“ನಿಮ್ಮ ಕಾಲಿಗೆ ಬೀಳ್ತೀವಿ, ನಮ್ಮೂರಲ್ಲಿ ಸಾರಾಯಿ ಬಂದ್ ಮಾಡಿಸಿ”: ಶಾಸಕರ ಮುಂದೆ ಕಣ್ಣೀರು ಹಾಕಿದ ಮಹಿಳೆಯರು

“ನಿಮ್ಮ ಕಾಲಿಗೆ ಬೀಳ್ತೀವಿ, ನಮ್ಮೂರಲ್ಲಿ ಸಾರಾಯಿ ಬಂದ್ ಮಾಡಿಸಿ”: ಶಾಸಕರ ಮುಂದೆ ಕಣ್ಣೀರು ಹಾಕಿದ ಮಹಿಳೆಯರು

ಬೀದರ್, ಮಾ.20: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನೀಲಕಂಠವಾಡಿ ಗ್ರಾಮದಲ್ಲಿ ಮದ್ಯದ ಹಾವಳಿ ಮಿತಿಮೀರಿದೆ. ಗ್ರಾಮಕ್ಕೆ ಭೇಟಿ ನೀಡಿದ್ದ ಬಸವಕಲ್ಯಾಣ ಶಾಸಕ ಶರಣು ಸಲಗರ್ ಅವರ ಮುಂದೆ ನೂರಾರು ಮಹಿಳೆಯರು ಕಣ್ಣೀರಿಡುತ್ತಾ, ಗ್ರಾಮದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಅಂಗಲಾಚಿದ್ದಾರೆ. ಗ್ರಾಮದಲ್ಲಿ ಮದ್ಯಪಾನದ ಚಟಕ್ಕೆ ಬಿದ್ದು ಕಾಲೇಜು ಯುವಕರು ಸೇರಿದಂತೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. “ನಮ್ಮೂರಿನಲ್ಲಿ ಅನೇಕ ಮಹಿಳೆಯರು ಈಗಾಗಲೇ ವಿಧವೆಯರಾಗಿದ್ದಾರೆ, ಇನ್ನು ಮುಂದಾದರೂ ಯುವಕರ ಭವಿಷ್ಯ ಕಾಪಾಡಿ” ಎಂದು ಮಹಿಳೆಯರು ಶಾಸಕರ ಮುಂದೆ ಅತ್ತಿದ್ದಾರೆ. ಗ್ರಾಮದ ಕಿರಾಣಿ ಅಂಗಡಿಗಳಲ್ಲಿ ಹಾಗೂ ಹಾದಿಬೀದಿಗಳಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ಮಾಡಲಾಗುತ್ತಿದೆ. ದೂರು ನೀಡಿದರೂ ಪೊಲೀಸರು ಬಂದು ಸುಮ್ಮನೆ ನೋಡಿ ಹೋಗುತ್ತಾರೆಯೇ ಹೊರತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. “ನಿಮ್ಮ ಕಾಲಿಗೆ ಬೀಳ್ತೀವಿ, ಹೇಗಾದರೂ ಮಾಡಿ ನಮ್ಮೂರಲ್ಲಿ ಸಾರಾಯಿ ಬಂದ್ ಮಾಡಿಸಿ” ಎಂದು ಮಹಿಳೆಯರು ಶಾಸಕರ ಹತ್ತಿರ ಪಟ್ಟು ಹಿಡಿದಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಚಿತ್ರಕ್ಕೆ ಆ ಒಂದು ದಾಖಲೆಯನ್ನು ಟಚ್ ಮಾಡೋಕೂ ಆಗಿಲ್ಲ

‘ಧುರಂಧರ್ 2’ ಸಿನಿಮಾ (Dhurandhar 2 Movie) ಮೊದಲ ದಿನದ ಓಪನಿಂಗ್ ಕಲೆಕ್ಷನ್ ಲೆಕ್ಕ ಸಿಕ್ಕಿದೆ. ಈ ಚಿತ್ರ ಬರೋಬ್ಬರಿ 236 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದಾಗ್ಯೂ ಒಂದು ದೊಡ್ಡ ದಾಖಲೆಯನ್ನು ಬ್ರೇಕ್ ಮಾಡಲು ಸಿನಿಮಾ ವಿಫಲವಾಗಿದೆ. ‘ಧುರಂಧರ್ 2’ ಚಿತ್ರದ ಮೊದಲ ದಿನದ ಕಲೆಕ್ಷನ್ 300 ಕೋಟಿ ರೂಪಾಯಿ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಇದಕ್ಕೆ ಸಿನಿಮಾ ತಂಡ ಮಾಡಿದ ತಪ್ಪೇ ಕಾರಣ.

‘ಧುರಂಧರ್ 2’ ಸಿನಿಮಾ ಮೊದಲ ದಿನ ಅಬ್ಬರದ ಕಲೆಕ್ಷನ್ ಮಾಡುವ ನಿರೀಕ್ಷೆ ಇತ್ತು. ಆದರೆ, ಆ ನಿರೀಕ್ಷೆ ಸುಳ್ಳಾಗಿದೆ. ಸಿನಿಮಾ 236 ಕೋಟಿ ರೂಪಾಯಿ ಮಾತ್ರ ಕಲೆಕ್ಷನ್ ಮಾಡಿದೆ. ಇದು ಚಿತ್ರಕ್ಕೆ ಸಾಕಷ್ಟು ಹಿನ್ನಡೆಯನ್ನು ಉಂಟು ಮಾಡಿದೆ. ಈ ಮೂಲಕ ‘ಪುಷ್ಪ 2’ ಚಿತ್ರ ಸೃಷ್ಟಿ ಮಾದಿದ್ದ ದಾಖಲೆಯನ್ನು ಮುರಿಯಲು ‘ಧುರಂಧರ್ 2’ ವಿಫಲವಾಗಿದೆ.

‘ಪುಷ್ಪ 2’ ಸಿನಿಮಾ ಮೊದಲ ದಿನ 294 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ದಾಖಲೆಯನ್ನು ‘ಧುರಂಧರ್ 2’ ಸಿನಿಮಾ ಮುರಿದು ಹಾಕುತ್ತದೆ ಎಂಬುದು ಎಲ್ಲರ ಊಹೆ ಆಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಇದು ಚಿತ್ರಕ್ಕೆ ಸಾಕಷ್ಟು ಹಿನ್ನಡೆ ತಂದಿದೆ. ಶೋ ಕ್ಯಾನ್ಸಲ್ ಆಗಿರೋದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಆಂಧ್ರ ಪ್ರದೇಶ, ಕರ್ನಾಟಕ ಸೇರಿದಂತೆ ಅನೇಕ ಕಡೆಗಳಲ್ಲಿ ‘ಧುರಂಧರ್ 2’ ಸಿನಿಮಾದ ಶೋಗಳು ಕ್ಯಾನ್ಸಲ್ ಆದವು. ತೆಲುಗು, ಕನ್ನಡ ಕಾಪಿ ಅಪ್​​ಲೋಡ್ ಆಗಿರಲಿಲ್ಲ. ಇದು ರದ್ದಾಗಲು ಮೂಲ ಕಾರಣ. ಇದು ಚಿತ್ರಕ್ಕೆ ದೊಡ್ಡ ಹಿನ್ನಡೆಯನ್ನು ತಂದಿದೆ.

ಇದನ್ನೂ ಓದಿ: ‘ಧುರಂಧರ್ 2’ ನೋಡಲು ದುಬೈನಿಂದ ಭಾರತಕ್ಕೆ ಬಂದ ಖ್ಯಾತ ಇನ್​​ಫ್ಲುಯೆನ್ಸರ್

‘ಧುರಂಧರ್ 2’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಲು ಚಿತ್ರದ ಕಥೆ ಕಾರಣ ಎಂದು ಅನೇಕರು ಹೇಳುತ್ತಿದ್ದಾರೆ. ‘ಧುರಂಧರ್ 2’ ಸಿನಿಮಾ ಮುಂದಿನ ದಿನಗಳಲ್ಲಿ ಮತ್ತಷ್ಟು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಈ ಸಿನಿಮಾದ ಒಟ್ಟಾರೆ ಗಳಿಕೆ ಎಷ್ಟು ಕೋಟಿ ರೂಪಾಯಿ ಆಗಲಿದೆ ಎಂಬ ಊಹೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೈಲಾದೇವಿ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ ವಾಹನ ಅಪಘಾತ, ಐವರು ಸಾವು, ಮೂವರಿಗೆ ಗಾಯ

ಆಗ್ರಾ, ಮಾರ್ಚ್​ 20: ಆಗ್ರಾದಲ್ಲಿ ಭಕ್ತರಿಂದ ತುಂಬಿದ್ದ ಬೊಲೆರೊ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ಮೃತರಲ್ಲಿ ಪತಿ, ಮಗ, ಸೊಸೆ ಮತ್ತು ಮೊಮ್ಮಗಳು ಸೇರಿದ್ದಾರೆ. ಈ ಮಧ್ಯೆ, ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಅಪಘಾತದ ನಂತರ, ಗ್ರಾಮಸ್ಥರು ಕಾರಿನ ಗಾಜುಗಳನ್ನು ಒಡೆದು ಎಲ್ಲರನ್ನೂ ಹೊರಗೆಳೆದರು. ಇಟಾವಾದ ಕುಟುಂಬವು ರಾಜಸ್ಥಾನದ ಕೈಲಾ ದೇವಿ ದೇವಸ್ಥಾನಕ್ಕೆ ಹೋಗಿತ್ತು. ತಡರಾತ್ರಿ ಹಿಂತಿರುಗುತ್ತಿದ್ದಾಗ ಚಿತ್ರಹಾತ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ವೈದ್ಯರು 70 ವರ್ಷದ ಕಾಂತ ಪ್ರಸಾದ್, ಅವರ ಮಗ ದೇವೇಂದ್ರ (35), ಅವರ 3 ವರ್ಷದ ಮೊಮ್ಮಗಳು ಆರಾಧ್ಯ, ಅವರ ಸೊಸೆ ಸೀಮಾ (30) ಮತ್ತು 20 ವರ್ಷದ ಚಾಲಕ ರಿಷಿ ಮೃತಪಟ್ಟಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಂಡ್ಯದಲ್ಲಿ ಜನರ ನಿದ್ದೆಗೆಡಿಸಿದ ಚಿರತೆ ಕೊನೆಗೂ ಸೆರೆ: ಬೋನಿಗೆ ಬಿದ್ದ ಚಿರತೆ ನೋಡಲು ಮುಗಿಬಿದ್ದ ಜನ

ಮಂಡ್ಯ, ಮಾರ್ಚ್ 20: ಮಂಡ್ಯ ಜಿಲ್ಲೆಯಾದ್ಯಂತ ಚಿರತೆ ಹಾವಳಿ ಹೆಚ್ಚಾಗಿದ್ದು, ಅದರಲ್ಲೂ ಮಂಡ್ಯ ಹೊರವಲಯದ ಭೂತನ ಹೊಸೂರು ಗ್ರಾಮದಲ್ಲಿ ಜನರಲ್ಲಿ ಆತಂಕ ಮನೆ ಮಾಡಿತ್ತು. ಕಬ್ಬಿನ ಗದ್ದೆಯಲ್ಲಿ ಇತ್ತೀಚೆಗೆ ಮೂರು ಚಿರತೆ ಮರಿಗಳು ಕಾಣಿಸಿದ ನಂತರ, ತಾಯಿ ಚಿರತೆಯ ಹಾವಳಿ ಹೆಚ್ಚಾಗಿತ್ತು. ಇದರಿಂದ ಗ್ರಾಮಸ್ಥರಿಗೆ ಜಮೀನುಗಳಿಗೆ ಹೋಗಲು ಭಯ ಕಾಡುತ್ತಿತ್ತು, ಅಲ್ಲದೆ ಸಾಕುಪ್ರಾಣಿಗಳ ಮೇಲೆ ಚಿರತೆ ದಾಳಿ ನಡೆಸುತ್ತಿತ್ತು.

ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಬೋನು ಇರಿಸಿದ್ದರು. ಈಗ ಮರಿಗಳನ್ನು ಹುಡುಕಿಕೊಂಡು ಬಂದ ತಾಯಿ ಚಿರತೆ ಬೋನಿಗೆ ಬಿದ್ದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯಿಂದ ಭೂತನ ಹೊಸೂರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಮತ್ತು ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಬೋನಿಗೆ ಬಿದ್ದ ಚಿರತೆ ನೋಡಲು ನೂರಾರು ಸಂಖ್ಯೆಯಲ್ಲಿ ಜನ ಆಗಿಸಿದ್ದು ಕಂಡುಬಂತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶ್ರೀದೇವಿಯ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದ ಪತಿ ಮತ್ತು ಮಕ್ಕಳು

ದಿವಂಗತ ನಟಿ ಶ್ರೀದೇವಿ (Sridevi) ಅವರಿಗೆ ಸೇರಿದ ಚೆನ್ನೈನ ಇಸ್ಟ್ ಕೋಸ್ಟ್ ರೋಡ್‌ನಲ್ಲಿರುವ ಸುಮಾರು 4.7 ಎಕರೆ ಜಮೀನು ಈಗ ವಿವಾದದ ವಿಷಯವಾಗಿದೆ. ಜಮೀನಿನ ಮಾಲೀಕತ್ವಕ್ಕಾಗಿ ಕಾನೂನು ಹೋರಾಟ ನಡೆಯುತ್ತಿದ್ದು, ಇದೀಗ ಶ್ರೀದೇವಿಯ ಪತಿ ನಿರ್ಮಾಪಕ ಬೋನಿ ಕಪೂರ್ ಮತ್ತು ಮಕ್ಕಳಾದ ಜಾನ್ಹವಿ ಕಪೂರ್, ಖುಷಿ ಕಪೂರ್ ಅವರುಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಆಸ್ತಿಯ ಮಾಲೀಕತ್ವಕ್ಕಾಗಿ ಮತ್ತೊಬ್ಬರಿಂದ ಸಲ್ಲಿಸಲಾಗಿರುವ ಅರ್ಜಿಗಳನ್ನು ರದ್ದು ಮಾಡಬೇಕು ಎಂದು ಅಪ್ಪ-ಮಕ್ಕಳು ಮನವಿ ಮಾಡಿದ್ದು, ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಎಂಸಿ ಶಿವಕಾಮಿ ಮತ್ತು ಅವರ ಸಹೋದರ ಎಂಸಿ ನಟರಾಜನ್ ಮತ್ತು ಅವರ ತಾಯಿ ಚಂದ್ರಭಾನು ಎಂಬುವವರು ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ಇಸ್ಟ್ ಕೋಸ್ಟ್ ರೋಡ್‌ನಲ್ಲಿರುವ ಸುಮಾರು 4.7 ಎಕರೆ ಜಮೀನು ಕುರಿತಾಗಿ ಮೊಕದ್ದಮೆ ಹೂಡಿದ್ದರು. ಈ ಆಸ್ತಿ ತಮ್ಮ ತಾತನಿಗೆ ಸೇರಿದ್ದಾಗಿದ್ದು, ತಮಗೂ ಇದರಲ್ಲಿ ಪಾಲಿದೆ ಎಂಬುದು ಅವರ ವಾದವಾಗಿದೆ. ನಟಿ ಶ್ರೀದೇವಿ ಅವರು ಈ ಆಸ್ತಿಯನ್ನು 1988 ರಲ್ಲಿಯೇ ಖರೀದಿ ಮಾಡಿದ್ದರು. ಕಳೆದ 38 ವರ್ಷಗಳಿಂದ ಈ ಆಸ್ತಿ ಅವರ ಕುಟುಂಬದ ವಶದಲ್ಲಿಯೇ ಇದೆ.

ಈ ಹಿಂದೆಯೂ ಬೋನಿ ಕಪೂರ್ ಅವರು ಈ ಕುರಿತು ಅರ್ಜಿ ಹಾಕಿದ್ದರು. ದೂರುದಾರರಾದ ಚಂದ್ರಭಾನು ಅವರ ವಿವಾಹವು ಕಾನೂನುಬದ್ಧವಾಗಿಲ್ಲ (ಅವರ ಪತಿ ಎಂಸಿ ಚಂದ್ರಶೇಖರನ್ ಅವರ ಮೊದಲ ಪತ್ನಿ ಬದುಕಿರುವಾಗಲೇ ನಡೆದ ವಿವಾಹ) ಎಂದು ಬೋನಿ ಕಪೂರ್ ವಾದಿಸಿದ್ದಾರೆ. ಈ ಹಿಂದೆ ಚೆಂಗಲ್ಪಟ್ಟು ನ್ಯಾಯಾಲಯವು ಬೋನಿ ಕಪೂರ್ ಅವರ ಅರ್ಜಿಯನ್ನು ತಿರಸ್ಕರಿಸಿ, ಪೂರ್ಣ ಪ್ರಮಾಣದ ವಿಚಾರಣೆಯ ಅಗತ್ಯವಿದೆ ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಕಪೂರ್ ಕುಟುಂಬ ಈಗ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.

ಇದನ್ನೂ ಓದಿ:ಹುಟ್ಟುಹಬ್ಬದಂದು ತಿರುಪತಿ ಬೆಟ್ಟ ಹತ್ತಿ ದರ್ಶನ ಪಡೆದ ನಟಿ ಜಾನ್ಹವಿ ಕಪೂರ್

1988 ರಲ್ಲಿ ನಡೆದ ಆಸ್ತಿ ಮಾರಾಟದ ಬಗ್ಗೆ 2025 ರಲ್ಲಿ ದೂರು ನೀಡಿರುವುದನ್ನು ಬೋನಿ ಕಪೂರ್ ಪ್ರಶ್ನಿಸಿದ್ದಾರೆ. ಸುಮಾರು 37 ವರ್ಷಗಳ ನಂತರ ಇಂತಹ ದೂರು ನೀಡುವುದು ಕಾನೂನುಬಾಹಿರ ಎಂದು ಅವರು ವಾದಿಸಿದ್ದಾರೆ. ಕಪೂರ್ ಕುಟುಂಬದ ಪ್ರಕಾರ, ದೂರುದಾರರು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಮತ್ತು ಚಂದ್ರಭಾನು ಅವರ ವಿವಾಹದ ಸತ್ಯಾಂಶವನ್ನು ಮರೆಮಾಚಿದ್ದಾರೆ. ಇದು ನ್ಯಾಯಾಲಯಕ್ಕೆ ಮಾಡಿದ ವಂಚನೆ ಎಂದು ಅವರು ಆರೋಪಿಸಿದ್ದಾರೆ. ಇನ್ನೊಂದೆಡೆ, ದೂರುದಾರರು ತಾವು 2023 ರಲ್ಲಿ ಮಾತ್ರ ಈ ಆಸ್ತಿಯ ‘ಅಕ್ರಮ ವ್ಯವಹಾರ’ಗಳ ಬಗ್ಗೆ ತಿಳಿದುಕೊಂಡೆವು ಎಂದು ಹೇಳುತ್ತಿದ್ದಾರೆ. ಕಪೂರ್ ಕುಟುಂಬವು 2023 ರಲ್ಲಿ ನಕಲಿ ದಾಖಲೆಗಳ ಮೂಲಕ ‘ಪಟ್ಟಾ’ ಪಡೆದಿದೆ ಎಂದು ಅವರು ಆರೋಪಿಸಿದ್ದಾರೆ. ರಸ್ತೆ ಅಗಲೀಕರಣಕ್ಕಾಗಿ ಸರ್ಕಾರ ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ ಕಪೂರ್ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಲಾಗಿತ್ತು. ಈ ಪರಿಹಾರದ ಹಣದ ಮೇಲೆಯೂ ದೂರುದಾರರು ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.

ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಟಿ.ವಿ. ತಮಿಳ್ಸೆಲ್ವಿ ಅವರು ಪ್ರಕರಣದ ವಿಚಾರಣೆ ನಡೆಸಿ, ಕೆಳಹಂತದ ನ್ಯಾಯಾಲಯದ ನಡಾವಳಿಗಳಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ. ಮುಂದಿನ ವಿಚಾರಣೆಯನ್ನು ಮಾರ್ಚ್ 26, 2026 ಕ್ಕೆ ನಿಗದಿಪಡಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Global Shiva Temples: ಭಾರತದ ಹೊರಗೂ ಮೊಳಗುತ್ತಿದೆ ಹರಹರ ಮಹಾದೇವ ಘೋಷ; ಇವು ಜಗತ್ತಿನ ಪ್ರಸಿದ್ಧ 5 ಶಿವ ದೇವಾಲಯಗಳು

ಶಿವ ಎಂದರೆ ಅನಂತ, ಶಿವ ಎಂದರೆ ವಿಶ್ವವ್ಯಾಪಿ. ಭಾರತದ ಉದ್ದಗಲಕ್ಕೂ ನಾವು ಶಿವನ ಅಸಂಖ್ಯಾತ ದೇವಾಲಯಗಳನ್ನು ಕಾಣುತ್ತೇವೆ. ಆದರೆ ಪರಶಿವನ ಮಹಿಮೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಸಮುದ್ರದಾಚೆಗಿನ ದೇಶಗಳಲ್ಲಿಯೂ ನೂರಾರು ವರ್ಷಗಳ ಇತಿಹಾಸವಿರುವ, ಅದ್ಭುತ ಶಿಲ್ಪಕಲೆ ಹೊಂದಿರುವ ಶಿವಾಲಯಗಳಿವೆ. ಇಂದಿಗೂ ಈ ವಿದೇಶಿ ನೆಲದಲ್ಲಿ ಶಿವತಾಂಡವದ ಪ್ರತಿಧ್ವನಿ ಕೇಳಿಬರುತ್ತದೆ. ನೀವು ವಿದೇಶ ಪ್ರವಾಸ ಕೈಗೊಂಡಾಗ ತಪ್ಪದೇ ಭೇಟಿ ನೀಡಲೇಬೇಕಾದ ಐದು ಪ್ರಮುಖ ಶಿವಾಲಯಗಳ ಮಾಹಿತಿ ಇಲ್ಲಿದೆ.

ಪಶುಪತಿನಾಥ ದೇವಾಲಯ, ನೇಪಾಳ (ಕಠ್ಮಂಡು):

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿರುವ ಪಶುಪತಿನಾಥ ದೇವಾಲಯವು ವಿಶ್ವದ ಅತ್ಯಂತ ಪವಿತ್ರ ಶಿವಕ್ಷೇತ್ರಗಳಲ್ಲಿ ಒಂದಾಗಿದೆ. ಬಾಗ್ಮತಿ ನದಿಯ ದಂಡೆಯ ಮೇಲಿರುವ ಈ ದೇವಾಲಯವನ್ನು ಕ್ರಿ.ಶ. 753ರಲ್ಲಿ ರಾಜ ಜಯದೇವ ನಿರ್ಮಿಸಿದನೆಂದು ಇತಿಹಾಸ ಹೇಳುತ್ತದೆ. ಇಲ್ಲಿನ ಗರ್ಭಗುಡಿಯಲ್ಲಿರುವ ಶಿವಲಿಂಗಕ್ಕೆ ನಾಲ್ಕು ಮುಖಗಳಿದ್ದು, ಅವು ನಾಲ್ಕು ದಿಕ್ಕುಗಳನ್ನು ಪ್ರತಿನಿಧಿಸುತ್ತವೆ. 17ನೇ ಶತಮಾನದಲ್ಲಿ ಮರುನಿರ್ಮಾಣಗೊಂಡ ಈ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿದೆ.

ಅರುಳ್ಮಿಗು ಶ್ರೀ ರಾಜಕಲೈಮ್ಮನ್ ಗಾಜಿನ ದೇವಸ್ಥಾನ, ಮಲೇಷ್ಯಾ:

ಮಲೇಷ್ಯಾದ ಜೊಹೊರ್ ಬಾಹ್ರುನಲ್ಲಿರುವ ಈ ದೇವಾಲಯವು ಆಧುನಿಕ ಶಿಲ್ಪಕಲೆ ಮತ್ತು ಭಕ್ತಿಯ ಅಪೂರ್ವ ಸಂಗಮ. 1922ರಲ್ಲಿ ಮಲೇಷ್ಯಾದ ಸುಲ್ತಾನರು ಭಾರತೀಯ ಸಮುದಾಯಕ್ಕೆ ನೀಡಿದ ಜಾಗದಲ್ಲಿ ಈ ಭವ್ಯ ಗುಡಿಯನ್ನು ನಿರ್ಮಿಸಲಾಗಿದೆ. ಇದು ವಿಶ್ವದ ಮೊದಲ ಗಾಜಿನ ಶಿವಾಲಯವೆಂದು ಪ್ರಸಿದ್ಧವಾಗಿದೆ. ಈ ದೇವಾಲಯದ ಗೋಡೆಗಳು ಮತ್ತು ಸ್ತಂಭಗಳು ಸುಮಾರು ಮೂರು ಲಕ್ಷ ರುದ್ರಾಕ್ಷಿಗಳಿಂದ ಅಲಂಕೃತಗೊಂಡಿವೆ, ಇದು ಭಕ್ತರನ್ನು ಮಂತ್ರಮುಗ್ಧಗೊಳಿಸುತ್ತದೆ.

ಮುನ್ನೇಶ್ವರಂ ದೇವಾಲಯ, ಶ್ರೀಲಂಕಾ:

ರಾಮಾಯಣ ಕಾಲದ ಇತಿಹಾಸ ಹೊಂದಿರುವ ಮುನ್ನೇಶ್ವರಂ ದೇವಾಲಯವು ಶ್ರೀಲಂಕಾದ ಪುಟ್ಟಲಂ ಜಿಲ್ಲೆಯಲ್ಲಿದೆ. ಲಂಕಾದಲ್ಲಿರುವ ಐದು ಪ್ರಮುಖ ಈಶ್ವರ ದೇವಾಲಯಗಳಲ್ಲಿ (ಪಂಚ ಈಶ್ವರಂ) ಇದು ಮೊದಲನೆಯದು. ರಾವಣ ಸಂಹಾರದ ನಂತರ ಬ್ರಹ್ಮಹತ್ಯಾ ದೋಷ ನಿವಾರಣೆಗಾಗಿ ಶ್ರೀರಾಮಚಂದ್ರನು ಇಲ್ಲಿ ಶಿವನನ್ನು ಆರಾಧಿಸಿದ್ದನೆಂಬ ನಂಬಿಕೆಯಿದೆ. ಪೋರ್ಚುಗೀಸರ ದಾಳಿಗೆ ತುತ್ತಾಗಿದ್ದರೂ, ಭಕ್ತರ ನಂಬಿಕೆಯಿಂದಾಗಿ ಈ ದೇವಾಲಯವು ಮತ್ತೆ ಮರುಜನ್ಮ ಪಡೆದಿದೆ. ಇಲ್ಲಿನ ಶಿವರಾತ್ರಿ ಮತ್ತು ನವರಾತ್ರಿ ಉತ್ಸವಗಳು ಬಹಳ ವೈಭವದಿಂದ ನಡೆಯುತ್ತವೆ.

ಕಟಾಸ್‌ರಾಜ್ ಶಿವ ದೇವಾಲಯ, ಪಾಕಿಸ್ತಾನ:

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಚಕ್ವಾಲ್ ಎಂಬಲ್ಲಿರುವ ಈ ದೇವಾಲಯ ಸಮುಚ್ಚಯವು ಮಹಾಭಾರತ ಕಾಲದ ಕುರುಹಾಗಿದೆ. ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಇಲ್ಲಿ ಕೆಲಕಾಲ ನೆಲೆಸಿದ್ದರು ಎಂದು ಹೇಳಲಾಗುತ್ತದೆ. ಪುರಾಣಗಳ ಪ್ರಕಾರ, ಶಿವನ ಪತ್ನಿ ಸತಿ ದೇವಿಯ ಅಗಲಿಕೆಯಿಂದ ಶಿವನು ಕಣ್ಣೀರು ಹಾಕಿದಾಗ, ಆ ಕಣ್ಣೀರಿನ ಹನಿಗಳು ಬಿದ್ದು ಎರಡು ಪುಷ್ಕರಣಿಗಳು ನಿರ್ಮಾಣವಾದವು. ಅದರಲ್ಲಿ ಒಂದು ಪಾಕಿಸ್ತಾನದ ಈ ‘ಕಟಾಸ್’ ಸರೋವರವಾದರೆ, ಇನ್ನೊಂದು ಭಾರತದ ಪುಷ್ಕರ್ ಸರೋವರ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಪ್ರಂಬನನ್ ದೇವಸ್ಥಾನ, ಇಂಡೋನೇಷ್ಯಾ:

ಆಗ್ನೇಯ ಏಷ್ಯಾದಲ್ಲೇ ಅತಿದೊಡ್ಡ ಶಿವ ದೇವಾಲಯ ಎಂಬ ಹೆಗ್ಗಳಿಕೆ ಇಂಡೋನೇಷ್ಯಾದ ಜಾವಾದಲ್ಲಿರುವ ಪ್ರಂಬನನ್ ದೇವಸ್ಥಾನಕ್ಕಿದೆ. 9ನೇ ಶತಮಾನದಲ್ಲಿ ಮಾತಾರಂ ರಾಜವಂಶದ ರಕೈ ಪಿಕಾಟನ್ ಈ ಬೃಹತ್ ದೇವಾಲಯವನ್ನು ನಿರ್ಮಿಸಿದರು. ಇದು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಿಗೆ ಅರ್ಪಿತವಾದ ದೇವಾಲಯ ಸಮುಚ್ಚಯವಾಗಿದೆ. ಇಲ್ಲಿನ ಶಿಲ್ಪಕಲೆಗಳು ರಾಮಾಯಣ ಮತ್ತು ಭಾಗವತದ ಕಥೆಗಳನ್ನು ಸಾರುತ್ತವೆ. ಪ್ರಂಬನನ್ ಎಂದರೆ ‘ಪರಂ ಬ್ರಹ್ಮನ್’ ಅಥವಾ ಅತ್ಯುನ್ನತ ದೈವಿಕ ಶಕ್ತಿ ಎಂದರ್ಥ.

ಈ ದೇವಾಲಯಗಳು ಕೇವಲ ಕಲ್ಲು ಮತ್ತು ಮಣ್ಣಿನ ಕಟ್ಟಡಗಳಲ್ಲ, ಬದಲಿಗೆ ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮವು ವಿಶ್ವದಾದ್ಯಂತ ಎಷ್ಟು ಆಳವಾಗಿ ಬೇರೂರಿತ್ತು ಎಂಬುದಕ್ಕೆ ಸಾಕ್ಷಿಯಾಗಿವೆ. ಸಮಯ ಸಿಕ್ಕಾಗ ಈ ಪವಿತ್ರ ಕ್ಷೇತ್ರಗಳಿಗೆ ಒಮ್ಮೆಯಾದರೂ ಭೇಟಿ ನೀಡಿ, ಅಲ್ಲಿನ ದೈವಿಕ ಚೈತನ್ಯವನ್ನು ಅನುಭವಿಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಇಸ್ರೇಲ್​​ನ ಹೈಫಾ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಕ್ಷಿಪಣಿ ದಾಳಿ

ಟೆಲ್ ಅವಿವ್, ಮಾರ್ಚ್​ 20: ಮಧ್ಯಪ್ರಾಚ್ಯದಲ್ಲಿ ಯುದ್ಧವು 21 ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿ ಗಂಟೆಯೂ ಪರಿಸ್ಥಿತಿ ನಿರಂತರವಾಗಿ ಉಲ್ಬಣಗೊಳ್ಳುತ್ತಲೇ ಇದೆ. ಇರಾನ್ ಹೈಫಾದಲ್ಲಿರುವ ಇಸ್ರೇಲ್‌ನ ಪ್ರಮುಖ ಸಂಸ್ಕರಣಾಗಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆಗಳು ಬ್ಯಾರೇಜ್ ಅನ್ನು ಸಂಪೂರ್ಣವಾಗಿ ತಡೆಯಲು ವಿಫಲವಾದವು. ಇದು ಇಸ್ರೇಲ್ ಮೇಲೆ ಇರಾನ್ ನಡೆಸಿದ ಅತಿದೊಡ್ಡ ದಾಳಿಯಾಗಿದೆ. ಹೈಫಾ ಬಂದರು ಭಾರತ-ಇಸ್ರೇಲ್ ವ್ಯಾಪಾರದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಇಸ್ರೇಲ್‌ನ ಇಂಧನ, ಬಂದರು ಮತ್ತು ಮೂಲಸೌಕರ್ಯ ವಲಯಗಳಲ್ಲಿ ಭಾರತವು ಪ್ರಮುಖ ಪಾಲುದಾರನಾಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಾಗಲಕೋಟೆ ಉಪಚುನಾವಣೆ: ಮೇಟಿ ಕುಟುಂಬದ ಒಳಜಗಳದಿಂದ ಕಾಂಗ್ರೆಸ್​ಗೆ ತಲೆನೋವು, ಖುದ್ದು ಸಿಎಂ ಸಭೆ ನಡೆಸಿದರೂ ಒಮ್ಮತವಿಲ್ಲ

ಬಾಗಲಕೋಟೆ, ಮಾರ್ಚ್ 20: ಬಾಗಲಕೋಟೆ (Bagalkot) ಉಪಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress) ಪಕ್ಷದಲ್ಲಿ ಟಿಕೆಟ್ ಬಿಕ್ಕಟ್ಟು ತೀವ್ರಗೊಂಡಿದೆ. ಮಾಜಿ ಸಚಿವ, ಶಾಸಕ ದಿ. ಎಚ್​ವೈ ಮೇಟಿ (HY Meti) ಅವರ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರ ಇನ್ನೂ ಗೊಂದಲದಲ್ಲೇ ಉಳಿದಿದೆ. ಈ ಬಿಕ್ಕಟ್ಟನ್ನು ಬಗೆಹರಿಸಲು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ (Siddaramaiah) ಮುಂದಾಗಿ ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ. ಮೇಟಿ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಒಮ್ಮತ ಸಾಧಿಸಲು ಸೂಚನೆ ನೀಡಿದರೂ, ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ.

ಮೇಟಿ ಕುಟುಂಬದ ಮಕ್ಕಳಾದ ಮಲ್ಲಿಕಾರ್ಜುನ ಮೇಟಿ ಮತ್ತು ಉಮೇಶ್ ಮೇಟಿ ನಡುವೆ ತೀವ್ರ ಪೈಪೋಟಿ ಇದೆ. ಇವರಿಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಸಹೋದರರು ಹೇಳಿಕೊಂಡಿದ್ದಾರೆ. ಆದರೆ ಕೊನೆಯ ಪುತ್ರಿ ಮಹಾದೇವಿ ಮೇಟಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮಲ್ಲಿಕಾರ್ಜುನ ಮೇಟಿಗೆ ಟಿಕೆಟ್ ನೀಡಿದರೆ ಬಂಡಾಯಕ್ಕೆ ಇಳಿಯುವ ಸೂಚನೆ ನೀಡಿದ್ದಾರೆ.

ಮಹಾದೇವಿ ಮೇಟಿ ತಾವು ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದು, ಇಂದೇ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಅವರ ಇಚ್ಛೆಯಂತೆ ಉಮೇಶ್ ಮೇಟಿಗೆ ಟಿಕೆಟ್ ನೀಡಿದರೆ ಮಾತ್ರ ಒಮ್ಮತ ಸಾಧ್ಯ ಎಂಬ ಮಾತು ಕೇಳಿಬರುತ್ತಿದೆ.

ಇನ್ನೊಂದೆಡೆ, ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಗೆಲುವಿಗಾಗಿ ಶ್ರಮಿಸುವುದಾಗಿ ಮತ್ತೊಬ್ಬ ಪುತ್ರಿ ಬಾಯಕ್ಕ ಮೇಟಿ ಹೇಳಿದ್ದಾರೆ. ಆದರೂ ಕುಟುಂಬದ ಒಳಜಗಳ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದ್ದು, ಇದು ಬಿಜೆಪಿ ಪಾಲಿಗೆ ಲಾಭವಾಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: ಉಪ ಚುನಾವಣೆ: ಕಾಂಗ್ರೆಸ್​​ನಲ್ಲಿ ಬಗೆಹರಿಯದ ಟಿಕೆಟ್​​ ಕಗ್ಗಂಟು; ಮುಂದುವರಿದ ಗೊಂದಲ

ಒಟ್ಟಿನಲ್ಲಿ, ಮಲ್ಲಿಕಾರ್ಜುನ ಮೇಟಿಗೆ ಟಿಕೆಟ್ ನೀಡಿದರೆ ಬಂಡಾಯದ ಬಿಸಿ ಎದುರಾಗುವ ಸಾಧ್ಯತೆ ಇದ್ದು, ಉಮೇಶ್ ಮೇಟಿಗೆ ಟಿಕೆಟ್ ನೀಡಿದರೆ ಒಗ್ಗಟ್ಟು ಸಾಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂತಿಮವಾಗಿ ಕಾಂಗ್ರೆಸ್ ನಾಯಕತ್ವ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್​​: ಟಿಕೆಟ್​​ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಕೆಗೆ ಮುಂದಾದ ಸಚಿವರ ಪುತ್ರ!

ದಾವಣಗೆರೆ, ಮಾರ್ಚ್​​ 20: ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರ ಕಾಂಗ್ರೆಸ್‌ನಲ್ಲಿ ತೀವ್ರಗೊಂಡಿದೆ. ಬಿಜೆಪಿ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿರುವಾಗ, ಕಾಂಗ್ರೆಸ್‌ನಲ್ಲಿ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಈ ಹಿನ್ನೆಲೆಯಲ್ಲಿ, ರಣದೀಪ್ ಸುರ್ಜೇವಾಲ ಅವರು ರಾಜ್ಯಕ್ಕೆ ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಸಭೆ ನಡೆಸಿ ಚುನಾವಣಾ ತಂತ್ರ ರೂಪಿಸಲಿದ್ದಾರೆ. ಅದರ ನಡುವೆಯೇ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್​​ ಆಕಾಂಕ್ಷಿ, ಸಚಿವ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ. ಸಚಿವರ ಕುಟುಂಬದ ಈ ನಿರ್ಧಾರ ಭಾರಿ ಕುತೂಹಲಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರವಾಗಿರಬಹುದು ಎಂಬ ಮಾತುಗಳೂ ಕೇಳಿಬಂದಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಧುರಂಧರ್ 2’ ನೋಡಲು ದುಬೈನಿಂದ ಭಾರತಕ್ಕೆ ಬಂದ ಖ್ಯಾತ ಇನ್​​ಫ್ಲುಯೆನ್ಸರ್

‘ಧುರಂಧರ್ 2’ ಸಿನಿಮಾ ಎಲ್ಲ ಕಡೆಗಳಲ್ಲಿ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಚಿತ್ರವನ್ನು ಜನರು ಕೊಂಡಾಡುತ್ತಿದ್ದಾರೆ. ಕೆಲವರು ಇದನ್ನು ಟೀಕಿಸುತ್ತಿದ್ದಾರೆ. ಟೆಕ್ನಿಕಲ್ ಗುರು ಎಂದೇ ಫೇಮಸ್ ಆದ ಗೌರವ್ ಚೌಧರಿ ಅವರು ಈ ಸಿನಿಮಾ ನೋಡಲು ದುಬೈ ಇಂದ ಬೆಂಗಳೂರಿಗೆ ಬಂದಿದ್ದಾರೆ. ಈ ಸಂದರ್ಭದ ವಿಡಿಯೋನ ಹಂಚಿಕೊಂಡಿದ್ದಾರೆ. ಅವರು ಸಿನಿಮಾ ನೋಡುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದಾರಂತೆ. ದುಬೈ ಸೇರಿದಂತೆ ಅನೇಕ ದೇಶಗಳಲ್ಲಿ ‘ಧುರಂಧರ್ 2’ ಚಿತ್ರವು ಬ್ಯಾನ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version