ಬ್ಯಾಕ್ ಟು ಬ್ಯಾಕ್ 4 ಶತಕ: ಹೊಸ ವಿಶ್ವ ದಾಖಲೆ ಬರೆದ ಜೇಕ್ ಲಿಬ್ಬಿ – Kannada News | Jake Libby Shatters World Record for Highest List A Batting Average

ಲಿಸ್ಟ್-ಎ (ಏಕದಿನ) ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವರ್ಲ್ಡ್​ ರೆಕಾರ್ಡ್ ಬರೆದಿರುವುದು ಮತ್ಯಾರೂ ಅಲ್ಲ, ಇಂಗ್ಲೆಂಡ್​ನ ಅನುಭವಿ ದಾಂಡಿಗ ಜೇಕ್ ಲಿಬ್ಬಿ. ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ‘ಮೆಟ್ರೋ ಬ್ಯಾಂಕ್ ಒನ್-ಡೇ ಕಪ್’ನಲ್ಲಿ ವೋರ್ಸೆಸ್ಟರ್‌ಶೈರ್ ಪರ ಕಣಕ್ಕಿಳಿಯುತ್ತಿರುವ ಜೇಕ್ ಬ್ಯಾಕ್ ಟು ಬ್ಯಾಕ್ ನಾಲ್ಕು ಶತಕ ಸಿಡಿಸಿದ್ದಾರೆ. (PC: wccc)

Source link

ಸರ್ಜರಿ ಮಾಡಿಸಿಕೊಳ್ಳುವಾಗ ಹಾಡು ಹಾಡಿದ ಗಾಯಕ ಸೋನು ನಿಗಮ್ – Kannada News | Sonu Nigam Sings Mohammed Rafi Song During Surgery, Opens Up About Recurring Health Condition

ಪ್ರಸಿದ್ಧ ಗಾಯಕ ಸೋನು ನಿಗಮ್ ತಮ್ಮ ಮಧುರ ಕಂಠದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದವರು. ಆದರೆ ಇತ್ತೀಚೆಗೆ ಅವರು ಹಂಚಿಕೊಂಡ ವೀಡಿಯೊವೊಂದು ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ಆತಂಕವನ್ನು ಒಟ್ಟಿಗೆ ಮೂಡಿಸಿದೆ. ಸ್ವತಃ ಸೋನು ನಿಗಮ್ ಅವರೇ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವಾಗ ಆಪರೇಷನ್ ಟೇಬಲ್ ಮೇಲೆ ಮಲಗಿಕೊಂಡೇ ಹಾಡು ಹಾಡುತ್ತಿರುವ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆಪರೇಷನ್ ಥಿಯೇಟರ್‌ನಲ್ಲಿ ನಡೆದಿದ್ದೇನು?

ಸೋನು ನಿಗಮ್ ಅವರು ದಿವಂಗತ ಹಿರಿಯ ಗಾಯಕ ಮೊಹಮ್ಮದ್ ರಫಿ ಅವರ ‘ದುಲಾರಿ’ (1949) ಸಿನಿಮಾದ ‘ಸುಹಾನಿ ರಾತ್ ಧಲ್ ಚುಕಿ’ ಹಾಡನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿದ್ದಾರೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಅವರಿಗೆ ಏನಾಯಿತು ಎಂದು ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸೋನು ನಿಗಮ್, ತಮ್ಮ ಎಡಗೈ ಉಂಗುರದ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

ಹಾಡು ಹಾಡಲು ಕಾರಣವೇನು?

ಶಸ್ತ್ರಚಿಕಿತ್ಸೆ ಮಾಡುವಾಗ ಹಾಡು ಹಾಡಿದ್ದೇಕೆ ಎಂಬುದನ್ನು ವಿವರಿಸಿದ ಅವರು, ‘ಇದು ತಾನಾಗಿಯೇ ನಡೆಯಿತು. ನನಗೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ಡಾ. ನೀಲೇಶ್ ಸತ್ಭಾಯಿ ಅವರು ನನ್ನ ಅಭಿಮಾನಿಯಾಗಿದ್ದು, ಆಪರೇಷನ್ ವೇಳೆ ನನ್ನ ಹಾಡುಗಳನ್ನೇ ಪ್ಲೇ ಮಾಡುತ್ತಿದ್ದರು. ಈ ವೇಳೆ ಮೊಹಮ್ಮದ್ ರಫಿ ಅವರ ಹಾಡುಗಳ ಮ್ಯೂಸಿಕ್ ಮಾತ್ರ ಬಂದು, ಗಾಯನವಿಲ್ಲದ ಟ್ರ್ಯಾಕ್ ಪ್ಲೇ ಆಯಿತು. ಅದನ್ನು ಕೇಳಿ ನಾನೇ ಸ್ವತಃ ಹಾಡಲು ಪ್ರಾರಂಭಿಸಿದೆ’ ಎಂದಿದ್ದಾರೆ.

ರೋಗಿಯೊಬ್ಬರು ಸರ್ಜರಿ ವೇಳೆಯಲ್ಲೇ ಹೀಗೆ ಹಾಡುತ್ತಿರುವುದನ್ನು ಕಂಡು ವೈದ್ಯರ ತಂಡ ಕೂಡ ಸಂತಸ ವ್ಯಕ್ತಪಡಿಸಿತಂತೆ. ವೈದ್ಯರಿಗಾಗಿ ಸುಮಾರು 2-3 ಹಾಡುಗಳನ್ನು ಹಾಡಿದ ಸೋನು ನಿಗಮ್, ಈ ಅಪರೂಪದ ಕ್ಷಣವನ್ನು ನೆನಪಿಗಾಗಿ ರೆಕಾರ್ಡ್ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ವೈದ್ಯರು ರೆಕಾರ್ಡ್ ಮಾಡಿ ಕಳುಹಿಸಿದ ನಂತರವೇ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಎರಡು ಪ್ರಮುಖ ಮ್ಯೂಸಿಕ್ ಕಂಪನಿಗಳು ನನ್ನ ಬ್ಯಾನ್ ಮಾಡಿದ್ದವು; ಗಾಯಕ ಸೋನು ನಿಗಮ್

ಆರೋಗ್ಯದ ಸ್ಥಿತಿ ಹೇಗಿದೆ?

ಇದೇ ಸಮಸ್ಯೆಗೆ ನಾಲ್ಕು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೂ, ಮತ್ತೆ ಇದು ಮರುಕಳಿಸಿದೆ ಎಂದು ಸೋನು ನಿಗಮ್ ಹೇಳಿದ್ದಾರೆ. ‘ಇದು ಬಹುಶಃ ನನ್ನ ಮೂಳೆಗಳಲ್ಲಿರುವ ಸಂಧಿವಾತ ಸಮಸ್ಯೆಗೆ ಸಂಬಂಧಿಸಿದ್ದಿರಬಹುದು. ಪ್ರಸ್ತುತ ಚಿಕಿತ್ಸೆ ಮುಗಿದಿದ್ದು, ಮುಂದಿನ ಹಂತದ ಬಗ್ಗೆ ಕಾದು ನೋಡಬೇಕಿದೆ’ ಎಂದು ತಮ್ಮ ಆರೋಗ್ಯದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಂಠೀರವ ಸ್ಟುಡಿಯೋ ಅಂಡರ್‌ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿತ: ಇಬ್ಬರು ಕಾರ್ಮಿಕರ ಸಾವು – Kannada News | Two Works Killed And 3 Injured In Mud Collapse During Underpass Working at near kanteerava studio Bengaluru

ಬೆಂಗಳೂರು, (ಆಗಸ್ಟ್ 11): ಅಂಡರ್ ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಕಂಠೀರವ ಸ್ಟೂಡಿಯೋ(kanteerava studio Underpass) ಬಳಿ ನಡೆದಿದೆ. ಅಂಡರ್‌ಪಾಸ್ ಕಾಮಗಾರಿಗಾಗಿ ರಸ್ತೆಯಲ್ಲಿ ಸುಮಾರು 20 ಅಡಿ ಆಳದವರೆಗೆ ಮಣ್ಣನ್ನು ಅಗೆಯಲಾಗಿತ್ತು. ಇಂದು (ಆಗಸ್ಟ್ 11) ಎಂದಿನಂತೆ ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾಗ ಮೇಲಿಂದ ಏಕಾಏಕಿ ಮಣ್ಣಿನ ತಡೆಗೋಡೆ ಕುಸಿದುಬಿದ್ದಿದೆ. ಈ ವೇಳೆ ಸ್ಥಳದಲ್ಲಿದ್ದ ಐವರು ಕಾರ್ಮಿಕರು ಮಣ್ಣಿನ ಅಡಿಯಲ್ಲಿ ಸಿಲುಕಿ ಉಸಿರಾಡಲಾಗದೆ ನರಳಾಡಿದ್ದಾರೆ. ಸಿಬ್ಬಂದಿ ಹಾಗೂ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಮಣ್ಣಿನಡಿಯಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ದುರದೃಷ್ಟವಶಾತ್ ಇನ್ನಿಬ್ಬರು ಕಾರ್ಮಿಕ ಮಣ್ಣಿನ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.

ರಸ್ತೆಯಲ್ಲಿ ಅಂಡರ್ ಪಾಸ್ ಕಾಮಗಾರಿಗಾಗಿ 20 ಅಡಿಯಷ್ಟು ಮಣ್ಣು ತೋಡಲಾಗಿತ್ತು. ಆದ್ರೆ, ಕೆಲಸ ಮಾಡುವಾಗ ಏಕಾಏಕಿ ಮಣ್ಣು ಕುಸಿದಿದೆ. ಈ ವೇಳೆ ಅವರನ್ನು ರಕ್ಷಿಸಲು ಕಾರ್ಯಾಚರಣೆ ಮಾಡುವ ಸಂದರ್ಭದಲ್ಲೇ ಒಬ್ಬ ಕಾರ್ಮಿಕ ಅಸುನೀಗಿದ್ದ, ಇನ್ನೊಬ್ಬ ಕಾರ್ಮಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸ್ಥಳೀಯರ ನೆರವಿನಿಂದ ಕಾರ್ಮಿಕನ ರಕ್ಷಣೆ ಕಾರ್ಯಾಚರಣೆ ನಡೆಸಲಾಗಿತ್ತು. ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಹೆಚ್ಚುವರಿ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಮಣ್ಣಿನಡಿಯಲ್ಲಿ ಇನ್ನು ಯಾರಾದರೂ ಸಿಲುಕಿದ್ದಾರೆಯೇ ಎಂಬ ಶಂಕೆಯ ಮೇಲೆ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಗಿಂತ ಕಡಿಮೆ: CAG ವರದಿಯಲ್ಲಿ ಮಹತ್ವದ ಅಂಶಗಳು ಬಯಲು

ಎಫ್​​ಟಿಐ ಸರ್ಕಲ್ ಬಳಿ ಬಿಡಿಎ ವತಿಯಿಂದ ಕಾಮಗಾರಿ ನಡೆಯುತ್ತಿತ್ತು. ಆರ್​ಸಿಸಿ ಹಾಕಲು ಗುಂಡಿಯಲ್ಲಿ ತುಂಬಿದ್ದ ನೀರು ಖಾಲಿ ಮಾಡುತ್ತಿದ್ದಾಗ ಈ ಮಣ್ಣು ಕುಸಿದಿದೆ. ಈ ವೇಳೆ ಸ್ಥಳದಲ್ಲಿ ಐವರು ಕಾರ್ಮಿಕರು ಇದ್ದರು ಎಂದು ತಿಳಿದು ಬಂದಿದೆ. ಈ ಪೈಕಿ ಮಣ್ಣು ಕುಸಿಯುತ್ತಿದ್ದಂತೆ ಮೂವರು ಓಡಿ ಹೋಗಿದ್ದರು. ಮಣ್ಣಿನಲ್ಲಿ ಸಿಲುಕಿಕೊಂಡಿದ್ದ ಪರಿಮಳ್ (31) ಸ್ಥಳದಲ್ಲೇ ಮೃತಪಟ್ಟರೆ, ಸೋನಾರಾಮ್ (26) ಎಂಬಾತನನ್ನ ಹೊರತೆಗೆದು ಆಸ್ಪತ್ರೆಗೆ ರವಾನಿಸಲಾಗಿತ್ತು. ಕಣ್ವ ಆಸ್ಪತ್ರೆಯಲ್ಲಿ ಸೋನಾರಾಮ್ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಸದಾನಂದ್, ಸುನೀಲ್, ಇಮ್ತಿಯಾಯಾಜ್ ಗಾಯಗೊಂಡಿದ್ದಾರೆ.

ಉತ್ತರ ವಿಭಾಗ ಡಿಸಿಪಿ ನೇಮಗೌಡ ಹೇಳಿದ್ದಿಷ್ಟು

ಇನ್ನು ಘಟನೆ ಬಗ್ಗೆ ಉತ್ತರ ವಿಭಾಗ ಡಿಸಿಪಿ ನೇಮಗೌಡ ಪ್ರತಿಕ್ರಿಯಿಸಿದ್ದು, ಇಂದು ಹನ್ನೊಂದು ಗಂಟೆಗೆ ನಂದಿನಿ ಲೇಔಟ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘ ಘಟನೆ ನಡೆದಿದೆ.ಐದು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಮಣ್ಣು ಕುಸಿದು ಅವಘಡ ನಡೆದಿದೆ. ಮಣ್ಣು‌ ಕುಸಿದು ಇಬ್ಬರು ಮಣ್ಣಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಒಬ್ಬನನ್ನು ಮೇಲೆ ಎತ್ತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ‌. ಇನ್ನೊಬ್ಬ ಕಾರ್ಮಿಕ ಮಣ್ಣಿನಡಿ ಸಿಲುಕಿದ್ದಾನೆ‌‌. ಆತನ ಮೃತ ದೇಹ ಹೊರತೆಗೆಯಲು ಕಾರ್ಯಚರಣೆ ನಡೀತಿದೆ. ಕಾಮಗಾರಿ ಬಿಡಿಎಯಿಂದ ನಡೆಯುತಿದ್ದ ಮಾಹಿತಿ ಇದೆ. ಇದರ ಬಗ್ಗೆ ಪರಿಶೀಲನೆ ನಡೆಸುತಿದ್ದೇವೆ. ಕಾರ್ಮಿಕರು ಒರಿಸ್ಸಾ, ಜಾರ್ಖಂಡ್,ಪಶ್ಚಿಮ ಬಂಗಾಲದವರು ಎಂದು ತಿಳಿದುಬಂದಿದೆ ಮಾಹಿತಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಸ್ವಿಂಗ್ ಮತ್ತು ಸ್ಪಿನ್ ತಂತ್ರಕ್ಕೆ ಟೀಮ್ ಇಂಡಿಯಾ ರಣತಂತ್ರ! – Kannada News | IND vs SL: Team India’s Masterplan for Galle Test

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025-27ರ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿರುವ ಭಾರತ ಮತ್ತು ಶ್ರೀಲಂಕಾ ನಡುವಣ ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 15 ರಿಂದ ಗಾಲೆ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಲಂಕಾದ ಸ್ಪಿನ್ ಸ್ನೇಹಿ ಹಾಗೂ ರಿವರ್ಸ್ ಸ್ವಿಂಗ್‌ಗೆ ಹೆಸರುವಾಸಿಯಾದ ಗಾಲೆ ಪಿಚ್‌ನಲ್ಲಿ ಆತಿಥೇಯರನ್ನು ಮಣಿಸಲು ಭಾರತ ತಂಡದ ಯುವ ನಾಯಕ ಶುಭ್‌ಮನ್ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ವಿಶೇಷ ‘ಮಾಸ್ಟರ್ ಪ್ಲಾನ್’ ರೂಪಿಸಿದ್ದಾರೆ. ಅಂದರೆ ಲಂಕಾ ಹೆಣೆಯಲಿರುವ ಸ್ಪಿನ್ ಮತ್ತು ಸ್ವಿಂಗ್ ತಂತ್ರಕ್ಕೆ ಟೀಮ್ ಇಂಡಿಯಾ ಈಗಲೇ ಪ್ರತಿತಂತ್ರ ಸಿದ್ಧಪಡಿಸಿದೆ. ಆ ರಣತಂತ್ರಗಳು ಯಾವುವು ಎಂಬುದರ ಸವಿಸ್ತಾರ ಮಾಹಿತಿ ಇಲ್ಲಿದೆ…

ರಿವರ್ಸ್ ಸ್ವಿಂಗ್​ಗೆ ‘ಲೆಟ್ ಪ್ಲೇ’ ಸೂತ್ರ:

ಗಾಲೆ ಪಿಚ್ ಪಂದ್ಯ ಮುಂದುವರಿದಂತೆ ಒಣಗುತ್ತಾ ಹೋಗುವುದರಿಂದ, ವೇಗದ ಬೌಲರ್‌ಗಳಿಗೆ ರಿವರ್ಸ್ ಸ್ವಿಂಗ್ ಮಾಡಲು ನೆರವಾಗುತ್ತದೆ. ಇದನ್ನು ಎದುರಿಸಲು ಗಿಲ್ ಪಡೆ ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದೆ.

ಅರ್ಧ ಹಳೆಯ ಚೆಂಡಿನ ತಾಲೀಮು: ಬ್ಯಾಟರ್‌ಗಳು ನೆಟ್ಸ್‌ನಲ್ಲಿ ವಿಶೇಷವಾಗಿ ಅರ್ಧದಷ್ಟು ಹಳೆಯದಾದ ಕೂಕಬುರ್ರಾ ಚೆಂಡುಗಳ ವಿರುದ್ಧ ಗಂಟೆಗಟ್ಟಲೆ ಬ್ಯಾಟಿಂಗ್ ನಡೆಸಿದ್ದಾರೆ.

ದೇಹಕ್ಕೆ ಹತ್ತಿರವಾಗಿ ಆಡುವುದು: ರಿವರ್ಸ್ ಸ್ವಿಂಗ್ ಆಗುವ ಚೆಂಡುಗಳಿಗೆ ಬೇಗನೆ ಬ್ಯಾಟ್ ಬೀಸುವ ಬದಲು, ಚೆಂಡು ತೀರಾ ಹತ್ತಿರ ಬರುವವರೆಗೂ ಕಾಯ್ದು ಕೊನೆಯ ಕ್ಷಣದಲ್ಲಿ ಡಿಫೆಂಡ್ ಅಥವಾ ಗ್ಲಾನ್ಸ್ ಮಾಡುವ ಲೇಟ್ ಪ್ಲೇ ತಂತ್ರಕ್ಕೆ ಭಾರತೀಯ ಬ್ಯಾಟರ್‌ಗಳು ಮೊರೆ ಹೋಗಿದ್ದಾರೆ.

ಸ್ಪಿನ್ ತಂತ್ರಕ್ಕೆ ಕೌಂಟರ್ ಅಟ್ಯಾಕ್:

ಗಾಲೆ ಇಂಟರ್ನ್ಯಾಷನಲ್ ಸ್ಟೇಡಿಯಂ ಸಾಂಪ್ರದಾಯಿಕವಾಗಿ ಸ್ಪಿನ್ನರ್‌ಗಳ ಸ್ವರ್ಗವಾಗಿದೆ. ಶ್ರೀಲಂಕಾದ ಸ್ಪಿನ್ ಬಲವನ್ನು ಕುಗ್ಗಿಸಲು ಗಂಭೀರ್ ‘ಮ್ಯಾಚ್ ಸಿಮ್ಯುಲೇಶನ್’ (ನೈಜ ಪಂದ್ಯದಂತಹ ಸನ್ನಿವೇಶ ಸೃಷ್ಟಿ) ತರಬೇತಿ ನೀಡಿದ್ದಾರೆ.

ರಫ್ ಪಿಚ್ ಬ್ಯಾಟಿಂಗ್: ಪಿಚ್‌ನ ಬಿರುಕುಗಳು ಹಾಗೂ ಬೌಲರ್‌ಗಳ ಶೂ ಮಾರ್ಕ್‌ಗಳಿಂದ ಸೃಷ್ಟಿಯಾಗುವ ರಫ್ ಪ್ಯಾಚ್‌ಗಳಿಂದ  ದಿಢೀರ್ ಟರ್ನ್ ಆಗುವ ಎಸೆತಗಳನ್ನು ಎದುರಿಸಲು ಬ್ಯಾಟರ್‌ಗಳಿಗೆ ತರಬೇತಿ ನೀಡಲಾಗಿದೆ.

ಸ್ವೀಪ್ ಶಾಟ್‌ಗಳು: ಅಭ್ಯಾಸ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ (61 ರನ್) ಮತ್ತು ದೇವದತ್ ಪಡಿಕ್ಕಲ್ (142 ರನ್) ಲಂಕಾ ಸ್ಪಿನ್ನರ್‌ಗಳ ವಿರುದ್ಧ ಕ್ರೀಸ್ ಬಿಟ್ಟು ಮುನ್ನುಗ್ಗಿ ಹಾಗೂ ಸ್ವೀಪ್ ಶಾಟ್‌ಗಳ ಮೂಲಕ ರನ್ ಗಳಿಸಿದ್ದರು. ಇದೇ ರಣತಂತ್ರವನ್ನು ಮುಖ್ಯ ಪಂದ್ಯದಲ್ಲೂ ಮುಂದುವರಿಸಲು ಗಿಲ್ ಸೂಚಿಸಿದ್ದಾರೆ.

ಸ್ಪಿನ್ನರ್‌ಗಳ ‘ಮಹಾ ಚಕ್ರವ್ಯೂಹ’!

ಲಂಕಾ ತಂಡಕ್ಕೆ ಅವರದ್ದೇ ಶೈಲಿಯಲ್ಲಿ ತಿರುಗೇಟು ನೀಡಲು ಭಾರತ ತಂಡ ಈ ಬಾರಿ 3 ಅಥವಾ 4 ತಜ್ಞ ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಲು ಪ್ಲ್ಯಾನ್ ರೂಪಿಸಿದ್ದೇವೆ ಎಂದು ಸ್ಪಿನ್ ಕೋಚ್ ಸಾಯಿರಾಜ್ ಬಹುತುಲೆ ತಿಳಿಸಿದ್ದಾರೆ.

ಜಡೇಜಾ-ಕುಲ್ದೀಪ್ ಪ್ರಮುಖ ಅಸ್ತ್ರ: ಅನುಭವಿ ರವೀಂದ್ರ ಜಡೇಜಾ ಮತ್ತು ಚೈನಾಮನ್ ಬೌಲರ್ ಕುಲ್ದೀಪ್ ಯಾದವ್ ಸ್ಪಿನ್ ವಿಭಾಗವನ್ನು ಮುನ್ನಡೆಸಲಿದ್ದಾರೆ.

ಯುವ ಸ್ಪಿನ್ನರ್‌ಗಳಿಗೆ ಮಣೆ: ಅಭ್ಯಾಸ ಪಂದ್ಯದಲ್ಲಿ ಮಿಂಚಿದ ಮಾನವ್ ಸುತಾರ್ ಮತ್ತು ದೇಶಿ ಕ್ರಿಕೆಟ್ ತಾರೆ ಸಾರಂಶ್ ಜೈನ್ ಅವರಲ್ಲಿ ಒಬ್ಬರಿಗೆ ಮೂರನೇ ಅಥವಾ ನಾಲ್ಕನೇ ಸ್ಪಿನ್ನರ್ ಆಗಿ ಪಾದಾರ್ಪಣೆ ಮಾಡುವ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಕೊಹ್ಲಿ ಎಫೆಕ್ಟ್​: ‘ಇಂಜೆಕ್ಷನ್’ ಮೊರೆಹೋದರೇ ಟೀಮ್ ಇಂಡಿಯಾ ಆಟಗಾರರು!

ಒಟ್ಟಾರೆಯಾಗಿ ಹೇಳುವುದಾದರೆ, ಗಾಲೆ ಟೆಸ್ಟ್ ಪಂದ್ಯವು ಕೇವಲ ಬ್ಯಾಟ್ ಮತ್ತು ಚೆಂಡಿನ ನಡುವಿನ ಹೋರಾಟವಲ್ಲ. ಇದು ತಂತ್ರ ಮತ್ತು ಪ್ರತಿ-ತಂತ್ರಗಳ ಮಹಾ ಯುದ್ಧವಾಗಿದೆ. ಶ್ರೀಲಂಕಾದ ಸ್ಪಿನ್ ಮತ್ತು ರಿವರ್ಸ್ ಸ್ವಿಂಗ್ ಬಲೆಗೆ ಬೀಳದಂತೆ ಶುಭ್‌ಮನ್ ಗಿಲ್ ರೂಪಿಸಿರುವ ಈ ಮಾಸ್ಟರ್ ಪ್ಲ್ಯಾನ್ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಆಗಸ್ಟ್ 15 ರಿಂದ ಆರಂಭವಾಗಲಿರುವ ಪಂದ್ಯವೇ ನಿರ್ಧರಿಸಲಿದೆ.

Source link

RITES Recruitment 2026: ಭಾರತೀಯ ರೈಲ್ವೆ ಸಚಿವಾಲಯದಲ್ಲಿ ನೇಮಕಾತಿ; ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ – Kannada News | RITES Assistant Manager Jobs: Mechanical Engineers Apply for 24 Posts Online by Aug 17

ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ

ಭಾರತೀಯ ರೈಲ್ವೆ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ (RITES) ಸಂಸ್ಥೆಯು ದೇಶಾದ್ಯಂತ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 24 ಸಹಾಯಕ ವ್ಯವಸ್ಥಾಪಕ (ಮೆಕ್ಯಾನಿಕಲ್) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಪೂರ್ಣಾವಧಿ ಪದವಿ (B.E/B.Tech) ಪಡೆದಿರಬೇಕು. ಮೆಕ್ಯಾನಿಕಲ್, ಪ್ರೊಡಕ್ಷನ್, ಇಂಡಸ್ಟ್ರಿಯಲ್, ಮೆಕಾಟ್ರಾನಿಕ್ಸ್ ಹಾಗೂ ಆಟೋಮೊಬೈಲ್ ಎಂಜಿನಿಯರಿಂಗ್ ವಿಭಾಗಗಳಲ್ಲಿ ಪದವಿ ಪಡೆದ ಅಭ್ಯರ್ಥಿಗಳೂ ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪದವಿಯಲ್ಲಿ ಕನಿಷ್ಠ ಶೇ. 60 ರಷ್ಟು ಅಂಕಗಳನ್ನು ಹಾಗೂ ಎಸ್‌ಸಿ, ಎಸ್‌ಟಿ, ಒಬಿಸಿ, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು ಕನಿಷ್ಠ ಶೇ. 50 ರಷ್ಟು ಅಂಕಗಳನ್ನು ಗಳಿಸಿರಬೇಕು. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 32 ವರ್ಷಗಳಾಗಿದ್ದು, ಸರ್ಕಾರದ ಮೀಸಲಾತಿ ನಿಯಮಗಳ ಪ್ರಕಾರ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಸಡಿಲಿಕೆ ಇರಲಿದೆ.

ಅರ್ಜಿ ಶುಲ್ಕದ ವಿವರ:

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ (General) ಮತ್ತು ಒಬಿಸಿ (OBC) ವರ್ಗದ ಅಭ್ಯರ್ಥಿಗಳು ₹600 ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇನ್ನು ಇಡಬ್ಲ್ಯೂಎಸ್ (EWS), ಎಸ್‌ಸಿ (SC), ಎಸ್‌ಟಿ (ST) ಹಾಗೂ ಪಿಡಬ್ಲ್ಯೂಬಿಡಿ (PwBD) ಅಭ್ಯರ್ಥಿಗಳಿಗೆ 300 ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಆಯ್ಕೆ ಪ್ರಕ್ರಿಯೆ ಮತ್ತು ಪ್ರಮುಖ ಮಾಹಿತಿ:

ಅಭ್ಯರ್ಥಿಗಳ ಆಯ್ಕೆಯನ್ನು ಲಿಖಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ ಹಾಗೂ ನೇರ ಸಂದರ್ಶನದ (Interview) ಆಧಾರದ ಮೇಲೆ ಮಾಡಲಾಗುತ್ತದೆ. ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸುವಾಗ ಲಿಖಿತ ಪರೀಕ್ಷೆಗೆ ಶೇ. 60 ರಷ್ಟು ಹಾಗೂ ಸಂದರ್ಶನಕ್ಕೆ ಶೇ. 40 ರಷ್ಟು ಅಂಕಗಳ ತೂಕವನ್ನು (Weightage) ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 17 ರೊಳಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದೆ.

ಗಮನಿಸಿ: ಕಡೆ ಕ್ಷಣದ ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಸೂಕ್ತ. ಅರ್ಜಿ ಸಲ್ಲಿಸುವ ಮುನ್ನ ಶೈಕ್ಷಣಿಕ ಅರ್ಹತೆ, ಶುಲ್ಕ ಹಾಗೂ ಆಯ್ಕೆ ವಿಧಾನದ ಸಂಪೂರ್ಣ ವಿವರಗಳಿಗಾಗಿ ಆರ್‌ಐಟಿಇಎಸ್‌ನ (RITES) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಕೋರಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಮಾನವೀಯತೆ ಮೆರೆದ ಬಂಗಾರಪೇಟೆ ಶಾಸಕ: ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನ ನೆರವಿಗೆ ಧಾವಿಸಿದ ಎಸ್.ಎನ್.ನಾರಾಯಣಸ್ವಾಮಿ – Kannada News | Humanitarian MLA Narayanaswamy Rescues Accident Victim Near Kolar, Praised

ಕೋಲಾರ, ಆ.11: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಸವಾರನೊಬ್ಬನ ನೆರವಿಗೆ ಬಂಗಾರಪೇಟೆ ಕ್ಷೇತ್ರದ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಧಾವಿಸುವ ಮೂಲಕ ತಮ್ಮ ಮಾನವೀಯತೆ ಮೆರೆದಿದ್ದಾರೆ. ಬಂಗಾರಪೇಟೆ ತಾಲೂಕಿನ ಹುದುಕುಳ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಬಂಗಾರಪೇಟೆಯಿಂದ ಕೋಲಾರದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕೆಡಿಪಿ (KDP) ಪ್ರಗತಿ ಪರಿಶೀಲನಾ ಸಭೆಗೆ ಕಾರಿನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ಹುದುಕುಳ ಬಳಿ ಬೈಕ್ ಸವಾರನೊಬ್ಬ ರಸ್ತೆ ಅಪಘಾತಕ್ಕೆ ಈಡಾಗಿ ತೀವ್ರವಾಗಿ ಗಾಯಗೊಂಡು ಬಿದ್ದಿರುವುದನ್ನು ಗಮನಿಸಿದ ಶಾಸಕರು, ತಕ್ಷಣವೇ ತಮ್ಮ ವಾಹನವನ್ನು ತಡೆದು ಗಾಯಾಳುವಿನ ಬಳಿಗೆ ತೆರಳಿದರು. ಘಟನಾ ಸ್ಥಳದಲ್ಲೇ ಇದ್ದು ತಕ್ಷಣವೇ ತುರ್ತು ಸೇವೆಗೆ (108 ಆಂಬ್ಯುಲೆನ್ಸ್) ಕರೆ ಮಾಡಿದ ಶಾಸಕರು, ಗಾಯಾಳು ಬೈಕ್ ಸವಾರನನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸುವ ವರೆಗೆ ಸ್ಥಳದಲ್ಲೇ ಇದ್ದು ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದರು. ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಟ್ಟ ನಂತರ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಕೋಲಾರದ ಕೆಡಿಪಿ ಸಭೆಗೆ ತೆರಳಿದರು. ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಗಾಯಾಳುವಿನ ಜೀವ ಉಳಿಸಲು ನೆರವಾದ ಶಾಸಕರ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರಿಂದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಸೇತುವೆ ಬಳಿ ರೀಲ್ಸ್ ಮಾಡೋದ್ರಲ್ಲಿ ಮಹಿಳೆ ಬ್ಯುಸಿ, ಬಿಡ್ಜ್‌ನತ್ತ ತೆವಳುತ್ತಾ ಹೋದ ಕಂದಮ್ಮ – Kannada News | Woman makes Reels near a bridge after putting her child down

ರೀಲ್ಸ್ ರೀಲ್ಸ್ ರೀಲ್ಸ್…. ಈಗಿನ ಕಾಲದ ಯುವಕ ಯುವತಿಯರಲ್ಲಿ ರೀಲ್ಸ್ (reels) ಕ್ರೇಜ್ ಹೆಚ್ಚಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗುವ ಸಲುವಾಗಿ ರೀಲ್ಸ್ ಮಾಡಲು ಹೋಗಿ ಅಪಾಯದಲ್ಲಿ ಸಿಲುಕುವುದಿದೆ. ಇಲ್ಲೊಬ್ಬ ಮಹಿಳೆಯದ್ದು ಅದೇ ಕಥೆ. ತಾಯಿಯೊಬ್ಬಳು ಸೇತುವೆ ಬಳಿ ಮಗುವನ್ನು  ಬಿಟ್ಟು ರೀಲ್ಸ್ ಮಾಡಲು ಮುಂದಾಗಿದ್ದಾಳೆ. ಈ ಮಹಿಳೆ ರೀಲ್ಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ರೆ ಈ ಪುಟಾಣಿ ತೆವಳುತ್ತಾ ಸೇತುವೆ ಅಂಚಿಗೆ ಹೋಗಿರುವ ವಿಡಿಯೋ ವೈರಲ್ ಆಗಿದೆ.  ಈ ವಿಡಿಯೋ ನೋಡಿದ ನೆಟ್ಟಿಗರು ಈ ಮಹಿಳೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ರಿತೇಶ್ (Ritesh) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಮಹಿಳೆಯೊಬ್ಬಳು ಮಗುವನ್ನು ತನ್ನ ಹಿಂಬದಿ ಬಿಟ್ಟು ಸೇತುವೆ ಬಳಿ ನಿಂತು ರೀಲ್ಸ್ ಮಾಡುತ್ತಿದ್ದಾಳೆ. ಆದರೆ ತನ್ನ ಹಿಂಬದಿ ಏನು ನಡೆಯುತ್ತಿದೆ ಎನ್ನುವ ಬಗ್ಗೆ ಲಕ್ಷ್ಯವೇ ಕೊಡುತ್ತಿಲ್ಲ. ಮಗು ತೆವಳುತ್ತಾ ಅಂಚಿನ ಕಡೆಗೆ ಹೋಗುತ್ತಿದೆ. ಅಲ್ಲೇ ಇದ್ದ ವ್ಯಕ್ತಿ ಈ ಮಹಿಳೆಯ ಪತಿಯಂತೆ ಕಾಣುತ್ತದೆ. ಮಗು ತೆವಳುತ್ತಾ ಸೇತುವೆ ಅಂಚಿಗೆ ಹೋಗುತ್ತಿದ್ದಂತೆ ಓಡಿಬಂದ ಈ ವ್ಯಕ್ತಿ ಮಗುವನ್ನು ಎತ್ತಿಕೊಂಡು ಹೋಗಿ ಬೈಕ್ ಮೇಲೆ ಕೂರಿಸಿದ್ದಾರೆ. ಆದರೆ ಈ ಮಹಿಳೆಗೆ ಮಗುವಿನ ಬಗ್ಗೆ ಗಮನವೇ ಇಲ್ಲದಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: Video: ಪಿಜ್ಜಾ ಆರ್ಡರ್ ಮಾಡಿ ಅಜ್ಜಿಗೆ ಸರ್ಪ್ರೈಸ್ ಕೊಟ್ಟ ಮೊಮ್ಮಗಳು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ, ಎಷ್ಟು ಬೇಜವಾಬ್ದಾರಿಯುತ ಮಹಿಳೆ ಎಂದಿದ್ದಾರೆ. ಇನ್ನೊಬ್ಬರು, ಇದು ರೀಲ್ಸ್ ಹುಚ್ಚು ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ರೀಲ್ಸ್ ಹುಚ್ಚಿಗಾಗಿ ಮಗುವಿನ ಪ್ರಾಣದ ಜತೆಗೆ ಆಟ ಆಡಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಶೆ ಏಟಲ್ಲ, ತಾಂತ್ರಿಕ ದೋಷ ಕಾರಣ; ಏರ್ ಇಂಡಿಯಾ ವಿಮಾನ ಗಿರಕಿ ಹೊಡೆದ ಘಟನೆಗೆ ಕಾರಣ ಹುಡುಕಿದ ತನಿಖೆ – Kannada News | Air India Airbus flight turbulence incident, reason is technical failure, not pilot intoxication, says investigation

ನವದೆಹಲಿ, ಆಗಸ್ಟ್ 11: ಇತ್ತೀಚೆಗೆ ಫುಕೆಟ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ (A320 – Flight AI2379) ಆಕಾಶದಲ್ಲೇ ಹೊಯ್ದಾಡಿ 300 ಅಡಿಗಳಷ್ಟು ಕೆಳಗೆ ಕುಸಿದ ಘಟನೆಗೆ ಕಾರಣ ಬೆಳಕಿಗೆ ಬಂದಿದೆ. ಹಲವು ಪ್ರಯಾಣಿಕರು ಮತ್ತು ಸಿಬ್ಬದಿ ಗಾಯಗೊಂಡಿದ್ದ ಈ ಘಟನೆಗೆ ಟ್ರಿಪಲ್ ಹೈಡ್ರಾಲಿಕ್ ವಿಫಲತೆ (Triple Hydraulic Failures) ಮತ್ತು ಅನೇಕ ತಾಂತ್ರಿಕ ದೋಷಗಳು ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ. ಪೈಲಟ್ ಮದ್ಯಸೇವನೆಯಿಂದಲೋ ಅಥವಾ ಮತ್ತೊಂದರಿಂದಲೋ ನಶೆಯಲ್ಲಿದ್ದುದ್ದರಿಂದ ವಿಮಾನ ಭೀಕರವಾಗಿ ಹೊಯ್ದಾಡಿತ್ತು ಎನ್ನುವ ಅನುಮಾನವಿತ್ತು. ಆದರೆ, ತನಿಖೆಯು ಸದ್ಯಕ್ಕೆ ಈ ಅನುಮಾನವನ್ನು ದೂರ ಮಾಡಿದೆ.

ತ್ರಿಪಲ್ ಹೈಡ್ರಾಲಿಕ್ ವೈಫಲ್ಯ ಮತ್ತು ತಾಂತ್ರಿಕ ದೋಷಗಳು

ವಿಮಾನವು ಪ್ರಯಾಣದ ಹಂತದಲ್ಲಿದ್ದಾಗ (Cruising Altitude) ವಿಮಾನದ ಅತ್ಯಂತ ಪ್ರಮುಖ ನಿಯಂತ್ರಣ ವ್ಯವಸ್ಥೆಯಾದ ‘ಹೈಡ್ರಾಲಿಕ್ ಸಿಸ್ಟಮ್’ ಮೂರು ಹಂತಗಳಲ್ಲಿ ವಿಫಲವಾಗಿತ್ತು. ಇದರೊಂದಿಗೆ ಆಟೋ-ಪೈಲಟ್ (Autopilot) ತಾನಾಗಿಯೇ ಡಿಸ್ಕನೆಕ್ಟ್ (Disconnect) ಆಗಿ, ಹಲವು ತಾಂತ್ರಿಕ ಸ್ವಿಚ್‌ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದವು.

ಇದನ್ನೂ ಓದಿ: ಆಗಸ್ಟ್ 29ರಂದು ಅಮೆರಿಕದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ

ಪೈಲಟ್ ಮದ್ಯಪಾನ ಮಾಡಿರಲಿಲ್ಲ

ಆರಂಭದಲ್ಲಿ ಈ ಘಟನೆಗೆ ಪೈಲಟ್‌ಗಳ ನಿರ್ಲಕ್ಷ್ಯ ಅಥವಾ ಮದ್ಯಪಾನ/ಮಾದಕ ದ್ರವ್ಯ ಸೇವನೆ ಕಾರಣವಿರಬಹುದೇ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ತನಿಖೆಯಲ್ಲಿ ಇದು ಪೈಲಟ್‌ನ ತಪ್ಪು ಅಥವಾ ಮದ್ಯಪಾನದ ಪರಿಣಾಮವಲ್ಲ, ಬದಲಿಗೆ ವಿಮಾನದಲ್ಲಾದ ಸಂಪೂರ್ಣ ಯಾಂತ್ರಿಕ ಮತ್ತು ತಾಂತ್ರಿಕ ವೈಫಲ್ಯ ಎಂದು ಸ್ಪಷ್ಟವಾಗಿದೆ.

ಆಟೋ-ಪೈಲಟ್ ವೈಫಲ್ಯದ ನಂತರ ಮ್ಯಾನುಯಲ್ ನಿಯಂತ್ರಣ

ಆಟೋ-ಪೈಲಟ್ ಸಂಪರ್ಕ ಕಡಿತಗೊಂಡ ತಕ್ಷಣ ಕೋ-ಪೈಲಟ್ ವಿಮಾನವನ್ನು ಮ್ಯಾನುಯಲ್ (Manual Control) ಆಗಿ ನಿಯಂತ್ರಣಕ್ಕೆ ತೆಗೆದುಕೊಂಡರು. ಆದರೆ ಅದೇ ಸಮಯದಲ್ಲಿ ಗಾಳಿಯ ಒತ್ತಡ/ಟರ್ಬುಲೆನ್ಸ್ (Turbulence) ಮತ್ತು ಹೈಡ್ರಾಲಿಕ್ ವೈಫಲ್ಯದಿಂದಾಗಿ ವಿಮಾನ ಕ್ಷಣಮಾತ್ರದಲ್ಲಿ 300 ಅಡಿ ಕೆಳಕ್ಕೆ ಕುಸಿಯಿತು.

17 ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಗಾಯ

ದಿಢೀರ್ ಆಘಾತ ಹಾಗೂ ಕುಸಿತದಿಂದಾಗಿ ವಿಮಾನದಲ್ಲಿದ್ದ ಕನಿಷ್ಠ 17 ಪ್ರಯಾಣಿಕರು ಹಾಗೂ ಕ್ಯಾಬಿನ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಕೆಲವರಿಗೆ ಕುತ್ತಿಗೆ ಮತ್ತು ಬೆನ್ನುಮೂಳೆಯ ಭಾಗಕ್ಕೆ ಗಂಭೀರ ಪೆಟ್ಟಾಗಿದೆ.

ಇದನ್ನೂ ಓದಿ: ಅಮೆರಿಕ ಕೋರ್ಟ್‌ನಿಂದ ಎಲ್ಲಾ ಆರೋಪ ವಜಾ; ಸತ್ಯಕ್ಕೆ ಸಿಕ್ಕ ಜಯ ಎಂದ ಗೌತಮ್ ಅದಾನಿ

ತನಿಖೆ ಕಾಯ್ದುಕೊಂಡ ಆಡಳಿತ ಮಂಡಳಿ

ವಿಮಾನ ಅಪಘಾತ ತನಿಖಾ ಸಂಸ್ಥೆ (AAIB) ಮತ್ತು ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಈ ಘಟನೆಯನ್ನು “ಗಂಭೀರ ಘಟನೆ” (Serious Incident) ಎಂದು ಪರಿಗಣಿಸಿ ಸುದೀರ್ಘ ತನಿಖೆ ನಡೆಸುತ್ತಿವೆ.

ಏರ್‌ಬಸ್ (Airbus) ಕಂಪನಿ ಮತ್ತು ಫ್ರೆಂಚ್ ತನಿಖಾ ತಂಡಗಳು ಕೂಡ ಈ ತಾಂತ್ರಿಕ ದೋಷ ಹೇಗೆ ಸಂಭವಿಸಿತು ಎಂಬುದನ್ನು ಪರಿಶೀಲಿಸಲು ಭಾರತೀಯ ತನಿಖಾಧಿಕಾರಿಗಳಿಗೆ ನೆರವು ನೀಡುತ್ತಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಾವೇರಿ ವಿವಾದ: ಕರ್ನಾಟಕಕ್ಕೆ ಮತ್ತೆ ಶಾಕ್​​ ಕೊಟ್ಟ CWRC; ತಮಿಳುನಾಡಿಗೆ ಮುಂದಿನ 15ದಿನ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ – Kannada News | Cauvery Dispute: CWRC Recommends Karnataka Release 12,000 Cusecs of Water Daily to Tamil Nadu for 15 Days

ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ

ಬೆಂಗಳೂರು, ಆಗಸ್ಟ್​​ 11: ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತೆ ಕರ್ನಾಟಕಕ್ಕೆ ಶಾಕ್​​ ನೀಡಿದ್ದು, ಮುಂದಿನ 15 ದಿನಗಳ ಕಾಲ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರನ್ನು ನೆರೆ ರಾಜ್ಯ ತಮಿಳುನಾಡಿಗೆ ಹರಿಸುವಂತೆ ಶಿಫಾರಸ್ಸು ಮಾಡಿದೆ. ಇಂದು ನಡೆದಿರುವ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, CWRC ಶಿಫಾರಸು ಹಿನ್ನೆಲೆ ಮಧ್ಯಾಹ್ನದ ಬಳಿಕ ದೆಹಲಿಯಲ್ಲಿ CWMA ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಅಂತಿಮ ಆದೇಶ ಸಾಧ್ಯತೆ ಇದೆ. ಕರ್ನಾಟಕದಲ್ಲಿಯೇ ತೀವ್ರ ಬರಸ್ಥಿತಿಯ ನಡುವೆ ಈ ಹಿಂದೆ ಕೂಡ ನೀರು ಹರಿಸಲು CWMA ಆದೇಶ ನೀಡಿತ್ತು ಎಂಬುದಿಲ್ಲಿ ಗಮನಾರ್ಹ.

ರಾಜ್ಯದ ಅಧಿಕಾರಿಗಳಿಂದ ತೀವ್ರ ಅಸಮಾಧಾನ

ದೆಹಲಿಯಲ್ಲಿ ನಡೆದಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿ‌ ಸಭೆಯ ತೀರ್ಮಾನ ಸಂಬಂಧ ರಾಜ್ಯದ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ್ಕದಲ್ಲಿಯೇ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಇಲ್ಲಿಯೇ ಸಂಕಷ್ಟದ ಸ್ಥಿತಿಯಲ್ಲಿ ಜನರಿರುವಾಗ ನಿತ್ಯ 1 ಟಿಎಂಸಿ ನೀರು ಹರಿಸಿ ಅಂದರೆ ಹೇಗೆ? ಇಷ್ಟು ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಅಸಮಧಾನ ಹೊರಹಾಕಿರುವ ಪ್ರಸಂಗ ನಡೆದಿದೆ.

ಇದನ್ನೂ ಓದಿ:  ಕಾವೇರಿ ನೀರು ವಿವಾದ: ತಮಿಳುನಾಡು ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ

ಹಿಂದಿನ ಆದೇಶಕ್ಕಿಂತ ಹೆಚ್ಚಿನ ನೀರು ಹರಿಸಿರುವ ಕರ್ನಾಟಕ

ತಮಿಳುನಾಡಿಗೆ ನೀರು ಹರಸಿವ ಸಂಬಂಧ ಈ ಹಿಂದೆ CWMA ನೀಡಿದ್ದ ಆದೇಶವನ್ನು ಸಂಕಷ್ಟದ ಸಮಯದಲ್ಲಿಯೂ ಕರ್ನಾಟಕ ಸರ್ಕಾರ ಪಾಲನೆ ಮಾಡಿದೆ. 15 ದಿನಗಳಲ್ಲಿ 4.5 ಟಿಎಂಸಿ ನೀರು ಹರಿಸುವಂತೆ CWMA ತಿಳಿಸಿದ್ದ ಹಿನ್ನೆಲೆ ಕಳೆದ 15 ದಿನಗಳಲ್ಲಿ ಅದಕ್ಕಿಂತಲೂ ಹೆಚ್ಚು ನೀರು ಹರಿಸಲಾಗಿದೆ. ಸುಮಾರು 7.5 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಿರುವ ಮಾಹಿತಿ ಇದೆ. ಅಂದರೆ ಮೂರು ಟಿಎಂಸಿ ಹೆಚ್ಚುವರಿ ನೀರು ಕಬಿನಿ ಜಲಾಶಯ ತುಂಬಿದ್ದರ ಹಿನ್ನೆಲೆ ತಮಿಳುನಾಡಿಗೆ ಹರಿದಿದೆ. ಹೀಗಿದ್ದರೂ ಕಾವೇರಿ ನೀರಿಗಾಗಿ ನೆರೆ ರಾಜ್ಯದ ಕ್ಯಾತೆ ಮುಂದಿವರಿದಿರೋದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:16 pm, Tue, 11 August 26

Source link

ಬಿಗ್‌ಬಾಸ್ ‘ಅಗ್ನಿಪರೀಕ್ಷೆ’ಯಲ್ಲಿ ಗಲಾಟೆ: ‘ವಿನಯ್ ಗೌಡ ಅಲ್ಲಿರೋದಕ್ಕೆ ಲಾಯಕ್ಕಿಲ್ಲ’ ಎಂದ ಸ್ಪರ್ಧಿ – Kannada News | Bigg Boss Agniparikshe Drama: Contestant Burns Vinay Gowda Photo, Sangeetha Sringeri Slams Cringe Behavior

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್‌ಬಾಸ್ (Bigg Boss) ‘ಅಗ್ನಿಪರೀಕ್ಷೆ’ ಕಾರ್ಯಕ್ರಮದ ವೇದಿಕೆಯಲ್ಲಿ ತೀವ್ರ ಚರ್ಚೆ ಹಾಗೂ ಹೈಡ್ರಾಮಾಗಳು ನಡೆಯುವ ಸೂಚನೆ ಸಿಕ್ಕಿದೆ. ಬಿಗ್‌ಬಾಸ್ ಮನೆ ಪ್ರವೇಶಿಸಲು ಆಕಾಂಕ್ಷಿಗಳು ಸಜ್ಜಾಗುತ್ತಿರುವಂತೆಯೇ, ತೀರ್ಪುಗಾರರ ಮುಂದೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಈ ರೀತಿ ಹೈ ಡ್ರಾಮಾ ನಡೆಯೋದು ಸಾಮಾನ್ಯ. ಅದೇ ರೀತಿ, ಅಗ್ನಿಪರೀಕ್ಷೆಯಲ್ಲೂ ಡ್ರಾಮಾ ಹೆಚ್ಚಾಗಿದೆ.

ವಿನಯ್ ಗೌಡ ಫೋಟೋಗೆ ಬೆಂಕಿ ಹಚ್ಚಿದ ಆಕಾಂಕ್ಷಿ

ವೇದಿಕೆಯ ಮೇಲೆ ಬಂದ ಸ್ಪರ್ಧಿಯೊಬ್ಬರು ಮಾಜಿ ಬಿಗ್‌ಬಾಸ್ ಸ್ಪರ್ಧಿ ವಿನಯ್ ಗೌಡ ಅವರ ಫೋಟೋವನ್ನು ಹಿಡಿದು, ‘ವಿನಯ್ ಗೌಡ ಅಲ್ಲಿರೋದಕ್ಕೆ ಲಾಯಕ್ಕೇ ಇಲ್ಲ’ ಎಂದು ಕಟುವಾಗಿ ಹೇಳುತ್ತಾ, ಅವರ ಫೋಟೋಗೆ ನೇರವಾಗಿ ಬೆಂಕಿ ಹಚ್ಚಿದ್ದಾರೆ. ಈ ಘಟನೆ ತೀರ್ಪುಗಾರರ ಸಹಿತ ವೇದಿಕೆಯಲ್ಲಿದ್ದ ಪ್ರತಿಯೊಬ್ಬರನ್ನೂ ದಿಗ್ಭ್ರಮೆಗೊಳಿಸಿತು. ಇದು ಟಾಸ್ಕ್​​ನ ಭಾಗ ಆಗಿರಬಹುದು ಎಂದು ಅನೇಕರು ಊಹಿಸಿದ್ದಾರೆ.

ಸಂಗೀತಾ ಕ್ಲಾಸ್

ಮತ್ತೊಂದೆಡೆ, ತಮ್ಮ ಪ್ರದರ್ಶನದ ಮೂಲಕ ಗಮನ ಸೆಳೆಯಲು ಯತ್ನಿಸಿದ ಮಹಿಳಾ ಸ್ಪರ್ಧಿಯೊಬ್ಬರಿಗೆ ತೀರ್ಪುಗಾರರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆದ ಅವರು, ‘ನಾನು ಪಕ್ಕಾ ಎಂಟರ್‌ಟೈನ್‌ಮೆಂಟ್ ಕೊಡ್ತೀನಿ ಮೇಡಂ’ ಎಂದು ನೆಲದ ಮೇಲೆ ಬಿದ್ದು ಬೇಡಿಕೊಂಡಾಗ, ಸಂಗೀತಾ ಶೃಂಗೇರಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ನಿಮ್ಮ ಈ ಕ್ರಿಂಜ್ ನಡವಳಿಕೆಯನ್ನು ನಾವು ಎಂಟರ್‌ಟೈನ್‌ಮೆಂಟ್ ಅಂತ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂತಹ ನಡವಳಿಕೆಯನ್ನು ಬಿಗ್‌ಬಾಸ್ ಮನೆಯಲ್ಲಿ ನೋಡಲು ನಾವು ಇಷ್ಟಪಡುವುದಿಲ್ಲ’ ಎಂದು ಸಂಗೀತಾ ಶೃಂಗೇರಿ ಕಟ್ಟುನಿಟ್ಟಾಗಿ ಹೇಳಿ ಲಿವರ್ ಎಳೆಯುವ ಮೂಲಕ ಅವರನ್ನು ರಿಜೆಕ್ಟ್ ಮಾಡಿದರು.

ಇದನ್ನೂ ಓದಿ: ಬಡ ಕುಟುಂಬಗಳಿಗೆ ದಿನಸಿ ದಾನ ಮಾಡಿದ ಬಿಗ್​ಬಾಸ್ ಜಾನ್ಹವಿ: ವಿಡಿಯೋ

ಭಾನುವಾರದ ಸಂಚಿಕೆಯಲ್ಲಿ ರೋಚಕತೆ!

ಬಿಗ್‌ಬಾಸ್ ಮನೆಗೆ ಹೋಗಲು ಗಟ್ಟಿಯಾದ ಮನಸ್ಸು ಹಾಗೂ ನಿಜವಾದ ಸಾಮರ್ಥ್ಯ ಬೇಕು ಎಂದು ತೀರ್ಪುಗಾರರು ಸ್ಪಷ್ಟಪಡಿಸಿದ್ದಾರೆ. ಬಿಗ್‌ಬಾಸ್ ಅಗ್ನಿಪರೀಕ್ಷೆಯ ಈ ವಿಶೇಷ ಸಂಚಿಕೆಯು ಇದೇ ಭಾನುವಾರ ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version