IND vs SL: ಮೂರನೇ ದಿನ 3 ಸೆಷನ್ನಲ್ಲೂ ಮಳೆ ಭೀತಿ! – Kannada News | IND vs SL Test: Rain Threat Looms Large on Day 3
ಭಾರತ ಮತ್ತು ಶ್ರೀಲಂಕಾ ನಡುವೆ ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನಕ್ಕೂ ಮಳೆಯ ಭೀತಿ ಎದುರಾಗಿದೆ. ಈಗಾಗಲೇ ಎರಡನೇ ದಿನದ ಆಟವು ಮಳೆಯಿಂದಾಗಿ ಕಡಿತಗೊಂಡಿದ್ದು, ಇಂದು (3ನೇ ದಿನ) ಕೂಡ ವರುಣನ ಆರ್ಭಟ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ ಎಂದು ಹವಾಮಾನ ವರದಿಗಳು ಮುನ್ಸೂಚನೆ ನೀಡಿವೆ. ಇತ್ತೀಚಿನ ಹವಾಮಾನ ವರದಿಯ ಪ್ರಕಾರ, ಇಂದು ಗಾಲೆ ನಗರದಲ್ಲಿ ಮಳೆಯಾಗುವ ಒಟ್ಟಾರೆ ಸಂಭವನೀಯತೆ ಶೇಕಡಾ 83 ರಷ್ಟಿದೆ. ಎರಡನೇ ದಿನದಲ್ಲಿ ಒಂದೂವರೆ ಸೆಷನ್‌ಗಿಂತಲೂ ಹೆಚ್ಚು…