ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕುರ್ಚಿಗೆ ಕುತ್ತು ತಂದಿದ್ದ ಅಸಲಿ ರಹಸ್ಯ ದಾಖಲೆ ಬಯಲು – Kannada News | Leaked Cable Renews Debate Over Imran Khan’s Exit From Power
ಇಸ್ಲಾಮಾಬಾದ್, ಮೇ 18: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಸರ್ಕಾರದ ಪತನಕ್ಕೆ ಮುನ್ನುಡಿ ಬರೆದಿದ್ದ ಅತ್ಯಂತ ವಿವಾದಾತ್ಮಕ ಹಾಗೂ ರಹಸ್ಯ ರಾಜತಾಂತ್ರಿಕ ದಾಖಲೆ ‘ಸೈಫರ್’ ಅನ್ನು ಅಂತಾರಾಷ್ಟ್ರೀಯ ತನಿಖಾ ಮಾಧ್ಯಮ ಸಂಸ್ಥೆ ಡ್ರಾಪ್ ಸೈಟ್ ಬಿಡುಗಡೆ ಮಾಡಿದೆ. ಪಾಕಿಸ್ತಾನದ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದ್ದ ಈ ರಹಸ್ಯ ಕೇಬಲ್ನ ಅಸಲಿ ಪ್ರತಿ ಜಗತ್ತಿನ ಮುಂದೆ ಬಹಿರಂಗವಾಗಿರುವುದು ಇದೇ ಮೊದಲು. ಏನಿದು ಸೈಫರ್ ವಿವಾದ? 2022ರಲ್ಲಿ ಇಮ್ರಾನ್ ಖಾನ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ಮುನ್ನ, ಅಮೆರಿಕದಲ್ಲಿರುವ ಪಾಕಿಸ್ತಾನಿ…