IPL 2026: 6,6,6,6,6.. ಸತತ 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿದ ಸಲೀಲ್ ಅರೋರಾ

IPL 2026: 6,6,6,6,6.. ಸತತ 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿದ ಸಲೀಲ್ ಅರೋರಾ

ಹೈದರಾಬಾದ್‌ನಲ್ಲಿರುವ ತನ್ನ ತವರು ಮೈದಾನದಲ್ಲಿ ಕಳೆದ ಕೆಲವು ದಿನಗಳಿಂದ ತಯಾರಿ ನಡೆಸುತ್ತಿರುವ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಮಾರ್ಚ್ 21 ರಂದು ತನ್ನ ಮೊದಲ ಇಂಟ್ರಾ-ಸ್ಕ್ವಾಡ್ ಪಂದ್ಯವನ್ನು ಆಡಿತು. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 94 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ಹೆನ್ರಿಕ್ ಕ್ಲಾಸೆನ್ ಕೂಡ ಭರ್ಜರಿ ಪ್ರದರ್ಶನ ನೀಡಿದರು. ಇವರ ಜೊತೆಗೆ 23 ವರ್ಷದ ಸಲೀಲ್ ಅರೋರಾ ಕೂಡ ಸಿಕ್ಸರ್​ಗಳ ಮಳೆಗರೆದು ಎಲ್ಲರ ಗಮನ ಸೆಳೆದರು.

ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸಲೀಲ್ ಅರೋರಾ, ಇಂದು ನಡೆದ ಅಭ್ಯಾಸ ಪಂದ್ಯದಲ್ಲಿ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ಅಭಿಷೇಕ್ ಶರ್ಮಾ ಮತ್ತು ಹೆನ್ರಿಕ್ ಕ್ಲಾಸೆನ್ ಅವರ ಇನ್ನಿಂಗ್ಸ್ ನಂತರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಸಲೀಲ್, ಕೇವಲ 16 ಎಸೆತಗಳಲ್ಲಿ 48 ರನ್ ಗಳಿಸುವ ಮೂಲಕ ಬೌಲರ್‌ಗಳ ಬೆವರಿಳಿಸಿದರು. 300 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಅರೋರಾ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಔಟಾದರು.

ಈ ಇನ್ನಿಂಗ್ಸ್‌ನಲ್ಲಿ, ಸಲೀಲ್ ಸತತ ಐದು ಎಸೆತಗಳಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸಿದರು. ಜಯದೇವ್ ಉನದ್ಕಟ್ ಅವರ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಸತತ 2 ಸಿಕ್ಸರ್‌ಗಳನ್ನು ಬಾರಿಸಿದ ಅರೋರಾ, ನಂತರ, ಮುಂದಿನ ಓವರ್‌ನಲ್ಲಿ ಸ್ಟ್ರೈಕ್‌ಗೆ ಬಂದ ತಕ್ಷಣ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಅರೋರಾ ಅವರ ಅಬ್ಬರದ ಬ್ಯಾಟಿಂಗ್​ನಿಂದಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಎಸ್​ಆರ್​ಹೆಚ್ ಎ ತಂಡ 21 ಓವರ್‌ಗಳಲ್ಲಿ 253 ರನ್ ಕಲೆಹಾಕಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಸಿನಿಮಾ ಪ್ರದರ್ಶನದ ವೇಳೆ ಹೈಡ್ರಾಮಾ: ಚಿತ್ರಮಂದಿರ ಧ್ವಂಸ, ಪೊಲೀಸರ ಎಂಟ್ರಿ

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ (Ranveer Singh) ನಟಿಸಿ, ಆದಿತ್ಯ ಧರ್ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಆ್ಯಕ್ಷನ್ ಸಿನಿಮಾ ‘ಧುರಂಧರ್: ದಿ ರಿವೆಂಜ್’ ಭಾರತ ಮಾತ್ರವೇ ಅಲ್ಲದೆ ವಿದೇಶದಲ್ಲಿಯೂ ಸಹ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆ ಆಗಿ ಕೆಲವೇ ದಿನಳಲ್ಲಿ 300 ಕೋಟಿಗೂ ಹೆಚ್ಚಿನ ಮೊತ್ತ ಗಳಿಕೆ ಮಾಡಿದೆ. ಸಿನಿಮಾ ಅನ್ನು ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ಆದರೆ ‘ಧುರಂಧರ್ 2’ ಸಿನಿಮಾ ಪ್ರದರ್ಶನ ಮಾಡುತ್ತಿದ್ದ ಚಿತ್ರಮಂದಿರ ಒಂದರಲ್ಲಿ ಘಟನೆಯೊಂದು ನಡೆದಿದ್ದು, ಇದರಿಂದಾಗಿ ಸಿನಿಮಾ ಪ್ರದರ್ಶನ ನಿಲ್ಲಿಸಿದ್ದು ಮಾತ್ರವಲ್ಲದೆ ಪೊಲೀಸರ ಎಂಟ್ರಿ ಸಹ ಆಗಿದೆ.

‘ಧುರಂಧರ್ 2’ ಸಿನಿಮಾ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಬಿಡುಗಡೆ ಆಗಿದೆ. ಕೆನಡಾನಲ್ಲಿ ಸಹ ‘ಧುರಂಧರ್ 2’ ಸಿನಿಮಾ ರಿಲೀಸ್ ಆಗಿದೆ. ಕೆನಡಾದ ಒಂದು ಚಿತ್ರಮಂದಿರದಲ್ಲಿ ಸಿನಿಮಾದ ಪ್ರದರ್ಶನದ ವೇಳೆ ಪ್ರೇಕ್ಷಕರು ಅಕ್ಷರಶಃ ರೊಚ್ಚಿಗೆದ್ದು ಚಿತ್ರಮಂದಿರದ ಪರದೆಯನ್ನೇ ಹರಿದು ಹಾಕಿರುವ ಆಘಾತಕಾರಿ ಘಟನೆ ನಡೆದಿದೆ. ಸಿನಿಮಾ ಪ್ರದರ್ಶನವಾಗುತ್ತಿದ್ದ ಪರದೆಯನ್ನೇ ಹರಿದ ಕಾರಣ ಚಿತ್ರ ಪ್ರದರ್ಶನವನ್ನು ನಿಲ್ಲಿಸಲಾಗಿದೆ. ಪರಿಸ್ಥಿತಿ ಕೈಮೀರಿದ ಹಿನ್ನೆಲೆಯಲ್ಲಿ ಪೊಲೀಸರು ಚಿತ್ರಮಂದಿರಕ್ಕೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಇದನ್ನೂ ಓದಿ:ಭಾರತೀಯ ಚಿತ್ರರಂಗದ ಭವಿಷ್ಯ ಬದಲಿಸಲಿದೆ ಧುರಂಧರ್ 2: ರಣವೀರ್ ಸಿಂಗ್

ಕೆನಡಾದ ಪ್ರಮುಖ ನಗರವೊಂದರ ಚಿತ್ರಮಂದಿರದಲ್ಲಿ ಸಿನಿಮಾದ ಪ್ರದರ್ಶನ ಆಗುತ್ತಿತ್ತು. ಈ ಚಿತ್ರದ ವಿಶೇಷ ಪ್ರದರ್ಶನದ ವೇಳೆ ಗದ್ದಲ ಆರಂಭವಾಯಿತು. ವರದಿಗಳ ಪ್ರಕಾರ, ತಾಂತ್ರಿಕ ಕಾರಣಗಳಿಂದಾಗಿ ಸಿನಿಮಾ ಪ್ರದರ್ಶನದಲ್ಲಿ ಪದೇ ಪದೇ ಅಡಚಣೆ ಉಂಟಾದ್ದರಿಂದ ಪ್ರೇಕ್ಷಕರು ತಾಳ್ಮೆ ಕಳೆದುಕೊಂಡರು. ಆರಂಭದಲ್ಲಿ ಕಿರುಚಾಟಕ್ಕೆ ಸೀಮಿತವಾಗಿದ್ದ ಪ್ರತಿಭಟನೆ, ಕ್ರಮೇಣ ಹಿಂಸಾಚಾರಕ್ಕೆ ತಿರುಗಿತು. ಕೆಲವು ಕಿಡಿಗೇಡಿ ಪ್ರೇಕ್ಷಕರು ಚಿತ್ರಮಂದಿರದ ಒಳಗಿದ್ದ ಆಸನಗಳನ್ನು ಕಿತ್ತು ಹಾಕಿದರು. ಇನ್ನು ಕೆಲವರು ಸ್ಕ್ರೀನ್ ಅನ್ನು ಚಾಕುವಿನಿಂದ ಹರಿದು ಹಾಕಿದ್ದಾರೆ. ಈ ವೇಳೆ ಚಿತ್ರಮಂದಿರದ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ.

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕೆನಡಾ ಪೊಲೀಸರು ಚಿತ್ರಮಂದಿರವನ್ನು ಸಂಪೂರ್ಣವಾಗಿ ತೆರವುಗೊಳಿಸಿದರು. ಘಟನೆಗೆ ಸಂಬಂಧಿಸಿದಂತೆ ಕೆಲವು ಭಾರತೀಯ ಮೂಲದ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ವೈರಲ್ ಆಗುತ್ತಿದ್ದು, ಘಟನೆಯನ್ನು ನೆಟ್ಟಿಗರು ಖಂಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈದ್ ಹಬ್ಬದ ದಿನವೇ ಜೆರುಸಲೆಮ್ ಮೇಲೆ ಇರಾನ್ ಕ್ಷಿಪಣಿ ದಾಳಿ

ಜೆರುಸಲೇಂ, ಮಾರ್ಚ್ 21: ಈದ್ ಅಲ್-ಫಿತರ್ ದಿನದಂದೇ ಜೆರುಸಲೇಂ ಮೇಲೆ ಇರಾನಿನ (Iran War) ಕ್ಷಿಪಣಿ ದಾಳಿ ನಡೆದಿದೆ. ಅಲ್-ಅಕ್ಸಾ ಮಸೀದಿಯಿಂದ ಕೆಲವೇ ನೂರು ಮೀಟರ್ ದೂರದಲ್ಲಿ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ನೂರಾರು ಮುಸ್ಲಿಂ ಆರಾಧಕರು ಮಸೀದಿಯ ಗೇಟ್ ಹೊರಗೆ ತಮ್ಮ ಈದ್ ಪ್ರಾರ್ಥನೆಗಳನ್ನು ನಡೆಸಬೇಕಾಯಿತು. ಸುಮಾರು 60 ವರ್ಷಗಳಲ್ಲಿ ಮೊದಲ ಬಾರಿಗೆ ಮಸೀದಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಯಿತು.

ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಯಹೂದಿಗಳಿಗೆ ವಿಶ್ವದ ಕೆಲವು ಪವಿತ್ರ ಸ್ಥಳಗಳಿಂದ ಕೆಲವೇ ಮೀಟರ್ ದೂರದಲ್ಲಿರುವ ಈದ್ ಅಲ್-ಫಿತರ್ ಆಚರಣೆಯ ಸಮಯದಲ್ಲಿ ಇರಾನಿನ ಕ್ಷಿಪಣಿ ಜೆರುಸಲೆಮ್ ಮೇಲೆ ದಾಳಿ ಮಾಡಿದೆ ಎಂದು ಇಸ್ರೇಲ್ ಹೇಳಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕೊನೆಗೂ ಬಗೆಹರಿದ ದಾವಣಗೆರೆ ಬೈಎಲೆಕ್ಷನ್ ಟಿಕೆಟ್ ಗೊಂದಲ: ಶಾಮನೂರು ಶಿವಶಂಕರಪ್ಪ ಮೊಮ್ಮಗನಿಗೆ ಟಿಕೆಟ್

ಬೆಂಗಳೂರು, ಮಾರ್ಚ್​ 21: ಕೊನೆಗೂ ದಾವಣಗೆರೆ ಬೈಎಲೆಕ್ಷನ್ ಟಿಕೆಟ್ ಗೊಂದಲ ಬಗೆಹರಿದಿದ್ದು, ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಟಿಕೆಟ್ ಫಿಕ್ಸ್ ಆಗಿದೆ. ಆ ಮೂಲಕ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ​ಸಚಿವ ಎಸ್​ಎಸ್​ ಮಲ್ಲಿಕಾರ್ಜುನ ಮಗ ಸಮರ್ಥ್ ಶಾಮನೂರ್​​ ಕಣಕ್ಕಿಳಿಯಲಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್​ ಆಗಲಿದೆ.

Source link

ರಾಹುಲ್ ಗಾಂಧಿ ಬಿಜೆಪಿಯ ಬಿ-ಟೀಮ್; ಕಾಂಗ್ರೆಸ್ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್ ವಾಗ್ದಾಳಿ

ತಿರುವನಂತಪುರಂ, ಮಾರ್ಚ್ 21: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ (Rahul Gandhi) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಹುಲ್ ಗಾಂಧಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕರು ಬಿಜೆಪಿಯ ‘ಬಿ-ಟೀಮ್’ ಎಂದು ಟೀಕಿಸಿದ್ದಾರೆ. ಓಲೈಕೆ ರಾಜಕೀಯ ಮಾಡುವ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಅನ್ನು ಒಂದೇ ರೀತಿಯಲ್ಲಿ ವಿರೋಧಿಸಿವೆ. ಅವೆರಡೂ ಚೆನ್ನಾಗಿ ಹೊಂದಿಕೊಳ್ಳುತ್ತಿವೆ ಎಂದು ಕೇರಳದ ಸಿಎಂ ಆರೋಪಿಸಿದ್ದಾರೆ.

ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅನುಭವಗಳಿಂದ ಕಲಿಯಲು ಇಷ್ಟಪಡದ ವ್ಯಕ್ತಿಗಳಲ್ಲಿ ರಾಹುಲ್ ಗಾಂಧಿ ಕೂಡ ಒಬ್ಬರು. ರಾಷ್ಟ್ರೀಯ ಮಟ್ಟದ ವ್ಯವಹಾರಗಳನ್ನು ಪರಿಶೀಲಿಸಿದರೆ ನಮಗೆ ಕಾಣುವುದೇನೆಂದರೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ಬಿಜೆಪಿಯ ನಿಜವಾದ ಬಿ-ಟೀಂ ಆಗಿದೆ. ಆ ಬಗ್ಗೆ ನಾನು ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಂಸತ್ ಹೊರಗೆ ರಾಹುಲ್ ಗಾಂಧಿಯ ಚಹಾ-ಪಕೋಡ ಪ್ರತಿಭಟನೆಗೆ ಮಾಜಿ ಅಧಿಕಾರಿಗಳ ವಿರೋಧ; ಕ್ಷಮೆ ಯಾಚನೆಗೆ ಒತ್ತಾಯ

ಕಾಂಗ್ರೆಸ್ ಓಲೈಕೆಯ ರಾಜಕೀಯ ಮಾಡುತ್ತಿದೆ. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುವಾದದಲ್ಲಿ ತೊಡಗಿರುವ ಗುಂಪುಗಳ ಬೆಂಬಲವನ್ನು ಗಳಿಸುವ ಗುರಿಯನ್ನು ಹೊಂದಿದೆ ಎಂದು ವಿಜಯನ್ ಆರೋಪಿಸಿದರು. ನಾವು ಯಾವುದೇ ಕೋಮುವಾದಿ ಶಕ್ತಿಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ನಾವು ಎಲ್ಲಾ ಕೋಮುವಾದವನ್ನು ವಿರೋಧಿಸುತ್ತೇವೆ ಎಂದು ಅವರು ಹೇಳಿದರು.

ಕೇರಳದಲ್ಲಿ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶಗಳು ಹೊರಬೀಳಲಿವೆ. ಈಗಾಗಲೇ ಕೇರಳದಲ್ಲಿ ಬಿಜೆಪಿ, ಕಾಂಗ್ರೆಸ್ ಚುನಾವಣಾ ಪ್ರಚಾರವನ್ನು ಆರಂಭಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಮಕೂರು: ಏ 1ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ತುಮಕೂರು, ಮಾರ್ಚ್​ 21: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಅವರ 119ನೇ ಜನ್ಮದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮ ಹಿನ್ನಲೆ ಏಪ್ರಿಲ್​ 1ರಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆಗಮನ ಹಿನ್ನಲೆಯಲ್ಲಿ ತುಮಕೂರಿನ ಕ್ಯಾತಸಂದ್ರ ಸಮೀಪದ ಸಿದ್ದಗಂಗಾ ಮಠದಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು. ಮಠದ ಪೀಠಾಧಿಪತಿ ಸಿದ್ದಲಿಂಗ ಶ್ರೀಗಳ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ತುಮಕೂರು ಎಸ್ಪಿ ಅಶೋಕ್ ಹಾಗೂ ಶಾಸಕರುಗಳಾದ ಸುರೇಶ್ ಗೌಡ, ಜ್ಯೋತಿ ಗಣೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ರಾಷ್ಟ್ರಪತಿ ಭೇಟಿ ಹಿನ್ನಲೆಯಲ್ಲಿ ಅಗತ್ಯ ಬಂದೋಬಸ್ತ್ ಹಾಗೂ ಇತರೆ ಸಿದ್ಧತೆಗಳ ಕುರಿತು ಚರ್ಚೆ ಮಾಡಲಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವೇಳಾ ಪಟ್ಟಿ ಹೀಗಿದೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾರ್ಚ್ 31ರಂದು ಬೆಂಗಳೂರಿಗೆ ಆಗಮಿಸಲಿದ್ದು, ಲೋಕಪಾಲ್ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಏಪ್ರಿಲ್ 1ರಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿರುವ ಅವರು, ಮಠದ ಪೂಜ್ಯ ಶಿವಕುಮಾರಸ್ವಾಮೀಜಿಗಳ ಗದ್ದುಗೆ ದರ್ಶನ ಪಡೆಯಲಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಸಿದ್ಧಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವ: 15 ದಿನದ ಜಾತ್ರೆಯಲ್ಲಿ ಏನೆಲ್ಲಾ ವಿಶೇಷ ಗೊತ್ತಾ?

ಬಳಿಕ ಮಠದ ಸುಮಾರು 10 ಸಾವಿರ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದು, ಆ ಬಳಿಕ ಶಿವಕುಮಾರಸ್ವಾಮೀಜಿಗಳ 119ನೇ ಜನ್ಮದಿನಾಚರಣೆ ಅಂಗವಾಗಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಕಾರ್ಯಕ್ರಮಕ್ಕೆ ಅಗತ್ಯ ಬಂದೋಬಸ್ತ್ ಹಾಗೂ ಇತರೆ ಸಿದ್ಧತೆಗಳ ಕುರಿತು ಪೂರ್ವಭಾವಿ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: 10 ತಂಡಗಳಲ್ಲಿ 31 ಗೇಮ್ ಫಿನಿಷರ್ಸ್; ಯಾವ ತಂಡದಲ್ಲಿ ಯಾರ್ಯಾರು?

ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ ಮಾಡುವ ತಂಡದ ಪರ ಇನ್ನಿಂಗ್ಸ್ ಪ್ರಾರಂಭಿಸುವವರನ್ನು ಓಪನರ್ ಎಂದು ಕರೆದರೆ, ಪಂದ್ಯವನ್ನು ಮುಗಿಸುವವರನ್ನು ಫಿನಿಷರ್ ಎಂದು ಕರೆಯಲಾಗುತ್ತದೆ. ಇಂತಹ ಗೇಮ್ ಫಿನಿಷರ್​ಗಳು ಐಪಿಎಲ್​ನಲ್ಲಿಯೂ (IPL 2026) ಇದ್ದಾರೆ. 10 ತಂಡಗಳು ಪಾಲ್ಗೊಳ್ಳುವ ಈ ಲೀಗ್​ನಲ್ಲಿ ಪಂದ್ಯಗಳನ್ನು ಮುಗಿಸುವಲ್ಲಿ ಪ್ರವೀಣರಾದ 31 ಆಟಗಾರರಿದ್ದಾರೆ. ಹಾಗಿದ್ದರೆ ಈ 10 ತಂಡಗಳಲ್ಲಿರುವ ಆ 31 ಗೇಮ್ ಫಿನಿಷರ್‌ಗಳು ಯಾರ್ಯಾರು ಎಂಬುದು ಪ್ರಶ್ನೆ. ಇದರ ಜೊತೆಗೆ ಪ್ರತಿ ತಂಡವು ಎಷ್ಟು ಫಿನಿಷರ್‌ಗಳನ್ನು ಹೊಂದಿದೆ? ಎಂಬುದನ್ನು ವಿವರವಾಗಿ ನೋಡುವುದಾದರೆ..

10 ತಂಡಗಳಲ್ಲಿರುವ ಗೇಮ್ ಫಿನಿಷರ್ಸ್

  • ಮುಂಬೈ ಇಂಡಿಯನ್ಸ್ ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ತಂಡವಾಗಿದ್ದು, ಈ ತಂಡ ಮೂವರು ಗೇಮ್ ಫಿನಿಷರ್‌ಗಳನ್ನು ಹೊಂದಿದೆ. ಅವರಲ್ಲಿ ಹಾರ್ದಿಕ್ ಪಾಂಡ್ಯ, ನಮನ್ ಧೀರ್ ಮತ್ತು ವಿಲ್ ಜ್ಯಾಕ್ಸ್ ಸೇರಿದ್ದಾರೆ.
  • ಮುಂಬೈ ಇಂಡಿಯನ್ಸ್​ನಂತೆಯೇ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್​ನಲ್ಲೂ ಎಂಎಸ್ ಧೋನಿ, ಶಿವಂ ದುಬೆ, ಕಾರ್ತಿಕ್ ಶರ್ಮಾ ಮತ್ತು ಡೆವಾಲ್ಡ್ ಬ್ರೆವಿಸ್ ಎಂಬ ನಾಲ್ಕು ಬಲಿಷ್ಠ ಫಿನಿಷರ್‌ಗಳಿದ್ದಾರೆ.
  • ಐಪಿಎಲ್‌ನ ಹಾಲಿ ಚಾಂಪಿಯನ್ ಆಗಿರುವ ಆರ್‌ಸಿಬಿ ತಂಡದಲ್ಲೂ ಅಪಾಯಕಾರಿ ಗೇಮ್ ಫಿನಿಷರ್​ಗಳಿದ್ದಾರೆ. ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ತಂಡ ಚಾಂಪಿಯನ್ ಆಗುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಅದರಂತೆ ಈ ಆವೃತ್ತಿಯಲ್ಲೂ ಆರ್​ಸಿಬಿ ತಂಡದಲ್ಲಿ ಟಿಮ್ ಡೇವಿಡ್, ಜಿತೇಶ್ ಶರ್ಮಾ ಮತ್ತು ರೊಮಾರಿಯೊ ಶೆಫರ್ಡ್‌ರಂತಹ ಮೂವರು ಗೇಮ್ ಫಿನಿಶರ್‌ಗಳಿದ್ದಾರೆ.
  • ಡೆಲ್ಲಿ ಕ್ಯಾಪಿಟಲ್ಸ್ ತಂಡ ಇನ್ನೂ ಐಪಿಎಲ್ ಟ್ರೋಫಿ ಎತ್ತಿಹಿಡಿದಿಲ್ಲದಿರಬಹುದು, ಆದರೆ ಈ ತಂಡದಲ್ಲೂ ಮೂವರು ಅತ್ಯುತ್ತಮ ಫಿನಿಷರ್‌ಗಳಿದ್ದಾರೆ. ಡೇವಿಡ್ ಮಿಲ್ಲರ್, ಸಮೀರ್ ರಿಜ್ವಿ ಮತ್ತು ಅಶುತೋಷ್ ಶರ್ಮಾ ಅವರಂತಹ ಮ್ಯಾಚ್-ಫಿನಿಶಿಂಗ್ ಪವರ್‌ಹೌಸ್‌ಗಳು ಅವರಲ್ಲಿವೆ.
  • ಸನ್‌ರೈಸರ್ಸ್ ಹೈದರಾಬಾದ್ ತಂಡ 2026 ರ ಐಪಿಎಲ್​ಗಾಗಿ ಲಿಯಾಮ್ ಲಿವಿಂಗ್‌ಸ್ಟೋನ್ ಎಂಬ ಹೊಸ ಫಿನಿಷರ್ ಅನ್ನು ತಂಡಕ್ಕೆ ಸೇರಿಸಿಕೊಂಡಿದೆ. ತಂಡದಲ್ಲಿ ಈಗಾಗಲೇ ಹೆನ್ರಿಚ್ ಕ್ಲಾಸೆನ್ ಮತ್ತು ಅನಿಕೇತ್ ವರ್ಮಾ ಎಂಬ ಇಬ್ಬರು ಮ್ಯಾಚ್-ಫಿನಿಷರ್‌ಗಳಿದ್ದಾರೆ.
  • ಗುಜರಾತ್ ಟೈಟಾನ್ಸ್ ತಂಡ ಕೂಡ ಮೂವರು ಬಲಿಷ್ಠ ಫಿನಿಶರ್‌ಗಳನ್ನು ಹೊಂದಿದ್ದು, ಇದರಲ್ಲಿ ಜೇಸನ್ ಹೋಲ್ಡರ್, ರಾಹುಲ್ ತೇವಾಟಿಯಾ ಮತ್ತು ಗ್ಲೆನ್ ಫಿಲಿಪ್ಸ್ ಅವರ ಹೆಸರುಗಳು ಸೇರಿವೆ.
  • ಐಪಿಎಲ್ 2026 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ನಿಕೋಲಸ್ ಪೂರನ್, ಆಯುಷ್ ಬಡೋನಿ ಮತ್ತು ಅಬ್ದುಲ್ ಸಮದ್ ಪಂದ್ಯಗಳನ್ನು ಮುಗಿಸುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
  • ರಾಜಸ್ಥಾನ್ ರಾಯಲ್ಸ್ ತಂಡದಲ್ಲಿಯೂ ಮ್ಯಾಚ್ ಫಿನಿಷರ್‌ಗಳ ಕೊರತೆಯಿಲ್ಲ. ತಂಡವು ವೈಭವ್ ಸೂರ್ಯವಂಶಿಯಂತಹ ಸ್ಫೋಟಕ ಆರಂಭಿಕನನ್ನು ಹೊಂದಿದ್ದರೆ, ಫಿನಿಷರ್‌ಗಳಲ್ಲಿ ಶಿಮ್ರಾನ್ ಹೆಟ್ಮೆಯರ್, ಶುಭಂ ದುಬೆ ಮತ್ತು ಡೊನೊವನ್ ಫೆರೇರಾ ಸೇರಿದ್ದಾರೆ.
  • ಐಪಿಎಲ್ 2026 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಮ್ಯಾಚ್-ಫಿನಿಷರ್ ಆಂಡ್ರೆ ರಸೆಲ್ ಅವರ ಸೇವೆಯನ್ನು ಹೊಂದಿರುವುದಿಲ್ಲ. ಆದಾಗ್ಯೂ, ತಂಡವು ಇನ್ನೂ ರಿಂಕು ಸಿಂಗ್, ರಮಣದೀಪ್ ಸಿಂಗ್ ಮತ್ತು ಪೊವೆಲ್ ಅವರಂತಹ ಆಟಗಾರರನ್ನು ಹೊಂದಿದೆ.
  • ಪಂಜಾಬ್ ಕಿಂಗ್ಸ್ ತಂಡವು ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಮಾರ್ಕೊ ಯಾನ್ಸೆನ್ ಸೇರಿದಂತೆ 3 ಅತ್ಯುತ್ತಮ ಫಿನಿಷರ್‌ಗಳನ್ನು ಹೊಂದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

WITT Summit 2026: ರಾಜಕೀಯದಿಂದ ಕ್ರೀಡೆಯವರೆಗೆ; ವಿಟ್ ಶೃಂಗಸಭೆಯ 2ನೇ ದಿನದ ಆಕರ್ಷಣೆಗಳಿವು

ನವದೆಹಲಿ, ಮಾರ್ಚ್ 21: ದೆಹಲಿಯಲ್ಲಿ ಮಾರ್ಚ್ 23 ಮತ್ತು 24ರಂದು ನಡೆಯಲಿರುವ “ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026” (WITT Summit) ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಮತ್ತು ಕಾರ್ಪೊರೇಟ್ ನಾಯಕರನ್ನು ಒಟ್ಟುಗೂಡಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಮುಖ್ಯ ಅತಿಥಿಯಾಗಿ ಈ ವೇದಿಕೆಯನ್ನು ಅಲಂಕರಿಸಲಿದ್ದಾರೆ. ಈ ಬಾರಿ ಟಿವಿ9 ನೆಟ್‌ವರ್ಕ್‌ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026’ ಇಂಧನ, ಮೂಲಸೌಕರ್ಯ ಮತ್ತು ಭಾರತದ ಕೈಗಾರಿಕಾ ಭವಿಷ್ಯದ ಕುರಿತು ಆಳವಾದ ಚರ್ಚೆಗೆ ವೇದಿಕೆಯಾಗಲಿದೆ.

“ಭಾರತ ಮತ್ತು ಜಗತ್ತು” ಎಂಬ ವಿಷಯವನ್ನು ಆಧರಿಸಿದ ಈ ಕಾರ್ಯಕ್ರಮವು ರಾಜಕೀಯ ನಾಯಕತ್ವ, ಜಾಗತಿಕ ಚಿಂತಕರು, ಕೈಗಾರಿಕೆ ಮತ್ತು ನಾಗರಿಕ ಸಮಾಜವನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ ದೇಶದ ಅಭಿವೃದ್ಧಿ ಪಥದ ಬಗ್ಗೆ ಚರ್ಚಿಸಲಿದೆ. ‘ಭಾರತ ಮತ್ತು ಜಗತ್ತು’ ಎಂಬ ವಿಷಯದೊಂದಿಗೆ ವಿಟ್ ಶೃಂಗಸಭೆಯಲ್ಲಿ ಚಿಂತಕರು, ಉದ್ಯಮಿಗಳು ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ: WITT Summit: ಜಗತ್ತಿನ ಅನಿಶ್ಚಿತತೆಯ ನಡುವೆಯೂ ಜಾಗತಿಕ ದಿಕ್ಕನ್ನು ರೂಪಿಸಲು ಭಾರತ ಸಜ್ಜಾಗಿದೆ; ಟಿವಿ9 ಎಂಡಿ ಮತ್ತು ಸಿಇಒ ಬರುಣ್ ದಾಸ್

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಭಾಷಣ ಮಾಡಿದ ಶೃಂಗಸಭೆಯ ನಂತರ, ಎರಡನೇ ದಿನವು ‘ಭಾರತ ಮತ್ತು ಜಗತ್ತು’ ಎಂಬ ವಿಷಯದ ಸುತ್ತ ನಡೆಯುತ್ತಿದ್ದು, ದೇಶದ ಉನ್ನತ ರಾಜಕೀಯ ನಾಯಕರು ಭಾಷಣ ಮಾಡುತ್ತಾರೆ. ಮಾಜಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಸ್ಮೃತಿ ಇರಾನಿ , ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ಪಿಯೂಷ್ ಗೋಯಲ್ ಮತ್ತು ಈಶಾನ್ಯ ಪ್ರದೇಶದ ಸಂವಹನ ಮತ್ತು ಅಭಿವೃದ್ಧಿ ಸಚಿವೆ ಜ್ಯೋತಿರಾದಿತ್ಯ ಸಿಂಧಿಯಾ ಅವರ ಭಾಷಣಗಳು ಕಾರ್ಯಕ್ರಮದ ಎರಡನೇ ದಿನದ ಪ್ರಮುಖ ಅಂಶಗಳಾಗಿವೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ , ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಭಾಷಣ ಮಾಡಲಿದ್ದಾರೆ. ಲೋಕಸಭಾ ಸದಸ್ಯರಾದ ಅಖಿಲೇಶ್ ಯಾದವ್ ಮತ್ತು ಅಸಾದುದ್ದೀನ್ ಓವೈಸಿ ಕೂಡ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನೂ ಓದಿ: WITT Summit 2026: WITT ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯಿಂದ ಭಾರತದ ಅಭಿವೃದ್ಧಿಯ ದಿಕ್ಕಿನ ಕುರಿತು ಮಹತ್ವದ ಚರ್ಚೆ

ಈ ಶೃಂಗಸಭೆಯ ಎರಡನೇ ದಿನದ ಮುಖ್ಯ ಅಂಶಗಳಲ್ಲಿ ಭಾರತೀಯ ಕ್ರೀಡಾ ದಂತಕಥೆಗಳೊಂದಿಗಿನ ಅನೇಕ ಮಾತುಕತೆಗಳು ಕೂಡ ಸೇರಿವೆ. ಅವರಲ್ಲಿ ಪ್ರಮುಖರು ಕ್ರಿಕೆಟ್ ದಂತಕಥೆ ಸೌರವ್ ಗಂಗೂಲಿ, ಯುವ ಭಾರತೀಯ ಕ್ರಿಕೆಟಿಗರಾದ ಅಕ್ಷರ್ ಪಟೇಲ್ ಮತ್ತು ಅರ್ಶ್ದೀಪ್ ಸಿಂಗ್ .

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪುನೀತ್ ರಾಜ್​​ಕುಮಾರ್ ಪುತ್ಥಳಿ ಅನಾವರಣ: ಅಶ್ವಿನಿ ಪುನೀತ್​​ರಾಜ್​ಕುಮಾರ್ ಮಾತು

ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ಬಳಿ ಪುನೀತ್ ರಾಜ್​​ಕುಮಾರ್ (Puneeth Rajkumar) ಅವರ 800 ಕೆಜಿ ತೂಕದ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡಲಾಯ್ತು. ಕಾರ್ಯಕ್ರಮದಲ್ಲಿ ಶಾಸಕ ಅಶ್ವಥ್ ನಾರಾಯಣ್, ಅಶ್ವಿನಿ ಪುನೀತ್ ರಾಜ್​​ಕುಮಾರ್ ಮತ್ತು ಅವರ ಪುತ್ರಿ ಧೃತಿ, ಚಲನಚಿತ್ರ ನಿರ್ದೇಶಕರಾದ ಡಾ ರಾಜೇಂದ್ರ ಸಿಂಗ್ ಬಾಬು ಇನ್ನೂ ಹಲವರು ಭಾಗಿ ಆಗಿದ್ದರು. ಕಾರ್ಯಕ್ರದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಮಾತನಾಡಿದರು. ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ 6 ಬಿಜೆಡಿ ಶಾಸಕರ ಅಮಾನತು

ಒಡಿಶಾ, ಮಾರ್ಚ್ 21: ಇತ್ತೀಚೆಗೆ ಒಡಿಶಾದಲ್ಲಿ ನಡೆದ ರಾಜ್ಯಸಭಾ ಚುನಾವಣೆಯ (Rajya Sabha Elections) ಸಂದರ್ಭದಲ್ಲಿ ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಿಜು ಜನತಾದಳ (ಬಿಜೆಡಿ) ತನ್ನ 6 ಶಾಸಕರನ್ನು ಅಮಾನತುಗೊಳಿಸಿದೆ. ಶಾಸಕರು ಅಡ್ಡ ಮತದಾನದಲ್ಲಿ ತೊಡಗಿದ್ದಾರೆ ಎಂದು ಪತ್ತೆಯಾದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ. ಶೋಕಾಸ್ ನೋಟಿಸ್‌ಗೆ ಅವರು ನೀಡಿದ ಉತ್ತರಗಳ ಪರಿಶೀಲನೆ ಮತ್ತು ಬಿಜೆಡಿ ಶಿಸ್ತು ಸಮಿತಿಯ ಸಂಪೂರ್ಣ ಪರಿಶೀಲನೆಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಒಡಿಶಾದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಗಮನಾರ್ಹ ಅಡ್ಡ ಮತದಾನ ಕಂಡುಬಂದಿತು. 8 ಬಿಜೆಡಿ ಶಾಸಕರು (ಈಗ ಅಮಾನತುಗೊಂಡಿರುವ ಆರು ಮಂದಿ ಮತ್ತು ಈಗಾಗಲೇ ಅಮಾನತುಗೊಂಡಿರುವ ಇಬ್ಬರು ಸದಸ್ಯರು ಸೇರಿದಂತೆ) ಬಿಜೆಡಿ, ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಜಂಟಿಯಾಗಿ ಸ್ಪರ್ಧಿಸಿದ್ದ ಸಾಮಾನ್ಯ ವಿರೋಧ ಪಕ್ಷದ ಅಭ್ಯರ್ಥಿ ದತ್ತೇಶ್ವರ ಹೋಟಾ ಬದಲಿಗೆ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ದಿಲೀಪ್ ರೇ ಅವರಿಗೆ ಮತ ಚಲಾಯಿಸಿದ್ದರು. ಇದು ದಿಲೀಪ್ ರೇ ಅವರ ಗೆಲುವಿಗೆ ಕಾರಣವಾಯಿತು.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆಗೆ 9 ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ; ಬಿಹಾರದಿಂದ ಪಕ್ಷದ ಮುಖ್ಯಸ್ಥ ನಿತಿನ್ ನಬಿನ್ ಕಣಕ್ಕೆ

ಇದರ ಪರಿಣಾಮವಾಗಿ ಬಿಜೆಪಿ 2 ಸ್ಥಾನಗಳನ್ನು, ಬಿಜೆಡಿ 1 ಸ್ಥಾನ ಮತ್ತು ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ 4ನೇ ಸ್ಥಾನಗಳನ್ನು ಪಡೆದರು. ಬಿಜೆಡಿ ಈ ಹಿಂದೆ ಮಾರ್ಚ್ 17ರಂದು 6 ಶಾಸಕರಿಗೆ ಪಕ್ಷದ ವಿಪ್ ಅನ್ನು ಧಿಕ್ಕರಿಸಿದ್ದಕ್ಕಾಗಿ ವಿವರಣೆಗಳನ್ನು ಕೋರಿ ಶೋಕಾಸ್ ನೋಟಿಸ್‌ಗಳನ್ನು ನೀಡಿತ್ತು. ಇದೀಗ ಅವರನ್ನು ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡ ಶಾಸಕರು:

ಬಲಿಗುಡದ ಶಾಸಕರಾದ ಚಕ್ರಮಣಿ ಕನ್ಹಾರ್

ಜಯದೇವ್‌ನ ಶಾಸಕರಾದ ನಬಾ ಕಿಶೋರ್ ಮಲ್ಲಿಕ್

ಚೌದ್ವಾರ-ಕಟಕ್‌ನ ಶಾಸಕರಾದ ಸೌವಿಕ್ ಬಿಸ್ವಾಲ್

ಬಸ್ತಾದ ಶಾಸಕರಾದ ಸುಬಾಸಿನಿ ಜೆನಾ

ತಿರ್ಟೋಲ್‌ನ ಶಾಸಕ ರಮಾಕಾಂತ ಭೋಯ್

ಬಂಕಿಯ ಶಾಸಕರಾದ ದೇವಿ ರಂಜನ್ ತ್ರಿಪಾಠಿ

ಇದನ್ನೂ ಓದಿ: ರಾಜ್ಯಸಭಾ ಚುನಾವಣೆಗೆ ಬಿಜೆಪಿ ಸನ್ನದ್ಧ: ಮತದಾನಕ್ಕೆ ಶಾಸಕರ ಬ್ಯಾಚ್ ರಚನೆ, ಅದಕ್ಕೆ ಓರ್ವ ಲೀಡರ್

ಈ ಶಾಸಕರು ಬಿಜೆಡಿ ಪಕ್ಷದ ಮೂಲ ತತ್ವವನ್ನು ಉಲ್ಲಂಘಿಸಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ. ಮಾರ್ಚ್ 16ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನವು ಪಕ್ಷದ ವಿಪ್ ಮತ್ತು ಶಿಸ್ತಿನ ಉಲ್ಲಂಘನೆಯಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version