ಗದಗ ಜಿಲ್ಲೆಯಲ್ಲಿ ಮಳೆ ಆರ್ಭಟ: ಲಕ್ಷ್ಮೇಶ್ವರ ಪಟ್ಟಣದ ರಸ್ತೆಗಳು ಜಲಾವೃತ – Kannada News | Heavy Rains Lash Lakshmeshwara: Gadag District Roads Waterlogged Summer Storm Havoc: Roads Submerged, Trees Fall

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ…

Read More

Source link

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕುರ್ಚಿಗೆ ಕುತ್ತು ತಂದಿದ್ದ ಅಸಲಿ ರಹಸ್ಯ ದಾಖಲೆ ಬಯಲು – Kannada News | Leaked Cable Renews Debate Over Imran Khan’s Exit From Power

ಇಸ್ಲಾಮಾಬಾದ್, ಮೇ 18: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಸರ್ಕಾರದ ಪತನಕ್ಕೆ ಮುನ್ನುಡಿ ಬರೆದಿದ್ದ ಅತ್ಯಂತ ವಿವಾದಾತ್ಮಕ ಹಾಗೂ ರಹಸ್ಯ ರಾಜತಾಂತ್ರಿಕ ದಾಖಲೆ ‘ಸೈಫರ್’ ಅನ್ನು ಅಂತಾರಾಷ್ಟ್ರೀಯ ತನಿಖಾ ಮಾಧ್ಯಮ ಸಂಸ್ಥೆ ಡ್ರಾಪ್ ಸೈಟ್ ಬಿಡುಗಡೆ ಮಾಡಿದೆ. ಪಾಕಿಸ್ತಾನದ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದ್ದ ಈ ರಹಸ್ಯ ಕೇಬಲ್​ನ ಅಸಲಿ ಪ್ರತಿ ಜಗತ್ತಿನ ಮುಂದೆ ಬಹಿರಂಗವಾಗಿರುವುದು ಇದೇ ಮೊದಲು.

ಏನಿದು ಸೈಫರ್ ವಿವಾದ?
2022ರಲ್ಲಿ ಇಮ್ರಾನ್ ಖಾನ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ಮುನ್ನ, ಅಮೆರಿಕದಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯು ಇಸ್ಲಾಮಾಬಾದ್​​ಗೆ ಒಂದು ರಹಸ್ಯ ಸಂದೇಶವನ್ನು(ಕೇಬಲ್ I-0678)ಕಳುಹಿಸಿತ್ತು. ವಾಷಿಂಗ್ಟನ್​​ನಲ್ಲಿ ಅಮೆರಿಕ ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಪಾಕಿಸ್ತಾನಿ ರಾಯಭಾರಿ ನಡವೆ ನಡೆದ ಅಧಿಕೃತ ಸಭೆಯ ಸಂಭಾಷಣೆಯ ವಿವರಗಳು ಇರದಲ್ಲಿದೆ.

ಇಮ್ರಾನ್ ಖಾನ್ ರಷ್ಯಾ ಹಾಗೂ ಉಕ್ರೇನ್ ಯುದ್ಧದ ಸಮಯದಲ್ಲಿ ಮಾಸ್ಕೋಗೆ ಭೇಟಿ ನೀಡಿದ್ದರಿಂದ ಅಮೆರಿಕ ತೀವ್ರ ಅಸಮಾಧಾನಗೊಂಡಿತ್ತು. ಈ ರಹಸ್ಯ ದಾಖಲೆಯನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರದರ್ಶಿಸಿದ್ದ ಇಮ್ರಾನ್ ಖಾನ್, ನನ್ನ ಸರ್ಕಾರವನ್ನು ಉರುಳಿಸಲು ಅಮೆರಿಕ ಸಂಚು ರೂಪಿಸಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಮತ್ತಷ್ಟು ಓದಿ: ಶೇ.85ರಷ್ಟು ದೃಷ್ಟಿ ಕಳೆದುಕೊಂಡಿದ್ದಾರಂತೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್​ ಖಾನ್, ಸುಪ್ರೀಂಕೋರ್ಟ್​​ನಲ್ಲಿ ಕಣ್ಣೀರಿಟ್ಟ ಸಹೋದರಿ

ದಾಖಲೆಯಲ್ಲಿ ಏನಿದೆ?
ಈಗ ಬಿಡುಗಡೆಯಾಗಿರುವ ಪೂರ್ಣ ಮಾಹಿತಿ ಪ್ರಕಾರ, ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಪಾಕಿಸ್ತಾನಿ ರಾಯಭಾರಿಗೆ ಕಠಿಣ ಸಂದೇಶ ರವಾನಿಸಿದ್ದರು. ಇಮ್ರಾನ್ ಖಾನ್ ಅವರು ಪ್ರಧಾನಿ ಸ್ಥಾನದಲ್ಲಿ ಮುಂದುವರೆದರೆ ಪಾಕಿಸ್ತಾನವು ಜಾಗತಿಕವಾಗಿ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಮತ್ತು ಒಂದು ವೇಳೆ ಅವಿಶ್ವಾಸ ನಿರ್ಣಯ ಯಶಸ್ವಿಯಾಗಿ ಅವರು ಅಧಿಕಾರದಿಂದ ಹೊರಹೋದರೆ ಎಲ್ಲವನ್ನೂ ಕ್ಷಮಿಸಲಾಗುವುದು ಎಂಬ ಮಾತುಗಳು ದಾಖಲಾಗಿವೆ.

ಇಮ್ರಾನ್ ಜೈಲು ಪಾಲಾಗಲು ಇದೇ ಕಾರಣ
ಈ ರಹಸ್ಯ ಸಾಕ್ಷ್ಯವನ್ನು ಬಹಿರಂಗಪಡಿಸಿದ್ದಕ್ಕಾಗಿ ಮತ್ತು ದೇಶದ ಭದ್ರತೆಗೆ ಸಂಬಂಧಿಸಿದ ರಹಸ್ಯ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಇಮ್ರಾನ್ ಖಾನ್ ಅವರ ವಿರುದ್ಧ ಸೈಫರ್ ಪ್ರಕರಣ ದಾಖಲಿಸಲಾಯಿತು. ಇದೇ ಪ್ರಕರದಲ್ಲಿ ಅವರಿಗೆ ನ್ಯಾಯಾಲಯವು ಜೈಲು ಶಿಕ್ಷೆಯನ್ನೂ ವಿಧಿಸಿತ್ತು.

ಅಮೆರಿಕವು ಮುಂದುವರೆದ ಪ್ರಜಾಪ್ರಭುತ್ವ ರಾಷ್ಟ್ರಗಳ ಆಂತರಿಕ ರಾಜಕಾರಣದಲ್ಲಿ ಮತ್ತು ಸರ್ಕಾರಗಳನ್ನು ಬದಲಿಸುವಲ್ಲಿ ಹೇಗೆ ಹಸ್ತಕ್ಷೇಪ ಮಾಡುತ್ತದೆ ಎಂಬುದಕ್ಕೆ ಈ ಸೈಫರ್ ಪ್ರತಿಯೇ ಸಾಕ್ಷಿ ಎಂದು ಇಮ್ರಾನ್ ಖಾನ್ ಬೆಂಬಲಿಗರು ವಾದಿಸಿದ್ದಾರೆ. ಪಾಕಿಸ್ತಾನದ ಸೇನೆ ಮತ್ತು ಈಗಿರುವ ಸರ್ಕಾರದ ನಡುವಿನ ಸಂಬಂಧಗಳು ಹಳಸಿರುವ ಈ ಸಂದರ್ಭದಲ್ಲಿ ಈ ಅಸಲಿ ದಾಖಲೆ ಬಹಿರಂಗಗೊಂಡಿರುವುದು ಪಾಕಿಸ್ತಾನದ ರಾಜಕೀಯದಲ್ಲಿ ಮತ್ತೊಂದು ಭಾರಿ ಬಿರುಗಾಳಿಗೆ ಕಾರಣವಾಗುವುದು ನಿಶ್ಚಿತವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೋಲಾರದಲ್ಲಿ ಮೃತ್ಯುಕೂಪವಾದ ಕೃಷಿ ಹೊಂಡಗಳು: 15 ದಿನದಲ್ಲಿ 7 ಮಂದಿ ಸಾವು – Kannada News | Kolar Farm Ponds Turn Deadly: 7 Deaths in 15 Days Forces DC Dr MR Ravi to Order Fencing in 7 Days or Close Ponds

ಮಾಲೂರು ತಾಲೂಕಿನ ನಕ್ಕನಹಳ್ಳಿ ಗ್ರಾಮದ ಕೃಷಿ ಹೊಂಡ (ಸಾಂದರ್ಭಿಕ ಚಿತ್ರ)Image Credit source: tv9

ಕೋಲಾರ, ಮೇ 18: ಕೋಲಾರ (Kolar) ಜಿಲ್ಲೆಯಲ್ಲಿ ಕೃಷಿ ಹೊಂಡಗಳು ಸರಣಿ ಸಾವಿನ ಮೃತ್ಯುಕೂಪಗಳಾಗಿ ಪರಿಣಮಿಸಿದ್ದು, ಕಳೆದ ಕೇವಲ ಹದಿನೈದು ದಿನಗಳ ಅವಧಿಯಲ್ಲಿ ಏಳು ಜನ ಈ ಹೊಂಡಗಳಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಆಘಾತಕಾರಿ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೋಲಾರ ಜಿಲ್ಲಾಧಿಕಾರಿ (DC) ಎಂ.ಆರ್. ರವಿ ಅವರು ತಕ್ಷಣವೇ ವಿಶೇಷ ಸಭೆ ಕರೆದು ಮಹತ್ವದ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಎಲ್ಲಾ ಕೃಷಿ ಹೊಂಡಗಳಿಗೆ ಏಳು ದಿನಗಳ ಒಳಗಾಗಿ ಕಡ್ಡಾಯವಾಗಿ ತಂತಿ ಬೇಲಿ ಅಳವಡಿಸಿ ಸುರಕ್ಷತೆ ಕಾಯ್ದುಕೊಳ್ಳಬೇಕು, ಇಲ್ಲದಿದ್ದರೆ ಅಂತಹ ಕೃಷಿ ಹೊಂಡಗಳನ್ನು ಮುಚ್ಚಲಾಗುವುದು ಎಂದು ಅಧಿಕಾರಿಗಳಿಗೆ ಮತ್ತು ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಾಂಶಗಳು

  • ಕೋಲಾರ ಜಿಲ್ಲೆಯ ವಿವಿಧೆಡೆಗಳಲ್ಲಿ 15 ದಿನದಲ್ಲಿ 7 ಜನ ಸಾವು.
  • ಸುರಕ್ಷತಾ ಕ್ರಮಗಳಿಲ್ಲದ ಕೃಷಿ ಹೊಂಡಗಳಿಂದ ದುರಂತ.
  • ಮಾಲೂರಿನಲ್ಲಿ ತಂದೆ, ಇಬ್ಬರು ಮಕ್ಕಳ ಜಲಸಮಾಧಿ.

ಮಾಲೂರು ತಾಲೂಕಿನ ನಕ್ಕನಹಳ್ಳಿಯಲ್ಲಿ ಭಾನುವಾರ ಶ್ರೀನಿವಾಸ್ (40) ಹಾಗೂ ಅವರ ಮಕ್ಕಳಾದ ಚೇತನ್ (13), ರಾಜೇಶ್ (8) ಕೃಷಿ ಹೊಂಡಕ್ಕೆ ಬಿದ್ದು ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.

ಸರಣಿ ದುರಂತಗಳ ಹಿನ್ನೆಲೆ

ಕೋಲಾರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಜನರು ಕೃಷಿ ಹೊಂಡಗಳಿಗೆ ಬಿದ್ದು ಸಾಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಮೇ 5 ರಂದು ಬಂಗಾರಪೇಟೆ ತಾಲೂಕಿನ ಬೋಡೇನಹಳ್ಳಿ ಗ್ರಾಮದಲ್ಲಿ ತನುಶ್ರೀ (15) ಮತ್ತು ಕಾರ್ತಿಕ್ (8) ಎಂಬ ಅಣ್ಣ-ತಂಗಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದರು. ಇದಾದ ಬೆನ್ನಲ್ಲೇ ಮೇ 8 ರಂದು ಶ್ರೀನಿವಾಸಪುರ ತಾಲೂಕಿನ ಪಚ್ಚರಮಾಕಲಹಳ್ಳಿಯಲ್ಲಿ ಈಜಲು ಹೋದ ನರೇಂದ್ರ (25) ಹಾಗೂ ಚಂದನ್ (25) ಎಂಬ ಇಬ್ಬರು ಯುವಕರು ಮೃತಪಟ್ಟಿದ್ದರು.

ಇದನ್ನೂ ಓದಿ: ಕೋಲಾರ: ಜವರಾಯನಾದ ಕೃಷಿ ಹೊಂಡ, ಈಜು ಕಲಿಸಲು ಹೋದ ತಂದೆ ಸೇರಿ ಇಬ್ಬರು ಮಕ್ಕಳು ಜಲಸಮಾಧಿ

ಇದೀಗ ಭಾನುವಾರ ಮಾಲೂರಿನಲ್ಲಿ ತಂದೆ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿರುವುದು ಜಿಲ್ಲೆಯ ಜನರನ್ನು ಕಂಗೆಡಿಸಿದೆ. ರೈತರು ತಮ್ಮ ಜಮೀನುಗಳಲ್ಲಿ ತಾವೇ ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳಿಗೆ ಸೂಕ್ತ ರಕ್ಷಣೆ ಒದಗಿಸದ ಕಾರಣ ಈ ಅನಾಹುತಗಳು ಸಂಭವಿಸುತ್ತಿದ್ದು, ಸದ್ಯ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Virat Kohli: ದಾಖಲೆಗಳ ಸರದಾರನ ಹೆಸರಿಗೆ ಮತ್ತೊಂದು ವಿಶ್ವ ದಾಖಲೆ ಸೇರ್ಪಡೆ!

Source link

‘ಟಾಕ್ಸಿಕ್’ ಸಿನಿಮಾ ಪದೇ ಪದೇ ಪೋಸ್ಟ್‌ಪೋನ್; ಅಭಿಮಾನಿಗಳ ಬೇಸರದ ಬಗ್ಗೆ ಯಶ್ ಮಾತು – Kannada News | Yash Explains ‘Toxic’ Movie Delay: Global Strategy and Fan Disappointment

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಪದೇ ಪದೇ ಮುಂದೂಡಲ್ಪಡುತ್ತಿದೆ. ಇದು ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಜೂನ್ 4ಕ್ಕೆ ಚಿತ್ರ ಬಿಡುಗಡೆ ಆಗಬೇಕಿತ್ತು. ಆದರೆ, ಜಾಗತಿಕ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತೊಮ್ಮೆ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಲಾಗಿದೆ. ಈ ವಿಳಂಬದ ಬಗ್ಗೆ ನಟ ಹಾಗೂ ನಿರ್ಮಾಪಕ ಯಶ್ ಅವರು ಅಂತರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದು, ಭಾರತೀಯ ಪ್ರೇಕ್ಷಕರು ಮತ್ತು ಅಭಿಮಾನಿಗಳ ಬೇಸರವನ್ನು ಒಪ್ಪಿಕೊಂಡಿದ್ದಾರೆ.

‘ಸಿನಿಮಾ ಪದೇ ಪದೇ ಮುಂದಕ್ಕೆ ಹೋಗುತ್ತಿರುವುದು ಖಂಡಿತವಾಗಿಯೂ ನನ್ನ ಅಭಿಮಾನಿಗಳಿಗೆ ಅಥವಾ ಭಾರತದ ಸಿನಿ ಪ್ರೇಮಿಗಳಿಗೆ ಇಷ್ಟ ಆಗೋದಿಲ್ಲ. ಅವರು ಬೇಸರ ಮಾಡಿಕೊಳ್ಳುತ್ತಾ ಇದ್ದಾರೆ. ನಮ್ಮಲ್ಲಿ ಒಮ್ಮೆ ಶೂಟಿಂಗ್ ಆರಂಭವಾದರೆ, ಸಿನಿಮಾ ಇದೇ ಸಮಯಕ್ಕೆ ಬರುತ್ತದೆ ಎಂಬ ಒಂದು ಟೈಮ್‌ಲೈನ್ ಜನರ ತಲೆಯಲ್ಲಿ ಫಿಕ್ಸ್ ಆಗಿರುತ್ತದೆ. ಹಾಗಿದ್ದರೂ, ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ತಲುಪಿಸಲು ಈ ಕಠಿಣ ನಿರ್ಧಾರ ಅನಿವಾರ್ಯವಾಗಿತ್ತು’ ಎಂದು ಯಶ್ ಸಮರ್ಥಿಸಿಕೊಂಡಿದ್ದಾರೆ.

‘ಪಾಶ್ಚಿಮಾತ್ಯ ದೇಶಗಳಲ್ಲಿ ಸಿನಿಮಾ ಸಂಪೂರ್ಣ ಮುಗಿದ ನಂತರವೇ ವಿತರಕರಿಗೆ ತೋರಿಸಿ ವ್ಯಾಪಾರ ಮಾಡಲಾಗುತ್ತದೆ. ಅಲ್ಲಿ ದೊಡ್ಡ ಮಟ್ಟದ ಹಣ ಹೂಡಿಕೆಯಾಗುವುದರಿಂದ ಪ್ರತಿಯೊಬ್ಬರೂ ಔಟ್‌ಪುಟ್ ನೋಡಲು ಬಯಸುತ್ತಾರೆ. ಆದರೆ ಭಾರತದಲ್ಲಿ ಸಿನಿಮಾ ಅನೌನ್ಸ್ ಆದ ದಿನದಿಂದಲೇ ಪ್ರಮೋಷನ್, ಮಾರ್ಕೆಟಿಂಗ್ ಶುರುವಾಗುತ್ತದೆ’ ಎಂದು ಯಶ್ ಭಾರತೀಯ ಚಿತ್ರರಂಗದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

‘ಸಿನಿಮಾ ಮುಹೂರ್ತವಾದ ದಿನದಿಂದಲೇ ಜನರು ಅದರ ಬಗ್ಗೆ ಬರೆಯಲು ಆರಂಭಿಸುತ್ತಾರೆ, ಇದು ದೊಡ್ಡ ಸವಾಲು. ಆದರೆ ನನಗೆ ನನ್ನ ಜನರ ಮೇಲೆ ನಂಬಿಕೆಯಿದೆ. ನಾವು ಮಾಡುತ್ತಿರುವುದು ಇಡೀ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ತರುವ ಕೆಲಸ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ’ ಎಂದು ಯಶ್ ಹೇಳಿದ್ದಾರೆ.

‘ಕೆಲವು ಕಥೆಗಳು ತಾಳ್ಮೆಯನ್ನು ಬೇಡುತ್ತವೆ. ಭಾರತೀಯ ಸಿನಿಮಾ ಜಾಗತಿಕ ಮಟ್ಟಕ್ಕೆ ಹೆಜ್ಜೆ ಇಡುತ್ತಿರುವಾಗ, ಅದರ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ನನ್ನ ಮೇಲಿದೆ. ಜಾಗತಿಕ ಮಾರುಕಟ್ಟೆಗೆ ಸರಿ ಹೊಂದು ಹೊಸ ದಿನಾಂಕದೊಂದಿಗೆ ಟಾಕ್ಸಿಕ್ ಶೀಘ್ರದಲ್ಲೇ ಪ್ರಪಂಚದಾದ್ಯಂತ ತೆರೆಗೆ ಬರಲಿದೆ’ ಎಂದು ಯಶ್ ವಿವರಿಸಿದರು.

ಇದನ್ನೂ ಓದಿ: ಹೇಗಿತ್ತು ‘ಟಾಕ್ಸಿಕ್’ ಸೆಟ್: ನಟಿಯ ಮಾತು ಕೇಳಿ ಯಶ್ ಬಗ್ಗೆ ಹೆಮ್ಮೆ ಆಗದೇ ಇರದು

ಅಮೆರಿಕ, ಇಸ್ರೇಲ್ ಹಾಗೂ ಇರಾನ್ ಸಂಘರ್ಷದಿಂದ ಹಾಗೂ ಇತ್ತೀಚೆಗೆ ‘ಸಿನಿಮಾಕಾನ್’ನಲ್ಲಿ ಜಾಗತಿಕ ವಿತರಕರಿಂದ ಸಿಕ್ಕ ಅಭೂತಪೂರ್ವ ರೆಸ್ಪಾನ್ಸ್‌ನಿಂದಾಗಿ ‘ಟಾಕ್ಸಿಕ್’ ತನ್ನ ಬಿಡುಗಡೆಯ ದಿನಾಂಕವನ್ನು ಬದಲಿಸಿಕೊಳ್ಳುತ್ತಾ ಬಂದಿದೆ. ಆದಷ್ಟು ಬೇಗ ಜಾಗತಿಕ ಮಟ್ಟದಲ್ಲಿ ದೊಡ್ಡ ಇಂಪ್ಯಾಕ್ಟ್ ಸೃಷ್ಟಿಸಲು ಯಶ್ ತಂಡ ಸಜ್ಜಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:59 am, Mon, 18 May 26

Source link

Video: ಬಿಹಾರದಲ್ಲಿ ಹೊತ್ತಿ ಉರಿದ ಪ್ಯಾಸೆಂಜರ್ ರೈಲು

ಪಾಟ್ನಾ, ಮೇ 18: ಬಿಹಾರದ ಸಸಾರಾಮ್ ರೈಲು ನಿಲ್ದಾಣದಲ್ಲಿ ಪಾಟ್ನಾಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಹೊತ್ತಿ ಉರಿದಿರುವ ಘಟನೆ ಇಂದು ನಡೆದಿದೆ. ಬೆಂಕಿಯನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಪಡುತ್ತಿರುವಾಗ ರೈಲು ಬೋಗಿಯಿಂದ ದಟ್ಟವಾದ ಹೊಗೆ ಹೊರಬರುತ್ತಿರುವ ದೃಶ್ಯಗಳು ಕಂಡುಬಂದಿವೆ. ಶಾರ್ಟ್​ ಸರ್ಕ್ಯೂಟ್​​ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಸಸಾರಾಮ್-ಪಾಟ್ನಾ ಫಾಸ್ಟ್ ಪ್ಯಾಸೆಂಜರ್ ರೈಲು ಬೆಳಿಗ್ಗೆ 6 ಗಂಟೆಗೆ ಹೊರಡಬೇಕಿತ್ತು ಇದಕ್ಕೂ ಸ್ವಲ್ಪ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಯಾವುದೇ ಸಾವುನೋವುಗಳು ಸಂಭವಿಸಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕಕ್ಕೆ ಸಾವಿರ ಕೋಟಿ ರೂ. ಅನುದಾನದೊಂದಿಗೆ 1122 ಹೆಚ್ಚುವರಿ ವೈದ್ಯಕೀಯ ಸೀಟು ಮಂಜೂರು ಮಾಡಿದ ಕೇಂದ್ರ – Kannada News | Record Milestone: Karnataka Gets 1122 Additional Medical Seats with Rs 1090 Crore Central Funding

ಬೆಂಗಳೂರು, ಮೇ 18: ಕರ್ನಾಟಕದ (Karnataka) ವೈದ್ಯಕೀಯ ಶಿಕ್ಷಣ (Medical Education) ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ ಸಿಕ್ಕಿದ್ದು, ಬರೋಬ್ಬರಿ 1,122 ಹೆಚ್ಚುವರಿ ಯುಜಿ (UG) ಮತ್ತು ಪಿಜಿ (PG) ವೈದ್ಯಕೀಯ ಸೀಟುಗಳು ಮಂಜೂರಾಗಿವೆ. ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಈ ಮಾಹಿತಿ ನೀಡಿದ್ದಾರೆ. ಮೇ 15ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಇದಕ್ಕೆ ಅಂತಿಮ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದ್ದಾರೆ. ದೇಶದಲ್ಲೇ ಒಂದೇ ಬಾರಿಗೆ ಒಂದೇ ರಾಜ್ಯಕ್ಕೆ 1,000ಕ್ಕೂ ಹೆಚ್ಚು ಹೆಚ್ಚುವರಿ ಸೀಟುಗಳು ಹಂಚಿಕೆಯಾಗಿರುವುದು ಇದೇ ಮೊದಲು ಹಾಗೂ ಇದು ಒಂದು ಐತಿಹಾಸಿಕ ದಾಖಲೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

ಮುಖ್ಯಾಂಶಗಳು

  • ಕರ್ನಾಟಕಕ್ಕೆ ಒಟ್ಟು 1,122 ಹೆಚ್ಚುವರಿ ಸೀಟುಗಳು ಮಂಜೂರು.
  • ಇವುಗಳಲ್ಲಿ 550 ಸೀಟುಗಳು ಪದವಿ (UG-MBBS) ಮತ್ತು 572 ಸೀಟುಗಳು ಸ್ನಾತಕೋತ್ತರ (PG) ಕೋರ್ಸ್‌ಗಳಿಗೆ ಸೇರಿವೆ.
  • ಈ ಹೆಚ್ಚುವರಿ ಸೀಟುಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 1,090 ಕೋಟಿ ಅನುದಾನ ನೀಡುತ್ತಿದೆ.

ಈ ಪ್ರಮಾಣದ ಸೀಟುಗಳ ಹೆಚ್ಚಳವು ರಾಜ್ಯದಲ್ಲಿ ಹೊಸದಾಗಿ 10 ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವುದಕ್ಕೆ ಸಮಾನವಾಗಿದೆ, ಆದರೆ ಇದಕ್ಕೆ ಭಾರಿ ವೆಚ್ಚದ ಅಗತ್ಯವಿರುವುದಿಲ್ಲ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಗುಡ್​​ನ್ಯೂಸ್​​: ಬೆಂಗಳೂರು, ಮುಂಬೈ ಎಕ್ಸ್​​ಪ್ರೆಸ್​​ ಟ್ರೈನ್​​ಗೆ ಹಸಿರು ನಿಶಾನೆ

ಪ್ರಸ್ತುತ ಕರ್ನಾಟಕದಲ್ಲಿ ಒಟ್ಟು 72 ವೈದ್ಯಕೀಯ ಕಾಲೇಜುಗಳಿದ್ದು, ಈ ಹೊಸ ಸೇರ್ಪಡೆಯಿಂದಾಗಿ ರಾಜ್ಯದ ಒಟ್ಟು ವೈದ್ಯಕೀಯ ಸೀಟುಗಳ ಲಭ್ಯತೆ ಮತ್ತಷ್ಟು ಹೆಚ್ಚಾಗಲಿದೆ. ನೀಟ್ (NEET) ಪರೀಕ್ಷೆಯ ಅಕ್ರಮಗಳ ಆತಂಕದ ನಡುವೆ ಕಂಗಾಲಾಗಿದ್ದ ವಿದ್ಯಾರ್ಥಿಗಳಿಗೆ ಈ ಸರ್ಕಾರಿ ಕೋಟಾದ ಸೀಟುಗಳು ಒಂದು ಸುವರ್ಣಾವಕಾಶವಾಗಲಿದ್ದು, ವೈದ್ಯಕೀಯ ಶಿಕ್ಷಣ ಪಡೆಯಬಯಸುವ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವರು ಕರೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಿಟಕಿ ಸರಳು ಮುರಿದು ಉಗಾಂಡದ ನಾಲ್ವರು ಮಹಿಳೆಯರು ಎಸ್ಕೇಪ್; ಮತ್ತೆ ಡ್ರಗ್ಸ್ ದಂಧೆಗೆ ಇಳಿಯುವ ಆತಂಕ! – Kannada News | Bengaluru: Four Ugandan Women Escape from Shelter, High Risk of Rejoining Drug Smuggling Networks

ಬೆಂಗಳೂರು, ಮೇ 18: ಸ್ಟೂಡೆಂಟ್ ಹಾಗೂ ಟೂರಿಸ್ಟ್ ವೀಸಾದಡಿ ಭಾರತಕ್ಕೆ ಬಂದು, ವೀಸಾ ಅವಧಿ ಮುಗಿದಿದ್ದರೂ ಸ್ವದೇಶಕ್ಕೆ ಮರಳದೆ ಅಕ್ರಮವಾಗಿ ನೆಲೆಸುವ ವಿದೇಶಿಗರ ಜಾಲ ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಆತಂಕ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ‘ಹೋಮ್ ಆಫ್ ಹೋಪ್’ ನಿರಾಶ್ರಿತರ ಕೇಂದ್ರದಿಂದ ನಾಲ್ವರು ಉಗಾಂಡ ಮೂಲದ ಮಹಿಳೆಯರು (Uganda women) ಕಿಟಕಿ ಸರಳು ಮುರಿದು ಪರಾರಿಯಾಗಿದ್ದು, ಇವರು ಮತ್ತೆ ಮಾದಕ ವಸ್ತುಗಳ ಸ್ಮಗ್ಲಿಂಗ್ ಜಾಲದಲ್ಲಿ ಸಕ್ರಿಯರಾಗುವ ದಟ್ಟ ಸಾಧ್ಯತೆಗಳು ಎದುರಾಗಿವೆ.

ಮುಖ್ಯಾಂಶಗಳು

  • ವೀಸಾ ಅವಧಿ ಮುಗಿದರೂ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ವಿದೇಶಿಗರ ಉಪಟಳ.
  • ನಿರಾಶ್ರಿತರ ಕೇಂದ್ರದ ಕಿಟಕಿ ಸರಳು ಮುರಿದು ನಾಲ್ವರು ಮಹಿಳೆಯರು ಪರಾರಿಯಾಗಿದ್ದಾರೆ.
  • ಎಸ್ಕೇಪ್ ಆದ ವಿದೇಶಿ ಮಹಿಳೆಯರು ಮತ್ತೆ ಡ್ರಗ್ಸ್ ದಂಧೆಗೆ ಇಳಿಯುವ ಆತಂಕ.

ಪೊಲೀಸರ ಕಣ್ಣು ತಪ್ಪಿಸಿ ಮಧ್ಯರಾತ್ರಿ ಎಸ್ಕೇಪ್!

ಕೊತ್ತನೂರು ಬಳಿಯ ಚಿಕ್ಕಗುಬ್ಬಿಯಲ್ಲಿರುವ ‘ಆಟೋ ರಾಜ’ ಅವರ ಉಸ್ತುವಾರಿಯ ನಿರಾಶ್ರಿತ ಕೇಂದ್ರದಲ್ಲಿ ನೈಜೀರಿಯಾ, ಉಗಾಂಡ, ಕೀನ್ಯಾ ಸೇರಿದಂತೆ 30ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ತಾತ್ಕಾಲಿಕವಾಗಿ ಇರಿಸಲಾಗಿತ್ತು. ಮೇ 11 ರಂದು ಮುಂಜಾನೆ 3 ಗಂಟೆಯ ಸುಮಾರಿಗೆ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿದ ಉಗಾಂಡದ ತೋಪಿಷ್ಟ, ನಗವ, ಸಫಿನಾ ಮತ್ತು ಪಿತೀನ ಎಂಬ ನಾಲ್ವರು ಮಹಿಳೆಯರು, ಎರಡನೇ ಅಂತಸ್ತಿನ ಕಿಟಕಿಯ ಕಬ್ಬಿಣದ ಗ್ರಿಲ್ ಮುರಿದು ಎಸ್ಕೇಪ್ ಆಗಿದ್ದಾರೆ.

ಮತ್ತೆ ಮಾದಕ ವಸ್ತುಗಳ ಸ್ಮಗ್ಲಿಂಗ್ ಜಾಲ ಸೇರುವ ಹೈ ಚಾನ್ಸ್!

ಪರಾರಿಯಾಗಿರುವ ಈ ನಾಲ್ವರು ಮಹಿಳೆಯರು ಈಗಾಗಲೇ ಡ್ರಗ್ಸ್ ಮತ್ತು ಗಾಂಜಾ ಸರಬರಾಜಿನಂತಹ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ ಹಿನ್ನೆಲೆ ಹೊಂದಿದ್ದಾರೆ. ನಿರಾಶ್ರಿತರ ಕೇಂದ್ರದಲ್ಲಿದ್ದ ಸಂದರ್ಭದಲ್ಲೂ ಇವರ ಬಳಿ ಗಾಂಜಾ ಮತ್ತು ಡ್ರಗ್ಸ್ ಪತ್ತೆಯಾಗಿತ್ತು. ಅಲ್ಲಿಂದ ತಪ್ಪಿಸಿಕೊಂಡ ಇವರು, ತಮಗೆ ಪರಿಚಯವಿರುವ ಹಳೆಯ ಡ್ರಗ್ ನೆಟ್‌ವರ್ಕ್ ಮತ್ತು ಸ್ಮಗ್ಲಿಂಗ್ ಜಾಲವನ್ನು ತಕ್ಷಣವೇ ಮರುಸಂಪರ್ಕಿಸುವ ಹೈ ಚಾನ್ಸಸ್ ಇದೆ ಎಂದು ಶಂಕಿಸಲಾಗಿದೆ. ವೀಸಾ ಅವಧಿ ಮುಗಿದರೂ ಇಲ್ಲೇ ಉಳಿದುಕೊಂಡಿರುವುದರ ಮುಖ್ಯ ಉದ್ದೇಶವೇ ಈ ಡ್ರಗ್ಸ್ ದಂಧೆಯಾಗಿರುವುದರಿಂದ, ಇವರು ಸಮಾಜಕ್ಕೆ ಮತ್ತಷ್ಟು ಮಾರಕವಾಗುವ ಆತಂಕ ಮೂಡಿದೆ.

ಇದನ್ನೂ ಓದಿ ನಿರಾಶ್ರಿತರ ಕೇಂದ್ರದಲ್ಲಿದ್ದ ವಿದೇಶಿ ಅಕ್ರಮ ವಲಸಿಗರು ಪರಾರಿ!

FRRO ಅಧಿಕಾರಿಗಳಿಗೆ ತಲೆನೋವಾದ ವಲಸಿಗರು

ಅಕ್ರಮ ವಲಸಿಗರನ್ನು ಇರಿಸಬೇಕಾದ FRRO ಜೈಲಿನಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಇವರನ್ನು ಆಶ್ರಮದಲ್ಲಿ ಇರಿಸಲಾಗಿತ್ತು. ಆದರೆ ಮಾದಕ ದ್ರವ್ಯಗಳ ವ್ಯಸನಿಗಳಾಗಿರುವ ಇವರು ಆಶ್ರಮದ ಸಿಬ್ಬಂದಿಯೊಂದಿಗೆ ನಿರಂತರವಾಗಿ ಮಾತಿನ ಚಕಮಕಿ ಹಾಗೂ ಗಲಾಟೆ ನಡೆಸುತ್ತಾ, ತಮಗೆ ಬೇಕಾದ ಮಾದಕ ವಸ್ತುಗಳ ಡೀಲಿಂಗ್‌ಗಾಗಿ ಈ ಸಂಚು ರೂಪಿಸಿ ಪರಾರಿಯಾಗಿದ್ದಾರೆ.

ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮತ್ತೆ ಸ್ಮಗ್ಲಿಂಗ್ ಜಾಲಕ್ಕೆ ಜೀವ ತುಂಬಲು ಹೊಂಚು ಹಾಕುತ್ತಿರುವ ಈ ನಾಲ್ವರು ವಿದೇಶಿ ಮಹಿಳಾ ಆರೋಪಿಗಳ ಪತ್ತೆಗಾಗಿ ಪೊಲೀಸರು ಹಗಲಿರುಳು ತೀವ್ರ ಶೋಧ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್ ಬಾಸ್ ಮುಗಿದ ಬಳಿಕ ಹೊಸ ರಿಯಾಲಿಟಿ ಶೋಗೆ ರಕ್ಷಿತಾ ಶೆಟ್ಟಿ ಎಂಟ್ರಿ – Kannada News | Rakshitha Shetty New Reality Show After Bigg Boss Kannada

ರಕ್ಷಿತಾ ಶೆಟ್ಟಿ ಅವರು ‘ಬಿಗ್ ಬಾಸ್’ ಶೋ ಮೂಲಕ ಫೇಮಸ್ ಆದವರು. ಬಿಗ್ ಬಾಸ್​ ರನ್ನರ್ ಅಪ್ ಆದ ಬಳಿಕ ಅವರ ಜನಪ್ರಿಯತೆ ಹೆಚ್ಚಿದೆ. ಹೋದಲ್ಲಿ, ಬಂದಲ್ಲಿ ಅವರನ್ನು ಜನರು ಮುತ್ತಿಕೊಳ್ಳುತ್ತಿದ್ದಾರೆ. ಈಗ ಅವರು ಹೊಸ ಶೋನ ಭಾಗ ಆಗುತ್ತಿದ್ದಾರೆ. ಅದುವೇ ‘ಕ್ವಾಟ್ಲೆ ಕಿಚನ್ ಸೀಸನ್ 2’. ಸೂರಜ್ ಸಿಂಗ್, ತುಕಾಲಿ ಸಂತೋಷ್, ಓಂ ಪ್ರಕಾಶ್ ರಾವ್ ಮೊದಲಾದವರು ಶೋನ ಭಾಗ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೇರಳಂಗೆ ಪ್ರವಾಸ ಸದ್ಯಕ್ಕೆ ಬೇಡ, ಪ್ಲಾನ್ ಇದ್ದರೆ ಮುಂದೂಡಿ: ಸರ್ಕಾರದಿಂದ ಮಹತ್ವದ ಸಲಹೆ

ಬೆಂಗಳೂರು, ಮೇ 18: ಅರಬ್ಬಿ ಸಮುದ್ರದಲ್ಲಿ ಮುಂಗಾರು ಪೂರ್ವ ಅಲೆಗಳ ಅಬ್ಬರ ಚುರುಕುಗೊಂಡಿದ್ದು, ಕೇರಳಂ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಪ್ರಸ್ತುತ ಕೇರಳಂನ ಎರಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಒಂಬತ್ತು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆಯ ಆರ್ಭಟ ಹಾಗೂ ಬಿರುಗಾಳಿ ಸಹಿತ ಮಳೆ ನಿರಂತರವಾಗಿ ಸುರಿಯುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ, ಹವಾಮಾನ ಇಲಾಖೆಯು ಕೇರಳಕ್ಕೆ ಪ್ರವಾಸದ ಪ್ಲಾನ್ ಇದ್ದರೆ ಮುಂದೂಡುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದೆ. ಪ್ರಸ್ತುತ ಕೇರಳಕ್ಕೆ ಪ್ರಯಾಣಿಸಲು ಯೋಜನೆ ರೂಪಿಸಿಕೊಂಡಿರುವವರು ನಿರ್ಧಾರವನ್ನು ಸದ್ಯಕ್ಕೆ ಕೈಬಿಡುವುದು ಸೂಕ್ತ ಎಂದು ಸೂಚಿಸಲಾಗಿದೆ. ಭಾರೀ ಮಳೆಯಿಂದ ಉಂಟಾಗಬಹುದಾದ ತೊಂದರೆಗಳನ್ನು ತಪ್ಪಿಸಲು ಈ ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version