ಪಶ್ಚಿಮ ಬಂಗಾಳದಲ್ಲೊಬ್ಬ ನರಭಕ್ಷಕ, ಜನರ ಕೊಂದು ಮೃತದೇಹ ತಿನ್ನುತ್ತಿದ್ದ ವ್ಯಕ್ತಿಯ ಸೆರೆ – Kannada News | Gruesome Incident in Cooch Behar: Man Found Dragging Body and Consuming Flesh

ಕೂಚ್​ಬೆಹಾರ್, ಜನವರಿ 14: ಪಶ್ಚಿಮ ಬಂಗಾಳ(West Bengal)ದಲ್ಲಿ ನರಭಕ್ಷಕನೊಬ್ಬ ಪತ್ತೆಯಾಗಿದ್ದಾನೆ. ಈತ ಜನರನ್ನು ಕೊಂದು ಮೃತದೇಹವನ್ನು ಎಳೆದುಕೊಂಡು ಹೋಗಿ ತಿನ್ನುತ್ತಿದ್ದ ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದು ಇಡೀ ಬಂಗಾಳದ ಜನತೆಯೇ ಬೆಚ್ಚಿಬಿದ್ದಿದ್ದಾರೆ.  ಆರೋಪಿ ಅಪರಿಚಿತ ವ್ಯಕ್ತಿಯನ್ನು  ಕೊಲೆ(Murder) ಮಾಡಿ ನಂತರ ಅವನ ಮಾಂಸವನ್ನು ತಿನ್ನಲು ದೇಹವನ್ನು ಮನೆಗೆ ಎಳೆದುಕೊಂಡು ಹೋಗುತ್ತಿದ್ದ, ದಿನ್ಹಾಟಾ ಉಪಜಿಲ್ಲಾ ಪೊಲೀಸ್ ಅಧಿಕಾರಿ ಧಿಮಾನ್ ಮಿತ್ರ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಜನವರಿ 10 ರಂದು, ದಿನ್ಹಾಟಾ ಗಡಿಗೆ ಹೊಂದಿಕೊಂಡಿರುವ ಕುರ್ಷಾ ಹ್ಯಾಟ್‌ನಲ್ಲಿರುವ ದೂರದ ಸ್ಮಶಾನದಿಂದ ಪೊಲೀಸರು ಮಾನಸಿಕ ಅಸ್ವಸ್ಥ ವ್ಯಕ್ತಿಯ ಶವವನ್ನು ವಶಪಡಿಸಿಕೊಂಡಿದ್ದಾರೆ.ಮೃತದೇಹದ ಕುತ್ತಿಗೆ ಮತ್ತು ಭುಜಗಳ ಮೇಲೆ ಆಳವಾದ ಗಾಯಗಳಿದ್ದವು. ಅದರ ನಂತರ, ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಅದರ ನಂತರ, ಆರೋಪಿ ಫಿರ್ದೌಸ್ ಆಲಂನನ್ನು ಬಂಧಿಸಲಾಯಿತು.

ಅದಾದ ನಂತರ, ಆರೋಪಿಯನ್ನು ವಿಚಾರಣೆ ನಡೆಸಿದಾಗ, ಒಂದು ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿತು. ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಯುವಕ ಕೊಲೆಯ ನಂತರ ಆ ವ್ಯಕ್ತಿಯನ್ನು ತನ್ನ ಮನೆಗೆ ಕರೆತರುತ್ತಿದ್ದ. ನಂತರ ಅವನು ದೇಹವನ್ನು ಸ್ವಚ್ಛಗೊಳಿಸುತ್ತಿದ್ದ. ಆರೋಪಿಯು ಮೃತ ದೇಹದ ಮಾಂಸವನ್ನು ತಿನ್ನುವ ಉದ್ದೇಶ ಹೊಂದಿದ್ದ ಎಂಬುದನ್ನು ತಿಳಿದು ಪೊಲೀಸರಿಗೂ ಆಘಾತವಾಗಿತ್ತು.

ಮತ್ತಷ್ಟು ಓದಿ: ಶಬರಿಮಲೆಗೆ ಹೋಗಿ ಬಂದ, ಬಳಿಕ ಪತ್ನಿ ಕೊಂದ: ಸಿನಿಮಾ ಸ್ಟೈಲ್​​ನಲ್ಲಿ ನಡೀತು ಹತ್ಯೆ!

ಪೊಲೀಸರು ಈಗಾಗಲೇ ಆರೋಪಿಯನ್ನು ನಾಲ್ಕು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಒಂದು ದೇವಾಲಯದಲ್ಲಿ ಸಭೆ ನಡೆಯುತ್ತಿತ್ತು. ಮೃತ ದೇಹ ಪತ್ತೆಯಾಗಿದೆ ಎಂಬ ಸುದ್ದಿ ನಮಗೆ ಬಂದಿತ್ತು. ನಾವು ಹೋಗಿ ಕುತ್ತಿಗೆ ಮತ್ತು ಗಂಟಲಿನ ಮೇಲೆ ಅನೇಕ ಬಾರಿ ಕಚ್ಚಿದ ಗಾಯಗಳನ್ನು ನೋಡಿದ್ದೇವೆ. ಯಾವುದೇ ಸಿಸಿಟಿವಿ ದೃಶ್ಯ ಪತ್ತೆಯಾಗಿಲ್ಲ. ನಂತರ, ಕೊಲೆಯಾದ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥ ಎಂದು ನಮಗೆ ತಿಳಿದುಬಂದಿತು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ಕೊಲೆಗೆ ಕಾರಣ ತಿಳಿದುಬಂದಿಲ್ಲ, ನಾವು ಅವನನ್ನು ಬಂಧಿಸಿದ್ದೇವೆ, ಆರೋಪಿಯು ತಾನು ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ದೇಹ ತಿನ್ನುವುದಕ್ಕಾಗಿಯೇ ಆತ ಕೊಲೆ ಮಾಡಿದ್ದಾನೆ. ಕೊಲೆಯ ನಂತರ, ಅವನು ಶವವನ್ನು ಮನೆಗೆ ತಂದಿದ್ದಾನೆ ಎಂದು ತಿಳಿದುಬಂದಿದೆ. ನಂತರ ಅವನು ಅದನ್ನು ಅಡುಗೆಮನೆಯಲ್ಲಿ ಸ್ವಚ್ಛಗೊಳಿಸಿದ್ದಾರೆ. ಶವವನ್ನು ತಿನ್ನುವುದೇ ಅವನ ಉದ್ದೇಶ ಎಂದು ಸಾಕ್ಷಿಗಳಿಂದ ನಮಗೆ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:58 pm, Wed, 14 January 26

Source link

Vastu Shastra: ಮನೆಯಲ್ಲಿ ಪಾರಿವಾಳ ಮೊಟ್ಟೆ ಇಟ್ಟರೆ ಏನರ್ಥ? ವಾಸ್ತು ಶಾಸ್ತ್ರ ಹೇಳುವುದೇನು? – Kannada News | Pigeon Nesting at Home: Vastu Shastra, Good or Bad Luck and Spiritual Insights

ಪಾರಿವಾಳಗಳು ಮನೆಯ ಬಾಲ್ಕನಿಯಲ್ಲಿ ಅಥವಾ ತಾರಸಿಯ ಮೇಲೆ ಗೂಡು ಕಟ್ಟುವುದು ಬಹಳ ಸಾಮಾನ್ಯ. ಕೆಲವೇ ದಿನಗಳಲ್ಲಿ ಅವು ಅಲ್ಲಿ ಮೊಟ್ಟೆಗಳನ್ನು ಇಡುವುದರಿಂದ, ಇದನ್ನು ನೋಡಿದ ಹಲವರು ಇದು ಸಹಜ ಪ್ರಕ್ರಿಯೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಇನ್ನೂ ಕೆಲವರು ಇದನ್ನು ವಾಸ್ತು ದೃಷ್ಟಿಯಿಂದ ಮನೆಗೆ ಶುಭವೋ ಅಥವಾ ಅಶುಭವೋ ಎಂಬ ಕುತೂಹಲದಿಂದ ಚಿಂತಿಸುತ್ತಾರೆ. ಈ ವಿಚಾರದಲ್ಲಿ ವಾಸ್ತು ಶಾಸ್ತ್ರ ಮತ್ತು ಆಧ್ಯಾತ್ಮಿಕ ಗುರುಗಳು ವಿಭಿನ್ನ ಅಭಿಪ್ರಾಯಗಳನ್ನು ನೀಡಿದ್ದಾರೆ.

ವಾಸ್ತು ಶಾಸ್ತ್ರದ ಪ್ರಕಾರ ಪಾರಿವಾಳವನ್ನು ಶಾಂತಿ, ಪ್ರೀತಿ ಮತ್ತು ಸಮೃದ್ಧಿಯ ಸಂಕೇತವಾಗಿ ನೋಡಲಾಗುತ್ತದೆ. ಕೆಲ ವಾಸ್ತು ತಜ್ಞರು ಪಾರಿವಾಳವನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸುತ್ತಾರೆ. ವಿಶೇಷವಾಗಿ ಮನೆಯ ಬಾಲ್ಕನಿಯಲ್ಲಿ ಅಥವಾ ದಕ್ಷಿಣ ದಿಕ್ಕಿನಲ್ಲಿ ಪಾರಿವಾಳಗಳು ಗೂಡು ಕಟ್ಟಿದ್ದು ಮೊಟ್ಟೆ ಇಟ್ಟರೆ, ಅದು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ, ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ವೃದ್ಧಿಯ ಸಂಕೇತ ಎಂದು ನಂಬಲಾಗುತ್ತದೆ. ಮನೆಗೆ ಶಾಂತಿ ಮತ್ತು ನೆಮ್ಮದಿ ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಇದೆ.

ಇನ್ನೊಂದೆಡೆ, ಪಾರಿವಾಳ ಗೂಡು ಕಟ್ಟುವುದನ್ನು ಅಶುಭವೆಂದು ಪರಿಗಣಿಸುವವರೂ ಇದ್ದಾರೆ. ಅವರ ನಂಬಿಕೆಯ ಪ್ರಕಾರ, ಮನೆಯೊಳಗೆ ಅಥವಾ ತುಂಬಾ ಹತ್ತಿರವಾಗಿ ಪಾರಿವಾಳಗಳು ಗೂಡು ಕಟ್ಟಿದರೆ ಮನೆಗೆ ಅಸ್ಥಿರತೆ ಬರುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಕುಟುಂಬದ ಸದಸ್ಯರ ಪ್ರಗತಿಗೆ ಅಡ್ಡಿಯಾಗಬಹುದು, ಆರ್ಥಿಕ ಒತ್ತಡ, ಸಾಲಗಳು ಅಥವಾ ಕೌಟುಂಬಿಕ ವಿವಾದಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಭಯವೂ ಕೆಲವರಲ್ಲಿ ಕಂಡುಬರುತ್ತದೆ. ವಿಶೇಷವಾಗಿ ಗೂಡಿನಿಂದ ಉಂಟಾಗುವ ಅಶುದ್ಧತೆ ಮತ್ತು ಮಲದಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂಬ ಕಾರಣಕ್ಕೆ ಇದನ್ನು ನಕಾರಾತ್ಮಕವಾಗಿ ನೋಡಲಾಗುತ್ತದೆ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಈ ಕುರಿತು ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ನಮ್ಮ ಮನೆಯ ಬಳಿ ಆಶ್ರಯ ಪಡೆದ ಯಾವುದೇ ಜೀವಿಯನ್ನು ಹೊರೆ ಎಂದು ಕಾಣಬಾರದು. ಪ್ರತಿಯೊಂದು ಜೀವಿಯೂ ಪ್ರಕೃತಿಯ ಒಂದು ಅಂಗವಾಗಿದ್ದು, ಅವುಗಳ ಅಸ್ತಿತ್ವವನ್ನು ಗೌರವಿಸಬೇಕು. ಅದೇ ಸಮಯದಲ್ಲಿ, ಸ್ವಚ್ಛತೆ ಮತ್ತು ಶಿಸ್ತು ಕೂಡ ಅತ್ಯಂತ ಮುಖ್ಯ ಎಂದು ಅವರು ತಿಳಿಸುತ್ತಾರೆ. ಪಾರಿವಾಳಗಳಿಗೆ ಹಾನಿ ಮಾಡದೇ, ಮನೆಯ ಆರೋಗ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ರೀತಿಯಲ್ಲಿ ನಡೆದುಕೊಳ್ಳುವುದು ಉತ್ತಮ ಎಂದು ಅವರು ಸಲಹೆ ನೀಡುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟ್ರಾಫಿಕ್ ಪೊಲೀಸರ ಎಐ ಕ್ಯಾಮರಾಗಳ ಕಣ್ಣುತಪ್ಪಿಸ್ತಿವೆ ಈ ನಂಬರ್ ಪ್ಲೇಟ್​ಗಳು! – Kannada News | Bengaluru AI Cameras Blinded by Defective Plates

ಟ್ರಾಫಿಕ್ ಪೊಲೀಸರ ಎಐ ಕ್ಯಾಮರಾಗಳ ಕಣ್ಣುತಪ್ಪಿಸ್ತಿವೆ ಈ ನಂಬರ್ ಪ್ಲೇಟ್​ಗಳು!

ಬೆಂಗಳೂರು, ಜನವರಿ 14: ಸಂಚಾರ ನಿಯಂತ್ರಣ ಮತ್ತು ಕಾನೂನು ಜಾರಿಗೆ ನಿಗಾ ಕ್ಯಾಮೆರಾಗಳ ಅವಲಂಬನೆ ಹೆಚ್ಚುತ್ತಿರುವ ನಡುವೆಯೇ, ದೋಷವಿರುವ ಹಾಗೂ ಫ್ಯಾನ್ಸಿ ನಂಬರ್ ಪ್ಲೇಟ್​ಗಳು ಬೆಂಗಳೂರು ಸಂಚಾರ ಪೊಲೀಸರಿಗೆ (BTP) ದೊಡ್ಡ ಸವಾಲಾಗಿ ಪರಿಣಮಿಸಿವೆ. ಇಂತಹ ನಂಬರ್ ಪ್ಲೇಟ್​ಗಳನ್ನು ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಶನ್ (ANPR) ಕ್ಯಾಮೆರಾಗಳು ಪತ್ತೆಹಚ್ಚಲು ವಿಫಲವಾಗುತ್ತಿದ್ದು, ಇದರಿಂದ ಕಾನೂನು ಜಾರಿ ಹಾಗೂ ಅಪರಾಧ ತನಿಖೆಗೆ ಅಡ್ಡಿಯಾಗುತ್ತಿದೆ.

ಡಿಫೆಕ್ಟಿವ್ ನಂಬರ್ ಪ್ಲೇಟ್​ಗಳಿಂದ ಅಪರಾಧ ಪತ್ತೆಹಚ್ಚುವಲ್ಲಿ ವಿಳಂಬ

ಕಳೆದ ಮೂರು ವರ್ಷಗಳಲ್ಲಿ ಡಿಫೆಕ್ಟಿವ್ ನಂಬರ್ ಪ್ಲೇಟ್‌ಗಳಿಗೆ ಸಂಬಂಧಿಸಿದಂತೆ 4.2 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. 2023ರಲ್ಲಿ 1,50,861 ಪ್ರಕರಣಗಳು, 2024ರಲ್ಲಿ 1,57,665 ಪ್ರಕರಣಗಳು ಹಾಗೂ 2025ರಲ್ಲಿ ನವೆಂಬರ್‌ವರೆಗೆ 1,50,861 ಪ್ರಕರಣಗಳು ದಾಖಲಾಗಿವೆ ಎಂದು ಅಂಕಿಅಂಶಗಳು ತಿಳಿಸುತ್ತವೆ.

ಮಂದವಾದ, ಮುರಿದ ಅಥವಾ ಟೇಪ್, ಕಾಗದದಿಂದ ಮುಚ್ಚಿದ ನಂಬರ್ ಪ್ಲೇಟ್‌ಗಳು ANPR ಕ್ಯಾಮೆರಾ ಕಣ್ಣಿಗೆ ಬೀಳದ ಕಾರಣ ಅತಿವೇಗ, ಸಿಗ್ನಲ್ ಜಂಪ್ ಮುಂತಾದ ಅಪರಾಧಗಳಿಗೆ ಇ-ಚಲನ್ ಗೆ ಒಳಗಾಗುವುದಿಲ್ಲ. ಹಿಟ್ ಅಂಡ್ ರನ್ ಪ್ರಕರಣಗಳು ಹಾಗೂ ವಾಹನ ಬಳಸಿ ದರೋಡೆ ಮಾಡಿದ ಕೇಸ್​ಗಳ ತನಿಖೆಯೂ ಇದರಿಂದ ವಿಳಂಬವಾಗುತ್ತಿದೆ ಎಂದು ಹಿರಿಯ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟ್ಯಾಂಪರ್-ಪ್ರೂಫ್ HSRP ನಂಬರ್ ಪ್ಲೇಟ್​ಗಳಿಂದ ಸಾಕಷ್ಟು ಸುಧಾರಣೆ

ಡೆಲಿವರಿ ಬಾಯ್ಸ್ನಲ್ಲಿ ಹೆಚ್ಚಿನವರು ಸರಿಯಾದ ಫಲಕ ಬಳಸಿದರೂ, ಕೆಲವರು ಉದ್ದೇಶಪೂರ್ವಕವಾಗಿ ನಂಬರ್ ಪ್ಲೇಟ್‌ಗಳನ್ನು ಮುಚ್ಚಿಕೊಳ್ಳುತ್ತಿದ್ದಾರೆ. ವೀಲೀಂಗ್ ಮಾಡುವವರು ನಂಬರ್ ಪ್ಲೇಟ್‌ಗಳನ್ನೇ ಪ್ರದರ್ಶಿಸುತ್ತಿಲ್ಲ. ಉದ್ದೇಶಪೂರ್ವಕವಾಗಿ ಡಿಫೆಕ್ಟಿವ್ ನಂಬರ್ ಪ್ಲೇಟ್​ಗಳನ್ನು ಬಳಸುವವರ ವಿರುದ್ಧ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಸಂಚಾರ ಪಶ್ಚಿಮ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ Bengaluru: ಟ್ರಾಫಿಕ್​​ ನಿಯಮ ಉಲ್ಲಂಘಿಸುವ ಮುನ್ನ ಜೋಕೆ: ಇನ್ಮುಂದೆ ದಾಖಲಾಗುತ್ತೆ FIR

ಇದರ ನಡುವೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ಗಳನ್ನು (HSRP) ಕಟ್ಟುನಿಟ್ಟಾಗಿ ಜಾರಿಗೊಳಿಸುವುದರಿಂದ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಸಂಚಾರ ತಜ್ಞ ಪ್ರೊ. ಎಂ.ಎನ್. ಶ್ರೀಹರಿ ಅಭಿಪ್ರಾಯಪಟ್ಟಿದ್ದಾರೆ. ಟ್ಯಾಂಪರ್-ಪ್ರೂಫ್ ಗುಣಲಕ್ಷಣ ಹೊಂದಿರುವ HSRP ನಂಬರ್ ಪ್ಲೇಟ್‌ಗಳನ್ನು ಅಳವಡಿಸುವುದರಿಂದ ಅವುಗಳನ್ನು ಬದಲಾಯಿಸುವುದು ಕಷ್ಟವಾಗಿದ್ದು, RTO ಹಾಗೂ ಪೊಲೀಸರ ಸಂಯುಕ್ತ ಕ್ರಮ ಪರಿಣಾಮಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

KSRTC ಬಸ್ಸಿನಡಿ ಸಿಲುಕಿದರೂ ಪ್ರಯಾಣಿಕ ಪವಾಡಸದೃಶ ಪಾರು: ವಿಡಿಯೋ ವೈರಲ್​​ – Kannada News | KSRTC Bus Hits Elderly Man in Chikkamagaluru, Video Goes Viral

ಚಿಕ್ಕಮಗಳೂರು, ಜನವರಿ 14: KSRTC ಬಸ್​​ನಡಿ ಸಿಲುಕಿದರೂ ಪ್ರಯಾಣಿಕ ಪವಾಡಸದೃಶ ಪಾರಾಗಿರುವ ಘಟನೆ ಚಿಕ್ಕಮಗಳೂರಿನ ಬಸ್ ನಿಲ್ದಾಣದಲ್ಲಿ ನಡೆದಿದೆ. ಬೆಚ್ಚಿ ಬೀಳಿಸುವ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕುರುವಂಗಿ ಮೂಲದ ಆಂಜನೇಯ (75) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುರುವಂಗಿ ಗ್ರಾಮಕ್ಕೆ ತೆರಳಲು ಬಸ್ ನಿಲ್ದಾಣಕ್ಕೆ ಆಂಜನೇಯ ಬಂದಿದ್ದಾಗ ಅವಘಡ ಸಂಭವಿಸಿದ್ದು, ನಿರ್ಲಕ್ಷ್ಯದ ಚಾಲನೆ ಮಾಡಿದ ಬಸ್ ಚಾಲಕನ ವಿರುದ್ಧ ಸಂಚಾರಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ನೀಡಲಾಗ್ತಿದ್ದು, ಜನವರಿ 7ರಂದು ನಡೆದ ಘಟನೆಯ ದೃಶ್ಯ ವೈರಲ್ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಾವೇರಿ: ಶಾಲೆ ಆವರಣದಲ್ಲೇ ಪುಂಡರಂತೆ ಹೊಡೆದಾಡಿಕೊಂಡ ಅತಿಥಿ ಶಿಕ್ಷಕ, ಎಸ್‌ಡಿಎಂಸಿ ಅಧ್ಯಕ್ಷ, ವಿಡಿಯೋ ವೈರಲ್ – Kannada News | Guest Teacher, SDMC President Clash Inside Government School in Haveri; Fight Video Goes Viral

ಹಾವೇರಿ, ಜನವರಿ 14: ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿರುವ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕ ಮತ್ತು ಶಾಲಾ ಅಭಿವೃದ್ಧಿ ಹಾಗೂ ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷರ ನಡುವೆ ನಡೆದ ಹೊಡೆದಾಟವು ತೀವ್ರ ಚರ್ಚೆಗೆ ಕಾರಣವಾಗಿದೆ. ಕೈಕೈ ಮಿಲಾಯಿಸಿ, ಶರ್ಟ್ ಹಿಡಿದು ಪರಸ್ಪರ ಪುಂಡರಂತೆ ಹೊಡೆದಾಡಿಕೊಂಡ ಘಟನೆ ಶಾಲಾ ಆವರಣದಲ್ಲೇ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾಹಿತಿಯ ಪ್ರಕಾರ, ಅತಿಥಿ ಶಿಕ್ಷಕ ಗಂಟೇರ್ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಸತೀಶ್ ಬೋಸ್ಲೆ ಅವರ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯ ಮತ್ತು ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸತೀಶ್ ಬೋಸ್ಲೆ ಅವರು ಶಿಕ್ಷಕನಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿದ ಆರೋಪವೂ ಕೇಳಿಬಂದಿದೆ. ಮಾತಿಗೆ ಮಾತು ಬೆಳೆದು ಕೊನೆಗೆ ಇಬ್ಬರೂ ಪರಸ್ಪರ ಕೈಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ.

ಶಿಕ್ಷಣ ಸಂಸ್ಥೆಯಲ್ಲಿ ಮಾದರಿಯಾಗಬೇಕಾದ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರ ನಡುವೆಯೇ ಈ ರೀತಿಯ ಮಾರಾಮಾರಿ ನಡೆದಿರುವುದು ಪೋಷಕರು ಮತ್ತು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಇತ್ತ, ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುತ್ತಿರುವ ಸ್ಥಿತಿಯೂ ಬಹಿರಂಗವಾಗಿದೆ. ಶೌಚಾಲಯಗಳ ಹದಗೆಟ್ಟ ಸ್ಥಿತಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಅಡಚಣೆಗಳು ಶಾಲೆಯನ್ನು ಕಾಡುತ್ತಿವೆ.

ವಿಡಿಯೋ ಮತ್ತು ವರದಿ: ಅಣ್ಣಪ್ಪ ಬಾರ್ಕಿ, ಹಾವೇರಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಲ್ಲು ಜೊತೆ ಕಾರು ಡ್ರಿಫ್ಟ್ ಮಾಡಿದ ಧೋನಿ; ಫಾರ್ಮ್​​ಹೌಸ್​​ನಲ್ಲಿ ಮಸ್ತಿ

Source link

ನೆಲಮಂಗಲದಲ್ಲಿ ಚಿರತೆ ದಾಳಿ ಹೆಚ್ಚಳ: ನಾಯಿಯನ್ನು ಎಳೆದುಕೊಂಡ ಹೋದ ಭಯಾನಕ ದೃಶ್ಯ ಸೆರೆ – Kannada News | Leopard Menace in Hemaganga Layout: Frightened Residents Demand Action Following Dog Attacks

ಬೆಂಗಳೂರು, ಜ.14; ನೆಲಮಂಗಲದ ಹೇಮಗಂಗಾ ಬಡಾವಣೆಯಲ್ಲಿ ಚಿರತೆ ಹಾವಳಿ ತೀವ್ರಗೊಂಡಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಚಿರತೆಗಳ ದಾಳಿ ನಿರಂತರವಾಗಿ ಹೆಚ್ಚಾಗುತ್ತಿದ್ದು, ಜನರಲ್ಲಿ ಭೀತಿ ಮನೆ ಮಾಡಿದೆ. ತಮ್ಮ ಸಾಕುಪ್ರಾಣಿಗಳ ಸುರಕ್ಷತೆಗಾಗಿ ಜನ ರಾತ್ರಿಯಿಡೀ ದೊಣ್ಣೆ ಹಿಡಿದು ಕಾವಲು ಕಾಯುವಂತಹ ಪರಿಸ್ಥಿತಿ ಎದುರಾಗಿದೆ. ಮುಂಜಾನೆ 4 ಗಂಟೆ 17 ನಿಮಿಷಕ್ಕೆ ಚಿರತೆಯೊಂದು ಬಡಾವಣೆಯ ನಾಯಿಯೊಂದರ ಮೇಲೆ ದಾಳಿ ನಡೆಸಿದ್ದು, ಈ ಘಟನೆ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಚಿರತೆ ನಾಯಿಯನ್ನು ಎಳೆದುಕೊಂಡು ಹೋಗಲು ಯತ್ನಿಸಿದರೂ, ನಾಯಿಯು ಚಿರತೆಯ ದಾಳಿಯಿಂದ ಬದುಕುಳಿದಿದೆ. ಆದರೆ, ದಾಳಿಯ ಪರಿಣಾಮವಾಗಿ ನಾಯಿಯು ಗಾಯಗೊಂಡು ಈಗಲೂ ಕುಂಟುತ್ತಾ ನಡೆಯುತ್ತಿದೆ. ಈ ಘಟನೆಗಳ ನಂತರ, ಹೇಮಗಂಗಾ ಬಡಾವಣೆಯ ನಿವಾಸಿಗಳು ಮುಂಜಾನೆಯ ವಾಕಿಂಗ್‌ಗೆ ತೆರಳಲು ಭಯಪಡುತ್ತಿದ್ದಾರೆ. ತಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಸಹ ಹಿಂಜರಿಯುತ್ತಿದ್ದಾರೆ. ಇಲ್ಲಿ ಸಣ್ಣ ಮಕ್ಕಳ ಸಂಖ್ಯೆ ಅಧಿಕವಾಗಿರುವುದರಿಂದ ಪೋಷಕರು ಚಿಂತಿತರಾಗಿದ್ದಾರೆ. ಅಲ್ಲದೆ, ಮುಂಜಾನೆ 2 ಮತ್ತು 3 ಗಂಟೆಗೆ ಕೆಲಸಕ್ಕೆ ತೆರಳುವ ಮತ್ತು ಬರುವ ಕಾರ್ಮಿಕರು ಒಬ್ಬೊಬ್ಬರೇ ಓಡಾಡಲು ಭಯಪಡುತ್ತಿದ್ದಾರೆ. ಮೊದಲು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ ನಿರ್ಲಕ್ಷ್ಯದ ಉತ್ತರ ಬಂದಿದೆ ಎಂದು ನಿವಾಸಿಗಳು ದೂರಿದ್ದಾರೆ. ಬಡಾವಣೆಯಲ್ಲಿರುವ ಕಾಡುಪ್ರದೇಶಗಳು ಚಿರತೆಗಳಿಗೆ ಅಡಗುತಾಣಗಳಾಗಿವೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.ಇದೇ ರೀತಿಯ ಚಿರತೆ ಹಾವಳಿ ಮುಂದುವರಿದರೆ ಮಾನವ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಚಿರತೆಗಳನ್ನು ಹಿಡಿದು ಸ್ಥಳೀಯರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಡಾವಣೆಯ ಜನರು ಸಾಮೂಹಿಕವಾಗಿ ಆಗ್ರಹಿಸಿದ್ದಾರೆ.

ವರದಿ; ಮಂಜುನಾಥ್ 

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಾಸ್ ಗೆದ್ದ ನ್ಯೂಝಿಲೆಂಡ್: ಭಾರತದ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಚೇಂಜ್ – Kannada News | India vs new zealand 2nd odi Toss Update and playing 11

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ 2ನೇ ಮ್ಯಾಚ್ ಶುರುವಾಗಿದೆ. ರಾಜ್​ಕೋಟ್​ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಝಿಲೆಂಡ್ ತಂಡದ ನಾಯಕ ಮೈಕೆಲ್ ಬ್ರೇಸ್​ವೆಲ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಇನ್ನು ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ವಡೋದರಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ವಾಷಿಂಗ್ಟನ್ ಸುಂದರ್ ಗಾಯದ ಕಾರಣ ತಂಡದಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಇಂದಿನ ಪಂದ್ಯದಲ್ಲಿ ನಿತೀಶ್ ಕುಮಾರ್ ರೆಡ್ಡಿಗೆ ಅವಕಾಶ ಸಿಕ್ಕಿದೆ. ಅದರಂತೆ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…

ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ನ್ಯೂಝಿಲೆಂಡ್ ಪ್ಲೇಯಿಂಗ್ XI: ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ವಿಲ್ ಯಂಗ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಹೇ(ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್ (ನಾಯಕ), ಝಕಾರಿ ಫೌಲ್ಕ್ಸ್, ಕ್ರಿಸ್ಟಿಯನ್ ಕ್ಲಾರ್ಕ್, ಕೈಲ್ ಜೇಮಿಸನ್, ಆದಿತ್ಯ ಅಶೋಕ್.

ಸರಣಿ ನಿರ್ಣಾಯಕ ಪಂದ್ಯ:

ಈ ಮ್ಯಾಚ್​ನಲ್ಲಿ ಭಾರತ ತಂಡ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಏಕೆಂದರೆ ಮೂರು ಪಂದ್ಯಗಳ ಸರಣಿ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ 4 ವಿಕೆಟ್​ಗಳ ಜಯ ಸಾಧಿಸಿತ್ತು. ಇದೀಗ ದ್ವಿತೀಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿ ಜಯಿಸುವ ಅವಕಾಶ ಟೀಮ್ ಇಂಡಿಯಾ ಮುಂದಿದೆ.

ಅತ್ತ ಸರಣಿ ಆಸೆಯನ್ನು ಜೀವಂತವಿರಿಸಿಕೊಳ್ಳಬೇಕಿದ್ದರೆ ಇಂದಿನ ಪಂದ್ಯದಲ್ಲಿ ನ್ಯೂಝಿಲೆಂಡ್ ಗೆಲ್ಲಲೇಬೇಕು. ಹೀಗಾಗಿ ಕಿವೀಸ್ ಪಡೆ ಪಾಲಿಗೆ ಇಂದಿನ ಮ್ಯಾಚ್ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಮಾರ್ಪಟ್ಟಿದೆ.

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಆಯುಷ್ ಬದೋನಿ, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).

ಇದನ್ನೂ ಓದಿ: ಸಿಕ್ಸರ್​ಗಳ ಸುರಿಮಳೆ… ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣ

ನ್ಯೂಝಿಲೆಂಡ್ ಏಕದಿನ ತಂಡ: ಮೈಕೆಲ್ ಬ್ರೇಸ್‌ವೆಲ್ (ನಾಯಕ), ಆದಿ ಅಶೋಕ್, ಕ್ರಿಸ್ಟಿಯನ್ ಕ್ಲಾರ್ಕ್, ಜೋಶ್ ಕ್ಲಾರ್ಕ್ಸನ್, ಡೆವೊನ್ ಕಾನ್ವೆ, ಝ್ಯಾಕ್ ಫೌಲ್ಕ್ಸ್, ಮಿಚ್ ಹೇ (ವಿಕೆಟ್ ಕೀಪರ್), ಕೈಲ್ ಜೇಮಿಸನ್, ನಿಕ್ ಕೆಲ್ಲಿ, ಜೇಡನ್ ಲೆನಾಕ್ಸ್, ಡೇರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರೇ, ವಿಲ್ ಯಂಗ್.

Source link

ಸುದೀಪ್ ಮಗಳು ಸಾನ್ವಿ ಧ್ವನಿಯಲ್ಲಿ ಮೂಡಿ ಬಂತು ಹೊಸ ಹಾಡು; ಇಂಪಾಗಿದೆ ‘ಅರಗಿಣಿಯೇ’ ಸಾಂಗ್ – Kannada News | Saanvi Sudeep Sings for Sanchit Sanjeev’s Debut ‘Mango Paccha’: Kichcha’s Daughter Shine

ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಸಿನಿಮಾದ ಕೆಲಸ ಕೊನೆಯ ಹಂತದಲ್ಲಿ ಇದ್ದು, ಶೀಘ್ರವೇ ಸಿನಿಮಾ ರಿಲೀಸ್ ಆಗಲಿದೆ. ವಿವೇಕ್ ನಿರ್ದೇಶನದ ಈ ಚಿತ್ರಕ್ಕೆ, ಪ್ರಿಯಾ ಹಾಗೂ ಕೆಆರ್​​ಜಿ ಸ್ಟುಡಿಯೋ ಬಂಡವಾಳ ಹೂಡಿದೆ. ಈ ಚಿತ್ರದ ‘ಅರಗಿಣಿಯೇ..’ ಹಾಡು ಬಿಡುಗಡೆ ಆಗಿದೆ. ಈ ಸಾಂಗ್​​ನ ಸುದೀಪ್ ಮಗಳು ಸಾನ್ವಿ (Sanvi Sudeep) ಹಾಡಿದ್ದಾರೆ ಅನ್ನೋದು ವಿಶೇಷ.

ಸಾಮಾನ್ಯವಾಗಿ ಸ್ಟಾರ್ ಹೀರೋಗಳ ಮಕ್ಕಳು ನಟ/ನಟಿಯಾಗಿ ಚಿತ್ರರಂಗದಲ್ಲಿ ಮಿಂಚಲು ಬಯಸುತ್ತಾರೆ. ಆದರೆ, ಸಾನ್ವಿ ಆ ರೀತಿ ಅಲ್ಲ. ಅವರು ಗಾಯಕಿಯಾಗಿ ಗುರುತಿಸಿಕೊಳ್ಳಲು ಬಯಸುತ್ತಿದ್ದಾರೆ. ಸುದೀಪ್ ನಟನೆಯ ‘ಮಾರ್ಕ್’ ಚಿತ್ರದ ‘ಮಸ್ತ್ ಮಲೈಕಾ’ ಹಾಡನ್ನು ಇವರು ಹಾಡಿದ್ದರು. ಈ ಹಾಡು ಸಾಕಷ್ಟು ಗಮನ ಸೆಳೆದಿತ್ತು. ಈಗ ‘ಅರಗಿಣಿಯೇ..’ ಹಾಡನ್ನು ಹಾಡಿದ್ದಾರೆ.

‘ಅರಗಿಣಿಯೇ..’ ಹಾಡು ಸಖತ್ ಮೆಲೋಡಿಯಾಗಿದೆ. ಈ ಹಾಡಿಗೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು ಕಿವಿಗೆ ಇಂಪು ನೀಡಿದೆ. ಈ ಹಾಡಿನಲ್ಲಿ ಸಾನ್ವಿ ಸುದೀಪ್ ಜೊತೆ ಕಪಿಲ್ ಕಪಿಲನ್ ಕೂಡ ಹಾಡಿದ್ದಾರೆ. ಧನಂಜಯ ರಂಜನ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಇದನ್ನೂ ಓದಿ: ಸುದೀಪ್ ಮಗಳು ಸಾನ್ವಿ ಬಗ್ಗೆ ಯಾಕಿಷ್ಟು ಟ್ರೋಲ್? ಅವರು ಮಾಡಿದ ತಪ್ಪೇನು?

ಮಗಳು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಅದಕ್ಕೆ ಬೆಂಬಲ ನೀಡೋದಾಗಿ ಸುದೀಪ್ ಹೇಳಿದ್ದರು. ಸಾನ್ವಿ ಸಂಗೀತ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಆಸಕ್ತಿ ತೋರಿಸಿದಂತೆ ಇದೆ. ಇದಕ್ಕೆ ಸುದೀಪ್ ಬೆಂಬಲವಾಗಿ ನಿಂತಿದ್ದಾರೆ. ‘ಮಸ್ತ್ ಮಲೈಕಾ’ ಹಾಡಿಗೆ ಸಾನ್ವಿ ಹೆಸರನ್ನು ಸುದೀಪ್ ಅವರೇ ಸೂಚಿಸಿದರೇ ಎಂಬ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಉತ್ತರಿಸಿದ್ದ ಸುದೀಪ್, ಈ ಅವಕಾಶ ಸಾನ್ವಿ ಟ್ಯಾಲೆಂಟ್​​ನಿಂದ ಬಂದಿದೆ ಎಂದಿದ್ದರು.

ಸಾನ್ವಿ ಧ್ವನಿ ಕೇಳಿದ್ದ ಅಜನೀಶ್ ಲೋಕನಾಥ್ ‘ಮಸ್ತ್ ಮಲೈಕಾ’ ಹಾಡಿಗೆ ಅವಕಾಶ ನೀಡಿದರಂತೆ. ಅವರ ಧ್ವನಿ ತುಂಬಾನೇ ಹೊಂದಿಕೆ ಆಗುತ್ತದೆ ಎಂಬ ಕಾರಣಕ್ಕೆ ಅವರನ್ನು ಹಾಗೆಯೇ ಉಳಿಸಿಕೊಳ್ಳಲಾಯಿತು. ಈ ಹಾಡು ಟ್ರೆಂಡ್​​ನಲ್ಲಿದೆ. ಈಗ ಅವರಿಗೆ ಮತ್ತೊಂದು ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಅವರ ಧ್ವನಿಯಿಂದ ಇನ್ನಷ್ಟು ಹಾಡು ಮೂಡಿ ಬರಲಿ ಎಂಬುದು ಫ್ಯಾನ್ಸ್ ಕೋರಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಕೇಂದ್ರ ಸಚಿವ ಮುರುಗನ್ ನಿವಾಸದಲ್ಲಿ ಪೊಂಗಲ್ ಆಚರಿಸಿದ ಪ್ರಧಾನಿ ಮೋದಿ – Kannada News | PM Modi Joins Pongal Celebrations at Minister L Murugan’s Delhi Home

ನವದೆಹಲಿ, ಜನವರಿ 14: ಪ್ರಧಾನಿ ನರೇಂದ್ರ ಮೋದಿ ಇಂದು ಕೇಂದ್ರ ಸಚಿವ ಎಲ್ ಮುರುಗನ್ ನಿವಾಸದಲ್ಲಿ ಪೊಂಗಲ್ ಹಬ್ಬವನ್ನು ಆಚರಿಸಿದ್ದಾರೆ. ಪ್ರಧಾನಿ ಸಾಂಪ್ರದಾಯಿಕ ಪೂಜೆ ಮತ್ತು ಆರತಿಯನ್ನು ನೆರವೇರಿಸಿದ್ದಾರೆ. ಅಷ್ಟೇ ಅಲ್ಲದೆ ಗೋಸೇವೆ ಕೂಡ ಮಾಡಿದ್ದಾರೆ.ಪ್ರಕೃತಿಯ ಬಗ್ಗೆ ಕೃತಜ್ಞತೆಯನ್ನು ಪದಗಳಿಗೆ ಸೀಮಿತಗೊಳಿಸಬಾರದು, ಅದನ್ನು ನಮ್ಮ ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಪೊಂಗಲ್ ಜನರಿಗೆ ಕಲಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಭೂಮಿಯು ನಮಗೆ ಇಷ್ಟೊಂದು ನೀಡಿದಾಗ, ಅದನ್ನು ಪಾಲಿಸುವುದು ನಮ್ಮ ಜವಾಬ್ದಾರಿಯಾಗಿದೆ. ಮಣ್ಣನ್ನು ಆರೋಗ್ಯಕರವಾಗಿಡುವುದು, ನೀರನ್ನು ಸಂರಕ್ಷಿಸುವುದು ಮತ್ತು ಸಂಪನ್ಮೂಲಗಳನ್ನು ವಿವೇಚನೆಯಿಂದ ಬಳಸುವುದು ಮುಂದಿನ ಪೀಳಿಗೆಗೆ ಅತ್ಯಂತ ಮುಖ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version