ಬುದ್ಧಿ ಮಾತು ಹೇಳಿದ್ದೇ ತಪ್ಪಾಯ್ತಾ? ಸ್ನೇಹಿತನ ಮೇಲೆ ಮನಸೋ ಇಚ್ಛೆ ಹಲ್ಲೆ; ಮಲೆನಾಡನ್ನೇ ಬೆಚ್ಚಿಬೀಳಿಸಿದ ಕೃತ್ಯ – Kannada News | Hosanagara Drunk Attack: Man Critically Injured in Brutal Highway Assault by Friend
ಸ್ನೇಹಿತನಿಂದ ಹಲ್ಲೆImage Credit source: tv9 kannada ಶಿವಮೊಗ್ಗ, ಆಗಸ್ಟ್ 16: ಅವರಿಬ್ಬರು ಒಂದೇ ಊರಿನವರು. ಕಷ್ಟ-ಸುಖ ಹಂಚಿಕೊಂಡವರು. ಆದರೆ ಮದ್ಯದ ಅಮಲು ತಲೆಗೇರಿದಾಗ ಆ ಸ್ನೇಹ, ಕರುಣೆ ಎಲ್ಲವೂ ಕರಗಿ ಬೂದಿಯಾಗಿದೆ. ಹೊಸನಗರ ತಾಲೂಕಿನ ಗರ್ತಿಕೇರಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಇಬ್ಬರು ಸ್ನೇಹಿತರ (Friend) ನಡುವೆ ನಡೆದ ಕ್ಷುಲ್ಲಕ ಜಗಳ, ಕೊನೆಗೆ ಒಬ್ಬನ ಕ್ರೂರ ಅಟ್ಟಹಾಸ ಹಾಗೂ ಇನ್ನೊಬ್ಬನ ಜೀವನ್ಮರಣದ ಹೋರಾಟಕ್ಕೆ ಕಾರಣವಾಗಿದೆ. ಮಾನವೀಯತೆಯನ್ನೇ ಮರೆತು ನಡುರಸ್ತೆಯಲ್ಲೇ ಸ್ನೇಹಿತನ ಮೇಲೆ ನಡೆದ ದಾಳಿ (Attack) ಇಡೀ…