಅದೇ ಮಾದರಿಯನ್ನು ಅನುಸರಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಗಿಲ್ಲಿ ನಟನ ಹೊಸ ಸಿನಿಮಾ ‘ಸರ್ವೇ ನಂಬರ್ 45’ – Kannada News | Bigg Boss Kannada Season 12 winner Gilli Nata new movie Survey Number 45

ಕಾಮಿಡಿ ಇಷ್ಟಪಡುವ ಪ್ರೇಕ್ಷಕರಿಗೆ ಗಿಲ್ಲಿ ನಟ ಎಂದರೆ ಸಖತ್ ಇಷ್ಟ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಶೋನಲ್ಲಿ ಸ್ಪರ್ಧಿಸಿ ವಿನ್ ಆದ ಬಳಿಕ ಗಿಲ್ಲಿ ನಟ ಅವರ ಖ್ಯಾತಿ ಹೆಚ್ಚಾಯಿತು. ಇದರಿಂದಾಗಿ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಜಾಸ್ತಿ ಆಗಿದೆ. ಗಿಲ್ಲಿ ನಟ (Gilli Nata) ಅವರು ಪಕ್ಕಾ ಹಳ್ಳಿ ಹೈದ. ಅವರ ಆ ಗುಣವನ್ನೇ ಬಿಗ್ ಬಾಸ್ ಆಟದಲ್ಲಿ ಪ್ರೇಕ್ಷಕರು ಇಷ್ಟಪಟ್ಟಿದ್ದರು. ವಿಶೇಷ ಏನೆಂದರೆ, ಈಗ ಗಿಲ್ಲಿ ನಟ ಅವರು ಹಳ್ಳಿ ಸೊಗಡಿನ ಕಥೆ ಇರುವ ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ‘ಸರ್ವೇ ನಂಬರ್ 45’ (Survey Number 45) ಎಂದು ಹೆಸರು ಇಡಲಾಗಿದೆ.

‘ಸರ್ವೇ ನಂಬರ್ 45’ ಸಿನಿಮಾದ ಶೀರ್ಷಿಕೆ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಗಿಲ್ಲಿ ನಟ ಅವರು ಹಳ್ಳಿ ಹೈದನ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಕ್ತಾಯದ ಹಂತದಲ್ಲಿವೆ. ‘ವರನಂದಿ ಸಿನಿ ಸಂಸ್ಥೆ’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಆನಂದ್ ಎಸ್.ವಿ. ಮತ್ತು ಹನುಮಂತರೆಡ್ಡಿ ಎಸ್.ಆರ್. ಅವರು ಸಹ-ನಿರ್ಮಾಪಕರಾಗಿದಾರೆ.

ಶಿವಕುಮಾರ್ ಎಂ. ಶೆಟ್ಟಿಹಳ್ಳಿ ಅವರು ‘ಸರ್ವೇ ನಂಬರ್ 45’ ಸಿನಿಮಾಗೆ ಕಥೆ, ಚಿತ್ರಕಥೆ ಹಾಗೂ ಎರಡು ಹಾಡುಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ. ವಿಶಾಲ್ ಅಲಾಪ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ದೀಪಕ್ ಕುಮಾರ್ ಜಿ.ಕೆ. ಅವರ ಛಾಯಾಗ್ರಹಣ, ರಾಮಾರ್ಜುನ್ ಅವರ ಸಂಕಲನ, ಚಕ್ರಿ ಕಿರಿಸಾವೆ ಅವರ ಸಂಭಾಷಣೆ, ರಘು ಆರ್.ಜೆ. ಅವರ ನೃತ್ಯ ನಿರ್ದೇಶನ ಈ ಸಿನಿಮಾಗಿದೆ. ಹುಣಸೂರು ಸುತ್ತಮುತ್ತ ಶೂಟಿಂಗ್ ನಡೆದಿದೆ.

Survey Number 45 Movie Team

ಸಿನಿಮಾದ ಪಾತ್ರವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ಮುಖ್ಯ ಭೂಮಿಕೆಯಲ್ಲಿ ಗಿಲ್ಲಿ ನಟ ಅವರು ಅಭಿನಯಿಸಿದ್ದರೆ ಕಿರುತೆರೆಯ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಂತೋಷ್, ಮಹಾನಟಿ ಖ್ಯಾತಿಯ ಪ್ರಾವಲಿಕ, ಮೌನ ಹಾಸನ್, ಕುಮಾರ್ ಅರಸೇಗೌಡ, ಮಾಲತಿ, ಮನು ಕಲ್ಲಹಳ್ಳಿ, ಶಿವಣ್ಣ, ಜ್ಯೂ. ದ್ವಾರಕೀಶ್, ಮಂಜು, ರಾಘವೇಂದ್ರ ಕುಮಾರ್, ವೀರೇಶ್, ಹನುಮಂತಪ್ಪ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ಕಾವ್ಯಾನ ಮದುವೆ ಆಗಲ್ಲ: ಎಲ್ಲರ ಎದುರು ನೇರವಾಗಿ ಹೇಳಿದ ಗಿಲ್ಲಿ ನಟ

ಕಥೆಯ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ರೈತನ ಜಮೀನಿಗೆ ಸರ್ಕಾರವು ಸರ್ವೇ ನಂಬರ್ ನೀಡಿರುತ್ತದೆ. ಇದರ ಮಧ್ಯೆ ಆತನಿಗೆ ಅನೇಕ ಕಷ್ಟ ಬರುತ್ತಲೇ ಇರುತ್ತದೆ. ಅದನ್ನು ಚಾಣಾಕ್ಷತನದಿಂದ ಒಳ್ಳೆತನದಲ್ಲಿ ಹೇಗೆ ಬಗೆ ಹರಿಸಿಕೊಳ್ಳುತ್ತಾನೆ ಎಂಬ ಕಹಾನಿ ಈ ಸಿನಿಮಾದಲ್ಲಿ ಇರಲಿದೆ. ನಾವು ಒಳಿತನ್ನು ಬಯಸಿದರೆ ಒಳ್ಳೆಯದೇ ನಡೆಯುತ್ತದೆ. ಕೆಟ್ಟತನವನ್ನು ಆಯ್ಕೆ ಮಾಡಿಕೊಂಡರೆ ಅದೇ ಆಗುತ್ತದೆ ಎಂಬ ಸಂದೇಶವನ್ನು ಈ ಚಿತ್ರದ ಮೂಲಕ ನೀಡಲಾಗುವುದು ಎಂದು ತಂಡ ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

TV9 kannada News Live: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಬಹಿರಂಗ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ – Kannada News | Tv9 Kannada News Live: Bowring Hospital Mishap Report, PM Modi’s Italy Visit and Rs 34 Crore Drug Bust

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ

ಬೆಂಗಳೂರು, ಮೇ 20: ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು 7 ಜೀವಗಳು ಬಲಿಯಾದ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಅಧಿಕಾರಿಗಳ ಹಿತಾಸಕ್ತಿ ರಹಿತ ನಡೆ ಹಾಗೂ ತ್ಯಾಜ್ಯ ವಿಲೇವಾರಿಯ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಮುಖ್ಯ ಕಾರ್ಯದರ್ಶಿಗಳ ವರದಿ ಬಹಿರಂಗಪಡಿಸಿದೆ. ಇತ್ತ, ಜಾಗತಿಕ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಭಾರತದ ‘ಮೆಲೋಡಿ’ ಚಾಕೊಲೇಟ್ ಉಡುಗೊರೆ ನೀಡುವ ಮೂಲಕ ಉಭಯ ದೇಶಗಳ ಬಾಂಧವ್ಯವನ್ನು ಮತ್ತಷ್ಟು ಮಧುರಗೊಳಿಸಿದ್ದಾರೆ. ಇವೆಲ್ಲದರ ನಡುವೆ, ಬೆಂಗಳೂರಿನ ಹೆಬ್ಬಾಳ ಪೊಲೀಸರು ದೆಹಲಿಯಿಂದ ಅತ್ಯಂತ ವ್ಯವಸ್ಥಿತವಾಗಿ ರೈಲಿನಲ್ಲಿ ಸಾಗಣೆಯಾಗುತ್ತಿದ್ದ ಬರೋಬ್ಬರಿ 34 ಕೋಟಿ ರೂಪಾಯಿ ಮೌಲ್ಯದ ಬೃಹತ್ ಡ್ರಗ್ ಜಾಲವನ್ನು ಭೇದಿಸಿ ಮಹಾ ಕಾರ್ಯಾಚರಣೆ ನಡೆಸಿದ್ದಾರೆ.

ಮುಖ್ಯಾಂಶಗಳು

  • ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣವೆಂದು ತನಿಖಾ ವರದಿ ಬಹಿರಂಗ.
  • ಪ್ರಧಾನಿ ಮೋದಿ ಇಟಲಿ ಪ್ರಧಾನಿ ಮೆಲೋನಿಗೆ ಮೆಲೋಡಿ ಚಾಕೊಲೇಟ್ ಉಡುಗೊರೆ ನೀಡಿದ್ದಾರೆ.
  • ಹೆಬ್ಬಾಳ ಪೊಲೀಸರಿಂದ ಬರೋಬ್ಬರಿ 34 ಕೋಟಿ ಮೌಲ್ಯದ ಡ್ರಗ್ಸ್ ಜಾಲ ಪತ್ತೆ.

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ, ನಾಲ್ವರು ಇಂಜಿನಿಯರ್‌ಗಳ ವಿರುದ್ಧ ಕ್ರಮಕ್ಕೆ ಶಿಫಾರಸು

ಏಪ್ರಿಲ್ 29ರಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು 7 ಜನ ಮೃತಪಟ್ಟು, 7 ಜನ ಗಾಯಗೊಂಡಿದ್ದ ಭೀಕರ ದುರಂತದ ತನಿಖಾ ವರದಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಲ್ಲಿಸಿದ್ದಾರೆ. ಮೇ 14ರಂದು ಸ್ಥಳ ಪರಿಶೀಲನೆ ನಡೆಸಿ ಸಿದ್ಧಪಡಿಸಲಾದ ಈ ವರದಿಯಲ್ಲಿ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಘೋರ ನಿರ್ಲಕ್ಷ್ಯ ಬಯಲಾಗಿದೆ. ಆಸ್ಪತ್ರೆ ಆವರಣದ 22 ಸಾವಿರ ಚದರ ಅಡಿ ಪ್ರದೇಶದಲ್ಲಿ ಎಎಸ್‌ಆರ್ ಟ್ರೇಡರ್ಸ್ (ASR Traders) ಸಂಸ್ಥೆಯು ಅವೈಜ್ಞಾನಿಕವಾಗಿ ಜಿಬಿಎ ಕಟ್ಟಡ ತ್ಯಾಜ್ಯ ಹಾಗೂ ಮಣ್ಣನ್ನು ರಾಶಿ ಹಾಕಿತ್ತು. ಇದರಿಂದಾಗಿ ಗೋಡೆಯ ಮೇಲೆ ಒತ್ತಡ ಬಿದ್ದಿದೆ. ಜೊತೆಗೆ ಮಳೆನೀರು ಹರಿವಿಗೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಗೋಡೆ ಕುಸಿದಿದೆ ಎಂದು ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ಎಎಸ್‌ಆರ್ ಟ್ರೇಡರ್ಸ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಮತ್ತು ಇಲಾಖೆಯ ಇಂಜಿನಿಯರ್‌ಗಳಾದ ಸೋಮರಾಜು, ಮಹೇಶ್ ಕುಮಾರ್, ತಿಮ್ಮಪ್ಪ ಹಾಗೂ ಉದಯ ಶಂಕರ್ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಶಿಫಾರಸು ಮಾಡಲಾಗಿದ್ದು, ತಕ್ಷಣವೇ 200 ಮೀಟರ್ ಹೊಸ ಗೋಡೆ ನಿರ್ಮಿಸಲು ಆದೇಶಿಸಲಾಗಿದೆ.

ಇದನ್ನೂ ಓದಿ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು: ತನಿಖೆಗೆ ಆದೇಶಿಸಿದ ಸಿಎಂ ಸಿದ್ದರಾಮಯ್ಯ

ಪ್ರಧಾನಿ ಮೆಲೋನಿಗೆ ‘ಮೆಲೋಡಿ’ ಚಾಕೊಲೇಟ್ ಗಿಫ್ಟ್!

ತಮ್ಮ ಐದು ರಾಷ್ಟ್ರಗಳ ಅಧಿಕೃತ ಪ್ರವಾಸದ ಕೊನೆಯ ಹಂತವಾಗಿ ಮಂಗಳವಾರ ರೋಮ್‌ಗೆ ತಲುಪಿರುವ ಪ್ರಧಾನಿ ನರೇಂದ್ರ ಮೋದಿ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಭಾರತದ ಪ್ರಸಿದ್ಧ ‘ಮೆಲೋಡಿ ಚಾಕೊಲೇಟ್’ ಪ್ಯಾಕ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಉಭಯ ದೇಶಗಳ ನಡುವಿನ ಸ್ನೇಹವನ್ನು ಮಧುರವಾಗಿಸಿದ್ದಾರೆ. ಎರಡೂ ದೇಶಗಳ ಸಂಬಂಧ ಈ ಚಾಕೊಲೇಟ್‌ನಷ್ಟೇ ಸಿಹಿಯಾಗಿರಲಿ ಎಂದು ಮೋದಿ ಹಾರೈಸಿದ್ದು, ಮೆಲೋನಿಯವರು ಈ ಅಪರೂಪದ ಭೇಟಿಯ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಭಾರತ ಮತ್ತು ಇಟಲಿ ನಡುವಿನ ಜಂಟಿ ಕಾರ್ಯತಂತ್ರದ ಕ್ರಿಯಾ ಯೋಜನೆ 2025-2029 ರ ಅಡಿಯಲ್ಲಿ ವ್ಯಾಪಾರ, ಹೂಡಿಕೆ, ರಕ್ಷಣೆ, ಶುದ್ಧ ಇಂಧನ ಹಾಗೂ ತಂತ್ರಜ್ಞಾನ ವಲಯದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಉನ್ನತ ಮಟ್ಟದ ಭೇಟಿ ಜಾಗತಿಕವಾಗಿ ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ Melody: ಉಭಯ ದೇಶಗಳ ಸಂಬಂಧ ಇಷ್ಟೇ ಸಿಹಿಯಾಗಿರಲಿ, ಇಟಲಿ ಪ್ರಧಾನಿ ಮೆಲೋನಿಗೆ ಮೆಲೋಡಿ ಚಾಕೊಲೇಟ್ ಗಿಫ್ಟ್​ ಕೊಟ್ಟ ಪ್ರಧಾನಿ ಮೋದಿ

34 ಕೋಟಿ ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ಜಪ್ತಿ, ಎಂಟು ಜನ ಅರೆಸ್ಟ್

ಬೆಂಗಳೂರಿನ ಹೆಬ್ಬಾಳ ಠಾಣೆ ಪೊಲೀಸರು ಅಂತರರಾಜ್ಯ ಮಾದಕ ವಸ್ತು ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಬರೋಬ್ಬರಿ 34 ಕೋಟಿ ರೂಪಾಯಿ ಮೌಲ್ಯದ 17 ಕೆಜಿಗೂ ಅಧಿಕ ಎಂಡಿಎಂಎ (MDMA) ಡ್ರಗ್ಸ್ ವಶಪಡಿಸಿಕೊಂಡು ಎಂಟು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಗ್ಯಾಂಗ್ ದೆಹಲಿಯಿಂದ ರೈಲಿನ ಮೂಲಕ ಸೀರೆಗಳು, ಬಟ್ಟೆ ಇಸ್ತ್ರಿ ಮಾಡುವ ಟೇಬಲ್ ಮತ್ತು ಚೇರ್‌ಗಳ ಒಳಗೆ ಗಿಫ್ಟ್ ಪ್ಯಾಕ್ ಮಾದರಿಯಲ್ಲಿ ಡ್ರಗ್ಸ್ ಅಡಗಿಸಿಟ್ಟು ಬೆಂಗಳೂರಿಗೆ ಸಾಗಿಸುತ್ತಿತ್ತು. ರೈಲಿನಿಂದ ಕಾರಿಗೆ ಮಾದಕ ವಸ್ತು ಶಿಫ್ಟ್ ಮಾಡುವಾಗ ದಾಳಿ ನಡೆಸಿದ ಪೊಲೀಸರು ಮೊದಲು 4.3 ಕೆಜಿ ಡ್ರಗ್ಸ್ ವಶಕ್ಕೆ ಪಡೆದರು. ಬಳಿಕ ಆರೋಪಿಗಳ ಮಾಹಿತಿ ಮೇರೆಗೆ ಪೆಡ್ಲರ್ ಮನ್ಸೂರ್‌ನ ಸರ್ಜಾಪುರ ನಿವಾಸದ ಮೇಲೆ ದಾಳಿ ನಡೆಸಿ 10 ಕೆಜಿ ಹಾಗೂ ಹೆಣ್ಣೂರಿನಲ್ಲಿದ್ದ ಅಬ್ದುಲ್ ಸಮಾದ್ ನಿವಾಸದಿಂದ 3.5 ಕೆಜಿ ಎಂಡಿಎಂಎ ಪತ್ತೆ ಹಚ್ಚಿದ್ದಾರೆ. ಈ ಜಾಲವು ಅತ್ಯಂತ ವ್ಯವಸ್ಥಿತವಾಗಿ ಮೂರು ಲೇಯರ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 34 ಕೋಟಿ ಮೌಲ್ಯದ ಡ್ರಗ್ಸ್​​ ವಶಕ್ಕೆ; 8 ಮಂದಿ ಬಂಧನ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಜೂ.ಎನ್​​ಟಿಆರ್​​ಗೆ ವಿಶ್ ಮಾಡಿದ ಹೊಂಬಾಳೆ ಫಿಲ್ಮ್ಸ್; ಇದರ ಹಿಂದಿದೆ ದೊಡ್ಡ ಲೆಕ್ಕಾಚಾರ? – Kannada News | Jr. NTR Birthday Wish by Hombale Fuels Big Movie Deal Speculation

ಯಾವುದಾದರೂ ಹೀರೋ ಜೊತೆ ಈಗಾಗಲೇ ಕೆಲಸ ಮಾಡಿದ್ದರೆ ಅಥವಾ ಮುಂದೆ ಕೆಲಸ ಮಾಡುವ ಒಪ್ಪಂದ ಆಗಿದ್ದರೆ ಮಾತ್ರ ನಿರ್ಮಾಣ ಸಂಸ್ಥೆಗಳು ಆ ಹೀರೋಗಳಿಗೆ ಬರ್ತ್​​ಡೇ ವಿಶ್ ಮಾಡುತ್ತಾರೆ. ಜೂ.ಎನ್​​ಟಿಆರ್​ ಜೊತೆ ಸಿನಿಮಾ ಮಾಡೋದಾಗಿ ಮೈತ್ರಿ ಮೂವೀ ಮೇಕರ್ಸ್ ಈ ಮೊದಲೇ ಘೋಷಣೆ ಮಾಡಿತ್ತು. ಅಂದಿನಿಂದಲೂ ಜೂ.ಎನ್​​ಟಿಆರ್ ಜನ್ಮದಿನಕ್ಕೆ ಈ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡುತ್ತಾ ಬರುತ್ತಿದೆ. ಈಗ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಜೂ.ಎನ್​ಟಿಆರ್​​ಗೆ ಜನ್ಮದಿನದ ವಿಶ್ ಬಂದಿದ್ದು ಸಾಕಷ್ಟು ಕುತೂಹಲ ಮೂಡಿದೆ.

ಜೂನಿಯರ್ ಎನ್​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾದ ಗ್ಲಿಂಪ್ಸ್ ರಿಲೀಸ್ ಆಗಿದೆ. ಇದನ್ನು ಹೊಂಬಾಳೆ ಸಂಭ್ರಮಿಸಿದೆ. ಜೂನಿಯರ್ ಎನ್​​​​ಟಿಆರ್​​ಗೆ ವಿಶ್ ಮಾಡುವಾಗ ‘ಡ್ರ್ಯಾಗನ್’ ಸಿನಿಮಾ ಬಗ್ಗೆಯೂ ಮೆಚ್ಚುಗೆ ಸೂಚಿಸಿದೆ. ಇದರ ಹಿಂದೆ ದೊಡ್ಡದೊಂದು ಲೆಕ್ಕಾಚಾರ ಅಡಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಪ್ರಭಾಸ್ ಅವರ ‘ಸಲಾರ್’ ಚಿತ್ರಕ್ಕೆ ಬಂಡವಾಳ ಹೂಡಿದೆ. ಹಿಂದಿ, ತಮಿಳಿನಲ್ಲೂ ಈ ಸಂಸ್ಥೆ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಶೀಘ್ರದಲ್ಲೇ ಜೂ.ಎನ್​​ಟಿಆರ್ ಜೊತೆ ಹೊಂಬಾಳೆ ಸಿನಿಮಾ ಮಾಡೋ ಸಾಧ್ಯತೆ ಇದೆ ಎನ್ನಲಾಗಿದೆ. ತೆರೆಮರೆಯಲ್ಲಿ ಮಾತುಕತೆ ನಡೆಯುತ್ತಿದೆ ಎಂದು ವರದಿ ಆಗಿದೆ. ಈ ಚಿತ್ರವನ್ನು ನಿರ್ದೇಶನ ಮಾಡುವವರು ಯಾರು ಎಂಬ ಕುತೂಹಲ ಮೂಡಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂಬುದು ಅನೇಕರ ಆಸೆ.

ಇದನ್ನೂ ಓದಿ: ಎರಡು ವರ್ಷಕ್ಕೊಂದು ಅನಿಮೇಟೆಡ್ ಸಿನಿಮಾ; 10 ವರ್ಷದ ಪ್ಲ್ಯಾನ್ ರೆಡಿ ಮಾಡಿದ ಹೊಂಬಾಳೆ

ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರ ವಿದೇಶಿ ಹಾಗೂ ಕರ್ನಾಟಕದ ಹಂಚಿಕೆ ಹಕ್ಕನ್ನು ಪಡೆದಿದೆ. ‘ಡ್ರ್ಯಾಗನ್’ ಚಿತ್ರದ ಥಿಯೇಟ್ರಿಕಲ್ ರಿಲೀಸ್ ಮತ್ತು ವಿತರಣೆಯ ಜವಾಬ್ದಾರಿಯನ್ನು ಹೊಂಬಾಳೆ ವಹಿಸಿಕೊಳ್ಳುವ ಸಾಧ್ಯತೆಗಳೂ ದಟ್ಟವಾಗಿವೆ. ಈ ಕಾರಣಕ್ಕೆ ಅದು ತಮ್ಮದೇ ಸಿನಿಮಾ ಎಂಬ ರೀತಿಯಲ್ಲಿ ಸಂಭ್ರಮಿಸಿದೆ ಎಂದು ವಿಶ್ಲೇಷಿಸಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಊಟದ ತಟ್ಟೆಯಿಂದ ಅನ್ನವೇ ಔಟ್, ಹೈ-ಪ್ರೋಟೀನ್ ಡಯಟ್ ಮೊರೆಹೋದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು – Kannada News | N Chandrababu Naidu Adopts High Protein Diet, Cuts Rice From Meals

ಅಮರಾವತಿ, ಮೇ 20: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು(Chandrababu Naidu) ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಅತ್ಯುತ್ತಮ ಆರೋಗ್ಯ ಮತ್ತು ಫಿಟ್‌ನೆಸ್ ದಿನಚರಿಯನ್ನು ಸಾರ್ವಜನಿಕ ವೇದಿಕೆಗಳಲ್ಲಿ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನೆಲ್ಲೂರು ಜಿಲ್ಲೆಯಲ್ಲಿ ನಡೆದ ‘ಮತ್ಸ್ಯಕರ ಸೇವಾಲೋ’ (ಮೀನುಗಾರರ ಸೇವಾ ಕಾರ್ಯಕ್ರಮ) ಸಮಾವೇಶದಲ್ಲಿ ಭಾಗವಹಿಸಿದ್ದ ಅವರು, ತಮ್ಮ ದೈನಂದಿನ ಆಹಾರ ಪದ್ಧತಿಯನ್ನು ಬಹಿರಂಗಪಡಿಸುವ ಮೂಲಕ ಜನರಲ್ಲಿ  ಆರೋಗ್ಯದ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ.

ಊಟದ ತಟ್ಟೆಯಿಂದ ಅನ್ನವೇ ಔಟ್, ಮೀನಿಗೆ ಮೊದಲ ಆದ್ಯತೆ
ಚಂದ್ರಬಾಬು ನಾಯ್ಡು ಅವರು ಕಾರ್ಬೋಹೈಡ್ರೇಟ್‌ಗಳನ್ನು, ವಿಶೇಷವಾಗಿ ದಕ್ಷಿಣ ಭಾರತದ ಪ್ರಧಾನ ಆಹಾರವಾದ ಬಿಳಿ ಅಕ್ಕಿಯ (ಅನ್ನ) ಸೇವನೆಯನ್ನು ತಮ್ಮ ಆಹಾರ ಕ್ರಮದಿಂದ ಸಂಪೂರ್ಣವಾಗಿ ಹೊರಗಿಡುವ ದೊಡ್ಡ ನಿರ್ಧಾರವನ್ನು ತಗೆದುಕೊಂಡಿದ್ದಾರೆ. ಅವರ ದೈನಂದಿನ ಆಹಾರವು ಈಗ ಮುಖ್ಯವಾಗಿ ಪ್ರೋಟೀನ್ ಆಧಾರಿತವಾಗಿದೆ.

ಪ್ರೋಟೀನ್ ಭರಿತ ಆಹಾರವು ಮಧುಮೇಹವನ್ನು (Diabetes) ನಿಯಂತ್ರಣದಲ್ಲಿಡಲು ಮತ್ತು ದೇಹದ ಶಕ್ತಿಯನ್ನು ಕಾಪಾಡಿಕೊಳ್ಳಲು ಅತ್ಯಂತ ಸಹಕಾರಿ ಎಂದು ನಂಬಿರುವ ಅವರು ಜತೆಗೆ ಆಹಾರದಲ್ಲಿ ಎಣ್ಣೆ ಮತ್ತು ಉಪ್ಪಿನ ಬಳಕೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ನಿಯಂತ್ರಣದಲ್ಲಿಡಲು ಅವರು ಸದಾ ಸೂಚಿಸುತ್ತಾರೆ.

ತಂತ್ರಜ್ಞಾನದ ಮೂಲಕ ನಡೆಯುತ್ತೆ ಡಯಟ್ ಲೆಕ್ಕಾಚಾರ
ಚಂದ್ರಬಾಬು ನಾಯ್ಡು ಅವರ ಆರೋಗ್ಯ ನಿರ್ವಹಣೆಯು ಕೇವಲ ಸಾಮಾನ್ಯ ಆಹಾರ ಪದ್ಧತಿಯನ್ನು ಅವಲಂಬಿಸಿಲ್ಲ, ಬದಲಿಗೆ ಅದು ಸಂಪೂರ್ಣವಾಗಿ ಆಧುನಿಕ ತಂತ್ರಜ್ಞಾನದ ಲೆಕ್ಕಾಚಾರದ ಮೇಲೆ ನಡೆಯುವ ವ್ಯವಸ್ಥೆಯಾಗಿದೆ!

ಸಿಎಂ ಚಂದ್ರಬಾಬು ಅವರು ತಮ್ಮ ಬೆರಳಿಗೆ ವಿಶೇಷವಾದ ‘ಆರೋಗ್ಯ ಟ್ರ್ಯಾಕಿಂಗ್ ರಿಂಗ್’ (Health Tracking Ring) ಒಂದನ್ನು ಧರಿಸುತ್ತಾರೆ. ಈ ಸ್ಮಾರ್ಟ್ ರಿಂಗ್ ಅವರ ದೇಹದ ನಿದ್ರೆಯ ಪ್ರಮಾಣ, ಪ್ರೋಟೀನ್ ಮಟ್ಟಗಳು ಮತ್ತು ದೈಹಿಕ ಚಟುವಟಿಕೆಗಳನ್ನು ಸೆಕೆಂಡ್ ಸೆಕೆಂಡಿಗೆ ಟ್ರ್ಯಾಕ್ ಮಾಡುತ್ತದೆ. ಅವರು ದಿನದಲ್ಲಿ ಸರಿಯಾಗಿ ನಿದ್ರೆ ಮಾಡದಿದ್ದರೆ ಅಥವಾ ಅವರ ದೇಹದಲ್ಲಿ ಪ್ರೋಟೀನ್ ಮಟ್ಟ ಕಡಿಮೆಯಾದರೆ, ಈ ಹೈಟೆಕ್ ರಿಂಗ್ ತಕ್ಷಣವೇ ಅವರಿಗೆ ಎಚ್ಚರಿಕೆಯ ಸಂದೇಶವನ್ನು (Alert) ರವಾನಿಸುತ್ತದೆ. ಆ ಅಲರ್ಟ್ ಬಂದ ತಕ್ಷಣವೇ ಅವರು ತಮ್ಮ ಆಹಾರದಲ್ಲಿ ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಾರೆ.

ಮತ್ತಷ್ಟು ಓದಿ: ದೇಶದ ಶ್ರೀಮಂತ ಸಿಎಂಗಳು: ನಾಯ್ಡು ನಂ.1, ಸಿದ್ದರಾಮಯ್ಯ 3ನೇ ಸ್ಥಾನ, ಆಸ್ತಿ ಎಷ್ಟಿದೆ ಗೊತ್ತಾ?

ಆರೋಗ್ಯಕರ ಜೀವನಶೈಲಿಯ ಹೊಸ ಸಂದೇಶ
ಸಂಕ್ಷಿಪ್ತವಾಗಿ ಹೇಳುವುದಾದರೆ, ಚಂದ್ರಬಾಬು ನಾಯ್ಡು ಅವರು ಆಂಧ್ರದ ಜನತೆಗೆ ಹೊಸ ಮಾದರಿಯ ಜೀವನಶೈಲಿಯ ಸಂದೇಶವನ್ನು ನೀಡುತ್ತಿದ್ದಾರೆ. ಅನ್ನದ ಪ್ರಮಾಣವನ್ನು ಕಡಿಮೆ ಮಾಡಿ, ಪ್ರೋಟೀನ್ ಭರಿತ ಆಹಾರವನ್ನು ಅಳವಡಿಸಿಕೊಳ್ಳುವ ಮೂಲಕ ಹೇಗೆ ಆರೋಗ್ಯವಾಗಿರಬಹುದು ಎಂಬುದನ್ನು ಸ್ವತಃ ತಾವೇ ಪಾಲಿಸಿ ತೋರಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version