ಕಾನ್ ಸಿನಿಮೋತ್ಸವದಲ್ಲಿ ಮತ್ತೊಮ್ಮೆ ಮಿಂಚಿದ ನಟಿ ದಿಶಾ ಮದನ್

Source link

Gold Rate: ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಏರಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 18th May 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಮೇ 18: ಕಳೆದ ವಾರ ಸಾವಿರ ರೂಗಳಷ್ಟು ಇಳಿದಿದ್ದ ಚಿನ್ನದ ಬೆಲೆ (Gold Rate) ಇವತ್ತು ಅಲ್ಪ ಕುಸಿತ ಕಂಡಿದೆ. ಸೋಮವಾರ ಇದರ ಬೆಲೆ ಒಂದು ಗ್ರಾಮ್​ಗೆ 65 ರೂನಷ್ಟು ಕಡಿಮೆ ಆಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆ ಸ್ಥಿರವಾಗಿದೆ. ಕೆಲವೆಡೆ ಸ್ವಲ್ಪ ಕಡಿಮೆಗೊಂಡಿದೆ. ಇನ್ನೊಂದೆಡೆ ಬೆಳ್ಳಿ ಬೆಲೆಯಲ್ಲಿ (silver rate) ಇವತ್ತು 10 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,43,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,56,220 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 29,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,43,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 29,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 30,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 18ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,622 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,320 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,717 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 290 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,622 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,320 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 290 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,320 ರೂ
  • ಚೆನ್ನೈ: 14,750 ರೂ
  • ಮುಂಬೈ: 14,320 ರೂ
  • ದೆಹಲಿ: 14,335 ರೂ
  • ಕೋಲ್ಕತಾ: 14,320 ರೂ
  • ಕೇರಳ: 14,320 ರೂ
  • ಅಹ್ಮದಾಬಾದ್: 14,325 ರೂ
  • ಜೈಪುರ್: 14,335 ರೂ
  • ಲಕ್ನೋ: 14,335 ರೂ
  • ಭುವನೇಶ್ವರ್: 14,320 ರೂ

ಇದನ್ನೂ ಓದಿ: 18 ವರ್ಷದಿಂದ ಜಪಾನ್​ನಲ್ಲಿ ಬ್ಯುಸಿನೆಸ್ ಮಾಡ್ತಿದ್ದವನಿಗೆ ಅಂದ್ರು ‘ಗೋ ಬ್ಯಾಕ್ ಟು ಇಂಡಿಯಾ’

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 551 ರಿಂಗಿಟ್ (13,322 ರುಪಾಯಿ)
  • ದುಬೈ: 506.50 ಡಿರಾಮ್ (13,264 ರುಪಾಯಿ)
  • ಅಮೆರಿಕ: 142 ಡಾಲರ್ (13,656 ರುಪಾಯಿ)
  • ಸಿಂಗಾಪುರ: 180.90 ಸಿಂಗಾಪುರ್ ಡಾಲರ್ (13,573 ರುಪಾಯಿ)
  • ಕತಾರ್: 504 ಕತಾರಿ ರಿಯಾಲ್ (13,297 ರೂ)
  • ಸೌದಿ ಅರೇಬಿಯಾ: 515 ಸೌದಿ ರಿಯಾಲ್ (13,198 ರುಪಾಯಿ)
  • ಓಮನ್: 53.70 ಒಮಾನಿ ರಿಯಾಲ್ (13,413 ರುಪಾಯಿ)
  • ಕುವೇತ್: 41.71 ಕುವೇತಿ ದಿನಾರ್ (13,088 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 290 ರೂ
  • ಚೆನ್ನೈ: 300 ರೂ
  • ಮುಂಬೈ: 290 ರೂ
  • ದೆಹಲಿ: 290 ರೂ
  • ಕೋಲ್ಕತಾ: 290 ರೂ
  • ಕೇರಳ: 300 ರೂ
  • ಅಹ್ಮದಾಬಾದ್: 290 ರೂ
  • ಜೈಪುರ್: 290 ರೂ
  • ಲಕ್ನೋ: 290 ರೂ
  • ಭುವನೇಶ್ವರ್: 300 ರೂ
  • ಪುಣೆ: 290

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ದಳಪತಿ’ ರಾಜಕೀಯ ತಮಿಳುನಾಡಿಗೆ ಮಾತ್ರ ಸೀಮಿತವೇ? ಕೇರಳಂ ಸಿಎಂ ವಿಡಿ ಸತೀಶನ್ ಪದಗ್ರಹಣಕ್ಕೆ ವಿಜಯ್ ಗೈರು – Kannada News | Vijay Skips V. D. Satheesan’s Swearing In, Sparks Political Buzz Across South India

ತಿರುವನಂತಪುರಂ, ಮೇ 18: ಕೇರಳಂನಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ್ದು, ಹಿರಿಯ ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ಅವರು ಸೋಮವಾರ (ಮೇ 18) ಕೇರಳದ ನೂತನ ಮುಖ್ಯಮಂತ್ರಿಯಾಗಿ ಅದ್ಧೂರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೇಶದ ಪ್ರಮುಖ ರಾಜಕೀಯ ಗಣ್ಯರು ಭಾಗವಹಿಸಿದ್ದ ಈ ಸಮಾರಂಭದಲ್ಲಿ, ತಮಿಳುನಾಡಿನ ನೂತನ ಮುಖ್ಯಮಂತ್ರಿ, ನಟ ದಳಪತಿ ವಿಜಯ್(Thalapathy Vijay) ಅವರ ಗೈರುಹಾಜರಿ ಈಗ ದಕ್ಷಿಣ ಭಾರತದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕಾಂಗ್ರೆಸ್ ಕೈಹಿಡಿದಿದ್ದ ವಿಜಯ್, ಕೇರಳಕ್ಕೆ ಬರಲಿಲ್ಲ ಏಕೆ?
ಕಳೆದ ವಾರವಷ್ಟೇ ತಮಿಳುನಾಡಿನಲ್ಲಿ ಮ್ಯಾಜಿಕ್ ನಂಬರ್ ಕೊರತೆಯಿಂದ ಪರದಾಡುತ್ತಿದ್ದ ವಿಜಯ್ ಅವರ ‘ಟಿವಿಕೆ’ (TVK) ಪಕ್ಷಕ್ಕೆ ಕಾಂಗ್ರೆಸ್‌ನ 5 ಶಾಸಕರು ಬೆಂಬಲ ನೀಡಿದ್ದರು. ಈ ಮೈತ್ರಿಯ ಬಲದಿಂದಲೇ ವಿಜಯ್ ಮೇ 10 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ತಮಿಳುನಾಡಿನಲ್ಲಿ ವಿಜಯ್ ಗೆಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಅವರೊಂದಿಗೆ ಸೆಲ್ಫಿ ವಿಡಿಯೋ ತೆಗೆದುಕೊಂಡು ಸಂಭ್ರಮಿಸಿದ್ದ ವಿಜಯ್, ಕೇರಳ ಸಿಎಂ ಪದಗ್ರಹಣಕ್ಕೆ ಆಗಮಿಸಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು. ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ವಿಜಯ್ ಅವರಿಗೆ ಅಧಿಕೃತ ಆಮಂತ್ರಣವನ್ನೂ ಕಳುಹಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ವಿಜಯ್ ಸಮಾರಂಭದಿಂದ ದೂರ ಉಳಿದಿದ್ದಾರೆ.

ವೇದಿಕೆಯಲ್ಲಿದ್ದ ದಕ್ಷಿಣದ ದೈತ್ಯರು
ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಉಪಸ್ಥಿತರಿದ್ದರು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು ಸೇರಿದಂತೆ ನೆರೆರಾಜ್ಯಗಳ ಮುಖ್ಯಮಂತ್ರಿಗಳು ವೇದಿಕೆ ಹಂಚಿಕೊಂಡಿದ್ದರು. ಆದರೆ ವಿಜಯ್ ಅವರ ಅನುಪಸ್ಥಿತಿಯು ಎದ್ದು ಕಾಣುತ್ತಿತ್ತು.

ಮತ್ತಷ್ಟು ಓದಿ: ಮೊದಲ ಭಾಷಣದಲ್ಲೇ ಸಾಲದ ಬಗ್ಗೆ ಮಾತಾಡಿದ ತಮಿಳುನಾಡು ಸಿಎಂ ಜೋಸೆಫ್​​ ವಿಜಯ್​​

‘ತಮಿಳುನಾಡಿಗೆ ಮಾತ್ರ ಸೀಮಿತ’ ಎಂಬ ಚರ್ಚೆ ಶುರುವಾಗಿದ್ದು ಏಕೆ?
ವಿಜಯ್ ಅವರ ಈ ಗೈರುಹಾಜರಿಯನ್ನು ರಾಜಕೀಯ ತಜ್ಞರು ವಿಭಿನ್ನವಾಗಿ ವಿಶ್ಲೇಷಿಸುತ್ತಿದ್ದಾರೆ, ತಮಿಳುನಾಡಿನಲ್ಲಿ ಈಗಷ್ಟೇ ವಿಶ್ವಾಸಮತ ಗೆದ್ದಿರುವ ವಿಜಯ್, ತಮ್ಮದೇ ರಾಜ್ಯದ ಆಡಳಿತ ಮತ್ತು ಇತ್ತೀಚಿನ ರಾಜಕೀಯ ವಿವಾದಗಳ ಕಸರತ್ತಿನಲ್ಲಿ ಬ್ಯುಸಿಯಾಗಿದ್ದಾರೆ.

ವಿಜಯ್ ಅವರ ರಾಜಕೀಯದ ಮೂಲ ಸಿದ್ಧಾಂತವೇ ‘ತಮಿಳು ಅಸ್ಮಿತೆ’ಯಾಗಿದೆ. ತಮಿಳುನಾಡು ದಾಟಿ ಕೇರಳ ಅಥವಾ ಇತರ ರಾಜ್ಯಗಳ ರಾಜಕೀಯ ವೇದಿಕೆಗಳಲ್ಲಿ ಕಾಣಿಸಿಕೊಂಡರೆ ಪ್ರಾದೇಶಿಕ ನಾಯಕತ್ವದ ಮೇಲಿನ ಹಿಡಿತ ಸಡಿಲವಾಗಬಹುದು ಎಂಬ ಲೆಕ್ಕಾಚಾರವೂ ಇರಬಹುದು.ಕಾಂಗ್ರೆಸ್ ಬೆಂಬಲದೊಂದಿಗೆ ತಮಿಳುನಾಡಿನಲ್ಲಿ ಸರ್ಕಾರ ರಚಿಸಿದ್ದರೂ, ತಮ್ಮ ಪಕ್ಷವನ್ನು ಸಂಪೂರ್ಣವಾಗಿ ಕಾಂಗ್ರೆಸ್ ಮಯ ಎಂದು ಬಿಂಬಿಸಿಕೊಳ್ಳಲು ವಿಜಯ್ ಇಷ್ಟಪಡುತ್ತಿಲ್ಲ ಎನ್ನಲಾಗಿದೆ.

ಬೆಳ್ಳಿತೆರೆಯ ಮೇಲಿದ್ದಾಗ ಕೇರಳದಲ್ಲಿ ವಿಜಯ್ ಅವರಿಗೆ ತಮಿಳುನಾಡಿನಷ್ಟೇ ಭೀಕರ ಫ್ಯಾನ್ ಬೇಸ್ ಇತ್ತು. ಆದರೆ, ರಾಜಕೀಯಕ್ಕೆ ಬರುತ್ತಿದ್ದಂತೆ ವಿಜಯ್ ತಮ್ಮನ್ನು ಕೇವಲ ತಮಿಳುನಾಡಿನ ಗಡಿಯೊಳಗೆ ಸೀಮಿತಗೊಳಿಸಿಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆ ಕೇರಳದ ಅಭಿಮಾನಿಗಳಲ್ಲಿ ಮೂಡಿದೆ.

ಕೇರಳದಲ್ಲಿ ವಿ.ಡಿ. ಸತೀಶನ್ ನೇತೃತ್ವದ 20 ಸದಸ್ಯರ ನೂತನ ಸಂಪುಟ ಯಶಸ್ವಿಯಾಗಿ ಅಧಿಕಾರ ವಹಿಸಿಕೊಂಡಿದ್ದರೂ, ತಮಿಳುನಾಡು ಸಿಎಂ ವಿಜಯ್ ಅವರ ‘ಮಿಸ್ಸಿಂಗ್’ ಮಾತ್ರ ಇಂದಿನ ಕಾರ್ಯಕ್ರಮದ ಹಾಟ್ ಟಾಪಿಕ್ ಆಗಿ ಉಳಿದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವೇದಿಕೆ ಮೇಲೆ F ಪದ ಬಳಕೆ ಮಾಡಿದ ರಶ್ಮಿಕಾ ಮಂದಣ್ಣ; ವೇದಿಕೆಯಲ್ಲೇ ಕ್ಷಮೆ ಕೇಳಿದ ನ್ಯಾಷನಲ್ ಕ್ರಶ್ – Kannada News | Rashmika Mandanna’s F Word Viral Moment at Cocktail 2 Song Launch After Marriage

ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗಷ್ಟೇ ಮದುವೆಯಾಗಿದ್ದಾರೆ. ವಿಜಯ್ ದೇವರಕೊಂಡ ಅವರನ್ನು ಮದುವೆ ಆದ ಬಳಿಕ ಅವರ ನಟನೆಯ ಮೊದಲ ಸಿನಿಮಾ ತೆರೆಗೆ ಬರುತ್ತಿದೆ. ಅದುವೇ ‘ಕಾಕ್‌ಟೇಲ್ 2’. ಹಿಂದಿಯ ಈ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ಜೂನ್ 19ರಂದು ರಿಲೀಸ್ ಆಗಲಿರುವ ಈ ಚಿತ್ರದ ಹಾಡಿನ ಬಿಡುಗಡೆ ಸಮಾರಂಭ ಭಾನುವಾರ (ಮೇ 17) ರಾತ್ರಿ ಅದ್ಧೂರಿಯಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಸಹನಟಿ ಕೃತಿ ಸನೂನ್ ಅವರ ಸೌಂದರ್ಯವನ್ನು ಹೊಗಳುವ ಬರದಲ್ಲಿ ರಶ್ಮಿಕಾ ವೇದಿಕೆಯಲ್ಲೇ ಬಾಯಿ ತಪ್ಪಿ ಇಂಗ್ಲಿಷ್‌ನ ‘F’ ಪದ ಬಳಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವೇದಿಕೆಯಲ್ಲಿ ರಶ್ಮಿಕಾ ಮಂದಣ್ಣ, ಶಾಹಿದ್ ಕಪೂರ್, ಕೃತಿ ಸನೂನ್ ಇದ್ದರು. ಕೃತಿ ಅವರನ್ನು ನೋಡಿ ಅತಿಯಾದ ಉತ್ಸಾಹದಲ್ಲಿದ್ದ ರಶ್ಮಿಕಾ ಮಾತನಾಡಿದರು. ‘ಕಾಕ್‌ಟೇಲ್ 2 ಚಿತ್ರದಲ್ಲಿ ಏನೋ ಒಂದು ವಿಶೇಷತೆ ಇದೆ. ಕೃತಿ ನೀವು ತುಂಬಾ ಹಾಟ್ ಆಗಿ ಕಾಣಿಸುತ್ತಿದ್ದೀರಾ ಎಂಬುದು ಇಡೀ ಜಗತ್ತಿಗೇ ಗೊತ್ತು. ನೀವು ನಿಜಕ್ಕೂ F****** ಹಾಟ್’ ಎಂದುಬಿಟ್ಟರು. ತಾವು ಆಡಿದ ಮಾತು ಅರಿವಿಗೆ ಬರುತ್ತಿದ್ದಂತೆ ಕೈಯಿಂದ ಬಾಯಿ ಮುಚ್ಚಿಕೊಂಡ ರಶ್ಮಿಕಾ, ‘ನನ್ನನ್ನು ಕ್ಷಮಿಸಿ! ಆ ಪದವನ್ನು ಸೈಲೆನ್ಸ್ ಮಾಡಿಬಿಡಿ’ ಎಂದು ವಿನಂತಿಸಿಕೊಂಡರು.

ರಶ್ಮಿಕಾ ಅವರು ತಾವು ಆಡಿದ ಮಾತಿನಿಂದ ಸ್ವಲ್ಪ ಮುಜುಗರವನ್ನು ಎದುರಿಸಿದರು. ಇದನ್ನು ಕಂಡು ಅಲ್ಲಿದ್ದ ಪ್ರೇಕ್ಷಕರು ಮತ್ತು ಮಾಧ್ಯಮದವರು ಜೋರಾಗಿ ನಕ್ಕು, ಚಪ್ಪಾಳೆ ತಟ್ಟಿದರು. ನಂತರ ಸಿನಿಮಾ ಬಗ್ಗೆ ರಶ್ಮಿಕಾ ಮಾತನಾಡಿದರು. ‘ನಾವೆಲ್ಲರೂ ಈ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದೇವೆ. ಇಡೀ ಸಿನಿಮಾದಲ್ಲಿ ಪ್ರತಿಯೊಂದು ದೃಶ್ಯವೂ ಮ್ಯಾಜಿಕಲ್ ಆಗಿ ಮೂಡಿಬಂದಿದೆ. ಈಗ ರಿಲೀಸ್ ಆಗಿರುವುದು ಕೇವಲ ಟ್ರೈಲರ್‌ನಂತಹ ತುಣುಕು ಅಷ್ಟೇ. ಮುಂದೆ ಚಿತ್ರದಲ್ಲಿ ನೋಡಲು ತುಂಬಾ ವಿಷಯಗಳಿವೆ’ ಎಂದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದರು.

ಇದನ್ನೂ ಓದಿ: ‘ಮಾನಸಿಕ ನೆಮ್ಮದಿ ನೀಡಿದ್ದು ವಿಜಯ್’; ರಶ್ಮಿಕಾ ಮಂದಣ್ಣ ಮನದಾಳದ ಮಾತು

ಹೋಮಿ ಅದಾಜಾನಿಯಾ ‘ಕಾಕ್​​ಟೇಲ್ 2’ ಚಿತ್ರ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ದಿನೇಶ್ ವಿಜನ್ ಅವರು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. 2012ರಲ್ಲಿ ಬಂದ ಸೂಪರ್ ಹಿಟ್ ‘ಕಾಕ್‌ಟೇಲ್’ ಚಿತ್ರದ ಮುಂದುವರಿದ ಭಾಗ ಇದಾಗಿದೆ. ಮದುವೆಯ ನಂತರ ಮೊದಲ ಬಾರಿಗೆ ದೊಡ್ಡ ಪರದೆಯ ಮೇಲೆ ಬರಲಿರುವ ರಶ್ಮಿಕಾ ಮಂದಣ್ಣ ಅವರ ಈ ಹೊಸ ಅವತಾರವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

VD Satheesan Oath Taking: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸತೀಶನ್ – Kannada News | Kerala swearing in ceremony, VD Satheesan Takes Oath As new chief minister Of Kerala

ತಿರುವನಂತಪುರಂ, ಮೇ 18: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜೊತೆಗೆ 20 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಪ್ರಮಾಣ ವಚನ ಬೋಧಿಸಿದ್ದಾರೆ. ಇತ್ತೀಚೆಗೆ ನಡೆದ ಕೇರಳಂ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೇರಿರುವ ಕಾಂಗ್ರೆಸ್​​ ನೇತೃತ್ವದ ಯುಡಿಎಫ್, ನೂತನ ಸಿಎಂ ಆಗಿ ವಿಡಿ ಸತೀಶನ್ ಅವರನ್ನು ಆಯ್ಕೆ ಮಾಡಿದೆ.

ಕಾಂಗ್ರೆಸ್​ನಿಂದ 11 ಮಂದಿ, ಮುಸ್ಲಿಂ ಲೀಗ್​ನ ಐವರು ಹಾಗೂ ಮಾನ್ಸ್ ಜೋಸೆಫ್ (ಕೇರಳ ಕಾಂಗ್ರೆಸ್-ಜೋಸೆಫ್), ಶಿಬು ಬೇಬಿ ಜಾನ್ (ಕ್ರಾಂತಿಕಾರಿ ಸಮಾಜವಾದಿ ಪಕ್ಷ), ಅನೂಪ್ ಜಾಕೋಬ್ (ಕೇರಳ ಕಾಂಗ್ರೆಸ್-ಜಾಕೋಬ್), ಮತ್ತು ಸಿಪಿ ಜಾನ್ (ಕಮ್ಯುನಿಸ್ಟ್ ಮಾರ್ಕ್ಸ್ವಾದಿ ಪಕ್ಷ) ಅವರಿಗೂ ಅವಕಾಶ ಮಾಡಿಕೊಡಲಾಗಿದೆ. ಕಾಂಗ್ರೆಸ್​ನಿಂದ ಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದ ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್, ಕೆ ಮುರಳೀಧರನ್, ಎ ಪಿ ಅನಿಲ್ ಕುಮಾರ್, ಪಿ ಸಿ ವಿಷ್ಣುನಾಥ್, ರೋಜಿ ಎಂ ಜಾನ್, ಬಿಂದು ಕೃಷ್ಣ, ಎಂ ಲಿಜು, ಟಿ ಸಿದ್ದಿಕ್, ಕೆ ಎ ತುಳಸಿ ಮತ್ತು ಒ ಜೆ ಜನೀಶ್ ಸಚಿವರಾಗಲಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಲೀಸ್ ಮನೆ ಕೊಡಿಸುವುದಾಗಿ ನಂಬಿಸಿ 200 ಕೋಟಿ ರೂ. ವಂಚನೆ: ಜಾನ್ಸ್ ಅಸೆಟ್ ಕಂಪನಿ ಮಾಲೀಕ ಎಸ್ಕೇಪ್! – Kannada News | Bengaluru Lease Fraud: Johns Asset Company Dupes 300 People of Rs 200 Crore, Owner Absconding

ಲೀಸ್ ಮನೆ ಕೊಡಿಸುವುದಾಗಿ ನಂಬಿಸಿ 200 ಕೋಟಿ ರೂ. ವಂಚನೆ

ಬೆಂಗಳೂರು, ಮೇ 18: ನಗರದಲ್ಲಿ ಮನೆಗಳನ್ನು ಲೀಸ್​ಗೆ (Lease) ಪಡೆಯಲು ಬಯಸುವವರನ್ನೇ ಟಾರ್ಗೆಟ್ ಮಾಡಿ ಬರೋಬ್ಬರಿ 200 ಕೋಟಿ ರೂ.ಗೂ ಅಧಿಕ ಹಣ ವಂಚಿಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಜಾನ್ಸ್ ಅಸೆಟ್ (Johns Asset) ಎಂಬ ಮಿಡಿಯೇಟರ್ ಕಂಪನಿಯು ಸುಮಾರು 300ಕ್ಕೂ ಹೆಚ್ಚು ಜನರಿಗೆ ಮಕ್ಮಲ್ ಟೋಪಿ ಹಾಕಿದ್ದು, ಕಂಪನಿ ಮಾಲೀಕ ಪರಾರಿಯಾಗಿದ್ದಾನೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಮನೆ ಲೀಸ್​ಗೆ ಪಡೆಯುವವರನ್ನು ಟಾರ್ಗೆಟ್ ಮಾಡಿ ಭಾರಿ ವಂಚನೆ ನೆಡೆದಿದೆ.
  • ಜಾನ್ಸ್ ಅಸೆಟ್ ಕಂಪನಿಯು 300 ಜನರಿಗೆ 200 ಕೋಟಿಗೂ ಅಧಿಕ ವಂಚಿಸಿದೆ.
  • ಇಂದಿರಾನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಾಲೀಕ ಸ್ಟೀಫನ್ ಅರ್ಥರ್ ಸದ್ಯ ಎಸ್ಕೇಪ್.

ವಂಚನೆ ನೆಟ್‌ವರ್ಕ್ ಹೇಗೆ ಕೆಲಸ ಮಾಡ್ತಿತ್ತು?

ನಗರದಲ್ಲಿ ಇತ್ತೀಚೆಗೆ ಲೀಸ್ ಮನೆಗಳ ಕೊರತೆ ಇರುವುದನ್ನು ಬಂಡವಾಳ ಮಾಡಿಕೊಂಡ ಈ ಕಂಪನಿ, ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿತ್ತು. ನಿಮ್ಮ ಲೀಸ್ ಹಣವನ್ನು ನಮಗೆ ಕೊಡಿ, ನಾವು ನಿಮಗಾಗಿ ಮನೆ ಹುಡುಕಿ ಅದರ ಮಾಸಿಕ ಬಾಡಿಗೆಯನ್ನು ನಾವೇ ಪಾವತಿಸುತ್ತೇವೆ ಎಂದು ನಂಬಿಸುತ್ತಿತ್ತು. ಹಣವೂ ಉಳಿಯುತ್ತದೆ, ಬಾಡಿಗೆ ಕೊಡುವುದೂ ತಪ್ಪುತ್ತದೆ ಎಂದು ನಂಬಿದ ಸಾರ್ವಜನಿಕರಿಂದ ತಲಾ 10ರಿಂದ 75 ಲಕ್ಷ ರೂಪಾಯಿವರೆಗೆ ಹಣ ವಸೂಲಿ ಮಾಡಲಾಗಿತ್ತು. ಆರಂಭದ ಕೆಲವು ತಿಂಗಳು ಬಾಡಿಗೆ ಪಾವತಿಸಿ, ನಂತರ ಕಂಪನಿ ಕಳ್ಳಾಟ ಶುರು ಮಾಡಿದೆ.

ಲೀಸ್ ಹಣವನ್ನೇ ಇನ್ವೆಸ್ಟ್‌ಮೆಂಟ್ ಮಾಡಿಸಿ ವಂಚನೆ!

ಗಾಯಿತ್ರಿ ಎಂಬ ಸಂತ್ರಸ್ತೆ ತಮಗೆ ಆದ ವಂಚನೆ ಬಗ್ಗೆ ಮಾಹಿತಿ ನೀಡಿದ್ದು, ಅವರಿಂದಲೇ 37 ಲಕ್ಷ ರೂಪಾಯಿ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಮನೆ ಮಾಲೀಕರು ಮನೆ ಖಾಲಿ ಮಾಡಲು ಹೇಳಿದಾಗ ಗಾಯಿತ್ರಿ ಅವರು ಕಂಪನಿಯ ಬಳಿ ಹಣ ವಾಪಸ್ ಕೇಳಲು ಹೋಗಿದ್ದರು. ಈ ವೇಳೆ ಕಂಪನಿಯು ಹಣ ನೀಡದೆ, ಆ ಮೊತ್ತವನ್ನು ತಮ್ಮಲ್ಲೇ ಇನ್ವೆಸ್ಟ್ ಮಾಡಿದರೆ ತಿಂಗಳಿಗೆ ಶೇ4ರಷ್ಟು ಬಡ್ಡಿ ನೀಡುವುದಾಗಿ ಆಸೆ ತೋರಿಸಿತ್ತು. ಇದನ್ನು ನಂಬಿ ಇನ್ವೆಸ್ಟ್‌ಮೆಂಟ್ ಆಗಿ ಬದಲಾಯಿಸಿಕೊಂಡ ಗಾಯಿತ್ರಿಗೆ ಕೇವಲ ಎರಡು ತಿಂಗಳು ಹಣ ನೀಡಿ ಆಮೇಲೆ ಕಂಪನಿ ಕೈಕೊಟ್ಟಿದೆ.

ಇದನ್ನೂ ಓದಿ ಕಿಟಕಿ ಸರಳು ಮುರಿದು ಉಗಾಂಡದ ನಾಲ್ವರು ಮಹಿಳೆಯರು ಎಸ್ಕೇಪ್; ಮತ್ತೆ ಡ್ರಗ್ಸ್ ದಂಧೆಗೆ ಇಳಿಯುವ ಆತಂಕ!

ಮಾಲೀಕ ಎಸ್ಕೇಪ್

ಸದ್ಯ ಕಂಪನಿಯನ್ನು ಕ್ಲೋಸ್ ಮಾಡಿ ಅದರ ಮಾಲೀಕ ಸ್ಟೀಫನ್ ಅರ್ಥರ್ ಎಂಬಾತ ಕೋಟ್ಯಂತರ ರೂಪಾಯಿ ಹಣದೊಂದಿಗೆ ಎಸ್ಕೇಪ್ ಆಗಿದ್ದಾನೆ. ಸಂತ್ರಸ್ತರು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಣ ಕಳೆದುಕೊಂಡು ಕಂಗಾಲಾಗಿ ಠಾಣೆಯ ಅಲೆಯುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಾಕಪ್ ಡೆತ್, ಪೊಲೀಸ್ ದೌರ್ಜನ್ಯಕ್ಕೆ ಬ್ರೇಕ್: ಐತಿಹಾಸಿಕ ‘ಸ್ಟ್ಯಾಂಡಿಂಗ್ ಆರ್ಡರ್-1060’ ಜಾರಿಗೊಳಿಸಿದ ಡಿಜಿಪಿ ಡಾ ಎಂಎ ಸಲೀಂ – Kannada News | Curbing Custodial Deaths: Karnataka DG&IGP Dr MA Saleem Issues Strict ‘Standing Order 1060’ Under BNSS

ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂImage Credit source: tv9

ಬೆಂಗಳೂರು, ಮೇ 18: ಪೊಲೀಸ್ ಕಸ್ಟಡಿಯಲ್ಲಿ ನಡೆಯುವ ದೌರ್ಜನ್ಯಗಳು ಹಾಗೂ ಕಸ್ಟೋಡಿಯಲ್ ಡೆತ್ (Lockup Death) ಪ್ರಕರಣಗಳಿಗೆ ಶಾಶ್ವತ ಬ್ರೇಕ್ ಹಾಕಲು ಕರ್ನಾಟಕ ಪೊಲೀಸ್ (Karnataka Police) ಇಲಾಖೆ ಅತ್ಯಂತ ಕಠಿಣ ಹೆಜ್ಜೆ ಇಟ್ಟಿದೆ. ಸ್ಥಳೀಯ ಪೊಲೀಸರಿಂದ ನಡೆಯಬಹುದಾದ ತನಿಖಾ ವೈಫಲ್ಯ ಹಾಗೂ ಸಾಕ್ಷ್ಯನಾಶದ ಯತ್ನಗಳನ್ನು ತಡೆಯುವ ಸಲುವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ (DG&IGP) ಡಾ. ಎಂ.ಎ. ಸಲೀಂ ಅವರು ‘ಸ್ಟ್ಯಾಂಡಿಂಗ್ ಆರ್ಡರ್ – 1060’ ಜಾರಿಗೆ ತಂದಿದ್ದಾರೆ. ಹೊಸ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)’ ಅಡಿಯಲ್ಲಿ ಕಟ್ಟುನಿಟ್ಟಾದ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

ಮುಖ್ಯಾಂಶಗಳು

  • ಪೊಲೀಸ್ ಕಸ್ಟಡಿಯಲ್ಲಿ ದೌರ್ಜನ್ಯ ನಡೆದ ತಕ್ಷಣವೇ ಸ್ಥಳೀಯ ಠಾಣಾಧಿಕಾರಿ ಯಾವುದೇ ವಿಳಂಬವಿಲ್ಲದೆ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಬೇಕು.
  • ಘಟನೆ ನಡೆದ ತಕ್ಷಣವೇ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಬೇಕು.
  • ಸಂತ್ರಸ್ತರ ಹೇಳಿಕೆಗಳು ಮತ್ತು ಶವಪರೀಕ್ಷೆಯ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಆಡಿಯೋ-ವಿಡಿಯೋ ಮೂಲಕ ರೆಕಾರ್ಡ್ ಮಾಡಬೇಕು.

ಖಡಕ್ ನಿಯಮಗಳು ಮತ್ತು ಕಟ್ಟುನಿಟ್ಟಿನ ಕ್ರಮ

ಹೊಸ ಸ್ಟ್ಯಾಂಡಿಂಗ್ ಆರ್ಡರ್ ಪ್ರಕಾರ, ಕಸ್ಟಡಿಯಲ್ಲಿ ದೌರ್ಜನ್ಯ ನಡೆದ ತಕ್ಷಣವೇ ಸ್ಥಳೀಯ ಪೊಲೀಸರು ಬಿಎನ್‌ಎಸ್ಎಸ್ (BNSS) ಸೆಕ್ಷನ್ 103 ಮತ್ತು 185ರ ಅಡಿಯಲ್ಲಿ ಕಡ್ಡಾಯವಾಗಿ ಸ್ಪಾಟ್ ಮಹಜರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ತನಿಖೆಯ ವೇಳೆ ಸ್ಥಳೀಯ ಪೊಲೀಸರು ಯಾವುದೇ ರೀತಿಯ ಪ್ರಭಾವ ಬೀರದಂತೆ ಮತ್ತು ಸಾಕ್ಷ್ಯಗಳನ್ನು ನಾಶಪಡಿಸದಂತೆ ತಡೆಯಲು ಇಡೀ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ಆದೇಶಿಸಲಾಗಿದೆ.

ಒಂದು ವೇಳೆ ಪೊಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಮೃತಪಟ್ಟರೆ (ಲಾಕಪ್ ಡೆತ್), ತಕ್ಷಣವೇ ಸಂಬಂಧಪಟ್ಟ ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ಗೆ ಅಧಿಕೃತ ಮಾಹಿತಿ ನೀಡಿ ಇನ್‌ಕ್ವೆಸ್ಟ್ ಹಾಗೂ ನ್ಯಾಯಾಂಗ ತನಿಖೆಗೆ ಕೋರಬೇಕು. ಶವಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋಗ್ರಫಿ ಮಾಡಿಸುವುದು ಕಡ್ಡಾಯವಾಗಿದೆ. ಪ್ರಕರಣದ ತನಿಖೆಯನ್ನು ಸಿಐಡಿ (CID) ಗೆ ವಹಿಸಿದ ಬಳಿಕ, ಸಿಐಡಿ ಅಧಿಕಾರಿಗಳು ಖುದ್ದಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರ್ ಅನ್ನು ಕೂಲಂಕಷವಾಗಿ ಮರುಪರಿಶೀಲನೆ ನಡೆಸಲಿದ್ದಾರೆ.

ಇದನ್ನೂ ಓದಿ: ಕಿಟಕಿ ಸರಳು ಮುರಿದು ಉಗಾಂಡದ ನಾಲ್ವರು ಮಹಿಳೆಯರು ಎಸ್ಕೇಪ್; ಮತ್ತೆ ಡ್ರಗ್ಸ್ ದಂಧೆಗೆ ಇಳಿಯುವ ಆತಂಕ!

ಇಲಾಖೆಯ ಘನತೆಗೆ ಕುಂದು ತರುವ ಇಂತಹ ಪ್ರಕರಣಗಳಲ್ಲಿ ಯಾವುದೇ ಹಂತದಲ್ಲೂ ನಿಯಮ ಉಲ್ಲಂಘನೆಯಾದರೆ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಜಿಪಿ ಡಾ. ಎಂ.ಎ. ಸಲೀಂ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಳೆಯ ದಾಖಲೆ ಧೂಳೀಪಟ… ವೈಭವ್ ಈಗ ‘ಸಿಕ್ಸರ್ ಸುಲ್ತಾನ್’

Source link

ರಜತ್ ಪಾಟಿದಾರ್ ಹೊರಗುಳಿಯಲು ‘ಐಸಿಸಿ ಹೊಸ ನಿಯಮ’ ಕಾರಣ!

Source link

ಗದಗ ಜಿಲ್ಲೆಯಲ್ಲಿ ಮಳೆ ಆರ್ಭಟ: ಲಕ್ಷ್ಮೇಶ್ವರ ಪಟ್ಟಣದ ರಸ್ತೆಗಳು ಜಲಾವೃತ – Kannada News | Heavy Rains Lash Lakshmeshwara: Gadag District Roads Waterlogged Summer Storm Havoc: Roads Submerged, Trees Fall

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ…

Read More

Source link

Exit mobile version