ರಕ್ಷಿತಾ ಶೆಟ್ಟಿ ಅವರು ‘ಬಿಗ್ ಬಾಸ್’ ಶೋ ಮೂಲಕ ಫೇಮಸ್ ಆದವರು. ಬಿಗ್ ಬಾಸ್ ರನ್ನರ್ ಅಪ್ ಆದ ಬಳಿಕ ಅವರ ಜನಪ್ರಿಯತೆ ಹೆಚ್ಚಿದೆ. ಹೋದಲ್ಲಿ, ಬಂದಲ್ಲಿ ಅವರನ್ನು ಜನರು ಮುತ್ತಿಕೊಳ್ಳುತ್ತಿದ್ದಾರೆ. ಈಗ ಅವರು ಹೊಸ ಶೋನ ಭಾಗ ಆಗುತ್ತಿದ್ದಾರೆ. ಅದುವೇ ‘ಕ್ವಾಟ್ಲೆ ಕಿಚನ್ ಸೀಸನ್ 2’. ಸೂರಜ್ ಸಿಂಗ್, ತುಕಾಲಿ ಸಂತೋಷ್, ಓಂ ಪ್ರಕಾಶ್ ರಾವ್ ಮೊದಲಾದವರು ಶೋನ ಭಾಗ ಆಗುತ್ತಿದ್ದಾರೆ.
ಬೆಂಗಳೂರು, ಮೇ 18: ಅರಬ್ಬಿ ಸಮುದ್ರದಲ್ಲಿ ಮುಂಗಾರು ಪೂರ್ವ ಅಲೆಗಳ ಅಬ್ಬರ ಚುರುಕುಗೊಂಡಿದ್ದು, ಕೇರಳಂ ರಾಜ್ಯದಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಪ್ರಸ್ತುತ ಕೇರಳಂನ ಎರಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಒಂಬತ್ತು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆಯ ಆರ್ಭಟ ಹಾಗೂ ಬಿರುಗಾಳಿ ಸಹಿತ ಮಳೆ ನಿರಂತರವಾಗಿ ಸುರಿಯುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ, ಹವಾಮಾನ ಇಲಾಖೆಯು ಕೇರಳಕ್ಕೆ ಪ್ರವಾಸದ ಪ್ಲಾನ್ ಇದ್ದರೆ ಮುಂದೂಡುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದೆ. ಪ್ರಸ್ತುತ ಕೇರಳಕ್ಕೆ ಪ್ರಯಾಣಿಸಲು ಯೋಜನೆ ರೂಪಿಸಿಕೊಂಡಿರುವವರು ನಿರ್ಧಾರವನ್ನು ಸದ್ಯಕ್ಕೆ ಕೈಬಿಡುವುದು ಸೂಕ್ತ ಎಂದು ಸೂಚಿಸಲಾಗಿದೆ. ಭಾರೀ ಮಳೆಯಿಂದ ಉಂಟಾಗಬಹುದಾದ ತೊಂದರೆಗಳನ್ನು ತಪ್ಪಿಸಲು ಈ ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
‘ಕರ್ಣ’ ಧಾರಾವಾಹಿಯಲ್ಲಿ ಒಂದು ಪ್ರಮುಖ ಬೆಳವಣಿಗೆ ನಡೆದಿದೆ. ಇಷ್ಟು ದಿನ ಮುಚ್ಚಿಟ್ಟ ಸತ್ಯವು ಹೊರ ಬೀಳುವ ಸಮಯ ಬಂದಿದೆ. ಕರ್ಣ ಹಾಗೂ ನಿಧಿ ಪರಸ್ಪರ ಪ್ರೀತಿಸುತ್ತಾ ಇದ್ದವರು. ಆದರೆ, ಕರ್ಣನ ತಂದೆ ಮಾಡಿದ ಮೋಸದಿಂದ ಒಂದು ದೊಡ್ಡ ಆಘಾತ ಉಂಟಾಗಿತ್ತು. ಕರ್ಣನು ನಿತ್ಯಾಳನ್ನು ಮದುವೆ ಆಗುವ ಅನಿವಾರ್ಯತೆ ಬಂತು. ಈಗ ಆ ತಪ್ಪನ್ನು ಸರಿ ಮಾಡುವ ಸಮಯ ಎಂದೇ ಹೇಳಬಹುದು. ಧಾರಾವಾಹಿಯಲ್ಲಿ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ನಿಧಿ ಹಾಗೂ ಕರ್ಣ ಪ್ರೀತಿ ಮಾಡುತ್ತಿದ್ದರು. ಆದರೆ, ಕರ್ಣ ಹಾಗೂ ನಿತ್ಯಾ ವಿವಾಹ ನಡೆದಿದೆ. ಈ ವಿವಾಹದ ಬಳಿಕ ನಿಧಿಗೆ ಸಾಕಷ್ಟು ಬೇಸರ ಆಯಿತು. ಮುಂದೇನು ಮಾಡಬೇಕು ಎಂಬ ಚಿಂತೆ ಆಕೆಗೆ ಬಂದಿತ್ತು. ಕೊನೆಗೆ ಕರ್ಣನು ಮುಂದಿನ ದಿನಗಳಲ್ಲಿ ಅವಳನ್ನು ಮದುವೆ ಆಗುವ ಭರವಸೆ ನೀಡಿದನು. ಈಗ ಆ ಸಮಯ ಬಂದಿದೆ.
ಕರ್ಣನು ಮತ್ತೊಂದು ಕುತಂತ್ರ ಮಾಡಿದ್ದಾನೆ. ಈ ಕುತಂತ್ರ ಸಣ್ಣದಲ್ಲ. ಅದು ದೊಡ್ಡ ಕತಂತ್ರವೇ. ನಿಧಿಗೆ ಬೇರೆ ಮದುವೆ ಮಾಡಬೇಕು ಎಂದು ಆತ ನಿರ್ಧರಿಸಿದೆ. ಈ ಬೆನ್ನಲ್ಲೇ ಅರ್ಜುನ್ನ (ಗಗನ್ ಚಿನ್ನಪ್ಪ) ಕರೆ ತಂದನು. ಇಬ್ಬರೂ ಮದುವೆ ಮಾಡಬೇಕು ಎಂಬ ಪ್ರಯತ್ನ ನಡೆಯಿತು. ಇದನ್ನು ಈಗ ನಿಧಿಯೇ ಬದಲಿಸುವ ಸಮಯ ಬಂದಿದೆ.
ಕರ್ಣ ಧಾರಾವಾಹಿಯಲ್ಲಿ ಈಗ ನಿತ್ಯಾಗೆ ಸತ್ಯ ಗೊತ್ತಾಗಿದೆ. ಆಕೆ ನಿಧಿ ಹಾಗೂ ಕರ್ಣನ ಮದುವೆ ಮಾಡಿಸಲು ಮುಂದಾಗಿದ್ದಾಳೆ. ಈ ನಿರ್ಧಾರ ಮನೆಯವರಿಗೆ ಶಾಕಿಂಗ್ ಎನಿಸಿದೆ. ಈ ಮೊದಲೇ ಹೇಳಿದಂತೆ ನಿತ್ಯಾ ಹಾಗೂ ಕರ್ಣ ಮದುವೆ ನಡೆದೇ ಇಲ್ಲ. ಹೀಗಾಗಿ, ನಿಧಿ ಹಾಗೂ ಕರ್ಣನ ಮದುವೆ ಆಗಲು ಯಾವುದೇ ತೊಂದರೆ ಇಲ್ಲ. ಮತ್ತೊಂದು ವಿಷಯ ಎಂದರೆ ಕರ್ಣ ಹಾಗೂ ನಿತ್ಯಾ ಇನ್ನುಮುಂದೆ ಫ್ರೆಂಡ್ಸ್ ಆಗಿರಲು ನಿರ್ಧರಿಸಿದ್ದಾರೆ ಎಂಬುದು ವಿಶೇಷ.
ಭೋಪಾಲ್, ಮೇ 18: ಗಂಡನ ಮನೆಯಲ್ಲಿ ಮಹಿಳೆ(Woman) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಭೋಪಾಲ್ನಲ್ಲಿ ನಡೆದಿದೆ. 31 ವರ್ಷ ತ್ವಿಶಾ ಸಾವು ಪ್ರಕರಣ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೊಂದು ಯೋಜಿತ ಕೊಲೆ ಎಂದು ಆರೋಪಿಸಿರುವ ತ್ವಿಶಾ ಅವರ ತಂದೆ ನ್ಯಾಯಕ್ಕಾಗಿ ಒತ್ತಾಯಿಸಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನಿವಾಸದ ಹೊರಗೆ ಸುಡುವ ಬಿಸಿಲಿನಲ್ಲೇ ಬೃಹತ್ ಪ್ರತಿಭಟನೆ ನಡೆಸಿದರು. ಒಂದೊಮ್ಮೆ ನ್ಯಾಯ ಸಿಗದಿದ್ದರೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನನ್ನ ಮಗಳ ಸಾವಿಗೆ ನ್ಯಾಯ ಸಿಗದಿದ್ದರೆ ನಾನು ಮುಖ್ಯಮಂತ್ರಿಯವರ ನಿವಾಸದ ಮುಂದೆಯೇ ಬೆಂಕಿ ಹಚ್ಚಿಕೊಂಡು ಪ್ರಾಣ ಬಿಡುತ್ತೇನೆ ಎಂದು ಕಣ್ಣೀರಿಡುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಪ್ರಸ್ತುತ ಏಮ್ಸ್ ಭೋಪಾಲ್ ನೀಡಿರುವ ಆರಂಭಿಕ ಮರಣೋತ್ತರ ಪರೀಕ್ಷೆಯ ವರದಿ ತೃಪ್ತಿಕರವಾಗಿಲ್ಲ ಎಂದು ಆರೋಪಿಸಿರುವ ಕುಟುಂಬಸ್ಥರು, ದೆಹಲಿಯ ಏಮ್ಸ್‌ನಲ್ಲಿ ಮರು ಮರಣೋತ್ತರ ಪರೀಕ್ಷೆ ನಡೆಸಬೇಕು ಮತ್ತು ಅಲ್ಲಿಯವರೆಗೆ ಮಗಳ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ತ್ವಿಶಾ ಅವರ ಪತಿ ಸಮರ್ಥ್ ಸಿಂಗ್ (ವಕೀಲ) ಮತ್ತು ಅತ್ತೆ ಗಿರಿಬಾಲಾ ಸಿಂಗ್ ತುಂಬಾ ದಿನಗಳಿಂದ ಆಕೆಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ. ವಿಚಾರಣೆ ಆರಂಭವಾಗುವ ಮುನ್ನವೇ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಗುತ್ತಿದೆ. ಕುಟುಂಬವು ತಮ್ಮ ಪ್ರಭಾವವನ್ನು ಬಳಸಿ ತನಿಖೆಯ ಹಾದಿ ತಪ್ಪಿಸುತ್ತಿದೆ.
ಮಗಳ ಸಾವಿನ ಎರಡು ದಿನಗಳ ನಂತರ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರು ರಚಿಸಿರುವ ವಿಶೇಷ ತನಿಖಾ ತಂಡ (SIT) ದ ಮೇಲೂ ನಂಬಿಕೆ ಕಳೆದುಕೊಂಡಿರುವ ಕುಟುಂಬವು, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿದೆ. ತ್ವಿಶಾ ಅವರ ದೇಹದ ಕೈ ಮತ್ತು ಕಿವಿಗಳ ಮೇಲೆ ಗಾಯದ ಗುರುತುಗಳಿದ್ದು, ಪ್ರಕರಣವನ್ನು ಬಲವಂತವಾಗಿ ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ ಎಂಬುದು ಅವರ ಆರೋಪವಾಗಿದೆ.
ಪ್ರಸ್ತುತ ಇರುವ ಭೀಕರ ಬಿಸಿಲಿನಿಂದಾಗಿ ಶವ ಕೊಳೆಯದಂತೆ ತಡೆಯಲು ತ್ವಿಶಾ ಅವರ ದೇಹವನ್ನು ಮೈನಸ್ 4 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂರಕ್ಷಿಸಿಡಬೇಕೆಂದು ಕುಟುಂಬಸ್ಥರು ಸಿಎಂ ಅವರ ಒಎಸ್‌ಡಿ ಬಳಿ ವಿನಂತಿಸಿದ್ದಾರೆ. ಇದಕ್ಕಾಗಿ ನ್ಯಾಯಾಲಯದ ಮೊರೆ ಹೋಗಲು ಸಹ ಅವರು ಸಜ್ಜಾಗಿದ್ದಾರೆ.
ವರದಕ್ಷಿಣೆ ಕಿರುಕುಳ, ಹಲ್ಲೆ ಮತ್ತು ಸಾಕ್ಷ್ಯ ನಾಶದ ಆರೋಪಗಳ ತನಿಖೆಗಾಗಿ ಎಸ್‌ಐಟಿ ರಚಿಸಲಾಗಿದ್ದು, ಎಸಿಪಿ ರಜನೀಶ್ ಕಶ್ಯಪ್ ಇದರ ನೇತೃತ್ವ ವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಮುಖ ಆರೋಪಿ ಪತಿ ಸಮರ್ಥ್ ಸಿಂಗ್ ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಕಟಾರಾ ಹಿಲ್ಲಸ್ ಠಾಣೆಯ ಉಸ್ತುವಾರಿ ಸುನಿಲ್ ದುಬೆ ತಿಳಿಸಿದ್ದಾರೆ. ನಿವೃತ್ತ ನ್ಯಾಯಾಧೀಶರ ಜಾಮೀನನ್ನು ಪ್ರಶ್ನಿಸಿ ಕಾನೂನು ಹೋರಾಟ ಮುಂದುವರಿಸಲಾಗುವುದು, ಆದರೆ ಕುಟುಂಬಸ್ಥರು ಶವ ಸ್ವೀಕರಿಸದಿದ್ದರೆ ಕಾನೂನಿನ ನಿಯಮಗಳ ಪ್ರಕಾರ ತಾವೇ ಅಂತ್ಯಕ್ರಿಯೆ ನಡೆಸಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ನೋಯ್ಡಾ ಮೂಲದ ತ್ವಿಶಾ ಶರ್ಮಾ ಮತ್ತು ವಕೀಲ ಸಮರ್ಥ್ ಸಿಂಗ್ 2025ರ ಡಿಸೆಂಬರ್‌ನಲ್ಲಿ ವಿವಾಹವಾಗಿದ್ದರು. ಆದರೆ ಕಿರುಕುಳ ತಾಳಲಾರದೆ ತ್ವಿಶಾ ನೋಯ್ಡಾಗೆ ಮರಳಲು ಬಯಸಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಮೇ 12 ರ ರಾತ್ರಿ ಅವರು ಶವವಾಗಿ ಪತ್ತೆಯಾಗಿದ್ದು, ಇಡೀ ಪ್ರಕರಣ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 61ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಭರ್ಜರಿ ಅರ್ಧಶತಕ ಸಿಡಿಸಿದ್ದರು. ಈ ಅರ್ಧಶತಕ ಪೂರೈಸುತ್ತಿದ್ದಂತೆ ಅಯ್ಯರ್ ತಮ್ಮ ಕೈಗಳನ್ನು ಮೇಲೆಕ್ಕೆತ್ತುವ ಮೂಲಕ ವಿಶೇಷ ಸ್ಟ್ರೈಲ್ನಲ್ಲಿ ಸಂಭ್ರಮಿಸಿದ್ದರು.
ಇದರ ಬೆನ್ನಲ್ಲೇ ಈ ಸಂಭ್ರಮಕ್ಕೆ ಕಾರಣವೇನು? ಇದರ ಅರ್ಥವೇನು? ಎಂಬ ಗೂಗಲ್ ಹುಡುಕಾಟಗಳು ಶುರುವಾಗಿದ್ದವು. ಈ ಪ್ರಶ್ನೆಗಳಿಗೆ ಸಿಗುವ ಉತ್ತರ ಇಳಯ ದಳಪತಿ ವಿಜಯ್. ಅಂದರೆ ತಮಿಳುನಾಡಿನ ಹೊಸ ಮುಖ್ಯಮಂತ್ರಿ ವಿಜಯ್ ಅವರ ಸ್ಟೈಲ್ನಲ್ಲಿ ವೆಂಕಿ ಬೆಂಕಿ ಸೆಲೆಬ್ರೇಷನ್ ಮಾಡಿದ್ದರು ಎಂಬುದು.
2017 ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹಿಟ್ ಮೆರ್ಸಲ್ ಚಿತ್ರದಲ್ಲಿ ನಟ ವಿಜಯ್ ಇದೇ ಶೈಲಿಯಲ್ಲಿ ಪೋಸ್ ನೀಡಿ ಅಭಿಮಾನಿಗಳನ್ನು ರಂಜಿಸಿದ್ದರು. ಇದೀಗ ಅವರು ರಾಜಕೀಯಕ್ಕೆ ಇಳಿದು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ. ಇತ್ತ ತಮಿಳು ಚಿತ್ರಪ್ರೇಮಿಯಾಗಿರುವ ವೆಂಕಟೇಶ್ ಅಯ್ಯರ್, ತನ್ನ ನೆಚ್ಚಿನ ನಟನ ಐಕಾನಿಕ್ ಪೋಸ್ ಅನ್ನು ಮರುಸೃಷ್ಟಿಸಿ ಅರ್ಧಶತಕವನ್ನು ಸಂಭ್ರಮಿಸಿದ್ದಾರೆ.
ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಜಯ್ ಅಭಿಮಾನಿಗಳು ಹಾಗೂ ಆರ್‌ಸಿಬಿ ಫ್ಯಾನ್ಸ್ಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಸೆಲೆಬ್ರೇಷನ್ ಅರ್ಥ “ಆಶ್ಚರ್ಯಚಕಿತಗೊಳಿಸುವುದು” ಎನ್ನಲಾಗಿದೆ. ಇಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದು ವೆಂಕಿ ಸ್ಫೋಟಕ ಇನಿಂಗ್ಸ್ನೊಂದಿಗೆ ಎಲ್ಲರನ್ನು ಆಶ್ಚರ್ಯಗೊಳಿಸಿದ್ದು ಸುಳ್ಳಲ್ಲ.
ಪಂದ್ಯದ ಹೈಲೈಟ್ಸ್ ಮತ್ತು ಅಯ್ಯರ್ ಅಬ್ಬರ:
ಸ್ಫೋಟಕ ಇನ್ನಿಂಗ್ಸ್: ಗಾಯಗೊಂಡ ರಜತ್ ಪಾಟಿದಾರ್ ಬದಲಿಗೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್, ಪಂಜಾಬ್ ಕಿಂಗ್ಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಅವರು ಕೇವಲ 40 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 73 ರನ್ ಚಚ್ಚಿದರು.
ಆರ್‌ಸಿಬಿ ಭರ್ಜರಿ ಜಯ: ಅಯ್ಯರ್ ಅವರ ಈ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ತಂಡವು 4 ವಿಕೆಟ್ ನಷ್ಟಕ್ಕೆ 222 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡ 23 ರನ್‌ಗಳಿಂದ ಸೋಲೊಪ್ಪಿಕೊಂಡಿದೆ.
ಪ್ಲೇಆಫ್‌ಗೆ ಲಗ್ಗೆ: ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಧಿಕೃತವಾಗಿ ಪ್ಲೇಆಫ್‌ಗೆ ಪ್ರವೇಶಿಸಿದೆ.
ಸದ್ಯ ಪ್ಲೇಆಫ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಕೊನೆಯ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲೂ ಗೆದ್ದು ಆರ್‌ಸಿಬಿ 20 ಅಂಕಗಳನ್ನು ಪಡೆಯಲಿದೆಯಾ ಕಾದು ನೋಡಬೇಕಿದೆ.
ಆಸೆ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಕಾಣುತ್ತಿರುವ ಪ್ರಮುಖ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿ ಸಾಕಷ್ಟು ನಿರೀಕ್ಷೆಯನ್ನು ಸೃಷ್ಟಿಸಿದೆ. ಈಗ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದರ ಎಂಟ್ರಿ ಆಗಿದೆ. ಅದು ಕೂಡ 860 ಎಪಿಸೋಡ್ಗಳ ಬಳಿಕ ಎಂಬುದು ವಿಶೇಷ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಹಾಗಾದರೆ ಯಾವುದು ಆ ಪಾತ್ರ? ಆ ಬಗ್ಗೆ ಇಲ್ಲಿದೆ ವಿವರ.
ಆಸೆ ಧಾರಾವಾಹಿಯಲ್ಲಿ ರಂಗನಾಥ್ ಅವರಿಗೆ ನಾಲ್ಕು ಮಕ್ಕಳಿದ್ದರು. ಈ ಪೈಕಿ ತಾರಾ ಎಂಬ ಹುಡುಗಿ ಸಣ್ಣ ವಯಸ್ಸಿನಲ್ಲೇ ನಿಧನ ಹೊಂದಿದಳು. ಸಾಯಿಸಿದ್ದು ಮನೋಜ್ ಆದರೂ ಈ ಆರೋಪ ಬಂದಿದ್ದು ಸೂರ್ಯನ ಮೇಲೆ. ಹೀಗಾಗಿ ಸೂರ್ಯ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬಂತು. ಇದು ಸೂರ್ಯನ ಬಾಲ್ಯವನ್ನೇ ಹಾಳು ಮಾಡಿತು. ಅಮ್ಮನಿಂದ ಅವನನ್ನು ದೂರ ಮಾಡಿತು. ಈಗ ಆ ತಾರ ಮತ್ತೆ ಬಂದಿದ್ದಾಳೆ ಎಂಬುದನ್ನು ತೋರಿಸಲಾಗಿದೆ.
ತಾರಾ ಎಂಬ ಹುಡುಗಿಯನ್ನು ‘ಆಸೆ’ ಧಾರಾವಾಹಿಯಲ್ಲಿ ತರಲಾಗಿದೆ. ಆಕೆ ಒಂದು ಕಂಪನಿಯನ್ನು ನೋಡಿಕೊಳ್ಳುತ್ತಿದ್ದಾಳೆ. ಆಕೆಯನ್ನು ಹುಡುಕುವ ಪ್ರಯತ್ನದಲ್ಲಿರುವ ಮೀನಾಗೆ ತಾರಾಳ ಭೇಟಿ ಮಾಡುವ ಪರಿಸ್ಥಿತಿ ಬಂದಿದೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ.
ತಾರಾ ತನ್ನ ತಂದೆಗೆ ಸಾಕು ಮಗಳು. ಈ ವಿಷಯ ಆಕೆಗೆ ಗೊತ್ತಿಲ್ಲ. ಈ ವಿಷಯ ಯಾವಾಗಲೂ ಗೊತ್ತಾಗದಂತೆ ನೋಡಿಕೊಳ್ಳಬೇಕು ಎಂಬುದು ತಾರಾಳ ತಂದೆಯ ಉದ್ದೇಶ. ಆದರೆ, ಸತ್ಯ ಎಂಬುದು ಒಂದಲ್ಲಾ ಒಂದು ದಿನ ಹೊರ ಬರಲೇಬೇಕಲ್ಲ. ಈಗ ಮೀನಾಳು ತಾರಾಳ ಹುಡುಕುವ ಪ್ರಯತ್ನದಲ್ಲಿ ಇರುವಾಗಲೇ ಆಕೆಯೇ ಎದುರು ಬಂದಿದ್ದಾಳೆ. ಮುಂದೆ ಸತ್ಯ ಗೊತ್ತಾದರೆ ಏನಾಗಬಹುದು ಎನ್ನುವ ಕುತೂಹಲ ಮೂಡಿದೆ.
ತಾರಾ ಸಿಕ್ಕರೆ ತನ್ನನ್ನು ಕೊಲ್ಲಲು ಪ್ರಯತ್ನಿಸಿದ್ದು ಯಾರು ಎಂಬ ವಿಷಯ ಗೊತ್ತಾಗಲಿದೆ. ಇದನ್ನು ಮಾಡಿದ್ದು ಮನೋಜ್ ಎಂಬ ವಿಷಯ ಗೊತ್ತಾದರೆ ಆತನ ತಾಯಿ ಬದಲಾಗುವು ಸಾಧ್ಯತೆ ಇರುತ್ತದೆ. ಮುಂದಿನ ದಿನಗಳಲ್ಲಿ ಈ ವಿಷಯ ರಿವೀಲ್ ಆಗುವ ಸಾಧ್ಯತೆ ಇದೆ.
ಬೆಂಗಳೂರು, ಮೇ 18: ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನ ಏರಿಕೆ ಮತ್ತು ಧೂಳಿನ ವಾತಾವರಣದಿಂದ ಕಂಗಾಲಾಗಿದ್ದ ಜನತೆಗೆ ಇಂದು ವಾಯು ಗುಣಮಟ್ಟದಲ್ಲಿ (AQI) ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ನಿಟ್ಟುಸಿರು ಬಿಡುವಂತಾಗಿದೆ. ಇಂದು ನಗರದ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 58 (ಸಾಧಾರಣ) ದಾಖಲಾಗಿದೆ.
ಮುಖ್ಯಾಂಶಗಳು
ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ ಇಂದು 58 ರಷ್ಟು ಸಾಧಾರಣ ದಾಖಲಾಗಿದೆ.
ಬದಲಾದ ಹವಾಮಾನ ಮತ್ತು ಮಳೆಯ ಮುನ್ಸೂಚನೆಯಿಂದ ಮಾಲಿನ್ಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.
ಬೆಳಗಾವಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅತ್ಯುತ್ತಮ ಗಾಳಿಯ ಗುಣಮಟ್ಟ ವರದಿಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಹೇಗಿದೆ ವಾಯು ಗುಣಮಟ್ಟ
ಹವಾಮಾನ ಇಲಾಖೆ ನೀಡಿರುವ ಮಳೆಯ ಮುನ್ಸೂಚನೆ ಹಾಗೂ ಬದಲಾದ ಹವಾಮಾನದಿಂದಾಗಿ ಬೆಂಗಳೂರಿನ ಗಾಳಿಯ ಗುಣಮಟ್ಟ ಉತ್ತಮಗೊಂಡಿದೆ. ಮಾಲಿನ್ಯಕಾರಕ ಕಣಗಳಾದ PM10 ಮಟ್ಟ 67.2 µg/m³ ಮತ್ತು PM2.5 ಮಟ್ಟ 56.18 µg/m³ ನಷ್ಟು ದಾಖಲಾಗಿದೆ. ನಗರದ ಸಿಲ್ಕ್ ಬೋರ್ಡ್, ಹೆಬ್ಬಾಳ ಮತ್ತು ಜಯನಗರದಂತಹ ಪ್ರಮುಖ ವಾಹನ ದಟ್ಟಣೆಯ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಎಂದಿಗಿಂತ ತುಸು ಕಡಿಮೆ ದಾಖಲಾಗಿದ್ದು, ಬನಶಂಕರಿ ಹಾಗೂ ಬಾಪೂಜಿ ನಗರದಲ್ಲಿ ಅತ್ಯಂತ ಸ್ವಚ್ಛ ಗಾಳಿ ವರದಿಯಾಗಿದೆ.
ಆದಾಗ್ಯೂ, ಸೂಕ್ಷ್ಮ ಆರೋಗ್ಯ ಸಮಸ್ಯೆ ಇರುವವರು (ಅಸ್ತಮಾ ಅಥವಾ ಉಸಿರಾಟದ ತೊಂದರೆ ಇರುವವರು) ಮುಂಜಾನೆ ಮತ್ತು ಸಂಜೆ ಹೆಚ್ಚಿನ ಸಮಯ ಹೊರಾಂಗಣದಲ್ಲಿ ಕಳೆಯುವಾಗ ಎಚ್ಚರಿಕೆ ವಹಿಸುವುದು ಸೂಕ್ತ ಎಂದು ತಜ್ಞರು ತಿಳಿಸಿದ್ದಾರೆ.
ಒಟ್ಟಾರೆ ಕರ್ನಾಟಕದ AQI ಸ್ಥಿತಿ ಹೇಗಿದೆ?
ಬೆಂಗಳೂರು ಮಾತ್ರವಲ್ಲದೆ ಇಡೀ ಕರ್ನಾಟಕದಾದ್ಯಂತ ವಾಯು ಗುಣಮಟ್ಟವು ಬಹುತೇಕ ನಿಯಂತ್ರಣದಲ್ಲಿದೆ. ಮಳೆಯ ಮುನ್ನೆಚ್ಚರಿಕೆ ಇರುವ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಗಾಳಿಯ ಶುದ್ಧತೆ ಉತ್ತಮವಾಗಿದೆ. ಮೈಸೂರು (AQI 32), ಬೆಳಗಾವಿ (AQI 26) ಮತ್ತು ಗದಗ (AQI 27) ಜಿಲ್ಲೆಗಳಲ್ಲಿ ವಾಯು ಗುಣಮಟ್ಟವು ‘ಅತ್ಯುತ್ತಮ’ (Good) ಶ್ರೇಣಿಯಲ್ಲಿದೆ. ಚಿಕ್ಕಬಳ್ಳಾಪುರ (AQI 66), ಬಾಗಲಕೋಟೆ ಮತ್ತು ರಾಮನಗರ ಜಿಲ್ಲೆಗಳಲ್ಲಿ ಸಾಧಾರಣ ವಾಯು ಗುಣಮಟ್ಟ ದಾಖಲಾಗಿದೆ.
ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಧೂಳಿನ ಕಣಗಳು ನೆಲಕಚ್ಚಲಿವೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಇಡೀ ರಾಜ್ಯದ ವಾಯು ಗುಣಮಟ್ಟವು ಮತ್ತಷ್ಟು ಸುಧಾರಿಸುವ ಸಾಧ್ಯತೆಯಿದೆ ಎಂದು ಪರಿಸರ ನಿಯಂತ್ರಣ ಮಂಡಳಿ ಮೂಲಗಳು ತಿಳಿಸಿವೆ.
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
ಉತ್ತಮ- 0-50
ಮಧ್ಯಮ – 50-100
ಕಳಪೆ – 100-150
ಅನಾರೋಗ್ಯಕರ – 150-200
ಗಂಭೀರ – 200 – 300
ಅಪಾಯಕಾರಿ – 300 -500+
ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಮತ್ತು ರಸ್ತೆ ಕಾಮಗಾರಿಗಳು ಇದಕ್ಕೆ ಮುಖ್ಯ ಕಾರಣವೆನ್ನಲಾಗಿದೆ. ಉಸಿರಾಟದ ಸಮಸ್ಯೆ ಇರುವವರು ಮತ್ತು ಮಕ್ಕಳು ಹೊರಗಡೆ ಹೆಚ್ಚು ಸಮಯ ಕಳೆಯುವಾಗ ಮಾಸ್ಕ್ ಧರಿಸುವುದು ಸೂಕ್ತ. ಮುಂದಿನ ಕೆಲವು ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಗಾಳಿಯಲ್ಲಿನ ಧೂಳಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.
ಇಡಾಹೊ, ಮೇ 18: ಪಶ್ಚಿಮ ಇಡಾಹೊದ ಮೌಂಟೇನ್ ಹೋಮ್ ವಾಯುಪಡೆ ನೆಲೆಯಲ್ಲಿ ನಡೆದ ವೈಮಾನಿಕ ಪ್ರದರ್ಶನದ ವೇಳೆ ಯುಎಸ್ ನೌಕಾಪಡೆಯ ಎರಡು ಯುದ್ಧ ವಿಮಾನಗಳು ಗಾಳಿಯಲ್ಲೇ ಭೀಕರವಾಗಿ ಡಿಕ್ಕಿ ಹೊಡೆದಿವೆ. ಅಪಘಾತಕ್ಕೀಡಾದ ವಿಮಾನಗಳನ್ನು ನೌಕಾಪಡೆಯ ಅತ್ಯಾಧುನಿಕ ‘ಇಎ 18-ಜಿ ಗ್ರೋಲರ್ಸ್’ ಎಂದು ಗುರುತಿಸಲಾಗಿದೆ.
ಅತಿ ವೇಗದಲ್ಲಿ ಹಾರಾಟ ನಡೆಸುತ್ತಿದ್ದಾಗ ಸಂಭವಿಸಿದ ಈ ಭೀಕರ ಡಿಕ್ಕಿಯ ಹೊರತಾಗಿಯೂ, ಎರಡೂ ಜೆಟ್‌ಗಳಲ್ಲಿದ್ದ ನಾಲ್ವರು ಸಿಬ್ಬಂದಿ ತಕ್ಷಣವೇ ಸುರಕ್ಷಿತವಾಗಿ ಹೊರಜಿಗಿಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಸ್ತುತ ಇವರೆಲ್ಲರೂ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಬೇಸ್ ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್, ಮಿಲಿಟರಿ ನೆಲೆಯಲ್ಲಿದ್ದ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಸದ್ಯ ಈ ಭೀಕರ ಅಪಘಾತದ ಕುರಿತು ತನಿಖೆ ಆರಂಭವಾಗಿದೆ.
ನವದೆಹಲಿ, ಮೇ 18: ಕಳೆದ ಕೆಲವು ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಸರಣಿ ಬಿಕ್ಕಟ್ಟುಗಳಿಂದ ಜಾಗತಿಕ ಸಮುದಾಯ ಪಾಠ ಕಲಿಯದಿದ್ದರೆ, ಪ್ರಪಂಚದಾದ್ಯಂತ ಮತ್ತೊಮ್ಮೆ ಭೀಕರ ಬಡತನ ತಲೆದೂಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಕಠಿಣ ಎಚ್ಚರಿಕೆ ನೀಡಿದ್ದಾರೆ. ಕಳೆದ ಕೆಲವು ವರ್ಷಗಳ ಅವಧಿಯನ್ನು ಡಿಸಾಸ್ಟರ್ ಡಿಕೇಡ್ ಎಂದು ಬಣ್ಣಿಸಿರುವ ಅವರು, ಜಾಗತಿಕ ಸ್ಥಿರತೆಗೆ ಎದುರಾಗಿರುವ ಸವಾಲುಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಆರ್ಥಿಕ ತಜ್ಞರ ಜತೆ ಉನ್ನತ ಮಟ್ಟದ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋಡಿ, ಜಾಗತಿಕ ಆರ್ಥಿಕತೆಯ ಸಧ್ಯದ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ.
ಕೋವಿಡ್ ಮಹಾಮಾರಿ: ಜಾಗತಿಕವಾಗಿ ಕೋಟ್ಯಂತರ ಜನರ ಜೀವನ ಮತ್ತು ದೇಶಗಳ ಆರ್ಥಿಕತೆಯನ್ನು ಇದು ಧ್ವಂಸಗೊಳಿಸಿತ್ತು.
ಭೂರಾಜಕೀಯ ಯುದ್ಧಗಳು: ಜಗತ್ತಿನ ವಿವಿಧೆಡೆ ನಡೆಯುತ್ತಿರುವ ನಿರಂತರ ಸಂಘರ್ಷಗಳು ಹೊಸ ಅನಿಶ್ಚಿತತೆಯನ್ನು ದೃಷ್ಟಿಸಿವೆ.
ಇಂಧನ ಮತ್ತು ಆಹಾರ ಬಿಕ್ಕಟ್ಟು: ಯುದ್ಧ ಮತ್ತು ರಾಜತಾಂತ್ರಿಕ ಬಿಕ್ಕಟ್ಟುಗಳಿಂದಾಗಿ ತೈಲ ಹಾಗೂ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿದ್ದು, ಹಣದುಬ್ಬರ ಅಪಾಯಕಾರಿ ಮಟ್ಟವನ್ನು ತಲುಪಿದೆ.
ಕಳೆದ ಒಂದು ದಶಕ ನಿಜಕ್ಕೂ ದುರಂತದ ದಶಕವಾಗಿದೆ. ಸೂಕ್ತ ನೀತಿಗಳು, ಬಲಿಷ್ಠ ಆಡಳಿತ ಮತ್ತು ನಿರಂತರ ಆರ್ಥಿಕ ಸುಧಾರಣೆಗಳು ಇಲ್ಲದಿದ್ದರೆ , ಕಳೆದ ಹತ್ತು ವರ್ಷಗಳಲ್ಲಿ ಬಡತನ ನಿರ್ಮೂಲನೆಯಲ್ಲಿ ಸಾಧಿಸಿದ ಪ್ರಗತಿಯು ಉಲ್ಟಾ ಆಗುವುದು ಗ್ಯಾರಂಟಿ. ಜಗತ್ತು ಮತ್ತೆ ಬಡತನದ ಕೂಪಕ್ಕೆ ತಳ್ಳಲ್ಪಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತ ಹೇಗೆ ಚೇತರಿಸಿಕೊಂಡಿತು ಎಂಬುದನ್ನು ವಿವರಿಸಿದ ಪಿಎಂ ಮೋದಿ, ಸಮಯೋಚಿತ ನೀತಿಗಳು ಮತ್ತು ಆರ್ಥಿಕ ಸುಧಾರಣೆಗಳ ಕಾರಣದಿಂದಾಗಿ ಭಾರತವು ಕೋವಿಡ್ ಆಘಾತದಿಂದ ಹೊರಬಂದಿದ್ದಲ್ಲದೆ, ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಿದೆ” ಎಂದರು. ಭವಿಷ್ಯದ ಆಘಾತಗಳನ್ನು ತಡೆಯಲು ಜಾಗತಿಕ ನಾಯಕರು ಸ್ವಾವಲಂಬನೆ (ಆತ್ಮನಿರ್ಭರತೆ), ನಾವೀನ್ಯತೆ , ಕೌಶಲ್ಯಾಭಿವೃದ್ಧಿ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯತ್ತ ಗಮನ ಹರಿಸಬೇಕು ಎಂದು ಅವರು ಕರೆ ನೀಡಿದರು.
ಅಂತಾರಾಷ್ಟ್ರೀಯ ಒಗ್ಗಟ್ಟಿಗೆ ಕರೆ
ದುರ್ಬಲ ಜನಸಂಖ್ಯೆಯನ್ನು ಬಡತನದಿಂದ ರಕ್ಷಿಸಲು ಜಾಗತಿಕ ಪೂರೈಕೆ ಸರಪಳಿ , ಇಂಧನ ಭದ್ರತೆ ಮತ್ತು ಆಹಾರ ಭದ್ರತೆಯ ವಿಷಯದಲ್ಲಿ ಎಲ್ಲಾ ದೇಶಗಳು ಪರಸ್ಪರ ಸಹಕರಿಸಬೇಕು ಎಂದು ಮೋದಿ ಒತ್ತಾಯಿಸಿದರು. ಜಾಗತಿಕ ಮಟ್ಟದಲ್ಲಿ ತೈಲ ಬೆಲೆಗಳ ಏರಿಳಿತ ಮತ್ತು ಪ್ರಮುಖ ಆರ್ಥಿಕತೆಗಳ ಮಂದಗತಿಯ ಬೆಳವಣಿಗೆಯ ನಡುವೆ ಪ್ರಧಾನಿ ಮೋದಿ ನೀಡಿರುವ ಈ ಎಚ್ಚರಿಕೆ, ಜಾಗತಿಕ ಆರ್ಥಿಕ ನಾಯಕರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ.
ನಿರ್ದೇಶಕ ಪ್ರೇಮ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬಿನೇಷನ್‌ನ ‘ಕೆಡಿ: ದಿ ಡೆವಿಲ್’ ಸಿನಿಮಾ (KD Movie) ರಿಲೀಸ್ ಆಗಿ ಮೂರು ವಾರಗಳು ಕಳೆಯುತ್ತಾ ಬಂದಿವೆ. ದೊಡ್ಡ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಬೆಂಗಳೂರಿನ ಭೂಗತ ಜಗತ್ತಿನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಧ್ರುವ ಹಾಗೂ ರೀಷ್ಮಾ ಜೊತೆ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
‘ಕೆಡಿ’ ಸಿನಿಮಾಗೆ ಈವರೆಗೆ 10,795 ಶೋಗಳು ಸಿಕ್ಕಿವೆ. ಈ ಸಿನಿಮಾ ಮೊದಲ ಮೂರು ದಿನ ಉತ್ತಮ ಗಳಿಕೆ ಮಾಡಿತು. ಈ ಸಿನಿಮಾ ಮೂರನೇ ಭಾನುವಾರ 39 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 22 ಕೋಟಿ ರೂಪಾಯಿ ಆಗಿದೆ. ಟಿವಿ, ಒಟಿಟಿ ಹಕ್ಕುಗಳ ಮಾರಾಟದಿಂದ ಸಿನಿಮಾಗೆ ಲಾಭ ಆಗಬಹುದು ಎಂದು ಊಹಿಸಲಾಗಿದೆ.
‘ಕೆಡಿ’ ಸಿನಿಮಾ ಬಿಡುಗಡೆಗೆ ಮುನ್ನ ಸಾಂಗ್ ಮತ್ತು ಟ್ರೇಲರ್ ವಿಚಾರದಲ್ಲಿ ಸಾಕಷ್ಟು ವಿವಾದಗಳನ್ನು ಎದುರಿಸಿತು. ಚಿತ್ರದ ‘ಸೆರಗ ಸರ್ಸೆ’ ಹಾಡಿನಲ್ಲಿ ನೋರಾ ಫತೇಹಿ ಕಾಣಿಸಿಕೊಂಡಿದ್ದರು. ಆದರೆ, ಈ ಹಾಡಿನ ಸಾಹಿತ್ಯ ಅತ್ಯಂತ ಅಶ್ಲೀಲ ಹಾಗೂ ದ್ವಂದ್ವಾರ್ಥದಿಂದ ಕೂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆಯಾದ ಬೆನ್ನಲ್ಲೇ, ಚಿತ್ರತಂಡ ಯೂಟ್ಯೂಬ್‌ನಿಂದ ಈ ಹಾಡನ್ನು ತೆಗೆದುಹಾಕಿತು. ಈ ಹಾಡನ್ನು ಸಿನಿಮಾದಿಂದಲೂ ತೆಗೆಯಲಾಗಿದೆ.
ಇನ್ನು ಚಿತ್ರದ ಟ್ರೇಲರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸೆನ್ಸಾರ್ ಮಂಡಳಿ ಕಿಡಿಕಾರಿತ್ತು. ಅನುಮತಿ ಇಲ್ಲದ ಕೆಲವು ದೃಶ್ಯಗಳು ಅದರಲ್ಲಿ ಸೇರಿದ್ದ ಕಾರಣಕ್ಕಾಗಿ ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿತ್ತು. ನಂತರ ಪರಿಷ್ಕೃತ ಟ್ರೇಲರ್ ಅನ್ನು ಮರು-ಅಪ್‌ಲೋಡ್ ಮಾಡಲಾಯಿತು. ಈ ಸೆನ್ಸಾರ್ ವಿವಾದಗಳಿಂದಾಗಿ ಸಿನಿಮಾ ಏಪ್ರಿಲ್ 30 ರಂದು ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿ, ಇತರ ಭಾಷೆಗಳ ಡಬ್ಬಿಂಗ್ ಆವೃತ್ತಿಗಳ ಬಿಡುಗಡೆ ತಡವಾಯಿತು. ಧ್ರುವ ಸರ್ಜಾ ಅಭಿಮಾನಿಗಳಿಗೆ ಚಿತ್ರ ಇಷ್ಟವಾಗಿದ್ದರೂ, ವಿವಾದಗಳೇ ಈ ಚಿತ್ರದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದವು.