‘ಟಾಕ್ಸಿಕ್ ಸೆಟ್‌ನಲ್ಲಿ ಹಾಯ್, ಹೆಲೋ ಹೇಳೋಕೆ ಅವಕಾಶವೇ ಇರಲಿಲ್ಲ’; ಕಿಯಾರಾ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic Movie) ಚಿತ್ರದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಚಿತ್ರೀಕರಣದ ದಿನಗಳ ಬಗ್ಗೆ ಮಾತನಾಡಿರುವ ಕಿಯಾರಾ, ನಿರ್ದೇಶಕಿ ಗೀತು ಮೋಹನ್‌ದಾಸ್ ಸೆಟ್‌ನಲ್ಲಿ ತಮಗೆ ಹಾಕಿದ್ದ ಕಡಕ್ ರೂಲ್ಸ್ ಹಾಗೂ ಕನ್ನಡದಲ್ಲಿ ನಟಿಸುವಾಗ ಎದುರಾದ ಸವಾಲುಗಳನ್ನು ಹಂಚಿಕೊಂಡಿದ್ದಾರೆ. ‘ಹಾಯ್, ಹೆಲೋ’ಗೆ ಇರಲಿಲ್ಲ ಅವಕಾಶ ಯಾವಾಗಲೂ ಶೂಟಿಂಗ್ ಸೆಟ್‌ಗೆ ಬಂದ ತಕ್ಷಣ ಎಲ್ಲರಿಗೂ ನಗುನಗುತ್ತಾ ‘ಹಾಯ್, ಗುಡ್…