ಮಂಗಳ ಮಿಲನ್ ಸಭೆಯಲ್ಲಿ ತ್ರಿವರ್ಣ ಧ್ವಜ ಬೀಸುತ್ತಾ, ವಂದೇ ಮಾತರಂ ಮೂಲಕ ಪ್ರಧಾನಿ ಮೋದಿಗೆ ಸ್ವಾಗತ – Kannada News | NDA MPs greet PM Narendra Modi at Mangal Milan raise slogans by waving Tricolour

ನವದೆಹಲಿ, ಆಗಸ್ಟ್ 11: ಸಂಸತ್ ಭವನದ ಸಂಕೀರ್ಣದಲ್ಲಿ ಇಂದು ನಡೆದ ಆಡಳಿತಾರೂಢ ಮೈತ್ರಿಕೂಟದ ಸಾಪ್ತಾಹಿಕ ಸಂಸದೀಯ ಪಕ್ಷದ ಸಭೆಯ ಸ್ಥಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಆಗಮಿಸುತ್ತಿದ್ದಂತೆ, ಎನ್‌ಡಿಎ ಸಂಸದರು ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿ ‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕೀ ಜೈ’ ಎಂದು ಮುಗಿಲು ಮುಟ್ಟುವಂತೆ ಘೋಷಣೆಗಳನ್ನು ಕೂಗಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ‘ಮಂಗಳ ಮಿಲನ್’ ಎಂಬ ಈ ಸಭೆಯಲ್ಲಿ ಕೇಂದ್ರ ಸಚಿವರು, ಎನ್‌ಡಿಎ ನಾಯಕರು ಹಾಗೂ ಮೈತ್ರಿಕೂಟದ ಘಟಕ ಪಕ್ಷಗಳ ಸಂಸದರು ಭಾಗವಹಿಸಿದ್ದರು.

ಸಂಸತ್ತಿನ ಗ್ರಂಥಾಲಯದಲ್ಲಿರುವ ಜಿ. ಎಂ. ಸಿ. ಬಾಲಯೋಗಿ ಸಭಾಂಗಣಕ್ಕೆ ಪ್ರಧಾನಿ ಮೋದಿ ಪ್ರವೇಶಿಸುತ್ತಿದ್ದಂತೆ, ಅಲ್ಲಿ ನೆರೆದಿದ್ದ ಸಚಿವರು ಮತ್ತು ಸಂಸದರು ರಾಷ್ಟ್ರಧ್ವಜವನ್ನು ಬೀಸುತ್ತಾ ‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕೀ ಜೈ’ ಘೋಷಣೆಗಳೊಂದಿಗೆ ಅವರನ್ನು ಅಭಿನಂದಿಸಿದರು. ಈ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್, ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್, ಎಸ್. ಜೈಶಂಕರ್ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಿದ್ದರು.

ಎನ್‌ಡಿಎ ಮೈತ್ರಿಕೂಟದ ಇತರ ಪಕ್ಷಗಳ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (ಜೆಡಿಎಸ್), ಕಿಂಜರಾಪು ರಾಮ್ ಮೋಹನ್ ನಾಯ್ಡು (ಟಿಡಿಪಿ), ರಾಮದಾಸ್ ಬಂಡು ಅಠಾವಳೆ (ಆರ್‌ಪಿಐ-ಎ), ಪ್ರಫುಲ್ ಪಟೇಲ್ (ಎನ್‌ಸಿಪಿ), ಉಪೇಂದ್ರ ಕುಶ್ವಾಹಾ (ಆರ್‌ಎಲ್‌ಎಂ), ಶತಾಬ್ದಿ ರಾಯ್ (ಎನ್‌ಸಿಪಿಐ) ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಸತ್ತಿನ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಮಂಗಳವಾರ ಎನ್‌ಡಿಎ ಸಂಸದೀಯ ಪಕ್ಷದ ಈ ಸಭೆಯನ್ನು ಆಯೋಜಿಸಲಾಗುತ್ತಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಾಮೀನು ಷರತ್ತು ಉಲ್ಲಂಘಿಸಿದ ಆರೋಪ: ಕೊನೆಗೂ ಮೌನ ಮುರಿದ ಸಚಿವ ನಾಗೇಂದ್ರ ಹೇಳಿದ್ದೇನು? – Kannada News | Minister B Nagendra Clarify about BJPs bail condition Violation in valmiki corporation scam case

ಕೊಪ್ಪಳ, (ಆಗಸ್ಟ್ 11): ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಕೋರ್ಟ್ ಜಾಮೀನು ಷರತ್ತು ಉಲ್ಲಂಘಿಸಿ ಕರ್ನಾಟಕ ಬಿಟ್ಟು ದೆಹಲಿಗೆ ಹೋಗಿದ್ದಾರೆ ಎಂದು ವಿಪಕ್ಷಗಳ ಆರೋಪಕ್ಕೆ ಸಚಿವ ಬಿ ನಾಗೇಂದ್ರ ಕೊನೆಗೂ ಮೌನ ಮುರಿದಿದ್ದು, ರಾಜ್ಯದಿಂದ ಹೊರ ಹೋದಾಗೆಲ್ಲ ಅನುಮತಿ ಪಡೆದು ಹೋಗಿದ್ದೇನೆ. ನಾನು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ. ಈ ಕೇಸ್​ನಲ್ಲಿ ನ್ಯಾಯಾಲಯ ಕೂಡ ತಡೆಯಾಜ್ಞೆ ಕೊಟ್ಟಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೊಪ್ಪಳ ತಾಲೂಕಿನ ಮುನಿರಾಬಾದ್​ನಲ್ಲಿ ಇಂದು (ಆಗಸ್ಟ್ 11) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ನಾಗೇಂದ್ರ, ನಾನು ಏಟು ತಿಂದ ಹುಲಿ. ರಾಜ್ಯದ ಜನರು ಮೆಚ್ಚುವಂತಹ ಕೆಲಸ ಮಾಡ್ತೀನಿ ನೋಡ್ತಿರಿ. ಹಿಂದುಳಿದವರು, ದಲಿತ ಬೆಳೆಯುವುದನ್ನು ಬಿಜೆಪಿಗೆ ಸಹಿಸೋಕೆ ಆಗ್ತಿಲ್ಲ. ಸದನದಲ್ಲಿ ಬಿಜೆಪಿಯವರಿಗೆ ಉತ್ತರ ಕೊಡಲು ನಾವು ತಯಾರಾಗಿದ್ದೇವೆ. ನಮ್ಮ ಮುಖ್ಯಮಂತ್ರಿಯವರು ಇದಕ್ಕೆಲ್ಲ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸೋದು ವಿರೋಧ ಪಕ್ಷದವರ ಕೆಲಸ. ಸಚಿವ ಸಂಪುಟದ ಎಲ್ಲರೂ ಉತ್ತರ ಕೊಡುತ್ತೇವೆ. ವಾಲ್ಮೀಕಿ ನಿಗಮದಿಂದ ಹೋಗಿದ್ದ ಹಣ ವಾಪಸ್ ತರುತ್ತಿದ್ದಾರೆ. ನಾನು ಆ ಕೇಸ್​ನಲ್ಲಿ ಆರೋಪಿ, ಅಪರಾಧಿ ಅಲ್ಲ, ತಪ್ಪಿತಸ್ಥ ಅಲ್ಲ. ಪ್ರಕರಣದಿಂದ ಮುಕ್ತವಾಗಿ ಹೊರಗೆ ಬರ್ತೀನಿ ಅಂತಾ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ನೋಡಿ: ಸಂಪುಟದಿಂದ ವಜಾಕ್ಕೆ ಆಗ್ರಹಗಳ ಮಧ್ಯೆ ಸಚಿವ ನಾಗೇಂದ್ರಗೆ ಕೋರ್ಟ್ ಬಿಗ್ ರಿಲೀಫ್

Source link

ಆಗಸ್ಟ್ 14ರಂದು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ – Kannada News | Basavaraj Horatti Resigns, Saleem Ahmed Proposed as New Karnataka Council Speaker; Election on August 14

ಬೆಂಗಳೂರು, ಆ.11: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಪಡಿಸಲಾಗಿದೆ. ಆಗಸ್ಟ್ 14 ರಂದು ಈ ಸ್ಥಾನಕ್ಕೆ ಹೊಸ ಸಭಾಪತಿ ಆಯ್ಕೆಗೆ ಮತದಾನ ನಡೆಯಲಿದೆ. ಪ್ರಸ್ತುತ ಸಭಾಪತಿಯಾಗಿದ್ದ ಬಸವರಾಜ್ ಹೊರಟ್ಟಿ ಅವರು ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯು ಸ್ವಯಂಪ್ರೇರಿತವಲ್ಲ, ಬದಲಿಗೆ ಬಲವಂತವಾಗಿ ರಾಜೀನಾಮೆ ನೀಡುವಂತೆ ಮಾಡಲಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಆದರೆ, ಈ ಕುರಿತು ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಾಂಗ್ರೆಸ್ ಪಕ್ಷದ ವತಿಯಿಂದ, ಸಲೀಮ್ ಅಹಮದ್ ಅವರ ಹೆಸರನ್ನು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೊರಟ್ಟಿ ಅವರ ರಾಜೀನಾಮೆ ನಂತರ ತೆರವಾಗಿರುವ ಈ ಸ್ಥಾನಕ್ಕೆ ಸಲೀಮ್ ಅಹಮದ್ ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ಆಗಸ್ಟ್ 14 ರಂದು ನಡೆಯಲಿರುವ ಚುನಾವಣೆ ಕೇವಲ ಔಪಚಾರಿಕ ಪ್ರಕ್ರಿಯೆಯಾಗಿದ್ದು, ಹೊಸ ಸಭಾಪತಿ ಆಯ್ಕೆಗೆ ಬೇಕಾದ ಸಾಂವಿಧಾನಿಕ ಕ್ರಮಗಳನ್ನು ಪೂರೈಸುವ ಸಲುವಾಗಿ ಈ ದಿನಾಂಕವನ್ನು ನಿಗದಿಪಡಿಸಲಾಗಿದೆ. ಈ ಬೆಳವಣಿಗೆಯು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾವೇರಿ ನೀರು ವಿವಾದ: CWRC ಶಿಫಾರಸ್ಸು ಎತ್ತಿಹಿಡಿದ CWMA, ಕರ್ನಾಟಕಕ್ಕೆ ಮತ್ತೆ ಬರೆ – Kannada News | Cauvery water dispute: CWMA Rejects Karnataka’s Appeal, Orders Water Release To Tamil Nadu as per CWRC

ನವದೆಹಲಿ, (ಆಗಸ್ಟ್ 11): ತಮಿಳುನಾಡಿಗೆ 12 ದಿನಗಳ ಕಾಲ ಪ್ರತಿದಿನ 3,500 ಕ್ಯುಸೆಕ್ ನೀರು ಬಿಡಬೇಕು ಎಂದು ಕರ್ನಾಟಕಕ್ಕೆ (Karnataka) ಕಾವೇರಿ ನಿರ್ವಹಣಾ ಪ್ರಾಧಿಕಾರ (CWMA) ಸಹ ನಿರ್ದೇಶನ ನೀಡಿದೆ. 15 ದಿನಗಳ ಕಾಲ ನಿತ್ಯ 3500 ಕ್ಯುಸೆಕ್‌ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲು ಸೂಚಿಸಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ)ಯ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಮೇಲ್ಮನವಿ ಸಲ್ಲಿಸಿತ್ತು. ಆದ್ರೆ,  ಸಿಡಬ್ಲ್ಯುಆರ್‌ಸಿ ಆದೇಶವನ್ನು ಈಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಕೂಡ ಎತ್ತಿ ಹಿಡಿದಿದೆ. ಆ ಮೂಲಕ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಕರ್ನಾಟಕಕ್ಕೆ ಮತ್ತೆ ಗಾಯದ ಮೇಲೆ ಬರೆ ಎಳೆದಿದೆ.

ಸುಪ್ರೀಂಕೋರ್ಟ್​​​​ ಮೆಟ್ಟಿಲೇರಲು ಚಿಂತನೆ

ತಮಿಳುನಾಡಿಗೆ ನಿತ್ಯ 3500 ಕ್ಯುಸೆಕ್‌ ನೀರು ಬಿಡಬೇಕೆಂಬ ಸಿಡಬ್ಲ್ಯುಆರ್‌ಸಿ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿಹಿಡಿದಿದ್ದರಿಂದ ಕರ್ನಾಟಕ ಸರ್ಕಾರ ಸಮಾಧಾನಗೊಂಡಿದ್ದು, CWMA ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಚಿಂತನೆ ನಡೆಸಿದೆ.  ವಾಡಿಕೆಗಿಂತ ಕಡಿಮೆ ಮಳೆ, ಹಾಗೂ ಕರ್ನಾಟಕದ ರೈತರು ಬೆಳೆದ ಬೆಳೆಗೂ ನೀರಿಲ್ಲ ಎನ್ನುವ ಅಂಶಗಳನ್ನಿಟ್ಟುಕೊಂಡು ಸುಪ್ರೀಂಕೋರ್ಟ್​​​​ನಲ್ಲಿ ಪ್ರಬಲ ವಾದ ಮಂಡಿಸಲು ಡಿಕೆ ಶಿವಕುಮಾರ್ ಸರ್ಕಾರ ಮುಂದಾಗಿದ್ದು, ಈ ಸಂಬಂಧ ನಾಳೆ (ಆಗಸ್ಟ 12) ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜಲಸಂಪನ್ಮೂಲ ಟೆಕ್ನಿಕಲ್ ಅಡ್ವೈಸರ್ , ಹಿರಿಯ ವಕೀಲರು , ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ: ಕಾವೇರಿ ವಿವಾದ: ಕರ್ನಾಟಕಕ್ಕೆ ಮತ್ತೆ ಶಾಕ್​​ ಕೊಟ್ಟ CWRC; ತಮಿಳುನಾಡಿಗೆ ಮುಂದಿನ 15ದಿನ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ

ಕರ್ನಾಟಕದ ಪರ ಭಾಗಿಯಾಗಿದ್ದ ಗೌರವ್ ಗುಪ್ತಾ ಹೇಳಿದ್ದೇನು?

ಇನ್ನು ಸಭೆಯಲ್ಲಿ ಕರ್ನಾಟಕದ ಪರವಾಗಿ ಭಾಗಿಯಾಗಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಪ್ರತಿಕ್ರಿಯಿಸಿದ್ದು,  CWMA ಸಭೆ ಮಗಿದಿದ್ದು, CWRC ಸಭೆ ಶಿಫಾರಸ್ಸುನ್ನು ಆದೇಶವಾಗಿ ಮಾರ್ಪಾಡು ಮಾಡಿದೆ. ಪ್ರತಿ ದಿನ 15 ದಿನಗಳ ಕಾಲ 12 ಸಾವಿರ ಕ್ಯೂಸೆಕ್​​​ ನೀರು ತಮಿಳುನಾಡಿಗೆ ಹರಿಸಬೇಕು ಅಂತಾ ಹೇಳಿದೆ. ಈ ಬಗ್ಗೆ ಸರ್ಕಾರ ಮುಂದೆ ಕಾನೂನು ಹೋರಾಟ ನಡೆಸಲಿದೆ. ತಮಿಳುನಾಡು 40 ಟಿಎಂಸಿ ನೀರಿಗೆ ಬೇಡಿಕೆ ಇಟ್ಟಿದೆ. ನಾವು ಅಷ್ಟು ಪ್ರಮಾಣದ ನೀರು ನಾವು ಬಿಡಲು ಸಾಧ್ಯವಿಲ್ಲ ಅಂತಾ ವಾದ ಮಂಡಿಸಿದ್ದೇವೆ ಎಂದು ಹೇಳಿದರು.

ಸಿಡಬ್ಲ್ಯುಆರ್​ಸಿ ಶಿಫಾರಸು ಪ್ರಶ್ನಿಸಿ ಸಿಡಬ್ಲ್ಯುಎಂಎಗೆ ಹೋಗಿದ್ದೆವು. ಆದ್ರೆ, ಸಿಡಬ್ಲ್ಯುಆರ್​ಸಿ ಶಿಫಾರಸು ಪಾಲಿಸುವಂತೆ CWMA ಆದೇಶಿಸಿದೆ. 15 ದಿನ 12,000 ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿದೆ.
CWMA ಆದೇಶದಿಂದ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ. CWMA ಮುಂದೆ ಸಮರ್ಥವಾಗಿ ವಾದ ಮಂಡನೆ ಮಾಡಿದ್ದೆವು. ಆದರೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ. ಮಳೆ ಪ್ರಮಾಣ ಕಡಿಮೆ ಇರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ . ಸಿಡಬ್ಲ್ಯುಎಂಎ ಆದೇಶದ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ. ರಾಜ್ಯದ ಕಾನೂನು ತಂಡದ ಜೊತೆ ಚರ್ಚೆ ನಡೆಸುತ್ತೇವೆ ಎಂದು ವಿವರಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:27 pm, Tue, 11 August 26

Source link

ದಕ್ಷಿಣ ಕನ್ನಡದಲ್ಲಿ ಪಶುಪಾಲನಾ ಇಲಾಖೆ ಸಿಬ್ಬಂದಿ ಕೊರತೆ: ಶೇ.84ರಷ್ಟು ಹುದ್ದೆಗಳು ಖಾಲಿ! – Kannada News | Dakshina Kannada Animal Husbandry Dept Hit Hard: 84 Percent Posts Vacant; 10 Veterinary Hospitals On Verge of Closure

ಮಂಗಳೂರು, ಆಗಸ್ಟ್​​ 11: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ತೀವ್ರ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದು, ಮಂಜೂರಾದ ಒಟ್ಟು ಸಿಬ್ಬಂದಿ ಹುದ್ದೆಗಳ ಪೈಕಿ ಕೇವಲ ಶೇ.16ರಷ್ಟು ಹುದ್ದೆಗಳಲ್ಲಷ್ಟೇ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 449 ಹುದ್ದೆಗಳು ಮಂಜೂರಾಗಿದ್ದು, 377 ಹುದ್ದೆಗಳು ಖಾಲಿ ಇವೆ.ಪಶುವೈದ್ಯಾಧಿಕಾರಿಗಳಿಗಾಗಿ ಮಂಜೂರಾಗಿರುವ 74 ಹುದ್ದೆಗಳ ಪೈಕಿ 44 ಹುದ್ದೆಗಳು ಖಾಲಿ ಇವೆ. ಸಿಬ್ಬಂದಿಯೇ ಇಲ್ಲದ ಕಾರಣ ಜಿಲ್ಲೆಯಲ್ಲಿ ಸುಮಾರು 10 ಪಶುವೈದ್ಯಕೀಯ ಆಸ್ಪತ್ರೆಗಳು ಕಾರ್ಯನಿರ್ವಹಿಸದ ಸ್ಥಿತಿಗೆ ತಲುಪಿದೆ.

ಆಸ್ಪತ್ರೆಗಳನ್ನು ನಿರ್ವಹಣೆ ಕಷ್ಟಕರ

ಮಂಜೂರಾದ ಬಹುತೇಕ ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಜಿಲ್ಲೆಯ ಸುಮಾರು 110 ಪಶುವೈದ್ಯಕೀಯ ಆಸ್ಪತ್ರೆಗಳನ್ನು ನಿರ್ವಹಿಸುವುದು ಕಷ್ಟಕರವಾಗಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಜಿಲ್ಲೆಯಲ್ಲಿ ಡಿ ಗ್ರೂಪ್‌ ನೌಕರರ 170 ಹುದ್ದೆಗಳು ಮಂಜೂರಾಗಿವೆ. ಆದರೆ ಕೇವಲ ಇಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 168 ಹುದ್ದೆಗಳು ಖಾಲಿ ಇವೆ.

ಇದನ್ನೂ ಓದಿ: ಪುತ್ತೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಮತ್ತೆ ವಿವಾದ: 30 ಕೋಟಿ ರೂ. ಮೌಲ್ಯದ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಭಕ್ತರ ವಿರೋಧ, ಶಾಸಕರ ನಡೆಗೆ ಆಕ್ರೋಶ

ವೈದ್ಯರು, ಜಾನುವಾರುಗಳ ಪರಿಶೀಲಕರ ಕೊರತೆ

ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ಉಪನಿರ್ದೇಶಕ ಡಾ. ಅರುಣ್‌ ಕುಮಾರ್‌ ಶೆಟ್ಟಿ ಅವರು ತಿಳಿಸಿದಂತೆ, ಇಲಾಖೆಯಲ್ಲಿ ವೈದ್ಯರು ಹಾಗೂ ಜಾನುವಾರುಗಳ ಪರಿಶೀಲಕರ ಕೊರತೆ ಇದೆ. 2024-25ರಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 13 ವೈದ್ಯರನ್ನು ನೇಮಕ ಮಾಡಲಾಗಿತ್ತು. ಆದರೆ ಪ್ರಸ್ತುತ ನಾಲ್ವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೆ, ಎರಡು ಖಾಸಗಿ ಏಜೆನ್ಸಿಗಳ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ 95 ಡಿ ಗ್ರೂಪ್‌ ನೌಕರರನ್ನು ಇಲಾಖೆ ನೇಮಕ ಮಾಡಿಕೊಂಡಿದೆ. ಮೊಬೈಲ್‌ ಪಶುವೈದ್ಯಕೀಯ ಚಿಕಿತ್ಸಾಲಯಗಳ ನಿರ್ವಹಣೆಗಾಗಿ ಚಾಲಕರನ್ನೂ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಇದೇ ರೀತಿ ದತ್ತಾಂಶ ನಮೂದು ನಿರ್ವಾಹಕರನ್ನೂ ಹೊರಗುತ್ತಿಗೆ ಮೂಲಕ ನೇಮಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದರ ನಡುವೆ, ಜೈಲ್‌ ರಸ್ತೆಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆಗಳ ಉಪನಿರ್ದೇಶಕರ ಕಚೇರಿಗಾಗಿ ನಿರ್ಮಿಸಲಾಗಿರುವ ನೂತನ ಕಟ್ಟಡದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. 4.1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಮತ್ತೊಂದೆಡೆ ಜಿಲ್ಲಾ ಕೇಂದ್ರದ ಕಚೇರಿಯು 1973ರಲ್ಲಿ ನಿರ್ಮಿಸಲಾಗಿರುವ ಹಳೆಯ ಹಾಗೂ ಶಿಥಿಲಾವಸ್ಥೆಯ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದೆ ಎಂದು ದಿ ಟೈಮ್​ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಹರ್ ಘರ್ ತಿರಂಗಾ’ ಅಭಿಯಾನವನ್ನು ಪ್ರತಿ ಮನೆಯಲ್ಲೂ ಸಂಭ್ರಮಿಸಿ; ಹೊಸ ವಿಡಿಯೋ ಮೂಲಕ ಪ್ರಧಾನಿ ಮೋದಿ ಕರೆ – Kannada News | PM Narendra Modi posts new video on Instagram urges Indians to join Har Ghar Tiranga campaign

ನವದೆಹಲಿ, ಆಗಸ್ಟ್ 11: ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ದೇಶದ ಎಲ್ಲಾ ಪ್ರಜೆಗಳು ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಮತ್ತು ಪ್ರತಿಯೊಂದು ಮನೆಯಲ್ಲೂ ಇದನ್ನು ಹಬ್ಬದಂತೆ ಸಂಭ್ರಮಿಸಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು ಕರೆ ನೀಡಿದ್ದಾರೆ. ಆಗಸ್ಟ್ 15ರ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನಿ ಮೋದಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. “ಬನ್ನಿ, ನಾವೆಲ್ಲರೂ ಸೇರಿ ಹರ್ ಘರ್ ತಿರಂಗಾ ಅಭಿಯಾನವನ್ನು ಪ್ರತಿಯೊಂದು ಮನೆಯಲ್ಲೂ ಸಂಭ್ರಮಿಸೋಣ ಎಂದು ಮೋದಿ ವಿಶೇಷ ವಿಡಿಯೋ ಸಂದೇಶ ನೀಡಿದ್ದಾರೆ.

“ಆಗಸ್ಟ್ 15ರಂದು ಹೆಮ್ಮೆ ಮತ್ತು ಗೌರವದಿಂದ ಸಂಭ್ರಮಿಸೋಣ, ಸ್ವಾತಂತ್ರ್ಯ ಹೋರಾಟಗಾರರಿಗೆ ನಮನ ಸಲ್ಲಿಸೋಣ. ವಿಕಸಿತ ಭಾರತ ನಿರ್ಮಾಣಕ್ಕೆ ಪ್ರತಿಜ್ಞೆ ಮಾಡೋಣ. ಹರ್ ಘರ್ ತಿರಂಗಾ, ಘರ್ ಘರ್ ತಿರಂಗಾ, ಹರ್ ಮನ್ ತಿರಂಗಾ (ಪ್ರತಿ ಮನೆಯಲ್ಲೂ ಬಾವುಟ, ಪ್ರತಿ ಮನದಲ್ಲೂ ಬಾವುಟ). ಬನ್ನಿ, ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸೋಣ” ಎಂದು ಪ್ರಧಾನಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Independence Day: ಈ ಬಾರಿ ಕೆಂಪುಕೋಟೆಯಲ್ಲಿ ರಾಷ್ಟ್ರಗೀತೆಗೂ ಮುನ್ನ ಮೊಳಗಲಿದೆ ವಂದೇ ಮಾತರಂ ಗೀತೆ

2026ರ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಆಗಸ್ಟ್ ತಿಂಗಳಲ್ಲಿ ದೇಶಾದ್ಯಂತ ಆಚರಿಸಲಾಗುತ್ತಿದ್ದು, ಪ್ರಜೆಗಳು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರೀಯ ಸಂಭ್ರಮದಲ್ಲಿ ಭಾಗಿಯಾಗಲು ಪ್ರೋತ್ಸಾಹಿಸಲಾಗುತ್ತಿದೆ.

ಏನಿದು ಹರ್ ಘರ್ ತಿರಂಗಾ ಅಭಿಯಾನ?:

ಪ್ರಜೆಗಳು ರಾಷ್ಟ್ರಧ್ವಜದೊಂದಿಗೆ ಹೊಂದಿರುವ ವೈಯಕ್ತಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದು ಈ ‘ಹರ್ ಘರ್ ತಿರಂಗಾ’ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಆಗಸ್ಟ್ ತಿಂಗಳಿಡೀ ಮನೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ, ದೇಶದ ಪಯಣವನ್ನು ಸ್ಮರಿಸಲು ಮತ್ತು ಸ್ವಾತಂತ್ರ್ಯದ ಮೂಲ ಚೇತನವನ್ನು ಒಟ್ಟಾಗಿ ಆಚರಿಸಲು ಜನರನ್ನು ಪ್ರೇರೇಪಿಸಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗುವಿನ ಜನನದ ಬಳಿಕ ಥೈರಾಯ್ಡ್ ಸಮಸ್ಯೆ ಹೆಚ್ಚಾಗಲು ಕಾರಣವೇನು? ಈ ಪರೀಕ್ಷೆ ಮಾಡಿಸಿಕೊಳ್ಳಿ – Kannada News | After Delivery, Don’t Ignore These Thyroid Symptoms: Experts Explain

ಮಗುವಿನ ಜನನದ ಬಳಿಕ ಮಹಿಳೆಯರ ದೇಹದಲ್ಲಿ ಸಾಕಷ್ಟು ಹಾರ್ಮೋನ್ ಮತ್ತು ದೈಹಿಕ ಬದಲಾವಣೆಗಳಾಗುತ್ತವೆ. ಈ ಅವಧಿಯಲ್ಲಿ ನಿದ್ರೆ ಸರಿಯಾಗಿ ಆಗದಿರುವುದು, ಅತಿಯಾದ ಸುಸ್ತು, ಮೂಡ್ ಬದಲಾವಣೆ, ತೂಕದಲ್ಲಿ ಏರಿಳಿತ ಸೇರಿದಂತೆ ಹಲವು ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದು. ಆದರೆ ಇದೇ ಲಕ್ಷಣಗಳು ಕೆಲವೊಮ್ಮೆ ಥೈರಾಯ್ಡ್ ಸಮಸ್ಯೆಯ ಸೂಚನೆಯೂ ಆಗಿರಬಹುದು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಡೆಲಿವರಿಯ ನಂತರ ಮೊದಲ ಒಂದು ವರ್ಷದೊಳಗೆ ಕೆಲ ಮಹಿಳೆಯರಲ್ಲಿ ಪ್ರಸವಾನಂತರದ ಥೈರಾಯ್ಡಿಟಿಸ್ (Postpartum Thyroiditis) ಎಂಬ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರ ಲಕ್ಷಣಗಳು ಹೊಸ ತಾಯಂದಿರು ಎದುರಿಸುವ ಸಾಮಾನ್ಯ ಸಮಸ್ಯೆಗಳಂತೆಯೇ ಇರುವುದರಿಂದ, ಅನೇಕ ಬಾರಿ ಇದನ್ನು ಆರಂಭದಲ್ಲೇ ಗುರುತಿಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಡೆಲಿವರಿ ಬಳಿಕ ಥೈರಾಯ್ಡ್ ಸಮಸ್ಯೆ ಏಕೆ ಉಂಟಾಗುತ್ತದೆ ಮತ್ತು ಇದರ ಲಕ್ಷಣಗಳು ಹೇಗಿರುತ್ತವೆ, ಸ್ತನ್ಯಪಾನ ಮಾಡುವ ಮಹಿಳೆಯರು ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬುದರ ಬಗೆಗಿನ ಮಾಹಿತಿ ಸ್ಟೋರಿಯಲ್ಲಿದೆ.

ಡೆಲಿವರಿ ಬಳಿಕ ಥೈರಾಯ್ಡ್ ಸಮಸ್ಯೆ ಏಕೆ ಉಂಟಾಗುತ್ತದೆ?

ಗರ್ಭಾವಸ್ಥೆಯ ನಂತರ ಮಹಿಳೆಯರ ದೇಹದಲ್ಲಿ ಹಾರ್ಮೋನ್‌ಗಳಲ್ಲಿ ಸಾಕಷ್ಟು ಬದಲಾವಣೆಗಳು ಸಂಭವಿಸುತ್ತವೆ. ಈ ಬದಲಾವಣೆಗಳ ಪರಿಣಾಮವಾಗಿ ಕೆಲ ಮಹಿಳೆಯರಲ್ಲಿ ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಾಸ ಉಂಟಾಗಬಹುದು. ಇದನ್ನು Postpartum Thyroiditis ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಡೆಲಿವರಿಯ ನಂತರ ಮೊದಲ ಒಂದು ವರ್ಷದೊಳಗೆ ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: ಮರೆವನ್ನು ಕಡಿಮೆ ಮಾಡಿ ಮೆದುಳಿನ ಆರೋಗ್ಯ ಕಾಪಾಡಲು ಈ ಆಹಾರಗಳನ್ನು ಸೇವಿಸಿ; ಇಲ್ಲಿದೆ ತಜ್ಞರ ಸಲಹೆ

ಆರಂಭದಲ್ಲಿ ಥೈರಾಯ್ಡ್ ಹೆಚ್ಚು ಸಕ್ರಿಯವಾಗಬಹುದು. Postpartum Thyroiditis ಕೆಲವು ಮಹಿಳೆಯರಲ್ಲಿ ಮೊದಲ ಹಂತದಲ್ಲಿ ಥೈರಾಯ್ಡ್ ಹೆಚ್ಚು ಸಕ್ರಿಯವಾಗುವಂತೆ ಮಾಡಬಹುದು. ಇದನ್ನು Hyperthyroidism ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಹೃದಯದ ಬಡಿತ ವೇಗವಾಗುವುದು, ಆತಂಕ ಅಥವಾ ಗಾಬರಿ, ಚಿಡಿಚಿಡಿತ, ಅತಿಯಾದ ಬೆವರು ಮತ್ತು ಯಾವುದೇ ಕಾರಣವಿಲ್ಲದೆ ತೂಕ ಕಡಿಮೆಯಾಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ನಂತರ ಥೈರಾಯ್ಡ್ ನಿಧಾನವಾಗಬಹುದು. ಕೆಲವು ಮಹಿಳೆಯರಲ್ಲಿ ಆರಂಭಿಕ ಹಂತದ ನಂತರ ಥೈರಾಯ್ಡ್ ಗ್ರಂಥಿಯ ಕಾರ್ಯ ನಿಧಾನವಾಗಬಹುದು. ಇದನ್ನು Hypothyroidism ಎಂದು ಕರೆಯಲಾಗುತ್ತದೆ. ಈ ಹಂತದಲ್ಲಿ ಅತಿಯಾದ ಸುಸ್ತು, ನಿರಾಸಕ್ತಿ ಅಥವಾ ಖಿನ್ನತೆಯ ಭಾವನೆ, ಮಲಬದ್ಧತೆ, ಚರ್ಮ ಒಣಗುವುದು, ಚಳಿ ಹೆಚ್ಚು ಅನಿಸುವುದು ಮತ್ತು ಯಾವುದೇ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಎಕ್ಸ್‌ಪರ್ಟ್ ಏನು ಹೇಳುತ್ತಾರೆ?

ಕೆಲವು ಮಹಿಳೆಯರಲ್ಲಿ Postpartum Thyroiditis ಯಾವುದೇ ವಿಶೇಷ ಚಿಕಿತ್ಸೆಯಿಲ್ಲದೆ ಕಾಲಕ್ರಮೇಣ ಸುಧಾರಿಸಬಹುದು. ಆದರೆ ಕೆಲವರಿಗೆ ದೀರ್ಘಕಾಲದವರೆಗೆ ಚಿಕಿತ್ಸೆಯ ಅಗತ್ಯವಿರಬಹುದು. ಹೀಗಾಗಿ ಡೆಲಿವರಿಯ ಬಳಿಕ ದೀರ್ಘಕಾಲ ಸುಸ್ತು, ಮೂಡ್ ಬದಲಾವಣೆ, ತೂಕದಲ್ಲಿ ಅಸಹಜ ಬದಲಾವಣೆ ಅಥವಾ ಇತರ ಥೈರಾಯ್ಡ್ ಲಕ್ಷಣಗಳು ಕಂಡುಬಂದರೆ ವೈದ್ಯರ ಸಲಹೆ ಪಡೆಯುವುದು ಮುಖ್ಯ.

ಸ್ತನ್ಯಪಾನ ಮಾಡುವಾಗ ಥೈರಾಯ್ಡ್ ಇದ್ದವರು ಏನು ಮಾಡಬೇಕು?

ಸಾಮಾನ್ಯವಾಗಿ ಸ್ತನ್ಯಪಾನ ಮಾಡುತ್ತಿರುವ ಮಹಿಳೆಯರಿಗೆ ಥೈರಾಯ್ಡ್ ಸಮಸ್ಯೆ ಇದ್ದರೂ ವೈದ್ಯರ ಸಲಹೆಯೊಂದಿಗೆ ಸೂಕ್ತ ಚಿಕಿತ್ಸೆ ಪಡೆಯಬಹುದು. ಥೈರಾಯ್ಡ್‌ಗೆ ಬಳಸುವ ಹಲವು ಔಷಧಿಗಳನ್ನು ಸ್ತನ್ಯಪಾನದ ಸಮಯದಲ್ಲಿಯೂ ವೈದ್ಯಕೀಯ ಮಾರ್ಗದರ್ಶನದಲ್ಲಿ ಬಳಸಬಹುದು. ಆದರೆ ಯಾವುದೇ ಔಷಧಿಯನ್ನು ಸ್ವಯಂ ಪ್ರಾರಂಭಿಸುವುದು ಅಥವಾ ನಿಲ್ಲಿಸುವುದು ಸರಿಯಲ್ಲ. ವೈದ್ಯರು ಸೂಚಿಸಿದ ಪ್ರಮಾಣ ಮತ್ತು ಸಮಯವನ್ನು ಪಾಲಿಸುವುದು ಬಹಳ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿರಿಯ ನಟನ ನರಿಗೆ ಹೋಲಿಸಿದ ನಟಿ ಕಂಗನಾ ರನೌತ್ – Kannada News | Kangana Ranaut compares Naseeruddin Shah with fox

ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್ (Kangana Ranaut) ತಮ್ಮ ತೀಕ್ಷ್ಣ ಮಾತು ಟ್ವೀಟುಗಳಿಗಾಗಿ ಜನಪ್ರಿಯರು. ಇತ್ತೀಚೆಗಷ್ಟೆ ಅವರು ಜೆನ್-ಜಿಗಳನ್ನು ‘ಗಟರ್ ಜನರೇಷನ್’ ಎಂದು ಕರೆದಿದ್ದು ಟೀಕೆಗೆ ಗುರಿಯಾಗಿತ್ತು. ಇದೀಗ ಅವರು ಬಾಲಿವುಡ್​​ನ ಹಿರಿಯ ನಟರೋರ್ವರನ್ನು ನರಿಗೆ ಹೋಲಿಸಿದ್ದಾರೆ. ಕನ್ನಡದ ಸಿನಿಮಾಗಳಲ್ಲೂ ನಟಿಸಿರುವ ಬಾಲಿವುಡ್​​ನ ಹಿರಿಯ ನಟ ನಸಿರುದ್ಧೀನ್ ಶಾ ಅವರ ಹೇಳಿಕೆಯೊಂದನ್ನು ಕಂಗನಾ ತೀವ್ರವಾಗಿ ಖಂಡಿಸಿದ್ದು, ನಸೀರುದ್ಧೀನ್ ಅವರನ್ನು ನರಿಗೆ ಹೋಲಿಕೆ ಮಾಡಿದ್ದಾರೆ.

ಕಳೆದ ತಿಂಗಳು ದೇಶದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗಳ ಬಗ್ಗೆ ಪ್ರಮುಖ ನಟರು ಏಕೆ ಬಹಿರಂಗವಾಗಿ ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗೆ ಈ ಹಿಂದೆ ಉತ್ತರಿಸಿದ್ದ ನಸೀರುದ್ದೀನ್ ಶಾ, ‘ಅವರ ಆತ್ಮಸಾಕ್ಷಿ ಹೇಳಿದಾಗ ಅವರು ಮಾತನಾಡುತ್ತಾರೆ. ಬಾಯಿಯಲ್ಲಿ ಮೂಳೆ ಹಿಡಿದಿರುವ ನಾಯಿಗೆ ಬೊಗಳಲು ಸಾಧ್ಯವಿಲ್ಲ ಎಂಬ ಮಾತಿದೆ’ ಎಂದು ಅವರು ಹೇಳಿದ್ದರು. ಈಗ ಕಂಗನಾ ಅವರು, ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ನಸೀರುದ್ದೀನ್ ಶಾ ಅವರು ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಕಂಗನಾ ರನೌತ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ನಸೀರುದ್ದೀನ್ ಶಾ ಅವರ ಹೇಳಿಕೆಯ ಕುರಿತು ನಟ ಪಿಯುಷ್ ಮಿಶ್ರಾ ಮಾಡಿದ್ದ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳ ಬಗ್ಗೆ ನಸೀರುದ್ದೀನ್ ಶಾ ಅವರ ಮೌನವನ್ನು ಪ್ರಶ್ನಿಸಿದ್ದಾರೆ. ‘ಸತ್ಯವೆಂದರೆ ನಾವೆಲ್ಲರೂ ಯಾರದ್ದೋ ಸಾಕುಪ್ರಾಣಿ, ಆದರೆ ನಾನು ಯಾವ ಮನೆಯಲ್ಲಿ (ದೇಶದಲ್ಲಿ) ತಿನ್ನುತ್ತೇನೋ ಆ ಮನೆಯನ್ನು ರಕ್ಷಿಸುತ್ತೇನೆ ಮತ್ತು ಅದಕ್ಕಾಗಿ ಹೋರಾಡುತ್ತೇನೆ ಎಂಬ ಹೆಮ್ಮೆ ನನಗಿದೆ. ನಸೀರುದ್ದೀನ್ ಸಾಹೇಬರು ತಿನ್ನುವುದು ಈ ದೇಶದ್ದು, ಆದರೆ ಹೋರಾಡುವುದು ನೆರೆಯ ದೇಶಕ್ಕಾಗಿ’ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ:ಅಪರೂಪಕ್ಕೆ ದೀಪಿಕಾ ಪಡುಕೋಣೆಯನ್ನು ಕೊಂಡಾಡಿದ ಕಂಗನಾ ರನೌತ್

‘ಇಂದಿನ ಕಾಲದಲ್ಲಿ ಯಾರನ್ನಾದರೂ ‘ನಾಯಿ’ ಎಂದು ಕರೆಯುವುದು ಒಂದು ಹೊಗಳಿಕೆಯಾಗಿದೆ, ಏಕೆಂದರೆ ನಿಷ್ಠೆ ಮತ್ತು ಮುಗ್ಧತೆ ಇಂದು ಬಹಳ ಅಪರೂಪ. ನಸೀರುದ್ದೀನ್ ಅವರಂತಹ ‘ಲೋಮಡಿ’ (ನರಿ) ಆಗುವುದಕ್ಕಿಂತ ನಾಯಿಯಾಗುವುದೇ ಲೇಸು’ ಎಂದು ಕಂಗನಾ ಬರೆದಿದ್ದಾರೆ.

ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ಬಗ್ಗೆ ಕಂಗನಾ ರನೌತ್ ಪ್ರಶ್ನೆಗಳನ್ನು ಎತ್ತಿದ್ದಾರೆ. ‘ಮೊದಲಿಗೆ ಜಾರ್ಖಂಡ್‌ನಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿ. ಮಕ್ಕಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಅವರ ಮೇಲೆ ಕ್ರೂರವಾಗಿ ಲಾಠಿಚಾರ್ಜ್ ಮಾಡಲಾಗಿದೆ. ಜಲಫಿರಂಗಿ ಮತ್ತು ಅಶ್ರುವಾಯುವನ್ನು ಬಳಸಲಾಗಿದೆ. ನಾವು ಇದಕ್ಕೆ ಉತ್ತರ ಕೇಳುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಸೋಮವಾರ ಜಾರ್ಖಂಡ್ ವಿಧಾನಸಭೆಯ ಬಳಿ ನಡೆದ ಘರ್ಷಣೆಯಲ್ಲಿ ಹಲವು ಪ್ರತಿಭಟನಾಕಾರರು ಮತ್ತು ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ಪ್ರತಿಭಟಿಸುತ್ತಿದ್ದ ಉದ್ಯೋಗಾಕಾಂಕ್ಷಿಗಳ ಮೇಲೆ ಪೊಲೀಸರು ಜಲಫಿರಂಗಿ, ಅಶ್ರುವಾಯು ಬಳಸಿದ್ದಾರೆ ಮತ್ತು ಲಾಠಿಚಾರ್ಜ್ ನಡೆಸಿದ್ದಾರೆ ಎಂದು ವರದಿಯಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಿಪಿಎಫ್​ನಲ್ಲಿ ತಿಂಗಳಿಗೆ 5,000 ರೂ ಹೂಡಿಕೆ ಮಾಡಿದರೆ ಮೆಚ್ಯೂರಿಟಿಗೆ ಎಷ್ಟು ಸಿಗುತ್ತದೆ? ಕೋಟಿ ರೂ ಕಾರ್ಪಸ್ ನಿರ್ಮಿಸಲು ಎಷ್ಟು ವರ್ಷ ಬೇಕು? – Kannada News | PPF Public Provident Fund investment amount, maturity period, returns and other details

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ (PPF- Public Provident Fund) ದೀರ್ಘಾವಧಿ ಹೂಡಿಕೆ ಯೋಜನೆಗಳಲ್ಲಿ ಒಂದು. ಒಂದು ವರ್ಷಕ್ಕೆ ₹500 ನಿಂದ ಹಿಡಿದು ಗರಿಷ್ಠ ₹1.5 ಲಕ್ಷದಂತೆ 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ವರ್ಷದಲ್ಲಿ 12 ಕಂತುಗಳಲ್ಲಿ ಈ ಹಣ ಕಟ್ಟುವ ಅವಕಾಶ ಇರುತ್ತದೆ. ಬೇಕಾದರೆ ಒಂದೇ ಕಂತಿನಲ್ಲಿ ವರ್ಷದ ಹೂಡಿಕೆ ಮಾಡಬಹುದು. ಈ ಪಿಪಿಎಫ್​ನಲ್ಲಿ ತಿಂಗಳಿಗೆ ₹5,000 ಹೂಡಿಕೆ ಮಾಡುತ್ತಾ ಹೋದರೆ ಮೆಚ್ಯೂರಿಟಿಗೆ ಎಷ್ಟು ಹಣ ಸಿಗಬಹುದು? ಸದ್ಯ ಈ ಸ್ಕೀಮ್​ನಲ್ಲಿ ಶೇ. 7.1 ವಾರ್ಷಿಕ ಬಡ್ಡಿದರ ನಿಗದಿ ಮಾಡಲಾಗಿದೆ. ಇದೇ ಬಡ್ಡಿದರ ಮುಂದುವರಿಯಬಹುದು ಎಂಬ ಲೆಕ್ಕಾಚಾರ ಹಾಕಿ, ₹5,000 ಮಾಸಿಕ ಹೂಡಿಕೆಯಿಂದ ಪಿಪಿಎಫ್ ನೀಡುವ ರಿಟರ್ನ್ಸ್ ಈ ರೀತಿ ಇರಬಹುದು:

ತಿಂಗಳಿಗೆ ₹5,000 ಹೂಡಿಕೆ: 15 ವರ್ಷಗಳ ಮೆಚ್ಯೂರಿಟಿ ಮೊತ್ತ ಎಷ್ಟು?

  • ಪ್ರತಿ ತಿಂಗಳ ಹೂಡಿಕೆ: ₹5,000 (ವರ್ಷಕ್ಕೆ ₹60,000)
  • ಹೂಡಿಕೆ ಅವಧಿ (ಮೆಚ್ಯೂರಿಟಿ ಅವಧಿ): 15 ವರ್ಷಗಳು
  • ನಿಮ್ಮ ಒಟ್ಟು ಹೂಡಿಕೆ: ₹9,00,000
  • ಗಳಿಸಿದ ಅಂದಾಜು ಬಡ್ಡಿ: ₹7,27,284
  • 15 ವರ್ಷಗಳ ನಂತರ ಸಿಗುವ ಮೆಚ್ಯೂರಿಟಿ ಮೊತ್ತ: ₹16,27,284 (ಸುಮಾರು ₹16.27 ಲಕ್ಷ)

ಇದನ್ನೂ ಓದಿ: ಗೂಗಲ್ ಎಐ ಮೋಡ್… ನೀನೇ ಸಾಕಿದ ಗಿಳಿ ಹದ್ದಾಗಿ ಕುಕ್ಕಿತಲ್ಲೋ ಎನ್ನುವಂತಾಗಿದೆ… ಯಾಕೆ?

PPF ನಲ್ಲಿ ₹1 ಕೋಟಿ ತಲುಪಲು ಎಷ್ಟು ವರ್ಷ ಬೇಕು?

ಪಿಪಿಎಫ್ ಮೂಲ ಹೂಡಿಕೆ ಅವಧಿ 15 ವರ್ಷಗಳಾಗಿದ್ದರೂ, ಮೆಚ್ಯೂರಿಟಿಯ ನಂತರ ಪ್ರತಿ 5 ವರ್ಷಗಳ ಬ್ಲಾಕ್‌ಗಳಲ್ಲಿ (5-Year Extensions) ಈ ಖಾತೆಯನ್ನು ವಿಸ್ತರಿಸಲು ಅವಕಾಶವಿದೆ.

ತಿಂಗಳಿಗೆ ₹5,000 (ವರ್ಷಕ್ಕೆ ₹60,000) ಹೂಡಿಕೆ ಮುಂದುವರಿಸುತ್ತಾ ಹೋದರೆ ₹1 ಕೋಟಿ ತಲುಪಲು ಸುಮಾರು 32 ರಿಂದ 33 ವರ್ಷಗಳು ಬೇಕಾಗುತ್ತದೆ.

ಗರಿಷ್ಠ ಹೂಡಿಕೆ ಮಾಡಿದರೆ ಎಷ್ಟು ವರ್ಷ ಬೇಕು?

ಪಿಪಿಎಫ್​ನಲ್ಲಿ ವರ್ಷಕ್ಕೆ ₹1.5 ಲಕ್ಷ ರೂ ಹೂಡಿಕೆಗೆ ಅವಕಾಶ ಇರುತ್ತದೆ. ಆ ರೀತಿ 15 ವರ್ಷ ಹೂಡಿಕೆ ಮಾಡಿದರೆ 15 ವರ್ಷಕ್ಕೆ ಮೆಚ್ಯೂರಿಟಿ ಆದಾಗ ₹40 ಲಕ್ಷ ರಿಟರ್ನ್ಸ್ ಸಿಗುತ್ತದೆ. ಹಾಗೆಯೇ ಹೂಡಿಕೆ ಮುಂದುವರಿಸಿದರೆ 25 ವರ್ಷಕ್ಕೆ ನಿಮ್ಮ ಹೂಡಿಕೆ ₹1 ಕೋಟಿ ದಾಟಿರುತ್ತದೆ. ಮತ್ತೂ ಹತ್ತು ವರ್ಷ ನೀವು ಅದೇ ರೀತಿ ವರ್ಷಕ್ಕೆ ₹1.5 ಲಕ್ಷ ರೂನಂತೆ ಹೂಡಿಕೆ ಮುಂದುವರಿಸಿದರೆ ನಿಮ್ಮ ಪಿಪಿಎಫ್ ಕಾರ್ಪಸ್ ₹2.25 ಕೋಟಿ ದಾಟಿರುತ್ತದೆ.

ಇದನ್ನೂ ಓದಿ: ‘ಈ ದಿನ ಬರುತ್ತೆಂದು ಭಾವಿಸಿರಲಿಲ್ಲ’- ಸೌರಶಕ್ತಿ ಕ್ಷೇತ್ರದಲ್ಲಿ ಭಾರತದ ಹವಾ ಕಂಡು ಬೆಚ್ಚಿಬಿದ್ದ ಚೀನೀಯರು

ಪಿಪಿಎಫ್​ನ ಇತರ ಅನುಕೂಲತೆಗಳು

EEE ತೆರಿಗೆ ವಿನಾಯಿತಿ (Tax Free): ಹಳೆಯ ಟ್ಯಾಕ್ಸ್ ಸಿಸ್ಟಂನಲ್ಲಿ (Old Tax Regime) ಪಿಪಿಎಫ್ ಹೂಡಿಕೆಯು EEE (Exempt-Exempt-Exempt) ವರ್ಗಕ್ಕೆ ಸೇರುತ್ತದೆ. ಅಂದರೆ ಹೂಡಿಕೆ ಮಾಡುವ ಹಣ (Section 80C ಅಡಿಯಲ್ಲಿ), ಗಳಿಸುವ ಬಡ್ಡಿ ಮತ್ತು ಕೊನೆಯಲ್ಲಿ ಸಿಗುವ ಮೆಚ್ಯೂರಿಟಿ ಮೊತ್ತ – ಮೂರೂ ಹಂತಗಳಲ್ಲೂ ಸಂಪೂರ್ಣವಾಗಿ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ.

ತಿಂಗಳ 5 ನೇ ತಾರೀಖಿನ ನಿಯಮ: ನೀವು ತಿಂಗಳಿಗೊಮ್ಮೆ ಹೂಡಿಕೆ ಮಾಡುವವರಿದ್ದರೆ, ಗರಿಷ್ಠ ಬಡ್ಡಿ ಗಳಿಸಲು ಪ್ರತಿ ತಿಂಗಳ 5 ನೇ ತಾರೀಖಿಗಿಂತ ಮೊದಲು ಹಣವನ್ನು ಪಿಪಿಎಫ್ ಖಾತೆಗೆ ಜಮಾ ಮಾಡಬೇಕು. 5ನೇ ತಾರೀಖಿನ ನಂತರ ಪಾವತಿಸುವ ಹಣವನ್ನು ಮುಂದಿನ ತಿಂಗಳ ಲೆಕ್ಕಕ್ಕೆ ಪರಿಗಣಿಸಲಾಗುತ್ತದೆ. ಅಂದರೆ, ಒಂದು ತಿಂಗಳ ಬಡ್ಡಿಯಿಂದ ವಂಚಿತರಾಗಬೇಕಾಗುತ್ತದೆ.

ಬಡ್ಡಿದರ ಬದಲಾವಣೆ: ಕೇಂದ್ರ ಸರ್ಕಾರವು ಪ್ರತಿ ತ್ರೈಮಾಸಿಕಕ್ಕೊಮ್ಮೆ (Quarterly) ಪಿಪಿಎಫ್ ಬಡ್ಡಿದರಗಳನ್ನು ಪರಿಶೀಲಿಸುತ್ತದೆ. ಬಡ್ಡಿದರಗಳಲ್ಲಿ ವ್ಯತ್ಯಾಸವಾದರೆ ಅಂತಿಮ ಮೊತ್ತದಲ್ಲಿ ಸಣ್ಣ ಪ್ರಮಾಣದ ಬದಲಾವಣೆಯಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕ್ರಿಕೆಟಿಗ ಅಭಿಷೇಕ್ ಪೊರೆಲ್ ಬಂಧನ: ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಆರೋಪ – Kannada News | IPL Star Abhishek Porel Arrested in physical harassment Case After Kolkata High Court Orders Action

ಕೋಲ್ಕತ್ತಾ, ಆ.11: ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಪರ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿ ಆಡುತ್ತಿರುವ ಪಶ್ಚಿಮ ಬಂಗಾಳದ ಯುವ ಕ್ರಿಕೆಟಿಗ ಅಭಿಷೇಕ್ ಪೊರೆಲ್ (Abishek Porel) ಅವರನ್ನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಕೋಲ್ಕತ್ತಾ ಹೈಕೋರ್ಟ್ ನೀಡಿದ ಕಟ್ಟುನಿಟ್ಟಿನ ಆದೇಶದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಮೊಗ್ರಾ ಠಾಣೆ ಪೊಲೀಸರು ಅಭಿಷೇಕ್ ಪೊರೆಲ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ತೃತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಜೂನ್ ತಿಂಗಳಲ್ಲಿ ಮೊಗ್ರಾ ಪೊಲೀಸ್ ಠಾಣೆಯಲ್ಲಿ ಅಭಿಷೇಕ್ ವಿರುದ್ಧ ದೂರು ನೀಡಿದ್ದರು. ಕಳೆದ 3.5 ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ, ಈಗ ಮದುವೆಗೆ ನಿರಾಕರಿಸಿ ಮೋಸ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.

ಖಾಸಗಿ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು, ಅದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಏಪ್ರಿಲ್ 2, 2026 ರಂದು ದೆಹಲಿಗೆ ಹೋದಾಗ ತನಗೆ ಕೊಠಡಿಯಲ್ಲಿ ಬಂದಿಸಿ, ಆಹಾರ ನೀಡದೆ ಕಿರುಕುಳ ನೀಡಿದ್ದರಿಂದ ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂದೂ ಯುವತಿ ದೂರಿದ್ದಾರೆ.

ಪೊಲೀಸರು ತನಿಖೆಯಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆ ಕೋಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಅಭಿಷೇಕ್ ಪೊರೆಲ್ ಅವರನ್ನು ತಕ್ಷಣ ಬಂಧಿಸಲು ಹಾಗೂ ಅವರ ಎಲ್ಲಾ ಇಂಟರ್ನೆಟ್/ಇಲೆಕ್ಟ್ರಾನಿಕ್ ಸಾಧನಗಳನ್ನು (Electronic devices) ವಶಕ್ಕೆ ಪಡೆಯುವಂತೆ ಜುಲೈ 14 ರಂದು ಆದೇಶಿಸಿತ್ತು. ಆದೇಶದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ, ಅವರನ್ನು ವಿಚಾರಣೆಗೆ ಒಳಪಡಿಸಿದ ನಂತರ ಬಂಧಿಸಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ.

ಇದನ್ನೂ ಓದಿ: “ಮುಗಿಸುವುದಾಗಿ” ಬೆದರಿಕೆ: ರಾತ್ರೋರಾತ್ರಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಗಂಗೂಲಿ!

23 ವರ್ಷದ ಅಭಿಷೇಕ್ ಪೊರೆಲ್ ದೇಶೀಯ ಕ್ರಿಕೆಟ್‌ನಲ್ಲಿ ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸುತ್ತಿದ್ದಾರೆ. 2023 ರಿಂದ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಡುತ್ತಿರುವ ಇವರು, ತಮ್ಮ ಸ್ಫೋಟಕ ಬ್ಯಾಟಿಂಗ್ ಹಾಗೂ ವಿಕೆಟ್‌ಕೀಪಿಂಗ್ ಮೂಲಕ ಗಮನ ಸೆಳೆದಿದ್ದರು. ಈ ಘಟನೆಯು ಅವರ ಕ್ರಿಕೆಟ್ ವೃತ್ತಿಜೀವನಕ್ಕೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version